ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ – Kannada News | Chethan Ahimsa announced new political party watch video

ನಟ ಚೇತನ್ ಅಹಿಂಸ (Chetan Ahimsa) ಅವರು ತಾವು ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುತ್ತಿರುವುದಾಗಿ ಘೋಷಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿರುವ ಚೇತನ್ ಅಹಿಂಸ ಅವರು ಇದೇ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಹೊಸ ಪಕ್ಷವನ್ನು ಹುಬ್ಬಳ್ಳಿಯಲ್ಲಿ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದೆಲ್ಲೆಡೆ ವಿವಿಧ ಸಮಾಜ ಪರ ಕೆಲಸ ಮಾಡುವ ಸಂಘಟನೆಗಳು, ದಲಿತ ಸಂಘಟನೆಗಳು, ಬಹುಜನ ಸಂಘಟನೆಗಳು ಸೇರಿದಂತೆ ಎಲ್ಲ ಸಂಘಟನೆಗಳನ್ನು ಒಗ್ಗಟ್ಟಾಗಿಸಿ ಹೊಸ ಪಕ್ಷ ಕಟ್ಟುತ್ತೇವೆ ಎಂದು ಚೇತನ್ ಹೇಳಿದ್ದಾರೆ. ತಮ್ಮ ಪಕ್ಷದ ಪ್ರಣಾಳಿಕೆಯ 10 ಅಂಶಗಳನ್ನು ಸಹ ಚೇತನ್ ಘೋಷಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಕಿಚ್ಚ ಸುದೀಪ್? – Kannada News | Sudeep making his Malayalam movie debut with Uyir movie

ಕಿಚ್ಚ ಸುದೀಪ್ (Kichcha Sudeep) ಕನ್ನಡದ ಸ್ಟಾರ್ ನಟ, ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವ ದಶಕಕ್ಕೂ ಮೊದಲೇ ಅವರು ಪ್ಯಾನ್ ಇಂಡಿಯಾ ಸ್ಟಾರ್. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಕಿಚ್ಚ, ದೇಶ, ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ಭಾಷೆಗಳಲ್ಲಿ ನಟಿಸಿರುವ ಸುದೀಪ್ ಅವರು ಮಲಯಾಳಂ ಸಿನಿಮಾನಲ್ಲಿ ಈ ವರೆಗೂ ನಟಿಸಿರಲಿಲ್ಲ. ಆದರೆ ಇದೀಗ ಮಲಯಾಳಂ ಚಿತ್ರರಂಗಕ್ಕೂ ಪದಾರ್ಪಣೆ ಮಾಡಲು ಮುಂದಾಗಿದ್ದಾರೆ.

ಸುದೀಪ್ ಅವರು ಇದೀಗ ಮಲಯಾಳಂ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಲಯಾಳಂನ ಕೆಲ ಮಾಧ್ಯಮಗಳು ವರದಿ ಮಾಡಿರುವಂತೆ ಸುದೀಪ್ ಅವರು ಈಗಾಗಲೇ ಮಲಯಾಳಂನ ‘ಉಯಿರ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಇದೊಂದು ಮರ್ಡರ್ ಮಿಸ್ಟರ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ರೋಷನ್ ಮ್ಯಾಥೀವ್ ನಾಯಕ. ನಿಜ ಘಟನೆ ಆಧರಿತ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ಪ್ರಮುಖವಾದ ಪಾತ್ರವೊಂದರಲ್ಲಿ ಸುದೀಪ್ ನಟಿಸಿದ್ದಾರಂತೆ.

ರೋಷನ್ ಮ್ಯಾಥಿವ್ ಜೊತೆಗೆ ಬೈಜು ಸಂತೋಷ್, ಶ್ರುತಿ ಮೆನನ್, ವಿನೀತ್ ತಟ್ಟಿಲ್ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಪೊಲೀಸರ ತಂಡವೊಂದು ಕೊಲೆಗಳನ್ನು ಬೆನ್ನತ್ತುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಮಲಯಾಳಂ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳು ಬಲು ಅಪರೂಪ, ಆದರೆ ಈ ಸಿನಿಮಾನಲ್ಲಿ ಸುದೀಪ್ ಅವರು ಪ್ರಮುಖವಾದ, ಕತೆಗೆ ತಿರುವು ನೀಡುವ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಇದೆ. ಕೆಲ ಮಲಯಾಳಂ ಸಿನಿಮಾ ಪೇಜುಗಳು ಸುದ್ದಿಯನ್ನು ಹಂಚಿಕೊಂಡಿವೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಕಿಚ್ಚನ್ ಸರ್​​ಪ್ರೈಸ್; ಸುದೀಪ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ

‘ಉಯಿರ್’ ಮಲಯಾಳಂ ಸಿನಿಮಾ ಇದೇ ಜೂನ್ 26ಕ್ಕೆ ಬಿಡುಗಡೆ ಆಗುತ್ತಿದೆ. ‘ಜೋಸೆಫ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಪದ್ಮಕುಮಾರ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೂಲಕ ಸುದೀಪ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ‘ಉಯಿರ್’ ಅವರ ಮೊದಲ ಮಲಯಾಳಂ ಸಿನಿಮಾ ಆಗಲಿದೆ.

