Karnataka Weather Forecast: ಜೂ.28ರ ವರೆಗೂ ರಾಜ್ಯದಲ್ಲಿ ವರುಣಾರ್ಭಟ, ಕರಾವಳಿಯಲ್ಲಿ ಭಾರಿ ಮಳೆ ನಿರೀಕ್ಷೆ – Kannada News | Karnataka Weather Update: Heavy Rain Forecast Till June 28 Across State; Heatwave Alert Issued for North Interior Parts

ಬೆಂಗಳೂರು, ಜೂನ್​​ 22: ಮುಂಗಾರು ಮಳೆಯ ಕೊರತೆ ನಡುವೆಯೂ ರಾಜ್ಯದಲ್ಲಿ ಜೂನ್ 28ರವರೆಗೂ ವರುಣಾರ್ಭಟದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಕರ್ನಾಟದಲ್ಲಿ ಜೂನ್​​ 23 ರಿಂದ 28ರ ವರೆಗೆ ಕೆಲ ಭಾಗಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಒಳನಾಡು ಭಾಗದಲ್ಲಿ ಜೂನ್​​ 23ರಿಂದ 25ರವರೆಗೆ ಮತ್ತು ಜೂನ್​​ 27ರಂದು ಮಳೆ ಅಂದಾಜಿಸಲಾಗಿದೆ. ಅದಾಗಿಯೂ ರಾಜ್ಯದ ಕೆಲವೆಡೆ ಬಿಸಿ ಗಾಳಿ ಮತ್ತು ತೇವಾಂಶ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ.

ಮುಖ್ಯಾಂಶಗಳು

  • ಜೂನ್ 28ರವರೆಗೂ ರಾಜ್ಯದಲ್ಲಿ ಮಳೆ ಮುನ್ಸೂಚನೆ
  • ಕರಾವಳಿ ಕರ್ನಾಟದಲ್ಲಿ ಭಾರಿ ವರುಣಾರ್ಭಟ ನಿರೀಕ್ಷೆ
  • ರಾಜ್ಯದ ಕೆಲವೆಡೆ ಬಿಸಿ ಗಾಳಿ ಮತ್ತು ತೇವಾಂಶ ಎಚ್ಚರಿಕೆ

ಎಲ್ಲೆಲ್ಲಿ ಮಳೆ?

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಗುಡುಗು ಸಹಿತ ಭಾರಿ ಮಳೆಯ ಸಾಧ್ಯತೆ ಇದೆ. ಉತ್ತರ ಒಳನಾಡು ಭಾಗದಲ್ಲಿಯೂ ಗಡುಗು ಸಹಿತ ಸಾಧಾರಣ ಮಳೆ ಅಂದಾಜಿಸಲಾಗಿದೆ. ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ದಾವಣಗೆರೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಾಳಿ ಜೊತೆಗೆ ಸಾಧಾರಣ ಅಥವಾ ಮಧ್ಯಮ ಪ್ರಮಾಣದ ಮಳೆ ನಿರೀಕ್ಷಿಸಲಾಗಿದೆ. ಗಾಳಿಯ ವೇಗ ಗಂಟೆಗೆ 30-40 ಕಿಲೋ ಮೀಟರ್​​ನಷ್ಟು ಇರಬಹುದೆಂದು ಇಲಾಖೆ ತಿಳಿಸಿದೆ. ಬೆಂಗಳೂರು ನಗರದಲ್ಲಿಯೂ ಮಳೆಯ ಸಾಧ್ಯತೆ ಇದ್ದು, ಗುಡುಗು ಸಹಿತ ಮಳೆಯ ಬಗ್ಗೆ ಎಚ್ಚರಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಶೇ 21 ರಷ್ಟು ಮುಂಗಾರು ಮಳೆ ಕೊರತೆ; ಪ್ರಮುಖ ಡ್ಯಾಂಗಳಲ್ಲಿ ತಳ ಸೇರಿದ ನೀರು

ಬಿಸಿ ಗಾಳಿ ಮತ್ತು ತೇವಾಂಶ ಎಚ್ಚರಿಕೆ

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ನಡುವೆಯೂ ಉತ್ತರ ಒಳನಾಡಿನ ಕೆಲವೆಡೆ ಮುಂದಿನ ಎರಡು ದಿನಗಳ ಅವಧಿಗೆ ಬಿಸಿ ಗಾಳಿ ಮತ್ತು ತೇವಾಂಶ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:41 pm, Mon, 22 June 26

Source link

ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ – Kannada News | 14 people charred to death after massive fire in coaching centre in Lucknow PM Modi Announces Ex Gratia

ಲಕ್ನೋ, ಜೂನ್ 22: ಉತ್ತರ ಪ್ರದೇಶದ ಲಕ್ನೋದಲ್ಲಿ (Lucknow Coaching Centre Fire Accident) ಭೀಕರ ದುರಂತವೊಂದು ಸಂಭವಿಸಿದೆ. ಕೋಚಿಂಗ್ ಸೆಂಟರ್ ಇದ್ದ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 14 ವಿದ್ಯಾರ್ಥಿಗಳು ಜೀವಂತವಾಗಿ ದಹನವಾಗಿದ್ದಾರೆ. ಪೂರ್ಣಿಯಾ ವಲಯದಲ್ಲಿರುವ ವಾಣಿಜ್ಯ ಕಟ್ಟಡದ ಮೇಲಿನ ಮಹಡಿಯಲ್ಲಿ ಈ ಕೋಚಿಂಗ್ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು. ದಟ್ಟ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಕಟ್ಟಡದ ಭಾಗಗಳನ್ನು ವೇಗವಾಗಿ ಆವರಿಸಿದ್ದರಿಂದ, ಹಲವಾರು ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಕಟ್ಟಡದಿಂದ ಕೆಳಗೆ ಜಿಗಿದರು. ಆದರೂ ಒಳಗೆ ಹಲವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರೆದಿದೆ. ಇದುವರೆಗೂ 14 ಜನ ಮೃತಪಟ್ಟಿದ್ದಾರೆ.

ಈ ಭೀಕರ ಅವಘಡಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಹಿಸಲಾರದ ಘಟನೆ ಇದಾಗಿದ್ದು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಇತ್ತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಈ ಘಟನೆಯ ಬಗ್ಗೆ ತೀವ್ರ ಕಳವಳ ಮತ್ತು ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗಾಯಗೊಂಡ ಎಲ್ಲರಿಗೂ ಉಚಿತ ಮತ್ತು ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅವರು ಸ್ಥಳೀಯ ಆಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

“ಉತ್ತರ ಪ್ರದೇಶದ ಲಕ್ನೋದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಯಾಗಿರುವುದು ತೀವ್ರ ಆಘಾತ ತಂದಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿದ್ದು, ಅಧಿಕಾರಿಗಳು ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ. ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಧನವನ್ನು ಪ್ರಧಾನಿ ಘೋಷಿಸಿದ್ದಾರೆ.

