ಮುಂಬೈನ ಘಾಟ್‌ಕೋಪರ್‌ನಲ್ಲಿ ಭಾರಿ ಭೂಕುಸಿತ: ಇಬ್ಬರು ಬಲಿ, ನಾಲ್ಕೈದು ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ – Kannada News | Ghatkopar Landslide: Heavy Mumbai Rains Cause Fatal Mudslide, Rescue Ops Underway

ಮುಂಬೈ, ಆ.12 : ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಮುಸಲಧಾರ ಮಳೆಗೆ ಭಾರಿ ಭೂಕುಸಿತ ಉಂಟಾಗಿದ್ದು, ಕನಿಷ್ಠ ಇಬ್ಬರು ಮೃತಪಟ್ಟು, ನಾಲ್ಕರಿಂದ ಐದು ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಭೀತಿ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ NDRF, ಮುಂಬೈ ಅಗ್ನಿಶಾಮಕ ದಳ ಮತ್ತು ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ನೀಡಿದ ಮಾಹಿತಿಯಂತೆ, ಘಾಟ್‌ಕೋಪರ್‌ನ ಚಿರಾಗ್ ನಗರದಲ್ಲಿರುವ ಗೌಸಿಯಾ ಚಾಲ್ ಬಳಿ ಮುಂಜಾನೆ ಸುಮಾರು 3:48ರ ವೇಳೆಗೆ ಗುಡ್ಡದ ಒಂದು ಭಾಗ ಕುಸಿದು ಬಿದ್ದಿದೆ.

ಬೆಟ್ಟದ ಮಣ್ಣು ಮತ್ತು ಕಲ್ಲುಗಳು 2 ರಿಂದ 3 ಮನೆಗಳ ಮೇಲೆ ಬಿದ್ದಿದ್ದರಿಂದ, ನಿವಾಸಿಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡರು. ಘಟನಾ ಸ್ಥಳದಿಂದ ಈವರೆಗೆ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ತಪಾಸಣೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ದುರಂತದಲ್ಲಿ ಗಾಯಗೊಂಡಿದ್ದ 18 ವರ್ಷದ ಸೊಹೇಲ್ ಅನ್ಸಾರಿ (ತಲೆಗೆ ಗಾಯ) ಮತ್ತು 14 ವರ್ಷದ ಮೊಹಮ್ಮದ್ ಅನ್ಸಾರಿ (ಬೆನ್ನಿಗೆ ಗಾಯ) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಗಣೇಶ್ ಶಿಂಧೆ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಘಾಟ್‌ಕೋಪರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕನಗರದಲ್ಲಿ ಭೂಕುಸಿತ ಸಂಭವಿಸಿದೆ. ಇದುವರೆಗೆ ಇಬ್ಬರ ಮೃತದೇಹ ಪತ್ತೆಯಾಗಿದೆ. ಮಣ್ಣಿನಡಿಯಲ್ಲಿ ಇನ್ನು 3 ರಿಂದ 4 ಜನರು ಸಿಲುಕಿರುವ ಸಾಧ್ಯತೆಯಿದ್ದು, NDRF, ಪೊಲೀಸರು ಹಾಗೂ ಬಿಎಂಸಿ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.” ಎಂದು ಡಿಸಿಪಿ ಗಣೇಶ್ ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಕಾಶ್ಮೀರಿ ಪಂಡಿತರ ಮೇಲೆ ಉಗ್ರರ ಕಣ್ಣು: ಮನೆಗಳಲ್ಲೇ ಇರುವಂತೆ ಸೂಚನೆ

ಮುಂಬೈ ಮೇಯರ್ ರಿತು ತಾವ್ಡೆ ಮತ್ತು ಹೆಚ್ಚುವರಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಧಾಕ್ನೆ ಅವರು ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅಪಾಯಕಾರಿ ಪ್ರದೇಶದಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ ಅಮಾವಾಸ್ಯೆಯ ರಾತ್ರಿ ನಡೆದಿದ್ದೇನು? ವೀರಪ್ಪನ್​ಗೆ ಪಾರ್ವತಮ್ಮ ಹೇಳಿದ್ದೇನು? – Kannada News | Dr Rajkumar Kidnap, what happened on that night on July 30, 2000

ಭೀಮನ ಅಮವಾಸ್ಯೆ ಬಂತೆಂದರೆ ಆ ಕರಾಳ ರಾತ್ರಿಯ ನೆನಪು ಕನ್ನಡಿಗರಿಗೆ ಆಗಿಯೇ ಆಗುತ್ತದೆ. 26 ವರ್ಷಗಳ ಹಿಂದೆ 2000ರ ಭೀಮನ ಅಮಾವಾಸ್ಯೆಯ ದಿನದಂದೆ ಕನ್ನಡಿಗರ ಕಣ್ಮಣಿ ಡಾ ರಾಜ್​​ಕುಮಾರ್ (Dr Rajkumar) ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ. ಆ ನಂತರ 108 ದಿನಗಳ ಕಾಲ ತನ್ನ ಅಧೀನದಲ್ಲಿ ಇರಿಸಿಕೊಂಡು ಅಂತಿಮವಾಗಿ ಬಿಡುಗಡೆ ಮಾಡಿದ್ದ. ಆದರೆ ಆ 108 ದಿನಗಳು ರಾಜ್​​ಕುಮಾರ್ ಕುಟುಂಬ, ಕನ್ನಡ ಚಿತ್ರರಂಗ, ಕರ್ನಾಟಕದ ಜನ ಸಾಕಷ್ಟು ನೋವು, ಆತಂಕಗಳನ್ನು ಅನುಭವಿಸಿದ್ದರು. ಅಂತಿಮವಾಗಿ ಎಲ್ಲವೂ ಸುಖಾಂತ್ಯವಾಯ್ತಾದರೂ, ಆ ಅಮಾವಾಸ್ಯೆಯ ರಾತ್ರಿ ನಡೆದಿದ್ದು ಏನು? ಹೇಗೆ? ಪಾರ್ವತಮ್ಮ-ವೀರಪ್ಪನ್ ನಡುವೆ ನಡೆದ ಮಾತುಕತೆ ಏನು? ಮಾಹಿತಿ ಇಲ್ಲಿದೆ…

ವೀರಪ್ಪನ್​​ಗೆ ಡಾ ರಾಜ್​​ಕುಮಾರ್ ಅವರನ್ನು ಅಪಹರಿಸುವ ಉದ್ದೇಶವೇ ಇರಲಿಲ್ಲ. ಮೊದಲಿಗೆ ಆತ ಯೋಜಿಸಿದ್ದು ರಜನೀಕಾಂತ್​​ರನ್ನು ಅಪಹರಿಸಲು ಆದರೆ ಚೆನ್ನೈನಲ್ಲಿ ಸಿಎಂ ನಿವಾಸದ ಪಕ್ಕದಲ್ಲೇ ವಾಸವಾಗಿರುವ ರಜನೀಕಾಂತ್​ ಅನ್ನು ಅಪಹರಿಸಿ ಕಾಡಿಗೆ ತರುವುದು ಅಸಾಧ್ಯವೆಂದು ಆ ಯೋಜನೆಯನ್ನು ಕೈಬಿಟ್ಟ, ಆ ಬಳಿಕ ಆಗ ತಮಿಳುನಾಡು ಸಿಎಂ ಆಗಿದ್ದ ಕರುಣಾನಿಧಿಯ ಪುತ್ರ ಸ್ಟಾಲಿನ್ ಅನ್ನು ಅಪಹರಿಸುವ ಯೋಜನೆ ಮಾಡಲಾಯ್ತು. ಆದರೆ ಸ್ಟಾಲಿನ್ ಅದಾಗಲೇ ಚೆನ್ನೈನ ಮೇಯರ್ ಹಾಗೂ ಅವರ ಸುತ್ತಲೂ ಗನ್​​ಮ್ಯಾನ್​​ಗಳು ಇರುತ್ತಿದ್ದರು. ಹಾಗಾಗಿ ಆ ಯೋಚನೆಯನ್ನೂ ಕೈಬಿಟ್ಟ. ಕೊನೆಗೆ ಹೊಳೆದಿದ್ದು ರಾಜ್​​ಕುಮಾರ್ ಹೆಸರು. ವೀರಪ್ಪನ್ ಅಡಗುತಾಣದಿಂದ ಕೇವಲ 20 ಕಿ.ಮೀ ದೂರದಲ್ಲಿ ಡಾ ರಾಜ್​​ಕುಮಾರ್ ಅವರ ದೊಡ್ಡ ಗಾಜನೂರಿನ ಮನೆ ಇತ್ತು. ಹಾಗಾಗಿ ರಾಜ್​​ಕುಮಾರ್ ಅಪಹರಣ ಸುಲಭ ಮತ್ತು ಲಾಭದಾಯಕ ಎಂದು ವೀರಪ್ಪನ್​​ಗೆ ಅನಿಸಿತ್ತು.

