ಮೈಸೂರಿನಲ್ಲಿ ಬಾಂಗ್ಲಾ ವಲಸಿಗರನ್ನು ಹಿಡಿದು ಪೊಲೀಸ್ರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು – Kannada News | Hindu Activists Hand Over Suspected Bangladeshi Nationals to Police

ಮೈಸೂರು, ಜೂನ್​​ 21: ಸಾಂಸ್ಕೃತಿಕ ನಗರಿ ಮೈಸೂರಿಗೆ (mysuru) ಅಕ್ರಮ ಬಾಂಗ್ಲಾ ವಲಸಿಗರು (Illegal Bangladeshi Immigrants) ಬಂದಿಳಿದಿದ್ದಾರಾ ಎಂಬ ಅನುಮಾನುಗಳು ಮೂಡಿವೆ. ಏಕೆಂದರೆ ಹೌರಾ ಎಕ್ಸಪ್ರೆಸ್ ರೈಲಿನ ಮೂಲಕ ಮೈಸೂರಿಗೆ 40ಕ್ಕೂ ಅಧಿಕ ಶಂಕಿತ ಬಾಂಗ್ಲಾ ವಲಸಿಗರು ಬಂದಿರುವ ಆರೋಪ ಕೇಳಿಬಂದಿದ್ದು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ವಲಸಿಗರನ್ನು ಹಿಡಿದಿದ್ದಾರೆ. ಹೀಗಾಗಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಇಂದು ಹೈಡ್ರಾಮಾವೇ ನಡೆದಿದೆ.

ಮುಖ್ಯಾಂಶಗಳು

  • ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬಿಗುವಿನ ವಾತಾವರಣ
  • ಬಾಂಗ್ಲಾ ವಲಸಿಗರನ್ನು ಹಿಡಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು
  • ಬಾಂಗ್ಲಾ ವಲಸಿಗರು ಮೈಸೂರಿಗೆ ಬರುತ್ತಿದ್ದಾರೆ ಎಂದ ಮಾಜಿ ಶಾಸಕ

40ಕ್ಕೂ ಅಧಿಕ ಶಂಕಿತ ಬಾಂಗ್ಲಾ ವಲಸಿಗರು ಬಂದಿರುವ ಆರೋಪ

ಹೌದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೈಡ್ರಾಮಾವೇ ನಡೆದುಹೋಗಿದೆ. ವಾರಕ್ಕೊಮ್ಮೆ ಕೋಲ್ಕತ್ತಾದಿಂದ ಮೈಸೂರಿಗೆ ಬರುವ ‘ಹೌರಾ ಎಕ್ಸ್‌ಪ್ರೆಸ್’ ರೈಲು ಇಂದು ಬೆಳಗ್ಗೆ ಆಗಮಿಸುತ್ತಿದ್ದಂತೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಕಾರಣ ಆ ರೈಲಿನಲ್ಲಿ ಬಂದ ಕಾರ್ಮಿಕರ ಗುಂಪು. ಅವರ ಚಲನವಲನದಿಂದ ಸಂಶಯಗೊಂಡ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಿಲ್ದಾಣದಲ್ಲೇ ತಡೆದು ನಿಲ್ಲಿಸಿ ತಪಾಸಣೆ ಮಾಡಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಗಾ ಡಿಪೋರ್ಟೇಷನ್ ಆಪರೇಷನ್: ಬರೋಬ್ಬರಿ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು

ಅವರ ಗುರುತಿನ ಚೀಟಿ ಪರಿಶೀಲಿಸಿದಾಗ, ಬಹುತೇಕರ ಬಳಿ ಪಶ್ಚಿಮ ಬಂಗಾಳದ ವಿಳಾಸವಿರುವ ಆಧಾರ್ ಹಾಗೂ ಐಡಿ ಕಾರ್ಡ್‌ಗಳಿದ್ದವು. ಮೇಲ್ನೋಟಕ್ಕೆ ಇವೆಲ್ಲವೂ ನಕಲಿ ಎನಿಸುವಂತಿತ್ತು, ಹೀಗಾಗಿ ಇವರೆಲ್ಲಾ ಬಾಂಗ್ಲಾ ದೇಶದ ಅಕ್ರಮ ವಲಸಿಗರು ಎಂಬುದು ಅವರ ಆರೋಪ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಎಲ್ಲಾ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದರು.

ಬೆಳಿಗ್ಗೆ ರೈಲು ಇಳಿದವರು ನಗರದಲ್ಲಿ ತಪ್ಪಿಸಿಕೊಂಡು ಓಡಿದ್ದರು. ಅವರನ್ನೆಲ್ಲಾ ಬೆನ್ನಟ್ಟಿದ ಹಿಂದೂ ಕಾರ್ಯಕರ್ತರು ಹಿಡಿದು ತಂದು ವಿಚಾರಣೆ ನಡೆಸಿದಾಗ ಒಬ್ಬೊಬ್ಬರು ಒಂದೊಂದು ರೀತಿಯ ಗೊಂದಲದ ಹೇಳಿಕೆಗಳನ್ನು ನೀಡಿದ್ದಾರೆ. ಇವರೆಲ್ಲರು ಮೈಸೂರಿನಿಂದ ಕೊಡಗು, ಪಿರಿಯಾಪಟ್ಟಣ ಹಾಗೂ ಕೇರಳದ ವಿವಿಧ ಭಾಗಗಳಿಗೆ ಕೆಲಸದ ನೆಪದಲ್ಲಿ ತೆರಳಲು ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಇದು ರಾಜ್ಯ ಸರ್ಕಾರದ ಭದ್ರತಾ ವೈಫಲ್ಯ ಎಂಬ ಆಕ್ರೋಶ ವ್ಯಕ್ತವಾಗಿದೆ.

ಅಕ್ರಮ ಬಾಂಗ್ಲಾ ವಲಸಿಗರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ: ಮಾಜಿ ಶಾಸಕ ಎಲ್ ನಾಗೇಂದ್ರ

ಈ ಕುರಿತಾಗಿ ಮಾಜಿ ಶಾಸಕ ಎಲ್ ನಾಗೇಂದ್ರ ಪ್ರತಿಕ್ರಿಯಿಸಿದ್ದು, ಪ್ರತಿ ಭಾನುವಾರ ಪಶ್ಚಿಮ ಬಂಗಾಳದಿಂದ ಬಾಂಗ್ಲಾ ವಲಸಿಗರು ಮೈಸೂರಿಗೆ ಬರುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಸಿಎಂ ಆದ ಬಳಿಕ ಅಕ್ರಮ ಬಾಂಗ್ಲಾ ವಲಸಿಗರು ಬೇರೆ ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಮೈಸೂರಲ್ಲೂ ಬಾಂಗ್ಲಾ ವಲಸಿಗರು ಆಗಮಿಸಿ ಗೌಸಿಯ ನಗರ, ಪಿರಿಯಾಪಟ್ಟಣ, ಕೊಡಗು ಭಾಗಕ್ಕೆ ತೆರಳುತ್ತಿದ್ದಾರೆ. ನಕಲಿ ಆಧಾರ್ ಕಾರ್ಡ್ ತೆಗೆದುಕೊಂಡು ಅಕ್ರಮ ವಲಸಿಗರು ಮೈಸೂರಿಗೆ ಬರುತ್ತಿದ್ದಾರೆ. ಇವರ ಮೇಲೆ ಸರ್ಕಾರ ಹದ್ದಿನ ಕಣ್ಣಿಡಬೇಕು. ಗೃಹ ಮಂತ್ರಿಗಳು ಆರ್​ಎಸ್ಎಸ್ ವಿಚಾರ ಬಿಟ್ಟು ಬೇರೇನೂ ಮಾಡುತ್ತಿಲ್ಲ. ಬ್ರದರ್ ನಿಮ್ಮ ಬ್ರದರ್ಸ್ ಬರುತ್ತಿದ್ದಾರೆ, ರಾಜ್ಯದಲ್ಲಿ ದಂಗೆ ಎದ್ದರೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ. ಕೂಡಲೇ ಅಕ್ರಮ ಬಾಂಗ್ಲಾ ವಲಸಿಗರನ್ನ ತಡೆಯಲು ಕ್ರಮಕೈಗೊಳ್ಳಿ ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಭೀತಿ?!: ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನ ಠಾಣೆಗೆ ತಂದ ಪೊಲೀಸರು

