ಶಿಮ್ಲಾ, ಮಾರ್ಚ್ 22: ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಉಂಟಾಗಿದೆ. ಮಂಡಿ ಜಿಲ್ಲೆಯ ಕೋಟ್ಲಿ ಹಳ್ಳಿಯಲ್ಲಿ ಭೂಕುಸಿತ ಉಂಟಾಗಿದೆ. ಬಂಡೆ, ಮಣ್ಣು ಎಲ್ಲವೂ ರಸ್ತೆಗೆ ಅಡ್ಡವಾಗಿ ಬಿದ್ದಿವೆ. ಎರಡು ದಿನಗಳ ಹಿಂದಷ್ಟೇ ಕುಲ್ಲುವಿನ ಪಾರ್ವತಿ ಕಣಿವೆಯಲ್ಲಿ, ಘಾಟಿಗಢದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ್ದರಿಂದ ಮಣಿಕರಣ್-ಬರ್ಶೈನಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಜಚ್ನಿಯಲ್ಲಿ ಮಣ್ಣು ಕುಸಿತ ಸಂಭವಿಸಿ ಭುಂತರ್-ಮಣಿಕರಣ್ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸಂಪರ್ಕ ರಸ್ತೆಯ ಎರಡೂ ಬದಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದೀಗ ಕೋಟ್ಲಿಯಲ್ಲೂ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಜೊತೆಗೆ ಸೆಲೆಬ್ರಿಟಿಗಳ ಮೆಚ್ಚುಗೆಯನ್ನೂ ಗಳಿಸುತ್ತಿದೆ. ಪವನ್ ಕಲ್ಯಾಣ್ ಮಾಜಿ ಪತ್ನಿ, ನಟಿ ರೇಣು ದೇಸಾಯಿ (Renu Desai) ಅವರು ಈ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗಿರುವ ಅಭಿಮಾನವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ‘ನಾನು ಮೋದಿಜಿಯ ಹೆಮ್ಮೆಯ ಅಂಧಭಕ್ತೆ’ ಎಂದು ಅವರು ಹೇಳಿದ್ದಾರೆ. ಅವರ ಈ ಮಾತಿನ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.
ರೇಣು ದೇಸಾಯಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಿನಿಮಾ ಆರಂಭದಲ್ಲಿ ಬರುವ ಭಗವದ್ಗೀತೆಯ ಶ್ಲೋಕವನ್ನು (ಅಧ್ಯಾಯ 2, ಶ್ಲೋಕ 47) ಹಂಚಿಕೊಂಡಿದ್ದಾರೆ. ಅದರ ಜೊತೆಗೆ, ‘ನಮ್ಮ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಬಗ್ಗೆ ನಿಮಗೆ ಕಿಂಚಿತ್ತಾದರೂ ಗೌರವವಿದ್ದರೆ, ಈ ಸಿನಿಮಾ ನೋಡಿ. ಅವರ ಕಾರಣದಿಂದಲೇ ನಾವು ಮನೆಯಲ್ಲಿ ಶಾಂತಿಯಿಂದ ನಿದ್ದೆ ಮಾಡುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
‘ಧುರಂಧರ್ 2’ ಸಿನಿಮಾದ ಒಂದು ದೃಶ್ಯದಲ್ಲಿ ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ (ಬಡೇ ಸಾಹಬ್ ಪಾತ್ರ), ‘ಈ ಚಾಯ್‌ವಾಲಾ ಭಾರತದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಮ್ಮವರಲ್ಲಿ ಭಯ ಹೆಚ್ಚಾಗಿದೆ’ ಎಂದು ಹೇಳುವ ಸಂಭಾಷಣೆಯಿದೆ. ಈ ದೃಶ್ಯದ ವಿಡಿಯೋವನ್ನು ಹಂಚಿಕೊಂಡಿರುವ ರೇಣು ದೇಸಾಯಿ, ‘ಬಿಜೆಪಿ ಮತ್ತು ನಮ್ಮ ಅದ್ಭುತ ಪ್ರಧಾನಿ ಮೋದಿಜಿಯ ಹೆಮ್ಮೆಯ ಅಂಧಭಕ್ತೆ ನಾನು’ ಎಂದು ಬರೆದುಕೊಳ್ಳುವ ಮೂಲಕ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಈ ಸಿನಿಮಾದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಅನೇಕರು ಈ ಸಿನಿಮಾವನ್ನು ಒಂದು ಪ್ರೊಪಗಾಂಡ ಎಂದು ಕರೆದಿದ್ದಾರೆ. ಸಾಕಷ್ಟು ನೆಗೆಟಿವ್ ವಿಮರ್ಶೆಗಳು ಬರುತ್ತಿವೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದರ ನಡುವೆಯೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
2025ರ ಸೂಪರ್ ಹಿಟ್ ‘ಧುರಂಧರ್’ ಚಿತ್ರದ ಸೀಕ್ವೆಲ್ ಆಗಿರುವ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರ್ದೇಶಕ ಆದಿತ್ಯ ಧರ್ ಅವರು ಈ ಸಿನಿಮಾದಿಂದ ಜನಪ್ರಿಯತೆ ಹೆಚ್ಚಿಕೊಂಡಿದ್ದಾರೆ. ಈಗಾಗಲೇ ಭಾರತದಲ್ಲಿ ಈ ಸಿನಿಮಾದ ಕಲೆಕ್ಷನ್ 300 ಕೋಟಿ ರೂಪಾಯಿ ಮೀರಿದೆ.
