ಬಿಎಂಟಿಸಿ ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ವಿಡಿಯೋ ವೈರಲ್ ಬೆನ್ನಲ್ಲೇ ಹುಳಿಮಾವು ಪೊಲೀಸರಿಂದ ಆರೋಪಿಯ ಬಂಧನ – Kannada News | Bengaluru BMTC Bus Driver Assault: Hulimavu Police Arrest Main Accused After Viral Video Sparks Outrage

ಸಾಂದರ್ಭಿಕ ಚಿತ್ರ (ಎಐ)Image Credit source: MediaForge AI

ಬೆಂಗಳೂರು, ಮೇ 20: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ ಚಾಲಕರೊಬ್ಬರ ಮೇಲೆ ರಸ್ತೆಯಲ್ಲೇ ಆಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಭೀಕರ ಘಟನೆಗೆ ಸಂಬಂಧಿಸಿದಂತೆ ಹುಳಿಮಾವು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ಶೋಯಿಬ್ (26) ಎಂದು ಗುರುತಿಸಲಾಗಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಈತನನ್ನು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.

ಮುಖ್ಯಾಂಶಗಳು

  • ಬನ್ನೇರುಘಟ್ಟಕ್ಕೆ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಚಾಲಕನ ಮೇಲೆ ಹಲ್ಲೆ ಪ್ರಕರಣ.
  • ಆರೋಪಿ ಅಬ್ದುಲ್ ಶೋಯಿಬ್​ನನ್ನು ಬಂಧಿಸಿದ ಪೊಲೀಸರು.
  • ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮೇ 12ರಂದು ಮಧ್ಯಾಹ್ನ 2:30ರ ಸುಮಾರಿಗೆ ಬನಶಂಕರಿಯಿಂದ ಬನ್ನೇರುಘಟ್ಟಕ್ಕೆ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಅನ್ನು ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ಬಳಿ ಬೈಕ್‌ನಲ್ಲಿ ಬಂದ ಮೂವರು ತಡೆದು, ಚಾಲಕನೊಂದಿಗೆ ಗಲಾಟೆ ತೆಗೆದಿದ್ದರು. ಆರೋಪಿಗಳು ರಸ್ತೆಯಲ್ಲೇ ಚಾಲಕನಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಮಾರಕಾಸ್ತ್ರಗಳನ್ನು (ಸ್ಪ್ಯಾನರ್ ಇತ್ಯಾದಿ) ತೋರಿಸಿ ಭೀತಿ ಸೃಷ್ಟಿಸಿ, ಬಸ್ ಒಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದರು.

ಹಲ್ಲೆಯ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ನಂತರ ಹುಳಿಮಾವು ಪೊಲೀಸರು ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ವಿಶೇಷ ಪಡೆಗಳಿಂದ ಕಾರ್ಯಾಚರಣೆ : ಇಬ್ಬರಿಗಾಗಿ ತಲಾಶ್

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆರೋಪಿಗಳ ಪತ್ತೆಗಾಗಿ ಹುಳಿಮಾವು ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಮೇ 17 ರಂದು ಬಿಲ್ವರದಹಳ್ಳಿಯ ಟಿಪ್ಪು ಸರ್ಕಲ್ ಬಳಿ ಆರೋಪಿ ಅಬ್ದುಲ್ ಶೋಯಿಬ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಮತ್ತು ಹಲ್ಲೆಗೆ ಬಳಸಿದ್ದ ಸ್ಪ್ಯಾನರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆ ವೇಳೆ ಆರೋಪಿ, ತನ್ನ ಇಬ್ಬರು ಸಹಚರರೊಂದಿಗೆ ಸೇರಿ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಮೇ 18 ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ಸದ್ಯ ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Guru Transit 2026: ಗುರು ಸಂಚಾರ; ಜೂ.2ರಿಂದ ವೃಷಭ ರಾಶಿಯ ಭವಿಷ್ಯ ಹೇಗಿರಲಿದೆ ಗೊತ್ತಾ?

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ವೃಷಭ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, 2026ರ ಜೂನ್ 2ರಿಂದ ವೃಷಭ ರಾಶಿಯವರಿಗೆ ಗುರುಬಲ ಇರುವುದಿಲ್ಲ. ಗುರುವು ಮೂರನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಈ ಅವಧಿಯಲ್ಲಿ ಮಾನಸಿಕ ಪ್ರಚೋದನೆಗೆ ಒಳಗಾಗದೆ, ಸಮಾಧಾನ ಚಿತ್ತದಿಂದ ಕಾರ್ಯನಿರ್ವಹಿಸುವುದು ಮುಖ್ಯ. ಆರ್ಥಿಕ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ. ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಎದುರಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಅನುಕೂಲಕರ ಸಮಯವಾಗಿದ್ದು, ವಿಶೇಷವಾಗಿ ಮಾರ್ಕೆಟಿಂಗ್, ಆನ್‌ಲೈನ್ ವ್ಯವಹಾರಗಳಿಗೆ ಶುಭವಾಗಲಿದೆ. ಬರವಣಿಗೆ, ಸಾಹಿತ್ಯ, ಸಿನಿಮಾ, ಕಲೆ ಮತ್ತು ಪತ್ರಕರ್ತರಿಗೆ ಉತ್ತಮ ಫಲಗಳು ಸಿಗಲಿವೆ.

