ರಾಗಿ ರೊಟ್ಟಿ ತಿಂದ್ರೆ ಎಲುಬು ಗಟ್ಟಿಯಾಗಿರುತ್ತೆ ಅನ್ನೋದು ನಿಜವೇ? ಯಾವ ಆರೋಗ್ಯ ಸಮಸ್ಯೆಗೆ ಒಳ್ಳೆಯದು? – Kannada News | Ragi Roti For Healthy Blood: Benefits Of This Nutrient Packed Millet

ರಾಗಿ (Finger millet) ನಮ್ಮ ಸಾಂಪ್ರದಾಯಿಕ ಆಹಾರಗಳಲ್ಲಿ ಒಂದಾಗಿದ್ದು, ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಧಾನ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇದು ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಫೈಬರ್ ಹಾಗೂ ಹಲವು ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೆ ರಾಗಿ ರೊಟ್ಟಿ ತಿಂದ್ರೆ ಎಲುಬು ಗಟ್ಟಿಯಾಗಿರುತ್ತೆ ಎನ್ನುವ ಮಾತು ನಿಜಾನಾ, ದೈನಂದಿನ ಆಹಾರದಲ್ಲಿ ರಾಗಿ ರೊಟ್ಟಿ ಸೇವನೆ ಮಾಡಿದರೆ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಾಗಿ ರೊಟ್ಟಿಯ ಆರೋಗ್ಯ ಪ್ರಯೋಜನಗಳು:

  • ಸಾಮಾನ್ಯವಾಗಿ ರಾಗಿ ರೊಟ್ಟಿಯ ಸೇವನೆ ಎಲುಬುಗಳನ್ನು ಗಟ್ಟಿ ಮಾಡುತ್ತದೆ ಎಂಬುದು ಸತ್ಯ. ಏಕೆಂದರೆ ಇದರಲ್ಲಿ ಇರುವಹೆಚ್ಚಿನ ಕ್ಯಾಲ್ಸಿಯಂ ಅಂಶವು ಎಲುಬುಗಳು ಮತ್ತು ಹಲ್ಲುಗಳನ್ನು ಬಲಪಡಿಸಿ, ಆಸ್ಟಿಯೋಪೊರೋಸಿಸ್‌ನಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
  • ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆಯನ್ನು ತಡೆಯಲು ನೆರವಾಗುತ್ತದೆ. ಜೊತೆಗೆ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅನಗತ್ಯ ಹಸಿವನ್ನು ನಿಯಂತ್ರಿಸಿ ತೂಕ ನಿರ್ವಹಣೆಗೆ ಸಹಕಾರಿ. ಜೊತೆಗೆ ಇದರಲ್ಲಿನ ಕಬ್ಬಿಣಾಂಶವು ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
  • ರಾಗಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮಧುಮೇಹಿಗಳಿಗೂ ಇದು ಉತ್ತಮ ಆಹಾರವಾಗಿದೆ.
  • ಹೃದಯದ ಆರೋಗ್ಯ ಕಾಪಾಡುವುದರ ಜೊತೆಗೆ ದೇಹಕ್ಕೆ ದಿನಪೂರ್ತಿ ಶಕ್ತಿ ನೀಡುವ ಗುಣವೂ ರಾಗಿಯಲ್ಲಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟದಲ್ಲಿ ರಾಗಿ ರೊಟ್ಟಿ ಸೇವಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬಹುದು.

ಇದನ್ನೂ ಓದಿ: ವಿಶ್ವ ಅಪ್ಪಂದಿರ ದಿನದಂದು ನಿಮ್ಮ ತಂದೆಗಾಗಿ ಮಾಡಿ ಆರೋಗ್ಯಕರ ರಾಗಿ ಕೇಕ್‌

ರಾಗಿ ರೊಟ್ಟಿ ಎಲ್ಲರಿಗೂ ಸೂಕ್ತವೇ? ಯಾರು ಎಚ್ಚರಿಕೆಯಿಂದ ಸೇವಿಸಬೇಕು?

ರಾಗಿ ರೊಟ್ಟಿ ಆರೋಗ್ಯಕರ ಆಹಾರವಾಗಿದ್ದರೂ, ಕೆಲವು ಆರೋಗ್ಯ ಪರಿಸ್ಥಿತಿಗಳಲ್ಲಿ ಮಿತವಾಗಿ ಅಥವಾ ವೈದ್ಯರ ಸಲಹೆಯೊಂದಿಗೆ ಸೇವಿಸುವುದು ಉತ್ತಮ.

ಕಿಡ್ನಿ ಸ್ಟೋನ್ (Kidney Stones) ಸಮಸ್ಯೆ ಇರುವವರು: ರಾಗಿಯಲ್ಲಿ ಆಕ್ಸಲೇಟ್ (Oxalate) ಪ್ರಮಾಣ ಸ್ವಲ್ಪ ಹೆಚ್ಚಿರುತ್ತದೆ. ಈಗಾಗಲೇ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ರಾಗಿಯನ್ನು ಅತಿಯಾಗಿ ಸೇವಿಸಬಾರದು.

ಥೈರಾಯ್ಡ್ ಸಮಸ್ಯೆ ಇರುವವರು: ರಾಗಿಯಲ್ಲಿ ಇರುವ ಕೆಲವು ಸಂಯುಕ್ತಗಳು ಥೈರಾಯ್ಡ್ ಗ್ರಂಥಿಯ ಕಾರ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಹೈಪೋಥೈರಾಯ್ಡಿಸಮ್ ಇರುವವರು ರಾಗಿಯನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಅತಿಯಾದ ಜೀರ್ಣಕ್ರಿಯೆ ಸಮಸ್ಯೆ ಇರುವವರು: ರಾಗಿಯಲ್ಲಿ ಫೈಬರ್ ಅಧಿಕವಾಗಿರುವುದರಿಂದ ಕೆಲವರಿಗೆ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಅಜೀರ್ಣ ಸಮಸ್ಯೆ ಉಂಟಾಗಬಹುದು. ಇಂತಹವರು ಆರಂಭದಲ್ಲಿ ಕಡಿಮೆ ಪ್ರಮಾಣದಿಂದ ಸೇವನೆ ಆರಂಭಿಸಬೇಕು.