ಉಡುಪಿ, ಮಾರ್ಚ್ 22: ಜಿಲ್ಲೆಯ ರಾಜಕೀಯದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವಾಗ್ವಾದ ಜೋರಾಗಿದೆ. ಮಾಜಿ ಶಾಸಕ ರಘುಪತಿ ಭಟ್ ಹಾಲಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಡಾನಿಡಿಯೂರು (Udupi)ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ತಾನು ಸಲ್ಲಿಸಿದ ಸಿಂಗಲ್ ಲೇಔಟ್ ಅರ್ಜಿಗೆ ಉದ್ದೇಶಪೂರ್ವಕವಾಗಿ ಅಡ್ಡಿ ಮಾಡಲಾಗುತ್ತಿದೆ ಎಂದು ಭಟ್ ಆರೋಪಿಸಿದ್ದಾರೆ.
ಶಾಸಕರ ಒತ್ತಡದಿಂದಲೇ ಅನುಮತಿ ಸಿಗುತ್ತಿಲ್ಲವೆಂದ ರಘುಪತಿ ಭಟ್
2024ರ ಮಾರ್ಚ್ 20ರಂದು ಅರ್ಜಿ ಸಲ್ಲಿಸಿದ್ದರೂ, ಮೂರು ತಿಂಗಳಲ್ಲಿ ಸಿಗಬೇಕಿದ್ದ ಅನುಮತಿ ಎರಡು ವರ್ಷವಾದರೂ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಶಾಸಕರ ಒತ್ತಡದಿಂದಲೇ ಅನುಮತಿ ನೀಡುತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಇದಲ್ಲದೆ, ಹೈಕೋರ್ಟ್ 30 ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಅದನ್ನು ಪಾಲಿಸಿಲ್ಲ ಎನ್ನುವುದು ಅವರ ಮತ್ತೊಂದು ಆಕ್ಷೇಪ. ಸಿ.ಆರ್.ಝೆಡ್, ಜೋನ್ ಚೇಂಜ್ ಹಾಗೂ ಕಮರ್ಷಿಯಲ್ ಕನ್ವರ್ಷನ್ ಸೇರಿದಂತೆ ಅಗತ್ಯ ಅನುಮತಿಗಳು ಈಗಾಗಲೇ ಲಭಿಸಿದ್ದರೂ, ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಕ್ರಿಯೆ ತಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆ ಶಾಸಕನ ಧೋರಣೆಯನ್ನು ಖಂಡಿಸಿ ಸೋಮವಾರದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಮುಂಭಾಗದಲ್ಲಿ ನಿರಂತರ ಧರಣಿ ನಡೆಸುವುದಾಗಿ ರಘುಪತಿ ಭಟ್ ಘೋಷಿಸಿದ್ದಾರೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇನೆ. ಇದು ರಾಜಕೀಯ ಹೋರಾಟವಲ್ಲ, ವೈಯಕ್ತಿಕ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ ಎಂದು ಹೇಳಿಕೊಂಡಿದ್ದಾರೆ.
ಉಡುಪಿಯಲ್ಲಿ ಇಂತಹ ರಾಜಕೀಯ ದ್ವೇಷದ ಘಟನೆಗಳು ಹಿಂದೆ ಕಂಡಿಲ್ಲ ಎಂದ ಅವರು, ಬೇರೆ ಪಕ್ಷದವರಾದರೂ ವೈಯಕ್ತಿಕ ಉದ್ಯಮಕ್ಕೆ ಅಡ್ಡಿಪಡಿಸುವ ಸಂಪ್ರದಾಯ ಇಲ್ಲ ಎಂದಿದ್ದಾರೆ. ಇನ್ನು, ಯಶ್ ಪಾಲ್ ಸುವರ್ಣ ಶಾಸಕರಾಗಲು ತಾನು ಸಹಕಾರ ನೀಡಿದ್ದೇನೆ ಎಂದು ಹೇಳಿದ ಭಟ್, ಈಗ ಅದೇ ವ್ಯಕ್ತಿಯಿಂದ ಅಡಚಣೆ ಎದುರಿಸುತ್ತಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನವದೆಹಲಿ, ಮಾರ್ಚ್ 22: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಎಲ್ಪಿಜಿ ಪೂರೈಕೆಯನ್ನು ಶೇ 50ಕ್ಕೆ ಹೆಚ್ಚಿಸಿದೆ. ರೆಸ್ಟೋರೆಂಟ್, ಹೊಟೆಲ್, ಕೈಗಾರಿಕಾ ಕ್ಯಾಂಟೀನ್, ಆಹಾರ ಸಂಸ್ಕರಣಾ ಘಟಕಗಳು ಮತ್ತು ಸಮುದಾಯ ಅಡುಗೆಮನೆಗಳಿಗೆ ಆದ್ಯತೆ ಕೊಟ್ಟು ಕಮರ್ಷಿಯಲ್ ಎಲ್ಪಿಜಿ ನಿಯೋಜನೆಯನ್ನು (LPG Allocation) ಶೇ. 20ಕ್ಕೆ ಏರಿಸಲಾಗಿದೆ. ಇದರೊಂದಿಗೆ ಒಟ್ಟು ನಿಯೋಜನೆ ಶೇ. 50ಕ್ಕೆ ಏರಿಕೆಯಾಗಿದೆ. ಅಂದರೆ, ಕಮರ್ಷಿಯಲ್ ಎಲ್ಪಿಜಿಗೆ ಇರುವ ಬೇಡಿಕೆ ಮತ್ತು ಅವಶ್ಯಕತೆಯ ಶೇ. 50ರಷ್ಟನ್ನು ಪೂರೈಸಲಾಗುತ್ತದೆ.
