Headlines

ದುಡ್ಡಿನ ಆಸೆಗೆ ಕಳ್ಳಾಟ ಆಡುತ್ತಿದ್ದ ಬೆಂಗಳೂರಿನ ಪಿಜಿ ಮಾಲೀಕರಿಗೆ ಶಾಕ್ ಕೊಟ್ಟ ಅಧಿಕಾರಿಗಳು – Kannada News | GBA Officer inspects 204 paying guest In Bengaluru today And 6 locked

ಬೆಂಗಳೂರು, (ಜನವರಿ 16): ಶುಚಿತ್ವದ ಕೊರತೆ, ಎಫ್‌ಎಸ್‌ಎಸ್‌ಎಐ ಮಾನದಂಡಗಳ ಉಲ್ಲಂಘನೆ, ಸುರಕ್ಷತಾ ಮಾರ್ಗಸೂಚಿಗಳ ಪಾಲಿಸದಿರುವುದು ಸೇರಿ ನಿಯಮಗಳನ್ನ ಪಾಲಿಸದ ಪಿಜಿಗಳ (paying guest )ವಿರುದ್ಧ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಸಮರ ಸಾರಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯಾಧಿಕಾರಿಗಳು ಪಿಜಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್‌ ನಿರ್ದೇಶನದ ಮೇರೆಗೆ 204 ಪೇಯಿಂಗ್‌ ಗೆಸ್ಟ್‌(ಪಿಜಿ)ಗಳನ್ನ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಲೋಪ ಕಂಡುಬಂದ…

Read More

ಜನರೊಂದಿಗಿನ ಎನ್​ಡಿಎ ಬಾಂಧವ್ಯವನ್ನು ಸೂಚಿಸುತ್ತದೆ; ಬಿಎಂಸಿ ಚುನಾವಣೆಯ ಗೆಲುವಿಗೆ ಪ್ರಧಾನಿ ಮೋದಿ ಧನ್ಯವಾದ – Kannada News | Thank You Maharashtra PM Modi hails Mahayutis Big Win in Municipal Corporation elections

ನವದೆಹಲಿ, ಜನವರಿ 16: ಮಹಾರಾಷ್ಟ್ರದ (Maharashtra) ಪುರಸಭೆ ಚುನಾವಣೆಯಲ್ಲಿ ಎನ್‌ಡಿಎ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಶ್ಲಾಘಿಸಿದ್ದಾರೆ. ಈ ಫಲಿತಾಂಶಗಳು ಎನ್​ಡಿಎ ಮೈತ್ರಿಕೂಟದ ಜನಪರ ಉತ್ತಮ ಆಡಳಿತಕ್ಕೆ ಹೆಚ್ಚುತ್ತಿರುವ ಸಾರ್ವಜನಿಕ ಬೆಂಬಲವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಧನ್ಯವಾದಗಳು ಮಹಾರಾಷ್ಟ್ರ! ರಾಜ್ಯದ ಕ್ರಿಯಾಶೀಲ ಜನರು ಎನ್‌ಡಿಎಯ ಜನಪರ ಉತ್ತಮ ಆಡಳಿತದ ಕಾರ್ಯಸೂಚಿಯನ್ನು ಆಶೀರ್ವದಿಸಿದ್ದಾರೆ” ಎಂದು ಹೇಳಿದ್ದಾರೆ. ಇನ್ನೊಂದು ಎಕ್ಸ್ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಜನರ ನಡುವೆ…

Read More

BBL: ಸಿಂಗಲ್ ಬೇಡ ವಾಪಸ್ ಹೋಗು; ಬಾಬರ್ ಆಝಂಗೆ ಇದೆಂಥಾ ಅವಮಾನ! ವಿಡಿಯೋ – Kannada News | Babar Azam Humiliated by Steve Smith in BBL: Single Denied Sparks Controversy

ಕೆಲವೇ ಕೆಲವು ದಿನಗಳ ಹಿಂದೆ ಬಿಗ್ ಬ್ಯಾಷ್ ಲೀಗ್​ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ರಿಜ್ವಾನ್ ಅವರನ್ನು ಅವರ ಆಮೆಗತಿಯ ಬ್ಯಾಟಿಂಗ್​ನಿಂದಾಗಿ ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಡಗೌಟ್​ಗೆ ವಾಪಸ್ ಕರೆಸಿಕೊಳ್ಳಲಾಗಿತ್ತು. ಇದು ಪಾಕ್ ನಾಯಕನಿಗೆ ಸಾರ್ವಕನಿಕವಾಗಿ ಸಾಕಷ್ಟು ಮುಜುಗರ ತಂದಿತ್ತು. ಇದೀಗ ಅದೇ ರೀತಿಯ ಅವಮಾನ ಪಾಕಿಸ್ತಾನದ ಮತ್ತೊಬ್ಬ ಮಾಜಿ ನಾಯಕ ಬಾಬರ್ ಆಝಂ ಬ್ಯಾಟಿಂಗ್‌ ವಿಚಾರದಲ್ಲಿ ನಡೆದಿದೆ. ಬ್ಯಾಟಿಂಗ್‌ ವೇಳೆ ಹೆಚ್ಚು ಬಾಲ್​ಗಳನ್ನು ಡಾಟ್ ಮಾಡಿ ಓವರ್​ನ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದ ಬಾಬರ್​ಗೆ…

Read More

ಒತ್ತಡದಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ? ತಿಳಿದ್ರೆ ಶಾಕ್ ಆಗ್ತೀರಾ! – Kannada News | Stress: The Silent Health Threat

ಒತ್ತಡ (Stress) ಇಲ್ಲದ ವ್ಯಕ್ತಿ ಇರಲು ಸಾಧ್ಯವೇ… ಎಂಬ ಪ್ರಶ್ನೆಗೆ ಸಹಜವಾಗಿ ಇಲ್ಲ ಎಂಬ ಉತ್ತರವೇ ಬರುತ್ತೆ. ಹಣಕಾಸಿನ ತೊಂದರೆ, ಕಚೇರಿ ಕೆಲಸ, ಕುಟುಂಬದ ಜವಾಬ್ದಾರಿ ಹೀಗೆ ನಾನಾ ರೀತಿಯ ಕಾರಣಗಳು ವ್ಯಕ್ತಿಯನ್ನು ಒಳಗಿನಿಂದ ಹಿಂಡಿ ಹಿಪ್ಪೆ ಮಾಡಿಬಿಡಬಹುದು, ಆದರೆ ನಿಮಗೆ ಗೊತ್ತಾ… ನಿಮಗೆ ತಿಳಿದೋ ತಿಳಿಯದೆಯೋ ಅನುಭವಿಸುವ ಒತ್ತಡ ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ. ಹೌದು, ಅತಿಯಾಗಿ ಯೋಚಿಸುವುದರಿಂದ ಕೂದಲು ಉದುರುವಿಕೆಯಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆಗಳವರೆಗೆ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಒತ್ತಡಕ್ಕೆ…

Read More

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್​ಗೆ ಚುನಾವಣೆಯಲ್ಲಿ ಗೆಲುವು – Kannada News | Jalna Civic Election Shock: Gauri Lankesh Murder Case Accused Shrikant Secures Independent Victory

ಮುಂಬೈ, ಜನವರಿ 16: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಲ್ನಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಘೋಷಣೆಯಾದ ಕೂಡಲೇ ಬೆಂಬಲಿಗರೊಂದಿಗೆ ಸಂಭ್ರಮಾಚರಣೆ ನಡೆಸಿದ್ದಾರೆ. 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ಅವರ ಮನೆಯ ಹೊರಗೆ ಗೌರಿ ಲಂಕೇಶ್ ಅವರ​ ಹತ್ಯೆ ನಡೆದಿತ್ತು. ಪಂಗಾರ್ಕರ್ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಹೆಸರಿಸಲಾಯಿತು. ಸೆಪ್ಟೆಂಬರ್ 4, 2024 ರಂದು ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು….