ರಾಜ್​ಕುಮಾರ್ ಅವರನ್ನು ಅಪಹರಿಸಲು ತನ್ನ ಜ್ಯೋತಿಷಿಗಳಿಂದ ಸಲಹೆಗಳನ್ನು ಸಹ ಪಡೆದಿದ್ದ. ಅಮವಾಸ್ಯೆಯಂದೇ ಅಪಹರಿಸುವುದು ಅವನ ಉದ್ದೇಶ ಆಗಿತ್ತು. ಅವನು ಅಂದುಕೊಂಡಂತೆ ಅದೇ ದಿನ ಅವರ ಕುಕೃತ್ಯ ಕೈಗೂಡಿತು. ತಮ್ಮ ಊರಿನಲ್ಲಿ ಕೊರೆಸಿದ್ದ ಬೋರ್​​ವೆಲ್​​ನಲ್ಲಿ ನೀರು ಬಂದ ಸುದ್ದಿ ತಿಳಿದ ಖುಷಿಯಲ್ಲಿ ರಾಜ್​​ಕುಮಾರ್ ಅವರು ದೊಡ್ಡ ಗಾಜನೂರಿಗೆ ಬಂದಿದ್ದರು. 2000ರ ಜುಲೈ 30ರಂದು ರಾತ್ರಿ ಊಟ ಮುಗಿಸಿ, ಆರಾಮವಾಗಿ ಕೂತಿದ್ದ ಸಮಯದಲ್ಲಿ ಬಂದೂಕುಗಳನ್ನು ಹಿಡಿದು ವೀರಪ್ಪನ್ ಸಹಚರರು ಮನೆಗೆ ಬಂದರು. ಮನೆಯಲ್ಲಿ ಪಾರ್ವತಮ್ಮ ರಾಜ್​​ಕುಮಾರ್, ಅಳಿಯ ಗೋವಿಂದರಾಜು, ಸಹಾಯಕ ನಾಗಪ್ಪ, ಸಂಬಂಧಿ ನಾಗೇಶ್, ಡ್ರೈವರ್ ಮತ್ತು ಪಾರ್ವತಮ್ಮ ಇದ್ದರು. ಜೊತೆಗೆ ಕೆಲವು ಕೆಲಸದವರು.

ಇದನ್ನೂ ಓದಿ:ದಸರಾ ‘ಉದ್ಘಾಟನೆ’ ಪ್ರಾರಂಭವಾಗಿದ್ದು ಡಾ ರಾಜ್​​ಕುಮಾರ್ ಅವರಿಂದ, ಹೇಗೆ ಗೊತ್ತೆ?

ಮೊದಲಿಗೆ ವೀರಪ್ಪನ್ ಸಹಚರರು ಮನೆಯೊಳಗೆ ಪ್ರವೇಶಿಸಿದರು. ಅದಾದ ಎರಡು ಮೂರು ನಿಮಿಷಗಳಲ್ಲಿ ವೀರಪ್ಪನ್ ಒಳಗೆ ಬಂದು ರಾಜ್​​ಕುಮಾರ್ ಅವರನ್ನುದ್ದೇಶಿಸಿ ‘ಅಯ್ಯ, ಹೊರಡೋಣ ಬನ್ನಿ’ ಎಂದ. ಪಾರ್ವತಮ್ಮ ಅವರ ಕೈಗೆ ಕ್ಯಾಸೆಟ್ ನೀಡಿ, ಇದನ್ನು ಸಿಎಂ ಎಸ್​​ಎಂ ಕೃಷ್ಣ ಅವರಿಗೆ ಕೊಡಿ, ನನಗೆ ಏನು ಬೇಕೋ ಅವರಿಗೆ ತಿಳಿಯುತ್ತದೆ. ಅಯ್ಯನವರ ಬಗ್ಗೆ ಚಿಂತಿಸಬೇಡಿ ಅವರಿಗೆ ಏನೂ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದ.

ಆದರೆ ಭಯ, ಆತಂಕದಲ್ಲಿ ಗದ್ಗದಿತರಾದ ಪಾರ್ವತಮ್ಮನವರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ರಾಜ್​​ಕುಮಾರ್ ಅವರಿಗೆ ಸಹಾಯವಾಗಿರುತ್ತದೆ ಎಂದು ಅಳಿಯ ಗೋವಿಂದರಾಜು, ಸಹಾಯಕ ನಾಗಪ್ಪ, ಸಂಬಂಧಿ ನಾಗೇಶ್ ಅವರನ್ನು ಜೊತೆಗೆ ಕಳಿಸಿದರು. ಡ್ರೈವರ್ ಅನ್ನೂ ಕರೆದೊಯ್ಯುವ ಉದ್ದೇಶ ವೀರಪ್ಪನ್​​ಗೆ ಇತ್ತು, ಆದರೆ ಪಾರ್ವತಮ್ಮನವರು ಬೆಂಗಳೂರಿಗೆ ಹೋಗಬೇಕಲು ಡ್ರೈವರ್ ಅವಶ್ಯಕತೆ ಇದ್ದ ಕಾರಣ ಅವನನ್ನು ಅಲ್ಲಿಯೇ ಬಿಟ್ಟು ಹೋದ ವೀರಪ್ಪನ್. ಹೋಗಬೇಕಾದರೆ ‘ಇಂದು ನಿನ್ನ ಸಮಯ ಚೆನ್ನಾಗಿದೆ, ನೀನು ಕರೆದುಕೊಂಡು ಹೋಗು, ನಾನು ಕರೆದುಕೊಂಡು ಬರುತ್ತೇನೆ’ ಎಂದು ವೀರಪ್ಪನ್​​ಗೆ ಹೇಳಿದ್ದಾಗಿ ಪಾರ್ವತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.

ವೀರಪ್ಪನ್ ರಾಜ್​​ಕುಮಾರ್ ಅವರನ್ನು ಕರೆದುಕೊಂಡು ಕತ್ತಲಲ್ಲಿ ಮರೆಯಾಗುತ್ತಿದ್ದಂತೆ ಇತ್ತ ಪಾರ್ವತಮ್ಮನವರು ಡ್ರೈವರ್ ಅನ್ನು ಕರೆದುಕೊಂಡು ಗಾಜನೂರಿನಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಿದರು. ಮೈಸೂರಿನಲ್ಲಿ ತಮ್ಮ ಪರಿಚಯದ ಜ್ಯೋತಿಷಿ ಬಾಷ್ಯಂಸ್ವಾಮಿ ಅವರ ಮನೆಗೆ ಹೋಗಿ, ಅಲ್ಲಿ, ರಾಜ್​​ಕುಮಾರ್ ಅವರ ವಿಷಯ ತಿಳಿಸಿ, ಭವಿಷ್ಯದ ಸಲಹೆ ಪಡೆದರು. ಅಲ್ಲಿಂದ ಹೊರಟು ನೇರವಾಗಿ ಸಿಎಂ ಎಸ್​ಎಂ ಕೃಷ್ಣ ಅವರ ಮನೆಯನ್ನು ಪಾರ್ವತಮ್ಮನವರು ತಲುಪಿದಾಗ ಬೆಳಿಗಿನ ಜಾವ ಮೂರು ಗಂಟೆ.