ಎಲ್ಪಿಜಿ ಬಿಕ್ಕಟ್ಟು ಉದ್ಭವವಾದಾಗ ಕಮರ್ಷಿಯಲ್ ಎಲ್ಪಿಜಿ ಪೂರೈಕೆಯನ್ನು ನಿಲ್ಲಿಸಲಾಯಿತು. ಗೃಹಬಳಕೆ ಗ್ಯಾಸ್ಗಳ ಸರಬರಾಜು ಮಾತ್ರ ಅಬಾಧಿತವಾಗಿತ್ತು. ನಂತರ, ಕಮರ್ಷಿಯಲ್ ಗ್ಯಾಸ್ ಬಳಕೆದಾರರಿಗೆ ಶೇ. 20ರಷ್ಟು ಪೂರೈಕೆಗೆ ವ್ಯವಸ್ಥೆ ಮಾಡಲಾಯಿತು. ನಂತರ ಶೇ. 10 ಹೆಚ್ಚಿಸಲಾಯಿತು. ಇದೀಗ ಮತ್ತಷ್ಟು ಶೇ. 20 ಪೂರೈಕೆ ಹೆಚ್ಚಿಸಲಾಗಿದೆ.
ರೆಸ್ಟೋರೆಂಟ್, ಕ್ಯಾಂಟೀನ್ ಇತ್ಯಾದಿಗಳಿಗೆ ಈ ಕಮರ್ಷಿಯಲ್ ಎಲ್ಪಿಜಿ ಪೂರೈಕೆ ಆದ್ಯತೆ ಮೇಲೆ ಆಗುತ್ತದೆ. ಆಯಾ ತೈಲ ಮಾರುಕಟ್ಟೆ ಕಂಪನಿಗಳು ಸರ್ಕಾರ ನಿಗದಿ ಮಾಡಿದ ಬ್ಯುಸಿನೆಸ್ಗಳನ್ನು ಗುರುತಿಸಿ ಆ ಗ್ರಾಹಕರಿಗೆ ಸೀಮಿತ ಪ್ರಮಾಣದಲ್ಲಿ ಎಲ್ಪಿಜಿ ಪೂರೈಕೆ ಮಾಡುತ್ತವೆ.
ಪಿಎನ್ಜಿಗೆ ಒತ್ತು
ಸರ್ಕಾರವು ವಿವಿಧ ಕಮರ್ಷಿಯಲ್ ಕಂಪನಿಗಳಿಗೆ ಎಲ್ಪಿಜಿ ಬದಲು ಪಿಎನ್ಜಿಗೆ ವರ್ಗವಾಗುವಂತೆ ಉತ್ತೇಜಿಸುತ್ತಿದೆ. ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಕಮರ್ಷಿಯಲ್ ಸಂಸ್ಥೆಗಳು ತೈಲ ಕಂಪನಿಗಳೊಂದಿಗೆ ಪಿಎನ್ಜಿ ಕನೆಕ್ಷನ್ಗೆ ನೊಂದಾಯಿಸಿಕೊಳ್ಳಬಹುದು.
ಎಲ್ಪಿಜಿ ಪೂರೈಕೆಯಲ್ಲಿ ಕೊರತೆ ಇಲ್ಲ ಎನ್ನುತ್ತಿದೆ ಸರ್ಕಾರ
ಸದ್ಯಕ್ಕೆ ಎಲ್ಪಿಜಿ ಪೂರೈಕೆ ಸ್ಥಿರವಾಗಿದ್ದು, ಎಲ್ಲಿಯೂ ಕೊರತೆ ಇಲ್ಲ ಎಂದು ಸರ್ಕಾರ ಹೇಳಿದೆ. ಪ್ಯಾನಿಕ್ ಬುಕಿಂಗ್ಗಳು ಕಡಿಮೆ ಆಗಿವೆ. ಪೆಟ್ರೋಲ್ ಮತ್ತು ಡೀಸಲ್ ಪೂರೈಕೆಯೂ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಎಲ್ಪಿಜಿ ಸಿಲಿಂಡರ್ಗಳನ್ನು ಅಕ್ರಮವಾಗಿ ದಾಸ್ತಾನು ಮಾಡುತ್ತಿರುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಎಲ್ಪಿಜಿ ವಿತರಣೆ ಸರಿಯಾಗಿ ಆಗುತ್ತಿರುವುದನ್ನು ಖಚಿತಪಡಿಸಲು ರಾಜ್ಯ ಸರ್ಕಾರಗಳು ಮೇಲ್ವಿಚಾರಣಾ ಸಮಿತಿ ಮತ್ತು ಕಂಟ್ರೋಲ್ ರೂಮ್ಗಲನ್ನು ಸ್ಥಾಪಿಸಿವೆ.
ಹಿಂದೂ ಸಂಪ್ರದಾಯದ ಪ್ರಕಾರ, ವಾರದ ಮೊದಲ ದಿನವಾದ ಭಾನುವಾರವನ್ನು ರವಿವಾರ ಅಥವಾ ಭಾನುವಾರ ಎಂದು ಕರೆಯಲಾಗುತ್ತದೆ. ‘ರವಿ’ ಮತ್ತು ‘ಭಾನು’ ಎಂಬ ಪದಗಳು ಸೂರ್ಯನಿಗೆ ಸಮಾನಾರ್ಥಕಗಳಾಗಿವೆ. ಪ್ರಾಚೀನ ಕಾಲದಲ್ಲಿ ನಮ್ಮ ಋಷಿಮುನಿಗಳು ಆಕಾಶದಲ್ಲಿ ಗ್ರಹಗಳ ಚಲನೆಯನ್ನು ಆಧರಿಸಿ ಸಮಯವನ್ನು ಲೆಕ್ಕಹಾಕುತ್ತಿದ್ದರು. ಋಗ್ವೇದದಲ್ಲಿ “ಸೂರ್ಯ ಆತ್ಮ ಜಗತಸ್ಥಶ್ಚ” ಎಂದು ವರ್ಣಿಸಲಾಗಿದೆ, ಅಂದರೆ ಈ ಸೃಷ್ಟಿಯಲ್ಲಿರುವ ಚಲಿಸುವ ಮತ್ತು ಚಲಿಸದ ಸಮಸ್ತ ಜೀವಿಗಳ ಆತ್ಮವೇ ಸೂರ್ಯ. ಸೂರ್ಯನಿಲ್ಲದೆ ಈ ಭೂಮಿಯ ಮೇಲೆ ಜೀವಸಂಕುಲ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ, ಆದ್ದರಿಂದಲೇ ಸೂರ್ಯನನ್ನು ನಾವು ಕಣ್ಣಿಗೆ ಕಾಣುವ ‘ಪ್ರತ್ಯಕ್ಷ ದೈವ’ ಎಂದು ಆರಾಧಿಸುತ್ತೇವೆ.
