Headlines

‘ಸಿಎಂ ಹೇಮಂತ್ ಸೊರೇನ್ ಹತ್ಯೆಗೆ ಯತ್ನ’; ಬಿಜೆಪಿ ವಿರುದ್ಧ ಜಾರ್ಖಂಡ್ ಸಚಿವ ಇರ್ಫಾನ್ ಅನ್ಸಾರಿ ಗಂಭೀರ ಆರೋಪ – Kannada News | Attempted to kill CM Hemant Soren Jharkhand Minister Irfan Ansari charge against BJP MLAs

ರಾಂಚಿ, ಆಗಸ್ಟ್ 11: ಜಾರ್ಖಂಡ್‌ನಲ್ಲಿ ಉದ್ಯೋಗ ನೇಮಕಾತಿ ಪರೀಕ್ಷೆಗಳ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಸುದೀರ್ಘ ಹೋರಾಟದ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಉಂಟಾಗಿದೆ. ಜಾರ್ಖಂಡ್ (Jharkhand) ಆರೋಗ್ಯ ಸಚಿವ ಹಾಗೂ ಕಾಂಗ್ರೆಸ್ ನಾಯಕ ಇರ್ಫಾನ್ ಅನ್ಸಾರಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರ ವಿರುದ್ಧ ‘ಹತ್ಯೆ ಯತ್ನ’ದ ಗಂಭೀರ ಆರೋಪ ಮಾಡಿದ್ದಾರೆ. ಆಗಸ್ಟ್ 10ರಂದು ಮುಖ್ಯಮಂತ್ರಿಯ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರು ಮತ್ತು…

Read More

ಹೈದರಾಬಾದ್‌ನಲ್ಲಿ ಜೂ. ಎನ್‌ಟಿಆರ್‌ ಭುಜದ ಶಸ್ತ್ರಚಿಕಿತ್ಸೆ: ಕಿಮ್ಸ್ ಆಸ್ಪತ್ರೆಗೆ ದಾಖಲು – Kannada News | Telugu actor Jr NTR to undergo shoulder surgery Hyderabad KIMS hospital 12 August

ಟಾಲಿವುಡ್‌ ಮ್ಯಾನ್‌ ಆಫ್‌ ಮಾಸಸ್‌, ನಟ ಜೂನಿಯರ್ ಎನ್‌ಟಿಆರ್ (Jr NTR) ಅವರಿಗೆ ಬುಧವಾರ (ಆಗಸ್ಟ್ 12) ಹೈದರಾಬಾದ್‌ನ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆ (Shoulder Surgery) ನಡೆಯಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ವೈದ್ಯಕೀಯ ತಪಾಸಣೆಯ ನಂತರ ಈ ಶಸ್ತ್ರಚಿಕಿತ್ಸೆಯನ್ನು ನಿಗದಿಪಡಿಸಲಾಗಿದೆ ಎಂದು ಅವರ ತಂಡ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ವೈದ್ಯರ ತಂಡದಿಂದ ಚಿಕಿತ್ಸೆ ಮತ್ತು ನಿಗಾ ಎನ್‌ಟಿಆರ್ ಅವರ ಭುಜದ ಗಾಯದ ಕುರಿತು ಕೂಲಂಕುಷವಾಗಿ ಪರಿಶೀಲಿಸಿದ ವೈದ್ಯರ ಸಲಹೆಯಂತೆ ಈ ಚಿಕಿತ್ಸೆ ನಡೆಯುತ್ತಿದೆ….

Read More

ಕೊಲಂಬಿಯಾ ಭೂಕಂಪದ ಮೃತರ ಸಂಖ್ಯೆ 224ಕ್ಕೆ ಏರಿಕೆ; 3,000ಕ್ಕೂ ಹೆಚ್ಚು ಜನ ನಾಪತ್ತೆ – Kannada News | Colombia Earthquake Death Toll rises to 224 Over 3,000 people Missing

ಕೊಲಂಬಿಯಾ, ಆಗಸ್ಟ್ 11: ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ (Colombia Earthquake) ಸಂಭವಿಸಿದ ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 224ಕ್ಕೆ ಏರಿಕೆಯಾಗಿದ್ದು, 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಭೂಕಂಪವು ದೇಶಾದ್ಯಂತ ಅಪಾರ ಪ್ರಮಾಣದ ನಾಶನಷ್ಟವನ್ನುಂಟುಮಾಡಿದ್ದು, 3,000ಕ್ಕೂ ಹೆಚ್ಚು ಜನರು ಇನ್ನೂ ಪತ್ತೆಯಾಗಿಲ್ಲ. ಸೋಮವಾರ ಸಂಭವಿಸಿದ 7.4 ರೇಕ್ಟರ್ ಪ್ರಮಾಣದ ಈ ಭೂಕಂಪದಿಂದಾಗಿ 1,500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಅಥವಾ ನೆಲಸಮವಾಗಿವೆ. ದಶಕಗಳಲ್ಲೇ ಅತ್ಯಂತ ಭೀಕರ ಭೂಕಂಪಕ್ಕೆ ತತ್ತರಿಸಿರುವ ಪಶ್ಚಿಮ ಕೊಲಂಬಿಯಾದಲ್ಲಿ ತುರ್ತು ರಕ್ಷಣಾ ತಂಡಗಳು ಕುಸಿದುಬಿದ್ದ ಕಟ್ಟಡಗಳ…

Read More

ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಮೇಲೆ ಗುಂಡಿನ ದಾಳಿ; ಓರ್ವ ಸೈನಿಕ ಸಾವು – Kannada News | Pakistan Army Headquarter Under Attack 1 Pak Soldier Killed

ರಾವಲ್ಪಿಂಡಿ, ಆಗಸ್ಟ್ 11: ಪಾಕಿಸ್ತಾನದ (Pakistan) ರಾವಲ್ಪಿಂಡಿಯಲ್ಲಿರುವ ಸೇನೆಯ ಮುಖ್ಯ ಪ್ರಧಾನ ಕಚೇರಿಯ ಮುಖ್ಯ ದ್ವಾರದ ಬಳಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದಾಳಿಕೋರ ಪ್ರವೇಶ ತಪಾಸಣಾ ಕೇಂದ್ರದ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಮಿಲಿಟರಿ ಕಮಾಂಡ್ ಸೆಂಟರ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಪ್ರತಿದಾಳಿ ನಡೆಸಿದ್ದಾರೆ. ಆದರೂ ಈ ಘಟನೆಯಲ್ಲಿ ಪಾಕಿಸ್ತಾನದ ಓರ್ವ ಸೈನಿಕ ಮೃತಪಟ್ಟಿದ್ದಾರೆ. ಎರಡೂ ಕಡೆಗಳಿಂದ ನಡೆದ ಭಾರಿ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಸೇನೆಯ ಓರ್ವ ಯೋಧ ಕರ್ತವ್ಯ ನಿರತರಾಗಿದ್ದಾಗಲೇ…

Read More

ಈ ವರ್ಷ 8.11 ಲಕ್ಷ ಕೋಟಿ ರೂ ದಾಟಿದ ನಿವ್ವಳ ನೇರ ತೆರಿಗೆ ಸಂಗ್ರಹ; ಹಿಂದಿನ ವರ್ಷದಕ್ಕಿಂತ ಶೇ 23ರಷ್ಟು ಹೆಚ್ಚಳ – Kannada News | Direct tax collections this year rise drastically, with non corporate taxes see big increase

ನವದೆಹಲಿ, ಆಗಸ್ಟ್ 11: ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹವು (Net Direct Tax Collections) ಶೇ. 23.09 ರಷ್ಟು ಭಾರಿ ಏರಿಕೆ ಕಂಡಿದೆ. ನಿನ್ನೆಯವರೆಗಿನ (ಆ. 10) ಅಂಕಿಅಂಶಗಳ ಪ್ರಕಾರ, ಒಟ್ಟು ನಿವ್ವಳ ನೇರ ತೆರಿಗೆ ₹8.11 ಲಕ್ಷ ಕೋಟಿ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈ ಮೊತ್ತವು ₹6.59 ಲಕ್ಷ ಕೋಟಿಯಾಗಿತ್ತು. ಈ ವರ್ಷದಲ್ಲಿ ಭರ್ಜರಿ ಟ್ಯಾಕ್ಸ್ ಕಲೆಕ್ಷನ್ ಆಗಿದೆ. ಇಲ್ಲಿ ನೇರ ತೆರಿಗೆ ಎಂದರೆ ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್…

Read More

ಭಾರತೀಯನಿಂದ ಬ್ರಿಟಿಷ್ ಸರ್ಕಾರಕ್ಕೆ 35,000 ರೂ. ಸಾಲ; 109 ವರ್ಷಗಳ ಬಳಿಕ ಇಂಗ್ಲೆಂಡ್​​ನಿಂದ ಬಂತು ಇಮೇಲ್! – Kannada News | Rs 35,000 loan to British Government in 1917 Madhya Pradesh family gets response from UK debt office after 109 years

