ಪಿಎಂ ಕಿಸಾನ್ ಯೋಜನೆ; ನೊಂದಣಿ, ಆದಾಯ, ಫಲಾನುಭವಿಗಳ ಸಂಖ್ಯೆ ಇತ್ಯಾದಿ ಮಾಹಿತಿ – Kannada News | PM Kisan Samman Nidhi Yojana, registration, eligibility, beneficiaries number and other details

ನವದೆಹಲಿ, ಮೇ 24: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಆರಂಭವಾಗಿ ಆರಕ್ಕೂ ಹೆಚ್ಚು ವರ್ಷಗಳಾಗಿದ್ದು, ಇದು ವಿಶ್ವದ ಅತಿದೊಡ್ಡ ಡಿಬಿಟಿ ಸ್ಕೀಮ್ ಎನಿಸಿದೆ. ಅತಿಹೆಚ್ಚು ಜನರಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ರೈತರ ವ್ಯವಸಾಯಕ್ಕೆ ಸಹಾಯಧನ ನೀಡಲೆಂದು ಶುರುವಾದ ಈ ಯೋಜನೆಯಲ್ಲಿ ಈವರೆಗೂ ಫಲಾನುಭವ ಪಡೆದಿರುವವರ ಸಂಖ್ಯೆ 11 ಕೋಟಿಗೂ ಅಧಿಕ ಇದೆ. ಸದ್ಯ 9.46 ಕೋಟಿ ಜನರು ಇದರ ಫಲಾನುಭವ ಪಡೆಯುತ್ತಿದ್ದಾರೆ.

ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರೂ ಅನ್ನು ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಇಲ್ಲಿಯವರೆಗೆ 22 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. 2026ರ ಮಾರ್ಚ್ 13ರಂದು ಕೊನೆಯ ಕಂತು ಬಿಡುಗಡೆಯಾಗಿದ್ದು. 23ನೇ ಕಂತು 2026ರ ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಬೆಂಗಳೂರಲ್ಲಿಎಷ್ಟಿದೆ?

ಕರ್ನಾಟಕದಲ್ಲಿ 44 ಲಕ್ಷ ಮಂದಿ ಫಲಾನುಭವಿಗಳು

ಪಿಎಂ ಕಿಸಾನ್ ಸ್ಕೀಮ್​ನಲ್ಲಿ ದೇಶಾದ್ಯಂತ ಸದ್ಯ 9.46 ಕೋಟಿ ಫಲಾನುಭವಿಗಳಿದ್ದು, ಇದರಲ್ಲಿ ಕರ್ನಾಟಕದ 44-45 ಲಕ್ಷ ಮಂದಿ ರೈತರು ನೊಂದಾಯಿಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಜ್ಯದಲ್ಲಿ ಎರಡು ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಇದರಲ್ಲಿ ಯುಪಿ ನಂಬರ್ ಒನ್. ಕೇರಳದಲ್ಲಿ ತಮಿಳುನಾಡಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಿಎಂ ಕಿಸಾನ್ ಪ್ರಯೋಜನ ಪಡೆಯುತ್ತಿದ್ದಾರೆ. ಈ ಸ್ಕೀಮ್​ನಲ್ಲಿ ಅತಿಹೆಚ್ಚು ಫಲಾನುಭವಿಗಳನ್ನು ಹೊಂದಿರುವ ರಾಜ್ಯಗಳಿವು:

  1. ಉತ್ತರಪ್ರದೇಶ: 2.18 ಕೋಟಿ
  2. ಮಹಾರಾಷ್ಟ್ರ: 90 ಲಕ್ಷ
  3. ಮಧ್ಯಪ್ರದೇಶ: 82 ಲಕ್ಷ
  4. ಬಿಹಾರ: 73 ಲಕ್ಷ
  5. ರಾಜಸ್ಥಾನ: 66 ಲಕ್ಷ
  6. ಗುಜರಾತ್: 51 ಲಕ್ಷ
  7. ಪಶ್ಚಿಮ ಬಂಗಾಳ: 45 ಲಕ್ಷ
  8. ಕರ್ನಾಟಕ: 42 ಲಕ್ಷ
  9. ಆಂಧ್ರಪ್ರದೇಶ: 39 ಲಕ್ಷ
  10. ಒಡಿಶಾ: 34 ಲಕ್ಷ

ಇದನ್ನೂ ಓದಿ: ದೇಶದ ಅರ್ಧದಷ್ಟು ಜಿಡಿಪಿಗೆ ಹೊಟ್ಟೆ ತುಂಬಿಸುತ್ತಿರೋದು ಕರ್ನಾಟಕ ಸೇರಿ 5 ರಾಜ್ಯಗಳು ಮಾತ್ರ; ಇಲ್ಲಿವೆ ವರದಿಯ ಅಂಶಗಳು

ಪಿಎಂ ಕಿಸಾನ್ ಸ್ಕೀಮ್​ಗೆ ಯಾರು ನೊಂದಾಯಿಸಬಹುದು?

ಸ್ವಂತ ಕೃಷಿ ಜಮೀನು ಹೊಂದಿರುವ ಯಾವುದೇ ಭಾರತೀಯ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಆದರೆ, ಕೆಲ ಷರತ್ತುಗಳಿವೆ. ಒಂದು ಕುಟುಂಬದಲ್ಲಿ ಒಬ್ಬರೇ ಫಲಾನುಭವಿ ಇರಲು ಸಾಧ್ಯ. ಕುಟುಂಬದಲ್ಲಿ ಇಬ್ಬರ ಹೆಸರಲ್ಲಿ ಜಮೀನು ಇದ್ದರೂ ಒಬ್ಬರಿಗೆ ಮಾತ್ರ ಸಿಗುತ್ತದೆ. ಆದಾಯ ತೆರಿಗೆ ಪಾವತಿದಾರರು, ವೃತ್ತಿಪರರು, ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರು, ಶಾಸಕರು, ಸಂಸದರು ಮೊದಲಾದವರು ಸ್ವಂತ ಕೃಷಿಭೂಮಿ ಹೊಂದಿದ್ದರೂ ಅವರು ಫಲಾನಭವಕ್ಕೆ ಅರ್ಹರಾಗಿರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:33 am, Sun, 24 May 26

Source link

ಎಬೋಲಾ ಆತಂಕ; ಕಾಂಗೋ, ಉಗಾಂಡಾ, ದಕ್ಷಿಣ ಸುಡಾನ್‌ ಪ್ರಯಾಣಿಕರಿಗೆ ಭಾರತದಿಂದ ಮಾರ್ಗಸೂಚಿ ಬಿಡುಗಡೆ – Kannada News | Ebola Outbreak India issues guidelines for passengers traveling to Congo, Uganda and South Sudan

ನವದೆಹಲಿ, ಮೇ 24: ಆಫ್ರಿಕಾ ದೇಶಗಳಲ್ಲಿ ಹರಡುತ್ತಿರುವ ಭೀಕರ ಎಬೋಲಾ (Ebola) ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ನಮ್ಮ ದೇಶದ ನಾಗರಿಕರಿಗೆ ಅತ್ಯಂತ ಮಹತ್ವದ ಮಾರ್ಗಸೂಚಿಯನ್ನು (Travel Advisory) ಬಿಡುಗಡೆ ಮಾಡಿದೆ. ಕಾಂಗೋ (DRC), ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳಿಗೆ ಅನಗತ್ಯವಾಗಿ ಪ್ರಯಾಣಿಸಬೇಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಭಾರತೀಯರಿಗೆ ಸೂಚಿಸಿದೆ.

