LSG vs PBKS IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ – Kannada News | Lucknow Super Giants vs Punjab Kings IPL 2026 Live Cricket Score LSG vs PBKS Match on 23rd May latest news in Kannada

ಐಪಿಎಲ್ 2026 ರ 68 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. 19 ನೇ ಸೀಸನ್​ನ ಲೀಗ್ ಹಂತದಲ್ಲಿ ಲಕ್ನೋ ಮತ್ತು ಪಂಜಾಬ್ ತಂಡಗಳ 14 ನೇ ಮತ್ತು ಕೊನೆಯ ಪಂದ್ಯ ಇದಾಗಿದೆ. ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುನ್ನಡೆಸಿರೆ, ರಿಷಭ್ ಪಂತ್ ಲಕ್ನೋ ತಂಡವನ್ನು ಮುನ್ನಡೆಸಲಿದ್ದಾರೆ. ಈ ಪಂದ್ಯ ಲಕ್ನೋಗೆ ಕೇವಲ ಔಪಚಾರಿಕ ಪಂದ್ಯವಾಗಿದ್ದರೆ, ಪಂಜಾಬ್ ತಂಡಕ್ಕೆ ಪ್ಲೇಆಫ್ ವಿಷಯದಲ್ಲಿ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

Source link

Chanakya Niti: ಈ ಒಂದು ಸಣ್ಣ ಅಭ್ಯಾಸ ನಿಮ್ಮನ್ನು ಬಡತನದ ಕೂಪಕ್ಕೆ ನೂಕಬಹುದು… ಎಚ್ಚರ! – Kannada News | Chanakya Niti: Those who have this one habit will never be able to achieve wealth in life

ಯಶಸ್ಸನ್ನು (Success) ಸಾಧಿಸಬೇಕು, ಜೀವನದಲ್ಲಿ ಪ್ರಗತಿಯನ್ನು ಸಾಧಿಸಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಹೆಚ್ಚಿನವರು ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ. ಈ ರೀತಿ ಎಷ್ಟೇ ದುಡಿದು ಹಣ ಸಂಪಾದಿಸಿದರೂ, ಶ್ರೀಮಂತಿಕೆಯನ್ನು ಗಳಿಸಿದರೂ ಈ ಒಂದು ಅಭ್ಯಾಸವಿದ್ದರೆ ಆ ಹಣ ಎಂದಿಗೂ ನಿಮ್ಮ ಕೈಯಲ್ಲಿ ನಿಲ್ಲಲಾರದು, ಈ ಅಭ್ಯಾಸದ ಕಾರಣದಿಂದ ನೀವು ಜೀವನಪರ್ಯಂತ ಬಡತನದಲ್ಲಿಯೇ ಇರಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಹೌದು ಮನುಷ್ಯನ ಈ ಒಂದು ಸಣ್ಣ ಅಭ್ಯಾಸವು ಕ್ರಮೇಣ ಬಡತನಕ್ಕೆ ಕಾರಣವಾಗುತ್ತದೆ. ಅದನ್ನು ಬದಲಾಯಿಸದಿದ್ದರೆ ಜೀವನದಲ್ಲಿ ಪ್ರಗತಿಯನ್ನು ಹೊಂದಲು ಸಾಧ್ಯವೇ ಇಲ್ಲ. ಹಾಗಿದ್ದರೆ ಒಬ್ಬ ವ್ಯಕ್ತಿಯನ್ನು ಬಡತನಕ್ಕೆ ತಳ್ಳುವ ಆ ಅಭ್ಯಾಸ ಯಾವುದು ಎಂಬುದನ್ನು ನೋಡೋಣ ಬನ್ನಿ.

ನಿಮ್ಮ ಈ ಅಭ್ಯಾಸ ಬಡತನಕ್ಕೆ ಕಾರಣವಾಗಬಹುದು:

ಆಚಾರ್ಯ ಚಾಣಕ್ಯರು  ಹೇಳುವಂತೆ, ತನ್ನ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಮತ್ತು ದುಂದುವೆಚ್ಚದಲ್ಲಿ ತೊಡಗುವ ವ್ಯಕ್ತಿಯು ಎಂದಿಗೂ ಶ್ರೀಮಂತನಾಗಲು ಸಾಧ್ಯವಿಲ್ಲ. ಆತ ಇದೇ ವರ್ತನೆಯನ್ನು ಮುಂದುವರೆಸಿದರೆ ಕ್ರಮೇಣ ಆತನ ಉಳಿತಾಯ ಖಾಲಿಯಾಗುತ್ತದೆ, ಆತ ಸಾಲದ ಹೊರೆಯನ್ನು ಹೊತ್ತುಕೊಳ್ಳುತ್ತಾನೆ. ಈ ಅಭ್ಯಾಸವು ಬಡತನಕ್ಕೆ ಕಾರಣವಾಗಬಹುದು ಮತ್ತು ಅದು ಅವನ ಭವಿಷ್ಯವನ್ನೇ ಹಾಳುಮಾಡುತ್ತದೆ.

ಒಬ್ಬ ವ್ಯಕ್ತಿ ಎಂದಿಗೂ ಆತನ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಾರದು ಜೊತೆಗೆ ಹಣ ಇದ್ದರೆ ಅದನ್ನು ವ್ಯರ್ಥ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ದುಂದುವೆಚ್ಚವನ್ನು ಮಾಡಬಾರದು. ಈ ಒಂದು ಅಭ್ಯಾಸ ವ್ಯಕ್ತಿಯನ್ನು ಬಡವನನ್ನಾಗಿ ಮಾಡುತ್ತದೆ. ಅಲ್ಲದೆ ಇದು ಒಬ್ಬ ವ್ಯಕ್ತಿಯನ್ನು ಸಾಲದ ಸುಳಿಯಲ್ಲಿ ಸಿಲುಕಿಸುವ ಸಾಧ್ಯತೆಯೂ ಇದೆ. ಹಾಗಾಗಿ ಶ್ರೀಮಂತಿಕೆಯನ್ನು ಗಳಿಸಬೇಕು ಎಂಬ ಬಯಕೆ ಇದ್ದರೆ ದುಂದುವೆಚ್ಚವನ್ನು ಮಾಡಬೇಡಿ, ವ್ಯರ್ಥ ಖರ್ಚುಗಳನ್ನು ಮಾಡಬೇಡಿ, ಪ್ರತಿ ತಿಂಗಳು ಆದಾಯದ ಸ್ವಲ್ಪ ಭಾಗವನ್ನು ಉಳಿತಾಯ ಮಾಡಿ ಮತ್ತು ಉತ್ತಮ ಸ್ಥಳದಲ್ಲಿ ಹೂಡಿಕೆಯನ್ನು ಮಾಡಿ.