ಆ ಸಮಯದಲ್ಲಿ ಸಿಎಂ ಅವರನ್ನು ಎಬ್ಬಿಸಿ, ಅವರಿಗೆ ನಡೆದಿದ್ದೆಲ್ಲವನ್ನೂ ತಿಳಿಸಿ, ಅವರಿಗೆ ಕ್ಯಾಸೆಟ್ ನೀಡಿದರು. ಕೂಡಲೇ ಸಿಎಂ ಅವರು ಗೃಹ ಸಚಿವ ಖರ್ಗೆ, ಡಿಜಿಪಿ ದಿನಕರ್, ಗೃಹ ಕಾರ್ಯದರ್ಶಿ ಪ್ರಕಾಶ್, ಭಟ್ಟಾಚಾರ್ಯ, ಸಚಿವ ಸಗೀರ್ ಅಹ್ಮದ್ ಇನ್ನೂ ಕೆಲವರನ್ನು ಕರೆಸಿಕೊಂಡು ವೀರಪ್ಪನ್ ಕಳಿಸಿದ್ದ ಕ್ಯಾಸೆಟ್ ಕೇಳಿ ತುರ್ತು ಸಭೆ ನಡೆಸಿದರು. ಅಲ್ಲಿಂದ 108 ದಿನಗಳ ವರೆಗೆ ಸರ್ಕಾರ ಸತತ ಪ್ರಯತ್ನ ಮಾಡಿ ರಾಜ್​​ಕುಮಾರ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2027: ಬಿಗ್ಗೆಸ್ಟ್​ ಟ್ರೇಡ್​ಗೆ ಮಾಜಿ ಕ್ರಿಕೆಟಿಗನ ಐಡಿಯಾ! – Kannada News | Akash Chopra’s IPL 2027 Trade Blueprint: KKR GT Win Win Swap

ಐಪಿಎಲ್ 2027ರ ಮೆಗಾ ಹರಾಜಿಗೆ ಮುನ್ನವೇ ಫ್ರಾಂಚೈಸಿಗಳ ನಡುವೆ ಒಳಗೊಳಗೇ ಭಾರಿ ತಂತ್ರಗಾರಿಕೆಗಳು ಆರಂಭವಾಗಿವೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಹಾಗೂ ಪ್ರಮುಖ ವಿಶ್ಲೇಷಕ ಆಕಾಶ್ ಚೋಪ್ರಾ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ನಡೆಯಬಹುದಾದ ಒಂದು ಬ್ಲಾಕ್‌ಬಸ್ಟರ್ ‘ಪ್ಲೇಯರ್ ಸ್ವಾಪ್’ (ಆಟಗಾರರ ಅದಲು-ಬದಲು) ಐಡಿಯಾವನ್ನು ಹಂಚಿಕೊಂಡಿದ್ದಾರೆ.

ಈ ಸಂಭಾವ್ಯ ಟ್ರೇಡ್ ಡೀಲ್ ಭಾರತದ ಇಬ್ಬರು ಸ್ಟಾರ್ ಫಿನಿಷರ್‌ಗಳಾದ ರಿಂಕು ಸಿಂಗ್ ಮತ್ತು ರಮಣ್​ದೀಪ್ ಸಿಂಗ್ ಅವರ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದೆ. ಹಾಗೆಯೇ ಇಲ್ಲಿ ಸ್ವಾಪ್ ಆಗಬೇಕಿರುವುದು ಟೀಮ್ ಇಂಡಿಯಾ ವೇಗಿ ಎಂಬುದು ವಿಶೇಷ.

ಗುಜರಾತ್ ಟೈಟನ್ಸ್‌ನ ಅಗತ್ಯತೆ:

ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್​ ತಂಡದ ಕೆಳ-ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ತೀರಾ ದುರ್ಬಲವಾಗಿತ್ತು. ಹೀಗಾಗಿ ಫಿನಿಷರ್ ಸ್ಥಾನ ತುಂಬಲು ಅವರಿಗೆ ರಿಂಕು ಸಿಂಗ್ ಅಥವಾ ರಮಣ್​ದೀಪ್ ಸಿಂಗ್ ಅವರಂತಹ ಬಲಿಷ್ಠ ಭಾರತೀಯ ಆಟಗಾರನ ಅವಶ್ಯಕತೆ ಇದೆ

ಕೊಲ್ಕತ್ತಾ ನೈಟ್ ರೈಡರ್ಸ್​ ಬೇಡಿಕೆ:

ಕೆಕೆಆರ್ ಈಗಾಗಲೇ ಸಮತೋಲಿತ ಆಟಗಾರರನ್ನು ಹೊಂದಿದೆ. ಆದ್ದರಿಂದ ಅವರು ತಮ್ಮ ಸ್ಟಾರ್ ಬ್ಯಾಟರ್‌ಗಳನ್ನು ಬಿಟ್ಟುಕೊಡಬೇಕಾದರೆ, ಪ್ರತಿಯಾಗಿ ಗುಜರಾತ್ ಟೈಟಾನ್ಸ್​ ತಂಡದಿಂದ ಒಬ್ಬ ಅಗ್ರ ದರ್ಜೆಯ ಭಾರತೀಯ ವೇಗದ ಬೌಲರ್​ಗಾಗಿ ಬೇಡಿಕೆಯಿಡಬಹುದು. ಏಕೆಂದರೆ ಗುಜರಾತ್ ಟೈಟಾನ್ಸ್​ ತಂಡದಲ್ಲಿ ಟೀಮ್ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಗುರ್ನೂರ್ ಬ್ರಾರ್ ಇದ್ದಾರೆ. ಇವರಲ್ಲಿ ಸಿರಾಜ್ ಅಥವಾ ಪ್ರಸಿದ್ಧ್ ಕೃಷ್ಣ ಮೇಲೆ ಕೆಕೆಆರ್ ಕಣ್ಣಿಡಲಿದೆ.

ಯಾವ ತಂಡಕ್ಕೆ ಲಾಭ?

ಈ ಅದಲು-ಬದಲು ಪ್ರಕ್ರಿಯೆ ನಡೆದರೆ ಎರಡೂ ತಂಡಗಳ ದೌರ್ಬಲ್ಯಗಳು ತಕ್ಷಣವೇ ಪರಿಹಾರವಾಗಲಿವೆ. ಗುಜರಾತ್ ಟೈಟಾನ್ಸ್ ತಂಡಕ್ಕೆ ಭರವಸೆಯ ಫಿನಿಷರ್ ಸಿಕ್ಕರೆ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪ್ರಮುಖ ದೇಶಿ ವೇಗದ ಬೌಲಿಂಗ್ ಅಸ್ತ್ರ ಲಭ್ಯವಾಗಲಿದೆ. ಹೀಗಾಗಿ ಇಂತಹದೊಂದು ಟ್ರೇಡ್​ಗೆ ಎರಡು ಫ್ರಾಂಚೈಸಿಗಳು ಮುಂದಾಗುವ ಸಾಧ್ಯತೆಯಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: ದುಲೀಪ್ ಟ್ರೋಫಿ ಟೂರ್ನಿಗೆ 6 ತಂಡಗಳು ಪ್ರಕಟ

ಸದ್ಯದ ಪರಿಸ್ಥಿತಿ ಏನು?

ಕೆಕೆಆರ್ ಮತ್ತು ಜಿಟಿ ನಡುವೆ ಈ ಟ್ರೇಡ್ ಬಗ್ಗೆ ಯಾವುದೇ ಒಪ್ಪಂದ ನಡೆಯದಿದ್ದರೂ, ಮುಂಬರುವ ಟ್ರೇಡ್ ವಿಂಡೋದಲ್ಲಿ ಇಂತಹದೊಂದು ದೊಡ್ಡ ಬದಲಾವಣೆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಲ್ಲಿ ಆಕಾಶ್ ಚೋಪ್ರಾ ನೀಡಿರುವ ಟ್ರೇಡ್ ಐಡಿಯಾ ಉಭಯ ಫ್ರಾಂಚೈಸಿಗಳಿಗೆ ಲಾಭದಾಯಕವಾಗಿರುವುದರಿಂದ ಈ ಟ್ರೇಡ್​ಗಾಗಿ ಮಾತುಕತೆ ನಡೆಯುವ ಸಾಧ್ಯತೆಯಿದೆ.