ಸುದೀಪ್ ಅವರು ಪ್ರಸ್ತುತ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಚಿತ್ರೀಕರಣ ಚಾಲ್ತಿಯಲ್ಲಿದೆ. ಬಳಿಕ ಕೆಆರ್​​ಜಿ ನಿರ್ಮಿಸಲಿರುವ ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ. ಇವುಗಳ ಜೊತೆಗೆ ಇನ್ನೂ ಎರಡು ಸಿನಿಮಾಗಳನ್ನು ಸುದೀಪ್ ಓಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸುದೀಪ್ ಅವರು ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲೂ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ಹರಿದಾಡಿತ್ತು. ಆದರೆ ಆ ಬಗ್ಗೆ ಖಾತ್ರಿ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ENG vs NZ: 11 ವಿಕೆಟ್ ಉರುಳಿಸಿದ ಹೆನ್ರಿ; 253 ರನ್‌ಗಳಿಂದ ಸೋತ ಇಂಗ್ಲೆಂಡ್‌ – Kannada News | New Zealand Stuns England at Oval, Levels Series 1 1 with Decisive 253 Run Victory

ಓವಲ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 253 ರನ್‌ಗಳಿಂದ ಸೋಲಿಸಿದ ನ್ಯೂಜಿಲೆಂಡ್ ( New Zealand vs England) ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್‌ ಏಕಪಕ್ಷೀಯವಾಗಿ ಗೆದ್ದುಕೊಂಡರೆ, ಆ ಬಳಿಕ ಓವಲ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯವನ್ನು ನ್ಯೂಜಿಲೆಂಡ್ ಏಕಪಕ್ಷೀಯವಾಗಿ ಗೆದ್ದುಕೊಂಡಿತು. ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್‌ ತಂಡದ ನಾಯಕತ್ವವಹಿಸಿಕೊಂಡಿದ್ದ ಜೋ ರೂಟ್, ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು. ಗೆಲುವಿಗೆ 463 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಕೇವಲ 209 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಗ್ಲೆನ್ ಫಿಲಿಫ್ಸ್ ಸ್ಮರಣೀಯ ಶತಕ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ 391 ರನ್ ಕಲೆಹಾಕಿತು. ತಂಡದ ಪರ ಗ್ಲೆನ್ ಫಿಲಿಫ್ಸ್ ಸ್ಮರಣೀಯ ಶತಕ ಸಿಡಿಸಿದರು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ 291 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ 362 ರನ್ ಗಳಿಸಿ ಇಂಗ್ಲೆಂಡ್‌ಗೆ 463 ರನ್‌ಗಳ ಗುರಿ ನೀಡಿತು. ನಾಲ್ಕನೇ ದಿನದ ಆಟದ ಅಂತ್ಯದ ವೇಳೆಗೆ, ಇಂಗ್ಲೆಂಡ್ 182 ರನ್ ಗಳಿಸಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಹೀಗಾಗಿ ಕೊನೆಯ ದಿನದಂದು, ಇಂಗ್ಲೆಂಡ್‌ ಗೆಲುವಿಗೆ 281 ರನ್‌ಗಳ ಅಗತ್ಯವಿತ್ತು. ಕೈಯಲ್ಲಿ ಕೇವಲ ಐದು ವಿಕೆಟ್‌ಗಳು ಮಾತ್ರ ಇದ್ದವು.

ಹೆನ್ರಿ ದಾಳಿಗೆ ತತ್ತರಿಸಿದ ಇಂಗ್ಲೆಂಡ್

ಆದರೆ ಪಂದ್ಯದ ಐದನೇ ಮತ್ತು ಕೊನೆಯ ದಿನದಂದು, ಕಿವೀಸ್ ವೇಗಿ ಮ್ಯಾಟ್ ಹೆನ್ರಿ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಹೆನ್ರಿ ಕೊನೆಯ ದಿನದ ಮೊದಲ 50 ನಿಮಿಷಗಳಲ್ಲಿ ಇಂಗ್ಲೆಂಡ್‌ನ ಕೊನೆಯ ಐದು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಈ ಅವಧಿಯಲ್ಲಿ, ಮ್ಯಾಟ್ ಹೆನ್ರಿ 18.1 ಓವರ್‌ಗಳಲ್ಲಿ 29 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಪಡೆದರು.

IND vs AFG: ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌; ದಿಗ್ಗಜರನ್ನು ಹಿಂದಿಕ್ಕಿದ ರಿಷಭ್ ಪಂತ್

ಇತಿಹಾಸ ನಿರ್ಮಿಸಿದ ಹೆನ್ರಿ

ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೂ ಮಾರಕ ಬೌಲಿಂಗ್‌ ಸಂಘಟಿಸಿದ ಮ್ಯಾಟ್ ಹೆನ್ರಿ 5 ವಿಕೆಟ್‌ಗಳನ್ನು ಕಬಳಿಸಿದ್ದರು. ಒಟ್ಟಾರೆ ಈ ಪಂದ್ಯದಲ್ಲಿ ಅವರು 11 ವಿಕೆಟ್‌ಗಳನ್ನು ಪಡೆದರು. ಈ ಮೂಲಕ 2005 ರಿಂದ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು, ಶೇನ್ ವಾರ್ನ್ ಐತಿಹಾಸಿಕ 2005 ರ ಆಶಸ್ ಸರಣಿಯ ಸಮಯದಲ್ಲಿ ಇಲ್ಲಿ ನಡೆದ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರೊಂದಿಗೆ, 1994 ರಲ್ಲಿ ಡೆವೊನ್ ಮಾಲ್ಕಮ್ ನಂತರ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಹೆನ್ರಿ ಪಾತ್ರರಾದರು. ಸರಣಿಯ ಮೂರನೇ ಮತ್ತು ಕೊನೆಯ ಟೆಸ್ಟ್ ಈಗ ಜೂನ್ 25 ರಿಂದ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಮರುಪರೀಕ್ಷೆ ಯಶಸ್ವಿ; 22 ಲಕ್ಷಕ್ಕೂ ಅಧಿಕ ಮಕ್ಕಳು ಹಾಜರ್; ಕಳೆದ ಬಾರಿಗಿಂತ ಭೌತಶಾಸ್ತ್ರ ಪತ್ರಿಕೆ ಕಠಿಣವಿತ್ತೆಂದ ವಿದ್ಯಾರ್ಥಿಗಳು – Kannada News | NEET re examination successfully conducted across the country, no paper leak reported

