ನೀವು 30ಕ್ಕಿಂತ 50ನೇ ವಯಸ್ಸಿನಲ್ಲಿ ಹೆಚ್ಚು ಚೈತನ್ಯಶೀಲರಾಗಿರಿ: ಪ್ರಧಾನಿ ಮೋದಿ – Kannada News | International Yoga Day 2026 Age Is Just a Number PM Modi Urges People to Stay More Energetic at 50 Than at 30

ಕೋಲ್ಕತ್ತಾ, ಜೂನ್ 21: ನೀವು 30ಕ್ಕಿಂತ 50ನೇ ವಯಸ್ಸಿನಲ್ಲಿ ಹೆಚ್ಚು ಚೈತನ್ಯಶೀಲರಾಗಿರಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕರೆ ನೀಡಿದ್ದಾರೆ. ಕೋಲ್ಕತ್ತಾದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ನೆರೆದಿದ್ದ ಸಾವಿರಾರು ಸಾರ್ವಜನಿಕರೊಂದಿಗೆ ಜಂಟಿಯಾಗಿ ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸಿದರು.

ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನವನ್ನು ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ವಿಶೇಷ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ. ವಯಸ್ಸಾಗುತ್ತಿದ್ದಂತೆ ಜನರು ಎದುರಿಸುವ ಆರೋಗ್ಯದ ಸವಾಲುಗಳನ್ನು ಯೋಗದ ಮೂಲಕ ಹೇಗೆ ಮೆಟ್ಟಿ ನಿಲ್ಲಬಹುದು ಎಂಬುದನ್ನು ಈ ಧ್ಯೇಯವಾಕ್ಯವು ಸಾರುತ್ತದೆ.

ವಯಸ್ಸಾದಂತೆ ದೇಹದ ನಮ್ಯತೆ (Flexibility) ಮತ್ತು ಮೂಳೆಗಳ ಬಲವನ್ನು ಕಾಪಾಡಿಕೊಳ್ಳಲು ಯೋಗ ಸಹಕಾರಿಯಾಗಿದೆ. ವೃದ್ಧಾಪ್ಯದಲ್ಲಿ ಕಾಡುವ ಮರೆವು, ಆತಂಕ ಹಾಗೂ ಒಂಟಿತನವನ್ನು ದೂರ ಇಟ್ಟು ಮಾನಸಿಕ ನೆಮ್ಮದಿ ನೀಡಲು ಯೋಗ ನೆರವಾಗುತ್ತದೆ.

ಮತ್ತಷ್ಟು ಓದಿ: International Yoga Day: ಈ ಬಾರಿ ಕೊಲ್ಕತ್ತಾದಲ್ಲೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಕಾರಣವೇನು?

ಜೀವನದ ಕೊನೆಯ ಹಂತದಲ್ಲಿ ಎದುರಾಗುವ ಏರಿಳಿತಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿಯನ್ನು ಯೋಗ ತುಂಬುತ್ತದೆ. ಹಿರಿಯ ನಾಗರಿಕರು ಯಾರ ಮೇಲೂ ಅವಲಂಬಿತರಾಗದೆ, ತಾವೇ ಸಕ್ರಿಯವಾಗಿ ಮತ್ತು ಉತ್ಸಾಹದಿಂದ ಬದುಕಲು ಯೋಗ ಉತ್ತೇಜನ ನೀಡುತ್ತದೆ. ವಯಸ್ಸಾದ ಮೇಲೂ ಯೌವನದ ಚೈತನ್ಯವನ್ನು ಉಳಿಸಿಕೊಳ್ಳಲು ಯೋಗ ಎಷ್ಟು ಮುಖ್ಯ ಎಂಬುದನ್ನು ಪ್ರಧಾನಿ ಮೋದಿ ಅವರು ಸ್ವತಃ ಯೋಗಾಸನಗಳನ್ನು ಮಾಡುವ ಮೂಲಕ ದೇಶದ ಜನರಿಗೆ ತೋರಿಸಿಕೊಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜೈಲಿಗೆ ಹೋಗಲಿರುವ ಪ್ರಭಾಸ್; ಆದರೆ ಅಭಿಮಾನಿಗಳಿಗೆ ಆತಂಕ ಬೇಡ – Kannada News | Prabhas starrer Spirit movie shooting to take place at Chanchalguda Jail

ಪ್ಯಾನ್-ಇಂಡಿಯಾ ಸ್ಟಾರ್ ನಟ ಪ್ರಭಾಸ್ (Prabhas) ಅವರು ಈಗ ‘ಸ್ಪಿರಿಟ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನಿಮಾಗೆ ಸ್ಟಾರ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು ಆ್ಯಕ್ಷನ್-ಕಟ್ ಹೇಳಿರುವುದರಿಂದ ನಿರೀಕ್ಷೆ ಜಾಸ್ತಿ ಇದೆ. ಈ ನಡುವೆ ಪ್ರಭಾಸ್ ಅವರು ಜೈಲಿಗೆ ಹೋಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಅಂದರೆ, ಅವರು ಜೈಲಿನ ಒಳಗೆ ಕಾಲಿಟ್ಟಿರುವುದು ‘ಸ್ಪಿರಿಟ್’ (Spirit) ಸಿನಿಮಾದ ಶೂಟಿಂಗ್ ಸಲುವಾಗಿ! ಅದಕ್ಕಾಗಿ ಚಿತ್ರತಂಡ ಸಂಪೂರ್ಣ ತಯಾರಿ ಮಾಡಿಕೊಂಡಿದೆ.

ಚಿತ್ರರಂಗದ ಲೇಟೆಸ್ಟ್ ಮಾಹಿತಿ ಪ್ರಕಾರ, ‘ಸ್ಪಿರಿಟ್’ ಚಿತ್ರದ ಅತ್ಯಂತ ಪ್ರಮುಖ ದೃಶ್ಯಗಳ ಚಿತ್ರೀಕರಣ ಹೈದರಾಬಾದ್‌ನ ಪ್ರಸಿದ್ಧ ಚಂಚಲಗೂಡ ಜೈಲಿನಲ್ಲಿ ನಡೆಯುತ್ತಿದೆ. ಪ್ರಭಾಸ್ ಈ ಶೂಟಿಂಗ್ ಶೆಡ್ಯೂಲ್‌ನಲ್ಲಿ ಭಾಗವಹಿಸಲಿದ್ದು, ಪ್ರಮುಖ ಆ್ಯಕ್ಷನ್ ಹಾಗೂ ಹೈ-ವೋಲ್ಟೇಜ್ ಸನ್ನಿವೇಶಗಳನ್ನು ಸೆರೆಹಿಡಿಯಲಾಗುತ್ತಿದೆ. ಈ ಜೈಲು ಶೆಡ್ಯೂಲ್ ಮುಗಿದ ಬೆನ್ನಲ್ಲೇ ಚಿತ್ರತಂಡ ತನ್ನ ಮುಂದಿನ ಹಂತದ ಚಿತ್ರೀಕರಣಕ್ಕೆ ಸಜ್ಜಾಗಲಿದೆ.

ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ‘ಸ್ಪಿರಿಟ್’ ಚಿತ್ರದಲ್ಲಿ ಬಾಲಿವುಡ್ ನಟಿ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸುತ್ತಿದ್ದು, ವಿವೇಕ್ ಒಬೆರಾಯ್ ಖಳನಾಯಕನಾಗಿ ಅಬ್ಬರಿಸಲಿದ್ದಾರೆ. ಹಿರಿಯ ನಟಿ ಕಾಂಚನಾ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಸಂಗೀತ ನಿರ್ದೇಶನವಿರುವ ಈ ಪ್ಯಾನ್-ಇಂಡಿಯಾ ಬಿಗ್ ಬಜೆಟ್ ಚಿತ್ರವು 2027ರ ಮಾರ್ಚ್ 5ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಂದೀಪ್ ರೆಡ್ಡಿ ವಂಗಾ ಇನ್​ಸ್ಟಾಗ್ರಾಮ್ ಪೋಸ್ಟ್:

ದಿನದಿಂದ ದಿನಕ್ಕೆ ‘ಸ್ಪಿರಿಟ್’ ಸಿನಿಮಾ ಭಾರಿ ಸೌಂಡ್ ಮಾಡುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್ ಅವರು ತಮ್ಮ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ. ತಮ್ಮದೇ ಶೈಲಿಯ ಸಿನಿಮಾಗಳಿಂದ ಗುರುತಿಸಿಕೊಂಡಿರುವ ಸಂದೀಪ್ ರೆಡ್ಡಿ ವಂಗಾ ಅವರು ಪ್ರಭಾಸ್ ಅವರನ್ನು ಈ ಬಾರಿ ಡಿಫರೆಂಟ್ ಆಗಿ ತೋರಿಸಲಿದ್ದಾರೆ.

ಇದನ್ನೂ ಓದಿ: ಒಂದೇ ವರ್ಷದಲ್ಲಿ ಮೂರು ಸಿನಿಮಾಗಳ ಬಿಡುಗಡೆಗೆ ರೆಡಿಯಾದ ನಟ ಪ್ರಭಾಸ್?

ಇತ್ತೀಚೆಗಷ್ಟೇ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಚಿತ್ರದ ರಹಸ್ಯಮಯ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಪೋಸ್ಟರ್‌ನಲ್ಲಿ ಪ್ರಭಾಸ್ ಮತ್ತು ಸಂದೀಪ್ ಇಬ್ಬರ ನೆರಳು ಕಾಣಿಸುತ್ತಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

International Yoga Day 2026: ಯೋಗಾಭ್ಯಾಸ ಮಾಡಲು ಸರಿಯಾದ ಸಮಯ ಯಾವುದು? ಇದರ ಪ್ರಯೋಜನಗಳೇನು? – Kannada News | International Yoga Day 2026: When is International Yoga Day? What are the benefits of yoga?

ಅಂತಾರಾಷ್ಟ್ರೀಯ ಯೋಗ ದಿನImage Credit source: Pinterest

ಯೋಗ (Yoga) ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಯಮಿತ ಯೋಗಾಭ್ಯಾಸವು ದೈಹಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೂ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ದೈನಂದಿನ ಯೋಗಾಭ್ಯಾಸವು ಅನಾರೋಗ್ಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ, ನಮ್ಯತೆಯನ್ನು ಸುಧಾರಿಸುತ್ತದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಹಾಗೂ ಒತ್ತವನ್ನು ಸಹ ನಿವಾರಿಸುತ್ತದೆ. ಹಾಗಾಗಿ ಇಂದು ಅನೇಕರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗದ ಈ ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರಲು ಹಾಗೂ ಯೋಗಾಭ್ಯಾಸ ಮಾಡುವಂತೆ ಜನರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಜೂನ್‌ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಯೋಗ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಪರಿಕಲ್ಪನೆ ನಮ್ಮ ಭಾರತ ದೇಶದ್ದು. ಸೆಪ್ಟೆಂಬರ್ 27, 2014 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ, ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮಾಡಿದರು. ಈ ಪ್ರಸ್ತಾವನೆಗೆ 175 ದೇಶಗಳು ಬೆಂಬಲ ನೀಡಿದವು ಮತ್ತು ಡಿಸೆಂಬರ್ 11, 2014 ರಂದು ವಿಶ್ವಸಂಸ್ಥೆಯು ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಮೊದಲ ಬಾರಿಗೆ ಯೋಗ ದಿನವನ್ನು ಜೂನ್ 21, 2015 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಜೂನ್ 21 ಅನ್ನೇ ಏಕೆ ಆಯ್ಕೆ ಮಾಡಲಾಯಿತು?

ಜೂನ್ 21 ವರ್ಷದ ಅತಿ ಉದ್ದದ ಹಗಲುಳ್ಳ ದಿನವಾಗಿದ್ದು, ಬೇಸಿಗೆಯ ಅಯನ ಸಂಕ್ರಾಂತಿಯ ದಿನವೆಂದು ಕರೆಯಲಾಗುತ್ತದೆ. ಈ ದಿನವು ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಯೋಗ ದೃಷ್ಟಿಕೋನದಿಂದ, ಇದನ್ನು ಆಧ್ಯಾತ್ಮಿಕ ಮತ್ತು ನೈಸರ್ಗಿಕ ಶಕ್ತಿಗಳಿಗೆ ಸಂಬಂಧಿಸಿದ ಪ್ರಮುಖ ದಿನವೆಂದು ಪರಿಗಣಿಸಲಾಗಿದೆ. ಹಾಗಾಗಿ ಇದೇ ದಿನದಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಯೋಗ ದಿನದ ಮಹತ್ವವೇನು?

ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ರಪಂಚದಾದ್ಯಂತ ಜನರು ಈ ಪ್ರಾಚೀನ ಅಭ್ಯಾಸವನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಅಂತರರಾಷ್ಟ್ರೀಯ ಯೋಗ ದಿನದ ಗುರಿಯಾಗಿದೆ.

ಇದನ್ನೂ ಓದಿ: ಜೂನ್‌ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ

ಯೋಗಾಭ್ಯಾಸ ಮಾಡಲು ಉತ್ತಮ ಸಮಯ ಯಾವುದು?

