Headlines

ದಿನ ಭವಿಷ್ಯ: ಇಂದು ಈ ರಾಶಿಯವರೇ ನಿಮ್ಮ ಸಹಾಯಕ್ಕೆ ಆಗುವರು

ಮೇಷ ರಾಶಿ: ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ಮಂಗಲ ಕಾರ್ಯಗಳಿಗೆ ಸಂಪತ್ತನ್ನು ವಿನಿಯೋಗ ಮಾಡುವಿರಿ. ಅಧಿಕ ಲಾಭ ಗಳಿಸಬಹುದಾದ ಉತ್ಪಾದನೆಯಿಂದ ಅಲ್ಪ ಲಾಭ. ಹೊಸತನ ಹುಡುಕಾಟದಲ್ಲಿ ನೀವು ಇರುವಿರಿ. ದ್ವೇಷವನ್ನು ಬೆಳೆಸಿಕೊಳ್ಳುವುದು ಯೋಗ್ಯವೆನಿಸದು. ಸಮಯದ ನಿರೀಕ್ಷೆಯಲ್ಲಿ ಇರಿ. ಯಾರ ಸ್ವಭಾವವನ್ನೂ ಆಡಿಕೊಳ್ಳುವುದು ಬೇಡ. ಬರಬೇಕಾದ ಹಣವು ಮಧ್ಯದಲ್ಲಿ ನಿಂತಿದ್ದು ನಿಮಗೆ ಆತಂಕವಾಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸುವ ಚಿಂತೆಯಲ್ಲಿ ಇರುವಿರಿ. ವೃಷಭ ರಾಶಿ: ತೋರಿಕೆಗೆ ಮಾಡುವ ಕೆಲಸದಲ್ಲಿ ಯಾವ ಪರಿಣಾಮ ಕಾಣಿಸದು.ಹೊಸ ಮನೆಯ ಪ್ರವೇಶದಲ್ಲಿ‌ ನೀವು ಭಾಗಿಯಾಗುವಿರಿ….

Read More

ಅಮೆರಿಕದ ಎಫ್-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ; ಇಲ್ಲಿದೆ ವಿಡಿಯೋ

ಟೆಹ್ರಾನ್, ಮಾರ್ಚ್ 19: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಗಳು ಹೆಚ್ಚಾಗುತ್ತಲೇ ಇದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಂದು ಅಮೆರಿಕದ ಮಿಲಿಟರಿಯ ಎಫ್-35 ಫೈಟರ್ ಜೆಟ್ ಮೇಲೆ ದಾಳಿ ನಡೆಸಿ ಹಾನಿ ಮಾಡಿದೆ. ಈ ಯುದ್ಧವಿಮಾನದ ಮೇಲೆ ಇರಾನ್ (Iran War) ಗುಂಡು ಹಾರಿಸಿದ ಕ್ಷಣವನ್ನು ತೋರಿಸುವ ವೀಡಿಯೊವನ್ನು ಇರಾನ್ ಮಾಧ್ಯಮವು ಬಿಡುಗಡೆ ಮಾಡಿದೆ. ಈ ಘಟನೆಯ ಬಳಿಕ ಇರಾನ್ ಮೇಲೆ ಯುದ್ಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ಫೈಟರ್ ಜೆಟ್ ಅನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು. ವಿಮಾನವನ್ನು ಸುರಕ್ಷಿತವಾಗಿ…

Read More

ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಅನುಷ್ಕಾ ಶೆಟ್ಟಿ

ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತದ ಖ್ಯಾತ ನಟಿ, ‘ದೇವಸೇನಾ’ ಖ್ಯಾತಿಯ ಅನುಷ್ಕಾ ಶೆಟ್ಟಿ (Anushka Shetty) ಅವರ ಮದುವೆ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆಯಾದರೂ ಈ ಬಾರಿ ತುಸು ಗಟ್ಟಿಯಾಗಿಯೇ ಹರಿದಾಡಿದ್ದವು. ಅನುಷ್ಕಾ ಶೆಟ್ಟಿ ಅವರು ಬೆಂಗಳೂರು ಮೂಲದ ಉದ್ಯಮಿಯೊಬ್ಬರನ್ನು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಆದರೆ ಇದೀಗ ಅನುಷ್ಕಾ ಶೆಟ್ಟಿ ಅವರ ತಂಡವು ಈ ಬಗ್ಗೆ ಸ್ಪಷ್ಟನೆ ನೀಡಿದೆ….

Read More

ಲಾರಿ ಪಲ್ಟಿಯಾಗುತ್ತಿದ್ದಂತೆ ಕೆಳಗೆ ಬಿದ್ದ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!