Read More

ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ.. – Kannada News | Gilli Nata native Dadadapura Celebrates ahead of Bigg Boss Kannada Season 12 Finale

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ (Bigg Boss Kannada Season 12 Finale) ತಲುಪಿರುವ ಗಿಲ್ಲಿ ಪರವಾಗಿ ರಾಜ್ಯಾದ್ಯಂತ ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ. ಗಿಲ್ಲಿ ಅವರ ಹುಟ್ಟೂರಿನಲ್ಲಿ ಜನರು ದೊಡ್ಡ ದೊಡ್ಡ ಬ್ಯಾನರ್, ಕಟೌಟ್ ಹಾಕಿ ಸಂಭ್ರಮಿಸುತ್ತಿದ್ದಾರೆ. ಹೌದು, ಗಿಲ್ಲಿ ಅವರ ಊರು ದಡದಪುರದಲ್ಲಿ (Dadadapura) ಗ್ರಾಮಸ್ಥರ ಸಂಭ್ರಮ ಜೋರಾಗಿದೆ. ‘ವೋಟ್ ಫಾರ್ ಗಿಲ್ಲಿ’ ಎಂದು ಘೋಷಣೆ ಕೂಗಲಾಗುತ್ತಿದೆ. ಕಾಮಿಡಿ ಮೂಲಕ ಗಿಲ್ಲಿ ನಟ (Gilli Nata) ಅವರು ಎಲ್ಲರನ್ನು ಮನರಂಜಿಸಿದ್ದಾರೆ. ಅವರೇ ಈ…

Read More

ಶುಂಠಿ, ಈರುಳ್ಳಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವೇ? – Kannada News | Is it right or wrong to store ginger, onions, and garlic in the refrigerator

ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ದೈನಂದಿನ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರೂ ಸಹ ಈ ಮೂರು ವಸ್ತುಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. ಹಾಗಾಗಿ ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಮಾರುಕಟ್ಟೆಯಿಂದ ತಂದು ಅನೇಕರು ಫ್ರಿಡ್ಜ್‌ನಲ್ಲಿ (refrigerator) ಸ್ಟೋರ್‌ ಮಾಡಿ ಇಡುತ್ತಾರೆ. ಇತರೆ ತರಕಾರಿಯಂತೆ ಶುಂಠಿ, ಬೆಳ್ಳುಳ್ಳಿ ಮತ್ತು  ಈರುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದಂತೆ ಜೊತೆಗೆ ಇವುಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಯಾವುದೇ ಅವಶ್ಯಕತೆಯೂ ಇಲ್ಲ ಏಕೆಂದರೆ ಇವು ಮೂರು ಒಣ ಪದಾರ್ಥಗಳಾಗಿದ್ದು, ಅವು ಬಹಳ ಕಡಿಮೆ ನೀರನ್ನು ಹೊಂದಿರುತ್ತವೆ ಹಾಗಾಗಿ…

Read More

Chanakya Niti: ಈ ಅಭ್ಯಾಸಗಳು ನಿಮ್ಮ ಸಂಪೂರ್ಣ ಜೀವನವನ್ನೇ ನಾಶ ಮಾಡಬಹುದು ಎಚ್ಚರ! – Kannada News | Chanakya Niti: These habits can ruin your entire life, be careful

ನಮ್ಮ ಅಭ್ಯಾಸಗಳಿಂದಲೂ (habits) ನಮ್ಮ ಒಳಿತು ಕೆಡುಕು ನಿರ್ಧಾರವಾಗುತ್ತದೆ. ಅದಕ್ಕಾಗಿಯೇ ಒಳ್ಳೆಯ ಅಭ್ಯಾಸಗಳನ್ನು, ಸದ್ಗುಣಗಳನ್ನು ಬೆಳೆಸಬೇಕು ಎಂದು ಹಿರಿಯರು ಆಗಾಗ್ಗೆ ಹೇಳುವುದು. ಅದರಲ್ಲೂ ಈ ಕೆಲವೊಂದು ಅಭ್ಯಾಸಗಳಿದ್ದರೆ ಜೀವನವೇ ಸರ್ವನಾಶವಾಗುವ ಸಾಧ್ಯತೆ ಇದೆ, ಅಂತಹ ಅಭ್ಯಾಸಗಳನ್ನು ಕೂಡಲೇ ತ್ಯಜಿಸಬೇಕು. ಯುವ ಜನರಂತೂ ಆ ಅಭ್ಯಾಸಗಳನ್ನು ತ್ಯಜಿಸದಿದ್ದರೆ ಖಂಡಿತವಾಗಿಯೂ ಜೀವನದಲ್ಲಿ  ಮುಂದೆ ಬರಲು ಸಾಧ್ಯವಿಲ್ಲ  ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ ಜೀವನವನ್ನು ಹಾಳು ಮಾಡುವ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ. ಈ ಅಭ್ಯಾಸಗಳು…

