ಜತೆಗೆ ಕೆಲಸ ಮಾಡುವವರು ನಿಮ್ಮ ಸಾಮರ್ಥ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಲಿದ್ದಾರೆ. ನಿಮ್ಮಲ್ಲಿ ಯಾರು ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡುವ ಸಲುವಾಗಿ ಪ್ರಯತ್ನವನ್ನು ಮಾಡುತ್ತಿದ್ದೀರಿ ಅಂಥವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗುವಾಗ ಮನೆ ದೇವರನ್ನು ಮನಸ್ಸಲ್ಲಿ ಸ್ಮರಿಸಿಕೊಳ್ಳಿ.
ಬಜೆಟ್ ನಲ್ಲಿಯೇ ಕೆಲಸ- ಕಾರ್ಯಗಳನ್ನು ಮುಗಿಸಿಕೊಳ್ಳಬೇಕು ಎಂಬ ಲೆಕ್ಕಾಚಾರ ನಿಮ್ಮಲ್ಲಿ ಇರಲಿದೆ. ಕುಟುಂಬ ಸದಸ್ಯರ ಅಗತ್ಯಗಳಿಗೆ ಕೆಲಬು ವಸ್ತುಗಳನ್ನು ಕೊಳ್ಳಬೇಕು ಎಂಬ ತೀರ್ಮಾನ ಮಾಡಲಿದ್ದೀರಿ. ಹೊಸ ವಾಹನ ಖರೀದಿಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಕೆಲವರು ಅಚ್ಚರಿಯ ರೀತಿಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಯೇ ಮಾಡಿಬಿಡುವ ಅವಕಾಶಗಳು ಸಹ ಹೆಚ್ಚಿವೆ.
ಈ ದಿನ ನಿಮ್ಮ ಸಾಮಾಜಿಕ ಸ್ಥಾನ- ಮಾನಗಳು ವೃದ್ಧಿಯಾಗುವ ಸಾಧ್ಯತೆಗಳು ಹೆಚ್ಚಿವೆ. ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಮನೆಯಿಂದ ದೂರ ಇದ್ದು, ವ್ಯಾಸಂಗ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು. ಆದರೆ ಇದರಿಂದ ನಿಮಗೆ ಅನುಕೂಲವೇ ಆಗಲಿದೆ. ಲ್ಯಾಪ್ ಟಾಪ್, ಟ್ಯಾಬ್ಲೆಟ್ ಇಂಥವನ್ನು ಖರೀದಿ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ.
ತುಮಕೂರು, (ಮಾರ್ಚ್ 22): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು (ಮಾರ್ಚ್ 22) ಉಸ್ತುವಾರಿ ಜಿಲ್ಲೆ ಕೊಪ್ಪಳದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಶಿರಾ ದಾಟಿ ಕೋರ ಬಳಿ ಬರುವಾಗ ಎದೆನೋವು ಶುರುವಾಗಿದೆ. ಹೀಗಾಗಿ ಕೂಡಲೇ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಸಚಿವ ಶಿವರಾಜ್ ತಂಗಡಗಿ ಅವರನ್ನು ದಾಖಲಿಸಲಾಗಿದೆ.
ಕನಕಗಿರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮುಗಿಸಿ ಇಂದು (ಮಾರ್ಚ್ 22) ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಇಕೋ ಟೆಸ್ಟ್ ಸೇರಿದಂತೆ ಹೃದಯ ಸಂಬಂಧಿತ ತಪಾಸಣೆ ಮಾಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ತುಮಕೂರು ಎಸ್ಪಿ ಅಶೋಕ್, ಡಿವೈಎಸ್ಪಿ ಚಂದ್ರಶೇಖರ್ ದೌಡಾಯಿಸಿದ್ದು, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದ ವೈದ್ಯರು ತಿಳಿಸಿದ್ದಾರೆ.
ಶಿವರಾಜ್ ತಂಗಡಗಿ ಹೊಸಪೇಟೆಯಿಂದ ಬೆಂಗಳೂರಿಗೆ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ತುಮಕೂರಿನ ಬಳಿ ಮಾರ್ಗ ಮಧ್ಯೆ ಅವರು ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ತಕ್ಷಣವೇ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಯ್ತು. ಈ ವೇಳೆ ತಪಾಸಣೆ ಮಾಡಿದ ವೈದ್ಯರು, ಇದು ಗ್ಯಾಸ್ಟ್ರಿಕ್ ಎಂದು ಹೇಳಿದ್ದಾರೆ. ಹೀಗಾಗಿ ಎಲ್ಲಾ ಪರೀಕ್ಷೆ ಮುಗಿಸಿಕೊಂಡು ಬೆಂಗಳೂರಿನತ್ತ ಹೊರಟರು.
