ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು, ತಪ್ಪದೇ ನೋಡಿ

Source link

Video: ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ

ಜನಸಂಚಾರ ಹೆಚ್ಚಿದ್ದ ರಸ್ತೆಯಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಬೈಕ್ ಸವಾರನೊಬ್ಬ ಸ್ಪೀಡ್ ಬ್ರೇಕರ್‌ನ್ನು ಗಮನಿಸದೇ ವೇಗದಲ್ಲೇ ದಾಟಿದ್ದರಿಂದ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದು ಬೆನ್ನೆಲುಬಿಗೆ ಗಂಭೀರ ಪೆಟ್ಟಾಗಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸವಾರನ ನಿರ್ಲಕ್ಷ್ಯ ಮತ್ತು ಅತಿವೇಗವೇ ಈ ಅಪಘಾತಕ್ಕೆ ಕಾರಣವಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು – Kannada News | Bengaluru CNG Price Increased by Rs 2: Commuters and Drivers Worried

ಬೆಂಗಳೂರು, ಮೇ 23: ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನೆಲ್ಲೇ ಸಿಎನ್​​ಜಿ ಬೆಲೆಯೂ ಏರಿಕೆಯಾಗಿದೆ. ಕಂಪನಿಗಳು 9 ದಿನದಲ್ಲಿ ಮೂರನೇ ಬಾರಿ ಸಿಎನ್‌ಜಿ ದರ ಏರಿಸಿವೆ. ಬೆಂಗಳೂರಿನಲ್ಲೂ CNG ದರ 2 ರೂಪಾಯಿ ಏರಿಕೆಯಾಗಿದ್ದು, ಕೆಜಿ ಸಿಎನ್​​ಜಿ 93 ರೂಪಾಯಿಯಿಂದ 95 ರೂಪಾಯಿಗೆ ಹೆಚ್ಚಳವಾಗಿದೆ. ಇದರಿಂದ ವಾಹನ ಸವಾರರು ಕಂಗಾಲಾಗಿದ್ದಾರೆ. ಶಾಂತಿನಗರದ ಗಿಲ್ ಗ್ಯಾಸ್ ಮುಂಭಾಗದಲ್ಲಿ ಸಿಎನ್‌ಜಿಗಾಗಿ ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಗಂಟೆಗಳ ಕಾಲ ಕಾದರೂ ಇಂಧನ ಸಿಗುವ ಯಾವುದೇ ಖಾತರಿಯಿಲ್ಲ. ಇದು ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ. ಈ ನಿರಂತರ ಬೆಲೆ ಏರಿಕೆ ಮತ್ತು ಇಂಧನ ಪೂರೈಕೆ ಸಮಸ್ಯೆಯಿಂದ ಬೆಂಗಳೂರಿನಲ್ಲಿ ಜೀವನ ನಡೆಸುವುದು ದುಸ್ತರವಾಗಿದೆ ಎಂದಿದ್ದಾರೆ.

ವರದಿ: ಅರುಣ್ ಕುಮಾರ್ ಮೆಟ್ರೋ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಶಿರಸಿಯಲ್ಲಿ ನಡುರಸ್ತೆಯಲ್ಲೇ ನಡುಕ ಹುಟ್ಟಿಸಿದ ಗ್ಯಾಂಗ್‌ವಾರ್!: 6 ಯುವಕರ ವಿರುದ್ಧ ಪ್ರಕರಣ ದಾಖಲು – Kannada News | Sirsi Youth Brawl: After Bike Accident, Gang War Erupts; Police Take Action

