Headlines

ವೀಕೆಂಡ್, ಬೇಸಿಗೆ ರಜೆ ಎಫೆಕ್ಟ್​​: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತಸಾಗರ

ಮಂಗಳೂರು, ಮೇ 24: ವೀಕೆಂಡ್ ಹಾಗೂ ಬೇಸಿಗೆ ರಜೆಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಯಾತ್ರಾ ಕೇಂದ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಶ್ರೀ ಮಂಜುನಾಥ ಸ್ವಾಮಿಯ ನೆಲೆಯಾದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ದೇವಸ್ಥಾನಕ್ಕೆ ಮತ್ತು ಕಡಬ ತಾಲೂಕಿನಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಕುಟುಂಬ ಸಮೇತ ಆಗಮಿಸಿದ ಭಕ್ತರಿಂದ ದೇವಾಲಯಗಳ ಆವರಣದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಜಂಗುಳಿ ನಿರ್ಮಾಣವಾಗಿದೆ. ಧರ್ಮಸ್ಥಳದಲ್ಲಿ…

Read More

ಸಂಸ್ಕರಿತ ಯುರೇನಿಯಂ ಬಿಟ್ಟುಕೊಡಲು ಇರಾನ್ ಒಪ್ಪಿಗೆ; ಅಮೆರಿಕದ ಹೊಸ ಒಪ್ಪಂದದಲ್ಲೇನಿದೆ? – Kannada News | Iran agreed to surrender enriched uranium aas part of new US Peace deal

ಟೆಹ್ರಾನ್, ಮೇ 24: ಅಮೆರಿಕ ಪ್ರಸ್ತಾಪಿಸಿರುವ ಐತಿಹಾಸಿಕ ಶಾಂತಿ ಒಪ್ಪಂದದ (Peace Deal) ಭಾಗವಾಗಿ ತನ್ನ ಬಳಿ ಇರುವ ಸಂಸ್ಕರಿತ ಯುರೇನಿಯಂ (Enriched Uranium) ದಾಸ್ತಾನನ್ನು ಸಂಪೂರ್ಣವಾಗಿ ಒಪ್ಪಿಸಲು ಇರಾನ್ (Iran War) ಒಪ್ಪಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಜಾಗತಿಕ ರಾಜಕಾರಣ ಮತ್ತು ಮಧ್ಯಪ್ರಾಚ್ಯದ ಭದ್ರತೆಯ ದೃಷ್ಟಿಯಿಂದ ಈ ಬೆಳವಣಿಗೆಯನ್ನು ಅತ್ಯಂತ ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ. ಪ್ರಮುಖ ಮುಖ್ಯಾಂಶಗಳು: ಸಂಸ್ಕರಿತ ಯುರೇನಿಯಂ ಬಿಟ್ಟುಕೊಡಲು ಇರಾನ್ ಒಪ್ಪಿಗೆ ಇರಾನ್-ಅಮೆರಿಕದ ನಡುವಿನ ಸಂಘರ್ಷದಲ್ಲಿ ಮಹತ್ವದ ತಿರುವು…

Read More

ಪ್ರಧಾನಿ ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಕೇಸ್​​: 6 ಮಂದಿ ಪೊಲೀಸರ ತಲೆದಂಡ – Kannada News | Explosives found on pm modis route six police personnel suspended for security lapse in bengaluru

ಪ್ರಧಾನಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಕೇಸ್​​: 6 ಮಂದಿ ಪೊಲೀಸರ ತಲೆದಂಡ ಬೆಂಗಳೂರು, ಮೇ 24: ಮೇ 10ರಂದು ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಆರ್ಟ್​​ ಆಫ್​​ ಲಿವಿಂಗ್​​ಗೆ ತೆರಳುವ ಮಾರ್ಗ ಸಮೀಪವೇ ಸ್ಫೋಟಕ ಪತ್ತೆ ಕೇಸ್ ಸಂಬಂಧ ಪೊಲೀಸ್​​ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಲೆದಂಡವಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಬಳಿ ಸ್ಫೋಟಕ ಪತ್ತೆ ಸಂಬಂಧ ಪೊಲೀಸ್ ಅಧಿಕಾರಿಗಳು ‌ಸೇರಿದಂತೆ 6 ಸಿಬ್ಬಂದಿಯನ್ನು ಅಮಾನತು ಮಾಡಿ ಬೆಂಗಳೂರು ದಕ್ಷಿಣ…

Read More

ಕೊನೆಗೂ ಕ್ಯಾಪ್ಚರ್ ಆಯ್ತು ನರಭಕ್ಷಕ ವ್ಯಾಘ್ರ: ಬಾಲಕನನ್ನು ಕೊಂದಿದ್ದ ಚಿರತೆ ಇದೇನಾ? – Kannada News | Chamarajanagar Leopard Captured: Child Killer Feline Trapped in Hanur, Sent to FSL

