UPSC Recruitment 2026: ಲಿಖಿತ ಪರೀಕ್ಷೆಯಿಲ್ಲದೆ ಕೇಂದ್ರ ಸರ್ಕಾರಿ ಹುದ್ದೆ ಪಡೆಯಲು ಸುವರ್ಣಾವಕಾಶ! – Kannada News | UPSC ORA Recruitment 2026: 194 vacancies in central government departments till June 12 at upsc gov in

ದೇಶದ ಅತ್ಯುನ್ನತ ನೇಮಕಾತಿ ಸಂಸ್ಥೆಯಾದ ಕೇಂದ್ರ ಲೋಕಸೇವಾ ಆಯೋಗವು (UPSC) ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 194 ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದ ವಿವಿಧ ಉನ್ನತ ಹುದ್ದೆಗಳಲ್ಲಿ ಜವಾಬ್ದಾರಿಯುತ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಅದ್ಭುತ ಅವಕಾಶವಾಗಿದೆ. ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಜೂನ್ 12 ರ ಸಂಜೆ 6 ಗಂಟೆಯ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ವಿವಿಧ ಕ್ಷೇತ್ರಗಳ ತಜ್ಞರಿಗೆ ಮುಕ್ತ ಅವಕಾಶ:

ಈ ವಿಶೇಷ ನೇಮಕಾತಿ ಅಭಿಯಾನದ ಮೂಲಕ ತಾಂತ್ರಿಕ, ಎಂಜಿನಿಯರಿಂಗ್, ವೈಜ್ಞಾನಿಕ, ಬೋಧನೆ, ವಾಯುಯಾನ (Aviation), ಪುರಾತತ್ತ್ವ ಶಾಸ್ತ್ರ, ಹವಾಮಾನಶಾಸ್ತ್ರ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ಎಂಜಿನಿಯರಿಂಗ್, ವಿಜ್ಞಾನ, ವಾತಾವರಣ ಅಧ್ಯಯನ, ವಿವಿಧ ಭಾಷೆಗಳು, ಮೆಕ್ಯಾನಿಕಲ್, ಸಿವಿಲ್, ತೈಲ ತಂತ್ರಜ್ಞಾನ, ರಾಸಾಯನಿಕ ಎಂಜಿನಿಯರಿಂಗ್ ಮತ್ತು ವಾಯುಯಾನ ನಿರ್ವಹಣೆಯಲ್ಲಿ (Aviation Management) ಹಿನ್ನೆಲೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಸ್ಪರ್ಧಿಸಬಹುದಾಗಿದೆ.

ಹುದ್ದೆಗಳಿಗೆ ತಕ್ಕಂತೆ ಶೈಕ್ಷಣಿಕ ಅರ್ಹತೆ:

ವಿವಿಧ ಇಲಾಖೆಗಳ ಹುದ್ದೆಗಳಾಗಿರುವುದರಿಂದ, ಎಂಜಿನಿಯರಿಂಗ್ ಪದವಿಯಿಂದ ಹಿಡಿದು ಸ್ನಾತಕೋತ್ತರ ಪದವಿ ಅಥವಾ ಪಿಎಚ್‌ಡಿ (PhD) ವರೆಗಿನ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇಲ್ಲಿ ಅವಕಾಶವಿದೆ. ಬಿಎಸ್ಸಿ, ಬಿಟೆಕ್/ಬಿಇ, ಎಂಎ, ಎಂಎಸ್ಸಿ, ಎಂಇ/ಎಂಟೆಕ್ ಮತ್ತು ಪಿಜಿ ಡಿಪ್ಲೊಮಾ ಸೇರಿದಂತೆ ಪ್ರತಿಯೊಂದು ಹುದ್ದೆಗೂ ಇರಬೇಕಾದ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳ ವಿವರವನ್ನು ಅಧಿಕೃತ ವೆಬ್‌ಸೈಟ್‌ನ ವಿವರವಾದ ಅಧಿಸೂಚನೆಯಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ. ಹಾಗಾಗಿ, ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಮ್ಮ ಅರ್ಹತೆಯನ್ನು ಒಮ್ಮೆ ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ.

ಲಿಖಿತ ಪರೀಕ್ಷೆ ಇಲ್ಲ, ಕೇವಲ ಸಂದರ್ಶನದ ಮೂಲಕ ಆಯ್ಕೆ:

ಈ ನೇಮಕಾತಿಯ ಅತ್ಯಂತ ಆಕರ್ಷಕ ಅಂಶವೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಬಂದಿರುವ ಅರ್ಜಿಗಳಲ್ಲಿ ಅಭ್ಯರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಪ್ರೊಫೈಲ್‌ನ ಬಲವನ್ನು ಆಧರಿಸಿ ಮೊದಲು ಶಾರ್ಟ್‌ಲಿಸ್ಟ್ (ಕಿರುಪಟ್ಟಿ) ಮಾಡಲಾಗುತ್ತದೆ. ತದನಂತರ ನೇರ ಸಂದರ್ಶನವನ್ನು ನಡೆಸಲಾಗುತ್ತದೆ. ಈ ಆಯ್ಕೆ ಪ್ರಕ್ರಿಯೆಯು ಕೇವಲ ಪರೀಕ್ಷೆಯ ಅಂಕಗಳಿಗಿಂತ ಹೆಚ್ಚಾಗಿ ಅಭ್ಯರ್ಥಿಯ ವಿಷಯದ ಪರಿಣತಿ (Subject Expertise) ಮತ್ತು ಸಂವಹನ ಕೌಶಲ್ಯಕ್ಕೆ (Communication Skills) ಹೆಚ್ಚಿನ ಆದ್ಯತೆ ನೀಡುತ್ತದೆ.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಸಂಬಳ ಮತ್ತು ಭತ್ಯೆಗಳ ವಿವರ:

ಇಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ನಿಯಮಾವಳಿಗಳ ಪ್ರಕಾರ ಅತ್ಯುತ್ತಮ ವೇತನ ಶ್ರೇಣಿ ಸಿಗಲಿದೆ. ಆರಂಭಿಕವಾಗಿ ‘ಪೇ ಲೆವೆಲ್-10’ (Level 10) ರಂತೆ ಮೂಲ ವೇತನ ದೊರೆಯಲಿದ್ದು, ಇದರೊಂದಿಗೆ ನಿಯಮಾನುಸಾರ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಸಾರಿಗೆ ಭತ್ಯೆಗಳನ್ನು ಒಳಗೊಂಡಂತೆ ಇತರೆ ಸೌಲಭ್ಯಗಳೂ ಸಿಗಲಿವೆ. ಇನ್ನು ಗ್ರೂಪ್ ‘ಎ’ ಹಿರಿಯ ಹುದ್ದೆಗಳಿಗೆ, ಅವರ ನಿರ್ದಿಷ್ಟ ದರ್ಜೆ ಮತ್ತು ಇಲಾಖೆಯನ್ನು ಅವಲಂಬಿಸಿ ವೇತನದ ಮಟ್ಟ ಇನ್ನೂ ಹೆಚ್ಚಿರಲಿದೆ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಶುಲ್ಕದ ವಿವರ:

ಈ ನೇಮಕಾತಿಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಯುಪಿಎಸ್‌ಸಿಯ ಆನ್‌ಲೈನ್ ನೇಮಕಾತಿ ಅರ್ಜಿ (ORA) ಪೋರ್ಟಲ್ ಆದ upsconline.nic.in/ora ಮೂಲಕವೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಕೇವಲ 25ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆದರೆ, ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ (PwBD) ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ, ಇವರಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೃಣಾಲ್, ಪೂಜಾ ಹೆಗ್ಡೆ ನಡುವೆ ಸಿಕ್ಕಿಹಾಕಿಕೊಂಡ ವರುಣ್ ಧವನ್; ಟ್ರೇಲರ್ ಹೇಗಿದೆ? – Kannada News | Varun Dhawan Hai Jawani Toh Ishq Hona Hai Trailer Out ft Pooja Hegde Mrunal Thakur

ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದ ಬಾಲಿವುಡ್ ನಟ ವರುಣ್ ಧವನ್ ಅಭಿನಯದ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ (Hai Jawani Toh Ishq Hona Hai) ಟ್ರೇಲರ್ ಬಿಡುಗಡೆಯಾಗಿದೆ. ಹಿರಿಯ ನಿರ್ದೇಶಕ ಡೇವಿಡ್ ಧವನ್ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರಿಗೆ ನಗುವಿನ ಔತಣ ಉಣಬಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ಟ್ರೇಲರ್ ಸಾಬೀತುಪಡಿಸಿದೆ. ವರುಣ್ ಧವನ್ (Varun Dhawan) ಜೊತೆ ಈ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

3 ನಿಮಿಷ 15 ಸೆಕೆಂಡ್ ಅವಧಿ ಇರುವ ಈ ಟ್ರೇಲರ್‌ನಲ್ಲಿ ವರುಣ್ ಧವನ್ ಪಾತ್ರವು ಇಬ್ಬರು ನಾಯಕಿಯರ ನಡುವೆ ಸಿಲುಕಿ ಹೇಗೆ ತೊಂದರೆ ಅನುಭವಿಸುತ್ತದೆ ಎಂಬುದನ್ನು ಮಜವಾಗಿ ತೋರಿಸಲಾಗಿದೆ. ಚಿತ್ರದಲ್ಲಿ ವರುಣ್ ಧವನ್ ಮುಗ್ಧ ಮತ್ತು ರೊಮ್ಯಾಂಟಿಕ್ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಅವರಿಗೆ ಜೋಡಿಯಾಗಿ ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ನಟಿಸಿದ್ದಾರೆ. ಇಬ್ಬರು ಸುಂದರಿಯರಿಂದ ಗ್ಲಾಮರ್ ಹೆಚ್ಚಿದೆ.

‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಟ್ರೇಲರ್:

ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ನೆಟ್ಟಿಗರು ಕಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ‘ಟ್ರೇಲರ್ ನೋಡಿದರೆ ಹಳೇ ಐಕಾನಿಕ್ ಕಾಮಿಡಿ ಸಿನಿಮಾಗಳು ನೆನಪಾಗುತ್ತದೆ. ಆದರೂ ನನ್ನ ನಿರೀಕ್ಷೆಗಿಂತ ತುಂಬಾ ಚೆನ್ನಾಗಿದೆ. ಮೇ ತೇರಾ ಹೀರೋ ಚಿತ್ರದ ನಂತರ ಡೇವಿಡ್ ಮತ್ತು ವರುಣ್ ಧವನ್ ಕಾಂಬಿನೇಷನ್‌ನ ಬೆಸ್ಟ್ ಸಿನಿಮಾ ಇದಾಗಲಿದೆ’ ಎಂದು ಸಿನಿಪ್ರೇಮಿಯೊಬ್ಬರು ಬರೆದುಕೊಂಡಿದ್ದಾರೆ.

‘ವರುಣ್ ಧವನ್ ಮತ್ತೆ ತಮ್ಮ ಹಳೆಯ ಕಾಮಿಡಿ ಅವತಾರಕ್ಕೆ ಮರಳಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಪಕ್ಕಾ ಎಂಟರ್‌ಟೈನ್‌ಮೆಂಟ್ ಸಿಗುವುದು ಗ್ಯಾರಂಟಿ’ ಎಂಬ ಕಮೆಂಟ್ ಕೂಡ ಬಂದಿದೆ. ‘ಕಾಮಿಡಿ ಮತ್ತು ರೊಮ್ಯಾನ್ಸ್‌ ಸಿನಿಮಾದ ಕಿಂಗ್ ಡೇವಿಡ್ ಧವನ್ ಈಗ ಕಮ್​ಬ್ಯಾಕ್ ಮಾಡಿದ್ದಾರೆ. ವರುಣ್, ಮೃಣಾಲ್ ಮತ್ತು ಪೂಜಾ ಹೆಗ್ಡೆ ಮಸ್ತ್ ಮನರಂಜನೆ ನೀಡುವುದು ಗ್ಯಾರಂಟಿ’ ಎಂಬ ಹೊಗಳಿಕೆ ಕೂಡ ಸಿಕ್ಕಿದೆ.

ಇದನ್ನೂ ಓದಿ: ಭೂಗತ ಲೋಕದಿಂದ ಬೆದರಿಕೆ: ಭಯಾನಕ ಅನುಭವ ಬಿಚ್ಚಿಟ್ಟ ನಟ ವರುಣ್ ಧವನ್

ಈ ಕಾಮಿಡಿ ಚಿತ್ರದ ಮೂಲಕ ಡೇವಿಡ್ ಧವನ್ ಮತ್ತು ವರುಣ್ ಧವನ್ ಅವರ ಕಾಂಬಿನೇಷನ್ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಚಿತ್ರದಲ್ಲಿ ಮನೀಶ್ ಪೌಲ್, ಚಂಕಿ ಪಾಂಡೆ, ಜಿಮ್ಮಿ ಶೇರ್ಗಿಲ್, ಮೌನಿ ರಾಯ್, ಅಲಿ ಅಸ್ಗರ್ ಮತ್ತು ರಾಕೇಶ್ ಬೇಡಿ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈಗಾಗಲೇ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರವು ಜೂನ್ 5ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬ್ಲಾಕ್ ಬಸ್ಟರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಸ್ಟಾರ್ ನಟ: ಕಾರಣ? – Kannada News | Randeep Hooda said no to Chhaava movie Aurangzeb character

ಒಂದು ಹಿಟ್ ಸಿನಿಮಾ (Hit Cinema) ಸಿಕ್ಕರೆ ಹತ್ತು ವರ್ಷ ಚಿತ್ರರಂಗದಲ್ಲಿ ಸಮಯ ತಳ್ಳಬಹುದು ಎಂದು ಹಿಂದೊಮ್ಮೆ ಜನಪ್ರಿಯ ನಟರೊಬ್ಬರು ಹೇಳಿದ್ದರು. ಅದು ಬಹುತೇಕ ನಿಜವೂ ಆಗಿದೆ. ಒಂದು ಹಿಟ್ ಸಿನಿಮಾ ಕೊಟ್ಟು ಬಿಟ್ಟರೆ ಮುಂದಿನ ಹತ್ತು ವರ್ಷ ಅದರ ಬಲದಲ್ಲೇ ನಟರ ಜೀವನ ನಡೆದು ಹೋಗುತ್ತಿತ್ತು. ಇದೇ ಕಾರಣಕ್ಕ ನಟರುಗಳು ಯಾವುದೇ ದೊಡ್ಡ ಬಜೆಟ್​​ನ, ಭಿನ್ನ ಕತೆಯುಳ್ಳ ಸಿನಿಮಾಗಳನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ. ಆದರೆ ಇಲ್ಲೊಬ್ಬ ಸ್ಟಾರ್ ನಟ, ಸಿನಿಮಾ ದೊಡ್ಡ ಹಿಟ್ ಆಗುತ್ತದೆ ಎಂದು ಗೊತ್ತಿದ್ದರೂ ಸಿನಿಮಾದಲ್ಲಿ ತಮಗೆ ಆಫರ್ ಮಾಡಲಾಗಿದ್ದ ಪ್ರಮುಖ ಪಾತ್ರದಲ್ಲಿ ನಟಿಸಲು ಒಲ್ಲೆ ಎಂದರಂತೆ.

