ತುಮಕೂರು ಮೆಟ್ರೋ ವಿಸ್ತರಣೆ ಬಗ್ಗೆ ಬಿಗ್​​​​ ಅಪ್ಡೇಟ್​ ನೀಡಿದ ಗೃಹಸಚಿವ ಡಾ. ಜಿ. ಪರಮೇಶ್ವರ್ – Kannada News | Tumakuru Metro Link: Decades Long Dream Nears Reality, PPP Model for RS.20,000 Cr Project

ಬೆಂಗಳೂರು, ಮೇ 23: ತುಮಕೂರು ಮತ್ತು ಬೆಂಗಳೂರು ನಡುವೆ ದಿನನಿತ್ಯ ಸಂಚರಿಸುವ ಲಕ್ಷಾಂತರ ಪ್ರಯಾಣಿಕರ ದಶಕಗಳ ಕನಸು ಕೊನೆಗೂ ನನಸಾಗುವತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಮಾದಾವರದಿಂದ ತುಮಕೂರು ನಗರದವರೆಗೆ ‘ನಮ್ಮ ಮೆಟ್ರೋ’ (Namma Metro) ರೈಲು ಯೋಜನೆಯನ್ನು ವಿಸ್ತರಿಸುವ ಕುರಿತು ವಿಸ್ತೃತ ಯೋಜನಾ ವರದಿ (DPR) ಸಿದ್ಧವಾಗಿದ್ದು, ಶೀಘ್ರದಲ್ಲೇ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಬೇಕೆಂದು ಬಹಳ ದಿನಗಳಿಂದ ತೀವ್ರ ದೊಡ್ಡ ಮಟ್ಟದ ಪ್ರಯತ್ನಗಳು ನಡೆಯುತ್ತಿದ್ದವು. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಯ ಫೀಸಿಬಿಲಿಟಿ (ಸಾಧ್ಯತೆಗಳ) ಅಧ್ಯಯನ ನಡೆಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಹೈದರಾಬಾದ್ ಮೂಲದ ಸಂಸ್ಥೆಯೊಂದಕ್ಕೆ 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಜವಾಬ್ದಾರಿ ನೀಡಲಾಗಿತ್ತು. ಆ ಸಂಸ್ಥೆಯು ನೀಡಿರುವ ವರದಿಯಲ್ಲಿ “ಮಾದಾವರದಿಂದ ತುಮಕೂರಿನವರೆಗೆ ಮೆಟ್ರೋ ಮಾರ್ಗ ನಿರ್ಮಿಸುವುದು ಸಂಪೂರ್ಣ ಸಾಧ್ಯ ಹಾಗೂ ಲಾಭದಾಯಕ” ಎಂದು ಸ್ಪಷ್ಟಪಡಿಸಲಾಗಿದೆ.

ಇನ್ನು ಇದರ ಸಾಧ್ಯತೆಗಳ ವರದಿ ಬಂದ ನಂತರ ಬಿಎಂಆರ್‌ಸಿಎಲ್ ಸಂಸ್ಥೆಯು ಮತ್ತೊಂದು ಖಾಸಗಿ ಏಜೆನ್ಸಿ ಮೂಲಕ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿಕೊಂಡಿದೆ. ಈ ಡಿಪಿಆರ್ ವರದಿಯ ಪ್ರಕಾರ ಮಾದಾವರ-ತುಮಕೂರು ಮೆಟ್ರೋ ಲೈನ್ ನಿರ್ಮಾಣಕ್ಕೆ ಅಂದಾಜು 20,000 ಕೋಟಿ ರೂಪಾಯಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಬೃಹತ್ ಮೊತ್ತದ ಯೋಜನೆಯನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಅಂದರೆ ಪಿಪಿಪಿಮಾಡೆಲ್ ಮೂಲಕ ಜಾರಿಗೆ ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಸಿಲಿಗೆ 16 ಜನ ಸಾವು! ಭೀಕರ ಉಷ್ಣಗಾಳಿಗೆ ನಡುಗಿದ 7 ಜಿಲ್ಲೆಗಳು

“ಡಿಪಿಆರ್ ವರದಿ ಕೈಸೇರಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಅಧಿಕೃತ ಅನುಮೋದನೆ ಪಡೆದುಕೊಳ್ಳಲಿದ್ದೇವೆ. ಆ ನಂತರ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭವಾಗಲಿದೆ” ಎಂದು ಸಚಿವ ಪರಮೇಶ್ವರ್ ಭರವಸೆ ನೀಡಿದ್ದಾರೆ. ಈ ಯೋಜನೆಯಿಂದಾಗಿ ತುಮಕೂರು ಜಿಲ್ಲೆಯ ಕೈಗಾರಿಕಾ ವಲಯ ಹಾಗೂ ಉದ್ಯೋಗಿಗಳಿಗೆ ಭಾರಿ ಅನುಕೂಲವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather forecast: ಮೇ 29ರವರೆಗೆ ಕರ್ನಾಟಕದಾದ್ಯಂತ ಮಳೆ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – Kannada News | Karnataka Weather Forecast: Rain Likely Till May 29; Yellow Alert in Bengaluru, 17 Districts

ಬೆಂಗಳೂರು, ಮೇ 23: ಕರ್ನಾಟಕದಲ್ಲಿ (Karnataka) ಮೇ 29ರವರೆಗೆ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ಘೋಷಿಸಲಾಗಿದೆ. ಒಟ್ಟು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ.

ಮುಖ್ಯಾಂಶಗಳು

  • ರಾಜ್ಯಾದ್ಯಂತ ಮೇ 29ರವರೆಗೆ ಮಳೆ ಮುನ್ಸೂಚನೆ
  • 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
  • ಮುಂದಿನ 48 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ

ಬೆಂಗಳೂರಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿಯಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ವಿಜಯನಗರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ: 166.4 ಹೆಕ್ಟೇರ್ ಬೆಳೆ ನಾಶ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಸುರಿದಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ವಿಶೇಷವಾಗಿ ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಗಾಳಿ ಸಹಿತ ಮಳೆಯಿಂದ ವ್ಯಾಪಕ ಬೆಳೆ ಹಾನಿಯಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ನೀಡಿದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 166.4 ಹೆಕ್ಟೇರ್ ಬೆಳೆ ನಾಶವಾಗಿದೆ. ಇದರಲ್ಲಿ 165.2 ಹೆಕ್ಟೇರ್ ತೋಟಗಾರಿಕಾ ಬೆಳೆಗಳಾದ ಬಾಳೆ ಮತ್ತು ವೀಳ್ಯದೆಲೆ ಬೆಳೆಗಳು ಸೇರಿವೆ. ಇದರ ಜೊತೆಗೆ, ಸುಮಾರು 1.5 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕಬ್ಬು ಸಹ ಮಳೆಯಿಂದ ಹಾನಿಗೊಳಗಾಗಿದೆ. ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆಗಾಗಿ ಈಗಾಗಲೇ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದಾರೆ.

