ಸರ್ಕಾರಿ ಶಾಲೆಯಲ್ಲಿ ಓದಿದ 30 ಸಾವಿರ ಮಕ್ಕಳು ಅತಂತ್ರ! ಸರ್ಕಾರದ ಎಡವಟ್ಟಿಗೆ ವಿದ್ಯಾರ್ಥಿಗಳ ಭವಿಷ್ಯದ ಕಥೆ ಏನು? – Kannada News | Karnataka English Medium School: 30,000 Students Struggle for Class 8 Admissions

ಪ್ರಾತಿನಿಧಿಕ ಚಿತ್ರImage Credit source: deccanherald

ಬೆಂಗಳೂರು, ಜೂನ್​​ 15: ಸರ್ಕಾರಿ ಶಾಲೆಯ (government school) ಮಕ್ಕಳಿಗೂ ಇಂಗ್ಲಿಷ್ ಮೀಡಿಯಂ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಆರಂಭವಾದ ಯೋಜನೆಯೊಂದು, ಈಗ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡಿದೆ. ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ (English Medium) ಓದಿದ ರಾಜ್ಯದ ಸುಮಾರು 30 ಸಾವಿರ ವಿದ್ಯಾರ್ಥಿಗಳು ಈಗ ಮುಂದೇನು ಮಾಡಬೇಕು ತೋಚದೆ ಅತಂತ್ರರಾಗಿದ್ದಾರೆ. ಜೂನ್ ತಿಂಗಳು ಅರ್ಧ ಕಳೆದರೂ ಶಿಕ್ಷಣ ಇಲಾಖೆ ಮಾತ್ರ ಈ ಗೊಂದಲಕ್ಕೆ ಇನ್ನೂ ಮುಕ್ತಿ ನೀಡಿಲ್ಲ.

ಮುಖ್ಯಾಂಶಗಳು

  • ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳ ಮಕ್ಕಳ ಸ್ಥಿತಿ ಅತಂತ್ರ
  • ಇದುವರೆಗೂ 8ನೇ ತರಗತಿ ಇಂಗ್ಲಿಷ್​ ‌ಮೀಡಿಯಂ ಪ್ರಾರಂಭಿಸದ ಸರ್ಕಾರ
  • ವಿದ್ಯಾರ್ಥಿಗಳ ಪೋಷಕರು ಅಸಮಾಧಾನ

30 ಸಾವಿರ ವಿದ್ಯಾರ್ಥಿಗಳ ಸ್ಥಿತಿ ಅತಂತ್ರ

ಕಳೆದ 2018-19ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರವು ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಆಯ್ದ 1001 ಸರ್ಕಾರಿ ಶಾಲೆಗಳಲ್ಲಿ 1ರಿಂದ 7ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿತ್ತು. ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಹೆತ್ತವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದರು. ಅದರಂತೆ ಈ 1001 ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂನಲ್ಲಿ ಓದಿದ ಸುಮಾರು 30 ಸಾವಿರ ವಿದ್ಯಾರ್ಥಿಗಳು ಈಗ ಯಶಸ್ವಿಯಾಗಿ 7ನೇ ತರಗತಿ ಪಾಸಾಗಿದ್ದಾರೆ. ಆದರೆ, ಅಸಲಿ ಸಮಸ್ಯೆ ಇಲ್ಲಿಂದ ಆರಂಭವಾಗಿದೆ.

ಇದನ್ನೂ ಓದಿ: ಶಾಲಾ ಮಕ್ಕಳಿಗಿನ್ನು ಚಪ್ಪಲಿ ಭಾಗ್ಯ!: ಮಕ್ಕಳ ಆರೋಗ್ಯ ಗಮನದಲ್ಲಿರಿಸಿ ಶಿಕ್ಷಣ ಇಲಾಖೆಯಿಂದ ಹೊಸ ಚಿಂತನೆ