(Video Source: PTI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫ್ಲೈಓವರ್ ಬರುತ್ತೆ ಅಂತಾ ಗೊತ್ತಿದ್ರೂ ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್ – Kannada News | Minister krishna byre gowda Class To B SMILE Officers about white topping project

ಬೆಂಗಳೂರು, (ಜೂನ್ 22): ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ  (Minister krishna byre gowda) ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ವಿವಿಧ ಇಲಾಖೆಯ ಸಭೆ ಮೇಲೆ ಸಭೆ ನಡೆಸುತ್ತಿದ್ದು, ಈ ವೇಳೆ  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮೊನ್ನೇ ಅಷ್ಟೇ ತಮ್ಮ ಮೊದಲ ಸಭೆಯಲ್ಲೇ ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ಪ್ರಸ್ತಾಪಿಸಿ ಜಿಬಿಎ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಅಲ್ಲದೇ ಡಾಂಬರೀಕರಣದಲ್ಲಿ ಕಳ್ಳಾಟವಾಡಿದ್ದ ಓರ್ವ ಇಂಜಿನಿಯರ್​​​​ನನ್ನು ಸಹ ಸಸ್ಪೆಂಡ್ ಮಾಡಿದ್ದರು.

ಇನ್ನು ಇಂದು (ಜೂನ್ 22) ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್(ಬಿ-ಸ್ಮೈಲ್) ಅಧಿಕಾರಿಗಳ ಸಭೆ ನಡೆಸಿದ್ದು, ವೈಟ್ ಟ್ಯಾಪಿಂಗ್, ಫ್ಲೈಓವರ್ ಸೇರಿದಂತೆ ಇತರೆ ಕಾಮಗಾರಿಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಎಲಿವೇಟೆಡ್ ಕಾರಿಡಾರ್ ಆಗುತ್ತೆ, ಫ್ಲೈಓವರ್ ಬರುತ್ತೆ ಅಂತಾ ಗೊತ್ತಿದ್ದರೂ ವೈಟ್ ಟ್ಯಾಪಿಂಗ್ ಮಾಡೋದೇಕೆ? ಆಮೇಲೆ ಫ್ಲೈಓವರ್ ಕಾರಣಕ್ಕೆ ಮತ್ತೆ ವೈಟ್ ಟ್ಯಾಪಿಂಗ್ ಕಿತ್ತಾಕೋದು ಯಾರಿಗೆ ಬಿಲ್ ಮಾಡೋಕೆ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಶ್ವ ಅಪ್ಪಂದಿರ ದಿನದಂದು ತಂದೆಗೆ ದುಬಾರಿ ಉಡುಗೊರೆ ನೀಡಿದ ಯಶಸ್ವಿ ಜೈಸ್ವಾಲ್ – Kannada News | Yashasvi Jaiswal Gifts Rs 1.32 Cr Mercedes GLS to Father on Father’s Day

ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal), ವಿಶ್ವ ಅಪ್ಪಂದಿರ ದಿನದಂದು ತಮ್ಮ ತಂದೆಗೆ ಕೋಟಿ ಮೌಲ್ಯದ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಮುಗಿಸಿ ಮನೆಗೆ ಮರಳಿದ್ದ ಜೈಸ್ವಾಲ್, ತಮ್ಮ ತಂದೆಗೆ ಈ ವಿಶೇಷ ದಿನದಂದು ಐಷಾರಾಮಿ SUV Mercedes-Benz GLS ಕಾರನ್ನು ಗಿಫ್ಟ್ ಮಾಡಿದ್ದಾರೆ. ಈ ಐಷಾರಾಮಿ ಕಾರಿನ ಆರಂಭಿಕ ಎಕ್ಸ್-ಶೋರೂಂ ಬೆಲೆ ಸುಮಾರು 1.32 ಕೋಟಿಯಾಗಿದ್ದು, ಇದೀಗ ಈ ಕಾರು ಕೂಡ ಜೈಸ್ವಾಲ್ ಅವರ ಕಾರುಗಳ ಸಂಗ್ರಹಕ್ಕೆ ಸೇರ್ಪಡೆಗೊಂಡಿದೆ. ಬಡತನದಲ್ಲೇ ಮಗನ ಆಸೆಗೆ ನೀರೇರೆದು ಆತನನ್ನು ಪ್ರತಿಭಾನ್ವೀತ ಕ್ರಿಕೆಟಿಗನಾಗಿ ಮಾಡಿದ ತಂದೆಗೆ ಜೈಸ್ವಾಲ್ ನೀಡಿರುವ ಉಡುಗೊರೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಯಶಸ್ವಿ ಜೈಸ್ವಾಲ್ ಅವರ ಅಣ್ಣ ತೇಜಸ್ವಿ ಜೈಸ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಯಶಸ್ವಿ ತನ್ನ ಹೆತ್ತವರೊಂದಿಗೆ ಹೊಸ ಕಾರನ್ನು ಡೆಲಿವರಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಜೈಸ್ವಾಲ್ ಖರೀದಿಸಿರುವ UV Mercedes-Benz GLS ಕಾರು ಗಂಟೆಗೆ 250 ಕಿಲೋಮೀಟರ್ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಜೈಸ್ವಾಲ್ ಬಳಿ ಇರುವ ದುಬಾರಿ ಕಾರುಗಳ ಪಟ್ಟಿ

  • ಮರ್ಸಿಡಿಸ್-ಬೆನ್ಜ್ ಜಿಎಲ್ಎಸ್: ಅಂದಾಜು ಬೆಲೆ 1.32 ಕೋಟಿ ರೂ.
  • ಮರ್ಸಿಡಿಸ್-ಬೆನ್ಜ್ ಸಿಎಲ್‌ಎ: ಅಂದಾಜು ಬೆಲೆ 31.72 ಲಕ್ಷ ರೂ.
  • ಟಾಟಾ ಹ್ಯಾರಿಯರ್: ಅಂದಾಜು ಬೆಲೆ 15.49 ಲಕ್ಷ ರೂ.
  • ಮಹೀಂದ್ರಾ ಥಾರ್: ಅಂದಾಜು ಬೆಲೆ 11.35 ಲಕ್ಷ ರೂ.

ಜೈಸ್ವಾಲ್ ವೃತ್ತಿ ಜೀವನ

ಇನ್ನು ಜೈಸ್ವಾಲ್ ಅವರ ವೃತ್ತಿಜೀವನದ ವಿಚಾರಕ್ಕೆ ಬರುವುದಾದರೆ.. ಕೆಲವೇ ದಿನಗಳ ಹಿಂದೆ ಮುಗಿದ ಅಫ್ಘಾನಿಸ್ತಾನ ವಿರುದ್ಧದ ಮೂರು ದಿನಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಜೈಸ್ವಾಲ್ ಅದ್ಭುತ ಶತಕ ಗಳಿಸಿದರು. ಅಜೇಯ 110 ರನ್​ಗಳ ಇನ್ನಿಂಗ್ಸ್ ಆಡಿದ ಜೈಸ್ವಾಲ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇದು ಕಳೆದ ಮೂರು ಪಂದ್ಯಗಳಲ್ಲಿ ಜೈಸ್ವಾಲ್ ಸಿಡಿಸಿದ ಎರಡನೇ ಶತಕವಾಗಿದೆ. ಆದರೆ ಇದರ ಹೊರತಾಗಿಯೂ ಜೈಸ್ವಾಲ್ ಅವರನ್ನು ಮುಂಬರುವ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.