ಇದನ್ನೂ ಓದಿ: ಪುರುಷರೇ…. ನಿಮ್ಮ ಹೆಂಡ್ತಿಯ ಸಂಗತಿಯನ್ನು ಯಾರ ಬಳಿಯೂ ಹೇಳಬೇಡಿ

ವ್ಯರ್ಥ ಖರ್ಚು ಏಕೆ ಅಪಾಯಕಾರಿ?

  • ವ್ಯರ್ಥ ಖರ್ಚು ವ್ಯಕ್ತಿಯನ್ನು ಸಾಲ ಮಾಡುವಂತೆ ಮಾಡುತ್ತವೆ. ಈ ಸಾಲವು ಒತ್ತಡ ಮತ್ತು ಉದ್ವೇಗಕ್ಕೆ ಕಾರಣವಾಗುತ್ತದೆ.
  • ಯಾವುದೇ ಉಳಿತಾಯವಿಲ್ಲದಿದ್ದರೆ, ಇದ್ದ ಹಣವನ್ನೆಲ್ಲಾ ಖರ್ಚು ಮಾಡಿದರೆ ಕಷ್ಟದ ಸಮಯದಲ್ಲಿ ನೀವು ಒಂಟಿಯಾಗಿ ಇರಬೇಕಾಗುತ್ತದೆ. ಇದು ನಿಮ್ಮನ್ನು ಬೀದಿಗೆ ತರಬಹುದು.
  • ಹಣಕಾಸಿನ ಅಸ್ಥಿರತೆಯು ಸಂಬಂಧಗಳು ಮತ್ತು ವೃತ್ತಿಜೀವನ ಎರಡರ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ವ್ಯರ್ಥ ಖರ್ಚು ಮಾಡುವುದನ್ನು ಬಿಟ್ಟುಬಿಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದಲ್ಲಿ ಮಮತಾ ಕಾಲದ ನಿಯಮಕ್ಕೆ ಬಿಜೆಪಿ ಬ್ರೇಕ್!: ಬಕ್ರೀದ್ ರಜೆ 1 ದಿನಕ್ಕೆ ಕಡಿತ, ಪ್ರಾಣಿ ವಧೆಗೂ ಕಠಿಣ ನಿಯಮ  – Kannada News | Bakrid Holiday and Animal Sacrifice: West Bengal Govt’s New Norms Stir Debate

ಕೋಲ್ಕತ್ತಾ, ಮೇ.23 : ಪಶ್ಚಿಮ ಬಂಗಾಳದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಬಕ್ರೀದ್ ಹಬ್ಬದ ರಜೆ ಹಾಗೂ ಪ್ರಾಣಿ ಬಲಿ ನಿಯಮಗಳ ಕುರಿತು ಭಾರಿ ಚರ್ಚೆ ಮತ್ತು ವಿವಾದ ಆರಂಭವಾಗಿದೆ. ರಾಜ್ಯದ ಹೊಸ ಬಿಜೆಪಿ ಸರ್ಕಾರವು ಬಕ್ರೀದ್ ಹಬ್ಬಕ್ಕೆ ನೀಡಲಾಗುತ್ತಿದ್ದ ಎರಡು ದಿನಗಳ ಸಾರ್ವಜನಿಕ ರಜೆಯನ್ನು ಕೇವಲ ಒಂದು ದಿನಕ್ಕೆ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸರ್ಕಾರವು ಜಾರಿಗೆ ತಂದಿದ್ದ ರಜಾ ಪಟ್ಟಿಯನ್ನು ಪರಿಷ್ಕರಿಸಿ ರಾಜ್ಯ ಹಣಕಾಸು ಇಲಾಖೆಯು ಶುಕ್ರವಾರ ಅಧಿಕೃತ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ.

ಹಳೆಯ ಆದೇಶದ ಪ್ರಕಾರ, 2026ರ ಮೇ 26 ಮತ್ತು ಮೇ 27 ರಂದು ಬಕ್ರೀದ್ ಪ್ರಯುಕ್ತ ಸಾರ್ವಜನಿಕ ರಜೆ ಘೋಷಿಸಲಾಗಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಮೇ 28 ರಂದು ಬಕ್ರೀದ್ ಹಬ್ಬ ಆಚರಿಸಲಾಗುವುದು ಎಂಬ ಅಧಿಕೃತ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಮೇ 28 (ಗುರುವಾರ) ಮಾತ್ರ ಸಾರ್ವಜನಿಕ ರಜೆ ಎಂದು ಘೋಷಿಸಿದೆ. ಇದರೊಂದಿಗೆ ಈ ಹಿಂದೆ ನೀಡಲಾಗಿದ್ದ ಮೇ 26 ಮತ್ತು 27ರ ರಜೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಆ ಎರಡು ದಿನಗಳು ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಾಮಾನ್ಯ ಕೆಲಸದ ದಿನಗಳಾಗಿರಲಿವೆ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ‘ದೇಶ ಇಂತಹ ಪ್ರಧಾನಿಯನ್ನು ಎಂದೂ ನೋಡಿಲ್ಲ!’: ಪಿಎಂ ಮೋದಿ ಬಗ್ಗೆ ಸ್ಮೃತಿ ಇರಾನಿ ಹೇಳಿದ ಆ ಒಂದು ಮಾತು ಸಖತ್​ ವೈರಲ್