ಒಟ್ಟಿನಲ್ಲಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಶಂಕಿತ ಬಾಂಗ್ಲಾ ಅಕ್ರಮ ವಲಸಿಗರು ಆಗಮಿಸಿರುವುದು ಸದ್ಯ ಸಾರ್ವಜನಿಕರಲ್ಲಿ ಹಾಗೂ ಭದ್ರತಾ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಪೊಲೀಸರ ತನಿಖೆಯ ಬಳಿಕವಷ್ಟೇ ಇವರು ನಿಜವಾಗಿಯೂ ಬಾಂಗ್ಲಾದೇಶದವರಾ ಅಥವಾ ಪಶ್ಚಿಮ ಬಂಗಾಳದ ಕಾರ್ಮಿಕರಾ ಎಂಬ ಸತ್ಯ ಹೊರಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಮಿಳುನಾಡಿನಲ್ಲಿ ಮೀನು ರಫ್ತು ಘಟಕದಲ್ಲಿ ಗ್ಯಾಸ್ ಲೀಕ್; ಹಲವು ಸಾವು ನೋವು – Kannada News | Ammonia gas leak at a sea food export unit in Tamil Nadu, several death reported

ಅನಿಲ ಸೋರಿಕೆ ದುರಂತದಲ್ಲಿ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿರುವುದು.Image Credit source: PTI

ಚೆನ್ನೈ, ಜೂನ್ 21: ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿರುವ ಸಮುದ್ರ ಆಹಾರ (Seafood) ರಫ್ತು ಘಟಕವೊಂದರಲ್ಲಿ ಅನಿಲ ಸೋರಿಕೆ ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಹಲವು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಎನ್​ಡಿಟಿವಿ ವರದಿ ಪ್ರಕಾರ ಕನಿಷ್ಠ ಇಬ್ಬರು ಕಾರ್ಮಿಕರು ಅಸುನೀಗಿದ್ದಾರೆ. ನ್ಯೂಸ್18ನಲ್ಲಿ ಬಂದಿರುವ ವರದಿ ಪ್ರಕಾರ ಕನಿಷ್ಠ ಏಳು ಮಂದಿ ಮಹಿಳಾ ಕಾರ್ಮಿಕರು ವಿಷಾನಿಲ ಸೋರಿಕೆಯಿಂದ ಸಾವನ್ನಪ್ಪಿರುವುದು ತಿಳಿದುಬಂದಿದೆ.

ಸೋರಿಕೆಯಾದ ಅನಿಲವು ಅಮ್ಮೋನಿಯಾ ಆಗಿದೆ. ತೀವ್ರ ಪ್ರಮಾಣದಲ್ಲಿ ಅಮೋನಿಯಾ ಸೋರಿಕೆಯಾದ್ದರಿಂದ ಘಟಕದಲ್ಲಿದ್ದ ಹಲವು ಕಾರ್ಮಕರು ಅಸ್ವಸ್ಥಗೊಂಡಿದ್ದಾರೆ. ಅನಿಲ ಸೋರಿಕೆಯು ತೀವ್ರ ಸ್ವರೂಪದಲ್ಲಿದ್ದ ಕಾರಣ, ಘಟಕದಲ್ಲಿದ್ದ ಹಲವು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ವರದಿಗಳ ಪ್ರಕಾರ ಅಸ್ವಸ್ಥಗೊಂಡವರ ಸಂಖ್ಯೆ 60 ಇರಬಹುದು. ಇವರ ಪೈಕಿ ಹಲವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದ: ಭಾರತೀಯ ವಾಹನ ತಯಾರಕರಿಗೆ ದೊಡ್ಡ ಮಾರುಕಟ್ಟೆ ಅವಕಾಶ

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ, ಸೋರಿಕೆಯನ್ನು ತಡೆಗಟ್ಟಲು ಪ್ರಯತ್ನಿಸಿದರು. ಘಟಕದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದೆಯೇ ಮತ್ತು ಅನಿಲ ಸೋರಿಕೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ತಿರುವಳ್ಳೂರ್ ಜಿಲ್ಲೆಯ ಪೆರಿಯಪಾಳಯಂ ಬಳಿಯ ಕನ್ನಿಗೈಪಾರ್​ನಲ್ಲಿನ ಸೇಂಟ್ ಪೀಟರ್ಸ್ ಅಂಡ್ ಪೌಲ್ ಸೀಫುಡ್ಸ್ ಎಕ್ಸ್ಪೋರ್ಟ್ಸ್ ಘಟಕದಲ್ಲಿ (Saint Peters and Paul Seafoods Exports Facility) ಈ ಘಟನೆ ನಡೆದಿದೆ. ಘಟನೆ ನಡೆದಾಗ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ತಲೆಸುತ್ತು, ಉಸಿರಾಟ ತೊಂದರೆ, ವಾಂತಿ ಮತ್ತಿತರ ತೊಂದರೆ ಆಗಿದೆ. ಅವರನ್ನು ಕೂಡಲೆ ವಿವಿಧ ಆಂಬುಲೆನ್ಸ್​​ಗಳ ಮೂಲಕ ಬೇರೆ ಬೇರೆ ಆಸ್ಪತ್ರೆಗಳಿಗೆ ಸಾಗಿಸುವ ಪ್ರಯತ್ನಗಳಾದವು.

ಇದನ್ನೂ ಓದಿ: ಏಪ್ರಿಲ್​ನಿಂದ ಜೂನ್ 14ರವರೆಗೆ ಭಾರತದ ರಫ್ತು ಶೇ. 15ರಷ್ಟು ಏರಿಕೆ: ವಾಣಿಜ್ಯ ಸಚಿವ ಪಿಯೂಶ್ ಗೋಯಲ್

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಗ್ಯಾಸ್ ಸೋರಿಕೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಚಾಣಕ್ಯರ ಪ್ರಕಾರ ಮದುವೆಯಾಗುವ ಗಂಡು-ಹೆಣ್ಣಿನ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು ಗೊತ್ತಾ? – Kannada News | Chanakya Niti: According to Chanakya, what is the ideal age gap between a husband and wife?

ಮದುವೆಗೆ ಜಾತಿ, ಧರ್ಮ, ವಯಸ್ಸಿನ ಅಂತರ ಇದ್ಯಾವುದು ಲೆಕ್ಕಕ್ಕೆ ಬರೋದಿಲ್ಲ. ಗಂಡು ಹೆಣ್ಣಿನ ನಡುವೆ ಪ್ರೀತಿ, ತಿಳುವಳಿಕೆ, ನಂಬಿಕೆ ಇದ್ದರೆ ಸಾಕು ಎಂದು ಹಲವರು ಹೇಳುವುದುಂಟು. ಆದರೆ ಚಾಣಕ್ಯರ ಪ್ರಕಾರ. ವೈವಾಹಿಕ ಜೀವನವು ಸುಂದರವಾಗಿರಲು ಪ್ರೀತಿ ಮತ್ತು ನಂಬಿಕೆ ಮುಖ್ಯವಿರುವಂತೆ ವಯಸ್ಸಿನ ಅಂತರವು (age gap) ಸಹ ಸಂಬಂಧದ ದಿಕ್ಕನ್ನು ನಿರ್ಧರಿಸುತ್ತದೆ. ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ವ್ಯತ್ಯಾಸವು ತುಂಬಾ ಹೆಚ್ಚಿರಬಾರದು. ಮದುವೆಯು ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಸಮತೋಲನದ ವಿಷಯವಾಗಿದೆ ಮತ್ತು ದೊಡ್ಡ ವಯಸ್ಸಿನ ವ್ಯತ್ಯಾಸವು ಈ ಸಮತೋಲನವನ್ನು ದುರ್ಬಲಗೊಳಿಸಬಹುದು ಎಂದಿದ್ದಾರೆ. ಹಾಗಿದ್ದರೆ ಗಂಡ ಹೆಂಡತಿಯ ನಡುವೆ ಮದುವೆಯಾಗುವ ಹುಡುಗ ಮತ್ತು ಹುಡುಗಿಯ ನಡುವೆ ಏಜ್‌ ಗ್ಯಾಪ್‌ ಎಷ್ಟಿರಬೇಕು ಎಂಬುದನ್ನು ನೋಡೋಣ ಬನ್ನಿ.

