Ayodhya Ram Lalla: ಅಯೋಧ್ಯೆ ರಾಮಲಲ್ಲಾನಿಗೆ ಜಗತ್ತಿನ ಅತ್ಯಂತ ದುಬಾರಿ ಮಾವು ಅರ್ಪಿಸಿದ ರೈತ – Kannada News | Miyazaki Mango: Ayodhya Ram Lalla Receives World’s Costliest Mango, Grown Locally!

ಅತ್ಯಂತ ದುಬಾರಿ ‘ಮಿಯಾಜಾಕಿ’ ಮಾವಿನ ಹಣ್ಣು

ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮನಿಗೆ (ರಾಮಲಲ್ಲಾ) ಅತ್ಯಂತ ವಿಶೇಷ ಹಾಗೂ ಅಪರೂಪದ ಹಣ್ಣನ್ನು ಅರ್ಪಿಸಲಾಗಿದೆ. ಜಗತ್ತಿನ ಅತ್ಯಂತ ದುಬಾರಿ ಮಾವಿನ ತಳಿ ಎಂದು ಹೆಸರುವಾಸಿಯಾಗಿರುವ ‘ಮಿಯಾಜಾಕಿ’ (Miyazaki) ಮಾವಿನ ಹಣ್ಣನ್ನು ರಾಮಲಲ್ಲಾಗೆ ನೈವೇದ್ಯವಾಗಿ ನೀಡಲಾಗಿದೆ. ಅತ್ಯಂತ ಕುತೂಹಲಕಾರಿ ವಿಷಯವೆಂದರೆ, ಈ ಮಾವಿನ ಹಣ್ಣನ್ನು ಎಲ್ಲೂ ಹೊರದೇಶದಿಂದ ತರಿಸಲಾಗಿಲ್ಲ, ಬದಲಿಗೆ ಅಯೋಧ್ಯೆಯ ಸ್ಥಳೀಯ ರೈತರಾದ ಓಂಪ್ರಕಾಶ್ ಸಿಂಗ್ ಎಂಬುವವರು ತಮ್ಮದೇ ತೋಟದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆಸಿದ್ದಾರೆ. ಓಂಪ್ರಕಾಶ್ ಅವರು ಸುಮಾರು ಎರಡು ವರ್ಷಗಳ ಹಿಂದೆ ಈ ಜಪಾನಿ ತಳಿಯ ಗಿಡವನ್ನು ನೆಟ್ಟಿದ್ದರು. ಈ ಋತುವಿನಲ್ಲಿ ಬಿಟ್ಟ ಮೊದಲ ಒಂದು ಡಜನ್ ಹಣ್ಣುಗಳನ್ನು ಅವರು ಅತ್ಯಂತ ಭಕ್ತಿಯಿಂದ ತಮ್ಮ ಆರಾಧ್ಯ ದೈವ ಶ್ರೀರಾಮನ ಚರಣಗಳಿಗೆ ಸಮರ್ಪಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಬರೋಬ್ಬರಿ 2.5 ರಿಂದ 3 ಲಕ್ಷ ರೂಪಾಯಿ ಹಾಗೂ ಕೇವಲ ಒಂದೇ ಒಂದು ಹಣ್ಣಿಗೆ 60 ರಿಂದ 80 ಸಾವಿರ ರೂಪಾಯಿ ಬೆಲೆ ಬಾಳುವ ಈ ಮಿಯಾಜಾಕಿ ಮಾವಿನ ಹಣ್ಣಿನಲ್ಲಿ ಅಂತಹದ್ದೇನು ವಿಶೇಷತೆ ಇದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮಿಯಾಜಾಕಿ ಮಾವು ಇಷ್ಟೊಂದು ದುಬಾರಿ ಮತ್ತು ವಿಶೇಷ ಏಕೆ?

ಈ ಮಾವಿನ ಹಣ್ಣು ಮೂಲತಃ ಜಪಾನ್ ದೇಶದ ‘ಮಿಯಾಜಾಕಿ’ ಪ್ರಾಂತ್ಯದಲ್ಲಿ ಬೆಳೆಯುವುದರಿಂದ ಇದಕ್ಕೆ ‘ಮಿಯಾಜಾಕಿ’ ಎಂಬ ಹೆಸರು ಬಂದಿದೆ. ತನ್ನ ವಿಶಿಷ್ಟ ಗುಣಗಳಿಂದಾಗಿ ಇದನ್ನು ವಿಶ್ವದ ಅತ್ಯಂತ ಪ್ರೀಮಿಯಂ ಹಣ್ಣುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಬಣ್ಣ ಬದಲಾಯಿಸುವ ಜಾದೂ:

ಈ ಮಾವಿನ ಹಣ್ಣು ಗಿಡದಲ್ಲಿ ಬೆಳೆಯುವ ಆರಂಭಿಕ ಹಂತದಲ್ಲಿ ನೇರಳೆ ಬಣ್ಣದ್ದಾಗಿರುತ್ತದೆ. ಆದರೆ, ಹಣ್ಣು ಸಂಪೂರ್ಣವಾಗಿ ಪಕ್ವವಾಗುತ್ತಿದ್ದಂತೆ ಗಾಢ ಕೆಂಪು (Ruby Red) ಬಣ್ಣಕ್ಕೆ ತಿರುಗುತ್ತದೆ. ಈ ಅದ್ಭುತ ಬಣ್ಣದ ಕಾರಣದಿಂದಾಗಿ ಜಪಾನ್‌ನಲ್ಲಿ ಇದನ್ನು ‘ಟಾಯೋ ನೋ ಟಮಾಗೋ’ (Taiyo no Tamago) ಅಂದರೆ ‘ಸೂರ್ಯನ ಮೊಟ್ಟೆ’ (Egg of the Sun) ಎಂದೂ ಕರೆಯುತ್ತಾರೆ.

ಪೋಷಕಾಂಶಗಳ ಗಣಿ:

ಮಿಯಾಜಾಕಿ ಮಾವಿನಲ್ಲಿ ಆ್ಯಂಟಿ-ಆಕ್ಸಿಡೆಂಟ್‌ಗಳು, ಬೀಟಾ-ಕ್ಯಾರೋಟಿನ್, ವಿಟಮಿನ್ A ಮತ್ತು ವಿಟಮಿನ್ C ಸಮೃದ್ಧವಾಗಿ ಕಂಡುಬರುತ್ತದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ರಾಜಾತಿಥ್ಯದ ಆರೈಕೆ:

ಈ ಹಣ್ಣನ್ನು ಬೆಳೆಸುವಾಗ ಪ್ರತಿಯೊಂದು ಹಣ್ಣನ್ನೂ ಗಿಡದಲ್ಲಿರುವಾಗಲೇ ಒಂದು ವಿಶೇಷವಾದ ಜಾಲರಿಯ ಚೀಲದಿಂದ (Net Bag) ಮುಚ್ಚಲಾಗುತ್ತದೆ. ಇದರಿಂದ ಹಣ್ಣಿಗೆ ಎಲ್ಲಾ ಕಡೆಯಿಂದ ಸಮಾನವಾಗಿ ಸೂರ್ಯನ ಬೆಳಕು ಸಿಗುತ್ತದೆ, ಕೀಟಗಳಿಂದ ರಕ್ಷಣೆ ಸಿಗುತ್ತದೆ ಮತ್ತು ಹಣ್ಣು ಹಣ್ಣಾಗಿ ಕೆಳಗೆ ಬಿದ್ದರೂ ನೆಲಕ್ಕೆ ಬಡಿದು ಹಾಳಾಗುವುದಿಲ್ಲ.

ಜಪಾನ್‌ನಲ್ಲಿ ಹರಾಜು ಪ್ರಕ್ರಿಯೆ:

ಜಪಾನ್‌ನಲ್ಲಿ ಈ ಮಾವನ್ನು ಸಾಮಾನ್ಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಿಲ್ಲ. ಬದಲಿಗೆ ಅತ್ಯುತ್ತಮ ಗುಣಮಟ್ಟದ ಹಣ್ಣುಗಳನ್ನು ದೊಡ್ಡ ಮಟ್ಟದಲ್ಲಿ ಹರಾಜು (Auction) ಹಾಕುವ ಮೂಲಕ ಮಾರಲಾಗುತ್ತದೆ.

ಇದನ್ನು ಯಾವಾಗ ಮತ್ತು ಹೇಗೆ ಬೆಳೆಸಲಾಗುತ್ತದೆ?

