ರಾಹುಲ್ ದ್ರಾವಿಡ್ಗೆ ನಾನು ಸದಾ ಚಿರಋಣಿ: ವಿರಾಟ್ ಕೊಹ್ಲಿ ಮನದಾಳದ ಮಾತು – Kannada News | Virat Kohli Opens Up On ‘Impostor Syndrome’ and Dravid’s Healing Touch
ವಿಶ್ವ ಕ್ರಿಕೆಟ್‌ನ ರನ್ ಮಷೀನ್, ಶತಕಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಸದಾ ಮೈದಾನದಲ್ಲಿ ಅಗ್ರೆಸ್ಸಿವ್ ಆಗಿ ಕಾಣುವ ಆಟಗಾರ. ಆದರೆ, ಸದಾ ಆತ್ಮವಿಶ್ವಾಸದಿಂದ ಬೀಗುವ ಕೊಹ್ಲಿ ಅವರನ್ನೂ ಕೂಡ ತೀವ್ರವಾದ ಮಾನಸಿಕ ಆತಂಕ ಕಾಡಿತ್ತು ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಸ್ಪೋರ್ಟ್ಸ್ ಸಮ್ಮಿಟ್‌ನಲ್ಲಿ ಸ್ವತಃ ಮನದಾಳ ಬಿಚ್ಚಿಟ್ಟಿರುವ ಕಿಂಗ್ ಕೊಹ್ಲಿ, ತಾವು ಸುದೀರ್ಘ ಕಾಲ ‘ಇಂಪೋಸ್ಟರ್ ಸಿಂಡ್ರೋಮ್’ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಕಠಿಣ…