ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಪುಂಡಾಟ: ಕನ್ನಡ ಕಡ್ಡಾಯ ಆದೇಶದ ವಿರುದ್ಧ ಕಿಡಿ – Kannada News | MES Riots Erupt Again: Kannada Mandatory Order Triggers Fresh Unrest

ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆImage Credit source: tv9 kannada

ಬೆಳಗಾವಿ, ಜೂನ್​​ 22: ಬೆಳಗಾವಿಯಲ್ಲಿ (belagavi) ನಾಡದ್ರೋಹಿ ಎಂಇಎಸ್ (MES)​ ಮತ್ತೆ ಬಾಲ ಬಿಚ್ಚಿದೆ. ಕನ್ನಡ ಕಡ್ಡಾಯ ಆದೇಶ ವಿರೋಧಿಸಿ ಪೊಲೀಸರ ಸಮ್ಮುಖದಲ್ಲೇ ಎಂಇಎಸ್ ಕಾರ್ಯಕರ್ತರು ಪುಂಡಾಟ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರದ ಆದೇಶವನ್ನು ಹರಿದು ಉದ್ಧಟತನ ಮೆರೆದಿದ್ದಾರೆ. ಮರಾಠಿ ಭಾಷೆಯಲ್ಲಿ ನಾಮಫಲಕ, ದಾಖಲೆಗಳನ್ನು ನೀಡುವಂತೆ ಪ್ರತಿಭಟಿಸಿದ್ದಾರೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಮತ್ತೆ ಪುಂಡಾಟ
  • ಬೆಳಗಾವಿ ಡಿಸಿ ಕಚೇರಿಯಲ್ಲಿ ಪ್ರತಿಭಟನೆ
  • ಎಂಇಎಸ್ ಪುಂಡರನ್ನ ಬಂಧಿಸುವಂತೆ ಕರವೇ ಆಗ್ರಹ

ನಡೆದಿದ್ದೇನು?

ಕನ್ನಡ ಕಡ್ಡಾಯ ವಿರೋಧಿಸಿ ಎಂಇಎಸ್ ಕಾರ್ಯಕರ್ತರು ಮತ್ತೆ ಕ್ಯಾತೆ ತೆಗೆದಿದ್ದಾರೆ. ಡಿಸಿ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಸರ್ಕಾರದ ಕನ್ನಡ ಕಡ್ಡಾಯ ಆದೇಶದ ಪ್ರತಿಯನ್ನು ಹರಿದು ಆಟಾಟೋಪ ಮೆರೆದಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಪಾಲಿಕೆಯಲ್ಲಿ ಗಡಿ ಸಮರ; ‘ಕರ್ನಾಟಕ ಪರ ಗೊತ್ತುವಳಿ’ ಮಂಡನೆ ವೇಳೆ ಎಂಇಎಸ್ ಸದಸ್ಯರ ಕಿರಿಕ್!

ಅಷ್ಟೇ ಅಲ್ಲದೆ, ಕರ್ನಾಟಕ ಸರ್ಕಾರದ ದಾದಾಗಿರಿ ನಡೆಯುವುದಿಲ್ಲ. ಬೆಳಗಾವಿ, ಖಾನಾಪುರ, ನಿಪ್ಪಾಣಿ, ಕಾರವಾರ, ಬೀದರ್ ಹಾಗೂ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಅಂತಾ ಘೋಷಣೆ ಕೂಗಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರಿಂದ ಪ್ರತಿಭಟನೆ 

ಇನ್ನು ಎಂಇಎಸ್ ಪುಂಡಾಟಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು. ಎಂಇಎಸ್ ಪುಂಡರನ್ನ ಬಂಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರಿಂದ ನಗರದ ಎಸ್​​​ಪಿ ಕಚೇರಿಯಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ರ್‍ಯಾಲಿ ಮಾಡಿದ್ದಾರೆ.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಡಿಸಿ ಕಚೇರಿ ಆವರಣದಲ್ಲೇ ಸರ್ಕಾರದ ಆದೇಶ ಹರಿದು ಹಾಕುತ್ತಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಸ್ವಾಭಿಮಾನ ಹತ್ತಿಕ್ಕಲು ಶಿವಸೇನೆ ಮತ್ತು ಎಂಇಎಸ್ ಪುಂಡರಿಗೆ ಬಿಡೋದಿಲ್ಲ: ಪ್ರವೀಣ್ ಶೆಟ್ಟಿ, ಕರವೇ

ಪುಂಡರ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ನಾಡದ್ರೋಹಿ ಎಂಇಎಸ್ ಮತ್ತು ಶಿವಸೇನೆಯನ್ನು ನಿಷೇಧಿಸಲು ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಪರವಾಗಿ ಬೆಳಗಾವಿ ಎಸಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಡಿಸಿಎಂ ಭೇಟಿ: ಸಲೀಂ ಅಹ್ಮದ್​​ ಸೇರಿ ಮೂವರಿಗೆ ಸಚಿವ ಸ್ಥಾನಕ್ಕೆ ಮನವಿ – Kannada News | Muslim Leaders Urge Ministerial Berth for Salim Ahmed from Kittur Karnataka

ಬೆಂಗಳೂರು, ಜೂನ್​​ 22: ಮುಸ್ಲಿಂ ಧರ್ಮಗುರುಗಳು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮುದಾಯಕ್ಕೆ ಮಂತ್ರಿ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. 14 ಜಿಲ್ಲೆಗಳಿಂದ ಆಗಮಿಸಿರುವ ಉಲೇಮಾಗಳು ಸಂಪುಟ ವಿಸ್ತರಣೆ ವೇಳೆ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದು, ಮೂರು ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಪ್ರಮುಖವಾಗಿ ಸಲೀಂ ಅಹ್ಮದ್​​ಗೆ ಸಚಿವ ಸ್ಥಾನಕ್ಕೆ ಬೇಡಿಕೆ ಇಡಲಾಗಿದ್ದು, ಕಳೆದ ೪೦ ವರ್ಷಗಳಿಂದ ಪಕ್ಷದಲ್ಲಿರುವ ಅವರು ಜನಾನುರಾಗಿಯಾದವರು. ಹೀಗಾಗಿ ಅವರಿಗೆ ಒಂದು ಅವಕಾಶ ನೀಡಿ ಎಂದು ಕಾಂಗ್ರೆಸ್​​ ನಾಯಕರನ್ನು ವಿನಂತಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇದು ಅಡವಿಯಲ್ಲ, ಸಿಲಿಕಾನ್ ಸಿಟಿ ಒಳಗಿನ ‘ಅರ್ಬನ್ ಫಾರೆಸ್ಟ್’: ಐಐಎಸ್‌ಸಿ ಕ್ಯಾಂಪಸ್‌ನ ಮನಮೋಹಕ ಹಸಿರು ಸೌಂದರ್ಯ ಹೇಗಿದೆ ನೋಡಿ? – Kannada News | Bengaluru’s IISc Green Campus Wows with Stunning “Urban Forest” Design

ಬೆಂಗಳೂರು, ಜೂ.22: ದೇಶದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿರುವ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಕೇವಲ ಸಂಶೋಧನೆ ಮತ್ತು ಶಿಕ್ಷಣಕ್ಕೆ ಮಾತ್ರವಲ್ಲದೆ, ತನ್ನ ನಿಸರ್ಗ ರಮಣೀಯ ಕ್ಯಾಂಪಸ್‌ಗೂ ಹೆಸರುವಾಸಿಯಾಗಿದೆ. ಐಐಎಸ್‌ಸಿ ವಿದ್ಯಾರ್ಥಿಯೊಬ್ಬರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕ್ಯಾಂಪಸ್‌ನ ಹಸಿರು ಹೊದಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ವ್ಯವಸ್ಥಿತವಾಗಿ ನಿರ್ಮಿಸಲಾದ ಈ ‘ನಗರ ಅರಣ್ಯ’ (Urban Forest) ನೋಡಿ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.