7ನೇ ತರಗತಿ ಮುಗಿಸಿದ ಈ ಮಕ್ಕಳಿಗೆ ಮುಂದಿನ 8ನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಮುಂದುವರಿಸಲು ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ, 1001 ಶಾಲೆಗಳ 30 ಸಾವಿರ ವಿದ್ಯಾರ್ಥಿಗಳು ಈಗ 8ನೇ ತರಗತಿಗೆ ಎಲ್ಲಿ ಸೇರಬೇಕು ಎಂಬ ಗೊಂದಲದಲ್ಲಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲೇ ಓದು ಮುಂದುವರಿಸಬೇಕೆಂದರೆ ಪೋಷಕರು ಲಕ್ಷ ಲಕ್ಷ ಹಣ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದರೆ, ಇಷ್ಟು ವರ್ಷ ಇಂಗ್ಲಿಷ್‌ನಲ್ಲಿ ಓದಿದ ಮಕ್ಕಳು ಮತ್ತೆ ಪುನಃ ಕನ್ನಡ ಮಾಧ್ಯಮಕ್ಕೆ ಹಿಂತಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಜೂನ್ ಅರ್ಧ ತಿಂಗಳು ಕಳೆದಿದ್ದರೂ ಶಿಕ್ಷಣ ಇಲಾಖೆ ಮಾತ್ರ ಈ ಗಂಭೀರ ಸಮಸ್ಯೆಗೆ ಯಾವುದೇ ಪರಿಹಾರ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ: ನಿಮಗೆ ಪುಣ್ಯ ಬರುತ್ತದೆ ಎಂದ ಪೋಷಕರು 

ಇನ್ನು ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ಪೋಷಕರೊಬ್ಬರು ಈ ಬಗ್ಗೆ ಮಾತನಾಡಿದ್ದು, 7ನೇ ತರಗತಿವರೆಗೂ ಮಕ್ಕಳು ಇಂಗ್ಲಿಷ್​​ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 8ನೇ ತರಗತಿ ಆರಂಭ ಮಾಡದಿದ್ದರೆ ವಿದ್ಯಾರ್ಥಿಗಳು ಎಲ್ಲಿ ಓದಬೇಕು, ಎಲ್ಲಿಗೆ ಹೋಗಬೇಕು. ಯಾವುದೇ ಕಾರಣಕ್ಕೂ ಇದನ್ನು ಬಂದ್ ಮಾಡಬಾರದು. ಸರ್ಕಾರಿ ಶಾಲೆಗಳು, ಆಸ್ಪತ್ರೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಸುಮಾರು 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು 7ನೇ ತರಗತಿ ಪಾಸ್ ಆಗಿ 8ನೇ ತರಗತಿಗೆ ಬಂದಿದ್ದಾರೆ. ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ನಿಮಗೆ ಪುಣ್ಯ ಬರುತ್ತದೆ. ದಯವಿಟ್ಟು ಇಂಗ್ಲಿಷ್ ‌ಮಾಧ್ಯಮವನ್ನು ಬಂದ್‌ ಮಾಡಬಾರದು ಎಂದು‌ ಪೋಷಕರು ಮನವಿ ಮಾಡಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಶಾಲೆಗಳಿಗೆ ಸಮಸ್ಯೆ ಏದುರಾಗಿದೆ?

  • ಬಾಗಲಕೋಟೆ-28
  • ಬಳ್ಳಾರಿ-43
  • ಬೆಳಗಾವಿ-74
  • ಬೆಂಗಳೂರು -144
  • ಬೀದರ್ -26
  • ಚಾಮರಾಜನಗರ-17
  • ಚಿಕ್ಕಬಳ್ಳಾಪುರ-20
  • ಚಿಕ್ಕಮಗಳೂರು-21
  • ಚಿತ್ರದುರ್ಗ- 24
  • ದಕ್ಷಿಣ ಕನ್ನಡ-48
  • ದಾವಣಗೆರೆ -31
  • ಧಾರವಾಡ- 28
  • ಗದಗ-17
  • ಹಾಸನ- 38
  • ಹಾವೇರಿ-25
  • ಕಲಬುರಗಿ-39
  • ಕೊಡಗು-08
  • ಕೋಲಾರ-24
  • ಕೊಪ್ಪಳ-20
  • ಮಂಡ್ಯ-32
  • ಮೈಸೂರು-4
  • ರಾಯಚೂರು-33
  • ರಾಮನಗರ-24
  • ಶಿವಮೊಗ್ಗ-30
  • ತುಮಕೂರು-49
  • ಉಡುಪಿ-24
  • ಉತ್ತರ ‌ಕನ್ನಡ-27
  • ವಿಜಯಪುರ-38
  • ಯಾದಗಿರಿ-23