ಮಿಯಾಜಾಕಿ ಮಾವನ್ನು ಬೆಳೆಸಲು ಅತ್ಯಂತ ಎಚ್ಚರಿಕೆ ಮತ್ತು ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳ ಅಗತ್ಯವಿರುತ್ತದೆ. ಸಾಮಾನ್ಯವಾಗಿ ಈ ಮರದಲ್ಲಿ ಡಿಸೆಂಬರ್‌ನಿಂದ ಫೆಬ್ರವರಿ ನಡುವೆ ಹೂವು ಬಿಡಲು ಪ್ರಾರಂಭವಾಗುತ್ತದೆ. ಮಾರ್ಚ್ ಮತ್ತು ಮೇ ನಡುವೆ ಕಾಯಿ ಕಟ್ಟಿ, ಮೇ ನಿಂದ ಜುಲೈ ತಿಂಗಳ ಅವಧಿಯಲ್ಲಿ ಹಣ್ಣುಗಳನ್ನು ಮರದಿಂದ ಕೊಯ್ಯಲಾಗುತ್ತದೆ. ಇದನ್ನು ಬೆಳೆಸಲು 24°C ನಿಂದ 35°C ತಾಪಮಾನವು ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿದೆ. ಈ ಗಿಡಕ್ಕೆ ಉತ್ತಮ ಬಿಸಿಲಿನ ಅಗತ್ಯವಿರುತ್ತದೆ, ಆದರೆ ಅತಿಯಾದ ನೀರು ಮತ್ತು ತೇವಾಂಶದಿಂದ ಇದನ್ನು ರಕ್ಷಿಸಬೇಕಾಗುತ್ತದೆ. ಹಣ್ಣಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕಾಲಕಾಲಕ್ಕೆ ಮರದ ರೆಂಬೆಗಳನ್ನು ಕತ್ತರಿಸಲಾಗುತ್ತದೆ. ಇದರಿಂದ ಪ್ರತಿಯೊಂದು ಹಣ್ಣಿಗೂ ಗಾಳಿ ಮತ್ತು ಸೂರ್ಯನ ಬೆಳಕು ನೇರವಾಗಿ ತಲುಪುತ್ತದೆ.

ಈಗ ಭಾರತದಲ್ಲೂ ಇದರ ಹೆಜ್ಜೆ ಗುರುತು; ಆದರೆ ಇಷ್ಟೇ ಬೆಲೆ ಇರಲಿದೆಯೇ?

ಪ್ರಸ್ತುತ ಈ ಜಪಾನಿ ಮಾವನ್ನು ಭಾರತದ ಕೆಲವು ಆಯ್ದ ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ನಿಧಾನವಾಗಿ ಬೆಳೆಯಲು ಪ್ರಾರಂಭಿಸಲಾಗಿದೆ. ಆದಾಗ್ಯೂ, ಜಪಾನ್ ಮತ್ತು ಭಾರತದ ಕೃಷಿ ಪದ್ಧತಿಯಲ್ಲಿ ದೊಡ್ಡ ವ್ಯತ್ಯಾಸವಿದೆ. ಜಪಾನ್‌ನಲ್ಲಿ ಇದನ್ನು ವಿಜ್ಞಾನಿಗಳ ಕಣ್ಗಾವಲಿನಲ್ಲಿ, ಕಟ್ಟುನಿಟ್ಟಾದ ಮಾನದಂಡಗಳು ಮತ್ತು ವಿಶೇಷ ತಂತ್ರಜ್ಞಾನಗಳೊಂದಿಗೆ ಪ್ರೀಮಿಯಂ ಉತ್ಪನ್ನವಾಗಿ ಬೆಳೆಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:11 pm, Sat, 20 June 26

Source link

ಡಿಕೆ ಶಿವಕುಮಾರ್ ಸರ್ಕಾರದ 2ನೇ ಸಚಿವ ಸಂಪುಟದ ಮಹತ್ವದ ನಿರ್ಣಯಗಳು ಹೀಗಿವೆ – Kannada News | Key Decisions Taken by the 2nd Cabinet of the DK Shivakumar Government

ಸಿಎಂ ಡಿಕೆ ಶಿವಕುಮಾರ್​​Image Credit source: tv9 kannada

ಬೆಂಗಳೂರು, ಜೂನ್​ 20: ಡಿಕೆ ಶಿವಕುಮಾರ್ (DK Shivakumar)​​ ಸಿಎಂ ಆದ ಬಳಿಕ ಇಂದು ಎರಡನೇ ಸಚಿವ ಸಂಪುಟ ಸಭೆ ಮಾಡಿದರು. ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅದರಲ್ಲೂ ಪ್ರಮುಖವಾಗಿ ಪ್ರತ್ಯೇಕ ಪ್ರಜಾಸೇವೆ ಇಲಾಖೆ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಈ ಹೊಸ ಇಲಾಖೆಯಲ್ಲಿ ಪ್ರತ್ಯೇಕ ಸಚಿವರು ಮತ್ತು IAS ಅಧಿಕಾರಿಗಳು ಇರಲಿದ್ದು, ಜನರ ಸಮಸ್ಯೆಗಳನ್ನ ಇತ್ಯರ್ಥ ಪಡಿಸಲಿದ್ದಾರೆ.

ಮುಖ್ಯಾಂಶಗಳು

  • ಎರಡನೇ ಸಚಿವ ಸಂಪುಟ ಸಭೆ ಮಾಡಿದ ಸಿಎಂ ಡಿಕೆ ಶಿವಕುಮಾರ್​
  • ಪ್ರತ್ಯೇಕ ಪ್ರಜಾಸೇವೆ ಇಲಾಖೆ ಸ್ಥಾಪನೆ
  • ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಭವನ

ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು 

ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಿಎಂ ಡಿಕೆ ಶಿವಕುಮಾರ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಇಂದು ಎರಡನೇ ಕ್ಯಾಬಿನೆಟ್ ಮೀಟಿಂಗ್ ನಡೆದಿದೆ. ಸಮಸ್ಯೆ ಇದ್ದಾಗ ನ್ಯಾಯ ಕೊಡಿಸಲು ಪ್ರತ್ಯೇಕ ಪ್ರಜಾಸೇವೆ ಇಲಾಖೆ ಸ್ಥಾಪನೆ ಮಾಡಿದ್ದೇವೆ. ಈ ಇಲಾಖೆಯಡಿ 224 ಕ್ಷೇತ್ರಗಳಲ್ಲಿ ಎಲ್ಲಾ ಸಚಿವರು ಸ್ಥಳೀಯ ಶಾಸಕರ ಜೊತೆ ವಾರಕ್ಕೊಮ್ಮೆ ಸಭೆ ನಡೆಸಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ: ಸಾರ್ವಜನಿಕರ ಕುಂದು ಕೊರತೆ ನಿರ್ವಹಣೆಗೆ ಡಿಕೆಶಿ ದಿಟ್ಟ ಹೆಜ್ಜೆ: ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಸೇವೆ ಇಲಾಖೆ ಸ್ಥಾಪನೆ

ಬೆಂಗಳೂರು ನಗರದ ವೈದ್ಯಕೀಯ ಕಾಲೇಜಿನಲ್ಲಿ ಉಪಕರಣ ಖರೀದಿಗೆ 60 ಕೋಟಿ ರೂ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬಳ್ಳಾರಿಯ ಸಂಡೂರಿನಲ್ಲಿ 30 ಕೋಟಿ ರೂ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. 235 ಕೋಟಿ ರೂ ವೆಚ್ಚದಲ್ಲಿ 620 ಬಸ್ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇನ್ನು ಈ ವೇಳೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಡೀಸೆಲ್ ಬೆಲೆ ಹೆಚ್ಚಾಗಿದೆ. ಕೆಎಸ್​​ಆರ್​ಟಿಸಿ ಉಳಿಸಬೇಕು, ಜನರಿಗೂ ಹೊರೆಯಾಗಬಾರದು. ರಾಜ್ಯದ ಹಿತಕ್ಕಾಗಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಭವನ

ದೆಹಲಿಯ ಕರ್ನಾಟಕ ಭವನ ನಿರ್ಮಾಣ ಕೆಲಸ ಸಮರ್ಪಕವಾಗಿಲ್ಲ, ಹೀಗಾಗಿ ಕಟ್ಟಡ ನವೀಕರಣ ಮಾಡೋದಕ್ಕೆ ಚಿಂತನೆ ನಡೆಸಿದ್ದೇವೆ. ಹೊಸ ತಂಡವನ್ನು ನಿಯೋಜನೆ ಮಾಡಬೇಕಿದೆ. ಐದಾರು ಹಿರಿಯ ಅಧಿಕಾರಿಗಳನ್ನು ನೇಮಿಸಿ ಜವಾಬ್ದಾರಿ ನೀಡುತ್ತೇವೆ. ರಾಜ್ಯದ ಅನೇಕ ಯೋಜನೆಗಳ ಕೆಲಸ ಕೇಂದ್ರದಲ್ಲಿ ಆಗಬೇಕಿದೆ. ದೆಹಲಿಯ ಲೀಗಲ್ ಸೆಲ್ ಕೂಡ ರೀಸ್ಟ್ರಕ್ಚರ್ ಮಾಡಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ; 50 ಲಕ್ಷ ಅನಿವಾಸಿ ಭಾರತೀಯರ ನೆರವಿಗೆ ನಿಂತ ರಾಜ್ಯ ಸರ್ಕಾರ

ಇನ್ನು UPSC ಓದುವ ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ನಾಲ್ಕನೇ ಕರ್ನಾಟಕ ಭವನ ನಿರ್ಮಾಣ ಮಾಡುತ್ತೇವೆ. ಕಟ್ಟಡ ನಿರ್ಮಾಣಕ್ಕೆ 80 ಕೋಟಿ ರೂ ಹಣ ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕರ್ನಾಟಕ ಭವನದಲ್ಲಿ 50% ಎಸ್​​ಸಿ, ಎಸ್​ಟಿ ವಿದ್ಯಾರ್ಥಿಗಳಿಗೆ ಅವಕಾಶ ಕೊಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್​ ತಿಳಿಸಿದ್ದಾರೆ.

ಖಾಲಿ ನಿವೇಶನಕ್ಕೆ ಒಸಿ, ಸಿಸಿ ಇಲ್ಲ

ವಸತಿ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರು ಸಂಪರ್ಕಕ್ಕೆ ಒಸಿ, ಸಿಸಿ ವಿಚಾರವಾಗಿ ಮಾತನಾಡಿದ ಸಿಎಂ, ಪೂರ್ಣಗೊಂಡಿರುವ ಹಳೆಯ ಕಟ್ಟಡ, ತಾತ್ಕಾಲಿಕ ವಿದ್ಯುತ್ ಸಂಪರ್ಕವಿದ್ದವರಿಗೆ ನೀರು ಹಾಗೂ ವಿದ್ಯುತ್ ಕೊಡಲಿದ್ದೇವೆ. ಖಾಲಿ ಇರುವ ನಿವೇಶನಕ್ಕೆ ಒಸಿ, ಸಿಸಿ ಕೊಡಲು ಸಾಧ್ಯವಿಲ್ಲ. ಸರ್ಕಾರದ ಆದೇಶ ಆದ ದಿನದಿಂದ 15 ದಿನ ಹೆಚ್ಚುವರಿ ಅವಕಾಶ ನೀಡುತ್ತೇವೆ ಎಂದು ತಿಳಿಸಿದರು.

ನಾನು ಜೈಲಿಗೆ ಹೋಗಲು ತಯಾರಿಲ್ಲ ಎಂದ ಡಿಕೆ ಶಿವಕುಮಾರ್​

ಬಿಡದಿ ಟೌನ್‌ಶಿಪ್ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್​, ಹೆಚ್​ಡಿ ಕುಮಾರಸ್ವಾಮಿ ಮತ್ತು​ ಬಿಎಸ್ ಯಡಿಯೂರಪ್ಪ ಮಾಡಿದ್ದನ್ನೇ ಮುಂದುವರಿಸುತ್ತಿದ್ದೇವೆ. ನಾವೇನು ಹೊಸದಾಗಿ ಟೌನ್‌ಶಿಪ್ ಯೋಜನೆ ಮಾಡುತ್ತಿಲ್ಲ. ವಿರೋಧ ಪಕ್ಷದವರು ರಾಜಕಾರಣಕ್ಕಾಗಿ ಮಾತನಾಡುತ್ತಿದ್ದಾರೆ. ಯಾರಿಗೂ ನಾವು ಬಲವಂತ ಮಾಡಲು ಹೋಗುತ್ತಿಲ್ಲ. ಡಿನೋಟಿಫೈ ಮಾಡಿ ನಾನು ಜೈಲಿಗೆ ಹೋಗಲು ತಯಾರಿಲ್ಲ. ಹೆಚ್​.ಡಿ.ಕುಮಾರಸ್ವಾಮಿ ರೆಡ್ ಝೋನ್ ಏಕೆ ಮಾಡಿದರು, ಅವರೇ ಡಿನೋಟಿಫೈ ಮಾಡಬಹುದಿತ್ತು ಎಂದರು.

ಭೂಮಿ ಕೊಡಲು ರೈತರೇ ಮುಂದೆ ಬಂದಿದ್ದಾರೆ

ಭೂಮಿ ನೀಡುತ್ತಿರುವ ರೈತರಿಗೆ ಒಳ್ಳೆಯ ಪರಿಹಾರ ಕೊಡುತ್ತಿದ್ದೇವೆ. ಭೂಮಿ ಕೊಟ್ಟ ರೈತರಿಗೆ 50% ಅಭಿವೃದ್ಧಿ ಜಾಗವನ್ನೂ ಕೊಡುತ್ತಿದ್ದೇವೆ. ಇನ್ನು ದೇವನಹಳ್ಳಿಯ ಚನ್ನರಾಯಪಟ್ಟಣ ರೈತರ ಭೂಸ್ವಾಧಿನ ವಿಚಾರ, ಭೂಮಿಯನ್ನು ಕೊಡಲು ರೈತರೇ ಮುಂದೆ ಬಂದಿದ್ದಾರೆ. ಭೂಮಿ ಕೊಡುವವರಿಗೆ ಮತ್ತೊಮ್ಮೆ ಅವಕಾಶ ಕೊಡಲಾಗುವುದು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟ್ರಂಪ್ ಭೇಟಿ ವಿಚಾರ; ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ನಾಯಕ ಶಶಿ ತರೂರ್ – Kannada News | Congress Leader Shashi Tharoor Backs PM Narendra Modi Over Donald Trump Meet in France

ನವದೆಹಲಿ, ಜೂನ್ 20: ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಗಳನ್ನು ತೀವ್ರವಾಗಿ ಟೀಕಿಸುವ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಈ ಬಾರಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ವಿಚಾರದಲ್ಲಿ ಪ್ರಧಾನಿ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೇಶದ ಹಿತಾಸಕ್ತಿ ಮತ್ತು ರಾಜತಾಂತ್ರಿಕತೆಯ ವಿಷಯ ಬಂದಾಗ ಪಕ್ಷದ ರಾಜಕೀಯವನ್ನು ಬದಿಗೆ ಸರಿಸಬೇಕು ಎಂದು ಶಶಿ ತರೂರ್ ಪ್ರತಿಪಾದಿಸಿದ್ದಾರೆ.

ವಿಶ್ವ ರಾಜಕಾರಣದಲ್ಲಿ ಡೊನಾಲ್ಡ್ ಟ್ರಂಪ್ ಅವರ ನಡೆಗಳು ಮತ್ತು ಹೇಳಿಕೆಗಳು ಅತ್ಯಂತ ಅನಿರೀಕ್ಷಿತವಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು, ವ್ಯಾಪಾರ ಒಪ್ಪಂದಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಲು ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗೆ ನಡೆಸಿರುವ ಮಾತುಕತೆ ಅತ್ಯಂತ ಪ್ರಮುಖವಾಗಿದೆ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Rahul Gandhi Birthday: 56ನೇ ವರ್ಷಕ್ಕೆ ಕಾಲಿಟ್ಟ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಶುಭಾಶಯ

“ವಿದೇಶಾಂಗ ನೀತಿಯ ವಿಷಯದಲ್ಲಿ ಭಾರತವು ಒಂದೇ ಧ್ವನಿಯಲ್ಲಿ ಮಾತನಾಡಬೇಕು. ಪ್ರಧಾನಿ ಮೋದಿ ಅವರು ವಿದೇಶದಲ್ಲಿ ಭಾರತದ ಪ್ರತಿನಿಧಿಯಾಗಿ ಅಮೆರಿಕದ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ಈ ಭೇಟಿಯು ದೇಶದ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳಿಗೆ ಪೂರಕವಾಗಿದೆ” ಎಂದು ಶಶಿ ತರೂರ್ ಹೇಳಿದ್ದಾರೆ. ಹಾಗೇ, ಟ್ರಂಪ್ ಅವರಂತಹ ನಾಯಕರೊಂದಿಗೆ ವೈಯಕ್ತಿಕ ಸ್ನೇಹ ಮತ್ತು ಕೆಮಿಸ್ಟ್ರಿ ಹೊಂದುವುದು ರಾಜತಾಂತ್ರಿಕ ಮಾತುಕತೆಗಳಲ್ಲಿ ಭಾರತಕ್ಕೆ ಮೇಲುಗೈ ತಂದುಕೊಡುತ್ತದೆ ಎಂದು ಕೂಡ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ನಾವಿಕರ ವಿಷಯ ಬಂದಾಗ, ಪ್ರಧಾನಮಂತ್ರಿಯವರು ಸಾರ್ವಜನಿಕ ಭಾಷಣದಲ್ಲಿ ಮತ್ತು ನನ್ನ ತಿಳುವಳಿಕೆಯ ಪ್ರಕಾರ ಖಾಸಗಿಯಾಗಿಯೂ ಸಹ ಅತ್ಯಂತ ಬಲವಾಗಿ ತಮ್ಮ ನಿಲುವನ್ನು ಮಂಡಿಸಿದ್ದಾರೆ. ವಿವಿಧ ಹಡಗುಗಳಲ್ಲಿ ನಮ್ಮ ನಾವಿಕರು ಇದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದು ಭಾರತೀಯ ಹಡಗಾಗಿರಲಿಲ್ಲ, ಆದರೆ ಇತರ ದೇಶಗಳ ಧ್ವಜ ಹೊಂದಿರುವ ಹಡಗುಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯ ಸಿಬ್ಬಂದಿ ಮತ್ತು ನಾವಿಕರು ಇದ್ದಾರೆ. ಅವರು ವಾಣಿಜ್ಯ ಹಡಗು ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ನಾಗರಿಕರಾಗಿರುವವರೆಗೆ ಅವರನ್ನು ಯುದ್ಧದ ಹೋರಾಟಗಾರರಂತೆ ಪರಿಗಣಿಸಬಾರದು. ಈ ಬಗ್ಗೆ ಮೋದಿಯವರ ನಿಲುವು ಸರಿಯಾಗಿದೆ” ಎಂದು ಶಶಿ ತರೂರ್ ತಿಳಿಸಿದ್ದಾರೆ.

ಇದನ್ನೂ ಓದಿ: ಯುದ್ಧ-ಸಂಘರ್ಷದಿಂದ ದೂರ, ವ್ಯವಹಾರದಲ್ಲಿ ಚತುರ: ಪ್ರಧಾನಿ ಮೋದಿ ಶ್ರೇಷ್ಠ ನಾಯಕನೆಂದು ಹೊಗಳಿದ ಡೊನಾಲ್ಡ್ ಟ್ರಂಪ್

ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸ ಮತ್ತು ಭೇಟಿಯನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಹಿಂದೆ ಕೂಡ ಹಲವು ಬಾರಿ ಶಶಿ ತರೂರ್ ಪ್ರಧಾನಿ ನರೇಂದ್ರ ಮೋದಿಯವರನ್ನು ಮೆಚ್ಚಿ ಹೇಳಿಕೆ ನೀಡಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:23 pm, Sat, 20 June 26

Source link

ಡೀಸೆಲ್ ದರ ನೋಡಿದ್ರೆ ಗಾಬರಿಯಾಗುತ್ತೆ ಎಂದ ಡಿಕೆಶಿ: ಬಸ್ ಪ್ರಯಾಣ ದರ ಏರಿಕೆಗೆ ಚಿಂತನೆ – Kannada News | Karnataka CM Eyes Transport Fare Hike Amidst Stark Diesel Price Differences.

ಬೆಂಗಳೂರು, ಜೂ.20: ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳು ಈಗಾಗಲೇ ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದು, ಈ ಬಗ್ಗೆ ಸರ್ಕಾರ, ಎಷ್ಟು ಏರಿಕೆ ಮಾಡಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಿದೆ. ಈ ಬಗ್ಗೆ ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಡೀಸೆಲ್ ಬೆಲೆ ತೀವ್ರ ಹೆಚ್ಚಾಗಿದೆ.ಡಿಪೋದ ಬೆಲೆಗೂ, ಖಾಸಗೀಯಾಗಿ ಸಿಗುವ ಡಿಸೆಲ್ ಗೂ ಅಜಗಾಂತರ ವ್ಯತ್ಯಾಸ ಇದ್ದು, ಡೀಸೆಲ್ ದರ ನೋಡಿದ್ರೆ ಗಾಬರಿಯಾಗುತ್ತೆ . ಅದರ ಬಗ್ಗೆ ವರದಿ ಕೊಡುವಂತೆ ಹೇಳಿದ್ದೇನೆ. ವರದಿ ನೋಡಿಕೊಂಡು ಕೆಸ್ಸಾರ್ಟಿಸಿ ಉಳಿಸಬೇಕು, ಜನರಿಗೂ ಹೊರೆಯಾಗಬಾರದು. ರಾಜ್ಯದ ಹಿತಕ್ಕಾಗಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಾರಿಗೆ ಇಲಾಖೆಯು ಟಿಕೆಟ್ ದರ ಹೆಚ್ಚಳಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ. ಡಿಪೋಗಳಲ್ಲಿ ಖರೀದಿಸುವ ಡೀಸೆಲ್ ಮತ್ತು ಖಾಸಗಿಯಾಗಿ ಲಭ್ಯವಿರುವ ಡೀಸೆಲ್ ಬೆಲೆಗಳ ನಡುವೆ ಸುಮಾರು 40 ರೂಪಾಯಿಗಳ ದೊಡ್ಡ ವ್ಯತ್ಯಾಸವಿದೆ. ಈ ಬೆಲೆ ವ್ಯತ್ಯಾಸದಿಂದಾಗಿ, ಕೆಲವು ಖಾಸಗಿ ಸಾರಿಗೆ ನಿರ್ವಾಹಕರು ಡಿಪೋದಿಂದ ಡೀಸೆಲ್ ಖರೀದಿಸುವುದನ್ನು ಬಿಟ್ಟು, ಸಾರ್ವಜನಿಕ ಪೆಟ್ರೋಲ್ ಬಂಕ್‌ಗಳಿಂದ ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ. ಕೆಎಸ್‌ಆರ್‌ಟಿಸಿಯನ್ನು ಉಳಿಸಿಕೊಳ್ಳುವ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಮತೋಲಿತ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಡೀಸೆಲ್ ಬೆಲೆ ಹೆಚ್ಚಾದಾಗ ಸ್ವಯಂಚಾಲಿತವಾಗಿ ಸಾರಿಗೆ ದರ ಹೆಚ್ಚಳ ಮಾಡುವ ತೀರ್ಮಾನವಿತ್ತು. ಪ್ರಧಾನ ಮಂತ್ರಿಗಳು ಸಾರ್ವಜನಿಕ ಸಾರಿಗೆಯನ್ನು ಬಳಸಲು ಮನವಿ ಮಾಡಿರುವ ಹಿನ್ನೆಲೆಯಲ್ಲಿ, ರಾಜ್ಯ ಮತ್ತು ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ayodhya Ram Lalla: ಅಯೋಧ್ಯೆ ರಾಮಲಲ್ಲಾನಿಗೆ ಜಗತ್ತಿನ ಅತ್ಯಂತ ದುಬಾರಿ ಮಾವು ಅರ್ಪಿಸಿದ ರೈತ – Kannada News | Miyazaki Mango: Ayodhya Ram Lalla Receives World’s Costliest Mango, Grown Locally!