ಇತ್ತೀಚೆಗೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ಮತ್ತು ಉಗಾಂಡಾ ದೇಶಗಳಲ್ಲಿ ಎಬೋಲಾ ವೈರಸ್‌ನ ಅತ್ಯಂತ ಅಪರೂಪದ ಹಾಗೂ ಅಪಾಯಕಾರಿ ತಳಿಯಾದ ‘ಬುಂಡಿಬುಗ್ಯೊ’ (Bundibugyo strain) ಭಾರಿ ಪ್ರಮಾಣದಲ್ಲಿ ಹರಡುತ್ತಿದೆ. ಈಗಾಗಲೇ ಅಲ್ಲಿ ನೂರಾರು ಜನರು ಈ ರೋಗಕ್ಕೆ ತುತ್ತಾಗಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು ‘ಅಂತಾರಾಷ್ಟ್ರೀಯ ಆತಂಕದ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ (PHEIC) ಎಂದು ಘೋಷಿಸಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಎಬೋಲಾ ಭೀತಿ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್

ಕಾಂಗೋ ಮತ್ತು ಉಗಾಂಡಾದ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಸುಡಾನ್ ದೇಶಕ್ಕೂ ಈ ರೋಗ ಹರಡುವ ಭಾರಿ ಅಪಾಯ ಇರುವುದರಿಂದ ಈ ಮೂರೂ ದೇಶಗಳನ್ನು ‘ಹೆಚ್ಚಿನ ಅಪಾಯವಿರುವ ವಲಯ’ ಎಂದು ವರ್ಗೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದಿಂದ ಪ್ರಮುಖ ಸೂಚನೆಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ಹೊರಡಿಸಿರುವ ಪ್ರಮುಖ ಮಾರ್ಗಸೂಚಿಗಳು ಹೀಗಿವೆ:

ಅನಗತ್ಯ ಪ್ರಯಾಣ ಬೇಡ:

ಮುಂದಿನ ಆದೇಶದವರೆಗೆ ಭಾರತೀಯ ನಾಗರಿಕರು ಕಾಂಗೋ, ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳಿಗೆ ಯಾವುದೇ ತುರ್ತು ಕೆಲಸವಿಲ್ಲದಿದ್ದರೆ ಪ್ರಯಾಣಿಸುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು.

ಸ್ಥಳೀಯ ನಿಯಮ ಪಾಲನೆ:

ಪ್ರಸ್ತುತ ಆ ದೇಶಗಳಲ್ಲಿ ವಾಸಿಸುತ್ತಿರುವ ಅಥವಾ ಈಗಾಗಲೇ ಅಲ್ಲಿಗೆ ಪ್ರಯಾಣಿಸಿರುವ ಭಾರತೀಯರು ಅಲ್ಲಿನ ಸ್ಥಳೀಯ ಆರೋಗ್ಯ ಇಲಾಖೆ ನೀಡಿರುವ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಭಾರತಕ್ಕೆ ಮರಳುವವರಿಗೆ ಕಟ್ಟುನಿಟ್ಟಿನ ತಪಾಸಣೆ:

ಸೋಂಕಿತ ದೇಶಗಳಿಂದ ಭಾರತದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಿಗೆ ಆಗಮಿಸುವ ಅಥವಾ ಅಲ್ಲಿಂದ ಟ್ರಾನ್ಸಿಟ್ ಮೂಲಕ ಬರುವ ಪ್ರತಿಯೊಬ್ಬ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ.

ಇದನ್ನೂ ಓದಿ: ಕಾಂಗೋ, ಉಗಾಂಡಾದಲ್ಲಿ ಎಬೋಲಾ ರುದ್ರನರ್ತನ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಪ್ರಯಾಣಿಕರಿಗೆ ಮಹತ್ವದ ಸೂಚನೆ

ದೆಹಲಿ, ಕೊಚ್ಚಿ, ಹೈದರಾಬಾದ್ ಸೇರಿದಂತೆ ದೇಶದ ಎಲ್ಲಾ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಎಬೋಲಾ ಸ್ಕ್ರೀನಿಂಗ್ ಅನ್ನು ತೀವ್ರಗೊಳಿಸಲಾಗಿದೆ. ಪ್ರಯಾಣಿಕರು ಭಾರತಕ್ಕೆ ಬಂದಿಳಿಯುವ ಮುನ್ನವೇ ವಿಮಾನದಲ್ಲಿ ಸ್ವಯಂ-ಘೋಷಣಾ ಪತ್ರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಮತ್ತು ದೇಶದ ಜನರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಮೇ 28ರಿಂದ ದೆಹಲಿಯಲ್ಲಿ ನಡೆಯಬೇಕಾಗಿದ್ದ ‘ಭಾರತ-ಆಫ್ರಿಕಾ ಫೋರಂ ಶೃಂಗಸಭೆ’ಯನ್ನು (India-Africa Forum Summit) ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದೂಡಲಾಗಿದೆ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Unique Traditions: ಜಗತ್ತಿನಾದ್ಯಂತ ಭಾನುವಾರ ವಾರದ ರಜೆ; ಆದರೆ ನೇಪಾಳದಲ್ಲೇಕೆ ಶನಿವಾರ ರಜೆ? ಇಲ್ಲಿದೆ ಅಸಲಿ ಕಾರಣ! – Kannada News | Why Nepal’s Weekly Holiday is Saturday? Unveiling unique traditions and working Sundays

ನೇಪಾಳದಲ್ಲೇಕೆ ಶನಿವಾರ ರಜೆ? Image Credit source: gemini ai

ವಿಶ್ವದ ಬಹುತೇಕ ದೇಶಗಳಲ್ಲಿ ಭಾನುವಾರ ಬಂತೆಂದರೆ ಸಾಕು ಹಾಲಿಡೇ ಮೂಡ್ ಶುರುವಾಗುತ್ತದೆ. ಶಾಲೆ-ಕಾಲೇಜುಗಳಿಂದ ಹಿಡಿದು ಸರ್ಕಾರಿ ಕಚೇರಿಗಳವರೆಗೆ ಎಲ್ಲದಕ್ಕೂ ಭಾನುವಾರವೇ ವಾರದ ಅಧಿಕೃತ ರಜೆ (Weekly Holiday). ಭಾರತದ ಸಂಸ್ಕೃತಿ ಮತ್ತು ಆಚರಣೆಗಳನ್ನು ಹೋಲುವ, ನಮ್ಮ ಪಕ್ಕದಲ್ಲೇ ಇರುವ ಹಿಂದೂ ರಾಷ್ಟ್ರ ನೇಪಾಳವು ಕೂಡ ಹೆಚ್ಚಿನ ವಿಷಯಗಳಲ್ಲಿ ಭಾರತವನ್ನೇ ಅನುಸರಿಸುತ್ತದೆ. ಆದರೆ, ರಜೆಯ ವಿಷಯಕ್ಕೆ ಬಂದರೆ ಮಾತ್ರ ನೇಪಾಳದ ನಿಯಮವೇ ಬೇರೆ. ನೇಪಾಳದಲ್ಲಿ ಭಾನುವಾರ ಯಾವುದೇ ರಜೆ ಇರುವುದಿಲ್ಲ. ಬದಲಿಗೆ ಅಲ್ಲಿ ಶನಿವಾರ ವಾರದ ಅಧಿಕೃತ ರಜಾದಿನವಾಗಿರುತ್ತದೆ. ಇದರ ಹಿಂದಿರುವ ವಿಶೇಷ ಕಾರಣಗಳು ಮತ್ತು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ:

ಶನಿವಾರವೇ ಅಲ್ಲಿ ಅಧಿಕೃತ ವಿಶ್ರಾಂತಿ ದಿನ:

ನೇಪಾಳ ಸರ್ಕಾರದ ಅಧಿಕೃತ ಕ್ಯಾಲೆಂಡರ್ ಪ್ರಕಾರ, ಶನಿವಾರವು ವಾರದ ಏಕೈಕ ಅಧಿಕೃತ ರಜಾದಿನವಾಗಿದೆ. ಈ ದಿನ ನೇಪಾಳದಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಶಾಲೆಗಳು ಮತ್ತು ಹೆಚ್ಚಿನ ಖಾಸಗಿ ಸಂಸ್ಥೆಗಳು ಸಂಪೂರ್ಣವಾಗಿ ಮುಚ್ಚಿರುತ್ತವೆ.