ಹೈದರಾಬಾದ್, ಮಾರ್ಚ್ 19: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ಲಾರಿಯಿಂದ ಕೂಲ್ ಡ್ರಿಂಕ್ಸ್ ಬಾಟಲಿಗಳು ರಸ್ತೆಯಲ್ಲಿ ಬಿದ್ದಿತ್ತು. ಕೂಡಲೆ ಓಡೋಡಿ ಬಂದ ಸುತ್ತಮುತ್ತಲಿನ ಮನೆಯ ಜನರು ಕೈಗೆ ಸಿಕ್ಕಷ್ಟು ಆ ಕೂಲ್ ಡ್ರಿಂಕ್ಸ್ ಬಾಟಲಿಗಳನ್ನು ದೋಚಿಕೊಂಡು ಹೋಗಿದ್ದಾರೆ. ಹಲವಾರು ಜನರು ರಸ್ತೆಯಲ್ಲಿ ಬಿದ್ದ ತಂಪು ಪಾನೀಯದ ಬಾಟಲಿಗಳನ್ನು ಹೆಕ್ಕುತ್ತಿರುವ ವಿಡಿಯೋ ವೈರಲ್ ಆಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ಬಾಟಲಿಗಳನ್ನು ತೆಗೆದುಕೊಂಡು ಹೋಗದಂತೆ ಮನವಿ ಮಾಡಿದರೂ, ಜನರು ಕೇಳಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು…

Read More

ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ

ಬೆಂಗಳೂರು, ಮಾರ್ಚ್​ 19: ವಿವಾಹಿತ ಮಹಿಳೆಯನ್ನು ಯುವಕನೋರ್ವ ಡ್ಯಾಗರ್​ನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಫಿರ್ದೋಸ್ ಬಾನು ಕೊಲೆಯಾದ ಎರಡು ಮಕ್ಕಳ ತಾಯಿ. ಹಫೀಸ್​ ಎಂಬಾತನಿಂದ ಕೃತ್ಯವೆಸಲಾಗಿದೆ. ಆಟೋಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದ ಹಫೀಸ್​​, ಕೆಲ ತಿಂಗಳಿಂದ ಫೀರ್ದೋಸ್ ಬಾನು ಹಿಂದೆ ಬಿದ್ದಿದ್ದ. ತನ್ನನ್ನು ಲವ್ ಮಾಡುವಂತೆ ಕಾಟ ಕೊಡುತ್ತಿದ್ದ. ಹಫೀಸ್ ಕಾಟ ತಾಳಲಾರದೆ ಫಿರ್ದೋಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಫೀಸ್​ಗೆ ಪೊಲೀಸರು ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿ ಕಳಿಸಿದ್ದರು. ಕೆಲ…

Read More

ಮಗಳಾಗಿ ಬಂದೆ, ಸೊಸೆಯಾಗಿದ್ದೀನಿ: ಪ್ರಶಸ್ತಿ ಸ್ವೀಕರಿಸಿ ಭಾವುಕರಾದ ರಶ್ಮಿಕಾ

ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ಅವರೊಟ್ಟಿಗೆ ಬಲು ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಮದುವೆ ಆದ ಬಳಿಕ ಇದು ಅವರಿಗೆ ಮೊದಲ ಹಬ್ಬ. ಆದರೆ ಈ ಯುಗಾದಿ ಹಬ್ಬ ಅವರಿಗೆ ಬಹು ವಿಶೇಷವೂ ಹೌದು. ರಶ್ಮಿಕಾ ಮಂದಣ್ಣ ಅವರು ನಟನೆಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ರಶ್ಮಿಕಾ ಅವರಿಗೆ ತೆಲಂಗಾಣ ಸರ್ಕಾರ ನೀಡುವ ಗದರ್ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ್ದಾರೆ. ಸಿಎಂ ರೇವಂತ್…

Read More

IPL 2026: ಒಂದೇ ದಿನ ಮೂವರು ಸ್ಟಾರ್ ಆಟಗಾರರು ಐಪಿಎಲ್​ನಿಂದ ಔಟ್

ಐಪಿಎಲ್ (IPL 2026) ಸೀಸನ್ ಇನ್ನೂ ಆರಂಭವಾಗಿಲ್ಲ. ಆದಾಗ್ಯೂ ಹಲವು ತಂಡಗಳಿಗೆ ದೊಡ್ಡ ಆಘಾತ ಎದುರಾಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಮ್ಮ ಸ್ಟಾರ್ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಇಲ್ಲದೆ ಈ ಆವೃತ್ತಿಯನ್ನು ಆರಂಭಿಸಲಿದ್ದು, ಸನ್‌ರೈಸರ್ಸ್ ಹೈದರಾಬಾದ್ ತಂಡವು ತಮ್ಮ ನಾಯಕ ಪ್ಯಾಟ್ ಕಮ್ಮಿನ್ಸ್ ಇಲ್ಲದೆ ಈ ಪಂದ್ಯಾವಳಿಯ ಮೊದಲ ಕೆಲವು ಪಂದ್ಯಗಳನ್ನು ಆಡಲಿದೆ. ಈ ಇಬ್ಬರು ಅನುಭವಿ ಆಟಗಾರರು ತಂಡಕ್ಕೆ ಮರಳುವ ಸಾಧ್ಯತೆ ಇದ್ದರೂ, ಇತರ ಕೆಲವು ತಂಡಗಳ ಪರಿಸ್ಥಿತಿ ಗಂಭೀರವಾಗಿದೆ….