ಶಿರಸಿ, ಮೇ.23: ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪಟ್ಟಣವಾದ ಶಿರಸಿಯಲ್ಲಿ ಕೇವಲ ಒಂದು ಬೈಕ್ ಅಪಘಾತದ ವಿಚಾರವಾಗಿ ಎರಡು ಗುಂಪುಗಳ ನಡುವೆ ಭೀಕರ ಗ್ಯಾಂಗ್‌ವಾರ್ ನಡೆದಿದೆ. ನಗರದ ಸಿಂಪಿಗಲ್ಲಿಯ ನಡುರಸ್ತೆಯಲ್ಲೇ ಯುವಕರ ಎರಡು ಗುಂಪುಗಳು ಪರಸ್ಪರ ಅಟ್ಟಾಡಿಸಿಕೊಂಡು ಮಾರಾಮಾರಿ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಶಿರಸಿ ಟೌನ್ ಪೊಲೀಸ್ ಠಾಣೆಯಲ್ಲಿ 6 ಯುವಕರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮೇ 21ರ ರಾತ್ರಿ ಶಿರಸಿಯ ದೇವಿಕೆರೆ ಬಳಿ ದ್ವಿಚಕ್ರ ವಾಹನಗಳ ನಡುವೆ ಸಣ್ಣದೊಂದು ಅಪಘಾತ ನಡೆದಿದೆ. ಈ ಅಪಘಾತದ ವಿಚಾರವಾಗಿ ಎರಡು ಕೋಮುಗಳ ಯುವಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ವೈಷಮ್ಯ ಬೆಳೆದಿತ್ತು. ಇದೇ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡ ಯುವಕರ ಗುಂಪು, ಸಿಂಪಿಗಲ್ಲಿಯಲ್ಲಿ ಮುಖಾಮುಖಿಯಾದಾಗ ಏಕಾಏಕಿ ಬೀದಿಯಲ್ಲೇ ರಣರಂಗ ಸೃಷ್ಟಿಯಾಗಿದೆ.

ಇದನ್ನೂ ಓದಿ: ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!

ನಡುರಸ್ತೆಯಲ್ಲಿ ಯುವಕರು ಪರಸ್ಪರ ಗೂಸಾ ಮಾಡಿಕೊಳ್ಳುತ್ತಿದ್ದ ಭೀಕರ ದೃಶ್ಯಗಳು ಸ್ಥಳೀಯ ಸಿಸಿಕ್ಯಾಮರಾದಲ್ಲಿ (CCTV) ಸರೆಆಗಿವೆ. ಈ ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸಿರುವ ಶಿರಸಿ ನಗರ ಠಾಣೆಯ ಪೊಲೀಸರು, ಗಲಾಟೆಯಲ್ಲಿ ಭಾಗಿಯಾಗಿದ್ದ ಅಯಾನ್ ಟಿನಮೇಕ‌ರ್, ಸರ್ಫರಾಜ್ ಟಿನಮೇಕ‌ರ್, ಆದಿಲ್​ ಸಕ್ಕರಖಾನ್, ಅಭಯ್ ಹುದಾರ್‌, ಸರ್ವೇಶ ಹಿರೇಮಠ ಮತ್ತು ಆಕಾಶ್ ಕುಂದನಗಾರ ಎಂಬ ಆರು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:38 pm, Sat, 23 May 26

Source link

RCB ಆಟಗಾರ ಗಾಯಾಳು…  ಪ್ಲೇಆಫ್​ ಪಂದ್ಯಕ್ಕೆ ಅಲಭ್ಯ!

Source link

Travis Head: ನಾನು ಮುಂದೆ ಏನು ಮಾಡ್ತೇನೆ ಎಂಬುದು ಊಹಿಸಲು ಸಾಧ್ಯವಿಲ್ಲ! – Kannada News | Travis Head Reacts After Virat Kohli’s Handshake Refusal

IPL 2026: ಐಪಿಎಲ್ ಪಂದ್ಯವೊಂದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಡುವೆ ನಡೆದ ಆನ್‌-ಫೀಲ್ಡ್ ಜಟಾಪಟಿ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಮೈದಾನದಲ್ಲಿ ನಡೆದಿದ್ದೇನು?