ಐಐಎಸ್‌ಸಿ ವಿದ್ಯಾರ್ಥಿ ದಿವ್ಯಾಂಶ್ ತಿವಾರಿ ಕ್ಯಾಂಪಸ್‌ನ ಅತ್ಯಂತ ಹೊಸ ಮತ್ತು ಸುಂದರ ಕಟ್ಟಡಗಳಲ್ಲಿ ಒಂದಾದ ಐಡಿಆರ್ (IDR Building) ಬಿಲ್ಡಿಂಗ್‌ನ 7ನೇ ಮಹಡಿಯಿಂದ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಆ ವಿಡಿಯೋದಲ್ಲಿ ಈ ಬಗ್ಗೆ ವಿವರಿಸಿದ್ದಾರೆ. “ನೀವು ಇಲ್ಲಿಂದ ನೋಡಿದರೆ ಇದೊಂದು ದಟ್ಟ ಅಡವಿ ಎಂದು ಭಾವಿಸಬಹುದು. ಆದರೆ ಇದು ಕಾಡಲ್ಲ, ಇದರ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಕಾಣಿಸುತ್ತದೆ. ಇದನ್ನು ಐಐಎಸ್‌ಸಿ ಆಡಳಿತ ಮಂಡಳಿಯು ಅತ್ಯಂತ ಜಾಗರೂಕತೆಯಿಂದ ಮತ್ತು ಯೋಜನಾಬದ್ಧವಾಗಿ ಬೆಳೆಸಿರುವ ‘ಅರ್ಬನ್ ಫಾರೆಸ್ಟ್’” ಎಂದು ಪರಿಚಯಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ ಪೋಸ್ಟ್:

“ಇಲ್ಲಿರುವ ಪ್ರತಿಯೊಂದು ಗಿಡ ಮರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಿತ್ತಳೆ, ಗುಲಾಬಿ, ಹಸಿರು ಮತ್ತು ನೇರಳೆ ಸೇರಿದಂತೆ ವಿವಿಧ ಬಣ್ಣಗಳ ಛಾಯೆಗಳು ನಮಗೆ ಕಾಣಿಸುತ್ತವೆ. ಇವೆಲ್ಲವನ್ನೂ ಯೋಜನಾಬದ್ಧವಾಗಿ ನೆಡಲಾಗಿದೆ. ಇದರ ಮಧ್ಯೆ ಐಐಎಸ್‌ಸಿಯ ಪಾರಂಪರಿಕ ರಾಜಮನೆತನದ ಶೈಲಿಯ ಮುಖ್ಯ ಕಟ್ಟಡವೂ ಗೋಚರಿಸುತ್ತದೆ. ಲ್ಯಾಬ್‌ನಲ್ಲಿ ದಿನವಿಡೀ ಕೆಲಸ ಮಾಡಿ ದಣಿದು ಬರುವ ನಮಗೆ, ಸಂಜೆ ವೇಳೆ ಈ ಸುಂದರ ಹಸಿರಿನ ಮೇಲಾವರಣವನ್ನು (Canopy) ವೀಕ್ಷಿಸುವುದೇ ಒಂದು ಪರಮಾನಂದ” ಎಂದು ದಿವ್ಯಾಂಶ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಎಳಿಯುವ ಮುನ್ನ ಎಚ್ಚರ: ಚಿಕ್ಕಜಾಲದಲ್ಲಿ ಧೂಮಪಾನಿಗಳ ಬೆವರಿಳಿಸಿದ ರಾಣಿ ಚೆನ್ನಮ್ಮ ಪಡೆ

‘ಪ್ರತಿಷ್ಠಿತ ಐಐಎಸ್‌ಸಿ ಆಡಳಿತ ಮಂಡಳಿಯ ದೂರದೃಷ್ಟಿಯಿಂದಾಗಿ ಇಂದು ಭಾರತದಲ್ಲೇ ಅತ್ಯುತ್ತಮ ಹಾಗೂ ಹಸಿರುಮಯ ಕ್ಯಾಂಪಸ್ ನಮ್ಮದಾಗಿದೆ’ ಎಂಬ ಕ್ಯಾಪ್ಷನ್‌ನೊಂದಿಗೆ ಹಂಚಿಕೊಳ್ಳಲಾದ ಈ ವಿಡಿಯೋಗೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. “ಇದು ಕಾಲೇಜು ಕ್ಯಾಂಪಸ್ ತರಹ ಕಾಣಿಸುತ್ತಿಲ್ಲ, ಯಾವುದೋ ಪ್ರಶಾಂತವಾದ ಅರಣ್ಯ ರೆಸಾರ್ಟ್‌ನಂತಿದೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ಪ್ರತಿದಿನ ಇಂತಹ ಸುಂದರ ಪರಿಸರವನ್ನು ನೋಡುತ್ತಾ ಓದುವ ಭಾಗ್ಯ ಸಿಗುವುದನ್ನು ಕಲ್ಪಿಸಿಕೊಳ್ಳಿ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. “ವ್ಯವಸ್ಥಿತ ನಗರ ಮತ್ತು ಕ್ಯಾಂಪಸ್ ಯೋಜನೆ ಎಂದರೆ ಹೀಗಿರಬೇಕು” ಎಂದು ಇಂಜಿನಿಯರಿಂಗ್ ವಿನ್ಯಾಸವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್ಥಿಕತೆಗಳನ್ನು ನುಂಗುವ ಎಐ ಮಾಡಲ್​ಗಳು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಕಳವಳ – Kannada News | Don’t want AI models to eat the economy, warns Microsoft CEO Satya Nadella

ವಾಷಿಂಗ್ಟನ್, ಜೂನ್ 22: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ (Satya Nadella) ಅವರು ಇತ್ತೀಚೆಗೆ AI ವಲಯದ ಬೆಳವಣಿಗೆಯ ಬಗ್ಗೆ ಒಂದು ಮಹತ್ವದ ಎಚ್ಚರಿಕೆಯನ್ನು ನೀಡಿದ್ದಾರೆ. ಕೆಲವೇ ಕೆಲವು ಕಂಪನಿಗಳು ಮತ್ತು ಅವುಗಳ ಪ್ರಬಲ AI ಮಾಡಲ್​ಗಳು ಸಂಪೂರ್ಣ ಆರ್ಥಿಕತೆಯ ಮೇಲೆ ನಿಯಂತ್ರಣ ಸಾಧಿಸುವುದು ಅಪಾಯಕಾರಿ ಎಂದು ಅವರು ಪ್ರತಿಪಾದಿಸಿದ್ದಾರೆ. ಜಾಗತೀಕರಣದ ಆರಂಭಿಕ ದಿನಗಳಲ್ಲಿ ಹೇಗೆ ಕೈಗಾರಿಕಾ ಆರ್ಥಿಕತೆಗಳು ಹೊರಗುತ್ತಿಗೆಯಿಂದ (Outsourcing) ಬಲಹೀನಗೊಂಡಿದ್ದವೋ, ಅದೇ ರೀತಿ AI ತಂತ್ರಜ್ಞಾನವು ಕೇವಲ ಕೆಲವೇ ಕೆಲವು ಕಂಪನಿಗಳ ನಿಯಂತ್ರಣದಲ್ಲಿ ಉಳಿದರೆ, ಅದು ಇಡೀ ಉದ್ಯಮಗಳನ್ನು ಹಾನಿಗೊಳಿಸಬಹುದು ಎಂದು ನಾಡೆಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.