ಕೊನೆಗೆ ಕ್ಯಾಪ್ಚರ್ ಆಯ್ತು ನರಭಕ್ಷಕ ವ್ಯಾಘ್ರ ಚಾಮರಾಜನಗರ, ಮೇ 24: ಜಿಲ್ಲೆಯಲ್ಲಿ ಚಿರತೆಯ ಅಟ್ಟಹಾಸ ಮಿತಿ ಮೀರಿದೆ. 15 ದಿನಗಳ ಹಿಂದೆ ನಾಗಮಲೆ ಅರಣ್ಯ ಪ್ರದೇಶದಲ್ಲಿ ಪಾದಯಾತ್ರಿ ಬಾಲಕ ಚಿರತೆ  (Cheetah) ದಾಳಿಗೆ ಬಲಿಯಾಗಿದ್ದ. ಈ ಹಿನ್ನೆಲೆ ಕಳೆದ 15 ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ ಈ ಪ್ರಾಣಿ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಹಾಡಿ ಬಳಿ ಇಟ್ಟಿದ್ದ ಬೋನಿನಲ್ಲಿ ಹೆಣ್ಣು ಚಿರತೆಯು ಸೆರೆಯಾಗಿದ್ದು, ಕಾಡಂಚಿನ ಗ್ರಾಮಸ್ಥರು ಹಾಗೂ ಮಲೆ ಮಹದೇಶ್ವರ…

Read More

ರಿಷಭ್ ಪಂತ್​ಗೆ ಗೇಟ್ ಪಾಸ್​? ಟಾಮ್ ಮೂಡಿ ಬಿಚ್ಚಿಟ್ಟ ಸತ್ಯ! – Kannada News | IPL 2026: LSG Set for Major Leadership Overhaul

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್ ಮುಕ್ತಾಯದ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ (LSG) ಫ್ರಾಂಚೈಸಿಯಲ್ಲಿ ಭಾರಿ ಬದಲಾವಣೆಯ ಗಾಳಿ ಬೀಸತೊಡಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಹೀನಾಯ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಗ್ಲೋಬಲ್ ಕ್ರಿಕೆಟ್ ಡೈರೆಕ್ಟರ್ ಟಾಮ್ ಮೂಡಿ ನೀಡಿರುವ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. “ನಾಯಕತ್ವದ ಬಗ್ಗೆ ಗಂಭೀರ ಚಿಂತನೆ ಅಗತ್ಯ” ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಾಮ್ ಮೂಡಿ, “ಲಕ್ನೋ ಸೂಪರ್…

Read More

Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿಯಿರಿ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯವರು 2026ರ ಮೇ 25 ರಿಂದ ಮೇ 31ರ ವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯವನ್ನು ವಿವರಿಸಿದ್ದಾರೆ. ಈ ವಾರದಲ್ಲಿ ಗ್ರಹಗಳ ಸ್ಥಾನಗಳು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಶನಿ ಗ್ರಹ ಮೀನ ರಾಶಿಯಲ್ಲಿ, ಕುಜ ಮೇಷ ರಾಶಿಯಲ್ಲಿ, ರವಿ ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಗುರು, ಶುಕ್ರ ಮತ್ತು ಬುಧ ಗ್ರಹಗಳು ಮಿಥುನ ರಾಶಿಯಲ್ಲಿ ಸಂಚರಿಸಲಿವೆ. ಮೇ 29 ರಂದು…

Read More

ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ವೃದ್ಧೆಯಿಂದ 24 ಕೋಟಿ ರೂ. ಸುಲಿಗೆ: ಬ್ಯಾಂಕ್​​ ಮ್ಯಾನೇಜರ್​​ ಸಮಯಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ – Kannada News | Digital Arrest Fraud: Elderly Woman Extorted of ₹24 Crore in Bengaluru, Five Arrested After Bank Manager Alerts Police

ಬೆಂಗಳೂರು, ಮೇ 24: ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ವೃದ್ಧೆಯೋರ್ವರಿಂದ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಖದೀಮರ ಹಣದ ದಾಹಕ್ಕೆ ತನ್ನ ಬಳಿ ಇದ್ದ ಬಂಗಾರದ ಒಡವೆಗಳನ್ನು ಬ್ಯಾಂಕ್​​ನಲ್ಲಿ ಅಡ ಇಡಲು ಬಂದು ವೃದ್ಧೆ ಬಚಾವ್​​ ಆಗಿದ್ದು, ಕಳೆದ ಜನವರಿಯಿಂದಲೇ ಆರೋಪಿಗಳು ಹಣ ವಸೂಲಿಗೆ ಇಳಿದಿದ್ದರು ಎಂಬುದು ಗೊತ್ತಾಗಿದೆ. ಬ್ಯಾಂಕ್​​ ಮ್ಯಾನೇಜರ್​​ ಸಮಯಪ್ರಜ್ಞೆಯಿಂದ ಆಕೆ ಹೆಚ್ಚಿನ ಹಣ ಕಳೆದುಕೊಳ್ಳುವುದು ತಪ್ಪಿದೆ. ಮುಖ್ಯಾಂಶಗಳು ರಾಜ್ಯದಲ್ಲಿ ಮತ್ತೊಂದು ಡಿಜಿಟಲ್​​ ಅರೆಸ್ಟ್​​…