ಗಂಡ ಹೆಂಡತಿಯ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು?

ಆಚಾರ್ಯ ಚಾಣಕ್ಯರ ಪ್ರಕಾರ, ಗಂಡನು ತನ್ನ ಹೆಂಡತಿಗಿಂತ ದೊಡ್ಡವನಾಗಿರಬೇಕು, ಇದರಿಂದ ಅವನು ತನ್ನ ಅನುಭವ, ತಾಳ್ಮೆ ಮತ್ತು ಪ್ರಬುದ್ಧತೆಯಿಂದ ತನ್ನ ಕುಟುಂಬ ಜೀವನವನ್ನು ನಿರ್ವಹಿಸಬಹುದು. ಆದರೆ ಪತಿ ಪತ್ನಿಯರ ವಯಸ್ಸಿನ ಅಂತರವು ತೀರಾ ಹೆಚ್ಚಿರಬಾರದು ಎಂದು ಒತ್ತಿ ಹೇಳಿದ್ದಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ನಿರ್ಣಾಯಕವಾಗಿದೆ. ದಂಪತಿಗಳ ನಡುವೆ ವಯಸ್ಸಿನ ಅಂತರ ತೀರಾ ಹೆಚ್ಚಿದ್ದರೆ ಅದರಿಂದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.ಚಾಣಕ್ಯರ ಪ್ರಕಾರ ಒಬ್ಬ ಪುರುಷ ತನಗಿಂತ ತೀರಾ ಚಿಕ್ಕ ವಯಸ್ಸಿನ ಮಹಿಳೆಯನ್ನು ಮದುವೆಯಾಗುವುದು ಸೂಕ್ತವಲ್ಲ.  ಏಕೆಂದರೆ ಅಂತಹ ವಿವಾಹಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ ಮದುವೆಯಾಗುವ ಗಂಡು ಮತ್ತು ಹೆಣ್ಣಿನ ನಡುವೆ  3 ರಿಂದ 5 ವರ್ಷಗಳ ವಯಸ್ಸಿನ ಅಂತರವಿದ್ದರೆ ಸಾಕು ಎಂದಿದ್ದಿದ್ದಾರೆ.

ಇದನ್ನೂ ಓದಿ: ಅಭ್ಯಾಸಗಳನ್ನು ಬದಲಾಯಿಸದಿದ್ದರೆ ನಿಮ್ಮ ಆದಾಯ ಎಂದಿಗೂ ಹೆಚ್ಚಳವಾಗುವುದಿಲ್ಲ

ಹೆಚ್ಚಿನ ವಯಸ್ಸಿನ ಅಂತರ ಸಂಬಂಧಕ್ಕೆ ಅಪಾಯಕಾರಿ:

ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅಂತರ ಕಡಿಮೆ ಇದ್ದಷ್ಟೂ ಒಳ್ಳೆಯದು ಎಂದು ಆಚಾರ್ಯ ಚಾಣಕ್ಯ ತಮ್ಮ ನೀತಿಯಲ್ಲಿ ಹೇಳಿದ್ದಾರೆ. 3 ರಿಂದ 5 ವರ್ಷಗಳ ವ್ಯತ್ಯಾಸ ಇಬ್ಬರಿಗೂ ಸೂಕ್ತವೆಂದು ಪರಿಗಣಿಸಲಾಗಿದೆ. ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅಂತರ ಕಡಿಮೆ ಇದ್ದಷ್ಟೂ ದಂಪತಿಗಳ ನಡುವೆ ಹೊಂದಾಣಿಕೆ, ತಿಳುವಳಿಕೆ ಹೆಚ್ಚಾಗುತ್ತದೆ, ಅವರು ಒಟ್ಟಿಗೆ ತಪ್ಪುಗಳನ್ನು ಮಾಡುತ್ತಾರೆ, ಒಟ್ಟಿಗೆ ಸಂತೋಷದ ಜೀವನವನ್ನು ನಡೆಸುತ್ತಾರೆ ಮತ್ತು ಕುಟುಂಬ ಜೀವನದ ಸರಳತೆಗಳನ್ನು ಒಟ್ಟಿಗೆ ಕಲಿಯುತ್ತಾರೆ. ಅಲ್ಲದೆ ಅವರು ಒಂದೇ ರೀತಿಯ ಆಸಕ್ತಿಗಳು, ಆಲೋಚನೆಗಳು ಮತ್ತು ಜೀವನಶೈಲಿಯಲ್ಲಿ ಹೊಂದಿರುತ್ತಾರೆ.   ಅದೇ ವಯಸ್ಸಿನ ಅಂತರ ತೀರಾ ಹೆಚ್ಚಿದ್ದರೆ, ಗಂಡ ಹೆಂಡತಿಯ ಮನಸ್ಥಿತಿಯೂ ಬೇರೆ ಬೇರೆ ಇರುತ್ತದೆ, ಈ ಆಲೋಚನೆಗಳಲ್ಲಿನ ವ್ಯತ್ಯಾಸ, ಜೀವನದ ವಿಭಿನ್ನ ದೃಷ್ಟಿಕೋನ ಆಗಾಗ್ಗೆ ಮನಸ್ತಾಪ, ಜಗಳಗಳು ನಡೆಯಲು ಕಾರಣವಾಗಬಹುದು. ಇದು ಸಂಬಂಧವನ್ನು ದುರ್ಬಲಗೊಳಿಸುತ್ತದೆ ಮತ್ತು ವಿಚ್ಛೇದನಕ್ಕೆ ಕಾರಣವಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಳುಗುತ್ತಿರುವ ಸಿನಿಮಾ ರಕ್ಷಿಸಲು ಬಂದ ಪ್ರಭಾಸ್, ಆದರೆ… – Kannada News | Prabhas praises Sing Geetham Telugu movie

ಪ್ರಭಾಸ್ (Prabhas) ಸಿನಿಮಾ ಪ್ರಚಾರಗಳನ್ನು ಮಾಡುವುದು ಬಹಳ ವಿರಳ. ಹೆಚ್ಚೆಂದರೆ ಒಂದು ಪ್ರೀ ರಿಲೀಸ್ ಮಾಡಿ ಸುಮ್ಮನಾಗುತ್ತಾರೆ. ಆ ಪ್ರೀ ರಿಲೀಸ್​​ಗಳಲ್ಲಿಯೂ ಸಹ ಸಿನಿಮಾದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ ಇದೀಗ ನಟ ಪ್ರಭಾಸ್ ಅವರದ್ದಲ್ಲದ ಸಿನಿಮಾ ಒಂದರ ಪ್ರಚಾರ ಮಾಡಿದ್ದಾರೆ. ಆದರೆ ಇದು ಹಣಕ್ಕಾಗಿ ಅಲ್ಲ, ನಿರ್ದೇಶಕನ ಮೇಲಿನ ಗೌರವಕ್ಕಾಗಿ. ಕಳೆದ ವಾರ ಬಿಡುಗಡೆ ಆದ ‘ಸಿಂಗ್ ಗೀತಂ’ ಸಿನಿಮಾದ ಪ್ರಚಾರಕ್ಕಾಗಿ ಪ್ರಭಾಸ್ ವಿಡಿಯೋ ಒಂದನ್ನು ಮಾಡಿದ್ದಾರೆ.