ನವದೆಹಲಿ, ಆಗಸ್ಟ್ 11: ಮೊದಲ ಮಹಾಯುದ್ಧದ ಸಮಯದಲ್ಲಿ (1917ರಲ್ಲಿ) ಬ್ರಿಟಿಷ್ ಸರ್ಕಾರಕ್ಕೆ ಸಾಲ ನೀಡಿದ್ದ ಮಧ್ಯಪ್ರದೇಶದ ಸೆಹೋರ್ ಮೂಲದ ಕುಟುಂಬವೊಂದಕ್ಕೆ 109 ವರ್ಷಗಳ ಬಳಿಕ ಯುನೈಟೆಡ್ ಕಿಂಗ್‌ಡಮ್‌ನ (UK) ಸಾಲ ನಿರ್ವಹಣಾ ಕಚೇರಿಯಿಂದ (DMO) ಇಮೇಲ್ ಮೂಲಕ ಉತ್ತರ ಬಂದಿದೆ. ಅದರಲ್ಲಿ, ಮೂಲ ಯುದ್ಧ ಸಾಲ ಪ್ರಮಾಣಪತ್ರ ಮತ್ತು ಸಂಬಂಧಿತ ಪತ್ರವ್ಯವಹಾರದ ಪ್ರತಿಗಳನ್ನು ಕೋರಲಾಗಿದೆ. ಆ ಕುಟುಂಬವು ಪ್ರಸ್ತುತ ಬ್ರಿಟಿಷ್ ಅಧಿಕಾರಿಗಳಿಗೆ ಕಳುಹಿಸಲು ಅಗತ್ಯ ದಾಖಲೆಗಳು ಮತ್ತು ಇತರ ಬ್ಯಾಕಪ್ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ. ಏನಿದು ಘಟನೆ?: ಸೆಹೋರ್‌ನ…

Read More

ಶಿವಾನಂದ ನೀಲಣ್ಣನವರ್​​ ಕಳ್ಳಾಟ ಬಯಲು: ಶಿವಂ ಅಸೋಸಿಯೇಟ್ಸ್​ನಿಂದ 2,110 ಕೋಟಿ ವಂಚನೆ, ಇಡಿ ತನಿಖೆಯಲ್ಲಿ ಬಹಿರಂಗ – Kannada News | Belagavi shivam associates cheat investors of rs 2110 crore: found In ed investigation

ಬೆಂಗಳೂರು/ಬೆಳಗಾವಿ, (ಆಗಸ್ಟ್ 11): ಬೆಳಗಾವಿ (Belagavi) ಶಿವಾನಂದ ಸಿದ್ದಪ್ಪ ನೀಲನ್ನವರ್ ಎನ್ನುವರಿಗೆ ಸೇರಿದ ಶಿವಂ ಅಸೋಸಿಯೇಟ್ಸ್ ನಿಂದ (Shivam Associates) ಜನರಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಇಡಿ (Enforcement Directorate) ಪ್ರವೇಶ ಮಾಡಿದ್ದು,  ಶಿವಂ ಅಸೋಸಿಯೇಟ್ಸ್ ನಡೆಸಿದ ಕಳ್ಳಾಟವನ್ನು ಪತ್ತೆ ಮಾಡಿದೆ. ಹೌದು…. ಮಂಗಳೂರು ವಲಯ ಇಡಿ ಅಧಿಕಾರಿಗಳು ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಶಿವಾನಂದ ಸಿದ್ಧಪ್ಪ ನೀಲಣ್ಣವರ ಹಾಗೂ ಅವರ ಸಹಚರರು…

Read More

ರಸ್ತೆ ಕಾಮಗಾರಿ ನಿರ್ಲಕ್ಷ್ಯಕ್ಕೆ ಕೃಷ್ಣಾ ನದಿಗೆ ಬಿದ್ದ ಕಾರು; ಟೋಲ್ ಗೇಟ್ ಬಳಿ ತಪ್ಪಿದ ಭಾರಿ ದುರಂತ – Kannada News | Bilagi: PWD Negligence Causes Car Plunge into Krishna River; Locals Demand Action