ಭಾನುವಾರವು ಕೇವಲ ವಿಶ್ರಾಂತಿ ಪಡೆಯುವ ರಜಾದಿನವಲ್ಲ, ಬದಲಾಗಿ ಇದು ದೇಹವನ್ನು ಶುದ್ಧೀಕರಿಸುವ ಉಪವಾಸದ ದಿನವಾಗಿದೆ. ನಮ್ಮ ದೇಹದಲ್ಲಿ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ‘ಜಠರಾಗ್ನಿ’ ಎಂದು ಕರೆಯಲಾಗುತ್ತದೆ ಮತ್ತು ಈ ಅಗ್ನಿಯು ಆಕಾಶದಲ್ಲಿರುವ ಸೂರ್ಯನ ಪ್ರಖರತೆಯೊಂದಿಗೆ ನೇರ ಸಂಬಂಧ ಹೊಂದಿದೆ. ವಾರವಿಡೀ ಸತತವಾಗಿ ಕೆಲಸ ಮಾಡುವ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಒಂದು ದಿನದ ವಿಶ್ರಾಂತಿ ಅತ್ಯಗತ್ಯ. ಭಾನುವಾರದಂದು ಲೌಕಿಕ ಕೆಲಸಗಳನ್ನು ಬದಿಗಿಟ್ಟು ಉಪವಾಸ ಅಥವಾ ಮಿತಾಹಾರದ ಮೂಲಕ ದೇಹಕ್ಕೆ ವಿಶ್ರಾಂತಿ ನೀಡಿದಾಗ, ಸೂರ್ಯನ ಶಕ್ತಿಯು ನೇರವಾಗಿ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಇದು ವಾರವಿಡೀ ಹಾನಿಗೊಳಗಾದ ಜೀವಕೋಶಗಳನ್ನು (Cells) ಪುನಶ್ಚೇತನಗೊಳಿಸಲು ಮತ್ತು ದೇಹದ ಆಂತರಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಈ ಪವಿತ್ರ ದಿನದಂದು ಕೆಲವು ವಿಶಿಷ್ಟ ಅಭ್ಯಾಸಗಳನ್ನು ಅನುಸರಿಸುವುದು ಬಹಳ ಪ್ರಯೋಜನಕಾರಿ. ಮೊದಲನೆಯದಾಗಿ, ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಸೂರ್ಯೋದಯಕ್ಕೂ ಮುನ್ನ ಎಚ್ಚರಗೊಳ್ಳುವುದು ಅತ್ಯುತ್ತಮ. ಈ ಸಮಯದಲ್ಲಿ ಗಾಳಿಯು ಅತ್ಯಂತ ತಾಜಾ ಮತ್ತು ಪ್ರಾಣಶಕ್ತಿಯಿಂದ ಕೂಡಿರುತ್ತದೆ. ಸ್ನಾನದ ನಂತರ, ಉದಯಿಸುತ್ತಿರುವ ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಅರ್ಪಿಸುವುದು (ಸೂರ್ಯ ಅರ್ಘ್ಯ) ಶ್ರೇಷ್ಠವಾದುದು. ಬೀಳುವ ನೀರಿನ ಧಾರೆಗಳ ಮೂಲಕ ಸೂರ್ಯನನ್ನು ನೋಡುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುವುದಲ್ಲದೆ, ಮನಸ್ಸಿನಲ್ಲಡಗಿರುವ ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ. ಇದರೊಂದಿಗೆ ಎಳೆಯ ಬಿಸಿಲಿನಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಬೆನ್ನುಮೂಳೆಯು ಬಲಗೊಳ್ಳುತ್ತದೆ ಮತ್ತು ದೇಹದಲ್ಲಿನ ಆಲಸ್ಯವು ದೂರವಾಗಿ ಚೈತನ್ಯ ಮೂಡುತ್ತದೆ.