ಇದನ್ನೂ ಓದಿ: Bengaluru Weather Update: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆ: ತಂಪಾದ ಉದ್ಯಾನ ನಗರಿ!

ಇನ್ನು ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಆರೆಂಜ್ ಅಲರ್ಟ್ ನೀಡಲಾಗಿದೆ. ನಾಗರಿಕರು ಸುರಕ್ಷಿತವಾಗಿರಲು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಇಲಾಖೆ ಸೂಚಿಸಿದೆ. ಹವಾಮಾನ ವೈಪರೀತ್ಯದಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:50 pm, Sat, 23 May 26

Source link

‘ಡ್ರ್ಯಾಗನ್’ನಲ್ಲಿ ಜೂ ಎನ್​​ಟಿಆರ್ ಹೆಸರಿನ ಹಿನ್ನೆಲೆಯೇನು? ಸ್ವಾತಂತ್ರ್ಯ ಹೋರಾಟದ ಜೊತೆ ಇದೆ ಲಿಂಕ್ – Kannada News | Story behind Jr NTR’s character name in Dragon movie

ಜೂ ಎನ್​​ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ‘ಡ್ರ್ಯಾಗನ್’ ಸಿನಿಮಾದ ಟೀಸರ್ ಮೇ 20ರಂದು ಬಿಡುಗಡೆ ಆಗಿದೆ. ಬ್ರಿಟೀಷರು ಬಿಟ್ಟು ಹೋದ ಮಾದಕ ವಸ್ತು ಉತ್ಪಾದನೆ ಮತ್ತು ವಿತರಣೆ ಮೇಲೆ ಹಿಡಿತ ಸಾಧಿಸಲು ಗ್ಯಾಂಗುಗಳ ನಡುವೆ ನಡೆಯುವ ಭೀಕರ ಯುದ್ಧದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎಂಬುದು ಟೀಸರ್​​ನಿಂದ ತಿಳಿದು ಬರುತ್ತಿದೆ. ಆದರೆ ಟೀಸರ್ ಬಿಡುಗಡೆ ಆದ ಬಳಿಕ ‘ಇದು ಮೊಟ್ಟ ಮೊದಲ ಬೃಹತ್ ಬಜೆಟ್​​ನ ದೇಶಭಕ್ತಿಯ ಕತೆ’ ಎಂದು ಪ್ರಶಾಂತ್ ನೀಲ್ ಹೇಳಿದ್ದು ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದ ಜೊತೆಗೆ ಕುತೂಹಲವನ್ನೂ ಮೂಡಿಸಿತ್ತು. ಇದೀಗ ‘ಡ್ರ್ಯಾಗನ್’ ಸಿನಿಮಾನಲ್ಲಿ ನಾಯಕನ ಹೆಸರಿನ ಹಿನ್ನೆಲೆ ಕೆದಕಿದರೆ ಅದರ ಲಿಂಕು ಸ್ವಾತಂತ್ರ್ಯ ಹೋರಾಟದ ಜೊತೆಗಿದೆಯೆಂಬುದು ತಿಳಿದು ಬರುತ್ತಿದೆ.

‘ಡ್ರ್ಯಾಗನ್’ ಸಿನಿಮಾನಲ್ಲಿ ನಾಯಕನ ಹೆಸರು ‘ಲೂಗರ್’. ಇದು 1900 ರಿಂದ 1970ರ ವರೆಗೆ ಅಸ್ಥಿತ್ವದಲ್ಲಿದ್ದ ಬಲು ಜನಪ್ರಿಯ ಪಿಸ್ತೂಲಿನ ಹೆಸರು. ‘ಲೂಗರ್ ಪಿ08’ ಬಂದೂಕನ್ನು ಆಧರಿಸಿ ಡ್ರ್ಯಾಗನ್ ಸಿನಿಮಾದ ನಾಯಕನ ಹೆಸರನ್ನು ಇರಿಸಲಾಗಿದೆ. ಇದನ್ನು ಖುದ್ದು ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ಖಾತ್ರಿಗೊಳಿಸಿದ್ದಾರೆ. ಆದರೆ ಅದೇ ಹೆಸರನ್ನು ಏಕೆ ನಾಯಕನಿಗೆ ಇಡಲಾಗಿದೆ ಎಂಬುದನ್ನು ಪ್ರಶಾಂತ್ ನೀಲ್ ತಿಳಿಸಿಲ್ಲ. ಆದರೆ ಆ ಬಂದೂಕಿನ ಹಿನ್ನೆಲೆ ಕೆದಕಿದರೆ ಅದರ ಸಂಬಂಧ ಭಾರತದ ಸ್ವಾತಂತ್ರ್ಯ ಚಳವಳಿಯ ಜೊತೆಗೆ ಲಿಂಕ್ ಆಗಿರುವುದು ಗೊತ್ತಾಗುತ್ತದೆ.

ಭಾರತದ ಬಹುತೇಕ ಸಶಸ್ತ್ರ ಸ್ವಾತಂತ್ರ್ಯ ಹೋರಾಟಗಾರರು ಬಳಸಿದ್ದು ಲೂಗರ್ ಪಿ08 ಬಂದೂಕನ್ನು. ಚಂದ್ರಶೇಖರ್ ಅಜಾದ್ ಬಳಿ ಇದ್ದಿದ್ದು ಇದೇ ಬಂದೂಕು. ಆಗಿನ ಇನ್ನೂ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಇದೇ ಬಂದೂಕನ್ನು ಬಳಸಿ ಕ್ರಾಂತಿ ಮಾಡಲು ಯತ್ನಿಸಿದ್ದರು. ಪ್ರಶಾಂತ್ ನೀಲ್ ತಮ್ಮ ‘ಡ್ರ್ಯಾಗನ್’ ಸಿನಿಮಾವನ್ನು ‘ದೇಶಭಕ್ತಿ’ಯ ಸಿನಿಮಾ ಎಂದಿರುವುದಕ್ಕೂ ನಾಯಕನಿಗೆ ಲೂಗರ್ ಎಂದು ಹೆಸರಿಟ್ಟಿರುವುದಕ್ಕೂ ಲಿಂಕ್ ಇದೆ ಎಂದು ಊಹಿಸಬಹುದಾಗಿದೆ.