‘ಧುರಂಧರ್ 2’ (Dhurandhar 2 ಸಿನಿಮಾ ಬಿಡುಗಡೆ ಆದ ಮೂರೇ ದಿನಕ್ಕೆ 300 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ ಸಾಗುತ್ತಿದೆ. ಇದನ್ನು ಮೊದಲೇ ಊಹಿಸಿದ್ದ ಕೆಲ ಸಿನಿಮಾಗಳು ‘ಧುರಂಧರ್ 2’ ಸಿನಿಮಾ ಜೊತೆಗಿನ ಸ್ಪರ್ಧೆಯನ್ನು ತಪ್ಪಿಸಿಕೊಂಡವು. ಆದರೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರತಂಡ ‘ಧುರಂಧರ್ 2’ ಸಿನಿಮಾವನ್ನು ಸರಿಯಾಗಿ ಅಂದಾಜಿಸದೆ ಅದರ ಎದುರು ಬಿಡುಗಡೆ ಮಾಡಿತು. ಆದರೆ ಈಗ ಬಾಕ್ಸ್ ಆಫೀಸ್ನಲ್ಲಿ ಏದುಸಿರು ಬಿಡುತ್ತಿದೆ. ಆದರೆ ಸಂಪೂರ್ಣ ಸೋಲೊಪ್ಪಿಕೊಂಡಿಲ್ಲ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ನಿರ್ದೇಶಕ ಹರೀಶ್ ಶಂಕರ್ ಕಾಂಬಿನೇಷನ್‌ನ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 26ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ರಿಲೀಸ್ ಪೋಸ್ಟ್ ಪೋನ್ ಆದ ಕಾರಣ ಆ ಸ್ಥಾನಕ್ಕೆ ಮುಂಬಡ್ತಿ ಪಡೆದುಕೊಂಡು ‘ಧುರಂಧರ್ 2’ ಸಿನಿಮಾದ ಎದುರು ಮಾರ್ಚ್ 19ರಂದೇ ಬಿಡುಗಡೆ ಆಯ್ತು. ಆದರೆ ಇದರಿಂದ ಮೊದಲ ದಿನದಿಂದಲೂ ಸಿನಿಮಾಕ್ಕೆ ನಷ್ಟ ಆಗುತ್ತಲೇ ಇದೆ. ‘ಧುರಂಧರ್ 2’ ಸಿನಿಮಾದಿಂದಾಗಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಪ್ರೀಮಿಯರ್ ಶೋಗಳು ಸಿಗಲಿಲ್ಲ. ಇದರಿಂದ ಭಾರಿ ನಷ್ಟವಾಯ್ತು. ಬಿಡುಗಡೆಯ ಬಳಿಕೆ ಬಾಕ್ಸ್ ಆಫೀಸ್ನಲ್ಲೂ ಸಹ ಹಿನ್ನಡೆ ಉಂಟಾಗಿದೆ.
ಈ ಭಾನುವಾರಕ್ಕೆ ಸಿನಿಮಾ ಬಿಡುಗಡೆ ಆಗಿ ನಾಲ್ಕು ದಿನಗಳಾಗಿದೆ. ಭಾನುವಾರ ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಗಳಿಸಿದ್ದು 6.59 ಕೋಟಿ ರೂಪಾಯಿ ಮಾತ್ರ. ಇದರೊಂದಿಗೆ ನಾಲ್ಕು ದಿನಗಳ ಒಟ್ಟು ಭಾರತದ ನೆಟ್ ಕಲೆಕ್ಷನ್ 59.39 ಕೋಟಿ ರೂಪಾಯಿಗೆ ತಲುಪಿದೆ. ಪವನ್ ಸಿನಿಮಾಕ್ಕೆ ಇದು ದೊಡ್ಡ ಮೊತ್ತವಲ್ಲ. ವಾರದ ರಜೆ ಇದ್ದರೂ ಚಿತ್ರದ ಗಳಿಕೆಯಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿಲ್ಲದಿರುವುದು ‘ಧುರಂಧರ್ 2’ ಎಫೆಕ್ಟ್ ಅನ್ನು ತೋರಿಸುತ್ತಿದೆ.
ಪವನ್ ಕಲ್ಯಾಣ್ ಅವರ ಕಳೆದ ವರ್ಷದ ಹಿಟ್ ಚಿತ್ರಗಳಾದ ‘OG’ ಮೊದಲ ದಿನವೇ 60 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿತ್ತು. ಅದಕ್ಕೂ ಮುಂಚೆ ಬಿಡುಗಡೆ ಆಗಿದ್ದ ಬಹಳ ಸಾಧಾರಣ ಸಿನಿಮಾ ಆಗಿದ್ದ ‘ಹರಿ ಹರ ವೀರ ಮಲ್ಲು’ ಕಲೆಕ್ಷನ್ ಸಹ ಇದಕ್ಕಿಂತ ಉತ್ತಮವಾಗಿತ್ತು. ಆ ಎರಡು ಸಿನಿಮಾಗಳಿಗೆ ಹೋಲಿಸಿದರೆ ‘ಉಸ್ತಾದ್ ಭಗತ್ ಸಿಂಗ್’ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ.
ಮೂರು ದಿನಗಳ ಅಂತ್ಯಕ್ಕೆ ಚಿತ್ರವು ವಿಶ್ವ ಬಾಕ್ಸ್ ಆಫೀಸ್ನಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ 71.67 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದರಲ್ಲಿ ವಿದೇಶಿ ಮಾರುಕಟ್ಟೆಯಿಂದ ಸುಮಾರು 9.25 ಕೋಟಿ ರೂ. ಬಂದಿದೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ತೆಲುಗು ರಾಜ್ಯಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶೇಷವೆಂದರೆ, ಹೈದರಾಬಾದ್‌ನಂತಹ ನಗರ ಪ್ರದೇಶಗಳಲ್ಲಿ ‘ಉಸ್ತಾದ್ ಭಗತ್ ಸಿಂಗ್’ಗಿಂತ ‘ಧುರಂಧರ್ 2’ ಚಿತ್ರಕ್ಕೇ ಹೆಚ್ಚಿನ ಜನರು ಆಕರ್ಷಿತರಾಗುತ್ತಿದ್ದಾರೆ.