ಬಾಲಿವುಡ್‌ನ ಬಹುಮುಖ ಪ್ರತಿಭೆಯ ನಟ ರಣದೀಪ್ ಹೂಡಾ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ವಿಶೇಷ ಗುರುತು ಮೂಡಿಸಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ರಣ್​​ದೀಪ್ ನಟಿಸಿದ್ದಾರೆ. ನಾಯಕನಾಗಿ, ಪೋಷಕ ನಟನಾಗಿ, ವಿಲನ್ ಆಗಿ ಎಲ್ಲ ರೀತಿಯ ಪಾತ್ರಗಳಲ್ಲೂ ರಣ್​​ದೀಪ್ ನಟಿಸಿದ್ದಾರೆ. ರಣ್​​ದೀಪ್, ಬಾಲಿವುಡ್​​ನ ಕೆಲವೇ ಕೆಲವು ಅತ್ಯುತ್ತಮ ನಟರುಗಳಲ್ಲಿ ಒಬ್ಬರು ಸಹ. ಇದೇ ಕಾರಣಕ್ಕೆ ಅವರಿಗೆ ಬಹಳ ಸವಾಲಾದ ಪಾತ್ರಗಳು ಅರಸಿ ಬರುತ್ತವೆ.

2025 ರಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆದ ‘ಛಾವಾ’ ಸಿನಿಮಾನಲ್ಲಿ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸುವ ಆಫರ್ ರಣ್​​ದೀಪ್ ಹೂಡ ಅವರಿಗೆ ನೀಡಲಾಗಿತ್ತು. ಆದರೆ ಅವರು ಒಲ್ಲೆ ಎಂದರು. ‘ಛಾವಾ’ ಸಿನಿಮಾದ ವಿಲನ್, ಕ್ರೂರ ಮೊಘಲ್ ದೊರೆ ಔರಂಗಜೇಬ್ ಪಾತ್ರಕ್ಕಾಗಿ ಮೊದಲು ರಣದೀಪ್ ಹೂಡಾ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಅವರು ಈ ಬ್ಲಾಕ್‌ಬಸ್ಟರ್ ಚಿತ್ರದ ಆಫರ್ ಅನ್ನು ತಿರಸ್ಕರಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಈ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್ ಸಿನಿಮಾದ ಮಹಿಳಾ ಪಾತ್ರಗಳು ಸಖತ್ ಬೋಲ್ಡ್’: ಕೌತುಕ ಹೆಚ್ಚಿಸಿದ ಯಶ್

‘ಛಾವಾ’ ಚಿತ್ರದಲ್ಲಿ ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರೆ, ಅಕ್ಷಯ್ ಖನ್ನಾ ಔರಂಗಜೇಬ್ ಪಾತ್ರವನ್ನು ನಿರ್ವಹಿಸಿ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅಪಾರ ಪ್ರಶಂಸೆ ಗಳಿಸಿದ್ದಾರೆ. ಆದಾಗ್ಯೂ, ಅಕ್ಷಯ್ ಖನ್ನಾ ಅವರಿಗಿಂತ ಮುಂಚಿತವಾಗಿ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಈ ಪವರ್‌ಫುಲ್ ವಿಲನ್ ಪಾತ್ರಕ್ಕಾಗಿ ರಣದೀಪ್ ಹೂಡಾ ಅವರನ್ನು ಸಂಪರ್ಕ ಮಾಡಿದ್ದರು. ಆದರೆ ರಣ್​​ದೀಪ್ ಹೂಡ, ಔರಂಗಾಜೇಬ್ ಪಾತ್ರದಲ್ಲಿ ನಟಿಸಲು ಅವರು ಒಪ್ಪಿಕೊಳ್ಳಲಿಲ್ಲ.

ಈ ಬಗ್ಗೆ ಮಾತನಾಡಿದ ರಣದೀಪ್ ಹೂಡಾ, ‘ನನಗೆ ‘ಛಾವಾ’ ಚಿತ್ರದಲ್ಲಿ ಔರಂಗಜೇಬ್ ಪಾತ್ರದ ಆಫರ್ ಬಂದಿದ್ದು ನಿಜ. ಚಿತ್ರದ ಕಥೆ ಮತ್ತು ಆ ಪಾತ್ರ ಎರಡೂ ತುಂಬಾ ಬಲವಾಗಿದ್ದವು. ಆದರೆ ಆ ಸಮಯದಲ್ಲಿ ನಾನು ನನ್ನದೇ ಆದ ಸ್ವಂತ ಸಿನಿಮಾ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರದ ನಿರ್ದೇಶನ ಮತ್ತು ನಟನೆಯಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದೆ, ಸಾವರ್ಕರ್ ಚಿತ್ರಕ್ಕಾಗಿ ನಾನು ತುಂಬಾ ತೂಕ ಇಳಿಸಿಕೊಂಡಿದ್ದೆ ಮತ್ತು ದೈಹಿಕವಾಗಿ ಸಾಕಷ್ಟು ಬದಲಾಗಿದ್ದೆ. ಆ ಒಂದು ಯೋಜನೆಯ ಮೇಲೆ ನಾನು ಎಷ್ಟು ಗಮನ ಹರಿಸಿದ್ದೆ ಎಂದರೆ, ಅದೇ ಸಮಯದಲ್ಲಿ ಮತ್ತೊಂದು ದೊಡ್ಡ ಸಿನಿಮಾಗೆ ಹಾಗೂ ಅಷ್ಟೇ ತೂಕದ ಪಾತ್ರಕ್ಕೆ ನ್ಯಾಯ ಒದಗಿಸುವುದು ನನಗೆ ಸಾಧ್ಯವಿರಲಿಲ್ಲ. ಆ ಕಾರಣದಿಂದಾಗಿಯೇ ನಾನು ‘ಛಾವಾ’ ಚಿತ್ರದ ಆಫರ್ ಅನ್ನು ಅತ್ಯಂತ ಗೌರವಪೂರ್ವಕವಾಗಿ ನಿರಾಕರಿಸಬೇಕಾಯಿತು’ ಎಂದು ಸ್ಪಷ್ಟಪಡಿಸಿದ್ದಾರೆ.