ಅತ್ಯಂತ ದುಬಾರಿ ‘ಮಿಯಾಜಾಕಿ’ ಮಾವಿನ ಹಣ್ಣು

ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮನಿಗೆ (ರಾಮಲಲ್ಲಾ) ಅತ್ಯಂತ ವಿಶೇಷ ಹಾಗೂ ಅಪರೂಪದ ಹಣ್ಣನ್ನು ಅರ್ಪಿಸಲಾಗಿದೆ. ಜಗತ್ತಿನ ಅತ್ಯಂತ ದುಬಾರಿ ಮಾವಿನ ತಳಿ ಎಂದು ಹೆಸರುವಾಸಿಯಾಗಿರುವ ‘ಮಿಯಾಜಾಕಿ’ (Miyazaki) ಮಾವಿನ ಹಣ್ಣನ್ನು ರಾಮಲಲ್ಲಾಗೆ ನೈವೇದ್ಯವಾಗಿ ನೀಡಲಾಗಿದೆ. ಅತ್ಯಂತ ಕುತೂಹಲಕಾರಿ ವಿಷಯವೆಂದರೆ, ಈ ಮಾವಿನ ಹಣ್ಣನ್ನು ಎಲ್ಲೂ ಹೊರದೇಶದಿಂದ ತರಿಸಲಾಗಿಲ್ಲ, ಬದಲಿಗೆ ಅಯೋಧ್ಯೆಯ ಸ್ಥಳೀಯ ರೈತರಾದ ಓಂಪ್ರಕಾಶ್ ಸಿಂಗ್ ಎಂಬುವವರು ತಮ್ಮದೇ ತೋಟದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆಸಿದ್ದಾರೆ. ಓಂಪ್ರಕಾಶ್ ಅವರು ಸುಮಾರು ಎರಡು ವರ್ಷಗಳ ಹಿಂದೆ ಈ ಜಪಾನಿ ತಳಿಯ ಗಿಡವನ್ನು ನೆಟ್ಟಿದ್ದರು. ಈ ಋತುವಿನಲ್ಲಿ ಬಿಟ್ಟ ಮೊದಲ ಒಂದು ಡಜನ್ ಹಣ್ಣುಗಳನ್ನು ಅವರು ಅತ್ಯಂತ ಭಕ್ತಿಯಿಂದ ತಮ್ಮ ಆರಾಧ್ಯ ದೈವ ಶ್ರೀರಾಮನ ಚರಣಗಳಿಗೆ ಸಮರ್ಪಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಬರೋಬ್ಬರಿ 2.5 ರಿಂದ 3 ಲಕ್ಷ ರೂಪಾಯಿ ಹಾಗೂ ಕೇವಲ ಒಂದೇ ಒಂದು ಹಣ್ಣಿಗೆ 60 ರಿಂದ 80 ಸಾವಿರ ರೂಪಾಯಿ ಬೆಲೆ ಬಾಳುವ ಈ ಮಿಯಾಜಾಕಿ ಮಾವಿನ ಹಣ್ಣಿನಲ್ಲಿ ಅಂತಹದ್ದೇನು ವಿಶೇಷತೆ ಇದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮಿಯಾಜಾಕಿ ಮಾವು ಇಷ್ಟೊಂದು ದುಬಾರಿ ಮತ್ತು ವಿಶೇಷ ಏಕೆ?

ಈ ಮಾವಿನ ಹಣ್ಣು ಮೂಲತಃ ಜಪಾನ್ ದೇಶದ ‘ಮಿಯಾಜಾಕಿ’ ಪ್ರಾಂತ್ಯದಲ್ಲಿ ಬೆಳೆಯುವುದರಿಂದ ಇದಕ್ಕೆ ‘ಮಿಯಾಜಾಕಿ’ ಎಂಬ ಹೆಸರು ಬಂದಿದೆ. ತನ್ನ ವಿಶಿಷ್ಟ ಗುಣಗಳಿಂದಾಗಿ ಇದನ್ನು ವಿಶ್ವದ ಅತ್ಯಂತ ಪ್ರೀಮಿಯಂ ಹಣ್ಣುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಬಣ್ಣ ಬದಲಾಯಿಸುವ ಜಾದೂ:

ಈ ಮಾವಿನ ಹಣ್ಣು ಗಿಡದಲ್ಲಿ ಬೆಳೆಯುವ ಆರಂಭಿಕ ಹಂತದಲ್ಲಿ ನೇರಳೆ ಬಣ್ಣದ್ದಾಗಿರುತ್ತದೆ. ಆದರೆ, ಹಣ್ಣು ಸಂಪೂರ್ಣವಾಗಿ ಪಕ್ವವಾಗುತ್ತಿದ್ದಂತೆ ಗಾಢ ಕೆಂಪು (Ruby Red) ಬಣ್ಣಕ್ಕೆ ತಿರುಗುತ್ತದೆ. ಈ ಅದ್ಭುತ ಬಣ್ಣದ ಕಾರಣದಿಂದಾಗಿ ಜಪಾನ್‌ನಲ್ಲಿ ಇದನ್ನು ‘ಟಾಯೋ ನೋ ಟಮಾಗೋ’ (Taiyo no Tamago) ಅಂದರೆ ‘ಸೂರ್ಯನ ಮೊಟ್ಟೆ’ (Egg of the Sun) ಎಂದೂ ಕರೆಯುತ್ತಾರೆ.

ಪೋಷಕಾಂಶಗಳ ಗಣಿ:

ಮಿಯಾಜಾಕಿ ಮಾವಿನಲ್ಲಿ ಆ್ಯಂಟಿ-ಆಕ್ಸಿಡೆಂಟ್‌ಗಳು, ಬೀಟಾ-ಕ್ಯಾರೋಟಿನ್, ವಿಟಮಿನ್ A ಮತ್ತು ವಿಟಮಿನ್ C ಸಮೃದ್ಧವಾಗಿ ಕಂಡುಬರುತ್ತದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ರಾಜಾತಿಥ್ಯದ ಆರೈಕೆ:

ಈ ಹಣ್ಣನ್ನು ಬೆಳೆಸುವಾಗ ಪ್ರತಿಯೊಂದು ಹಣ್ಣನ್ನೂ ಗಿಡದಲ್ಲಿರುವಾಗಲೇ ಒಂದು ವಿಶೇಷವಾದ ಜಾಲರಿಯ ಚೀಲದಿಂದ (Net Bag) ಮುಚ್ಚಲಾಗುತ್ತದೆ. ಇದರಿಂದ ಹಣ್ಣಿಗೆ ಎಲ್ಲಾ ಕಡೆಯಿಂದ ಸಮಾನವಾಗಿ ಸೂರ್ಯನ ಬೆಳಕು ಸಿಗುತ್ತದೆ, ಕೀಟಗಳಿಂದ ರಕ್ಷಣೆ ಸಿಗುತ್ತದೆ ಮತ್ತು ಹಣ್ಣು ಹಣ್ಣಾಗಿ ಕೆಳಗೆ ಬಿದ್ದರೂ ನೆಲಕ್ಕೆ ಬಡಿದು ಹಾಳಾಗುವುದಿಲ್ಲ.

ಜಪಾನ್‌ನಲ್ಲಿ ಹರಾಜು ಪ್ರಕ್ರಿಯೆ:

ಜಪಾನ್‌ನಲ್ಲಿ ಈ ಮಾವನ್ನು ಸಾಮಾನ್ಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಿಲ್ಲ. ಬದಲಿಗೆ ಅತ್ಯುತ್ತಮ ಗುಣಮಟ್ಟದ ಹಣ್ಣುಗಳನ್ನು ದೊಡ್ಡ ಮಟ್ಟದಲ್ಲಿ ಹರಾಜು (Auction) ಹಾಕುವ ಮೂಲಕ ಮಾರಲಾಗುತ್ತದೆ.

ಇದನ್ನು ಯಾವಾಗ ಮತ್ತು ಹೇಗೆ ಬೆಳೆಸಲಾಗುತ್ತದೆ?

ಮಿಯಾಜಾಕಿ ಮಾವನ್ನು ಬೆಳೆಸಲು ಅತ್ಯಂತ ಎಚ್ಚರಿಕೆ ಮತ್ತು ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳ ಅಗತ್ಯವಿರುತ್ತದೆ. ಸಾಮಾನ್ಯವಾಗಿ ಈ ಮರದಲ್ಲಿ ಡಿಸೆಂಬರ್‌ನಿಂದ ಫೆಬ್ರವರಿ ನಡುವೆ ಹೂವು ಬಿಡಲು ಪ್ರಾರಂಭವಾಗುತ್ತದೆ. ಮಾರ್ಚ್ ಮತ್ತು ಮೇ ನಡುವೆ ಕಾಯಿ ಕಟ್ಟಿ, ಮೇ ನಿಂದ ಜುಲೈ ತಿಂಗಳ ಅವಧಿಯಲ್ಲಿ ಹಣ್ಣುಗಳನ್ನು ಮರದಿಂದ ಕೊಯ್ಯಲಾಗುತ್ತದೆ. ಇದನ್ನು ಬೆಳೆಸಲು 24°C ನಿಂದ 35°C ತಾಪಮಾನವು ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿದೆ. ಈ ಗಿಡಕ್ಕೆ ಉತ್ತಮ ಬಿಸಿಲಿನ ಅಗತ್ಯವಿರುತ್ತದೆ, ಆದರೆ ಅತಿಯಾದ ನೀರು ಮತ್ತು ತೇವಾಂಶದಿಂದ ಇದನ್ನು ರಕ್ಷಿಸಬೇಕಾಗುತ್ತದೆ. ಹಣ್ಣಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕಾಲಕಾಲಕ್ಕೆ ಮರದ ರೆಂಬೆಗಳನ್ನು ಕತ್ತರಿಸಲಾಗುತ್ತದೆ. ಇದರಿಂದ ಪ್ರತಿಯೊಂದು ಹಣ್ಣಿಗೂ ಗಾಳಿ ಮತ್ತು ಸೂರ್ಯನ ಬೆಳಕು ನೇರವಾಗಿ ತಲುಪುತ್ತದೆ.

