ನಂಜನಗೂಡು: ಮನೆ ಮಾಲೀಕರು ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಲಕ್ಷಾಂತರ ರೂ. ನಗದು, ಚಿನ್ನ ದೋಚಿದ ಖದೀಮರು – Kannada News | Nanjangud House Burglary: Thieves Steal 300g Gold, 6.5kg Silver, and Cash as Owner Visits Hospital

ಮೈಸೂರು, ಜೂನ್ 22: ಮೈಸೂರು ಜಿಲ್ಲೆಯ ನಂಜನಗೂಡಿನ ಚಾಮುಂಡಿ ಬಡಾವಣೆಯಲ್ಲಿ ಭಾರೀ ಮನೆ ಕಳ್ಳತನ ಪ್ರಕರಣ ವರದಿಯಾಗಿದೆ. ಮೋಹನ್ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಕಳ್ಳರು 300 ಗ್ರಾಂ ಚಿನ್ನ, 6.5 ಕೆಜಿ ಬೆಳ್ಳಿ ಹಾಗೂ ಲಕ್ಷಾಂತರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆ ನಡೆದಾಗ ಮನೆ ಮಾಲೀಕರು ಆಸ್ಪತ್ರೆಗೆ ತೆರಳಿದ್ದರು. ಈ ಅವಕಾಶವನ್ನು ಬಳಸಿಕೊಂಡ ಕಳ್ಳರು, ಬೈಕ್‌ನಲ್ಲಿ ಬಂದು ಮನೆಯ ಹಿಂಭಾಗದ ಅಡುಗೆ ಮನೆಯ ಕಿಟಕಿಯ ರಾಡ್ ಅನ್ನು ಮುರಿದು ಒಳನುಗ್ಗಿದ್ದಾರೆ. ಮನೆಯೊಳಗೆ ಪ್ರವೇಶಿಸಿದ ನಂತರ, ಅವರು ನೇರವಾಗಿ ಮೇಲ್ಮಹಡಿಗೆ ಹೋಗಿ ಅಲ್ಲಿನ ಕೋಣೆಯಲ್ಲಿದ್ದ ಬೀರುವನ್ನು ಒಡೆದಿದ್ದಾರೆ. ಬೀರುವೊಳಗೆ ಇರಿಸಲಾಗಿದ್ದ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಕಳವಾದ ವಸ್ತುಗಳಲ್ಲಿ ಸುಮಾರು 300 ಗ್ರಾಂ ಚಿನ್ನಾಭರಣ, 6.5 ಕೆಜಿ ಬೆಳ್ಳಿ ಸಾಮಗ್ರಿಗಳು ಮತ್ತು ಲಕ್ಷಕ್ಕೂ ಅಧಿಕ ನಗದು ಹಣ ಸೇರಿವೆ. ಕಳ್ಳತನದ ಬಳಿಕ ಕಳ್ಳರು ಸೂಟ್​ಕೇಸ್ ಇತ್ತೇ ಎಂಬುದನ್ನೂ ಪರಿಶೀಲಿಸಿರುವುದಾಗಿ ತಿಳಿದುಬಂದಿದೆ.

ಮನೆ ಮಾಲೀಕರು ಹಿಂದಿರುಗಿದಾಗ ಕಳ್ಳತನದ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಂಜನಗೂಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Rainforest Day 2026: ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಹಚ್ಚ ಹಸಿರ ಮಳೆಕಾಡುಗಳ ಪಾತ್ರ ಅಪಾರ – Kannada News | World Rainforest Day 2026: Why celebrate World Rainforest Day?

ಮಳೆಕಾಡು (Rainforest) ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರೋದೇ ಆಮೆಜಾನ್‌ ಕಾಡು. ಇದು ವಿಶ್ವದ ಅತೀ ದೊಡ್ಡ ಮಳೆಕಾಡು. ಈ ಮಳೆಕಾಡುಗಳನ್ನು ಸಾಮಾನ್ಯವಾಗಿ ಭೂಮಿಯ ಶ್ವಾಸಕೋಶಗಳು ಎಂದು ಕರೆಯಲಾಗುತ್ತದೆ. ಇವುಗಳು ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತವೆ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಶುದ್ಧ ನೀರು, ಗಾಳಿ ಮತ್ತು ಆಮ್ಲಜನಕ ನಮ್ಮನ್ನು ತಲುಪುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಅದು ಮಳೆಕಾಡುಗಳು. ಈ ದಟ್ಟ ಕಾನನಗಳು ಜಗತ್ತಿಗೆ ಬೇಕಾದ ಶೇ. 28 ರಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತವೆ.  ಅಲ್ಲದೆ ಪರಿಸರ ಸಮತೋಲನವನ್ನು ಕಾಪಾಡುವಲ್ಲೂ ಇವು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಆದರೆ ಇಂದು ಅರಣ್ಯ ನಾಶ, ಹವಾಮಾನ ಬದಲಾವಣೆ ಮಳೆಕಾಡುಗಳಿಗೆ ಬೆದರಿಕೆಯಾಗಿ ಪರಿಣಮಿಸಿದ್ದು, ಇವುಗಳ ರಕ್ಷಣೆಯ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜೂನ್‌ 22 ರಂದು ವಿಶ್ವ ಮಳೆಕಾಡು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮತ್ತು ಮಹತ್ವವನ್ನು ತಿಳಿಯಿರಿ.

ವಿಶ್ವ ಮಳೆಕಾಡು ದಿನದ ಇತಿಹಾಸವೇನು?

ಪ್ರತಿ ವರ್ಷ ಜೂನ್ 22 ಅನ್ನು ವಿಶ್ವ ಮಳೆಕಾಡು ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ರೇನ್‌ಫಾರೆಸ್ಟ್ ಪಾರ್ಟ್‌ನರ್‌ಶಿಪ್ ಎಂಬ ಸಂಸ್ಥೆ ಮಳೆಕಾಡುಗಳನ್ನು ರಕ್ಷಿಸುವ ಉದ್ದೇಶದಿಂದ ಪ್ರಾರಂಭಿಸಿತು. ಇದರ ನಂತರ, 2017 ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಮಳೆಕಾಡುಗಳ ಮಹತ್ವ ಮತ್ತು ಅವುಗಳ ರಕ್ಷಣೆ ಎಷ್ಟು ಮುಖ್ಯ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಮಳೆಕಾಡು ದಿನದ ಮಹತ್ವವೇನು?

  • ನಮ್ಮ ಪರಿಸರ ಮತ್ತು ಭವಿಷ್ಯಕ್ಕೆ ಮಳೆಕಾಡುಗಳ ಸಂರಕ್ಷಣೆ ಎಷ್ಟು ಮುಖ್ಯ ಎಂಬುದನ್ನು ವಿಶ್ವ ಮಳೆಕಾಡು ದಿನವು ನಮಗೆ ನೆನಪಿಸುತ್ತದೆ. ಭವಿಷ್ಯದ ಪೀಳಿಗೆಗಳು ಸಹ ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಲು ಮತ್ತು ಆರೋಗ್ಯಕರ ವಾತಾವರಣದಲ್ಲಿ ಬದುಕಲು ಸಾಧ್ಯವಾಗುವಂತೆ ಮಳೆಕಾಡುಗಳನ್ನು ರಕ್ಷಿಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
  • ಮಳೆಕಾಡುಗಳ ದಿನವು  ಪರಿಸರ ಸಂರಕ್ಷಣೆಯ ಶಿಕ್ಷಣವನ್ನು ಉತ್ತೇಜಿಸುತ್ತದೆ, ಇದರ ಮೂಲಕ ಜನರು ಪ್ರಕೃತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಪರಿಸರವನ್ನು ರಕ್ಷಿಸುವ ಬಗ್ಗೆ ಜಾಗೃತರಾಗಬಹುದು.
  • ಈ ವಿಶೇಷ ದಿನದಂದು ಮಳೆಕಾಡು ಸಂರಕ್ಷಣೆಯನ್ನು ಉತ್ತೇಜಿಸಲು ಪ್ರಪಂಚದಾದ್ಯಂತ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಮಳೆಕಾಡುಗಳ ಮಹತ್ವ, ಅವುಗಳು ಎದುರಿಸುತ್ತಿರುವ ಬೆದರಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ.