‘ಉಸ್ತಾದ್ ಭಗತ ಸಿಂಗ್’ ಸಿನಿಮಾದ ಒಟ್ಟು ಬಜೆಟ್ ಸುಮಾರು 150 ಕೋಟಿ ರೂ. ಎನ್ನಲಾಗಿದ್ದು, ಚಿತ್ರವು ಲಾಭದಾಯಕ ಎನಿಸಿಕೊಳ್ಳಲು ಕನಿಷ್ಠ 200 ಕೋಟಿ ರೂ. ಕಲೆಕ್ಷನ್ ಮಾಡಬೇಕಿದೆ. ಪ್ರಸ್ತುತ ಇರುವ ಮಿಶ್ರ ಪ್ರತಿಕ್ರಿಯೆ ಮತ್ತು ‘ಧುರಂಧರ್ 2’ ಹವಾ ನೋಡಿದರೆ, ಈ ಗುರಿಯನ್ನು ಮುಟ್ಟುವುದು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿದೆ. ನಿರ್ದೇಶಕ ಹರೀಶ್ ಶಂಕರ್ ಅವರು ಈ ಹಿಂದೆ ‘ಗಬ್ಬರ್ ಸಿಂಗ್’ ಮೂಲಕ ನೀಡಿದ್ದ ಮ್ಯಾಜಿಕ್ ಈ ಬಾರಿ ಮರುಕಳಿಸಿಲ್ಲ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಸತತ 18 ವರ್ಷಗಳ ಕಾಯುವಿಕೆಯ ಬಳಿಕ 2025 ರ ಐಪಿಎಲ್‌ನಲ್ಲಿ (IPL 2025) ಫೈನಲ್ ಪಂದ್ಯವನ್ನು ಗೆದ್ದು ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಳೆದ ಆವೃತ್ತಿಯ ಯಶಸ್ಸನ್ನು ಪುನರಾವರ್ತಿಸುವ ಇರಾದೆಯಲ್ಲಿದೆ. ರಜತ್ ಪಾಟಿದಾರ್ ನಾಯಕತ್ವದಲ್ಲಿ ಹೆಚ್ಚು ಸಮತೋಲನದಿಂದ ಕೂಡಿರುವ ಆರ್‌ಸಿಬಿ ಈ ಬಾರಿಯೂ ಕಪ್ ಗೆಲ್ಲುವ ಫೆವರೇಟ್ ತಂಡ ಎನಿಸಿಕೊಂಡಿದೆ. ಅದರಲ್ಲೂ ಕಳೆದ ಬಾರಿಯಂತೆ ಈ ಬಾರಿಯೂ ಆರ್‌ಸಿಬಿ ತಂಡ ತವರಿನ ಹೊರಗೆ ತನ್ನ ವಿಕ್ರಮವನ್ನು ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಆರ್‌ಸಿಬಿ ಹೆಸರಿನಲ್ಲಿದೆ ಅಪರೂಪದ ದಾಖಲೆ
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಮಾಡಿದ ಕೆಲಸವನ್ನು ಕಳೆದ 18 ಆವೃತ್ತಿಗಳಲ್ಲಿ ಬೇರೆ ಯಾವ ತಂಡಕ್ಕೂ ಮಾಡಲು ಸಾಧ್ಯವಾಗಿಲ್ಲ. ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ನಂತಹ ತಂಡಗಳಿಗೂ ಸಹ ಈ ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾಗಿಲ್ಲ. ವಾಸ್ತವವಾಗಿ ಕಳೆದ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿ ತವರಿನ ಹೊರಗೆ ಆಡಿದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದ ಸಾಧನೆಯನ್ನು ಆರ್‌ಸಿಬಿ ಮಾಡಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡವು ಸಾಧಿಸದ ವಿಶೇಷ ದಾಖಲೆಯಾಗಿದೆ.
ಸತತ 7 ಗೆಲುವು
ಕೆಕೆಆರ್ ವಿರುದ್ಧದ ಮೊದಲ ತವರಿನ ಹೊರಗಿನ ಪಂದ್ಯವನ್ನು 7 ವಿಕೆಟ್ಗಳಿಂದ ಗೆದ್ದಿದ್ದ ಆರ್‌ಸಿಬಿ, ಆ ನಂತರ ಸಿಎಸ್ಕೆ ತಂಡವನ್ನು 50 ರನ್ಗಳಿಂದ ಸೋಲಿಸಿತ್ತು. ತವರಿನ ಹೊರಗಿನ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್ಗಳಿಂದ ಗೆದ್ದಿದ್ದ ಆರ್‌ಸಿಬಿ, 4 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿತ್ತು. ಆ ನಂತರ ಐದನೇ ಪಂದ್ಯದಲ್ಲಿ 7 ವಿಕೆಟ್ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದ್ದ ಆರ್‌ಸಿಬಿ, 6ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿತ್ತು. ಅಂತಿಮವಾಗಿ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿತ್ತು.