ಸಂಪತ್ತಿನ ಕೇಂದ್ರೀಕರಣದ ಆತಂಕ

AI ಮೂಲಕ ಸೃಷ್ಟಿಯಾಗುವ ಆರ್ಥಿಕ ಲಾಭವು ಕೇವಲ ತಂತ್ರಜ್ಞಾನ ಕಂಪನಿಗಳು ಅಥವಾ ಮಾಡಲ್​ಗಳನ್ನು ತಯಾರಿಸುವವರ ಪಾಲಾಗಬಾರದು. ಒಂದು ವೇಳೆ AI-ನಿಂದ ಬರುವ ಹೆಚ್ಚಿನ ಲಾಭವನ್ನು ಕೆಲವೇ ಕಂಪನಿಗಳು ಕಬಳಿಸಿದರೆ, ಅದನ್ನು ಸಮಾಜವು ಸಹಿಸುವುದಿಲ್ಲ. ಅಂತಹ ಪರಿಸ್ಥಿತಿ ಉದ್ಭವಿಸಿದರೆ, ಅದು ತೀವ್ರವಾದ ರಾಜಕೀಯ ಮತ್ತು ಸಾಮಾಜಿಕ ವಿರೋಧಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಆಂಧ್ರ ಮೂಲದ ಸತ್ಯ ನಾಡೆಳ್ಲಾ ಅವರು ಓಪನ್​ಎಐ, ಆಂಟ್ರೋಪಿಕ್, ಗೂಗಲ್ ಕಂಪನಿಗಳ ಹೆಸರು ಹೇಳದೆಯೇ ಅವುಗಳ ವಿರುದ್ಧ ತಗಾದೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೌಕರನ ತಪ್ಪಿಗೆ ಕಂಪನಿ ಸಿಇಒ ಹಾಗೂ ಹಿರಿಯ ಉದ್ಯೋಗಿಗಳಿಗೆ ಪೇಮೆಂಟ್ ಕಟ್; ಜಪಾನ್ ಏರ್ಲೈನ್ಸ್​ನಲ್ಲೊಂದು ಘಟನೆ

‘ಟೋಕನ್ ಮ್ಯಾಕ್ಸಿಂಗ್’ ಬಗ್ಗೆ ಎಚ್ಚರಿಕೆ

ಸಾಮಾನ್ಯ ಕೆಲಸಗಳಿಗೂ ಅತ್ಯಾಧುನಿಕ ಮತ್ತು ದುಬಾರಿ AI ಮಾದರಿಗಳನ್ನು ಬಳಸುವ ಪ್ರವೃತ್ತಿಯನ್ನು ಮೈಕ್ರೋಸಾಫ್ಟ್ ಮುಖ್ಯಸ್ಥರು ‘ಟೋಕನ್ ಮ್ಯಾಕ್ಸಿಂಗ್’ (Token-maxing) ಎಂದು ಕರೆದಿದ್ದಾರೆ. ಇದರ ಬದಲಾಗಿ, ಕಂಪನಿಗಳು ಸರಳ ಮತ್ತು ಕಡಿಮೆ ವೆಚ್ಚದ ಮಾದರಿಗಳನ್ನು ದೈನಂದಿನ ಕಾರ್ಯಗಳಿಗೆ ಬಳಸಬೇಕು ಮತ್ತು ಸಂಕೀರ್ಣ ಸಮಸ್ಯೆಗಳಿಗೆ ಮಾತ್ರ ಉನ್ನತ ಮಾದರಿಗಳನ್ನು ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕಂಪನಿಗಳು ಸ್ವಂತಿಕೆ ಕಾಪಾಡಿಕೊಳ್ಳಬೇಕು

ಕಂಪನಿಗಳು ಕೇವಲ ಬಾಹ್ಯ AI ಮಾದರಿಗಳ ಮೇಲೆ ಅವಲಂಬಿತವಾಗಬಾರದು. ಬದಲಿಗೆ, ತಮ್ಮದೇ ಆದ ವ್ಯವಸ್ಥೆ ಮತ್ತು ತಾಂತ್ರಿಕತೆಯನ್ನು (Learning Loops) ರೂಪಿಸಿಕೊಳ್ಳಬೇಕು. ಇದರಿಂದಾಗಿ ಅವರು ಯಾವುದೇ ಒಂದು ನಿರ್ದಿಷ್ಟ AI ಮಾಡಲ್ ಅನ್ನು ಬದಲಾಯಿಸಿದರೂ, ಆ ಕಂಪನಿಯ ಅನನ್ಯ ಜ್ಞಾನ ಮತ್ತು ಅನುಭವವು ಸುರಕ್ಷಿತವಾಗಿ ಉಳಿಯುತ್ತದೆ.

ಇದನ್ನೂ ಓದಿ: ಬೆಂಗಳೂರು, ದೆಹಲಿ, ಮುಂಬೈ ವಿಮಾನ ನಿಲ್ದಾಣಗಳನ್ನು ಗ್ಲೋಬಲ್ ಟ್ರಾನ್ಸಿಟ್ ಹಬ್​ಗಳಾಗಿ ಅಭಿವೃದ್ದಿಪಡಿಸಲು ಕೇಂದ್ರ ಯೋಜನೆ

ಮಾನವ ಮತ್ತು AI ಸಹಕಾರ

AI ಮಾನವನ ಸ್ಥಾನವನ್ನು ತುಂಬುವ ಬದಲು, ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನವಾಗಬೇಕು. ಮಾನವನ ನಿರ್ಧಾರ ಮತ್ತು ಮಾರ್ಗದರ್ಶನವಿಲ್ಲದೆ AI ತಂತ್ರಜ್ಞಾನವು ತನ್ನ ದಾರಿಯನ್ನು ಕಳೆದುಕೊಳ್ಳುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.

ನಾಡೆಲ್ಲಾ ಅವರ ಪ್ರಕಾರ, AI ಯಶಸ್ಸು ಕೇವಲ ತಂತ್ರಜ್ಞಾನದ ಶಕ್ತಿಯ ಮೇಲೆ ನಿರ್ಧಾರವಾಗುವುದಿಲ್ಲ; ಬದಲಿಗೆ ಅದು ಇಡೀ ಆರ್ಥಿಕತೆಯಲ್ಲಿ ಮೌಲ್ಯವನ್ನು ಎಷ್ಟು ಸಮಾನವಾಗಿ ಹಂಚುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ತಂತ್ರಜ್ಞಾನದ ಲಾಭ ಸಾರ್ವತ್ರಿಕವಾಗಿ ಹರಡಿದರೆ ಮಾತ್ರ AI-ಗೆ ದೀರ್ಘಕಾಲಿಕ ಭವಿಷ್ಯ ಮತ್ತು ಸಾಮಾಜಿಕ ಅಂಗೀಕಾರ ಸಿಗುತ್ತದೆ ಎಂಬುದು ಅವರ ವಾದವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳ: ಜೆಸ್ಕಾಂ ನಿರ್ಲಕ್ಷ್ಯದಿಂದ ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ – Kannada News | Koppal Agri Crisis: Farmers Struggle to Irrigate Crops Amid GESCOM Negligence and Irregular Power Supply

