ಜಿಮ್ನಾಸ್ಟಿಕ್ ಬೆಲ್ಟ್​​ನಿಂದ ನೇಣು ಬಿಗಿದುಕೊಂಡು ತ್ವಿಶಾ ಸಾವು, ಮರಣೋತ್ತರ ವರದಿಯಲ್ಲಿ ಹಲವು ವಿಚಾರಗಳು ಬಹಿರಂಗ – Kannada News | New Forensic Details Surface in Twisha Sharma Death Investigation

ಭೋಪಾಲ್, ಮೇ 20: ಮಧ್ಯಪ್ರದೇಶದ ಭೋಪಾಲ್‌ನ ಕಟಾರಾ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ತ್ವಿಶಾ ಶರ್ಮಾ(Twisha Sharma) ಅವರ ಅನುಮಾನಾಸ್ಪದ ಸಾವು ಪ್ರಕರಣ ಈಗ ಇಡೀ ದೇಶದ ಗಮನ ಸೆಳೆದಿದೆ. ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ಅವರ ಸೊಸೆಯಾಗಿರುವ ತ್ವಿಶಾ ಅವರ ಸಾವು ಕೇವಲ ಆತ್ಮಹತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂದು ಹೆತ್ತ ಕುಟುಂಬ ಆಕ್ರೋಶ ಹೊರಹಾಕಿದೆ. ನ್ಯಾಯಕ್ಕಾಗಿ ಆಗ್ರಹಿಸಿ ತ್ವಿಶಾ ಅವರ ಕುಟುಂಬಸ್ಥರು ಮಂಗಳವಾರ ಸತತ ಏಳನೇ ದಿನವೂ ಮಗಳ ಶವವನ್ನು ಸ್ವೀಕರಿಸಲು ನಿರಾಕರಿಸಿ ಭೀಕರ ಪ್ರತಿಭಟನೆಗೆ ಇಳಿದಿದ್ದಾರೆ.

ಪ್ಲಾನ್ ಮಾಡಿ ವಿದೇಶಕ್ಕೆ ಹಾರಲು ನೋಡಿದ್ದ ಪತಿ: ಲುಕ್ ಔಟ್ ನೋಟಿಸ್ ಜಾರಿ
ಪ್ರಕರಣದ ಮುಖ್ಯ ಆರೋಪಿಯಾಗಿರುವ ತ್ವಿಶಾ ಪತಿ ಸಮರ್ಥ್ ಸಿಂಗ್ ವಿರುದ್ಧ ಪೊಲೀಸರು ಈಗ ಕೊನೆಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಆರೋಪಿ ಸಮರ್ಥ್ ದೇಶ ಬಿಟ್ಟು ಪಲಾಯನ ಮಾಡದಂತೆ ಆತನ ಪಾಸ್‌ಪೋರ್ಟ್ ಅನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಲು ಪಾಸ್‌ಪೋರ್ಟ್ ಕಚೇರಿಗೆ ಪೊಲೀಸರು ತುರ್ತು ಪತ್ರ ಬರೆದಿದ್ದಾರೆ. ಇಷ್ಟಾದರೂ ಪೊಲೀಸರು ಪ್ರಭಾವಿ ಆರೋಪಿಗಳನ್ನು ರಕ್ಷಿಸಲು ಒಲವು ತೋರುತ್ತಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ನಾಲ್ಕು ದಿನ ತಡವಾಗಿ ಸಿಕ್ಕ ಜಿಮ್ನಾಸ್ಟಿಕ್ಸ್ ಬೆಲ್ಟ್, ಎಸ್‌ಐಟಿ ಹೇಳುವುದೇನು?
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥ ಎಸಿಪಿ ರಜನೀಶ್ ಕಶ್ಯಪ್ ಪ್ರಕಾರ, ಘಟನೆ ನಡೆದ ನಾಲ್ಕು ದಿನಗಳ ನಂತರ ಅಂದರೆ ಭಾನುವಾರ ತನಿಖಾಧಿಕಾರಿಗಳು ತ್ವಿಶಾ ಕುತ್ತಿಗೆಗೆ ಬಿಗಿದಿದ್ದ ನೇಣಿನ ಹಗ್ಗವನ್ನು (ಲಿಗೇಚರ್) ವಶಪಡಿಸಿಕೊಂಡಿದ್ದಾರೆ. ಈ ಲಿಗೇಚರ್ ತ್ವಿಶಾ ಕುತ್ತಿಗೆಯ ಮೇಲಿದ್ದ ಕಲೆಗಳಿಗೆ ನಿಖರವಾಗಿ ಹೊಂದಿಕೆಯಾಗುತ್ತಿದ್ದು, ಅವರು ‘ಜಿಮ್ನಾಸ್ಟಿಕ್ಸ್ ಬೆಲ್ಟ್’ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್‌ಐಟಿ ಹೇಳಿದೆ.

ಮತ್ತಷ್ಟು ಓದಿ: ಮಹಿಳೆಯ ಅನುಮಾನಾಸ್ಪದ ಸಾವು, ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯ ಎಚ್ಚರಿಕೆ

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಹಾರರ್ ಸತ್ಯ
ಪೊಲೀಸರ ಈ ಆತ್ಮಹತ್ಯೆ ವಾದವನ್ನು ತ್ವಿಶಾ ಕುಟುಂಬ ಸಂಪೂರ್ಣವಾಗಿ ತಳ್ಳಿಹಾಕಿದೆ. ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತ್ವಿಶಾ ಅವರ ತಲೆಯಲ್ಲಿ ತೀವ್ರವಾಗಿ ರಕ್ತ ಹೆಪ್ಪುಗಟ್ಟಟ್ಟಿರುವುದು , ದೇಹದ ಹಲವಾರು ಭಾಗಗಳಲ್ಲಿ ಭೀಕರ ಗಾಯಗಳು ಮತ್ತು ಸಾವಿಗೂ ಮುನ್ನ ತೀವ್ರ ಹೊಡೆದಾಟ ನಡೆದಿರುವ ಲಕ್ಷಣಗಳು ಪತ್ತೆಯಾಗಿವೆ.

ಒಂದು ವೇಳೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ ಮೈಮೇಲೆ ಇಷ್ಟೊಂದು ಗಾಯಗಳು ಹೇಗೆ ಬಂದವು, ಘಟನೆ ನಡೆದ ನಾಲ್ಕು ದಿನಗಳ ನಂತರ ಪೊಲೀಸರಿಗೆ ಜಿಮ್ನಾಸ್ಟಿಕ್ಸ್ ಬೆಲ್ಟ್ ಸಿಕ್ಕಿದೆ ಎಂದರೆ ಅದನ್ನ ನಂಬಬೇಕೇ,ಸಾಕ್ಷಿ ನಾಶಪಡಿಸಲು ಇಷ್ಟು ಸಮಯ ತಗೆದುಕೊಳ್ಳಲಾಗಿದೆಯೇ? ಎಂದು ತ್ವಿಶಾ ಅವರ ತಂದೆ ನವನಿಧಿ ಶರ್ಮಾ ಪ್ರಶ್ನಿಸಿದ್ದಾರೆ.

ತ್ವಿಶಾ ಅವರ ತಂದೆ ನವನಿಧಿ ಶರ್ಮಾ ಮತ್ತು ಸಹೋದರ ಮೇಜರ್ ಹರ್ಷಿತ್ ಶರ್ಮಾ ಅವರು ಆರೋಪಿಗಳ ಕುಟುಂಬವು ತಮ್ಮ ಕಾನೂನು ಹಾಗೂ ರಾಜಕೀಯ ಪ್ರಭಾವ ಬಳಸಿ ತನಿಖೆಯನ್ನು ಹಳ್ಳ ಹಿಡಿಸುತ್ತಿದೆ ಎಂದು ನೇರ ಆರೋಪ ಮಾಡಿದ್ದಾರೆ. ದೆಹಲಿಯ ಪ್ರತಿಷ್ಠಿತ ಏಮ್ಸ್ (AIIMS) ಆಸ್ಪತ್ರೆಯಲ್ಲಿ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಕುಟುಂಬ ಪಟ್ಟು ಹಿಡಿದಿದೆ.