ನವದೆಹಲಿ, ಜೂನ್ 21: ವೈದ್ಯಕೀಯ ಕೋರ್ಸ್​ಗಳಿಗೆ ಪ್ರವೇಶಾತಿಗೆಂದು ನಡೆಸಲಾಗುವ ನೀಟ್​ನ ಮರುಪರೀಕ್ಷೆ (NEET Re-examination) ದೇಶಾದ್ಯಂತ ಇಂದು ಭಾನುವಾರ ಯಶಸ್ವಿಯಾಗಿ ನಡೆದಿದೆ. ಪೇಪರ್ ಲೀಕ್ ಆಗಿದ್ದ ಹಿನ್ನೆಲೆಯಲ್ಲಿ ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದರಿಂದ ಇವತ್ತು ಮರುಪರೀಕ್ಷೆ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆಯಾಗದಂತೆ ಸರ್ಕಾರ ಕಟ್ಟೆಚ್ಚರ ವಹಿಸಿ ಪರೀಕ್ಷೆ ಏರ್ಪಡಿಸಿತ್ತು. ಮತ್ತು ನಕಲಿ ಸೋರಿಕೆ ಪ್ರಕರಣಗಳ ಹಾವಳಿಯ ಮಧ್ಯೆ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

ದೇಶಾದ್ಯಂತ 551 ನಗರಗಳಲ್ಲಿ, 5,440 ಕೇಂದ್ರಗಳಲ್ಲಿ 22.79 ಅಭ್ಯರ್ಥಿಗಳಿಗೆ ನೀಟ್ ಪರೀಕ್ಷೆ ನಡೆಸಲಾಗಿದೆ. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:15ರವರೆಗೆ ರೀ ಎಕ್ಸಾಮಿನೇಶನ್ ನಡೆದಿದೆ. ವಿದ್ಯಾರ್ಥಿಗಳ ಫೇಸ್ ಅಥೆಂಟಿಕೇಶನ್ ಹಾಗೂ ಇತರ ಭದ್ರತೆಗಾರಿ ಲಕ್ಷ ಸಮೀಪದಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತೀ ಕೇಂದ್ರದಲ್ಲೂ 40-50 ಭದ್ರತಾ ಸಿಬ್ಬಂದಿಯ ವ್ಯವಸ್ಥೆ ಮಾಡಲಾಗಿತ್ತು. 48,448 ಬಯೋಮೆಟ್ರಿಕ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪೊಲೀಸ್, ಪ್ಯಾರಾಮಿಲಿಟರಿ ಪಡೆಗಳನ್ನೂ ಬಳಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ತುಷಾರ್ ಮೆಹ್ತಾ ಭಾರತದ ಸಾಲಿಸಿಟರ್ ಜನರಲ್ ಆಗಿ ಮರುನೇಮಕ; ಸರ್ವೋಚ್ಚ ನ್ಯಾಯಾಲಯದ ಐವರು ಎಎಸ್​ಜಿಗಳ ಅವಧಿಯೂ ವಿಸ್ತರಣೆ

ಕಳೆದ ಬಾರಿಗಿಂತ ಪರೀಕ್ಷೆ ಕಠಿಣ ಎಂದ ವಿದ್ಯಾರ್ಥಿಗಳು

ಮಾಧ್ಯಮಗಳಿಗೆ ಬಂದ ವರದಿಗಳ ಪ್ರಕಾರ, ಕಳೆದ ತಿಂಗಳು ನಡೆದಿದ್ದ ನೀಟ್ ಪರೀಕ್ಷೆಗಿಂತ ಈ ಮರುಪರೀಕ್ಷೆ ಹೆಚ್ಚು ಕಠಿಣವಾಗಿತ್ತು ಎಂದು ಹೆಚ್ಚಿನ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಅದರಲ್ಲೂ ಭೌತಶಾಸ್ತ್ರ ಪತ್ರಿಕೆ ಬಹಳ ಕಠಿಣ ಇತ್ತು ಎಂದು ಬಹಳ ಮಕ್ಕಳು ಅಭಿಪ್ರಾಯಪಟ್ಟಿದ್ದಾರೆ.

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಪತ್ರಿಕೆಗಳ ಪೈಕಿ ಜೀವಶಾಸ್ತ್ರ ಇದ್ದುದರಲ್ಲಿ ಸುಲಭವಿತ್ತೆಂದು ಬಹಳ ಅಭ್ಯರ್ಥಿಗಳು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸುಸೂತ್ರವಾಗಿ ನಡೆದ ನೀಟ್‌ ಮರು ಪರೀಕ್ಷೆ: ಎಕ್ಸಾಂ ಬಗ್ಗೆ ವಿದ್ಯಾರ್ಥಿಗಳು ಹೇಳಿದ್ದೇನು?