ಪ್ರಾಣಿ ಬಲಿ ನಿಯಮಾವಳಿ ಎತ್ತಿಹಿಡಿದ ಕಲ್ಕತ್ತಾ ಹೈಕೋರ್ಟ್:

ಇನ್ನೊಂದೆಡೆ, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿ ಪ್ರಕ್ರಿಯೆಯನ್ನು ನಿಯಂತ್ರಿಸಲು ಸರ್ಕಾರ ಜಾರಿಗೆ ತಂದಿದ್ದ ಕಠಿಣ ಮಾರ್ಗಸೂಚಿಗಳನ್ನು ಕಲ್ಕತ್ತಾ ಹೈಕೋರ್ಟ್ ಎತ್ತಿಹಿಡಿದಿದೆ. ಪಶ್ಚಿಮ ಬಂಗಾಳ ಪ್ರಾಣಿ ಬಲಿ ನಿಯಂತ್ರಣ ಕಾಯ್ದೆ 1950ರ ಅಡಿಯಲ್ಲಿ, ಕೇವಲ 14 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರಾಣಿಗಳನ್ನು ಮಾತ್ರ ಬಲಿ ನೀಡಲು ಅವಕಾಶವಿದ್ದು, ಅದಕ್ಕೆ ಪಶುವೈದ್ಯರು ಹಾಗೂ ಸ್ಥಳೀಯ ಸಂಸ್ಥೆಗಳ ಜಂಟಿ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗೋಹತ್ಯೆ ಮಾಡುವುದನ್ನು ನಿಷೇಧಿಸಿರುವ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲು ಕೋರ್ಟ್ ನಿರಾಕರಿಸಿದೆ. ಈ ವೇಳೆ ನ್ಯಾಯಾಲಯವು, “ಹಸುಗಳನ್ನು ಬಲಿ ಕೊಡುವುದು ಈದ್ ಹಬ್ಬದ ಕಡ್ಡಾಯ ಅಥವಾ ಅತ್ಯಗತ್ಯ ಭಾಗವಲ್ಲ” ಎಂದು ಸುಪ್ರೀಂ ಕೋರ್ಟ್‌ನ ಹಳೆಯ ಆದೇಶಗಳನ್ನು ಉಲ್ಲೇಖಿಸಿ ಮಹತ್ವದ ವೀಕ್ಷಣೆ ಮಾಡಿದೆ. ಸರ್ಕಾರದ ಈ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಕೋಲ್ಕತ್ತಾದಲ್ಲಿ ಗೋಮಾಂಸದ ಬೆಲೆ ಕೆಜಿಗೆ 280 ರೂ.ಗಳಿಂದ ಬರೊಬ್ಬರಿ 600 ರೂ.ವರೆಗೆ ದಿಢೀರ್ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೂನ್‌ನಲ್ಲೇ 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ – Kannada News | Karnataka to Recruit 51,000 Guest Teachers in June: Madhu Bangarappa

ಬೆಂಗಳೂರು, ಮೇ 23: 2026-27ನೇ ಶೈಕ್ಷಣಿಕ ವರ್ಷದ ಆರಂಭದಲ್ಲೇ ರಾಜ್ಯ ಸರ್ಕಾರವು ಉದ್ಯೋಗಾಂಕ್ಷಿಗಳಿಗೆ ಬಿಗ್ ಗಿಫ್ಟ್ ನೀಡಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜೂನ್ ತಿಂಗಳಿನಲ್ಲೇ 51 ಸಾವಿರ ಅತಿಥಿ ಶಿಕ್ಷಕರನ್ನು (Guest Teachers) ನೇಮಕ ಮಾಡಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಶಾಲೆಗಳಲ್ಲಿನ ಬೋಧಕರ ಕೊರತೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ಹಿತದೃಷ್ಟಿಯಿಂದ, ಬರೋಬ್ಬರಿ 51 ಸಾವಿರ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳಿಗೆ 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ
  • ಜೂನ್​ 1ರಂದು 1000 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಉದ್ಘಾಟನೆ
  • ಕರ್ನಾಟಕದ KPS ಮಾದರಿ: ಇತರ ರಾಜ್ಯಗಳಿಗೆ ಪ್ರೇರಣೆ ಮತ್ತು ಅನುದಾನ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೇ 22ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಖಾಲಿ ಇರುವ ಹುದ್ದೆಗಳಿಗೆ ತಕ್ಷಣವೇ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಹಸಿರು ನಿಶಾನೆ ತೋರಿಸಿದೆ. ಮಂಜೂರಾಗಿರುವ ಒಟ್ಟು 51 ಸಾವಿರ ಹುದ್ದೆಗಳಲ್ಲಿ ಪ್ರಾಥಮಿಕ ಶಾಲೆಗಳಿಗೆ ಸಿಂಹಪಾಲು ಸಿಕ್ಕಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 40 ಸಾವಿರ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢಶಾಲೆಗಳಿಗೆ 11 ಸಾವಿರ ಶಿಕ್ಷಕರು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.

1000 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಉದ್ಘಾಟಣೆ

ಇನ್ನು ಜೂನ್ 1 ರಂದು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿರುವ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಮಹತ್ವದ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ ಒಟ್ಟು 1,000 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಆರಂಭಿಸಲಾಗುತ್ತಿದ್ದು, ಇವುಗಳಲ್ಲಿ ಶಿವಮೊಗ್ಗ ಜಿಲ್ಲೆಯ 19 ಶಾಲೆಗಳು ಸೇರಿವೆ. ಪ್ರತಿ ಕೆಪಿಎಸ್ ಸಂಸ್ಥೆಯ ಅಭಿವೃದ್ಧಿಗೆ ತಲಾ 3.5 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಶಿಕ್ಷಣ ಇಲಾಖೆಯಲ್ಲಿ ಸರ್ಜರಿ: 5 ವರ್ಷ ಮೇಲ್ಪಟ್ಟ ನೌಕರರಿಗೆ ಕಡ್ಡಾಯ ವರ್ಗಾವಣೆ; ಡೆಡ್‌ಲೈನ್ ಸಹ ಫಿಕ್ಸ್!

