ಶಾಲೆಗಳ ಆರಂಭಕ್ಕೂ ಮೊದಲೇ ಪೋಷಕರಿಗೆ ಸಾಲು ಸಾಲು ಬೆಲೆ ಏರಿಕೆಯ ಶಾಕ್: ನೋಟ್ಸ್, ವರ್ಕ್ ಬುಕ್, ಪೇಪರ್ ದರ ಹೆಚ್ಚಳ – Kannada News | Karnataka School Reopening: Parents Hit Hard as Notebook and Workbook Prices Hike by 20 25 percent

ಬೆಂಗಳೂರು, ಮೇ 20: ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭಕ್ಕೆ ಮುನ್ನವೇ ಪೋಷಕರು ಸಾಲು ಸಾಲು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಶಾಲಾ ಶುಲ್ಕ ಮತ್ತು ಶಾಲಾ ವಾಹನಗಳ ಬಾಡಿಗೆ ದರ ಈಗಾಗಲೇ ಹೆಚ್ಚಳವಾಗಿದ್ದು, ಇದೀಗ ನೋಟ್‌ಬುಕ್, ವರ್ಕ್‌ಬುಕ್ ಹಾಗೂ ಪೇಪರ್‌ಗಳ ಬೆಲೆಯು ಶೇಕಡ 20ರಿಂದ 25ರಷ್ಟು ಏರಿಕೆಯಾಗಿ ಡಬಲ್ ಶಾಕ್ ನೀಡಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಇಂಧನ ದರ ಹೆಚ್ಚಳವೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಗಲ್ಫ್ ರಾಷ್ಟ್ರಗಳ ಯುದ್ಧದಿಂದ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಪೇಪರ್ ತಯಾರಿಕೆಗೆ ಬೇಕಾದ ಕೆಮಿಕಲ್ಸ್ ಮತ್ತು ಕಲರ್ಸ್‌ಗಳು ಲಭ್ಯವಾಗುತ್ತಿಲ್ಲ. ಅಲ್ಲದೆ, ಇಂಧನ ದರ ಏರಿಕೆಯಿಂದಾಗಿ ನೋಟ್‌ಬುಕ್ಸ್, ವರ್ಕ್‌ಬುಕ್ ಹಾಗೂ ಪೇಪರ್‌ಗಳ ಮುದ್ರಣ ವೆಚ್ಚವೂ ಹೆಚ್ಚಾಗಿದೆ ಎಂದು ಉದ್ಯಮಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಸೂರ್ಯವಂಶಿ ‘A’ ಸೆಲೆಬ್ರೇಷನ್ ರಹಸ್ಯ ಬಯಲು! – Kannada News | Vaibhav sooryavanshi celebration meaning

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ ಇಡೀ ವಿಶ್ವ ಕ್ರಿಕೆಟ್ ಗಮನ ಸೆಳೆದಿರುವ ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ, ಈಗ ತಮ್ಮ ವಿಭಿನ್ನ ಆಟದ ಶೈಲಿ ಮತ್ತು ವಿಶಿಷ್ಟ ಬ್ಯಾಟಿಂಗ್ ಸಂಭ್ರಮಾಚರಣೆಗಳಿಂದಲೇ ಭಾರಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸಿದ ನಂತರ, ಎರಡೂ ಕೈಗಳನ್ನು ಎತ್ತಿ ‘A’ ಆಕಾರದ ಸೈನ್ ತೋರಿಸುವ ಮೂಲಕ ಸಂಭ್ರಮಿಸಿದ್ದರು. ಈ ಆಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಮೈದಾನದಲ್ಲಿ ಮುಚ್ಚಿಟ್ಟಿದ್ದ ರಹಸ್ಯ!

ಪಂದ್ಯ ಮುಗಿದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಮೆಂಟೇಟರ್‌ಗಳು ಈ ‘A’ ಸೈನ್ ಆಚರಣೆಯ ಅರ್ಥವೇನು ಎಂದು ಕೇಳಿದಾಗ, ವೈಭವ್ ಅತ್ಯಂತ ಮುಗ್ಧತೆಯಿಂದ ನಕ್ಕು ಜಾರಿಕೊಂಡಿದ್ದರು. “ಇದಕ್ಕೆ ಯಾವುದೇ ವಿಶೇಷ ಅರ್ಥವಿಲ್ಲ. ಹಿಂದಿನ ಪಂದ್ಯದಲ್ಲೂ ನಾನು ಮಾಡಿದ ಸೆಲೆಬ್ರೇಷನ್‌ಗೆ ಯಾವುದೇ ಅರ್ಥವಿರಲಿಲ್ಲ. ನಾನು ಪ್ರತಿ ಪಂದ್ಯದಲ್ಲೂ ಏನಾದರೂ ಹೊಸದನ್ನು ಮಾಡಲು ಪ್ರಯತ್ನಿಸುತ್ತೇನೆ ಅಷ್ಟೇ” ಎಂದು ತಮಾಷೆಯಾಗಿ ಉತ್ತರಿಸಿ ರಹಸ್ಯವನ್ನು ಮುಚ್ಚಿಟ್ಟಿದ್ದರು.

ಕೊನೆಗೂ ಬಯಲಾಯ್ತು ಅಸಲಿ ಕಾರಣ!

ಪಂದ್ಯ ಮುಗಿದ ನಂತರ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ವೈಭವ್ ತಮ್ಮ ಈ ಸಂಭ್ರಮಾಚರಣೆಯ ಅಸಲಿ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ದೃಷ್ಟಿ ಬೀಳಬಾರದು (ಕಣ್ಣಾಗಬಾರದು) ಎಂಬ ಕಾರಣಕ್ಕೆ ಮೈದಾನದಲ್ಲಿ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡ ಯುವ ಬ್ಯಾಟರ್, ಈ ‘A’ ಸೈನ್ ಅನ್ನು ತಮ್ಮ ಪ್ರೀತಿಯ ತಾಯಿಗೆ ಸಮರ್ಪಿಸಿದ್ದಾರೆ. ಅವರ ತಾಯಿಯ ಹೆಸರು ‘A’ ಅಕ್ಷರದಿಂದ ಪ್ರಾರಂಭವಾಗುವುದರಿಂದ, ಅಮ್ಮನ ಮೇಲಿನ ಪ್ರೀತಿಗಾಗಿ ಈ ವಿಶೇಷ ಆಚರಣೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 750 ಬ್ಯಾಟರ್​ಗಳಿಗೆ ಸಾಧ್ಯವಾಗಿಲ್ಲ… ಪ್ರಚಂಡ ದಾಖಲೆ ಬರೆದ ವೈಭವ್!

ಅಂದಹಾಗೆ ವೈಭವ್ ಸೂರ್ಯವಂಶಿ ಅವರ ತಾಯಿಯ ಹೆಸರು ಆರತಿ ಸೂರ್ಯವಂಶಿ. ತಾಯಿ ಹೆಸರಿನ ಮೊದಲ ಅಕ್ಷರವನ್ನು (A) ತೋರಿಸುವ ಮೂಲಕ ವೈಭವ್ ಸೂರ್ಯವಂಶಿ ಹೊಸ ಸ್ಟ್ರೈಲ್​ನಲ್ಲಿ ಸಂಭ್ರಮಿಸಿದ್ದಾರೆ.

ಪ್ರತಿ ಪಂದ್ಯದಲ್ಲೂ ಹೊಸ ಟ್ರೆಂಡ್:

ವೈಭವ್ ಕೇವಲ ‘A’ ಸೈನ್ ಮಾತ್ರವಲ್ಲದೆ, ಈ ಸೀಸನ್‌ನಲ್ಲಿ ತಮ್ಮ ವಿಭಿನ್ನ ಶೈಲಿಗಳಿಂದಲೇ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 36 ಎಸೆತಗಳಲ್ಲಿ ಐತಿಹಾಸಿಕ ಶತಕ ಸಿಡಿಸಿದಾಗ, ಅವರು ಮೈದಾನದಲ್ಲಿ ‘ಹಾರ್ಟ್ ಸೈನ್’ (ಹೃದಯದ ಆಕಾರ) ಮತ್ತು ‘ಮಿಲಿಟರಿ ಸಲ್ಯೂಟ್’ ಹೊಡೆಯುವ ಮೂಲಕ ಎಲ್ಲರ ಮನ ಗೆದ್ದಿದ್ದರು. ಇದೀಗ ತಾಯಿಗಾಗಿ ‘A’ ಸೈನ್​ನೊಂದಿಗೆ ಸಂಭ್ರಮಿಸಿದ್ದಾರೆ. ಈ ‘A’ ಸೈನ್ ಸಂಭ್ರಮ ಮುಂದಿನ ಪಂದ್ಯಗಳಲ್ಲೂ ಮುಂದುವರೆಸುವ ಸಾಧ್ಯತೆಯಿದೆ.

