Headlines

IPL 2026: ಒಂದೇ ಒಂದು ಪಂದ್ಯವನ್ನಾಡದೆ ರಾಂಚಿಗೆ ವಾಪಸ್ಸಾದ ಧೋನಿ

ಐಪಿಎಲ್ 2026 ರ ಲೀಗ್ ಹಂತ ಮುಗಿಯಲು ಕೆಲವೇ ಪಂದ್ಯಗಳು ಬಾಕಿ ಇವೆ. ಅಂದರೆ ಇದರರ್ಥ ಪ್ಲೇಆಫ್‌ ಸುತ್ತಿಗೆ ಕೇವಲ 4 ತಂಡಗಳು ಮುನ್ನಡೆಯಲಿದ್ದು, ಉಳಿದ 6 ತಂಡಗಳು ಲೀಗ್‌ ಹಂತದಲ್ಲೇ ತಮ್ಮ ಪ್ರಯಾಣವನ್ನು ಮುಗಿಸಲಿವೆ. ಅಂತಹ ತಂಡಗಳಲ್ಲಿ ಚೆನ್ನೈ ಸೂಪರ್​ಕಿಂಗ್ಸ್ ತಂಡ ಕೂಡ ಒಂದಾಗಿದೆ. ಆಡಿರುವ 13 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳನ್ನು ಗೆದ್ದಿರುವ ಸಿಎಸ್​ಕೆ ಪ್ಲೇಆಫ್‌ ರೇಸ್​ನಿಂದ ಹೊರಬಿದ್ದಿದೆ. ಅಭಿಮಾನಿಗಳಿಗೆ ಸಿಎಸ್​ಕೆ ಪ್ಲೇಆಫ್‌ ರೇಸ್​ನಿಂದ ಹೊರಬಿದ್ದಿರುವ ಆಘಾತದ ಜೊತೆಗೆ ತಂಡದ ಮಾಜಿ ನಾಯಕ ಎಂಎಸ್…

Read More

ಕಿಡ್ನಿ ವೈಫಲ್ಯಕ್ಕೆ ಟ್ರಾನ್ಸ್‌ಪ್ಲಾಂಟ್ ಯಾವಾಗ ಅಗತ್ಯ ಎಂಬುದನ್ನು ಡಾ. ರವಿಶಂಕರ್ ಅವರಿಂದ ತಿಳಿದುಕೊಳ್ಳಿ – Kannada News | End Stage Renal Disease Treatment: Signs You May Need A Kidney Transplant

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಅನೇಕರಿಗೆ ಡಯಾಲಿಸಿಸ್ ಅನಿವಾರ್ಯವಾಗುತ್ತದೆ. ಇದು ಹಾನಿಗೊಳಗಾದ ಕಿಡ್ನಿ (Kidney) ಮಾಡಲಾಗದ ಕೆಲಸವನ್ನು ಮಾಡುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಮತ್ತು ದ್ರವಗಳ ಸಮತೋಲನ, ಹಾಗೂ ಆರೋಗ್ಯವನ್ನು ಕಾಪಾಡಲು ಇದು ಸಹಕಾರಿ. ಆದರೆ, ಡಯಾಲಿಸಿಸ್ ಕೇವಲ ಚಿಕಿತ್ಸೆಯಲ್ಲ, ಇದು ವ್ಯಕ್ತಿಯ ವೃತ್ತಿ, ಸಂಬಂಧಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನೇ ಬದಲಾಯಿಸುತ್ತದೆ. ವೈದ್ಯರ ಪ್ರಕಾರ, ಡಯಾಲಿಸಿಸ್ ಅಂತಿಮ ಹಂತ ಎಂದು ಪರಿಗಣಿಸುವುದು ಸರಿಯಲ್ಲ, ಬದಲಿಗೆ ರೋಗಿಗಳಿಗೆ ಹೊಸ ಜೀವನದ ದಾರಿ ಎಂದು ಪರಿಗಣಿಸಬೇಕು. ಆದರೆ ಹಲವು…