IND vs ENG: ಕಳೆದ 3 ಪಂದ್ಯಗಳಲ್ಲಿ 2 ಶತಕ ಬಾರಿಸಿದ ಜೈಸ್ವಾಲ್​ಗಿಲ್ಲ ತಂಡದಲ್ಲಿ ಸ್ಥಾನ..!

ಜೈಸ್ವಾಲ್​ರನ್ನು ಆಯ್ಕೆ ಮಾಡದಿರಲು ಕಾರಣ, ಪ್ರಸ್ತುತ ಭಾರತ ಏಕದಿನ ತಂಡದಲ್ಲಿ ಅವರು ಆಡುವ ಕ್ರಮಾಂಕ ಭರ್ತಿಯಾಗಿರುವುದು. ಜೈಸ್ವಾಲ್ ಪ್ರಸ್ತುತ ಆರಂಭಿಕರಾಗಿ ಆಡುತ್ತಿದ್ದಾರೆ. ಹೀಗಾಗಿ ಏಕದಿನ ತಂಡದಲ್ಲಿ ಆರಂಭಿಕರಾಗಿ ನಾಯಕ ಶುಭ್​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಇದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅವರನ್ನು ಆಡಿಸುವುದಕ್ಕೆ ಪ್ರಯತ್ನಿಸಿದರೆ, ಅಲ್ಲಿಯೂ ಯಾವ ಸ್ಲಾಟ್ ಖಾಲಿ ಇಲ್ಲ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್​ರಂತಹ ಆಟಗಾರರು ಇರುವ ಕಾರಣ ಜೈಸ್ವಾಲ್ ತಮ್ಮ ಸರದಿಗಾಗಿ ಇನ್ನು ಕಾಯಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾರ ಭವಿಷ್ಯ: ರಾಶಿಯಲ್ಲಿ ಶನಿ, ರಾಹು ಇದ್ದರೂ ಈ ರಾಶಿಯವರಿಗೆ ಮಾತ್ರ ದುಡ್ಡಿನ ಮಳೆ – Kannada News | Rashiphala 2026: Weekly Astrology Forecast for June 21 27, All Zodiacs

2026ರ ಜೂನ್ 21ರಿಂದ ಜೂನ್ 27ರವರೆಗೆ ಮೂರನೇ ವಾರವಾಗಿದ್ದು, ಗ್ರಹಗಳ ಸಂಯೋಗದಿಂದ ಹಾಗೂ ವರ್ತಮಾನದ ದಶೆಯ ಪ್ರಭಾವವು ರಾಶಿಗಳ ಮೇಲೆ ಉಂಟಾಗಲಿದ್ದು, ಎಲ್ಲಿಂದೆಲ್ಲಿಗೋ ನಿಮ್ಮನ್ನು ವಿಧಿ ಕರೆದೊಯ್ಯಬಹುದು. ಎಲ್ಲದಕ್ಕೂ ಸಿದ್ಧನಾಗಿರುವುದೇ ಮುಖ್ಯ.

​ಮೇಷ ರಾಶಿ :

ಧನಸ್ಥಾನದ ಮಂಗಳನಿಂದ ಆರ್ಥಿಕ ಪ್ರಗತಿ ಸಿದ್ಧಿಸಲಿದೆ. ಹೊಸ ಉದ್ಯೋಗಾವಕಾಶಗಳು ನಿಮ್ಮ ಬಾಗಿಲು ತಟ್ಟಲಿವೆ. ಧೈರ್ಯದಿಂದ ಮುನ್ನಡೆಯಿರಿ, ಕೌಟುಂಬಿಕ ಸುಖ ಹಾಗೂ ನೆಮ್ಮದಿ ಹೆಚ್ಚಾಗಲಿದ್ದು, ಮನಸ್ಸಿಗೆ ಅಪಾರ ಸಂತೋಷ ಸಿಗಲಿದೆ.

ವೃಷಭ ರಾಶಿ :

ನಿಮ್ಮದೇ ರಾಶಿಯಲ್ಲಿ ಮಂಗಳನ ಸಂಚಾರದಿಂದ ಕಾರ್ಯೋತ್ಸಾಹ ಇರಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಉತ್ತಮ ಫಲಿತಾಂಶ ಲಭ್ಯ. ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು. ಆರೋಗ್ಯದ ಕಡೆಗೆ ಸ್ವಲ್ಪ ಗಮನಹರಿಸುವುದು ಉತ್ತಮ.

ಮಿಥುನ ರಾಶಿ :

ರಾಶಿಯಲ್ಲಿ ಸೂರ್ಯನ ಪ್ರಭಾವದಿಂದ ಕೀರ್ತಿ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ಬದಲಾವಣೆಗಳು ಕಂಡುಬರುತ್ತವೆ. ಆತ್ಮವಿಶ್ವಾಸದಿಂದ ಕೈಗೆತ್ತಿಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ದೂರದ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಮತ್ತು ಹೊಸ ಉತ್ಸಾಹ ಸಿಗಲಿದೆ.

​ಕರ್ಕಾಟಕ ರಾಶಿ :

ಬುಧ, ಶುಕ್ರ ಮತ್ತು ಗುರುಗಳ ಶುಭ ಸಂಗಮದಿಂದ ಅದೃಷ್ಟ ಒಲಿಯಲಿದೆ. ಆರ್ಥಿಕ ಪರಿಸ್ಥಿತಿ ಸದೃಢವಾಗಲಿದ್ದು, ಬಂಧು-ಮಿತ್ರರಿಂದ ಅಪಾರ ಸಹಕಾರ ದೊರೆಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ.

ಸಿಂಹ ರಾಶಿ :

ಕೇತುವಿನ ಪ್ರಭಾವದಿಂದ ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಕಠಿಣ ಸವಾಲುಗಳನ್ನು ಚತುರತೆಯಿಂದ ಎದುರಿಸಿ ಜಯಿಸುವಿರಿ. ಯೋಚಿಸಿ ನಿರ್ಧಾರ ಕೈಗೊಳ್ಳುವುದು ಸದ್ಯಕ್ಕೆ ತುಂಬಾ ಒಳ್ಳೆಯದು.

ಕನ್ಯಾ ರಾಶಿ :

ಭಾಗ್ಯಸ್ಥಾನದ ಬಲದಿಂದ ಅಡೆತಡೆಗಳು ದೂರಾಗಲಿವೆ. ಉನ್ನತ ಶಿಕ್ಷಣದ ಆಕಾಂಕ್ಷಿಗಳಿಗೆ ಶುಭ ವಾರ್ತೆ ಸಿಗಲಿದೆ. ನವೀನ ವಸ್ತುಗಳ ಖರೀದಿಗೆ ಯೋಗವಿದೆ. ಕೌಟುಂಬಿಕ ಜೀವನದಲ್ಲಿ ಪ್ರೀತಿ ಮತ್ತು ಸೌಹಾರ್ದತೆ ತುಂಬಿ ತುಳುಕಾಡಲಿದೆ.

