ಯುದ್ಧ ನಿಲ್ಲಿಸುವ ಸುಳಿವು ನೀಡಿದ ಟ್ರಂಪ್; ಕದನವಿರಾಮಕ್ಕೆ ಇರಾನ್ ಜೊತೆ ಅಮೆರಿಕ ಮಾತುಕತೆ

ಯುದ್ಧ ನಿಲ್ಲಿಸುವ ಸುಳಿವು ನೀಡಿದ ಟ್ರಂಪ್; ಕದನವಿರಾಮಕ್ಕೆ ಇರಾನ್ ಜೊತೆ ಅಮೆರಿಕ ಮಾತುಕತೆ

ವಾಷಿಂಗ್ಟನ್, ಮಾರ್ಚ್ 23: ಇರಾನ್ ಜೊತೆಗಿನ ಯುದ್ಧದ ಕಾರ್ಮೋಡ ಸರಿಯುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಇರಾನ್, ಇಸ್ರೇಲ್ ಮತ್ತು ಅಮೆರಿಕದ ನಡುವಿನ ಯುದ್ಧದ ಪರಿಣಾಮವನ್ನು ಗಲ್ಫ್ ರಾಷ್ಟ್ರಗಳೂ ಅನುಭವಿಸಿದ್ದವು. ಇದರ ಪರೋಕ್ಷ ಪರಿಣಾಮವನ್ನು ಭಾರತ ಸೇರಿದಂತೆ ಇತರೆ ದೇಶಗಳೂ ಅನುಭವಿಸಿದ್ದವು. ಜಗತ್ತಿನಾದ್ಯಂತ ತೈಲ, ಇಂಧನದ ಬಿಕ್ಕಟ್ಟು ಎದುರಾಗಿದೆ. ಯುದ್ಧ ಶುರುವಾಗಿ 24 ದಿನಗಳ ನಂತರ ಇದೀಗ ಈ ಯುದ್ಧಕ್ಕೆ ತೆರೆ ಬೀಳುವ ಲಕ್ಷಣಗಳೂ ಗೋಚರಿಸುತ್ತಿವೆ.

Source link

ನ್ಯೂಜಿಲೆಂಡ್​ನಲ್ಲಿ ಐಪಿಎಲ್​ ಮಾದರಿಯ ಟಿ20 ಲೀಗ್ ಆರಂಭ; ಎಷ್ಟು ತಂಡಗಳು ಕಣಕ್ಕೆ?

ವಿಶ್ವದಾದ್ಯಂತ ಟಿ20 ಲೀಗ್​ನ (T20 League) ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಗಮನಿಸಿರುವ ನಾನಾ ದೇಶಗಳು ತಮ್ಮ ದೇಶದಲ್ಲೂ ಟಿ20 ಲೀಗ್​ಗಳನ್ನು ಆರಂಭಿಸಿವೆ. ಅಂತಹ ದೇಶಗಳ ಸಾಲಿಗೆ ಇದೀಗ ನ್ಯೂಜಿಲೆಂಡ್ ದೇಶವೂ ಸೇರ್ಪಡೆಯಾಗುತ್ತಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ವೆಸ್ಟ್ ಇಂಡೀಸ್, ಯುನೈಟೆಡ್ ಸ್ಟೇಟ್ಸ್ ಮತ್ತು ದುಬೈ ಈಗಾಗಲೇ ಟಿ20 ಲೀಗ್‌ಗಳನ್ನು ಪ್ರಾರಂಭಿಸಿ ಸಾಕಷ್ಟು ಯಶಸ್ಸು ಗಳಿಸಿವೆ. ಇದನ್ನು ಗಮನಿಸಿರುವ ನ್ಯೂಜಿಲೆಂಡ್ ತನ್ನದೇ ಆದ ಟಿ20 ಲೀಗ್ ಪ್ರಾರಂಭಿಸಲು ನಿರ್ಧರಿಸಿದೆ. ಈ ಲೀಗ್​ನಲ್ಲಿ 6 ತಂಡಗಳು ಭಾಗವಹಿಸಲಿದ್ದು, ಈ ಆರು ತಂಡಗಳು ಐಪಿಎಲ್‌ನಂತೆಯೇ ಪ್ರತ್ಯೇಕ ಮಾಲೀಕರನ್ನು ಹೊಂದಿರುತ್ತವೆ ಎಂದು ವರದಿಯಾಗಿದೆ. ಹಾಗೆಯೇ ಈ ಲೀಗ್ 2027 ರ ಜನವರಿಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಈ ಪಂದ್ಯಾವಳಿಯನ್ನು ಪ್ರಾರಂಭಿಸುವುದಾಗಿ ನ್ಯೂಜಿಲೆಂಡ್ ಕ್ರಿಕೆಟ್ ಹೇಳಿದೆ.

ನ್ಯೂಜಿಲೆಂಡ್ ಕ್ರಿಕೆಟ್ ಪ್ರಮುಖ ಘೋಷಣೆ

ಈ ಬಗ್ಗೆ ಮಾಹಿತಿ ನೀಡಿರುವ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಲಿಂಡನ್, ‘NZ20 ಲೀಗ್ ಪ್ರಸ್ತಾವನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮಂಡಳಿ ಚಿಂತಿಸಿದೆ. ಈ ಲೀಗ್ ಕೇವಲ ಮನರಂಜನೆಯ ಬಗ್ಗೆ ಮಾತ್ರವಲ್ಲ, ಯುವ ಸ್ಥಳೀಯ ಕ್ರಿಕೆಟಿಗರಿಗೆ ಉತ್ತಮ ವೇದಿಕೆಯಾಗಲಿದೆ. ಪ್ರತಿ ತಂಡವು ಸ್ಥಳೀಯ ಸ್ಟಾರ್ ಕ್ರಿಕೆಟಿಗರನ್ನು ಹೊಂದಿರಬೇಕು, ಇದರಿಂದ ಯುವ ಆಟಗಾರರು ಹೆಚ್ಚು ಕಲಿಯಬಹುದು ಎಂದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ನ್ಯೂಜಿಲೆಂಡ್ ತಂಡಗಳನ್ನು ಸೇರಿಸುವ ಬಗ್ಗೆ ಆರಂಭದಲ್ಲಿ ಚರ್ಚೆಗಳು ನಡೆದಿದ್ದರೂ, ಮಂಡಳಿಯು ಅಂತಿಮವಾಗಿ ತಮ್ಮದೇ ಆದ ಲೀಗ್ ಪ್ರಾರಂಭ ಮಾಡುವುದು ಉತ್ತಮ ಎಂದು ನಿರ್ಧರಿಸಿದೆ’ ಎಂದು ಅವರು ಹೇಳಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್‌ಗೆ ಏನು ಲಾಭ?