  • ವಿರಾಟ್ ಕೊಹ್ಲಿಯ ಸಂಭ್ರಮ: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ಪರ ಟ್ರಾವಿಸ್ ಹೆಡ್ (26) ರಾಸಿಖ್ ಸಲಾಮ್  ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದರು. ಇತ್ತ ಔಟಾಗಿ ಹೊರ ನಡೆಯುತ್ತಿದ್ದ ಹೆಡ್ ಅವರ ಮುಂದೆ ಆಕ್ರೋಶಭರಿತರಾಗಿ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದರು. ಇದಾಗ್ಯೂ ಟ್ರಾವಿಸ್ ಹೆಡ್ ಯಾವುದೇ ತಿರುಗೇಟು ನೀಡಿರಲಿಲ್ಲ.
  • ಹೆಡ್ ಸವಾಲು: 256 ರನ್​ಗಳ ಕಠಿಣ ಗುರಿ ಬೆನ್ನತ್ತಲು ಬಂದ ವಿರಾಟ್ ಕೊಹ್ಲಿಗೆ ಆಕ್ರಮಣಕಾರಿಯಾಗಿ ಆಡುವಂತೆ ಟ್ರಾವಿಸ್ ಹೆಡ್ ಸವಾಲು ಹಾಕಿದ್ದಾರೆ. ಅಂದರೆ ಈ ಪಂದ್ಯದಲ್ಲಿ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದರು. ಈ ವೇಳೆ ಬಿಗ್ ಶಾಟ್ ಆಡು ನೋಡೋಣ ಎಂದು ಹೆಡ್ ಕೆಣಕಿದ್ದಾರೆ.
  • ಕೊಹ್ಲಿ ತಿರುಗೇಟು: ಟ್ರಾವಿಸ್ ಹೆಡ್ ಸವಾಲಿಗೆ ತಿರುಗೇಟು ನೀಡಿದ ವಿರಾಟ್ ಕೊಹ್ಲಿ, “ಈಗ ನೀನು ಇಂಪ್ಯಾಕ್ಟ್ ಸಬ್‌ ಆಟಗಾರ ಅಲ್ಲ, ಬಂದು ಎರಡು ಓವರ್ ಬೌಲಿಂಗ್ ಮಾಡು” ಎಂದು ವ್ಯಂಗ್ಯವಾಡಿದ್ದಾರೆ.
  • ಹೆಡ್ ಕಿಚಾಯಿಸುವಿಕೆ: ಈ ಮಾತಿನ ಚಕಮಕಿ ಮುಕ್ತಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ(15) ಔಟ್ ಆಗಿದ್ದಾರೆ. ಇತ್ತ ಕೊಹ್ಲಿ ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಹೆಡ್, “ಫ್ರೆಂಡ್, ನಾನು ಬೌಲಿಂಗ್ ಮಾಡಲು ಬರುವ ಮುನ್ನವೇ ನೀನು ಔಟ್ ಆಗಿ ಹೋದೆ!” ಎಂದು ಕಿಚಾಯಿಸಿದ್ದಾರೆ.
  • ಹಸ್ತಲಾಘವ ನಿರಾಕರಣೆ: ಈ ಜಟಾಪಟಿ ಮತ್ತು ಪಂದ್ಯದಲ್ಲಿ ತಂಡದ ಸೋಲಿನ ನಿರಾಸೆಯಿಂದ ಕೋಪಗೊಂಡ ಕೊಹ್ಲಿ, ಪಂದ್ಯ ಮುಗಿದ ನಂತರ ಸಾಂಪ್ರದಾಯಿಕ ಹಸ್ತಲಾಘವದ ವೇಳೆ ಟ್ರಾವಿಸ್ ಹೆಡ್‌ಗೆ ಶೇಕ್ ಹ್ಯಾಂಡ್ ನೀಡದೇ ಮೈದಾನದಿಂದ ಹೊರನಡೆದಿದ್ದರು.

ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಟ್ರಾವಿಸ್ ಹೆಡ್ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಅದು ಕೂಡ ತಾನು ಬೌಲಿಂಗ್ ಮಾಡಿದ ಫೋಟೋದೊಂದಿಗೆ ಎಂಬುದು ವಿಶೇಷ.