ತುಲಾ ರಾಶಿ :

ಮಿಶ್ರ ಫಲಗಳ ವಾರವಿದು. ಅನಿರೀಕ್ಷಿತ ಧನಲಾಭ ಉಂಟಾಗಲಿದ್ದರೂ, ಖರ್ಚುಗಳ ಮೇಲೆ ನಿಗಾ ಇರಲಿ. ವೃತ್ತಿ ರಂಗದಲ್ಲಿ ತಾಳ್ಮೆಯಿಂದ ಕೆಲಸ ನಿರ್ವಹಿಸಿ. ಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಸಂಕಷ್ಟಗಳು ಸುಲಭವಾಗಿ ಪರಿಹಾರವಾಗಲಿವೆ.

ವೃಶ್ಚಿಕ ರಾಶಿ :

ಚಂದ್ರನ ಸಂಚಾರದಿಂದ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡಲಿವೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಪಾಲುದಾರರಿಂದ ಉತ್ತಮ ಸಹಕಾರ ದೊರೆಯಲಿದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಸಣ್ಣಪುಟ್ಟ ಪ್ರವಾಸಗಳು ನಿಮ್ಮ ಮನಸ್ಸಿಗೆ ಆನಂದವನ್ನು ನೀಡಲಿವೆ.

ಧನು ರಾಶಿ :

ಲಗ್ನದಲ್ಲಿ ಮೂಲ ನಕ್ಷತ್ರದ ಪ್ರಭಾವವಿದ್ದು, ಕಠಿಣ ಸವಾಲುಗಳನ್ನು ಎದುರಿಸುವ ಶಕ್ತಿ ಸಿಗಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರಲಿದೆ. ಹಠಾತ್ ಧನಲಾಭದ ಯೋಗವಿದೆ. ಆರೋಗ್ಯದ ಬಗ್ಗೆ ಕಿರು ಕಾಳಜಿ ವಹಿಸುವುದು ಅವಶ್ಯಕವಾಗಿದೆ.

ಮಕರ ರಾಶಿ :

ಬುದ್ಧಿವಂತಿಕೆಯಿಂದ ಕಾರ್ಯಸಾಧನೆ ಮಾಡುವಿರಿ. ಸಂತಾನ ಭಾಗ್ಯದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸಮಾಚಾರ ಸಿಗಲಿದೆ. ವಿದ್ಯಾರ್ಥಿಗಳಿಗೆ ಕೀರ್ತಿ ಹೆಚ್ಚಾಗುವ ಸಮಯವಿದು. ಪ್ರೀತಿಪಾತ್ರರೊಂದಿಗೆ ಮಧುರ ಕ್ಷಣಗಳನ್ನು ಕಳೆಯುವ ಸುಯೋಗ ನಿಮ್ಮದಾಗಲಿದೆ.

ಇದನ್ನೂ ಓದಿ: ಶುಕ್ರ-ಕೇತು ಸಂಯೋಗ; ಈ 4 ರಾಶಿಯವರು ಜುಲೈನಲ್ಲಿ ಅತ್ಯಂತ ಜಾಗರೂಕರಾಗಿರಿ

ಕುಂಭ ರಾಶಿ :

ರಾಹುವಿನ ಸಂಚಾರದ ನಡುವೆಯೂ ಸುಖ-ಸಂತೋಷ ವೃದ್ಧಿಯಾಗಲಿದೆ. ಭೂಮಿ ಅಥವಾ ವಾಹನ ಖರೀದಿಯ ಯೋಗಗಳು ಪ್ರಬಲವಾಗಿವೆ. ತಾಯಿಯ ಕಡೆಯಿಂದ ಪೂರ್ಣ ಸಹಕಾರ ಸಿಗಲಿದೆ. ಮನೆ-ಮನಗಳಲ್ಲಿ ನೆಮ್ಮದಿಯ ವಾತಾವರಣ ನೆಲೆಸಲಿದೆ.

ಮೀನ ರಾಶಿ :

ರಾಶಿಯಲ್ಲಿ ಶನಿಯ ಸಂಚಾರವಿದ್ದರೂ ಸಹೋದರರ ಸಕಾಲಿಕ ಸಹಾಯದಿಂದ ಧೈರ್ಯ ಹೆಚ್ಚಾಗಲಿದೆ. ಸಣ್ಣ ಪ್ರಯಾಣಗಳಿಂದ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಮಾತುಗಳಿಂದ ಸಮಾಜದಲ್ಲಿ ಗೌರವ ವೃದ್ಧಿಸಲಿದೆ. ಹೊಸ ಆಲೋಚನೆಗಳು ಯಶಸ್ಸಿನ ಹಾದಿ ತೋರಿಸಲಿವೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

1 ರೂಪಾಯಿಗೆ ಟಿ ಶರ್ಟ್: ಚಿಂತಾಮಣಿಯಲ್ಲಿ ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು – Kannada News | Rs 1 T Shirt Offer! Massive Crowd Throngs New Clothing Store in Chintamani

ಚಿಕ್ಕಬಳ್ಳಾಪುರ, ಜೂನ್​ 22: 1 ರೂಪಾಯಿಗೆ 1 ಟಿ ಶರ್ಟ್​ ಕೊಡುವುದಾಗಿ ಆಫರ್ ಹಿನ್ನೆಲೆ ಗ್ರಾಹಕರು ಬಟ್ಟೆ ಅಂಗಡಿಗೆ ಮುಗಿಬಿದ್ದ ಘಟನೆ ​ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದಲ್ಲಿ ನಡೆದಿದೆ. ಚಿಂತಾಮಣಿ ನಗರದ ಬೆಂಗಳೂರು ಮುಖ್ಯರಸ್ತೆಯಲ್ಲಿರುವ ಅಂಗಡಿ ಎದುರು ಜಮಾಯಿಸಿರುವ ಗ್ರಾಹಕರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಬಟ್ಟೆ ಅಂಗಡಿ ಓಪನಿಂಗ್​​ಗೆ ಗ್ರಾಹಕರನ್ನು ಸೆಳೆಯಲು ಅಂಗಡಿಯವರು ಆಫರ್ ಘೋಷಿಸಿದ್ದರು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸ್ನೇಹದ ನಾಟಕವಾಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾ ಬಂಧನ – Kannada News | Kannada Serial Actress Vanitha Arrested for Cheating Money Mahalakshmi Layout Police

ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತರನ್ನು ಪರಿಚಯ ಮಾಡಿಕೊಂಡು, ಸ್ನೇಹದ ನಾಟಕವಾಡಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾಳನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವನಿತಾ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ತಾನು ಕಿರುತೆರೆ ನಟಿ (TV Actress) ಎಂದು ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಹಣವಂತರನ್ನು ಟಾರ್ಗೆಟ್ ಮಾಡಿ ಅವರೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಿದ್ದಳು. ನಿರಂತರವಾಗಿ ಮಾತನಾಡಿ ನಂಬಿಕೆ ದ್ರೋಹದ ಜಾಲ ಹೆಣೆಯುತ್ತಿದ್ದಳು ಎಂಬ ಆರೋಪ ಇದೆ.