ಲಿಜೆಂಡರಿ ಸಿನಿಮಾ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಅವರು ತಮ್ಮ 95ನೇ ವಯಸ್ಸಿನಲ್ಲಿ ನಿರ್ದೇಶನ ಮಾಡಿರುವ ‘ಸಿಂಗ್ ಗೀತಂ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಸಂಭಾಷಣೆಗಿಂತಲೂ ಹಾಡುಗಳೇ ಹೆಚ್ಚಿವೆ. ಅಸಲಿಗೆ ಇಡೀ ಸಿನಿಮಾ ಇರುವುದೇ ಹಾಡುಗಳ ಮೇಲೆ. ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳಿದ್ದವು, ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಹೆಚ್ಚು ಜನರಿಗೆ ಸಿನಿಮಾ ಹಿಡಿಸಲಿಲ್ಲ. ಸಿನಿಮಾ ಫ್ಲಾಪ್​​ನತ್ತ ಸಾಗುತ್ತಿರುವಾಗಲೇ ಇದೀಗ ಪ್ರಭಾಸ್ ಎಂಟ್ರಿ ಕೊಟ್ಟಿದ್ದಾರೆ.

‘ಸಿಂಗ್ ಗೀತಂ’ ಸಿನಿಮಾವನ್ನು ಪ್ರಭಾಸ್ ಅವರ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ ನಿರ್ಮಾಣ ಮಾಡಿದ್ದಾರೆ. ಇದರ ಜೊತೆಗೆ ಖುದ್ದು ಪ್ರಭಾಸ್ ಸಹ ಸಿಂಗೀತಂ ಶ್ರೀನಿವಾಸ್ ಅವರ ಅಭಿಮಾನಿ ಆಗಿರುವ ಕಾರಣ, ಪ್ರಭಾಸ್, ‘ಸಿಂಗ್ ಗೀತಂ’ ಸಿನಿಮಾ ಪ್ರಚಾರಕ್ಕಾಗಿ ವಿಡಿಯೋ ಒಂದನ್ನು ಶೂಟ್ ಮಾಡಿದ್ದಾರೆ. ವಿಡಿಯೋನಲ್ಲಿ ಅವರು ಸಿನಿಮಾವನ್ನು ಬಲುವಾಗಿ ಕೊಂಡಾಡಿದ್ದಾರೆ.

ಇದನ್ನೂ ಓದಿ:ವಿವಾದಕ್ಕೆ ಸಿಲುಕಿದ ‘ಸ್ಪಿರಿಟ್’: ಪ್ರಭಾಸ್ ಮಧ್ಯ ಪ್ರವೇಶಕ್ಕೆ ಒತ್ತಾಯ

ಸಿನಿಮಾ ನೋಡಿದ ಬಳಿಕ ಪ್ರಭಾಸ್, ನಾಗ್ ಅಶ್ವಿನ್ ಅವರೊಟ್ಟಿಗೆ ಮಾತು ಕತೆ ಆಡಿದ್ದು, ಸಿನಿಮಾದ ಹಾಡುಗಳ ಬಗ್ಗೆ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಬಗ್ಗೆ, ಸಿನಿಮಾದ ಎಮೋಷನ್ ಅಂಶಗಳ ಬಗ್ಗೆ, ಸಿನಿಮಾದ ಈ ಪ್ರಯೋಗಾತ್ಮಕತೆಯ ಬಗ್ಗೆ ಹೀಗೆ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಪ್ರಭಾಸ್ ತಮಾಷೆಯಾಗಿಯೇ ಈ ವಿಡಿಯೋ ಮಾಡಿದ್ದು, ಒಟ್ಟಾರೆಯಾಗಿ ಸಿನಿಮಾ ತಮಗೆ ಇಷ್ಟವಾಯಿತು ಎಂಬ ಸಂದೇಶವನ್ನು ಅವರು ವಿಡಿಯೋ ಮೂಲಕ ರವಾನಿಸಿದ್ದಾರೆ.

ಪ್ರಭಾಸ್ ಪ್ರಸ್ತುತ ಮೂರು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಫೌಜಿ’ ಸಿನಿಮಾ ಬಹುತೇಕ ಮುಗಿಸಿದ್ದಾರೆ. ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ‘ಕಲ್ಕಿ 2898 ಎಡಿ‘ ಸಿನಿಮಾದ ಎರಡನೇ ಭಾಗದ ಚಿತ್ರೀಕರಣವನ್ನು ಶೀಘ್ರವೇ ಪ್ರಾರಂಭ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

68, 175, 67, 96, 94..! ನಿರ್ಣಾಯಕ ಪಂದ್ಯಗಳಲ್ಲಿ ಅಬ್ಬರಿಸುವ ವೈಭವ್ ಸೂರ್ಯವಂಶಿ – Kannada News | Vaibhav Sooryavanshi: The Ultimate Pressure Performer in Cricket | U19, IPL and Tri Series Star

ನಿರ್ಣಾಯಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರನಿಗೆ ಕ್ರಿಕೆಟ್​ ಲೋಕದಲ್ಲಿ ಸಾಕಷ್ಟು ಮನ್ನಣೆ ಸಿಗುತ್ತದೆ. ಆತ ಕ್ರೀಸ್​ನಲ್ಲಿದ್ದರೆ ಎದುರಾಳಿ ತಂಡಗಳಿಗೆ ನಡುಕದ ಜೊತೆಗೆ ಸೋಲಿನ ಭಯವೂ ಇರುತ್ತದೆ. ಆ ರೀತಿಯ ಭಯ ಹುಟ್ಟಿಸಿರುವ ಆಟಗಾರರ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಗೊಂಡಿರುವ ಹೆಸರು ವೈಭವ್ ಸೂರ್ಯವಂಶಿ (Vaibhav Sooryavanshi). ತನ್ನ ಹೊಡಿಬಡಿ ಆಟದ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಸಂಚಲನ ಮೂಡಿಸಿರುವ ವೈಭವ್ ನಿರ್ಣಾಯಕ ಪಂದ್ಯಗಳಲ್ಲಿ ಮತ್ತು ತಂಡ ಸಂಕಷ್ಟದಲ್ಲಿದ್ದ ಸಮಯದಲ್ಲಿ ಏಕಾಂಗಿ ಹೋರಾಟ ನೀಡುವುದರಲ್ಲಿ ನಿಸ್ಸೀಮ. ಇದನ್ನು ಸುಖಾಸುಮ್ಮನೆ ಹೇಳುತ್ತಿಲ್ಲ. ಬದಲಿಗೆ ಅಂಕಿಅಂಶಗಳೇ ಇದನ್ನು ಸಾಭೀತುಪಡಿಸಿವೆ.