ಇದನ್ನೂ ಓದಿ:ಜೂನಿಯರ್ ಎನ್​ಟಿಆರ್​ ಅಥವಾ ಅಲ್ಲು ಅರ್ಜುನ್? ಜನ್ಮದಿನಕ್ಕೆ ಸಿಗಲಿದೆ ಕ್ಲ್ಯಾರಿಟಿ

ಏನೇ ಆಗಲಿ ಪ್ರಶಾಂತ್ ನೀಲ್ ‘ಡ್ರ್ಯಾಗನ್’ ಸಿನಿಮಾಕ್ಕೆ ಒಂದೊಳ್ಳೆ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾವನ್ನು ಕೇವಲ ಗ್ಯಾಂಗುಗಳ ಮಧ್ಯೆ ಹೋರಾಟದ ಕತೆಯನ್ನಾಗಿ ಮಾತ್ರ ಮಾಡದೆ ದೇಶಭಕ್ತಿಯ ಅಂಶವನ್ನು ತುಂಬುವ ಮೂಲಕ ಸಿನಿಮಾ ಎಲ್ಲರಿಗೂ ಸಲ್ಲುವಂತೆ ಮಾಡಿದ್ದಾರೆ. ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದ್ದು, ಜೂ ಎನ್​​ಟಿಆರ್ ಅಭಿಮಾನಿಗಳು ಸಹಜವಾಗಿಯೇ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.

‘ಡ್ರ್ಯಾಗನ್’ ಸಿನಿಮಾನಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿ. ಬಾಲಿವುಡ್ ನಟ ಅನಿಲ್ ಕಪೂರ್ ಸೇರಿದಂತೆ ಇನ್ನೂ ಹಲವರು ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಭುವನ್ ಗೌಡ ಡಿಓಪಿ, ರವಿ ಬಸ್ರೂರು ಸಂಗೀತ ಇದೆ. ಪವನ್ ಶ್ರೀ ಪ್ರಸಾದ್ ಎಡಿಟಿಂಗ್ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತೆಲಂಗಾಣದಲ್ಲಿ ಬಿಸಿಲಿಗೆ 16 ಜನ ಸಾವು! ಭೀಕರ ಉಷ್ಣಗಾಳಿಗೆ ನಡುಗಿದ 7 ಜಿಲ್ಲೆಗಳು – Kannada News | Telangana Heatstroke: 16 Dead Amid El Nino Threat, Govt Orders Compensation

ಹೈದರಾಬಾದ್, ಮೇ.23: ದೇಶದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ತಾಪಮಾನ ಮಿತಿಮೀರುತ್ತಿದ್ದು, ನೆರೆರಾಜ್ಯ ತೆಲಂಗಾಣದಲ್ಲಿ ಭೀಕರ ಉಷ್ಣಗಾಳಿ (Heatwave) ಮತ್ತು ತೀವ್ರ ಬಿಸಿಲಿಗೆ (Heatstroke) ಕಳೆದ ಕೆಲವು ದಿನಗಳಲ್ಲಿ ಒಟ್ಟು 16 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಈ ಸಾವುಗಳು ವರದಿಯಾಗಿದ್ದು, ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸರ್ಕಾರ ಹೈ ಅಲರ್ಟ್ ಘೋಷಿಸಿದೆ.

ರಾಜ್ಯದ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರು ಹೈದರಾಬಾದ್‌ನ ಸೆಕ್ರೆಟೇರಿಯಟ್‌ನಲ್ಲಿ ತುರ್ತು ಪರಿಶೀಲನಾ ಸಭೆ ನಡೆಸಿದ ಬಳಿಕ ಈ ಆಘಾತಕಾರಿ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ವರದಿಯ ಪ್ರಕಾರ, ಜಯಶಂಕರ್ ಭೂಪಾಲಪಲ್ಲಿಯಲ್ಲಿ 4, ವಾರಂಗಲ್ ಅರ್ಬನ್, ಕರೀಮನಗರ ಮತ್ತು ನಿಜಾಮಾಬಾದ್‌ನಲ್ಲಿ ತಲಾ 3, ಹಾಗೂ ಜೋಗುಲಾಂಬ ಗದ್ವಾಲ್, ರಂಗಾರೆಡ್ಡಿ ಮತ್ತು ಸೂರ್ಯಪೇಟ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಬಿಸಿಲಿನ ಬೇಗೆಗೆ ಬಲಿಯಾಗಿದ್ದಾರೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ತಕ್ಷಣವೇ ವಿತರಿಸಲು ಸಚಿವರು ಆದೇಶಿಸಿದ್ದಾರೆ.

ಎಲ್‌ನಿನೋ ಭೀತಿ, ಮುಂದಿನ 3 ದಿನ ಹೈ ಅಲರ್ಟ್!:

ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಎಲ್‌ನಿನೋ ಎಫೆಕ್ಟ್‌ನಿಂದಾಗಿ ಮೇ 26 ರವರೆಗೆ ಹೈದರಾಬಾದ್, ಕರೀಮನಗರ, ಪೆದ್ದಪಲ್ಲಿ, ಮುಳುಗು, ಖಮ್ಮಂ, ನಲ್ಗೊಂಡ ಮತ್ತು ಮಹಬೂಬ್‌ನಗರ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಉಷ್ಣಗಾಳಿ ಮತ್ತಷ್ಟು ತೀವ್ರಗೊಳ್ಳಲಿದೆ. ಹೀಗಾಗಿ, ಸಾರ್ವಜನಿಕರ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಕೇರಳ ಸಿಎಂ ಕಾರ್ಯದರ್ಶಿಯಾಗಿ ರತನ್ ಕೇಳ್ಕರ್ ನೇಮಕ: ಕಾಂಗ್ರೆಸ್​​ ವಿರುದ್ಧ ಬಿಜೆಪಿ ಕಿಡಿ

ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಮತ್ತು ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ತಂಪಾದ ಕುಡಿಯುವ ನೀರು, ಮಜ್ಜಿಗೆ ಹಾಗೂ ಒಆರ್‌ಎಸ್ (ORS) ಪ್ಯಾಕೆಟ್‌ಗಳನ್ನು ಕಡ್ಡಾಯವಾಗಿ ಲಭ್ಯವಾಗುವಂತೆ ಮಾಡಲು ಆದೇಶಿಸಲಾಗಿದೆ. ವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ಅನಾರೋಗ್ಯ ಪೀಡಿತರು ತುರ್ತು ಕೆಲಸಗಳಿಲ್ಲದೆ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮನೆಯಿಂದ ಹೊರಗೆ ಬರದಂತೆ ಸರ್ಕಾರ ಕಟ್ಟುನಿಟ್ಟಿನ ಸಲಹೆ (Advisory) ನೀಡಿದೆ. ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಪಕ್ಷಿ-ಪ್ರಾಣಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಭೇಟಿಯಾದ ಮಾರ್ಕೊ ರುಬಿಯೋ: ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನ – Kannada News | US Secretary of State Marco Rubio Meets PM Modi, Invites Him to Visit US