ಇದನ್ನೂ ಓದಿ: ಬರಡಾಗುತ್ತಿರುವ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ

ಮಳೆಕಾಡುಗಳ ಪ್ರಾಮುಖ್ಯತೆ ಮತ್ತು ಪ್ರಯೋಜನಗಳು:

  • ಮಳೆಕಾಡುಗಳು ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮೂಲಕ ಭೂಮಿಯ ಮೇಲಿನ ಆಮ್ಲಜನಕದ ಮಟ್ಟವನ್ನು ಕಾಯ್ದುಕೊಳ್ಳುತ್ತವೆ, ಹೀಗಾಗಿ ಭೂಮಿಯ ಹವಾಮಾನ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
  • ಮಳೆಕಾಡುಗಳು ನೀರಿನ ಚಕ್ರವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ನದಿಗಳು, ಸರೋವರಗಳು ಮತ್ತು ಅಂತರ್ಜಲ ಮೂಲಗಳನ್ನು ಮರುಪೂರಣ ಮಾಡಲು ಸಹಾಯ ಮಾಡುತ್ತವೆ, ಕುಡಿಯುವ ನೀರಿನ ಲಭ್ಯತೆಯನ್ನು ಹೆಚ್ಚಿಸುತ್ತವೆ.
  • ಈ ದಟ್ಟಾರಣ್ಯದಲ್ಲಿರುವ ಮರಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ, ಮಣ್ಣಿನ ಸವೆತವನ್ನು ಕಡಿಮೆ ಮಾಡುತ್ತವೆ, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ಪ್ರವಾಹದ ಅಪಾಯವನ್ನು ಕಡಿಮೆ ಮಾಡುತ್ತವೆ.
  • ಮಳೆಕಾಡುಗಳು ಸಾಂಪ್ರದಾಯಿಕ ಮತ್ತು ಆಧುನಿಕ ಔಷಧದಲ್ಲಿ ಬಳಸಲಾಗುವ ವಿವಿಧ ಔಷಧೀಯ ಸಸ್ಯಗಳಿಗೆ ನೆಲೆಯಾಗಿದ್ದು, ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಸಹಾಯಕವಾಗಿವೆ.
  • ಪ್ರಪಂಚದಾದ್ಯಂತ 1.6 ಶತಕೋಟಿ ಜನರು ಆಹಾರ, ಆಶ್ರಯ, ಔಷಧಕ್ಕಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಮಳೆ ಕಾಡುಗಳ ಮೇಲೆ ಅವಲಂಬಿತರಾಗಿದ್ದಾರೆ. ಬ್ರೆಜಿಲ್, ಇಂಡೋನೇಷ್ಯಾ ಮತ್ತು ಕಾಂಗೋದಲ್ಲಿನ ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನ ಮತ್ತು ಸಂಸ್ಕೃತಿಯು ಈ ಕಾಡುಗಳೊಂದಿಗೆ ಸಂಬಂಧ ಹೊಂದಿದೆ.
  • ಮಳೆಕಾಡುಗಳು ಜೀವವೈವಿಧ್ಯತೆಯ ನೆಲೆಯಾಗಿದ್ದು, ಇವು ಪಕ್ಷಿ-ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ. ಅಮೆಜಾನ್ ಮಳೆಕಾಡು ಸುಮಾರು 40,000 ಸಸ್ಯ ಪ್ರಭೇದಗಳು, 1,300 ಪಕ್ಷಿ ಪ್ರಭೇದಗಳು ಮತ್ತು 430 ಸಸ್ತನಿ ಪ್ರಭೇದಗಳಿಗೆ ನೆಲೆಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಚಿತ್ರವನ್ನು ತುಳಿಯಲು ಬಾಲಿವುಡ್​​ನಲ್ಲಿ ನಡೀತಿದೆ ಸೀಕ್ರೆಟ್ ಪ್ಲ್ಯಾನ್?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ ಎಂದು ಅನೌನ್ಸ್ ಆದ ಬೆನ್ನಲ್ಲೇ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಯಾಗಿದೆ. ಆದರೆ, ಇದರ ಬೆನ್ನಲ್ಲೇ ‘ಟಾಕ್ಸಿಕ್’ ಸಿನಿಮಾದ ಹೈಪ್ ಕಮ್ಮಿ ಮಾಡಲು ಹಾಗೂ ಚಿತ್ರವನ್ನು ತುಳಿಯಲು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದೊಂದು ತಂತ್ರ ಶುರುವಾಗಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ರೂಪದಲ್ಲಿ ಒಂದಷ್ಟು ಟ್ವೀಟ್​​ಗಳು ಸಿಕ್ಕಿವೆ.

‘ಟಾಕ್ಸಿಕ್’ ಸಿನಿಮಾ ‘ಧುರಂಧರ್ 2’ ಎದುರು ಮಾರ್ಚ್ 19ರಂದು ರಿಲೀಸ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಆಗಲೂ ‘ಧುರಂಧರ್ 2’ ಎದುರು ಬಂದರೆ ‘ಟಾಕ್ಸಿಕ್ ಸಿನಿಮಾ ಹಳ್ಳ ಹಿಡಿಯುತ್ತದೆ ಎಂದೆಲ್ಲ ಬಾಲಿವುಡ್​ನಲ್ಲಿ ಮಾತನಾಡಿಕೊಳ್ಳಲಾಯಿತು. ಆದರೆ, ಕಾರಣಾಂತರಗಳಿಂದ ‘ಟಾಕ್ಸಿಕ್’ ರಿಲೀಸ್ ಮುಂದಕ್ಕೆ ಹೋಯಿತು ಈಗ ‘ಈಥಾ’ ತಂಡದವರು ಇದೇ ರೀತಿಯಲ್ಲಿ ತಂತ್ರ ಮಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

ಸದ್ಯದ ಅಪ್‌ಡೇಟ್ ಪ್ರಕಾರ, ‘ಈಥಾ’ ಚಿತ್ರತಂಡ ಈಗಾಗಲೇ ಪ್ಯಾನಿಕ್ ಬಟನ್ ಒತ್ತಿದ್ದು, ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಎಕ್ಸ್ (ಟ್ವಿಟರ್) ತಾಣದಲ್ಲಿ ‘ಈಥಾ’ ವರ್ಸಸ್ ‘ಟಾಕ್ಸಿಕ್’ ಎಂಬ ಟ್ರೆಂಡ್ ಸೃಷ್ಟಿಸಿ, ಯಶ್ ಚಿತ್ರವನ್ನು ಕಳೆಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಿದೆ.

ಒಂದೇ ರೀತಿಯ ಟ್ವೀಟ್: ಬಯಲಾಯ್ತು ಪಿಆರ್ ಸ್ಟಂಟ್?

ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಪ್ರತಿಯೊಂದು ಟ್ವೀಟ್‌ನ ಮುಖ್ಯ ಉದ್ದೇಶ ‘ಟಾಕ್ಸಿಕ್’ ಸಿನಿಮಾವನ್ನು ಡೀಗ್ರೇಡ್ ಮಾಡುವುದೇ ಆಗಿದೆ. ‘ಈಥಾ’ ಚಿತ್ರದ ಜೊತೆ ಯಶ್ ಸಿನಿಮಾವನ್ನು ಹೋಲಿಕೆ ಮಾಡುವುದು ಹಾಗೂ ರಿಲೀಸ್ ಡೇಟ್ ವಿಷಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ, ಇಲ್ಲಿ ಹಾಸ್ಯದ ವಿಷಯ ಏನೆಂದರೆ ಈ ಪಿಆರ್ ಸ್ಟಂಟ್ ಮಾಡುತ್ತಿರುವವರು ಕನಿಷ್ಠ ಪಕ್ಷ ಟ್ವೀಟ್‌ಗಳ ಭಾಷೆ ಅಥವಾ ಸಾಲುಗಳನ್ನು ಬದಲಾಯಿಸುವ ಗೋಜಿಗೆ ಹೋಗಿಲ್ಲ. ಪ್ರತಿಯೊಬ್ಬರೂ ಒಂದೇ ರೀತಿಯ ಸಾಲುಗಳನ್ನು ಕಾಪಿ-ಪೇಸ್ಟ್ ಮಾಡಿ ಟ್ವೀಟ್ ಮಾಡುತ್ತಿರುವುದು ನೆಟ್ಟಿಗರ ಕಣ್ಣಿಗೆ ಬಿದ್ದಿದ್ದು, ಈ ಬಾಲಿಶ ಪಿಆರ್ ತಂತ್ರ ನಗೆಪಾಟಲಿಗೀಡಾಗಿದೆ.

ಇದನ್ನೂ ಓದಿ: ‘ಯಶ್ ಫೆನಾಮಿನಲ್ ಆ್ಯಕ್ಟರ್, ಅವರ ಜೊತೆ ನಟಿಸಿದ್ದು ಅದ್ಭುತ ಅನುಭವ’; ಕಾಜಲ್

ಸಿನಿಮಾ ವಿಶ್ಲೇಷಕರ ಪ್ರಕಾರ, ‘ಈಥಾ’ ಸಿನಿಮಾ ಹೇಗಿದ್ದರೂ ಕೊನೆಗೆ ತನ್ನ ಬಿಡುಗಡೆ ದಿನಾಂಕವನ್ನು ಮುಂದೂಡುವುದು ಬಹುತೇಕ ಪಕ್ಕಾ ಆಗಿದೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಇಲ್ಲದ ಪರ್ಸೆಪ್ಷನ್ ಕ್ರಿಯೇಟ್ ಮಾಡಲು ಮತ್ತು ‘ಟಾಕ್ಸಿಕ್’ ಇಮೇಜ್‌ಗೆ ಧಕ್ಕೆ ತರಲು ಇಂತಹ ತಂತ್ರಗಳನ್ನು ಮಾಡುತ್ತಿರುವುದು ಸದ್ಯ ಗಾಂಧಿನಗರ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Power Cut Today: ಬೆಂಗಳೂರಿನ ಹಲವೆಡೆ ಇಂದು, ನಾಳೆ ವಿದ್ಯುತ್ ಕಡಿತ; ಎಲ್ಲೆಲ್ಲಿ ಪವರ್ ಕಟ್? ಇಲ್ಲಿದೆ ಮಾಹಿತಿ – Kannada News | Bengaluru Power Cut: BESCOM Issues Alert For 7 Hour Outage On June 22 And 23 In Key Areas

ಸಾಂದರ್ಭಿಕ ಚಿತ್ರ (ಕೃಪೆ: ಬೆಸ್ಕಾಂ ಎಕ್ಸ್​ ಹ್ಯಾಂಡಲ್)Image Credit source: @NammaBESCOM

ಬೆಂಗಳೂರು, ಜೂನ್ 22: ಬೆಂಗಳೂರಿನ ಹಲವು ಪ್ರಮುಖ ಬಡಾವಣೆಗಳಲ್ಲಿ ಇಂದು ಮತ್ತು ನಾಳೆ (ಜೂನ್ 22 ಮತ್ತು ಜೂನ್ 23) ಸುದೀರ್ಘ ಅವಧಿಯ ವಿದ್ಯುತ್ ಕಡಿತ (Power Cut) ಇರಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಅಧಿಕೃತ ಮಾಧ್ಯಮ ಪ್ರಕಟಣೆ ಹಾಗೂ ಎಕ್ಸ್ (X) ಪೋಸ್ಟ್ ಮೂಲಕ ನಾಗರಿಕರಿಗೆ ಮಾಹಿತಿ ನೀಡಿದೆ. ತುರ್ತು ಮೂಲಸೌಕರ್ಯ ಕಾಮಗಾರಿ ಹಾಗೂ ನಿಯತಕಾಲಿಕ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಕಾಮಗಾರಿಗಳ ಕಾರಣದಿಂದಾಗಿ ನಗರದ ವಿವಿಧ ವಲಯಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು ಪವರ್ ಕಟ್ ಸಮಯ

ಬೆಸ್ಕಾಂ ಮಾಹಿತಿ ನೀಡಿರುವ ಪ್ರಕಾರ, ಜೂನ್ 22 ರ ಸೋಮವಾರದಂದು ಬೆಳಿಗ್ಗೆ 9 ರಿಂದ ಸರಿಸುಮಾರು 7 ಗಂಟೆಗಳ ಕಾಲ ನಿಗದಿತ ಪವರ್ ಕಟ್ ಜಾರಿಯಲ್ಲಿರಲಿದೆ.

ಜೂನ್ 22 ರಂದು ಎಲ್ಲೆಲ್ಲಿ ಪವರ್ ಕಟ್?

ಸೋಲದೇವನಹಳ್ಳಿ-ಹೆಸರಘಟ್ಟ ಸುತ್ತಮುತ್ತಲಿನ ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿ.ಬಿ. ಕ್ರಾಸ್, ಹೆಸರಘಟ್ಟ, ಬಿಲಿಜಾಜಿ ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಬ್ರದರ್ಸ್ ಕಾಲೋನಿ, ಕೃಷ್ಣ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್, ಸಾಸುವೆಘಟ್ಟ, ಶಿವಕುಮಾರಸ್ವಾಮೀಜಿ ಲೇಔಟ್, ಸಿಡಿಪಿಒ, ಡ್ಯಾನಿಶ್ ಫಾರ್ಮ್, ಕೆಎಂಎಫ್, ಪಶುಸಂಗೋಪನೆ ಇಲಾಖೆ, ಗುನಿಯಾಗ್ರಹಾರ, ಮೇಡಿಯಾಗ್ರಹಾರ, ರಾಜ್ಯ ಮೀನುಗಾರಿಕೆ ಕ್ಷೇತ್ರ, ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಬ್ಯಾಲಕೆರೆ, ಆಚಾರ್ಯ ಕಾಲೇಜು ಮುಖ್ಯ ರಸ್ತೆ, ಸೋಲದೇವನಹಳ್ಳಿ, ಗಾಣಿಗರಹಳ್ಳಿ, ಸೋಮಶೆಟ್ಟಿಹಳ್ಳಿ, ದಾಸೇನಹಳ್ಳಿ, ಗುಡ್ಡದಹಳ್ಳಿ, ಹೊಸಹಳ್ಳಿ ಪಾಳ್ಯ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

ಇಷ್ಟೇ ಅಲ್ಲದೆ, ಔಟರ್ ರಿಂಗ್ ರೋಡ್ ಸುತ್ತಮುತ್ತಲಿನ ಸೆಸ್ನಾ ಬಿಸಿನೆಸ್ ಪಾರ್ಕ್, ಹೊರವರ್ತುಲ ರಸ್ತೆ, ಎಕ್ಸೋರಾ ಬಿಸಿನೆಸ್ ಪಾರ್ಕ್, ಶೋಭಾ ಅಪಾರ್ಟ್‌ಮೆಂಟ್ಸ್, ವಿಕಾಸ್ ಟೆಲಿಕಾಂ, ಐಬಿಸ್ ಹೋಟೆಲ್ ಮತ್ತು ತಕ್ಷಶಿಲಾ ಹೆಲ್ತ್‌ಕೇರ್ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಇರಲಿದೆ.