ಚಿತ್ರದಲ್ಲಿ ಔರಂಗಜೇಬ್ ಪಾತ್ರವನ್ನು ನಿರ್ವಹಿಸಿದ ಅಕ್ಷಯ್ ಖನ್ನಾ ಅವರ ನಟನೆಯನ್ನು ರಣದೀಪ್ ಮುಕ್ತಕಂಠದಿಂದ ಶ್ಲಾಘಿಸಿದ್ದು, ‘ಅಕ್ಷಯ್ ಖನ್ನಾ ಅವರು ಆ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಅವರು ಪರದೆಯ ಮೇಲೆ ಕಾಣಿಸಿಕೊಂಡ ರೀತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಕೆಲವೊಮ್ಮೆ ಕೆಲವು ಪಾತ್ರಗಳು ನಿರ್ದಿಷ್ಟ ನಟರಿಗಾಗಿಯೇ ಬರೆಯಲ್ಪಟ್ಟಿರುತ್ತವೆ ಅನಿಸುತ್ತದೆ’ ಎಂದಿದ್ದಾರೆ. ‘ಛಾವಾ’ ಸಿನಿಮಾವು 1000 ಕೋಟಿಗೂ ಹೆಚ್ಚು ಮೊತ್ತದ ಗಳಿಕೆ ಮಾಡಿದೆ. ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

DRDO NMRL Paid Internship: ದೇಶದ ರಕ್ಷಣಾ ಸಂಶೋಧನಾ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್​​ಗೆ ಸುವರ್ಣಾವಕಾಶ – Kannada News | DRDO NMRL Paid Internship: Naval Materials Research Lab Opportunities for Students

ಇಂಟರ್ನ್‌ಶಿಪ್​​ಗೆ ಸುವರ್ಣಾವಕಾಶ

ದೇಶದ ರಕ್ಷಣಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ಯುವ ವಿಜ್ಞಾನಿಗಳು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯುತ್ತಮ ಅವಕಾಶವೊಂದನ್ನು ತಂದಿದೆ. DRDO ಅಡಿಯಲ್ಲಿ ಕಾರ್ಯನಿರ್ವಹಿಸುವ ಮಹಾರಾಷ್ಟ್ರದ ಅಂಬರ್‌ನಾಥ್‌ನಲ್ಲಿರುವ ಪ್ರತಿಷ್ಠಿತ ‘ನೇವಲ್ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ’ (NMRL) ಪ್ರಸ್ತುತ ಸಾಲಿನ ಪಾವತಿಸಿದ (Paid) ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಅಧಿಕೃತವಾಗಿ ಪ್ರಕಟಿಸಿದೆ. ರಕ್ಷಣಾ ಸಂಶೋಧನೆಯಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ತರಬೇತಿಯು ಒಂದು ವಿಶಿಷ್ಟ ವೇದಿಕೆಯಾಗಲಿದ್ದು, ಇಂಟರ್ನ್‌ಶಿಪ್ ಅವಧಿಯಲ್ಲಿ ಅಭ್ಯರ್ಥಿಗಳಿಗೆ ತಿಂಗಳಿಗೆ 5,000ರೂ. ಸ್ಟೈಫಂಡ್ ಕೂಡ ಸಿಗಲಿದೆ.

ಒಟ್ಟು 20 ಸೀಟುಗಳಿಗೆ ಆರು ತಿಂಗಳ ತರಬೇತಿ:

NMRL ಸಂಸ್ಥೆಯು ಈ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕಾಗಿ ಒಟ್ಟು 20 ಸೀಟುಗಳನ್ನು ಘೋಷಿಸಿದೆ. ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು ಆರು ತಿಂಗಳ ಕಾಲ ರಕ್ಷಣಾ ಸಂಶೋಧನೆಗೆ ಸಂಬಂಧಿಸಿದ ಅತ್ಯಾಧುನಿಕ ಯೋಜನೆಗಳಲ್ಲಿ ನೇರವಾಗಿ ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಸುವರ್ಣಾವಕಾಶ ದೊರೆಯಲಿದೆ. ಈ ವಿಶೇಷ ತರಬೇತಿ ಕಾರ್ಯಕ್ರಮವು ಮುಂಬರುವ ಜುಲೈ 1, 2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಇದು ಸಹಕಾರಿಯಾಗಲಿದೆ.

ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು?

ಈ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು ಮತ್ತು ಅವರ ಗರಿಷ್ಠ ವಯಸ್ಸು 25 ವರ್ಷ ಮೀರಿರಬಾರದು. ಜೊತೆಗೆ, ಅಭ್ಯರ್ಥಿಗಳು AICTE ಅಥವಾ UGC ಯಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ನಿಯಮಿತ (Regular) ಕೋರ್ಸ್ ವ್ಯಾಸಂಗ ಮಾಡುತ್ತಿರಬೇಕು. ಪ್ರಸ್ತುತ ಅಂತಿಮ ವರ್ಷದಲ್ಲಿರುವ ಬಿಇ ಅಥವಾ ಬಿಟೆಕ್ (BE/B.Tech) ವಿದ್ಯಾರ್ಥಿಗಳು ಮತ್ತು ದ್ವಿತೀಯ ವರ್ಷದಲ್ಲಿ ಓದುತ್ತಿರುವ ಎಂಎಸ್ಸಿ (M.Sc) ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಕನಿಷ್ಠ ಅಂಕಗಳ ಶೈಕ್ಷಣಿಕ ಮಾನದಂಡ:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯು ನಿರ್ದಿಷ್ಟ ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯಗೊಳಿಸಿದೆ. ಇಂಜಿನಿಯರಿಂಗ್ (BE/B.Tech) ವಿದ್ಯಾರ್ಥಿಗಳು ತಮ್ಮ ಹಿಂದಿನ ಸೆಮಿಸ್ಟರ್‌ಗಳಲ್ಲಿ ಕನಿಷ್ಠ 7.0 ಸಿಜಿಪಿಎ (CGPA) ಸ್ಕೋರ್ ಹೊಂದಿರಬೇಕಾಗುತ್ತದೆ. ಇನ್ನು ವಿಜ್ಞಾನ ವಿಭಾಗದ ಎಂಎಸ್ಸಿ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡಾ 65 ರಷ್ಟು ಅಂಕಗಳನ್ನು ಪಡೆದಿರುವುದು ಅತ್ಯಗತ್ಯವಾಗಿದೆ. ಈ ಕನಿಷ್ಠ ಅರ್ಹತೆ ಹೊಂದಿರುವ ಪ್ರೊಫೈಲ್‌ಗಳನ್ನು ಮಾತ್ರ ಮುಂದಿನ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಈ ವಿಭಾಗದ ವಿದ್ಯಾರ್ಥಿಗಳಿಗೆ ಇರಲಿದೆ ಆದ್ಯತೆ:

ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಪ್ರಮುಖ ವಿಷಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಈ ಇಂಟರ್ನ್‌ಶಿಪ್‌ನಲ್ಲಿ ಅವಕಾಶ ನೀಡಲಾಗಿದೆ. ರಸಾಯನಶಾಸ್ತ್ರ, ಭೌತಶಾಸ್ತ್ರ, ಜೈವಿಕ ತಂತ್ರಜ್ಞಾನ (Biotechnology), ರಾಸಾಯನಿಕ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಹಾಗೂ ಕಂಪ್ಯೂಟರ್ ವಿಜ್ಞಾನ ಅಥವಾ ಐಟಿ (CS/IT) ವಿಷಯಗಳನ್ನು ಒಳಗೊಂಡಿರುವ ಸ್ಟ್ರೀಮ್‌ಗಳ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಸಾಧನೆ (Academic Merit) ಮತ್ತು ಆನ್‌ಲೈನ್ ಸಂವಹನ ಅಥವಾ ಇಂಟರ್ವ್ಯೂ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಯಾವುದೇ ಅರ್ಜಿ ಶುಲ್ಕವಿಲ್ಲದೆ ಸರಳವಾಗಿ ಇಮೇಲ್ ಮೂಲಕ ತಮ್ಮ ವಿವರಗಳನ್ನು ಕಳುಹಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು mmg.nmrl@gov.in ಇಮೇಲ್ ಐಡಿಗೆ ಕಳುಹಿಸಬೇಕಾಗಿದ್ದು, ಇಮೇಲ್ ಕಳುಹಿಸಲು ಜೂನ್ 10 ಕೊನೆಯ ದಿನಾಂಕವಾಗಿದೆ. ಕೊನೆಯ ದಿನದ ಗಡಿಬಿಡಿಯನ್ನು ತಪ್ಪಿಸಲು ವಿದ್ಯಾರ್ಥಿಗಳು ಮೊದಲೇ ಅರ್ಜಿ ಸಲ್ಲಿಸುವುದು ಸೂಕ್ತ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:45 pm, Sun, 24 May 26

Source link

ಪೆನ್ಷನ್ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಎತ್ತಿಕೊಂಡು 9 ಕಿ.ಮೀ ನಡೆದ ಬುಡಕಟ್ಟು ಮಹಿಳೆ – Kannada News | Chhattisgarh tribal woman carries 90 year old mother in law on her shoulders walked 9 km for pension

ನವದೆಹಲಿ, ಮೇ 24: ಛತ್ತೀಸ್‌ಗಢದಲ್ಲಿ ಹೃದಯವಿದ್ರಾವಕ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೋ ಹಳ್ಳಿಗಳ ಮೂಲಸೌಕರ್ಯಗಳ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ. ಮಹಿಳೆಯೊಬ್ಬರು ತಮ್ಮ 90 ವರ್ಷದ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಕಾಡಿನ ಹಾದಿಯಲ್ಲಿ 9 ಕಿ.ಮೀ ದೂರ ಕಾಡಿನಲ್ಲಿ ನಡೆದಿದ್ದಾರೆ. ಇದು ಹಳೆಯ ವಿಕ್ರಮ-ಬೇತಾಳದ ಕತೆಗಳನ್ನು ಹೋಲುತ್ತದೆ.

ಸುರ್ಗುಜಾ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಸುಖ್ಮಾನಿಯಾ ಬಾಯಿ ಎಂಬ ಮಹಿಳೆ ಬ್ಯಾಂಕಿನಿಂದ ಪಿಂಚಣಿ ಹಣ ಪಡೆಯಲು ತನ್ನ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸುಮಾರು 9 ಕಿಲೋಮೀಟರ್ ನಡೆದಿದ್ದಾರೆ. ಆಕೆ ಇದೇ ರೀತಿ ಕೆಲವು ತಿಂಗಳಿನಿಂದ ತನ್ನ ಅತ್ತೆಯನ್ನು ಎತ್ತಿಕೊಂಡು ಬ್ಯಾಂಕ್​ಗೆ ನಡೆಯುತ್ತಿದ್ದಾರೆ. ಪಿಂಚಣಿ ನಿಯಮಗಳ ಪ್ರಕಾರ ಬ್ಯಾಂಕ್ ಫಲಾನುಭವಿಗೆ ಪಿಂಚಣಿ ಪಾವತಿಸುವ ಮೊದಲು ಫಲಾನುಭವಿಗಳು ಗುರುತಿನ ಪರಿಶೀಲನೆಗಾಗಿ ಬ್ಯಾಂಕಿನಲ್ಲಿ ದೈಹಿಕವಾಗಿ ಹಾಜರಿರಬೇಕು. ಆದರೆ, ಸುಖ್ಮಾನಿಯಾ ಅವರ ಅತ್ತೆಗೆ ಬೆಟ್ಟ-ಗುಡ್ಡಗಳನ್ನು ಹತ್ತಿ ನಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ಆಕೆಯನ್ನು ಎತ್ತಿಕೊಂಡು ಕಾಡಿನಲ್ಲಿ ನಡೆದು ಹೋಗುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೃತರನ್ನೂ ಬಿಡದ ಕಳ್ಳರು: ಮಹಿಳೆ ಮೈಮೇಲಿದ್ದ 18 ಗ್ರಾಂ ಚಿನ್ನಾಭರಣಗಳು ಕಳವು – Kannada News | Udupi: Gold Jewellery Weighing 18 Grams Stolen from Accident Victim

ಉಡುಪಿ, ಮೇ 24: ಅಪಘಾತದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡವರನ್ನೂ ಬಿಡದ ಕಳ್ಳರು, ಮೃತ ಮಹಿಳೆಯ ಮೈಮೇಲಿದ್ದ ಬಂಗಾರದ ಒಡವೆಗಳನ್ನು ಲಪಟಾಯಿಸಿರುವ (gold theft) ಅಮಾನವೀಯ ಘಟನೆ ಉಡುಪಿ (udupi) ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಖ್ಯಾಂಶಗಳು

  • ಮೃತ ಮಹಿಳೆ ಮೈಮೇಲಿದ್ದ ಒಡವೆಗೆ ಕನ್ನ ಹಾಕಿದ ಖದೀಮರು
  • ಅಪಘಾತದಲ್ಲಿ ಮೃತಪಟ್ಟವರನ್ನೂ ಬಿಡದ ಕಳ್ಳರು
  • ಕೊಲ್ಲೂರು ಠಾಣೆಯಲ್ಲಿ ದೂರು ದಾಖಲು

ನಡೆದಿದ್ದೇನು?

ಮೇ 17ರಂದು ಕೊಲ್ಲೂರಿನ ದಳಿ ಎಂಬಲ್ಲಿ ಕೇರಳಂ ಮೂಲದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಜೀಪಿಗೆ ಮೀನು ಸಾಗಾಟ ಇನ್ಸುಲೇಟರ್ ವಾಹನವೊಂದು ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಜ್ಯೋತಿ ಹಾಗೂ ಅರಿಯಾ ಅನೂಫ್ ​ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಆದರೆ, ಅಪಘಾತದ ಕರುಣಾಜನಕ ಪರಿಸ್ಥಿತಿಯಲ್ಲೂ ಕಳ್ಳರು ತಮ್ಮ ವಿಕೃತ ಬುದ್ಧಿ ತೋರಿಸಿದ್ದು, ಮೃತ ಮಹಿಳೆ ಜ್ಯೋತಿ ಅವರ ಮೈಮೇಲಿದ್ದ ಸುಮಾರು 18 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕದ್ದೊಯ್ದಿದ್ದಾರೆ.