ಭಾನುವಾರದಿಂದಲೇ ವಾರದ ಕೆಲಸದ ಆರಂಭ:

ನಮಗೆ ಸೋಮವಾರ ವಾರದ ಮೊದಲ ಕೆಲಸದ ದಿನವಾದರೆ, ನೇಪಾಳಿಗರಿಗೆ ಭಾನುವಾರವೇ ಸಾಮಾನ್ಯ ಕೆಲಸದ ದಿನಗಳ ಆರಂಭವನ್ನು ಸೂಚಿಸುತ್ತದೆ. ಅಂದರೆ, ಶನಿವಾರದ ರಜೆಯ ಮಜಾ ಮುಗಿಸಿ ಭಾನುವಾರ ಬೆಳಗ್ಗೆಯೇ ಅವರೆಲ್ಲರೂ ಕಚೇರಿ ಮತ್ತು ಶಾಲೆಗಳತ್ತ ಹೆಜ್ಜೆ ಹಾಕುತ್ತಾರೆ.

ಧಾರ್ಮಿಕ ನಂಬಿಕೆ ಮತ್ತು ಶತಮಾನಗಳ ಸಂಪ್ರದಾಯ:

ನೇಪಾಳದಲ್ಲಿ ಹಿಂದೂ ಜನಸಂಖ್ಯೆ ಹೆಚ್ಚಾಗಿದೆ. ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳ ಪ್ರಕಾರ, ವಾರದ ದಿನಗಳಲ್ಲಿ ಶನಿವಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನವನ್ನು ಸಂಕಟಮೋಚನ ಹನುಮಂತ ಮತ್ತು ಶನಿ ದೇವರ ಪೂಜೆಗೆ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ವರ್ಷಗಳಿಂದ ನಡೆದುಕೊಂಡು ಬಂದಿರುವ ಇದೇ ಧಾರ್ಮಿಕ ಸಂಪ್ರದಾಯದ ಹಿನ್ನೆಲೆಯಲ್ಲಿ ಶನಿವಾರವನ್ನು ಅಲ್ಲಿ ವಾರಾಂತ್ಯದ ರಜೆಯಾಗಿ ಸ್ವೀಕರಿಸಲಾಗಿದೆ.

ಎರಡು ದಿನ ರಜೆ ನೀಡಲು ಹೋಗಿ ಕೈಬಿಟ್ಟ ಸರ್ಕಾರ:

ಕೆಲವು ವರ್ಷಗಳ ಹಿಂದೆ, ನೇಪಾಳ ಸರ್ಕಾರವು ಜಾಗತಿಕ ನಿಯಮಗಳಿಗೆ ಹೊಂದಿಕೊಳ್ಳುವ ಪ್ರಯತ್ನ ಮಾಡಿತ್ತು. ಶನಿವಾರದ ಜೊತೆಗೆ ಭಾನುವಾರವನ್ನೂ ಸೇರಿಸಿ ವಾರಕ್ಕೆ ಎರಡು ದಿನ ರಜೆ ನೀಡುವ ನಿಯಮವನ್ನು ಜಾರಿಗೆ ತಂದಿತ್ತು. ಆದರೆ, ಇದರಿಂದ ದೇಶದ ಆಡಳಿತ ಮತ್ತು ಆರ್ಥಿಕತೆಗೆ ಹಿನ್ನಡೆಯಾದ ಕಾರಣ, ಕೆಲವೇ ದಿನಗಳಲ್ಲಿ ಆ ನಿಯಮವನ್ನು ರದ್ದುಗೊಳಿಸಲಾಯಿತು. ಮತ್ತೆ ಹಳೆಯ ಸಂಪ್ರದಾಯದಂತೆ ಕೇವಲ ಶನಿವಾರವನ್ನು ಮಾತ್ರ ಅಧಿಕೃತ ರಜಾದಿನವೆಂದು ಘೋಷಿಸಲಾಯಿತು.

ಇದನ್ನೂ ಓದಿ: ಮನೆಯ ಮೇಲೆ ಹಾರಾಡಲಿ ಹನುಮದ್ ಧ್ವಜ; ಇಲ್ಲಿದೆ ಅಸಲಿ ವಾಸ್ತು ರಹಸ್ಯ!

ಪ್ರಪಂಚದ ಇತರ ದೇಶಗಳಲ್ಲಿ ರಜೆಯ ನಿಯಮ ಹೇಗಿದೆ?

ವಿವಿಧ ಧರ್ಮ ಮತ್ತು ಇತಿಹಾಸದ ಆಧಾರದ ಮೇಲೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ರಜೆಯ ದಿನಗಳು ನಿರ್ಧಾರವಾಗಿವೆ:

ಇಸ್ಲಾಮಿಕ್ ರಾಷ್ಟ್ರಗಳು (ಶುಕ್ರವಾರ ರಜೆ):

ಪ್ರಪಂಚದ ಹೆಚ್ಚಿನ ಮುಸ್ಲಿಂ ರಾಷ್ಟ್ರಗಳಲ್ಲಿ ಶುಕ್ರವಾರದಂದು ವಾರದ ರಜೆ ಇರುತ್ತದೆ. ಇಸ್ಲಾಂ ಧರ್ಮದಲ್ಲಿ ಈ ದಿನವನ್ನು ‘ಜುಮ್ಮಾ’ ಎಂದು ಕರೆಯಲಾಗುವ ವಿಶೇಷ ಪ್ರಾರ್ಥನೆಯ ದಿನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ದಿನ ಮುಸ್ಲಿಮರಿಗೆ ಅತ್ಯಂತ ಪವಿತ್ರ ಹಾಗೂ ವಿಶೇಷವಾಗಿದೆ.

ಭಾರತ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು (ಭಾನುವಾರ ರಜೆ):

ಇತಿಹಾಸದ ಪುಟಗಳನ್ನು ತಿರುವಿದರೆ, ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ಹಾರ್ಡಿಂಜ್ (Lord Hardinge) ಅವರು ಮೊದಲು ಭಾನುವಾರವನ್ನು ಅಧಿಕೃತ ರಜಾದಿನವೆಂದು ಘೋಷಿಸಿದರು. ಕ್ರಿಶ್ಚಿಯನ್ ಧರ್ಮದ ನಂಬಿಕೆಯ ಪ್ರಕಾರ, ಭಾನುವಾರದಂದು ಜನರು ಚರ್ಚ್‌ಗೆ ಹೋಗಿ ಅಲ್ಲಿ ನಡೆಯುವ ವಿಶೇಷ ಪ್ರಾರ್ಥನೆಗಳಲ್ಲಿ ಭಾಗವಹಿಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಬ್ರಿಟಿಷರು ತಂದ ಈ ನಿಯಮ ಇಂದಿಗೂ ಜಗತ್ತಿನ ಬಹುತೇಕ ಭಾಗಗಳಲ್ಲಿ ಮುಂದುವರಿದಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:19 am, Sun, 24 May 26