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RSS ಬಗ್ಗೆ ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ಸಂಸದ ತೇಜಸ್ವಿ ಸೂರ್ಯ ಖಡಕ್ ಉತ್ತರ – Kannada News | BJP MP Tejaswi Surya Hits back at Miister Priyank Kharge over Letter to Mohan bhagwat about RSS Details

ನವದೆಹಲಿ, (ಜೂನ್ 15): ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಮೋಹನ್ ಭಾಗವತ್ (Mohan bhagwat) ಅವರಿಗೆ ಪತ್ರ ಬರೆದು ಆರ್​​​ಎಸ್​​ಎಸ್​​​ನ ನೋಂದಣಿ, ಆದಾಯ, ಆಸ್ತಿಪಾಸ್ತಿ ಸೇರಿದಂತೆ ಇತರೆ ವಿವರ ನೀಡುವಂತೆ ಆಗ್ರಹಿಸಿದ್ದಾರೆ. ಇನ್ನು ಇದಕ್ಕೆ ದೆಹಲಿಯಲ್ಲಿಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ(Tejaswi Surya) ಪ್ರತಿಕ್ರಿಯಿಸಿದ್ದು, ಅವರ ಪ್ರಶ್ನೆಗಳಿಗೆ ಆರ್‌ಎಸ್‌ಎಸ್‌ನವರು ಕಾನೂನಾತ್ಮಕವಾಗಿ ಉತ್ತರಿಸ್ತಾರೆ. ಸಂಘ ಸಂಸ್ಥೆ ಸ್ಥಾಪಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಕೇವಲ ಆರ್‌ಎಸ್‌ಎಸ್‌ಗೆ ಮಾತ್ರ ಅವಕಾಶ ನೀಡಿಲ್ಲ. ಗ್ರಾಮೀಣ ಭಾಗದ ನಾಲ್ವರು ಯುವಕರು ಸೇರಿ ಸಂಘ ಕಟ್ಟಬಹುದು. ಸಂವಿಧಾನ ಇಲ್ಲದಾಗಲೂ, ಬ್ರಿಟಿಷರ ಕಾಲದಲ್ಲೂ ಕೆಲಸ ಮಾಡಿದೆ. ಸಂಘದ ಆಸ್ತಿ, ವಹಿವಾಟುಗಳು ನಿಯಮಗಳ ಅಡಿಯಲ್ಲಿ ನಡೆಯುತ್ತಿವೆ. ಸಚಿವ ಪ್ರಿಯಾಂಕ್ ಖರ್ಗೆ ಇದೇ ಮೊದಲ ಅಲ್ಲ ಆಡಿಟ್ ಕೇಳ್ತಿರೋದು. ಐಟಿ-ಬಿಟಿ ಇಲಾಖೆಯಲ್ಲಿ ರಿಸರ್ಚ್ ಇನೋವೇಷನ್ ಮಾಡಬೇಕಿತ್ತು. ಆದರೆ ಪ್ರಿಯಾಂಕ್ ಖರ್ಗೆ ಇಲ್ಲಿ ರಿಸರ್ಚ್ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ನಾನೇ ಮೊದಲು ನೋಂದಣಿ ಕೇಳುತ್ತಿದ್ದೇನೆ ಅಂದುಕೊಂಡರೆ ಅದು ತಪ್ಪು.ಹಿಂದೆ ಪಥಸಂಚಲನಕ್ಕೆ ವಿರೋಧಿಸಿದರು, ಕೋರ್ಟ್ ಅನುಮತಿ ನೀಡಿತು. ಮೊದಲು 500 ಸೇರುವ ಜಾಗದಲ್ಲಿ ವಿರೋಧದ ಬಳಿಕ 5 ಸಾವಿರ ಜನ ಸೇರಿದರು. ವಿರೋಧಿಸಿದಷ್ಟು ಅದರ ಚಿಂತನೆಗಳು ಬಲಿಷ್ಠವಾಗುತ್ತವೆ, ಇದಕ್ಕೆ ಸ್ವಾಗತಿಸುತ್ತೇನೆ. ದೇಶದ ಸಂವಿಧಾನದ ಅಡಿಯಲ್ಲಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ. ಸಂವಿಧಾನದ ಮೇಲೆ ಎಂದು ಕೆಲಸ ಮಾಡುವ ಜನರು, ಸಂಘಟನೆ ಯಾರು ಎಂದು ಗೊತ್ತಿದೆ, ನೋಂದಣಿ ಬಗ್ಗೆ ಚರ್ಚೆ ಆಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಾನೂನು ಸಲಹೆ ಪಡೆಯಬೇಕಿತ್ತು. ಇದಕ್ಕೆ ಆರ್‌ಎಸ್‌ಎಸ್ ಮತ್ತು ಜನರು ಮುಂದೆ ಉತ್ತರ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: RSS ವಿಚಾರವಾಗಿ ಮೋಹನ್ ಭಾಗವತ್​ಗೆ ಪ್ರಿಯಾಂಕ್ ಖರ್ಗೆ ಪತ್ರ, ಈ 8 ಅಂಶಗಳಿಗೆ ವಿವರ ನೀಡುವಂತೆ ಆಗ್ರಹ