ಈ ಮ್ಯಾಚ್​ನಲ್ಲಿ ಟ್ರಾವಿಸ್ ಹೆಡ್ ಒಂದು ಓವರ್​ ಎಸೆದಿದ್ದರು. ಅಲ್ಲದೆ ಕೇವಲ 7 ರನ್ ನೀಡಿ ರಜತ್ ಪಾಟಿದಾರ್ ವಿಕೆಟ್ ಅನ್ನು ಪಡೆದಿದ್ದರು. ಇದೇ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೆಡ್ “Keep the body guessing” ಎಂಬ ಕ್ಯಾಪ್ಷನ್ ಹಂಚಿಕೊಂಡಿದ್ದಾರೆ.

ಎದುರಾಳಿ ಆಟಗಾರ ಅಥವಾ ಬ್ಯಾಟರ್ ಮುಂದಿನ ನಡೆ ಏನು ಎಂಬುದನ್ನು ಊಹಿಸಲು ಸಾಧ್ಯವಾಗದಂತೆ ಗೊಂದಲದಲ್ಲಿ ಇಡುವುದನ್ನು ಈ ವಾಕ್ಯ ಸೂಚಿಸುತ್ತದೆ.

ವಿರಾಟ್ ಕೊಹ್ಲಿ ಅವರು ಹೆಡ್‌ಗೆ “ಬಂದು ಬೌಲಿಂಗ್ ಮಾಡು” ಎಂದು ಸವಾಲು ಹಾಕಿದ್ದರು. ಆದರೆ, ಬ್ಯಾಟರ್ ಆಗಿರುವ ಹೆಡ್ ಹಠಾತ್ ಆಗಿ ಬೌಲಿಂಗ್ ಮಾಡಿ ವಿಕೆಟ್ ಪಡೆದರು.

ಅಂದರೆ, “ನಾನು ಮುಂದೆ ಏನು ಮಾಡುತ್ತೇನೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ, ಎಲ್ಲರನ್ನೂ ನಾನು ಗೊಂದಲದಲ್ಲಿ ಇಡುತ್ತೇನೆ” ಎಂಬ ಮಾರ್ಮಿಕ ಅರ್ಥದಲ್ಲಿ ಟ್ರಾವಿಸ್ ಹೆಡ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ಬೌಲಿಂಗ್ ಮಾಡಿ ತೋರಿಸು ಎಂದ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಗೆದ್ದು ಬೀಗಿದ ಎಸ್​ಆರ್​ಹೆಚ್​:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 200 ರನ್​ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಎಸ್​ಆರ್​ಹೆಚ್​ 55 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Published On – 2:04 pm, Sat, 23 May 26

Source link

TV9 Kannada News Live: ಹೆಲಿಕಾಪ್ಟರ್ ಪತನದಲ್ಲಿ ಬದುಕುಳಿದ ಸೈನಿಕರ ಸೆಲ್ಫಿ, ಬೇಗ ಬರಲಿದೆ ರಾಮಾಯಣ ಸಿನಿಮಾ, ಮಧ್ಯಾಹ್ನದವರೆಗಿನ ಪ್ರಮುಖ ಸುದ್ದಿಗಳು – Kannada News | From Army Chopper Escape to Mass Job Offers and Ramayana Buzz: Today’s Top Stories

