Headlines

ರಾಜಸ್ಥಾನ ಸರ್ಕಾರದಲ್ಲಿ ವಿದೇಶಿ ಪ್ರಯಾಣಕ್ಕೆ ಅವಕಾಶವಿಲ್ಲ, ಇವಿ ಅಳವಡಿಕೆಗೆ ಆದೇಶ – Kannada News | No foreign travel in the Rajasthan government, orders issued for EV adoption

ನವದೆಹಲಿ, ಮೇ 24: ರಾಜಸ್ಥಾನ (Rajasthan) ಸರ್ಕಾರವು ತನ್ನ ಆಡಳಿತಾತ್ಮಕ ವೆಚ್ಚಗಳನ್ನು ಗಣನೀಯವಾಗಿ ಕಡಿತಗೊಳಿಸಲು ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಉತ್ತೇಜಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಹಣದಲ್ಲಿ ವಿದೇಶದ ಪ್ರವಾಸದ ಮೇಲೆ ನಿರ್ಬಂಧ, ಕಾರ್‌ಪೂಲಿಂಗ್ ಕಡ್ಡಾಯ ಮತ್ತು ಇವಿ (ಎಲೆಕ್ಟ್ರಿಕ್ ವಾಹನ) ಅಳವಡಿಕೆ ಮುಂತಾದ ಪ್ರಮುಖ ನಿರ್ಧಾರಗಳನ್ನು ಒಳಗೊಂಡ ಅಧಿಕೃತ ಆದೇಶವನ್ನು ರಾಜ್ಯ ಹಣಕಾಸು ಇಲಾಖೆ ಹೊರಡಿಸಿದೆ. ರಾಜಸ್ಥಾನ ಸರ್ಕಾರದ ಪ್ರಮುಖ ನಿರ್ಧಾರಗಳು ಹೀಗಿವೆ: ಸರ್ಕಾರಿ ವೆಚ್ಚದಲ್ಲಿ ವಿದೇಶ ಪ್ರವಾಸಕ್ಕೆ ಬ್ರೇಕ್: ರಾಜಸ್ಥಾನ ಸರ್ಕಾರದ…

Read More

ಡಾ. ರಾಜ್ ಸಮಾಧಿ ಬಗ್ಗೆ ನಾನು ಹೇಳಿದ್ದರಲ್ಲಿ ಸತ್ಯ ಇದೆ ಅಂತ ಜನ ಒಪ್ಪಿದ್ದಾರೆ: ಚೇತನ್ ಅಹಿಂಸಾ – Kannada News | Chetan Ahimsa says Karnataka people approved his statement on Dr Rajkumar Samadhi

‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಅಹಿಂಸಾ ಅವರು ಡಾ. ರಾಜ್​ಕುಮಾರ್ ಸಮಾಧಿ (Dr Rajkumar Samadhi) ಬಗ್ಗೆ ನೀಡಿದ್ದ ಹೇಳಿಕೆಯಿಂದ ಸಾಕಷ್ಟು ವಿವಾದ ಆಗಿತ್ತು. ರಾಜ್​ಕುಮಾರ್ ಸಮಾಧಿಗೆ ಸರ್ಕಾರ ಎಕರೆಗಟ್ಟಲೆ ಜಾಗ ನೀಡಿದ್ದನ್ನು ಚೇತನ್ ಪ್ರಶ್ನಿಸಿದ್ದರು. ಅವರ ಹೇಳಿಕೆಯನ್ನು ರಾಜ್​ಕುಮಾರ್ (Dr Rajkumar) ಅಭಿಮಾನಿಗಳು ವಿರೋಧಿಸಿದರು. ಹಾಗಿದ್ದರೂ ಕೂಡ ಚೇತನ್ ಅವರು ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸರ್ಕಾರದ ಪಾಲಿಸಿಗೆ ಸಂಬಂಧಪಟ್ಟಂತೆ ನಾನು ಪ್ರಸ್ತಾಪ ಮಾಡಿದ್ದು….

