Headlines

ಮಧ್ಯಪ್ರದೇಶ: ಮಾದಕವಸ್ತು ನೀಡಿ ಅತ್ಯಾಚಾರ, ಬ್ಲ್ಯಾಕ್​ ಮೇಲ್, ಪಿಎಚ್​ಡಿ ವಿದ್ಯಾರ್ಥಿನಿ ಆತ್ಮಹತ್ಯೆ – Kannada News | PhD Scholar Found Dead in Madhya Pradesh, Police Probe Allegations of Harassment

ಭೋಪಾಲ್, ಮೇ 20: ಪಿಎಚ್​ಡಿ ವಿದ್ಯಾರ್ಥಿನಿ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ದಾಟಿಯಾಳದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಆಕೆಗೆ ಮತ್ತು ಬರುವ ಔಷಧ ಕುಡಿಸಿ, ಅತ್ಯಾಚಾರವೆಸಗಿ, ಅಶ್ಲೀಲ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ, ಇದಕ್ಕೆ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಆರೋಪಿಯನ್ನು ಯೋಗೇಶ್ ರಾವತ್ ಎಂದು ಗುರುತಿಸಲಾಗಿದೆ. ಆ ಮಹಿಳೆ ಗ್ವಾಲಿಯರ್‌ನಲ್ಲಿದ್ದಾಗ ಪಿಎಚ್‌ಡಿ ಓದುತ್ತಿದ್ದಳು. ಪೊಲೀಸರ ಪ್ರಕಾರ, ಆಕೆಯ ಸ್ನೇಹಿತರೊಬ್ಬರ ಸಹೋದರ ಯೋಗೇಶ್ ರಾವತ್ ಜೊತೆ ಆಕೆಗೆ ಸ್ನೇಹ ಬೆಳೆಯಿತು. ರಾವತ್ ಆಕೆಯನ್ನು…

Read More

ವೆಲ್​ಕಮ್ ಟು ರೋಮ್, ಮೈ ಫ್ರೆಂಡ್, ರೋಮ್​ಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಸ್ವಾಗತಿಸಿ, ಸೆಲ್ಫಿ ಹಂಚಿಕೊಂಡ ಜಾರ್ಜಿಯಾ ಮೆಲೋನಿ – Kannada News | Giorgia Meloni Welcomes Narendra Modi During Visit to Rome

ರೋಮ್, ಮೇ 20: ಭಾರತ ಮತ್ತು ಇಟಲಿ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಹೊಸ ಇತಿಹಾಸ ಬರೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಜಾಗತಿಕ ಪ್ರವಾಸದ ಕೊನೆಯ ಹಾಗೂ ಅಂತ್ಯಂತ ಮಹತ್ವದ ಹಂತ ಇಟಲಿಯಲ್ಲಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ ಇಟಲಿಯ ರಾಜಧಾನಿ ರೋಮ್‌ಗೆ ಆಗಮಿಸುವ ಮೂಲಕ ತಮ್ಮ ಐದು ರಾಷ್ಟ್ರಗಳ ಸುದೀರ್ಘ ಯುರೋಪಿಯನ್ ಪ್ರವಾಸದ ಕೊನೆಯ ಮತ್ತು ಅತ್ಯಂತ ಪ್ರಮುಖ ಘಟ್ಟವನ್ನು ತಲುಪಿದ್ದಾರೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ…

Read More

ಜೂ. ಎನ್‌ಟಿಆರ್ ಜನ್ಮದಿನ: ಟಾಲಿವುಡ್ ನಟನ ಕನ್ನಡ ಪ್ರೇಮ, ಅಪ್ಪು ಜೊತೆ ವಿಶೇಷ ಬಾಂಧವ್ಯ – Kannada News | Jr NTR Birthday: The Emotional Bond Between Tarak and Power Star Puneeth Rajkumar