ಆದರೆ, ಎರಡನೇ ಶವಪರೀಕ್ಷೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ವಿಳಂಬವಾದಷ್ಟೂ ತ್ವಿಶಾ ಅವರ ಮೃತದೇಹದ ಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು ಮೈಮೇಲಿರುವ ಗಾಯದ ಗುರುತುಗಳು ಮಸುಕಾಗುತ್ತವೆ ಎಂಬುದು ಪ್ರಭಾವಿ ಆರೋಪಿಗಳ ಕರಾಳ ಯೋಜನೆಯಾಗಿದೆ. ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆದರೆ ಕೊಲೆಯ ಸತ್ಯ ಜಗತ್ತಿಗೆ ತಿಳಿಯುತ್ತದೆ ಎಂಬ ಭಯ ಆರೋಪಿಗಳಿಗಿದೆ ಎಂದು ಸೋದರ ಹರ್ಷಿತ್ ಆತಂಕ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಇಲಾಖೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುವ ಹೆತ್ತವರು, ದೆಹಲಿ ಏಮ್ಸ್‌ನಲ್ಲಿ ಎರಡನೇ ಶವಪರೀಕ್ಷೆ ನಡೆಸುವವರೆಗೂ ಮಗಳ ದೇಹವನ್ನು ಮುಟ್ಟುವುದಿಲ್ಲ ಎಂದು ದೃಢ ನಿರ್ಧಾರ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಭಿಮಾನಿಗಳು ತಳ್ಳಲು ಬಂದ ಬೌನ್ಸರ್​​ಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡ ಜೂ.ಎನ್​ಟಿಆರ್ – Kannada News | Jr. NTR Defends Fans, Scolds Bouncers for Rude Behavior On His Birthday

ನೆಚ್ಚಿನ ಸ್ಟಾರ್ ನಟನನ್ನು ಕಣ್ತುಂಬಿಕೊಳ್ಳಲು ನೂರಾರು ಕಿಲೋಮೀಟರ್ ದೂರದಿಂದ ಬರುವ ಅಭಿಮಾನಿಗಳ ಮೇಲೆ ನಟರಿಗೆ ಸಾಕಷ್ಟು ಪ್ರೀತಿ ಇರುತ್ತದೆ. ಆದರೆ, ಅವರ ಭದ್ರತಾ ಸಿಬ್ಬಂದಿ ಮಾತ್ರ ಉದ್ಧಟತನ ತೋರುತ್ತಿರುತ್ತಾರೆ. ಸಾರ್ವಜನಿಕವಾಗಿ ಅಭಿಮಾನಿಗಳನ್ನು ದೂಡುವುದು, ಮುಗಿಬೀಳುವುದು ಬೌನ್ಸರ್‌ಗಳಿಗೆ ಸಾಮಾನ್ಯ ಎಂಬಂತಾಗಿದೆ. ಜೂನಿಯರ್ ಎನ್​​ಟಿಆರ್ (JR NTR) ಬೌನ್ಸರ್ ಕೂಡ ಇದೇ ರೀತಿ ನಡೆದುಕೊಂಡರು. ಆದರೆ, ಈ ಸಂದರ್ಭದಲ್ಲಿ ಅವರು ತಮ್ಮ ಅಭಿಮಾನಿಗಳ ಪರವಾಗಿ ನಿಂತು, ದುರ್ವರ್ತನೆ ತೋರಿದ ಭದ್ರತಾ ಸಿಬ್ಬಂದಿಗೆ ಎಲ್ಲರೆದುರೇ ಕ್ಲಾಸ್ ತಗೊಂಡಿದ್ದಾರೆ.

ಜೂನಿಯರ್ ಎನ್​​ಟಿಆರ್ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರ ತಡರಾತ್ರಿಯೇ ಹೈದರಾಬಾದ್‌ನ ಅವರ ನಿವಾಸದ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಬೇಕು ಎಂದು ಗಂಟೆಗಟ್ಟಲೆ ಕಾಯುತ್ತಿದ್ದ ಅಭಿಮಾನಿಗಳನ್ನು ತಾರಕ್ ನಿರಾಸೆಗೊಳಿಸಲಿಲ್ಲ. ಮಧ್ಯರಾತ್ರಿ ನಿವಾಸದಿಂದ ಹೊರಬಂದು ಸ್ಟೀಲ್ ಬ್ಯಾರಿಕೇಡ್ ಹಿಂಭಾಗದಿಂದಲೇ ಕೈಬೀಸಿ ಶುಭಾಶಯ ಸ್ವೀಕರಿಸಿದರು.

ಇದೇ ವೇಳೆ ತಾರಕ್ ಅವರನ್ನು ಹತ್ತಿರದಿಂದ ನೋಡಲು ಕೆಲವು ಅಭಿಮಾನಿಗಳು ಮುಂದೆ ಬರಲು ಯತ್ನಿಸಿದಾಗ, ಅವರ ಸುತ್ತ ನಿಂತಿದ್ದ ಸೆಕ್ಯೂರಿಟಿ ತಂಡ ಅಭಿಮಾನಿಗಳ ಮೇಲೆ ಮುಗಿಬಿದ್ದು ಅತ್ಯಂತ ಜೋರಾಗಿ ದೂಡಲು ಹಾಗೂ ರೇಗಾಡಲು ಪ್ರಯತ್ನಿಸಿತು. ಭದ್ರತಾ ಸಿಬ್ಬಂದಿಯ ಈ ಉದ್ಧಟತನ ತಾರಕ್ ಅವರ ಕಣ್ಣಿಗೆ ಬಿದ್ದ ತಕ್ಷಣವೇ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಭದ್ರತಾ ಸಿಬ್ಬಂದಿ ಅಭಿಮಾನಿಗಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿರುವುದನ್ನು ನೋಡಿದ ಜೂನಿಯರ್ ಎನ್​​ಟಿಆರ್, ಅಲ್ಲೇ ಇದ್ದ ಮುಖ್ಯ ಭದ್ರತಾ ಅಧಿಕಾರಿಯನ್ನು ಕರೆದು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇಲ್ಲಿ ಇಷ್ಟೊಂದು ಗೊಂದಲ ಮತ್ತು ಗಲಾಟೆ ಸೃಷ್ಟಿಯಾಗಲು ನಿಮ್ಮ ವರ್ತನೆಯೇ ಕಾರಣ’ ಎಂದು ಸಿಬ್ಬಂದಿಗೆ ಖಡಕ್ ಆಗಿ ಬುದ್ಧಿ ಕಲಿಸಿದ್ದಾರೆ. ನಟನೇ ನೇರವಾಗಿ ಅಭಿಮಾನಿಗಳ ಪರವಾಗಿ ನಿಂತು ಸೆಕ್ಯೂರಿಟಿ ಟೀಮ್‌ಗೆ ಕ್ಲಾಸ್ ತೆಗೆದುಕೊಂಡ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಹೊಗಳಿದ್ದಾರೆ.

ಇದನ್ನೂ ಓದಿ: ಜೂ ಎನ್​​ಟಿಆರ್​​ಗೆ ಏನಾಗಿದೆ? ಕಾಡುತ್ತಿದ್ದೆಯೇ ಅನಾರೋಗ್ಯ?