Read More

ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಮುಳುಗಿದ ರೈಲ್ವೇ ಅಂಡರ್​​ ಪಾಸ್​​, ಹೊಳೆಯಂತಾದ ರಸ್ತೆಗಳು

ಚಿಕ್ಕಮಗಳೂರು, ಮೇ 20: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಹಲವೆಡೆ ಅವಾಂತರಗಳು ನಡೆದಿವೆ.  ಕಡೂರು, ಬೀರೂರು ಭಾಗದಲ್ಲಿ ಭಾರಿ ಮಳೆಗೆ ರಸ್ತೆಗಳು ಹಾಗೂ ರೈಲ್ವೆ ಅಂಡರ್​ಪಾಸ್ ಜಲಾವೃತವಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಕಡೂರು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ರಸ್ತೆ ಸಂಪೂರ್ಣ ಮುಳುಗಿದ್ದರೆ, ಬಸವೇಶ್ವರ ಸರ್ಕಲ್ ಕೆರೆಯಂತಾಗಿದೆ. ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 173ರ ರೈಲ್ವೆ ಅಂಡರ್​ಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

WTC Points Table: ಪಂದ್ಯವನ್ನಾಡದೆ 6ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ – Kannada News | WTC Points Table Shake up: Bangladesh’s Historic Win Pushes India to 6th Rank, Facing Challenge

ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ (BAN vs PAK) 2-0 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಅಂತ್ಯದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ (World Test Championship) ಪಾಯಿಂಟ್ ಪಟ್ಟಿಯಲ್ಲೂ ಸಾಕಷ್ಟು ಎರಿಳಿತಗಳಾಗಿವೆ. ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಸೋಲುಗಳಿಂದ ಕಂಗೆಟ್ಟಿರುವ ಟೀಂ ಇಂಡಿಯಾದ ಸ್ಥಾನ ಹದೆಗೆಟ್ಟಿದೆ. ಇದೀಗ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶ ಟೆಸ್ಟ್ ಸರಣಿ ಗೆದ್ದಿರುವುದು ಟೀಂ ಇಂಡಿಯಾ ಸ್ಥಾನಕ್ಕೆ ಕುತ್ತು ತಂದಿದೆ. ಬಾಂಗ್ಲಾದೇಶದ ಗೆಲುವಿನಿಂದ ಒಂದು ಸ್ಥಾನ ಕುಸಿತ ಕಂಡಿರುವ ಟೀಂ ಇಂಡಿಯಾ (Team India)…

Read More

ರಾಜಧನ ವಂಚಿಸಿದ ಕ್ವಾರಿಗಳಿಗೆ ಕೋಟ್ಯಂತರ ರೂ ದಂಡ: ರಾಜಕೀಯ ಪ್ರಭಾವಿಗಳಿಗೂ ಶಾಕ್! – Kannada News | Quarries That Defrauded State Revenue Face Crores in Fines; Political Leaders Left Shocked

ಕೊಪ್ಪಳ, ಮೇ 20: ಸರ್ಕಾರದ ಪರವಾನಿಗೆ ಪಡೆದು ರಾಜಧನ ಪಾವತಿಸದೆ ಕಲ್ಲು ಗಣಿಗಾರಿಕೆ (Stone mining) ನಡೆಸುತ್ತಿದ್ದವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ. ನಿಯಮ ಉಲ್ಲಂಘಿಸಿದ ಗಣಿ ಮಾಲೀಕರಿಗೆ ಭಾರೀ ದಂಡ (fine) ವಿಧಿಸುವ ಮೂಲಕ ಸರ್ಕಾರ ತನ್ನ ಖಜಾನೆ ತುಂಬಿಸಲು ಸಜ್ಜಾಗಿದೆ. ರಾಜ್ಯಾದ್ಯಂತ ಜಾರಿಯಾಗಬೇಕಿದ್ದ ಈ ಆದೇಶ ಸದ್ಯಕ್ಕೆ ಕೊಪ್ಪಳದಲ್ಲಿ ಮಾತ್ರ ಜಾರಿಯಾಗಿದ್ದು, ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇನ್ನು ಇದರಲ್ಲಿ ಪ್ರಭಾವಿ ರಾಜಕಾರಣಿಗಳು ಇರುವುದು ಸದ್ಯ ಸಂಚಲನ ಮೂಡಿಸಿದೆ….