ಕೊಪ್ಪಳ, ಜೂನ್ 22: ಕೊಪ್ಪಳ ಜಿಲ್ಲೆಯ ರೈತರು ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳೆಗಳನ್ನು ಉಳಿಸಿಕೊಳ್ಳಲು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಮಳೆ ಕೊರತೆಯ ಸಮಸ್ಯೆ ಪರಿಹರಿಸಲು ರೈತರು ಸ್ಪ್ರಿಂಕ್ಲರ್‌ಗಳ ಮೊರೆ ಹೋಗಿದ್ದರೂ ಇದೀಗ ಸಮರ್ಪಕ ವಿದ್ಯುತ್ ಸಿಗದೆ ಹರಸಾಹಸ ಪಡುತ್ತಿದ್ದಾರೆ. ಬಿ.ಹೊಸಳ್ಳಿಯ ರೈತ ರಮೇಶ್ ಮತ್ತು ಸುರೇಶ್ ಸೇರಿದಂತೆ ಹಲವು ರೈತರು ಜೆಸ್ಕಾಂನಿಂದ ಪ್ರತಿದಿನ ಕನಿಷ್ಠ ಎಂಟು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸುತ್ತಿದ್ದಾರೆ. ಪ್ರಸ್ತುತ ವಿದ್ಯುತ್ ಪೂರೈಕೆ ಸಮಯ ಅನಿಶ್ಚಿತವಾಗಿದ್ದು, ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ರೈತರೊಬ್ಬರು ಮಾತನಾಡಿ, ‘ಮೊದಲು ಎಂಟು ಅಥವಾ ಒಂಬತ್ತು ಗಂಟೆಗೆ ಹೋಗುತ್ತಿದ್ದ ಕರೆಂಟ್ ಈಗ ಏಳು ಗಂಟೆಗೇ ಹೋಗುತ್ತಿದೆ. ನಾವು ಕೇವಲ ಹತ್ತು ನಿಮಿಷ ಹೆಚ್ಚು ವಿದ್ಯುತ್ ಬಿಡಿ ಎಂದು ಕೇಳಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಬೆಳೆಗಳಿಗೆ ನೀರುಣಿಸುವುದು ಬಹಳ ಕಷ್ಟವಾಗಿದೆ’ ಎಂದು ಅಲವತ್ತುಕೊಂಡಿದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆಯಾಗದಿದ್ದರೆ ತಮ್ಮ ಬೆಳೆಗಳು ಸಂಪೂರ್ಣ ನಾಶವಾಗುವ ಭೀತಿ ರೈತರನ್ನು ಕಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಮಂತಾ ತಾಯಿ ಆಗುತ್ತಿರುವುದು ನಿಜ’; ಕೊನೆಗೂ ಸಿಕ್ತು ಗುಡ್ ನ್ಯೂಸ್ – Kannada News | Samantha Ruth Prabhu Pregnant! Maa Inti Bangaram Director Confirms Big Good News

ಸಮಂತಾ ‘ಮಾ ಇಂಟಿ ಬಂಗಾರಂ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಮೂರೇ ದಿನಕ್ಕೆ 40+ ಕೋಟಿ ರೂಪಾಯಿ ಗಳಿಕೆ ಮಾಡಿ ಬೀಗಿದೆ. ಈ ಸಿನಿಮಾ ಗೆದ್ದ ಖುಷಿಯಲ್ಲಿ ಸಮಂತಾ ಮಾತನಾಡುವಾಗ ಎಲ್ಲರ ಗಮನ ಅವರ ಹೊಟ್ಟೆಯ ಮೇಲೆ ನೆಟ್ಟಿತ್ತು. ಅವರು ತಾಯಿ ಆಗುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಈಗ ಈ ಊಹೆ ಸರಿಯಾಗಿದೆ. ಸಮಂತಾ ತಾಯಿ ಆಗುತ್ತಿರುವ ವಿಷಯವನ್ನು ಅವರ ಆಪ್ತರೇ ಖಚಿತಪಡಿಸಿದ್ದಾರೆ.

ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಳಿಕ ರಾಜ್ ನಿಧಿಮೋರು ಅವರನ್ನು ಸಮಂತಾ ವಿವಾಹ ಆದರು. ಕಳೆದ ವರ್ಷ ಡಿಸೆಂಬರ್ 1ರಂದು ಈ ವಿವಾಹ ನೆರವೇರಿತು. ಆಪ್ತರು ಹಾಗೂ ಕುಟುಂಬದವರು ಮಾತ್ರ ಈ ಮದುವೆಯಲ್ಲಿ ಭಾಗಿ ಆದರು. ಈಗ ಸಮಂತಾ ಅವರು ತಾಯಿ ಆಗುತ್ತಿದ್ದಾರೆ. ಸಮಂತಾ ಆಪ್ತ ಗೆಳತಿ ಹಾಗೂ ‘ಮಾ ಇಂಟಿ ಬಂಗಾರಂ’ ನಿರ್ದೇಶಕ ನಂದಿನಿ ರೆಡ್ಡಿ ಅವರೇ ಈ ವಿಷಯ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ನಟಿ ಸಮಂತಾ ಕಟೌಟ್​​ಗೆ ಅದ್ಧೂರಿ ಹಾರ, ಹಾಲಿನಭಿಷೇಕ: ವಿಡಿಯೋ

‘ಸಿನೇಮಾ ಎಕ್ಸ್​​ಪ್ರೆಸ್​’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಂದಿನಿ, ‘ಅವಳ ಪ್ರೆಗ್ನೆನ್ಸಿ ಸರಿಯಾದ ಹಾಗೂ ಸುಂದರ ಸಮಯದಲ್ಲಿ ಬಂದಿದೆ. ನಮ್ಮ ಸಿನಿಮಾ ಮಾ ಇಂಟಿ ಬಂಗಾರಂ ಯುಶಸ್ಸು ಕಂಡಿದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಸಮಂತಾ ತಾಯಿ ಆಗುತ್ತಿರುವ ವಿಷಯ ಬಹುತೇಕ ಅಧಿಕೃತವಾದಂತೆ ಆಗಿದೆ.
‘ಮಾ ಇಂಟಿ ಬಂಗಾರಂ’ ಸಿನಿಮಾ ತಂಡ ಇತ್ತೀಚೆಗೆ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಇದರಲ್ಲಿ ಅವರು ಸ್ವಲ್ಪ ಟೈಟ್ ಶರ್ಟ್ ಧರಿಸಿದ್ದರಿಂದ ಹೊಟ್ಟೆ ದೊಡ್ಡದಾಗಿ ಕಾಣುತ್ತಾ ಇತ್ತು. ಆಗಿನಿಂದ ಸಮಂತಾ ಪ್ರೆಗ್ನೆನ್ಸಿ ವಿಷಯ ಹರಿದಾಡಿತ್ತು. ಸಮಂತಾ ಕಡೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ಕನ್ನಡದ ದಿಗಂತ್ ಕೂಡ ನಟಿಸಿದ್ದಾರೆ. ಈ ಚಿತ್ರಕ್ಕೆ ಕೆಲವರು ಪಾಸಿಟಿವ್ ಪ್ರತಿಕ್ರಿಯೆ ಹೊರಹಾಕಿದರೆ ಇನ್ನೂ ಕೆಲವರು ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