ನವದೆಹಲಿ, ಮೇ 23: ಲಡಾಖ್‌ನ ಲೇಹ್ ಬಳಿಯ ಪರ್ವತ ಪ್ರದೇಶವಾದ ಟ್ಯಾಂಗ್ಸ್ಟೆಯಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಒಂದು ಪತನಗೊಂಡಿದ್ದು, ಅದರಲ್ಲಿದ್ದ ಮೂವರು ಹಿರಿಯ ಸೇನಾ ಅಧಿಕಾರಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇ 20 ರಂದು ನಡೆದ ಈ ಘಟನೆಯ ವಿವರಗಳನ್ನು ಸೇನಾ ಅಧಿಕಾರಿಗಳು ಇಂದು ಬೆಳಿಗ್ಗೆ ಅಧಿಕೃತವಾಗಿ ದೃಢಪಡಿಸಿದ್ದಾರೆ.
ಸೇನೆಯ ‘ಚೀತಾ’ ಹೆಸರಿನ ಸಿಂಗಲ್-ಎಂಜಿನ್ ಹೆಲಿಕಾಪ್ಟರ್‌ನಲ್ಲಿ ಒಬ್ಬರು ಲೆಫ್ಟಿನೆಂಟ್ ಕರ್ನಲ್ ಮತ್ತು ಇಬ್ಬರು ಮೇಜರ್ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್ ಅನ್ನು ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬರು ಮೇಜರ್ ಚಲಾಯಿಸುತ್ತಿದ್ದರು. ಇವರೊಂದಿಗೆ 3ನೇ ಪದಾತಿ ದಳದ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿರುವ ಮೇಜರ್ ಜನರಲ್ ಸಚಿನ್ ಮೆಹ್ತಾ ಅವರು ಪ್ರಯಾಣಿಕರಾಗಿ ಅದೇ ವಿಮಾನದಲ್ಲಿದ್ದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

51 ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಿಸಿದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ(Narendra Modi)ಅವರು ದೇಶದ 51,000 ಕ್ಕೂ ಹೆಚ್ಚು ಯುವಕರಿಗೆ ರೈಲ್ವೆ, ಬ್ಯಾಂಕಿಂಗ್, ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೇಮಕಾತಿ ಪತ್ರಗಳನ್ನು ವರ್ಚುವಲ್ ಮೂಲಕ ವಿತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮ್ಮ ಇತ್ತೀಚಿನ ಐದು ದೇಶಗಳ ಪ್ರವಾಸದ ಮಹತ್ವವನ್ನು ವಿವರಿಸುವ ಮೂಲಕ ರಾಜಕೀಯ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.
ನಾನು ಕೇವಲ ಐದು ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡು ಬಂದಿಲ್ಲ, ಬದಲಿಗೆ ಈ ಅವಧಿಯಲ್ಲಿ ಡಜನ್‌ಗಟ್ಟಲೆ ದೇಶಗಳ ಪ್ರಮುಖ ಜಾಗತಿಕ ಕಂಪನಿಗಳ ನಾಯಕರನ್ನು ಭೇಟಿ ಮಾಡಿ ವಿವರವಾದ ಚರ್ಚೆ ನಡೆಸಿದ್ದೇನೆ ಎಂದು ಪ್ರಧಾನಿ ಹೇಳಿದರು. ಇಂದು ಇಡೀ ಜಗತ್ತು ಭಾರತದ ತಾಂತ್ರಿಕ ಪ್ರಗತಿ ಮತ್ತು ಇಲ್ಲಿನ ಯುವಶಕ್ತಿಯ ಬಗ್ಗೆ ಅಪಾರ ಉತ್ಸಾಹ ಹೊಂದಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಯುವಕರಿಗೆ ದೊಡ್ಡ ಮನ್ನಣೆ ಮತ್ತು ಅವಕಾಶಗಳು ಸಿಗಬೇಕೆಂಬುದೇ ನನ್ನ ವಿದೇಶಿ ಪ್ರವಾಸಗಳ ಮುಖ್ಯ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮತ್ತಷ್ಟು ಓದಿ: 51 ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಿಸಿದ ಪ್ರಧಾನಿ