ಕಡಿಮೆ ತೂಕ ಇರುವವರು: ರಾಗಿ ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಸಮಯ ನೀಡುತ್ತದೆ. ಆದ್ದರಿಂದ ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ರಾಗಿಯನ್ನು ಮಾತ್ರ ಅವಲಂಬಿಸದೆ ಸಮತೋಲನ ಆಹಾರವನ್ನು ಸೇವಿಸಬೇಕು.

ರಾಗಿಯ ಸೇವನೆಯಿಂದ ಅಲರ್ಜಿ ಇರುವವರು: ಕೆಲವರಿಗೆ ರಾಗಿ ಸೇವನೆಯಿಂದ ಅಲರ್ಜಿ, ಚರ್ಮದ ತುರಿಕೆ ಅಥವಾ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಡುಗಡೆ ಆಯ್ತು ‘ಅಯೋಗ್ಯ 2’ ಸಿನಿಮಾದ ಹೊಸ ಹಾಡು – Kannada News | Satish Ninasam and Rachita Ram starrer Ayogya 2 movie new song released

ಸತೀಶ್‌ ನಿನಾಸಂ (Satish Neenasam) ಹಾಗೂ ರಚಿತಾ ರಾಮ್‌ ಅಭಿನಯದ ‘ಅಯೋಗ್ಯ’ ಸಿನಿಮಾ ಹಿಟ್ ಆಗಿತ್ತು. ಸಿನಿಮಾದ ಕಾಮಿಡಿ, ಹಾಡುಗಳು, ಆಕ್ಷನ್ ಎಲ್ಲವೂ ಜನರಿಗೆ ಇಷ್ಟವಾಗಿತ್ತು. ಇದೀಗ ಅದೇ ತಂಡ ‘ಅಯೋಗ್ಯ 2’ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸಿನಿಮಾದ ಹೊಸ ಹಾಡೊಂದು ಇಂದು (ಜೂನ್ 20) ಬಿಡುಗಡೆ ಆಗಿದೆ. ಸಿನಿಮಾದ ಹಾಡು ಬಿಡುಗಡೆಗಾಗಿ ವಿಶೇಷ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿತ್ತು. ಇಂದು (ಜೂನ್ 20) ನಟ ಸತೀಶ್‌ ಹುಟ್ಟುಹಬ್ಬ ಆಗಿದ್ದು, ಇದೇ ದಿನ ಹಾಡು ಬಿಡುಗಡೆ ಮಾಡಲಾಗಿದೆ.

‘ಅಯೋಗ್ಯ 2’ ಸಿನಿಮಾದ ‘ಪುಟ್‌ ಲಕ್ಷ್ಮೀ’ ಹಾಡನ್ನ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಮತ್ತು ಇತರೆ ಕೆಲವು ಪ್ರಮುಖರು ಬಿಡುಗಡೆ ಮಾಡಿದರು. ಹಾಡು ಬಿಡುಗಡೆ ಮಾಡಿ ಮಾತನಾಡಿದ ಅರ್ಜುನ್‌ ಜನ್ಯ, ‘ಈ 22 ವರ್ಷದಲ್ಲಿ ಇದೇ ಮೊದಲ ಬಾರಿಗೆ ನಾನು ಹಾಡೋಂದನ್ನ ಗೆಸ್ಟ್‌ ಆಗಿ ಬಿಡುಗಡೆ ಮಾಡ್ತಿರೋದು ಎಂದರು. ಹಾಡು ಹಾಡಿರೋ ಪೃಥ್ವಿ ಭಟ್‌ ತುಂಬಾ ಚೆನ್ನಾಗಿ ಹಾಡಿದ್ದಾರೆ ಎಂಟು ವರ್ಷದ ಹಿಂದೆ ‘ಅಯೋಗ್ಯ’ ಸಿನಿಮಾಗೆ ಹಾಡು ಕಂಪೋಸ್ ಮಾಡುವಾಗ ದಿನಗಳು ಹೇಗಿತ್ತು ಅನ್ನೋ ಹಳೆಯ ದಿನಗಳನ್ನು ಅವರು ನೆನಪು ಮಾಡಿಕೊಂಡರು.

ನಿರ್ದೇಶಕ ಮಹೇಶ್‌ ಕುಮಾರ್‌ ಮಾತನಾಡಿ ಇಡೀ ತಂಡದ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು. ಎಂಟು ವರ್ಷದ ನಂತರ ಬರ್ತಿದ್ದೀವಿ, ಈ ಹಾಡು ನಿಮ್ಮೆಲ್ಲರಿಗೂ ಖುಷಿ ಕೊಡುತ್ತೆ. ಶೂಟ್‌ ಸಮಯದಲ್ಲಿ ನಡೆದ ಘಟನೆಗಳನ್ನ ಮೆಲುಕು ಹಾಕಿದರು . ‘ಅಯೋಗ್ಯ’ ಸಿನಿಮಾಗಿಂತಲೂ ಅಯೋಗ್ಯ 2 ಚಿತ್ರದಲ್ಲಿ ಹೆಚ್ಚು ಎಂಟರ್ಟೈನ್ಮೆಂಟ್‌ ಇದೆ ಎಂದರು.

ಇದನ್ನೂ ಓದಿ: ‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?

