Cockroach Janta Party: ಏನಿದು ಕಾಕ್ರೋಚ್ ಜನತಾ ಪಾರ್ಟಿ, ಹುಟ್ಟಿಕೊಂಡಿದ್ಹೇಗೆ? ಯಾರ್ಯಾರ ಬೆಂಬಲವಿದೆ? – Kannada News | Cockroach Janata Party Meme Turns Into Viral Gen Z Political Protest in India
ನವದೆಹಲಿ, ಮೇ 21: ರಾಜಕೀಯದಲ್ಲಿ ಪಕ್ಷಾಂತರ, ಸಿದ್ಧಾಂತಗಳ ತ್ಯಾಗ ಮತ್ತು ಅಧಿಕಾರದ ಆಸೆ ಹೊಸದೇನಲ್ಲ. ಆದರೆ ರಾಜಕಾರಣಿಗಳನ್ನಲ್ಲ ನಿರುದ್ಯೋಗಿ ಯುವಕರನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅತ್ಯಂತ ಕಟುವಾದ ಮತ್ತು ವಿಭಿನ್ನವಾದ ಶಬ್ದಗಳಲ್ಲಿ ಟೀಕಿಸಿದಾಗ ಸೃಷ್ಟಿಯಾದದ್ದೇ ಈ ‘ಕಾಕ್ರೋಚ್ ಜನತಾ ಪಾರ್ಟಿ’. ಪ್ರಮುಖ ಪ್ರಕರಣವೊಂದರ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, ನಿರುದ್ಯೋಗಿ ಯುವಕರ ಬಗ್ಗೆ ಮಾತನಾಡಿದ್ದರು. ಕೆಲವು ನಿರುದ್ಯೋಗಿ ಯುವಕರು ಜಿರಳೆ(Cokroach )ಗಳಿದ್ದಂತೆ. ಉದ್ಯೋಗ ಮತ್ತು ಸ್ಥಾನಮಾನ ಸಿಗದಿದ್ದಾಗ ಅವರು ಆರ್ಟಿಐ (RTI) ಕಾರ್ಯಕರ್ತರು ಹಾಗೂ ಸಾಮಾಜಿಕ ಜಾಲತಾಣ…