ಇಂದು (ಮೇ 20) ಟಾಲಿವುಡ್‌ನ ಸ್ಟಾರ್ ನಟ ಜೂನಿಯರ್ ಎನ್​​ಟಿಆರ್ (Jr NTR) ಅವರ ಜನ್ಮದಿನ. ‘ಆರ್‌ಆರ್‌ಆರ್’, ‘ದೇವರ’ ಮತ್ತು ಈಗ ಅನೌನ್ಸ್ ಆಗಿರುವ ‘ಡ್ರ್ಯಾಗನ್’ ಸಿನಿಮಾ ಮೂಲಕ ವಿಶ್ವಾದ್ಯಂತ ಸೌಂಡ್ ಮಾಡುತ್ತಿರುವ ತಾರಕ್ ಅವರಿಗೆ ಕರ್ನಾಟಕ ಹಾಗೂ ಕನ್ನಡದೊಂದಿಗೆ ಕೇವಲ ವೃತ್ತಿಪರ ಸಂಬಂಧ ಮಾತ್ರವಲ್ಲ, ಒಂದು ಆಪ್ತವಾದ ಭಾವನಾತ್ಮಕ ಬಾಂಧವ್ಯವಿದೆ. ಈ ವಿಶೇಷ ದಿನದಂದು ಜೂ. ಎನ್​​ಟಿಆರ್ ಅವರ ಕನ್ನಡ ಪ್ರೇಮ ಹಾಗೂ ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಒಡನಾಟದ ಸುದೀರ್ಘ ವರದಿ ಇಲ್ಲಿದೆ….

Read More

IPL 2026: ಹೀಗೆ 2 ಶತಕ ತಪ್ಪಿಸಿಕೊಂಡ ಏಕೈಕ ಆಟಗಾರ ಮಿಚೆಲ್ ಮಾರ್ಷ್!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಈವರೆಗೆ 13 ಶತಕಗಳು ಮೂಡಿಬಂದಿವೆ. ಈ ಹದಿಮೂರು ಶತಕಗಳಲ್ಲಿ ಲಕ್ನೋ ಸೂಪರ್ ಪರ ಸೆಂಚುರಿ ಸಿಡಿಸಿದ ಏಕೈಕ ಬ್ಯಾಟರ್ ಮಿಚೆಲ್ ಮಾರ್ಷ್ (Mitchell Marsh). ಆದರೆ ಇದೇ ಮಾರ್ಷ್ 2 ಬಾರಿ ಭರ್ಜರಿ ಸೆಂಚುರಿ ಸಿಡಿಸುವ ಅವಕಾಶವನ್ನು ಮಿಸ್ ಮಾಡಿದ್ದಾರೆ. (PC: IPL) ಮೇ 7 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 111 ರನ್​ಗಳ ಶತಕ ಸಿಡಿಸಿ ಮಿಂಚಿದ್ದ ಮಿಚೆಲ್ ಮಾರ್ಷ್, ಆ ಬಳಿಕ…

Read More

Dragon Glimpse: ‘ಡ್ರ್ಯಾಗನ್’ ಸಿನಿಮಾದಲ್ಲಿ ವಿಲನ್​​​ಗಳ ರಾಶಿ; ಗಮನ ಸೆಳೆದ ಗ್ಲಿಂಪ್ಸ್

ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಟಾಲಿವುಡ್ ನಟ ಜೂನಿಯರ್ ಎನ್​​ಟಿಆರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದ ಮೊದಲ ಅಧಿಕೃತ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂದು ಶೀರ್ಷಿಕೆ ಇಡಲಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಸಿನಿಮಾಗಳ ಟೀಸರ್ ಒಂದು ನಿಮಿಷ ಇರುತ್ತದೆ. ಆದರೆ ಪ್ರಶಾಂತ್ ನೀಲ್ ಬರೋಬ್ಬರಿ ನಾಲ್ಕು ನಿಮಿಷಗಳ ಸುದೀರ್ಘ ಗ್ಲಿಂಪ್ಸ್ ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಜೂನಿಯರ್ ಎನ್​​ಟಿಆರ್ ಅವರ ಜನ್ಮದಿನದ ವಿಶೇಷ ಉಡುಗೊರೆಯಾಗಿ ಹೊರಬಂದಿದೆ. ಬ್ರಿಟಿಷರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ…

