ಪ್ಲೇಆಫ್‌ಗೂ ಮುನ್ನ ಆರ್ಸಿಬಿಗೆ ಆಘಾತ; ಐಪಿಎಲ್‌ನಿಂದ ಹೊರಬಿದ್ದ ಸ್ಟಾರ್ ಆರಂಭಿಕ – Kannada News | IPL 2026 Playoffs: RCB Faces Setback as jacob bethell Out, Phil Salt Returns to Boost Squad
ಐಪಿಎಲ್ 2026 (IPL 2026) ರ ಪ್ಲೇಆಫ್‌ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಹಾಲಿ ಚಾಂಪಿಯನ್ ಆರ್ಸಿಬಿ ಇದೇ ಮೇ 26 ರಂದು ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಆರ್ಸಿಬಿ ಸಕಲ ತಯಾರಿಯನ್ನು ನಡೆಸುತ್ತುದೆ. ಈ ನಡುವೆ ತಂಡಕ್ಕೆ ಹಿನ್ನಡೆಯುಂಟಾಗಿದ್ದು, ತಂಡದ ಯುವ ಇಂಗ್ಲಿಷ್ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್ (Jacob Bethell) ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಬೆರಳಿನ ಗಾಯದಿಂದ ಬಳಲುತ್ತಿರುವ ಬೆಥೆಲ್ ತಂಡವನ್ನು…