ಮೂರನೇ ಮನೆಯ ಗುರು ಸಂಚಾರವು ಸ್ವಪ್ರಯತ್ನದಿಂದ ಯಶಸ್ಸನ್ನು ತರುತ್ತದೆ. ಪ್ರೀತಿಯ ವಾತಾವರಣ, ಸಹೋದರರ ಬೆಂಬಲ ಚೆನ್ನಾಗಿರುತ್ತದೆ. ಮನೆ ನಿರ್ಮಾಣದಲ್ಲಿ ಗೊಂದಲಗಳಿದ್ದರೂ ಕೊನೆಗೆ ಶುಭವಾಗಲಿದೆ. ವಾಹನ ಯೋಗ ಉತ್ತಮವಾಗಿದೆ. ಸಂತಾನ ವಿಷಯದಲ್ಲಿ ಸ್ವಲ್ಪ ವಿಳಂಬ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರುತ್ತದೆ. ಹಳೆಯ ಹೂಡಿಕೆಗಳಿಂದ ಲಾಭ, ಮಕ್ಕಳಿಗೆ ವಿವಾಹ ಯೋಗ ಇರುತ್ತದೆ. ದುರ್ಯೋಧನನ ಉದಾಹರಣೆಯಂತೆ, ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸುವುದು ಅತಿಮುಖ್ಯ. ದೇವತಾ ಕಾರ್ಯಗಳಲ್ಲಿ ಭಾಗವಹಿಸುವುದು, ಓಂ ಧನಾಧ್ಯಕ್ಷಾಯ ನಮಃ ಮಂತ್ರ ಜಪಿಸುವುದು, ಹಸುವಿಗೆ ನೆನೆಸಿದ ಹೆಸರು ಕಾಳು ತಿನ್ನಿಸುವುದು ಹಾಗೂ ಹಳದಿ ಕರವಸ್ತ್ರ ಇಟ್ಟುಕೊಳ್ಳುವುದು ಶುಭ ಫಲಗಳನ್ನು ನೀಡುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vaibhav Sooryavanshi: ಸರ್, ಅದರ ಬಗ್ಗೆ ತಲೆನೇ ಕೆಡಿಸಿಕೊಳ್ಳಲ್ಲ..! – Kannada News | Don’t Care About Publicity: Vaibhav Sooryavanshi

ಟಿ20 ಕ್ರಿಕೆಟ್ ಅಂದರೆ ಕೇವಲ ಅಬ್ಬರವಲ್ಲ, ಅದೊಂದು ಲೆಕ್ಕಾಚಾರದ ಆಟ ಎಂಬುದನ್ನು 15 ವರ್ಷದ ಹರೆಯದ ವೈಭವ್ ಸೂರ್ಯವಂಶಿ (Vaibhav Sooryavanshi) ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದ್ದಾನೆ! ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ್ದ 221 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ರಾಜಸ್ಥಾನ್ ರಾಯಲ್ಸ್ ಒತ್ತಡಕ್ಕೆ ಸಿಲುಕಬಹುದು ಎಂಬ ಪ್ರೇಕ್ಷಕರ ಲೆಕ್ಕಾಚಾರವನ್ನು ಯುವ ದಾಂಡಿಗ ತಲೆಕೆಳಗಾಗಿಸಿದ್ದಾನೆ. ಅದು ಕೂಡ ಕೇವಲ 38 ಎಸೆತಗಳಲ್ಲಿ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಗಗನಚುಂಬಿ ಸಿಕ್ಸರ್‌ಗಳ ನೆರವಿನಿಂದ 93 ರನ್ ಚಚ್ಚಿದ್ದರು. ಈ ವಿಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್​ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

  • ಆರೆಂಜ್ ಕ್ಯಾಪ್ ಒಡೆಯ: ಪ್ರಸಕ್ತ ಸರಣಿಯಲ್ಲಿ 13 ಇನ್ನಿಂಗ್ಸ್‌ಗಳಿಂದ ಒಟ್ಟು 579 ರನ್ ಗಳಿಸುವ ಮೂಲಕ ವೈಭವ್ ಸೂರ್ಯವಂಶಿ ಸದ್ಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
  • 500 ರನ್​ಗಳ ದಾಖಲೆ: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ (15 ವರ್ಷ) 500 ರನ್‌ಗಳ ಗಡಿ ದಾಟಿದ ಭರ್ಜರಿ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
  • ಸಿಕ್ಸರ್‌ಗಳ ಸರದಾರ: ಒಂದೇ ಸೀಸನ್‌ನಲ್ಲಿ 50 ಸಿಕ್ಸ್ ಸಿಡಿಸಿದ ಮೊದಲ ಭಾರತೀಯ ಹಾಗೂ ಅತಿ ಕಿರಿಯ ಬ್ಯಾಟರ್ ಎಂಬ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿದೆ.

ಇನ್ನು ಈ ಪಂದ್ಯದ ಬಳಿಕ ಮಾತನಾಡಿದ ವೈಭವ್ ಸೂರ್ಯವಂಶಿ, ಮೈದಾನದ ಹೊರಗಿನ ಪ್ರಶಂಸೆ ಹಾಗೂ ಒತ್ತಡವನ್ನು ತಾವು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ:

ಗಾಬರಿಯಿಲ್ಲದ ನಿಧಾನಗತಿಯ ಆರಂಭ:

“ನಾನು ಬೌಲಿಂಗ್ ಇನ್ನಿಂಗ್ಸ್ ವೇಳೆ ಹೊರಗೆ ಕುಳಿತು ಪಿಚ್ ಗಮನಿಸುತ್ತಿದ್ದೆ. ವಿಕೆಟ್ ಬ್ಯಾಟಿಂಗ್‌ಗೆ ಸಹಕಾರಿಯಾಗಿದೆ ಎಂಬುದು ತಿಳಿಯಿತು. ಆರಂಭದಲ್ಲೇ ಅವಸರ ಮಾಡದೆ, ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆದು ದೀರ್ಘ ಇನ್ನಿಂಗ್ಸ್ ಆಡಬೇಕು ಎಂದು ನಿರ್ಧರಿಸಿದ್ದೆ. ನಾನು ಯಾವಾಗ ಬೇಕಾದರೂ ಸಿಕ್ಸರ್, ಫೋರ್ ಹೊಡೆಯಬಲ್ಲೆ ಎಂಬ ನಂಬಿಕೆ ನನಗಿತ್ತು. ಹಾಗಾಗಿ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯುವುದು ನನ್ನ ಯೋಜನೆಯಾಗಿತ್ತು ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ದೂರ:

“ಸರ್, ನನಗೆ ಸಿಗುತ್ತಿರುವ ಪ್ರಚಾರದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ದಿನಪತ್ರಿಕೆಗಳನ್ನು ಓದುವುದಿಲ್ಲ, ಸಾಮಾಜಿಕ ಜಾಲತಾಣಗಳನ್ನೂ ನೋಡುವುದಿಲ್ಲ. ಇದು ಕೇವಲ ಆರಂಭವಷ್ಟೇ. ನನ್ನ ವೃತ್ತಿಜೀವನ ಸುದೀರ್ಘವಾಗಿದ್ದರೆ ಜನರು ಇನ್ನೂ ಏನೇನೋ ಮಾತನಾಡುತ್ತಾರೆ. ನನ್ನ ಗಮನ ಕೇವಲ ಕ್ರಿಕೆಟ್‌ನ ಮೇಲಿರಬೇಕು. ಹೀಗಾಗಿ ಇಂತಹವುಗಳ ಬಗ್ಗೆ ನಾನು ತಲೆನೇ ಕೆಡಿಸಿಕೊಳ್ಳುವುದಿಲ್ಲ” ಎಂದು ವೈಭವ್ ಹೇಳಿದ್ದಾರೆ.

ಅರ್ಥವಿಲ್ಲದ ವಿಚಿತ್ರ ಸಂಭ್ರಮ:

ಇನ್ನು ಅರ್ಧಶತಕದ ಬಳಿಕ ಅವರು ಮಾಡಿದ ವಿಶಿಷ್ಟ ಕೈ ಸನ್ನೆಯ ಆಚರಣೆಯ ಬಗ್ಗೆ ಕೇಳಿದಾಗ, “ಅದಕ್ಕೆ ಯಾವುದೇ ವಿಶೇಷ ಅರ್ಥವಿಲ್ಲ. ನಾನು ಪ್ರತಿ ಪಂದ್ಯದಲ್ಲೂ ಹೊಸದನ್ನು ಪ್ರಯತ್ನಿಸುತ್ತೇನೆ, ಅಷ್ಟೇ,” ಎಂದು ನಗುತ್ತಾ ಉತ್ತರಿಸಿದ್ದರು. ಆ ಬಳಿಕ ಡ್ರೆಸ್ಸಿಂಗ್ ರೂಮ್​ನಲ್ಲಿ ಅದು ತಾಯಿಯ ಹೆಸರಿನ ಮೊದಲಾಕ್ಷ (A- ಆರತಿ) ತೋರಿಸಿದ ಸಂಭ್ರಮವಾಗಿತ್ತು ಎಂದು ತಿಳಿಸಿದ್ದಾರೆ.

ಮುಂದಿನ ಗುರಿ ಪ್ಲೇ-ಆಫ್:

“ನಮ್ಮ ತಂಡದ ಗಮನ ಈಗ ಮುಂದಿನ ಪಂದ್ಯದ ಮೇಲಿದೆ. ಯಾವುದೇ ಒತ್ತಡವಿಲ್ಲದೆ, ಟೂರ್ನಿ ಆರಂಭದಿಂದ ಆಡಿದಂತೆಯೇ ಆಟವನ್ನು ಆನಂದಿಸುತ್ತಾ ಕ್ರಿಕೆಟ್ ಆಡುವುದು ಮತ್ತು ಪಂದ್ಯಗಳನ್ನು ಗೆಲ್ಲುವುದಷ್ಟೇ ನಮ್ಮ ಮುಂದಿರುವ ಗುರಿ.” ಈ ಮೂಲಕ ಮುಂದಿನ ಮ್ಯಾಚ್​ನಲ್ಲಿ ಗೆದ್ದು ಪ್ಲೇಆಫ್​ಗೇರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ನಾಲ್ವರು ಹೊಸ ಆಟಗಾರರು ಎಂಟ್ರಿ..!

ಒಟ್ಟಾರೆಯಾಗಿ ಹೇಳುವುದಾದರೆ, 15ರ ಹರೆಯದ ವೈಭವ್ ಸೂರ್ಯವಂಶಿ ಅವರ ಈ ಆಟ ಮತ್ತು ಮಾತುಗಳು ಕೇವಲ ರನ್‌ಗಳ ಗಳಿಕೆಯಷ್ಟೇ ಅಲ್ಲ, ಭಾರತೀಯ ಕ್ರಿಕೆಟ್‌ಗೆ ಒಬ್ಬ ಜವಾಬ್ದಾರಿಯುತ ಮತ್ತು ಅಪಾರ ಮಾನಸಿಕ ಪ್ರಬುದ್ಧತೆಯುಳ್ಳ ಆಟಗಾರ ಸಿಕ್ಕಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮೈದಾನದ ಹೊರಗಿನ ಅತಿಯಾದ ಪ್ರಚಾರ ಮತ್ತು ಒತ್ತಡಗಳಿಗೆ ಕಿವಿಗೊಡದೆ, ಕೇವಲ ತನ್ನ ಆಟದ ಮೇಲೆ ಗಮನ ಹರಿಸುವ ಅವರ ಜಾಣ್ಮೆ ನಿಜಕ್ಕೂ ಶ್ಲಾಘನೀಯ.

ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ಲೇ-ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿಟ್ಟಿರುವ ಈ ‘ರನ್ ಮಷಿನ್’, ಮುಂಬರುವ ಪಂದ್ಯಗಳಲ್ಲೂ ಇದೇ ರೀತಿ ಅಬ್ಬರಿಸಿ ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಲಿ ಎಂಬುದೇ ಅಭಿಮಾನಿಗಳ ಆಶಯ.

Source link

Panchaka Yoga 2026: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ! – Kannada News | Panchaka Yoga 2026: Guru Mars Conjunction brings Bumper Luck for 4 Signs!