ಕರ್ನಾಟಕದ ಈ ಮಾದರಿಯನ್ನು ಈಗ ತೆಲಂಗಾಣ ಸೇರಿದಂತೆ ಇತರ ರಾಜ್ಯಗಳೂ ಅನುಕರಿಸುತ್ತಿದ್ದು, ಅಲ್ಲಿ ತೆಲಂಗಾಣ ಪಬ್ಲಿಕ್ ಸ್ಕೂಲ್ ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಇತ್ತೀಚೆಗಷ್ಟೇ ತೆಲಂಗಾಣ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬೆಂಗಳೂರಿಗೆ ಭೇಟಿ ನೀಡಿ ನಮ್ಮ ಕೆಪಿಎಸ್ ಮಾದರಿಯನ್ನು ಅಧ್ಯಯನ ಮಾಡಿದ್ದಾರೆ ಎಂದರು.

ಶಿಕ್ಷಣ ಸುದ್ದಿಗಳನ್ನು ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:45 pm, Sat, 23 May 26

Source link

ಬಜೆಟ್ ಏಳು ಲಕ್ಷ ಗಳಿಸಿದ್ದು 400 ಕೋಟಿ, ಯಾವುದು ಈ ಬ್ಲಾಕ್ ಬಸ್ಟರ್ ಸಿನಿಮಾ – Kannada News | Hollywood low budget movie Obsession collects huge money at box office

ರಾತ್ರೋರಾತ್ರಿ ಸಾಮಾನ್ಯ ವ್ಯಕ್ತಿಯೊಬ್ಬ ಸ್ಟಾರ್ ಆಗುವುದು, ಸ್ಟಾರ್ ಆಗಿ ಮೆರೆದವರು ಮೂಲೆಗುಂಪಾಗುವುದು ಸಿನಿಮಾ ರಂಗದಲ್ಲಿ ತೀರಾ ಸಾಮಾನ್ಯ. ಇದು ಪ್ರತಿಭೆ, ಶ್ರಮದ ಜೊತೆಗೆ ಅದೃಷ್ಟವೂ ಬೆರೆತಿರುವ ಉದ್ಯಮ. ಸಾವಿರಾರು ಕೋಟಿ ಹಾಕಿ ನಿರ್ಮಿಸಿದ ಸಿನಿಮಾ ಸಹ ಬಾಕ್ಸ್ ಆಫೀಸ್​​ನಲ್ಲಿ ನೆಲ ಕಚ್ಚಿದ ಹಲವಾರು ಉದಾಹರಣೆ ಇದೆ. ತೀರ ಕಡಿಮೆ ಬಜೆಟ್​​ನಲ್ಲಿ ನಿರ್ಮಿಸಿದ ಸಿನಿಮಾಗಳು ದೊಡ್ಡ ಹಿಟ್ ಆದ ಸಾಕಷ್ಟು ಉದಾಹರಣೆ ಇವೆ. ಇದೀಗ ಅಂಥಹುದೇ ಉದಾಹರಣೆಗಳ ಪಟ್ಟಿಗೆ ಮತ್ತೊಂದು ಸಿನಿಮಾ ಸೇರ್ಪಡೆ ಆಗಿದೆ. ಸಿನಿಮಾದ ಹೆಸರು ‘ಒಬ್​​ಸೆಷನ್’.

‘ಒಬ್​ಸೆಷನ್’ ಎಂಬುದು ಹಾಲಿವುಡ್​​ನಲ್ಲಿ ಇತ್ತೀಚೆಗೆ ಬಿಡುಗಡೆ ಆದ ಹಾರರ್ ಸಿನಿಮಾ. ‘ಮೈಖಲ್’, ‘ಸ್ಟ್ರೀಟ್ ಫೈಟರ್’, ‘ದಿ ಡೆವಿಲ್ ವೇರ್ಸ್ ಪ್ರಾಡಾ 2’ ಅಂಥಹಾ ಸಿನಿಮಾಗಳ ನಡುವೆಯೂ ಭಾರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಬಲು ವೇಗದಿಂದ ಮುನ್ನುಗ್ಗುತ್ತಿದ್ದು, ಆದಷ್ಟು ಶೀಘ್ರವೇ ಈ ಸಿನಿಮಾದ ಗಳಿಕೆ 1000 ಕೋಟಿ ದಾಟಲಿದೆ ಎನ್ನಲಾಗುತ್ತಿದೆ. ಅಂದಹಾಗೆ ಈ ಸಿನಿಮಾದ ಬಜೆಟ್ ಎಂಟು ಲಕ್ಷ ರೂಪಾಯಿಗೂ ಕಡಿಮೆ. ಹಾಲಿವುಡ್​​ನಲ್ಲಿ ಸೂಪರ್ ಹಿಟ್ ಆದ ಅತ್ಯಂತ ಕಡಿಮೆ ಬಜೆಟ್​​ನ ಹಾರರ್ ಸಿನಿಮಾಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ ಈ ಸಿನಿಮಾ.