17 ಶಾಸಕರ ಖರೀದಿಸಿ 2019ರಲ್ಲಿ ಸರ್ಕಾರ ರಚಿಸಿತ್ತಾ ಬಿಜೆಪಿ?: ಈಶ್ವರಪ್ಪ ಹೇಳಿಕೆ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದ ಚರ್ಚೆ – Kannada News | Did BJP Buy 17 MLAs to Form Govt in 2019? KS Eshwarappa’s Explosive Remarks Reignite ‘Horse Trading’ Debate

ಶಿವಮೊಗ್ಗ, ಜೂನ್​ 22: 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಜುಲೈ 23, 2019ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​​-ಜೆಡಿಎಸ್​​ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡು ಪತನಗೊಂಡಿತ್ತು. ಬಳಿಕ ಜುಲೈ 26, 2019ರಂದು ಬಿ.ಎಸ್. ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ವೇಳೆ ಬಿಜೆಪಿ ಕುದುರೆ ವ್ಯಾಪಾರ ನಡೆಸಿರುವ ಆರೋಪವನ್ನು ಕಾಂಗ್ರೆಸ್​​ ಮತ್ತು ಜೆಡಿಎಸ್​​ ಮಾಡಿದ್ದವು. ಆದರೆ ಬಿಜೆಪಿ ಮಾತ್ರ ಇದನ್ನು ಅಲ್ಲಗಳೆದಿತ್ತು. ಆದರೀಗ ಮಾಜಿ ಸಚಿವ, ಬಿಜೆಪಿಯಿಂದ ಉಚ್ಛಾಟಿತರಾಗಿರುವ ನಾಯಕ ಕೆ.ಎಸ್​​. ಈಶ್ವರಪ್ಪ ನೀಡಿರುವ ಹೇಳಿಕೆಯೊಂದು 2019ರ ಚರ್ಚೆ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ.

ಅಷ್ಟಕ್ಕೂ ಈಶ್ವರಪ್ಪ ಹೇಳಿದ್ದೇನು?

ಪರಿಷತ್​​ ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರಿಂದ ಅಡ್ಡ ಮತದಾನ ವಿಚಾರವಾಗಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿ ಮಾತನಾಡಿರುವ ಈಶ್ವರಪ್ಪ, ಹಿಂದೆ 17 ಕಾಂಗ್ರೆಸ್ ಶಾಸಕರಿಗೆ ಹಣ ನೀಡಿ ಖರೀದಿಸಿ ನಾವು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದೆವು. ಆ ನಿರ್ಧಾರದಿಂದ ಆಗ ನಮಗೆ ತಾತ್ಕಾಲಿಕ ಜಯ ಸಿಕ್ಕಿತ್ತಾದರೂ ಅಂತಿಮವಾಗಿ ನಮ್ಮ ಸರ್ಕಾರ ಹಾಳಾಗಲು ಅದುವೇ ಕಾರಣವಾಯಿತು ಎಂದು ಈಶ್ವರಪ್ಪ ಹೇಳಿರೋದೀಗ ಈ ಹಿಂದಿನ ಆರೋಪಗಳಿಗೆ ಪುಷ್ಠಿ ನೀಡಿದೆ.

ಇದನ್ನೂ ಓದಿ: ಪರಿಷತ್​​ ಚುನಾವಣೆಯಲ್ಲಿ ಕ್ರಾಸ್​​ ವೋಟಿಂಗ್​; ಆಣೆ ಪ್ರಮಾಣಕ್ಕೆ ಮುಂದಾದ ಬಿಜೆಪಿಗರಿಗೆ ಹೆಚ್​​.ಡಿ. ಕುಮಾರಸ್ವಾಮಿ ಕಿವಿಮಾತು

ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಕೋಟ್ಯಂತರ ಭಕ್ತರು ಇದ್ದಾರೆ. ಹೀಗಾಗಿ ಮೊದಲು ಈ ನಿರ್ಧಾರದಿಂದ ವಿಜಯೇಂದ್ರ ಹಿಂದೆ ಸರಿಯಬೇಕು. ಅಡ್ಡ ಮತದಾನ ಮಾಡಿದವರು ಮಂಜುನಾಥನ ಮುಂದೆ ಆಣೆ ಮಾಡಿ, ಅಣ್ಣಪ್ಪ ಸ್ವಾಮಿ ಮುಂದೆ ಕ್ಷಮೆ ಕೇಳಿದರೆ ಯಾವುದೇ ಬೆಲೆ ಇರಲ್ಲ. ಹಿಂದೆ ಶಿವಮೊಗ್ಗ ವಾರ್ಡ್ ಚುನಾವಣೆ ವೇಳೆ ಆಣೆ ಪ್ರಮಾಣ ನಡೆದಿತ್ತು. ಅಭ್ಯರ್ಥಿಯೊಬ್ಬ ಸಿಗಂದೂರು ಚೌಡೇಶ್ವರಿ ದೇವಿಯ ಫೋಟೋ ನೀಡಿ, 5 ರೂಪಾಯಿ ಕೊಟ್ಟು ಮತಹಾಕುವಂತೆ ಆಣೆ ಪ್ರಮಾಣ ಮಾಡಿಸಿದ್ದ‌. ಮರುದಿನ ಮತ್ತೊಬ್ಬ ಅಭ್ಯರ್ಥಿ ಮಾರಮ್ಮನ ಫೋಟೋ ಜೊತೆ 10 ರೂಪಾಯಿ ಕೊಟ್ಟು ಮತ ಹಾಕುವಂತೆ ಆಣೆ ಮಾಡಿಸಿದ್ದ. ಕೊನೆಗೆ 10 ರೂಪಾಯಿ ಕೊಟ್ಟವನೇ ಚುನಾವಣೆಯಲ್ಲಿ ಗೆದ್ದ ಎಂದು ಈಶ್ವರಪ್ಪ ಉದಾಹರಣೆ ನೀಡಿದ ಪ್ರಸಂಗವೂ ಇದೇ ವೇಳೆ ನಡೆದಿದೆ. ಅಡ್ಡ ಮತದಾನ ವಿಚಾರದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Keir Starmer Resigns: ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ, 10 ವರ್ಷಗಳಲ್ಲಿ ರಾಜೀನಾಮೆ ನೀಡಿದ ಆರನೇ ಪ್ರಧಾನಿ – Kannada News | Keir Starmer Resigns as UK PM: Causes and Impact on British Politics

ಲಂಡನ್, ಜೂನ್ 22: ತೀವ್ರ ರಾಜಕೀಯ ಆರ್ಥಿಕ ಬಿಕ್ಕಟ್ಟು ಹಾಗೂ ಸ್ವಪಕ್ಷದೊಳಗಿನ ಭಾರಿ ಒತ್ತಡಕ್ಕೆ ಮಣಿದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer) ಸೋಮವಾರ ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. ಜುಲೈ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದ್ದ ಸ್ಟಾರ್ಮರ್, ಕೇವಲ ಎರಡು ವರ್ಷಗಳಲ್ಲೇ ಅಧಿಕಾರದಿಂದ ಕೆಳಗಿಳಿಯುವಂತಾಗಿರುವುದು ಬ್ರಿಟನ್ ರಾಜಕೀಯದಲ್ಲಿ ನಾಟಕೀಯ ತಿರುವು ನೀಡಿದೆ. ಕಳೆದ 10 ವರ್ಷಗಳಲ್ಲಿ ರಾಜೀನಾಮೆ ನೀಡಿದ ಆರನೇ ಪ್ರಧಾನಿ ಇವರಾಗಿದ್ದಾರೆ.