ನ್ಯೂಜಿಲೆಂಡ್ ಕ್ರಿಕೆಟ್ ಟಿ20 ಫ್ರಾಂಚೈಸ್ ಲೀಗ್ ಪ್ರಾರಂಭಿಸುವುದರಿಂದ ಸಾಕಷ್ಟು ಪ್ರಯೋಜನ ಪಡೆಯಲಿದೆ. ಖಾಸಗಿ ಉದ್ಯಮಿಗಳು ಈ ಲೀಗ್‌ನಲ್ಲಿ ಹೂಡಿಕೆ ಮಾಡಿದರೆ, ಅದು ಸ್ಪಷ್ಟವಾಗಿ ನ್ಯೂಜಿಲೆಂಡ್ ಮಂಡಳಿಗೆ ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ ಮತ್ತು ಕಿವಿ ತಂಡಕ್ಕೆ ಯುವ ಆಟಗಾರರ ಆಗಮನ ಹೆಚ್ಚಾಗಲಿದೆ. ನ್ಯೂಜಿಲೆಂಡ್ ಕ್ರಿಕೆಟ್‌ಗೆ ಹೆಚ್ಚಿನ ಹಣ ಬರುವುದರಿಂದ, ಜನರು ಕ್ರಿಕೆಟ್‌ನಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಾರೆ. ನ್ಯೂಜಿಲೆಂಡ್‌ನಲ್ಲಿ ಕ್ರಿಕೆಟ್‌ಗಿಂತ ರಗ್ಬಿಗೆ ಆದ್ಯತೆ ನೀಡಲಾಗುತ್ತದೆ. ಕ್ರಿಕೆಟ್ ಆರ್ಥಿಕವಾಗಿ ಬಲಗೊಂಡರೆ, ಅದರ ಅನುಯಾಯಿಗಳು ಮತ್ತಷ್ಟು ಹೆಚ್ಚಾಗುತ್ತಾರೆ.

ಟಿ20 ಲೀಗ್ ಆಯೋಜಿಸುತ್ತಿರುವ ದೇಶಗಳು

ಪ್ರಸ್ತುತ, ಭಾರತ (ಐಪಿಎಲ್) ದಕ್ಷಿಣ ಆಫ್ರಿಕಾ (ಎಸ್​ಎ20), ಪಾಕಿಸ್ತಾನ (ಪಿಎಸ್​ಎಲ್), ಬಾಂಗ್ಲಾದೇಶ (ಬಿಪಿಎಲ್), ವೆಸ್ಟ್ ಇಂಡೀಸ್ (ಸಿಪಿಎಲ್)ನಲ್ಲಿ ಆಯೋಜನೆಗೊಳ್ಳುತ್ತಿರುವ ಲೀಗ್‌ಗಳು ಈಗಾಗಲೇ ಯಶಸ್ವಿಯಾಗಿವೆ. ಈ ಲೀಗ್‌ಗಳು ಹೊಸ ಪ್ರತಿಭೆಗಳನ್ನು ಮುನ್ನೆಲೆಗೆ ತರುತ್ತಿವೆ, ಇದರಿಂದ ಜಾಗತಿಕ ಕ್ರಿಕೆಟ್ ಮಾರುಕಟ್ಟೆಯೂ ಬೆಳೆಯುತ್ತಿದೆ. ಈ ಹೊಸ ಲೀಗ್‌ನೊಂದಿಗೆ ಜಾಗತಿಕ ಕ್ರಿಕೆಟ್ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ನ್ಯೂಜಿಲೆಂಡ್ ಆಶಿಸುತ್ತಿದೆ.ಇದೀಗ ಕಿವೀಸ್ ಲೀಗ್‌ನಲ್ಲಿ ಯಾವ ಐಪಿಎಲ್ ತಂಡದ ಮಾಲೀಕರು ತಂಡಗಳನ್ನು ಖರೀದಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

Source link

ಈ ರಾಶಿಯವರು ಎಪ್ರಿಲ್​​​ನಲ್ಲಿ ಯಾವ ಕಾರಣಕ್ಕೂ ಪ್ರವಾಸ ಮಾಡಬೇಡಿ: ನಿಮ್ಮ ಆರ್ಥಿಕತೆಗೆ ಬೀಳಲಿದೆ ದೊಡ್ಡ ಪೆಟ್ಟು

ಕಾಲಜ್ಞಾನ ಶಾಸ್ತ್ರದ ಪ್ರಕಾರ 2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆ ಹಾಗೂ ಗೋಚಾರ ಫಲಗಳ ಆಧಾರದ ಮೇಲೆ ಮೇಷ ರಾಶಿಯವರ ಭವಿಷ್ಯದ ಸಮೀಕ್ಷೆ ಇಲ್ಲಿದೆ. ಈ ತಿಂಗಳು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದ್ದು, ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯವಾಗಿ ಬೇಕು.

​ಉದ್ಯೋಗ ಮತ್ತು ವೃತ್ತಿ ಜೀವನ

​ಉದ್ಯೋಗ ಕ್ಷೇತ್ರದಲ್ಲಿ ಈ ತಿಂಗಳು ಸಮಾಧಾನಕರವಾದ ಪರಿಸ್ಥಿತಿ ಇರಲಿದೆ. ಶನಿಯ ಪ್ರಭಾವದಿಂದ ಕೆಲಸದಲ್ಲಿ ಹೆಚ್ಚಿನ ಒತ್ತಡ ಅಥವಾ ಜವಾಬ್ದಾರಿಗಳು ಹೆಗಲಿಗೆ ಬೀಳಬಹುದು. ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇರುವುದರಿಂದ ತಾಳ್ಮೆಯಿಂದ ವರ್ತಿಸುವುದು ಒಳಿತು. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ತಿಂಗಳ ದ್ವಿತೀಯಾರ್ಧದಲ್ಲಿ ಉತ್ತಮ ಅವಕಾಶಗಳು ದೊರೆಯಬಹುದು.