‘ಒಬ್ಸೆಷನ್ಸ್’ ಸಿನಿಮಾವನ್ನು ಯೂಟ್ಯೂಬರ್ ಕರ್ರಿ ಬಾಕರ್ ನಿರ್ದೇಶನ ಮಾಡಿದ್ದಾರೆ. ‘ಸಿಮನ್ಸ್’ ಶೋ ನೋಡಿ ಅದರಿಂದ ಸ್ಪೂರ್ತಿ ಪಡೆದು ‘ಒಬ್ಸೆಷನ್ಸ್’ ಕತೆಯನ್ನು ಕರ್ರಿ ಬಾಕರ್ ಬರೆದಿದ್ದರು. ಕೇವಲ 75 ಸಾವಿರ ಡಾಲರ್ (ಸುಮಾರು 7.30 ಲಕ್ಷ ರೂಪಾಯಿ) ಬಜೆಟ್​​ನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾವು ಹಾರರ್ ಕತೆಯನ್ನು ಒಳಗೊಂಡಿದೆ. ಕೇಳಿದ್ದನ್ನು ನಿಜ ಮಾಡುವ ಬೊಂಬೆ ಆ ನಂತರ ಸಿನಿಮಾದ ನಾಯಕ ಮತ್ತು ಇತರೆ ಪಾತ್ರಗಳಿಗೆ ತರುವ ತೊಂದರೆಗಳನ್ನು ಸಿನಿಮಾದ ಕತೆ ಒಳಗೊಂಡಿದೆ.

ಇದನ್ನೂ ಓದಿ:‘ಮೈಕಲ್’ ಬಾಕ್ಸ್ ಆಫೀಸ್: ಏಳು ದಿನಕ್ಕೆ ದಾಖಲೆ ಕಲೆಕ್ಷನ್, ಭಾರತದಲ್ಲೆಷ್ಟು?

75 ಸಾವಿರ ಡಾಲರ್​​ ನಲ್ಲಿ ನಿರ್ಮಾಣ ಮಾಡಲಾಗಿರುವ ಈ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್​​ನಲ್ಲಿ 38 ಮಿಲಿಯನ್ ಡಾಲರ್​​ಗೂ ಹೆಚ್ಚು (ಸುಮಾರು 400 ಕೋಟಿ) ಗಳಿಕೆ ಮಾಡಿದ್ದು, ಬಾಕ್ಸ್ ಆಫೀಸ್​​ನಲ್ಲಿ ಬಲು ವೇಗವಾಗಿ ಮುನ್ನುಗ್ಗುತ್ತಿದೆ. ಸಿನಿಮಾ ಆದಷ್ಟು ಬೇಗ 1000 ಕೋಟಿ ಗಳಿಕೆ ದಾಟುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

ಈ ಹಿಂದೆ ಬ್ಲಾಕ್ ಬಸ್ಟರ್ ಆಗಿದ್ದ ‘ಪ್ಯಾರಾ ನಾರ್ಮಲ್ ಆಕ್ಟಿವಿಟಿ’ ಹೆಸರಿನ ಹಾಲಿವುಡ್ ಹಾರರ್ ಸಿನಿಮಾ ಕೇವಲ 15 ಸಾವಿರ ಡಾಲರ್​​ನಲ್ಲಿ ನಿರ್ಮಾಣಗೊಂಡಿತ್ತು ಆ ಸಿನಿಮಾ 100 ಮಿಲಿಯನ್ ಡಾಲರ್​​ಗಳು ಹೆಚ್ಚು ಅಂದರೆ ಸುಮಾರು 10 ಸಾವಿರ ಕೋಟಿ ಗಳಿಕೆ ಮಾಡಿತ್ತು. ಇದೀಗ ಮತ್ತೆ ಅದೇ ದಾಖಲೆಯತ್ತ ಮುನ್ನುಗ್ಗುತ್ತಿದೆ ‘ಒಬ್​​ಸೆಷನ್’ ಸಿನಿಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಆರ್​ಸಿಬಿ- ಗುಜರಾತ್ ಕ್ವಾಲಿಫೈಯರ್ 1 ಪಂದ್ಯ ರದ್ದಾದರೆ ಯಾರಿಗೆ ಫೈನಲ್ ಟಿಕೆಟ್? – Kannada News | IPL 2026 Playoffs: RCB vs GT Qualifier 1 Rain Rule – Who Wins if Washed Out?

ಐಪಿಎಲ್ 2026 (IPL 2026) ರ ಗುಂಪು ಹಂತ ಮುಕ್ತಾಯದ ಹಂತಕ್ಕೆ ಬಂದಿದೆ. ಲೀಗ್ ಹಂತದ ಮುಕ್ತಾಯದ ನಂತರ, ಪ್ಲೇಆಫ್ ಸುತ್ತು ಆರಂಭವಾಗಲಿದೆ. ಈ ಸುತ್ತಿಗೆ ಈಗಾಗಲೇ 3 ತಂಡಗಳು ಎಂಟ್ರಿ ಪಡೆದಿವೆ. ಇನ್ನೊಂದು ತಂಡ ಯಾವುದು ಎಂಬುದು ಇಂದು ತಿಳಿಯಲಿದೆ. 4ನೇ ತಂಡ ಯಾವುದು ಎಂಬುದು ಖಚಿತವಾದ ಬಳಿಕ ಪ್ಲೇಆಫ್ ಸುತ್ತು ಮೇ 26 ರಿಂದ ಪ್ರಾರಂಭವಾಗಲಿದೆ. ಪ್ಲೇಆಫ್ ಪಂದ್ಯಗಳು ಮೂರು ವಿಭಿನ್ನ ಮೈದಾನಗಳಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯ ಧರ್ಮಶಾಲಾದಲ್ಲಿ, ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ಪಂದ್ಯ ನ್ಯೂ ಚಂಡೀಗಢದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಾಯಿಂಟ್ ಪಟ್ಟಿ ಹೀಗಿದೆ

ಕ್ವಾಲಿಫೈಯರ್ 1 ಪಂದ್ಯವನ್ನು ಆಡುವ ಎರಡು ತಂಡಗಳು ಯಾವುವು ಎಂಬುದು ಈಗಾಗಲೇ ನಿರ್ಧಾರವಾಗಿದೆ. ಅದರಂತೆ ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಏಕೆಂದರೆ ಉಭಯ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ. ಹಾಲಿ ಚಾಂಪಿಯನ್ ಆರ್​ಸಿಬಿ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿತು. +0.783 ನೆಟ್ ರನ್​ರೇಟ್ ಹೊಂದಿರುವ ಆರ್​ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಇತ್ತ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕೂಡ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದೆ. ಆದರೆ ಗುಜರಾತ್ ತಂಡದ ನೆಟ್ ರನ್​ರೇಟ್ ಆರ್​ಸಿಬಿಗಿಂತ ಕಡಿಮೆ ಅಂದರೆ +0.695 ಆಗಿರುವ ಕಾರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಪಂದ್ಯ ರದ್ದಾದರೆ ಯಾರಿಗೆ ಫೈನಲ್ ಟಿಕೆಟ್?