ಈಗ ಭಾರತದಲ್ಲೂ ಇದರ ಹೆಜ್ಜೆ ಗುರುತು; ಆದರೆ ಇಷ್ಟೇ ಬೆಲೆ ಇರಲಿದೆಯೇ?

ಪ್ರಸ್ತುತ ಈ ಜಪಾನಿ ಮಾವನ್ನು ಭಾರತದ ಕೆಲವು ಆಯ್ದ ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ನಿಧಾನವಾಗಿ ಬೆಳೆಯಲು ಪ್ರಾರಂಭಿಸಲಾಗಿದೆ. ಆದಾಗ್ಯೂ, ಜಪಾನ್ ಮತ್ತು ಭಾರತದ ಕೃಷಿ ಪದ್ಧತಿಯಲ್ಲಿ ದೊಡ್ಡ ವ್ಯತ್ಯಾಸವಿದೆ. ಜಪಾನ್‌ನಲ್ಲಿ ಇದನ್ನು ವಿಜ್ಞಾನಿಗಳ ಕಣ್ಗಾವಲಿನಲ್ಲಿ, ಕಟ್ಟುನಿಟ್ಟಾದ ಮಾನದಂಡಗಳು ಮತ್ತು ವಿಶೇಷ ತಂತ್ರಜ್ಞಾನಗಳೊಂದಿಗೆ ಪ್ರೀಮಿಯಂ ಉತ್ಪನ್ನವಾಗಿ ಬೆಳೆಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:11 pm, Sat, 20 June 26

Source link

‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು? – Kannada News | Kalaghatta movie trailer released, here is what movie team said about movie

‘ಕಾಲಘಟ್ಟ’ (Kalaghatta) ಹೆಸರಿನ ಸಿನಿಮಾ ಬಿಡುಗಡೆ ರೆಡಿಯಾಗಿದ್ದು, ಇತ್ತೀಚೆಗಷ್ಟೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಹೆಸರೇ ಹೇಳುತ್ತಿರುವಂತೆ ಇದು ಭಿನ್ನ-ಭಿನ್ ಕಾಲಘಟ್ಟ ಆಯಾ ಕಾಲಘಟ್ಟದಲ್ಲಿ ಜನರ ರೀತಿ-ನೀತಿಗಳ ಬಗೆಗಿನ ಕತೆಯನ್ನು ಒಳಗೊಂಡಿದೆ. ಪ್ರೀತಿಯ ಭಿನ್ನ ರೂಪಗಳು, ನಂಬಿಕೆ, ಮೋಸ, ದ್ವೇಷದ ಕತೆಗಳನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಕೆಲವು ಹೊಸ ಕಲಾವಿದರ ಜೊತೆಗೆ ಅನುಭವಿ ಕಲಾವಿದರು ಸಹ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡವು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

‘ಡಾನ್ 3’ ವಿವಾದ: ರಣವೀರ್ ಸಿಂಗ್ ದೊಡ್ಡ ನಿರ್ಧಾರ; 18 ತಿಂಗಳು ಯಾರಿಗೂ ಸಿಗಲ್ಲ ನಟ – Kannada News | Ranveer Singh’s 18 Month Media Silence: Don 3 Controversy and Pranaya Release Strategy

ಬಾಲಿವುಡ್‌ನ ಎನರ್ಜಿಟಿಕ್ ನಟ ರಣವೀರ್ ಸಿಂಗ್ ಸದ್ಯ ‘ಡಾನ್ 3’ ಸಿನಿಮಾದ ವಿವಾದದ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ಈ ಚಿತ್ರದಿಂದ ಹೊರಬಂದಿರುವುದೇ ವಿವಾದದ ಕೇಂದ್ರಬಿಂದು. ಈ ಬೆಳವಣಿಗೆಯ ಬಗ್ಗೆ ರಣವೀರ್ ಸಿಂಗ್ ಅವರನ್ನು ಪ್ರಶ್ನೆ ಮಾಡಲು ಮತ್ತು ಅವರ ಪ್ರತಿಕ್ರಿಯೆ ಪಡೆಯಲು ಇಡೀ ಮಾಧ್ಯಮ ಲೋಕ ಹಾಗೂ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೆ, ರಣವೀರ್ ಮಾತ್ರ ಮಾಧ್ಯಮಗಳಿಗೆ ಸಿಗದಂತೆ ಸೈಲೆಂಟ್ ಆಗಿ ದೊಡ್ಡದೊಂದು ನಿರ್ಧಾರ ಪ್ರಕಟಿಸಿದ್ದಾರೆ. ಹೌದು, ಇತ್ತೀಚಿನ ವರದಿಗಳ ಪ್ರಕಾರ, ರಣವೀರ್ ಸಿಂಗ್ ಮುಂದಿನ 18 ತಿಂಗಳುಗಳ ಕಾಲ ಯಾವುದೇ ಮಾಧ್ಯಮಗಳಿಗೆ ಇಂಟರ್ವ್ಯೂ ನೀಡದಿರಲು ಮತ್ತು ಸಂಪೂರ್ಣ ಮೌನಕ್ಕೆ ಶರಣಾಗಲು ನಿರ್ಧರಿಸಿದ್ದಾರೆ.

ಇತ್ತೀಚೆಗಷ್ಟೇ ರಣವೀರ್ ಸಿಂಗ್ ಅವರ ಆಪ್ತ ತಂಡ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ‘ಡಾನ್ 3’ ಚಿತ್ರದ ವಿವಾದದ ಬಗ್ಗೆ ನಟ ಸಾರ್ವಜನಿಕವಾಗಿ ಎಲ್ಲೂ ಮಾತನಾಡುವುದಿಲ್ಲ ಮತ್ತು ಘನತೆಯಿಂದ ಮೌನ ಕಾಯ್ದುಕೊಳ್ಳಲಿದ್ದಾರೆ ಎಂದು ತಿಳಿಸಿದೆ. ‘ನಾನು ಡಾನ್ 3 ವಿವಾದದ ಬಗ್ಗೆ ಆಗಲಿ ಅಥವಾ ಬೇರೆ ವಿಷಯಗಳ ಬಗ್ಗೆ ಆಗಲಿ ಮುಂದಿನ 18 ತಿಂಗಳು ಯಾವುದೇ ಸಂದರ್ಶನಗಳನ್ನು ನೀಡುವುದಿಲ್ಲ’ ಎಂದು ರಣವೀರ್ ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪತ್ರಕರ್ತರು ಕಳುಹಿಸಿರುವ ಎಲ್ಲಾ ಇಂಟರ್ವ್ಯೂ ರಿಕ್ವೆಸ್ಟ್‌ಗಳನ್ನು ನಟ ಅನಿರ್ದಿಷ್ಟಾವಧಿಗೆ ತಡೆಹಿಡಿದಿದ್ದಾರೆ.

‘ಪ್ರಳಯ’ ಸಿನಿಮಾ ರಿಲೀಸ್ ಆಗುವವರೆಗೂ ಇಲ್ಲ ಸಂದರ್ಶನ:

ಚಿತ್ರರಂಗದ ಆಪ್ತರ ಪ್ರಕಾರ, ಜೈ ಮೆಹ್ತಾ ನಿರ್ದೇಶನದ ತಮ್ಮ ಮುಂಬರುವ ‘ಪ್ರಳಯ’ ಸಿನಿಮಾ ತೆರೆಗೆ ಬರುವವರೆಗೂ ರಣವೀರ್ ಪ್ರೆಸ್ ಮುಂದೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲಿಯವರೆಗೆ ‘ಡಾನ್ 3’ ವಿವಾದ ಸಂಪೂರ್ಣವಾಗಿ ತಣ್ಣಗಾಗಿರುತ್ತದೆ ಎಂಬುದು ರಣವೀರ್ ನಂಬಿಕೆ.