ಈ ಸತತ 7 ಗೆಲುವುಗಳು ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಮತ್ತು ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲು ಸಹಾಯ ಮಾಡಿತು. ಒಟ್ಟಾರೆಯಾಗಿ, ಆರ್‌ಸಿಬಿ ಐಪಿಎಲ್ 2025 ರಲ್ಲಿ ತಮ್ಮ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರಗೆ ಒಂಬತ್ತು ಪಂದ್ಯಗಳನ್ನು ಗೆದ್ದಿತು, ಇದರಲ್ಲಿ ಏಳು ಲೀಗ್ ಪಂದ್ಯಗಳು, ಒಂದು ಅರ್ಹತಾ ಸುತ್ತಿನ ಪಂದ್ಯ ಮತ್ತು ಫೈನಲ್ ಕೂಡ ಸೇರಿದೆ. ಇದು ಐಪಿಎಲ್ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ. ಆರ್‌ಸಿಬಿ ಅಥವಾ ಯಾವುದೇ ಇತರ ತಂಡವು ಈ ಆವೃತ್ತಿಯಲ್ಲಿ ಈ ದಾಖಲೆಯನ್ನು ಪುನರಾವರ್ತಿಸಬಹುದೇ ಎಂದು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, (ಮಾರ್ಚ್ 22): ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧ ಸದೃಶ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಾರ್ಚ್ 22) ಭದ್ರತಾ ಸಂಪುಟ ಸಮಿತಿಯ ಮಹತ್ವದ ಸಭೆ ನಡೆಸಿದರು. ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದು, ಸಚಿವರು, ಕಾರ್ಯದರ್ಶಿಗಳ ಸಮಿತಿ ರಚನೆಗೆ ಮೋದಿ ಸೂಚನೆ ನೀಡಿದ್ದಾರೆ. ಅಲ್ಲದೇ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೇ ಮುಂಗಾರು ಹಂಗಾಮಿನ ರಸಗೊಬ್ಬರದ ಲಭ್ಯತೆ ಬಗ್ಗೆ ಪ್ರಧಾನಿ ಚರ್ಚೆ ಮಾಡಿದ್ದು, ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು. ತೈಲ, ಇಂಧನ ಹಾಗೂ ವಿದ್ಯುತ್ ಸುರಕ್ಷತೆಯ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚಿಸಿದ್ದಾರೆ.
ದೇಶದಲ್ಲಿ ವಿದ್ಯುತ್ ಅಭಾವ ಉಂಟಾಗದಂತೆ ನೋಡಿಕೊಳ್ಳಲು ಎಲ್ಲ ವಿದ್ಯುತ್ ಸ್ಥಾವರಗಳಲ್ಲಿ ಪೂರೈಕೆಗೆ ಅಗತ್ಯವಿರುವಷ್ಟು ಕಲ್ಲಿದ್ದಲು ದಾಸ್ತಾನು ಇರುವುದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸರ್ಕಾರ ಸರ್ವ ಸನ್ನದ್ಧವಾಗಿದೆ. ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಸೇರಿದಂತೆ ವಿವಿಧ ಕೈಗಾರಿಕಾ ವಲಯಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಆಮದನ್ನು ಕೇವಲ ಒಂದು ಪ್ರದೇಶಕ್ಕೆ ಸೀಮಿತಗೊಳಿಸದೆ, ಪರ್ಯಾಯ ದೇಶಗಳಿಂದ ಆಮದು ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಹಾಗೆಯೇ ಭಾರತೀಯ ಉತ್ಪನ್ನಗಳ ರಫ್ತಿಗೆ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳಲು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.
ಯುದ್ಧದ ನೆಪದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಅಥವಾ ಕಾಳಸಂತೆ ನಡೆಯದಂತೆ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಲು ಪ್ರಧಾನಿ ತಿಳಿಸಿದ್ದು, ಅಕ್ರಮ ದಾಸ್ತಾನು ಮಾಡಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ‘ಹೋಲ್ ಆಫ್ ಗವರ್ನಮೆಂಟ್’ ಮಾದರಿಯಲ್ಲಿ ಸಚಿವರು ಮತ್ತು ಕಾರ್ಯದರ್ಶಿಗಳ ವಿಶೇಷ ಸಮಿತಿಯನ್ನು ರಚಿಸಲು ಪ್ರಧಾನಿ ಆದೇಶಿಸಿದ್ದಾರೆ. ಈ ಸಮಿತಿ ಎಲ್ಲ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿದೆ.