ಆಹಾರ ಮತ್ತು ಆಧ್ಯಾತ್ಮಿಕ ಚಿಂತನೆಯ ವಿಷಯಕ್ಕೆ ಬಂದರೆ, ಭಾನುವಾರ ಸಾತ್ವಿಕ ಜೀವನಕ್ಕೆ ಒತ್ತು ನೀಡಬೇಕು. ಸಾಧ್ಯವಾದರೆ ಒಂದು ಹೊತ್ತಿನ ಊಟವನ್ನು ಬಿಟ್ಟು ಹಣ್ಣುಗಳನ್ನು ಮಾತ್ರ ಸೇವಿಸಿ ಉಪವಾಸ ಮಾಡುವುದು ಉತ್ತಮ. ಉಪವಾಸ ಸಾಧ್ಯವಾಗದಿದ್ದರೆ ಮಾಂಸಾಹಾರವನ್ನು ತ್ಯಜಿಸಿ, ಕಡಿಮೆ ಉಪ್ಪಿನಿಂದ ಕೂಡಿದ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಇದರ ಜೊತೆಗೆ ಶಾಂತವಾಗಿ ಕುಳಿತು ಹತ್ತು ನಿಮಿಷಗಳ ಕಾಲ ‘ಗಾಯತ್ರಿ ಮಂತ್ರ’ ಪಠಿಸುವುದು ಅಥವಾ ‘ಆದಿತ್ಯ ಹೃದಯ’ ಸ್ತೋತ್ರವನ್ನು ಕೇಳಿಸಿಕೊಳ್ಳುವುದು ಮೆದುಳಿನ ನರಗಳನ್ನು ಉತ್ತೇಜಿಸುತ್ತದೆ. ಈ ಮಂತ್ರಗಳ ಶಬ್ದ ತರಂಗಗಳು ಮನಸ್ಸಿಗೆ ಅತೀವ ಶಾಂತಿ ಮತ್ತು ಧನಾತ್ಮಕ ಶಕ್ತಿಯನ್ನು ನೀಡುತ್ತವೆ.
ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗೆ ಸೂರ್ಯಾರಾಧನೆಯು ವರದಾನವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಏಕಾಗ್ರತೆ, ದೃಢ ಸಂಕಲ್ಪ ಮತ್ತು ನಾಯಕತ್ವದ ಗುಣಗಳನ್ನು ಪ್ರತಿನಿಧಿಸುತ್ತಾನೆ. ಭಾನುವಾರ ಸೂರ್ಯನನ್ನು ಪೂಜಿಸುವುದರಿಂದ ಬುದ್ಧಿಶಕ್ತಿ ತೀಕ್ಷ್ಣಗೊಳ್ಳುತ್ತದೆ, ಮನಸ್ಸಿನ ಗೊಂದಲಗಳು ನಿವಾರಣೆಯಾಗಿ ಅಧ್ಯಯನದ ಮೇಲೆ ಅಸಾಧಾರಣ ಗಮನ ಹರಿಸಲು ಸಾಧ್ಯವಾಗುತ್ತದೆ. ವೈಜ್ಞಾನಿಕವಾಗಿಯೂ ಬೆಳಗಿನ ಸೂರ್ಯನ ಕಿರಣಗಳಿಗೆ ದೇಹವನ್ನು ಒಡ್ಡುವುದರಿಂದ ವಿಟಮಿನ್ ಡಿ (Vitamin D) ಲಭಿಸಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗೆ ಭಾನುವಾರವನ್ನು ಶಿಸ್ತುಬದ್ಧವಾಗಿ ಕಳೆಯುವುದರಿಂದ ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ಕಾಣಬಹುದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆದಿತ್ಯ ಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ‘ಧುರಂಧರ್ 2’ (Dhurandhar 2) ಚಿತ್ರಕ್ಕೆ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಫಿದಾ ಆಗಿದ್ದಾರೆ. ಚಿತ್ರದ ಬಗ್ಗೆ ಸುದೀರ್ಘ ವಿಡಿಯೋ ಹಂಚಿಕೊಂಡಿರುವ ಅವರು, ‘ಇದೊಂದು ಕೇವಲ ಸಿನಿಮಾವಲ್ಲ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತಹ ಅನುಭವ’ ಎಂದು ಬಣ್ಣಿಸಿದ್ದಾರೆ. ಮಾರ್ಚ್ 21ರಂದು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡ ಅನುಪಮ್ ಖೇರ್ (Anupam Kher), ಸಿನಿಮಾ ನೋಡಿದ ತಕ್ಷಣ ನಿರ್ದೇಶಕ ಆದಿತ್ಯ ಧರ್ ಅವರಿಗೆ ಫೋನ್ ಮಾಡಿ ಅಭಿನಂದಿಸಿರುವುದಾಗಿ ತಿಳಿಸಿದ್ದಾರೆ.
‘ಕೆಲವೊಮ್ಮೆ ಪದಗಳು ಸಾಲುವುದಿಲ್ಲ. ಸಿನಿಮಾ ಮುಗಿಸಿ ಹೊರಬಂದಾಗ ನಿಮ್ಮೊಳಗೆ ಒಂದು ಮೌನವಿರುತ್ತದೆ, ಅದು ಎಲ್ಲವನ್ನೂ ಹೇಳುತ್ತದೆ. ಧುರಂಧರ್ ಅಂತಹದ್ದೇ ಒಂದು ಅನುಭವ. ಇದು ನಿಮ್ಮ ಹೃದಯವನ್ನು ತಟ್ಟುತ್ತದೆ’ ಎಂದು ಬರೆದುಕೊಂಡಿದ್ದಾರೆ. ಚಿತ್ರದ ವಿರುದ್ಧ ಕೇಳಿಬರುತ್ತಿರುವ ಪ್ರೊಪಗಾಂಡ ಅಥವಾ ಅತಿರೇಕದ ದೇಶಭಕ್ತಿ ಎಂಬ ಟೀಕೆಗಳ ಬಗ್ಗೆ ಅನುಪಮ್ ಖೇರ್ ಕಿಡಿಕಾರಿದ್ದಾರೆ.
‘ಈ ಚಿತ್ರವನ್ನು ಪ್ರೊಪಗಾಂಡ ಎಂದು ಕರೆಯುವವರ ಬಗ್ಗೆ ನನಗೆ ಕನಿಕರವೆನಿಸುತ್ತದೆ. ಅವರಿಗೆ ನಾಚಿಕೆಯಾಗಬೇಕು. ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೂ ಹೀಗೆಯೇ ಹೇಳಿದ್ದರು. ನಿಮಗೆ ಇಂತಹ ಚಿತ್ರಗಳನ್ನು ಸಹಿಸಲು ಸಾಧ್ಯವಾಗದಿದ್ದರೆ, ನೀವೇ ಹಣ ಹೂಡಿ, ಬರಹಗಾರರನ್ನು ಇಟ್ಟುಕೊಂಡು ಸಿನಿಮಾ ಮಾಡಿ’ ಎಂದು ಅನುಪಮ್ ಖೇರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆಧುನಿಕ ಭಾರತದ ವ್ಯವಸ್ಥೆ ಮತ್ತು ಏಜೆನ್ಸಿಗಳು ಎಷ್ಟು ಸಮರ್ಥವಾಗಿವೆ ಎಂಬುದನ್ನು ಈ ಸಿನಿಮಾ ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಟನೆಯ ಶಾಲೆಯನ್ನು ನಡೆಸುತ್ತಿರುವ ಅನುಪಮ್ ಖೇರ್ ಅವರು ‘ಧುರಂಧರ್ 2’ ಸಿನಿಮಾದಲ್ಲಿನ ರಣವೀರ್ ಸಿಂಗ್ ಅಭಿನಯವನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ. ‘ನಾನೊಬ್ಬ ನಟನಾ ಶಿಕ್ಷಕ. ಒಬ್ಬ ನಟನಿಗೆ ನಾನು ಸಲಾಂ ಹೊಡೆಯಬೇಕೆಂದರೆ ಅದಕ್ಕೆ ಬಹಳ ಸಮಯ ಮತ್ತು ಮನವರಿಕೆ ಬೇಕು. ಆದರೆ ರಣವೀರ್, ನಿಮ್ಮ ಬಾಡಿ ಲಾಂಗ್ವೇಜ್, ನಿಮ್ಮ ಒಳಗಿನ ಸಿಟ್ಟು ಮತ್ತು ನೋವು ಅದ್ಭುತವಾಗಿ ಮೂಡಿಬಂದಿದೆ. ಕೆಲವು ದೃಶ್ಯಗಳಲ್ಲಿ ನಿಮ್ಮ ಕಣ್ಣಲ್ಲಿನ ನೋವು ನೋಡಿ ನನ್ನ ಹೃದಯ ಭಾರವಾಯಿತು’ ಎಂದು ಅನುಪಮ್ ಖೇರ್ ಹೊಗಳಿದ್ದಾರೆ.
‘ಧುರಂಧರ್ 2’ ಸಿನಿಮಾಗೆ ನೆಗೆಟಿವ್ ವಿಮರ್ಶೆಗಳು ಕೂಡ ವ್ಯಕ್ತವಾಗುತ್ತಿದೆ. ಇದು ಬಿಪಿಜೆ ಪಕ್ಷದ ತಪ್ಪುಗಳನ್ನು ಸಮರ್ಥಿಸುವ ಸಿನಿಮಾ ಎಂದು ಅನೇಕರು ಟೀಕೆ ಮಾಡಿದ್ದಾರೆ. ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಮ್ಪಾಲ್, ರಣವೀರ್ ಸಿಂಗ್, ಸಾರಾ ಅರ್ಜುನ್, ರಾಕೇಶ್ ಬೇಡಿ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಬೆಂಗಳೂರು, ಮಾರ್ಚ್ 22: ನಗರದಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿಕಾರು ಡ್ರಿಫ್ಟಿಂಗ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಅನುಮಾನಗಳು ವ್ಯಕ್ತವಾಗಿವೆ. ತನಿಖೆ ವೇಳೆ ರಿಕ್ಕಿ ರೈ ನಿವಾಸದಲ್ಲಿ ಪತ್ತೆಯಾದ ಕೆಎ 05 ಎನ್ಆರ್ 0009 ಸಂಖ್ಯೆಯ ಲ್ಯಾಂಬೋರ್ಗಿನಿ ಕಾರನ್ನು ಕಬ್ಬನ್‌ಪಾರ್ಕ್ ಸಂಚಾರ ಪೊಲೀಸರು ಸೀಜ್ ಮಾಡಿದ್ದಾರೆ. ಕಾರು ದಾಖಲೆಗಳ ಪರಿಶೀಲನೆ ನಡೆಸಿದಾಗ ಮಾಲೀಕತ್ವದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ನೋಂದಣಿ ದಾಖಲೆಗಳು ಸರಿಯಿಲ್ಲದ ಕಾರಣ ಪೊಲೀಸರು ಆರ್‌ಟಿಒಗೆ ಪತ್ರ ಬರೆದಿದ್ದಾರೆ. ಅಲ್ಲದೆ, ರಿಕ್ಕಿ ರೈ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಚಾಲಕನ ಗುರುತು ಪತ್ತೆ ಹಚ್ಚುವ ಪ್ರಯತ್ನ ನಡೆಸಲಾಗುತ್ತಿದೆ.
ಬೆಂಗಳೂರು, ಮಾರ್ಚ್ 22; ಉದ್ಯೋಗದ ನಿಮ್ಮಿತ್ತ ಅಥವಾ ವಯಸ್ಸಾದ ತಂದೆತಾಯಿಯನ್ನು ನೋಡಿಕೊಳ್ಳಬೇಕೆನ್ನುವ ಕಾರಣಕ್ಕೆ ಒಂದು ಊರಿನಿಂದ ಇನ್ನೊಂದು ಊರಿಗೆ ಸ್ಥಳಾಂತರಗೊಳ್ಳುತ್ತಾರೆ. ಕೆಲವೊಮ್ಮೆ ಹೊಸ ಊರು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಆದರೆ ಇದೀಗ ಬೆಂಗಳೂರು (Bengaluru) ಜೀವನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಸ್ಥಳೀಯ ನಿವಾಸಿಯೊಬ್ಬರ ಹೃದಯಸ್ಪರ್ಶಿ ಪೋಸ್ಟ್
ಭಾರಿ ಚರ್ಚೆಗೆ ನಾಂದಿ ಹಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
ಸ್ಕ್ರೀನ್‌ಗ್ರಾಬ್ (screengrab) ಹೆಸರಿನ ರೆಡ್ಡಿಟ್ ಪೋಸ್ಟ್‌ನಲ್ಲಿ ಸ್ಥಳೀಯ ನಿವಾಸಿಯೊಬ್ಬರು ಬೆಂಗಳೂರಿನ ಸರಳ ಜೀವನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ 5 ವರ್ಷಗಳಿಂದ ನಾನು ಬೆಳ್ಳಂದೂರು ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ, ಬಸವನಗುಡಿ ಬಳಿ ವಾಸಿಸುತ್ತಿದ್ದ ನನಗೆ ಈ ಸ್ಥಳಾಂತರವು ಯೋಗ್ಯವಾಗಿಲ್ಲ ಎಂದೆನಿಸುತ್ತಿದೆ. ಕೇವಲ ಸಕಾರಾತ್ಮಕ ವಿಷಯವೆಂದರೆ ಕಡಿಮೆ ಸಮಯದಲ್ಲಿ ಆಫೀಸ್ ತಲುಪಬಹುದು ಎನ್ನುವುದಷ್ಟೇ. ಆದರೆ ವಾರಾಂತ್ಯ ಬಂದಾಗ ನಾನು ಬೇರೆ ರಾಜ್ಯದಲ್ಲಿ ವಾಸಿಸುತ್ತಿದ್ದೇನೆ ಎಂದು ಭಾಸವಾಗುತ್ತದೆ ಎಂದು ಹೇಳಿದ್ದಾರೆ.
ರೆಡ್ಡಿಟ್ ಪೋಸ್ಟ್ ಇಲ್ಲಿದೆ
ಆ ರೀತಿಯ ಸ್ವಾಧೀನ ಭಾವನೆ ಅಸ್ತಿತ್ವದಲ್ಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅಪಾರ್ಟ್ಮೆಂಟ್ ಖರೀದಿಸಿರುವುದು ಇದುವರೆಗೆ ನಾನು ಮಾಡಿದ ದೊಡ್ಡ ತಪ್ಪು ಎಂದು ನಾನು ಭಾವಿಸುತ್ತೇನೆ, ಒಂದೇ ಒಂದು ಸ್ಥಳೀಯ ಉತ್ಸವ ಆಚರಣೆಯನ್ನು ನಾನು ನೋಡಿಲ್ಲ, ಇದು ನಾನು ಒಬ್ಬ ಕನ್ನಡಿಗನಾಗಿ, ನನ್ನ ಸಲಹೆಯೆಂದರೆ ಇಂತಹ ಪ್ರದೇಶಗಳಿಗೆ ಹೋಗಬೇಡಿ, ಹಳೆಯ ಬೆಂಗಳೂರಿನ ಪ್ರದೇಶಗಳಲ್ಲಿ ವಾಸಿಸುವುದು ಮತ್ತು ಪ್ರಯಾಣದಲ್ಲಿ ರಾಜಿ ಮಾಡಿಕೊಳ್ಳುವುದು ಉತ್ತಮ. ಆದರೆ ಇಲ್ಲಿನ ಸಾಮಾಜಿಕ ಜೀವನವು ಕೆಟ್ಟದಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೀವು ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ. ಹೆಚ್ಚಿ ಚಿಂತಿಸಿದರೆ ನೀವು ತಪ್ಪು ಮಾಡಿದ ಭಾವನೆ ಕಾಡುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಬಸವನಗುಡಿಯಿಂದ ಬೆಳ್ಳಂದೂರಿಗೆ ಪ್ರಯಾಣ ಮಾನಸಿಕ ಆರೋಗ್ಯದ ದೃಷ್ಟಿಯಿಂದ ದೊಡ್ಡ ಕುಸಿತವಾಗಿದೆ. ನನಗೆ ಆ ಸಂಘರ್ಷ ಅರ್ಥವಾಗುತ್ತದೆ. ಏಕೆಂದರೆ ಪ್ರಯಾಣದ ಸಮಯ ಮುಖ್ಯವಾಗಿದೆ. ಬಹುಶಃ ನೀವು ನಿಮ್ಮ ವಾರಾಂತ್ಯವನ್ನು ಗಾಂಧಿ ಬಜಾರ್, ಬುಗಲ್ ರಾಕ್ ಇತ್ಯಾದಿಗಳಲ್ಲಿ ಕಳೆಯಬಹುದು. ಈ ರೀತಿ ಮಾಡುವುದರಿಂದ ಕನಿಷ್ಠ ಬದುಕುತ್ತಿರುವಂತೆ ಅನಿಸಬಹುದು, ಸ್ವಲ್ಪ ಚೇತರಿಸಿಕೊಳ್ಳಬಹುದು ಎಂದು ಧೈರ್ಯ ತುಂಬಿದ್ದಾರೆ. ಮತ್ತೊಬ್ಬರು, ಬದುಕೆಂದರೆ ಹಾಗೆಯೇ, ಆಯ್ಕೆಗಳು ಎಡವುದು ಸಹಜ, ಆದರೆ ಒಪ್ಪಿಕೊಂಡು ಬದುಕುವುದು ಜಾಣತನ ಎಂದು ಕಾಮೆಂಟ್ ಮಾಡಿದ್ದಾರೆ.