ಇನ್ನು ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನೀಡಿದ 221 ರನ್​ಗಳ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 93 ರನ್​ ಬಾರಿಸಿದ್ದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಆರ್​ಆರ್ ತಂಡ 19.1 ಓವರ್​ಗಳಲ್ಲಿ 225 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Published On – 9:20 am, Wed, 20 May 26

Source link

World Bee Day: ಮೇ 20 ‘ವಿಶ್ವ ಜೇನುನೊಣ ದಿನ’; ಜೇನುನೊಣ ಉಳಿದರೆ ಮಾತ್ರ ಮನುಕುಲದ ಉಳಿವು! – Kannada News | World Bee Day: India’s Fight Against Honey Adulteration and Bee Conservation

ಪ್ರತಿ ವರ್ಷ ಮೇ 20ರಂದು ವಿಶ್ವದಾದ್ಯಂತ ‘ವಿಶ್ವ ಜೇನುನೊಣ ದಿನ’ವನ್ನು (World Bee Day) ಆಚರಿಸಲಾಗುತ್ತದೆ. ಆಧುನಿಕ ಜೇನುಸಾಕಣೆಯ ಪ್ರವರ್ತಕರಾದ ಸ್ಲೊವೇನಿಯಾದ ಆಂಟನ್ ಜಾನ್ಸಾ (Anton Jansa) ಅವರ ಜನ್ಮ ದಿನದ ನೆನಪಿಗಾಗಿ ಈ ದಿನವನ್ನು ನಿಗದಿಪಡಿಸಲಾಗಿದೆ. ಆದರೆ, ಜೇನುಸಾಕಣೆಯ ಇತಿಹಾಸವನ್ನು ಗಮನಿಸಿದಾಗ ನಾವಿಲ್ಲಿ ಒಂದು ಮಹತ್ವದ ವಿಚಾರವನ್ನು ಮರೆಯಬಾರದು. ಅದೇನೆಂದರೆ, ಪಾಶ್ಚಾತ್ಯ ಜಗತ್ತು ಇದನ್ನು ಗುರುತಿಸುವ ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಜೇನುಸಾಕಣೆ ಮತ್ತು ಜೇನುತುಪ್ಪದ ಬಳಕೆ ಅತ್ಯಂತ ಪ್ರಚಲಿತದಲ್ಲಿತ್ತು. ನಮ್ಮ ಋಗ್ವೇದ, ಅಥರ್ವವೇದ, ಪುರಾಣಗಳು ಹಾಗೂ ಆಯುರ್ವೇದ ಗ್ರಂಥಗಳಲ್ಲಿ ಜೇನುನೊಣ ಮತ್ತು ಜೇನುತುಪ್ಪದ ಉಲ್ಲೇಖಗಳು ಯಥೇಚ್ಛವಾಗಿ ಸಿಗುತ್ತವೆ. ಭಾರತೀಯ ಪರಂಪರೆಯಲ್ಲಿ ಜೇನುತುಪ್ಪವನ್ನು ಕೇವಲ ಆಹಾರವಾಗಿ ನೋಡದೆ, ಒಂದು ಪವಿತ್ರ ದ್ರವ್ಯವಾಗಿ ಹಾಗೂ ಆರೋಗ್ಯ ನೀಡುವ ಅಮೃತ ಸದೃಶ ಔಷಧಿಯಾಗಿ ಬಳಸಲಾಗುತ್ತಿತ್ತು.

ನಮ್ಮ ಗ್ರಾಮೀಣ ಜೀವನದಲ್ಲಿ ಮತ್ತು ಕೃಷಿ ಸಂಸ್ಕೃತಿಯಲ್ಲಿ ಜೇನುನೊಣಗಳು ಅನಾದಿ ಕಾಲದಿಂದಲೂ ಪ್ರಕೃತಿಯ ಅವಿಭಾಜ್ಯ ಅಂಗವಾಗಿವೆ. ಭಾರತದ ರೈತರು ಇವುಗಳನ್ನು ಕೇವಲ ಜೇನುತುಪ್ಪ ಕೊಡುವ ಕೀಟಗಳಾಗಿ ನೋಡದೆ, ಕೃಷಿಯ ‘ಮೌನ ಸಹಾಯಕರು’ ಎಂದು ಗೌರವಿಸಿದ್ದಾರೆ. ಏಕೆಂದರೆ, ಜಗತ್ತಿನ ಬಹುತೇಕ ಬೆಳೆಗಳ ಪರಾಗಸ್ಪರ್ಶ ಕ್ರಿಯೆಗೆ (Pollination) ಜೇನುನೊಣಗಳೇ ಪ್ರಮುಖ ಆಧಾರ. ನಾವು ನಿತ್ಯ ಬಳಸುವ ಹಣ್ಣುಗಳು, ತರಕಾರಿಗಳು ಹಾಗೂ ಎಣ್ಣೆಕಾಳುಗಳು ಸೇರಿದಂತೆ ಹತ್ತಾರು ಬೆಳೆಗಳ ಯಶಸ್ವಿ ಉತ್ಪಾದನೆ ಮತ್ತು ವೈವಿಧ್ಯತೆ ಇವುಗಳ ಮೇಲೆಯೇ ಅವಲಂಬಿತವಾಗಿದೆ. ಸರಳವಾಗಿ ಹೇಳಬೇಕೆಂದರೆ, ಜೇನುನೊಣಗಳಿಲ್ಲದ ಜಗತ್ತಿನಲ್ಲಿ ಮಾನವನ ಆಹಾರ ಭದ್ರತೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಆದರೆ, ಇಂದಿನ ಆಧುನಿಕ ಯುಗದಲ್ಲಿ ಜೇನುನೊಣಗಳ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಮಿತಿಮೀರಿದ ಕೀಟನಾಶಕಗಳ ಬಳಕೆ, ನಗರೀಕರಣದಿಂದಾಗುತ್ತಿರುವ ಅರಣ್ಯ ನಾಶ, ಜಾಗತಿಕ ಹವಾಮಾನ ಬದಲಾವಣೆ ಹಾಗೂ ಅತಿಯಾದ ರಾಸಾಯನಿಕ ಕೃಷಿ ಪದ್ಧತಿಗಳ ಕಾರಣದಿಂದಾಗಿ ಜೇನುನೊಣಗಳ ಸಂಖ್ಯೆ ಜಗತ್ತಿನಾದ್ಯಂತ ಗಣನೀಯವಾಗಿ ಕುಸಿಯುತ್ತಿದೆ. ಇದು ಕೇವಲ ಜೇನುತುಪ್ಪದ ಕೊರತೆಯಲ್ಲ, ಬದಲಿಗೆ ಇಡೀ ಜೀವವೈವಿಧ್ಯತೆ, ಪರಿಸರ ಸಮತೋಲನ ಮತ್ತು ಒಟ್ಟಾರೆ ಕೃಷಿ ರಂಗದ ಭವಿಷ್ಯಕ್ಕೆ ಎದುರಾಗಿರುವ ಬೃಹತ್ ಅಪಾಯದ ಮುನ್ಸೂಚನೆಯಾಗಿದೆ.

ಪ್ರಕೃತಿಯ ಈ ಸಂಕಷ್ಟದ ಜೊತೆಗೆ, ಇಂದು ಭಾರತವನ್ನು ಮತ್ತೊಂದು ಗಂಭೀರ ಸಮಸ್ಯೆ ಕಾಡುತ್ತಿದೆ; ಅದೇ “ಜೇನುತುಪ್ಪದ ಕಲಬೆರಿಕೆ”.