ಯೋಗ ಮಾಡುವಾಗ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಆದ್ದರಿಂದ, ಹೊರಗಿನ ಉಷ್ಣತೆ ಹೆಚ್ಚಿರುವಾಗ ಯೋಗವನ್ನು ಅಭ್ಯಾಸ ಮಾಡಬಾರದು. ಮುಂಜಾನೆ ಯೋಗ ಮಾಡಲು ಉತ್ತಮ ಸಮಯ ಮುಂಜಾನೆ 4 ರಿಂದ ಬೆಳಿಗ್ಗೆ 7 ರವರೆಗೆ ಹಾಗೂ ಸಂಜೆ 5 ಗಂಟೆಯ ನಂತರ. ಹೆಚ್ಚು ಶಬ್ದವಿಲ್ಲದ ಉತ್ತಮ ಗಾಳಿ ಇರುವ ಪ್ರಶಾಂತ ಸ್ಥಳದಲ್ಲಿ ಯೋಗ ಮಾಡುವುದರಿಂದ ನಿಮ್ಮ ಮನಸ್ಸು ಸ್ಪಷ್ಟವಾಗುತ್ತದೆ.

ಯೋಗದ ಪ್ರಯೋಜನಗಳೇನು?

  • ಯೋಗವು ಯಕೃತ್ತು, ಶ್ವಾಸಕೋಶಗಳು, ಹೃದಯ, ಮೂತ್ರಪಿಂಡಗಳು ಮತ್ತು ಇತರ ಎಲ್ಲಾ ಅಂಗಗಳು ಸರಾಗವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
  • ಮೂಳೆಗಳನ್ನು ಬಲಪಡಿಸುತ್ತದೆ
  • ಯೋಗವು ನಮ್ಮನ್ನು ದಿನವಿಡೀ ಉಲ್ಲಾಸದಿಂದಿರಿಸುತ್ತದೆ.
  • ಮಧುಮೇಹವನ್ನು ನಿಯಂತ್ರಿಸುತ್ತದೆ
  • ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
  • ಉತ್ತಮ ನಿದ್ರೆ ಪಡೆಯಲು ಸಹಕಾರಿ.
  • ಮದ್ಯಪಾನ ಮತ್ತು ಧೂಮಪಾನದ ಚಟವನ್ನು ನಿಯಂತ್ರಿಸಲು ಹಾಗೂ ಅದರಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ.
  • ಕುತ್ತಿಗೆ ನೋವು, ಬೆನ್ನು ನೋವು, ಕೀಲು ನೋವಿಗೆ ಪರಿಹಾರವನ್ನು ನೀಡುತ್ತದೆ.
  • ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡಲು ಸಹಕಾರಿ.
  • ನಿಯಮಿತ ಯೋಗದಿಂದ ಕೆಲಸದ ದಕ್ಷತೆ ಮತ್ತು ನಿರ್ವಹಣಾ ಕೌಶಲ್ಯ ಹೆಚ್ಚಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ಮಗಳ ಮುಖ ತೋರಿಸಿದ ರಾಮ್ ಚರಣ್, ಉಪಾಸನಾ; ಕ್ಲಿನ್ ಕಾರಾ ಯಾರ ರೀತಿ ಇದ್ದಾಳೆ ನೋಡಿ.. – Kannada News | Peddi actor Ram Charan and wife Upasana Konidela reveal Daughter Klin Kaara face on 3rd birthday

ಟಾಲಿವುಡ್‌ನ ಸ್ಟಾರ್ ಜೋಡಿ ರಾಮ್ ಚರಣ್ (Ram Charan) ಮತ್ತು ಉಪಾಸನಾ ಕೊನಿಡೆಲ ದಂಪತಿ ತಮ್ಮ ಮಕ್ಕಳ ವಿಷಯದಲ್ಲಿ ಇದುವರೆಗೂ ಒಂದು ನಿಯಮ ಪಾಲಿಸುತ್ತಿದ್ದರು. ಮಕ್ಕಳ ಮುಖವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ತೋರಿಸುತ್ತಿರಲಿಲ್ಲ. ಯಾವುದೇ ಫೋಟೋ ಹೊರಬರದಂತೆ ಅವರು ನೋಡಿಕೊಂಡಿದ್ದರು. ಆದರೆ, ಇದೀಗ ತಮ್ಮ ಮೊದಲ ಮಗಳು ಕ್ಲಿನ್ ಕಾರಾ (Klin Kaara) ಮೂರನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ, ಮೊದಲ ಬಾರಿಗೆ ಆಕೆಯ ಮುಖವನ್ನು ಜಗತ್ತಿಗೆ ತೋರಿಸಿದ್ದಾರೆ.

2023ರ ಜೂನ್ ತಿಂಗಳಲ್ಲಿ ಜನಿಸಿದ ಕ್ಲಿನ್ ಕಾರಾಗೆ ಈಗ 3 ವರ್ಷ ತುಂಬಿದೆ. ಈ ವಿಶೇಷ ದಿನದಂದು ರಾಮ್ ಚರಣ್ ಮತ್ತು ಉಪಾಸನಾ ಮಗಳನ್ನು ಎತ್ತಿಕೊಂಡು ಮುದ್ದಾಗಿ ನಗುತ್ತಿರುವ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿಯಾಗಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮೂವರೂ ಮ್ಯಾಚಿಂಗ್ ನೀಲಿ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ‘ಹ್ಯಾಪಿ ಬರ್ತ್‌ಡೇ ಕ್ಲಿನ್ ಕಾರಾ, ನಮ್ಮ ಮುದ್ದಾದ ಪುಟ್ಟ ಕಂದಮ್ಮ’ ಎಂದು ಉಪಾಸನಾ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ಫೋಟೋ ನೋಡಿದ ತಕ್ಷಣವೇ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಪ್ರೀತಿಯ ಸುರಿಮಳೆಗರೆದಿದ್ದಾರೆ. ನಟಿ ಸಮಂತಾ ರುತ್ ಪ್ರಭು ಅವರು ಕಣ್ಣೀರಿನ ಎಮೋಜಿ ಹಾಗೂ ರೆಡ್ ಹಾರ್ಟ್ ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ. ಇನ್ನು ಮಗಳು ಕ್ಲಿನ್ ಕಾರಾ ಸಂಪೂರ್ಣವಾಗಿ ಅಮ್ಮ ಉಪಾಸನಾ ಅವರನ್ನೇ ಹೋಲುತ್ತಿರುವುದನ್ನು ಫ್ಯಾನ್ಸ್ ಗಮನಿಸಿದ್ದಾರೆ. ‘ಸೇಮ್ ಅಮ್ಮನ ತರಹವೇ ಇದ್ದಾಳೆ’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ರಾಮ್ ಚರಣ್, ಉಪಾಸನಾ ಇನ್‌ಸ್ಟಾಗ್ರಾಮ್‌ ಪೋಸ್ಟ್:

ಕಳೆದ ಮೂರು ವರ್ಷಗಳಿಂದ ಈ ದಂಪತಿ ತಮ್ಮ ಮಗಳ ಮುಖ ಯಾರಿಗೂ ಕಾಣದಂತೆ ಭಾರೀ ಜಾಗ್ರತೆ ವಹಿಸಿದ್ದರು. ಈ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಉಪಾಸನಾ, ‘ಈ ಜಗತ್ತು ತುಂಬಾ ವೇಗವಾಗಿ ಬದಲಾಗುತ್ತಿದೆ. ಪೋಷಕರಾಗಿ ನಮಗೆ ಕೆಲವು ಘಟನೆಗಳು ಭಯ ಹುಟ್ಟಿಸುತ್ತವೆ. ಹಾಗಂತ ಮಗುವಿಗೆ ಸ್ವತಂತ್ರವಾಗಿ ಬದುಕುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಏರ್‌ಪೋರ್ಟ್‌ಗೆ ಹೋಗುವಾಗ ಮಗುವಿನ ಮುಖ ಮರೆಮಾಚುವುದು ತಾಯಿ, ತಂದೆ ಮತ್ತು ಮಗುವಿಗೆ ದೊಡ್ಡ ಕೆಲಸವೇ ಸರಿ. ನಾವು ಮಾಡುತ್ತಿರುವುದು ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ ಸದ್ಯಕ್ಕೆ ನಾವು ಈ ನಿರ್ಧಾರದಿಂದ ಖುಷಿಯಾಗಿದ್ದೇವೆ’ ಎಂದಿದ್ದರು.

ಇದನ್ನೂ ಓದಿ: ‘ಪೆದ್ದಿ’ ಸಕ್ಸಸ್ ಮೀಟ್‌ಗೆ ಜಾನ್ವಿ ಕಪೂರ್ ಗೈರು: ರಾಮ್ ಚರಣ್ ಸಿನಿಮಾ ವಿವಾದಕ್ಕೆ ಹೆದರಿದ್ರಾ ನಟಿ?

ರಾಮ್ ಚರಣ್ ಮತ್ತು ಉಪಾಸನಾ ಶಾಲಾ ದಿನಗಳ ಗೆಳೆಯರಾಗಿದ್ದು, ನಂತರ ಹೈದರಾಬಾದ್‌ನಲ್ಲಿ ಭೇಟಿಯಾಗಿ ಪ್ರೀತಿಸಿ 2012ರ ಜೂನ್​ನಲ್ಲಿ ವಿವಾಹವಾಗಿದ್ದರು. ಇತ್ತೀಚೆಗಷ್ಟೇ ಅಂದರೆ 2026ರ ಜನವರಿ 31ರಂದು ಈ ದಂಪತಿ ಅವಳಿ ಮಕ್ಕಳು (ಶಿವ್‌ರಾಮ್, ಅನ್ವೀರಾ ದೇವಿ) ಜನಿಸಿದವು. ಇನ್ನು, ಸಿನಿಮಾ ವಿಷಯಕ್ಕೆ ಬಂದರೆ, ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣನ ಆರ್ಭಟ: ಯೆಲ್ಲೋ ಅಲರ್ಟ್ ಘೋಷಣೆ! – Kannada News | Karnataka Weather Forecast: Heavy Rain Alert for Coastal and North Interior Districts, Yellow Alert Issued

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಳೆ

ಬೆಂಗಳೂರು, ಜೂನ್ 21: ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವೆಡೆ ಭಾರಿ ಮಳೆಯಾಗುವ (Weather) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.

ಮುಖ್ಯಾಂಶಗಳು

  • ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಭಾರಿ ಮಳೆ ಸಾಧ್ಯತೆ.
  • ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ.
  • ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರಿ ಮಳೆ, ಬೆಂಗಳೂರಿನಲ್ಲಿ ಸಾಧಾರಣ ಮಳೆ.

ಉತ್ತರ ಒಳನಾಡಿನಲ್ಲಿ ಗುಡುಗು-ಮಿಂಚಿನ ಅಬ್ಬರ

ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರಿನಲ್ಲಿ ವರುಣನ ಆರ್ಭಟ ಜೋರಾಗಿರಲಿದೆ. ಈ ಭಾಗದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಹವಾಮಾನ ಇಲಾಖೆಯು ಈ ನಾಲ್ಕೂ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ.

ಕರಾವಳಿಯಲ್ಲಿ ಮುಂದುವರಿದ ಮಳೆ

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಇಲ್ಲೂ ಕೂಡ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ

ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂಗಾರು ತುಸು ನಿಧಾನವಾಗಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಬಿರುಗಾಳಿ ಹಾಗೂ ಸಿಡಿಲಿನ ಭೀತಿ ಇರುವುದರಿಂದ ಸಾರ್ವಜನಿಕರು, ವಿಶೇಷವಾಗಿ ರೈತರು ಮತ್ತು ಮೀನುಗಾರರು ಸುರಕ್ಷಿತ ಸ್ಥಳಗಳಲ್ಲೇ ಆಶ್ರಯ ಪಡೆಯಬೇಕು ಹಾಗೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಕಷ್ಟಕಾಲದಲ್ಲಿ ಅಡವಿಟ್ಟ ಚಿನ್ನಾಭರಣ ಬಿಡಿಸಲು ಸಾಧ್ಯವಾಗುತ್ತಿಲ್ಲವೇ? ಈ ಸರಳ ಪರಿಹಾರ ಪ್ರಯತ್ನಿಸಿ – Kannada News | Daily Devotional: Traditional Remedies for Financial Distress

ಅಡವಿಟ್ಟ ಚಿನ್ನಾಭರಣImage Credit source: London Gold Centre

ಆರ್ಥಿಕ ಸಂಕಷ್ಟದ ಸಮಯದಲ್ಲಿ, ವಿಶೇಷವಾಗಿ ದಿಕ್ಕು ತೋಚದಿದ್ದಾಗ ಅಥವಾ ಯಾವುದೇ ಸಹಾಯ ಸಿಗದಿದ್ದಾಗ, ಜನರು ತಮ್ಮ ಆಭರಣಗಳನ್ನು ಅಡವಿಡುವುದು ಸಾಮಾನ್ಯ. ಇದು ವಿದ್ಯಾರ್ಥಿಗಳ ಶುಲ್ಕ, ಮನೆಯ ಅಗತ್ಯಗಳು, ಆಸ್ಪತ್ರೆ ವೆಚ್ಚಗಳು ಅಥವಾ ಯಾವುದೇ ತುರ್ತು ಪರಿಸ್ಥಿತಿಗಳಿಗೆ ಹಣಕಾಸು ಒದಗಿಸಲು ಒಂದು ಮಾರ್ಗವಾಗಿದೆ. ಆದರೆ, ಅಡವಿಟ್ಟ ಈ ಆಭರಣಗಳನ್ನು ಮರಳಿ ಪಡೆಯುವುದು ಅನೇಕರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಕೆಲವೊಮ್ಮೆ ಸಂಪೂರ್ಣ ಹಣವನ್ನು ಪಾವತಿಸಲು ಸಾಧ್ಯವಾಗದೆ ಆಭರಣಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ಪರಿಸ್ಥಿತಿಗಳೂ ಇರುತ್ತವೆ.