Source link

ವಿಟಮಿನ್ ಬಿ12 ಹೆಚ್ಚು ಅಥವಾ ಕಡಿಮೆಯಾದರೂ ಕ್ಯಾನ್ಸರ್ ಬರುತ್ತದೆಯೇ? ಹೊಸ ಅಧ್ಯಯನ ಹೇಳುವುದೇನು? – Kannada News | Can Too Much Vitamin B12 Increase Cancer Risk? Experts Explain

ದೇಹವನ್ನು ಆರೋಗ್ಯವಾಗಿಡಲು ವಿಟಮಿನ್ ಬಿ12 ಅತ್ಯಂತ ಮುಖ್ಯ. ಆದರೆ ಇತ್ತೀಚಿನ ಒಂದು ಅಧ್ಯಯನವು ವಿಟಮಿನ್ ಬಿ12 (Vitamin B12) ಮಟ್ಟದಲ್ಲಿ ಸರಿಯಾದ ಸಮತೋಲನ ಇಲ್ಲದಿದ್ದರೆ ಕ್ಯಾನ್ಸರ್ ಕಣಗಳ ಬೆಳವಣಿಗೆಯಾಗಬಹುದು, ಇವೆರಡಕ್ಕೂ ಸಂಬಂಧ ಇರಬಹುದು ಎಂಬ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಈ ವಿಚಾರ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅಧ್ಯಯನದ ಪ್ರಕಾರ, ವಿಟಮಿನ್ ಬಿ12ಗೆ ಸಂಬಂಧಿಸಿದ ಕೆಲವು ಜೀವ ರಾಸಾಯನಿಕ ಪ್ರಕ್ರಿಯೆಗಳು ಕ್ಯಾನ್ಸರ್ ಕಣಗಳು ಬದುಕಿ ಉಳಿಯಲು ಸಹಾಯ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಸಾಮಾನ್ಯವಾಗಿ ದೇಹದಲ್ಲಿ ಹಾನಿಗೊಳಗಾದ ಅಥವಾ ವಯಸ್ಸಾದ ಕೋಶಗಳನ್ನು ದೇಹವೇ ನಾಶಪಡಿಸುವ ಪ್ರಕ್ರಿಯೆಯನ್ನು “ಫೆರೋಪ್ಟೋಸಿಸ್” ಎಂದು ಕರೆಯಲಾಗುತ್ತದೆ. ಆದರೆ ಕ್ಯಾನ್ಸರ್ ಕಣಗಳು ಈ ಸಹಜ ಮರಣ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವಲ್ಲಿ ವಿಟಮಿನ್ ಬಿ12 ಸಂಬಂಧಿತ ಕ್ರಿಯೆಗಳು ಸಹಕಾರಿಯಾಗಬಹುದು ಎಂಬುದು ಅಧ್ಯಯನದ ಅಭಿಪ್ರಾಯ.

ಫೆರೋಪ್ಟೋಸಿಸ್ ಎಂದರೇನು?

ಸಾಮಾನ್ಯವಾಗಿ, ಫೆರೋಪ್ಟೋಸಿಸ್ ಎನ್ನುವುದು ದೇಹದ ರಕ್ಷಣಾತ್ಮಕ ವ್ಯವಸ್ಥೆಯ ಒಂದು ಭಾಗ. ಇದು ಹಾನಿಕಾರಕ ಕೋಶಗಳನ್ನು ತೆಗೆದುಹಾಕಿ ಆರೋಗ್ಯ ಕಾಪಾಡುತ್ತದೆ. ಆದರೆ ಕ್ಯಾನ್ಸರ್ ಕೋಶಗಳು ಈ ಪ್ರಕ್ರಿಯೆಯಿಂದ ತಪ್ಪಿಸಿಕೊಂಡರೆ ಅವು ದೇಹದಲ್ಲಿ ವೇಗವಾಗಿ ವೃದ್ಧಿಯಾಗುವ ಸಾಧ್ಯತೆ ಇರುತ್ತದೆ.