Source link

ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳದೇ ಹೋದ ಸರ್ಕಾರಿ ಬಸ್ ಚಾಲಕ: ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಚಿವ ಎಂ.ಬಿ. ಪಾಟೀಲ್​​ ತರಾಟೆ – Kannada News | Minister MB Patil Takes KSRTC Official to Task Over Driver Skipping School Children in Vijayapura; Orders Suspension

ವಿಜಯಪುರ, ಆಗಸ್ಟ್​​ 12: ಸರ್ಕಾರಿ ಬಸ್ ಚಾಲಕ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳದೇ ಹೋದ ಕಾರಣ ಮಾರ್ಗ ಮಧ್ಯೆ ನಿಂತಿದ್ದ ಮಕ್ಕಳನ್ನು ಕಂಡು ಸಮಸ್ಯೆ ಆಲಿಸಿದ ಸಚಿವ ಎಂ.ಬಿ.ಪಾಟೀಲ್, ಕೂಡಲೇ ವಿಭಾಗೀಯ ನಿಯಂತ್ರಣಾಧಿಕಾರಿಗೆ ಕರೆ ಮಾಡಿ ತರಾಟೆಗೆ ಪಡೆದ ಘಟನೆ ನಿನ್ನೆ ಸಂಜೆ ವಿಜಯಪುರದ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದ ಬಳಿ ನಡೆದಿದೆ. ಚಾಲಕನ‌ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು ವಿಜಯಪುರ, ಕಿಲಾರಹಟ್ಟಿ, ಮಮದಾಪುರ ಮಾರ್ಗದ ಬಸ್ ಚಾಲಕನನ್ನು ಅಮಾನತು ಮಾಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎ.ಬಿರಾದಾರಗೆ ಸೂಚನೆ ನೀಡಿದ್ದಾರೆ. ಜೊತೆಗೆ ಕೂಡಲೇ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡುವ ಜೊತೆಗೆ ಮಮದಾಪುರಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮತ್ತೆ ಕಾಶ್ಮೀರಿ ಪಂಡಿತರ ಮೇಲೆ ಉಗ್ರರ ಕಣ್ಣು: ಮನೆಗಳಲ್ಲೇ ಇರುವಂತೆ ಸೂಚನೆ – Kannada News | Kashmir Pandits’ Security Alarm: Online Threats Force Govt Employees to Stay Home

ಶ್ರೀನಗರ, ಆ.12: ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತ್ ಸರ್ಕಾರಿ ಉದ್ಯೋಗಿಗಳಿಗೆ ಆನ್‌ಲೈನ್ ಮೂಲಕ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ, ಅವರನ್ನು ಮನೆಗಳಲ್ಲೇ ಇರಲು ಮತ್ತು ಜಾಗರೂಕರಾಗಿರಲು ಮೌಖಿಕವಾಗಿ ಸೂಚಿಸಲಾಗಿದೆ. ಬೆದರಿಕೆ ಪತ್ರದಲ್ಲಿ ಕೆಲ ಸರ್ಕಾರಿ ನೌಕರರ ಹೆಸರುಗಳನ್ನು ಉಲ್ಲೇಖಿಸಿ, “ನಿಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಿ” ಎಂದು ಎಚ್ಚರಿಕೆ ನೀಡಲಾಗಿದೆ.

‘ಯುನೈಟೆಡ್ ಲಿಬರೇಷನ್ ಕೌನ್ಸಿಲ್’ (United Liberation Council) ಹೆಸರಿನ ಸಂಘಟನೆಯೊಂದು ಈ ಬೆದರಿಕೆ ಪತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ. ಈ ಸಂಘಟನೆಯು ಜುಲೈ ತಿಂಗಳಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಪುಣ್ಯಸ್ಮರಣೆಯ ಪೋಸ್ಟರ್ ಮೂಲಕ ಮುನ್ನೆಲೆಗೆ ಬಂದಿತ್ತು. ಇದು ನಿಷೇಧಿತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಗುಂಪು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪತ್ರದಲ್ಲಿ ಕಂದಾಯ ಇಲಾಖೆ ಹಾಗೂ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ಹೆಸರುಗಳು ಮತ್ತು ವಿವರಗಳನ್ನು ಉಲ್ಲೇಖಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಈ ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಸರ್ಕಾರದಿಂದ ಯಾವುದೇ ಅಧಿಕೃತ ಲಿಖಿತ ರಜಾ ಆದೇಶ ಹೊರಬಿದ್ದಿಲ್ಲವಾದರೂ, ಕಂದಾಯ ಇಲಾಖೆ ಮತ್ತು ಶಾಲೆಗಳಲ್ಲಿರುವ ಕಾಶ್ಮೀರಿ ಪಂಡಿತ್ ನೌಕರರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ಮನೆಗಳಲ್ಲೇ ಉಳಿಯಲು ಮೌಖಿಕವಾಗಿ ತಿಳಿಸಲಾಗಿದೆ.

ಶಾಲಾ ನಿರ್ದೇಶಕರಾದ ನಸೀರ್ ಅಹಮದ್ ವಾನಿ ಅವರು ಮಾತನಾಡಿ, “ನಾವು ಯಾವುದೇ ನೌಕರರಿಗೆ ರಜೆ ಪಡೆಯಲು ಅಥವಾ ವರ್ಕ್ ಫ್ರಮ್ ಹೋಮ್ ಮಾಡಲು ಅಧಿಕೃತವಾಗಿ ಹೇಳಿಲ್ಲ. ಎಲ್ಲಾ ಉದ್ಯೋಗಿಗಳು ಕರ್ತವ್ಯಕ್ಕೆ ಬರುತ್ತಿದ್ದಾರೆ” ಎಂದಿದ್ದಾರೆ. ಬೆದರಿಕೆ ಪತ್ರದಲ್ಲಿ ಹೆಸರಿಸಲಾದ ನೌಕರರಿಗೆ ಆಗಸ್ಟ್ 20ರವರೆಗೆ ಅತ್ಯಂತ ಜಾಗರೂಕರಾಗಿರಲು ಮತ್ತು ಕೆಲಸದ ಸ್ಥಳದಿಂದ ದೂರವಿರಲು ಸೂಚಿಸಲಾಗಿದೆ.

ಕಣಿವೆಯಲ್ಲಿ ಪ್ರಧಾನ ಮಂತ್ರಿಗಳ ವಿಶೇಷ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಸುಮಾರು 9,000 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಆಲ್ ಪಿಎಂ ಪ್ಯಾಕೇಜ್ ಎಂಪ್ಲಾಯೀಸ್ ಅಸೋಸಿಯೇಷನ್ ಅಧ್ಯಕ್ಷ ಸನ್ನಿ ರೈನಾ ಮಾತನಾಡಿ, “ಪೋಸ್ಟರ್‌ಗಳು ಬಂದ ನಂತರ ನಮ್ಮನ್ನು ಮನೆಯಲ್ಲೇ ಇರುವಂತೆ ಹೇಳಲಾಗಿದೆ. ಆದರೆ ಮನೆಯಲ್ಲೇ ಕುಳಿತುಕೊಳ್ಳುವುದು ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ನಮಗೂ ಸಾಮಾಜಿಕ ಜೀವನವಿದೆ, ಔಷಧಿ ಮತ್ತು ದಿನಸಿ ತರಲು ನಾವು ಹೊರಗೆ ಹೋಗಲೇಬೇಕಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಜಿರಳೆ’ ಹೇಳಿಕೆ ವಾಣಿಜ್ಯ ದುರುಪಯೋಗ ಸಂಬಂಧ ಪಿಐಎಲ್​​: ಕೇಂದ್ರ ಸರ್ಕಾರ, CBIಗೆ ಸುಪ್ರೀಂ ಕೋರ್ಟ್ ನೋಟಿಸ್

2022ರಲ್ಲಿ ಕಣಿವೆಯಲ್ಲಿ ನಡೆದ ಸರಣಿ ಉಗ್ರರ ದಾಳಿಯಲ್ಲಿ 5 ಕಾಶ್ಮೀರಿ ಪಂಡಿತ್ ಉದ್ಯೋಗಿಗಳು ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಕಣಿವೆಯಿಂದ ಹೊರಗೆ ವರ್ಗಾವಣೆ ಮಾಡುವಂತೆ ನೌಕರರು ದೀರ್ಘಕಾಲದ ಭಾರಿ ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಬೆದರಿಕೆ ಪತ್ರ ಬಂದಿರುವುದು ಉದ್ಯೋಗಿಗಳಲ್ಲಿ ಹಳೆಯ ಭೀತಿಯನ್ನು ಮರುಕಳಿಸುವಂತೆ ಮಾಡಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bhimana Amavasya: ಭೀಮನ ಅಮಾವಾಸ್ಯೆ ಹಬ್ಬದ ಹಿಂದಿನ ಪೌರಾಣಿಕ ಕಥೆ ಇಲ್ಲಿ ತಿಳಿದುಕೊಳ್ಳಿ – Kannada News | Bhimana Amavasya: Significance and Rituals for Husband’s Longevity and Family Prosperity

ಆಷಾಢ ಮಾಸದ ಕೊನೆಯ ದಿನವಾದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ‘ಭೀಮನ ಅಮಾವಾಸ್ಯೆ‘ ಅಥವಾ ‘ಜ್ಯೋತಿರ್ಭೀಮೇಶ್ವರ ವ್ರತ’ ಎಂದು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಪತಿಯ ದೀರ್ಘಾಯುಷ್ಯ, ಕುಟುಂಬದ ಕ್ಷೇಮ ಮತ್ತು ಸೌಭಾಗ್ಯ ವೃದ್ಧಿಗಾಗಿ ಆಚರಿಸಲಾಗುವ ಈ ವ್ರತಕ್ಕೆ ಸುದೀರ್ಘ ಪೌರಾಣಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿದೆ. ಪವಿತ್ರ ಶ್ರಾವಣ ಮಾಸದ ಮನೆಬಾಗಿಲಿಗೆ ಬಂದು ನಿಲ್ಲುವ ಈ ದಿನವು ಜಪ, ತಪ, ಪೂಜೆ ಮತ್ತು ದಾನ-ಧರ್ಮಗಳಿಗೆ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಡುತ್ತದೆ.