ಇದನ್ನೂ ಓದಿ: ಹೊಸ ಫೆರಾರಿ ಕಾರಲ್ಲಿ ಮುಂಬೈ ಸುತ್ತಿದ ರಣವೀರ್; ಇದರ ಬೆಲೆ 6 ಕೋಟಿ ರೂಪಾಯಿ

ರಣವೀರ್ ಸಿಂಗ್ ಸದ್ಯ ಹನ್ಸಲ್ ಮೆಹ್ತಾ ನಿರ್ಮಾಣ ಹಾಗೂ ಜೈ ಮೆಹ್ತಾ ನಿರ್ದೇಶನದ ‘ಪ್ರಳಯ’ ಚಿತ್ರದ ಬಗ್ಗೆ ಭಾರಿ ಉತ್ಸುಕರಾಗಿದ್ದಾರೆ. ಇದು ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಡೆಯುವ ಹೈ-ಕಾನ್ಸೆಪ್ಟ್ ‘ಜಾಂಬಿ ಡ್ರಾಮಾ’ ಸಿನಿಮಾ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಡ್ಡಮತದಾನದ ಹಿಂದೆ ಅಡಗಿದೆ ಕೋಟಿ ಕೋಟಿ ಅನುದಾನದ ಆಮಿಷ: ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ – Kannada News | Kumaraswamy Dismisses Impact of Cross Voting on BJP JDS Alliance and General Elections

ಬೆಂಗಳೂರು, ಜೂ.20: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ, ಇದರಿಂದಾಗಿ ಜನರ ಹಾಗೂ ಕಾರ್ಯಕರ್ತರ ಅಸಮಾಧಾನ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ. ಇದೇ ಹಿನ್ನೆಲೆಯಲ್ಲಿ, ಈಗಿನ ಸರ್ಕಾರವು ಮತದಾರರಿಗೆ “ನಮ್ಮ ಪಕ್ಷಕ್ಕೆ ಮತ ಹಾಕಿದರೆ 50 ಕೋಟಿ, 100 ಕೋಟಿ ಅನುದಾನ ಕೊಡುತ್ತೇವೆ” ಎಂದು ಆಮಿಷ ಒಡ್ಡಿರುವುದು ಅಡ್ಡಮತದಾನಕ್ಕೆ ಪ್ರಮುಖ ಕಾರಣ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಕೆಲ ಶಾಸಕರು ಅನುದಾನದ ಆಮಿಷಕ್ಕೆ ಒಳಗಾಗಿ ಚಂಚಲ ಮನಸ್ಸು ಮಾಡಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಅಡ್ಡಮತದಾನದಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ನಡುವೆ ಯಾವುದೇ ವಿಶ್ವಾಸ ಕೊರತೆ ಉಂಟಾಗಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇದು ಮುಂಬರುವ ಸಾರ್ವತ್ರಿಕ ಚುನಾವಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು 2017ರ ರಾಜ್ಯಸಭಾ ಚುನಾವಣೆಯ ಉದಾಹರಣೆ ನೀಡಿ ವಿವರಿಸಿದರು. ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಜೆಡಿಎಸ್ ನಡುವೆ ಬಿರುಕು ಸೃಷ್ಟಿಸಲು ಯತ್ನಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. ಅಡ್ಡಮತದಾನದ ಬಗ್ಗೆ ಬಿಜೆಪಿ ಹೈಕಮಾಂಡ್​​ಗೆ ಮಾಹಿತಿ ನೀಡಲು ದೆಹಲಿಗೆ ತೆರಳುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: 6 ರನ್​ಗೆ 4 ವಿಕೆಟ್..! ಕನ್ನಡಿಗ ಪ್ರಸಿದ್ಧ್ ದಾಳಿಗೆ ತತ್ತರಿಸಿದ ಅಫ್ಘನ್ – Kannada News | Prasidh Krishna’s Fiery 4 Wicket Haul Stuns Afghanistan in Chennai ODI Powerplay

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಅಫ್ಘಾನಿಸ್ತಾನ 2-0 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿತ್ತು. ಹೀಗಾಗಿ ಮೂರನೇ ಪಂದ್ಯವನ್ನು ಗೆದ್ದು ವೈಟ್ ವಾಶ್ ಮುಖಭಂಗದಿಂದ ಪಾರಾಗುವ ಸಲುವಾಗಿ ಅಫ್ಘನ್ ತಂಡ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ಆದರೆ ಚಿದಂಬರಂ ಮೈದಾನದಲ್ಲಿ ಅಫ್ಘನ್ ಬ್ಯಾಟಿಂಗ್‌ ವಿಭಾಗವನ್ನು ಕಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಪವರ್ ಪ್ಲೇ ಮುಗಿಯುವುದಕ್ಕೂ ಮುನ್ನವೇ ಪ್ರಮುಖ 4 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

6 ರನ್ ನೀಡಿ 4 ವಿಕೆಟ್ ಪಡೆದ ಪ್ರಸಿದ್ಧ್

ಪವರ್​ ಪ್ಲೇನಲ್ಲಿ ಅಂದರೆ ಮೊದಲ 10 ಓವರ್​ಗಳಲ್ಲಿ 5 ಓವರ್​ಗಳನ್ನು ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಕೇವಲ 6 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಉರುಳಿಸಿದರು. ಪ್ರಸಿದ್ಧ್ ಬೌಲ್ ಮಾಡಿದ ಈ 5 ಓವರ್​ಗಳಲ್ಲಿ 2 ಓವರ್​ಗಳು ಮೇಡನ್ ಆಗಿದ್ದವು. ಪ್ರಸಿದ್ಧ್ ಮಾರಕ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ ತಂಡ ಮೊದಲ 10 ಓವರ್​ಗಳಲ್ಲಿ ಕೇವಲ 37 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ನಾಲ್ವರು ಅಗ್ರ ಬ್ಯಾಟ್ಸ್‌ಮನ್​ಗಳಲ್ಲಿ ಮೂವರು ಆಟಗಾರರು ಒಂದಂಕಿಗೆ ವಿಕೆಟ್ ಒಪ್ಪಿಸಿದರೆ, ಒಬ್ಬ ಬ್ಯಾಟ್ಸ್‌ಮನ್ ಮಾತ್ರ 11 ರನ್ ಕಲೆಹಾಕಿ ಎರಡಂಕಿ ಮೊತ್ತ ದಾಟಿದರು.

IND vs AFG: ನಾಯಕನಾಗಿ ಚೊಚ್ಚಲ ಏಕದಿನ ಸರಣಿ ಗೆದ್ದ ಶುಭ್​ಮನ್ ಗಿಲ್

ಪ್ರಸಿದ್ಧ್ ಬೌಲ್ ಮಾಡಿದ 5 ಓವರ್​ಗಳು

  • ತಮ್ಮ ಖೋಟಾದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಪ್ರಸಿದ್ಧ್, ಅಫ್ಘನ್ ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಅವರ ವಿಕೆಟ್ ಉರುಳಿಸಿದರು. ಗುರ್ಬಾಜ್ 7 ಎಸೆತಗಳಲ್ಲಿ 5 ರನ್ ಬಾರಿಸಿ ಔಟಾದರು. ಉಳಿದಂತೆ ಈ ಓವರ್​ನಲ್ಲಿ ಲೆಗ್ ಬೈಸ್ ಮೂಲಕ 4 ರನ್​ಗಳು ಬಂದವು.
  • ತಮ್ಮ ಖೋಟಾದ ಎರಡನೇ ಓವರ್​ನಲ್ಲೂ ಕರಾರುವಕ್ಕಾದ ದಾಳಿ ಮಾಡಿದ ಪ್ರಸಿದ್ಧ್ ಈ ಓವರ್​ನಲ್ಲಿ ಲೆಗ್ ಬೈಸ್ ಮೂಲಕ ಕೇವಲ 1 ರನ್ ಬಿಟ್ಟುಕೊಟ್ಟರು.
  • ಪ್ರಸಿದ್ಧ್ ಬೌಲ್ ಮಾಡಿದ ಮೂರನೇ ಓವರ್​ನ 4ನೇ ಎಸೆತದಲ್ಲಿ ರಹಮತ್ ಶಾ ಬೌಂಡರಿ ಬಾರಿಸಿದರು. ಆದರೆ ಅದೇ ಓವರ್​ನ ಕೊನೆಯ ಎಸೆತದಲ್ಲಿ ಪ್ರಸಿದ್ಧ್ ರಹಮತ್ ಶಾ ವಿಕೆಟ್ ಪಡೆದರು.
  • ನಾಲ್ಕನೇ ಓವರ್​ನ ಎರಡನೇ ಎಸೆತದಲ್ಲಿ ಅಫ್ಘನ್ ಆರಂಭಿಕ ಇಬ್ರಾಹಿಂ ಜದ್ರಾನ್ ಅವರ ವಿಕೆಟ್ ಉರುಳಿಸಿದ ಪ್ರಸಿದ್ಧ್ ಈ ಓವರ್​ನಲ್ಲೂ ನೀಡಿದ್ದು ಕೇವಲ 1 ರನ್.
  • 5ನೇ ಓವರ್​ನಲ್ಲೂ ತಮ್ಮ ವಿಕೆಟ್ ಬೇಟೆ ಮುಂದುವರೆಸಿದ ಪ್ರಸಿದ್ಧ್, ಈ ಓವರ್​ನ ಎರಡನೇ ಎಸೆತದಲ್ಲಿ ದರ್ವಿಶ್ ರಸೂಲಿ ಅವರ ವಿಕೆಟ್ ಕಬಳಿಸಿದರು. ಜೊತೆಗೆ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:44 pm, Sat, 20 June 26