ಪರಿಚಯಸ್ಥರ ಬಳಿ ತಾನು ತೀವ್ರ ಕಷ್ಟದಲ್ಲಿದ್ದೇನೆ ಎಂದು ನಂಬಿಸುತ್ತಿದ್ದ ನಟಿ ವನಿತಾ, ‘ನನ್ನ ಚಿನ್ನದ ಆಭರಣಗಳನ್ನು ಅಡವಿಟ್ಟಿದ್ದೇನೆ, ಅದನ್ನು ಬಿಡಿಸಿಕೊಳ್ಳಲು ತುರ್ತಾಗಿ ಹಣ ಬೇಕಾಗಿದೆ. ಎರಡರಿಂದ ಮೂರು ದಿನಗಳಲ್ಲಿ ಸಾಲದ ಹಣವನ್ನು ವಾಪಸ್ ನೀಡುತ್ತೇನೆ’ ಎಂದು ನಂಬಿಸಿ ಹಣ ಪಡೆಯುತ್ತಿದ್ದಳು. ಅತ್ಯಂತ ಚಾಲಾಕಿಯಾಗಿದ್ದ ಈಕೆ, ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಜಾಗಗಳನ್ನು ಹುಡುಕಿ ಅಲ್ಲಿಗೆ ಹಣ ನೀಡುವವರನ್ನು ಕರೆಸಿಕೊಂಡು ನಗದು ಪಡೆದು ಪರಾರಿಯಾಗುತ್ತಿದ್ದಳು.

ಒಮ್ಮೆ ಕೈಗೆ ಹಣ ಸಿಗುತ್ತಿದ್ದಂತೆ ನಟಿ ವನಿತಾ ತನ್ನ ಅಸಲಿ ರೂಪ ತೋರಿಸುತ್ತಿದ್ದಳು. ಹಣ ಕೊಟ್ಟವರು ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಕರೆ ಸ್ವೀಕರಿಸುತ್ತಿಲ್ಲವೆಂದು ಮೆಸೇಜ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡದೆ ವಂಚಿಸುತ್ತಿದ್ದಳು ಎನ್ನಲಾಗಿದೆ.

ಇದೇ ರೀತಿ ಈ ನಟಿಯನ್ನು ನಂಬಿ ಹಣ ಕಳೆದುಕೊಂಡ ಯುವಕನೊಬ್ಬ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಈಕೆಯ ವಂಚನೆಯ ಜಾಲ ಕೇವಲ ಒಂದು ಠಾಣೆಗೆ ಸೀಮಿತವಾಗಿರಲಿಲ್ಲ. ಗೋವಿಂದರಾಜನಗರ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲೂ ಈಕೆಯ ವಿರುದ್ಧ ಈ ಹಿಂದೆ ದೂರುಗಳು ದಾಖಲಾಗಿದ್ದವು.

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ಸಂಚಿತಾ ಉಗಾಲೆ; ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ಕಿರುತೆರೆ ನಟಿ

ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ತನಿಖೆ ನಡೆಸಿ, ವಂಚಕಿ ಕಿರುತೆರೆ ನಟಿ ವನಿತಾಳನ್ನು ಜೈಲಿಗಟ್ಟಿದ್ದಾರೆ. ಈಕೆಯ ಜಾಲಕ್ಕೆ ಬಿದ್ದಿರುವ ಇನ್ನೂ ಹಲವು ಸಂತ್ರಸ್ತರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ವರದಿ: ವಿಕಾಸ್

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಂ ಇಂಡಿಯಾದ ಮತ್ತಿಬ್ಬರು ಕ್ರಿಕೆಟಿಗರಿಗೆ DSP ಹುದ್ದೆ..! – Kannada News | Indian Cricketers Akash Deep and Mukesh Kumar Join DSP Ranks via Sports Quota

ಟೀಂ ಇಂಡಿಯಾದ ಮತ್ತಿಬ್ಬರು ಕ್ರಿಕೆಟಿಗರು ಡಿಎಸ್​ಪಿ (DSP) ಹುದ್ದೆಗೇರಿದ್ದಾರೆ. ಟೀಂ ಇಂಡಿಯಾದಲ್ಲಿ ಆಡಿದ ಇಬ್ಬರು ಯುವ ವೇಗಿಗಳಾದ ಆಕಾಶ್ ದೀಪ್ (Akash Deep) ಹಾಗೂ ಮುಖೇಶ್ ಕುಮಾರ್ (Mukesh Kumar)​ ಅವರನ್ನು ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಉಪ ವರಿಷ್ಠಾಧಿಕಾರಿ ಹುದ್ದೆಗೆ ನೇರವಾಗಿ ನೇಮಕ ಮಾಡಲು ಬಿಹಾರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇತ್ತೀಚೆಗೆ ನಡೆದ ಸಂಪುಟ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಡಿಎಸ್​ಪಿ ಹುದ್ದೆಗೇರಿದ ಟೀಂ ಇಂಡಿಯಾ ಕ್ರಿಕೆಟಿಗರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇವರಿಬ್ಬರಿಗೂ ಮೊದಲು ಹರ್ಭಜನ್ ಸಿಂಗ್, ಮೊಹಮ್ಮದ್ ಸಿರಾಜ್, ದೀಪ್ತಿ ಶರ್ಮಾ, ಜೋಗಿಂದರ್ ಶರ್ಮಾ, ರಿಚಾ ಘೋಷ್, ಹರ್ಮನ್​ಪ್ರೀತ್​ ಕೌರ್ ಈ ಹುದ್ದೆಯನ್ನು ಅಲಂಕರಿಸಿದ್ದರು.

ಕ್ರೀಡಾ ಕೋಟಾದಡಿಯಲ್ಲಿ ಡಿಎಸ್​ಪಿ ಹುದ್ದೆ

ಬಿಹಾರ ಸರ್ಕಾರ ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಅವರನ್ನು ಕ್ರೀಡಾ ಕೋಟಾದಡಿಯಲ್ಲಿ ಡಿಎಸ್‌ಪಿ ನೇಮಕಾತಿಗಳಿಗೆ ಶಿಫಾರಸು ಮಾಡಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಅವರ ಸಾಧನೆಗಳನ್ನು ಗುರುತಿಸಿ ಬಿಹಾರದ ಈ ಇಬ್ಬರು ಆಟಗಾರರನ್ನು ಡಿಎಸ್‌ಪಿಗಳಾಗಿ ನೇಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಮಾನ್ಯ ಆಡಳಿತ ಇಲಾಖೆಯು ತನ್ನ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಗೃಹ ಇಲಾಖೆಗೆ ಕಳುಹಿಸಿದೆ.