ಇಂದು ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಜೇನುತುಪ್ಪಗಳಲ್ಲಿ ಸಕ್ಕರೆ ಸಿರಪ್, ಕೃತಕ ದ್ರವ್ಯಗಳು ಹಾಗೂ ಅಪಾಯಕಾರಿ ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗುತ್ತಿದೆ ಎಂಬ ಬಲವಾದ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ. ಈ ನಕಲಿ ಜೇನುತುಪ್ಪದ ಹಾವಳಿಯಿಂದಾಗಿ ಹಗಲಿರುಳು ಶ್ರಮಿಸುವ ನಿಜವಾದ ಜೇನುಸಾಕಾಣಿಕೆದಾರರು ಮತ್ತು ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ, ಕಲಬೆರಿಕೆ ಜೇನುತುಪ್ಪವನ್ನು ಅಮೃತವೆಂದು ಸೇವಿಸುತ್ತಿರುವ ಗ್ರಾಹಕರ ಆರೋಗ್ಯವೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದರ ನೇರ ಪರಿಣಾಮವಾಗಿ, ನೈಸರ್ಗಿಕ ಜೇನುತುಪ್ಪದ ಮೇಲಿದ್ದ ಜನರ ನಂಬಿಕೆ ಮತ್ತು ವಿಶ್ವಾಸವೇ ಇಂದು ಕುಸಿಯುವಂತಾಗಿದೆ.

ಇಲ್ಲಿ ನಾವು ಗಂಭೀರವಾಗಿ ಯೋಚಿಸಬೇಕಾದ ಪ್ರಶ್ನೆಯೆಂದರೆ— ಭಾರತದಲ್ಲಿ ನೈಸರ್ಗಿಕವಾಗಿ ಕಾಡು ಹಾಗೂ ಕೃಷಿ ಮೂಲಗಳಿಂದ ಸಂಗ್ರಹವಾಗುತ್ತಿರುವ ಒಟ್ಟು ಜೇನುತುಪ್ಪದ ಪ್ರಮಾಣ ಎಷ್ಟು? ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟವಾಗುತ್ತಿರುವ ಜೇನುತುಪ್ಪದ ಪ್ರಮಾಣ ಎಷ್ಟು? ಈ ಎರಡರ ಅಂಕಿ-ಅಂಶಗಳ ನಡುವೆ ಭಾರಿ ದೊಡ್ಡ ಅಂತರವಿದೆ ಎಂಬ ಸಂಶಯ ಸಾರ್ವಜನಿಕರಲ್ಲಿ ದಟ್ಟವಾಗಿದೆ.

ಇದನ್ನೂ ಓದಿ: ಹಾಲು ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಎಲ್ಲರಿಗೂ ಅಲ್ಲ! ಹಾಗಿದ್ರೆ ಯಾರು ಕುಡಿಯಬಾರದು?

ಆದ್ದರಿಂದ, ಕೇಂದ್ರ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿದೆ. ಆಹಾರ ಸುರಕ್ಷತಾ ಇಲಾಖೆ (FSSAI), ಅರಣ್ಯ ಇಲಾಖೆ, ಕೃಷಿ ಇಲಾಖೆ, ಜೇನುಸಾಕಣೆ ತಜ್ಞರು ಹಾಗೂ ಅಗತ್ಯವಿದ್ದರೆ ಸಿಬಿಐ (CBI) ಒಳಗೊಂಡ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಮೂಲಕ ದೇಶವ್ಯಾಪಿ ಸಮಗ್ರ ಮತ್ತು ಪಾರದರ್ಶಕ ಅಧ್ಯಯನ ನಡೆಯಬೇಕು. ಆ ವರದಿಯಲ್ಲಿ ನೈಸರ್ಗಿಕ ಜೇನು ಉತ್ಪಾದನೆಯ ನೈಜ ಅಂಕಿ-ಅಂಶಗಳು, ಆಮದು-ರಫ್ತು ಪ್ರಮಾಣ, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕಲಬೆರಿಕೆ ತಂತ್ರಗಳು, ಪ್ರಸ್ತುತ ಇರುವ ಲ್ಯಾಬ್ ಪರೀಕ್ಷೆಗಳ ವಿಶ್ವಾಸಾರ್ಹತೆ ಹಾಗೂ ನಕಲಿ ಬ್ರ್ಯಾಂಡ್‌ಗಳ ಜಾಲದ ಕುರಿತು ಸಂಪೂರ್ಣ ವೈಜ್ಞಾನಿಕ ಸತ್ಯ ಹೊರಬರಬೇಕಾಗಿದೆ.

ವಿಶ್ವ ಜೇನುನೊಣ ದಿನ ಎಂಬುದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯದ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ದಿನವಾಗಬಾರದು. ಇದು ಪ್ರಕೃತಿ ಸಂರಕ್ಷಣೆ, ಆಹಾರ ಭದ್ರತೆ ಮತ್ತು ಕೃಷಿಯ ಭವಿಷ್ಯದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಂಭೀರ ಚಿಂತನೆ ಮತ್ತು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ದಿನವಾಗಬೇಕು. ಜೇನುನೊಣಗಳು ಉಳಿದರೆ ಮಾತ್ರ ಕೃಷಿ ಉಳಿಯುತ್ತದೆ, ಕೃಷಿ ಉಳಿದರೆ ಮಾತ್ರ ಮಾನವಕುಲ ಉಳಿಯಲು ಸಾಧ್ಯ.

ಆದ್ದರಿಂದ, ಈ ವಿಶ್ವ ಜೇನುನೊಣ ದಿನದಂದು ನಾವೆಲ್ಲರೂ ಒಟ್ಟಾಗಿ ಸಂಕಲ್ಪ ಮಾಡೋಣ:

  • ಜೇನುನೊಣಗಳನ್ನು ಮತ್ತು ಪ್ರಕೃತಿಯನ್ನು ಉಳಿಸೋಣ.
  • ಶುದ್ಧ ಹಾಗೂ ನೈಸರ್ಗಿಕ ಜೇನುತುಪ್ಪವನ್ನು ರಕ್ಷಿಸೋಣ.
  • ಮಾರುಕಟ್ಟೆಯಲ್ಲಿನ ಜೇನುತುಪ್ಪದ ಕಲಬೆರಿಕೆಗೆ ಕಠಿಣ ಕಟ್ಟೆ ಹಾಕೋಣ.
  • ಪ್ರಾಮಾಣಿಕವಾಗಿ ಜೇನುಸಾಕಣೆ ಮಾಡುವ ನಮ್ಮ ದೇಶದ ರೈತರನ್ನು ಬೆಂಬಲಿಸೋಣ.

ಲೇಖನ:  ಡಾ. ರವಿಕಿರಣ ಪಟವರ್ಧನ, ಶಿರಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Wednesday Remedies: ಗಣೇಶನ ಕೃಪೆಯಿಂದ ಧನಾಗಮನ, ಸುಖ-ಸಮೃದ್ಧಿ ಮತ್ತು ಕಷ್ಟಗಳ ನಿವಾರಣೆಗಾಗಿ 5 ಸರಳ ಉಪಾಯಗಳು! – Kannada News | Wednesday Remedies: 5 Powerful Ganesha and Krishna Upayas for Wealth and Prosperity

ಗಣೇಶನ ಕೃಪೆಯಿಂದ ಧನಾಗಮನImage Credit source: Pinterest

ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವನ್ನೂ ಒಂದಲ್ಲಾ ಒಂದು ದೇವತೆಗಳಿಗೆ ಸಮರ್ಪಿಸಲಾಗಿದೆ. ಅದರಂತೆ, ಬುಧವಾರದ ದಿನವನ್ನು ವಿಘ್ನನಿವಾರಕ ಹಾಗೂ ಪ್ರಥಮ ಪೂಜಿತನಾದ ಗಣೇಶನಿಗೆ ಸಮರ್ಪಿಸಲಾಗಿದೆ. ಈ ದಿನ ವಿಧಿ-ವಿಧಾನಗಳ ಪ್ರಕಾರ ಗಣಪತಿಯನ್ನು ಆರಾಧಿಸುವುದರಿಂದ ಮತ್ತು ವ್ರತ ಮಾಡುವುದರಿಂದ ಆತನು ಶೀಘ್ರವಾಗಿ ಪ್ರಸನ್ನನಾಗುತ್ತಾನೆ. ಅಷ್ಟೇ ಅಲ್ಲದೆ, ಬುಧವಾರದ ದಿನವು ಜಾತಕದಲ್ಲಿರುವ ಬುಧ ಗ್ರಹಕ್ಕೂ ಸಂಬಂಧಿಸಿದೆ.