U19 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅದ್ಭುತ ಪ್ರದರ್ಶನ

ಈ ವರ್ಷ ಭಾರತದ ಅಂಡರ್-19 ತಂಡ ಏಕದಿನ ವಿಶ್ವಕಪ್ ಗೆದ್ದಿತು. ಈ ಗೆಲುವಿನಲ್ಲಿ ವೈಭವ್ ಸೂರ್ಯವಂಶಿ ನಿರ್ಣಾಯಕ ಪಾತ್ರ ವಹಿಸಿದರು. ಫೆಬ್ರವರಿ 4, 2026 ರಂದು ನಡೆದಿದ್ದ ಅಫ್ಘಾನಿಸ್ತಾನ ವಿರುದ್ಧದ ಅಂಡರ್-19 ವಿಶ್ವಕಪ್ ಸೆಮಿಫೈನಲ್‌ ಪಂದ್ಯದಲ್ಲಿ ವೈಭವ್, 33 ಎಸೆತಗಳಲ್ಲಿ 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 68 ರನ್ ಗಳಿಸಿದರು. ವೈಭವ್ ಸೂರ್ಯವಂಶಿ ಅವರ ಈ ಇನ್ನಿಂಗ್ಸ್ ಭಾರತದ ಅಂಡರ್-19 ತಂಡವನ್ನು ಫೈನಲ್ ತಲುಪಲು ಸಹಾಯ ಮಾಡಿತು.

ಫೈನಲ್‌ನಲ್ಲಿ 175 ರನ್ ಚಚ್ಚಿದ ವೈಭವ್

ಸೆಮಿಫೈನಲ್ ಬಳಿಕ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿಯೂ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ 80 ಎಸೆತಗಳಲ್ಲಿ 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ 175 ರನ್ ಗಳಿಸಿದರು. ವೈಭವ್ ಅವರ ಈ ಆಟದಿಂದಾಗಿ ಭಾರತ ಈ ಪಂದ್ಯವನ್ನು 100 ರನ್ ಗಳಿಂದ ಗೆದ್ದು ಟ್ರೋಫಿಯನ್ನು ಎತ್ತಿಹಿಡಿದಿತ್ತು.

ಐಪಿಎಲ್​ನಲ್ಲೂ ಮಿಂಚಿದ್ದ ವೈಭವ್

2026 ರ ಐಪಿಎಲ್​ನ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ಪಂದ್ಯಗಳಲ್ಲಿಯೂ ವೈಭವ್ ಸೂರ್ಯವಂಶಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಎಲಿಮಿನೇಟರ್ ಪಂದ್ಯದಲ್ಲಿ ವೈಭವ್, ಕೇವಲ 29 ಎಸೆತಗಳಲ್ಲಿ 67 ರನ್ ಗಳಿಸಿದರು. ಈ ಇನ್ನಿಂಗ್ಸ್ ರಾಜಸ್ಥಾನ್ ರಾಯಲ್ಸ್ ತಂಡವು ಕ್ವಾಲಿಫೈಯರ್ 2ಗೆ ಅರ್ಹತೆ ಪಡೆಯಲು ಸಹಾಯ ಮಾಡಿತು. ಹಾಗೆಯೇ ಕ್ವಾಲಿಫೈಯರ್ ಪಂದ್ಯದಲ್ಲಿಯೂ ವೈಭವ್ 47 ಎಸೆತಗಳಲ್ಲಿ 96 ರನ್​ಗಳ ಇನ್ನಿಂಗ್ಸ್ ಆಡಿದರು. ಆದರೆ ಇತರರ ವೈಫಲ್ಯದಿಂದಾಗಿ ಈ ಪಂದ್ಯದಲ್ಲಿ ರಾಜಸ್ಥಾನ್ ಸೋಲು ಕಂಡಿತು.

ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ ಎಂದ ಟೀಂ ಇಂಡಿಯಾದ ಮಾಜಿ ನಾಯಕ

ತ್ರಿಕೋನ ಸರಣಿಯ ಫೈನಲ್‌ನಲ್ಲಿ ಬೆಂಕಿ ಉಗುಳಿದ ವೈಭವ್

ಇದೀಗ ತ್ರಿಕೋನ ಸರಣಿಯ ಫೈನಲ್​ನಲ್ಲೂ ವೈಭವ್ ಬ್ಯಾಟ್ ಅಬ್ಬರಿಸಿದೆ. ಈ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕ ಗಳಿಸದ ವೈಭವ್ ಸೂರ್ಯವಂಶಿ, ಶ್ರೀಲಂಕಾ ಎ ವಿರುದ್ಧದ ಸರಣಿ ಫೈನಲ್‌ನಲ್ಲಿ ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸುವ ಮೂಲಕ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 11 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಸಹ ಅವರು ನಿರ್ಮಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:35 pm, Sun, 21 June 26

Source link

ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ – Kannada News | NEET Re Exam: Staff removes Students Chain And nose pin at Bagalkot

ಬಾಗಲಕೋಟೆ, (ಜೂನ್ 21): ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ರದ್ದಾಗಿದ್ದ ನೀಟ್ ಪರೀಕ್ಷೆಯನ್ನು ಇಂದು ಮತ್ತೊಮ್ಮೆ ನಡೆಸಲಾಗಿದ್ದು, ಭಾರೀ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಾಗಿದೆ. ಯಾವುದೇ ಕಾರಣಕ್ಕೂ ಪರೀಕ್ಷೆಯಲ್ಲಿ ಅಕ್ರಮ ನಡೆಬಾರದು ಎಂದು ಕೆಲ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಅದರಂತೆ ಬಾಲಕೋಟೆಯಲ್ಲಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಕತ್ತಲ್ಲಿ ಇದ್ದ ಚೈನ್, ರುದ್ರಾಕ್ಷಿ ತೆಗೆಸಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯ ಮೂಗುತಿಯನ್ನು ಸಹ ಸಿಬ್ಬಂದಿ ಕಟ್ ಮಾಡಿ ಪರೀಕ್ಷೆ ಕೇಂದ್ರದ ಒಳಗೆ ಬಿಟ್ಟಿರುವ ಪ್ರಸಂಗ ನಡೆದಿದೆ.

Source link

ರಾಜ್ಯದಲ್ಲಿ ನೀಟ್​ ಪರೀಕ್ಷೆಯಿಂದ ಮತ್ತೆ ವಂಚಿತರಾದ ಹಲವು ವಿದ್ಯಾರ್ಥಿಗಳು: ಒಬ್ಬೊಬ್ಬರದು ಒಂದೊಂದು ಕಥೆ – Kannada News | Many Students Across the State Miss NEET Re Exam Due to Traffic Jams and Other Issues

ಬೆಂಗಳೂರು, ಜೂನ್​​ 21: ಪ್ರಶ್ನೆ ಪತ್ರಿಕೆ ಲೀಕ್​ನಿಂದ ರದ್ದಾಗಿದ್ದ ನೀಟ್ ಮರುಪರೀಕ್ಷೆ (NEET Re Exam)  ಇಂದು ರಾಜ್ಯಾದ್ಯಂತ ನಡೆದಿದೆ. ವರ್ಷದಲ್ಲೇ ಎರಡನೇ ಬಾರಿಗೆ ವಿದ್ಯಾರ್ಥಿಗಳು (Students) ನೀಟ್ ಪರೀಕ್ಷೆ ಬರೆದಿದ್ದಾರೆ. ಆದರೆ ರಾಜ್ಯದ ಹಲವು ವಿದ್ಯಾರ್ಥಿಗಳು ಈ ಭಾರಿ ಕೂಡ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಟ್ರಾಫಿಕ್ ​ಜಾಮ್ ಸೇರಿದಂತೆ ನಾನಾ ಕಾರಣಗಳಿಗೆ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದಿದ್ದು, ಸಿಬ್ಬಂದಿ ನಿರಾಕರಿಸಿದ್ದಾರೆ. ಹೀಗಾಗಿ ಕಣ್ಣೀರು ಹಾಕುತ್ತಲೇ ಪರೀಕ್ಷಾರ್ಥಿಗಳು ಮನೆಗೆ ತೆರಳಿದ್ದಾರೆ.

