World Bee Day: ಮೇ 20 ‘ವಿಶ್ವ ಜೇನುನೊಣ ದಿನ’; ಜೇನುನೊಣ ಉಳಿದರೆ ಮಾತ್ರ ಮನುಕುಲದ ಉಳಿವು! – Kannada News | World Bee Day: India’s Fight Against Honey Adulteration and Bee Conservation
ಪ್ರತಿ ವರ್ಷ ಮೇ 20ರಂದು ವಿಶ್ವದಾದ್ಯಂತ ‘ವಿಶ್ವ ಜೇನುನೊಣ ದಿನ’ವನ್ನು (World Bee Day) ಆಚರಿಸಲಾಗುತ್ತದೆ. ಆಧುನಿಕ ಜೇನುಸಾಕಣೆಯ ಪ್ರವರ್ತಕರಾದ ಸ್ಲೊವೇನಿಯಾದ ಆಂಟನ್ ಜಾನ್ಸಾ (Anton Jansa) ಅವರ ಜನ್ಮ ದಿನದ ನೆನಪಿಗಾಗಿ ಈ ದಿನವನ್ನು ನಿಗದಿಪಡಿಸಲಾಗಿದೆ. ಆದರೆ, ಜೇನುಸಾಕಣೆಯ ಇತಿಹಾಸವನ್ನು ಗಮನಿಸಿದಾಗ ನಾವಿಲ್ಲಿ ಒಂದು ಮಹತ್ವದ ವಿಚಾರವನ್ನು ಮರೆಯಬಾರದು. ಅದೇನೆಂದರೆ, ಪಾಶ್ಚಾತ್ಯ ಜಗತ್ತು ಇದನ್ನು ಗುರುತಿಸುವ ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಜೇನುಸಾಕಣೆ ಮತ್ತು ಜೇನುತುಪ್ಪದ ಬಳಕೆ ಅತ್ಯಂತ ಪ್ರಚಲಿತದಲ್ಲಿತ್ತು. ನಮ್ಮ ಋಗ್ವೇದ, ಅಥರ್ವವೇದ, ಪುರಾಣಗಳು…