Headlines

ಅಭಿವೃದ್ಧಿ ಹೆಸರಲ್ಲಿ ಹಸಿರು ಬಲಿ?: ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮಕ್ಕೆ ಮುಂದಾದ ಬಿಡಿಎ

ಬೆಂಗಳೂರು, ಮೇ.21: ರಾಜಧಾನಿ ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಗಿಡಮರಗಳನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ. ಇದೀಗ ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್‌ನಲ್ಲಿರುವ ಬಿ.ಡಿ.ಎ. ವಾಣಿಜ್ಯ ಸಂಕೀರ್ಣದ ಸುತ್ತಲೂ ಇರುವ 180 ಮರಗಳಿಗೆ ಕುತ್ತು ಎದುರಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಹಳೆಯ ವಾಣಿಜ್ಯ ಸಂಕೀರ್ಣವನ್ನು ಕೆಡವಿ ಹೊಸದಾಗಿ ನಿರ್ಮಿಸಲು ಬಿ.ಡಿ.ಎ. ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ, ಸಂಕೀರ್ಣದ ಆವರಣದಲ್ಲಿರುವ ಸುಮಾರು 180 ವಿವಿಧ ಜಾತಿಯ ಮರಗಳನ್ನು ಕಡಿಯಲು ಅನುಮತಿ ಕೋರಿ ಬಿ.ಡಿ.ಎ. ಅಧಿಕಾರಿಗಳು ಜಿ.ಬಿ.ಎ. ಅರಣ್ಯ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮರಗಳನ್ನು ಕಡಿಯುವ ಈ ಪ್ರಸ್ತಾವನೆಗೆ…

Read More

IPL 2026: RCB ತಂಡಕ್ಕೆ ಇಂಗ್ಲೆಂಡ್ ವೇಗಿ ಎಂಟ್ರಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 13 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಳೂರು ತಂಡಕ್ಕೆ ಇನ್ನುಳಿದಿರುವುದು ಒಂದು ಲೀಗ್ ಮ್ಯಾಚ್ ಮಾತ್ರ. ಈ ಪಂದ್ಯಕ್ಕೂ ಮುನ್ನ ಆರ್​ಸಿಬಿ ಪಡೆಗೆ ಇಂಗ್ಲೆಂಡ್ ವೇಗಿ ಎಂಟ್ರಿ ಕೊಟ್ಟಿದ್ದಾರೆ. (PC: IPL) ಇಂಗ್ಲೆಂಡ್ ತಂಡದ 38 ವರ್ಷದ ಅನುಭವಿ ವೇಗಿ ರಿಚರ್ಡ್ ಗ್ಲೀಸನ್ ಅವರನ್ನು ಇತ್ತೀಚೆಗೆ ಆರ್​ಸಿಬಿ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆರ್​ಸಿಬಿ ತಂಡದಲ್ಲಿದ್ದ ಶ್ರೀಲಂಕಾ ವೇಗಿ ನುವಾನ್ ತುಷಾರ…

Read More

Tv9 Kannada News Live: ಕೇರಳದಲ್ಲಿ ಹಾಲಿನ ದರ ಏರಿಕೆ, ಪ್ಲೇಆಫ್​ಗೂ ಮುನ್ನ RCBಗೆ ಗುಡ್ ನ್ಯೂಸ್, ಇಲ್ಲಿವೆ ಮಧ್ಯಾಹ್ನದವರೆಗಿನ ಪ್ರಮುಖ ಸುದ್ದಿಗಳು – Kannada News | National, Cinema and Sports News, Kerala Milk Prices See Sharp Spike, ipl 2026 good news for RCB and more News Updates

ನವದೆಹಲಿ, ಮೇ 21: ಕೇರಳದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತಲೇ ಜನರಿಗೆ ಹಾಲು ದರ ಏರಿಕೆಯ ಶಾಕ್ ನೀಡಿದೆ. ಕೇರಳದ ಜನಪ್ರಿಯ ಬ್ರಾಂಡ್ ಮಿಲ್ಮಾ ಹಾಲಿನ ದರ 4 ರೂ.ಏರಿಕೆ ಮಾಡಲಾಗಿದೆ. ಕೇರಳ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ದರ ಏರಿಕೆ ಮಾಡಿದ್ದು, ಜೂನ್ 1ರಿಂದ ಪರಿಷ್ಕೃತ ಹಾಲಿನ ದರ ಜಾರಿಯಾಗಲಿದೆ. ನಾವು ಹಾಲಿನ ದರ ಏರಿಸಿಲ್ಲ, ಹಿಂದಿನ ಸರ್ಕಾರ ಏರಿಸಿದ್ದ ದರವನ್ನು ನಾವು ಜಾರಿಗೆ ತಂದಿದ್ದೀವಷ್ಟೇ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೆ ನೀಡಿದೆ. ಕೇರಳದಲ್ಲಿ ಕಾಂಗ್ರೆಸ್…