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆ ಹಾಗೂ ಅವುಗಳ ನಡುವೆ ಉಂಟಾಗುವ ಶುಭ ಯೋಗಗಳಿಗೆ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ದೃಷ್ಟಿಕೋನದಿಂದ ಮುಂಬರುವ ಜೂನ್ 5 ಅತ್ಯಂತ ವಿಶೇಷ ಮತ್ತು ಮಂಗಳಕರ ದಿನವಾಗಲಿದ್ದು, ಈ ದಿನ ಆಕಾಶಮಂಡಲದಲ್ಲಿ ಅತ್ಯಂತ ಅಪರೂಪದ ಹಾಗೂ ಅದೃಷ್ಟ ತರುವ ‘ಪಂಚಕ ಯೋಗ’ ನಿರ್ಮಾಣವಾಗುತ್ತಿದೆ. ಜ್ಯೋತಿಷಿಗಳ ಪ್ರಕಾರ, ಈ ಪ್ರಭಾವಶಾಲಿ ಯೋಗದ ಪರಿಣಾಮವಾಗಿ ಕೆಲವು ರಾಶಿಯವರ ಜಾತಕವೇ ಬದಲಾಗಲಿದ್ದು, ಅಪಾರ ಧನಲಾಭ ಮತ್ತು ಯಶಸ್ಸು ಸಿಗಲಿದೆ.

ಏನಿದು ಪಂಚಕ ಯೋಗ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಕಾಶಮಂಡಲದಲ್ಲಿ ಯಾವುದೇ ಎರಡು ಗ್ರಹಗಳ ನಡುವೆ ಸುಮಾರು 72 ಡಿಗ್ರಿ ಕೋನ ಉಂಟಾದಾಗ ಈ ‘ಪಂಚಕ ಯೋಗ’ ನಿರ್ಮಾಣವಾಗುತ್ತದೆ. ಈ ಯೋಗವು ವ್ಯಕ್ತಿಯ ಜೀವನದಲ್ಲಿ ಅನಿರೀಕ್ಷಿತ ಅವಕಾಶಗಳು, ಆರ್ಥಿಕ ಪ್ರಗತಿ, ಅಪ್ರತಿಮ ಯಶಸ್ಸು ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಜೂನ್ 5 ರಂದು ಸಾಹಸ, ಶಕ್ತಿ ಮತ್ತು ಆತ್ಮವಿಶ್ವಾಸದ ಕಾರಕನಾದ ಮಂಗಳ (Mars) ಹಾಗೂ ಜ್ಞಾನ, ಭಾಗ್ಯ ಮತ್ತು ಸಮೃದ್ಧಿಯ ಅಧಿಪತಿಯಾದ ಗುರು (Jupiter) ಗ್ರಹಗಳ ನಡುವೆ ಈ ವಿಶೇಷ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಈ ಇಬ್ಬರು ಪ್ರಭಾವಶಾಲಿ ಗ್ರಹಗಳ ಶುಭ ದೃಷ್ಟಿಯು ಹಲವು ರಾಶಿಯವರ ಭಾಗ್ಯದ ಬಾಗಿಲನ್ನು ತೆರೆಯಲಿದೆ. ಅದರಲ್ಲಿಯೂ ಮುಖ್ಯವಾಗಿ 4 ರಾಶಿಯವರಿಗೆ ಇದು ಗೋಲ್ಡನ್ ಟೈಮ್ ಆಗಿರಲಿದೆ. ಆ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ:

ಮಿಥುನ ರಾಶಿ (Gemini):

ಮಿಥುನ ರಾಶಿಯವರಿಗೆ ಈ ಪಂಚಕ ಯೋಗವು ಅತ್ಯಂತ ಶುಭ ಫಲಗಳನ್ನು ನೀಡಲಿದೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಅಥವಾ ಪ್ರಮೋಷನ್ (ಬಡ್ತಿ) ಸಿಗುವ ಬಲವಾದ ಸಾಧ್ಯತೆಗಳಿವೆ. ಉದ್ಯಮಿಗಳು ಹಾಗೂ ವ್ಯಾಪಾರಿಗಳಿಗೆ ಉತ್ತಮ ಆರ್ಥಿಕ ಲಾಭ ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದ್ದು, ಹಳೆಯ ವಿವಾದಗಳು ಬಗೆಹರಿಯಲಿವೆ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮ ಫಲಿತಾಂಶ ನೀಡುತ್ತದೆ.

ಸಿಂಹ ರಾಶಿ (Leo):

ಸಿಂಹ ರಾಶಿಯ ಜನರಿಗೆ ಈ ಯೋಗವು ಅಪಾರ ಆತ್ಮವಿಶ್ವಾಸ ಮತ್ತು ಯಶಸ್ಸನ್ನು ತರಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಸೂಕ್ತ ಮನ್ನಣೆ ಹಾಗೂ ಪ್ರಶಂಸೆ ದೊರೆಯುತ್ತದೆ. ಹೊಸ ಉದ್ಯೋಗ ಅಥವಾ ಹೊಸ ಬ್ಯುಸಿನೆಸ್ ಪ್ರಾರಂಭಿಸಲು ಯೋಚಿಸುತ್ತಿರುವವರಿಗೆ ಇದು ಅತ್ಯಂತ ಸೂಕ್ತ ಸಮಯ. ಆರ್ಥಿಕ ಸ್ಥಿತಿ ಗಟ್ಟಿಯಾಗಲಿದ್ದು, ಅನಿರೀಕ್ಷಿತ ಧನಲಾಭದ ಯೋಗವಿದೆ. ಸಾಮಾಜಿಕವಾಗಿ ನಿಮ್ಮ ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಕುಟುಂಬದವರೊಂದಿಗೆ ಗುಣಮಟ್ಟದ ಸಮಯ ಕಳೆಯುವ ಅವಕಾಶ ಸಿಗಲಿದೆ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ: ಈ ರಾಶಿಯವರಿಗೆ ಒದಗಿಬರಲಿದೆ ಕಂಕಣ ಭಾಗ್ಯ, ಯಾರಿಗೆ ಕಾಯ್ದಿದೆ ಗುಪ್ತ ಸಂಬಂಧದ ಗಂಡಾಂತರ?

ಧನು ರಾಶಿ (Sagittarius):

ಧನು ರಾಶಿಯವರಿಗೆ ಪಂಚಕ ಯೋಗವು ಆರ್ಥಿಕ ದೃಷ್ಟಿಯಿಂದ ಬಂಪರ್ ಲಾಭವನ್ನು ತರಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ ಮತ್ತು ಹೂಡಿಕೆಗಳಿಂದ (Investments) ಉತ್ತಮ ಲಾಭ ಸಿಗುವ ಸಾಧ್ಯತೆಯಿದೆ. ದೀರ್ಘಕಾಲದ ಮಾನಸಿಕ ಒತ್ತಡ ಹಾಗೂ ಕಷ್ಟಗಳಿಂದ ನೆಮ್ಮದಿ ಸಿಗಲಿದೆ. ವಿದೇಶಕ್ಕೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಅಥವಾ ಉನ್ನತ ಶಿಕ್ಷಣಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಶುಭ ವಾರ್ತೆ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಮಧುರತೆ ಹೆಚ್ಚಾಗಲಿದೆ.