ಪೂರ್ವ ವಲಯದ ಶೋಭಾ ಕ್ರಿಸಾಂಥಿಮಮ್, ಎಲ್‌ಆರ್‌ಪಿ ಕಚೇರಿ, ಜಯಕುಮಾರ್ ಆರ್‌ಎಂಯು, ದಿವ್ಯ ಶಾಂತಿ, ಗೋವಿಂದಪುರ, ಕಾರ್ಲೆ, ಬೃಂದಾವನ ನಗರ, ಟೈಟಾನ್ ಗ್ಯಾರೇಜ್, ಗಾಂಧಿನಗರ, ಭೈರವಿ ಅಪಾರ್ಟ್‌ಮೆಂಟ್ಸ್, ಹೆಗ್ಡೆ ನಗರ, ಚಂದ್ರಿಕಾ ಸೋಪ್ ಫ್ಯಾಕ್ಟರಿ, ಬಿಎಂಟಿಸಿ ಡಿಪೋ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಕೇಂದ್ರ ವಲಯದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಮ್ಯೂಸಿಯಂ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಹೇಸ್ ರಸ್ತೆ, ಕಾನ್ವೆಂಟ್ ರಸ್ತೆ, ರೆಸಿಡೆನ್ಸಿ ರಸ್ತೆ, ಕ್ರೆಸೆಂಟ್ ರಸ್ತೆ, ಸಾಯಿಬಾಬಾ ದೇವಸ್ಥಾನ ರಸ್ತೆ, ಜೀವನ್‌ಕೇಂದ್ರ ಲೇಔಟ್, ಕೇಂಬ್ರಿಡ್ಜ್ ಲೇಔಟ್, ಗೌತಮಪುರ, ಆರ್ಟಿಲರಿ ರಸ್ತೆ, ಹೌದಿನ್ ರಸ್ತೆ, ಎಂವಿ ಗಾರ್ಡನ್, ನಾಲಾ ರಸ್ತೆ, ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್, ಜೋಗುಪಾಳ್ಯ ಮುಖ್ಯ ರಸ್ತೆ, ಗಂಗಾಧರ ಚೆಟ್ಟಿ ರಸ್ತೆ, ಅಗಾ ಅಬ್ಬಾಸ್ ಅಲಿ ರಸ್ತೆ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

ದಕ್ಷಿಣ ವಲಯದ ಅಂಜನಾಪುರ, ಆವಲಹಳ್ಳಿ, ರಾಘವನಪಾಳ್ಯ, ನಾಗೇಗೌಡನ ಪಾಳ್ಯ, ಶೋಭಾ ಅಪಾರ್ಟ್‌ಮೆಂಟ್, ನಾರಾಯಣನಗರ 1 ಮತ್ತು 2ನೇ ಬ್ಲಾಕ್, ದೀಕ್ಷಾ ಕಾಲೇಜು, ಕೆಎಸ್‌ಐಟಿ ಕಾಲೇಜು, ಅಂಜನಾಪುರ 8ನೇ ಬ್ಲಾಕ್, ವೀವರ್ಸ್ ಕಾಲೇಜು, ಪುರಾವಂಕರ ಅಪಾರ್ಟ್‌ಮೆಂಟ್, ಅಮೃತನಗರ, ವಡ್ಡರಪಾಳ್ಯ, ಕೆಂಬತ್ತಹಳ್ಳಿ, ಶೋಭಾ ಫಾರೆಸ್ಟ್ ಅಪಾರ್ಟ್‌ಮೆಂಟ್, ತಲಘಟ್ಟಪುರದಲ್ಲೂ ವಿದ್ಯುತ್ ಕಡಿತ ಇರಲಿದೆ.

ಪಶ್ಚಿಮ ವಲಯದ ಮಲ್ಲೇಶ್ವರಂ, ವೈಯಾಲಿಕಾವಲ್, ಕೋದಂಡರಾಮಪುರ, ಬಿಎಚ್‌ಇಎಲ್, ಐಐಎಸ್‌ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಸುಬೇದಾರ್ ಪಾಳ್ಯ, ದಿವಾನರ ಪಾಳ್ಯ, ಮಾಡೆಲ್ ಕಾಲೋನಿ, ಶರೀಫ್ ನಗರ, ರಂಗನಾಥಪುರ, ಎಲ್.ಎನ್. ಕಾಲೋನಿ, ಲೊಟ್ಟೆಗೊಲ್ಲಹಳ್ಳಿ, ಆರ್.ಕೆ. ಗಾರ್ಡನ್, ಎಂಎಲ್‌ಎ ಲೇಔಟ್, ನೇತಾಜಿ ನಗರ, ಪೈಪ್‌ಲೈನ್ ರಸ್ತೆ, ಮತ್ತಿಕೆರೆ 1 ರಿಂದ 10 ನೇ ಮುಖ್ಯ ರಸ್ತೆ, ಮೋಹನ್ ಕುಮಾರ್ ನಗರ, ಜೆ.ಪಿ. ಪಾರ್ಕ್, ಅಕ್ಕಯ್ಯಪ್ಪ ಗಾರ್ಡನ್, ಬಿ.ಕೆ. ನಗರ, ಎಲ್‌ಐಸಿ ಕಾಲೋನಿ, ಪಂಪಾ ನಗರ, ಯಶವಂತಪುರ 1ನೇ ಮುಖ್ಯ ರಸ್ತೆ, ಎಚ್‌ಎಂಟಿ ಲೇಔಟ್, ಗೋಕುಲ 1ನೇ ಹಂತ, ಎಚ್‌ಎಂಟಿ ಮುಖ್ಯ ರಸ್ತೆ, ಎಸ್‌ಬಿಎಂ ಕಾಲೋನಿ, ಸಂಜೀವಪ್ಪ ಕಾಲೋನಿಯಲ್ಲೂ ಪವರ್ ಕಟ್ ಇರಲಿದೆ.

ಜೂನ್ 23 ರಂದು ಎಲ್ಲೆಲ್ಲಿ ಪವರ್ ಕಟ್?