ವಾಸ್ತವವಾಗಿ ಗುಂಪು ಹಂತದಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾದರೆ, ಪ್ರತಿ ತಂಡಕ್ಕೆ ತಲಾ ಒಂದು ಅಂಕವನ್ನು ನೀಡಲಾಗುತ್ತಿತ್ತು. ಅಂದರೆ ಲೀಗ್ ಹಂತದಲ್ಲಿ ಯಾವುದೇ ಪಂದ್ಯಕ್ಕೆ ಮೀಸಲು ದಿನವಿರಲಿಲ್ಲ. ವಾಸ್ತವವಾಗಿ ಐಸಿಸಿ ಪಂದ್ಯಾವಳಿಗಳಲ್ಲಿ, ನಾಕೌಟ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿ ಮಾಡಲಾಗಿರುತ್ತದೆ. ಆದರೆ ಐಪಿಎಲ್ ಪ್ಲೇಆಫ್‌ಗಳಿಗೆ ನಿಯಮಗಳು ಸ್ವಲ್ಪ ಭಿನ್ನವಾಗಿವೆ. ಮೊದಲ ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್‌ಗೆ ಮೀಸಲು ದಿನವನ್ನು ಇರಿಸಲಾಗಿಲ್ಲ. ಫೈನಲ್ ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ನಿಗದಿ ಪಡಿಸಲಾಗಿದೆ.

IPL 2026:ಕ್ವಾಲಿಫೈಯರ್ 1 ರಲ್ಲಿ ಆರ್​ಸಿಬಿ ಎದುರಾಳಿ ಯಾರು? ಪಂದ್ಯ ಯಾವಾಗ?

ಹೀಗಾಗಿ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಬಂದರೆ, ಅದೇ ದಿನ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಪಂದ್ಯದ ಆರಂಭ ವಿಳಂಬವಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ಆಡಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕಾಗಿ, 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದರೆ ಹೆಚ್ಚುವರಿ ಸಮಯದ 120 ನಿಮಿಷಗಳಲ್ಲೂ ಪಂದ್ಯ ಮುಗಿಯದಿದ್ದರೆ, ಆಗ ಪಾಯಿಂಟ್‌ ಪಟ್ಟಿ ಪ್ರಮುಖ ಪಾತ್ರವಹಿಸುತ್ತದೆ. ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇದರರ್ಥ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯುತ್ತದೆ. ಇತ್ತ ಗುಜರಾತ್ ತಂಡ ಕ್ವಾಲಿಫೈಯರ್ 2 ಅನ್ನು ಆಡಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಯಲ್ಲೇ ಈಸಿಯಾಗಿ ತಯಾರಿಸಬಹುದು ವೈರಲ್‌ ಮೆಲೋಡಿ ಚಾಕೊಲೇಟ್‌; ಇಲ್ಲಿದೆ ರೆಸಿಪಿ – Kannada News | You can easily make viral melody chocolate at home

ಮೆಲೋಡಿ ಚಾಕೊಲೇಟ್‌ ರೆಸಿಪಿImage Credit source: Social Media

ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ರಾಜಧಾನಿ ರೋಮ್‌ಗೆ ಅಧಿಕೃತ ಭೇಟಿ ನೀಡಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿ  ಮೆಲೋನಿಗೆ ಅವರಿಗೆ ಪಾರ್ಲೆ ಪ್ರಾಡಕ್ಟ್ಸ್‌ ಸಂಸ್ಥೆಯ ಮೆಲೋಡಿ (melody) ಚಾಕೊಲೇಟ್‌ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಡಿಯೋವಂತೂ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಆ ಬಳಿಕ ಮೆಲೋಡಿ ಚಾಕೊಲೇಟ್‌ ಖರೀದಿಯು ಸಹ ಹೆಚ್ಚಾಗಿತ್ತು. ಈ ಟಾಫಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿದ್ದರೆ, ಅದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮೆಲೋಡಿ ಚಾಕೊಲೇಟ್‌ ರೆಸಿಪಿಯ ಪೂರ್ಣ ಮಾಹಿತಿ ಇಲ್ಲಿದೆ.

ಮೆಲೋಡಿ ಚಾಕೊಲೇಟ್‌ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:

2 ರಿಂದ 3 ಟೇಬಲ್ ಸ್ಪೂನ್ ಕೋಕೋ ಪೌಡರ್, 1/2 ಕಪ್ ಕಂಡೆನ್ಸ್ಡ್ ಮಿಲ್ಕ್, 2 ಟೇಬಲ್ ಸ್ಪೂನ್ ಬೆಣ್ಣೆ, 1/4 ಕಪ್ ಹಾಲಿನ ಪುಡಿ,  ರಿಂದ 3 ಟೇಬಲ್ ಸ್ಪೂನ್ ಸಕ್ಕರೆ, ಸ್ಪಲ್ಪ ಕ್ರೀಮ್‌, ಸ್ವಲ್ಪ ವೆನಿಲ್ಲಾ ಎಸೆನ್ಸ್

ಇದನ್ನೂ ಓದಿ: ಹಾವು ಕಚ್ಚಿದರೆ ಜೀವ ಉಳಿಸಲು ಮೊದಲು ಏನು ಮಾಡಬೇಕು? ಏನು ಮಾಡಬಾರದು?