ಮುಖ್ಯಾಂಶಗಳು

  • ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ವಿದ್ಯಾರ್ಥಿಗಳು ಕಣ್ಣೀರು
  • ಗೇಟ್ ಬಳಿಯೇ ಕುಸಿದುಬಿದ್ದು ಗೋಳಾಟ
  • ಟ್ರಾಫಿಕ್, ಬಸ್ ವಿಳಂಬದಿಂದ ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳು

ತಡವಾಗಿ ಬಂದ ವಿದ್ಯಾರ್ಥಿಗಳಿಂದ ಹಂಗಾಮ

ಬೆಂಗಳೂರಿನ ಆರ್​ಸಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಮೂವರು ವಿದ್ಯಾರ್ಥಿನಿಯರು ಎರಡು ನಿಮಿಷ ತಡವಾಗಿ ಆಗಮಿಸಿದರು. ಆದರೆ ಅದಾಗಲೇ ಪರೀಕ್ಷಾ ಕೇಂದ್ರದ ಗೇಟ್​ಗಳನ್ನು ಮುಚ್ಚಲಾಗಿತ್ತು. ಓರ್ವ ವಿದ್ಯಾರ್ಥಿನಿ ಟ್ರಾಫಿಕ್​ಜಾಮ್​ ಹಿನ್ನೆಲೆ ತಡವಾಗಿ ಆಗಮಿಸಿದರೆ, ಮತ್ತೋರ್ವ ವಿದ್ಯಾರ್ಥಿನಿ ಬಸ್ ಮಿಸ್ ಆಗಿ ತಡವಾಗಿದ್ದಕ್ಕೆ ವಂಚಿತರಾಗಿದ್ದಾಳೆ. ಮತ್ತೊಬ್ಬಳು ವಿದ್ಯಾರ್ಥಿನಿ ಹಳೆ ಹಾಲ್ ಟಿಕೆಟ್ ತಂದು ಎಡವಟ್ಟು ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ವಿದ್ಯಾರ್ಥಿಗಳ ನೆರವಿಗೆ ನಿಂತ ಗೃಹ ಸಚಿವ: ಬೆಂಗಳೂರಿನಲ್ಲಿ ನೀಟ್ ಪರೀಕ್ಷೆ ಬರೆಯುವವರ ಸುಗಮ ಸಂಚಾರಕ್ಕೆ ಅನುವು

ಒಳಗೆ ಬಿಡಿ ಅಂತಾ ಅಳಲು ತೋಡಿಕೊಂಡ ವಿದ್ಯಾರ್ಥಿನಿಯರು, ಗೇಟ್ ಮುಂದೆ ನಿಂತು ಕಣ್ಣೀರು ಹಾಕಿದರು. ಒಬ್ಬಳು ವಿದ್ಯಾರ್ಥಿನಿಯಂತೂ ಗೇಟ್ ಬಳಿಯೇ ಕುಸಿದುಬಿದ್ದು, ಒಳಗೆ ಬಿಡಿ ಅಂತಾ ಗೋಳಾಡಿದ್ದಾಳೆ. ಬಳಿಕ ಮತ್ತೊಂದು ಕಡೆಗೆ ಬಂದ ವಿದ್ಯಾರ್ಥಿನಿ ತಡೆಗೋಡೆ ಏರಿ ಒಳಗೆ ಹೋಗಲು ಯತ್ನಿಸಿದಳು. ಆದರೆ ತಕ್ಷಣ ಮಧ್ಯಪ್ರವೇಶಿಸಿ ಪೊಲೀಸರು ವಿದ್ಯಾರ್ಥಿನಿಯನ್ನು ಕೆಳಗಿಳಿಸಿ ವಾಪಸ್ ಕಳಿಸಿದರು.

ಹತ್ತೇ ನಿಮಿಷ ತಡವಾಗಿ ಬಂದ ವಿದ್ಯಾರ್ಥಿನಿ: ಪರೀಕ್ಷೆಗೆ ನಿರಾಕರಣೆ

ಇನ್ನು ಕೊಪ್ಪಳದಲ್ಲೂ ತಡವಾಗಿ ಬಂದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಲಾಗಿದೆ. ನಗರದ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಘಟನೆ ನಡೆದಿದೆ. ಫಾತಿಮಾ ಎಂಬ ವಿದ್ಯಾರ್ಥಿನಿ ಗಂಗಾವತಿಯಿಂದ ಪರೀಕ್ಷೆ ಬರೆಯಲು 1:50ಕ್ಕೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳು. 2 ಗಂಟೆಯವರೆಗೆ ಅವಕಾಶವಿದ್ದರೂ ಪರೀಕ್ಷೆಗೆ ನಿರಾಕರಿಸಲಾಗಿದೆ. ಹೀಗಾಗಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಗೇಟ್ ಎದುರು ನಿಂತ ಬೇಡಿಕೊಂಡಿದ್ದಾಳೆ. ಆದರೆ ಸಿಬ್ಬಂದಿ ಮಾತ್ರ ಗೇಟ್ ತೆರೆದಿಲ್ಲ. ಈ ವೇಳೆ ವಿದ್ಯಾರ್ಥಿನಿ ಪೋಷಕರು ಮತ್ತು ಸಿಬ್ಬಂದಿ ಮಧ್ಯೆ ವಾಗ್ವಾದ ಕೂಡ ಉಂಟಾಗಿದೆ. ಕಣ್ಣೀರು ಹಾಕುತ್ತಲೇ ವಿದ್ಯಾರ್ಥಿನಿ ವಾಪಸ್ ತೆರಳಿದ್ದಾಳೆ.

ವರದಿ: ವಿಕಾಸ್​​ ಕ್ರೈಂ, ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:54 pm, Sun, 21 June 26

Source link

Video: ಬೆಂಗಳೂರಿನ ಮನೆಯ ಬಾಲ್ಕನಿಯಲ್ಲೇ ವೆಸ್ಟರ್ನ್ ಕಮೋಡ್, ವೈರಲ್ ಆಯ್ತು ದೃಶ್ಯ – Kannada News | Bengaluru: Installing a Western commode on the balcony of a house in Bengaluru

ಬೆಂಗಳೂರು, ಜೂನ್ 21: ಬೆಂಗಳೂರು (Bengaluru) ಏರುತ್ತಿರುವ ಬಾಡಿಗೆ ದರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಚರ್ಚೆಯಾಗುತ್ತದೆ. ಇದೀಗ ಬೆಂಗಳೂರು ಸುದ್ದಿಯಾಗಿರುವುದು ವೆಸ್ಟರ್ನ್ ಕಮೋಡ್‌ನಿಂದ. ಮನೆಯೊಂದರಲ್ಲಿ ಬಾಲ್ಕನಿಯಲ್ಲಿ ವೆಸ್ಟರ್ನ್ ಕಮೋಡ್ ಅಳವಡಿಸಿಕೊಳ್ಳಲಾಗಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಶ್ರೀಸತ್ಯ (SriSathya) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮನೆಯ ಬಾಲ್ಕನಿಯಲ್ಲಿ ಅಳವಡಿಸಿಕೊಂಡಿರುವುದನ್ನು ಕಾಣಬಹುದು. ಬಾಲ್ಕನಿಗೆ ಕಬ್ಬಿಣದ ಜಾಲಿ ಅಳವಡಿಸಲಾಗಿದ್ದು, ಈ ಜಾಲಿ ಸಂಪೂರ್ಣ ಪಾರದರ್ಶಕವಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವತಿ ಟಾಯ್ಲೆಟ್ ಕಾರ್ಯನಿರ್ವಹಿಸುತ್ತಿದೆ ಎಂದು ಪರಿಶೀಲಿಸಿರುವುದಾಗಿ ಹೇಳಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ವಿದೇಶಿ ಜೀವನಕ್ಕೆ ಗುಡ್ ಬೈ ಹೇಳಿ ಬೆಂಗಳೂರಿಗೆ ಬಂದ ಇಂಜಿನಿಯರ್, ಕಾರಣ ಇದೇ ನೋಡಿ