ಅಭ್ಯರ್ಥಿಗಳಿಗೆ ತೊಂದರೆಯಾಗದಿರಲೆಂದು ಏರ್​ಪೋರ್ಟ್​ನಲ್ಲೇ ಸ್ವಲ್ಪ ಹೊತ್ತು ಉಳಿದುಕೊಂಡ ಮೋದಿ

ನೀಟ್ ಪರೀಕ್ಷೆ ನಡೆದ ಇಂದು ಹಲವು ರೀತಿಯ ಘಟನೆಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಪ್ರಧಾನಿಗಳು ಏರ್​​ಪೋರ್ಟ್​ನಲ್ಲೇ 45 ನಿಮಿಷ ಕಾದು ನಿಂತ ಘಟನೆಯೂ ಸೇರಿದೆ. ಮೋದಿಯವರು ಕೋಲ್ಕತಾದಿಂದ ಫ್ಲೈಟ್​ನಲ್ಲಿ ಮಧ್ಯಾಹ್ನ 1:15ಕ್ಕೆ ದಿಲ್ಲಿ ಏರ್​ಪೋರ್ಟ್​ಗೆ ಬಂದಿಳಿದಿದ್ದರು. ಅವರು ಅಲ್ಲಿಂದ ರಸ್ತೆ ಮೂಲಕ ಸಾಗಿ ಹೋಗುವುದಿತ್ತು. ಆದರೆ, ನೀಟ್ ಪರೀಕ್ಷೆ ಎರಡು ಗಂಟೆಗೆ ಇತ್ತು. ನಗರದ ವಿವಿಧೆಡೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ತಲುಪುವ ಧಾವಂತದಲ್ಲಿ ಇದ್ದಿರುತ್ತಾರೆ. ಈ ಹೊತ್ತಲ್ಲಿ ಪ್ರಧಾನಿಗಳು ರಸ್ತೆ ಮೂಲಕ ಸಾಗಿದರೆ ಟ್ರಾಫಿಕ್ ಜಾಮ್ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ಪ್ರಧಾನಿಗಳು ಪರೀಕ್ಷೆಯ ಆರಂಭದ ಸಮಯವಾದ ಎರಡು ಗಂಟೆಯವರೆಗೂ ಏರ್​ಪೋರ್ಟ್​ನಲ್ಲೇ ಕಾದು ನಂತರ ತಮ್ಮ ನಿವಾಸಕ್ಕೆ ತೆರಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಿಮ್ ಟ್ರೈನರ್ ವಿಜಯ್ ಕೊಲೆಗೆ ಬಿಗ್​ ಟ್ವಿಸ್ಟ್​​: ಪ್ರಭಾವಿ ಉದ್ಯಮಿಯ ಕೈವಾಡ, ಯಾರದು? – Kannada News | Big Twist in Gym Trainer Vijay’s Death Case: Businessman’s Name Surfaces, Who Is He

ಜಿಮ್ ಟ್ರೈನರ್ ವಿಜಯ್Image Credit source: tv9 kannada

ಆನೇಕಲ್​​, ಜೂನ್​​ 21: ಜಿಮ್ ಟ್ರೈನರ್ ವಿಜಯ್ ಕೊಲೆ ಪ್ರಕರಣಕ್ಕೆ (Gym Trainer kill case) ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪ್ರಭಾವಿ ಉದ್ಯಮಿಯ ಮಗಳ ಜೊತೆಗಿನ ಲವ್ ಕಹಾನಿಯೇ ವಿಜಯ್ ಕೊಲೆಗೆ ಕಾರಣವಾಗಿದೆ. ನಾಲ್ವರು ಆರೋಪಿಗಳ ಬಂಧನ ಬೆನ್ನಲ್ಲೇ ಸ್ಫೋಟಕ ತಿರುವು ಸಿಕ್ಕಿದ್ದು, ಉದ್ಯಮಿ (businessman) ಮಗಳ ಜೊತೆಗಿನ ವಿಜಯ್ ಪ್ರೀತಿ ಸುಪಾರಿ ಕೊಲೆಯಲ್ಲಿ ಅಂತ್ಯವಾಗಿದೆ.

ಮುಖ್ಯಾಂಶಗಳು

  • ಜಿಮ್ ಟ್ರೈನರ್ ವಿಜಯ್ ಕೊಲೆ ಕೇಸ್​​ ಮೇಜರ್ ಟ್ವಿಸ್ಟ್​
  • ಕೇಸ್ ಹಿಂದೆ ಪ್ರಭಾವಿ ಉದ್ಯಮಿ ಕೈವಾಡ ಆರೋಪ
  • ನಾಲ್ವರು ಆರೋಪಿಗಳನ್ನ ಬಂಧಿಸಿರುವ ಬನ್ನೇರುಘಟ್ಟ ಪೊಲೀಸರು

ನಾಲ್ವರ ಬಂಧನ

ಕೋಲಾರದ ಮುಳಬಾಗಿಲು ಗ್ರಾಮದ ಜಿಮ್ ಟ್ರೈನರ್ ವಿಜಯ್ ಕೊಲೆ ಕೇಸ್ ಬೆಳಕಿಗೆ ಬಂದು ಇಂದಿಗೆ 10 ದಿನ ಕಳೆದಿದ್ದು, ಸದ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಸುಪಾರಿ ಸುಳಿವು ಸಿಗುತ್ತಿದ್ದಂತೆ ಹೈಪ್ರೊಫೈಲ್ ಪ್ರಕರಣವಾಗಿ ಬದಲಾಗಿತ್ತು. ಪ್ರಕರಣ ಸಂಬಂಧ ಬನ್ನೇರುಘಟ್ಟ ಪೊಲೀಸರು ಆನೇಕಲ್ ಮೂಲದ ಶ್ರೀರಾಮ್, ಸುಮಿತ್, ವೆಂಕಟೇಶಯ್ಯ ಮತ್ತು ಬಾಬು ಎಂಬ ನಾಲ್ವರನ್ನು ಬಂಧಿಸುತ್ತಿದ್ದಂತೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.