ಮೆಲೋಡಿ ಚಾಕೊಲೇಟ್‌ ತಯಾರಿಸುವ ಸುಲಭ ವಿಧಾನ:

  • ಮೊದಲು, ಸಕ್ಕರೆಯನ್ನು ನಾನ್-ಸ್ಟಿಕ್ ಪ್ಯಾನ್‌ಗೆ ಹಾಕಿ ಕಡಿಮೆ ಉರಿಯಲ್ಲಿ ಕರಗಲು (ಕ್ಯಾರಮೆಲೈಸ್ ಆಗಲು) ಬಿಡಿ. ಸಕ್ಕರೆ ಕರಗಿ ತಿಳಿ ಚಿನ್ನದ ಬಣ್ಣಕ್ಕೆ ತಿರುಗಿದಾಗ, ಬೆಣ್ಣೆ ಮತ್ತು ಹಾಲು ಸೇರಿಸಿ. ಈ ಮಿಶ್ರಣವನ್ನು ಉಂಡೆಗಳು ರೂಪುಗೊಳ್ಳದಂತೆ ನಿರಂತರವಾಗಿ ಬೆರೆಸಿ.
  • ಇದೀಗ ಈ ಮಿಶ್ರಣಕ್ಕೆ ಕೋಕೋ ಪೌಡರ್ ಮತ್ತು ಹಾಲಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ದಪ್ಪವಾಗಲು ಪ್ರಾರಂಭಿಸಿದಾಗ, ಕ್ರೀಮ್, ಕಂಡೆನ್ಸ್ಡ್ ಮಿಲ್ಕ್ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ. ಮಿಶ್ರಣವು ತುಂಬಾ ದಪ್ಪವಾಗುವವರೆಗೆ ಮತ್ತು ಚಾಕೊಲೇಟ್‌ ಹದಕ್ಕೆ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
  • ನಂತರ ಒಂದು ಬಟ್ಟಲಿಗೆ ತುಪ್ಪವನ್ನು ಹರಡಿ, ಮೊದಲೇ ತಯಾರಿಸಿಟ್ಟ ಚಾಕೊಲೇಟ್‌ ಮಿಶ್ರಣವನ್ನು ಇದಕ್ಕೆ ಹಾಕಿ ತಣ್ಣಗಾಗಲು ಬಿಡಿ.
  • ನಂತರ ಅದನ್ನು ಒಂದು ಚಾಕುವಿನ ಸಹಾಯದಿಂದ ಸಣ್ಣ ಚೌಕ ಅಥವಾ ಆಯತಾಕಾರದ ಚಾಕೊಲೇಟ್‌ ಆಕಾರದಲ್ಲಿ ಕತ್ತರಿಸಿ. ನೀವು ಬಯಸಿದರೆ, ಚಾಕೊಲೇಟ್‌ ಮಧ್ಯದಲ್ಲಿ ಸ್ವಲ್ಪ ಚಾಕೊಲೇಟ್ ಸಿರಪ್ ಅನ್ನು ಸಹ ತುಂಬಿಸಬಹುದು.
  • ತಯಾರಾದ ಚಾಕೊಲೇಟ್‌ ಅನ್ನು ಬೆಣ್ಣೆ ಕಾಗದದ ಮೇಲೆ ಇರಿಸಿ ಮತ್ತು ರೆಫ್ರಿಜರೇಟರ್‌ನಲ್ಲಿ 1 ರಿಂದ 2 ಗಂಟೆಗಳ ಕಾಲ ಸೆಟ್‌ ಆಗಲು ಬಿಡಿ. ಅದು ಸಂಪೂರ್ಣವಾಗಿ ಗಟ್ಟಿಯಾದ ನಂತರ, ನೀವು ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:37 pm, Sat, 23 May 26

Source link

‘ದೇಶ ಇಂತಹ ಪ್ರಧಾನಿಯನ್ನು ಎಂದೂ ನೋಡಿಲ್ಲ!’: ಪಿಎಂ ಮೋದಿ ಬಗ್ಗೆ ಸ್ಮೃತಿ ಇರಾನಿ ಹೇಳಿದ ಆ ಒಂದು ಮಾತು ಸಖತ್​ ವೈರಲ್

ದೆಹಲಿ, ಮೇ.23: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಗುಣ ಹಾಗೂ ದೇಶಕ್ಕಾಗಿ ಅವರು ಹಗಲಿರುಳು ಶ್ರಮಿಸುವ ಬದ್ಧತೆಯನ್ನು ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿಯ ಹಿರಿಯ ನಾಯಕಿ ಸ್ಮೃತಿ ಇರಾನಿ ಅವರು ಅತ್ಯಂತ ಹೆಮ್ಮೆಯಿಂದ ಮತ್ತು ಭಾವುಕರಾಗಿ ಕೊಂಡಾಡಿದ್ದಾರೆ. “ಭಾರತ ದೇಶವು ತನ್ನ ಇತಿಹಾಸದಲ್ಲೇ ಇಷ್ಟು ಸಮರ್ಪಣಾ ಭಾವದಿಂದ ದಿನದ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುವ ಇಂತಹ ಮತ್ತೊಬ್ಬ ಪ್ರಧಾನಿಯನ್ನು ನೋಡಿಲ್ಲ” ಎಂದು ಸ್ಮೃತಿ ಇರಾನಿ ಹೇಳಿರುವ ಮಾತುಗಳು ಸದ್ಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಮೋಟಾ ಭಾಯ್’ ಎಂದು ಸಂಬೋಧಿಸಿರುವ ಸ್ಮೃತಿ ಇರಾನಿ, ದೇಶದ 140 ಕೋಟಿ ಜನರ ಆಶೀರ್ವಾದ ಮತ್ತು ಬೆಂಬಲದೊಂದಿಗೆ ಪ್ರಧಾನಿಯವರು ಯಾವುದೇ ಸ್ವಾರ್ಥವಿಲ್ಲದೆ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ. “ಪ್ರಧಾನಿ ಮೋದಿ ಅವರ ಹೃದಯ ಮತ್ತು ಮನಸ್ಸಿನಲ್ಲಿ ಸದಾ ದೇಶದ ಹಿತಚಿಂತನೆ ಮಾತ್ರ ಇರುತ್ತದೆ. ಅವರು ಸದಾ ಭಾರತದ ಪ್ರಗತಿಗಾಗಿ ಮಾತ್ರ ಯೋಚಿಸುತ್ತಾರೆ” ಎಂದು ಅವರು ತಮ್ಮ ಅಭಿಮಾನದ ನುಡಿಗಳನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 ಬಿಗ್ ಇಂಪ್ಯಾಕ್ಟ್: ಮುಚ್ಚಿದ್ದ ಕಾಳಜಿ ಕೇಂದ್ರ 24 ಗಂಟೆಯಲ್ಲೇ ರೀ-ಓಪನ್! – Kannada News | Gadag Flood Victims Get Aid as Admin Reopens Care Center After TV9 News Report