ಬುಧವಾರದ ದಿನ ಗಣೇಶನ ಆಶೀರ್ವಾದ ಲಭಿಸಿದರೆ ಮನೆಯಲ್ಲಿ ಧನ-ಧಾನ್ಯ ಮತ್ತು ಸುಖ-ಸಮೃದ್ಧಿ ನೆಲೆಸುತ್ತದೆ ಹಾಗೂ ಜೀವನದ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಧರ್ಮ ಶಾಸ್ತ್ರಗಳಲ್ಲಿ ಬುಧವಾರದ ದಿನ ಮಾಡಬೇಕಾದ ಕೆಲವು ವಿಶೇಷ ಪರಿಹಾರಗಳನ್ನು (ಉಪಾಯಗಳನ್ನು) ತಿಳಿಸಲಾಗಿದೆ. ನಿಮ್ಮ ಜೀವನದ ಕಷ್ಟಗಳಿಂದ ಮುಕ್ತಿ ಪಡೆದು, ಮನದಾಸೆಗಳನ್ನು ಈಡೇರಿಸಿಕೊಳ್ಳಲು ಬುಧವಾರದ ದಿನ ಮಾಡಬೇಕಾದ 5 ಸರಳ ಪರಿಹಾರಗಳು ಇಲ್ಲಿವೆ:

ಗಣೇಶನಿಗೆ ಮಾಲ್ಪೂರಿ ನೈವೇದ್ಯ ಅರ್ಪಿಸಿ:

ಬುಧವಾರದ ದಿನ ಗಣೇಶನನ್ನು ಪೂಜಿಸುವಾಗ ಬೆಲ್ಲದಿಂದ ತಯಾರಿಸಿದ ಮಾಲ್ಪೂರಿಯನ್ನು (Malpua) ನೈವೇದ್ಯವಾಗಿ ಅರ್ಪಿಸಿ. ಈ ಪರಿಹಾರವನ್ನು ಮಾಡುವುದರಿಂದ ಮದುವೆಗೆ ಸಂಬಂಧಿಸಿದಂತೆ ಎದುರಾಗುತ್ತಿರುವ ಎಲ್ಲಾ ರೀತಿಯ ಅಡೆತಡೆಗಳು ಹಾಗೂ ಸಮಸ್ಯೆಗಳು ಶೀಘ್ರದಲ್ಲೇ ನಿವಾರಣೆಯಾಗುತ್ತವೆ.

ಗರಿಕೆ ಮತ್ತು ಮೋದಕ:

ಬುಧವಾರದ ದಿನದಂದು ಗಣಪತಿಗೆ ಅತ್ಯಂತ ಪ್ರಿಯವಾದ ಗರಿಕೆ ಹುಲ್ಲನ್ನು (ದೂರ್ವಾ) ಅರ್ಪಿಸಿ. ಇದರೊಂದಿಗೆ ಬೆಲ್ಲದ ಮಿಶ್ರಣವಿರುವ ಮೋದಕವನ್ನು ನೈವೇದ್ಯವಾಗಿ ಸಮರ್ಪಿಸಿ. ಇದನ್ನು ಮಾಡುವುದರಿಂದ ಮನೆಯಲ್ಲಿರುವ ಆರ್ಥಿಕ ಮುಗ್ಗಟ್ಟು ಮತ್ತು ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಮನೆಗೆ ನವಿಲುಗರಿ ತನ್ನಿ:

ಬುಧವಾರದ ಶುಭ ದಿನದಂದು ಮನೆಗೆ ನವಿಲುಗರಿಯನ್ನು ತರುವುದು ತುಂಬಾ ಒಳ್ಳೆಯದು. ಮೊದಲು ಈ ನವಿಲುಗರಿಯನ್ನು ಭಗವಾನ್ ಶ್ರೀಕೃಷ್ಣನಿಗೆ ಅರ್ಪಿಸಿ ಪೂಜಿಸಿ. ನಂತರ ಅದನ್ನು ನಿಮ್ಮ ಮನೆಯ ಹಣ ಇಡುವ ತಿಜೋರಿ ಅಥವಾ ಬೀರುವಿನಲ್ಲಿ ಸುರಕ್ಷಿತವಾಗಿ ಇಡಿ. ಈ ಪರಿಹಾರದಿಂದ ಧನಾಗಮನದ ಹೊಸ ದಾರಿಗಳು ತೆರೆದುಕೊಳ್ಳುತ್ತವೆ ಮತ್ತು ಆರ್ಥಿಕ ಪ್ರಗತಿಯಾಗುತ್ತದೆ.

ಕೊಳಲು:

ಬುಧವಾರದ ದಿನ ಹೊಸದೊಂದು ಕೊಳಲನ್ನು ಮನೆಗೆ ತನ್ನಿ. ಸ್ನಾನ ಮುಗಿಸಿ ಶುದ್ಧರಾದ ನಂತರ ಭಕ್ತಿ-ಭಾವದಿಂದ ಕೊಳಲನ್ನು ಪೂಜಿಸಿ. ಪೂಜೆಯ ನಂತರ ಸ್ವಲ್ಪ ಸಮಯದವರೆಗೆ ಆ ಕೊಳಲನ್ನು ನುಡಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿರುವ ವಾಸ್ತು ದೋಷಗಳು ನಿವಾರಣೆಯಾಗಿ, ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.

ಶ್ರೀಕೃಷ್ಣನಿಗೆ ವಿಶೇಷ ಪೂಜೆ:

ಬುಧವಾರದ ದಿನ ಶ್ರೀಕೃಷ್ಣನಿಗೆ ಕೇಸರಿ ಮಿಶ್ರಿತ ಹಾಲಿನಿಂದ ಅಭಿಷೇಕ ಮಾಡಿ. ನಂತರ ದೇವರಿಗೆ ಬೆಣ್ಣೆ, ಕಲ್ಲುಸಕ್ಕರೆ (ಮಿಶ್ರಿ), ಚೆನ್ನಾಗಿ ಹಣ್ಣಾದ ಬಾಳೆಹಣ್ಣು, ಕೇಸರಿ ಮತ್ತು ಪೇಡಾಗಳನ್ನು ನೈವೇದ್ಯವಾಗಿ ಅರ್ಪಿಸಿ. ಇದರಿಂದ ಕೃಷ್ಣ ಪರಮಾತ್ಮನ ಸಂಪೂರ್ಣ ಕೃಪಾಕಟಾಕ್ಷ ನಿಮ್ಮ ಮೇಲಿರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಒಂದು ತಂಡ ಗೆದ್ದರೆ 4 ತಂಡಗಳು ಐಪಿಎಲ್​ನಿಂದ ಔಟ್..!

Source link

‘ಕಾಗೆಗಳು ಕೂಗುತ್ತಿವೆ’; ಅನಾರೋಗ್ಯ ವದಂತಿ ಹಬ್ಬಿಸಿದವರಿಗೆ ಅಮಿತಾಭ್ ಖಡಕ್ ತಿರುಗೇಟು – Kannada News | Amitabh Bachchan Hospital Rumors Debunked: Routine Check up Confirmed, Fans Relieved

ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಎಲ್ಲ ಕಡೆಗಳಲ್ಲಿ ಹರಿದಾಡಿತ್ತು. ಈ ವಿಷಯ ತಿಳಿದು ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಭಾರೀ ಆತಂಕ ಎದುರಾಗಿತ್ತು. ಅಮಿತಾಭ್​ಗೆ ಈಗ 83 ವರ್ಷ ವಯಸ್ಸು. ಈ ಕಾರಣದಿಂದಲೇ ನಟನ ಆರೋಗ್ಯದ ಬಗ್ಗೆ ಆತಂಕ ಹೆಚ್ಚಿತ್ತು. ಆದರೆ, ಇದೀಗ ಅವರ ಅಭಿಮಾನಿಗಳು ನಿಟ್ಟುಸಿರು ಬಿಡುವಂತಹ ಮತ್ತು ನಿರಾಳರಾಗುವಂತಹ ದೊಡ್ಡ ಅಪ್‌ಡೇಟ್ ಒಂದು ಹೊರಬಿದ್ದಿದೆ.