ಬ್ರಾಹ್ಮಣ ಕನ್ಯೆಯ ನಿಷ್ಠೆ ಮತ್ತು ಪೌರಾಣಿಕ ಹಿನ್ನೆಲೆ:

ಸ್ಕಂದ ಪುರಾಣದ ಪ್ರಕಾರ, ಹಿಂದೆ ಬಡ ಬ್ರಾಹ್ಮಣನೊಬ್ಬ ಅನಿವಾರ್ಯ ಪರಿಸ್ಥಿತಿಯಲ್ಲಿ ತನ್ನ ಮಗಳನ್ನು ಅಕಾಲಿಕವಾಗಿ ಮರಣ ಹೊಂದಿದ್ದ ರಾಜಕುಮಾರನಿಗೆ ನೀಡಿ ವಿವಾಹ ಮಾಡಿಕೊಡುತ್ತಾನೆ. ಸಂಪ್ರದಾಯದಂತೆ ಆ ಬಾಲಕಿಯು ಶ್ಮಶಾನದಲ್ಲಿ ಮೃತದೇಹದ ಬಳಿ ಕಾಲ ಕಳೆಯಬೇಕಾಗುತ್ತದೆ. ಆದರೆ ಧೈರ್ಯಗೆಡದ ಆಕೆ, ತನ್ನ ತಾಯಿ ಪ್ರತೀವರ್ಷ ಆಚರಿಸುತ್ತಿದ್ದ ಆಷಾಢ ಅಮಾವಾಸ್ಯೆಯ ವ್ರತವನ್ನು ನೆನಪಿಸಿಕೊಂಡು, ಗಂಗಾ ನದಿಯ ದಂಡೆಯಲ್ಲಿ ಮಣ್ಣಿನಿಂದ ಶಿವ-ಪಾರ್ವತಿಯರ ಪ್ರತಿರೂಪವಾಗಿ ದೀಪಗಳನ್ನು (ಜ್ಯೋತಿ) ಮಾಡಿ ಭಕ್ತಿಯಿಂದ ಪೂಜಿಸುತ್ತಾಳೆ. ಆಕೆಯ ನಿಷ್ಕಲ್ಮಶ ಪತಿಭಕ್ತಿಗೆ ಪ್ರಸನ್ನರಾದ ಪರಶಿವ ಹಾಗೂ ಪಾರ್ವತಿ ದೇವಿ ಪ್ರತ್ಯಕ್ಷರಾಗಿ ರಾಜಕುಮಾರನಿಗೆ ಮರುಜೀವ ನೀಡುತ್ತಾರೆ. ಇದರಿಂದಾಗಿ ಈ ವ್ರತಕ್ಕೆ ‘ಪತಿ ಸಂಜೀವಿನಿ ವ್ರತ’ ಎಂಬ ಹೆಸರೂ ಬಂದಿದೆ.

ಮಹಾಭಾರತದ ಭೀಮನ ನಂಟು ಮತ್ತು ವ್ರತದ ಹೆಸರು:

ಮಹಾಭಾರತದ ಪರಾಕ್ರಮಿ ಭೀಮನು ದ್ರೌಪದಿಯ ರಕ್ಷಣೆ ಹಾಗೂ ಶ್ರೇಯಸ್ಸಿಗಾಗಿ ಈ ವ್ರತವನ್ನು ಆಚರಿಸಿ, ಭಕ್ತಿಯಿಂದ ಶಿವ-ಪಾರ್ವತಿಯರ ಆಶೀರ್ವಾದ ಪಡೆದಿದ್ದ ಎಂಬ ಉಲ್ಲೇಖಗಳಿವೆ. ಜೊತೆಗೆ, ಸಾರ್ವಜನಿಕರಿಗೆ ಉಪದ್ರ ನೀಡುತ್ತಿದ್ದ ದುಷ್ಟ ರಾಕ್ಷಸ ಬಕಾಸುರನನ್ನು ಭೀಮನು ಸಂಹರಿಸಿ ಜನರನ್ನು ಭೀತ ಮುಕ್ತಗೊಳಿಸಿದ ಪವಿತ್ರ ದಿನವೂ ಇದಾಗಿದೆ. ಹೀಗಾಗಿ ಈ ವಿಶೇಷ ದಿನವನ್ನು ಭೀಮನ ಸಾಹಸ ಮತ್ತು ಭಕ್ತಿಯ ಸಂಕೇತವಾಗಿ ‘ಭೀಮನ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಪತಿದೇವರ ಪಾದಪೂಜೆ:

ಭೀಮನ ಅಮಾವಾಸ್ಯೆಯ ದಿನದಂದು ಪ್ರತಿಯೊಂದು ಮನೆಯಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ವಿವಾಹಿತ ಮಹಿಳೆಯರು (ಸುಮಂಗಲಿಯರು) ಬೆಳಿಗ್ಗೆ ಉಪವಾಸ ವ್ರತ ಕೈಗೊಂಡು ಶಿವ-ಪಾರ್ವತಿಯರನ್ನು ಪೂಜಿಸಿ, ನಂತರ ತಮ್ಮ ಪತಿಯ ಪಾದಪೂಜೆ ಮಾಡಿ ಆಶೀರ್ವಾದ ಪಡೆಯುತ್ತಾರೆ. ಮದುವೆಯಾಗದ ಯುವತಿಯರು ತಮಗೆ ಸದ್ಗುಣಶೀಲ ಪತಿ ಲಭಿಸಲಿ ಎಂದು ಪ್ರಾರ್ಥಿಸುತ್ತಾರೆ.

ವೈವಾಹಿಕ ಜೀವನದಲ್ಲಿ ಸಾಂಸ್ಕೃತಿಕ ಮಹತ್ವ:

ಭೀಮನ ಅಮಾವಾಸ್ಯೆಯು ಕೇವಲ ಒಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೌಟುಂಬಿಕ ಐಕ್ಯತೆ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ದಂಪತಿಗಳ ನಡುವಿನ ಪ್ರೀತಿ, ಗೌರವ ಮತ್ತು ನಂಬಿಕೆಯನ್ನು ಪುನಶ್ಚೇತನಗೊಳಿಸುವ ಈ ದಿನವು, ಮನೆಮನಗಳಲ್ಲಿ ಧಾರ್ಮಿಕ ಕಳೆ ಹಾಗೂ ಮಂಗಳಕರ ವಾತಾವರಣವನ್ನು ತರುತ್ತದೆ. ಶ್ರಾವಣ ಮಾಸದ ಆಗಮನದ ಸಂಕೇತವಾಗಿರುವ ಈ ಆಚರಣೆಯು ಸಕಲ ಜನರಿಗೂ ಶ್ರೇಯಸ್ಸು ಮತ್ತು ಸುಖ-ಶಾಂತಿಯನ್ನು ಕರುಣಿಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಲ್ಲಿ ಜೀವನ ಸಾಗಿಸಲು ವರ್ಷಕ್ಕೆ 50 ಲಕ್ಷ ರೂ. ಸಂಬಳವೂ ಸಾಕಾಗಲ್ಲವೇ? ಟೆಕ್ಕಿಯ ಲೆಕ್ಕಾಚಾರ ವೈರಲ್ – Kannada News | Techie Sparks Debate on High Cost of Living and Wealth Building in Bengaluru