Source link

Optical Illusion: ಈ ಚಿತ್ರದಲ್ಲಿ o ಅಕ್ಷರಗಳ ನಡುವೆ ಇರುವ ಸೊನ್ನೆಯನ್ನು ಗುರುತಿಸಬಲ್ಲಿರಾ – Kannada News | Optical illusion: If your eyes are sharp, can you tell where the zero is in this picture

ಆಪ್ಟಿಕಲ್‌ ಇಲ್ಯೂಷನ್‌ Image Credit source: Tv9 Telugu

ಆಪ್ಟಿಕಲ್‌ ಇಲ್ಯೂಷನ್‌ (optical illusion) ಅಥವಾ ಒಗಟಿನ ಆಟಗಳು ಎಲ್ಲರ ಗಮನ ಸೆಳೆಯುತ್ತಿರುತ್ತವೆ. ಇದು ನಿಮ್ಮ ಮೆದುಳಿಗೆ ವ್ಯಾಯಾಮ ನೀಡುವುದು ಮಾತ್ರವಲ್ಲ, ಬುದ್ಧಿವಂತಿಕೆಗೆ ಸವಾಲಾಗಿದೆ. ಈ ಇಲ್ಯೂಷನ್ ಚಿತ್ರವನ್ನು ನೋಡುವಾಗ ಸುಲಭವಾಗಿ ಕಂಡರೂ ಒಗಟು ಬಿಡಿಸುವುದು ಹೇಳುವಷ್ಟು ಸುಲಭವಲ್ಲ. ಇದೀಗ ವೈರಲ್ ಆಗಿರುವ ಒಗಟಿನ ಚಿತ್ರದಲ್ಲಿ o ಅಕ್ಷರಗಳ ನಡುವೆ ಅಡಗಿರುವ ಸೊನ್ನೆಯನ್ನು ಗುರುತಿಸಬೇಕು. ಈ ಒಗಟು ಬಿಡಿಸಲು ನಿಮಗೆ ಇರುವ ಸಮಯಾವಕಾಶ 10 ಸೆಕೆಂಡುಗಳು ಮಾತ್ರ ಎಂಬುದು ತಲೆಯಲ್ಲಿರಲಿ.

ಈ ಚಿತ್ರದಲ್ಲಿ ಏನಿದೆ ಎಂದು ನೋಡಿ

ಮೆದುಳಿನ ಕಸರತ್ತು ಆಟಗಳಲ್ಲಿ ಇದು ಒಂದು. ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಸೊನ್ನೆಗಳು ಕಾಣಿಸುತ್ತದೆ. ಆದರೆ ಇದು ಸೊನ್ನೆಗಳಲ್ಲ, o ಅಕ್ಷರಗಳು. ಇವುಗಳ ನಡುವೆ ಸೊನ್ನೆ ಸಂಖ್ಯೆಯೂ ಇದೆ. ಈ ಶೂನ್ಯ ಸಂಖ್ಯೆಯನ್ನು ನೀವು 10 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ನೀವು ಈ ಸವಾಲಿಗೆ ಸಿದ್ಧರಿದ್ದರೆ, ನಿಮ್ಮ ಟೈಮ್ ಈಗ ಶುರುವಾಗುತ್ತದೆ.

ಇದನ್ನೂ ಓದಿ: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿರುವ ವೃತ್ತಗಳನ್ನು ಗುರುತಿಸಬಲ್ಲಿರಾ

ನಿಮಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಯಿತೇ?

ಈ ಚಿತ್ರ ನೋಡಿದಾಗ ನಿಮ್ಮ ಕಾಣಿಸುವುದೆಲ್ಲವೂ ಸೊನ್ನೆಗಳು ಎಂದು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಅವೆಲ್ಲವೂ ‘O’ ಅಕ್ಷರಗಳು. ಇಲ್ಲಿ ಶೂನ್ಯ (0) ಸಂಖ್ಯೆಯಿದ್ದು, ನೀವು ಉತ್ತರ ಗುರುತಿಸಲು ಸಾಧ್ಯವಾದರೆ ನಿಮಗೆ ಅಭಿನಂದನೆಗಳು. ನೀವು ತುಂಬಾ ಬುದ್ಧಿವಂತರು ಎನ್ನುವುದು ಖಚಿತವಾಯಿತು. ಉತ್ತರ ಸಿಗದಿದ್ದಕ್ಕೆ ಹೆಚ್ಚು ಚಿಂತಿಸಬೇಡಿ. ಕೆಳಗಿನ ಫೋಟೋದಲ್ಲಿ ನಿಮಗಾಗಿ ಉತ್ತರವನ್ನು ಗುರುತಿಸಿದ್ದೇವೆ. ಶೂನ್ಯ ಸಂಖ್ಯೆ ನಿಮ್ಮ ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ವ್ಯಕ್ತಿ ಬಲಿ! – Kannada News | Karnataka Rain Havoc: One Dead in Koppal, Hailstorms Lash Belagavi, Alerts Issued

ಕೊಪ್ಪಳ, ಮೇ 24: ಜಿಲ್ಲೆಯಲ್ಲಿ ಭಾರಿ ಮಳೆಯ ಅಬ್ಬರಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಕೊಪ್ಪಳ ತಾಲೂಕಿನ ಕಾಮನೂರು ಬಳಿ ಗಾಳಿ ಮಳೆಗೆ ಮರ ಬಿದ್ದು, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಿರಣ್ ಕರಬಡಿಗೆ ಮೃತಪಟ್ಟಿದ್ದಾರೆ. ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೇ 29ರವರೆಗೂ ರಾಜ್ಯಾದ್ಯಂತ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮತ್ತು ಕೊಪ್ಪಳ ಹಾಗೂ ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರ್ಗಿ, ಜಂಬಗಿ ಮತ್ತು ಕಲುತ್ತಿ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಬಿದ್ದಿದೆ. ಗಾಳಿ ಸಹಿತ ಮಳೆಗೆ ಹಲವು ಕಡೆ ಮರಗಳು ಧರೆಗುರುಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Gold Rate: ಹತ್ತು ದಿನದಲ್ಲಿ ಚಿನ್ನದ ಬೆಲೆ 300 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 24th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 24: ಚಿನ್ನದ ಬೆಲೆಯಲ್ಲಿ ಏರಿಳಿತದ ಆಟ ನಡೆಯುತ್ತಿದೆ. ಶುಕ್ರವಾರ ಗ್ರಾಮ್​ಗೆ 40 ರೂ ಹೆಚ್ಚಿದ್ದ ಇದರ ಬೆಲೆ ಈಗ ಅಷ್ಟೇ ಪ್ರಮಾಣದಲ್ಲಿ ಕಡಿಮೆಗೊಂಡಿದೆ. ಕಳೆದ 10 ದಿನದಲ್ಲಿ ಏರುಪೇರುಗಳೊಂದಿಗೆ ಚಿನ್ನದ ಬೆಲೆಯಲ್ಲಿ (Gold Rates) ಸುಮಾರು 300 ರೂನಷ್ಟು ಕಡಿಮೆ ಆಗಿರುವುದು ಗಮನಾರ್ಹ. ವಿದೇಶಗಳಲ್ಲೂ ಈ ಏರಿಳಿಕೆಯ ಆಟ ನಡೆಯುತ್ತಿದೆ. ಬೆಳ್ಳಿ ಬೆಲೆಯಲ್ಲೂ ಹೀಗೆ ಏರಿಕೆ, ಇಳಿಕೆಗಳು ಆಗುತ್ತಲೇ ಇವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,45,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,59,060 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,45,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 24ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,906 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,580 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,929 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,906 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,580 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,580 ರೂ
  • ಚೆನ್ನೈ: 14,730 ರೂ
  • ಮುಂಬೈ: 14,580 ರೂ
  • ದೆಹಲಿ: 14,595 ರೂ
  • ಕೋಲ್ಕತಾ: 14,580 ರೂ
  • ಕೇರಳ: 14,580 ರೂ
  • ಅಹ್ಮದಾಬಾದ್: 14,585 ರೂ
  • ಜೈಪುರ್: 14,595 ರೂ
  • ಲಕ್ನೋ: 14,595 ರೂ
  • ಭುವನೇಶ್ವರ್: 14,580 ರೂ