ಹುಬ್ಬಳ್ಳಿ, ಮಾರ್ಚ್ 22: ಪಾಲಕರೇ ಅಪ್ರಾಪ್ತ ವಯಸ್ಸಿನ ನಿಮ್ಮ ಮಕ್ಕಳಿಗೆ ನೀವು ಓಡಿಸಲು ಕಾರು, ಬೈಕ್, ಸ್ಕೂಟಿ ನೀಡ್ತಿದ್ದರೆ ಎಚ್ಚರ. ಏಕೆಂದರೆ ಅಪಘಾತಗಳಾದರೆ ನಿಮ್ಮ ಮಕ್ಕಳು ಮಾತ್ರವಲ್ಲ, ನೀವು ಜೈಲು ಪಾಲಾಗುತ್ತೀರಾ ಹುಷಾರ್. ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುವಾಗ ನಡೆದ ಅಪಘಾತದಲ್ಲಿ (accident) ಬಾಲಕನ ಸಾವಿಗೆ (death) ಸಂಬಂಧಿಸಿದಂತೆ ಅಪಘಾತ ಮಾಡಿದ ಬಾಲಕ ಮಾತ್ರವಲ್ಲ, ಆತನ ತಂದೆಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ರೀಲ್ಸ್ ತಂದ ಆಪತ್ತು
ಇದು ಸೋಶಿಯಲ್ ಮೀಡಿಯಾ ಜಮಾನಾ. ನಾಲ್ಕು ವರ್ಷದ ಮಕ್ಕಳಿಂದ ವೃದ್ದರವರಗೆ ಎಲ್ಲರ ಕೈಯಲ್ಲಿ ಮೊಬೈಲ್ಗಳಿವೆ. ರೀಲ್ಸ್ ನೋಡೋದು, ರೀಲ್ಸ್ ಮಾಡೋದು ಇಂದಿನ ಗೀಳಾಗಿದೆ. ಅದರಲ್ಲೂ ಬಾಲಕರು, ಹದಿಹರೆಯದ ಯುವಕರು ವಾಹನಗಳನ್ನು ಕ್ರ್ಯಾಶ್ ಮಾಡೋದು ಸೇರಿದಂತೆ ಅನೇಕ ಸ್ಟಂಟ್ಗಳ ವಿಡಿಯೋ ನೋಡುವುದು, ಅದೇ ರೀತಿ ಮಾಡೋದನ್ನು ಹೆಚ್ಚಾಗಿ ಮಾಡ್ತಿದ್ದಾರೆ. ಇದೇ ರೀತಿ ವಾಹನಗಳ ಕ್ರ್ಯಾಶ್ ಮಾಡೋ ವಿಡಿಯೋ ಮಾಡಲು ಹೋದಾಗ ನಡೆಯಬಾರದ ಘಟನೆಯೊಂದು ಹುಬ್ಬಳ್ಳಿಯಲ್ಲಿ ಮಾರ್ಚ್ 19 ರಂದು ನಡೆದಿತ್ತು.
ನಡೆದಿದ್ದೇನು?
ರೀಲ್ಸ್ ಮಾಡಲು ಹೋದಾಗ ಆಡಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತವಾಗಿದ್ದು, ಬಾಲಕನೋರ್ವ ಮೃತಪಟ್ಟಿದ್ದ. ಹುಬ್ಬಳ್ಳಿ ನಗರದ ಲಕ್ಷ್ಮಿ ನಗರದ ನಮೀಷ್ ಸಂಗಳದ ಮೃತ ಬಾಲಕ. ಹುಬ್ಬಳ್ಳಿಯ ಬಿಜೆಪಿ ಮುಖಂಡ ವಿರೇಶ್ ಸಂಗಳದ ಪುತ್ರನಾಗಿದ್ದ ನಮೀಷ್, ಯುಗಾದಿ ಹಬ್ಬದ ದಿನ ಶೇಜವಾಡ್ಕರ್ ಪ್ಲಾಟ್ನಲ್ಲಿ ಸ್ನೇಹಿತರ ಜೊತೆ ರೀಲ್ಸ್ ಮಾಡಲು ಹೋಗಿದ್ದ. ನಮೀಷ್ ಇದ್ದ ಸ್ಕೂಟಿಗೆ 17ನೇ ವರ್ಷದ ಅಪ್ರಾಪ್ತ ಬಾಲಕ ಓಡಿಸುತ್ತಿದ್ದ ಆಡಿ ಕಾರು ಗುದ್ದಿದ ಪರಿಣಾಮ ನಮೀಷ್ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಇನ್ನು ನಮೀಷ್ ಸಂಗಳದ್ ಹಾಗೂ ಕಾರು ಓಡಿಸುತ್ತಿದ್ದ ಬಾಲಕ ಮತ್ತು ಇನ್ನಿಬ್ಬರು ಬಾಲಕರು ಸೇರಿ ಒಟ್ಟು ನಾಲ್ವರು ಬಾಲಕರು ಕ್ರ್ಯಾಶ್ ರೀಲ್ಸ್ ಮಾಡಲು ಹೋಗಿದ್ದರಂತೆ. ನಮೀಷ್ ಸಂಗಳದ ಸ್ಕೂಟಿ ಓಡಿಸಿಕೊಂಡು ಬರ್ತಿದ್ದರೆ ಎದುರಿನಿಂದ ಅಪ್ರಾಪ್ತ ಬಾಲಕ ಕಾರು ಓಡಿಸಿಕೊಂಡು ಬರ್ತಿದ್ದ. ಅವು ಎರಡು ಕ್ರ್ಯಾಶ್ ಆಗುವ ವಿಡಿಯೋವನ್ನು ಇನ್ನಿಬ್ಬರು ಬಾಲಕರು ಮಾಡಲು ಮುಂದಾಗಿದ್ದರಂತೆ. ಆದರೆ 17ನೇ ವರ್ಷದ ಅಪ್ರಾಪ್ತ ಬಾಲಕ ಓಡಿಸುತ್ತಿದ್ದ ಕಾರು ಹಾಗೂ ಸ್ಕೂಟಿ ತೀರಾವೇಗವಾಗಿದ್ದರಿಂದ ನಿಯಂತ್ರಣ ತಪ್ಪಿ ಸ್ಕೂಟಿ ಮತ್ತು ಕಾರ್ ನಡುವೆ ಅಪಘಾತವಾಗಿತ್ತು. ಹೀಗಾಗಿ ಸ್ಥಳದಲ್ಲೇ ಬಾಲಕ ಮೃತ ಪಟ್ಟಿದ್ದ.