Source link

ಸಾರ್ವಜನಿಕರ ಕುಂದು ಕೊರತೆ ನಿರ್ವಹಣೆಗೆ ಡಿಕೆಶಿ ದಿಟ್ಟ ಹೆಜ್ಜೆ: ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಸೇವೆ ಇಲಾಖೆ ಸ್ಥಾಪನೆ – Kannada News | CM DK Shivakumar Announces New Prajaseve Department for solve peoples problems

ಬೆಂಗಳೂರು, (ಜೂನ್ 20):  ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವಾಗಿಯೇ ಸಿಎಂ ಡಿಕೆ ಶಿವಕುಮಾರ್ (DK Shivakumar) ದಿಟ್ಟ ಹೆಜ್ಜೆ ಇಟ್ಟಿದ್ದು, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಒಂದು ಪ್ರತ್ಯೇಕ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.  ಹೌದು.. ಕರ್ನಾಟಕ (Karnataka) ರಾಜ್ಯದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ನಾಡಿನ ಜನರ ಕುಂದುಕೊರತೆ ಆಲಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಈಗಾಗಲೇ ಘೋಷಿಸಿದ್ದು, ಇಂದು (ಜೂನ್ 20) ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಎರಡನೇ ಸಚಿವ ಸಂಪುಟದಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಪ್ರಜಾಸೇವೆ ಇಲಾಖೆ ಎಂದು ನಾಮಕರಣ ಮಾಡುವುದಾಗಿ ಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸ್ಪಂದಿಸಿ ನ್ಯಾಯ ದೊರಕಿಸಲು ಈ ಪ್ರಜಾಸೇವೆ ಇಲಾಖೆಯನ್ನು ರಚಿಸಲು ಸಚಿವ ಸಂಪುಟ ನಿರ್ಧರಿಸಿದ್ದು, ಈ ಹೊಸ ಇಲಾಖೆಯಲ್ಲಿ ಪ್ರತ್ಯೇಕವಾಗಿ ಸಚಿವರು ಹಾಗೂ IAS ಅಧಿಕಾರಿಗಳು ಇರಲಿದ್ದಾರೆ.

ಮುಖ್ಯಾಂಶಗಳು

  • ಸಚಿವ ಸಂಪುಟ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ
  • ಸಮಸ್ಯೆ ಇದ್ದಾಗ ನ್ಯಾಯ ಕೊಡಿಸಲು ಹೊಸ ಇಲಾಖೆ ಸ್ಥಾಪನೆ
  • ಪ್ರತ್ಯೇಕ ಪ್ರಜಾಸೇವೆ ಇಲಾಖೆ ಸ್ಥಾಪನೆ ಮಾಡುವುದಾಗಿ ಘೋಷಿಸಿದ ಡಿಕೆಶಿ
  • ಹೊಸ ಇಲಾಖೆಯಲ್ಲಿ ಪ್ರತ್ಯೇಕ ಸಚಿವರು, IAS ಅಧಿಕಾರಿಗಳು ಇರಲಿದ್ದಾರೆ
  • ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿಕೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇಂದು (ಜೂನ್ 20) ನಡೆದ 2ನೇ ಸಚಿವ ಸಂಪುಟ ಸಭೆಯಲ್ಲಿ ಪ್ರಜಾಸೇವೆ ಇಲಾಖೆಯನ್ನು ರಚಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್, ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಹೊಸ ಪ್ರಜಾಸೇವೆ ಇಲಾಖೆ ರಚನೆಯನ್ನು ಪ್ರಕಟಿಸಿದರು.

ಇದನ್ನೂ ಓದಿ: ಸಾರ್ವಜನಿಕರ ಕುಂದು ಕೊರತೆಗಳ ನಿರ್ವಹಣೆಗೆ, NRIಗೆ ಪ್ರತ್ಯೇಕ ಸಚಿವಾಲಯ: ಸಿಎಂ ಡಿಕೆಶಿ ಮಹತ್ವ ಘೋಷಣೆ

ಇಲಾಖೆಯಲ್ಲಿ ಪ್ರತ್ಯೇಕ ಸಚಿವರು, ಹಿರಿಯ IAS ಅಧಿಕಾರಿ

ಈ ಇಲಾಖೆಗೆ ಪ್ರತ್ಯೇಕ ಸಚಿವರು, ಹಿರಿಯ ಐಎಎಸ್ ಅಧಿಕಾರಿ ಇರುತ್ತಾರೆ. ಈ ಇಲಾಖೆ ಪೋಸ್ಟಮ್ಯಾನ್ ಕೆಲಸ ಮಾಡುವುದಿಲ್ಲ. ಜನರ ಸಮಸ್ಯೆಗಳಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತದೆ. ಸಚಿವರು ಎಲ್ಲಾ ೨೨೪ ಕ್ಷೇತ್ರಗಳಿಗೂ ಹೋಗಿ ಶಾಸಕರ ಜತೆ ಸಭೆ ನಡೆಸಿ ಜನರ ಅಹವಾಲುಗಳನ್ನು ಆಲಿಸಿ ನ್ಯಾಯ ದೊರಕಿಸುವ ಕೆಲಸ ಮಾಡಲಿದ್ದಾರೆ. ವಾರಕ್ಕೊಮ್ಮೆ ಕಡ್ಡಾಯವಾಗಿ ಶಾಸಕರ ಜತೆಗೂಡಿ ಜನಸ್ಪಂದನ ಸಭೆ ನಡೆಸಿ ಅಲ್ಲಿನ ಅಭಿಪ್ರಾಯಗಳನ್ನು ನಮಗೆ ತಲಪಿಸುತ್ತಾರೆ. ಅದಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.

ಮೊನ್ನೇ ಅಷ್ಟೇ ಹಿರಿಯ ಅಧಿಕಾರಿಗಳ ಜೊತೆ ಸಭೆಯಲ್ಲಿ ಈ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಪ್ರತ್ಯೇಕ ಸಚಿವಾಲಯದ ಸ್ಥಾಪನೆ ಬಗ್ಗೆ ಚರ್ಚಿಸಿದ್ದರು. ಇದೀಗ ಅಂತಿಮವಾಗಿ ಇಂದಿನ ಸಚಿವ ಸಂಪುಟ ಸಹ ಅನುಮೋದನೆ ನೀಡಿದೆ. ಇದಕ್ಕೆ ಪ್ರಜಾಸೇವೆ ಇಲಾಖೆ ಎಂದು ಹೆಸರಿಡಲಾಗಿದೆ. ಪ್ರತೇಕ ಇಲಾಖೆಯಾದರೆ ಸಾರ್ವಜನಿಕರು ತಮ್ಮ ತಮ್ಮ ಸಮಸ್ಯೆ , ಕುಂದು ಕೊರತೆಗಳನ್ನು ಅರ್ಜಿ ಮೂಲಕ ಈ ಇಲಾಖೆಗೆ ಸಲ್ಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಲಿದೆ.

ಸಾರ್ವಜನಿಕ ಕುಂದುಕೊರತೆಗೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಲಾಗುವುದು. ದಿನಕ್ಕೆ ಎರಡು ಮೂರು ತಂಡ ಪ್ರತಿಭಟನೆ ಮಾಡುತ್ತಿರುತ್ತದೆ. ಅವರ ಅಹವಾಲು ಕೇಳಬೇಕಾಗಿದೆ. ಏನಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ?. ಅವರ ಬೇಡಿಕೆಗಳೇನು?. ಸಮಸ್ಯೆಗಳೇನು? ಎಂಬ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಬಳಿಕ ಅವರ ಸಮಸ್ಯೆಗೆ ಸ್ಪಂದಿಸಲು, ಪ್ರತ್ಯೇಕ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Source link

Exit mobile version