ಮುಖೇಶ್, ಆಕಾಶ್ ಪ್ರದರ್ಶನ

ಕಳೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಮುಖೇಶ್ ಕುಮಾರ್ ಮತ್ತು ಆಕಾಶ್ ದೀಪ್ ಪ್ರಮುಖ ಪಾತ್ರವಹಿಸಿದ್ದರು. ಇವರಿಬ್ಬರು ರೆಡ್-ಬಾಲ್ ಮತ್ತು ವೈಟ್-ಬಾಲ್ ಕ್ರಿಕೆಟ್ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮುಖೇಶ್ ಕುಮಾರ್ ಭಾರತದ ಪರ ಇದುವರೆಗೆ 27 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಇದರಲ್ಲಿ ಅವರು 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 3 ಟೆಸ್ಟ್‌ ಪಂದ್ಯಗಳು, 17 ಟಿ20ಪಂದ್ಯಗಳು ಮತ್ತು 7 ಏಕದಿನ ಪಂದ್ಯಗಳು ಸೇರಿವೆ.

ಇತ್ತ ಆಕಾಶ್ ದೀಪ್ ಇದುವರೆಗೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸಿದ್ದು, ಇಲ್ಲಿಯವರೆಗೆ 10 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 99 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಆಕಾಶ್ ದೀಪ್ ಈ ಹಿಂದೆ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಿದ್ದರು ಎಂಬುದು ಗಮನಿಸಬೇಕಾಗದ ಸಂಗತಿಯಾಗಿದೆ.

ಇಬ್ಬರಿಗೆ ಸಿಗುವ ವೇತನವೆಷ್ಟು?

ಡಿಎಸ್ಪಿ ಹುದ್ದೆಯನ್ನು ಬಿಹಾರ ಸರ್ಕಾರದ ಗೆಜೆಟೆಡ್ ಹುದ್ದೆ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ವೇತನ ರಚನೆಯ ಪ್ರಕಾರ, ಡಿಎಸ್ಪಿಗಳು ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಮಟ್ಟ 9 ರ ಪ್ರಯೋಜನಗಳನ್ನು ಪಡೆಯುತ್ತಾರೆ. ಮೂಲ ವೇತನವು ತಿಂಗಳಿಗೆ ಸುಮಾರು ₹53,100 ರಿಂದ ಪ್ರಾರಂಭವಾಗುತ್ತದೆ, ಇದು ವಿವಿಧ ಭತ್ಯೆಗಳನ್ನು ಸೇರಿಸಿದ ನಂತರ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದರಲ್ಲಿ ಸರ್ಕಾರಿ ವಸತಿ, ವಾಹನ ಸೌಲಭ್ಯ, ಭದ್ರತಾ ಸಿಬ್ಬಂದಿ, ವೈದ್ಯಕೀಯ ಸೌಲಭ್ಯಗಳು ಮತ್ತು ಇತರ ಆಡಳಿತಾತ್ಮಕ ಸೌಲಭ್ಯಗಳು ಸೇರಿವೆ. ನೇಮಕಾತಿಯ ನಂತರ, ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಬಿಹಾರ ಪೊಲೀಸ್ ಸೇವೆಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:03 pm, Mon, 22 June 26

Source link

ಧಾರವಾಡ: ದಲಿತರಿಗೆ ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಹಿಂದೇಟು; ಕಾರಣವೇನು ಗೊತ್ತಾ? – Kannada News | Why Are Officials Hesitant to Issue Caste Certificates to Dalits; Key Reasons Explained

ಧಾರವಾಡ, ಜೂನ್​​​ 22: ಇತ್ತೀಚಿನ ವರ್ಷಗಳಲ್ಲಿ ಸರಕಾರದ ಯಾವುದೇ ಯೋಜನೆಗಳನ್ನು ಪಡೆಯಬೇಕೆಂದರೆ ಅಥವಾ ಮಕ್ಕಳನ್ನು ಶಾಲೆಗೆ ದಾಖಲಿಸಲು ಅತೀ ಮುಖ್ಯವಾದದ್ದು ಜಾತಿ ಪ್ರಮಾಣ ಪತ್ರ (SC Caste Certificate). ಸರಕಾರದ ಮೀಸಲಾತಿಯನ್ನು ಪಡೆಯಲು ಈ ಪ್ರಮಾಣಪತ್ರ ಅವಶ್ಯಕ. ಆದರೆ ಧಾರವಾಡದ (dharwad) ಗ್ರಾಮವೊಂದರಲ್ಲಿ ದಲಿತರಿಗೆ ಮಾತ್ರ ಜಾತಿ ಪ್ರಮಾಣ ಪತ್ರವನ್ನೇ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಕಾರಣ ಆ ಗ್ರಾಮದಲ್ಲಿರುವ ಮತ್ತೊಂದು ಜಾತಿ ಸಂಘಟನೆಯ ಸೂಚನೆ ಎನ್ನುವ ಅಚ್ಚರಿಯ ಸಂಗತಿ ಬಯಲಿಗೆ ಬಂದಿದೆ. ಇದರಿಂದಾಗಿ ಎಸ್ಸಿ ಜಾತಿ ಪ್ರಮಾಣ ಪತ್ರ ಸಿಗದೇ ಹಲವು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಖ್ಯಾಂಶಗಳು

  • ಮುಗದ ಗ್ರಾಮದ ದಲಿತರಿಗೆ ಜಾತಿ ಪ್ರಮಾಣಪತ್ರ ನೀಡಲು ನಿರಾಕರಣೆ
  • ವಿದ್ಯಾರ್ಥಿಗಳು, ಸರ್ಕಾರಿ ಯೋಜನೆಗಳ ಫಲಾನುಭವಿಗಳು ತೀವ್ರ ಸಂಕಷ್ಟ
  • ಸಮಸ್ಯೆ ಶೀಘ್ರ ಬಗೆಹರಿಸಲು ಆಗ್ರಹ

ಜಾತಿ ಪ್ರಮಾಣ ಪತ್ರ ನೀಡದಂತೆ ಮತ್ತೊಂದು ಜಾತಿ ಸಂಘಟನೆಯಿಂದ ಸೂಚನೆ

ಹೌದು. ಈ ಗ್ರಾಮದಲ್ಲಿ ಅನೇಕ ಹಿಂದೂ ಭೋವಿ ಸಮಾಜದ ಕುಟುಂಬಗಳಿವೆ. ಹಲವಾರು ವರ್ಷಗಳಿಂದ ಈ ಭೋವಿ ಜನಾಂಗದವರಿಗೆ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ ಪತ್ತಾರ್ ಏನೇನೋ ಕಾರಣ ನೀಡಿ ಪ್ರಮಾಣ ಪತ್ರ ನೀಡುತ್ತಿಲ್ಲ ಅನ್ನೋದು ಇವರ ಆರೋಪ. ಗ್ರಾಮದ ಸಿದ್ದರಾಮೇಶ್ವರ ವಡ್ಡರ ಕ್ಷೇಮಾಭಿವೃದ್ಧಿ ಸಂಘ ತಮಗೆ ಪತ್ರ ಬರೆದು, ಅದರಲ್ಲಿ ಇವರಿಗೆ ಎಸ್ಸಿ ಪ್ರಮಾಣಪತ್ರ ನೀಡಬೇಡಿ ಎಂದಿದೆ. ಹೀಗಾಗಿ ನಾನು ಎಸ್ಸಿ ಪ್ರಮಾಣಪತ್ರ ನೀಡುತ್ತಿಲ್ಲ ಅಂತಾ ಹಿಂಬರಹ ನೀಡಲಾಗಿದೆ. 1950ರಲ್ಲೇ ಭೋವಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ, ಕಂದಾಯ ಇಲಾಖೆ ಅಧಿಕಾರಿಗಳು ಜಾತಿ ಪ್ರಮಾಣಪತ್ರ ನೀಡಲು ಅನಗತ್ಯವಾಗಿ ನಿರಾಕರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಟ್ರ್ಯಾಕ್ಟರ್ ಬಾಡಿಗೆ ಹೆಚ್ಚು: ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!