ವಿದ್ಯಾಭ್ಯಾಸ

​ವಿದ್ಯಾರ್ಥಿಗಳಿಗೆ ಈ ಸಮಯವು ಬಹಳ ಅನುಕೂಲಕರವಾಗಿದೆ. ಬುಧನ ಶುಭ ದೃಷ್ಟಿಯಿಂದ ಏಕಾಗ್ರತೆ ಹೆಚ್ಚಾಗಲಿದೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಹಿರಿಯರ ಮಾರ್ಗದರ್ಶನ ಮತ್ತು ಉತ್ತಮ ಫಲಿತಾಂಶದ ಸೂಚನೆಗಳಿವೆ. ಸಂಶೋಧನೆ ಅಥವಾ ಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿರುವವರಿಗೆ ಹೊಸ ಆಯಾಮಗಳು ಗೋಚರಿಸಲಿವೆ.

ಹಣಕಾಸು ಮತ್ತು ಆರ್ಥಿಕ ಸ್ಥಿತಿ

​ಆರ್ಥಿಕವಾಗಿ ಈ ತಿಂಗಳು ಏರಿಳಿತಗಳಿಂದ ಕೂಡಿರುತ್ತದೆ. ಆದಾಯದ ಮೂಲಗಳು ಉತ್ತಮವಾಗಿದ್ದರೂ, ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಕೃಷಿ ಭೂಮಿ ಅಥವಾ ಆಸ್ತಿಯಿಂದ ಬರಬೇಕಾದ ಲಾಭಗಳು ಸ್ವಲ್ಪ ವಿಳಂಬವಾಗಬಹುದು. ಹೂಡಿಕೆ ಮಾಡುವ ಮುನ್ನ ಅನುಭವೀ ವ್ಯಕ್ತಿಗಳ ಸಲಹೆ ಪಡೆಯುವುದು ಉತ್ತಮ. ಲಾಟರಿ ಅಥವಾ ಶೇರ್ ಮಾರ್ಕೆಟ್‌ನಂತಹ ಸಾಹಸಗಳಿಗೆ ಕೈಹಾಕದಿರುವುದು ಸೂಕ್ತ.

ವಿವಾಹ ಮತ್ತು ಕೌಟುಂಬಿಕ ಜೀವನ

​ಕುಟುಂಬದಲ್ಲಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಹೆಚ್ಚಿದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವಿಕೆ ಹೆಚ್ಚಾಗಲಿದ್ದು, ಪತ್ನಿಯ ಬೆಂಬಲವು ನಿಮ್ಮ ಕೆಲಸ ಕಾರ್ಯಗಳಲ್ಲಿ ಸ್ಫೂರ್ತಿ ನೀಡಲಿದೆ. ಸಂಬಂಧಿಕರ ಭೇಟಿಯಿಂದ ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ.

​ವಿದೇಶ ಪ್ರವಾಸ

​ವಿದೇಶ ಪ್ರವಾಸದ ಆಕಾಂಕ್ಷೆ ಹೊಂದಿರುವವರಿಗೆ ಈ ತಿಂಗಳು ಅಡೆತಡೆಗಳು ಎದುರಾಗಬಹುದು. ವೀಸಾ ಸಂಬಂಧಿತ ಕೆಲಸಗಳಲ್ಲಿ ವಿಳಂಬ ಅಥವಾ ತಾಂತ್ರಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ಪ್ರವಾಸಕ್ಕೆ ಯೋಜನೆ ಹಾಕಿದ್ದಲ್ಲಿ, ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಸದ್ಯಕ್ಕೆ ದೂರದ ಪ್ರಯಾಣಕ್ಕಿಂತ ಸ್ಥಳೀಯ ಪ್ರವಾಸಗಳು ಹೆಚ್ಚು ಸುಖಕರವಾಗಿರುತ್ತವೆ.

ಸಾಲ ಮತ್ತು ಋಣ ಬಾಧೆ

​ಹಳೆಯ ಸಾಲಗಳನ್ನು ತೀರಿಸಲು ನೀವು ಪ್ರಯತ್ನ ನಡೆಸಲಿದ್ದೀರಿ. ಆದರೆ ಹೊಸದಾಗಿ ಯಾರಿಗೂ ಸಾಲ ನೀಡಬೇಡಿ ಅಥವಾ ದೊಡ್ಡ ಮೊತ್ತದ ಸಾಲಕ್ಕೆ ಸಹಿ ಹಾಕಬೇಡಿ. ಶತ್ರುಗಳ ಕಾಟ ಕಡಿಮೆಯಾಗಿದ್ದರೂ, ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬುವುದು ಬೇಡ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದರಿಂದ ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಬಹುದು.

​ಪ್ರತಿದಿನ ಸುಬ್ರಹ್ಮಣ್ಯ ಸ್ವಾಮಿಯ ಸ್ತೋತ್ರ ಪಠಣ, ದರ್ಶನ, ಸೇವೆ, ಆರಾಧನೆ ಮಾಡುವುದು ಹಾಗೂ ಮಂಗಳವಾರದಂದು ದೀಪ ಹಚ್ಚುವುದು ಶ್ರೇಯಸ್ಕರ.

– ಲೋಹಿತ ಹೆಬ್ಬಾರ್

Source link

ಖುಷಿಯಿಂದ ಪತ್ನಿ-ಮಗು ನೋಡಲು ತೆರಳಿದ್ದ ಗಂಡ: ವಾಪಸ್ ಮನೆಗೆ ಬಂದಾಗ ಖುಷಿಯೇ ಮಾಯ! ಆಗಿದ್ದೇನು?

ನೆಲಮಂಗಲ, ಮಾರ್ಚ್​ 23: ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಮನೆ ಕಳ್ಳತನವಾಗಿದ್ದು (house theft), 5 ಲಕ್ಷ ರೂ ಬೆಲೆ ಬಾಳುವ ಗ್ರಾಂ ಚಿನ್ನ, 5 ಲಕ್ಷ ರೂ ಬೆಲೆ ಬಾಳುವ 2 ಕೆಜಿ ಬೆಳ್ಳಿ ವಸ್ತು ಹಾಗೂ ನಗದು ಸೇರಿದಂತೆ 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಖತರ್ನಾಕ್ ಕಳ್ಳರು ದೋಚಿದ್ದಾರೆ. ನವೀನ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮಾಚೋಹಳ್ಳಿಯಲ್ಲಿ ನವೀನ್ ಎಂಬುವವರು ತಮ್ಮ ಪತ್ನಿ ಹಾಗೂ ತಾಯಿಯೊಂದಿಗೆ ವಾಸವಿದ್ದಾರೆ. ಪತ್ನಿ ಬಾಣಂತಿ ಆಗಿದ್ದರಿಂದ  ಕಳೆದ ಎರಡು ದಿನದ ಹಿಂದೆ ತವರು ಮನೆಗೆ ತೆರಳಿದ್ದರು. ಈ ಮಧ್ಯೆ ಮಗುವಾಗಿದೆ. ಹೀಗಾಗಿ ಹೆಂಡತಿ ಹಾಗೂ ಮಗುವನ್ನ ನೊಡಿ ಬರಲು ನವೀನ್ ತಮ್ಮ ತಾಯಿ ಜೊತೆಗೆ ತೆರಳಿದ್ದಾರೆ.

