ಆ ಅಮಾವಾಸ್ಯೆಯ ರಾತ್ರಿ ನಡೆದಿದ್ದೇನು? ವೀರಪ್ಪನ್ಗೆ ಪಾರ್ವತಮ್ಮ ಹೇಳಿದ್ದೇನು? – Kannada News | Dr Rajkumar Kidnap, what happened on that night on July 30, 2000
ಭೀಮನ ಅಮವಾಸ್ಯೆ ಬಂತೆಂದರೆ ಆ ಕರಾಳ ರಾತ್ರಿಯ ನೆನಪು ಕನ್ನಡಿಗರಿಗೆ ಆಗಿಯೇ ಆಗುತ್ತದೆ. 26 ವರ್ಷಗಳ ಹಿಂದೆ 2000ರ ಭೀಮನ ಅಮಾವಾಸ್ಯೆಯ ದಿನದಂದೆ ಕನ್ನಡಿಗರ ಕಣ್ಮಣಿ ಡಾ ರಾಜ್ಕುಮಾರ್ (Dr Rajkumar) ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ. ಆ ನಂತರ 108 ದಿನಗಳ ಕಾಲ ತನ್ನ ಅಧೀನದಲ್ಲಿ ಇರಿಸಿಕೊಂಡು ಅಂತಿಮವಾಗಿ ಬಿಡುಗಡೆ ಮಾಡಿದ್ದ. ಆದರೆ ಆ 108 ದಿನಗಳು ರಾಜ್ಕುಮಾರ್ ಕುಟುಂಬ, ಕನ್ನಡ ಚಿತ್ರರಂಗ, ಕರ್ನಾಟಕದ ಜನ ಸಾಕಷ್ಟು ನೋವು, ಆತಂಕಗಳನ್ನು ಅನುಭವಿಸಿದ್ದರು. ಅಂತಿಮವಾಗಿ ಎಲ್ಲವೂ…