ಅಂದುಕೊಂಡಿದ್ದಕ್ಕಿಂತ ಮೊದಲೇ ಬರಲಿದೆ ‘ರಾಮಾಯಣ’ ಸಿನಿಮಾ; ‘ಟಾಕ್ಸಿಕ್’ ಮೇಲೆ ಒತ್ತಡ?
ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ರಾಮಾಯಣ: ಪಾರ್ಟ್ 1’ (Ramayana) ಸಿನಿಮಾದ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾ ಬಗ್ಗೆ ಗಾಂಧಿನಗರದಿಂದ ಹಿಡಿದು ಬಾಲಿವುಡ್‌ವರೆಗೂ ಭಾರಿ ಚರ್ಚೆ ಶುರುವಾಗಿದೆ. ಈ ಬಿಗ್ ಬಜೆಟ್ ಸಿನಿಮಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ (ನವೆಂಬರ್ 5-6 ಸಮಯದಲ್ಲಿ) ತೆರೆಗೆ ಬರಲಿದೆ ಎಂದು ತಂಡ ಹೇಳಿತ್ತು. ಆದರೆ, ಈಗ ಸಿಗುತ್ತಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, ಅಂದುಕೊಂಡಿದ್ದಕ್ಕಿಂತ ಒಂದು ವಾರ ಮೊದಲೇ ಅಂದರೆ ಅಕ್ಟೋಬರ್ 30, 2026ರಂದೇ ಸಿನಿಮಾ ಥಿಯೇಟರ್‌ಗೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ.
ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ದೀಪಾವಳಿ ಹಬ್ಬದ ರಜೆಯ ದಿನಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಆದರೆ, ಹಬ್ಬದ ವಾರದಲ್ಲೇ ರಿಲೀಸ್ ಮಾಡುವ ಬದಲು, ಒಂದು ವಾರ ಮೊದಲೇ ಸಿನಿಮಾ ರಿಲೀಸ್ ಮಾಡಿ ಸಿನಿಮಾಗೆ ಬಾಯ್ಮಾತಿನ ಪ್ರಚಾರ ನೀಡಲು ತಂಡ ಪ್ಲಾನ್ ಮಾಡಿಕೊಂಡಿದೆ ಎಂದು ವರದಿ ಆಗಿದೆ.

ಮತ್ತಷ್ಟು ಓದಿ: ಮೊದಲೇ ಬರಲಿದೆ ‘ರಾಮಾಯಣ’ ಸಿನಿಮಾ; ‘ಟಾಕ್ಸಿಕ್’ ಮೇಲೆ ಒತ್ತಡ?

1 ಗೆಲುವು, 2 ತಂಡಗಳ ಜಯ: ಹೀಗಿದೆ ಪಂಜಾಬ್ ಕಿಂಗ್ಸ್​ ಪ್ಲೇಆಫ್ ಲೆಕ್ಕಾಚಾರ
ಇಂಡಿಯನ್ ಪ್ರೀಮಿಯರ್ ಲೀಗ್​ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೂರು ತಂಡಗಳು ಪ್ಲೇಆಫ್​ಗೇರಿದರೆ, ಮೂರು ತಂಡಗಳು ಪ್ಲೇಆಫ್​ ರೇಸ್​ನಲ್ಲಿದೆ. ಅಂದರೆ ನಾಲ್ಕನೇ ಸ್ಥಾನಕ್ಕಾಗಿ ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡಗಳ ನಡುವೆ ನೇರ ಪೈಪೋಟಿ ಇದೆ.
ಈ ಪೈಪೋಟಿಯಲ್ಲಿರುವ ಪಂಜಾಬ್ ಕಿಂಗ್ಸ್ ತಂಡವು ಇಂದು (ಮೇ.23) ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಪಂಜಾಬ್ ಪಡೆ ಒಟ್ಟು 15 ಅಂಕಗಳನ್ನು ಪಡೆಯಲಿದೆ. ಇದಾಗ್ಯೂ ಪಂಜಾಬ್ ಕಿಂಗ್ಸ್ ತಂಡ ನೇರವಾಗಿ ಪ್ಲೇಆಫ್​ಗೇರುವುದಿಲ್ಲ. ಬದಲಾಗಿ ಇತರೆ ಎರಡು ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!