ಕೋರಮಂಗಲ 3, 4, 5 ಮತ್ತು 6 ನೇ ಬ್ಲಾಕ್, ಕೋರಮಂಗಲ ಕೈಗಾರಿಕಾ ಪ್ರದೇಶ, ಮಡಿವಾಳ, ವೆಂಕಟೇಶ್ವರ ಲೇಔಟ್, ಚಿಕ್ಕಡುಗೋಡಿ, ಜೋಗಿ ಕಾಲೋನಿ, ಸೇಂಟ್ ಜಾನ್ಸ್ ಆಸ್ಪತ್ರೆ ಸಿಬ್ಬಂದಿ ಕ್ವಾರ್ಟರ್ಸ್, ಮಾರುತಿನಗರ ಆಡುಗೋಡಿ 7 ಮತ್ತು 8ನೇ ಬ್ಲಾಕ್, ಸಿಎಆರ್ ಪೊಲೀಸ್ ಕ್ವಾರ್ಟರ್ಸ್, ಆಡುಗೋಡಿ ಮುಖ್ಯ ರಸ್ತೆ, ಸೇಂಟ್ ಜಾನ್ಸ್ ಆಸ್ಪತ್ರೆ, 100 ಅಡಿ ರಿಂಗ್ ರಸ್ತೆ ಒರಾಕಲ್ ಕಂಪನಿ, ಬನ್ನೇರುಘಟ್ಟ ರಸ್ತೆ, ಕೆಎಚ್‌ಬಿ ಕಾಲೋನಿ, ಭುವನಪ್ಪ ಲೇಔಟ್, ಕಾವೇರಿ ಲೇಔಟ್, ಕೃಷ್ಣಾನಗರ ಇಂಡಸ್ಟ್ರಿಯಲ್ ಲೇಔಟ್, ಎಸ್.ಜಿ. ಪಾಳ್ಯ, ಮಡಿವಾಳ ಮಾರುಕಟ್ಟೆ, ಕೋರಮಂಗಲ ವಿಸ್ತರಣೆ ಮತ್ತು ಜಕ್ಕಸಂದ್ರ ಪ್ರದೇಶಗಳಲ್ಲಿ ಜೂನ್ 23 ರಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ನಿಗದಿತ ಪ್ರದೇಶಗಳನ್ನು ಹೊರತುಪಡಿಸಿ ಇತರೆಡೆಗಳಲ್ಲಿ ಅನಗತ್ಯ ವಿದ್ಯುತ್ ವ್ಯತ್ಯಯ ಅಥವಾ ತುರ್ತು ತಾಂತ್ರಿಕ ತೊಂದರೆಗಳು ಎದುರಾದಲ್ಲಿ ಸಾರ್ವಜನಿಕರು ಆನ್‌ಲೈನ್ ಮೂಲಕ ದೂರು ದಾಖಲಿಸಬಹುದು. ಗ್ರಾಹಕರು ಬೆಸ್ಕಾಂನ ಅಧಿಕೃತ ಬೆಸ್ಕಾಂ ಮಿತ್ರ (BESCOM Mithra) ಮೊಬೈಲ್ ಅಪ್ಲಿಕೇಶನ್ ಅಥವಾ 24×7 ಲಭ್ಯವಿರುವ ಉಚಿತ ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಿ ದೂರು ಸಲ್ಲಿಸಲು ಹಾಗೂ ತಮ್ಮ ದೂರಿನ ಸ್ಥಿತಿಗತಿಯನ್ನು ಟ್ರ್ಯಾಕ್ ಮಾಡಲು ಇಲಾಖೆಯು ಕೋರಿದೆ. ಸಾರ್ವಜನಿಕರು ವಿದ್ಯುತ್ ಕಡಿತದ ಸಮಯವನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳಲು ಬೆಸ್ಕಾಂ ವಿನಂತಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hindu Rituals: ದೇವಸ್ಥಾನ ಪ್ರವೇಶಿಸುವಾಗ ಮೊದಲ ಮೆಟ್ಟಿಲು ಮುಟ್ಟಿ ನಮಸ್ಕರಿಸುವುದು ಯಾಕೆ ಗೊತ್ತಾ? ಆಧ್ಯಾತ್ಮಿಕ ರಹಸ್ಯ ಇಲ್ಲಿದೆ – Kannada News | Temple Steps: Unveiling the Spiritual Secrets and Significance of Ancient Hindu Rituals

ದೇವಸ್ಥಾನದ ಮೆಟ್ಟಿಲುಗಳ ಮಹತ್ವImage Credit source: Getty Images

ಯಾವುದೇ ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ಪಾದರಕ್ಷೆಗಳನ್ನು ಹೊರಗಿಡುವುದು, ಕೈಕಾಲುಗಳನ್ನು ತೊಳೆದುಕೊಳ್ಳುವುದು ಮತ್ತು ಕೆಲವು ಕಡೆಗಳಲ್ಲಿ ತಲೆಯನ್ನು ಶಾಲಿನಿಂದ ಮುಚ್ಚಿಕೊಳ್ಳುವುದನ್ನು ಕಾಣಬಹುದು. ಆದರೆ, ಈ ಎಲ್ಲಾ ನಿಯಮಗಳ ಜೊತೆಗೆ, ಭಕ್ತರು ದೇವಸ್ಥಾನದ ಒಳಗೆ ಹೋಗುವಾಗ ಮೊದಲು ಅಲ್ಲಿನ ಮೊದಲನೇ ಮೆಟ್ಟಿಲನ್ನು ಕೈಯಿಂದ ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ದೇವಸ್ಥಾನಕ್ಕೆ ಹೋಗುವ ಮುನ್ನ ಮೆಟ್ಟಿಲುಗಳನ್ನು ಮುಟ್ಟುವುದು ಕೇವಲ ಒಂದು ಆಚರಣೆಯಷ್ಟೇ ಅಲ್ಲ, ಅದರ ಹಿಂದೆ ಆಳವಾದ ನಂಬಿಕೆ ಮತ್ತು ಆಧ್ಯಾತ್ಮಿಕ ರಹಸ್ಯ ಅಡಗಿದೆ. ಈ ಸಂಪ್ರದಾಯದ ಹಿಂದಿನ ನಿಜವಾದ ಕಾರಣ ಮತ್ತು ಅದರ ಮಹತ್ವವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದೇವಸ್ಥಾನದ ಮೆಟ್ಟಿಲುಗಳನ್ನು ಮುಟ್ಟುವುದರ ಆಧ್ಯಾತ್ಮಿಕ ಮಹತ್ವ:

ಹಿಂದೂ ಧರ್ಮದ ಪ್ರಕಾರ, ದೇವಸ್ಥಾನವು ಕೇವಲ ಕಲ್ಲಿನ ಕಟ್ಟಡವಲ್ಲ; ಅದು ದೈವಿಕ ಮತ್ತು ಧನಾತ್ಮಕ ಶಕ್ತಿ (Positive Energy) ತುಂಬಿರುವ ಪವಿತ್ರ ಸ್ಥಳ. ದೇವಸ್ಥಾನಕ್ಕೆ ಪ್ರವೇಶಿಸುವಾಗ ನಮ್ಮ ಶರೀರ, ಮನಸ್ಸು ಮತ್ತು ಭಾವನೆಗಳು ಸಂಪೂರ್ಣವಾಗಿ ಶುದ್ಧವಾಗಿರಬೇಕು ಹಾಗೂ ಭಕ್ತಿಭಾವದಿಂದ ಕೂಡಿರಬೇಕು ಎಂಬುದು ಮುಖ್ಯ ನಿಯಮ.

  • ದೈವಿಕ ಗೌರವದ ಸಂಕೇತ: ಒಬ್ಬ ವ್ಯಕ್ತಿಯು ದೇವಸ್ಥಾನದ ಮೊದಲ ಮೆಟ್ಟಿಲನ್ನು ಮುಟ್ಟಿದಾಗ, ಅದು ದೈವಿಕ ಶಕ್ತಿಗೆ ನೀಡುವ ಪರಮ ಗೌರವದ ಸಂಕೇತವೆಂದು ಪರಿಗಣಿಸಲಾಗುತ್ತದೆ.
  • ನಕಾರಾತ್ಮಕತೆಯ ತ್ಯಾಗ: ಮೊದಲ ಮೆಟ್ಟಿಲಿಗೆ ನಮಸ್ಕರಿಸುವುದರ ಅರ್ಥ, ನಾವು ನಮ್ಮೊಳಗಿನ ಎಲ್ಲಾ ನಕಾರಾತ್ಮಕ ಆಲೋಚನೆಗಳನ್ನು ಹೊರಗೇ ಬಿಟ್ಟು, ಪವಿತ್ರ ಮನಸ್ಸಿನಿಂದ ದೇವರ ಸನ್ನಿಧಿಗೆ ಸಿದ್ಧರಾಗುತ್ತಿದ್ದೇವೆ ಎಂದರ್ಥ.
  • ಅಹಂಕಾರದ ವಿಸರ್ಜನೆ: ಮೆಟ್ಟಿಲುಗಳಿಗೆ ತಲೆಬಾಗಿ ನಮಸ್ಕರಿಸುವುದು ಮನುಷ್ಯನು ತನ್ನ ಅಹಂಕಾರ, ಕೋಪ ಮತ್ತು ಮತ್ಸರವನ್ನು ಭಗವಂತನ ಪಾದದ ಬಳಿ ತ್ಯಜಿಸುತ್ತಿರುವುದನ್ನು ಸೂಚಿಸುತ್ತದೆ. ಇದು ಸಂಪೂರ್ಣ ಶರಣಾಗತಿಯ (Surrender) ಭಾವನೆಯನ್ನು ಮೂಡಿಸುತ್ತದೆ.
  • ದೇವತೆಗಳ ವಾಸಸ್ಥಾನ: ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವಸ್ಥಾನದ ಮೊದಲ ಮೆಟ್ಟಿಲು ಭಗವಂತನ ಪಾದಕ್ಕೆ ಸಮಾನವಾಗಿದ್ದು, ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ದೇವಸ್ಥಾನದ ಮೆಟ್ಟಿಲುಗಳ ಹಿಂದಿರುವ ಮತ್ತೊಂದು ಆಳವಾದ ರಹಸ್ಯ:

ಪ್ರಾಚೀನ ಪರಂಪರೆಯಲ್ಲಿ ಮತ್ತೊಂದು ಪ್ರಮುಖ ಆಚರಣೆಯನ್ನು ನಾವು ಕಾಣಬಹುದು. ಭಕ್ತರು ದೇವರ ದರ್ಶನ ಮುಗಿಸಿ ಹೊರಬಂದ ನಂತರ, ದೇವಸ್ಥಾನದ ಮೆಟ್ಟಿಲುಗಳ ಮೇಲೆ ಕೆಲಕಾಲ ಕುಳಿತುಕೊಳ್ಳುತ್ತಾರೆ. ಇದು ನೋಡಲು ಸಾಮಾನ್ಯ ಪ್ರಕ್ರಿಯೆಯಂತೆ ಕಂಡರೂ, ಇದರ ಹಿಂದೆ ಒಂದು ವಿಶೇಷವಾದ ರಹಸ್ಯವಿದೆ.

ಶಾಸ್ತ್ರಗಳ ಪ್ರಕಾರ:

ದೇವಸ್ಥಾನದ ಗೋಪುರ ಅಥವಾ ಶಿಖರವನ್ನು ದೇವರ ಮುಖ ಭಾಗವೆಂದೂ ಮತ್ತು ಅದರ ಮೆಟ್ಟಿಲುಗಳನ್ನು ದೇವರ ಚರಣ (ಪಾದ) ಕಮಲಗಳೆಂದೂ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿ, ಭಕ್ತರು ಶಿಖರದ ದರ್ಶನ ಪಡೆದ ನಂತರ ಭಗವಂತನ ಪಾದದಂತಿರುವ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಾರೆ. ಹೀಗೆ ಕುಳಿತುಕೊಳ್ಳುವುದರಿಂದ ದೇವಸ್ಥಾನದ ಗರ್ಭಗುಡಿಯಿಂದ ಹೊರಹೊಮ್ಮುವ ದೈವಿಕ ತರಂಗಗಳು ಮತ್ತು ಧನಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶಿಸಿ, ಮನಸ್ಸಿಗೆ ಅಪಾರ ಶಾಂತಿ ಹಾಗೂ ನೆಮ್ಮದಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾದಿಂದ 6 ಆಟಗಾರರು ಔಟ್..!

Source link

Breaking News Today Live: ಅಮೆರಿಕ, ಇರಾನ್ ನಡುವೆ ಮತ್ತೆ ಹೆಚ್ಚಾಯ್ತು ಯುದ್ಧದ ಭೀತಿ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | V9 Kannada News Live 22 June 2026 Karnataka Weather, Politics, Cinema, Sports Latest Updates in Kannada

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಭೀತಿ ಹೆಚ್ಚಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ಭೀಕರ ದಾಳಿಯ ಬೆದರಿಕೆಗೆ ಇರಾನ್ ಕಠಿಣ ತಿರುಗೇಟು ನೀಡಿದೆ. ಇತ್ತ ಕರ್ನಾಟಕದಲ್ಲಿ ಡೀಸೆಲ್ ದರ ಏರಿಕೆ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಟಿಕೆಟ್ ದರವನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಸಿಎಂಗೆ ಮನವಿ ಮಾಡಲಾಗಿದ್ದು, ಜನಸಾಮಾನ್ಯರಿಗೆ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಇನ್ನು ಸಿನಿಮಾ ಲೋಕದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಭಾರತ ಮತ್ತು ವಿದೇಶಗಳಲ್ಲಿ ಎರಡು ವಿಭಿನ್ನ ಪ್ರಿಂಟ್‌ಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

ಬಾಕ್ಸ್ ಆಫೀಸ್‌ನಲ್ಲಿ ಪತಿ-ಪತ್ನಿ ಮಧ್ಯೆಯೇ ಬಿಗ್ ಕ್ಲ್ಯಾಶ್? ಕಿಯಾರಾ-ಸಿದ್ದಾರ್ಥ್ ಸಿನಿಮಾಗಳು ಒಟ್ಟಿಗೆ ರಿಲೀಸ್ – Kannada News | Kiara Sidharth Box Office Clash: ‘Toxic’ vs ‘One’ Release War? Yash Movie Update

ಸಿನಿಮಾ ರಂಗದಲ್ಲಿ ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಮುಖಾಮುಖಿಯಾಗುವುದು ಹೊಸದೇನಲ್ಲ. ಆದರೆ ಈ ಬಾರಿ ಬಾಲಿವುಡ್‌ನ ಕ್ಯೂಟ್ ಕಪಲ್ ಬಾಕ್ಸ್ ಆಫೀಸ್​​ನಲ್ಲಿ ಮುಖಾ ಮುಖಿ ಆಗತ್ತಿದ್ದಾರೆ. ಇಬ್ಬರೂ ನೇರ ಹಣಾಹಣಿಗೆ ಇಳಿಯುವ ಮುನ್ಸೂಚನೆ ಸಿಕ್ಕಿದ್ದು, ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆ ದಂಪತಿ ಬೇರೆ ಯಾರೂ ಅಲ್ಲ, ಕಿಯಾರಾ ಅಡ್ವಾಣಿ (Kiara Advani) ಹಾಗೂ ಸಿದ್ದಾರ್ಥ್ ಮಲ್ಹೋತ್ರ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಅನೌನ್ಸ್ ಆಗಿದೆ. ಈ ಚಿತ್ರದಲ್ಲಿ ಯಶ್‌ಗೆ ಜೋಡಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ‘ಟಾಕ್ಸಿಕ್’ ಸಿನಿಮಾ ಇದೇ ಆಗಸ್ಟ್ 26ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಟ್ವಿಸ್ಟ್ ಏನೆಂದರೆ, ಕಿಯಾರಾ ಅಡ್ವಾಣಿ ಅವರ ಪತಿ, ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ‘ವನ್’ ಸಿನಿಮಾ ಕೂಡ ಆಗಸ್ಟ್ 28 ಬಿಡುಗಡೆಯಾಗಲಿದೆ. ಈಗಾಗಲೇ ತಂಡ ದಿನಾಂಕವನ್ನು ಲಾಕ್ ಮಾಡಿಕೊಂಡಿದೆ. ಹೀಗಾಗಿ, ಕೇವಲ ಎರಡು ದಿನಗಳ ಅಂತರದಲ್ಲಿ ಈ ಎರಡೂ ಸಿನಿಮಾಗಳು ತೆರೆಗೆ ಬರುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಪತಿ-ಪತ್ನಿ ಮಧ್ಯೆಯೇ ದೊಡ್ಡ ಫೈಟ್ ನಡೆಯಲಿದೆ ಎಂದು ಫ್ಯಾನ್ಸ್ ಸಖತ್ ಎಕ್ಸೈಟ್ ಆಗಿದ್ದರು.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರವನ್ನು ಹಾಡಿಹೊಗಳಿದ ಕಿಯಾರಾ ಅಡ್ವಾಣಿ; ಹೆಚ್ಚಿತು ನಿರೀಕ್ಷೆ