ಇದನ್ನೂ ಓದಿ: Petrol Diesel Price Hike: ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಬೆಂಗಳೂರಲ್ಲಿ ಎಷ್ಟಿದೆ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 556 ರಿಂಗಿಟ್ (13,398 ರುಪಾಯಿ)
  • ದುಬೈ: 503 ಡಿರಾಮ್ (13,097 ರುಪಾಯಿ)
  • ಅಮೆರಿಕ: 141 ಡಾಲರ್ (13,484 ರುಪಾಯಿ)
  • ಸಿಂಗಾಪುರ: 180.20 ಸಿಂಗಾಪುರ್ ಡಾಲರ್ (13,464 ರುಪಾಯಿ)
  • ಕತಾರ್: 500 ಕತಾರಿ ರಿಯಾಲ್ (13,118 ರೂ)
  • ಸೌದಿ ಅರೇಬಿಯಾ: 514 ಸೌದಿ ರಿಯಾಲ್ (13,099 ರುಪಾಯಿ)
  • ಓಮನ್: 53.55 ಒಮಾನಿ ರಿಯಾಲ್ (13,302 ರುಪಾಯಿ)
  • ಕುವೇತ್: 41.63 ಕುವೇತಿ ದಿನಾರ್ (12,997 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 295 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 295 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 295 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಡವಾಗಿ ಪರೀಕ್ಷಾ ಕೇಂದ್ರ ತಲುಪಿದ್ದಕ್ಕೆ ಎಕ್ಸಾಂಗೆ ನಿರಾಕರಣೆ: ವಿದ್ಯಾರ್ಥಿಯ UPSC ಕನಸು ನುಂಗಿತಾ ಬೆಂಗಳೂರಿನ ರಸ್ತೆಗಳು? – Kannada News | Bengaluru’s Pothole Ridden Roads Allegedly Cost Student a UPSC Exam Chance

ಬೆಂಗಳೂರು, ಮೇ 24: ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುವ ಬೆಂಗಳೂರಿನ (Bengaluru) ರಸ್ತೆಗಳ ದುರಾವಸ್ಥೆ ಈಗ ಮತ್ತೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಗರದ ಕಿತ್ತುಹೋದ ರೋಡ್​​ಗಳಿಂದ ವಿದ್ಯಾರ್ಥಿಯೋರ್ವ UPSC ಪರೀಕ್ಷೆಯಿಂದ ವಂಚಿತನಾಗಿರುವ ಆರೋಪ ಕೇಳಿಬಂದಿದೆ. ವೈಟ್​​ಫೀಲ್ಡ್​, ಮಹಾದೇವಪುರ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಿದ್ಯಾರ್ಥಿ ಚಾಲುಕ್ಯ ಸರ್ಕಲ್ ಆರ್. ಸಿ. ಕಾಲೇಜಿನ ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಗೇಟ್​​ ಕ್ಲೋಸ್​​ ಆಗಿದೆ. ಹೀಗಾಗಿ ಯುಪಿಎಸ್​​ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಯ ಶ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಮುಖ್ಯಾಂಶಗಳು

  • ಮತ್ತೆ ಮುನ್ನೆಲೆಗೆ ಬಂದ ಬೆಂಗಳೂರು ರಸ್ತೆಗಳು ದುರಾವಸ್ಥೆ ವಿಚಾರ
  • ನಗರದ ರಸ್ತೆಗುಂಡಿಗಳಿಗೆ ವಿದ್ಯಾರ್ಥಿಯ UPSC ಕನಸು ಬಲಿ?
  • ವಿದ್ಯಾರ್ಥಿ ಪರೀಕ್ಷಾ ಕೇಂದ್ರ ತಲುಪುವುದರೊಳಗೆ ಗೇಟ್​​ ಕ್ಲೋಸ್​​!

ವಿದ್ಯಾರ್ಥಿಯ ಬೇಸರ

ಇನ್ನು ಹದಗೆಟ್ಟ ರಸ್ತೆಗಳ ಕಾರಣ ಪರೀಕ್ಷಾ ಕೇಂದ್ರ ತಲುಪಲು ತಡವಾಗಿ ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿ ಪ್ರಮೋದ್​​ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವೈಟ್​​ಫೀಲ್ಡ್​​ನಲ್ಲಿರುವ ತನ್ನ ಮನೆಯಿಂದ ಮುಂಜಾನೆ 7 ಗಂಟೆಗೆ ಹೊರಟಿದ್ದೆ. ಮೆಜೆಸ್ಟಿಕ್​​ನಿಂದ ಪರೀಕ್ಷಾ ಕೇಂದ್ರದವರೆಗೆ ಆಟೋದಲ್ಲಿ ಬಂದಿದ್ದೇನೆ. ವೈಟ್​​ಫೀಲ್ಡ್​​ , ಮಹಾದೇವಪುರ ರಸ್ತೆ ಸರಿಯಿಲ್ಲದ ಕಾರಣ, ಆಟೋಗಳು ಬರಲ್ಲ. ಹೀಗಾಗಿ ಪರೀಕ್ಷಾ ಕೇಂದ್ರ ತಲುಪುವಾಗ ತಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಯುಪಿಎಸ್​​ಸಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಅಧಿಕಾರಿಗಳಿಗೂ ಮನವಿ ಮಾಡಿದ್ದೇನೆ. ಬೆಂಗಳೂರಿನ ರೋಡ್​​ಗಳ ಸ್ಥಿತಿ ಬಗ್ಗೆ ನಿಮಗೆ ಗೊತ್ತಿದೆ. ಹೀಗಾಗಿ ಮನವಿಯನ್ನು ದಯವಿಟ್ಟು ಪರಿಗಣಿಸಿ ಎಂದಿದ್ದೆ. ಆದರೆ ಪ್ರವೇಶದ ಸ್ಕ್ರೀನಿಂಗ್ ಕ್ಲೋಸ್ ಹಿನ್ನಲೆ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ ಎಂದು ವಿದ್ಯಾರ್ಥಿ ಅಳಲುತೋಡಿಕೊಂಡಿದ್ದಾರೆ.