Read More

‘ಟಾಕ್ಸಿಕ್ ಸಿನಿಮಾದ ಮಹಿಳಾ ಪಾತ್ರಗಳು ಸಖತ್ ಬೋಲ್ಡ್’: ಕೌತುಕ ಹೆಚ್ಚಿಸಿದ ಯಶ್ – Kannada News | Rocking Star Yash talks about Toxic movie female characters ahead of release

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ಸಿನಿಮಾ ಸದ್ಯ ಬಿಡುಗಡೆಯ ಹಂತದಲ್ಲಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸಿನಿಮಾ ಬಿಡುಗಡೆಗೂ ಮುನ್ನ ನಟ ಯಶ್ (Yash) ಈ ಚಿತ್ರದ ಕಥೆ ಮತ್ತು ಅದರಲ್ಲಿನ ಮಹಿಳಾ ಪಾತ್ರಗಳ ಕುರಿತು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿರುವ ಮಹಿಳಾ ಪಾತ್ರಗಳು ಅತ್ಯಂತ ಶಕ್ತಿಶಾಲಿ ಹಾಗೂ ಬೋಲ್ಡ್ ಆಗಿ ಮೂಡಿಬಂದಿವೆ ಎಂದು ಅವರು ಹೇಳಿದ್ದಾರೆ. ‘ವೆರೈಟಿ ಇಂಡಿಯಾ’ ಸುದ್ದಿ…

Read More

ಪಿಎಂ ಕಿಸಾನ್ ಯೋಜನೆ; ನೊಂದಣಿ, ಆದಾಯ, ಫಲಾನುಭವಿಗಳ ಸಂಖ್ಯೆ ಇತ್ಯಾದಿ ಮಾಹಿತಿ – Kannada News | PM Kisan Samman Nidhi Yojana, registration, eligibility, beneficiaries number and other details

ನವದೆಹಲಿ, ಮೇ 24: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಆರಂಭವಾಗಿ ಆರಕ್ಕೂ ಹೆಚ್ಚು ವರ್ಷಗಳಾಗಿದ್ದು, ಇದು ವಿಶ್ವದ ಅತಿದೊಡ್ಡ ಡಿಬಿಟಿ ಸ್ಕೀಮ್ ಎನಿಸಿದೆ. ಅತಿಹೆಚ್ಚು ಜನರಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ರೈತರ ವ್ಯವಸಾಯಕ್ಕೆ ಸಹಾಯಧನ ನೀಡಲೆಂದು ಶುರುವಾದ ಈ ಯೋಜನೆಯಲ್ಲಿ ಈವರೆಗೂ ಫಲಾನುಭವ ಪಡೆದಿರುವವರ ಸಂಖ್ಯೆ 11 ಕೋಟಿಗೂ ಅಧಿಕ ಇದೆ. ಸದ್ಯ 9.46 ಕೋಟಿ ಜನರು ಇದರ ಫಲಾನುಭವ ಪಡೆಯುತ್ತಿದ್ದಾರೆ….

Read More

ಎಬೋಲಾ ಆತಂಕ; ಕಾಂಗೋ, ಉಗಾಂಡಾ, ದಕ್ಷಿಣ ಸುಡಾನ್‌ ಪ್ರಯಾಣಿಕರಿಗೆ ಭಾರತದಿಂದ ಮಾರ್ಗಸೂಚಿ ಬಿಡುಗಡೆ – Kannada News | Ebola Outbreak India issues guidelines for passengers traveling to Congo, Uganda and South Sudan

ನವದೆಹಲಿ, ಮೇ 24: ಆಫ್ರಿಕಾ ದೇಶಗಳಲ್ಲಿ ಹರಡುತ್ತಿರುವ ಭೀಕರ ಎಬೋಲಾ (Ebola) ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ನಮ್ಮ ದೇಶದ ನಾಗರಿಕರಿಗೆ ಅತ್ಯಂತ ಮಹತ್ವದ ಮಾರ್ಗಸೂಚಿಯನ್ನು (Travel Advisory) ಬಿಡುಗಡೆ ಮಾಡಿದೆ. ಕಾಂಗೋ (DRC), ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳಿಗೆ ಅನಗತ್ಯವಾಗಿ ಪ್ರಯಾಣಿಸಬೇಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಭಾರತೀಯರಿಗೆ ಸೂಚಿಸಿದೆ. ಇತ್ತೀಚೆಗೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ಮತ್ತು ಉಗಾಂಡಾ ದೇಶಗಳಲ್ಲಿ ಎಬೋಲಾ ವೈರಸ್‌ನ ಅತ್ಯಂತ ಅಪರೂಪದ ಹಾಗೂ ಅಪಾಯಕಾರಿ ತಳಿಯಾದ…

Read More