Read More

Purushottama Masa: ಅಧಿಕ ಜೇಷ್ಠ ಮಾಸದಲ್ಲಿ ಸಂಖ್ಯೆ 33ಕ್ಕೆ ವಿಶೇಷ ಪ್ರಾಶಸ್ತ್ಯ ಏಕೆ? – Kannada News | Purushottama Masa: Understanding the Sacred Month for Spiritual Growth

ಹಿಂದೂ ಚಾಂದ್ರಮಾನ ಪದ್ಧತಿಯಲ್ಲಿ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸಗಳಲ್ಲಿ ಅಧಿಕ ಜೇಷ್ಠ ಮಾಸವೂ ಒಂದು. ಇದು ಸಾಮಾನ್ಯ ಜೇಷ್ಠ ಮಾಸಕ್ಕಿಂತ ಭಿನ್ನವಾಗಿದ್ದು, ಸೂರ್ಯ ಮತ್ತು ಚಂದ್ರರ ಚಲನೆಯ ಆಧಾರದ ಮೇಲೆ ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ವಿಶೇಷವಾದ ಹೆಚ್ಚುವರಿ ಮಾಸವಾಗಿದೆ. ಇದನ್ನು ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸ ಎಂದೂ ಕರೆಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದನ್ನು ಮಲಮಾಸ ಎಂದೂ ಕರೆಯುವುದುಂಟು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ…

Read More

750 ಬ್ಯಾಟರ್​ಗಳಿಗೆ ಸಾಧ್ಯವಾಗಿಲ್ಲ… ಪ್ರಚಂಡ ದಾಖಲೆ ಬರೆದ ವೈಭವ್!

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಈವರೆಗೆ 750 ಕ್ಕೂ ಹೆಚ್ಚು ಭಾರತೀಯರು ಕಣಕ್ಕಿಳಿದಿದ್ದಾರೆ. ಈ ಆಟಗಾರರಿಗೆ ಸಾಧ್ಯವಾಗದೇ ಇರುವುದನ್ನು 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಸಾಧಿಸಿ ತೋರಿಸಿದ್ದಾರೆ. ಅದು ಕೂಡ ಸಿಕ್ಸರ್​ಗಳ ಸುರಿಮಳೆಯೊಂದಿಗೆ..! (PC: IPL) ಹೌದು, ಐಪಿಎಲ್ ಇತಿಹಾಸದಲ್ಲಿ ಆವೃತ್ತಿಯೊಂದರಲ್ಲಿ 50+ ಸಿಕ್ಸ್ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಭರ್ಜರಿ ದಾಖಲೆಯೊಂದನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 10 ಸಿಕ್ಸ್ ಸಿಡಿಸುವ ಮೂಲಕ ಈ ಐತಿಹಾಸಿಕ ಸಾಧನೆ…

Read More

Karnataka Weather Forecast: ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್! – Kannada News | Karnataka Weather Update: Heavy Rain and Hailstorm Alert Issued for Bengaluru and Other Districts

ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ ಬೆಂಗಳೂರು, ಮೇ 19: ಇಂದೂ ಸಹ ರಾಜ್ಯದ ಅನೇಕ ಕಡೆ ಮಳೆಯಾಗಲಿದ್ದು (Weather), ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಖ್ಯಾಂಶಗಳು ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರಿ ಆಲಿಕಲ್ಲು ಮಳೆಯ ಮುನ್ನೆಚ್ಚರಿಕೆ. ಬೆಂಗಳೂರು ಸೇರಿದಂತೆ ಹಲವೆಡೆ ಬಲವಾದ ಗಾಳಿ ಸಹಿತ ಮಳೆಯ ಸಾಧ್ಯತೆ. ಸಾರ್ವಜನಿಕರು…