Read More

IPL 2026: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಖಚಿತ – Kannada News | Ipl 2026 rcb playing 11 for SRH Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ನಾಳೆ (ಮೆ.22) ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಮಾಡಿಕೊಳ್ಳುವುದು ಖಚಿತ. ಏಕೆಂದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಕಣಕ್ಕಿಳಿದಿರಲಿಲ್ಲ. ಅವರ ಬದಲಿಗೆ ಜಿತೇಶ್ ಶರ್ಮಾ ತಂಡವನ್ನು ಮುನ್ನಡೆಸಿದ್ದರು. ಇದೇ ವೇಳೆ…

Read More

‘ದೃಶ್ಯಂ 3’ ಹೇಗಿದೆ? ನೆಟ್ಟಿಗರು ಕೊಟ್ಟ ಪಾರದರ್ಶಕ ವಿಮರ್ಶೆ ಇಲ್ಲಿದೆ – Kannada News | Drishyam 3 X Review Mohanlal Movie Get mixed reviews on Twitter

ಮಲಯಾಳಂ ಚಿತ್ರರಂಗದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ‘ದೃಶ್ಯಂ’ ಸರಣಿಯ ಮೂರನೇ ಭಾಗ ‘ದೃಶ್ಯಂ 3’ ಇಂದು (ಮೇ 21) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಜೀತು ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್‌ಲಾಲ್ ಮತ್ತೊಮ್ಮೆ ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್ ಮತ್ತು ಆಶಾ ಶರತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸಿನಿಮಾ ವೀಕ್ಷಿಸಿದ ಒಂದು ವರ್ಗದ ಪ್ರೇಕ್ಷಕರು ಚಿತ್ರದ ಕಥೆ…

Read More

ಮೊಬೈಲ್ ನೋಡೋದು ಬಿಟ್ಟು ಸ್ನಾನ ಮಾಡು ಎಂದು ಗದರಿದ್ದಕ್ಕೆ ಬಾವಿಗೆ ಹಾರಿದ ಬಾಲಕಿ – Kannada News | Teen Rescued After Jumping Into Well Following Argument Over Mobile Use in Telangana

ಆಸಿಫಾಬಾದ್, ಮೇ 21: ಮೊಬೈಲ್(Mobile) ನೋಡುವುದು ಬಿಟ್ಟು ಸ್ನಾನ ಮಾಡು ಎಂದು ಪೋಷಕರು ಗದರಿದ್ದಕ್ಕೆ 17 ವರ್ಷದ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ಆಸಿಫಾಬಾದ್​ನ ಸಂದೀಪ್​ ನಗರದಲ್ಲಿ ನಡೆದಿದೆ. ಸ್ವರ್ಣಲತಾ ಮತ್ತು ಪೋಚಿರಾಮ್ ದಂಪತಿಯ 17 ವರ್ಷದ ಮಗಳು ಸಾತ್ವಿಕಾ ಇಂಟರ್ಮೀಡಿಯೇಟ್ (ಪಿಯುಸಿ) ಮೊದಲ ವರ್ಷ ಮುಗಿಸಿ ದ್ವಿತೀಯ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಬುಧವಾರದಂದು ಸಾತ್ವಿಕಾ ಮನೆಯಲ್ಲಿ ಸ್ನಾನ ಮಾಡದೆ ಗಂಟೆಗಟ್ಟಲೆ ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದಳು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ತೀವ್ರವಾಗಿ…

Read More

TTD Vedic University Admission 2026: ಟಿಟಿಡಿ ಶ್ರೀ ವೆಂಕಟೇಶ್ವರ ವೈದಿಕ ವಿವಿ ಪ್ರವೇಶಾತಿ ಆರಂಭ; ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ – Kannada News | Apply for SVVU Vedic Courses 2026 27: Tirumala Tirupati Devasthanams University Admissions Open

ತಿರುಪತಿಯ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನಂಗಳ (ಟಿಟಿಡಿ) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ವೆಂಕಟೇಶ್ವರ ವೈದಿಕ ವಿಶ್ವವಿದ್ಯಾನಿಲಯವು 2026-27ನೇ ಶೈಕ್ಷಣಿಕ ವರ್ಷದ ವಿವಿಧ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ವೈದಿಕ ಶಿಕ್ಷಣದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಈ ಪ್ರವೇಶಾತಿ ಕುರಿತಾದ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ. ಮುಖ್ಯ ಅರ್ಹತೆ ಮತ್ತು ನಿಯಮಗಳು: ಉಪನಯನ ಸಂಸ್ಕಾರ: ಸಾಂಪ್ರದಾಯಿಕ ವೈದಿಕ ಕೋರ್ಸ್‌ಗಳಿಗೆ ಸೇರಬಯಸುವ ಅಭ್ಯರ್ಥಿಗಳು ತಮ್ಮ ತಮ್ಮ ವೈದಿಕ ಸಂಪ್ರದಾಯದ ಪ್ರಕಾರ…