ಕುಂಭ ರಾಶಿ (Aquarius):

ಕುಂಭ ರಾಶಿಯ ಜಾತಕದವರಿಗೆ ಜೂನ್ 5 ರ ದಿನವು ಹೊಸ ಭರವಸೆಗಳನ್ನು ಹೊತ್ತು ತರಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಲಿದ್ದೀರಿ. ಬಾಕಿ ಉಳಿದಿದ್ದ ಕೆಲಸಗಳು ವೇಗವನ್ನು ಪಡೆದುಕೊಳ್ಳುತ್ತವೆ. ಈ ಯೋಗದ ಪ್ರಭಾವದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬಲಗೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ಮುಂಚೆಗಿಂತ ಸುಧಾರಿಸಲಿದೆ. ಸ್ನೇಹಿತರು ಹಾಗೂ ಕುಟುಂಬದವರಿಂದ ಸಂಪೂರ್ಣ ಸಹಕಾರ ಮತ್ತು ಬೆಂಬಲ ಸಿಗಲಿದೆ.

ಜ್ಯೋತಿಷ್ಯದಲ್ಲಿ ಈ ಯೋಗ ಏಕೆ ಇಷ್ಟೊಂದು ಮುಖ್ಯ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಮತ್ತು ಮಂಗಳ ಗ್ರಹಗಳ ಯುತಿ ಅಥವಾ ಶುಭ ದೃಷ್ಟಿಯನ್ನು ಅತ್ಯಂತ ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಗುರು ಗ್ರಹವು ಭಾಗ್ಯವನ್ನು ಬಲಪಡಿಸಿದರೆ, ಮಂಗಳ ಗ್ರಹವು ವ್ಯಕ್ತಿಗೆ ಧೈರ್ಯ ಮತ್ತು ಮುನ್ನಡೆಯುವ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ, ಈ ಎರಡು ಗ್ರಹಗಳ ಮಿಲನದಿಂದ ಸೃಷ್ಟಿಯಾಗುವ ಪಂಚಕ ಯೋಗವು ಯಶಸ್ಸು, ಸಂಪತ್ತು ಮತ್ತು ಹೊಸ ಸಕಾರಾತ್ಮಕ ಆರಂಭದ ಸಂಕೇತವಾಗಿದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ವೈಯಕ್ತಿಕ ಜಾತಕಕ್ಕೆ ಅನುಗುಣವಾಗಿ ಫಲಿತಾಂಶಗಳು ಬದಲಾಗಬಹುದು.)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫುಟ್​ಪಾತ್​ಗೂ ಬಂತು​ ಟಿಂಡರ್ ಮಾದರಿಯ ಆ್ಯಪ್: ಹದಿಹರೆಯದ ಬಾಲಕನ ಐಡಿಯಾಗೆ ನೆಟ್ಟಿಗರು ಫಿದಾ! – Kannada News | Bengaluru Teen Develops Tinder Like App ‘Rasthe’ to Rate and Report Footpaths to BBMP

ಫುಟ್​ಪಾತ್ಗೂ ಬಂತು​ ಟಿಂಡರ್ ಮಾದರಿಯ ಆ್ಯಪ್: ಹದಿಹರೆಯದ ಬಾಲಕನ ಐಡಿಯಾಗೆ ನೆಟ್ಟಿಗರು ಫಿದಾ!
Image Credit source: Hindustan Times

ಬೆಂಗಳೂರು, ಮೇ 20: ನಗರದಲ್ಲಿ ಟ್ರಾಫಿಕ್ (Traffic) ಸಮಸ್ಯೆ, ರಸ್ತೆ ಗುಂಡಿಗಳು, ಹಾಳಾದ ಫುಟ್​ಪಾತ್​ಗಳಿಂದ ಜನ ರೋಸಿ ಹೋಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಎಷ್ಟೇ ಧ್ವನಿ ಎತ್ತಿದರೂ ಪಾಲಿಕೆ ಮಾತ್ರ ಕ್ಯಾ ರೇ ಎನ್ನುತ್ತಿಲ್ಲ. ಇದೇ ಸಮಸ್ಯೆಯನ್ನು ತಲೆಯಲ್ಲಿಟ್ಟುಕೊಂಡು 14 ವರ್ಷದ ಬಾಲಕನೊಬ್ಬ ತಂತ್ರಜ್ಞಾನದ ಮೂಲಕ ಅದ್ಭುತ ಪರಿಹಾರ ಕಂಡುಹಿಡಿದಿದ್ದಾನೆ. ಡೇಟಿಂಗ್ ಆ್ಯಪ್ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಈ ಆ್ಯಪ್​ಗೆ ಆತ ‘ರಸ್ತೆ’(RASTHE) ಎಂದು ಹೆಸರಿಟ್ಟಿದ್ದಾನೆ.

ಮುಖ್ಯಾಂಶಗಳು

  • ಬೆಂಗಳೂರಿನ 14ರ ಬಾಲಕನಿಂದ ‘ರಸ್ತೆ’ ಎಂಬ ವಿಶಿಷ್ಟ ಆ್ಯಪ್ ಅಭಿವೃದ್ಧಿ.
  • ಟಿಂಡರ್ ಮಾದರಿಯಲ್ಲಿ ಫುಟ್‌ಪಾತ್‌ಗಳನ್ನು ಸ್ವೈಪ್ ಹಾಗೂ ರೇಟಿಂಗ್ ಮಾಡುವ ಸೌಲಭ್ಯ.
  • ಹಾಳಾದ ರಸ್ತೆಗಳ ಫೋಟೋ ಅಪ್‌ಲೋಡ್ ಮಾಡಿ ಬಿಬಿಎಂಪಿಗೆ ನೇರ ದೂರು.