ಇದನ್ನೂ ಓದಿ: ಉಂಡ ಮನೆಗೆ ಕನ್ನ ಹಾಕಿದ ಆಸಾಮಿ: ಕರ್ನಾಟಕ ಬ್ಯಾಂಕ್​ಗೆ 16 ಲಕ್ಷ ರೂ ವಂಚನೆ

ಅಪಘಾತ ನಡೆದ ಸ್ಥಳದಲ್ಲಿ ಸೃಷ್ಟಿಯಾಗಿದ್ದ ಗೊಂದಲದ ವಾತಾವರಣವನ್ನೇ ಬಂಡವಾಳ ಮಾಡಿಕೊಂಡ ಖದೀಮರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದು ಒಂದು ವಾರದ ಬಳಿಕ ಜ್ಯೋತಿ ಅವರ ಕುಟುಂಬಸ್ಥರಿಗೆ ಚಿನ್ನ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದ್ದು, ಇದೀಗ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತರೊಬ್ಬರ ಒಡವೆಗಳನ್ನು ಕದ್ದ ಕಳ್ಳರ ಈ ನೀಚ ಕೃತ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.

ಕಾರಿನಲ್ಲಿ ಬಂದು ಸರ ಕದಿದ್ದ ಹೈಟೆಕ್ ಕಳ್ಳನ ಬಂಧನ

ಶಿವಮೊಗ್ಗ ತಾಲೂಕಿನ ಅಬ್ಬಲಗೇರಿ ಗ್ರಾಮದ ಬಳಿ ಮೇ 23ರಂದು ನಡೆದ ಸರಗಳ್ಳತನ ಪ್ರಕರಣವನ್ನು ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ. ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಬಂದು ಯುವತಿಯ ಕೊರಳಿನಲ್ಲಿದ್ದ 10 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಹೈಟೆಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಬಂಧಿತ ಆರೋಪಿ.

ಇದನ್ನೂ ಓದಿ: ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ವೃದ್ಧೆಯಿಂದ 24 ಕೋಟಿ ರೂ. ಸುಲಿಗೆ: ಬ್ಯಾಂಕ್​​ ಮ್ಯಾನೇಜರ್​​ ಸಮಯಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ

ಆರೋಪಿ ಮಂಜುನಾಥ್​​ ಮೇ 13ರಂದಷ್ಟೇ ವಿವಾಹವಾಗಿದ್ದ. ಶೋಕಿಗಾಗಿ ಸರಗಳ್ಳತನ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ನವೀನ್ ಮಠಪತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಮಂಜುನಾಥ್‌ನನ್ನು ಬಂಧಿಸಿದ್ದು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು 10 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:37 pm, Sun, 24 May 26

Source link

ತಟ್ಟೆಹಕ್ಕಲು ನದಿಯಲ್ಲಿ ಘೋರ ದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ 14 ಜನ ನೀರುಪಾಲು – Kannada News | Bhatkal Tragedy: several Drowns in Kattehakkalu River at Uttara kannada

ಕಾರವಾರ, (ಮೇ 24): ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ (Bhatkal) ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋದವರು ನೀರು ಪಾಲಾಗಿದ್ದಾರೆ.  ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ 14 ಜನರು ನೀರಿನ ಸುಳಿಗೆ ಸಿಲುಕಿದ್ದು, ಈ ಪೈಕಿ ಮೂವರ ಮೃತದೇಗಳು ಪತ್ತೆಯಾಗಿದೆ.  ಇನ್ನುಳಿದ  11 ಮಂದಿ ನೀರು ಪಾಲಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.  ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದು ಬಂದಿದೆ.

ಮುಖ್ಯಾಂಶಗಳು

  • ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು ಜಲಸಮಾಧಿ
  • ಉತ್ತರ ಕನ್ನಡ ಜಿಲ್ಲೆ ಭಟ್ಕಳ ಬಳಿಯ ತಟ್ಟೆಹಕ್ಕಲು ನದಿಯಲ್ಲಿ ಘಟನೆ
  • ತಟ್ಟೆಹಕ್ಕಲು ನದಿಯಲ್ಲಿ 11 ಜನರು ನೀರುಪಾಲಾಗಿರುವ ಶಂಕೆ
  • ಮೂವರ ಮೃತದೇಹ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್
  • ಕಪ್ಪೆಚಿಪ್ಪು ತೆಗೆಯಲು ನದಿಗೆ ಇಳಿದಿದ್ದ ಒಂದೇ ಕುಟುಂಬದ 14 ಜನ
  • ತಟ್ಟೆಹಕ್ಕಲು ನದಿಯಲ್ಲಿ ನೀರುಪಾಲಾಗಿರುವ 11 ಜನರಿಗಾಗಿ ಶೋಧ
  • ಘಟನಾ ಸ್ಥಳಕ್ಕೆ ಭಟ್ಕಳ ಠಾಣೆ ಪೊಲೀಸರ ಭೇಟಿ, ಪರಿಶೀಲನೆ

ಕಪ್ಪೆಚಿಪ್ಪು ತೆಗೆಯಲು ಹೋಗದ 14 ಜನರ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಿದ್ದು,  ಮೃತದೇಹಗಳನ್ನ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ, ಇನ್ನುಳಿದ 11 ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭಟ್ಕಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಕಪ್ಪೆಚಿಪ್ಪು ತೆಗೆಯಲು ಹೋದ ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದು ಬಂದಿದೆ. ಎಲ್ಲರೂ ಒಂದೇ ಕುಟುಂಬದವರು ಎಂಬ ಮಾಹಿತಿ ಲಭ್ಯವಾಗಿದೆ.

Source link

ಅಗ್ಗದ ಇಂಧನ ಮತ್ತು ಸ್ಥಿರ ಪೂರೈಕೆ ಇವತ್ತು ಜಗತ್ತಿಗೆ ಅವಶ್ಯಕ: ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್, ರುಬಿಯೋ ಹೇಳಿಕೆ – Kannada News | India US Energy: Jaishankar Highlights Stable, Affordable Supply & Trade Boost

ಜೈಶಂಕರ್ ಮತ್ತು ಮಾರ್ಕೊ ರುಬಿಯೋImage Credit source: PTI

ನವದೆಹಲಿ, ಮೇ 24: ಕಡಿಮೆ ಇಂಧನ ದರ ಹಾಗೂ ಸ್ಥಿರ ಪೂರೈಕೆ, ಇವೆರಡೂ ವಿಶ್ವಕ್ಕೆ ಇವತ್ತು ಬಹಳ ಮುಖ್ಯ ಎಂದು ಭಾರತ ಹಾಗು ಅಮೆರಿಕ ನಿಲುವು ವ್ಯಕ್ತಪಡಿಸಿವೆ. ಇಂದು ಭಾನುವಾರ ಇಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜೊತೆ ನಡೆದ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಯ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S Jaishankar) ಅವರು ಭಾರತ ಮತ್ತು ಅಮೆರಿಕ ನಡುವಿನ ಇಂಧನ (Energy) ವ್ಯಾಪಾರವು ಇತ್ತೀಚಿನ ದಿನಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಸಚಿವ ಎಸ್. ಜೈಶಂಕರ್ ಅವರು ಅಮೆರಿಕ ಮತ್ತು ಭಾರತದ ನಡುವಿನ ಇಂಧನ ಪಾಲುದಾರಿಕೆಯನ್ನು ಶ್ಲಾಘಿಸಿದರು. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ಉಭಯ ದೇಶಗಳ ಇಂಧನ ವ್ಯಾಪಾರದಲ್ಲಿ ಭಾರಿ ಏರಿಕೆ (Uptick) ಕಂಡುಬಂದಿದೆ ಎಂದರು. “ನಮ್ಮ ಸರ್ಕಾರದ ಪ್ರಮುಖ ಆದ್ಯತೆ ಮತ್ತು ಜವಾಬ್ದಾರಿಯೆಂದರೆ ಭಾರತದ 140 ಕೋಟಿ ಜನರಿಗೆ ಕೈಗೆಟುಕುವ ದರದಲ್ಲಿ ಹಾಗೂ ಸುಲಭವಾಗಿ ಇಂಧನ ಸಿಗುವಂತೆ ಮಾಡುವುದಾಗಿದೆ” ಎಂದು ಜೈಶಂಕರ್ ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ಇದನ್ನೂ ಓದಿ: ನಮ್ಮ ನಿಮ್ಮ ಎಸ್​ಐಪಿಗಳು ವಿದೇಶೀ ಹೂಡಿಕೆದಾರರಿಗೆ ಆಹಾರವಾಗುತ್ತಿವೆಯಾ? ಜೆಫರೀಸ್ ಏಜೆನ್ಸಿ ಬಿಚ್ಚಿಟ್ಟಿದೆ ಘೋರ ಸತ್ಯ