ಆದರೆ, ಸದ್ಯ ಕೇಳಿಬರುತ್ತಿರುವ ಇತ್ತೀಚಿನ ವರದಿಗಳ ಪ್ರಕಾರ ಈ ಬಾಕ್ಸ್ ಆಫೀಸ್ ಮುಖಾಮುಖಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಸಿದ್ದಾರ್ಥ್ ಮಲ್ಹೋತ್ರಾ ಅವರ ‘ವನ್’ ಸಿನಿಮಾ ನಿಗದಿತ ದಿನಾಂಕಕ್ಕಿಂತ ಕೊಂಚ ಮುಂದಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ. ಒಂದು ವೇಳೆ ‘ವನ್’ ಸಿನಿಮಾ ಪೋಸ್ಟ್‌ಪೋನ್ ಆದಲ್ಲಿ, ಆಗಸ್ಟ್ ಕೊನೆಯ ವಾರದಲ್ಲಿ ಕಿಯಾರಾ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಸೋಲೋ ರನ್ ಸಿಗುವುದು ಪಕ್ಕಾ ಆದಂತಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಲಸೆ ನೀತಿಯಲ್ಲಿ ಫೇಲ್, ಯುಕೆ ಪ್ರಧಾನಿ ಕೀರ್ ಶೀಘ್ರ ರಾಜೀನಾಮೆ ನೀಡಲಿದ್ದಾರೆ: ಭವಿಷ್ಯ ನುಡಿದ ಟ್ರಂಪ್ – Kannada News | Trump Predicts UK PM Starmer’s Resignation Over Immigration and Energy Policy Failures

ಡೊನಾಲ್ಡ್​ ಟ್ರಂಪ್-ಸ್ಟಾರ್ಮರ್ Image Credit source: Forbes

ವಾಷಿಂಗ್ಟನ್, ಜೂನ್ 22: ವಲಸೆ ನೀತಿಯಲ್ಲಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್(Keir Starmer) ಸೋತಿದ್ದಾರೆ, ಅವರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ವಲಸೆ ಮತ್ತು ಇಂಧನ ನೀತಿಗಳಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು, ಅವರು ಶೀಘ್ರದಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ಟ್ರಂಪ್ ಭವಿಷ್ಯ ನುಡಿಯುವ ಮೂಲಕ ಜಾಗತಿಕ ರಾಜಕೀಯದಲ್ಲಿ ಆಘಾತ ಮೂಡಿಸಿದ್ದಾರೆ.

ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರೂತ್ ಸೋಶಿಯಲ್’ನಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. ಬ್ರಿಟಿಷ್ ಪತ್ರಿಕೆ ‘ಅಬ್ಸರ್ವರ್’ ವರದಿಯನ್ನು ಉಲ್ಲೇಖಿಸಿರುವ ರಾಯಿಟರ್ಸ್ ಸಂಸ್ಥೆಯು, ಪ್ರಧಾನಿ ಸ್ಟಾರ್ಮರ್ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ನಾಯಕತ್ವಕ್ಕೆ ಅವರದೇ ಪಕ್ಷದ ಪ್ರತಿಸ್ಪರ್ಧಿ ಆಂಡಿ ಬರ್ನ್‌ಹ್ಯಾಮ್ ಅವರಿಂದ ನೇರ ಸವಾಲು ಎದುರಾಗಿದೆ. ಆಂಡಿ ಬರ್ನ್‌ಹ್ಯಾಮ್ ಇತ್ತೀಚೆಗೆ ಸಂಸತ್ತಿನಲ್ಲಿ ಸ್ಥಾನ ಗೆದ್ದಿರುವುದು ಪ್ರಧಾನಿ ಸ್ಟಾರ್ಮರ್ ಅವರ ಕುರ್ಚಿಗೆ ಕಂಟಕ ತಂದಿಟ್ಟಿದೆ.

ಮತ್ತಷ್ಟು ಓದಿ: ಪ್ಯಾರಿಸ್‌ಗೆ ಪ್ರಧಾನಿ ಮೋದಿ ಆಗಮನ: ಜಾಗತಿಕ ಪ್ರಗತಿಗೆ ಭಾರತ-ಫ್ರಾನ್ಸ್ ಸಹಭಾಗಿತ್ವ ಅತ್ಯಗತ್ಯ

ದೇಶದ ಪ್ರಮುಖ ಸಮಸ್ಯೆಗಳಾದ ಅಕ್ರಮ ವಲಸೆ ತಡೆ ಹಾಗೂ ಇಂಧನ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಪ್ರಸ್ತುತ ಬ್ರಿಟನ್ ಸರ್ಕಾರ ಸಂಪೂರ್ಣ ಸೋತಿದೆ ಎಂದು ಟ್ರಂಪ್ ಸೇರಿದಂತೆ ಹಲವರು ಟೀಕಿಸಿದ್ದಾರೆ.

ಇರಾನ್ ಮೇಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಅಮೆರಿಕದ ಪಡೆಗಳು ಬ್ರಿಟನ್‌ನ ಮಿಲಿಟರಿ ನೆಲೆಯನ್ನು ಬಳಸಿಕೊಳ್ಳಲು ಪ್ರಧಾನಿ ಕೀರ್ ಸ್ಟಾರ್ಮರ್ ಅವಕಾಶ ನೀಡಲಿಲ್ಲ. ಇದು ಡೊನಾಲ್ಡ್ ಟ್ರಂಪ್ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಅಮೆರಿಕ ಪಡೆಗಳಿಗೆ ಸಹಕರಿಸದ ಬ್ರಿಟನ್, ಉಭಯ ದೇಶಗಳ ನಡುವಿನ ಐತಿಹಾಸಿಕ ನಿಕಟ ಸಂಬಂಧವನ್ನು ಹಾಳುಮಾಡಿದೆ. ನಾವು ಯುದ್ಧದಲ್ಲಿ ಗೆದ್ದ ನಂತರ ಬಂದು ನಮ್ಮ ಜೊತೆ ಕೈಜೋಡಿಸುವ ಅಂತಹ ನಾಯಕರು ನಮಗೆ ಬೇಡ ಎಂದು ಟ್ರಂಪ್ ಬ್ರಿಟನ್ ಪ್ರಧಾನಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

ಆದರೆ ಬ್ರಿಟನ್‌ನ ಸರ್ಕಾರಿ ಮೂಲಗಳ ಪ್ರಕಾರ, ಪ್ರಧಾನಿ ಸ್ಟಾರ್ಮರ್ ಪ್ರಸ್ತುತ ರಾಜೀನಾಮೆ ವದಂತಿಗಳನ್ನು ತಳ್ಳಿಹಾಕಿದ್ದು, ಸರ್ಕಾರವನ್ನು ನಡೆಸುವತ್ತ ಗಮನ ಹರಿಸಿದ್ದಾರೆ ಎಂದು ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟೀಮ್ ಇಂಡಿಯಾ ಸೆಮಿಫೈನಲ್​ಗೇರುವುದು ಹೇಗೆ? ಇಲ್ಲಿದೆ ಲೆಕ್ಕಾಚಾರ – Kannada News | How Can Team India Qualify For Women’s T20 World Cup 2026 Semifinal

ಮಹಿಳಾ ಟಿ20 ವಿಶ್ವಕಪ್​ನ 18ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಮ್ಯಾಚೆಂಸ್ಟರ್​ನ ಓಲ್ಡ್​ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 158 ರನ್​ಗಳು ಮಾತ್ರ. ಈ ಗುರಿಯನ್ನು ಸೌತ್ ಆಫ್ರಿಕಾ ತಂಡ 19.1 ಓವರ್​ಗಳಲ್ಲಿ ಚೇಸ್ ಮಾಡಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಟೀಮ್ ಇಂಡಿಯಾದ ಸೆಮಿಫೈನಲ್​ ಹಾದಿ ತುಸು ಕಷ್ಟಕರವಾಗಿದೆ.