ಬೆಂಗಳೂರಲ್ಲಿ ಜೀವನ ಸಾಗಿಸಲು ವರ್ಷಕ್ಕೆ 50 ಲಕ್ಷ ರೂ. ಸಂಬಳವೂ ಸಾಕಾಗಲ್ಲವೇ? ಟೆಕ್ಕಿಯ ಲೆಕ್ಕಾಚಾರ ವೈರಲ್

ಬೆಂಗಳೂರು, ಆಗಸ್ಟ್ 12: ದೇಶದ ಪ್ರಮುಖ ಟೆಕ್ ಹಬ್ ಆಗಿರುವ ಬೆಂಗಳೂರಿನಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದರೂ ಶ್ರೀಮಂತರಾಗುವುದು ಕಷ್ಟವೇ? ಇದೀಗ ಟೆಕ್ಕಿಯೊಬ್ಬರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಾರ್ಷಿಕ 50 ಲಕ್ಷ ರೂ. ವೇತನ (50 LPA) ಇದ್ದರೂ ಬೆಂಗಳೂರಿನ ಜೀವನಶೈಲಿ ಹಾಗೂ ಹೆಚ್ಚುತ್ತಿರುವ ಖರ್ಚುಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಸಂಪತ್ತು ಗಳಿಸುವುದು ಕಷ್ಟ ಎಂದು ಟೆಕ್ಕಿ ಅನ್ಮೋಲ್ ಅಗರ್ವಾಲ್ ಹೇಳಿದ್ದಾರೆ.

3 ಲಕ್ಷ ರೂ. ಮಾಸಿಕ ಆದಾಯದಲ್ಲಿ ಎಷ್ಟು ಉಳಿಯುತ್ತೆ?

50 ಲಕ್ಷ ರೂ. ಸಂಪೂರ್ಣವಾಗಿ ಬೇಸಿಕ್ ವೇತನವೆಂದು ಪರಿಗಣಿಸಿ ತಮ್ಮ ಲೆಕ್ಕಾಚಾರವನ್ನು ವಿವರಿಸಿರುವ ಅವರು, ತೆರಿಗೆ ಮತ್ತು EPF ಕಡಿತದ ಬಳಿಕ ಸುಮಾರು 35 ಲಕ್ಷ ರೂ. ಉಳಿಯಬಹುದು ಎಂದು ಹೇಳಿದ್ದಾರೆ. ಅಂದರೆ ತಿಂಗಳಿಗೆ ಸರಿಸುಮಾರು 3 ಲಕ್ಷ ರೂ. ಆದಾಯ ಕೈಗೆ ಸಿಗಬಹುದು. ಆದರೆ ಬೆಂಗಳೂರಿನಲ್ಲಿ 2BHK ಮನೆಯ ಬಾಡಿಗೆಗೆ 60,000-70,000 ರೂ., ಮನೆಕೆಲಸದವರು ಮತ್ತು ಅಡುಗೆ ಕೆಲಸಕ್ಕೆ ತಲಾ ಸುಮಾರು 10,000 ರೂ., ದಿನನಿತ್ಯದ ಖರ್ಚು, ಜಿಮ್, ಶಾಪಿಂಗ್ ಹಾಗೂ ಪ್ರಯಾಣಕ್ಕೆ ಸೇರಿ ತಿಂಗಳಿಗೆ 1.2 ಲಕ್ಷದಿಂದ 1.3 ಲಕ್ಷ ರೂ.ವರೆಗೆ ಖರ್ಚಾಗಬಹುದು ಎಂಬುದು ಅವರ ಅಂದಾಜು.

ಕಾರ್ ಖರೀದಿಸಿದರೆ EMI, ನಿರ್ವಹಣೆ ಸೇರಿದಂತೆ ತಿಂಗಳಿಗೆ ಮತ್ತಷ್ಟು 50,000 ರೂ. ಖರ್ಚಾಗಬಹುದು. ಮಕ್ಕಳಿದ್ದರೆ ಶಿಕ್ಷಣ ಸೇರಿದಂತೆ ವೆಚ್ಚ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ತಿಂಗಳಿಗೆ ಸುಮಾರು 1 ಲಕ್ಷದಷ್ಟು ಮಾತ್ರ ಹೂಡಿಕೆಗೆ ಉಳಿಯಬಹುದು ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸುವುದೇ ದೊಡ್ಡ ಸವಾಲು?

ಬೆಂಗಳೂರಿನ ದುಬಾರಿ ರಿಯಲ್ ಎಸ್ಟೇಟ್ ಬೆಲೆಗಳನ್ನೂ ಟೆಕ್ಕಿ ಉಲ್ಲೇಖಿಸಿದ್ದಾರೆ. ಪ್ರಸ್ತುತ 3 ಕೋಟಿ ರೂ. ಬೆಲೆ ಇರುವ ಮನೆಯ ಬೆಲೆ ಮುಂದಿನ ದಿನಗಳಲ್ಲಿ 6-7 ಕೋಟಿ ರೂ.ಗೆ ಏರಬಹುದು ಎಂದು ಅವರು ಅಂದಾಜಿಸಿದ್ದಾರೆ. ಹೀಗಾಗಿ ಹೆಚ್ಚಿನ ಆದಾಯವಿದ್ದರೂ ಸ್ವಂತ ಮನೆ ಖರೀದಿಸಿ ಆರ್ಥಿಕವಾಗಿ ಶ್ರೀಮಂತರಾಗುವುದು ಸವಾಲಾಗಬಹುದು ಎಂಬುದು ಅವರ ವಾದ.

ಇದಕ್ಕೆ ಪರ್ಯಾಯವಾಗಿ ಕಡಿಮೆ ಜೀವನ ವೆಚ್ಚವಿರುವ ಟಿಯರ್-3 ನಗರದಲ್ಲಿ ವಾಸಿಸುತ್ತಾ ರಿಮೋಟ್ ಉದ್ಯೋಗ ಮಾಡುವುದು ಅಥವಾ ಸ್ವಂತ ಉದ್ಯಮ ಆರಂಭಿಸುವುದನ್ನು ಅವರು ಸಲಹೆ ನೀಡಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಎಂಕೆ ಬಳಿಕ ಎಐಎಡಿಎಂಕೆ ತ್ರಿಷಾ ಬಗ್ಗೆ ಕೀಳು ಹೇಳಿಕೆ, ಅಭಿಮಾನಿಗಳ ಎಚ್ಚರಿಕೆ – Kannada News | AIADMK leader talks ill about actress Trisha Krishnan

ಇತ್ತೀಚೆಗಷ್ಟೆ ಡಿಎಂಕೆ ಮುಖಂಡ, ತಮಿಳುನಾಡು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ನಟಿ ತ್ರಿಷಾ (Trisha) ಕುರಿತಾಗಿ ಕೀಳು ಹೇಳಿಕೆ ನೀಡಿದ್ದರು. ಇದೇ ಕಾರಣಕ್ಕೆ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಉದಯನಿಧಿ ಹೇಳಿಕೆಗೆ ತೀವ್ರ ಟೀಕೆ, ವಿರೋಧಗಳು ವ್ಯಕ್ತವಾಗಿದ್ದವು. ಘಟನೆ ನಡೆದು ಕೆಲವು ದಿನಗಳಷ್ಟೆ ಆಗಿವೆ. ಅಷ್ಟರಲ್ಲೇ ಇದೀಗ ಎಐಎಡಿಎಂಕೆ ಮುಖಂಡ ನಟಿ ತ್ರಿಷಾ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಬಾರಿ ತ್ರಿಷಾ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದು, ಎಐಎಡಿಎಂಕೆಗೆ ಎಚ್ಚರಿಕೆ ನೀಡಿದ್ದಾರೆ.