ಈ ವಿಡಿಯೋ ಹತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರಿನಲ್ಲಿ ಬಾಡಿಗೆ ದರ ಹಾಗೂ ಜಾಗದ ಬೆಲೆ ದುಪ್ಪಟ್ಟು ಇದೆ. ಹೀಗಾಗಿ ಬಾಲ್ಕನಿಯನ್ನೇ ಬಾತ್ರೂಮ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ರೀತಿ ಬಾತ್ ರೂಮ್ ಸೂಕ್ತವಲ್ಲ ಎಂದಿದ್ದಾರೆ. ಇನ್ನೊಬ್ಬರು, ಸ್ಥಳದ ಕೊರತೆಯಿಂದ ಈ ರೀತಿ ವ್ಯವಸ್ಥೆ ಮಾಡಿಕೊಂಡಿರಬಹುದೆಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನ್‌ವೆಜ್‌ ಊಟ ಸೇವನೆ ಮಾಡಿದ ತಕ್ಷಣವೇ ಈ ಆಹಾರಗಳನ್ನು ತಿನ್ನಬಾರದು; ಏಕೆ ಗೊತ್ತಾ? – Kannada News | You should not eat these foods immediately after eating non veg‌

ನಾನ್‌ವೆಜ್‌ (non-veg‌) ಪ್ರಿಯರಿಗೆ ಚಿಕನ್‌, ಮಟನ್‌, ಫಿಶ್‌ ಎಲ್ಲವೂ ಸಖತ್‌ ಇಷ್ಟ. ಅದರಲ್ಲೂ ಭಾನುವಾರ ಮಾಂಸಹಾರಿ ಭಕ್ಷ್ಯಗಳು ಇರಲೇಬೇಕು. ಹೀಗೆ ನಾನ್‌ವೆಜ್‌ ಊಟ ಸೇವಿಸುವಾಗ ಹಾಗೂ ಸೇವನೆ ಮಾಡಿದ ತಕ್ಷಣ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕ. ಮಾಂಸಾಹಾರ ಪೋಷಕಾಂಶಗಳು ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವುದರಿಂದ ಅವುಗಳ ಹಿತಮಿತ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.  ಅದೇ ರೀತಿ ಮಾಂಸಾಹಾರ ಸೇವಿಸಿದ ತಕ್ಷಣ ಈ ವಿಷಯಗಳನ್ನು ನಿರ್ಲಕ್ಷಿಸಿದರೆ, ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಹೌದು ನಾನ್‌ವೆಜ್‌ ಭಕ್ಷ್ಯಗಳನ್ನು ಸೇವನೆ ಮಾಡಿದ ತಕ್ಷಣ ಈ ಕೆಲವು ಆಹಾರ ಸೇವನೆ ಮಾಡಿದರೆ ಅಜೀರ್ಣ, ಆಮ್ಲೀಯತೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಚಿಕನ್‌, ಮಟನ್‌ ತಿಂದ ಬಳಿಕ ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ತಪ್ಪನ್ನು ಮಾಡಬೇಡಿ.

ನಾನ್‌ವೆಜ್‌ ತಿಂದ ತಕ್ಷಣ ಯಾವ ಆಹಾರಗಳನ್ನು ಸೇವಿಸಬಾರದು?

ತಣ್ಣೀರು ಮತ್ತು ಐಸ್ ಕ್ರೀಮ್: ಮಾಂಸಾಹಾರಿ ಆಹಾರವನ್ನು ಸೇವಿಸಿದ ತಕ್ಷಣ ತಣ್ಣೀರು ಕುಡಿಯುವುದನ್ನು ಅಥವಾ ಐಸ್ ಕ್ರೀಮ್ ತಿನ್ನುವುದನ್ನು ತಪ್ಪಿಸಿ. ಏಕೆಂದರೆ ತಣ್ಣನೆಯ ಆಹಾರಗಳು ಮತ್ತು ಪಾನೀಯಗಳು ಜೀರ್ಣಕ್ರಿಯೆಯ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ನಿಧಾನಗೊಳಿಸಬಹುದು.

ಸಿಟ್ರಸ್ ಹಣ್ಣುಗಳು: ಮೀನು ಅಥವಾ ಮಾಂಸ ತಿಂದ ತಕ್ಷಣ ನಿಂಬೆಹಣ್ಣು, ಕಿತ್ತಳೆ ಮುಂತಾದ ಸಿಟ್ರಸ್ ಹಣ್ಣುಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಈ ಹಣ್ಣುಗಳು ಬೇಗನೆ ಜೀರ್ಣವಾಗುತ್ತವೆ, ಆದರೆ ಮಾಂಸಾಹಾರಿ ಆಹಾರವು ಜೀರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಗ್ಯಾಸ್ ಅಥವಾ ಹೊಟ್ಟೆ ನೋವಿನಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳು: ಮೀನು ಅಥವಾ ಮಾಂಸವನ್ನು ತಿಂದ ತಕ್ಷಣ ಹಾಲು, ಮಜ್ಜಿಗೆ, ಮೊಸರು ಅಥವಾ ಇತರ ಡೈರಿ ಉತ್ಪನ್ನಗಳನ್ನು ಸೇವಿಸುವುದನ್ನು ತಪ್ಪಿಸಿ. ಮಾಂಸಾಹಾರಿ ಮತ್ತು ಹಾಲಿನಲ್ಲಿರುವ ಪ್ರೋಟೀನ್‌ಗಳ ಜೀರ್ಣಕ್ರಿಯೆಯ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ. ಇದರಿಂದಾಗಿ ಗ್ಯಾಸ್, ಅಜೀರ್ಣ ಅಥವಾ ಹೊಟ್ಟೆ ನೋವು ಅಥವಾ ಇತರ ಸಮಸ್ಯೆಗಳು ಉಂಟಾಗಬಹುದು.

ಚಹಾ ಮತ್ತು ಕಾಫಿ: ನಾನ್‌ವೆಜ್‌ ಭಕ್ಷ್ಯಗಳನ್ನು ಸೇವಿಸಿದ ತಕ್ಷಣ ಚಹಾ ಅಥವಾ ಕಾಫಿ ಕುಡಿಯಬಾರದು. ಚಹಾ ಮತ್ತು ಕಾಫಿಯಲ್ಲಿರುವ ಟ್ಯಾನಿನ್‌ಗಳಂತಹ ಅಂಶಗಳು  ಮಾಂಸ ಮತ್ತು ಸಮುದ್ರಾಹಾರದಲ್ಲಿರುವ ಕಬ್ಬಿಣವನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಯಾಗಬಹುದು. ಇದರಿಂದಾಗಿ ದೇಹವು ಅಗತ್ಯವಾದ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಅಡುಗೆಯ ರುಚಿ ಹೆಚ್ಚಿಸುವ ಇಂಗು ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ

ಸಿಹಿತಿನಿಸು: ನಾನ್‌ವೆಜ್‌ ಸೇವನೆ ಮಾಡಿದ ತಕ್ಷಣ ಸಿಹಿತಿಂಡಿಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯು ನಿಧಾನವಾಗಬಹುದು. ಹೌದು ಮಾಂಸಹಾರ ಮತ್ತು ಸಮುದ್ರಾಹಾರದ ಪ್ರೋಟೀನ್‌ಗಳು ಮತ್ತು ಕೊಬ್ಬುಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ತಕ್ಷಣವೇ ಸಿಹಿತಿಂಡಿಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಮತ್ತಷ್ಟು ನಿಧಾನಗೊಳಿಸಬಹುದು ಜೊತೆಗೆ ಗ್ಯಾಸ್, ಆಮ್ಲೀಯತೆ ಮತ್ತು ಹೊಟ್ಟೆಭಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಕಾರ್ಬೋಹೈಡ್ರೇಟ್‌ ಆಹಾರ: ಆಲೂಗಡ್ಡೆ ಮತ್ತು ಇತರ ಪಿಷ್ಟ ತರಕಾರಿಗಳಂತಹ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಕೊಬ್ಬಿನಾಂಶಗಳಿರುವ ಮಾಂಸ ಭಕ್ಷ್ಯಗಳ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಇವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ಇದು ಆಲಸ್ಯವನ್ನುಂಟುಮಾಡಬಹುದು ಮತ್ತು ಅಜೀರ್ಣ, ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:56 pm, Sun, 21 June 26

