ಗ್ಯಾಸ್ಟ್ರಿಕ್, ಅಸಿಡಿಟಿಯಿಂದ ದಿನಪೂರ್ತಿ ಹಿಂಸೆ ಪಡುತ್ತಿದ್ದೀರಾ? ಹಾಗಿದ್ರೆ ತಪ್ಪದೆ ಈ ಅಭ್ಯಾಸಗಳನ್ನು ಮಾಡಿ – Kannada News | Reduce Bloating And Acidity Naturally: Ayurvedic Home Remedies To Try Every Morning
ಇತ್ತೀಚಿನ ದಿನಗಳಲ್ಲಿ ಅಸಮರ್ಪಕ ಆಹಾರ ಪದ್ಧತಿ ಮತ್ತು ಅಸ್ತವ್ಯಸ್ತ ಜೀವನಶೈಲಿಯಿಂದ ಗ್ಯಾಸ್ಟ್ರಿಕ್, ಅಸಿಡಿಟಿ (Acidity), ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಸಮಸ್ಯೆಗಳು ಸಾಮಾನ್ಯವಾಗಿವೆ. ಬೆಳಿಗ್ಗೆ ಎದ್ದ ಕ್ಷಣದಿಂದಲೇ ಹೊಟ್ಟೆಯಲ್ಲಿ ಉರಿಯೂತ, ಗ್ಯಾಸ್ ಮತ್ತು ಹೊಟ್ಟೆ ಭಾರವಾದ ಅನುಭವದಿಂದ ಹಲವರು ದಿನವಿಡೀ ಅಸ್ವಸ್ಥರಾಗಿರುತ್ತಾರೆ. ಇದರಿಂದ ಕೆಲಸದಲ್ಲಿ ಏಕಾಗ್ರತೆ ಕಡಿಮೆಯಾಗುವುದು ಮಾತ್ರವಲ್ಲದೆ, ಆಹಾರ ಸೇವಿಸುವ ಆಸಕ್ತಿಯೂ ಕುಗ್ಗುತ್ತದೆ. ಆಯುರ್ವೇದ ತಜ್ಞೆ ಡಾ. ಚಂಚಲ್ ಶರ್ಮಾ ಅವರು ಹೇಳುವ ಪ್ರಕಾರ, ಬೆಳಿಗ್ಗೆ ಕೆಲವು ಸರಳ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸಿದರೆ ಗ್ಯಾಸ್ಟ್ರಿಕ್ ಮತ್ತು…