ಇನ್ನು ನಟ ಸತೀಶ್‌ ನಿನಾಸಂ ಹಾಗೂ ನಟಿ ರಚಿತಾ ರಾಮ್‌ ಇಬ್ಬರು ಒಟ್ಟಿಗೆ ವೇದಿಕೆಗೆ ಬಂದು ಹಾಡನ್ನ ಬರೆದಿರುವ ಚೇತನ್‌ ಕುಮಾರ್‌ ,ಹಾಡಿರೋ ಸಿದ್‌ ಶ್ರೀರಾಮ್‌ ಪೃಥ್ವಿ ಭಟ್‌ ಅವರಿಗೆ ಧನ್ಯವಾದ ಹೇಳಿದರು. ಜೊತೆಯಲ್ಲಿ ನಟಿಸಿದಕ್ಕಾಗಿ ಇಬ್ಬರು ಪರಸ್ಪರ ಧನ್ಯವಾದ ತಿಳಿಸಿದರು. ‘ಅಯೋಗ್ಯ 2’ ಸಿನಿಮಾವನ್ನು ಮುನೇಗೌಡ ನಿರ್ಮಾಣ ಮಾಡುತ್ತಿದ್ದಾರೆ. ‘ಅಯೋಗ್ಯ 2’ ಚಿತ್ರದ ಆಡಿಯೋ ಹಕ್ಕು ಒಳ್ಳೆಯ ಬೆಲೆಗೆ ಮಾರಾಟ ಆಗಿದೆ. ಆನಂದ್ ಆಡಿಯೋ ರೂ 2 ಕೋಟಿ ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದೆಯಂತೆ.

ಸಂಭಾಷಣೆಕಾರ ಮಾಸ್ತಿ ಮಾತನಾಡಿ ‘ಅಯೋಗ್ಯ 2’ ಸಿನಿಮಾದ ಡೈಲಾಗ್ಸ್‌ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ತಂಡದ ಜೊತೆ ಕೆಲಸ ಮಾಡೋದೇ ಖುಷಿ ಎಂದರು. ಸಿನಿಮಾದಲ್ಲಿ ಅಭಿನಯಿಸಿರೋ ಶಿವರಾಜ್‌ ಕೆಆರ್‌ ಪೇಟೆ , ಮಂಜು ಪಾವಗಡ ಹಾಗೂ ಕಿರಣ್‌ ನಾಯ್ಕ್‌ ಅಯೋಗ್ಯ೨ ಸಿನಿಮಾ ಅವಕಾಶ ಸಿಕ್ಕಿದ್ದು ಖುಷಿ ಇದೇ ಹೆಚ್ಚು ಕಲಾವಿದರು ಇರೋದ್ರಿಂದ ಎಂಟರ್ಟೈನೆಮೆಂಟ್‌ ಕೂಡ ಹೆಚ್ಚಾಗಿರುತ್ತೆ ಎಂದರು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಮಂಜು ಪಾವಗಡ ತಾರಾಗಣದಲ್ಲಿದ್ದಾರೆ. ಸಿನಿಮಾದ ಪ್ರಚಾರ ಕೆಲಸ ಶುರುವಾಗಿದ್ದು ಆಗಸ್ಟ್‌ 14 ರಂದು ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:16 pm, Sat, 20 June 26

Source link

IND vs AFG: 2ನೇ ಏಕದಿನ ಶತಕ ಬಾರಿಸಿ ಅಗ್ರಸ್ಥಾನಕ್ಕೇರಿದ ಯಶಸ್ವಿ ಜೈಸ್ವಾಲ್ – Kannada News | Yashasvi Jaiswal Smashes Second ODI Century, Breaks Records in India vs Afghanistan Win

ಈ ಪಂದ್ಯದಲ್ಲಿ 86 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಲ್ ಅಜೇಯ 110 ರನ್ ಗಳಿಸಿದರು. ಇದು ಯಶಸ್ವಿ ಅವರ ಎರಡನೇ ಏಕದಿನ ಶತಕವಾಗಿದ್ದು, ಈ ಮೂಲಕ ಭಾರತದ ಪರ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಮೊದಲನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಜೈಸ್ವಾಲ್ ಪಾತ್ರರಾಗಿದ್ದಾರೆ. ಈ ಮೂಲಕ ಜೈಸ್ವಾಲ್, ಶಿಖರ್ ಧವನ್ ಅವರನ್ನು ಹಿಂದಿಕ್ಕಿದರು (PC-PTI)

Source link

CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಸೆಕ್ಯೂರಿಟಿ – Kannada News | NEET UG Re Exam On June 21: Mock Drill In bengaluru, NTA Safety Advisory For Re NEET

ಬೆಂಗಳೂರು, (ಜೂನ್ 20): ದೇಶಾದ್ಯಂತ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವತಿಯಿಂದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(NEET UG Re Exam 2026) ನಾಳೆ ಮಧ್ಯಾಹ್ನ 02ರಿಂದ ಸಂಜೆ 05:15ರವರೆಗೆ ನಡೆಯಲಿದೆ. ರಾಜ್ಯದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ಹಾಗೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಎಸ್ ಜೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈಗಾಗಲೇ ರೋಲ್ ನಂಬರ್ ಹಾಕಿದ್ದು, ನಾಳೆ ಬೆಳಗ್ಗೆಯಿಂದ‌ ‌CRPF ಮತ್ತು ಸ್ಥಳೀಯ ಪೊಲೀಸರ ಭದ್ರತೆ ಇರಲಿದೆ. ಕಳೆದ ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ದೊಡ್ಡ ರದ್ದಾಂತವೇ ಆಗಿದೆ. ಅಲ್ಲದೇ ಕೆಲ ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಬಿಗಿ ಕ್ರಮಕೈಗೊಳ್ಳಲಾಗಿದೆ.