ರಸ್ತೆ ಸರಿ ಇಲ್ಲದಿದ್ದರೆ ಜಸ್ಟ್ ರೈಟ್ ಸ್ವೈಪ್ ಮಾಡಿ

ಬೆಂಗಳೂರು ನಿವಾಸಿ, 14 ವರ್ಷದ ಸೂರ್ಯ ಉತ್ಕರ್ಷ ತನ್ನ X ಖಾತೆಯಲ್ಲಿ ಈ ಆ್ಯಪ್​ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಈ ಆಪ್‌ನ ವಿಶೇಷತೆಯೆಂದರೆ, ಇದು ಯುವಜನತೆ ಬಳಸುವ ಪ್ರಸಿದ್ಧ ಡೇಟಿಂಗ್ ಆಪ್ ‘ಟಿಂಡರ್’ (Tinder) ಮಾದರಿಯಲ್ಲೇ ಕೆಲಸ ಮಾಡುತ್ತದೆ. ಇದರ ಮೂಲಕ ನೀವು ಹಾಳಾದ ರಸ್ತೆಗಳ, ಫುಟ್​ಪಾತ್​ಗಳ ಫೋಟೋ ತೆಗೆದು ಅಪ್ಲೋಡ್​ ಮಾಡಬಹುದು. ಅಪ್ಲೋಡ್​ ಆದ ಫೋಟೋಗಳಲ್ಲಿ ರಸ್ತೆಗಳ ಸ್ಥಿತಿ ಚನ್ನಾಗಿದ್ದರೆ ರೈಟ್ ಸ್ವೈಪ್ ಮಾಡಬಹುದು. ಇಲ್ಲವಾದರೆ ಲೆಫ್ಟ್ ಸ್ವೈಪ್ ಮಾಡಬಹುದು. ಹೀಗಾಗಿಯೇ ನೆಟ್ಟಿಗರು ಇದನ್ನು ಫುಟ್​ಪಾತ್​ಗಳ ಟಿಂಡರ್ ಎಂದು ಕರೆಯುತ್ತಿದ್ದಾರೆ.

ಕೇವಲ 30 ನಿಮಿಷಗಳಲ್ಲಿ ಆಪ್ ಸಿದ್ಧ!

ಸೂರ್ಯ ಉತ್ಕರ್ಷ ತಾನು ಕೇವಲ 30 ನಿಮಿಷಗಳಲ್ಲಿ ’10x Apps’ ಎಂಬ ಪ್ಲಾಟ್‌ಫಾರ್ಮ್ ಬಳಸಿ ಈ ಆಪ್ ಅನ್ನು ಸಿದ್ಧಪಡಿಸಿರುವುದಾಗಿ ಸೋಶಿಯಲ್ ಮೀಡಿಯಾ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾನೆ. ನಾನು ಬೆಂಗಳೂರಿನ ಟ್ರಾಫಿಕ್ ಮತ್ತು ರಸ್ತೆ ಸಮಸ್ಯೆಯನ್ನು 30 ನಿಮಿಷಗಳಲ್ಲಿ ಫಿಕ್ಸ್ ಮಾಡಿದ್ದೇನೆ ಎಂದು ಆತ ಬರೆದುಕೊಂಡಿರುವ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.

ಆ್ಯಪ್ ಹೇಗೆ ಕೆಲಸ ಮಾಡುತ್ತದೆ?

ನಾಗರಿಕರು ತಾವು ಸಂಚರಿಸುವ ದಾರಿಯಲ್ಲಿ ಎಲ್ಲಾದರೂ ಫುಟ್‌ಪಾತ್ ಹಾಳಾಗಿದ್ದರೆ, ಕಲ್ಲುಗಳು ಕಿತ್ತುಹೋಗಿದ್ದರೆ ಅಥವಾ ಫುಟ್‌ಪಾತ್ ಇಲ್ಲದೇ ಇದ್ದರೆ, ಅದರ ಫೋಟೋ ತೆಗೆದು ಆಪ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಅಪ್‌ಲೋಡ್ ಮಾಡಿದ ತಕ್ಷಣ ಆ ಫೋಟೋ ಜಿಯೋ-ಟ್ಯಾಗ್ ಮೂಲಕ ಆಯಾ ವಾರ್ಡ್‌ಗೆ ಮ್ಯಾಪ್ ಆಗುತ್ತದೆ. ಇದರಿಂದ ಬಿಬಿಎಂಪಿ ಅಧಿಕಾರಿಗಳಿಗೆ ಆ ಸಮಸ್ಯೆಯನ್ನು ಸುಲಭವಾಗಿ ಪತ್ತೆಹಚ್ಚಿ ಸರಿಪಡಿಸಲು ಸಾಧ್ಯವಾಗುತ್ತದೆ. ನಾಗರಿಕರು ನಗರದ ವಿವಿಧ ಫುಟ್‌ಪಾತ್‌ಗಳ ಸ್ಥಿತಿಯನ್ನು ಟಿಂಡರ್ ಆಪ್‌ನಲ್ಲಿ ಮಾಡುವಂತೆ ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡುವ ಮೂಲಕ ರೇಟಿಂಗ್ ನೀಡಬಹುದು. ನಗರದ ಅತ್ಯಂತ ಕೆಟ್ಟದಾದ ಮತ್ತು ಅತ್ಯುತ್ತಮವಾದ ಫುಟ್‌ಪಾತ್‌ಗಳನ್ನು ಗುರುತಿಸಲು ಇದರಲ್ಲಿ ವೋಟಿಂಗ್ ಸೌಲಭ್ಯವಿದೆ. ಜನರು ಅತಿ ಹೆಚ್ಚು ವೋಟ್ ಮಾಡುವ ಮೂಲಕ ಯಾವ ರಸ್ತೆ ತಕ್ಷಣ ದುರಸ್ತಿಯಾಗಬೇಕು ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತರಬಹುದು.