ಎಐಎಡಿಎಂಕೆ ಮುಖಂಡ ಆರ್​​ಬಿ ಉದಯಕುಮಾರ್ ಎಂಬುವರು ತಮಿಳುನಾಡು ಸರ್ಕಾರವನ್ನು ಟೀಕೆ ಮಾಡುತ್ತಾ, ಸರ್ಕಾರದ ಉನ್ನತ ಹುದ್ದೆಗಳಿಗೆ ತಮಿಳುನಾಡು ಸಿನಿಮಾ ಗಣ್ಯರನ್ನು ನೇಮಿಸುತ್ತಿರುವುದನ್ನು ಖಂಡಿಸಿ ಹೇಳಿಕೆ ನೀಡುವ ಸಮಯದಲ್ಲಿ ‘ನಟಿ ತ್ರಿಷಾ ತಮಿಳುನಾಡಿನ ಡಿಸಿಎಂ ಆಗುವುದನ್ನು ನಾವು ಕಾಯುತ್ತಿದ್ದೇವೆ’ ಎಂದು ಹೇಳಿದ್ದಾರೆ. ಸಿಎಂ ವಿಜಯ್ ಅವರನ್ನು, ಅವರ ಸರ್ಕಾರವನ್ನು ಟೀಕಿಸುವ ನೆಪದಲ್ಲಿ ಪದೇ ಪದೇ ನಟಿ ತ್ರಿಷಾ ಅವರ ಹೆಸರನ್ನು ಎಳೆದು ತರಲಾಗುತ್ತಿದೆ.

ಎಐಎಡಿಎಂಕೆ ಮುಖಂಡ ಉದಯಕುಮಾರ್ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ವಿಜಯ್ ಅವರ ಟೀಕೆಗೆ ತ್ರಿಷಾ ಹೆಸರನ್ನು ಬಳಸುವುದೇಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ನಟಿ ತ್ರಿಷಾ ಅವರ ಅಭಿಮಾನಿಗಳು ಈ ಬಾರಿ ಬೀದಿಗಿಳಿದಿದ್ದು, ನಟಿಯ ಪರವಾಗಿ ಚೆನ್ನೈ ಸೇರಿದಂತೆ ಹಲೆವೆಡೆ ಪೋಸ್ಟರ್​​ಗಳನ್ನು ಸಹ ಅಂಟಿಸಿದ್ದಾರೆ. ತ್ರಿಷಾ ಹೆಸರನ್ನು ಪದೇ ಪದೇ ಎಳೆದು ತರುತ್ತಿರುವುದು ಸರಿಯಲ್ಲ, ಇದು ಮುಂದುವರೆದರೆ ಪ್ರತಿಭಟನೆ ನಡೆಸುವುದಾಗಿ ತ್ರಿಷಾ ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ:ನಟಿ ತ್ರಿಷಾ ಬಗ್ಗೆ ಅವಹೇಳನಕಾರಿ ಹೇಳಿಕೆ; ಉದಯನಿಧಿ ಸ್ಟಾಲಿನ್ ಬಂಧನ

ಸಿಎಂ ವಿಜಯ್ ಅವರ ಆಪ್ತೆಯಾಗಿದ್ದಾರೆ ನಟಿ ತ್ರಿಷಾ. ಇಬ್ಬರ ನಡುವೆ ಆಪ್ತ ಸಂಬಂಧವಿದೆ. ವಿಜಯ್ ಹಾಗೂ ಪತ್ನಿ ಸಂಗೀತ ನಡುವೆ ವಿಚ್ಛೇದನದ ಚರ್ಚೆ ನಡೆಯುತ್ತಿದೆ. ವಿಜಯ್ ಹಾಗೂ ತ್ರಿಷಾ ನಡುವಿನ ಆಪ್ತತೆಯ ಕಾರಣಕ್ಕೆ ವಿಪಕ್ಷದವರು, ವಿಜಯ್ ಅವರನ್ನು ಟೀಕಿಸುವಾಗ ಸುಖಾ-ಸುಮ್ಮನೆ ತ್ರಿಷಾ ಹೆಸರು ಎಳೆದು ತರುತ್ತಿದ್ದಾರೆ. ಇತ್ತೀಚೆಗೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅಂತೂ ಬಹಳ ಕೀಳಾದ ಪದಗಳನ್ನು ತ್ರಿಷಾ ಬಗ್ಗೆ ಬಳಸಿದ್ದರು.

ನಟಿ ತ್ರಿಷಾ ಮತ್ತು ವಿಜಯ್ ಈ ವರೆಗೆ ಐದು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ವಿಜಯ್ ನಟನೆಯ ‘ಗೋಟ್’ ಸಿನಿಮಾನಲ್ಲಿ ತ್ರಿಷಾ ಅತಿಥಿ ಪಾತ್ರದಲ್ಲಿ ಹೀಗೆ ಬಂದು ಹಾಗೆ ಹೋಗುತ್ತಾರೆ. ಈ ಇಬ್ಬರ ಜೋಡಿ ಬೆಳ್ಳಿ ಪರದೆಯ ಮೇಲೆ ಸೂಪರ್ ಹಿಟ್ ಆಗಿದೆ. ಈಗ ನಿಜ ಜೀವನದಲ್ಲೂ ಜೋಡಿ ಆಗಿದ್ದಾರೆ. ವಿಜಯ್ ಅವರಿಗೆ ಪತ್ನಿ ಸಂಗೀತ ಜೊತೆಗೆ ವಿಚ್ಛೇದನ ದೊರಕಿದೆ ಬಳಿಕ ತ್ರಿಷಾ ಅವರೊಟ್ಟಿಗೆ ವಿವಾಹವಾಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭೀಮನ ಅಮವಾಸ್ಯೆ ವಿಶೇಷ: ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ! – Kannada News | MM Hills Packed with Devotees for Bheemana Amavasya Special Celebrations

ಚಾಮರಾಜನಗರ, ಆಗಸ್ಟ್ 12: ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಾದಪ್ಪನಿಗೆ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನಡೆಯುತ್ತಿವೆ. ನಿನ್ನೆಯಿಂದಲೇ ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದ್ದಾರೆ. ದೇವಸ್ಥಾನದ ಆವರಣ ಹಾಗೂ ಪ್ರಾಂಗಣವನ್ನು ವಿದ್ಯುತ್ ದೀಪಗಳಿಂದ ಅದ್ಭುತವಾಗಿ ಅಲಂಕರಿಸಲಾಗಿದೆ. ಭಕ್ತರು ಬೆಳ್ಳಿ ರಥ, ಚಿನ್ನದ ರಥೋತ್ಸವ ಸೇರಿದಂತೆ ವಿವಿಧ ಹರಕೆ ಸೇವೆಗಳನ್ನು ನೆರವೇರಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

 

Source link

ದುಲೀಪ್ ಟ್ರೋಫಿ ಟೂರ್ನಿಗೆ 6 ತಂಡಗಳು ಪ್ರಕಟ – Kannada News | Duleep trophy 2026 All Squads

ರಾಷ್ಟ್ರೀಯ ರೆಡ್-ಬಾಲ್ ಕ್ರಿಕೆಟ್ ಸೀಸನ್ ಆರಂಭವನ್ನು ಸೂಚಿಸುವ ಪ್ರಸಿದ್ಧ ‘ದುಲೀಪ್ ಟ್ರೋಫಿ‘ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ಆರು ವಲಯ ತಂಡಗಳ ನಡುವಣ ಈ ರೋಚಕ ಕದನಕ್ಕಾಗಿ ಎಲ್ಲಾ ತಂಡಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಆರೂ ವಲಯ ತಂಡಗಳಲ್ಲಿ ಸ್ಥಾನ ಪಡೆದಿರುವ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…

ವೆಸ್ಟ್ ಝೋನ್ (ಪಶ್ಚಿಮ ವಲಯ): ರುತುರಾಜ್ ಗಾಯಕ್ವಾಡ್ (ನಾಯಕ), ಶಮ್ಸ್ ಮುಲಾನಿ, ಪೃಥ್ವಿ ಶಾ, ಸರ್ಫರಾಝ್ ಖಾನ್, ಮುಶೀರ್ ಖಾನ್, ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಹರ್ವಿಕ್ ದೇಸಾಯಿ, ಉರ್ವಿಲ್ ಪಟೇಲ್, ಶಿವಾಲಿಕ್ ಶರ್ಮಾ, ಸಿದ್ಧಾರ್ಥ್ ದೇಸಾಯಿ, ಅತಿತ್ ಶೇಠ್, ಮುಕೇಶ್ ಚೌಧರಿ, ಜೇಮೀತ್ ಪಟೇಲ್.