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 23 ರಿಂದ ಮಾರ್ಚ್ 29 ರವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಈ ವಾರ ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷದಿಂದ ಕೂಡಿದೆ. ಪಂಚಮಿಯಿಂದ ಏಕಾದಶಿಯವರೆಗೆ ತಿಥಿಗಳಿವೆ. ಈ ವಾರದಲ್ಲಿ ದೇವರ ದಾಸಿಮಯ್ಯ ಜಯಂತಿ, ದಾವಣಗೆರೆ ಜಾತ್ರಾ ಮಹೋತ್ಸವ, ಅಶೋಕ ಅಷ್ಟಮಿ, ಸ್ಕಂದ ದವನಾರ್ಪಣೆ, ಸಂತಾನ ಸಪ್ತಮಿ, ಶ್ರೀರಾಮ ನವಮಿ, ಸರ್ವತ್ರ ಏಕಾದಶಿ ಸೇರಿದಂತೆ ಹಲವು ಹಬ್ಬ ಹರಿದಿನಗಳು ಮತ್ತು ವಿಶೇಷ ಆಚರಣೆಗಳಿವೆ. ಗ್ರಹಗಳ ಗೋಚಾರದಲ್ಲಿ ರವಿ, ಶನಿ, ಶುಕ್ರ ಮೀನ ರಾಶಿಯಲ್ಲಿದ್ದು, ಶುಕ್ರ ಗ್ರಹ ಮಾರ್ಚ್ 26, 2026 ರಂದು ಮೇಷ ರಾಶಿಗೆ ಪ್ರವೇಶಿಸಲಿದೆ. ಗುರು ಮಿಥುನ ರಾಶಿಯಲ್ಲಿ, ಕೇತು ಸಿಂಹ ರಾಶಿಯಲ್ಲಿ, ಕುಜ, ಬುಧ, ರಾಹು ಕುಂಭ ರಾಶಿಯಲ್ಲಿ ಸಂಚಾರ ಮಾಡಲಿವೆ.
ಮೇಷ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿ, ಉದ್ಯೋಗದಲ್ಲಿ ಅನುಕೂಲಕರ ವಾತಾವರಣ, ವ್ಯಾಪಾರದಲ್ಲಿ ಲಾಭ ಇರಲಿದೆ. ಹಳೆಯ ಬಾಕಿ ವಸೂಲಿ, ಉತ್ತಮ ಸ್ನೇಹಿತರ ಪರಿಚಯ, ವಾಹನ ಯೋಗ, ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ ದೊರೆಯಲಿದೆ. ಆರೋಗ್ಯದ ಬಗ್ಗೆ ಮಾತ್ರ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ವೃಷಭ ರಾಶಿಯವರಿಗೆ ಖರ್ಚು ಜಾಸ್ತಿಯಾಗಲಿದೆ, ಆದಾಯದಲ್ಲೂ ಏರಿಕೆ ಇರಲಿದೆ. ಉದ್ಯೋಗದಲ್ಲಿ ಸಣ್ಣಪುಟ್ಟ ಅಪಮಾನಗಳಿರಬಹುದು, ಪಾಲುದಾರಿಕೆಯಲ್ಲಿ ಜಾಗ್ರತೆ ಅಗತ್ಯ. ಮಿಥುನ ರಾಶಿಯವರಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ, ವಾಹನ ಯೋಗ, ಆತ್ಮವಿಶ್ವಾಸ ವೃದ್ಧಿ ಇರಲಿದೆ. ಕಟಕ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿ, ನಷ್ಟಕ್ಕೆ ಪರಿಹಾರ, ಹೊಸ ವ್ಯಾಪಾರಕ್ಕೆ ಪ್ರಯತ್ನ, ಕುಟುಂಬದ ಸಹಕಾರ ದೊರೆಯಲಿದೆ. ಸಿಂಹ ರಾಶಿಯವರಿಗೆ ಆದಾಯದಲ್ಲಿ ಏರಿಕೆ, ಉದ್ಯೋಗದಲ್ಲಿ ಶುಭ, ಪೂರ್ವಿಕರ ಆಸ್ತಿಯಿಂದ ಲಾಭ, ಭೂಮಿ ಖರೀದಿ ಯೋಗ ಇರಲಿದೆ.
ಬೆಂಗಳೂರು, ಮಾರ್ಚ್ 22: ಸಾಕಷ್ಟು ಲೆಕ್ಕಾಚಾರಗಳ ಬಳಿಕ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಕಾಂಗ್ರೆಸ್ ಕೊನೆಗೂ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಬಾಗಲಕೋಟೆಯಿಂದ ಉಮೇಶ್ ಮೇಟಿ ಮತ್ತು ದಾವಣಗೆರೆ ದಕ್ಷಿಣದಿಂದ ಶಾಮನೂರು ಕುಟುಂಬದ ಸಮರ್ಥ್ ಅಭ್ಯರ್ಥಿಗಳಾಗಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಬಹಳ ಹೆಚ್ಚಿದ್ದು, ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿತ್ತು. ಈ ಹಿನ್ನೆಲೆ ಅಳೆದು ತೂಗಿ, ಕೆಲ ನಾಯಕರ ಮನವೊಲಿಸಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆ ಮೂಲಕ ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ್ ಮತ್ತು ಕಾಂಗ್ರೆಸ್ನಿಂದ ಉಮೇಶ್ ಮೇಟಿ ನಡುವೆ ಸ್ಪರ್ಧೆ ಏರ್ಪಟ್ಟಿದ್ದರೆ ಇತ್ತ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿಯ ಶ್ರೀನಿವಾಸ್ ಟಿ. ದಾಸಕರಿಯಪ್ಪ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಅಖಾಡಕ್ಕಿಳಿದಿದ್ದಾರೆ.