ಅಮಿತಾಭ್ ಬಚ್ಚನ್ ಅವರು ಮೇ 16ರಂದು ಆಸ್ಪತ್ರೆಗೆ ತೆರಳಿದ್ದು ನಿಜ. ಆದರೆ, ಅವರು ಆಸ್ಪತ್ರೆಗೆ ದಾಖಲಾಗಿಲ್ಲ, ಬದಲಿಗೆ ಅವರು ಕೇವಲ ನಿಯಮಿತ ತಪಾಸಣೆಗಾಗಿ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಮಂಗಳವಾರ ರಾತ್ರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಿ ಅವರ ಆರೋಗ್ಯದ ಬಗ್ಗೆ ನಾನಾ ವದಂತಿಗಳು ಹರಿದಾಡಲು ಆರಂಭ ಆಗಿದ್ದವು. ಅಮಿತಾಭ್ ಅವರು ಮೇ 16ರಿಂದಲೇ ಮುಂಬೈನ ನಾನಾವತಿ ಆಸ್ಪತ್ರೆಯ ವಿಐಪಿ ವಿಭಾಗದಲ್ಲಿ ದಾಖಲಾಗಿದ್ದಾರೆ ಮತ್ತು ಅವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಕೆಲವು ವರದಿಗಳು ಹೇಳಿದ್ದವು. ಅಲ್ಲದೆ ಮಗ ಅಭಿಷೇಕ್ ಬಚ್ಚನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ತಲ್ಲಣ ಸೃಷ್ಟಿಸಿತ್ತು.

ಆದರೆ, ಈ ಎಲ್ಲಾ ಆತಂಕದ ಸುದ್ದಿಗಳ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಆಸ್ಪತ್ರೆಯ ಆಪ್ತ ಮೂಲಗಳು ತಿಳಿಸಿರುವಂತೆ, ‘ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿಲ್ಲ. ಅವರು ಪ್ರತಿ ತಿಂಗಳು ಹೋಗುವಂತೆ ಶನಿವಾರದಂದು ನಾನಾವತಿ ಆಸ್ಪತ್ರೆಗೆ ಸಾಮಾನ್ಯ ಹೆಲ್ತ್ ಚೆಕಪ್‌ಗಾಗಿ ಹೋಗಿದ್ದರು. ತಪಾಸಣೆ ಮುಗಿದ ತಕ್ಷಣವೇ ಅವರು ಮನೆಗೆ ಮರಳಿದ್ದಾರೆ’ ಎಂದು ಹೇಳಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿದ ಮರುದಿನವೇ ಅಮಿತಾಭ್ ಬಚ್ಚನ್ ಅವರು ತಮ್ಮ ನಿವಾಸ ಜಲ್ಸಾದಿಂದ ತಮ್ಮ ಕಚೇರಿಗೆ ತಾವೇ ಸ್ವತಃ ಕಾರು ಚಲಾಯಿಸಿಕೊಂಡು ಹೋಗಿರುವುದನ್ನು ಜನರು ನೋಡಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಬಚ್ಚನ್ ಕುಟುಂಬದ ಆಪ್ತರು ಖಚಿತಪಡಿಸಿದೆ.

ಆಸ್ಪತ್ರೆ ಸುದ್ದಿಯ ನಡುವೆಯೇ ಬುಧವಾರ ಮುಂಜಾನೆ ಅಮಿತಾಭ್ ಬಚ್ಚನ್ ಅವರು ತಮ್ಮ ಬ್ಲಾಗ್‌ನಲ್ಲಿ ಹಂಚಿಕೊಂಡಿರುವ ಸಾಲುಗಳು ಸಖತ್ ವೈರಲ್ ಆಗುತ್ತಿವೆ. ಅವರು ಹಿಂದಿಯಲ್ಲಿ, ‘ಹದ್ದುಗಳು ಶಾಂತವಾದಾಗ ಗಿಳಿಗಳು ಮಾತನಾಡಲು ಶುರು ಮಾಡುತ್ತವೆ… ನಾನು ರೊಟ್ಟಿ ಹಾಗೂ ಸೊಪ್ಪಿನ ಪಲ್ಯ ತಿಂದೆ. ಅಷ್ಟರಲ್ಲೇ ಕಾಗೆಗಳು ಕೂಗಲು ಆರಂಭಿಸಿದವು’ ಎಂದು ಬರೆದುಕೊಂಡಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಅವರು ಈ ರೀತಿ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕೊನೆಗೂ ಆರಂಭ ಆಯ್ತು ‘ಕಲ್ಕಿ’ ಸೀಕ್ವೆಲ್; ಫೋಟೋ ಹಂಚಿಕೊಂಡ ಅಮಿತಾಭ್

ಅಮಿತಾಭ್ ಬಚ್ಚನ್ ಅವರು ಪ್ಯಾನ್ ಇಂಡಿಯಾ ಹಿಟ್ ಸಿನಿಮಾ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಕಮಲ್ ಹಾಸನ್ ಅವರೊಂದಿಗಿನ ಶೂಟಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದರು. ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ 2027ರ ಡಿಸೆಂಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸದ್ಯ ಬಿಗ್ ಬಿ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ನಿರಾಳರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಮಳೆ ಎಫೆಕ್ಟ್, ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ಸುಧಾರಣೆ – Kannada News | Bengaluru AQI Update: Air Quality Improves in Karnataka Following Pre Monsoon Showers

ಮಳೆ ಎಫೆಕ್ಟ್, ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ಸುಧಾರಣೆ

ಬೆಂಗಳೂರು, ಮೇ 18: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು (AQI) ಒಟ್ಟಾರೆಯಾಗಿ ಸ್ಥಿರವಾಗಿದೆ. ಇತ್ತೀಚಿನ ದಿನಗಳಲ್ಲಿ ಸುರಿದ ಮುಂಗಾರು ಪೂರ್ವ ಮಳೆಯ ಕಾರಣದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ಕಡಿಮೆಯಾಗಿದ್ದು, ಗಾಳಿಯ ಗುಣಮಟ್ಟ ಸುಧಾರಿಸಲು ನೆರವಾಗಿದೆ. ರಾಜ್ಯದ ಪ್ರಮುಖ ಜಿಲ್ಲೆಗಳಾದ ಮೈಸೂರು (AQI 18) ಮತ್ತು ಮಂಡ್ಯ (AQI 17) ಜಿಲ್ಲೆಗಳಲ್ಲಿ ಅತ್ಯುತ್ತಮ ಹಾಗೂ ‘ಉತ್ತಮ’ (Good) ವಾಯು ಗುಣಮಟ್ಟ ದಾಖಲಾಗಿದೆ.

ಮುಖ್ಯಾಂಶಗಳು

  • ಮಳೆಯ ಕಾರಣದಿಂದಾಗಿ ರಾಜ್ಯದಾದ್ಯಂತ ಗಾಳಿಯ ಗುಣಮಟ್ಟ ಗಣನೀಯವಾಗಿ ಸುಧಾರಿಸಿದೆ.
  • ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು ಪ್ರಸ್ತುತ ಸಾಧಾರಣ ಮಟ್ಟದಲ್ಲಿ ದಾಖಲಾಗಿದೆ.
  • ಉಸಿರಾಟದ ತೊಂದರೆ ಇರುವವರು ಮಾತ್ರ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ.

ಬೆಂಗಳೂರಿನ ವಾಯು ಗುಣಮಟ್ಟ

ರಾಜಧಾನಿ ಬೆಂಗಳೂರಿನಲ್ಲಿ ಪ್ರಸ್ತುತ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 59 ರಿಂದ 78ರ ಆಸುಪಾಸಿನಲ್ಲಿದ್ದು, ಇದು ಸಾಧಾರಣ (Moderate) ವಿಭಾಗಕ್ಕೆ ಸೇರುತ್ತದೆ. ನಗರದ ಗಾಳಿಯಲ್ಲಿ ಪ್ರಮುಖವಾಗಿ ಮೈಕ್ರಾನ್ ಗಾತ್ರದ ಧೂಳಿನ ಕಣಗಳಾದ PM 2.5 ಮತ್ತು PM 10 ಮಟ್ಟವು ನಿಯಂತ್ರಣದಲ್ಲಿದೆ. ಬಿಟಿಎಂ ಲೇಔಟ್ ಮತ್ತು ಕಂಟೋನ್ಮೆಂಟ್ ಭಾಗಗಳಲ್ಲಿ ಸಾಧಾರಣ ಮಾಲಿನ್ಯ ದಾಖಲಾಗಿದ್ದರೆ, ಸಿಲ್ಕ್ ಬೋರ್ಡ್‌ನಂತಹ ಅತಿ ಹೆಚ್ಚು ವಾಹನ ಸಂಚಾರವಿರುವ ಜಂಕ್ಷನ್‌ಗಳಲ್ಲಿ AQI ಮಟ್ಟವು ತುಸು ಹೆಚ್ಚಿದ್ದು ಸಂವೇದನಾಶೀಲ ಜನರಿಗೆ ಅಲ್ಪ ಅಡಚಣೆ ಉಂಟುಮಾಡಬಹುದು.