ನಾಗರಿಕರೇ ನಗರದ ಕಣ್ಣುಗಳು

ತನ್ನ ಪೋಸ್ಟ್‌ ಮೂಲಕ ಗಮನ ಸೆಳೆದಿರುವ ಸೂರ್ಯ, ರಸ್ತೆಗಳನ್ನು ಕಾರುಗಳಿಗಾಗಿ ನಿರ್ಮಿಸಿದರೆ, ಈ ಆ್ಯಪ್ ಅನ್ನು ಜನರಿಗಾಗಿ ಮಾಡಲಾಗಿದೆ ಎಂದು ಹೇಳಿದ್ದಾನೆ. ಫುಟ್‌ಪಾತ್‌ಗಳು ಚೆನ್ನಾಗಿದ್ದರೆ ಜನರು ರಸ್ತೆಯ ಮೇಲೆ ನಡೆಯುವುದು ತಪ್ಪುತ್ತದೆ. ಇದರಿಂದ ಟ್ರಾಫಿಕ್ ಕೂಡ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬುದು ಆತನ ಯೋಚನೆ. ನಗರದ ಪ್ರತಿಯೊಬ್ಬ ಪ್ರಜೆಯನ್ನೂ ನಗರದ ಸಮಸ್ಯೆಗಳನ್ನು ಪತ್ತೆಹಚ್ಚುವ ‘ಸೆನ್ಸರ್’ ಆಗಿ ಪರಿವರ್ತಿಸುವುದು ಈ ಆ್ಯಪ್​ನ ಮುಖ್ಯ ಉದ್ದೇಶವಾಗಿದೆ.

ಸದ್ಯ ಈ ಆ್ಯಪ್ ಅನ್ನು ಆ್ಯಪ್ ಸ್ಟೋರ್‌ಗಳಿಗೆ ಬಿಡುಗಡೆ ಮಾಡಲು ಸೂರ್ಯ ಸಜ್ಜಾಗಿದ್ದು, ನೆಟ್ಟಿಗರು ಈ ಬಾಲಕನ ಜಾಣ್ಮೆ ಹಾಗೂ ಸಾಮಾಜಿಕ ಕಳಕಳಿಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಬಿಬಿಎಂಪಿಯ ‘ಸಹಾಯ’ ಆ್ಯಪ್ಗಿಂತ ಇದು ಹೆಚ್ಚು ಜನಸ್ನೇಹಿಯಾಗಿದೆ ಎಂದು ಬೆಂಗಳೂರಿಗರು ಕೊಂಡಾಡುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮ್ಮ ನೋವನ್ನು ಆನಂದಿಸಿದವರಿಗೆ ಎಚ್ಚರಿಸಿದ ಸಲ್ಮಾನ್ ಖಾನ್ – Kannada News | Salman Khan Confronts Paparazzi, Posts Emotional Warning Amidst Threats and New Films

ಆಸ್ಪತ್ರೆಯಲ್ಲಿದ್ದ ಆಪ್ತರೊಬ್ಬರನ್ನು ಭೇಟಿ ಮಾಡಿ ಸಲ್ಮಾನ್ ಖಾನ್ ಹೊರಬರುತ್ತಿದ್ದಾಗ, ಅಲ್ಲಿದ್ದ ಫೋಟೋಗ್ರಾಫರ್‌ಗಳು ಅವರ ಮುಂಬರುವ ಸಿನಿಮಾ ‘ಮಾತೃಭೂಮಿ’ ಹೆಸರನ್ನು ಜೋರಾಗಿ ಕೂಗುತ್ತಾ ಅವರ ಖಾಸಗಿತನಕ್ಕೆ ಅಡ್ಡಿಪಡಿಸಿದ್ದಾರೆ. ಈಗಾಗಲೇ ಬಿಷ್ಣೋಯ್ ಗ್ಯಾಂಗ್ ಬೆದರಿಕೆಯಿಂದಾಗಿ ತೀವ್ರ ಒತ್ತಡದಲ್ಲಿರುವ ಸಲ್ಮಾನ್, ಈ ವರ್ತನೆಯಿಂದ ಸಿಟ್ಟಿಗೆದ್ದು, ಅವರ ಹತ್ತಿರ ಹೋಗಿ ‘ನಿಮಗೆ ತಲೆ ಕೆಟ್ಟಿದೆಯೇ?’ ಎಂದು ಗದರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಸಲ್ಮಾನ್ ಖಾನ್ ಭಾವನಾತ್ಮಕ ಪೋಸ್ಟ್

ಇದಾದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಸರಣಿ ಪೋಸ್ಟ್ ಹಾಕಿರುವ ಸಲ್ಮಾನ್, ‘ನಾನು ಸದಾ ಬೆಂಬಲವಾಗಿ ನಿಂತ ಪಾಪರಾಜಿಗಳು ಈಗ ಆಸ್ಪತ್ರೆಯ ಮುಂದೆ ನಿಂತು ನನ್ನ ನೋವನ್ನು ನೋಡಿ ಆನಂದಿಸುತ್ತಿದ್ದಾರೆ. ಇದನ್ನು ನಾನು ನೋಡಬೇಕಾಗಿದೆ. ನನ್ನ ನಷ್ಟದಿಂದ ಹಣ ಗಳಿಸಲು ಯತ್ನಿಸಬೇಡಿ, ಸುಮ್ಮನಿರಿ. ನಿಮಗೆ ಸಿನಿಮಾ ಮುಖ್ಯವೋ ಅಥವಾ ಜೀವ ಮುಖ್ಯವೋ?’ ಎಂದು ಪ್ರಶ್ನಿಸಿದ್ದಾರೆ.

‘ಮುಂದಿನ ಬಾರಿ ನನ್ನ ದುಃಖದ ಸಮಯದಲ್ಲಿ ಈ ರೀತಿ ಮಾಡಲು ಪ್ರಯತ್ನಿಸಿ ನೋಡಿ. ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಯಲ್ಲಿದ್ದಾಗ ನಾನು ಈ ರೀತಿ ವರ್ತಿಸುತ್ತೇನೆಯೇ? ಇಂತಹ ನೂರು ವಿಷಯಗಳನ್ನು ನಾನು ಸುಟ್ಟು ಬೂದಿ ಮಾಡಬಲ್ಲೆ’ ಎಂದು ಗುಡುಗಿದ್ದಾರೆ.