Source link

ಹೆರ್ಪೆಟೋಫೋಬಿಯಾ ಎಂದರೇನು? ಯಾಕೆ ಹಲ್ಲಿ ನೋಡಿ ಭಯವಾಗುತ್ತೆ ಗೊತ್ತಾ? – Kannada News | Why Are Some People Terrified Of Lizards? Understanding Herpetophobia

ಮನೆಯಲ್ಲಿ ಗೋಡೆಯ ಮೇಲೆ ಹಲ್ಲಿ (Lizards) ಕಾಣಿಸಿಕೊಂಡ ತಕ್ಷಣ ಕೆಲವರು ಅದನ್ನು ಲೆಕ್ಕಿಸದೇ ತಮ್ಮ ಕೆಲಸದಲ್ಲಿ ತೊಡಗುತ್ತಾರೆ. ಆದರೆ ಮತ್ತೊಂದಿಷ್ಟು ಜನ ಹಲ್ಲಿಯನ್ನು ನೋಡಿದ ಕೂಡಲೇ ಕಿಲೋ ಮೀ. ದೂರ ಹೋಗುತ್ತಾರೆ. ಆದರೆ ಈ ರೀತಿ ಆಗುವುದಕ್ಕೆ ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೀರಾ… ಮಾನಸಿಕ ಆರೋಗ್ಯ ತಜ್ಞರ ಪ್ರಕಾರ, ಹಲ್ಲಿಯನ್ನು ನೋಡಿದ ಕೂಡಲೇ ಹೃದಯದ ಬಡಿತ ಹೆಚ್ಚಾಗುವುದು, ಬೆವರುವುದು, ನಡುಕ ಉಂಟಾಗುವುದು ಅಥವಾ ಆ ಸ್ಥಳದಿಂದ ದೂರ ಹೋಗಬೇಕೆನ್ನಿಸುವುದು ಸಾಮಾನ್ಯ ಲಕ್ಷಣ. ಆದರೆ ಇದು ಕೆಲವೊಮ್ಮೆ ಸಾಮಾನ್ಯ ಭಯವನ್ನು ಮೀರಿದ ಫೋಬಿಯಾ ಕೂಡ ಆಗಿರಬಹುದು. ಹಾಗಾದರೆ ಇದನ್ನು ಫೋಬಿಯಾ ಹೌದೋ ಅಲ್ಲವೋ ಎಂದು ಗುರುತಿಸುವುದು ಹೇಗೆ, ಇದರಿಂದ ಹೊರಬರಲು ಸಾಧ್ಯವೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ, ಭಯವು ಕೇವಲ ಹಲ್ಲಿಯಿಂದ ಮಾತ್ರ ಉಂಟಾಗುವುದಿಲ್ಲ. ಅದರ ರೂಪ, ವೇಗವಾಗಿ ಚಲಿಸುವ ಸ್ವಭಾವ ಮತ್ತು ಯಾವಾಗ ಎಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಅನಿಶ್ಚಿತತೆ ಮೆದುಳಿನಲ್ಲಿ ಅಪಾಯದ ಸಂಕೇತಗಳನ್ನು ಸೃಷ್ಟಿಸಬಹುದು. ವಿಶೇಷವಾಗಿ ಬಾಲ್ಯದ ಅನುಭವಗಳು, ಕುಟುಂಬದವರ ವರ್ತನೆ ಮತ್ತು ಸಾಮಾಜಿಕ ಪ್ರಭಾವಗಳು ಈ ಭಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮನೆಯಲ್ಲಿರುವವರು ಹಲ್ಲಿಯನ್ನು ನೋಡಿ ಅತಿಯಾಗಿ ಹೆದರುವುದನ್ನು ಕಂಡು ಬೆಳೆದ ಮಕ್ಕಳಲ್ಲೂ ಇದೇ ಭಯ ಬೆಳೆಯುವ ಸಾಧ್ಯತೆ ಇದೆ.

ಫೋಬಿಯಾ ಎಂದು ಹೇಗೆ ಗುರುತಿಸಬೇಕು?

ಹಲ್ಲಿಗಳನ್ನು ಇಷ್ಟಪಡದಿರುವುದು ಸಾಮಾನ್ಯ. ಆದರೆ ಆ ಭಯವು ದೈನಂದಿನ ಜೀವನದ ಮೇಲೆ ಪರಿಣಾಮ ಬೀಳಲು ಆರಂಭಿಸಿದರೆ ಅದನ್ನು ಫೋಬಿಯಾ ಎಂದು ಪರಿಗಣಿಸಬಹುದು. ಉದಾಹರಣೆಗೆ, ಹಲ್ಲಿ ಕಾಣಿಸಬಹುದು ಎಂಬ ಕಾರಣಕ್ಕೆ ಕೆಲವು ಕೊಠಡಿಗಳಿಗೆ ಹೋಗುವುದನ್ನು ತಪ್ಪಿಸುವುದು, ಮನೆಯಲ್ಲಿ ಒಬ್ಬರೇ ಇರಲು ಹೆದರಿಕೆ, ಪದೇ ಪದೇ ಗೋಡೆಗಳು ಮತ್ತು ಮೇಲ್ಛಾವಣಿಯ ಕಡೆ ನೋಡುವುದು ಮುಂತಾದ ವರ್ತನೆಗಳು ಕಂಡುಬಂದರೆ ತಜ್ಞರ ಸಲಹೆ ಅಗತ್ಯವಾಗಬಹುದು.

ಚಿಕಿತ್ಸೆ ಸಾಧ್ಯವೇ?