ಸೆಂಟ್ರಲ್ ಝೋನ್ (ಕೇಂದ್ರ ವಲಯ): ರಜತ್ ಪಟಿದಾರ್ (ನಾಯಕ), ರಿಂಕು ಸಿಂಗ್, ಆರ್ಯನ್ ಜುಯಲ್, ಕುನಾಲ್ ಸಿಂಗ್ ರಾಥೋಡ್, ಸರಂಶ್ ಜೈನ್, ಅಮನ್ ಮೊಖಾಡೆ, ಕುನಾಲ್ ಚಂದೇಲಾ, ಜೀಶನ್ ಅನ್ಸಾರಿ, ಆರ್ಯನ್ ಪಾಂಡೆ, ಅರ್ಷದ್ ಖಾನ್, ಆಯುಷ್ ಪಾಂಡೆ, ಯಶ್ ರಾಥೋಡ್, ಹರ್ಷ್ ದುಬೆ, ಯಶ್ ಠಾಕೂರ್, ನಾಚಿಕೇತ್ ಭೂತೆ.

ಈಸ್ಟ್ ಝೋನ್ (ಪೂರ್ವ ವಲಯ): ಇಶಾನ್ ಕಿಶನ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಮನ್ಯು ಈಶ್ವರನ್, ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಶಹಬಾಝ್ ಅಹ್ಮದ್, ಕುಮಾರ್ ಕುಶಾಗ್ರ, ಸುದೀಪ್ ಕುಮಾರ್ ಘರಾಮಿ, ಸೂರಜ್ ಸಿಂಧು ಜೈಸ್ವಾಲ್, ಶಿಖರ್ ಮೋಹನ್, ಅನುಕೂಲ್ ರಾಯ್, ವಿರಾಟ್ ಸಿಂಗ್, ಸುಭ್ರಾಂಶು ಸೇನಾಪತಿ, ಡೆನಿಶ್ ದಾಸ್, ಅಭಿಜಿತ್ ಸರ್ಕಾರ್.

ಸೌತ್ ಝೋನ್ (ದಕ್ಷಿಣ ವಲಯ): ತಿಲಕ್ ವರ್ಮಾ (ನಾಯಕ), ರಿಕ್ಕಿ ಭುಯಿ, ಅಭಿನವ್ ತೇಜ್ರಾನಾ, ಶೇಖ್ ರಶೀದ್, ಕೆ. ಹಿಮತೇಜ, ಸ್ಮರಣ್ ರವಿಚಂದ್ರನ್, ಎನ್. ಜಗದೀಶನ್, ಕರುಣ್ ನಾಯರ್, ಟಿ. ತ್ಯಾಗರಾಜನ್, ಶ್ರೇಯಸ್ ಗೋಪಾಲ್, ಸಾಯಿ ತೇಜ, ಟಿ. ವಿಜಯ್, ವಿದ್ವತ್ ಕಾವೇರಪ್ಪ, ಅಮನ್ ಖಾನ್.

ನಾರ್ತ್ ಝೋನ್ (ಉತ್ತರ ವಲಯ): ಕನ್ಹಯ್ಯಾ ವಾಧವನ್ (ನಾಯಕ), ಆಯುಷ್ ಬದೋನಿ (ಉಪನಾಯಕ), ಸನತ್ ಸಾಂಗ್ವಾನ್, ಕಮ್ರಾನ್ ಇಕ್ಬಾಲ್, ಯಶ್ ಧುಲ್, ಆಯುಷ್ ದೋಸೇಜಾ, ಅಬ್ದುಲ್ ಸಮದ್, ನಿಶಾಂತ್ ಸಿಂಧು, ಅರ್ಜುನ್ ಶರ್ಮಾ, ಅಬಿದ್ ಮುಷ್ತಾಕ್, ಅರ್ಷದೀಪ್ ಸಿಂಗ್, ಸುನಿಲ್ ಕುಮಾರ್, ಅನ್ಶುಲ್ ಕಂಬೋಜ್, ಯುಧ್ವೀರ್ ಸಿಂಗ್, ನಿಖಿಲ್ ಕಶ್ಯಪ್.

ಈಶಾನ್ಯ ವಲಯ (ನಾರ್ತ್ ಈಸ್ಟ್ ಝೋನ್): ಜೊನಾಥನ್ ರೊಂಗ್‌ಸೆನ್ (ನಾಯಕ), ಬಿಶ್ವರ್ಜಿತ್ ಸಿಂಗ್ ಕೊಂಥೌಜಮ್ (ಉಪನಾಯಕ), ಟೆಚಿ ನೇರಿ, ಪ್ರಿಯೋಜಿತ್, ರೊನಾಲ್ಡ್ ಮೈಟೆಯಿ, ಜೋತಿನ್ ಸಿಂಗ್ ಫೀರೋಯಿಜಮ್, ಸುಭಾಯಂಗ್‌ಡೊ ಕಿಶನ್, ಆಕಾಶ್ ಕುಮಾರ್ ಚೌಧರಿ, ಜೋಸೆಫ್ ಲಾಲ್‌ಥಾನ್‌ಖುಮಾ, ಲಾಲ್ರೆಂಪೌಯಾ, ಇಮ್ಲಿವಾಟಿ ಲೆಮ್ಟೂರ್, ವಿನೋ ಜಿ ಝಿಮೋಮಿ, ರಾಬಿನ್ ಲಿಂಬೂ, ಆಶಿಶ್ ಥಾಪಾ.

ಯಾವ ರಾಜ್ಯ ಯಾವ ವಲಯದಲ್ಲಿ?

ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ 6 ಪ್ರಮುಖ ಭೌಗೋಳಿಕ ವಲಯಗಳ ಅಡಿಯಲ್ಲಿ ಬರುವ ರಾಜ್ಯಗಳು ಹಾಗೂ ಕ್ರಿಕೆಟ್ ಸಂಸ್ಥೆಗಳ ಸಂಪೂರ್ಣ ವಿವರ ಇಲ್ಲಿದೆ.

  1. ಸೌತ್ ಝೋನ್ (ದಕ್ಷಿಣ ವಲಯ): ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಹೈದರಾಬಾದ್, ಗೋವಾ ಮತ್ತು ಪಾಂಡಿಚೇರಿ
  2. ವೆಸ್ಟ್ ಝೋನ್ (ಪಶ್ಚಿಮ ವಲಯ): ಮುಂಬೈ, ಮಹಾರಾಷ್ಟ್ರ, ಗುಜರಾತ್, ಸೌರಾಷ್ಟ್ರ ಮತ್ತು ಬರೋಡಾ.
  3. ಈಸ್ಟ್ ಝೋನ್ (ಪೂರ್ವ ವಲಯ): ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಬಿಹಾರ, ಅಸ್ಸಾಂ ಮತ್ತು ತ್ರಿಪುರ.
  4. ಸೆಂಟ್ರಲ್ ಝೋನ್ (ಕೇಂದ್ರ ವಲಯ): ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರಾಖಂಡ, ವಿದರ್ಭ ಹಾಗೂ ರೈಲ್ವೇಸ್ ತಂಡ.
  5. ನಾರ್ತ್ ಝೋನ್ (ಉತ್ತರ ವಲಯ): ದೆಹಲಿ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಚಂಡೀಗಢ ಹಾಗೂ ಸರ್ವಿಸಸ್ ತಂಡ.
  6. ನಾರ್ತ್ ಈಸ್ಟ್ ಝೋನ್ (ಈಶಾನ್ಯ ವಲಯ): ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.

ಈ ಆರು ವಲಯಗಳ ತಂಡಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸಲಿದ್ದಾರೆ. ಅಂದರೆ, ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಯಾ ವಲಯದ ಆಟಗಾರರನ್ನೇ ಈ ಬಾರಿಯ ದುಲೀಪ್ ಟ್ರೋಫಿಗೆ  ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ‘ಕಿಂಗ್ ಆಫ್ ಗಾಲೆ’ಯ ಬಗ್ಗೆ ಎಚ್ಚರಿಕೆ!

ದುಲೀಪ್ ಟ್ರೋಫಿ ಯಾವಾಗ ಶುರು?

ದುಲೀಪ್ ಟ್ರೋಫಿ 2026ರ ಟೂರ್ನಿಯು ಆಗಸ್ಟ್ 23, 2026 ರಿಂದ ಆರಂಭವಾಗಲಿದೆ. ಈ ಟೂರ್ನಿಯ ಎಲ್ಲಾ ಪಂದ್ಯಗಳು ಬೆಂಗಳೂರಿನ BCCI ಸೆಂಟರ್ ಆಫ್ ಎಕ್ಸಲೆನ್ಸ್ (COE) ಮೈದಾನದಲ್ಲಿ ನಡೆಯಲಿವೆ.

Source link

Exit mobile version