ಲಂಡನ್‌ನ ಪ್ರಧಾನಿ ಅಧಿಕೃತ ನಿವಾಸ ’10 ಡೌನಿಂಗ್ ಸ್ಟ್ರೀಟ್’ನ ಹೊರಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, “ಮುಂದಿನ ಚುನಾವಣೆಗೆ ಪಕ್ಷವನ್ನು ಮುನ್ನಡೆಸಲು ನಾನು ಸರಿಯಾದ ವ್ಯಕ್ತಿಯೇ ಎಂದು ನನ್ನ ಪಕ್ಷ ಕೇಳುತ್ತಿದ್ದ ಪ್ರಶ್ನೆಗೆ ನನಗೆ ಉತ್ತರ ಸಿಕ್ಕಿದೆ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಭಾವುಕರಾಗಿ ನುಡಿದರು.

ರಾಜೀನಾಮೆಗೆ ಪ್ರಮುಖ ಕಾರಣಗಳೇನು?
ಆಂಡಿ ಬರ್ನ್‌ಹ್ಯಾಮ್ ಸವಾಲು: ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಆಂಡಿ ಬರ್ನ್‌ಹ್ಯಾಮ್ ಇತ್ತೀಚೆಗೆ ಸಂಸತ್ ಚುನಾವಣೆಯಲ್ಲಿ ಗೆದ್ದು ಬಂದ ತಕ್ಷಣ, ಪ್ರಧಾನಿ ಸ್ಟಾರ್ಮರ್ ನಾಯಕತ್ವಕ್ಕೆ ಲೇಬರ್ ಪಕ್ಷದೊಳಗೇ ಬಹಿರಂಗ ಸವಾಲು ಎದುರಾಯಿತು. ಬಹುತೇಕ ಸಂಸದರು ಬರ್ನ್‌ಹ್ಯಾಮ್ ಬೆಂಬಲಕ್ಕೆ ನಿಂತಿದ್ದು ಸ್ಟಾರ್ಮರ್ ಇಕ್ಕಟ್ಟಿಗೆ ಸಿಲುಕಿದರು.

ಆರ್ಥಿಕ ಬಿಕ್ಕಟ್ಟು ಮತ್ತು ಜೀವನ ವೆಚ್ಚ: ಬ್ರಿಟನ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ದಿನಬಳಕೆ ವಸ್ತುಗಳ ಬೆಲೆ (Cost of Living) ಗಗನಕ್ಕೇರಿದೆ. ಸಾರ್ವಜನಿಕ ಸೇವೆಗಳನ್ನು ಸುಧಾರಿಸುವಲ್ಲಿ ಮತ್ತು ಭರವಸೆ ನೀಡಿದ್ದ ಆರ್ಥಿಕ ಬೆಳವಣಿಗೆಯನ್ನು ತಲುಪಿಸುವಲ್ಲಿ ಸ್ಟಾರ್ಮರ್ ಸರ್ಕಾರ ಸಂಪೂರ್ಣ ಹೆಣಗಾಡುತ್ತಿತ್ತು.

ಇತರ ಪಕ್ಷಗಳ ಪೈಪೋಟಿ: ಬ್ರಿಟನ್‌ನಲ್ಲಿ ಗ್ರೀನ್ ಪಾರ್ಟಿ ಮತ್ತು ರಿಫಾರ್ಮ್ ಯುಕೆ ಪಕ್ಷಗಳು ಜನಪ್ರಿಯತೆ ಗಳಿಸುತ್ತಿದ್ದು, ಲೇಬರ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದ್ದವು. ಇದರಿಂದಾಗಿ ಪಕ್ಷದ ಉಳಿವಿಗೆ ನಾಯಕತ್ವ ಬದಲಾವಣೆ ಅನಿವಾರ್ಯವಾಯಿತು.

ತಮ್ಮ ಸಾಧನೆಗಳನ್ನು ಸಮರ್ಥಿಸಿಕೊಂಡ ಸ್ಟಾರ್ಮರ್
ಪಕ್ಷದ ಇಮೇಜ್ ಬದಲಾಯಿಸಿದ್ದೆ: “ಆರು ವರ್ಷಗಳ ಹಿಂದೆ ನಾನು ಲೇಬರ್ ಪಕ್ಷದ ಜವಾಬ್ದಾರಿ ವಹಿಸಿಕೊಂಡಾಗ ಪಕ್ಷ ಮುಗಿದೇ ಹೋಯಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕಠಿಣ ಪರಿಶ್ರಮದಿಂದ ನಾವು ಪಕ್ಷವನ್ನು ಅಧಿಕಾರಕ್ಕೆ ತಂದೆವು. ನಮ್ಮ ಆಡಳಿತದಲ್ಲಿ ವೇತನಗಳು ವೇಗವಾಗಿ ಬೆಳೆದವು, ಅತಿ ದೊಡ್ಡ ಕಾರ್ಮಿಕ ಸುಧಾರಣೆ ತಂದೆವು ಹಾಗೂ ದೇಶದ ಅರ್ಧ ಮಿಲಿಯನ್ (5 ಲಕ್ಷ) ಜನರನ್ನು ಬಡತನದಿಂದ ಮುಕ್ತಗೊಳಿಸಿದೆವು ಎಂದು ಸ್ಟಾರ್ಮರ್ ತಮ್ಮ ಸಾಧನೆಗಳನ್ನು ನೆನೆದರು.

ಬ್ರಿಟನ್‌ನ ಮುಂದಿನ ಪ್ರಧಾನಿ ಯಾರು?
ಕೀರ್ ಸ್ಟಾರ್ಮರ್ ಅವರು ರಾಜೀನಾಮೆ ನೀಡಿದ್ದರೂ, ಲೇಬರ್ ಪಕ್ಷವು ತನ್ನ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೂ ಅವರು ಮಧ್ಯಂತರ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸದ್ಯಕ್ಕೆ ಪ್ರಧಾನಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುವವರು:

ಆಂಡಿ ಬರ್ನ್‌ಹ್ಯಾಮ್: ಪಕ್ಷದ ಸಂಸದರ ಪ್ರಬಲ ಬೆಂಬಲ ಹೊಂದಿರುವ ನಾಯಕ.

ವೆಸ್ ಸ್ಟ್ರೀಟಿಂಗ್: ಮಾಜಿ ಆರೋಗ್ಯ ಕಾರ್ಯದರ್ಶಿಯಾಗಿರುವ ಇವರು ಕೂಡ ನಾಯಕತ್ವ ಸ್ಪರ್ಧೆಗೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ.

ಒಟ್ಟಿನಲ್ಲಿ ಇರಾನ್-ಅಮೆರಿಕ ಬಿಕ್ಕಟ್ಟಿನ ನಡುವೆ ಬ್ರಿಟನ್ ಪ್ರಧಾನಿ ರಾಜೀನಾಮೆ ನೀಡಿರುವುದು ಜಾಗತಿಕ ವಲಯದಲ್ಲೂ ಭಾರಿ ಸಂಚಲನ ಸೃಷ್ಟಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನೌಕರನ ತಪ್ಪಿಗೆ ಕಂಪನಿ ಸಿಇಒ ಹಾಗೂ ಹಿರಿಯ ಉದ್ಯೋಗಿಗಳಿಗೆ ಪೇಮೆಂಟ್ ಕಟ್; ಜಪಾನ್ ಏರ್ಲೈನ್ಸ್​ನಲ್ಲೊಂದು ಘಟನೆ – Kannada News | Employee fails in alcohol test, CEO faces 30pc cut in 2 months salary, example for Japan corporate discipline