ತಮ್ಮ ಕೊನೆಯ ಪೋಸ್ಟ್‌ನಲ್ಲಿ ಸಲ್ಮಾನ್ ಖಾನ್ ತಮ್ಮ ಸದ್ಯದ ಪರಿಸ್ಥಿತಿ ಹಾಗೂ ಭದ್ರತೆಯ ಸವಾಲುಗಳನ್ನು ನೆನಪಿಸುವಂತೆ ಬರೆದುಕೊಂಡಿದ್ದಾರೆ. ‘ನನಗೆ ಈಗ 60 ವರ್ಷ ವಯಸ್ಸಾಗಿದೆ ನಿಜ, ಆದರೆ ನಾನು ಹೋರಾಡುವುದನ್ನು ಇನ್ನು ಮರೆತಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದಕ್ಕಾಗಿ ನನ್ನನ್ನು ಜೈಲಿಗೆ ಹಾಕುತ್ತೀರಾ’ ಎಂದು ಕೇಳಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಮನೆಯಲ್ಲಿ ಹಾವು ರಕ್ಷಣಾ ಕಾರ್ಯ ಹೇಗಿತ್ತು? ಇಲ್ಲಿದೆ ವೈರಲ್ ವಿಡಿಯೋ

ಸಲ್ಮಾನ್ ಖಾನ್ ಮುಂಬರುವ ಸಿನಿಮಾಗಳು

ಸಲ್ಮಾನ್ ಖಾನ್ ಸದ್ಯ 2020ರ ಗಲ್ವಾನ್ ಕಣಿವೆ ಸಂಘರ್ಷದ ಆಧಾರಿತ ಭವ್ಯ ದೇಶಭಕ್ತಿ ಸಿನಿಮಾ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನದ, ದಿಲ್ ರಾಜು ನಿರ್ಮಾಣದ ತಾತ್ಕಾಲಿಕ ಶೀರ್ಷಿಕೆ ‘SVC63’ ಚಿತ್ರದಲ್ಲಿ ನಟಿ ನಯನತಾರಾ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದು, ಈ ಸಿನಿಮಾ 2027ರ ಈದ್ ಹಬ್ಬಕ್ಕೆ ತೆರೆಕಾಣುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:52 am, Wed, 20 May 26

Source link

In Pics: ಇಟಲಿ ಪ್ರಧಾನಿ ಮೆಲೋನಿ ಭೇಟಿಯಾಗಿ ಫೋಟೊಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ

Source link

ಟೀಮ್ ಇಂಡಿಯಾಗೆ ನಾಲ್ವರು ಹೊಸ ಆಟಗಾರರು ಎಂಟ್ರಿ..!

Source link

ಮೆಡಿಕಲ್ ಬಂದ್ ಇದ್ರೂ ಜನರಿಗಿಲ್ಲ ತೊಂದರೆ! ಜನೌಷಧಿ ಕೇಂದ್ರ, ಅಪೊಲೋ​, ಮೆಡ್ ಪ್ಲಸ್ ಓಪನ್ – Kannada News | Medical Shop Strike: No Relief Shortage as Jan Aushadhi, Apollo, and MedPlus Pharmacies Remain Open Across Karnataka

ಬೆಂಗಳೂರು, ಮೇ 20: ಕರ್ನಾಟಕದಲ್ಲಿ ಮೆಡಿಕಲ್ ಶಾಪ್‌ಗಳ ಬಂದ್‌ ನಡುವೆಯೂ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧ ಮಳಿಗೆಗಳು, ಜನೌಷಧಿ ಕೇಂದ್ರಗಳು, ಅಪೋಲೋ ಫಾರ್ಮಸಿಗಳು ಮತ್ತು ಮೆಡ್‌ಪ್ಲಸ್ ಶಾಖೆಗಳು ಎಂದಿನಂತೆ ತೆರೆದಿವೆ. ಕಾರ್ಪೊರೇಟ್ ಸ್ವಾಮ್ಯದ ಅಪೋಲೋ ಮತ್ತು ಮೆಡ್‌ಪ್ಲಸ್‌ನಂತಹ ಔಷಧ ಮಳಿಗೆಗಳು ಬಂದ್‌ಗೆ ಬೆಂಬಲ ನೀಡಿಲ್ಲ. ಇವು ಆನ್‌ಲೈನ್ ವಿತರಣೆ ಸೇವೆಗಳನ್ನು ಸಹ ಒದಗಿಸುತ್ತಿವೆ. ಅಲ್ಲದೆ, ಸರ್ಕಾರಿ ಸ್ವಾಮ್ಯದ ಜನೌಷಧಿ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಖಾಸಗಿ ಮೆಡಿಕಲ್ ಸ್ಟೋರ್‌ಗಳು ನಿರ್ದಿಷ್ಟ ಒಪ್ಪಂದಗಳ ಕಾರಣದಿಂದ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ. ಇದರಿಂದ ಸಾರ್ವಜನಿಕರಿಗೆ ಔಷಧಗಳ ಕೊರತೆ ಸಮಸ್ಯೆ ಅಷ್ಟಾಗಿ ಎದುರಾಗಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಮುಕೇಶ್ ಅಂಬಾನಿ ಹಾಗೂ ಅನಂತ್ ಅಂಬಾನಿ ಭೇಟಿ

ಬೆಂಗಳೂರು, ಮೇ 20: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ಅವರ ಪುತ್ರ ಅನಂತ್ ಅಂಬಾನಿ ಬೆಂಗಳೂರಿನ ಅಂತರರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ತಂದೆ-ಮಗ ಇಬ್ಬರೂ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದಿದರು. ಮೇ 15ರಂದು ನಡೆದಿದ್ದ ಗುರೂಜಿಯವರ 70ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಆಶ್ರಮಕ್ಕೆ ಭೇಟಿ ನೀಡಿ, ನೂತನ ‘ಧ್ಯಾನ ಮಂದಿರ’ವನ್ನು ಉದ್ಘಾಟಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version