Read More

ಮಂತ್ರಾಲಯದಲ್ಲಿ ಭಾರಿ ಮಳೆಯಿಂದ ಭಕ್ತರಿಗೆ ತೊಂದರೆ: ಭೋಜನಶಾಲೆ, ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ – Kannada News | Mantralaya Mutt Arranges Shelter for Devotees After Heavy Downpour

ರಾಯಚೂರು, ಮೇ 22: ಮಂತ್ರಾಲಯದಲ್ಲಿ ಭಾರಿ ಮಳೆಯ ಅಬ್ಬರದಿಂದ ಭಕ್ತರು ತೀವ್ರ ತೊಂದರೆಗೊಳಗಾದ ಘಟನೆ ನಡೆದಿದೆ. ರಾತ್ರಿ ಮಠದ ಪ್ರಾಂಗಣದಲ್ಲಿ ಮಲಗಿದ್ದ ಭಕ್ತರು ತಡರಾತ್ರಿ ಸುರಿದ ಅನಿರೀಕ್ಷಿತ ಮಳೆಯಿಂದ ನೆನೆದು ಪರದಾಡಿದರು. ಈ ಪರಿಸ್ಥಿತಿಯಲ್ಲಿ, ರಾಯರ ಭಕ್ತರ ನೆರವಿಗೆ ಮಂತ್ರಾಲಯ ಮಠ ಧಾವಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶ್ರೀಗಳು ತಕ್ಷಣವೇ ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾದರು. ಮಳೆಯಿಂದ ತೊಂದರೆಗೊಳಗಾದ ಭಕ್ತರನ್ನು ಅನ್ನಪೂರ್ಣೇಶ್ವರಿ ಭೋಜನಶಾಲೆ ಮತ್ತು ಕಲ್ಯಾಣ ಮಂಟಪಗಳಿಗೆ ತೆರಳುವಂತೆ ಸೂಚಿಸಲಾಯಿತು. ಖುದ್ದು ಸುಭುದೇಂದ್ರ ತೀರ್ಥ ಸ್ವಾಮೀಜಿಯೇ…

Read More

Minimum Wage: ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ 60ರಷ್ಟು ಹೆಚ್ಚಳ! – Kannada News | Karnataka Hikes Minimum Wages by 60 percent in 81 Sectors: Check Details

ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನ ಶೇ 60 ರಷ್ಟು ಹೆಚ್ಚಳ ಬೆಂಗಳೂರು, ಮೇ 24: ರಾಜ್ಯದ ಲಕ್ಷಾಂತರ ಕಾರ್ಮಿಕರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿರುವ ಕರ್ನಾಟಕ ಸರ್ಕಾರ, ವಿವಿಧ 81 ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು (Minimum Wage) ಶೇಕಡಾ 60 ರಷ್ಟು ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿ ಹೆಚ್ಚಳ ಮಾಡಿದೆ. ಈ ಐತಿಹಾಸಿಕ ನಿರ್ಧಾರವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಕಟಿಸಿದ್ದಾರೆ. ಮುಖ್ಯಾಂಶಗಳು ರಾಜ್ಯದ 81 ವಲಯಗಳ ಕಾರ್ಮಿಕರ ಕನಿಷ್ಠ ವೇತನ ಶೇಕಡಾ 60 ಹೆಚ್ಚಳವಾಗಿದೆ. ಬೆಂಗಳೂರಿನ ಉನ್ನತ…

Read More

ಬೆಳಗಾವಿಯಲ್ಲಿ 4,500 ಕೋಟಿ ರೂ. ವಂಚನೆ ಪ್ರಕರಣ: ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದವರಿಗೂ ಶುರುವಾಯ್ತು ನಡುಕ – Kannada News | Shivanand Neelannavar Scam: 35,000 Investors Await Justice as CID Probe Deepens