ಏಕೆಂದರೆ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಗ್ರೂಪ್ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್​ಗೇರಲಿದೆ. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸೋಲಿನೊಂದಿಗೆ ಭಾರತ ತಂಡದ ಅಂಕ 4 ರಲ್ಲೇ ಉಳಿದಿದೆ. ಅತ್ತ ಟೀಮ್ ಇಂಡಿಯಾ ವಿರುದ್ಧ ಗೆದ್ದಿರುವ ಸೌತ್ ಆಫ್ರಿಕಾ ಒಟ್ಟು 4 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಇನ್ನು ಆರು ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಈ ಮೂರು ತಂಡಗಳಿಗೂ ಇನ್ನೂ ತಲಾ ಎರಡೆರಡು ಪಂದ್ಯಗಳಿದ್ದು, ಈ ಮ್ಯಾಚ್​ಗಳು ನಿರ್ಣಾಯಕ.

ಈ ನಿರ್ಣಾಯಕ ಪಂದ್ಯಗಳ ಮೂಲಕ ಟೀಮ್ ಇಂಡಿಯಾ ಹೇಗೆ ಸೆಮಿಫೈನಲ್​ಗೇರಲಿದೆ ಎಂದು ನೋಡುವುದಾದರೆ…

  •  ನೇರ ಎಂಟ್ರಿ ಲೆಕ್ಕಾಚಾರ: ಭಾರತ ತಂಡವು ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಯಾವುದೇ ನೆಟ್ ರನ್ ರೇಟ್ ಲೆಕ್ಕಾಚಾರವಿಲ್ಲದೆ ನೇರವಾಗಿ ಸೆಮಿಫೈನಲ್​ಗೇರುವುದನ್ನು ಎದುರು ನೋಡಬಹುದು.
  • ನೆಟ್ ರನ್ ರೇಟ್ ಲೆಕ್ಕಾಚಾರ:  ಒಂದು ವೇಳೆ ಭಾರತ ತಂಡ ಮುಂದಿನ ಎರಡು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದರೆ, ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.

ಭಾರತ ತಂಡವು ಜೂನ್ 25 ರಂದು ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಗೆಲುವನ್ನು ನಿರೀಕ್ಷಿಸಬಹುದು. ಆದರೆ ಜೂನ್ 28 ರಂದು ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಬೇಕಿದೆ. ಈ ಪಂದ್ಯವೇ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ.

ಏಕೆಂದರೆ ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಪಂದ್ಯಗಳನ್ನು ಆಡಲಿರುವುದು ದುರ್ಬಲ ನೆದರ್​ಲ್ಯಾಂಡ್ಸ್ ಹಾಗೂ ಬಾಂಗ್ಲಾದೇಶ್ ವಿರುದ್ಧ. ಒಂದು ವೇಳೆ ಸೌತ್ ಆಫ್ರಿಕಾ ತಂಡವು ತನ್ನ ಕೊನೆಯ ಎರಡು ಮ್ಯಾಚ್​ಗಳಲ್ಲೂ ಜಯ ಸಾಧಿಸಿದರೆ ಒಟ್ಟು 8 ಅಂಕಗಳನ್ನು ಪಡೆಯಲಿದೆ.

ಇದಾಗ್ಯೂ ಇಲ್ಲಿ ಟೀಮ್ ಇಂಡಿಯಾ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿರುವುದು ತನ್ನ ನೆಟ್​ ರನ್ ರೇಟ್. ಭಾರತ ತಂಡವು ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ +2.511 ನೆಟ್ ರನ್ ರೇಟ್ ಹೊಂದಿದೆ. ಇದೇ ವೇಳೆ ಸೌತ್ ಆಫ್ರಿಕಾ ತಂಡದ ನೆಟ್​ ರನ್ ರೇಟ್ -0.546 ನಲ್ಲಿದೆ.

ಅಂದರೆ ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಎರಡು ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೂ ಟೀಮ್ ಇಂಡಿಯಾ ಸೆಮಿಫೈನಲ್​ಗೇರಬಹುದು. ಇದಕ್ಕಾಗಿ ಭಾರತ ತಂಡವು ತನ್ನ ನೆಟ್ ರನ್ ರೇಟ್ ಕಡಿಮೆಯಾಗದಂತೆ ಮುಂದಿನ ಎರಡು ಪಂದ್ಯಗಳಲ್ಲೂ  ಜಯ ಸಾಧಿಸಬೇಕು. ಅಂದರೆ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾ ಸೆಮಿಫೈನಲ್​ಗೇರುವುದನ್ನು ಎದುರು ನೋಡಬಹುದು.

ಭಾರತ ತಂಡದ ಕೊನೆಯ ಎರಡು ಪಂದ್ಯಗಳ ವೇಳಾಪಟ್ಟಿ:

  • ಜೂನ್ 25: ಭಾರತ  vs ಬಾಂಗ್ಲಾದೇಶ್ (ಓಲ್ಡ್ ಟ್ರಾಫೋರ್ಡ್)
  • ಜೂನ್ 28: ಭಾರತ  vs ಆಸ್ಟ್ರೇಲಿಯಾ (ಲಾರ್ಡ್ಸ್)

ಈ ಎರಡು ಪಂದ್ಯಗಳನ್ನು ಗೆದ್ದರೆ ಟೀಮ್ ಇಂಡಿಯಾದ ಒಟ್ಟು ಅಂಕಗಳು ಎಂಟಕ್ಕೇರಲಿದೆ. ಒಂದು ವೇಳೆ ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಮ್ಯಾಚ್​ನಲ್ಲಿ ಗೆದ್ದರೆ ಟೀಮ್ ಇಂಡಿಯಾ ಅವರ ಕೊನೆಯ ಪಂದ್ಯವನ್ನೂ ಕೂಡ ಎದುರು ನೋಡಬೇಕಾಗುತ್ತದೆ.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ 6 ಆಟಗಾರರು ಔಟ್..!

ಏಕೆಂದರೆ ಜೂನ್ 29 ರಂದು ನಡೆಯಲಿರುವ ಕೊನೆಯ ಲೀಗ್​ ಪಂದ್ಯದಲ್ಲಿ ಸೌತ್ ಆಫ್ರಿಕಾ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ. ಅಂದರೆ ಭಾರತ ತಂಡ ಇತ್ತ 8 ಅಂಕಗಳನ್ನು ಪಡೆದರೂ ನೆಟ್ ರನ್ ರೇಟ್​ ಮೂಲಕ ಟೀಮ್ ಇಂಡಿಯಾವನ್ನು ಹಿಂದಿಕ್ಕಲು ಸೌತ್ ಆಫ್ರಿಕಾ ತಂಡ ಕೊನೆಯ ಮ್ಯಾಚ್​ನಲ್ಲಿ ಭರ್ಜರಿ ಪ್ಲ್ಯಾನ್ ರೂಪಿಸಲಿದ್ದಾರೆ. ಅದರಂತೆ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಗ್ರೂಪ್-ಎ ಯಿಂದ ಸೆಮಿಫೈನಲ್​ಗೇರುವ ತಂಡಗಳಾವುವು ಎಂದು ತಿಳಿಯಲು ಜೂನ್ 29 ರವರೆಗೆ ಕಾಯಲೇಬೇಕು.

Source link

Exit mobile version