ಇತ್ತೀಚಿನ ದಿನಗಳಲ್ಲಿ, ಆಭರಣಗಳನ್ನು ಬಿಡಿಸಿಕೊಳ್ಳಲು ಹೋದಾಗಲೂ ಪೂರ್ಣ ಪ್ರಮಾಣದ ಆಭರಣಗಳು ಮರಳಿ ಸಿಗದಿರುವ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ಶಾಸ್ತ್ರಗಳಲ್ಲಿ ಸೂಚಿಸಲಾದ ಒಂದು ವಿಶಿಷ್ಟ ಆಧ್ಯಾತ್ಮಿಕ ಪರಿಹಾರವಿದೆ. ಈ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಈ ವಿಧಾನವು ಹಿಂದೂ ಸನಾತನ ಸಂಸ್ಕೃತಿಯಲ್ಲಿ ಆಳವಾದ ನಂಬಿಕೆಯನ್ನು ಆಧರಿಸಿದೆ. ಅಡವಿಟ್ಟ ಆಭರಣಗಳನ್ನು ಮರಳಿ ಪಡೆಯಲು ಒಂದು ನಿರ್ದಿಷ್ಟ ಪೂಜೆ ಮತ್ತು ಪ್ರಾರ್ಥನೆಯನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ.

ಪೂಜಾ ವಿಧಾನ:

  • ಶುಕ್ರವಾರದ ಬ್ರಾಹ್ಮೀ ಮುಹೂರ್ತ: ಈ ಪೂಜೆಯನ್ನು ಶುಕ್ರವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ, ಅಂದರೆ ಸೂರ್ಯೋದಯಕ್ಕೆ ಮುನ್ನ (ಬೆಳಗ್ಗೆ 6:30ರ ಒಳಗಾಗಿ) ಮಾಡಬೇಕು. ಈ ಸಮಯವನ್ನು ಆಧ್ಯಾತ್ಮಿಕ ಕಾರ್ಯಗಳಿಗೆ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
  • ಶುಚಿತ್ವ ಮತ್ತು ಸಿದ್ಧತೆ: ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶುಚಿರ್ಭೂತರಾಗಬೇಕು.
  • ಮುಡುಪಿನ ತಯಾರಿಕೆ: ಒಂದು ಹಳದಿ ಬಟ್ಟೆಯನ್ನು ತೆಗೆದುಕೊಂಡು, ಅದರಲ್ಲಿ ಎರಡು ಅರಿಶಿನ ಕೊಂಬುಗಳು, ಒಂದು ರೂಪಾಯಿ ನಾಣ್ಯ ಮತ್ತು ಸ್ವಲ್ಪ ಬಿಳಿ ಸಾಸಿವೆಯನ್ನು ಇಟ್ಟು ಗಂಟು ಕಟ್ಟಬೇಕು. ಈ ಮುಡುಪನ್ನು ತಯಾರಿಸುವಾಗ ಯಾವುದೇ ನಿರ್ಲಕ್ಷ್ಯ ಮಾಡಬಾರದು.
  • ಪ್ರಾರ್ಥನೆ: ಮುಡುಪನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು, ನಿಮ್ಮ ಇಷ್ಟದೇವರು ಅಥವಾ ಕುಲದೇವರಿಗೆ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಬೇಕು.
  • ರಸೀದಿಯ ಮೇಲೆ ಇಡುವುದು: ನಂತರ, ನೀವು ಬ್ಯಾಂಕ್ ಅಥವಾ ಬೇರೆ ಯಾವುದೇ ಸಂಸ್ಥೆಯಲ್ಲಿ ಅಡವಿಟ್ಟ ಆಭರಣಗಳ ರಸೀದಿಯ (ಅಥವಾ ಅದರ ಜೆರಾಕ್ಸ್ ಪ್ರತಿಯ) ಮೇಲೆ ಈ ಮುಡುಪನ್ನು ಇಡಬೇಕು.
  • ದಿಕ್ಕು ಮತ್ತು ಪ್ರಾರ್ಥನೆ: ಪೂರ್ವ ದಿಕ್ಕಿಗೆ ಅಭಿಮುಖವಾಗಿ ಕುಳಿತು, ದೇವರನ್ನು ನೆನೆದು ನಿಮ್ಮ ಸಂಕಷ್ಟವನ್ನು ಹೇಳಿಕೊಂಡು ಪ್ರಾರ್ಥಿಸಬೇಕು. “ಈ ಆಭರಣಗಳನ್ನು ನಾನು ಅಡವಿಟ್ಟಿದ್ದೇನೆ, ಅದನ್ನು ಬಿಡಿಸಿಕೊಳ್ಳಲು ನನಗೆ ಶಕ್ತಿ ನೀಡಪ್ಪ. 90 ದಿನಗಳೊಳಗೆ ಇವನ್ನು ಮರಳಿ ಪಡೆಯಲು ನನಗೆ ಸಹಾಯ ಮಾಡು” ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕು.
  • ಮುಡುಪಿನ ಸ್ಥಳ: ಪ್ರಾರ್ಥನೆಯ ನಂತರ, ಈ ಮುಡುಪನ್ನು ನಿಮ್ಮ ಮನೆಯ ಬೀರು ಅಥವಾ ದೇವರ ಮನೆಯಲ್ಲಿ ಭದ್ರವಾಗಿ ಇಡಬೇಕು.
  • ಪುನರಾವೃತ್ತಿ: ಪ್ರತಿ ಶುಕ್ರವಾರವೂ ಅದೇ ಮುಡುಪನ್ನು ತೆಗೆದುಕೊಂಡು, ಕೈಯಲ್ಲಿ ಹಿಡಿದು, ಅದೇ ರೀತಿ ರಸೀದಿಯ ಮೇಲೆ ಇಟ್ಟು ಪ್ರಾರ್ಥನೆ ಮಾಡಬೇಕು. ಈ ವಿಧಾನವನ್ನು ಕನಿಷ್ಠ ಮೂರು ಶುಕ್ರವಾರಗಳು ಮತ್ತು ಸಾಧ್ಯವಾದರೆ ಆರು ಶುಕ್ರವಾರಗಳ ಕಾಲ ಪುನರಾವರ್ತಿಸಬೇಕು.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ದೇವತೆ ಮತ್ತು ಮಂತ್ರ:

ನಿಮಗೆ ನಿಮ್ಮ ಕುಲದೇವರು ಅಥವಾ ಇಷ್ಟದೇವರು ಯಾರು ಎಂದು ತಿಳಿಯದಿದ್ದರೆ, ಸ್ಥಿತಿಕಾರಕನಾದ ಶ್ರೀ ವಿಷ್ಣುವನ್ನು ಸ್ಮರಿಸಬಹುದು. ಕಲಿಯುಗದಲ್ಲಿ ವೆಂಕಟನಾಥನು ಹಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವ ದೇವರೆಂದು ನಂಬಲಾಗಿದೆ. ಅಂತಹವರು ಓಂ ನಮೋ ವೆಂಕಟೇಶಾಯ ಎಂಬ ಮಂತ್ರವನ್ನು ಭಕ್ತಿಯಿಂದ ಜಪಿಸಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂತಾರಾಷ್ಟ್ರೀಯ ಯೋಗ ದಿನ 2026: ಅಮರಾವತಿಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಜೊತೆ ರಾಮ್‌ದೇವ್ ಯೋಗಾಭ್ಯಾಸ – Kannada News | CM Chandrababu Naidu Joins Baba Ramdev for International Yoga Day 2026 Celebrations in Amaravati

ಅಮರಾವತಿ, ಜೂನ್ 21: ಅಂತಾರಾಷ್ಟ್ರೀಯ ಯೋಗ ದಿನ 2026 ರ ಅಂಗವಾಗಿ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಮ್‌ದೇವ್ ಅವರೊಂದಿಗೆ ಅಮರಾವತಿಯಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅಮರಾವತಿಯನ್ನು ದೇವತೆಗಳ ರಾಜಧಾನಿ ಮತ್ತು ಪುಣ್ಯಭೂಮಿ ಎಂದು ಬಣ್ಣಿಸಲಾಯಿತು. ಯೋಗದ ಮಹತ್ವವನ್ನು ಒತ್ತಿ ಹೇಳಿದರು.

ಶೀರ್ಷಾಸನದಂತಹ ಭಂಗಿಗಳು ಮೆದುಳಿನ ಆರೋಗ್ಯ, ದೀರ್ಘಾಯುಷ್ಯ ಮತ್ತು ರೋಗನಿರೋಧಕ ಶಕ್ತಿಗೆ ಅತ್ಯಂತ ಪರಿಣಾಮಕಾರಿ ಎಂದು ವಿವರಿಸಲಾಯಿತು. ಮಕ್ಕಳಿಗೆ ಕನಿಷ್ಠ ಐದು ಮೂಲಭೂತ ಯೋಗ ಭಂಗಿಗಳನ್ನು ಕಲಿಸುವಂತೆ ಸಲಹೆ ನೀಡಲಾಯಿತು. ಮರ್ಕಟಾಸನ ಮತ್ತು ಭುಜಂಗಾಸನದಂತಹ ಆಸನಗಳು ಬೆನ್ನುಮೂಳೆಯ ಆರೋಗ್ಯಕ್ಕೆ ಹೇಗೆ ಸಹಕಾರಿ ಎಂಬುದನ್ನು ಒತ್ತಿಹೇಳಲಾಯಿತು. ಯೋಗವನ್ನು ಜೀವನ ಪದ್ಧತಿಯನ್ನಾಗಿ ಅಳವಡಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಪ್ರತಿಪಾದಿಸಲಾಯಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಇಲ್ಲಿದೆ – Kannada News | Team india’s next schedule 2026

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ 4 ಪಂದ್ಯಗಳ ಸರಣಿ ಮುಗಿದಿದೆ. ಈ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಮೊದಲಿಗೆ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ ತಂಡ ಇನಿಂಗ್ಸ್ ಹಾಗೂ 300 ರನ್​ಗಳ ಅಂತರದಿಂದ ಗೆದ್ದುಕೊಂಡಿತ್ತು. ಇದಾದ ಬಳಿಕ ನಡೆದ ಮೂರು ಮ್ಯಾಚ್​ಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

  • ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಗೆ 7 ವಿಕೆಟ್​ಗಳ ಭರ್ಜರಿ ಜಯ.
  • ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ 170 ರನ್​​ಗಳ ಅಮೋಘ ಗೆಲುವು.
  • ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಗೆ 9 ವಿಕೆಟ್​ಗಳ ಅದ್ಭುತ ಗೆಲುವು.

ಈ ಮೂರು ಪಂದ್ಯಗಳಲ್ಲೂ ಅತ್ಯುತ್ತಮ ಗೆಲುವು ದಾಖಲಿಸುವ ಮೂಲಕ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯನ್ನು ಅಂತ್ಯಗೊಳಿಸಿದೆ. ಇದೀಗ ಭಾರತ ತಂಡವು ವಿದೇಶಿ ಪ್ರವಾಸಕ್ಕೆ ಸಜ್ಜಾಗಬೇಕಿದೆ. ಅಂದರೆ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಎರಡು ಸರಣಿಗಳನ್ನು ಆಡಲಿದೆ.

ಮೊದಲಿಗೆ ಐರ್ಲೆಂಡ್ ವಿರುದ್ಧ 2 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ ವೈಟ್ ಬಾಲ್ ಸಿರೀಸ್ ಜರುಗಲಿದೆ. ಈ ಸರಣಿಯಲ್ಲಿ ಮೊದಲಿಗೆ 5 ಮ್ಯಾಚ್​ಗಳ ಟಿ20 ಸರಣಿ ನಡೆಯಲಿದ್ದು, ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಾಗುತ್ತದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ vs ಐರ್ಲೆಂಡ್ ಟಿ20 ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ (2026) ಕ್ರೀಡಾಂಗಣ / ಸ್ಥಳ ಸಮಯ ( IST)
1ನೇ ಟಿ20 ಪಂದ್ಯ ಜೂನ್ 26, ಶುಕ್ರವಾರ ಸ್ಟೋರ್ಮಾಂಟ್ ಕ್ರಿಕೆಟ್ ಮೈದಾನ, ಬೆಲ್‌ಫಾಸ್ಟ್ ರಾತ್ರಿ 6:00 ಗಂಟೆಗೆ
2ನೇ ಟಿ20 ಪಂದ್ಯ ಜೂನ್ 28, ಭಾನುವಾರ ಸ್ಟೋರ್ಮಾಂಟ್ ಕ್ರಿಕೆಟ್ ಮೈದಾನ, ಬೆಲ್‌ಫಾಸ್ಟ್ ರಾತ್ರಿ 6:00 ಗಂಟೆಗೆ