ಗದಗ, ಮೇ.23: ಗದಗ ನಗರದ ಗಂಗಿಮಡಿ ಭಾಗದ ಸಂತ್ರಸ್ತರ ಪರವಾಗಿ ಟಿವಿ೯ (TV9) ಸುದ್ದಿ ಸಂಸ್ಥೆ ಬಿತ್ತರಿಸಿದ ವಿಸ್ತೃತ ವರದಿಗೆ ಕೊನೆಗೂ ಭರ್ಜರಿ ಜಯ ಸಿಕ್ಕಿದೆ. ನಿನ್ನೆ ಮಧ್ಯಾಹ್ನ ಸಂತ್ರಸ್ತರನ್ನು ಹೊರಹಾಕಿ ದಿಢೀರನೆ ಬಂದ್ ಮಾಡಲಾಗಿದ್ದ ಕಾಳಜಿ ಕೇಂದ್ರವನ್ನು, ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತವು ಇಂದು ಮಧ್ಯಾಹ್ನವೇ ಪುನರಾರಂಭಿಸಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಸಂತ್ರಸ್ತರು, “ಟಿವಿ9 ವರದಿಯಿಂದಲೇ ಇಂದು ನಮ್ಮ ಹೊಟ್ಟೆಗೆ ಅನ್ನ ಮತ್ತು ತಲೆಗೊಂದು ಆಸರೆ ಸಿಕ್ಕಿದೆ” ಎಂದು ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ.

ಮಾಧ್ಯಮಗಳ ವರದಿ ಬೆನ್ನಲ್ಲೇ ಅಲರ್ಟ್ ಆದ ಗದಗ ಉಪವಿಭಾಗಾಧಿಕಾರಿ (AC) ಗಂಗಪ್ಪ ಹಾಗೂ ನಗರಸಭೆ ಆಯುಕ್ತ ರಾಜಾರಾಮ್ ಪವಾರ್ ಅವರು ಗಂಗಿಮಡಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳನ್ನು ಮುತ್ತಿಗೆ ಹಾಕಿದ ಸಂತ್ರಸ್ತರು, ತಮಗಾದ ಅನ್ಯಾಯವನ್ನು ನೆನೆದು ಕಣ್ಣೀರು ಹಾಕಿ ಗೋಳು ತೋಡಿಕೊಂಡರು. “ನಿನ್ನೆ ಕಾಳಜಿ ಕೇಂದ್ರ ಬಂದ್ ಮಾಡಿರುವ ಕುರಿತು ನಮಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ” ಎಂದು ಸ್ಪಷ್ಟನೆ ನೀಡಿದ ಎಸಿ ಗಂಗಪ್ಪ ಅವರು, ಈ ಬೇಜವಾಬ್ದಾರಿತನಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸದ್ಯ ಸಂತ್ರಸ್ತರಿಗೆ ಸರ್ಕಾರಿ ಶಾಲೆಯಲ್ಲೇ ವಾಸ್ತವ್ಯ ಹಾಗೂ ಊಟದ ಅಧಿಕೃತ ವ್ಯವಸ್ಥೆಯನ್ನು ಮಾಡಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಭೀತಿ?!: ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನ ಠಾಣೆಗೆ ತಂದ ಪೊಲೀಸರು

ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಎಂಎಲ್‌ಸಿ (MLC) ಎಸ್.ವಿ. ಸಂಕನೂರ್ ಅವರು ನಿಯೋಗದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಡಳಿತದ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರು ತಕ್ಷಣ ಮಧ್ಯಪ್ರವೇಶಿಸಿ ಈ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಸಂತ್ರಸ್ತರಿಗೆ ಮಧ್ಯಾಹ್ನದ ಅವಧಿಗೆ ಬಿಜೆಪಿಯಿಂದಲೇ ವಿಶೇಷ ಪುಲಾವ್ ಮತ್ತು ಸಿರಾ ಊಟದ ವ್ಯವಸ್ಥೆ ಮಾಡಲಾಗಿತ್ತು. ಗಂಗಿಮಡಿ ನಿವಾಸಿಗಳ ತಗಡಿನ ಶೆಡ್‌ಗಳು ಸಂಪೂರ್ಣವಾಗಿ ದುರಸ್ತಿಯಾಗುವವರೆಗೂ ಈ ಕಾಳಜಿ ಕೇಂದ್ರ ಮುಂದುವರಿಯಲಿದ್ದು, ಸಾರ್ವಜನಿಕ ವಲಯದಲ್ಲಿ ಟಿವಿ೯ ವರದಿಗಾರಿಕೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಸಿಕ್ಸರ್‌ಗಳ ಶತಕ; ಐಪಿಎಲ್‌ನಲ್ಲಿ ಇತಿಹಾಸ ಬರೆದ ಆರ್​ಸಿಬಿ ನಾಯಕ

Source link

Exit mobile version