ಇದನ್ನೂ ಓದಿ: ತುಮಕೂರು ಮೆಟ್ರೋ ವಿಸ್ತರಣೆ ಬಗ್ಗೆ ಬಿಗ್​​​​ ಅಪ್ಡೇಟ್​ ನೀಡಿದ ಗೃಹಸಚಿವ ಡಾ. ಜಿ. ಪರಮೇಶ್ವರ್

ಇನ್ನು ಒಟ್ಟು 6 ವಿದ್ಯಾರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಕಾರಣ ಎಕ್ಸಾಂ ವಂಚಿತರಾಗಿದ್ದಾರೆ. 9 ಗಂಟೆಗೆ ಕರೆಕ್ಟ್ ಗೇಟ್ ಕ್ಲೋಸ್ ಮಾಡಿದ್ದು, ಒಂದು ನಿಮಿಷ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದ ಕಾರಣ ಯುಪಿಎಸ್​​ಸಿ ಬರೆಯಲು ಕೆಲವರಿಗೆ ಸಾಧ್ಯವಾಗಿಲ್ಲ. ನೀಟ್ ಪರೀಕ್ಷೆಯ ಗಲಾಟೆ ಗದ್ದಲಗಳ ನಡುವೆ ಬೆಂಗಳೂರು ಸೇರಿ ದೇಶಾದ್ಯಂತ ಯುಪಿಎಸ್​ಸಿ ಪ್ರಿಲಿಮ್ಸ್‌ ಪರೀಕ್ಷೆ ನಡೆದಿದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ UPSC ಪೂರ್ವಭಾವಿ ಪರೀಕ್ಷೆಗೆ ಸೂಕ್ತ ಪೊಲೀಸ್​​ ಭದ್ರತೆ ಕೈಗೊಳ್ಳಲಾಗಿದ್ದು, ರಾಜ್ಯದ ಬೆಂಗಳೂರು, ಧಾರವಾಡ ಮತ್ತು ಮೈಸೂರಿನಲ್ಲಿ ಪ್ರಿಲಿಮ್ಸ್‌ ಪರೀಕ್ಷೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೋಹಿತ್ 200 ಹೊಡಿಲಿ, ಸೂರ್ಯವಂಶಿ ಡಕೌಟ್ ಆಗಲಿ: ಚಹಲ್ ಪ್ರಾರ್ಥನೆ! – Kannada News | IPL 2026: Yuzvendra Chahal’s Hilarious Playoff Qualification Logic Goes Viral

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 68 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಮೂಲಕ ಮೂರು ತಂಡಗಳು ಪ್ಲೇಆಫ್​ಗೇರಿದರೆ, ಮೂರು ತಂಡಗಳ ನಡುವೆ ಒಂದು ಸ್ಥಾನಕ್ಕಾಗಿ ಪೈಪೋಟಿ ಮುಂದುವರೆದಿದೆ. ಈ ಪೈಪೋಟಿಯಲ್ಲಿರುವ ತಂಡಗಳೆಂದರೆ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್. ಈ ಮೂರು ತಂಡಗಳ ಭವಿಷ್ಯ ನಿರ್ಧರಿಸುವುದು ಮುಂಬೈ ಇಂಡಿಯನ್ಸ್ ಎಂಬುದು ವಿಶೇಷ.

ಅಂದರೆ ಐಪಿಎಲ್​ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ ಮಾತ್ರ ಪಂಜಾಬ್ ಕಿಂಗ್ಸ್​ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪ್ಲೇಆಫ್​ ರೇಸ್​ನಲ್ಲಿರಲಿವೆ. ಒಂದು ವೇಳೆ ಮುಂಬೈ ಇಂಡಿಯನ್ಸ್​ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆದ್ದರೆ ಆರ್​ಆರ್​ ತಂಡ ಪ್ಲೇಆಫ್​ಗೇರಲಿದೆ. ಹೀಗಾಗಿಯೇ ಮುಂಬೈ ಇಂಡಿಯನ್ಸ್ ತಂಡದ ಗೆಲುವನ್ನು ಪಂಜಾಬ್ ಕಿಂಗ್ಸ್ ಎದುರು ನೋಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪಂಜಾಬ್ ಕಿಂಗ್ಸ್ ಆಟಗಾರ ಯುಜ್ವೇಂದ್ರ ಚಹಲ್, “ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 200 ರನ್ ಗಳಿಸಲಿ ಮತ್ತು ರಾಜಸ್ಥಾನ್ ರಾಯಲ್ಸ್‌ನ ವೈಭವ್ ಸೂರ್ಯವಂಶಿ ಮೊದಲ ಎಸೆತದಲ್ಲೇ (ಗೋಲ್ಡನ್ ಡಕ್) ಔಟ್ ಆಗಲಿ. ಹೀಗಾದ್ರೆ ನಾವು ಸುಲಭವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯಬಹುದು” ಎಂದು ಹಾಸ್ಯಭರಿತವಾಗಿ ಆಶಿಸಿದ್ದಾರೆ.

ಪ್ರಸ್ತುತ ಅಂಕಪಟ್ಟಿಯ ಲೆಕ್ಕಾಚಾರದ ಪ್ರಕಾರ, ನಾಲ್ಕನೇ ಪ್ಲೇಆಫ್ ಸ್ಥಾನಕ್ಕಾಗಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್  ತಂಡಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಪಂಜಾಬ್ ಕಿಂಗ್ಸ್​ ತಂಡ ಮುಂದಿನ ಹಂತಕ್ಕೆ ಲಗ್ಗೆ ಇಡಬೇಕಾದರೆ ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲೇಬೇಕು. ಹೀಗಾಗಿಯೇ ಚಹಲ್ ರೋಹಿತ್ ಶರ್ಮಾ ಡಬಲ್ ಸೆಂಚುರಿ ಬಾರಿಸಿ ಮುಂಬೈ ಇಂಡಿಯನ್ಸ್ ಗೆಲ್ಲಲಿ ಎಂದು ಆಶಿಸಿದ್ದಾರೆ.

ಸೆಂಚುರಿ ಪ್ರಾರ್ಥನೆ!

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಒಬ್ಬ ಬ್ಯಾಟರ್ ಇನಿಂಗ್ಸ್‌ ಒಂದರಲ್ಲಿ 200 ರನ್ ಗಳಿಸುವುದು ಸದ್ಯಕ್ಕಂತೂ ಅಸಾಧ್ಯದ ಮಾತು. ಆದರೆ ತಮ್ಮ ತಂಡವನ್ನು ಪ್ಲೇಆಫ್ ತಲುಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ‘ಯುಝಿ’, ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ರೋಹಿತ್ ಶರ್ಮಾ ಅಬ್ಬರಿಸಿ ಟಿ20 ಯಲ್ಲೇ ಚೊಚ್ಚಲ ದ್ವಿಶತಕ ಬಾರಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ತಾಳ್ಮೆಯನ್ನೂ ಪರೀಕ್ಷಿಸುತ್ತದೆ… ಸಚಿನ್ ತೆಂಡೂಲ್ಕರ್ ಭಾವುಕ ಪೋಸ್ಟ್ !

ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಲು, ಅವರ 15 ವರ್ಷದ ಯುವ ಸ್ಫೋಟಕ ಓಪನರ್ ವೈಭವ್ ಸೂರ್ಯವಂಶಿ ಮೊದಲ ಬಾಲ್‌ನಲ್ಲೇ ಖಾತೆ ತೆರೆಯದೆ ಪೆವಿಲಿಯನ್ ಸೇರಲಿ ಎಂದು ಚಹಲ್ ಕಾಲೆಳೆದಿದ್ದಾರೆ.

ಚಹಲ್ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಮತ್ತು ಫೇಸ್‌ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಮೀಮ್ಸ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.  “ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹತಾಶೆಯ ಮತ್ತು ಅಷ್ಟೇ ತಮಾಷೆಯ ಪ್ಲೇಆಫ್ ಪ್ರಾರ್ಥನೆ ಇದು” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Source link

ಕ್ರಿಕೆಟ್ ತಾಳ್ಮೆಯನ್ನೂ ಪರೀಕ್ಷಿಸುತ್ತದೆ… ಸಚಿನ್ ತೆಂಡೂಲ್ಕರ್ ಭಾವುಕ ಪೋಸ್ಟ್ ! – Kannada News | Sachin Tendulkar’s Emotional Post for Son Arjun’s IPL Debut Goes Viral

ಕ್ರಿಕೆಟ್ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಅವರ ಐಪಿಎಲ್ 2026ರ ಸೀಸನ್‌ನ ಮೊದಲ ಪಂದ್ಯದ ಪ್ರದರ್ಶನವನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೃದಯಸ್ಪರ್ಶಿ ಸಂದೇಶವೊಂದು ಸದ್ಯ ಭಾರಿ ವೈರಲ್ ಆಗಿದೆ. ಶನಿವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಪರ ಅರ್ಜುನ್ ತೆಂಡೂಲ್ಕರ್ ಈ ಸೀಸನ್‌ನ ತಮ್ಮ ಮೊದಲ ಪಂದ್ಯವನ್ನು ಆಡಿದರು.

ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ತಂಡಕ್ಕೆ ಟ್ರೇಡ್ ಆಗಿದ್ದ ಅರ್ಜುನ್, ಇಡೀ ಸೀಸನ್ ಬೆಂಚ್ ಕಾಯ್ದ ನಂತರ ಕೊನೆಯ ಲೀಗ್ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಪಡೆದರು. ಈ ಸುದೀರ್ಘ ಕಾಯುವಿಕೆ ಮತ್ತು ಅವರ ಶ್ರಮವನ್ನು ಕಂಡು ತಂದೆಯಾಗಿ ಸಚಿನ್ ಭಾವುಕರಾಗಿದ್ದಾರೆ.

“ತಾಳ್ಮೆಯಿಂದ ಕಾಯ್ದು ಗೆದ್ದೆ”

ಪಂದ್ಯ ಮುಗಿದ ತಕ್ಷಣ ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ X (ಟ್ವಿಟರ್) ಖಾತೆಯಲ್ಲಿ ಮಗನನ್ನು ಬೆನ್ನುತಟ್ಟಿ ಸುದೀರ್ಘ ಸಂದೇಶ ಬರೆದಿದ್ದಾರೆ:

“ಅರ್ಜುನ್, ನಿನ್ನ ಬಗ್ಗೆ ಹೆಮ್ಮೆಯಾಗುತ್ತಿದೆ. ಈ ಇಡೀ ಸೀಸನ್‌ನಲ್ಲಿ ನಿನ್ನನ್ನು ನೀನು ಮುನ್ನಡೆಸಿಕೊಂಡ ರೀತಿ ಅದ್ಭುತ. ನಿನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ಅತ್ಯಂತ ತಾಳ್ಮೆಯಿಂದ, ಸದ್ದಿಲ್ಲದೆ ಕಠಿಣ ಪರಿಶ್ರಮ ಪಡುತ್ತಾ ಪಾಸಿಟಿವ್ ಆಗಿದ್ದೆ. ಕೊನೆಯ ಪಂದ್ಯದವರೆಗೂ ಅವಕಾಶಕ್ಕಾಗಿ ಕಾಯಬೇಕಾಗಿ ಬಂದರೂ ನೀನು ಧೃತಿಗೆಡಲಿಲ್ಲ. ಕ್ರಿಕೆಟ್ ಕೌಶಲ್ಯದಷ್ಟೇ ಮನುಷ್ಯನ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ಇಂದು ನೀನು ಇವೆರಡನ್ನೂ ಅತ್ಯಂತ ಸುಂದರವಾಗಿ ನಿಭಾಯಿಸಿದ್ದೀಯಾ. ಸದಾ ನೆಲದ ಮೇಲೆಯೇ ನಿನ್ನ ಕಾಲುಗಳಿರಲಿ, ಆಟದ ಮೇಲಿನ ನಿನ್ನ ಪ್ರೀತಿ ಹೀಗೆಯೇ ಮುಂದುವರಿಯಲಿ.” ಎಂದು ಸಚಿನ್ ತೆಂಡೂಲ್ಕರ್ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಗೌತಮ್ ಗಂಭೀರ್ ಕೊಕ್ಕೆ?

ಅರ್ಜುನ್ ಪ್ರದರ್ಶನ ಹೇಗಿತ್ತು?

ಲಕ್ನೋ ಸೂಪರ್ ಜೈಂಟ್ಸ್​ ತಂಡವು ಈ ಪಂದ್ಯದಲ್ಲಿ ಸೋಲನ್ನು ಅನುಭವಿಸಿದರೂ, ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ತಮ್ಮ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದರು.

    •  ಅತ್ಯುತ್ತಮ ಯಾರ್ಕರ್: ಪಂಜಾಬ್ ಕಿಂಗ್ಸ್ ತಂಡದ ಅಪಾಯಕಾರಿ ಓಪನರ್ ಪ್ರಭ್‌ಸಿಮ್ರಾನ್ ಸಿಂಗ್ ಅವರಿಗೆ ತೀಕ್ಷ್ಣವಾದ ಯಾರ್ಕರ್ ಎಸೆಯುವ ಮೂಲಕ ಕ್ಲೀನ್ ಬೌಲ್ ಮಾಡಿ, ಐಪಿಎಲ್ 2026ರ ತಮ್ಮ ಮೊದಲ ವಿಕೆಟ್ ಪಡೆದರು.
    • ಮಿತವ್ಯಯದ ಬೌಲಿಂಗ್: ಲಕ್ನೋ ತಂಡದ ಇತರ ಅನುಭವಿ ಬೌಲರ್‌ಗಳು ರನ್ ಬಿಟ್ಟುಕೊಡಲು ಪರದಾಡುತ್ತಿದ್ದಾಗ, ಅರ್ಜುನ್ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 36 ರನ್ ನೀಡಿ 1 ವಿಕೆಟ್ ಪಡೆದು ಅತ್ಯಂತ ಕಂಟ್ರೋಲ್ಡ್ ಬೌಲಿಂಗ್ ಪ್ರದರ್ಶಿಸಿದರು.

ನೆಟ್ಟಿಗರ ಮನಗೆದ್ದ ಸಚಿನ್ ಮಾತು:

ಸ್ಟಾರ್ ಕ್ರಿಕೆಟರ್ ಮಗನಾಗಿದ್ದರೂ ಯಾವುದೇ ಹಮ್ಮು-ಬಿಮ್ಮಿಲ್ಲದೆ, ತಂಡದಲ್ಲಿ ಅವಕಾಶ ಸಿಗದಿದ್ದರೂ ಸದ್ದಿಲ್ಲದೆ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದ ಅರ್ಜುನ್ ತೆಂಡೂಲ್ಕರ್ ಅವರ ಶಿಸ್ತು ಹಾಗೂ ಅದಕ್ಕೆ ತಕ್ಕಂತೆ ಸಚಿನ್ ನೀಡಿರುವ ಮಾರ್ಗದರ್ಶನಕ್ಕೆ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಂದೆಯಾಗಿ ಸಚಿನ್ ನೀಡಿರುವ ಈ ಕಿವಿಮಾತು ಕೇವಲ ಅರ್ಜುನ್ ಗೆ ಮಾತ್ರವಲ್ಲ, ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ಯುವ ಕ್ರಿಕೆಟಿಗನಿಗೂ ಪ್ರೇರಣೆಯಾಗಿದೆ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

Source link

Hanuman Flag Vastu: ಮನೆಯ ಮೇಲೆ ಹಾರಾಡಲಿ ಹನುಮದ್ ಧ್ವಜ; ಇಲ್ಲಿದೆ ಅಸಲಿ ವಾಸ್ತು ರಹಸ್ಯ! – Kannada News | Hanuman Flag Vastu: Benefits, Placement and Home Protection