ಭಾರತ vs ಇಂಗ್ಲೆಂಡ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ (2026) ಕ್ರೀಡಾಂಗಣ / ಸ್ಥಳ ಸಮಯ (IST)
1ನೇ ಟಿ20 ಪಂದ್ಯ ಜುಲೈ 01, ಬುಧವಾರ ರಿವರ್ಸೈಡ್ ಗ್ರೌಂಡ್, ಚೆಸ್ಟರ್-ಲೆ-ಸ್ಟ್ರೀಟ್ ರಾತ್ರಿ 10:00 ಗಂಟೆಗೆ
2ನೇ ಟಿ20 ಪಂದ್ಯ ಜುಲೈ 04, ಶನಿವಾರ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ ಸಂಜೆ 7:00 ಗಂಟೆಗೆ
3ನೇ ಟಿ20 ಪಂದ್ಯ ಜುಲೈ 07, ಮಂಗಳವಾರ ಟ್ರೆಂಟ್ ಬ್ರಿಡ್ಜ್, ನಾಟಿಂಗ್‌ಹ್ಯಾಮ್ ರಾತ್ರಿ 10:00 ಗಂಟೆಗೆ
4ನೇ ಟಿ20 ಪಂದ್ಯ ಜುಲೈ 09, ಗುರುವಾರ ಬ್ರಿಸ್ಟಲ್ ಕೌಂಟಿ ಗ್ರೌಂಡ್, ಬ್ರಿಸ್ಟಲ್ ರಾತ್ರಿ 10:00 ಗಂಟೆಗೆ
5ನೇ ಟಿ20 ಪಂದ್ಯ ಜುಲೈ 11, ಶನಿವಾರ ರೋಸ್ ಬೌಲ್, ಸೌತಾಂಪ್ಟನ್ ಸಂಜೆ 7:00 ಗಂಟೆಗೆ
1ನೇ ಏಕದಿನ ಪಂದ್ಯ ಜುಲೈ 14, ಮಂಗಳವಾರ ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್ ಮಧ್ಯಾಹ್ನ 3:30ಕ್ಕೆ
2ನೇ ಏಕದಿನ ಪಂದ್ಯ ಜುಲೈ 16, ಗುರುವಾರ ಸೋಫಿಯಾ ಗಾರ್ಡನ್ಸ್, ಕಾರ್ಡಿಫ್ ಸಂಜೆ 5:30ಕ್ಕೆ
3ನೇ ಏಕದಿನ ಪಂದ್ಯ ಜುಲೈ 19, ಭಾನುವಾರ ಲಾರ್ಡ್ಸ್ ಕ್ರಿಕೆಟ್ ಮೈದಾನ, ಲಂಡನ್ ಮಧ್ಯಾಹ್ನ 3:30ಕ್ಕೆ

ಇದನ್ನೂ ಓದಿ: ಇಂಗ್ಲೆಂಡ್ ಸರಣಿಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಲಭ್ಯ..!

ಈ ಎರಡು ಸರಣಿಗಳ ಬಳಿಕ ಟೀಮ್ ಇಂಡಿಯಾ ಝಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಇದಾದ ಬಳಿಕ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಲಿದ್ದಾರೆ.

Source link

ಯೋಗ ಒಂದು ದಿನದ ಕಾರ್ಯಕ್ರಮ ಆಗುವುದು ಬೇಡ, 365 ದಿನ ನಿಮ್ಮ ಜೀವನದ ಭಾಗವಾಗಿರಲಿ: ಮೋದಿ – Kannada News | Make Yoga a Year Round Lifestyle, Not a One Day Event: PM Modi on International Yoga Day

ಕೋಲ್ಕತ್ತಾ, ಜೂನ್ 21: ಯೋಗ(Yoga) ಕೇವಲ ಒಂದು ದಿನದ ಕಾರ್ಯಕ್ರಮವಾಗುವುದು ಬೇಡ, 362 ದಿನವೂ ನಿಮ್ಮ ಜೀವನದ ಅಂಗವಾಗಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಯೋಗವನ್ನು ಅಳವಡಿಸಿಕೊಂಡರೆ ಸಮಾಜ ಸ್ವಸ್ಥವಾಗಿರುತ್ತೆ, ರಾಷ್ಟ್ರವು ಕೂಡ ಅಧಿಕ ಸಕ್ಷಮ ಹಾಗೂ ಸಮೃದ್ಧವಾಗಿರುತ್ತದೆ. 100 ದಿನಗಳ ಆನ್​ಲೈನ್ ಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, 130 ದೇಶಗಳ 30 ಲಕ್ಷಕ್ಕೂ ಅಧಿಕ ಮಂದಿ ಇದರಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ತಾಣಗಳು ಮತ್ತು ಯೋಗ ಸಂಪ್ರದಾಯಗಳನ್ನು ಸಂಯೋಜಿಸುವ ಸಲುವಾಗಿ ಸಂಸ್ಕೃತಿ ಸಚಿವಾಲಯವು ದೇಶಾದ್ಯಂತ 100 ಪ್ರತಿಷ್ಠಿತ ಸ್ಥಳಗಳಲ್ಲಿ ವಿಶೇಷ ಯೋಗ ಆಚರಣೆಗಳನ್ನು ಆಯೋಜಿಸುತ್ತಿದೆ. ಈ ಉಪಕ್ರಮದಡಿಯಲ್ಲಿ, ನವದೆಹಲಿಯ ಕೆಂಪು ಕೋಟೆ, ಉತ್ತರಾಖಂಡದ ಹರಿದ್ವಾರ, ಒಡಿಶಾದ ಕೊನಾರ್ಕ್, ಕರ್ನಾಟಕದ ಹಂಪಿ, ತಮಿಳುನಾಡಿನ ಮಹಾಬಲಿಪುರಂ, ಮಹಾರಾಷ್ಟ್ರದ ಮುಂಬೈ, ಬಿಹಾರದ ನಳಂದ, ಗುಜರಾತ್‌ನ ಅಹಮದಾಬಾದ್, ಉತ್ತರ ಪ್ರದೇಶದ ಸಾರನಾಥ್, ಲಡಾಖ್‌ನ ಲೇಹ್, ತೆಲಂಗಾಣದ ಹೈದರಾಬಾದ್ ಮತ್ತು ಅಸ್ಸಾಂನ ಸಿಲ್ಚಾರ್ ಸೇರಿದಂತೆ ಹನ್ನೆರಡು ಪ್ರತಿಷ್ಠಿತ ಸ್ಥಳಗಳಲ್ಲಿ ಪ್ರಮುಖ ಆಚರಣೆಗಳು ನಡೆಯಲಿವೆ.