ಬೆಳಗಾವಿ, ಮೇ 24: 4,500 ಕೋಟಿ ವಂಚನೆ ಪ್ರಕರಣದಲ್ಲಿ ಸಿಐಡಿ ತನಿಖೆ ಚುರುಕುಗೊಂಡಿದೆ. ಶಿವಾನಂದ ನೀಲಣ್ಣವರ್ ಮಾಲೀಕತ್ವದ ಶಿವಂ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಸುಮಾರು 35,000 ಜನರು ಹೂಡಿಕೆ ಮಾಡಿದ್ದರು. ಇದೀಗ ಹಣ ಸಂದಾಯದ ಪರಿಶೀಲನೆ ನಡೆಯುತ್ತಿದ್ದು, ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದವರಿಗೂ ಆತಂಕ ಶುರುವಾಗಿದೆ. ಆರಂಭಿಕ ಹಂತದಲ್ಲಿ, ಹೂಡಿಕೆ ಮಾಡಿದ ಹಲವರು ತಮ್ಮ ಮೂಲ ಹೂಡಿಕೆಗಿಂತ ದುಪ್ಪಟ್ಟು ಲಾಭ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉದಾಹರಣೆಗೆ, 50 ಲಕ್ಷ ಹೂಡಿಕೆ ಮಾಡಿದವರು 1 ಕೋಟಿವರೆಗೂ ಲಾಭಾಂಶ ಪಡೆದಿದ್ದಾರೆ….

Read More

ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಗೌತಮ್ ಗಂಭೀರ್ ಕೊಕ್ಕೆ? – Kannada News | Gautam Gambhir’s Veto: Will It Block Shreyas Iyer’s T20I Captaincy?

ಭಾರತ ಟಿ20 ತಂಡದ ಮುಂದಿನ ನಾಯಕ ಯಾರು? ಈ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಆದರೆ ನೂತನ ನಾಯಕನ ಆಯ್ಕೆಯಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರವೇ ಅಂತಿಮವಾಗುವ ಸಾಧ್ಯತೆ ದಟ್ಟವಾಗಿದೆ. ಪ್ರಸ್ತುತ ನಾಯಕ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಕೈಕೊಟ್ಟಿರುವ ಕಾರಣ ಸೆಲೆಕ್ಟರ್‌ಗಳು ಹೊಸ ನಾಯಕನ ಹುಡುಕಾಟದಲ್ಲಿದ್ದಾರೆ. ಆದರೆ, ರೇಸ್‌ನಲ್ಲಿ ಮುಂಚೂಣಿಯಲ್ಲಿರಬೇಕಾಗಿದ್ದ ಶ್ರೇಯಸ್ ಅಯ್ಯರ್ ಅವರ ಹಾದಿಗೆ ಗಂಭೀರ್ ಅಡ್ಡಿಯಾಗಬಹುದು ಎಂಬ ವರದಿಗಳು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ. ಕ್ರೆಡಿಟ್ ವಾರ್ ಮತ್ತು…

Read More

ರಾಜ್ಯಸಭಾ ಚುನಾವಣೆಗೆ ‘ಕೈ’ನಲ್ಲಿ ಭಾರಿ ಪೈಪೋಟಿ: ಮುಂಚೂಣಿಯಲ್ಲಿವೆ ಕೆಲ ನಾಯಕರ ಹೆಸರು – Kannada News | Intense Race in Congress for Karnataka Rajya Sabha Seats: Supriya Shrinate, Pawan Khera, and BK Hariprasad in Frontrunners List