ಜಪಾನ್ ಏರ್ಲೈನ್ಸ್Image Credit source: Kevin Carter/Getty Images

ಟೋಕಿಯೋ, ಜೂನ್ 22: ಜಪಾನ್‌ನಲ್ಲಿ ಕಾರ್ಪೊರೇಟ್ ಶಿಸ್ತು (Corporate discipline) ಬಹಳ ಇದೆ. ಅಲ್ಲಿ ಯಾರೇ ತಪ್ಪು ಮಾಡಿದರೂ ಅದಕ್ಕೆ ತಲೆದಂಡ ಒಬ್ಬರದ್ದೇ ಆಗಿರುವುದಿಲ್ಲ. ಕಂಪನಿಯ ಅತ್ಯುನ್ನತ ಹುದ್ದೆಯಲ್ಲಿರುವವರಿಗೂ ದಂಡ ತಪ್ಪುವುದಿಲ್ಲ. ಜಪಾನ್ ಏರ್​ಲೈನ್ಸ್​ನಲ್ಲಿರುವ (JAL- Japan Airlines) ಒಂದು ಘಟನೆ ಇದಕ್ಕೆ ಒಳ್ಳೆಯ ನಿದರ್ಶನವಾಗಿದೆ. ಏರ್​ಲೈನ್ಸ್​ನ ಉದ್ಯೋಗಿಯೊಬ್ಬರು ಆಲ್ಕೋಹಾಲ್ ಪರೀಕ್ಷೆಯಲ್ಲಿ ವಿಫಲನಾಗಿದ್ದಕ್ಕೆ ಕಂಪನಿಯ ಸಿಇಒ ಹಾಗು ಇತರ ಕೆಲ ಹಿರಿಯ ಉದ್ಯೋಗಿಗಳಿಗೆ ಸಂಬಳ ಕಟ್ ಮಾಡಿರುವ ಘಟನೆ ಬ್ಯುಸಿನೆಸ್ ಇನ್​ಸೈಡರ್ ಪತ್ರಿಕೆಯಲ್ಲಿ ವರದಿಯಾಗಿದೆ.

ವರದಿ ಪ್ರಕಾರ ಜಪಾನ್ ಏರ್​ಲೈನ್ಸ್​ನ (ಜೆಎಎಲ್) ಸಿಇಒ ಮಿಟ್ಸುಕೋ ಟೊಟ್ಟೋರಿ ಅವರಿಗೆ ಎರಡು ತಿಂಗಳ ವೇತನದಲ್ಲಿ ಶೇ. 30ರಷ್ಟು ಕಡಿತ ಮಾಡಲಾಗುತ್ತದೆ. ವಿಮಾನದ ಸುರಕ್ಷತೆ ಮತ್ತು ಕ್ಯಾಬಿನ್ ಆಪರೇಶನ್ಸ್​ನ ಜವಾಬ್ದಾರಿ ಇರುವ ಇಬ್ಬರು ಎಕ್ಸಿಕ್ಯೂಟಿವ್​ಗಳ ಒಂದು ತಿಂಗಳ ವೇತನದಲ್ಲಿ ಶೇ. 20 ಕಡಿತ ಇರಲಿದೆ. ಇತರ ಡೈರೆಕ್ಟರ್​ಗಳು ಮತ್ತು ಎಕ್ಸಿಕ್ಯೂಟಿವ್ ಆಫೀಸರ್​ಗಳಿಗೆ ಒಂದು ತಿಂಗಳ ವೇತನದಲ್ಲಿ ಶೇ. 10 ಕಡಿತ ಮಾಡಲಾಗುತ್ತದೆ. ಇದು ಇಬ್ಬರು ಫ್ಲೈಟ್ ಅಟೆಂಡೆಂಟ್​ಗಳು ಮಾಡಿದ ತಪ್ಪಿಗೆ ಹಿರಿಯರಿಗೆ ಸಿಕ್ಕಿರುವ ದಂಡ.

ಇದನ್ನೂ ಓದಿ: ಬೆಂಗಳೂರು, ದೆಹಲಿ, ಮುಂಬೈ ವಿಮಾನ ನಿಲ್ದಾಣಗಳನ್ನು ಗ್ಲೋಬಲ್ ಟ್ರಾನ್ಸಿಟ್ ಹಬ್​ಗಳಾಗಿ ಅಭಿವೃದ್ದಿಪಡಿಸಲು ಕೇಂದ್ರ ಯೋಜನೆ

ಜಪಾನ್ ಏರ್​ಲೈನ್ಸ್​ನಲ್ಲಿ ಆದ ಘಟನೆ ಏನು?

ಜಪಾನ್‌ನಲ್ಲಿ ಸಾರಿಗೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಂಪನಿಗಳಲ್ಲಿ ಕೆಲಸದ ಸಮಯದಲ್ಲಿ ಆಲ್ಕೋಹಾಲ್ ಸೇವನೆಯ ಬಗ್ಗೆ ಅತ್ಯಂತ ಕಟ್ಟುನಿಟ್ಟಾದ ನಿಯಮಗಳಿವೆ. ಉದ್ಯೋಗಿ ಡ್ಯೂಟಿಗೆ ಹಾಜರಾಗುವ ಮುನ್ನ ಆಲ್ಕೋಹಾಲ್ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ. ಜಪಾನ್ ಏರ್​ಲೈನ್ಸ್ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೆಲಸಕ್ಕೆ ಬರುವ ಮುಂಚೆ ನಿರ್ದಿಷ್ಟ ಗಂಟೆಗಳಿಂದ ಮದ್ಯಸೇವನೆ ಮಾಡಿರುವಂತಿಲ್ಲ. ಒಂದು ಮಿತಿಯೊಳಗೆ ಮಾತ್ರ ಕುಡಿಯಲು ಅನುಮತಿ ಉಂಟು. ಆ ಮಿತಿ ಮೀರುವಂತಿಲ್ಲ. ಜಪಾನ್ ಏರ್​ಲೈನ್ಸ್​ನಲ್ಲಿ ಕ್ಯಾಬಿನ್ ಸಿಬ್ಬಂದಿ ಪೈಕಿ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ ಇಬ್ಬರು ಉದ್ಯೋಗಿಗಳನ್ನು ನಿಯಮಿತ ಆಲ್ಕೋಹಾಲ್ ಪರೀಕ್ಷೆಗೆ ಒಳಪಡಿಸಿದಾಗ ರಿಪೋರ್ಟ್ ಪಾಸಿಟಿವ್ ಬಂದಿದೆ. ಇದು ಫ್ಲೈಟ್ ಹೊರಡುವ ಮುಂಚಿನ ಪರೀಕ್ಷೆ.

ಈ ಘಟನೆಯ ನಂತರ ಕಂಪನಿಯು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ ಮತ್ತು ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಅಷ್ಟಕ್ಕೆ ಇದು ಸೀಮಿತಗೊಳ್ಳಲಿಲ್ಲ. ತತ್​ಕ್ಷಣವೇ ಉದ್ಯೋಗಿಗಳನ್ನು ಕರ್ತವ್ಯದಿಂದ ಹೊರಗಿಡಲಾಗಿದೆ. ಅವರ ಜಾಗಕ್ಕೆ ಬೇರೆಯವರನ್ನು ಜೋಡಿಸಲಾಯಿತು. ಫ್ಲೈಟ್ 40 ನಿಮಿಷ ವಿಳಂಬವಾಯಿತು. ಜಪಾನ್​ನಲ್ಲಿ ಇದು ಬಹಳ ಗಂಭೀರ ಸ್ವರೂಪದ ಘಟನೆಯಾಗಿ ಪರಿಗಣಿತವಾಗುತ್ತದೆ. ಆಲ್ಕೋಹಾಲ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಇಬ್ಬರು ಉದ್ಯೋಗಿಗಳಲ್ಲಿ ಒಬ್ಬರನ್ನು ಕೆಲಸದಿಂದಲೇ ವಜಾಗೊಳಿಸಲಾಗಿದೆ. ಮತ್ತೊಬ್ಬರನ್ನು ಅಮಾನತಿನಲ್ಲಿ ಇಡಲಾಗಿದೆ.