Read More

75ನೇ ವಯಸ್ಸಿನಲ್ಲೂ ಕಾಮದಾಹ: ಸೊಸೆಯನ್ನೂ ಬಿಡದ ಕಾಮುಕ ತಂದೆಯನ್ನ ಕೊಂದ ಮಗ

ಯಾದಗಿರಿ, (ಮಾರ್ಚ್ 19):  ಜಿಲ್ಲೆಯ ಗೋನಾಳ ಗ್ರಾಮದ ಮಗನಿಂದಲೇ ತಂದೆ ಕೊಲೆ ಪ್ರಕರಣಕ್ಕೆ (Gonal Pampanna Murder Case) ಟ್ವಿಸ್ಟ್ ಸಿಕ್ಕಿದೆ. 75 ವಯಸ್ಸಾಗಿದ್ರೂ ಕಾಮದಾಟಕ್ಕಾಗಿ ಮಹಿಳೆಯರ ಜೊತೆ ಸಂಬಂಧ (illicit relationship )ಇಟ್ಟುಕೊಂಡು, ಸೊಸೆಯನ್ನೂ ಬಿಡದ ತಂದೆಯನ್ನು ಕಂಡು ಮಾರ್ಯಾದೆಗೆ ಹೆದರಿ ಮಗನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಯಲಾಗಿದೆ. ಹೌದು… ಗೋನಾಳ ಗ್ರಾಮದಲ್ಲಿ 6 ದಿನಗಳ ಹಿಂದೆ ಅಂದ್ರೆ ಮಾರ್ಚ್ 12 ರ ರಾತ್ರಿ 74 ವರ್ಷದ ಪಂಪಣ್ಣ ಸಜ್ಜನ ಎಂಬಾತನ…

Read More

ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!

ನವದೆಹಲಿ, ಮಾರ್ಚ್ 19: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಮಗಳನ್ನು ಶಾಲಾ ಬಸ್​​ಗೆ ಹತ್ತಿಸಲು ಸ್ಕೂಟಿಯಲ್ಲಿ ಬಂದಿದ್ದ ಮಹಿಳೆ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಯುವಕರು ಬೈಕ್​ಗಳಲ್ಲಿ ಬಂದು ಆಕೆಯನ್ನು ಅಡ್ಡಹಾಕಿದರು. ಆಕೆಯ ಕುತ್ತಿಗೆಯಲ್ಲಿದ್ದ ಸರ, ಕೈಯಲ್ಲಿದ್ದ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಅವರಿಂದ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಯುಧಗಳನ್ನು ತೆಗೆದು ಆಕೆಯ ಮೇಲೆ ದಾಳಿ ನಡೆಸಿದರು. ಇಷ್ಟೆಲ್ಲ ನಡೆದಿದ್ದು ಬೆಳಗ್ಗೆ ಜನರೆಲ್ಲ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗಲೇ. ಆದರೂ ಯಾರಿಗೂ ಹೆದರದ ಕಳ್ಳರು ಆಕೆಯನ್ನು ಲೂಟಿ ಮಾಡಿದ್ದಾರೆ….

Read More

WITT Summit 2026: WITT ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯಿಂದ ಭಾರತದ ಅಭಿವೃದ್ಧಿಯ ದಿಕ್ಕಿನ ಕುರಿತು ಮಹತ್ವದ ಚರ್ಚೆ

ನವದೆಹಲಿ, ಮಾರ್ಚ್ 19: ಟಿವಿ9 ನೆಟ್​ವರ್ಕ್ ಆಯೋಜಿಸುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit 2026) ಶೃಂಗಸಭೆ ತನ್ನ ನಾಲ್ಕನೇ ಆವೃತ್ತಿಯೊಂದಿಗೆ ಶೀಘ್ರದಲ್ಲೇ ಶುರುವಾಗಲು ಸಜ್ಜಾಗಿದೆ. ಮಾರ್ಚ್ 23 ಮತ್ತು 24ರಂದು ದೆಹಲಿಯಲ್ಲಿ ಈ ಶೃಂಗಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮುಖ್ಯ ಭಾಷಣ ಮಾಡಲಿದ್ದಾರೆ. ಸತತ ಮೂರನೇ ಬಾರಿಗೆ ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ಮೋದಿ ಭಾರತದ ಅಭಿವೃದ್ಧಿಯ ದಿಕ್ಕಿನ ಕುರಿತು ಮಾತನಾಡಲಿದ್ದಾರೆ. ಈ ಶೃಂಗಸಭೆಯು ದೇಶದ…

Read More