ಈ ಮುಂಚೆ ಗ್ರಾಮದ ಕೆಲವರು ಎಸ್ಸಿ ಪ್ರಮಾಣಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಇವರು ಎಸ್ಸಿ ವರ್ಗದಲ್ಲಿ ಬರುವುದಿಲ್ಲ ಅಂತಾ ಗ್ರಾಮದ ವಡ್ಡರ್ ಸಮಾಜದ ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಪ್ರಕರಣ ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಬಂತು. ಈ ವೇಳೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ, ಕೊನೆಗೆ ಇವರಿಗೆ ಎಸ್ಸಿ ಜಾತಿ ಪ್ರಮಾಣಪತ್ರ ನೀಡುವಂತೆ ಆದೇಶಿಸಿದರು. ಆದರೆ ಆ ಆದೇಶವನ್ನೇ ಇದೀಗ ಅಧಿಕಾರಿಗಳು ಉಲ್ಲಂಘಿಸುತ್ತಿದ್ಧಾರೆ.

ಕಠಿಣ ಕ್ರಮಕ್ಕೆ ಆಗ್ರಹ

ಭೋವಿ ಸಮುದಾಯದ ಅರ್ಜಿದಾರರಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿತರಿಸಬೇಕು. ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸುವ ಹಾಗೂ ಸತಾಯಿಸುವ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. ನಿಯಮಾವಳಿಗಳನ್ನು ಸರಳೀಕರಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ದಾಖಲಾತಿ ಪ್ರಕ್ರಿಯೆಯ ಸಮಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅರ್ಜಿ ಸಲ್ಲಿಸಿದ ವ್ಯಕ್ತಿ ಪುಂಡಲೀಕ ಭೋವಿ ಆಗ್ರಹಿಸಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ ಪತ್ತಾರ್ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ ಪತ್ತಾರ್ ಅವರನ್ನು ಕೇಳಿದರೆ, ಈ ಪ್ರಕರಣ ಇದೀಗ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಅಲ್ಲದೇ ಸಿದ್ದರಾಮೇಶ್ವರ ವಡ್ಡರ ಸಂಘದವರು ವಿವಿಧ ಕೋರ್ಟ್​ಗಳಲ್ಲಿ ಈ ವಿಚಾರವಾಗಿ ಕೇಸುಗಳನ್ನು ದಾಖಲಿಸಿದ್ದಾರೆ. ಅವೆಲ್ಲವೂ ವಿಚಾರಣಾ ಹಂತದಲ್ಲಿವೆ. ಹೀಗಾಗಿ ಕಳೆದ ಏಳೆಂಟು ವರ್ಷಗಳಿಂದ ಇವರಿಗೆ ಕಂದಾಯ ಇಲಾಖೆಯಿಂದ ಎಸ್ಸಿ ಪ್ರಮಾಣಪತ್ರವನ್ನು ನೀಡಿಲ್ಲ. ಅಂತಿಮವಾಗಿ ನ್ಯಾಯಾಲಯ ಏನು ಆದೇಶ ನೀಡುತ್ತೋ ಅದನ್ನು ಪಾಲಿಸಲಾಗುವುದು ಅಂತಾ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಹಲವು ಜಿಲ್ಲಾ ಕೋರ್ಟ್​ಗಳಿಗೆ ಬಾಂಬ್ ಬೆದರಿಕೆ ಕರೆ

ಒಟ್ಟಿನಲ್ಲಿ ಇದೀಗ ಈ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಆದಷ್ಟು ಬೇಗನೇ ಧಾರವಾಡ ಉಪವಿಭಾಗಾಧಿಕಾರಿಗಳು ಈ ಪ್ರಕರಣಕ್ಕೆ ಅಂತ್ಯ ಹಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರು Vs ಹೈದರಾಬಾದ್: 5 ತಿಂಗಳ ಅನುಭವ ಬಿಚ್ಚಿಟ್ಟ ಯುವಕ; ಕರೆಂಟ್ ಕಟ್, ಗುಂಡಿ ಬಿದ್ದ ರಸ್ತೆ, ಬಿರಿಯಾನಿ ಬಗ್ಗೆ ರೆಡ್ಡಿಟ್‌ನಲ್ಲಿ ಭಾರಿ ಚರ್ಚೆ – Kannada News | Hyderabad vs Bengaluru: A Deep Dive into Living, Infrastructure and Environment based on Reddit Post

, ಬೆಂಗಳೂರು ಹೈದರಾಬಾದ್ ಹೋಲಿಕೆImage Credit source: Tv9 kannada

ಬೆಂಗಳೂರು, ಜೂ.22: ಭಾರತದ ಎರಡು ಪ್ರಮುಖ ಐಟಿ ಹಬ್‌ಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ನಡುವೆ ಜೀವನಶೈಲಿ, ಮೂಲಸೌಕರ್ಯ ಹಾಗೂ ಪರಿಸರದ ಕುರಿತು ದಶಕಗಳಿಂದಲೂ ದೊಡ್ಡ ಹೋಲಿಕೆ ನಡೆಯುತ್ತಲೇ ಬಂದಿದೆ. ಇತ್ತೀಚೆಗೆ ಬೆಂಗಳೂರಿನಿಂದ ಭಾಗ್ಯನಗರಕ್ಕೆ (ಹೈದರಾಬಾದ್) ಶಿಫ್ಟ್ ಆದ ಯುವಕನೊಬ್ಬ ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಎರಡೂ ನಗರಗಳ ಕರಾರುವಾಕ್ ಪ್ಲಸ್ ಮತ್ತು ಮೈನಸ್ ಅಂಶಗಳ ಪೋಸ್ಟ್ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿದ್ಯುತ್, ರಸ್ತೆ, ಹವಾಮಾನ, ಆಹಾರ, ಟ್ರಾಫಿಕ್ ಹಾಗೂ ಉದ್ಯೋಗಾವಕಾಶಗಳ ಕುರಿತು ಆತ ಮಾಡಿರುವ ಹೋಲಿಕೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ.