ಬಾಲಕನ ತಂದೆ ಅರೆಸ್ಟ್
ಅಪಘಾತ ಮಾಡಿರುವ 17ನೇ ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಿ ಬಾಲಕರ ಬಾಲ ಮಂದಿರಕ್ಕೆ ಕಳುಹಿಸಿದರೆ, ಅಪ್ರಾಪ್ತ ಮಗನಿಗೆ ಕಾರು ನೀಡಿದ್ದ ಬಾಲಕನ ತಂದೆ ನಾಗರಾಜ್ ರಾಯ್ಕರ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೀಲ್ಸ್ ಹುಚ್ಚಾಟವಾಡಬಾರದು. ಹೆತ್ತವರು ಮಕ್ಕಳಿಗೆ ತಮ್ಮ ವಾಹನ ನೀಡಬಾರದು ಅಂತ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಜನರಲ್ಲಿ ಮನವಿ ಮಾಡಿದ್ದಾರೆ.
ಮಕ್ಕಳ ರೀಲ್ಸ್ ಹುಚ್ಚಾಟಕ್ಕೆ ಓರ್ವ ತಂದೆ ತನ್ನ ಮಗನನ್ನು ಕಳೆದುಕೊಂಡರೆ ಅಪಘಾತ ಮಾಡಿದ ಬಾಲಕ ಮತ್ತು ಆತನ ತಂದೆಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹೆತ್ತವರು ತಮ್ಮ ಮಕ್ಕಳ ಆಟೋಟೋಪಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಜೊತೆಗೆ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಿದರೆ ಹೆತ್ತವರು ಕಂಬಿ ಹಿಂದೆ ಹೋಗಬೇಕಾಗುತ್ತದೆ.
ರಣವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2: ದಿ ರಿವೇಂಜ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಆಗಿದೆ. ಎಲ್ಲೆಡೆ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಕೆಲವೆಡೆ ಸಿನಿಮಾದ ಪ್ರದರ್ಶನದ ವೇಳೆ ಕೆಲವೆಡೆ ಕಿರಿಕ್ ಸಹ ಆಗಿದೆ. ಕೆನಡಾದಲ್ಲಿ ಸಿನಿಮಾ ಪ್ರದರ್ಶನದ ವೇಳೆ ನಡೆದ ಗಲಾಟೆಯಲ್ಲಿ ಸಿನಿಮಾ ಪರದೆಯನ್ನೇ ಹರಿದ ಘಟನೆ ನಿನ್ನೆ ವರದಿ ಆಗಿತ್ತು. ಇದೀಗ ಹೈದರಾಬಾದ್ನಲ್ಲಿ ಸಹ ಸಿನಿಮಾ ಪ್ರದರ್ಶನದ ವೇಳೆ ಕಿರಿಕ್ ಆಗಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಹೈದರಾಬಾದ್‌ನ ಮಲ್ಟಿಪ್ಲೆಕ್ಸ್ ಒಂದರಲ್ಲಿ ‘ಧುರಂಧರ್ 2’ ಚಿತ್ರದ ಪ್ರದರ್ಶನ ನಡೆಯುತ್ತಿತ್ತು. ಆದರೆ ತಾಂತ್ರಿಕ ದೋಷವೋ ಅಥವಾ ವಿಭಿನ್ನ ಪ್ರಯೋಗವೋ ಏನೋ ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಂಭಾಷಣೆ ಕೇಳಲು ಆರಂಭಿಸಿದೆ. ಇದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದು ವಿಚಿತ್ರವೆಂದರೆ ಆ ನಿರ್ದಿಷ್ಟ ಶೋನ ಟಿಕೆಟ್ಗಳು ತೆಲುಗು ಮತ್ತು ಹಿಂದಿ ಎರಡೂ ಆವೃತ್ತಿಗೆ ಮಾರಾಟ ಆಗಿವೆ. ಕೆಲವರು ತೆಲುಗು ಆವೃತ್ತಿಯ ಟಿಕೆಟ್ ಖರೀದಿಸಿದ್ದರೆ ಇನ್ನು ಕೆಲವರು ಹಿಂದಿ ಆವೃತ್ತಿಯ ಟಿಕೆಟ್ ಖರೀದಿ ಮಾಡಿದ್ದಾರೆ.
ಸಿನಿಮಾ ಪ್ರದರ್ಶನದ ವೇಳೆ ಒಂದು ಗುಂಪು ಚಿತ್ರವನ್ನು ಪೂರ್ತಿ ಹಿಂದಿಯಲ್ಲೇ ನೋಡಬೇಕು ಎಂದು ಪಟ್ಟು ಹಿಡಿದರೆ, ಸ್ಥಳೀಯ ಪ್ರೇಕ್ಷಕರು ತೆಲುಗು ಆವೃತ್ತಿಯನ್ನೇ ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಭಾಷಾ ವಿವಾದ ಜೋರಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಲ್ಟಿಪ್ಲೆಕ್ಸ್ನ ಮಾಲೀಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರೇಕ್ಷಕರನ್ನು ಸಮಾಧಾನಪಡಿಸಿ ಚಿತ್ರದ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಬಳಿಕ ಬೇರೆ ಬೇರೆ ಶೋಗಳನ್ನು ಆಯೋಜನೆ ಮಾಡುವಂತೆ ಮಲ್ಟಿಪ್ಲೆಕ್ಸ್ನವರಿಗೆ ನಿರ್ದೇಶಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಸಿನಿಮಾದಲ್ಲಿರೋ ಆಕ್ಷನ್‌ಗಿಂತ ಥಿಯೇಟರ್ ಒಳಗಡೆ ಇರೋ ಆಕ್ಷನ್ ಚೆನ್ನಾಗಿದೆ” ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ‘ರಣವೀರ್ ಸಿಂಗ್ ಎನರ್ಜಿಯೇ ಹಾಗೆ, ಪ್ರೇಕ್ಷಕರಿಗೂ ಹತ್ತಿಕೊಂಡಿದೆ’ ಎಂದು ಕಾಲೆಳೆದಿದ್ದಾರೆ. ‘ಧುರಂಧರ್ 2’ ಸಿನಿಮಾ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಗೂಢಚಾರಿಯ ಕತೆಯನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ರಣ್ವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ.
