Women’s T20 World Cup 2026: ಟಿ20 ವಿಶ್ವಕಪ್​ನಲ್ಲಿ ದಾಖಲೆ ಬರೆದ ಸ್ಮೃತಿ- ಶಫಾಲಿ ಜೋಡಿ – Kannada News | India Women’s T20 WC 2026: Mandhana Shafali Equal Fastest 50 Record vs Netherlands

2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಗೆಲುವಿನ ಶುಭಾರಂಭ ಮಾಡಿದೆ. ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಮಣಿಸಿದ ಹರ್ಮನ್​ಪ್ರೀತ್ ಕೌರ್ ಪಡೆ ಇದೀಗ ತನ್ನ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ಬೌಲಿಂಗ್ ಆಯ್ದುಕೊಂಡಿದ್ದು, ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿದೆ (PC-PTI).

ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ, ಭಾರತದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಕೇವಲ 5.1 ಓವರ್‌ಗಳಲ್ಲಿ ತಂಡದ ಸ್ಕೋರ್ ಅನ್ನು 50 ರನ್‌ಗಳ ಗಡಿ ದಾಟಿಸಿದರು. ಈ ಮೂಲಕ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಸರಿಗಟ್ಟಿದರು (PC-PTI).

ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಮೊದಲ ಓವರ್‌ನಿಂದಲೇ ಡಚ್ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಅದರಲ್ಲೂ ಐರಿಸ್ ಜ್ವಿಲ್ಲಿಂಗ್ ಮತ್ತು ಇಸಾಬೆಲ್ಲೆ ವೊನ್ನಿಂಗ್ ಎಸೆದ ಓವರ್‌ಗಳಲ್ಲಿ ಶಫಾಲಿ ಮತ್ತು ಸ್ಮೃತಿ ಸತತ ಬೌಂಡರಿಗಳನ್ನು ಕಲೆಹಾಕಿದರು. ಹೀಗಾಗಿ 5 ನೇ ಓವರ್ ಅಂತ್ಯದ ವೇಳೆಗೆ, ಭಾರತ ವಿಕೆಟ್ ಕಳೆದುಕೊಳ್ಳದೆ 48 ರನ್ ಗಳಿಸಿತು. ನಂತರ ಈ ಜೋಡಿ 6 ನೇ ಓವರ್‌ನ ಮೊದಲ ಎಸೆತದಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿತು (PC-PTI).

ಭಾರತ ತಂಡ ಕೇವಲ 5.1 ಓವರ್‌ಗಳಲ್ಲಿ 50 ರನ್‌ಗಳ ಗಡಿ ತಲುಪುವ ಮೂಲಕ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಜಂಟಿಯಾಗಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆ ಬರೆದಿದೆ. ಇದಕ್ಕೂ ಮೊದಲು, 2020 ರ ಟಿ20 ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ 5.1 ಓವರ್‌ಗಳಲ್ಲಿ ಈ ಮೈಲಿಗಲ್ಲು ತಲುಪಿತ್ತು. ಈಗ, 2026 ರ ವಿಶ್ವಕಪ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಅದೇ ಮ್ಯಾಜಿಕ್ ಅನ್ನು ಪುನರಾವರ್ತಿಸಿ, ಆ ದಾಖಲೆಯನ್ನು ಸರಿಗಟ್ಟಿದೆ (PC-PTI).

ಆರಂಭಿಕರ ಆಕ್ರಮಣಕಾರಿ ಆಟವನ್ನು ನೋಡಿದರೆ, ಈ ಪಂದ್ಯದಲ್ಲಿ ಟೀಂ ಇಂಡಿಯಾ, ನೆದರ್ಲ್ಯಾಂಡ್ಸ್​ಗೆ ದೊಡ್ಡ ಗುರಿಯನ್ನು ನೀಡುವುದು ಖಚಿತವಾಗಿದೆ. ಪವರ್‌ಪ್ಲೇನಲ್ಲಿಯೇ ಎದುರಾಳಿಯನ್ನು ಮಾನಸಿಕವಾಗಿ ಹಾನಿಗೊಳಿಸಿದ ಟೀಂ ಇಂಡಿಯಾ, ಈ ಗ್ರೂಪ್-ಎ ಪಂದ್ಯದಲ್ಲಿ ದೊಡ್ಡ ಗೆಲುವು ಸಾಧಿಸುವ ಮೂಲಕ ತನ್ನ ನೆಟ್ ರನ್ ರೇಟ್ ಅನ್ನು ಸುಧಾರಿಸಲು ಪ್ರಯತ್ನಿಸಲಿದೆ (PC-PTI).

Published On – 7:57 pm, Wed, 17 June 26

Source link

Leave a Reply

Your email address will not be published. Required fields are marked *