ದೆಹಲಿ, ಮೇ 23: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ಸದ್ಯ ಭಾರತ ಪ್ರವಾಸದಲ್ಲಿದ್ದು, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ಮಹತ್ವದ ಭೇಟಿಯು ದ್ವಿಪಕ್ಷೀಯ ಸಂಬಂಧಗಳ ಹಲವಾರು ಆಯಾಮಗಳ ಕುರಿತು ನಿರೀಕ್ಷೆಗಳನ್ನು ಮೂಡಿಸಿದೆ. ಮುಖ್ಯವಾಗಿ, ಇಂಧನ ಭದ್ರತೆ, ವ್ಯಾಪಾರ ಒಪ್ಪಂದಗಳು ಮತ್ತು ರಕ್ಷಣಾ ಸಹಕಾರದಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿದುಬಂದಿದೆ. ಭಾರತ ಮತ್ತು ಅಮೆರಿಕ ನಡುವೆ ಈಗಾಗಲೇ ಕೆಲವು ಒಪ್ಪಂದಗಳು ನಡೆದಿವೆ. ಆದರೆ, ಇವು ಭಾರತಕ್ಕೆ ಆರ್ಥಿಕವಾಗಿ ನಷ್ಟವನ್ನುಂಟು ಮಾಡಿದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕ ಭಾರತದ ಮೇಲೆ ಒತ್ತಡ ಹೇರುವ ಹಾಗೂ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬ ಮಾತುಗಳೂ ಕೇಳಿಬಂದಿವೆ. ಇತ್ತೀಚೆಗೆ ಅಮೆರಿಕವು ಚೀನಾದ ರೀತಿಯಲ್ಲಿ ಭಾರತವನ್ನು ಬೆಳೆಯಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿತ್ತು. ಆದಾಗ್ಯೂ, ಭಾರತ ಸರ್ಕಾರದಿಂದ ಈ ಹೇಳಿಕೆಗಳಿಗೆ ಬಲವಾದ ಖಂಡನೆ ವ್ಯಕ್ತವಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಎಐ ಬಳಸಿ ಬಿಕಿನಿ ವಿಡಿಯೋ: ರುಕ್ಮಿಣಿ ವಸಂತ್ ಹೇಳಿದ್ದೇನು? – Kannada News | Actress Rukmini Vasanth talks about her AI video

ಎಐ ಬಳಸಿ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ನಕಲಿ ವಿಡಿಯೋವನ್ನು ಕೆಲ ದುರುಳರು ಹರಿಬಿಟ್ಟಿದ್ದಾರೆ. ಮಹಿಳೆಯೊಬ್ಬಳು ಬಿಕಿನಿ ತೊಟ್ಟು ಸ್ವಿಮ್ಮಿಂಗ್ ಪೂಲ್​​ನಲ್ಲಿ ಇಳಿಯುತ್ತಿರುವ ದೃಶ್ಯ ಅದಾಗಿದ್ದು, ಆ ಮಹಿಳೆಯ ಮುಖವನ್ನು ರುಕ್ಮಿಣಿ ಮುಖದೊಂದಿಗೆ ಬದಲಾಯಿಸಲಾಗಿದೆ. ಎಐ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಕಮೆಂಟುಗಳು ಹರಿದಾಡುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ನಟಿ, ತೀವ್ರ ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಮಾಧ್ಯಮಗಳ ಮುಂದೆ ಇದೇ ವಿಷಯವಾಗಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರುಕ್ಮಿಣಿ ವಸಂತ್ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಕಣ್ಣೀರಿಟ್ಟಿದ್ದ ಅಭಿಮಾನಿ ಬಳಿ ಕ್ಷಮೆಯಾಚಿಸಿದ ರೋಹಿತ್ ಶರ್ಮಾ – Kannada News | Rohit Sharma Apologizes to Crying Fan: MI Star’s Kind Gesture Amidst IPL Struggles

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಈ ಸೀಸನ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಡಿರುವ 13 ಪಂದ್ಯಗಳಲ್ಲಿ ಮುಂಬೈ ಕೇವಲ 4 ಪಂದ್ಯಗಳನ್ನು ಗೆದ್ದು ಪ್ಲೇಆಫ್‌ ರೇಸ್​ನಿಂದ ಹೊರಬಿದ್ದಿದೆ. ತಂಡದ ಈ ಕಳಪೆ ಪ್ರದರ್ಶನಕ್ಕೆ ಆಟಗಾರರ ಸ್ಥಿರ ಪ್ರದರ್ಶನದಲ್ಲಿನ ಕೊರೆತೆಯೇ ಪ್ರಮುಖ ಕಾರಣ ಎನ್ನಬಹುದು. ಅದರಲ್ಲೂ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದು ಕೂಡ ತಂಡವನ್ನು ಸಂಕಷ್ಟಕ್ಕೆ ದೂಡಿತು. ರೋಹಿತ್ ಪಂದ್ಯವನ್ನು ಆಡದಿದ್ದರೂ ಅವರ ಅಭಿಮಾನಿಗಳ ಬಳಗ ಕೊಂಚವೂ ಕಡಿಮೆ ಆಗಿಲ್ಲ. ಅವರನ್ನು ನೋಡುವುದಕ್ಕಾಗಿಯೇ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಾರೆ. ಅದರಂತೆ ಅವರನ್ನು ನೋಡಲು ತಂಡದ ಹೋಟೆಲ್ ಹೊರಗೆ ಕಾಯುತ್ತಿದ್ದ ಅಭಿಮಾನಿಯೊಬ್ಬರಿಗೆ ರೋಹಿತ್ ದರ್ಶನವಾಗಿಲ್ಲ. ಇದರಿಂದ ಬೇಸರಗೊಂಡ ಆ ಅಭಿಮಾನಿ ಅಲ್ಲಿಯೇ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸ್ವತಃ ರೋಹಿತ್ ಅವರೇ ಆ ಅಭಿಮಾನಿ ಬಳಿ ಕ್ಷಮೆಯಾಚಿಸಿದ್ದಾರೆ.