ಬರೋಬ್ಬರಿ 10 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ ಕಳ್ಳತನ

ಅತ್ತ ನವೀನ್​​ ಹೋಗುತ್ತಿದ್ದಂತೆ ಹೊಂಚು ಹಾಕಿ ಕುಳಿತ್ತಿದ್ದ ಖದೀಮರು ತಮ್ಮ ಕೈಚಳಕ ತೋರಿದ್ದಾರೆ. ಮನೆ ಬಾಗಿಲು ಮುರಿದು ಒಳಹೊಕ್ಕ ಕಳ್ಳರು ನಗದು ಸೇರಿದಂತೆ ಬರೋಬ್ಬರಿ 10 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ ಎಗರಿಸಿ ಪರಾರಿ ಆಗಿದ್ದಾರೆ. ನವೀನ್​ ತಮ್ಮ ಹೆಂಡತಿ ಊರಿಗೆ ತೆರಳಿದ 24 ಗಂಟೆಯೊಳಗೆ ಅನಾಹುತ ನಡೆದಿದೆ.

ಇದನ್ನೂ ಓದಿ: ಈಗ ಗ್ಯಾಸ್ ಸಿಲಿಂಡರ್​​ ಮೇಲೆ ಖದೀಮರ ಕಣ್ಣು: ಶಾಲೆಯಲ್ಲಿದ್ದ 6 ಸಿಲಿಂಡರ್ ಹೊತ್ತೊಯ್ದ ಕಳ್ಳರು

ಇನ್ನು ಮನೆ ಎದುರಿನ ನಿವಾಸಿ ಸಿಸಿಟಿವಿ ಮುರಿದು ಹೋಗಿರುವುದನ್ನ ಗಮನಿಸಿ ನವೀನ್​ಗೆ ಕರೆ ಮಾಡಿದ್ದಾರೆ. ಈ ವೇಳೆ ವಿಡಿಯೋಕಾಲ್ ಮೂಲಕ ನೋಡಿದಾಗ ಮನೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಇನ್ನು ಘಟನೆ ಸಂಬಂಧ ಅಪರಿಚಿತ ವ್ಯಕ್ತಿಗಳು ಮನೆ ಮುಂದೆ ಓಡಾಡಿರುವ ಪತ್ತೆ ಆಗಿದೆ. ಬೆಳಿಗ್ಗೆ ಮನೆ ಮುಂದೆ ಮೂವರು ಅಪರಿಚಿತ ಓಡಾಡಿದ್ದು, ರಾತ್ರಿ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿನಲ್ಲಿ ಕಾರು ಡ್ರಿಫ್ಟಿಂಗ್ ಕೇಸ್: ಮಾಜಿ ಡಾನ್ ಪುತ್ರನಿಗೆ ಬಿಗ್ ರಿಲೀಫ್!

ಬೆಂಗಳೂರು, (ಮಾರ್ಚ್ 23): ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ (luxury car drifting Case) ವಿಡಿಯೋ ಬೆಚ್ಚಿಬೀಳಿಸಿದ್ದು, ಎಲ್ಲೆಡೆ ಫುಲ್ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ (Rikki Rai)  ಹೆಸರು ಕೇಳಿಬಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ರಿಕ್ಕಿ ರೈ ವಿರುದ್ಧದ ಎಫ್​​ಐಆರ್ ದಾಖಲಿಸಿ ನೋಟಿಸ್ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ಇತ್ತ ರಿಕ್ಕಿ ರೈ  ಬೆಂಗಳುರಿನ 5ನೇ ಎಸಿಎಂಎಂ ಕೋರ್ಟ್​​ನಿಂದ ಜಾಮೀನು ಪಡೆದುಕೊಂಡಿದ್ದಾರೆ.

ಡ್ರಿಪ್ಟಿಂಗ್ ವಿಡಿಯೋ ವೈರಲ್

ಮಾರ್ಚ್ 21ರ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಲ್ಯಾಬೋರ್ಗಿನಿ ಕಾರು (ಕೆಎ-05, ಎನ್‌ಆರ್‌-0009) ಶಿವಾಜಿನಗರ ಕಡೆಯಿಂದ ಅನಿಲ್‌ ಕುಂಬ್ಳೆ ವೃತ್ತಕ್ಕೆ ಅತಿ ವೇಗವಾಗಿ ಬಂದಿತ್ತು. ಬಳಿಕ ಕಾರು ಚಾಲಕ ಅದೇ ವೃತ್ತದಲ್ಲಿಕಾರನ್ನು ಎರಡು ಸುತ್ತು ಅತಿ ವೇಗವಾಗಿ ತಿರುಗಿಸಿದ್ದ. ನಂತರ ಶಿವಾಜಿನಗರದ ಕಡೆಗೆ ಶರವೇಗದಲ್ಲಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದ. ಕಾರು ಚಾಲಕನ ಅಪಾಯಕಾರಿ ಚಾಲನೆಯ ವಿಡಿಯೊ ಸಮೀಪದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಬಳಿಕ ಪೊಲೀಸರು ಕಾರು ಸಂಚರಿಸಿದ ಮಾರ್ಗದುದ್ದಕ್ಕೂ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಅದರಲ್ಲಿ ರಿಕ್ಕಿ ರೈ ಸ್ವತಃ ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಿಕ್ಕಿ ರೈ ವಿರುದ್ಧ IMV 184, 189,BNS 281 ಅಡಿ ಎಫ್ ಐ ಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ರಿಕ್ಕಿ ರೈ ನಿರೀಕ್ಷಣಾ ಜಾಮೀನು ಮೊರೆ ಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ನೋಡಿ: ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಪ್ರಕರಣ: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ ರಿಕ್ಕಿ?