ಬೆಂಗಳೂರು, ಮೇ 24: ಜೂನ್ 18ರಂದು ನಡೆಯಲಿರುವ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್​​ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದ್ದು, ಪಕ್ಷದ ರಾಷ್ಟ್ರೀಯ ನಾಯಕರುಗಳಾದ ಸುಪ್ರಿಯಾ ಶ್ರಿನೇಟ್ ಮತ್ತು ಪವನ್​​ ಖೇರಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎನ್ನಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದಿಂದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸೇರಿದಂತೆ ಹಾಲಿ ಶಾಸಕರ ಅವಧಿ ಪೂರ್ಣಗೊಂಡ ನಂತರ ಜೂನ್ ಮತ್ತು ಜುಲೈನಲ್ಲಿ 24 ಸ್ಥಾನಗಳು…

Read More

ಜಸ್ಪ್ರೀತ್ ಬುಮ್ರಾ ಓರ್ವ ಫುಟ್‌ಬಾಲ್ ಆಟಗಾರ ಎಂದ ರಾಮ್ ಚರಣ್; ತಪ್ಪಿಗೆ ಕ್ಷಮೆ ಕೇಳಿದ ನಟ – Kannada News | Peddi actor Ram Charan calls Jasprit Bumrah a Footballer in Viral Video and apologizes

ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರು ಬಹುನಿರೀಕ್ಷಿತ ‘ಪೆದ್ದಿ’ (Peddi) ಸಿನಿಮಾದ ಗ್ರ್ಯಾಂಡ್ ಮ್ಯೂಸಿಕ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ನಟಿ ಜಾನ್ವಿ ಕಪೂರ್ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ಲಘು ಸಂವಾದದಲ್ಲಿ ರಾಮ್ ಚರಣ್ ಅವರು ಭಾರತೀಯ ಕ್ರಿಕೆಟರ್​ಗಳ ಬಗ್ಗೆ ಮಾತನಾಡುವಾಗ ಒಂದು ತಪ್ಪು ಆಗಿದೆ. ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು…

Read More

Rishabh Pant: ಸೋಲಿಗೆ ನಾನೊಬ್ಬನೇ ಜವಾಬ್ದಾರನಲ್ಲ… ಅವರು ಸಹ ಕಾರಣ! – Kannada News | Rishabh pant post match interview after lsg vs Pbks match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 68ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲನುಭವಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 196 ರನ್ ಕಲೆಹಾಕಿದ್ದರು. ಈ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ ಕೇವಲ 18 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಪಂಜಾಬ್ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ….

Read More

Daily Devotional: ಕುಲದೈವ, ಇಷ್ಟದೈವ ಅಥವಾ ಆರಾಧ್ಯದೈವ; ಯಾವ ದೈವ ಆರಾಧನೆಯಿಂದ ಏನು ಫಲ? – Kannada News | The Significance of Kuladaiva, Ishtadaiva, Aradhyadaiva, and Manedeva

“ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎಂಬುದು ಹಿಂದೂ ಧರ್ಮದ ಸಾರ. ಯಾವುದೇ ದೇವರನ್ನು ನಮಸ್ಕರಿಸಿದರೂ, ಅದು ಅಂತಿಮವಾಗಿ ಒಂದೇ ಪರಮಾತ್ಮನನ್ನು ತಲುಪುತ್ತದೆ. ಉದಾಹರಣೆಗೆ, ಅನ್ನ, ಚಿತ್ರಾನ್ನ, ಪುಳಿಯೋಗರೆ, ಪಲಾವ್ ಹೀಗೆ ಯಾವುದೇ ರೂಪದಲ್ಲಿ ಸೇವಿಸಿದರೂ, ಅದರ ಮೂಲ ಅಕ್ಕಿಯೇ ಆಗಿರುವಂತೆ, ವಿಭಿನ್ನ ದೈವಗಳ ಆರಾಧನೆಯು ಒಂದೇ ಭಗವಂತನನ್ನು ತಲುಪುತ್ತದೆ. ಆದಾಗ್ಯೂ, ಕೆಲವು ದೈವಗಳಿಗೆ ನಮ್ಮ ಜೀವನದಲ್ಲಿ ವಿಶೇಷ ಮಹತ್ವವಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ…

Read More