ಮತ್ತೊಂದೆಡೆ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದ ಮೊದಲ ಗ್ಲಿಂಪ್ಸ್ ಸೌಂಡ್ ಮಾಡುತ್ತಿದೆ. ಈ ಚಿತ್ರದಲ್ಲಿ ಜೂನಿಯರ್ ಎನ್​​ಟಿಆರ್ ಅವರು ಅಫೀಮು ದಂಧೆಯ ಕರಾಳ ಜಗತ್ತನ್ನು ಆಳುವ ಕ್ರೂರ ಹಂತಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಿಂಪ್ಸ್‌ನಲ್ಲಿ ತಾರಕ್ ಹೆಣಗಳ ರಾಶಿಯ ಮೇಲೆ ನಿಂತು ಶತ್ರುಗಳನ್ನು ಸಂಹರಿಸುವ ದೃಶ್ಯಗಳು ಕೆಜಿಎಫ್ ಹಾಗೂ ಸಲಾರ್ ಸಿನಿಮಾಗಳ ಕಲ್ಲಿದ್ದಲು ಗಣಿಯ ರಗಡ್ ಶೇಡ್ ಅನ್ನು ನೆನಪಿಸುವಂತಿದೆ. ಈ ಬಿಗ್ ಬಜೆಟ್ ಸಿನಿಮಾ ಜೂನ್ 11, 2027 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮತ್ತು ಆನೆ ಸಾವು ಪ್ರಕರಣ: ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆ! – Kannada News | Dubare Elephant Camp Tragedy: Expert Report Ignored by Forest Department Before Mishap

ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮತ್ತು ಆನೆ ಸಾವು ಪ್ರಕರಣ: ತಜ್ಞರ ಸಮಿತಿ ವರದಿಯನ್ನ ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆ!

ಕೊಡಗು, ಮೇ 20: ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಎರಡು ದಿನಗಳ ಹಿಂದೆ (ಮೇ 18) ಆನೆಗಳ ನಡುವಿನ ಕಾದಾಟಕ್ಕೆ ಚೆನ್ನೈ ಮೂಲದ ಪ್ರವಾಸಿ ಮಹಿಳೆ ತುಳಸಿ (33) ಬಲಿಯಾಗಿದ್ದರು. ಇದರ ಬೆನ್ನಲ್ಲೇ, ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಎಂಬ ಸಾಕಾನೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಈ ದಾರುಣ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಮತ್ತು ತಜ್ಞರ ವರದಿಯ ಕಡೆಗಣನೆಯೇ ಮುಖ್ಯ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮುಖ್ಯಾಂಶಗಳು

  • ದುಬಾರೆ ಶಿಬಿರದಲ್ಲಿ ಆನೆಗಳ ಕಾದಾಟಕ್ಕೆ ಪ್ರವಾಸಿ ಮಹಿಳೆ ಮತ್ತು ಆನೆ ಸಾವು.
  • ನಿಯಮ ಮೀರಿ 30 ಆನೆಗಳನ್ನು ಇರಿಸಿ ತಜ್ಞರ ವರದಿ ಕಡೆಗಣಿಸಿದ ಇಲಾಖೆ.
  • ಮಿತಿಮೀರಿದ ಪ್ರವಾಸಿಗರ ಭೇಟಿಯಿಂದ ಆನೆಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿವೆ.

2019ರಲ್ಲೇ ಎಚ್ಚರಿಸಿದ್ದ ತಜ್ಞರ ಸಮಿತಿ

ಹೈಕೋರ್ಟ್ ಆದೇಶದಂತೆ ವನ್ಯಜೀವಿ ತಜ್ಞ ಕೆ.ಎಂ. ಚಿಣ್ಣಪ್ಪ, ಪಶುವೈದ್ಯ ಸರ್ಜನ್ ಡಾ. ಕಲೈವಣ್ಣನ್ ಮತ್ತು ಮುಖ್ಯ ಪಶುವೈದ್ಯ ಡಾ. ಅಶ್ರಫ್ ಅವರನ್ನೊಳಗೊಂಡ ತಜ್ಞರ ಸಮಿತಿಯು ಕರ್ನಾಟಕದ ಎಲ್ಲಾ ಆನೆ ಶಿಬಿರಗಳಿಗೆ ಭೇಟಿ ನೀಡಿ 2019ರಲ್ಲೇ ಅರಣ್ಯ ಇಲಾಖೆಗೆ ಸಮಗ್ರ ವರದಿ ಸಲ್ಲಿಸಿತ್ತು. ಆದರೆ ಇಲಾಖೆ ಇದನ್ನು ಸಂಪೂರ್ಣವಾಗಿ ಕಡೆಗಣಿಸಿದೆ.

ವರದಿಯಲ್ಲಿದ್ದ ಪ್ರಮುಖ ನೆಗೆಟಿವ್ ಅಂಶಗಳು ಮತ್ತು ಶಿಫಾರಸುಗಳು

ದುಬಾರೆ ಶಿಬಿರಕ್ಕೆ ಮಿತಿಮೀರಿ ಭೇಟಿ ನೀಡುವ ಪ್ರವಾಸಿಗರಿಂದಾಗಿ ಆನೆಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿವೆ. ಪ್ರವಾಸಿಗರ ಅತಿಯಾದ ಒಡನಾಟದಿಂದ ಆನೆಗಳ ನಡವಳಿಕೆಯಲ್ಲಿ ಅಪಾಯಕಾರಿ ಬದಲಾವಣೆಗಳಾಗುತ್ತಿವೆ ಎಂದು ಚಿತ್ರಸಹಿತ ವರದಿ ನೀಡಲಾಗಿತ್ತು. ಪ್ರವಾಸಿಗರನ್ನು ಆನೆಗಳ ತೀರಾ ಹತ್ತಿರಕ್ಕೆ ಬಿಡಬಾರದು ಮತ್ತು ಅವುಗಳಿಂದ ದೂರವಿಡಬೇಕು ಎಂದು ಸಮಿತಿ ಸ್ಪಷ್ಟವಾಗಿ ತಿಳಿಸಿತ್ತು. ಒಂದು ಶಿಬಿರದಲ್ಲಿ ಗರಿಷ್ಠ 15 ಆನೆಗಳಿಗಿಂತ ಹೆಚ್ಚು ಇರಬಾರದು ಎಂದು ಶಿಫಾರಸು ಮಾಡಲಾಗಿತ್ತು. ಆದರೆ, ಪ್ರಸ್ತುತ ದುಬಾರೆ ಶಿಬಿರದಲ್ಲಿ ನಿಯಮ ಮೀರಿ ಬರೋಬ್ಬರಿ 30 ಆನೆಗಳನ್ನು ಇರಿಸಲಾಗಿದೆ.

ಇದನ್ನೂ ಓದಿ ಕಾದಾಟದ ವೇಳೆ ಗಂಭೀರ ಗಾಯಗೊಂಡಿದ್ದ ಆನೆ ಮಾರ್ತಾಂಡ ಚಿಕಿತ್ಸೆ ಫಲಿಸದೆ ಸಾವು

ದುರಂತ ನಡೆದಿದ್ದು ಹೇಗೆ?

ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ವೇಳೆ ‘ಕಂಜನ್’ ಮತ್ತು ‘ಮಾರ್ತಾಂಡ’ ಆನೆಗಳ ನಡುವೆ ದಿಢೀರ್ ಕಾದಾಟ ಆರಂಭವಾಗಿತ್ತು. ಕಂಜನ್ ದಾಳಿಗೆ ಸಿಲುಕಿ ಮಾರ್ತಾಂಡ ಆನೆ ನಿಯಂತ್ರಣ ತಪ್ಪಿ ನದ ದಂಡೆಯಲ್ಲಿದ್ದ ಪ್ರವಾಸಿಗರ ಮೇಲೆ ಬಿದ್ದಿತ್ತು. ಇದರ ಅಡಿಯಲ್ಲಿ ಸಿಲುಕಿದ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಪತಿ ಮತ್ತು ಮಗು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಕಾದಾಟದಲ್ಲಿ ತೀವ್ರ ಆಂತರಿಕ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೆ ಮಾರ್ತಾಂಡ ಆನೆಯೂ ಮೃತಪಟ್ಟಿದೆ. ತಜ್ಞರ ಸಮಿತಿಯ ವರದಿಯನ್ನು ಅರಣ್ಯ ಇಲಾಖೆ ಸಕಾಲದಲ್ಲಿ ಜಾರಿಗೊಳಿಸಿದ್ದರೆ ಈ ಅಮೂಲ್ಯ ಜೀವಗಳನ್ನು ಉಳಿಸಬಹುದಿತ್ತು ಎಂದು ಸಾರ್ವಜನಿಕರು ಹಾಗೂ ವನ್ಯಜೀವಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಎಫೆಕ್ಟ್​​: ರಾಜ್ಯದಲ್ಲಿ 38 ಸಾವಿರ ಟನ್ ರಸಗೊಬ್ಬರದ ಕೊರತೆ – Kannada News | Middle East War Impact: Karnataka Faces 38,000 Ton Fertilizer Shortage Ahead of Monsoon Sowing

ಬೆಂಗಳೂರು, ಮೇ 20: ಮಧ್ಯಪ್ರಾಚ್ಯದಲ್ಲಿನ ಯುದ್ಧ ಕೇವಲ ಇಂಧನಗಳ ಅಭಾವದ ಸಮಸ್ಯೆಯನ್ನು ಮಾತ್ರ ಸೃಷ್ಟಿಸಿಲ್ಲ. ಹತ್ತು ಹಲವು ತೊಂದರೆಗಳಿಗೆ ಕಾರಣವಾಗಿದ್ದು, ಅನ್ನದಾತರನ್ನೂ ಸಂಕಷ್ಟಕ್ಕೆ ತಳ್ಳಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಸಂಕಷ್ಟದ ಪರಿಣಾಮ ರಾಜ್ಯದಲ್ಲಿ 38 ಸಾವಿರ ಟನ್ ರಸಗೊಬ್ಬರ ಕೊರತೆ ಎದುರಾಗಿದೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

14 ಸಾವಿರ ಟನ್ ಯೂರಿಯಾ ಕೊರತೆಯೂ ಇರುವುದಾಗಿ ತಿಳಿಸಿದ ಸಚಿವರು, ರೈತರು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ಪರ್ಯಾಯ ವಿಧಾನಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ರಸಗೊಬ್ಬರ ವಿತರಣೆಯಲ್ಲಿ ಅಕ್ರಮ, ದಾಸ್ತಾನು ಹಾಗೂ ಬೇರೆಡೆಗೆ ತಿರುಗಿಸುವಿಕೆ ತಪ್ಪಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿಗಾವಹಿಸಲು ಸೂಚಿಸಲಾಗಿದೆ. ಜೂನ್‌ನಲ್ಲಿ ಮುಂಗಾರು ಆರಂಭವಾಗುವ ನಿರೀಕ್ಷೆಯಿದ್ದು, ರಸಗೊಬ್ಬರ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಿದ್ಧತೆಗಳು ನಡೆಯುತ್ತಿವೆ. ನಿಜವಾದ ರೈತರಿಗೆ ಮಾತ್ರ ರಸಗೊಬ್ಬರ ವಿತರಣೆ ಆಗುವಂತೆ FRUITS ಐಡಿ ಆಧಾರಿತ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 3BHK ಫ್ಲ್ಯಾಟ್‌ಗೆ ಬರೋಬ್ಬರಿ 6.5 ಕೋಟಿ ರೂ! ಬೆಲೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು

ಕೇಂದ್ರ ಸರ್ಕಾರ ರಾಜ್ಯಕ್ಕೆ ಒಟ್ಟು 30.05 ಲಕ್ಷ ಮೆಟ್ರಿಕ್ ಟನ್ ವಿವಿಧ ರೀತಿಯ ರಸಗೊಬ್ಬರ ಹಂಚಿಕೆ ಮಾಡಿದೆ. ಇದರಲ್ಲಿ 11.10 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 4 ಲಕ್ಷ ಮೆಟ್ರಿಕ್ ಟನ್ ಡಿಎಪಿ, 2.12 ಲಕ್ಷ ಮೆಟ್ರಿಕ್ ಟನ್ ಎಂಒಪಿ, 11.88 ಲಕ್ಷ ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ರಸಗೊಬ್ಬರ ಹಾಗೂ 0.95 ಲಕ್ಷ ಮೆಟ್ರಿಕ್ ಟನ್ ಎಸ್‌ಎಸ್‌ಪಿ ಸೇರಿವೆ. ಆದರೆ ಈ ವರ್ಷ ಯೂರಿಯಾ ಆರಂಭಿಕ ದಾಸ್ತಾನು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಹಳ ಕಡಿಮೆಯಾಗಿದೆ. 2023ರಲ್ಲಿ 3.91 ಲಕ್ಷ ಮೆಟ್ರಿಕ್ ಟನ್ ಹಾಗೂ 2024ರಲ್ಲಿ 5.41 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಆರಂಭಿಕ ದಾಸ್ತಾನು ಇದ್ದರೆ, ಈ ವರ್ಷ ಅದು ಕೇವಲ 2.80 ಲಕ್ಷ ಮೆಟ್ರಿಕ್ ಟನ್‌ಗೆ ಇಳಿದಿದೆ ಎಂದವರು ತಿಳಿಸಿದ್ದಾರೆ.

ಏಪ್ರಿಲ್ ತಿಂಗಳಲ್ಲಿರಾಜ್ಯವು 4.02 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇಟ್ಟಿದ್ದರೂ, ಕೇಂದ್ರದಿಂದ ಕೇವಲ 2.54 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಇದರಿಂದ 1.48 ಲಕ್ಷ ಮೆಟ್ರಿಕ್ ಟನ್ ಕೊರತೆ ಉಂಟಾಗಿದೆ. ಇದರಲ್ಲಿ 0.38 ಲಕ್ಷ ಮೆಟ್ರಿಕ್ ಟನ್ ಡಿಎಪಿ ಹಾಗೂ 0.14 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಕೊರತೆ ಸೇರಿದೆ. ಅದೇ ರೀತಿ ಮೇ ತಿಂಗಳಲ್ಲಿ 4.54 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದ್ದರೂ, ಇದುವರೆಗೆ ಕೇಂದ್ರವು ಕೇವಲ 1.77 ಲಕ್ಷ ಮೆಟ್ರಿಕ್ ಟನ್ ಪೂರೈಕೆ ಮಾಡಿದೆ. ಇನ್ನೂ 2.77 ಲಕ್ಷ ಮೆಟ್ರಿಕ್ ಟನ್ ಬಾಕಿಯಿದೆ. ಇದರಲ್ಲಿ 0.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಹಾಗೂ 0.78 ಲಕ್ಷ ಮೆಟ್ರಿಕ್ ಟನ್ ಡಿಎಪಿ ಪೂರೈಕೆ ಆಗಬೇಕಿದೆ. ಈ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸದಿದ್ದರೆ ಬಿತ್ತನೆ ಸಮಯದ ಅವಧಿಯಲ್ಲಿ ರೈತರು ಗಂಭೀರ ಸಂಕಷ್ಟ ಎದುರಿಸಬೇಕಾಗಬಹುದು ಎಂದು ಸಚಿವರು ಎಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸೋಲು ಹೀನಾಯ ಸೋಲು… ಪಾಕಿಸ್ತಾನ್ ವೈಟ್ ವಾಶ್ಡ್​..! – Kannada News | Pakistan whitewashed by Bangladesh

ಪಾಕಿಸ್ತಾನ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಬಾಂಗ್ಲಾದೇಶ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಬಾಂಗ್ಲಾ ಪಡೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಸಿಲ್ಹೆಟ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಮೊದಲ ಇನಿಂಗ್ಸ್​ನಲ್ಲಿ 278 ರನ್ ಕಲೆಹಾಕಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಪಾಕಿಸ್ತಾನ್ 232 ರನ್​ಗಳಿಗೆ ಆಲೌಟ್ ಆಗಿದ್ದರು.

ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬಾಂಗ್ಲಾದೇಶ್ 390 ರನ್​ ಗಳಿಸಿತು. ಅದರಂತೆ ದ್ವಿತೀಯ ಇನಿಂಗ್ಸ್​ನಲ್ಲಿ 437 ರನ್​ಗಳ ಗುರಿ ಪಡೆದ ಪಾಕಿಸ್ತಾನ್ ತಂಡವು 358 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಬಾಂಗ್ಲಾದೇಶ್ ತಂಡವು ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಬರೋಬ್ಬರಿ 78 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಐತಿಹಾಸಿಕ ಸಾಧನೆ:

  • ಇದು ಬಾಂಗ್ಲಾದೇಶ್ ತಂಡವು ಪಾಕಿಸ್ತಾನ್ ವಿರುದ್ಧ ಸಾಧಿಸಿದ ಸತತ ಎರಡನೇ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಆಗಿದೆ. ಇದಕ್ಕೂ ಮುನ್ನ 2024ರ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದ ನೆಲದಲ್ಲೇ ಬಾಂಗ್ಲಾದೇಶ 2-0 ಸರಣಿ ಜಯಿಸಿ ಇತಿಹಾಸ ನಿರ್ಮಿಸಿತ್ತು. ಈಗ ತನ್ನದೇ ತಾಯ್ನಾಡಿನಲ್ಲಿ ಆ ಪ್ರಾಬಲ್ಯವನ್ನು ಮುಂದುವರಿಸಿದೆ.
  • ಹಾಗೆಯೇ ಬಾಂಗ್ಲಾದೇಶ್ ತಂಡವು ಇದೇ ಮೊದಲ ಬಾರಿಗೆ ಬ್ಯಾಕ್ ಟು ಬ್ಯಾಕ್ ಎರಡು ಸರಣಿಗಳಲ್ಲಿ ಸೋಲಿಸಿದೆ. ಅಂದರೆ ಈ ಟೆಸ್ಟ್​ ಸರಣಿಗೂ ಮುನ್ನ  ಪಾಕಿಸ್ತಾನ್ ವಿರುದ್ಧ 2-1 ಅಂತರದಿಂದ ಏಕದಿನ  ಸರಣಿ ಗೆದ್ದುಕೊಂಡಿತ್ತು. ಇದೀಗ 2-0 ಅಂತರದಿಂದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC)

ಪಾಕಿಸ್ತಾನ್ ವಿರುದ್ಧದ ಈ ಭರ್ಜರಿ ಗೆಲುವಿನೊಂದಿಗೆ ಬಾಂಗ್ಲಾದೇ್ಶ​ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಶೇಕಡಾ 58.33 ರಷ್ಟು ಗೆಲುವಿನ ಸರಾಸರಿಯೊಂದಿಗೆ 5ನೇ ಸ್ಥಾನಕ್ಕೆ ಜಿಗಿದಿದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ನಾಲ್ವರು ಹೊಸ ಆಟಗಾರರು ಎಂಟ್ರಿ..!

ಮತ್ತೊಂದೆಡೆ, ಈ ಸರಣಿ ಸೋಲಿನೊಂದಿಗೆ ಪಾಕಿಸ್ತಾನ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ. ಅಂದರೆ ಈವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿರುವ ಪಾಕಿಸ್ತಾನ್ ತಂಡ ಈವರೆಗೆ ಪಡೆದಿರುವುದು ಕೇವಲ 4 ಅಂಕಗಳನ್ನು ಮಾತ್ರ. ಹೀಗಾಗಿ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ನಲ್ಲಿ ಫೈನಲ್​ಗೇರಬೇಕಿದ್ದರೆ ಇನ್ನುಳಿದ ಎಲ್ಲಾ ಮ್ಯಾಚ್​ಗಳಲ್ಲೂ ಜಯ ಸಾಧಿಸಬೇಕಾಗುತ್ತದೆ.

Source link

ಗಡಿಪಾರಾಗಿದ್ದ ರೌಡಿಯನ್ನು ಮಗಳ ಮದುವೆ ಮಂಟಪದಿಂದಲೇ ಸಿನಿಮೀಯ ಶೈಲಿಯಲ್ಲಿ ಎಳೆದೊಯ್ದ ಪೊಲೀಸರು: ವಿಡಿಯೋ ವೈರಲ್ – Kannada News | KGF Rowdy Sheeter Arrested From Daughter Marriage Hall: Extortionist Stanley Nabbed in Filmy Style by Kolar Police

ಕೋಲಾರ, ಮೇ 20: ಕೋಲಾರ ಜಿಲ್ಲೆಯ ಕೆಜಿಎಫ್‌ (KGF) ನಗರದಲ್ಲಿ ಸಿನಿಮೀಯ ಶೈಲಿಯ ಪೊಲೀಸ್ ಕಾರ್ಯಾಚರಣೆಯೊಂದು ನಡೆದಿದೆ. ಮಗಳ ಮದುವೆ ಖರ್ಚಿಗಾಗಿ ಉದ್ಯಮಿಯೊಬ್ಬರಿಗೆ ಹೆದರಿಸಿ, ಬೆದರಿಕೆ ಹಾಕಿ ಹಪ್ತಾ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ, ಈಗಾಗಲೇ ಗಡಿಪಾರಾಗಿದ್ದ ರೌಡಿಶೀಟರ್‌ನನ್ನು ಪೊಲೀಸರು ಮದುವೆ ಮಂಟಪದಿಂದಲೇ ವಶಕ್ಕೆ ಪಡೆದಿದ್ದಾರೆ. ಕೆಜಿಎಫ್ ನಗರದ ಸುಸೈಪಾಳ್ಯಂ ಏರಿಯಾದ ನಿವಾಸಿ, ಕುಖ್ಯಾತ ರೌಡಿಶೀಟರ್ ಸ್ಟಾನ್ಲಿ ಬಂಧಿತ ಆರೋಪಿಯಾಗಿದ್ದಾನೆ. ಚರ್ಚ್‌ನಲ್ಲಿ ಮಗಳ ಮದುವೆ ಸಂಭ್ರಮದಲ್ಲಿದ್ದ ರೌಡಿಯನ್ನು ಪೊಲೀಸರು ಏಕಾಏಕಿ ಕಾರ್ಯಾಚರಣೆ ನಡೆಸಿ ಹೊತ್ತೊಯ್ದಿರುವ ದೃಶ್ಯ ಈಗ ವೈರಲ್ ಆಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮಗಳ ಮದುವೆಗೆ ಪೆಂಡಾಲ್ ಹಾಗೂ ಡೆಕೋರೇಷನ್ ಕೆಲಸ ಮಾಡಿಕೊಡುತ್ತಿದ್ದ ಅಂಗಡಿ ಮಾಲೀಕ ಮೊಹಮ್ಮದ್ ಸಕ್ಲೇನ್ ಎಂಬುವರಿಗೆ ರೌಡಿಶೀಟರ್ ಸ್ಟಾನ್ಲಿ ಭೀತಿ ಹುಟ್ಟಿಸಿದ್ದ. ತನಗೆ ಹೆದರಿಸಿ, ಬೆದರಿಕೆ ಹಾಕಿ ತನ್ನ ಮಗಳ ಮದುವೆಗೆ ಹಣ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಸಂತ್ರಸ್ತ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು. ಈಗಾಗಲೇ ನಗರದಿಂದ ಗಡಿಪಾರಾಗಿದ್ದರೂ ಕಾನೂನು ಉಲ್ಲಂಘಿಸಿ ನಗರದೊಳಗೆ ಪ್ರವೇಶಿಸಿದ್ದಲ್ಲದೆ, ಸಾರ್ವಜನಿಕರಿಗೆ ಹಪ್ತಾ ವಸೂಲಿಗಾಗಿ ಕಿರುಕುಳ ನೀಡುತ್ತಿದ್ದ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಅಲರ್ಟ್ ಆಗಿದ್ದಾರೆ.

ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶಿವಾಂಶು ರಜಪೂತ್ ಅವರ ಖಡಕ್ ಸೂಚನೆ ಮೇರೆಗೆ ಕಾರ್ಯಾಚರಣೆಗೆ ಇಳಿದ ಆಂಡರ್ಸನ್‌ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ, ಸುಸೈಪಾಳ್ಯಂ ಚರ್ಚ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಲಗ್ಗೆ ಇಟ್ಟಿದ್ದಾರೆ. ಮದುವೆ ಮಂಟಪದಲ್ಲೇ ಇದ್ದ ಆರೋಪಿ ಸ್ಟಾನ್ಲಿಯನ್ನು ಸುತ್ತುವರಿದು ಸಿನಿಮೀಯ ಶೈಲಿಯಲ್ಲಿ ಎಳೆದೊಯ್ದಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕರೆದೊಯ್ಯುತ್ತಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಎಪಿಕ್ ಫ್ಯೂರಿಯಲ್ಲಿ ಅಮೆರಿಕಕ್ಕೆ ಭಾರಿ ಪೆಟ್ಟು, ಇರಾನ್​ ಮೇಲಿನ ದಾಳಿಯಲ್ಲಿ 42 ಯುದ್ಧ ವಿಮಾನಗಳು, ಡ್ರೋನ್​ಗಳು ಧ್ವಂಸ – Kannada News | The Ghostly Cost of Epic Fury How a Single U.S. Operation Against Iran Left 42 Warplanes Damaged or Destroyed

ವಾಷಿಂಗ್ಟನ್, ಮೇ 20: ಅಮೆರಿಕ(America)ವು ಫೆಬ್ರವರಿ 28ರಂದು ಇರಾನ್ ವಿರುದ್ಧ ನಡೆಸಿದ ಹೈ-ವೋಲ್ಟೇಜ್ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಎಪಿಕ್ ಫ್ಯೂರಿ’ ವೇಳೆ ತನ್ನ ಅತ್ಯಂತ ಆಧುನಿಕ ಫೈಟರ್ ಜೆಟ್‌ಗಳು ಮತ್ತು ಡ್ರೋನ್‌ಗಳು ಸೇರಿದಂತೆ ಕನಿಷ್ಠ 42 ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಅಥವಾ ಭೀಕರವಾಗಿ ಹಾನಿಗೊಳಿಸಿಕೊಂಡಿದೆ ಎಂದು ಅಧಿಕೃತ ವರದಿ ಬಹಿರಂಗಪಡಿಸಿದೆ.

ಮಿಲಿಟರಿ ಕಾರ್ಯಾಚರಣೆಗಳ ರಹಸ್ಯ ವರ್ಗೀಕರಣ ನಿರ್ಬಂಧಗಳು, ಆ ಪ್ರದೇಶದಲ್ಲಿ ಇನ್ನೂ ನಡೆಯುತ್ತಿರುವ ಯುದ್ಧ ಮತ್ತು ಹಾನಿಯ ನಿಖರ ಮೌಲ್ಯಮಾಪನದ ಸವಾಲುಗಳಿಂದಾಗಿ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಸಿಆರ್ಎಸ್ (CRS) ವರದಿ ಹೇಳಿದೆ. ಯುಎಸ್ ರಕ್ಷಣಾ ಇಲಾಖೆ (Pentagon) ಮತ್ತು ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ (CENTCOM) ನೀಡಿದ ಆಂತರಿಕ ಹೇಳಿಕೆಗಳು ಹಾಗೂ ಮಾಧ್ಯಮ ವರದಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ಈ ಕರಡು ಸಿದ್ಧಪಡಿಸಲಾಗಿದೆ.

ಇರಾನ್‌ನ ಪ್ರತಿದಾಳಿ ಅಥವಾ ತಾಂತ್ರಿಕ ವೈಫಲ್ಯದಿಂದಾಗಿ ಅಮೆರಿಕ ಕಳೆದುಕೊಂಡ ವಿಮಾನಗಳ ಪಟ್ಟಿ ಹೀಗಿದೆ.

ಫೈಟರ್ ಜೆಟ್‌ಗಳು: 4 ಅತ್ಯಂತ ಶಕ್ತಿಶಾಲಿ F-15E ಸ್ಟ್ರೈಕ್ ಈಗಲ್ ಮತ್ತು 1 ಅತ್ಯಾಧುನಿಕ F-35A ಲೈಟ್ನಿಂಗ್ II ಜಂಟಿ ದಾಳಿ ವಿಮಾನ.

ಟ್ಯಾಂಕರ್ ವಿಮಾನಗಳು: ಶತ್ರುಗಳ ಹೆಡೆಮುರಿ ಕಟ್ಟುವ 1 A-10 ಥಂಡರ್ಬೋಲ್ಟ್ II, ಇಂಧನ ಮರುಪೂರಣ ಮಾಡುವ 7 ಬೃಹತ್ KC-135 ಸ್ಟ್ರಾಟೋಟ್ಯಾಂಕರ್ ವಿಮಾನಗಳು ಮತ್ತು 2 MC-130J ಕಮಾಂಡೋ II ವಿಮಾನಗಳು.

ಹೆಲಿಕಾಪ್ಟರ್: ಇಡೀ ಯುದ್ಧವನ್ನು ನಿಯಂತ್ರಿಸುವ 1 E-3 ಸೆಂಟ್ರಿ ವಾಯುಗಾಮಿ ಎಚ್ಚರಿಕೆ (AWACS) ವಿಮಾನ ಮತ್ತು ರಕ್ಷಣಾ ಕಾರ್ಯಾಚರಣೆಯ 1 HH-60W ಜಾಲಿ ಗ್ರೀನ್ II ​​ಹೆಲಿಕಾಪ್ಟರ್.

ಡ್ರೋನ್ ಪಡೆಗೆ ಮಾರಣಾಂತಿಕ ಪೆಟ್ಟು: ಅಮೆರಿಕದ ಹೆಮ್ಮೆಯ 24 MQ-9 ರೀಪರ್ ಡ್ರೋನ್‌ಗಳು ಮತ್ತು 1 ಹೈ-ಟೆಕ್ MQ-4C ಟ್ರೈಟಾನ್ ಕಣ್ಗಾವಲು ಡ್ರೋನ್ ಸಂಪೂರ್ಣ ನಾಶವಾಗಿವೆ.

ಮತ್ತಷ್ಟು ಓದಿ: ಭಾರತ-ಅಮೆರಿಕದಲ್ಲಲ್ಲ, ಪ್ರಧಾನಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಆತಿಥ್ಯ ವಹಿಸಲಿದೆ ಈ ರಾಷ್ಟ್ರ

29 ಬಿಲಿಯನ್ ಡಾಲರ್‌ಗೆ ಏರಿದ ಯುದ್ಧದ ವೆಚ್ಚ
ಮೇ 12 ರಂದು ನಡೆದ ಯುಎಸ್ ಸದನದ ವಿನಿಯೋಗ ಉಪಸಮಿತಿಯ ಗಂಭೀರ ವಿಚಾರಣೆಯ ಸಂದರ್ಭದಲ್ಲಿ, ಪೆಂಟಗನ್‌ನ ಕಾರ್ಯಕಾರಿ ನಿಯಂತ್ರಕ ಜೂಲ್ಸ್ ಡಬ್ಲ್ಯೂ ಹರ್ಸ್ಟ್ III ಈ ಆಘಾತಕಾರಿ ಆರ್ಥಿಕ ನಷ್ಟವನ್ನು ಒಪ್ಪಿಕೊಂಡಿದ್ದಾರೆ. ಇರಾನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಅಮೆರಿಕದ ಒಟ್ಟು ವೆಚ್ಚವು ಬರೋಬ್ಬರಿ 29 ಶತಕೋಟಿ ಡಾಲರ್‌ಗಳಿಗೆ (ಸುಮಾರು 2,42,000 ಕೋಟಿ ರೂಪಾಯಿ) ಏರಿಕೆಯಾಗಿದೆ ಎಂದು ಅವರು ಸಾಕ್ಷ್ಯ ನುಡಿದಿದ್ದಾರೆ.