ಲ್ಯಾಂಬೋರ್ಗಿನಿ ಕಾರು ರಿಕ್ಕಿ ರೈ ಅವರಿಗೆ ಸೇರಿದೆ ಎಂದು ಗೊತ್ತಾಗಿದ್ದು, ಸದಾಶಿವನಗರದಲ್ಲಿನ ಅವರ ನಿವಾಸದಲ್ಲಿಕಾರನ್ನು ವಶಕ್ಕೆ ಪಡೆದಿದ್ದಾರೆ. ಆದ್ರೆ, ಕಾರು ಯಾರು ಚಾಲನೆ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಪ್ಪ -ಮಗನ ಸಂಯೋಗದಿಂದ ಈ ರಾಶಿಯವರಿಗೆ ಕಾದಿದೆ ಬಹುದೊಡ್ಡ ಕಂಟಕ

ಮಾರ್ಚ್ 2026ರ ಈ ಅವಧಿಯಲ್ಲಿ ಮೀನ ರಾಶಿಯಲ್ಲಿ ಶನಿ ಮತ್ತು ಸೂರ್ಯರ ಸಂಯೋಗ ಸಂಭವಿಸುತ್ತಿದೆ. ಕಾಲಜ್ಞಾನ ಶಾಸ್ತ್ರದ ಪ್ರಕಾರ ಸೂರ್ಯ ತಂದೆ ಮತ್ತು ಶನಿ ಮಗ. ಇಬ್ಬರೂ ಪರಸ್ಪರ ಶತ್ರು ಗ್ರಹಗಳು. ಈ ಇಬ್ಬರೂ ಒಂದೇ ರಾಶಿಯಲ್ಲಿದ್ದಾಗ ಸಂಘರ್ಷ, ಶಿಸ್ತು ಮತ್ತು ಪರಿವರ್ತನೆಯ ಕಾಲಘಟ್ಟ ನಿರ್ಮಾಣವಾಗುತ್ತದೆ.

​ಈ ಸಂಯೋಗದಿಂದ ಯಾವ ರಾಶಿಯವರಿಗೆ ಶುಭ ಮತ್ತು ಅಶುಭ ಫಲಗಳ ಮಿಶ್ರಣವಿರಲಿದೆ ಎಂಬ ವಿವರ ಇಲ್ಲಿದೆ.

​ಮೀನ ರಾಶಿ :

​ಈ ಸಂಯೋಗ ನಿಮ್ಮ ಸ್ವಂತ ರಾಶಿಯಲ್ಲೇ ನಡೆಯುತ್ತಿರುವುದರಿಂದ ನೀವು ಹೆಚ್ಚಿನ ಮಿಶ್ರಫಲ ಅನುಭವಿಸುವಿರಿ. ವೃತ್ತಿಜೀವನದಲ್ಲಿ ದೊಡ್ಡ ಜವಾಬ್ದಾರಿಗಳು ಅರಸಿ ಬರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗಬಹುದು. ಮಾನಸಿಕ ಒತ್ತಡ, ಅನಗತ್ಯ ಭಯ ಮತ್ತು ಆರೋಗ್ಯದಲ್ಲಿ ಏರುಪೇರಾಗಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು.

​ಕನ್ಯಾ ರಾಶಿ :

​ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಅಂದರೆ ಸಪ್ತಮ ಭಾವ ಈ ಯುತಿ ನಡೆಯುತ್ತಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಹಳೆಯ ಬಾಕಿ ಕೆಲಸಗಳು ಪೂರ್ಣಗೊಳ್ಳಬಹುದು. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಾರ್ವಜನಿಕ ಜೀವನದಲ್ಲಿ ಟೀಕೆಗಳನ್ನು ಎದುರಿಸಬೇಕಾಗಬಹುದು.

ಸಿಂಹ ರಾಶಿ :

​ನಿಮ್ಮ ರಾಶ್ಯಾಧಿಪತಿ ಸೂರ್ಯ ಎಂಟನೇ ರಾಶಿಯಲ್ಲಿ ಶನಿಯೊಂದಿಗೆ ಇರುವುದರಿಂದ ಜಾಗರೂಕತೆ ಅಗತ್ಯ. ನಿಗೂಢ ಶಾಸ್ತ್ರಗಳಲ್ಲಿ ಆಸಕ್ತಿ ಹೆಚ್ಚುವುದು. ಪಿತ್ರಾರ್ಜಿತ ಆಸ್ತಿಯಿಂದ ಅನಿರೀಕ್ಷಿತ ಲಾಭವಾಗಬಹುದು. ಸರ್ಕಾರಿ ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಆರೋಗ್ಯದ ದೃಷ್ಟಿಯಿಂದ ಇದು ಸ್ವಲ್ಪ ಕಠಿಣ ಸಮಯ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ.

​ಕುಂಭ ರಾಶಿ :

​ನಿಮ್ಮ ರಾಶಿಯಿಂದ ಎರಡನೇ ರಾಶಿಯಲ್ಲಿ ಈ ಸಂಯೋಗ ಆಗಲಿದೆ. ಸ್ಥಿರ ಆಸ್ತಿಯಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗಲಿದೆ. ಕುಟುಂಬದ ಹಿರಿಯರಿಂದ ಮಾರ್ಗದರ್ಶನ ದೊರೆಯುತ್ತದೆ. ಹಣಕಾಸಿನ ಹರಿವು ಇದ್ದರೂ ಉಳಿತಾಯ ಮಾಡುವುದು ಕಷ್ಟವಾಗಬಹುದು. ಮಾತಿನಿಂದಾಗಿ ಆಪ್ತರೊಂದಿಗೆ ಕಹಿಯಾದ ಸಂಬಂಧ ಉಂಟಾಗುವ ಸಾಧ್ಯತೆ ಇದೆ.

ಈ ಅವಧಿಯಲ್ಲಿ ಸೂರ್ಯ ಮತ್ತು ಶನಿಯ ಅಶುಭ ಪ್ರಭಾವ ತಗ್ಗಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು. ​ಶನಿ ಚಾಲೀಸಾ ಅಥವಾ ಹನುಮಾನ್ ಚಾಲೀಸಾ ಪಠಿಸುವುದು. ​ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಅರ್ಪಿಸುವುದು. ​ಶನಿವಾರದಂದು ಕಪ್ಪು ಎಳ್ಳನ್ನು ಸಂಕಲ್ಪ ಪೂರ್ವಕ ದಾನ ಮಾಡುವುದು.