ತಜ್ಞರ ಪ್ರಕಾರ, ಹಲ್ಲಿಗಳ ಭಯಕ್ಕೆ ಪರಿಣಾಮಕಾರಿ ಚಿಕಿತ್ಸೆಗಳಿವೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT) ಹಾಗೂ ಗ್ರಾಡ್ಯುಯಲ್ ಎಕ್ಸ್‌ಪೋಸರ್ ಥೆರಪಿ ಮೂಲಕ ಈ ಭಯವನ್ನು ಹಂತಹಂತವಾಗಿ ಕಡಿಮೆ ಮಾಡಬಹುದು. ಸರಿಯಾದ ಮಾರ್ಗದರ್ಶನ, ಸಹನೆ ಮತ್ತು ಚಿಕಿತ್ಸೆಯ ಮೂಲಕ ಹಲವು ವರ್ಷಗಳಿಂದ ಕಾಡುತ್ತಿರುವ ಫೋಬಿಯಾವನ್ನೂ ನಿಯಂತ್ರಿಸಲು ಸಾಧ್ಯ.

ಗಮನಿಸಿ: ಹಲ್ಲಿಗಳ ಭಯವು ನಿಮ್ಮ ದಿನನಿತ್ಯದ ಚಟುವಟಿಕೆಗಳು, ಮನಶಾಂತಿ ಅಥವಾ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ, ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಸಮಯಕ್ಕೆ ಸರಿಯಾದ ನೆರವು ಪಡೆಯುವುದರಿಂದ ಭಯವನ್ನು ಎದುರಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾರ್ಥಿಗಳ ನೆರವಿಗೆ ನಿಂತ ಗೃಹ ಸಚಿವ: ಬೆಂಗಳೂರಿನಲ್ಲಿ ನೀಟ್ ಪರೀಕ್ಷೆ ಬರೆಯುವವರ ಸುಗಮ ಸಂಚಾರಕ್ಕೆ ಅನುವು – Kannada News | Priyank Kharge Support for Students; NEET Exam Candidates in Bengaluru to Get Smooth Travel Access

ಗೃಹ ಸಚಿವ ಪ್ರಿಯಾಂಕ್ ಖರ್ಗೆImage Credit source: tv9 kannada

ಬೆಂಗಳೂರು, ಜೂನ್​​ 20: ಇತ್ತೀಚೆಗೆ ಟ್ರಾಫಿಕ್‌ಜಾಮ್‌ನಿಂದಾಗಿ ಜಸ್ಟ್​​ ಹತ್ತೇ ನಿಮಿಷ ಲೇಟ್ ಆಗಿದ್ದಕ್ಕೆ ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರಿಗೆ ನಿರಾಕರಿಸಲಾಗಿತ್ತು. ದೂರದ ಊರಿನಿಂದ ಬಂದಿದ್ದ ಅವರು ಕಣ್ಣೀರು ಹಾಕಿದ್ದರು. ಇನ್ನು ನಾಳೆ ರಾಜ್ಯದಲ್ಲಿ ನೀಟ್ ಮರು ಪರೀಕ್ಷೆ (NEET Re Exam) ನಡೆಯುತ್ತಿದ್ದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆ ಮೂಲಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸುಗಮ ಸಂಚಾರದ ಸಹಾಯಕ್ಕಾಗಿ ವಿದ್ಯಾರ್ಥಿಗಳು ಟ್ರಾಫಿಕ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 22943131, 22943030 ನಂಬರ್​ ಸಂಪರ್ಕಿಸಬಹುದಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ನಾಳೆ ನೀಟ್‌ ಮರು ಪರೀಕ್ಷೆ
  • ಪರೀಕ್ಷಾ ಕೇಂದ್ರಗಳಿಗೆ ತೆರಳಲಿರುವ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುವು
  • ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಚೇರಿಯಿಂದ ಮಹತ್ವದ ನಿರ್ಧಾರ

ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುವು

ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ರದ್ದಾಗಿದ್ದ ನೀಟ್‌ ಪರೀಕ್ಷೆ, ನಾಳೆ ನಡೆಯಲಿದೆ. ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ದೇಶಾದ್ಯಂತ ಐನೂರಕ್ಕೂ ಹೆಚ್ಚು ನಗರಗಳಲ್ಲಿ ಮರು ಪರೀಕ್ಷೆ ನಡೆಯಲಿದ್ದು, ಈ ಬಾರಿ ಹಿಂದೆಂದೂ ಕಾಣದ ರೀತಿಯಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಇನ್ನು ವಿದ್ಯಾರ್ಥಿಗಳು ಸಂಚಾರದ ವಿಷಯದಲ್ಲಿ ಯಾವುದೇ ತೊಂದರೆ ಎದುರಾದಲ್ಲಿ ಟ್ರಾಫಿಕ್ ಕಂಟ್ರೋಲ್ ರೂಮ್ ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದಾಗಿದೆ.

ಪ್ರಿಯಾಂಕ್ ಖರ್ಗೆ ಟ್ವೀಟ್​

ಈ ಕುರಿತಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ. ಬೆಂಗಳೂರು ನಗರದಲ್ಲಿ ನಾಳೆ (ಜೂನ್ 21) ನೀಟ್ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ, ಪರೀಕ್ಷಾರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದನ್ನು ಸಂಚಾರಿ ಪೊಲೀಸರು ಪ್ರಮುಖ ಆದ್ಯತೆಯಾಗಿ ಪರಿಗಣಿಸಿದ್ದಾರೆ. ಇದೇ ದಿನ ನಗರದ ವಿವಿಧ ಭಾಗಗಳಲ್ಲಿ ವಿಶ್ವ ಯೋಗ ದಿನಾಚರಣೆ, ಮ್ಯಾರಥಾನ್ ಹಾಗೂ ರಾಜಕೀಯ ಪಕ್ಷವೊಂದರ ಬೃಹತ್ ಕಾರ್ಯಕ್ರಮಗಳು ಆಯೋಜನೆಗೊಂಡಿರುವುದರಿಂದ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸಂಚಾರದಲ್ಲಿ ಪ್ರಮುಖ ಮಾರ್ಪಾಡುಗಳನ್ನು ಮಾಡಲಾಗಿದೆ.