Read More

ನೀಟ್ ಮರುಪರೀಕ್ಷೆ: ಭದ್ರತೆ, ಗುಪ್ತಚರ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳೊಂದಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಸಭೆ – Kannada News | Neet UG re exam: Dharmendra Pradhan chairs high level meeting with Security and Intelligence agencies

ನವದೆಹಲಿ, ಮೇ 20: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಮುಂಬರುವ ನೀಟ್-ಯುಜಿ (NEET-UG) ಮರು-ಪರೀಕ್ಷೆಯ (Re-examination) ಹಿನ್ನೆಲೆಯಲ್ಲಿ ಕೇಂದ್ರ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ಪರೀಕ್ಷೆಯನ್ನು ಸುರಕ್ಷಿತ, ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಸಲು ಕಟ್ಟುನಿಟ್ಟಿನ ನಿಗಾ ಮತ್ತು ದೋಷರಹಿತ ಭದ್ರತಾ ವ್ಯವಸ್ಥೆಗಳನ್ನು ಮಾಡುವಂತೆ ಅವರು ಒತ್ತಿಹೇಳಿದ್ದಾರೆ. ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಮಹಾನಿರ್ದೇಶಕರು ಸಹ ಈ ಸಭೆಯಲ್ಲಿ…

Read More

KKR vs MI Live Updates, IPL 2026: ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ – Kannada News | IPL 2026 Live Updates, KKR vs MI Live Match Scorecard Kolkata Knight Riders vs Mumbai Indians online at Eden Gardens Kolkata in Kannada

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್‌ನ 19 ನೇ ಸೀಸನ್‌ನ 65 ನೇ ಪಂದ್ಯದಲ್ಲಿ ಪರಸ್ಪರ ಎದುರಾಗುತ್ತಿವೆ. 19 ನೇ ಸೀಸನ್‌ನಲ್ಲಿ ಕೋಲ್ಕತ್ತಾ ಮತ್ತು ಮುಂಬೈ ನಡುವಿನ 13 ನೇ ಪಂದ್ಯ ಇದಾಗಿದೆ. ಮುಂಬೈ ತಂಡವು ಟೂರ್ನಿಯಿಂದ ಹೊರಗುಳಿದಿದೆ. ಇತ್ತ ಕೆಕೆಆರ್ ಈ ಪಂದ್ಯವನ್ನು ಗೆದ್ದು, ಪ್ಲೇಆಫ್‌ನಲ್ಲಿ ತನ್ನ ಭರವಸೆಯನ್ನು ಜೀವಂತವಾಗಿಡಲು ಪ್ರಯತ್ನಿಸಲಿದೆ. Source link

Read More

ಹುಟ್ಟುಹಬ್ಬದ ದಿನ ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ ಜೂ ಎನ್​​ಟಿಆರ್ – Kannada News | Jr NTR praised director Prashanth Neel on his Birthday

ಇಂದು (ಮೇ 20) ಜೂ ಎನ್​​ಟಿಆರ್ (Jr NTR) ಹುಟ್ಟುಹಬ್ಬ. ತಮ್ಮ 43ನೇ ಹುಟ್ಟುಹಬ್ಬವನ್ನು ಜೂ ಎನ್​​ಟಿಆರ್ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಜೂ ಎನ್​​ಟಿಆರ್, ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ಹೇಳಿದ್ದಾರೆ. ‘ಕೆಜಿಎಫ್’ ಅಂಥಹಾ ಬೃಹತ್ ಸಿನಿಮಾಗಳನ್ನು ನೀಡಿರುವ ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಈಗ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ನಿರ್ದೇಶಿಸುತ್ತಿದ್ದು, ಆ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿ ಭಾರಿ ವೈರಲ್ ಆಗಿದೆ….