ಕಣ್ಣೀರಿಟ್ಟಿದ ಯುವತಿ

ವಾಸ್ತವವಾಗಿ ಈಡನ್ ಗಾರ್ಡನ್ಸ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆದಿತ್ತಿ. ಈ ಸಂದರ್ಭದಲ್ಲಿ, ಮುಂಬೈ ತಂಡ ತಂಗಿದ್ದ ಹೋಟೆಲ್ ಹೊರಗೆ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ರೋಹಿತ್ ಶರ್ಮಾ ಅವರನ್ನು ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಜಮಾಯಿಸಿದ್ದರು. ಆ ಜನಸಂದಣಿಯಲ್ಲಿ ಯುವತಿಯೂ ಕೂಡ ಬಹಳ ಹೊತ್ತು ರೋಹಿತ್​ಗಾಗಿ ಕಾಯುತ್ತಿದ್ದರು. ಆದಾಗ್ಯೂ, ಭಾರಿ ಜನಸಂದಣಿ ಮತ್ತು ಭದ್ರತಾ ಕಾರಣಗಳಿಂದಾಗಿ, ರೋಹಿತ್ ಅವರನ್ನು ಗಮನಿಸದೆ ತೆರಳಿದ್ದರು. ಇದರಿಂದ ನಿರಾಶೆಗೊಂಡಿದ್ದ ಆಕೆ ಅಲ್ಲಿಯೇ ಕಣ್ಣೀರಿಟ್ಟಿದ್ದರು. ಆ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಕ್ಷಮೆಯಾಚಿಸಿದ ರೋಹಿತ್

ಸಾಮಾನ್ಯವಾಗಿ ಎಷ್ಟೇ ದೊಡ್ಡ ಸ್ಟಾರ್ ಆಟಗಾರನಾಗಿದ್ದರೂ, ಇಂತಹ ಸಣ್ಣ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಇದಕ್ಕೆ ತದ್ವೀರುದ್ದವಾಗಿರುವ ರೋಹಿತ್ ಶರ್ಮಾ ಯುವತಿಯ ಅಳುವ ವಿಡಿಯೋ ನೋಡಿದ ತಕ್ಷಣ ಪ್ರತಿಕ್ರಿಯಿಸಿದ್ದು, ‘ಕ್ಷಮಿಸಿ.. ಆ ಸಮಯದಲ್ಲಿ ನಾನು ನಿಮ್ಮನ್ನು ಈಡನ್ ಗಾರ್ಡನ್ಸ್‌ನಲ್ಲಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ನಾನು ನಿಮ್ಮ ವೀಡಿಯೊವನ್ನು ನೋಡಿದೆ. ಮೈದಾನದ ಹೊರಗೆ, ಹೋಟೆಲ್‌ನಲ್ಲಿ, ಕೆಲವೊಮ್ಮೆ ಬಹಳಷ್ಟು ಜನಸಂದಣಿ ಮತ್ತು ಜೋರಾದ ಶಬ್ದಗಳು ಇರುತ್ತವೆ. ಅದಕ್ಕಾಗಿಯೇ ನನ್ನ ಗಮನ ನಿಮ್ಮ ಮೇಲೆ ಬೀಳಲಿಲ್ಲ. ಆದರೆ ನಾನು ನಿಮಗೆ ಭರವಸೆ ನೀಡುತ್ತೇನೆ, ಮುಂದಿನ ಬಾರಿ ನಾನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ಗೆ ಬಂದಾಗ, ನಾನು ಖಂಡಿತವಾಗಿಯೂ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

LSG vs PBKS: ಅರ್ಜುನ್ ತೆಂಡೂಲ್ಕರ್​ಗೆ ಕೊನೆಗೂ ಅವಕಾಶ ನೀಡಿದ ಲಕ್ನೋ – Kannada News | IPL 2026: PBKS Fights for Playoff Spot vs LSG in Do or Die Match 68; Arjun Tendulkar Debuts

ಐಪಿಎಲ್ 2026 (IPL 2026) ರ 68 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (LSG vs PBKS) ತಂಡವನ್ನು ಎದುರಿಸುತ್ತಿದೆ. ಲೀಗ್ ಸುತ್ತಿನಲ್ಲಿ ಎರಡೂ ತಂಡಗಳ ಕೊನೆಯ ಪಂದ್ಯವಾಗಿದೆ. ಈ ಸೀಸನ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಪ್ರಯಾಣ ಲೀಗ್ ಹಂತದಲ್ಲೇ ಅಂತ್ಯಗೊಂಡಿದೆ. ಇತ್ತ ಪ್ಲೇಆಫ್​ಗೇರಬೇಕೆಂದರೆ ಪಂಜಾಬ್ ಕಿಂಗ್ಸ್ ಈ ಪಂದ್ಯವನ್ನು ಗೆಲ್ಲಲೇಬೇಕು. ಪಂಜಾಬ್ ಕಿಂಗ್ಸ್ ಈ ಪಂದ್ಯವನ್ನು ಸೋತರೆ, ಅದು ಕೂಡ ಲೀಗ್​ನಿಂದ ಹೊರಬೀಳಲಿದೆ. ಇನ್ನು ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ.

ಟಾಸ್ ಗೆದ್ದ ಪಂಜಾಬ್

ಟಾಸ್ ಗೆದ್ದ ಬಳಿಕ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಪಂಜಾಬ್ ತನ್ನ ಪ್ಲೇಯಿಂಗ್ 11 ರಲ್ಲಿ ಎರಡು ಬದಲಾವಣೆಗಳನ್ನು ಮಾಡಿದೆ. ಅದರಂತೆ ಮಾರ್ಕೊ ಯಾನ್ಸನ್ ಮತ್ತು ವೈಶಾಕ್ ವಿಜಯ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಲಕ್ನೋ ಕೂಡ ತನ್ನ ಪ್ಲೇಯಿಂಗ್ 11 ರಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದು ಅರ್ಜುನ್ ತೆಂಡೂಲ್ಕರ್ ಮತ್ತು ಅರ್ಶಿನ್ ಕುಲಕರ್ಣಿಗೆ ತಂಡದಲ್ಲಿ ಅವಕಾಶ ನೀಡಿದೆ. ಮುಂಬೈ ತಂಡವನ್ನು ತೊರೆದು ಲಕ್ನೋ ಸೇರಿಕೊಂಡಿದ್ದ ಅರ್ಜುನ್​ಗೆ ಕೊನೆಗೂ ಆಡುವ ಅವಕಾಶ ಸಿಕ್ಕಿದೆ.

LSG vs PBKS IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್ 11

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಾಂಶ್ ಶೆಡ್ಜ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಉಮರ್ಜಾಯ್, ಮಾರ್ಕೊ ಯಾನ್ಸೆನ್, ವಿಜಯ್‌ಕುಮಾರ್ ವೈಶಾಖ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

ಇಂಪ್ಯಾಕ್ಟ್ ಪ್ಲೇಯರ್ಸ್​: ಹರ್‌ಪ್ರೀತ್ ಬ್ರಾರ್, ಮಾರ್ಕಸ್ ಸ್ಟೊಯಿನಿಸ್, ಕ್ಸೇವಿಯರ್ ಬಾರ್ಟ್ಲೆಟ್, ವಿಷ್ಣು ವಿನೋದ್, ಪ್ರವೀಣ್ ದುಬೆ.

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಜೋಶ್ ಇಂಗ್ಲಿಸ್, ಅರ್ಶಿನ್ ಕುಲಕರ್ಣಿ, ನಿಕೋಲಸ್ ಪೂರನ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಮುಕುಲ್ ಚೌಧರಿ, ಅರ್ಜುನ್ ತೆಂಡೂಲ್ಕರ್, ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್, ಮೊಹ್ಸಿನ್ ಖಾನ್.