ಇದನ್ನೂ ಓದಿ: ಜಸ್ಟ್​​ ಹತ್ತೇ ನಿಮಿಷ ಲೇಟ್ ಆಗಿದ್ದಕ್ಕೆ​ ನೀಟ್ ಎಕ್ಸಾಂ ಬರೆಯಲು ನಿರಾಕರಣೆ: ಕಣ್ಣೀರಿಟ್ಟ ವಿದ್ಯಾರ್ಥಿನಿಯರು

ಹೀಗಾಗಿ, ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಂಚಾರ ವಿಭಾಗ ಪ್ರಕಟಿಸಿರುವ ಮಾರ್ಗಸೂಚಿ ಹಾಗೂ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಗೊಂದಲವಿಲ್ಲದೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪುವಂತೆ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕಿದೆ. ಒಂದು ವೇಳೆ ಪ್ರಯಾಣದ ಅವಧಿಯಲ್ಲಿ ಸಂಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಎದುರಾದಲ್ಲಿ, ತಕ್ಷಣವೇ ಸಹಾಯ ಪಡೆಯಲು ಟ್ರಾಫಿಕ್ ಕಂಟ್ರೋಲ್ ರೂಮ್‌ನ ದೂರವಾಣಿ ಸಂಖ್ಯೆಗಳಾದ 22943131 ಹಾಗೂ 22943030 ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಟಾಕ್ಸಿಕ್’ ಅಪ್​​ಡೇಟ್ ಬರ್ತಿದೆ ನಾಳೆ ಸ್ವಲ್ಪ ಬಿಡುವು ಮಾಡ್ಕೊಳಿ – Kannada News | Toxic movie to be release new update on June 21

ಯಶ್ (Yash) ನಟನೆಯ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ‘ಟಾಕ್ಸಿಕ್’ ಸಿನಿಮಾದ ಟೀಸರ್ ಈಗಾಗಲೇ ದೊಡ್ಡ ಹವಾ ಎಬ್ಬಿಸಿದ್ದು, ಹಲವು ರೀತಿಯ ಚರ್ಚೆಗಳನ್ನು ಸಹ ಹುಟ್ಟುಹಾಕಿದೆ. ಆದರೆ ಆ ಟೀಸರ್ ಬಿಡುಗಡೆ ಬಳಿಕ ಸಿನಿಮಾದ ಕತೆಯ ಬಗ್ಗೆ ಆ ಸಿನಿಮಾದ ಕೆಲ ನಟಿಯರು ಮಾತನಾಡಿರುವ ರೀತಿ ನೋಡಿದರೆ ಟೀಸರ್ ಮೂಲಕ ಪ್ರೇಕ್ಷಕರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆಯೇ ಎಂಬ ಅನುಮಾನವೂ ಮೂಡುತ್ತಿದೆ. ಈಗಾಗಲೇ ಸಿನಿಮಾದ ಬಿಡುಗಡೆಯನ್ನು ಎರಡು ಬಾರಿ ಮುಂದೂಡಲಾಗಿದ್ದು, ಹೊಸ ಬಿಡುಗಡೆ ದಿನಾಂಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ಚಿತ್ರತಂಡ ಸಿನಿಮಾದ ಬಗ್ಗೆ ಅಪ್​​ಡೇಟ್ ಒಂದನ್ನು ನೀಡಲು ಮುಂದಾಗಿದೆ.

‘ಟಾಕ್ಸಿಕ್’ ಸಿನಿಮಾದ ಅಪ್​​ಡೇಟ್ ಒಂದು ನಾಳೆ ಹೊರಬೀಳಲಿದೆ. ಆದರೆ ಅದೇನಾಗಿರಲಿದೆ ಎಂಬುದನ್ನು ಚಿತ್ರತಂಡ ಹೇಳಿಲ್ಲ. ಬದಲಿಗೆ ‘ನಾಳೆ ಏನಾದ್ರೂ ಪ್ಲ್ಯಾನ್ಸ್ ಇವೆಯೇ?’ ಎಂದಷ್ಟೆ ಕೇಳಲಾಗಿದೆ. ‘ಟಾಕ್ಸಿಕ್’ ಸಿನಿಮಾದ ಅಧಿಕೃತ ಟ್ವಿಟ್ಟರ್ ಪೇಜಿನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್​​ನಲ್ಲಿ ‘ನಾಳೆ ಫ್ರೀ ತಾನೆ?’ ಎಂಬರ್ಥ ಧ್ವನಿಸುವ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಆ ಮೂಲಕ ನಾಳೆ (ಜೂನ್ 21) ಪ್ರಮುಖವಾದ ಅಪ್​​ಡೇಟ್ ಒಂದನ್ನು ಬಿಡುಗಡೆ ಮಾಡುವ ಮುನ್ಸೂಚನೆಯನ್ನು ಚಿತ್ರತಂಡ ನೀಡಿದೆ.

ಸಿನಿಮಾದ ನಾಯಕಿಯರ ಕ್ಯಾರೆಕ್ಟರ್ ಪೋಸ್ಟರ್​​ಗಳ ಜೊತೆಗೆ ಸಿನಿಮಾದ ಮುಖ್ಯ ಪಾತ್ರಧಾರಿ ‘ರಾಯ’ನ ಪಾತ್ರ ಪರಿಚಯದ ಟೀಸರ್ ಹಾಗೂ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರ ಟಿಕೆಟ್​​ನ ಪಾತ್ರ ಪರಿಚಯಕ್ಕಾಗಿ ಮತ್ತೊಂದು ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಾಳೆ ಯಾವ ಅಪ್​​ಡೇಟ್ ಚಿತ್ರತಂಡದಿಂದ ಹೊರ ಬೀಳಲಿದೆ ಎಂಬ ಕುತೂಹಲ ಇದೆ. ಸಿನಿಮಾದ ಬಿಡುಗಡೆ ದಿನಾಂಕ ನಾಳೆ ಘೋಷಣೆಯಾಗುವ ಸಾಧ್ಯತೆಯೂ ಇದೆ.

‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಬೇಕಿತ್ತು. ಆ ಸಮಯದಲ್ಲಿ ಇರಾನ್-ಇಸ್ರೇಲ್ ಮತ್ತು ಅಮೆರಿಕ ಸಂಘರ್ಷದಲ್ಲಿ ತೊಡಗಿಕೊಂಡಿದ್ದ ಕಾರಣಕ್ಕಾಗಿ ಸಿನಿಮಾದ ಬಿಡುಗಡೆಯನ್ನು ಜುಲೈ ತಿಂಗಳೀಗೆ ಮುಂದೂಡಲಾಯ್ತು. ಜೂನ್ 4 ರಂದು ಸಿನಿಮಾ ಬಿಡುಗಡೆ ಆಗಿಲಿದೆ ಎಂದು ಘೋಷಿಸಲಾಗಿತ್ತು. ಆದರೆ ಅದು ಸಹ ಸುಳ್ಳಾಯ್ತು. ಸಿನಿಮಾದ ಗ್ಲೋಬಲ್ ರಿಲೀಸ್​​ಗಾಗಿ ಇನ್ನಷ್ಟು ಸಮಯ ಬೇಕಿರುವ ಕಾರಣ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ ನಾಳೆ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಐವರು ನಾಯಕಿಯರಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಕನ್ನಡತಿ ರುಕ್ಮಿಣಿ ವಸಂತ್. ಸಿನಿಮಾವನ್ನು ಗೀತು ಮೋಹನ್​​ಸಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲೆಬನಾನ್ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್ – Kannada News | Iran Closes Strait Of Hormuz Again Over Israel’s attack In Lebanon

ಟೆಹ್ರಾನ್, ಜೂನ್ 20: ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಸರಣಿ ವೈಮಾನಿಕ ದಾಳಿಗಳನ್ನು ವಿರೋಧಿಸಿ ಇರಾನ್ ಮಿಲಿಟರಿ ಜಾಗತಿಕ ಮಟ್ಟದ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮತ್ತೊಮ್ಮೆ ಸಂಪೂರ್ಣವಾಗಿ ಮುಚ್ಚಿದೆ. ಇತ್ತೀಚೆಗೆ ಮಾಡಿಕೊಳ್ಳಲಾಗಿದ್ದ ಶಾಂತಿ ಒಪ್ಪಂದದ ನಿಯಮಗಳನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಕೂಡ ಇರಾನ್ ಆರೋಪ ಮಾಡಿದೆ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸುತ್ತಿರುವ ತೀವ್ರ ದಾಳಿಗಳ ಹಿಂದೆ ಅಮೆರಿಕದ ಕುಮ್ಮಕ್ಕಿದೆ ಎಂದು ಇರಾನ್ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಾದೇಶಿಕ ಭದ್ರತೆಗೆ ಧಕ್ಕೆ ಬಂದಿರುವುದರಿಂದ ನಮ್ಮ ಸಾರ್ವಭೌಮತ್ವ ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರವನ್ನು ಸ್ಥಗಿತಗೊಳಿಸಿರುವುದಾಗಿ ಇರಾನ್ ಮಿಲಿಟರಿ ಪ್ರಕಟಿಸಿದೆ. ಇತ್ತೀಚೆಗಷ್ಟೇ ನಡೆದಿದ್ದ ಶಾಂತಿ ಒಪ್ಪಂದದ ನಿಯಮಗಳನ್ನು ಅಮೆರಿಕ ಗಾಳಿಗೆ ತೂರಿದೆ ಎಂದು ಇರಾನ್ ಮುಖಂಡರು ಆರೋಪಿಸಿದ್ದಾರೆ. “ಒಂದೆಡೆ ಶಾಂತಿ ಮಾತುಕತೆ ನಡೆಸಿ, ಮತ್ತೊಂದೆಡೆ ಇಸ್ರೇಲ್‌ನ ಆಕ್ರಮಣಕಾರಿ ದಾಳಿಗಳಿಗೆ ಅಮೆರಿಕ ಬೆಂಬಲ ನೀಡುತ್ತಿರುವುದು ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಇರಾನ್ ಟೀಕಿಸಿದೆ.

ಇದನ್ನೂ ಓದಿ: ‘ಇರಾನ್ ಕತೆ ಮುಗಿಯಿತು, ಅವರಿಗೆ ಒಂದು ಪೈಸೆಯೂ ಸಿಗುವುದಿಲ್ಲ’; ಕಿಡಿಕಾರಿದ ಟ್ರಂಪ್

ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು ಶೇ. 20ಕ್ಕಿಂತ ಹೆಚ್ಚು ಭಾಗವು ಈ ಹಾರ್ಮುಜ್ ಜಲಸಂಧಿಯ ಮಾರ್ಗದ ಮೂಲಕವೇ ಸಾಗುತ್ತದೆ. ಇದು ಮುಚ್ಚಲ್ಪಟ್ಟಿರುವುದರಿಂದ ಕಚ್ಚಾ ತೈಲ ಸರಬರಾಜಿಗೆ ಭಾರಿ ಅಡ್ಡಿಯಾಗಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಗಗನಕ್ಕೇರುವ ಆತಂಕ ಮೂಡಿದೆ. ಭಾರತವು ತನ್ನ ಕಚ್ಚಾ ತೈಲದ ಬಹುಪಾಲು ಭಾಗವನ್ನು ಮಧ್ಯಪ್ರಾಚ್ಯ ದೇಶಗಳಿಂದ ಈ ಮಾರ್ಗದ ಮೂಲಕವೇ ಆಮದು ಮಾಡಿಕೊಳ್ಳುವುದರಿಂದ, ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ಇದು ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: ನಾಳೆಯೇ ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ; ತಕ್ಷಣವೇ ಹಾರ್ಮುಜ್ ತೆರೆಯಲಾಗುವುದು ಎಂದ ಟ್ರಂಪ್

ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಸಾಗಣೆ ಕೇಂದ್ರಗಳಲ್ಲಿ ಒಂದಾಗಿದೆ. ಇದು ಜಾಗತಿಕ ತೈಲ ಮತ್ತು ಅನಿಲ ರವಾನೆಗೆ ಮುಖ್ಯ ಮಾರ್ಗವಾಗಿ ನಿರ್ವಹಿಸುತ್ತದೆ. ಈ ಜಲಮಾರ್ಗದಲ್ಲಿ ಕಡಲ ಸಂಚಾರಕ್ಕೆ ಯಾವುದೇ ಅಡಚಣೆಯುಂಟಾದರೂ ಅದು ಅಂತಾರಾಷ್ಟ್ರೀಯ ಇಂಧನ ಮತ್ತು ಹಡಗು ಮಾರುಕಟ್ಟೆಗಳಲ್ಲಿ ಭಾರಿ ಆತಂಕವನ್ನು ಉಂಟುಮಾಡುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಡಾಂಬರೀಕರಣದಲ್ಲಿ ಕಳ್ಳಾಟ: ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಮೊದಲ ವಿಕೆಟ್ ಪತನ – Kannada News | Minister Krishna byre gowda Suspends GBA Assistant Engineer Over Poor Road Repair In bengaluru

ಬೆಂಗಳೂರು, (ಜೂನ್ 20): ಹಲವು ಗೊಂದಲಗಳ ನಡುವೆಯೇ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಕೃಷ್ಣಭೈರೇಗೌಡ ಅವರು ಮೊದಲ ಸಭೆಯಲ್ಲೇ ನಗರದ ರಸ್ತೆಗಳ ಬಗ್ಗೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದರು. ಬೆಂಗಳೂರು ರಸ್ತೆ ಗುಂಡಿ ಮುಚ್ಚೋದು ರಾಕೆಟ್ ಸೈನ್ಸಾ? ಎಂದು ಜಿಬಿಎ ಅಧಿಕಾರಿಗಳ ಚಳಿ ಬಿಡಿಸಿದ್ದರು. ಇದರ ಮಧ್ಯೆಯೇ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಮೊದಲ ವಿಕೆಟ್ ಪತನವಾಗಿದೆ. ಹೌದು… ಕ್ರೆಸೆಂಟ್ ರಸ್ತೆಯ ಡಾಂಬರೀಕರಣದಲ್ಲಿ ಕಳ್ಳಾಟವಾಡಿ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಸಂಪಂಗಿರಾಮನಗರ ಸಹಾಯಕ ಇಂಜಿನಿಯರ್ ಪೂಜಾರಪ್ಪ ಅಮಾನತುಗೊಂಡವರು.

ಸರಿಯಾದ ಪ್ರಮಾಣದಲ್ಲಿ ಮತ್ತು ದಪ್ಪ ಆಸ್ಪಾಲ್ಟಿಂಗ್ ಮಾಡದೇ ಅಸಡ್ಡೆ ಬೇಜವಾಬ್ದಾರಿತನದಿಂದ ಕರ್ತವ್ಯಲೋಪ ಹಿನ್ನಲೆಯಲ್ಲಿ ಎಇ ಪೂಜಾರಪ್ಪನನ್ನು ಜಿಬಿಎ ಅಮಾನತು ಮಾಡಿದೆ. ಅಲ್ಲದೇ ಕೃಷ್ಣಭೈರೇಗೌಡ ಅವರು, ರಸ್ತೆ ಮಾಡಿದ ಗುತ್ತಿಗೆದಾರರನ ಪೂರ್ಣ ವಿವರ ಕೇಳಿದ್ದು, ಜೊತೆಗೆ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ ಸೇರ್ಪಡೆಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಗುಂಡಿ ಇಲ್ಲದ ರಸ್ತೆ ನಿರ್ಮಾಣ ರಾಕೆಟ್ ಸೈನ್ಸಾ? ಮೊದಲ ಸಭೆಯಲ್ಲೇ ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಕ್ಲಾಸ್

Source link

IND vs AFG: ಜೈಸ್ವಾಲ್ ಅಜೇಯ ಶತಕ; ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ – Kannada News | India Dominates Afghanistan: Clean Sweeps ODI Series After Test Victory in Chennai

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಆತಿಥೇಯ ಭಾರತ 9 ವಿಕೆಟ್​ಗಳಿಂದ ಗೆದ್ದುಕೊಂಡಿದೆ. ಏಕದಿನ ಸರಣಿಗೂ ಮುನ್ನ ನಡೆದಿದ್ದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಜಯ ಸಾಧಿಸಿದ್ದ ಟೀಂ ಇಂಡಿಯಾ, ಇದೀಗ ಏಕದಿನ ಸರಣಿಯನ್ನು ಸಹ ಕ್ಲೀನ್ ಸ್ವೀಪ್ ಮಾಡಿದೆ. ಅಂದರೆ ಭಾರತದ ಪ್ರವಾಸದಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ 218 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಭಾರತ ಕೇವಲ 1 ವಿಕೆಟ್ ಕಳೆದುಕೊಂಡು 28.4 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿತು.

Source link

Exit mobile version