ಪಶ್ಚಿಮ ಏಷ್ಯಾ ಪ್ರಕ್ಷುಬ್ಧತೆ ಮತ್ತು ಜಾಗತಿಕ ಸವಾಲುಗಳು

ಪಶ್ಚಿಮ ಏಷ್ಯಾದಲ್ಲಿ (Middle East) ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾಗುತ್ತಿರುವ ಅಡೆತಡೆಗಳ ಕುರಿತು ಇಬ್ಬರೂ ನಾಯಕರು ಸುದೀರ್ಘವಾಗಿ ಚರ್ಚಿಸಿದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತದ ಇಂಧನ ಭದ್ರತೆಯನ್ನು ಕಾಪಾಡುವಲ್ಲಿ ಅಮೆರಿಕದೊಂದಿಗಿನ ಸಹಕಾರವು ಅತ್ಯಂತ ಪ್ರಮುಖವಾಗಿದೆ ಎಂದು ಭಾರತದ ಕಡೆಯಿಂದ ವಿವರಿಸಲಾಯಿತು.

ಕೇವಲ ಸಾಂಪ್ರದಾಯಿಕ ಇಂಧನ ಮಾತ್ರವಲ್ಲದೆ, ಪರಮಾಣು ಇಂಧನ (Nuclear Energy) ವಲಯದಲ್ಲೂ ಸಹಕಾರವನ್ನು ಹೆಚ್ಚಿಸುವ ಕುರಿತು ಸಭೆಯಲ್ಲಿ ಮಾತುಕತೆ ನಡೆಸಲಾಯಿತು. ಇದರೊಂದಿಗೆ, ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಂಬಂಧವನ್ನು ಗಟ್ಟಿಗೊಳಿಸಲು ರಕ್ಷಣಾ ಪಾಲುದಾರಿ ಚೌಕಟ್ಟು, ಮುಕ್ತ ಇಂಡೋ-ಪೆಸಿಫಿಕ್ ವಲಯದ ಸುರಕ್ಷತೆ ಮತ್ತು ಕ್ವಾಡ್ (Quad) ಒಕ್ಕೂಟದ ಮುಂದಿನ ಕಾರ್ಯಸೂಚಿಗಳ ಬಗ್ಗೆಯೂ ಚರ್ಚೆಗಳು ನಡೆದವು.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; ನೊಂದಣಿ, ಆದಾಯ, ಫಲಾನುಭವಿಗಳ ಸಂಖ್ಯೆ ಇತ್ಯಾದಿ ಮಾಹಿತಿ

ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವೇಗ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರ ಭಾರತದ ಭೇಟಿಯು ಉಭಯ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ, ಇಂಧನ ಮತ್ತು ಅತ್ಯಾಧುನಿಕ ತಂತ್ರಜ್ಞಾನ (Critical Technology) ವಲಯದ ಮೈತ್ರಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಜೈಶಂಕರ್ ಅಭಿಪ್ರಾಯಪಟ್ಟರು.

ಜಗತ್ತಿನ ಎರಡು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕಗಳು ಜಾಗತಿಕ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಬದ್ಧವಾಗಿವೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಪುನರುಚ್ಚರಿಸಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SSC CGL 2026: ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ಆರಂಭ; ಸಂಬಳ ಮತ್ತು ಅರ್ಹತಾ ವಿವರ ಇಲ್ಲಿದೆ – Kannada News | SSC CGL recruitment 2026: What are the positions for which CGL recruitment is available

ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ

ದೇಶದ ಅತಿ ದೊಡ್ಡ ಮತ್ತು ಪ್ರತಿಷ್ಠಿತ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಒಂದಾದ ಸಿಬ್ಬಂದಿ ಆಯ್ಕೆ ಆಯೋಗದ (SSC) ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) 2026 ರ ಪರೀಕ್ಷೆಯ ಅರ್ಜಿ ಪ್ರಕ್ರಿಯೆಯು ಅಧಿಕೃತವಾಗಿ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಬಯಸುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 22 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿ ಪ್ರಕ್ರಿಯೆಯು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರತಿಷ್ಠಿತ ‘ಗ್ರೂಪ್ ಬಿ’ ಮತ್ತು ‘ಗ್ರೂಪ್ ಸಿ’ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ವಿವಿಧ ಹುದ್ದೆಗಳಿಗೆ ನಿಗದಿಪಡಿಸಲಾದ ಸಂಬಳ, ವಯೋಮಿತಿ ಮತ್ತು ಅರ್ಹತೆಯ ಸಂಪೂರ್ಣ ವಿವರ ಇಲ್ಲಿದೆ.

ಶೈಕ್ಷಣಿಕ ಅರ್ಹತೆ:

SSC CGL ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree) ಪಾಸ್ ಆಗಿರಬೇಕು. ಹೆಚ್ಚಿನ ಹುದ್ದೆಗಳಿಗೆ ಸಾಮಾನ್ಯ ಪದವಿ ಸಾಕಾಗುತ್ತದೆ. ಆದರೆ, ಜೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್ (JSO) ಮತ್ತು ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್‌ನಂತಹ ವಿಶೇಷ ಹುದ್ದೆಗಳಿಗೆ ಅಂಕಿಅಂಶಗಳಿಗೆ (Statistics) ಸಂಬಂಧಿಸಿದ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಅತ್ಯಗತ್ಯವಾಗಿದೆ.