Read More

ಹಿಂದಿ ಟಿವಿ ಚಾನೆಲ್​​ಗಳ ಉಳಿಸಿದ್ದು ಮೆಗಾಸ್ಟಾರ್ ಚಿರಂಜೀವಿ: ಕ್ರೇಜ್ ಹೇಗಿತ್ತು ಗೊತ್ತೆ? – Kannada News | Chiranjeevi’s Indra Movie saved some Hindi Tv

ಈಗ ದಕ್ಷಿಣದ ಪ್ಯಾನ್ ಇಂಡಿಯಾ (Pan India) ಸ್ಟಾರ್​ಗಳೆಂದರೆ ಪ್ರಭಾಸ್, ಅಲ್ಲು ಅರ್ಜುನ್, ರಾಮ್ ಚರಣ್, ಜೂ ಎನ್​​ಟಿಆರ್ ಎನ್ನಲಾಗುತ್ತದೆ. ಆದರೆ ತೆಲುಗಿನ ಓಜಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದವರು ಮೆಗಾಸ್ಟಾರ್ ಚಿರಂಜೀವಿ. ಒಂದು ಸಮಯದಲ್ಲಿ ಇಡೀ ದೇಶದಲ್ಲಿ ಇನ್ಯಾವ ನಟನೂ ಪಡೆಯದಷ್ಟು ಸಂಭಾವನೆ ಪಡೆಯುತ್ತಿದ್ದ ಚಿರಂಜೀವಿ, ನಟಿಸಿರುವುದು ತೆಲುಗು ಸಿನಿಮಾಗಳಲ್ಲಿ ಮಾತ್ರವಾದರೂ ಅವರ ಹವಾ ಆಗಿನ ಸಮಯದಲ್ಲೇ ಉತ್ತರ ಭಾರತದಲ್ಲೆಲ್ಲ ಹಬ್ಬಿತ್ತು. ಯಾವ ಮಟ್ಟಿಗೆಂದರೆ ಕೆಲವಾರು ಮುಳುಗುತ್ತಿದ್ದ ಟಿವಿ ಚಾನೆಲ್​​ಗಳನ್ನು ಮೆಗಾಸ್ಟಾರ್ ಚಿರಂಜೀವಿಯ ಚಾರ್ಮ್ ಎತ್ತಿ…

Read More

ನಿಪ್ಪಾಣಿ ಬೆನ್ನಲ್ಲೇ ಚಿಕ್ಕಮಗಳೂರಲ್ಲೂ ಕೈ, ಕಮಲ ಸಮರ: ಕಾಮಗಾರಿ ವಿಚಾರವಾಗಿ ಸಿ.ಟಿ.ರವಿ ಎದುರೇ ಹೈಡ್ರಾಮಾ – Kannada News | BJP Congress Workers Clash In Chikkamagaluru During MLC CT Ravi’s Visit Rampura

ಕಾಮಗಾರಿ ವಿಚಾರವಾಗಿ ಸಿ.ಟಿ.ರವಿ ಎದುರೇ ಹೈಡ್ರಾಮಾImage Credit source: Tv9 Kannada ಚಿಕ್ಕಮಗಳೂರು, ಮೇ 21: ಶಾಸಕಿ ಶಶಿಕಲಾ ಜೊಲ್ಲೆ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ-ಕಾಂಗ್ರೆಸ್​​ ಕಾರ್ಯಕರ್ತರು ಕಿತ್ತಾಡಿಕೊಂಡಿರುವ ಘಟನೆ ನಿಪ್ಪಾಣಿಯಲ್ಲಿ ನಡೆದ ಬೆನ್ನಲ್ಲೇ ಇತ್ತ ಚಿಕ್ಕಮಗಳೂರಲ್ಲೂ (Chikkamagaluru) ಅದೇ ಮಾದರಿಯ ಪ್ರಸಂಗ ನಡೆದಿದೆ. ಚಿಕ್ಕಮಗಳೂರು ನಗರದ ರಾಂಪುರ ಗ್ರಾಮದಲ್ಲಿ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಪರಿಷತ್​​ ಸದಸ್ಯ ಸಿ.ಟಿ ರವಿ ವಿರುದ್ಧ ಗೋಬ್ಯಾಕ್​​ ಘೋಷಣೆ ಕೂಗಿದ ಪರಿಣಾಮ, ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೈಡ್ರಾಮಾವೇ ನಡೆದಿದೆ. ಮುಖ್ಯಾಂಶಗಳು ಪರಿಷತ್​​…

Read More

ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್ – Kannada News | Karan Kundra Proposed Shruthi Prakash In Desert

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ…

Read More