ಇದನ್ನೂ ಓದಿ: ವಿಷ ಸೇವಿಸಿ ಶಾಲಾ ಮುಖ್ಯಶಿಕ್ಷಕ ಆತ್ಮಹತ್ಯೆ ಪ್ರಕರಣ: ಐವರು ಶಿಕ್ಷಕರು ಸೇರಿ 10 ಮಂದಿ ವಿರುದ್ಧ ಎಫ್​​ಐಆರ್​

ಜಿಮ್ ಟ್ರೈನರ್ ವಿಜಯ್ ಕೊಲೆ ಹಿಂದೆ ಆತನ ಪ್ರೇಯಸಿ ತಂದೆ ಉದ್ಯಮಿ ಕಾಮಿನೇನಿ ಪ್ರಸಾದ್ ಎಂಬುವವರ ಕೈವಾಡ ಇದೆ. ಕೋಟ್ಯಂತರ ರೂ ಸುಪಾರಿ ನೀಡಿ ಕೊಲೆ ಮಾಡಿ ಮಾಡಿಸಿದ್ದಾರೆ ಎಂದು ಮೃತ ವಿಜಯ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ನಡುವೆ ಪೊಲೀಸರ ತನಿಖೆ ವೇಳೆ ಪ್ರಕರಣದ ಪ್ರಮುಖ ಆರೋಪಿ ಶ್ರೀರಾಮ್, ಈ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಆನೇಕಲ್ ವಕೀಲನ ಮೂಲಕ ಅವರ ಕಛೇರಿಯಲ್ಲಿಯೇ ಕಾಮಿನೇನಿ ಪ್ರಸಾದ್ ಪರಿಚಯವಾಗಿದ್ದು, ಕೊಲೆ ಬಗ್ಗೆ ಮಾತುಕತೆ ನಡೆಸಿದ್ದರ ಬಗ್ಗೆಯೂ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಮದುವೆಯಾಗಿದ್ದರೂ ಉದ್ಯಮಿ ಮಗಳ ಜೊತೆ ಲವ್ವಿಡವ್ವಿ

ಇನ್ನು ಕೆಲ ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ವಿಜಯ್, ಕೆಆರ್​ಪುರಂನಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದ. 7 ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ವಿಜಯ್ ಮಾತ್ರ ಜಿಮ್ ಟ್ರೈನಿಂಗ್​ಗೆ ಬರುತ್ತಿದ್ದ ಉದ್ಯಮಿ ಮಗಳ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಪತ್ನಿ ವಿಜಯ್​ನನ್ನ ಬಿಟ್ಟು ಮಕ್ಕಳ ಜೊತೆ ತವರು ಮನೆ ಸೇರಿದ್ದಳು.

ವಿಜಯ್​ಗೆ ವಾರ್ನ್ ಮಾಡಿದ್ದ ಉದ್ಯಮಿ

ಇತ್ತ ವಿಜಯ್ ಕೋಟಿ ಒಡತಿ ಪ್ರೇಯಸಿ ಜೊತೆ ಪರಾರಿಯಾಗಿದ್ದ. ಇತ್ತ ಮಗಳ ಲವ್ ವಿಚಾರ ತಿಳಿದ ಉದ್ಯಮಿ ಕಾಮಿನೇನಿ ಪ್ರಸಾದ್, ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಜೋಡಿಯನ್ನು ಪತ್ತೆಹಚ್ಚಿದ್ದರು. ಅಂದು ವಿಜಯ್​ಗೆ ವಾರ್ನ್ ಮಾಡಿದ್ದ ಉದ್ಯಮಿ ಹುಡುಗರನ್ನ ಬಿಟ್ಟು ವಿಜಯ್ ಮೇಲೆ ಹಲ್ಲೆ ಕೂಡ ಮಾಡಿಸಿದ್ದಂತೆ. ಇಷ್ಟಾದ್ರೂ ಬುದ್ಧಿ ಕಲಿಯದ ವಿಜಯ್ ಹಾಗೂ ಉದ್ಯಮಿ ಪುತ್ರಿ ತಮ್ಮ ಪ್ರೀತಿ ಮುಂದುವರಿಸಿದ್ದರು ಎನ್ನಲಾಗಿದೆ.

10 ದಿನದ ಹಿಂದೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಈ ನಡುವೆ 10 ದಿನದ ಹಿಂದೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳೇಶ್ವರಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಕಾಲ್ ಡಿಟೇಲ್ಸ್, ಸಿಡಿಆರ್, ಲೊಕೇಶನ್ ಟವರ್ ಡಂಪ್ ಸೇರಿದಂತೆ ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಆನೇಕಲ್ ಮೂಲದ ಶ್ರೀರಾಮ್, ಸುಮಿತ್, ವೆಂಕಟೇಶಯ್ಯ ಮತ್ತು ಬಾಬು ಎಂಬ ನಾಲ್ವರನ್ನು ಬಂಧಿಸಿದ್ದು, ಪೊಲೀಸರು ತಮ್ಮ ಸ್ಟೈಲ್​​ನಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ವಿಜಯ್ ಕೊಲೆ ಅಸಲಿ ಕಹಾನಿ ಬಿಚ್ಚಿಟ್ಟಿದ್ದಾರೆ.

ನ್ಯಾಯಕ್ಕಾಗಿ ಪೋಷಕರು ಒತ್ತಾಯ

ಹೈಪ್ರೊಫೈಲ್ ಕೊಲೆ ಕೇಸ್ ಸಂಬಂಧ ಪೊಲೀಸರು ಯಾವುದೇ ಮಾಹಿತಿ ನೀಡುತ್ತಿಲ್ಲ. ಕೇಂದ್ರ ವಲಯ ಐಜಿಪಿ ಗಿರೀಶ್ ಬನ್ನೇರುಘಟ್ಟ ಠಾಣೆಗೆ ಭೇಟಿ ನೀಡಿ ವಿಜಯ್ ಮರ್ಡರ್ ಕೇಸ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕೊಲೆ ಸಂಬಂಧ ನಾಲ್ವರು ಆರೋಪಿಗಳ ಬಂಧನ ಮಾತ್ರ ಆಗಿದೆ. ಇನ್ನೂ ಪ್ರಕರಣ ತನಿಖಾ ಹಂತದಲ್ಲಿದೆ ಎಂದು ತಿಳಿಸಿದ್ದು, ಆನೇಕಲ್ ವಕೀಲನ ಮೂಲಕ ಉದ್ಯಮಿ ಕಾಮಿನೇನಿ ಪ್ರಸಾದ್ ಆರೋಪಿಗಳಿಗೆ ಸುಪಾರಿ ಕೊಟ್ಟಿರುವ ಬಗ್ಗೆ ಮಾಹಿತಿ ನೀಡಲು ಕೇಂದ್ರ ವಲಯ ಐಜಿಪಿ ಗಿರೀಶ್ ನೀರಾಕರಿಸಿದ್ದಾರೆ. ಆದರೆ ಉದ್ಯಮಿ ಕಾಮಿನೇನಿ ಪ್ರಸಾದ್​​ಗೆ ಐಪಿಎಸ್ ಅಧಿಕಾರಿಗಳ ನಂಟು ಇದೆ. ಹಾಗಾಗಿ ಪೊಲೀಸರು ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ತನಿಖೆ ನಡೆಸಿ ಮೃತ ವಿಜಯ್ ಸಾವಿಗೆ ನ್ಯಾಯ ಕೊಡಿಸುವಂತೆ ವಿಜಯ್ ಪೋಷಕರು ಮತ್ತು ಆಪ್ತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲೊಂದು ವಿಚಿತ್ರ ಘಟನೆ: ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!