ವಿವಿಧ ಪೇ-ಲೆವೆಲ್ ಹಾಗೂ ಹುದ್ದೆಗಳ ವಿವರ:

ಕೇಂದ್ರ ಸರ್ಕಾರದ ಈ ಹುದ್ದೆಗಳನ್ನು ವೇತನ ಶ್ರೇಣಿಯ ಆಧಾರದ ಮೇಲೆ ವಿವಿಧ ಹಂತಗಳಾಗಿ ವಿಂಗಡಿಸಲಾಗಿದೆ:

ಪೇ ಲೆವೆಲ್-8 (Pay Level-8):

  • ಪ್ರಮುಖ ಹುದ್ದೆಗಳು: ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿ (Assistant Audit Officer) ಮತ್ತು ಸಹಾಯಕ ಲೆಕ್ಕಪತ್ರ ಅಧಿಕಾರಿ (Assistant Accounts Officer).
  • ಇಲಾಖೆ: ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ (C&AG) ಅಡಿಯಲ್ಲಿ ಈ ನೇಮಕಾತಿ ನಡೆಯುತ್ತದೆ.
  • ವೇತನ ಶ್ರೇಣಿ: 47,600 ರಿಂದ 1,51,100ರೂ. ವರೆಗೆ.
  • ವಯೋಮಿತಿ: 18 ರಿಂದ 30 ವರ್ಷಗಳು.

ಪೇ ಲೆವೆಲ್-7 (Pay Level-7):

  • ಪ್ರಮುಖ ಹುದ್ದೆಗಳು: ಸಹಾಯಕ ವಿಭಾಗ ಅಧಿಕಾರಿ (ASO), ಆದಾಯ ತೆರಿಗೆ ನಿರೀಕ್ಷಕರು (Income Tax Inspector), ಕೇಂದ್ರ ಅಬಕಾರಿ ನಿರೀಕ್ಷಕರು (Central Excise Inspector), ಜಾರಿ ನಿರ್ದೇಶನಾಲಯದಲ್ಲಿ (ED) ಸಹಾಯಕ ಜಾರಿ ಅಧಿಕಾರಿ ಮತ್ತು ಸಿಬಿಐ (CBI) ನ ಸಬ್-ಇನ್ಸ್‌ಪೆಕ್ಟರ್.
  • ವೇತನ ಶ್ರೇಣಿ: 44,900 ರಿಂದ 1,42,400 ರೂ. ವರೆಗೆ.
  • ವಯೋಮಿತಿ: ಹೆಚ್ಚಿನ ಹುದ್ದೆಗಳಿಗೆ 18 ರಿಂದ 30 ವರ್ಷಗಳು.

ಪೇ ಲೆವೆಲ್-6 (Pay Level-6):

  • ಪ್ರಮುಖ ಹುದ್ದೆಗಳು: ಜೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್ (JSO), ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ (NIA) ಸಬ್-ಇನ್ಸ್‌ಪೆಕ್ಟರ್, ರಿಸರ್ಚ್ ಅಸಿಸ್ಟೆಂಟ್ ಮತ್ತು ಡಿವಿಷನಲ್ ಅಕೌಂಟೆಂಟ್.
  • ವೇತನ ಶ್ರೇಣಿ: 35,400 ರಿಂದ 1,12,400 ರೂ. ವರೆಗೆ.
  • ವಯೋಮಿತಿ: ಜೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್ ಹುದ್ದೆಗೆ ಗರಿಷ್ಠ ವಯಸ್ಸಿನ ಮಿತಿ 32 ವರ್ಷಗಳು.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಪೇ ಲೆವೆಲ್-5 ಮತ್ತು ಪೇ ಲೆವೆಲ್-4:

  • ಪ್ರಮುಖ ಹುದ್ದೆಗಳು: ಆಡಿಟರ್ (Auditor), ಅಕೌಂಟೆಂಟ್ (Accountant), ತೆರಿಗೆ ಸಹಾಯಕ (Tax Assistant), ಅಂಚೆ ಸಹಾಯಕ (Postal Assistant) ಮತ್ತು ಹಿರಿಯ ಕಾರ್ಯದರ್ಶಿ ಸಹಾಯಕ (SSA).
  • ವೇತನ ಶ್ರೇಣಿ: ಆರಂಭಿಕ ವೇತನ 25,500 ರಿಂದ 92,300 ರೂ. ವರೆಗೆ ಇರುತ್ತದೆ.
  • ವಯೋಮಿತಿ: ಹೆಚ್ಚಿನ ಹುದ್ದೆಗಳಿಗೆ 18 ರಿಂದ 27 ವರ್ಷಗಳು.

ಅಭ್ಯರ್ಥಿಗಳ ಗಮನಕ್ಕೆ:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ತಾವು ಆಯ್ಕೆ ಮಾಡಿಕೊಳ್ಳುವ ನಿರ್ದಿಷ್ಟ ಹುದ್ದೆಯ ವಯಸ್ಸಿನ ಮಿತಿ, ಶೈಕ್ಷಣಿಕ ಅರ್ಹತೆ ಮತ್ತು ದೈಹಿಕ ಸಾಮರ್ಥ್ಯದ (ಅನ್ವಯಿಸುವ ಹುದ್ದೆಗಳಿಗೆ ಮಾತ್ರ) ನಿಯಮಾವಳಿಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಎಚ್ಚರಿಕೆಯಿಂದ ಪರಿಶೀಲಿಸಿ, ಕೊನೆಯ ದಿನಾಂಕದ (ಜೂನ್ 22) ಒಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:10 pm, Sun, 24 May 26

Source link

IAS ಕನಸು ಕಿತ್ತುಕೊಂಡ ಬೆಂಗಳೂರು ರಸ್ತೆ: ಗುಂಡಿ, ಟ್ರಾಫಿಕ್ ನಿಂದ ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಗೇಟ್ ಕ್ಲೋಸ್

ಬೆಂಗಳೂರು, (ಮೇ 24): ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಸಾಕು ಟ್ರಾಫಿಕ್ ಹಾಗೂ ಇಲ್ಲಿನ ರಸ್ತೆ ಗುಂಡಿಗಳು ನೆನಪಿಗೆ ಬರುತ್ತಿವೆ. ಹೌದು….ಬೆಂಗಳೂರಿನ ರಸ್ತೆಗಳು ಮತ್ತೆ ಸುದ್ದಿಯಲ್ಲಿದ್ದು, ಕಿತ್ತುಹೋದ ರೋಡ್​​ಗಳಿಂದ ಆರು ವಿದ್ಯಾರ್ಥಿಗಳು UPSC ಪರೀಕ್ಷೆಯಿಂದ ವಂಚಿತನಾಗಿರುವ ಆರೋಪ ಕೇಳಿಬಂದಿದೆ. ವೈಟ್​​ಫೀಲ್ಡ್​, ಮಹಾದೇವಪುರ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಿದ್ಯಾರ್ಥಿ ಚಾಲುಕ್ಯ ಸರ್ಕಲ್ ಆರ್. ಸಿ. ಕಾಲೇಜಿನ ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಪರೀಕ್ಷಾ ಕೇಂದ್ರದ ಗೇಟ್​​ ಕ್ಲೋಸ್​​ ಆಗಿದೆ. ಹೀಗಾಗಿ ಯುಪಿಎಸ್​​ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗೆ ನಿರಾಸೆಯಾಗಿದೆ.

ಇದನ್ನೂ ಓದಿ: ತಡವಾಗಿ ಪರೀಕ್ಷಾ ಕೇಂದ್ರ ತಲುಪಿದ್ದಕ್ಕೆ ಎಕ್ಸಾಂಗೆ ನಿರಾಕರಣೆ: ವಿದ್ಯಾರ್ಥಿಯ UPSC ಕನಸು ನುಂಗಿತಾ ಬೆಂಗಳೂರಿನ ರಸ್ತೆಗಳು?

Source link

Exit mobile version