ಮನೆಯ ಮೇಲ್ಛಾವಣಿಯ ಮೇಲೆ ಹನುಮದ್ ಧ್ವಜImage Credit source: Pinterest

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ವಸ್ತುವಿಗೂ ವಿಶೇಷ ಪ್ರಾಮುಖ್ಯತೆ ಇರುತ್ತದೆ. ಸನಾತನ ಧರ್ಮದಲ್ಲಿ ಆಂಜನೇಯ ಸ್ವಾಮಿಯನ್ನು ಸಕಲ ಭಯ ನಿವಾರಕ, ಸಂಕಟಮೋಚನ ಎಂದು ಆರಾಧಿಸಲಾಗುತ್ತದೆ. ಸಾಮಾನ್ಯವಾಗಿ ಅನೇಕರು ತಮ್ಮ ಮನೆಯ ಮೇಲ್ಛಾವಣಿಯ (ಟೆರೇಸ್) ಮೇಲೆ ಹನುಮಂತನ ಚಿತ್ರವಿರುವ ಕೆಂಪು ಅಥವಾ ಕೇಸರಿ ಧ್ವಜವನ್ನು ಹಾರಿಸುವುದನ್ನು ನೀವು ನೋಡಿರಬಹುದು. ಕೆಲವರು ಇದನ್ನು ಕೇವಲ ಒಂದು ಧಾರ್ಮಿಕ ಪದ್ಧತಿ ಎಂದು ಭಾವಿಸುತ್ತಾರೆ. ಆದರೆ ಇದರ ಹಿಂದೆ ಅತ್ಯಂತ ಶಕ್ತಿಶಾಲಿ ವಾಸ್ತು ನಿಯಮಗಳು ಮತ್ತು ಧನಾತ್ಮಕ ಶಕ್ತಿ ಅಡಗಿದೆ ಎಂದು ತಜ್ಞರು ಹೇಳುತ್ತಾರೆ.

ಮನೆಯ ಮೇಲೆ ಹನುಮದ್ ಧ್ವಜವನ್ನು ಸ್ಥಾಪಿಸುವುದರಿಂದ ಸಿಗುವ ಲಾಭಗಳು ಮತ್ತು ವಾಸ್ತು ನಿಯಮಗಳು ಇಲ್ಲಿವೆ:

ನಕಾರಾತ್ಮಕ ಶಕ್ತಿಗಳ ನಾಶ (ದುಷ್ಟ ಶಕ್ತಿಗಳಿಂದ ರಕ್ಷಣೆ):

ಯಾವ ಮನೆಯ ಮೇಲೆ ಹನುಮಂತನ ಧ್ವಜವು ಸದಾ ಹಾರಾಡುತ್ತಿರುತ್ತದೆಯೋ, ಅಲ್ಲಿ ನಕಾರಾತ್ಮಕ ಶಕ್ತಿಗಳು (Negative Energy) ಪ್ರವೇಶಿಸಲು ಸಾಧ್ಯವಿಲ್ಲ. ಗಾಳಿಯಲ್ಲಿ ಧ್ವಜವು ಹಾರಾಡುವಾಗ ಉಂಟಾಗುವ ಕಂಪನಗಳು ಮನೆಯ ಸುತ್ತಮುತ್ತಲಿರುವ ಕೆಟ್ಟ ದೃಷ್ಟಿ, ಮಾಟ-ಮಂತ್ರದಂತಹ ಕೆಟ್ಟ ಪ್ರಭಾವಗಳು ಮತ್ತು ದುಷ್ಟ ಶಕ್ತಿಗಳನ್ನು ಸಂಪೂರ್ಣವಾಗಿ ದೂರವಿಡುತ್ತದೆ ಎಂದು ನಂಬಲಾಗಿದೆ.

ಧನಾತ್ಮಕ ಶಕ್ತಿಯ ವೃದ್ಧಿ ಮತ್ತು ಮಾನಸಿಕ ಶಾಂತಿ:

ಮನೆಯ ಮೇಲಿರುವ ಧ್ವಜವು ಸದಾ ಧನಾತ್ಮಕ ಶಕ್ತಿಯನ್ನು (Positive Energy) ಆಕರ್ಷಿಸುತ್ತದೆ. ಇದು ಮನೆಯಲ್ಲಿ ವಾಸಿಸುವ ಸದಸ್ಯರಿಗೆ ನೆಮ್ಮದಿ, ಧೈರ್ಯ ಮತ್ತು ಮಾನಸಿಕ ಶಾಂತಿಯನ್ನು ನೀಡುತ್ತದೆ. ಕೌಟುಂಬಿಕ ಕಲಹಗಳು ದೂರವಾಗಿ, ಶಾಂತಿ-ಸಹಬಾಳ್ವೆ ನೆಲೆಸುತ್ತದೆ.

ಆರ್ಥಿಕ ಅಡಚಣೆಗಳ ನಿವಾರಣೆ:

ಮನೆಯ ಆರ್ಥಿಕ ಪರಿಸ್ಥಿತಿಯಲ್ಲಿ ಪದೇ ಪದೇ ಏರುಪೇರಾಗುತ್ತಿದ್ದರೆ ಅಥವಾ ಸಾಲದ ಬಾಧೆ ಕಾಡುತ್ತಿದ್ದರೆ ಹನುಮದ್ ಧ್ವಜವನ್ನು ಹಾರಿಸುವುದು ಒಳ್ಳೆಯದು. ಇದು ವ್ಯಾಪಾರ-ಉದ್ಯೋಗದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಿ, ಸಂಪತ್ತು ಮತ್ತು ಹೊಸ ಪ್ರಗತಿಯ ಅವಕಾಶಗಳು ಹುಡುಕಿಕೊಂಡು ಬರುವಂತೆ ಮಾಡುತ್ತದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಧ್ವಜವನ್ನು ಸ್ಥಾಪಿಸಲು ವಾಸ್ತು ಪ್ರಕಾರ ಸರಿಯಾದ ದಿಕ್ಕು ಯಾವುದು?

ಮನೆಯ ಮೇಲೆ ಧ್ವಜವನ್ನು ಸ್ಥಾಪಿಸುವುದು ಎಷ್ಟು ಮುಖ್ಯವೋ, ಅದನ್ನು ಸರಿಯಾದ ದಿಕ್ಕಿನ ಆಯ್ಕೆ ಅಷ್ಟೇ ಮುಖ್ಯ. ತಪ್ಪು ದಿಕ್ಕಿನಲ್ಲಿ ಧ್ವಜವನ್ನು ಹಾಕುವುದರಿಂದ ಧನಾತ್ಮಕ ಫಲಿತಾಂಶಗಳ ಬದಲಿಗೆ ತೊಂದರೆಗಳು ಎದುರಾಗಬಹುದು.

ನೈಋತ್ಯ ಮೂಲೆ (South-West Corner):

ವಾಸ್ತು ಶಾಸ್ತ್ರದ ಪ್ರಕಾರ, ಹನುಮದ್ ಧ್ವಜವನ್ನು ಯಾವಾಗಲೂ ಮನೆಯ ನೈಋತ್ಯ (ದಕ್ಷಿಣ-ಪಶ್ಚಿಮ) ಮೂಲೆಯಲ್ಲಿ ಸ್ಥಾಪಿಸಬೇಕು. ಈ ದಿಕ್ಕು ಸ್ಥಿರತೆ ಮತ್ತು ರಕ್ಷಣೆಯನ್ನು ಸೂಚಿಸುತ್ತದೆ. ಈ ಮೂಲೆಯಲ್ಲಿ ಧ್ವಜವನ್ನು ಸ್ಥಾಪಿಸುವುದರಿಂದ ಮನೆಗೆ ಭದ್ರತೆ ದೊರೆಯುತ್ತದೆ ಮತ್ತು ರಾಹು-ಕೇತುಗಳ ದೋಷಗಳು ನಿವಾರಣೆಯಾಗುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version