– ಲೋಹಿತ ಹೆಬ್ಬಾರ್

Source link

IPL: ಕೆಟ್ಟ ಮೇಲೆ ಬುದ್ದಿ ಕಲಿತ ಬಾಂಗ್ಲಾದೇಶ; ಐಪಿಎಲ್ ಬ್ಯಾನ್ ತೆರವಿಗೆ ಚಿಂತನೆ

ಐಪಿಎಲ್​ನಿಂದ (IPL) ಬಾಂಗ್ಲಾದೇಶ ಆಟಗಾರ ಮುಸ್ತಾಫಿಜುರ್ ರೆಹಮಾನ್ (Mustafizur Rahman) ಅವರನ್ನು ಹೊರಹಾಕಿದ್ದರಿಂದ ಕೆರಳಿದ್ದ ಬಾಂಗ್ಲಾದೇಶ ಸರ್ಕಾರ, ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಿತ್ತು. ಆದರೀಗ ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಬಾಂಗ್ಲಾದೇಶದಲ್ಲಿ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಪ್ರಸಾರಕ್ಕೆ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಇದಕ್ಕೆ ಪೂರಕವಾಗಿ ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಬಾಂಗ್ಲಾದೇಶದ ಕ್ರೀಡಾ ಸಚಿವ ಅಮೀನುಲ್ ಹಕ್, ಹಿಂದಿನ ಸರ್ಕಾರ ತೆಗೆದುಕೊಂಡಿದ್ದ ಐಪಿಎಲ್ ಬ್ಯಾನ್ ನಿರ್ಧಾರವನ್ನು ಮರುಪರಿಶೀಲಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ಬಾಂಗ್ಲಾದೇಶ ಕ್ರೀಡಾ ಸಚಿವ ಹೇಳಿದ್ದೇನು?

ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರದ ಬಗ್ಗೆ ಹೇಳಿಕೆ ನೀಡಿರುವ ಬಾಂಗ್ಲಾದೇಶದ ಕ್ರೀಡಾ ಸಚಿವ ಅಮೀನುಲ್ ಹಕ್, ‘ಪ್ರಸ್ತುತ ಐಪಿಎಲ್ ಪ್ರಸಾರದ ಬಗ್ಗೆ ಇನ್ನೂ ಚರ್ಚಿಸಿಲ್ಲ, ಆದರೆ ಈದ್ ರಜಾದಿನಗಳು ಮುಗಿದ ಬಳಿಕ ಈ ಬಗ್ಗೆ ಚರ್ಚಿಸಲಾಗುವುದು ಎಂದಿದ್ದಾರೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ. ಮೇಲೆ ಹೇಳಿದಂತೆ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಕಂಡಿಸಿ, ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ಬಿಸಿಸಿಐ ಆದೇಶದ ಮೇರೆಗೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಹಾಕಿತ್ತು.

ಇದರಿಂದ ಕೆರಳಿದ್ದ ಬಾಂಗ್ಲಾದೇಶ ಸರ್ಕಾರ, ಟಿ20 ವಿಶ್ವಕಪ್​ ಆಡಲು ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ. ಹೀಗಾಗಿ ನಮ್ಮ ತಂಡದ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ, ಐಸಿಸಿಗೆ ಮನವಿ ಮಾಡಿತ್ತು. ಆದರೆ ಐಸಿಸಿ ಮಾತ್ರ ಈ ಹಂತದಲ್ಲಿ ಬಾಂಗ್ಲಾ ತಂಡದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದಿತ್ತು. ಇದರಿಂದ ಇನ್ನಷ್ಟು ಕೆರಳಿದ್ದ ಬಾಂಗ್ಲಾದೇಶ ಸರ್ಕಾರ ತನ್ನ ತಂಡದ ಹೆಸರನ್ನು ಟಿ20 ವಿಶ್ವಕಪ್​ನಿಂದ ಹಿಂಪಡೆದಿತ್ತು. ಬಾಂಗ್ಲಾ ಸರ್ಕಾರದ ಈ ನಿರ್ಧಾರ ಐಸಿಸಿಗಾಗಲಿ ಅಥವಾ ಬಿಸಿಸಿಐಗಾಗಲಿ ಯಾವುದೇ ನಷ್ಟವನ್ನುಂಟು ಮಾಡಲಿಲ್ಲ. ಆದರೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಹಾಗೂ ಆಟಗಾರರಿಗೆ ಆರ್ಥಿಕವಾಗಿ ಸಾಕಷ್ಟು ನಷ್ಟ ಉಂಟಾಯಿತು. ಸರ್ಕಾರದ ಈ ನಡೆಯನ್ನು ಬಾಂಗ್ಲಾ ಆಟಗಾರರೇ ವಿರೋಧಿಸಿದ್ದರು.

ಐಪಿಎಲ್ ಇತಿಹಾಸದಲ್ಲಿ ಫೈನಲ್ ತಲುಪದ ಏಕೈಕ ತಂಡ ಯಾವುದು ಗೊತ್ತಾ?

ಇದರಿಂದ ಬಾಂಗ್ಲಾದೇಶಕ್ಕೆ ಲಾಭ

ಇದೀಗ ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ಜಾರಿಗೆ ಬಂದಿದೆ. ಇದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿಲುವಿನಲ್ಲಿ ಬದಲಾವಣೆಗೆ ಕಾರಣವಾಗಿದೆ. ಆದಾಗ್ಯೂ ಸರ್ಕಾರದೊಂದಿಗಿನ ಸಭೆಯಲ್ಲಿ ಐಪಿಎಲ್ ಪ್ರಸಾರದ ಬಗ್ಗೆ ಅಂತಿಮ ನಿರ್ಧಾರವೇನು ಎಂಬುದನ್ನು ಈಗ ನೋಡಬೇಕಾಗಿದೆ?. ಐಪಿಎಲ್ ಪ್ರಸಾರದಿಂದ ಬಾಂಗ್ಲಾದೇಶಕ್ಕೆ ಆರ್ಥಿಕವಾಗಿ ಲಾಭವಾಗುವುದರಿಂದ ಪ್ರಸಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆಗಳು ಹೆಚ್ಚಿವೆ. ಇದರ ಜೊತೆಗೆ ಭವಿಷ್ಯದಲ್ಲಿ ಬಿಸಿಸಿಐ ಜೊತೆಗಿನ ಸಂಬಂಧವನ್ನು ಸುಧಾರಿಸಿಕೊಳ್ಳಲು ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಇದು ಉತ್ತಮ ಅವಕಾಶವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈಗ ಗ್ಯಾಸ್ ಸಿಲಿಂಡರ್​​ ಮೇಲೆ ಖದೀಮರ ಕಣ್ಣು: ಶಾಲೆಯಲ್ಲಿದ್ದ 6 ಸಿಲಿಂಡರ್ ಹೊತ್ತೊಯ್ದ ಕಳ್ಳರು