ಯುದ್ಧದ ವೆಚ್ಚ ಇಷ್ಟು ದೊಡ್ಡ ಮಟ್ಟದಲ್ಲಿ ಏರಿಕೆಯಾಗಲು ಪ್ರಮುಖ ಕಾರಣ, ರಣಾಂಗಣದಲ್ಲಿ ಹಾನಿಗೊಳಗಾದ ಬಿಲಿಯನ್ ಡಾಲರ್ ಮೌಲ್ಯದ ಯುದ್ಧೋಪಕರಣಗಳ ದುರಸ್ತಿ ಮತ್ತು ಧ್ವಂಸಗೊಂಡ ವಿಮಾನಗಳ ಬದಲಿ ವೆಚ್ಚದ ಪರಿಷ್ಕೃತ ಅಂದಾಜೇ ಆಗಿದೆ ಎಂದು ಹರ್ಸ್ಟ್ ಕಳವಳ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ, ಇರಾನ್ ವಿರುದ್ಧ ಜಯಭೇರಿ ಬಾರಿಸಲು ಹೋದ ಸೂಪರ್ ಪವರ್ ಅಮೆರಿಕಗೆ, ‘ಆಪರೇಷನ್ ಎಪಿಕ್ ಫ್ಯೂರಿ’ ಇತಿಹಾಸದಲ್ಲೇ ಎಂದಿಗೂ ಮರೆಯಲಾಗದ ಆರ್ಥಿಕ ಹಾಗೂ ಮಿಲಿಟರಿ ಆಘಾತವನ್ನು ನೀಡಿದೆ ಎಂಬುದು ಈಗ ಸಾಬೀತಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹುಡುಗಿ ಕೈಕೊಟ್ಟಿದ್ದಕ್ಕೆ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಯುವಕನ ಹೈಡ್ರಾಮಾ: ಪ್ರೇಮಿಯ ಹುಚ್ಚಾಟಕ್ಕೆ ಜನರು ಕಂಗಾಲು – Kannada News | Anekal Love Failure Drama: Dejected Lover Climbs High Tension Electric Pole After Girl Rejects Marriage Proposal

ಹೈಟೆನ್ಷನ್ ಕಂಬ ಹತ್ತಿದ ಭಗ್ನ ಪ್ರೇಮಿImage Credit source: tv9

ಆನೇಕಲ್, ಮೇ 20: ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಿಸಿ ಕೈಕೊಟ್ಟಿದ್ದಾಳೆಂಬ ಕಾರಣಕ್ಕೆ ಬೇಸತ್ತ ಯುವಕನೊಬ್ಬ ಅಪಾಯಕಾರಿ ಸಾಹಸ ಮಾಡಿದ್ದಾನೆ. ಆತ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಆನೇಕಲ್ (Anekal) ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ. ಚಿನ್ನಯ್ಯನಪಾಳ್ಯದ ನಿವಾಸಿಯಾದ ಸೋಮಶೇಖರ್ ಎಂಬಾತನೇ ವಿದ್ಯುತ್ ಕಂಬದ ಮೇಲೇರಿ ಹೈಡ್ರಾಮಾ ಸೃಷ್ಟಿಸಿರುವ ಪ್ರೇಮಿ. ಈತನ ಹುಚ್ಚಾಟದಿಂದಾಗಿ ಇಡೀ ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಗಂಟೆಗಟ್ಟಲೆ ಆತಂಕದಲ್ಲಿ ಕಳೆಯುವಂತಾಯಿತು.

ಮುಖ್ಯಾಂಶಗಳು

  • ಕಳೆದ 3 ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ ಸೋಮಶೇಖರ್.
  • ಆಕೆ ಮದುವೆ ನಿರಾಕರಿಸಿ ಲವ್ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಮನನೊಂದು ಈ ಕೃತ್ಯ .
  • ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ.

ಸ್ಥಳೀಯ ಮೂಲಗಳ ಪ್ರಕಾರ, ಸೋಮಶೇಖರ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಇತ್ತೀಚೆಗೆ ಯುವತಿಯು ಮದುವೆಗೆ ನಿರಾಕರಿಸಿ, ಪ್ರೇಮ ಸಂಬಂಧವನ್ನು ಮುರಿದುಕೊಳ್ಳಲು (ಲವ್ ಬ್ರೇಕಪ್) ಮುಂದಾಗಿದ್ದಾಳೆ. ಇದರಿಂದ ತೀವ್ರ ಆಕ್ರೋಶಗೊಂಡ ಸೋಮಶೇಖರ್, ಮೊದಲು ತನ್ನ ಮನೆಯ ಮೇಲ್ಛಾವಣಿಯ ಶೀಟ್‌ಗಳನ್ನು ಒಡೆದು ದಾಂಧಲೆ ನಡೆಸಿದ್ದಾನೆ. ಅದಾದ ಬಳಿಕವೂ ಆಕ್ರೋಶ ತಣಿಯದೇ, ಮನೆ ಸಮೀಪದಲ್ಲೇ ಇದ್ದ ಭಾರಿ ಗಾತ್ರದ ಹೈಟೆನ್ಷನ್ ವಿದ್ಯುತ್ ಕಂಬದ ಮೇಲೇರಿದ್ದಾನೆ. ‘ತಾನು ಪ್ರೀತಿಸಿದ ಹುಡುಗಿ ಸ್ಥಳಕ್ಕೆ ಬರುವವರೆಗೂ ತಾನು ಯಾವುದೇ ಕಾರಣಕ್ಕೂ ಕೆಳಗೆ ಇಳಿಯುವುದಿಲ್ಲ’ ಎಂದು ಕಂಬದ ಮೇಲಿಂದಲೇ ಪಟ್ಟು ಹಿಡಿದು ಕಿರುಚಾಡಿದ್ದಾನೆ.

ಹೈಟೆನ್ಷನ್ ಕಂಬದಲ್ಲಿ ಯುವಕ: ವಿಡಿಯೋ ಇಲ್ಲಿ ನೋಡಿ

ವಿಷಯ ತಿಳಿಯುತ್ತಿದ್ದಂತೆಯೇ ಆನೇಕಲ್ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಕಂಬದ ಸುತ್ತಲೂ ನೂರಾರು ಗ್ರಾಮಸ್ಥರು ಜಮಾಯಿಸಿದ್ದು, ಯುವಕನಿಗೆ ತಿಳಿಹೇಳಿ ಕೆಳಗಿಳಿಸಲು ಶತಪ್ರಯತ್ನ ನಡೆಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಯುವಕ ಮಾತ್ರ ಕೆಳಗಿಳಿಯಲು ಒಪ್ಪದೆ ಹಠ ಹಿಡಿದಿದ್ದಾನೆ. ಕಂಬದಲ್ಲಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಆಪಾಯವಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಲು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೂ ಎನ್​​ಟಿಆರ್​​ಗೆ ಏನಾಗಿದೆ? ಕಾಡುತ್ತಿದ್ದೆಯೇ ಅನಾರೋಗ್ಯ?