Read More

4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಅಣ್ಣ, ಕಾರಣವೇನು? – Kannada News | Groom Murder: Man Kills His Brother For property Dispute at mandya

ಮಂಡ್ಯ, (ಜನವರಿ 16):  ಇದೇ ಜನವರಿ 21ರಂದು ಮದುವೆ (marriage) ಫಿಕ್ಸ್ ಆಗಿತ್ತು. ಹೀಗಾಗಿ ಮದುವೆ ಎಲ್ಲಾ ರೀತಿಯ  ಸಿದ್ಧತೆಗಳು ನಡೆದಿದ್ದವು. ಲಗ್ನ ಪತ್ರಿಕೆ ಸಹ ಸಂಬಂಧಿಕರಿಗೆ ಹಂಚಿ ಮದುವೆಗೆ ಬರಬೇಕೆಂದು ಆಹ್ವಾನ ನೀಡಲಾಗಿತ್ತು. ಆದ್ರೆ, ಮದುವೆಗೆ ಇನ್ನೇನು ನಾಲ್ಕು ದಿನ ಇರುವಾಗಲೇ ಯುವಕ ಮಸಣ ಸೇರಿದ್ದಾನೆ. ಹೌದು.. ಅಣ್ಣನೇ (Brother) ತನ್ನ ಮಕ್ಕಳೊಂದಿಗೆ ಸೇರಿ ತಮ್ಮನನ್ನು 28 ಬಾರಿ ಇರಿದು ಕೊಂದಿರುವ ಘಟನೆ ಘಟನೆ ಮಂಡ್ಯದ (Mandya) ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಯೋಗೇಶ್ (30) ಕೊಲೆಯಾದ ಯುವಕ….

Read More

ಎಲ್ಲೆಲ್ಲೂ ಗಿಲ್ಲಿ, ಎಲ್ಲೆಲ್ಲೂ ಗಿಲ್ಲಿ: ಅಭಿಮಾನಿಗಳ ಪ್ರೀತಿಯ ಅಭಿಯಾನ ನೋಡಿ – Kannada News | Bigg Boss Kannada 12: Gilli fans vote campaign in Davangere

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಫಿನಾಲೆಗೆ ಇನ್ನು ಎರಡು ದಿನಗಳಷ್ಟೆ ಬಾಕಿ ಇದೆ. ಗಿಲ್ಲಿ ಗೆಲ್ಲುವ ಫೆವರೇಟ್ ಆಗಿದ್ದಾರೆ. ಅಶ್ವಿನಿ, ಧನುಶ್ ಅವರಿಂದ ಪ್ರತಿಸ್ಪರ್ಧೆಯೂ ಇದೆ. ವೋಟಿಂಗ್ ಲೈನ್ ಈಗಾಗಲೇ ಆರಂಭ ಆಗಿದ್ದು ಭಾನುವಾರ 10 ಗಂಟೆ ವರೆಗೂ ಇಷ್ಟದ ಸ್ಪರ್ಧಿಗಳ ಪರವಾಗಿ ಮತಗಳನ್ನು ಚಲಾಯಿಸಬಹುದಾಗಿದೆ. ಗಿಲ್ಲಿಯ ಅಭಿಮಾನಿಗಳು ಪ್ರೀತಿಯಿಂದ ಗಿಲ್ಲಿ ಪರವಾಗಿ ಮತ ಅಭಿಯಾನ ಆರಂಭಿಸಿದ್ದಾರೆ. ದಾವಣಗೆರೆಯಲ್ಲಿ ಗಿಲ್ಲಿ ಅಭಿಮಾನಿಗಳು ಪೆಂಡಾಲ್-ಮೈಕ್ ಹಾಕಿಸಿ ಗಿಲ್ಲಿ ಪರವಾಗಿ ಮತ ಯಾಚನೆ ಮಾಡಿದ್ದಾರೆ….

Read More