“ನಾನು ಹೈದರಾಬಾದ್‌ಗೆ ಬಂದು 5 ತಿಂಗಳುಗಳಾಗಿವೆ. ಇಲ್ಲಿಗೆ ಬಂದ ಮೇಲೆಯೇ ನನಗೆ ಕರೆಂಟ್ ಇಲ್ಲದ ಜೀವನ ಎಷ್ಟು ಭೀಕರವಾಗಿರುತ್ತದೆ ಎಂಬುದು ಅರ್ಥವಾಗಿದ್ದು” ಎಂದು ಆತ ಬರೆದುಕೊಂಡಿದ್ದಾನೆ. ಹೈದರಾಬಾದ್‌ನಲ್ಲಿ ಬೇಸಿಗೆಯ ಅವಧಿಯಲ್ಲಿ ನಿರಂತರ ವಿದ್ಯುತ್ ಕಡಿತ ಉಂಟಾಗುತ್ತಿತ್ತು. ರೂಮ್‌ನಲ್ಲಿ ಎಸಿ ಇಲ್ಲದಿದ್ದರೆ ತಾಪಮಾನಕ್ಕೆ ಪ್ರಾಣವೇ ಹೋಗುವಷ್ಟು ಧಗೆ ಇರುತ್ತದೆ. ಈ ವಿಚಾರದಲ್ಲಿ ಬೆಂಗಳೂರಿನ ಹವಾಮಾನಬೇಸಿಗೆಯಲ್ಲೂ ಅತ್ಯಂತ ಆಹ್ಲಾದಕರ ಮತ್ತು ಶಾಂತಿಯುತವಾಗಿರುತ್ತದೆ ಎಂದು ಆತ ಹೇಳಿದ್ದಾನೆ.

ರಸ್ತೆ ಮೂಲಸೌಕರ್ಯದ ಬಗ್ಗೆ ಮಾತನಾಡುತ್ತಾ ಆತ ವಿಭಿನ್ನ ಹೋಲಿಕೆ ನೀಡಿದ್ದಾನೆ. ಹೈದರಾಬಾದ್ ರಸ್ತೆಗಳು ಬೆಂಗಳೂರಿನಷ್ಟು ಗುಂಡಿ ಬಿದ್ದಿಲ್ಲ. ಆದರೆ, ಇಲ್ಲಿನ ರಸ್ತೆಗಳಲ್ಲಿ ಸರಿಯಾಗಿ ಮುಚ್ಚದ ಅರ್ಧಂಬರ್ಧ ತೆರೆದ ಮ್ಯಾನ್‌ಹೋಲ್‌ಗಳಿವೆ. ನೀವು ರಸ್ತೆಯನ್ನು ಸರಿಯಾಗಿ ಗಮನಿಸದೆ ಗಾಡಿ ಓಡಿಸಿದರೆ ನೇರವಾಗಿ ಆಸ್ಪತ್ರೆ ಸೇರಬೇಕಾಗುತ್ತದೆ. ಬೆಂಗಳೂರಿನಲ್ಲಿ ಗುಂಡಿಗಳಿದ್ದರೂ ಅವು ಯಾರನ್ನೂ ಆಸ್ಪತ್ರೆಗೆ ಕಳುಹಿಸುವಷ್ಟು ಅಪಾಯಕಾರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾನೆ.

ಇಲ್ಲಿದೆ ನೋಡಿ ಪೋಸ್ಟ್​:

Posts from the hyderabad
community on Reddit

ಊಟದ ವಿಷಯದಲ್ಲಿ ಹೈದರಾಬಾದ್‌ಗೆ ಬೆಂಗಳೂರನ್ನು ಹೋಲಿಸಲು ಸಾಧ್ಯವೇ ಇಲ್ಲ. ಇಲ್ಲಿನ ಬಿರಿಯಾನಿ ಮತ್ತು ಫುಡ್ ಸೂಪರ್. ಆದರೆ ಕೆಲವೊಮ್ಮೆ ಆಹಾರ ತೀರಾ ಖಾರವಾಗಿರುತ್ತದೆ. ಹೈದರಾಬಾದ್‌ನ ಜನ ಸಖತ್ ಫ್ರೆಂಡ್ಲಿ. ಇಲ್ಲಿ ಹಿಂದಿ ಭಾಷೆ ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ. ಆದರೆ ಬೆಂಗಳೂರಿಗೆ ಹೋಲಿಸಿದರೆ ಇಲ್ಲಿ ಇಂಗ್ಲಿಷ್ ಬಳಕೆ ಸ್ವಲ್ಪ ಕಡಿಮೆ. ಹೈದರಾಬಾದ್‌ನಲ್ಲಿ ಪೀಕ್ ಅವರ್ಸ್‌ನಲ್ಲಿ ಟ್ರಾಫಿಕ್ ಜಾಮ್ ಇದ್ದರೂ ಸಂಚಾರ ನಿರ್ವಹಣೆ ಬೆಂಗಳೂರಿಗಿಂತ ಉತ್ತಮವಾಗಿದೆ. ಅಲ್ಲದೆ ಇಲ್ಲಿ ಬೆಂಗಳೂರಿಗಿಂತ ಹೆಚ್ಚು ಸೂಪರ್ ಕಾರ್ ಹಾಗೂ ಐಷಾರಾಮಿ ಕಾರುಗಳು ಓಡಾಡುತ್ತವೆ. ಇಲ್ಲಿನ ಜನ ಭಾರಿ ಹಣ ಮಾಡುತ್ತಾರೆ ಎಂದು ಆತ ಬರೆದಿದ್ದಾನೆ.

ಇದನ್ನೂ ಓದಿ: ಇದು ಅಡವಿಯಲ್ಲ, ಸಿಲಿಕಾನ್ ಸಿಟಿ ಒಳಗಿನ ‘ಅರ್ಬನ್ ಫಾರೆಸ್ಟ್’: ಐಐಎಸ್‌ಸಿ ಕ್ಯಾಂಪಸ್‌ನ ಮನಮೋಹಕ ಹಸಿರು ಸೌಂದರ್ಯ ಹೇಗಿದೆ ನೋಡಿ?

ಈ ಪೋಸ್ಟ್‌ಗೆ ನೆಟ್ಟಿಗರಿಂದ ಭಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ. 30 ವರ್ಷಗಳಿಂದ ಹೈದರಾಬಾದ್‌ನಲ್ಲಿರುವ ವ್ಯಕ್ತಿಯೊಬ್ಬರು, “ನೀವು ತಪ್ಪು ಸಮಯದಲ್ಲಿ ಹೈದರಾಬಾದ್‌ಗೆ ಬಂದಿದ್ದೀರಿ, ಈ ಬಾರಿ ಎಂದೂ ಇಲ್ಲದಷ್ಟು ಭೀಕರ ಬೇಸಿಗೆ ಇತ್ತು” ಎಂದಿದ್ದಾರೆ. ಮತ್ತೊಬ್ಬರು, “ಒಟ್ಟಾರೆ ನಗರಕ್ಕಿಂತ ನೀವು ಯಾವ ಏರಿಯಾದಲ್ಲಿ ವಾಸಿಸುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ಅನುಭವ ನಿರ್ಧಾರವಾಗುತ್ತದೆ” ಎಂದಿದ್ದಾರೆ. “ಎರಡೂ ನಗರಗಳು ಚೆನ್ನಾಗಿದ್ದರೂ, ಮೆಟ್ರೋ ಸಿಟಿಗಳಲ್ಲಿ ಒಳ್ಳೆಯ ಜನರಿದ್ದರೂ ಒಂಟಿತನ ಮಾತ್ರ ಖಾಯಂ” ಎಂದು ಇನ್ನೊಬ್ಬರು ಬೇಸರ ಹಂಚಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:05 pm, Mon, 22 June 26

Source link

Exit mobile version