ಇಂದು (ಮೇ 20) ತೆಲುಗು ಚಿತ್ರರಂಗದ ಸ್ಟಾರ್ ನಟ ಜೂ ಎನ್​​ಟಿಆರ್ (Jr NTR) ಹುಟ್ಟುಹಬ್ಬ. ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಜೂ ಎನ್​​ಟಿಆರ್ ಆಚರಿಸಿಕೊಳ್ಳುತ್ತಿದ್ದಾರೆ. ಭಾರಿ ಸಂಖ್ಯೆಯ ಅಭಿಮಾನಿಗಳು ನಟನ ಮನೆ ಬಳಿ ತೆರಳಿ ನೆಚ್ಚಿನ ನಟನಿಗೆ ಶುಭಾಶಯಗಳನ್ನು ತಿಳಿಸಿದರು. ಜೂ ಎನ್​​ಟಿಆರ್ ಸಹ ಮಧ್ಯರಾತ್ರಿ ಎದ್ದು ಬಂದು ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ಹೇಳಿದರು. ಜೂ ಎನ್​​ಟಿಆರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವ ಜೊತೆಗೆ ಅವರ ಬಗ್ಗೆ ಅವರ ಆರೋಗ್ಯದ ಬಗ್ಗೆ ಕೆಲವರು ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ವರ್ಷಗಳಿಂದಲೂ ಜೂ ಎನ್​​ಟಿಆರ್ ಅವರನ್ನು ನೋಡುತ್ತಾ ಬಂದವರಿಗೆ ಇತ್ತೀಚೆಗೆ ಅವರಲ್ಲಾಗಿರುವ ಬದಲಾವಣೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಜೂ ಎನ್​​ಟಿಆರ್ ಖಂಡಿತ ಹೀಗಿರಲಿಲ್ಲ. ಅವರಿಗೆ ಏನೋ ಆಗಿದೆ.

ಜೂ ಎನ್​​ಟಿಆರ್ ಮೊದಲು ಬಹಳ ದಪ್ಪ ಇದ್ದರು. ಆದರೆ 2007 ರಲ್ಲಿ ತೂಕ ಇಳಿಸಿಕೊಂಡು ಸಣ್ಣಗಾದರು. ಬಳಿಕ ಅವರ ವೃತ್ತಿ ಜೀವನ ಇನ್ನೂ ಏರುಗತಿ ಹಿಡಿಯಿತು. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದರು. ತೆರೆಯ ಮೇಲೆ ಮತ್ತು ತೆರೆಯಾಚೆಯ ವ್ಯಕ್ತಿತ್ವದಿಂದಲೂ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದರು. ಜೂ ಎನ್​​ಟಿಆರ್ ಅನ್ನು ತೆರೆಯ ಮೇಲೆ ನೋಡುವುದೇ ಒಂದು ಆನಂದವಾಗಿತ್ತು.

ಅವರ ಸಿನಿಮಾಗಳಷ್ಟೆ ಅವರ ಸಂದರ್ಶನಗಳು ಸಹ ಬಹಳ ಮಜವಾಗಿರುತ್ತಿದ್ದವು. ಜೂ ಎನ್​​ಟಿಆರ್ ಅದ್ಭುತವಾದ ಮಾತುಗಾರ. ಬಹಳ ತಮಾಷೆ ಪ್ರವೃತ್ತಿಯ ವ್ಯಕ್ತಿತ್ವ ಅವರದ್ದು. ಮುಖದ ಮೇಲೆ ಸದಾ ನಗು ಇದ್ದೇ ಇರುತ್ತಿತ್ತು. ಆದರೆ ಅದೆಲ್ಲ ಈಗ ಮಾಯವಾದಂತೆ ಕಾಣುತ್ತಿದೆ. ಇತ್ತೀಚೆಗಿನ ಜೂ ಎನ್​​ಟಿಆರ್ ಅವರ ವಿಡಿಯೋ, ಫೋಟೊಗಳು ನೋಡಿದರೆ ಜೂ ಎನ್​​ಟಿಆರ್ ಯಾವುದೋ ನೋವಿನಲ್ಲಿರುವಂತೆ ಭಾಸವಾಗುತ್ತದೆ. ಅವರ ಮುಖದಲ್ಲಿ ಹಿಂದಿನ ಕಳೆಯೇ ಇಲ್ಲವಲ್ಲ ಎನಿಸುತ್ತದೆ. ಮುಖ್ಯವಾದ ಅವರ ಮುಖದಲ್ಲಿ ಆ ಅದ್ಭುತ ನಗು ಮಾಯವಾಗಿದೆ.

ಇದನ್ನೂ ಓದಿ:ನಟ ಜೂ ಎನ್​ಟಿಆರ್ ಸಿಎಂ ಆಗಲಿದ್ದಾರೆ: ಶಾಸಕ ಹೇಳಿಕೆ

ಜೂ ಎನ್​​ಟಿಆರ್ ಅವರಿಗೆ ಅದ್ಭುತವಾದ ಚುರುಕುತನ, ಎನರ್ಜಿ ಇತ್ತು. ಅವರು ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಂಡರು ಆ ಎನರ್ಜಿ, ಚುರುಕುತನ ಎದ್ದು ಕಾಣುತ್ತಿತ್ತು. ನಗುತ್ತಾ, ಜೊತೆಗಿದ್ದವರ ನಗಿಸುತ್ತಾ ಇರುತ್ತಿದ್ದರು. ‘ಆರ್​ಆರ್​​ಆರ್’ ಸಿನಿಮಾ ಸಮಯದ ಯಾವುದೇ ಸಂದರ್ಶನ ತೆಗೆದು ನೋಡಿ, ಅಲ್ಲಿ ಶೈನ್ ಆಗಿದ್ದೇ ಜೂ ಎನ್​​ಟಿಆರ್. ತಮ್ಮ ತಮಾಷೆ ಉತ್ತರಗಳು, ರಾಮ್ ಚರಣ್ ಜೊತೆಗೆ ತುಂಟಾಟ ಸಖತ್ ಮಜಾ ಕೊಡುತ್ತಿದ್ದವು. ಆದರೆ ಇತ್ತೀಚೆಗೆ ಜೂ ಎನ್​​ಟಿಆರ್ ಮುಖದಲ್ಲಿ ಸಪ್ಪೆ ತನ ತುಂಬಿಕೊಂಡಿದೆ.

ಇಂದು ‘ಡ್ರ್ಯಾಗನ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್​​ನಲ್ಲಿ ಜೂ ಎನ್​​ಟಿಆರ್ ಸಖತ್ ಫಿಟ್ ಆಗಿ ಕಾಣುತ್ತಿದ್ದಾರೆ ಆದರೆ ಮುಖದಲ್ಲಿ ಹಿಂದೆ ಇದ್ದ ಕಳೆ ಮಾಯವಾಗಿದೆ. ಜೂ ಎನ್​​ಟಿಆರ್ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆಯೇ? ಅಥವಾ ಮಾನಸಿಕ ಸಮಸ್ಯೆಗಳು ಏನಾದರೂ ಎದುರಾಗಿದೆಯೇ ಎಂದು ಅಭಿಮಾನಿಗಳು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಹಿಂದಿನ ಜೂ ಎನ್​​ಟಿಆರ್ ಅನ್ನು ಕಾಣಲು ಬಯಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಕ್ಷಿತಾ ಶೆಟ್ಟಿ ಶ್ವಾನ ಪ್ರೇಮ; ಕೋಳಿ ಬೇಯಿಸಿಕೊಟ್ಟ ಬಿಗ್ ಬಾಸ್ ರನ್ನರ್ ಅಪ್ – Kannada News | Bigg Boss Fame Rakshita Shetty feed Chicken To Dogs

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More

Source link

Exit mobile version