ಬೆಂಗಳೂರಿನ ಪ್ರಸಕ್ತ ಹವಾಮಾನ ಮತ್ತು ಗಾಳಿಯ ಸ್ಥಿತಿಯು ಸಾರ್ವಜನಿಕರಿಗೆ ಸುರಕ್ಷಿತವಾಗಿದೆ. ಉಸಿರಾಟದ ತೊಂದರೆ ಅಥವಾ ತೀವ್ರ ಆಸ್ತಮಾ ಇರುವವರು ಮಾತ್ರ ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಸೂಕ್ತ. ಉಳಿದಂತೆ ಸಾರ್ವಜನಿಕರು ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು.

ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಗಾಳಿಯ ಗುಣಮಟ್ಟವು ಇದೇ ರೀತಿ ಉತ್ತಮ ಮಟ್ಟದಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಉಸಿರಾಟದ ತೊಂದರೆ ಇರುವವರು ಮತ್ತು ಹಿರಿಯ ನಾಗರಿಕರು ಮುಂಜಾನೆ ಮುಕ್ತವಾಗಿ ವಾಸಿಮಾಡಲು ಇಂದಿನ ಹವಾಮಾನವು ಅತ್ಯಂತ ಸೂಕ್ತವಾಗಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಧೂಳಿನ ಕಣಗಳು ನೆಲಕಚ್ಚಲಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಇಡೀ ರಾಜ್ಯದ ವಾಯು ಗುಣಮಟ್ಟವು ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ ಎಂದು ಪರಿಸರ ನಿಯಂತ್ರಣ ಮಂಡಳಿ ಮೂಲಗಳು ತಿಳಿಸಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

500 ಕೋಟಿ ರೂ. ಒಡೆಯ ಜೂ. ಎನ್​​ಟಿಆರ್; 9999 ನಂಬರ್ ರಹಸ್ಯವೇನು? – Kannada News | Junior NTR’s Royal Life: Net Worth, Luxury Cars, and Lucky ‘9999’ Number Secret Revealed

ಇಂದು (ಮೇ 20) ಜನ್ಮದಿನದ ಸಂಭ್ರಮದಲ್ಲಿರುವ ನಟ ಜೂನಿಯರ್ ಎನ್​​ಟಿಆರ್ (JR NTR) ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮ್ಮ ರಾಯಲ್ ಲೈಫ್‌ಸ್ಟೈಲ್ ವಿಷಯದಲ್ಲೂ ಸಖತ್ ಸುದ್ದಿಯಲ್ಲಿರುತ್ತಾರೆ. ನಟನೆ, ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳು ಮತ್ತು ಉದ್ಯಮಗಳ ಮೂಲಕ ತಾರಕ್ ಭಾರಿ ಆಸ್ತಿ ಗಳಿಸಿದ್ದಾರೆ. ಅವರ ಒಟ್ಟು ಆಸ್ತಿ, ಐಷಾರಾಮಿ ಕಾರುಗಳು ಮತ್ತು ಅವರ ನೆಚ್ಚಿನ ಕಾರ್ ನಂಬರ್ ಕುರಿತ ಆಸಕ್ತಿದಾಯಕ ವಿವರ ಇಲ್ಲಿದೆ.

ಜೂನಿಯರ್ ಎನ್​​ಟಿಆರ್ ಒಟ್ಟು ಆಸ್ತಿ

ಚಿತ್ರರಂಗದ ಮೂಲಗಳ ಪ್ರಕಾರ, ಜೂನಿಯರ್ ಎನ್​​ಟಿಆರ್ ಅವರ ಒಟ್ಟು ಆಸ್ತಿ ಸುಮಾರು 450 ರಿಂದ 500 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಅವರು ಒಂದು ಸಿನಿಮಾಗೆ 60 ರಿಂದ 80 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಹೈದರಾಬಾದ್‌ನ ಐಷಾರಾಮಿ ಜೂಬ್ಲಿ ಹಿಲ್ಸ್‌ನಲ್ಲಿ ಸುಮಾರು 25 ಕೋಟಿ ರೂ. ಮೌಲ್ಯದ ಭವ್ಯ ಬಂಗಲೆ ಹೊಂದಿರುವ ಇವರಿಗೆ ಬೆಂಗಳೂರಿನಲ್ಲೂ ಆಸ್ತಿ ಇದೆ ಎಂದು ಹೇಳಲಾಗುತ್ತದೆ.

ಐಷಾರಾಮಿ ಕಾರ್ ಕಲೆಕ್ಷನ್

ತಾರಕ್ ಅವರಿಗೆ ದುಬಾರಿ ಮತ್ತು ವಿಭಿನ್ನ ಕಾರುಗಳನ್ನು ಸಂಗ್ರಹಿಸುವ ದೊಡ್ಡ ಹವ್ಯಾಸವಿದೆ. ಅವರ ಗ್ಯಾರೇಜ್‌ನಲ್ಲಿ ಜಗತ್ತಿನ ಅತ್ಯಾಧುನಿಕ ಕಾರುಗಳಿವೆ: ಭಾರತದಲ್ಲಿ ವಿಶೇಷ ಆವೃತ್ತಿಯ ಲಂಬೋರ್ಗಿನಿ ಕಾರನ್ನು ಖರೀದಿಸಿದ ಮೊದಲ ಭಾರತೀಯ ಜೂನಿಯರ್ ಎನ್​​ಟಿಆರ್. ಇದರ ಬೆಲೆ ಸುಮಾರು 3.16 ಕೋಟಿ ರೂಪಾಯಿ ಗಿಂತಲೂ ಹೆಚ್ಚು. ನಿತ್ಯದ ಪ್ರಯಾಣ ಹಾಗೂ ಶೂಟಿಂಗ್‌ಗಳಿಗೆ ಇವರು ಹೆಚ್ಚಾಗಿ ಐಷಾರಾಮಿ ಮರ್ಸಿಡಿಸ್ ಕಾರುಗಳನ್ನು ಬಳಸುತ್ತಾರೆ. ಇವುಗಳ ಜೊತೆಗೆ ತಾರಕ್ ಬಳಿ ಕೋಟಿಗಟ್ಟಲೆ ಬೆಲೆ ಬಾಳುವ ರೇಂಜ್ ರೋವರ್ ಮತ್ತು ಬಿಎಂಡಬ್ಲ್ಯು ಕಾರುಗಳೂ ಇವೆ.

9999: ಕ್ರೇಜಿ ಕಾರ್ ನಂಬರ್ ರಹಸ್ಯ!

ಜೂನಿಯರ್ ಎನ್​​ಟಿಆರ್ ಅವರ ಎಲ್ಲಾ ಕಾರುಗಳಿಗೂ ಒಂದು ಸಾಮ್ಯತೆ ಇದೆ. ಅದುವೇ ಅವರ ನೆಚ್ಚಿನ ‘9999’ ನಂಬರ್. ತಮ್ಮ ಕಾರುಗಳಿಗೆ ‘9999’ ನೋಂದಣಿ ಸಂಖ್ಯೆ ಸಿಗಲು ಅವರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲು ಹಿಂಜರಿಯುವುದಿಲ್ಲ.