ಇದನ್ನೂ ಓದಿ: ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದ: ಭಾರತೀಯ ವಾಹನ ತಯಾರಕರಿಗೆ ದೊಡ್ಡ ಮಾರುಕಟ್ಟೆ ಅವಕಾಶ

ಜಪಾನಿ ವಿಶೇಷ ಕಾರ್ಪೊರೇಟ್ ಸಂಸ್ಕೃತಿ

ಜಪಾನ್‌ನಲ್ಲಿ “ಒಬಾಬಿ” (Apology Culture) ಅಥವಾ ನೈತಿಕ ಜವಾಬ್ದಾರಿ ತೆಗೆದುಕೊಳ್ಳುವ ಸಂಸ್ಕೃತಿ ತುಂಬಾ ಆಳವಾಗಿದೆ. ಕಂಪನಿಯಲ್ಲಿ ಯಾವುದೇ ದೊಡ್ಡ ತಪ್ಪಾದಾಗ, ಕೆಳಮಟ್ಟದ ಉದ್ಯೋಗಿಗಳನ್ನು ಮಾತ್ರ ದೂಷಿಸದೆ, ನಾಯಕತ್ವದ ಸ್ಥಾನದಲ್ಲಿರುವವರು ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತಾರೆ. ಈ ಘಟನೆಯು ಜಪಾನ್‌ನ ಆ ಶಿಸ್ತು ಮತ್ತು ನೈತಿಕತೆಗೆ ಮತ್ತೊಂದು ಸಾಕ್ಷಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿಲ್ಲದ ‘ಏಮ್ಸ್’ ಹೋರಾಟದ ಕಿಚ್ಚು; ಬರೋಬ್ಬರಿ 1500 ದಿನ ಪೂರೈಸಿದ ಚಳುವಳಿ! – Kannada News | Raichur AIIMS Protest Completes 1500 Days, Agitation Intensifies Across the District

ರಾಯಚೂರು, ಜೂನ್ 22: ಗಡಿ ಜಿಲ್ಲೆ ರಾಯಚೂರಿನಲ್ಲಿ (Raichuru) ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಸ್ಥಾಪನೆಗಾಗಿಯೇ ನಡೆಯುತ್ತಿರುವ ಬೃಹತ್ ಚಳುವಳಿ ಈಗ ಬರೋಬ್ಬರಿ 1,500 ದಿನಗಳನ್ನು ಪೂರೈಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಶತಾಯ ಗತಾಯ ರಾಯಚೂರಿಗೆ ಏಮ್ಸ್ ಮಂಜೂರಾಗಲೇಬೇಕು ಎಂದು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಹಾಗೂ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಈಗ ಮತ್ತಷ್ಟು ತೀವ್ರಗೊಂಡಿದೆ.

ಮುಖ್ಯಾಂಶಗಳು

  • ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ 1500 ದಿನಗಳನ್ನು ಪೂರೈಸಿದೆ.
  • ನಂಜುಂಡಪ್ಪ ವರದಿ ಅನ್ವಯ ಜಿಲ್ಲೆಗೆ ಏಮ್ಸ್ ನೀಡುವಂತೆ ಹೋರಾಟಗಾರರ ತೀವ್ರ ಒತ್ತಾಯ.
  • ಲಿಂಗಸುಗೂರು, ಸಿಂಧನೂರು ಸೇರಿದಂತೆ ಜಿಲ್ಲಾದ್ಯಂತ ಚುರುಕುಗೊಂಡ ಬೃಹತ್ ಏಮ್ಸ್ ಚಳುವಳಿ.

ರಾಜಕೀಯ ಹುನ್ನಾರಕ್ಕೆ ಬಲಿಯಾಯ್ತಾ ರಾಯಚೂರಿನ ಕನಸು?

ಹಿಂದೆ ನಂಜುಂಡಪ್ಪ ವರದಿಯ ಆಧಾರದ ಮೇಲೆ ರಾಯಚೂರು ಜಿಲ್ಲೆಗೆ ಐಐಟಿ (IIT) ಮಂಜೂರಾಗಬೇಕಿತ್ತು. ಆದರೆ ರಾಜಕೀಯ ಹುನ್ನಾರ ಮತ್ತು ಪ್ರಭಾವಿ ನಾಯಕರ ಒತ್ತಡದಿಂದಾಗಿ ಅದು ಧಾರವಾಡದ ಪಾಲಾಯಿತು. ರಾಯಚೂರಿಗೆ ಆದ ಈ ಅನ್ಯಾಯಕ್ಕೆ ಪ್ರಾಯಶ್ಚಿತ್ತವಾಗಿ ಜಿಲ್ಲೆಯಲ್ಲಿ ‘ಏಮ್ಸ್’ ಆದರೂ ಸ್ಥಾಪನೆಯಾಗಲಿ ಎಂಬುದು ಇಡೀ ಜಿಲ್ಲೆಯ ಜನರ ಕರಳುಬಳ್ಳಿಯ ಕೂಗಾಗಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಕೇಂದ್ರ ಸರ್ಕಾರವೇ ‘ಮಹತ್ವಾಕಾಂಕ್ಷಿ ಜಿಲ್ಲೆಗಳು’ ಎಂದು ಗುರುತಿಸಿದ್ದರೂ, ಇಲ್ಲಿನ ಆರೋಗ್ಯ ರಂಗದ ಸುಧಾರಣೆಗೆ ಯಾವುದೇ ದೊಡ್ಡ ಯೋಜನೆಗಳು ಜಾರಿಯಾಗಿಲ್ಲ ಎಂಬುದು ಹೋರಾಟಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗಣ್ಯರ ಬೆಂಬಲವಿದ್ದರೂ ಮುಳುಗದ ಕೇಂದ್ರದ ಮೌನ

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸ್ಯಾಂಡಲ್‌ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಾಯಚೂರಿಗೆ ಭೇಟಿ ನೀಡಿ ಈ ಹೋರಾಟಕ್ಕೆ ಬಹಿರಂಗ ಬೆಂಬಲ ಘೋಷಿಸಿದ್ದರು. ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಮಾತನಾಡುವ ಭರವಸೆಯನ್ನೂ ನೀಡಿದ್ದರು. ಇವರೊಂದಿಗೆ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಕೂಡ ಹೋರಾಟಕ್ಕೆ ಕೈಜೋಡಿಸಿದ್ದರು. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದಿದ್ದಾರೆ. ಆದರೆ, ಈವರೆಗೆ ಕೇಂದ್ರದಿಂದ ಯಾವುದೇ ಸ್ಪಷ್ಟ ನಿಲುವು ಬಾರದಿರುವುದು ದುರದೃಷ್ಟಕರ. ಸದ್ಯ ರಾಯಚೂರು ನಗರ ಸೇರಿದಂತೆ ಜಿಲ್ಲೆಯ ಲಿಂಗಸುಗೂರು, ಸಿಂಧನೂರು ಭಾಗಗಳಲ್ಲೂ ಹೋರಾಟದ ಕಿಚ್ಚು ಮತ್ತೆ ಜೋರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version