ಬೀದರ್​​, ಮಾರ್ಚ್​​ 23: ಬೆಂಗಳೂರು ಸೇರಿ ಜಿಲ್ಲೆ ಜಿಲ್ಲೆಗಳಲ್ಲೂ ಗ್ಯಾಸ್​ ಸಿಲಿಂಡರ್ ಅಭಾವ ತಲೆದೂರಿದೆ. ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಾಗದೇ ಹೋಟೆಲ್ ಉದ್ಯಮಕ್ಕೆ ಬಹು ದೊಡ್ಡ ಹೊಡೆತ ಬಿದ್ದಿದೆ. ಹಲವೆಡೆ ಹೋಟೆಲ್​ಗಳಿಗೆ ಬೀಗ ಜಡಿಯಲಾಗಿದೆ. ಗ್ಯಾಸ್​​ ಇಲ್ಲದೆ ಸಂಕಷ್ಟ ಎದುರಾಗಿದ್ದರೆ, ಕಳ್ಳರಿಗೆ ಇದೇ ಸಂಕಷ್ಟ ಹಬ್ಬವಾಗಿದೆ. ಹಾಡಹಗಲೇ ರಾಜಾರೋಷವಾಗಿ ಸಿಲಿಂಡರ್‌ ಕಳ್ಳತನ (Gas Cylinder Theft) ಮಾಡಿತ್ತಿದ್ದಾರೆ. ಬೀದರ್​​ನ ಶಾಲೆಯಲ್ಲಿದ್ದ 6 ಸಿಲಿಂಡರ್​​ ಕಳತನ ಮಾಡಿರುವಂತಹ ಘಟನೆ ನಡೆದಿದೆ.

ಅಡುಗೆಕೋಣೆ ಬೀಗ ಮುರಿದು ಸಿಲಿಂಡರ್ ಕಳ್ಳತನ

ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿದ್ದ 6 ಸಿಲಿಂಡರ್​​ಗಳನ್ನ ಕಳ್ಳರು ಹೊತ್ತೊಯ್ದಿದ್ದಾರೆ.​ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಪೂರೈಸಿದ್ದ ಸಿಲಿಂಡರ್​ಗಳನ್ನ ಅಡುಗೆಕೋಣೆ ಬೀಗ ಮುರಿದು ಕಳ್ಳರು ಹೊತ್ತೊಯ್ದಿದ್ದಾರೆ. ಸದ್ಯ ಈ ಕುರಿತಾಗಿ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಗೋದಾಮಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಕದ್ದ ಅಪರಿಚಿತ ವ್ಯಕ್ತಿ

ಇನ್ನು ಇತ್ತೀಚೆಗೆ ಭಾಲ್ಕಿ ನಿವಾಸಿ ಮಲ್ಲಿಕಾರ್ಜುನ ಕಂಟೆಪ್ಪಾ ಅವರು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಖರೀದಿಸಲು ಗೋದಾಮಿಗೆ ತೆರಳಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಗ್ಯಾಸ್ ಸಿಲಿಂಡರ್ ಕದ್ದು ಪರಾರಿಯಾಗಿದ್ದ.

ಇದನ್ನೂ ಓದಿ: ಪೂರೈಕೆ ವ್ಯತ್ಯಯದ ನಡುವೆ LPG ಸಿಲಿಂಡರ್​​ಗೆ ಕಳ್ಳರ ಕಾಟ: ಮನೆಯ ಕಾಂಪೌಂಡ್​​ಗೆ ನುಗ್ಗಿ ಕದ್ದು ಎಸ್ಕೇಪ್​​!

ಮಾರ್ಚ್ 14ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಕಳುವಾದ ಗ್ಯಾಸ್ ಸಿಲಿಂಡರ್ ಹುಡುಕಿಕೊಡುವಂತೆ ಮಲ್ಲಿಕಾರ್ಜುನ ಕಂಟೆಪ್ಪಾ ಭಾಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಾಡಹಗಲೇ 2 ಸಿಲಿಂಡರ್‌ ಹೊತ್ತೊಯ್ದ ಖದೀಮರು

ಗ್ಯಾಸ್‌ಗೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಸಿಲಿಂಡರ್ ಮೇಲೆ ಕಣ್‌ ಹಾಕಿದ್ದಾರೆ. ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಸಿ ಲೇಔಟ್‌ನಲ್ಲಿರೋ ಸಾಯಿ ಅಪಾರ್ಟ್‌ಮೆಂಟ್‌ನಲ್ಲಿ ಹಾಡಹಗಲೇ ಗ್ಯಾಸ್‌ ಸಿಲಿಂಡರ್‌ ಕಳ್ಳತನ ಇತ್ತೀಚಿಗೆ ನಡೆದಿದೆ.

ಇದನ್ನೂ ಓದಿ: Video: ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ

ಯುಗಾದಿ ಹಬ್ಬದ ದಿನವೇ ಹೆಲ್ಮೆಟ್‌ ಧರಿಸಿ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಖದೀಮರು, ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ಗೆ ನುಗ್ಗಿದ್ದಾರೆ. ಅಲ್ಲಿದ್ದ ಎರಡು ಸಿಲಿಂಡರ್‌ಗಳನ್ನ ಸ್ಕೂಟರ್‌ನಲ್ಲಿಟ್ಟುಕೊಂಡು ಎಸ್ಕೇಪ್ ಆಗಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಬೇಗೂರು ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಎಲ್ಲಾ ಮಾಡೋಕೆ ಆಗುತ್ತೆ, ಟೆನ್ಶನ್ ಮಾಡಿಕೊಳ್ಬೇಡಿ; ಆಡೋ ವಯಸ್ಸಿನಲ್ಲಿ ಲೈಫ್ ಟಿಪ್ಸ್ ನೀಡಿದ ಪುಟ್ಟ ಬಾಲಕ

ಕೆಲವರು ಸಣ್ಣ ಪುಟ್ಟ ಸಮಸ್ಯೆ ಬಂತು ಅಂದ್ರೆ ಆಕಾಶನೇ ತಲೆ ಮೇಲೆ ಬಿತ್ತು ಅನ್ನೋ ಹಾಗೆ ಕುಳಿತು ಬಿಡ್ತಾರೆ. ಮುಂದೇನು ಮಾಡೋದು ಅನ್ನೋದು ತೋಚೊದೇ ಇಲ್ಲ. ಆದರೆ ಇದೀಗ ಈ ಪುಟ್ಟ ಹುಡುಗನ ಮಾತು ಕೇಳಿದ್ರೆ ನೀವು ಟೆನ್ಶನ್ ಫ್ರೀ ಆಗ್ತೀರಾ. ಸಣ್ಣ ಪುಟ್ಟ ವಿಷ್ಯಕ್ಕೆ ಚಿಂತೆ ಮಾಡುವವರಿಗೆ ಪುಟ್ಟ ಹುಡುಗನು (little boy) ಧೈರ್ಯ ತುಂಬುವ ಮಾತುಗಳನ್ನಾಡಿದ್ದಾನೆ. ಸಣ್ಣ ವಯಸ್ಸಿನಲ್ಲಿ ಸಲಹೆ ನೀಡಿದ ರೀತಿ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

kruthi.pov ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪುಟ್ಟ ಹುಡುಗನೊಬ್ಬ ಟೆನ್ಶನ್ ತಕೊಳ್ಬೇಡಿ ಏನಾಗಲ್ಲ. ನೀವು ಯಾಕೆ ಟೆನ್ಶನ್ ತಕೊಳ್ತೀರಾ ಎಲ್ಲಾ ಮಾಡೋಕೆ ಆಗುತ್ತೆ ಎಂದು ಧೈರ್ಯ ತುಂಬಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಮ್ಮ ಬೈದದ್ದಕ್ಕೆ ದೇವರ ಮುಂದೆ ದೂರು ನೀಡಿದ ಪುಟಾಣಿ

ಈ ವಿಡಿಯೋ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ನಡುವೆ ಟೆನ್ಶನ್ ಆಗಿಲ್ಲ ಅಂದ್ರೆ, ಟೆನ್ಶನ್ ಆಗೋ ತರಹ ಆಗಿದೆ ಎಂದು ಹೇಳಿದರೆ, ಮತ್ತೊಬ್ಬರು, ಇದನ್ನು ಹೇಳಿಕ್ಕೆ ನೀನು ಎಷ್ಟು ಟೆನ್ಶನ್ ತಕೊಂಡೆಯಲ್ವಾ ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು, ನೀನು ಹೇಳೋದು ನೋಡಿ ಟೆನ್ಶನ್ ಆಗ್ತಿದೆ ಅಪ್ಪಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Gold Rates: 10 ಗ್ರಾಮ್ ಚಿನ್ನದ ಬೆಲೆಯಲ್ಲಿ 9,450 ರೂ ಇಳಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 23: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಸತತ ಇಳಿಕೆ ನಿಲ್ಲುತ್ತಿಲ್ಲ. ಬಂಗಾರದ ಬೆಲೆ (Gold Rates) ಒಂದೇ ದಿನ ಒಂದು ಗ್ರಾಮ್​ಗೆ ಬರೋಬ್ಬರಿ 1,000 ರೂ ಸಮೀಪದಷ್ಟು ಏರಿಕೆ ಕಂಡಿದೆ. ಅಪರಂಜಿ ಚಿನ್ನದ ಬೆಲೆ 14,000 ರೂ ಕೆಳಗೆ ಬಂದಿದೆ. ಇದೇ ಟ್ರೆಂಡ್ ಮುಂದುವರಿದರೆ ಚಿನ್ನದ ಬೆಲೆ ನಾಲ್ಕಂಕಿಗೆ ಬಂದರೂ ಅಚ್ಚರಿ ಇಲ್ಲ. ಇನ್ನು, ಬೆಳ್ಳಿ ಬೆಲೆಯಲ್ಲಿ 15 ರೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,24,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,35,650 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,24,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 23,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 23ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,565 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,435 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,174 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 230 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,565 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,435 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 230 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,435 ರೂ
  • ಚೆನ್ನೈ: 12,950 ರೂ
  • ಮುಂಬೈ: 12,435 ರೂ
  • ದೆಹಲಿ: 12,450 ರೂ
  • ಕೋಲ್ಕತಾ: 12,435 ರೂ
  • ಕೇರಳ: 12,435 ರೂ
  • ಅಹ್ಮದಾಬಾದ್: 12,440 ರೂ
  • ಜೈಪುರ್: 12,450 ರೂ
  • ಲಕ್ನೋ: 12,450 ರೂ
  • ಭುವನೇಶ್ವರ್: 12,435 ರೂ

ಇದನ್ನೂ ಓದಿ: ರುಪಾಯಿ ಮತ್ತಷ್ಟು ಕುಸಿತ; ಪ್ರಪ್ರಥಮ ಬಾರಿಗೆ 94ರ ಮಟ್ಟಕ್ಕೆ ಇಳಿಕೆ; ಭಾರತೀಯ ಕರೆನ್ಸಿ ಮೌಲ್ಯ ಕುಸಿಯಲು ಏನು ಕಾರಣ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 541 ರಿಂಗಿಟ್ (12,904 ರುಪಾಯಿ)
  • ದುಬೈ: 501.50 ಡಿರಾಮ್ (12,837 ರುಪಾಯಿ)
  • ಅಮೆರಿಕ: 140.50 ಡಾಲರ್ (13,213 ರುಪಾಯಿ)
  • ಸಿಂಗಾಪುರ: 175.10 ಸಿಂಗಾಪುರ್ ಡಾಲರ್ (12,807 ರುಪಾಯಿ)
  • ಕತಾರ್: 499 ಕತಾರಿ ರಿಯಾಲ್ (12,867 ರೂ)
  • ಸೌದಿ ಅರೇಬಿಯಾ: 508 ಸೌದಿ ರಿಯಾಲ್ (12,720 ರುಪಾಯಿ)
  • ಓಮನ್: 53.15 ಒಮಾನಿ ರಿಯಾಲ್ (12,978 ರುಪಾಯಿ)
  • ಕುವೇತ್: 41.27 ಕುವೇತಿ ದಿನಾರ್ (12,642 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 230 ರೂ
  • ಚೆನ್ನೈ: 235 ರೂ
  • ಮುಂಬೈ: 230 ರೂ
  • ದೆಹಲಿ: 230 ರೂ
  • ಕೋಲ್ಕತಾ: 230 ರೂ
  • ಕೇರಳ: 235 ರೂ
  • ಅಹ್ಮದಾಬಾದ್: 230 ರೂ
  • ಜೈಪುರ್: 230 ರೂ
  • ಲಕ್ನೋ: 230 ರೂ
  • ಭುವನೇಶ್ವರ್: 235 ರೂ
  • ಪುಣೆ: 230

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version