ಬಳ್ಳಾರಿ, ಮೇ 23: ಜಿಲ್ಲೆಯ ಕಾಂಗ್ರೆಸ್ ಮಹಾನಗರಪಾಲಿಕೆ ಸದಸ್ಯೆ ಉಮಾದೇವಿ ಅವರ ಪತಿ ಶಿವರಾಜ್ ವಿರುದ್ಧ ಬಡವರಿಗೆ ಭೂಮಿ ನೀಡುವ ನೆಪದಲ್ಲಿ ಮಹಾ ವಂಚನೆ ನಡೆಸಿದ ಆರೋಪ ಕೇಳಿಬಂದಿದೆ. ಬೂದಿಹಾಳ ಸರ್ವೇ ನಂಬರ್ 125ರಲ್ಲಿ ಸುಮಾರು 7.87 ಎಕರೆ ಸರ್ಕಾರಿ ಹಳ್ಳದ ಜಾಗವನ್ನು ಒತ್ತುವರಿ ಮಾಡಿ ಶಿವರಾಜ್ ಅವರು ಲೇಔಟ್ ನಿರ್ಮಿಸಿದ್ದರು. ಈ ಲೇಔಟ್‌ನಲ್ಲಿ ಬಡ ಕುಟುಂಬಗಳಿಗೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿಗಳಿಗೆ ಪ್ಲಾಟ್‌ಗಳನ್ನು ಮಾರಾಟ ಮಾಡಿದ್ದರು.

ಜನರು ಸಾಲ ಮಾಡಿ ಮನೆಗಳನ್ನು ನಿರ್ಮಿಸಿಕೊಂಡ ನಂತರ, ಜಿಲ್ಲಾಡಳಿತವು ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಇದರಿಂದ ವಂಚನೆಗೆ ಒಳಗಾದ ಬಡ ಕುಟುಂಬಗಳು ಬೀದಿಪಾಲಾಗಿವೆ. ನಮ್ಮದೇ ಸರ್ಕಾರವಿದೆ, ಭಯಪಡಬೇಡಿ ಎಂದು ಭರವಸೆ ನೀಡಿ ಶಿವರಾಜ್ ಹಣ ಪಡೆದಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಇದೀಗ ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಬಾಲಿವುಡ್ ದಿವಾ ಐಶ್ವರ್ಯಾ ರೈ ಬಚ್ಚನ್ ಅವರು ಮತ್ತೊಮ್ಮೆ ತಮ್ಮ ಸೌಂದರ್ಯವನ್ನು ಪ್ರದರ್ಶಿಸಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಡಿಸೈನರ್ ನೀಲಿ ಗೌನ್ ಧರಿಸಿ ಅತ್ಯಂತ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಐಶ್ವರ್ಯಾ, ಅಲ್ಲಿ ನೆರೆದಿದ್ದ ಜಾಗತಿಕ ಮಾಧ್ಯಮಗಳು ಮತ್ತು ಅಭಿಮಾನಿಗಳನ್ನು ನೋಡಿ ಮುಗುಳ್ನಗುತ್ತಾ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆನೇಕಲ್‌ನಲ್ಲಿ ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ – Kannada News | Bengaluru International Cricket Stadium inauguration : CM Siddaramaiah Lays Foundation Stone

ಆನೇಕಲ್‌ನಲ್ಲಿ ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ

ಆನೆಕಲ್, ಮೇ 23: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ದೇಶದ 2ನೇ ಅತಿ ದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ (International Stadium) ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಭವ್ಯ ಶಂಕುಸ್ಥಾಪನೆ ನೆರವೇರಿಸಿದರು. ಈ ಐತಿಹಾಸಿಕ ಯೋಜನೆಯ ಭೂಮಿ ಪೂಜೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಸ್ಥಳೀಯ ಶಾಸಕ ಆನೇಕಲ್ ಶಿವಣ್ಣ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ‘ಬೆಳ್ಳಿ ಗದೆ’ಯನ್ನು ಉಡುಗೊರೆಯಾಗಿ ನೀಡಿ, ಅಭಿನಂದಿಸಿ ಗೌರವಿಸಿದರು.