ಐಪಿಎಲ್‌ನಲ್ಲಿ ಇದುವರೆಗೆ 18 ಆವೃತ್ತಿಗಳು ನಡೆದಿವೆ. ಈ 18 ಆವೃತ್ತಿಗಳಲ್ಲಿ ಪ್ರತಿ ತಂಡವೂ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಫೈನಲ್ನಲ್ಲಿ ಆಡಿದೆ. ಆದರೆ ಇದುವರೆಗೆ ಫೈನಲ್ ಪಂದ್ಯವನ್ನು ಆಡದೆ ಇರುವ ತಂಡವೊಂದಿದೆ. ಆ ತಂಡ ಯಾವುದೆಂದರೆ ಲಕ್ನೋ ಸೂಪರ್ ಜೈಂಟ್ಸ್. ಲೀಗ್ನ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಈ ತಂಡ ಪ್ಲೇ ಆಫ್ ಸುತ್ತಿನಲ್ಲಿ ಎಡವಿ ಫೈನಲ್ ರೇಸ್ನಿಂದ ಹೊರಬಿದ್ದಿದೆ.
2022 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮೊದಲ ಸೀಸನ್ನಿಂದಲೇ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ತಂಡದಲ್ಲಿ ಅಂತಹ ಸ್ಟಾರ್ ಆಟಗಾರರು ಕೂಡ ಇದ್ದಾರೆ. ಇದಕ್ಕೆ ಪೂರಕವಾಗಿ ಲೀಗ್ ಹಂತದಲ್ಲಿ ಈ ತಂಡದ ಪ್ರದರ್ಶನವೂ ಅದ್ಭುತವಾಗಿರುತ್ತದೆ. ಆದರೆ ಲೀಗ್ ಹಂತ ಮುಗಿದ ಬಳಿಕ ಈ ತಂಡದ ಪ್ರದರ್ಶನವೂ ಅಷ್ಟೇ ಸಪ್ಪೆಯಾಗಿರುತ್ತದೆ.
2022 ಮತ್ತು 2023 ರ ಆವೃತ್ತಿಯಲ್ಲಿ ಲಕ್ನೋ ತಂಡ ಅರ್ಹತಾ ಹಂತ ತಲುಪಿತು. ಆದರೆ ಎಲಿಮಿನೇಟರ್ ಸುತ್ತಿನಲ್ಲಿ ಎರಡು ಬಾರಿ ಸೋತು ಟೂರ್ನಿಯಿಂದ ಹೊರಬಿದ್ದಿತು. ಒಮ್ಮೆ ಆರ್‌ಸಿಬಿ ವಿರುದ್ಧ ಸೋಲನುಭವಿಸಿದ್ದ ಲಕ್ನೋ, ಮತ್ತೊಮ್ಮೆ ಮುಂಬೈ ತಂಡದ ವಿರುದ್ಧ ಸೋತು ಹೊರಬಿದ್ದಿತು
ಇನ್ನು 2024 ಮತ್ತು 2025 ರ ಆವೃತ್ತಿಯಲ್ಲಿ ಲಕ್ನೋ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ತಂಡಕ್ಕೆ ಅರ್ಹತಾ ಹಂತವನ್ನು ತಲುಪಲು ಸಹ ಸಾಧ್ಯವಾಗಲಿಲ್ಲ. 2024 ರ ಆವೃತ್ತಿಯಲ್ಲಿ ಕಡಿಮೆ ನೆಟ್ ರನ್ರೇಟ್ನಿಂದಾಗಿ ಲೀಗ್ ಹಂತದಲ್ಲೇ ಪ್ರಯಾಣ ಮುಗಿಸಿದ್ದ ಲಕ್ನೋ, ಅವರು ಹೊರಬಿದ್ದರು. ಮುಂದಿನ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡ ಟೂರ್ನಿಯಿಂದ ಹೊರಬಿದ್ದಿತ್ತು.
ಇದೀಗ 2026 ರ ಆವೃತ್ತಿಯ ಆರಂಭಕ್ಕೆ ಈಗ ತಯಾರಿ ನಡೆಸುತ್ತಿರುವ ಲಕ್ನೋ ತಂಡವು ತನ್ನ ಮೊದಲ ಕಪ್ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿಯುತ್ತಿದೆ. ಹೊಸ ನಾಯಕತ್ವದಲ್ಲಿ ತಂಡವು ಸಮತೋಲನದಿಂದ ಕೂಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠ ಆಟಗಾರರಿದ್ದಾರೆ ಮತ್ತು ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಇದು ತಂಡಕ್ಕೆ ಹೊಸ ಭರವಸೆಯನ್ನು ನೀಡುತ್ತಿದೆ.
