ಬೆಂಗಳೂರಿನಲ್ಲಿ ಅಪಘಾತದ ನೆಪದಲ್ಲಿ ವ್ಯಕ್ತಿ ಹತ್ಯೆಗೆ ಸಂಚು: ಐವರ ವಿರುದ್ಧ ದಾಖಲಾಯ್ತು ಕೇಸು – Kannada News | Bengaluru: Conspiracy to murder a person under the pretext of an accident; Case registered against five
ರಾಯಲ್ ಎನ್ಫೀಲ್ಡ್, ಟೆಂಪೊ ಟ್ರಾವೆಲರ್ ಬೆಂಗಳೂರು, ಜನವರಿ 16: ಬೈಕ್ ಅಪಘಾತದ ನೆಪದಲ್ಲಿ ವ್ಯಕ್ತಿಯನ್ನು ಮುಗಿಸಲು ಸಂಚು ರೂಪಿಸಿದ್ದ (Murder Attempt) ಘಟನೆ ಬೆಂಗಳೂರಿನ (bangaluru) ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೇಕಂತಲೇ ಬೈಕ್ಗೆ ಟೆಂಪೊ ಟ್ರಾವೆಲರ್ ಗುದ್ದಿಸಿ ನಂತರ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜನವರಿ 7ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೈಯದ್ ಯಾಸೀನ್ ಹಲ್ಲೆಗೊಳಗಾದ ವ್ಯಕ್ತಿ. ಸದ್ಯ ಚಿಕ್ಕಜಾಲ ಪೊಲೀಸ್ ಠಾಣೆಗೆ ಸೈಯದ್ ಯಾಸೀನ್ ತಂದೆ ದೂರು…