ಇಂಪ್ಯಾಕ್ಟ್ ಪ್ಲೇಯರ್ಸ್​: ಶಹಬಾಜ್ ಅಹ್ಮದ್, ದಿಗ್ವೇಶ್ ಸಿಂಗ್ ರಾಠಿ, ಮಣಿಮಾರನ್ ಸಿದ್ಧಾರ್ಥ್, ಹಿಮ್ಮತ್ ಸಿಂಗ್, ಆಕಾಶ್ ಮಹಾರಾಜ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:26 pm, Sat, 23 May 26

Source link

ಕೇರಳ ಸಿಎಂ ಮುಖ್ಯಕಾರ್ಯದರ್ಶಿಯಾಗಿ ರತನ್ ಕೇಳ್ಕರ್ ನೇಮಕ: ಕಾಂಗ್ರೆಸ್​​ ವಿರುದ್ಧ ಬಿಜೆಪಿ ಕಿಡಿ – Kannada News | Ratan Kelkar Appointed Kerala CM’s Chief Secretary; BJP sparks on Congress

ತಿರುವನಂತಪುರಂ: ಕೇರಳದಲ್ಲಿ ಕಾಂಗ್ರೆಸ್ (Congress) ನೇತೃತ್ವದ ಯುಡಿಎಫ್ ಸರ್ಕಾರದ ಆಡಳಿತ ಆರಂಭವಾಗಿದೆ. ಕೇರಳ ರಾಜಕೀಯ ವಲಯದಲ್ಲಿ ಇದೀಗ ಮಹತ್ವದ ಬದಲಾವಣೆಯೊಂದು ನಡೆದಿದೆ. ಇತ್ತೀಚಿಗೆ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯ ಚುನಾವಣಾಧಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಐಎಎಸ್ ಅಧಿಕಾರಿ ರತನ್ ಯು ಕೇಳ್ಕರ್ (Ratan Kelkar)​​ ಅವರನ್ನು ಕೇರಳ ನೂತನ ಸಿಎಂ ವಿ.ಡಿ ಸತೀಷನ್​​ರವರ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು

  • ರತನ್ ಕೇಳ್ಕರ್ ನೇಮಕದ ಸುತ್ತ ರಾಜಕೀಯ ವಿವಾದ
  • ಕಾಂಗ್ರೆಸ್​ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ
  • ಕೇರಳ ರಾಜಕೀಯ ವಲಯದಲ್ಲಿ ಇದೀಗ ಮಹತ್ವದ ಬದಲಾವಣೆ

ಕಾಂಗ್ರೆಸ್​​ ವಿರುದ್ಧ ಬಿಜೆಪಿ ವಾಗ್ದಾಳಿ

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ 1990ರ ಬ್ಯಾಚ್‌ನ ಐಎಎಸ್ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಅವರನ್ನು ಬಿಜೆಪಿ ಸರ್ಕಾರ ತನ್ನ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತ್ತು. ಪಕ್ಷಪಾತ ತೋರಿದವರಿಗೆ ಪ್ರತಿಫಲ ನೀಡಲಾಗುತ್ತಿದೆ ಎಂದು ಕಾಂಗ್ರೆಸ್​​ ಆರೋಪಿಸಿತ್ತು. ಆದರೆ ಇದೀಗ ರತನ್ ಕೇಳ್ಕರ್​ ಅವರನ್ನು ಸಿಎಂ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು, ಕಾಂಗ್ರೆಸ್​​ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ.

ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಕಿಡಿ

ಈ ಬಗ್ಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್​​ ಟ್ವೀಟ್ ಮಾಡಿದ್ದು, ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ಅವರನ್ನು ಬಿಜೆಪಿ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದಾಗ ‘ಕಳ್ಳತನ ಎಷ್ಟು ದೊಡ್ಡದೋ, ಬಹುಮಾನವೂ ಅಷ್ಟೇ ದೊಡ್ಡದು’ ಎಂದು ರಾಹುಲ್ ಗಾಂಧಿ ಅವರು ಕೂಗಾಡಿದ್ದರು. ಆದರೆ ಕೇರಳದಲ್ಲಿ ಸಿಎಂ ವಿ.ಡಿ ಸತೀಷನ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇರಳದ ಮುಖ್ಯ ಚುನಾವಣಾಧಿಕಾರಿ ರತನ್ ಕೇಳ್ಕರ್​​​ರನ್ನು ಸಿಎಂ ಕಾರ್ಯದರ್ಶಿಯನ್ನಾಗಿ ನೇಮಿಸಿದೆ. ಹಾಗಾದರೆ ರಾಹುಲ್ ಗಾಂಧಿ ಅವರೇ ಕೇರಳದಲ್ಲಿ ನಡೆದಿರುವುದು ‘ಕಳ್ಳತನಕ್ಕೆ ಸಿಕ್ಕ ಬಹುಮಾನವೇ ಅಥವಾ ಇದ್ದಕ್ಕಿದ್ದಂತೆ ಪ್ರಜಾಪ್ರಭುತ್ವದ ಸೌಂದರ್ಯವಾಗಿ ಬದಲಾಯಿತೇ?’ ಎಂದು ಪ್ರಶ್ನಿಸಿದ್ದಾರೆ.

ಇನ್ನು ಈ ಟೀಕೆಗಳಿಗೆ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಚುನಾವಣಾ ಅಧಿಕಾರಿಗೆ ಮುಖ್ಯಕಾರ್ಯದರ್ಶಿ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ಆದರೆ, ಕೇರಳದಲ್ಲಿ ರತನ್ ಕೇಳ್ಕರ್​​ಗೆ ನೀಡಿರುವುದು ಕೇವಲ ಸಿಎಂ ಆಡಳಿತಾತ್ಮಕ ಹಾಗೂ ಸಲಹಾತ್ಮಕ ಸ್ವರೂಪದ ಸೆಕ್ರೆಟರಿ ಹುದ್ದೆಯಷ್ಟೇ. ಹೀಗಾಗಿ, ಇವೆರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ಹೋಲಿಸುವುದು ಸರಿಯಲ್ಲ ಎನ್ನಲಾಗುತ್ತಿದೆ.

ಯಾರಿದು ರತನ್ ಕೇಳ್ಕರ್​​? 