ದಾವಣಗೆರೆ, (ಮಾರ್ಚ್ 22): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಸಮರ ಈಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಶಾಮನೂರು ಮೊಮ್ಮಗ ಸಮರ್ಥ್‌ಗೆ (Samarth Shamanur) ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಕಡೆಗಣಿಸಿದ್ದಕ್ಕೆ ಮುಸ್ಲಿಂ ಮುಖಂಡರು (Muslim Leaders) ಕೆಂಡಾಮಂಡಲವಾಗಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ (Congress) ತಕ್ಕ ಪಾಠ ಕಲಿಸ್ತೀವಿ ಎಂದು ಎಚ್ಚರಿಕೆ ನೀಡಿರುವ ಮುಖಂಡರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸದಿರಲು ತೀರ್ಮಾನಿಸಿದ್ದಾರೆ. ಅಲ್ಲದೇ ಬಾಗಲಕೋಟೆ ಬೈ ಎಲೆಕ್ಷನ್ ನಲ್ಲೂ ಸಹ ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದು ಕರೆ ನೀಡಿದ್ದಾರೆ.
ವಿಜಯನಗರ, ಮಾರ್ಚ್ 22: ತಂದೆ ಕಣ್ಣೆದುರೇ ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಪುತ್ರರು ಸಾವನ್ನಪ್ಪಿರುವಂತಹ (death)ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಬಳಿ ನಡೆದಿದೆ. ಎಂ.ಜಿ.ಮನು(19) ಮತ್ತು ಎಂ.ಜಿ.ಪ್ರಜ್ವಲ್(18) ಮೃತರು. ನದಿಯಲ್ಲಿ ಮುಳುಗುತ್ತಿದ್ದ ಕಿರಿಮಗ ಚಿರಂಜೀವಿಯನ್ನ ತಂದೆ ಮಂಜಪ್ಪ ರಕ್ಷಿಸಿದ್ದಾರೆ. ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಬಳಿಯ ತುಂಗಭದ್ರ ನದಿಗೆ ಮೂವರು ಸಹೋದರರು ಕೆರೆಗೆ ಈಜಾಡಲು ಹೋಗಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ತಂದೆ ಕಣ್ಣೆದುರೇ ಇಬ್ಬರು ಮಕ್ಕಳು ಜಲ ಸಮಾಧಿಯಾಗಿದ್ದಾರೆ. ಇನ್ನೊಬ್ಬ ಮಗನನ್ನು ರಕ್ಷಿಸಲಾಗಿದೆ. ಮೃತ ಎಂ.ಜಿ.ಮನು ಬಿಇ ವಿದ್ಯಾರ್ಥಿಯಾಗಿದ್ದು, ಎಂ.ಜಿ.ಪ್ರಜ್ವಲ್ ಪಿಯು ಓದುತ್ತಿದ್ದ. ಸದ್ಯ ತುಂಗಭದ್ರಾ ನದಿಯಿಂದ ಸ್ಥಳೀಯರು ಇಬ್ಬರ ಶವ ಹೊರತೆಗೆದಿದ್ದಾರೆ. ಘಟನಾ ಸ್ಥಳದಲ್ಲಿ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಮೀನಿನ ಬಲೆಗೆ ಸಿಲುಕಿ ಮೀನುಗಾರ ಸಾವು
ಮೀನು ಹಿಡಿಯಲು ಹೋಗಿದ್ದ ಮೀನುಗಾರ ಮೀನಿನ ಬಲೆಗೆ ಸಿಲುಕಿ ಸಾವನ್ನಪ್ಪಿರುವಂತಹ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದ ಹೊರಭಾಗದ ಭೀಮಾ ನದಿಯಲ್ಲಿ ನಡೆದಿದೆ. ಜೋಳದಡಗಿ ಗ್ರಾಮದ ನಿವಾಸಿ, ಮೀನುಗಾರ ನಾಗರಾಜ್ (28) ಮೃತ ದುರ್ದೈವಿ.
ನಾಗರಾಜ್ ಎಂದಿನಂತೆ ನಸುಕಿನ ಜಾವ ಭೀಮಾನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ. ನದಿಯಲ್ಲಿ ಬೆಂಡ್ ಮೇಲೆ ಕುಳಿತು ಮೀನಿನ ಬಲೆ ಹಾಕಿ ಮೀನು ಹಿಡಿಯಲು ಮುಂದಾಗಿದ್ದ. ಈ ವೇಳೆ ಮೀನುಗಾರನ ಹತ್ತಿರ ಬಂದ ಬೃಹತ್ ಮೊಸಳೆ, ಮೀನುಗಾರ ಕುಳಿತ ಬೆಂಡ್ ಕೆಡವಿದೆ. ಈ ವೇಳೆ ಈಜಾಡಿ ಪಾರಾಗಿ ಬರಲು ಸಾಧ್ಯವಾಗದೇ ಮೀನಿನ ಬಲೆ ಕಾಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಮೀನುಗಾರರು ದೂರದಿಂದ ಕೂಗಿದ ಹಿನ್ನಲೆ ಮೊಸಳೆ ಪರಾರಿ ಆಗಿದೆ. ಸ್ಥಳೀಯ ಮೀನುಗಾರರು ಮೃತದೇಹವನ್ನು ಹೊರತೆಗೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.