ಇದನ್ನೂ ಓದಿ: ಜೂ. ಎನ್‌ಟಿಆರ್ ಜನ್ಮದಿನ: ಟಾಲಿವುಡ್ ನಟನ ಕನ್ನಡ ಪ್ರೇಮ, ಅಪ್ಪು ಜೊತೆ ವಿಶೇಷ ಬಾಂಧವ್ಯ

ಹಿಂದೆ ತಮ್ಮ ಲಂಬೋರ್ಗಿನಿ ಕಾರಿಗೆ ‘TS 09 FS 9999’ ಸಂಖ್ಯೆಯನ್ನು ಪಡೆಯಲು ಆರ್‌ಟಿಒ ಹರಾಜಿನಲ್ಲಿ ಬರೋಬ್ಬರಿ 17 ಲಕ್ಷ ರೂಪಾಯಿ ಬಿಡ್ ಮಾಡಿ ನಂಬರ್ ಪಡೆದುಕೊಂಡಿದ್ದರು. ಅವರ ತಾತ, ದಿವಂಗತ ಎನ್‌ಟಿ ರಾಮರಾವ್ ಕಾಲದಿಂದಲೂ ಈ ‘9999’ ಸಂಖ್ಯೆ ಅವರ ಕುಟುಂಬಕ್ಕೆ ಅದೃಷ್ಟದ ಸಂಖ್ಯೆಯಾಗಿದೆ. ತಾರಕ್ ಅವರ ತಂದೆ ಹರಿಕೃಷ್ಣ ಕೂಡ ಇದೇ ನಂಬರ್ ಬಳಸುತ್ತಿದ್ದರು, ಹೀಗಾಗಿ ತಾರಕ್ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

TV9 Kannada News Live: ಕಳ್ಳತನದ ಆರೋಪಿ 34 ವರ್ಷಗಳ ಬಳಿಕ ಅರೆಸ್ಟ್! ಮೆಡಿಕಲ್ ಬಂದ್ ಸೇರಿ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: Countrywide Medical Shop Strike Today; 34 Year Old Theft Case Absconder Arrested In Kolar

ಮೆಡಿಕಲ್ ಶಾಪ್ ಬಂದ್ (ಎಐ ಚಿತ್ರ)Image Credit source: MediaForge AI

ಬೆಂಗಳೂರು, ಮೇ 20: ಆನ್ಲೈನ್ ಔಷಧ ಮಾರಾಟ, ಆನ್​ಲೈನ್ ಮೂಲಕ ಔಷಧಗಳಿಗೆ ಭಾರಿ ರಿಯಾಯಿತಿ ನೀಡುವುದದನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ಇಂದು (ಮೇ 20) ಮೆಡಿಕಲ್ ಬಂದ್ (Medical Bandh) ಮಾಡಲಾಗುತ್ತಿದೆ. ಕರ್ನಾಟಕದಲ್ಲಿಯೂ ಔಷಧ ವ್ಯಾಪಾರಿಗಳು ಮೆಡಿಕಲ್ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಬೆಳಗ್ಗೆ 11:00 ಗಂಟೆಗೆ ಡಿ ಸಿ ಕಚೇರಿ ಎದುರು ಪ್ರತಿಭಟನೆಗೆ ಪಕ್ಷದ ವ್ಯಾಪಾರಿಗಳು ಮುಂದಾಗಿದ್ದಾರೆ.

ಮುಖ್ಯಾಂಶಗಳು

  • ದೇಶಾದ್ಯಂತ ಇಂದು ಮೆಡಿಕಲ್ ಬಂದ್, ಔಷಧ ವ್ಯಾಪಾರಿಗಳಿಂದ ಪ್ರತಿಭಟನೆ.
  • ದೆಹಲಿಯಲ್ಲಿ ಇಂದಿನಿಂದ ವಾರದಲ್ಲಿ 2 ದಿನ ವರ್ಕ್ ಫ್ರಮ್​ ಹೋಮ್.
  • ಕಳ್ಳತನದ ಆರೋಪಿ 34 ವರ್ಷಗಳ ಬಳಿಕ ಅರೆಸ್ಟ್.

ಕೋಲಾರದಲ್ಲೊಂದು ಅಚ್ಚರಿಯ ವಿದ್ಯಮಾನ ನಡೆದಿದೆ. ಸುಮಾರು 34 ವರ್ಷಗಳ ಹಿಂದಿನ ಕಳ್ಳತನ ಕೇಸ್​​ ಸಂಬಂಧ ಆರೋಪಿ ರವಿ (62) ಎಂಬಾತನನ್ನು ಉರಿಗಾಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೋರ್ಟ್​ಗೆ ಹಾಜರಾಗದೆ ಬೆಂಗಳೂರಿನ ನಿರಾಶ್ರಿತರ ಕೇಂದ್ರದಲ್ಲಿದ್ದ. 1992ರಲ್ಲಿ ಹಲವು ಕಳ್ಳತನ ಕೇಸ್​ಗಳಲ್ಲಿ ಶಾಮೀಲಾಗಿದ್ದ.


ದೆಹಲಿಯಲ್ಲಿ ಇಂದಿನಿಂದ ವರ್ಕ್ ಫ್ರಮ್​ ಹೋಂ

ಇಂದಿನಿಂದ ದೆಹಲಿಯಲ್ಲಿ ವಾರದಲ್ಲಿ 2 ದಿನ ವರ್ಕ್ ಫ್ರಮ್​ ಹೋಂ ನೀತಿ ಜಾರಿಗೊಳಿಸಲಾಗಿದೆ. ಸರ್ಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗೆ ವರ್ಕ್​ ಫ್ರಮ್​ ಹೋಂ ನೀಡಲಾಗಿದ್ದು ಪ್ರತಿ ಬುಧವಾರ, ಶನಿವಾರ ಅವರು ಮನೆಯೊಂದಲೇ ಕೆಲಸ ಮಾಡಲಿದ್ದಾರೆ. ಆರೋಗ್ಯ ಇಲಾಖೆ ಸೇರಿ ಕೆಲ ತುರ್ತು ಸೇವೆಯ ಇಲಾಖೆಗಳು ಬಿಟ್ಟು ಉಳಿದ ಸರ್ಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗೆ ಈ ನಿಯಮ ಅನ್ವಯವಾಗಲಿದೆ. ಪೆಟ್ರೋಲ್​, ಡೀಸೆಲ್ ಮಿತಬಳಕೆಗೆ ಪ್ರಧಾನಿ ಮೋದಿ ಕರೆ ಹಿನ್ನೆಲೆ ದೆಹಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಶೈಕ್ಷಣಿಕ ವರ್ಷಾರಂಭಕ್ಕೂ ಮುನ್ನವೇ ಪೋಷಕರಿಗೆ ಮತ್ತೊಂದು ಸಂಕಷ್ಟ

ಶಾಲೆಗಳ ಶುಲ್ಕ ಈಗಾಗಲೇ ಏರಿಕೆಯಾಗಿದೆ. ಶಾಲಾ ವಾಹನಗಳ ಬೆಲೆ ಏರಿಕೆಯೂ ಆಗಿದೆ. ಈಗ ಶಾಲೆಗಳ ಆರಂಭಕ್ಕೂ ಮೊದಲೇ ಪೋಷಕರಿಗೆ ಮತ್ತೊಂದು ಆಘಾತ ಎದುರಾಗಿದೆ. ನೋಟ್ಸ್ ಬುಕ್, ವರ್ಕ್ ಬುಕ್, ವರ್ಕ್ ಬುಕ್ ಪೇಪರ್ ಗಳ ಬೆಲೆ ಶೇ 20-25 ಏರಿಕೆಯಾಗಿದ್ದು ಪೋಷಕರನ್ನು ಕಂಗಾಲಾಗಿಸಿದೆ.

ಕರ್ನಾಟಕ ಬಿಜೆಪಿಯಲ್ಲಿ ಆಮೂಲಾಗ್ರ ಬದಲಾವಣೆ ಸಾಧ್ಯತೆ

ಮೇ 25ರ ಬಳಿಕ ಕರ್ನಾಟಕ ಬಿಜೆಪಿಯಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದಾಗ್ಯೂ ಪಕ್ಷದ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಮತ್ತಷ್ಟು ಓದಿ: ಮೇ 25ರ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹಾ ಬದಲಾವಣೆ? ವಿಜಯೇಂದ್ರ ಪಟ್ಟ ಭದ್ರ; ಕೋರ್ ಕಮಿಟಿ ಪುನಾರಚನೆ ಸಾಧ್ಯತೆ!