ಬಾಗಲಕೋಟೆ, ಆ.11: ಬೀಳಗಿ ತಾಲೂಕಿನ ಗಲಗಲಿ-ರಬಕವಿ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಕಾರೊಂದು ಬಿದ್ದ ಭೀಕರ ಘಟನೆ ನಡೆದಿದೆ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀಳಗಿ ತಾಲೂಕಿನ ಕೋಲೂರು ಗ್ರಾಮದ ನಿವಾಸಿ ಸುನೀಲ್ ಅಂಬಿಗೇರ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ, ರಸ್ತೆಯಲ್ಲಿ ಸರಿಯಾಗಿ ಜಲ್ಲಿಯನ್ನು ಸಮತಟ್ಟು ಮಾಡದೆ ಬೇಕಾಬಿಟ್ಟಿ ಬಿಟ್ಟಿದ್ದರಿಂದ ನಿಯಂತ್ರಣ ತಪ್ಪಿ ಕಾರು ಕೃಷ್ಣಾ ನದಿಗೆ ಬಿದ್ದಿದೆ. ಕಾರು…

Read More

ರಿಷಬ್ ಶೆಟ್ಟಿ ಅಭಿನಯದ ‘ಜೈ ಹನುಮಾನ್’ ಚಿತ್ರಕ್ಕೆ ವಮಿಕಾ ಗಬ್ಬಿ ಎಂಟ್ರಿ? – Kannada News | Dc movie actress wamiqa gabbi joins rishab shetty in jai hanuman

ನಟಿ ವಮಿಕಾ ಗಬ್ಬಿ (Wamiqa Gabbi) ಅವರಿಗೆ 2026ರ ವರ್ಷ ಸಾಲು ಸಾಲು ಯಶಸ್ಸು ತಂದುಕೊಡುತ್ತಿದೆ. ವರ್ಷದ ಆರಂಭದಲ್ಲೇ ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಾಂಗ್ಲಾ’ ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದ ಅವರು, ನಂತರ ‘ಪತಿ ಪತ್ನಿ ಔರ್ ವೋ 2’ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಪ್ರಸ್ತುತ ತಮಿಳಿನ ‘ಡಿಸಿ’ ಚಿತ್ರದಲ್ಲಿ ಚಂದ್ರ ಎಂಬ ಪಾತ್ರದಲ್ಲಿ ನಟಿಸಿ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಅಪಾರ ಪ್ರಶಂಸೆ ಪಡೆಯುತ್ತಿದ್ದಾರೆ. ಲೋಕೇಶ್ ಕನಕರಾಜ್ ಅವರು ಪ್ರಮುಖ ಪಾತ್ರದಲ್ಲಿದ್ದರೂ, ವಮಿಕಾ…

Read More

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ: ಇ-ಆಟೋಗೆ ಟ್ಯಾಂಕರ್ ಡಿಕ್ಕಿ ಹೊಡೆದು ಕರ್ನಾಟಕದ 9 ಕೂಲಿ ಕಾರ್ಮಿಕರ ದಾರುಣ ಸಾವು – Kannada News | Telangana Tragedy: E Auto Tanker Crash Kills 9, Two Separate Accidents Claim 9 Lives

ಸಂಗಾರೆಡ್ಡಿ, ಆ.11: ನೆರೆಯ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳು ಸಂಭವಿಸಿದ್ದು, ಒಟ್ಟು 9 ಜನರು ದುರ್ಮರಣಕ್ಕೀಡಾಗಿದ್ದಾರೆ. ಮೊಗದಂಪಲ್ಲಿ ಮಂಡಲದ ಸತ್ವಾರ್ ಬಳಿ ನಡೆದ ಭೀಕರ ಅಪಘಾತದಲ್ಲಿ ಇ-ಆಟೋಗೆ (e-Auto) ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕರ್ನಾಟಕ ಮೂಲದ 7 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಗದಂಪಲ್ಲಿ ಮಂಡಲದ ಸತ್ವಾರ್ ಬಳಿ ಈ ಭೀಕರ ದುರಂತ ಸಂಭವಿಸಿದೆ. ಮೃತಪಟ್ಟವರೆಲ್ಲರೂ ಕರ್ನಾಟಕದ ಬೀದರ್ ಮೂಲದ ರಾಜಗಿರಿ ಗ್ರಾಮದ ಕೂಲಿ ಕಾರ್ಮಿಕರು ಎಂದು ಪೊಲೀಸರು ಗುರುತಿಸಿದ್ದಾರೆ. ಅಪಘಾತ…

Read More