ಟ್ಯಾಂಕರ್ -ಆಟೋ ರಿಕ್ಷಾ ಡಿಕ್ಕಿ: ಐವರು ಮಹಿಳೆಯರು ಸೇರಿ ಕರ್ನಾಟಕದ 6 ಮಂದಿ ಸಾವು, 6 ಮಂದಿಗೆ ಗಂಭೀರ ಗಾಯ – Kannada News | Tragic Accident in Telangana’s Sangareddy: Tanker Collides with Auto Rickshaw; 6 Killed, 6 Injured from Karnataka’s Bidar
ಸಂಗಾರೆಡ್ಡಿ (ತೆಲಂಗಾಣ), ಆಗಸ್ಟ್ 12: ವೇಗವಾಗಿ ಬಂದ ಟ್ಯಾಂಕರ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಮಂಡಲದ ಸತ್ವಾರ್ ಗ್ರಾಮದ ಸಮೀಪ ನಡೆದಿದೆ. ಆಟೋ ರಿಕ್ಷಾ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಸಂದರ್ಭದಲ್ಲಿ ಆಟೋದಲ್ಲಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದರು. ಮೃತರು ಹಾಗೂ ಗಾಯಾಳುಗಳು ಕರ್ನಾಟಕದ ಬೀದರ್ ಜಿಲ್ಲೆಯ ರಾಜಗೀರಾ ಗ್ರಾಮದ…