ಮುಖ್ಯಾಂಶಗಳು

  • ಆನೇಕಲ್‌ನ ಇಂಡ್ಲವಾಡಿಯಲ್ಲಿ 900 ಕೋಟಿ ವೆಚ್ಚದ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿಪೂಜೆ ನಡೆದಿದೆ.
  • ಶಾಸಕ ಆನೇಕಲ್ ಶಿವಣ್ಣ ಸಿಎಂ, ಡಿಸಿಎಂ ಅವರಿಗೆ ಬೆಳ್ಳಿ ಗದೆ ನೀಡಿ ಅಭಿನಂದಿಸಿದರು.
  • ಸೂರ್ಯನಗರದಲ್ಲಿ 80 ಸಾವಿರ ಆಸನ ಸಾಮರ್ಥ್ಯದ ದೇಶದ ಎರಡನೇ ದೊಡ್ಡ ಸ್ಟೇಡಿಯಂ ನಿರ್ಮಾಣವಾಗಲಿದೆ.

ಇನ್ನೆರಡು ವರ್ಷಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣ

ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ಬರೋಬ್ಬರಿ 100 ಎಕರೆ ಜಾಗದಲ್ಲಿ, ಸುಮಾರು 900 ಕೋಟಿ ರೂಪಾಯಿ ಭಾರಿ ವೆಚ್ಚದಲ್ಲಿ ಈ ಅತ್ಯಾಧುನಿಕ ಸ್ಟೇಡಿಯಂ ನಿರ್ಮಾಣವಾಗುತ್ತಿದೆ. 80,000 ಆಸನಗಳ ಬೃಹತ್ ಸಾಮರ್ಥ್ಯ ಹೊಂದಲಿರುವ ಈ ಕ್ರೀಡಾಂಗಣವು ಕೇವಲ 2 ರಿಂದ 3 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಬೃಹತ್ ಗಾತ್ರದ ಆಪಲ್ ಹಾರ ಹಾಗೂ ಮಹಿಳೆಯರ ಪೂರ್ಣಕುಂಭ ಕಲಶ ಮತ್ತು ಸಾಂಪ್ರದಾಯಿಕ ಕಲಾತಂಡಗಳ ವೈಭವದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಈ ಐತಿಹಾಸಿಕ ಸಮಾರಂಭದಲ್ಲಿ ಗೃಹಸಚಿವ ಡಾ. ಜಿ. ಪರಮೇಶ್ವರ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ಸಿಎಂ ಕಾನೂನು ಸಲಹೆಗಾರ ಪೊನಣ್ಣ ಹಾಗೂ ಶಾಸಕ ಕೃಷ್ಣಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ ಆನೇಕಲ್​​ ಬಳಿ ಹೊಸ ಕ್ರಿಕೆಟ್​​ ಸ್ಟೇಡಿಯಂಗೆ ನಾಳೆ ಗುದ್ದಲಿ ಪೂಜೆ: ಕ್ರೀಡಾಂಗಣದ ವಿಶೇಷತೆಗಳೇನು?

ಜಮೀರ್ ಅಹಮದ್ ಏನಂದ್ರು?

ಇದೇ ವೇಳೆ ಟಿವಿ9 ಗೆ ಪ್ರತಿಕ್ರಿಯಿಸಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ಸೂರ್ಯನಗರದಲ್ಲಿ ಕ್ರೀಡಾಂಗಣ ಮತ್ತು ಶಾಲೆ ನಿರ್ಮಿಸಬೇಕೆಂಬುದು ಜಾಗ ನೀಡಿದ ರೈತರ ಬಹಳ ದಿನಗಳ ಬೇಡಿಕೆಯಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಆರ್‌ಸಿಬಿ ಪಂದ್ಯದ ವೇಳೆ ಉಂಟಾದ ನೂಕುನುಗ್ಗಲು ಹಾಗೂ ದುರಂತದ ಪರಿಸ್ಥಿತಿಯ ಬಳಿಕ ಬೆಂಗಳೂರಿನ ಹೊರವಲಯದಲ್ಲಿ ಮತ್ತೊಂದು ಬೃಹತ್ ಕ್ರೀಡಾಂಗಣದ ಅವಶ್ಯಕತೆಯಿತ್ತು. ನಮ್ಮ ಸರ್ಕಾರದ ಅವಧಿಯಲ್ಲೇ ಈ ಯೋಜನೆ ಸಾಕಾರಗೊಳ್ಳುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version