ನಮ್ಮ ಮೆಟ್ರೋ ಪಿಲ್ಲರ್​ಗಳನ್ನು ವಾಣಿಜ್ಯ ಮತ್ತು ಡಿಜಿಟಲ್ ಜಾಹೀರಾತುಗಳಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಈಗ ಮೆಗಾ ಟೆಂಡರ್ ಆಹ್ವಾನಿಸಿದೆ. ಪಿಲ್ಲರ್​​ಗಳಲ್ಲಿ ಡಿಜಿಟಲ್ ಜಾಹೀರಾತಿಗೆ ಅವಕಾಶ ಕೊಡುವ ಮೂಲಕ ಟಿಕೆಟ್ ಹೊರತಾದ ಆದಾಯ ಹೆಚ್ಚಿಸಿಕೊಳ್ಳಲು ಬಿಎಂಆರ್​ಸಿಎಲ್ ಮುಂದಾಗಿದೆ. ಆದರೆ, ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಪಿಲ್ಲರ್​ಗಳ ಮೇಲೆ ಇನ್ಮುಂದೆ ಡಿಜಿಟಲ್ ಜಾಹೀರಾತುಗಳ ಅಬ್ಬರ: ಸಾರ್ವಜನಿಕರಿಂದ ಆಕ್ರೋಶ

ಬಿಎಂಆರ್​ಸಿಎಲ್​ನ ಈ ನಿರ್ಧಾರದಿಂದ ನಗರದ ಸೌಂದರ್ಯ ಹಾಳಾಗಲಿದೆ. ರಾತ್ರಿ ವೇಳೆ ವಾಹನ ಅಪಘಾತಗಳಿಗೂ ಕಾರಣವಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:26 am, Wed, 20 May 26

Source link

ನಮ್ದು ಫ,,,ಗ್ ತಂಡ: ಲೈವ್​ನಲ್ಲೇ ಅಶ್ಲೀಲ ಪದ ಬಳಸಿದ ರಿಷಭ್ ಪಂತ್..! – Kannada News | We Are A Fking Good Team”: Rishabh Pant Sparks Controversy

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲನುಭವಿಸಿದೆ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 220 ರನ್ ಕಲೆಹಾಕಿದ್ದರು. ಈ ಗುರಿಯನ್ನು 19.1 ಓವರ್​ಗಳಲ್ಲಿ ಚೇಸ್ ಮಾಡಿ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಸಿದ್ಧ ನಿರೂಪಕ ಇಯಾನ್ ಬಿಷಪ್ ಅವರು ತಂಡದ ಕಳಪೆ ಪ್ರದರ್ಶನದ ಕುರಿತು ರಿಷಭ್ ಪಂತ್ ಅವರನ್ನು ತಂಡದ ಸಮತೋಲನ ಹಾಗೂ ಪ್ಲ್ಯಾನಿಂಗ್ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ತೀವ್ರ ಭಾವುಕರಾಗಿ ಉತ್ತರಿಸಿದ ಪಂತ್, ತಮ್ಮ ತಂಡವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನಿಯಂತ್ರಣ ತಪ್ಪಿದ್ದಾರೆ.

“ನಮ್ಮ ನಿರೀಕ್ಷೆಯಂತೆ ಪಂದ್ಯಗಳು ಸಾಗುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಆ ಕಾರಣಕ್ಕಾಗಿ ನಾವು ಕೆಟ್ಟ ತಂಡವಾಗುವುದಿಲ್ಲ. ನಾವು ನಿಜಕ್ಕೂ ನಮ್ದು ಉತ್ತಮ ಫ…ಗ್ ತಂಡ” ಎಂದಿದ್ದಾರೆ.

ನೇರ ಪ್ರಸಾರದಲ್ಲೇ ರಿಷಭ್ ಪಂತ್ ಅಸಭ್ಯ ಪದ ಬಳಸಿದ್ದನ್ನು ಕೇಳಿ ನಿರೂಪಕ ಇಯಾನ್ ಬಿಷಪ್ ಕೆಲಕಾಲ ಸ್ತಬ್ಧರಾದರು. ತಕ್ಷಣವೇ ಅವರು ಸಂದರ್ಶನವನ್ನು ಅಲ್ಲಿಗೆ ಕೊನೆಗೊಳಿಸಿದರು.

ಇದನ್ನೂ ಓದಿ: 750 ಬ್ಯಾಟರ್​ಗಳಿಗೆ ಸಾಧ್ಯವಾಗಿಲ್ಲ… ಪ್ರಚಂಡ ದಾಖಲೆ ಬರೆದ ವೈಭವ್!

ಇದೀಗ ರಿಷಭ್ ಪಂತ್ ಅವರ F-Word ಇಂಟರ್​ವ್ಯೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕನ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ರಿಷಭ್ ಪಂತ್ ನಿಯಂತ್ರಣ ತಪ್ಪಲು ಕಾರಣವೇನು?

ಲಕ್ನೋ ಸೂಪರ್ ಜೈಂಟ್ಸ್​ ತಂಡದ ಈ ಸೀಸನ್‌ನ ಸ್ಥಿತಿ ಮತ್ತು ರಿಷಭ್ ಪಂತ್ ಮೇಲಿರುವ ಒತ್ತಡವೇ ಈ ಆಕ್ರೋಶಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಏಕೆಂದರೆ….

  •  ಪ್ಲೇ-ಆಫ್‌ನಿಂದ ಹೊರಕ್ಕೆ: ಈ ಸೋಲಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಅಧಿಕೃತವಾಗಿ ಐಪಿಎಲ್ 2026ರ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದೆ ಮತ್ತು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
  •  ₹27 ಕೋಟಿಯ ಭಾರಿ ಒತ್ತಡ: ಮೆಗಾ ಹರಾಜಿನಲ್ಲಿ ಬರೋಬ್ಬರಿ ₹27 ಕೋಟಿ ನೀಡಿ ಲಕ್ನೋ ಸೂಪರ್ ಜೈಂಟ್ಸ್​ ಫ್ರಾಂಚೈಸಿ ಪಂತ್ ಅವರನ್ನು ಖರೀದಿಸಿತ್ತು. ಆದರೆ ನಾಯಕನಾಗಿ ಮತ್ತು ಬ್ಯಾಟರ್ ಆಗಿ ಅವರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ (12 ಇನ್ನಿಂಗ್ಸ್‌ಗಳಲ್ಲಿ 7 ಬಾರಿ 20 ರನ್‌ಗಳ ಒಳಗೇ ಔಟ್ ಆಗಿದ್ದಾರೆ).
  • ತಂಡದ ಮೇಲಿನ ಟೀಕೆಗಳು: ಸರಣಿ ಸೋಲುಗಳಿಂದ ಇಡೀ ತಂಡದ ಮೇಲೆ ಮಾಧ್ಯಮಗಳು ಮತ್ತು ಅಭಿಮಾನಿಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದವು.

ಒಟ್ಟಾರೆಯಾಗಿ ಹೇಳುವುದಾದರೆ ರಿಷಭ್ ಪಂತ್ ಲೈವ್ ಟಿವಿಯಲ್ಲಿ ಅಸಭ್ಯ ಪದ ಬಳಸಿದ್ದು ಕ್ರೀಡಾ ಜಗತ್ತಿನಲ್ಲಿ ದೊಡ್ಡ ವಿವಾದ ಸೃಷ್ಟಿಸಿರುವುದು ನಿಜ. ಕೋಟಿಗಟ್ಟಲೆ ವೀಕ್ಷಕರು ನೋಡುವ ವೇದಿಕೆಯಲ್ಲಿ ಇಂತಹ ಭಾಷಾ ಪ್ರಯೋಗ ಶಿಸ್ತಿನ ಉಲ್ಲಂಘನೆಯೇ ಸರಿ. ಆದರೆ, ಆ ಕ್ಷಣದ ಆಕ್ರೋಶವನ್ನು ಬದಿಗಿಟ್ಟು ನೋಡಿದರೆ, ಅದರ ಹಿಂದೆ ತನ್ನ ತಂಡದ ಮೇಲಿದ್ದ ಅಪಾರ ನಂಬಿಕೆ ಮತ್ತು ನಾಯಕನೊಬ್ಬನ ತೀವ್ರ ಭಾವುಕತೆ ಎದ್ದು ಕಾಣುತ್ತದೆ.

ಸತತ ಸೋಲುಗಳಿಂದ ಜರ್ಜರಿತವಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಇಡೀ ಜಗತ್ತೇ ಟೀಕಿಸುತ್ತಿರುವಾಗ, ನಾಯಕನಾಗಿ ರಿಷಭ್ ಪಂತ್ ಅವರ ಬೆಂಬಲಕ್ಕೆ ನಿಂತ ರೀತಿ ಅವರ ಕಠಿಣ ಮನಸ್ಥಿತಿಯನ್ನು ತೋರಿಸುತ್ತದೆ. ಮಾತು ತಪ್ಪಾಗಿರಬಹುದು, ಆದರೆ ತನ್ನ ಆಟಗಾರರನ್ನು ರಕ್ಷಿಸುವ ಅವರ ಜವಾಬ್ದಾರಿ ಮತ್ತು ಧೈರ್ಯ ಮಾತ್ರ ಅನನ್ಯವಾದದ್ದು.

Source link

Exit mobile version