ಪ್ರೀತಿಸಿ ಮದುವೆ ಆಗಿ ಇಬ್ಬರು ಮಕ್ಕಳಿದ್ದರೂ ಉದ್ಯಮಿ ಮಗಳ ಜೊತೆ ಲವ್ವಿಡವ್ವಿ ಅಂತ ವಿಜಯ್ ಹೆಣವಾಗಿದ್ದಾನೆ. ಕೊಲೆ ಆರೋಪ ಹೊತ್ತಿರುವ ಕಾಮಿನೇನಿ ಮತ್ತು ವಕೀಲ ಸೇರಿದಂತೆ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆರ್​ಎಸ್​ಎಸ್​ನವರು ಪುಕ್ಕಲರು, ನಾವು ಮೈಮರೆತ್ತಿದ್ದಕ್ಕೆ ವಿಜೃಂಭಿಸುತ್ತಿದ್ದಾರೆ: ಹರಿಪ್ರಸಾದ್ ಕಿಡಿ – Kannada News | BK Hariprasad Hits at RSS And BJP in KPCC President swearing in ceremony

ಬೆಂಗಳೂರು, (ಜೂನ್ 21): ಬಿಕೆ ಹರಿಪ್ರಸಾದ್ (BK Hariprasad) ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಇಂದು (ಜೂನ್ 21) ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಹಿಂದಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಂದ ಬಿಕೆ ಹರಿಪ್ರಸಾದ್ ಅವರು ಧ್ವಜ ಸ್ವೀಕರಿಸಿದರು. ಈ ಮೂಲಕ ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಬಳಿಕ ಮಾತನಾಡಿ ಹರಿಪ್ರಸಾದ್, ಬಿಜೆಪಿ ಹಾಗೂ ಆರ್​​ಎಸ್​​ಎಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೋಡ್ಸೆ ಒಬ್ಬ ಈ ದೇಶದ ಮೊಟ್ಟಮೊದಲ ಉಗ್ರ ಎಂದು ಬಿಜೆಪಿ ಹೇಳಿಲ್ಲ. ಗೋಡ್ಸೆ ಒಬ್ಬ ಕೊಲೆಗಾರ ಎಂದು ಬಿಜೆಪಿಯವರು ಇದುವರೆಗೆ ಹೇಳಿಲ್ಲ. ಆರ್​ಎಸ್​ಎಸ್​ನವರು ಪುಕ್ಕಲರು ಅವರಿಗೆ ಧೈರ್ಯವೇ ಇಲ್ಲ. ನಾವು ಮೈಮರೆಯುತ್ತಿದ್ದೇವೆ. ಅದಕ್ಕಾಗಿ ಅವರು ವಿಜೃಂಭಿಸುತ್ತಿದ್ದಾರೆ ಎಂದು ಆರ್​​ಎಸ್​​ಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ ನಟ ಚೇತನ್ ಅಹಿಂಸ – Kannada News | Chethan Ahimsa announce he is starting a political party

ಚೇತನ್ ಅಹಿಂಸ (Chetan Ahimsa), ಸಿನಿಮಾಗಳಿಗಿಂತಲೂ ತಮ್ಮ ರಾಜಕೀಯ ಹೇಳಿಕೆಗಳು, ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ರಾಜಕೀಯ, ಜಾಗೃತಿ ಕಾರ್ಯಕ್ರಮಗಳು, ಪ್ರತಿಭಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟ ಚೇತನ್ ಅಹಿಂಸ ಇದೀಗ ತಮ್ಮದೇ ಆದ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ತಮ್ಮ ಪಕ್ಷದ ಬಗ್ಗೆ ಹಲವು ವಿವರಗಳನ್ನು ಚೇತನ್ ಅಹಿಂಸ ಹಂಚಿಕೊಂಡಿದ್ದು, ಪಕ್ಷದ ಧ್ಯೇಯ, ಉದ್ದೇಶ, ಗುರಿ, ಸದಸ್ಯತ್ವ ಇನ್ನೂ ಹಲವು ವಿಷಯಗಳ ಕುರಿತಾಗಿ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ.

ವಿವಿಧ ಸಮಾಜ ಪರ ಕೆಲಸ ಮಾಡುವ ಸಂಘಟನೆಗಳು, ದಲಿತ ಸಂಘಟನೆಗಳು, ಬಹುಜನ ಸಂಘಟನೆಗಳು ಸೇರಿದಂತೆ ಎಲ್ಲ ಸಂಘಟನೆಗಳನ್ನು ಒಗ್ಗಟ್ಟಾಗಿಸಿ ಹೊಸ ಪಕ್ಷ ಕಟ್ಟುತ್ತೇವೆ. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. 224 ಕ್ಷೇತ್ರದಲ್ಲೂ ಪಕ್ಷ ಸಂಘಟನೆ ಮಾಡುತ್ತೇವೆ. 2027ರ ಜನವರಿ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷದ ಹೆಸರು, ಪಕ್ಷದ ಚಿನ್ಹೆ ಪಕ್ಷದ ಪ್ರಣಾಳಿಕೆ,ಪಕ್ಷದ ಧ್ವಜ ರಾಜ್ಯ ಸಮಿತಿ ರಚನೆ, ಇನ್ನಿತರೆ ವಿಚಾರಗಳ ಘೋಷಣೆ ಮಾಡಲಿದ್ದೇವೆ ಎಂದು ಚೇತನ್ ಅಹಿಂಸ ಹೇಳಿದ್ದಾರೆ.

