ಎಷ್ಟು ಕಾದ್ರೂ ಡಾಕ್ಟ್ರೇ ಬರ್ತಿಲ್ಲ! ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ – Kannada News | Patients Face Severe Neglect and Delays at Bagalakotes Bilagi Taluk Hospital
ಬಾಗಲಕೋಟೆ, ಮೇ 24: ಜಿಲ್ಲೆಯ ಬೀಳಗಿ ತಾಲ್ಲೂಕಾಸ್ಪತ್ರೆಯಲ್ಲಿ ರೋಗಿಗಳು ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದ್ದು, ರೋಗಿಗಳು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೀಳಗಿಯಿಂದ ಬಂದ ರೋಗಿಗಳು, ಬೆಳಗ್ಗೆ ಆರು ಗಂಟೆಯಿಂದ ಎಂಟು ಗಂಟೆಯವರೆಗಿನ ಡೋಸ್ ನೀಡಬೇಕಾಗಿತ್ತು, ಆದರೆ ಎಂಟೂವರೆ ಆದರೂ ಯಾರೂ ಬಂದು ನೋಡಿಕೊಳ್ಳಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಕೇಳಿದಾಗ, ಸಿಬ್ಬಂದಿಯೊಬ್ಬರು ಡೋಸ್‌ಗಳು ಖಾಲಿಯಾಗಿವೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ಯಾವುದೇ ಭಾಗದಲ್ಲಿ ನರ್ಸ್‌ಗಳು…