Read More

ನಮ್ಮ ಮೆಟ್ರೋ ಪಿಲ್ಲರ್​ಗಳ ಮೇಲೆ ಇನ್ಮುಂದೆ ಡಿಜಿಟಲ್ ಜಾಹೀರಾತುಗಳ ಅಬ್ಬರ: ಸಾರ್ವಜನಿಕರಿಂದ ಆಕ್ರೋಶ – Kannada News | Namma Metro Pillar Advertisement Row: BMRCL Invites Mega Tender for 5000 Pillars; Citizens Worry Over Accident Risks

ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಮೇ 20: ಬೆಂಗಳೂರಿನ ಲೈಫ್‌ಲೈನ್ ಎಂದೇ ಖ್ಯಾತಿಯಾಗಿರುವ ನಮ್ಮ ಮೆಟ್ರೋ (Namma Metro) ಇನ್ಮುಂದೆ ಕೇವಲ ಪ್ರಯಾಣಿಕರ ಸಾರಿಗೆ ಸಂಸ್ಥೆಯಾಗಿ ಉಳಿಯದೆ, ಭಾರಿ ಆದಾಯ ತರುವ ಬಿಸಿನೆಸ್ ಹಬ್ ಆಗಿ ಬದಲಾಗಲು ಸಜ್ಜಾಗಿದೆ. ಕೇವಲ ಟಿಕೆಟ್ ಆದಾಯದ ಮೇಲಷ್ಟೇ ಅವಲಂಬಿತವಾಗದೆ, ಟಿಕೆಟ್ ರಹಿತ ಇತರೆ ಮೂಲಗಳ ಆದಾಯವನ್ನು (ನಾನ್-ಫೇರ್ ಬಾಕ್ಸ್ ರೆವಿನ್ಯೂ) ಭರ್ಜರಿಯಾಗಿ ಹೆಚ್ಚಿಸಿಕೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬೃಹತ್ ಯೋಜನೆಯೊಂದನ್ನು ರೂಪಿಸಿದೆ….

Read More

Video: ಆಕಾಶದಲ್ಲೇ ಕಳಚಿಬಿದ್ದ ಎಂಜಿನ್, 15 ಜನರ ಸಾವಿಗೆ ಕಾರಣವಾದ ಯುಎಸ್ ಕಾರ್ಗೋ ಜೆಟ್ ಅಪಘಾತದ ವಿಡಿಯೋ – Kannada News | Cargo Aircraft Crash in United States Leaves 15 Dead After Mid Flight Emergency

ಕೆಂಟುಕಿ, ಮೇ 20: ಅಮೆರಿಕದ ಕೆಂಟುಕಿಯ ಲೂಯಿಸ್​ವಿಲ್ಲೆ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಸರಕು ಸಾಗಣೆ ವಿಮಾನ ದುರಂತದ ವಿಡಿಯೋ ವೈರಲ್ ಆಗಿದೆ. ಭಯಾನಕ ವೀಡಿಯೊವನ್ನು ಯುಎಸ್ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಬಿಡುಗಡೆ ಮಾಡಿದೆ. ಹೊನೊಲುಲುಗೆ ತೆರಳಬೇಕಿದ್ದ ಮೆಕ್‌ಡೊನೆಲ್ ಡೌಗ್ಲಾಸ್ MD-11F ಮಾದರಿಯ ಯುಪಿಎಸ್ ಫ್ಲೈಟ್ 2976 ವಿಮಾನವು ರನ್‌ವೇನಿಂದ ಮೇಲೆದ್ದ ಕೆಲವೇ ಸೆಕೆಂಡುಗಳಲ್ಲಿ ಎಂಜಿನ್ ಗಾಳಿಯಲ್ಲಿ ಕಳಚಿಬಿದ್ದಿತ್ತು. ಬ್ಲ್ಯಾಕ್   ಬಾಕ್ಸ್ ಮತ್ತು ಫ್ಲೈಟ್ ರೆಕಾರ್ಡರ್ ದತ್ತಾಂಶದ ಪ್ರಕಾರ, ಟೇಕ್‌ಆಫ್ ಆದ…

Read More