ಇದನ್ನೂ ಓದಿ:ಚೇತನ್ ಅಹಿಂಸ ಭಾರತೀಯನೇ ಅಲ್ಲ: ನಟಿ ಜಯಮಾಲಾ

ಸಮ ಸಮಾಜ ಕಟ್ಟುವುದು ನಮ್ಮ ಮುಖ್ಯ ಉದ್ದೇಶ. ಅದಕ್ಕಾಗಿಯೇ ಪಕ್ಷದ ಹೆಸರಿನಲ್ಲಿ ಸಂವಿಧಾನದ ಪದಗಳಿರಲಿವೆ. ನಾವು ಪಕ್ಷವನ್ನು ರಿಜಿಸ್ಟರ್ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ‌ ಮತ್ತು ಅದನ್ನು ಮುಂದುವರಿಸುತ್ತೇವೆ ಎಂದ ಚೇತನ್ ಅಹಿಂಸ, ಪಕ್ಷದ ಪ್ರಣಾಳಿಕೆಯ 10 ಅಂಶಗಳನ್ನು ಸಹ ಹೇಳಿದ್ದು, ಅವು ಇಂತಿವೆ; ಲಿಂಗ ಸಮಾನತೆ , ಜಾತಿಯ ಸಮಾನತೆ , ಆರ್ಥಿಕ ಸಮಾನತೆ , ಭದ್ರತೆ , ಧರ್ಮ ನಿರಪೇಕ್ಷತೆ , ಪ್ರಾದೇಶಿಕತೆ ಮತ್ತು ಭಾಷೆ-ಸಾಂಸ್ಕೃತಿಕ ಸಮಾನತೆ , ಪರಿವರ್ತನಾ ಪರಿಸರವಾದ , ಭ್ರಷ್ಟಾಚಾರ ವಿರೋಧಿ , ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮದ ಸ್ವಾತಂತ್ರ್ಯ , ಶಿಕ್ಷಣ ಮತ್ತು ಆರೋಗ್ಯದಲ್ಲಿ ಪರಿವರ್ತನೆ. ಇದರ ಜೊತೆಗೆ ಪೊಲೀಸ್ ಮತ್ತು ಜೈಲು ಸುಧಾರಣೆ, ನ್ಯಾಯ ಮತ್ತು ಮೂಲಸೌಕರ್ಯ, ತಂತ್ರಜ್ಞಾನ ಬಳಕೆ ಇನ್ನಿತರೆಗಳು ನಮ್ಮ ಉದ್ದೇಶ ಎಂದು ಚೇತನ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್ ಹರ್ಮನ್​ಪ್ರೀತ್ ಕೌರ್ – Kannada News | Harmanpreet Kaur Makes History: First Cricketer to Play 200 T20Is at Women’s T20 World Cup

ಹರ್ಮನ್‌ಪ್ರೀತ್ ಕೌರ್ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದು, ಅದು ಇದುವರೆಗೆ ಯಾವುದೇ ಪುರುಷ ಅಥವಾ ಮಹಿಳಾ ಆಟಗಾರ್ತಿ ಸಾಧಿಸದ ದಾಖಲೆಯಾಗಿದೆ. 2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ, ಹರ್ಮನ್‌ಪ್ರೀತ್ 200 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ (PC-PTI).

Source link

ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ – Kannada News | Siddaramaiah Makes comedy about Speech during KPCC President BK Hariprasad swearing in ceremony

ಬೆಂಗಳೂರು, (ಜೂನ್ 21): ಬಿಕೆ ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಇಂದು (ಜೂನ್ 21) ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಹಿಂದಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನೂತನ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರಿಗೆ ಧ್ವಜ ಹಸ್ತಾಂತರಿಸಿದರು. ಬಳಿಕ ಎಲ್ಲಾ ನಾಯಕರು ಪಕ್ಷ ಸಂಘಟನೆ ಬಗ್ಗೆ ವಿವರವಾಗಿ ಮಾತನಾಡಿದರು. ಇನ್ನು ಕಾರ್ಯಕ್ರಮದಲ್ಲಿ ಕೊನೆಯದಾಗಿ ಭಾಷಣ ಮಾಡಲು CWC ಸದಸ್ಯತ್ವ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಅವಕಾಶ ನೀಡಲಾಗಿದ್ದು, ಇದಕ್ಕೆ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದ ಪ್ರಸಂಗ ನಡೆಯಿತು. ಎಂದಿನಂತೆ ನಾನು ಕೊನೆಯ ಭಾಷಣಕಾರ. ಹೀಗಾಗಿ ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಹರಿಪ್ರಸಾದ್ ಗೆ ಮನವಿ ಮಾಡಿ ಹಾಸ್ಯ ಚಟಾಕಿ ಹಾರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ರಾಜ್ಯದಲ್ಲಿ ಸುಸೂತ್ರವಾಗಿ ನಡೆದ ನೀಟ್‌ ಮರು ಪರೀಕ್ಷೆ: ಎಕ್ಸಾಂ ಬಗ್ಗೆ ವಿದ್ಯಾರ್ಥಿಗಳು ಹೇಳಿದ್ದೇನು? – Kannada News | NEET Re Examination Conducted Smoothly Across the State: What Did Students Say About the Exam