Source link

ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದ: ಭಾರತೀಯ ವಾಹನ ತಯಾರಕರಿಗೆ ದೊಡ್ಡ ಮಾರುಕಟ್ಟೆ ಅವಕಾಶ – Kannada News | India UK trade agreement from July 15th, Indian ev makers set to gain easy market access in Britain

ಟಾಟಾ ಮೋಟರ್ಸ್​ನ ಹ್ಯಾರಿಯರ್ ಇವಿ ಕಾರುImage Credit source: PTI

ನವದೆಹಲಿ, ಜೂನ್ 21: ಭಾರತ ಮತ್ತು ಬ್ರಿಟನ್ (UK) ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವು (CETA – Comprehensive Economic and Trade Agreement) ಜುಲೈ 15 ರಿಂದ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಭಾರತದಲ್ಲಿ ತಯಾರಾಗುವ ಎಲೆಕ್ಟ್ರಿಕ್ (EV), ಹೈಬ್ರಿಡ್ ಮತ್ತು ಹೈಡ್ರೋಜನ್ ಕಾರುಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಕೋಟಾ ಆಧಾರಿತ ‘ಸುಂಕ ರಹಿತ’ (Duty-free) ಪ್ರವೇಶ ಸಿಗಲಿದೆ. ಈ ಒಪ್ಪಂದದ ನಿಯಮಗಳ ಪ್ರಕಾರ, ಒಪ್ಪಂದ ಜಾರಿಯಾದ ಆರನೇ ವರ್ಷದಿಂದ (ಅಂದರೆ 2031 ರಿಂದ) ಭಾರತದ ಹಸಿರು ವಾಹನಗಳು ಯಾವುದೇ ಕಸ್ಟಮ್ಸ್ ಸುಂಕವಿಲ್ಲದೆ ಬ್ರಿಟನ್ ಮಾರುಕಟ್ಟೆಯನ್ನು ಪ್ರವೇಶಿಸಬಹುದು. 2030 ರ ವೇಳೆಗೆ ಉಭಯ ದೇಶಗಳ ನಡುವಿನ ವ್ಯಾಪಾರವನ್ನು $100 ಬಿಲಿಯನ್‌ಗೆ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ.

ಭಾರತದ ಪ್ರಮುಖ ವಾಹನ ತಯಾರಕರಾದ ಮಾರುತಿ ಸುಜುಕಿ, ಮಹೀಂದ್ರಾ ಆಂಡ್ ಮಹೀಂದ್ರಾ ಮತ್ತು ಟಾಟಾ ಮೋಟರ್ಸ್ ಈ ಅವಕಾಶವನ್ನು ಬಳಸಿಕೊಂಡು ಬ್ರಿಟನ್‌ನ ಇವಿ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿವೆ. ಬ್ರಿಟನ್‌ನಲ್ಲಿ ಭಾರತದಂತೆಯೇ ರಸ್ತೆಯ ಎಡಭಾಗದಲ್ಲಿ ವಾಹನ ಚಾಲನೆ ಮಾಡುವ (Right-hand-drive) ವ್ಯವಸ್ಥೆ ಇರುವುದರಿಂದ ಭಾರತೀಯ ಕಂಪನಿಗಳಿಗೆ ಇದು ಸುಲಭವಾಗಲಿದೆ.

ಇದನ್ನೂ ಓದಿ: ಏಪ್ರಿಲ್​ನಿಂದ ಜೂನ್ 14ರವರೆಗೆ ಭಾರತದ ರಫ್ತು ಶೇ. 15ರಷ್ಟು ಏರಿಕೆ: ವಾಣಿಜ್ಯ ಸಚಿವ ಪಿಯೂಶ್ ಗೋಯಲ್

ಕೋಟಾ ಮತ್ತು ಬೆಲೆಯ ವಿವರಗಳು

ಈ ಸುಂಕ ರಹಿತ ಸೌಲಭ್ಯವು £20,000 (ಅಂದಾಜು ₹21 ಲಕ್ಷ) ದಿಂದ ಹಿಡಿದು £80,000 (ಅಂದಾಜು ₹86 ಲಕ್ಷ) ವರೆಗಿನ ಮೂರು ವಿಭಿನ್ನ ಬೆಲೆಯ ಕಾರುಗಳಿಗೆ ಅನ್ವಯಿಸುತ್ತದೆ. ಆದರೆ £80,000 ಕ್ಕಿಂತ ಹೆಚ್ಚಿನ ಬೆಲೆಯ ಐಷಾರಾಮಿ ಕಾರುಗಳಿಗೆ ಯಾವುದೇ ಸುಂಕ ವಿನಾಯಿತಿ ಇರುವುದಿಲ್ಲ. ಆರಂಭದಲ್ಲಿ (6ನೇ ವರ್ಷದಲ್ಲಿ) ಒಟ್ಟು 17,600 ವಾಹನಗಳ ರಫ್ತಿಗೆ ಅವಕಾಶ ಸಿಗಲಿದ್ದು, 15ನೇ ವರ್ಷದ ವೇಳೆಗೆ ಈ ಕೋಟಾ ಗರಿಷ್ಠ 88,000 ವಾಹನಗಳಿಗೆ ಏರಿಕೆಯಾಗಲಿದೆ.

ಕಂಪನಿಯು ಈಗಾಗಲೇ ತನ್ನ ‘ಇ-ವಿಟಾರಾ’ (eVITARA) ಎಲೆಕ್ಟ್ರಿಕ್ ಕಾರನ್ನು ಯುರೋಪ್‌ಗೆ ರಫ್ತು ಮಾಡಲು ಆರಂಭಿಸಿದ್ದು, ಅದಕ್ಕೆ ಬ್ರಿಟನ್ ಪ್ರಮುಖ ಮಾರುಕಟ್ಟೆಯಾಗಿದೆ. ಈ ಒಪ್ಪಂದವು ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ದೊಡ್ಡ ಬಲ ನೀಡಲಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ.

ಇದನ್ನೂ ಓದಿ: ವಿಶ್ವಬ್ಯಾಂಕ್​ನಿಂದ 1.5 ಬಿಲಿಯನ್, ಎಡಿಬಿಯಿಂದ 1 ಬಿಲಿಯನ್ ಡಾಲರ್ ಸಾಲ ಪಡೆಯಲಿರುವ ಭಾರತ

ಬ್ರಿಟನ್ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಎಲೆಕ್ಟ್ರಿಕ್ ಎಸ್‌ಯುವಿ (SUV) ಪೋರ್ಟ್‌ಫೋಲಿಯೊವನ್ನು ಅಲ್ಲಿಗೆ ವಿಸ್ತರಿಸುವ ಬಗ್ಗೆ ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ನಿರ್ಧಾರ ಕೈಗೊಳ್ಳುವುದಾಗಿ ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ತಿಳಿಸಿದೆ.

ಈ ಹಂತಹಂತದ ಕೋಟಾ ವ್ಯವಸ್ಥೆಯು ಭಾರತೀಯ ಇವಿ ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಮತ್ತು ದೀರ್ಘಾವಧಿಯ ಬೆಳವಣಿಗೆಗೆ ಉತ್ತಮ ಹಾದಿ ಮಾಡಿಕೊಡುತ್ತದೆ ಎಂದು ಟಾಟಾ ಮೋಟರ್ಸ್ ಸ್ವಾಗತಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version