Read More

ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ – Kannada News | Basangouda Patil Yatnal Drops Explosive Remarks on Harihar Panchamasali Peeth Dispute

ಹುಬ್ಬಳ್ಳಿ, ಮೇ 20: ಹರಿಹರ ಪೀಠದ ವಿವಾದ ಬಗೆಹರಿಸುವ ಕೆಲಸ ಮಾಡಿದ್ದೇವೆ. ಟ್ರಸ್ಟ್ ಲೆಕ್ಕಪತ್ರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಸಮಾಜಕ್ಕೆ ಧಕ್ಕೆ ಬರುವ ಘಟನೆಗಳು ನಡೆದಿವೆ, ಅವುಗಳನ್ನು ಎರಡು ಕಡೆಯವರನ್ನು ಸೇರಿಸಿ ನಿವಾರಣೆ ಮಾಡುವ ಕೆಲಸ ಮಾಡಿದ್ದೇವೆ. ಇಂದು ಶೇಕಡಾ 90ರಷ್ಟು ಸಮಸ್ಯೆ ಬಗೆಹರಿದಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದ್ದಾರೆ. ಪಂಚಮಸಾಲಿ ಪೀಠಗಳ ವಿವಾದಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಸಮಾಜದ ಗೊಂದಲ ನಿವಾರಣೆಗಾಗಿ ಸೂಕ್ತ…

Read More

ಹೈದರಾಬಾದ್​​ನಲ್ಲಿ ಇರುವಂತೆ ಬೆಂಗಳೂರು ರಸ್ತೆಗಳು ಯಾಕಿಲ್ಲ? ಕೆನಡಾ ವ್ಯಕ್ತಿಯ ವಿಡಿಯೋ ವೈರಲ್ – Kannada News | Canadian Man’s Hyderabad vs Bangalore Road Video Sparks Online Debate

ವೈರಲ್​​ ಆದ ಕೆನಡಾ ವ್ಯಕ್ತಿಯ ಹೈದರಾಬಾದ್ vs ಬೆಂಗಳೂರು ರಸ್ತೆ ವಿಡಿಯೋ ಬೆಂಗಳೂರು, ಮೇ 20: ರಾಜಧಾನಿ ಬೆಂಗಳೂರಿನ (Bengaluru) ರಸ್ತೆಗಳು ದುರಾವಸ್ಥೆ ವಿಚಾರಕ್ಕೆ ಮೇಲಿಂದ ಮೇಲೆ ಸುದ್ದಿಯಾಗುತ್ತಲೇ ಇರುತ್ತವೆ. ಈ ನಡುವೆ ಕೆನಡಾದ ವ್ಯಕ್ತಿಯೊಬ್ಬರು ಹೈದರಾಬಾದ್ ನಗರದಲ್ಲಿನ ರಸ್ತೆಗಳನ್ನು ಹೊಗಳಿ, ಅದನ್ನು ಬೆಂಗಳೂರಿನೊಂದಿಗೆ ಹೋಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೈದರಾಬಾದ್‌ನ ರಸ್ತೆಗಳು ಎಷ್ಟು ಸುಗಮ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿವೆ. ಆದರೆ ಬೆಂಗಳೂರಿನ ರೋಡ್​​ಗಳು ಯಾಕೆ ಹೀಗಿಲ್ಲ ಎಂದು ಪ್ರಶ್ನಿಸಿ ಕ್ಯಾಲೆಬ್ ಫ್ರೀಸೆನ್…

Read More