ಯೋಗದ ಸಂಪ್ರದಾಯವನ್ನು ಜಗತ್ತಿಗೆ ಹರಡಿದ ಬಂಗಾಳದ ವಿಶ್ವ ಸಂತರಾದ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮತ್ತು ಲಾಹಿರಿ ಮಹಾಶಯರಂತಹ ಮಹಾನ್ ವ್ಯಕ್ತಿಗಳಿಗೆ ಪ್ರಧಾನಿ ಈ ವೇಳೆ ಗೌರವ ಸಲ್ಲಿಸಿದರು.

ಮತ್ತಷ್ಟು ಓದಿ: International Yoga Day 2026 : ಕೋಲ್ಕತ್ತಾದಲ್ಲಿ ನಮೋ ಯೋಗ!

ದೈನಂದಿನ ದಿನಚರಿಯಾಗಲಿ ಯೋಗ: ಯೋಗವನ್ನು ಕೇವಲ ವರ್ಷದ ಒಂದು ದಿನಕ್ಕೆ ಅಥವಾ ಒಂದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸಬಾರದು. ನಾಗರಿಕರು ಯೋಗವನ್ನು ತಮ್ಮ ಮತ್ತು ತಮ್ಮ ಕುಟುಂಬದ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು. ನಿಯಮಿತ ಅಭ್ಯಾಸದಿಂದ ಮಾತ್ರ ಯೋಗದ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯ ಎಂದು ಮೋದಿ ಒತ್ತಿ ಹೇಳಿದರು.

ವಯಸ್ಸಾದಂತೆ ಹೆಚ್ಚಾಗಲಿ ಚೈತನ್ಯ: ನಮ್ಮ ಗುರಿ ಹೇಗಿರಬೇಕೆಂದರೆ, ನಮಗೆ 20 ವರ್ಷ ಇದ್ದದ್ದಕ್ಕಿಂತ 40 ವರ್ಷ ವಯಸ್ಸಾದಾಗ ದೇಹ ಹೆಚ್ಚು ಸುಲಭವಾಗಿ ಬಾಗಬೇಕು . 30 ಕ್ಕಿಂತ 50 ನೇ ವಯಸ್ಸಿನಲ್ಲಿ ಹೆಚ್ಚು ಶಕ್ತಿಶಾಲಿಯಾಗಿರಬೇಕು. ಇಂದಿನ ಆಧುನಿಕ ಜೀವನಶೈಲಿ ಕಾಯಿಲೆಗಳ ವಿರುದ್ಧ ಹೋರಾಡಲು ಯೋಗ ನಮಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

ಯೋಗ ಎಲ್ಲರನ್ನೂ ಒಂದುಗೂಡಿಸುತ್ತದೆ
ದೇಶಾದ್ಯಂತ ಯೋಗದ ಅಲೆ: ಇಂದು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ, ಪೂರ್ವದಿಂದ ಪಶ್ಚಿಮ ಭಾರತದವರೆಗೆ ಇಡೀ ದೇಶವೇ ಯೋಗದ ಶಕ್ತಿಯಿಂದ ತುಂಬಿ ತುಳುಕುತ್ತಿದೆ. ಯೋಗವು ಗಡಿಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಮೀರಿ ಪ್ರಪಂಚದಾದ್ಯಂತದ ಜನರನ್ನು ಪರಸ್ಪರ ಹತ್ತಿರ ತರುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು ಮತ್ತು ಜಗತ್ತಿನಾದ್ಯಂತ ಇರುವ ಯೋಗ ಪ್ರೇಮಿಗಳಿಗೆ ಶುಭಾಶಯನ್ನು ತಿಳಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:18 am, Sun, 21 June 26

Source link

Daily Devotional: ಈ ವಸ್ತುಗಳನ್ನು ಪರರಿಂದ ಪಡೆಯುವ ಮುನ್ನ ಎಚ್ಚರ!

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಯಾವೆಲ್ಲಾ ವಸ್ತುಗಳನ್ನು ಇತರರಿಂದ ಪಡೆಯಬಾರದು ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ನಾವು ಜೀವನದಲ್ಲಿ ಕಷ್ಟಪಟ್ಟು ಸಂಪಾದನೆ ಮಾಡಿರುತ್ತೇವೆ ಮತ್ತು ನಮ್ಮ ಜೀವನವನ್ನು ಉತ್ತಮವಾಗಿ ನಡೆಸಲು ಯೋಜನೆಗಳನ್ನು ರೂಪಿಸಿಕೊಳ್ಳುತ್ತೇವೆ. ಆದರೆ, ಕೆಲವೊಮ್ಮೆ ಆಕಸ್ಮಿಕವಾಗಿ ನಾವು ಇತರರಿಂದ ಕೆಲವು ವಸ್ತುಗಳನ್ನು ಪಡೆದುಕೊಂಡರೆ, ನಮ್ಮ ಅದೃಷ್ಟ ಕುಂಠಿತವಾಗಬಹುದು ಎಂದು ಪ್ರಾಚೀನ ನಂಬಿಕೆಗಳು ಹೇಳುತ್ತವೆ. ಜೀವನದಲ್ಲಿ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ಅಥವಾ ಸಾಲವಾಗಿ ಪಡೆದುಕೊಳ್ಳದಿರುವುದು ಉತ್ತಮ.

ಉದಾಹರಣೆಗೆ, ಉಪ್ಪನ್ನು ಯಾರಿಂದಲೂ ಪಡೆಯಬಾರದು. ಇದರಿಂದ ಕುಟುಂಬದಲ್ಲಿ ಸಾಲಗಳು ಹೆಚ್ಚಾಗಬಹುದು ಮತ್ತು ಅವುಗಳನ್ನು ತೀರಿಸುವುದು ಕಷ್ಟವಾಗಬಹುದು. ಅಡುಗೆ ಎಣ್ಣೆಯನ್ನು ಬೇರೆಯವರಿಂದ ಪಡೆದರೆ, ಅದೃಷ್ಟ ದೂರಾಗಿ ಕೆಲಸಗಳು ಅರ್ಧಂಬರ್ಧವಾಗುವ ಸಾಧ್ಯತೆ ಇದೆ. ಸೂಜಿಯನ್ನು ಯಾರಿಂದಲೂ ತೆಗೆದುಕೊಂಡರೆ, ಸಂಬಂಧಗಳಲ್ಲಿ ಕಲಹಗಳು ಉಂಟಾಗಬಹುದು. ಹೀಗೆ ಹಲವು ವಸ್ತುಗಳನ್ನು ಸ್ವೀಕರಿಸದ ಹಿಂದಿನ ಕಾರಣವೇನು ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

Source link

Exit mobile version