2003ರ ಬ್ಯಾಚ್‌ನ ಕೇರಳ ಕೆಡರ್ ಅಧಿಕಾರಿ ರತನ್ ಕೇಳ್ಕರ್​​ ಮೂಲತಃ ಮಹಾರಾಷ್ಟ್ರ ಮೂಲದವರು. ವಿವಿಧ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಡಿಸೆಂಬರ್ 2024ರಿಂದ ಕೇರಳದ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಏಪ್ರಿಲ್ 9 ರಂದು ನಡೆದ ಕೇರಳ ವಿಧಾನಸಭಾ ಚುನಾವಣೆ ಇವರ ನೇತೃತ್ವದಲ್ಲೇ ನಡೆದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On – 7:11 pm, Sat, 23 May 26

Source link

TV9 Kannada News Live: ವರ್ಕ್ ಫ್ರಮ್ ಹೋಂಗೆ ಐಟಿ ಕಂಪನಿಗಳ ವಿರೋಧ: ಮಳೆಗಾಗಿ ಶಾಸಕ ಡಾ. ರಂಗನಾಥ್ ವಿಶೇಷ ಪೂಜೆ, ಈ ಹೊತ್ತಿನ ಟಾಪ್ ಸುದ್ದಿಗಳು – Kannada News | Uber Cab Driver Brutally Assaulted in Wilson Garden; Actress Radhika Narayan Flashes Her New Luxury Car

ಬೆಂಗಳೂರು, ಮೇ.23: ಮೋದಿ ವರ್ಕ್ ಫ್ರಮ್ ಹೋಂಗೆ ಕರೆಗೆ ಗ್ರೇಟರ್ ಬೆಂಗಳೂರು ಐಟಿ ಕಂಪನಿ ಹಾಗೂ ಇಂಡಸ್ಟ್ರೀಸ್ ಅಸೋಸಿಯೇಷನ್ ನಿಂದ ವಿರೋಧ ವ್ಯಕ್ತವಾಗಿದೆ. ಮಳೆಗಾಗಿ ಯಡಿಯೂರು ಸಿದ್ಧಲಿಂಗೇಶ್ವರನಿಗೆ ಹೋಮ-ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಾ. ರಂಗನಾಥ್. ಸಿಲಿಕಾನ್ ಸಿಟಿಯಲ್ಲಿ ನಡುರಸ್ತೆಯಲ್ಲೇ ಉಬರ್ ಕ್ಯಾಬ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ವಿಡಿಯೋ ಕೂಡ ವೈರಲ್​ ಆಗಿದೆ. ಇನ್ನು ಹೊಸ ದುಬಾರಿ ಕಾರು ಖರೀದಿಸಿ ಸಂಭ್ರಮಿಸಿದ ಚಂದನವನದ ನಟಿ ರಾಧಿಕಾ ನಾರಾಯಣ್.

‘ವರ್ಕ್ ಫ್ರಮ್ ಹೋಮ್’ ಆದೇಶಕ್ಕೆ ಐಟಿ ಕಂಪನಿಗಳ ತೀವ್ರ ವಿರೋಧ!:

ಮೋದಿ ವರ್ಕ್ ಫ್ರಮ್ ಹೋಂಗೆ ಕರೆಗೆ ಗ್ರೇಟರ್ ಬೆಂಗಳೂರು ಐಟಿ ಕಂಪನಿ ಹಾಗೂ ಇಂಡಸ್ಟ್ರೀಸ್ ಅಸೋಸಿಯೇಷನ್ ನಿಂದ ವಿರೋಧ ವ್ಯಕ್ತವಾಗಿದೆ. ಔಟರ್ ರಿಂಗ್ ರೋಡ್ (ORR) ಭಾಗದಲ್ಲಿರುವ ಸುಮಾರು 4,500 ಕ್ಕೂ ಹೆಚ್ಚು ಐಟಿ ಕಂಪನಿಗಳ ಒಕ್ಕೂಟ ಮತ್ತು ಗ್ರೇಟರ್ ಬೆಂಗಳೂರು ಐಟಿ ಕಂಪನಿ ಹಾಗೂ ಇಂಡಸ್ಟ್ರೀಸ್ ಅಸೋಸಿಯೇಷನ್ ಈ ಕುರಿತು ಮಹತ್ವದ ಸ್ಪಷ್ಟನೆ ನೀಡಿದೆ. ಈಗಾಗಲೇ ಹಲವು ಪ್ರಮುಖ ಕಂಪನಿಗಳು ಹೈಬ್ರೀಡ್ ಮಾಡಲ್ (ಕೆಲ ದಿನ ಕಚೇರಿ, ಕೆಲ ದಿನ ಮನೆ) ಮೂಲಕ ಕಾರ್ಯನಿರ್ವಹಿಸುತ್ತಿವೆ. ಆದರೆ ಸಂಪೂರ್ಣ ವರ್ಕ್ ಫ್ರಮ್ ಹೋಮ್ ನೀಡುವುದು ಪ್ರಾಯೋಗಿಕವಾಗಿ ಅಸಾಧ್ಯ. ಬೆಂಗಳೂರಿನ ಐಟಿ ಸಂಸ್ಥೆಗಳು ಅಮೆರಿಕ ಸೇರಿದಂತೆ ಹಲವು ವಿದೇಶಿ ಕ್ಲೈಂಟ್‌ಗಳ ಜೊತೆ ಕೆಲಸ ಮಾಡುತ್ತವೆ. ಬಿಪಿಒ (BPO) ಗಳಲ್ಲಂತೂ ಡೇಟಾ ಸುರಕ್ಷತೆಯ ಕಾರಣದಿಂದಾಗಿ ಇದು ಸಾಧ್ಯವೇ ಇಲ್ಲ. ಕಂಪನಿ, ವರ್ಕರ್ಸ್ ಹಾಗೂ ವಿದೇಶಿ ಕ್ಲೈಂಟ್‌ಗಳು ಒಪ್ಪಿದರೆ ಮಾತ್ರ ಇದು ಸಾಧ್ಯ. ಸದ್ಯಕ್ಕೆ ಸರ್ಕಾರದಿಂದ ಯಾವುದೇ ಅಧಿಕೃತ ಕಡ್ಡಾಯ ಮಾರ್ಗಸೂಚಿಗಳು ಬಂದಿಲ್ಲದ ಕಾರಣ, ಯಾವುದೇ ರೀತಿಯ ಬಿಗ್ ವರ್ಕ್ ಫ್ರಮ್ ಹೋಮ್ ಇರುವುದಿಲ್ಲ ಎಂದು ಐಟಿ ಸಂಸ್ಥೆಗಳು ಖಡಕ್ ಆಗಿ ತಿಳಿಸಿವೆ.

ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಾ. ರಂಗನಾಥ್:

ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಸಕಾಲಕ್ಕೆ ಮಳೆಯಾಗದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಇಡೀ ತಾಲೂಕು ಮತ್ತು ರಾಜ್ಯದಲ್ಲಿ ಉತ್ತಮ ಮಳೆ ಹಾಗೂ ಬೆಳೆಯಾಗಲಿ ಎಂದು ಪ್ರಾರ್ಥಿಸಿ ಕುಣಿಗಲ್ ಕ್ಷೇತ್ರದ ಜನಪ್ರಿಯ ಶಾಸಕ ಡಾ. ರಂಗನಾಥ್ ಅವರು ಇತಿಹಾಸ ಪ್ರಸಿದ್ಧ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಹೋಮ ಹವನಗಳನ್ನು ನೆರವೇರಿಸಿದ್ದಾರೆ. ಕ್ಷೇತ್ರದ ರೈತರ ಹಿತದೃಷ್ಟಿಯಿಂದ ದೇವರ ಮೊರೆ ಹೋಗಿರುವುದಾಗಿ ಶಾಸಕರು ತಿಳಿಸಿದ್ದು, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಮಳೆಗಾಗಿ ಪ್ರಾರ್ಥಿಸಿದರು.

ನಡುರಸ್ತೆಯಲ್ಲೇ ಉಬರ್ ಕ್ಯಾಬ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ!

ಐಟಿ ಹಬ್ ಬೆಂಗಳೂರಿನಲ್ಲಿ ರಸ್ತೆ ಪುಂಡರ ಹಾವಳಿ ಮಿತಿಮೀರಿದ್ದು, ನಡುರಸ್ತೆಯಲ್ಲೇ ಉಬರ್ ಕ್ಯಾಬ್ ಚಾಲಕನೊಬ್ಬನ ಮೇಲೆ ಅತ್ಯಂತ ಭೀಕರವಾಗಿ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಹೆಚ್. ರಸ್ತೆಯಲ್ಲಿ ಮೇ 22ರಂದು ಈ ಕೃತ್ಯ ನಡೆದಿದೆ. ಕ್ಯಾಬ್ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು, ಚಾಲಕನನ್ನು ಬಲವಂತವಾಗಿ ಹೊರಗೆಳೆದು ಮನಬಂದಂತೆ ಥಳಿಸಿದೆ. ಈ ಭೀಕರ ಹಲ್ಲೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಲ್ಸನ್ ಗಾರ್ಡನ್ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ‘ದೇಶ ಇಂತಹ ಪ್ರಧಾನಿಯನ್ನು ಎಂದೂ ನೋಡಿಲ್ಲ!’: ಪಿಎಂ ಮೋದಿ ಬಗ್ಗೆ ಸ್ಮೃತಿ ಇರಾನಿ ಹೇಳಿದ ಆ ಒಂದು ಮಾತು ಸಖತ್​ ವೈರಲ್

ಹೊಸ ದುಬಾರಿ ಕಾರು ಖರೀದಿಸಿ ಸಂಭ್ರಮಿಸಿದ ಚಂದನವನದ ನಟಿ ರಾಧಿಕಾ ನಾರಾಯಣ್!

‘ರಂಗಿತರಂ’, ‘ಯೂ ಟರ್ನ್’ ಹಾಗೂ ‘ಡಿಟೆಕ್ಟಿವ್ ಶಿವಾಜಿ’ ಮುಂತಾದ ಹಿಟ್ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಪ್ರತಿಭಾವಂತ ನಟಿ ರಾಧಿಕಾ ನಾರಾಯಣ್ ಅವರು ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಹೊಸ ಐಷಾರಾಮಿ ಮತ್ತು ದುಬಾರಿ ಕಾರೊಂದನ್ನು ಖರೀದಿಸಿರುವ ನಟಿ, ಕಾರಿನೊಂದಿಗೆ ಸಂಭ್ರಮದಿಂದ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ಹೊಸ ಕಾರಿನ ಬೆಲೆ ಮತ್ತು ಅದರ ಗ್ಲಾಮರಸ್ ಫೋಟೋಗಳು ಸದ್ಯ ಸ್ಯಾಂಡಲ್‌ವುಡ್ ವಲಯದಲ್ಲಿ ಮತ್ತು ಅವರ ಅಭಿಮಾನಿ ಬಳಗದಲ್ಲಿ ಭಾರಿ ಸೌಂಡ್ ಮಾಡುತ್ತಿದ್ದು, ಅಭಿಮಾನಿಗಳು ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಬಂಗಾಳದಲ್ಲಿ ಮಮತಾ ಕಾಲದ ನಿಯಮಕ್ಕೆ ಬಿಜೆಪಿ ಬ್ರೇಕ್!

ಪಶ್ಚಿಮ ಬಂಗಾಳದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಬಕ್ರೀದ್ ಹಬ್ಬದ ರಜೆ ಹಾಗೂ ಪ್ರಾಣಿ ಬಲಿ ನಿಯಮಗಳ ಕುರಿತು ಭಾರಿ ಚರ್ಚೆ ಮತ್ತು ವಿವಾದ ಆರಂಭವಾಗಿದೆ. ರಾಜ್ಯದ ಹೊಸ ಬಿಜೆಪಿ ಸರ್ಕಾರವು ಬಕ್ರೀದ್ ಹಬ್ಬಕ್ಕೆ ನೀಡಲಾಗುತ್ತಿದ್ದ ಎರಡು ದಿನಗಳ ಸಾರ್ವಜನಿಕ ರಜೆಯನ್ನು ಕೇವಲ ಒಂದು ದಿನಕ್ಕೆ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸರ್ಕಾರವು ಜಾರಿಗೆ ತಂದಿದ್ದ ರಜಾ ಪಟ್ಟಿಯನ್ನು ಪರಿಷ್ಕರಿಸಿ ರಾಜ್ಯ ಹಣಕಾಸು ಇಲಾಖೆಯು ಅಧಿಕೃತ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ. ಇನ್ನೊಂದೆಡೆ, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿ ಪ್ರಕ್ರಿಯೆಯನ್ನು ನಿಯಂತ್ರಿಸಲು ಸರ್ಕಾರ ಜಾರಿಗೆ ತಂದಿದ್ದ ಕಠಿಣ ಮಾರ್ಗಸೂಚಿಗಳನ್ನು ಕಲ್ಕತ್ತಾ ಹೈಕೋರ್ಟ್ ಎತ್ತಿಹಿಡಿದಿದೆ. ಪಶ್ಚಿಮ ಬಂಗಾಳ ಪ್ರಾಣಿ ಬಲಿ ನಿಯಂತ್ರಣ ಕಾಯ್ದೆ 1950ರ ಅಡಿಯಲ್ಲಿ, ಕೇವಲ 14 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರಾಣಿಗಳನ್ನು ಮಾತ್ರ ಬಲಿ ನೀಡಲು ಅವಕಾಶವಿದ್ದು, ಅದಕ್ಕೆ ಪಶುವೈದ್ಯರು ಹಾಗೂ ಸ್ಥಳೀಯ ಸಂಸ್ಥೆಗಳ ಜಂಟಿ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:57 pm, Sat, 23 May 26

Source link

Exit mobile version