ಬೆಂಗಳೂರು, ಜೂನ್​​ 21: ಪ್ರಶ್ನೆ ಪತ್ರಿಕೆ ಲೀಕ್​ನಿಂದ ರದ್ದಾಗಿದ್ದ ನೀಟ್ ಮರುಪರೀಕ್ಷೆ (NEET Re-Exam) ಇಂದು ರಾಜ್ಯಾದ್ಯಂತ ನಡೆದಿದೆ. ಯಾವುದೇ ಗೊಂದಲ, ಸೋರಿಕೆ ಇಲ್ಲದೆ ಬಿಗಿ ಭದ್ರತೆ ನಡುವೆ ವಿದ್ಯಾರ್ಥಿಗಳು (Students) ಪರೀಕ್ಷೆ ಬರೆದು ಇದೀಗ ಹೊರಬಂದಿದ್ದಾರೆ. ಬೆಂಗಳೂರಿನ 68 ಕೇಂದ್ರಗಳು ಸೇರಿದಂತೆ ರಾಜ್ಯದ 31 ನಗರಗಳ 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೂ ಪರೀಕ್ಷೆ ನಡೆಯಿತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪರೀಕ್ಷೆ ಕಠಿಣವಾಗಿತ್ತು ಅಂತಾ ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಅದರಲ್ಲೂ ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪೇಪರ್​ ಹೆಚ್ಚು ಕಠಿಣವಾಗಿತ್ತು ಎಂದಿದ್ದಾರೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ನೀಟ್ ಮರು ಪರೀಕ್ಷೆ ಯಶಸ್ವಿ ಮುಕ್ತಾಯ
  • ಬಿಗಿ ಭದ್ರತೆ ನಡುವೆ ಪರೀಕ್ಷೆ ಬರೆದ ರಾಜ್ಯದ ವಿದ್ಯಾರ್ಥಿಗಳು
  • ಈ ಬಾರಿಯ ಪೇಪರ್ ಕಠಿಣವಾಗಿತ್ತು ಎಂದ ವಿದ್ಯಾರ್ಥಿಗಳು

ವೈದ್ಯಕೀಯ ಸೀಟು ಹಂಚಿಕೆಗಾಗಿ ನಡೆಯುವ ನೀಟ್‌ ಪರೀಕ್ಷೆ ದೊಡ್ಡ ಸವಾಲ್ ಆಗಿತ್ತು. ಕಳೆದ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆಯನ್ನೇ ರದ್ದು ಮಾಡಲಾಗಿತ್ತು. ಇದೆಲ್ಲದರ ನಡುವೆ ಇಂದು ನೀಟ್‌ ಮರು ಪರೀಕ್ಷೆ ನಡೆದಿದ್ದು, ಯಾವುದೇ ಗೊಂದಲ ಇಲ್ಲದೆ ಯಶಸ್ವಿಯಾಗಿ ಮುಗಿದಿದೆ.

ಹೆಚ್ಚು ಕಠಿಣವಾಗಿತ್ತು

ಇನ್ನು ಪರೀಕ್ಷೆ ಬರೆದ ಬೆಂಗಳೂರಿನ ವಿದ್ಯಾರ್ಥಿಗಳು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಪೇಪರ್ ಕಠಿಣವಾಗಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಶೇಕಡಾ 10 ರಿಂದ 15ರಷ್ಟು ಹೆಚ್ಚು ಕಠಿಣವಾಗಿತ್ತು. ಮೇ 3 ರಂದು ನಡೆದ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸುಲಭವಾಗಿತ್ತು. ಇಂದಿನ ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪೇಪರ್ ತುಂಬಾ ಕಠಿಣವಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ನೀಟ್​ ಪರೀಕ್ಷೆಯಿಂದ ಮತ್ತೆ ವಂಚಿತರಾದ ಹಲವು ವಿದ್ಯಾರ್ಥಿಗಳು: ಒಬ್ಬೊಬ್ಬರದು ಒಂದೊಂದು ಕಥೆ

ಹಾವೇರಿ ಜಿಲ್ಲೆಯ ಐದು ಕೇಂದ್ರಗಳಲ್ಲಿ ನೀಟ್ ಮರುಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಜಿಲ್ಲಾಡಳಿತದ ತಯಾರಿಗೆ ಪರೀಕ್ಷಾರ್ಥಿಗಳು ಪುಲ್ ಖುಷ್ ಆಗಿದ್ದಾರೆ. ಆದರೆ ಈ ಬಾರಿ ಪ್ರಶ್ನೆಪತ್ರಿಕೆ ಕಠಿಣವಾಗಿತ್ತು ಎಂದಿದ್ದಾರೆ. ಮುಂದೆ ಎಂಬಿಬಿಎಸ್, ಬಿಎಂಎಸ್ ಓದುವ ಇಂಗಿತವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ.

ಲೀಕ್ ಆದಲ್ಲಿ ಮಾತ್ರ ಪರೀಕ್ಷೆ ಮಾಡಬೇಕಿತ್ತು ಎಂದ ವಿದ್ಯಾರ್ಥಿಗಳು 

ಇನ್ನು ಕೊಪ್ಪಳದಲ್ಲಿ ನೀಟ್ ಪರೀಕ್ಷೆ ಮುಗಿಸಿ ಹೊರಬಂದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಗಿಂತ ಈ ಪರೀಕ್ಷೆ ಕಠಿಣವಾಗಿತ್ತು. ಭೌತಶಾಸ್ತ್ರ ವಿಷಯದಲ್ಲಿ ದೀರ್ಘ ಪ್ರಶ್ನೆಗಳಿತ್ತು. ಎಲ್ಲಿ ಲೀಕ್ ಆಗಿತ್ತು, ಅಲ್ಲಿ ಅಷ್ಟೇ ಪರೀಕ್ಷೆ ಮಾಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version