ತಜ್ಞರ ಪ್ರಕಾರ, ಮೊಟ್ಟೆ, ಹಾಲು, ಹಾಲು ಉತ್ಪನ್ನಗಳು, ಮಾಂಸ, ಪಪ್ಪು ಧಾನ್ಯಗಳು ಹಾಗೂ ಹಸಿರು ತರಕಾರಿಗಳಲ್ಲಿ ದೊರೆಯುವ ಬಿ12 ದೇಹಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ. ಇದು ಶಕ್ತಿ ಉತ್ಪಾದನೆ, ನರಗಳ ಆರೋಗ್ಯಕ್ಕೆ ಬಹಳ ಮುಖ್ಯ. ಆದರೆ ವೈದ್ಯರ ಸಲಹೆ ಇಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಬಿ12 ಸಪ್ಲಿಮೆಂಟ್‌ಗಳನ್ನು ಸೇವಿಸುವುದು ಅಪಾಯಕಾರಿಯಾಗಬಹುದು. ಜೊತೆಗೆ ದೀರ್ಘಕಾಲ ಹೈ- ಡೋಸ್ ಸಪ್ಲಿಮೆಂಟ್‌ಗಳನ್ನು ಬಳಸುವುದರಿಂದ ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ವಿಟಮಿನ್ ಬಿ12 ದೇಹಕ್ಕೆ ಅಗತ್ಯವಾದ ಪೋಷಕಾಂಶವಾಗಿದ್ದು ಸಹಜ ಆಹಾರದಿಂದ ದೊರೆಯುವ B12 ಸುರಕ್ಷಿತ. ಆದರೆ ವೈದ್ಯರ ಸಲಹೆ ಇಲ್ಲದೆ ಸಪ್ಲಿಮೆಂಟ್ ಸೇವನೆ ಬೇಡ. ಅಧ್ಯಯನ ಇನ್ನೂ ಆರಂಭಿಕ ಹಂತದಲ್ಲಿದೆ, ಆದ್ದರಿಂದ ಅನಗತ್ಯ ಭಯ ಪಡುವ ಅಗತ್ಯವಿಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದೀದಿ ನಂಬರ್ 1’ ಶೋಗೆ ರಚನಾ ಬ್ಯಾನರ್ಜಿ ವಿದಾಯ? ಮತ್ತೊಬ್ಬ ನಾಯಕಿಗೆ ಆಫರ್ ನೀಡಿದ ವಾಹಿನಿ – Kannada News | Rachana Banerjee to quit Didi No 1 show Channel approaches another actress

ಬಂಗಾಳಿ ಕಿರುತೆರೆಯ ಅತ್ಯಂತ ಜನಪ್ರಿಯ ‘ದೀದಿ ನಂಬರ್ 1’ (Didi No. 1) ರಿಯಾಲಿಟಿ ಶೋನಿಂದ ನಟಿ ರಚನಾ ಬ್ಯಾನರ್ಜಿ (Rachana Banerjee) ಅವರನ್ನು ಬೇರ್ಪಡಿಸಿ ನೋಡುವುದು ಕಷ್ಟ. ಆದರೆ, ಈಗ ಕೇಳಿಬರುತ್ತಿರುವ ಲೇಟೆಸ್ಟ್ ಸುದ್ದಿಯೊಂದರ ಪ್ರಕಾರ, ರಚನಾ ಬ್ಯಾನರ್ಜಿ ಅವರು ಈ ಶೋನಿಂದ (Reality Show) ಹೊರನಡೆಯಲಿದ್ದಾರೆ ಎನ್ನಲಾಗಿದೆ. ಈಗಾಗಲೇ ವಾಹಿನಿಯು ಅವರ ಜಾಗಕ್ಕೆ ಚಿತ್ರರಂಗದ ಮತ್ತೊಬ್ಬ ಯುವ ನಾಯಕಿಯನ್ನು ಸಂಪರ್ಕಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

2010ರಿಂದ ಆರಂಭವಾದ ‘ದೀದಿ ನಂಬರ್ 1’ ಶೋಗೆ ರಚನಾ ಬ್ಯಾನರ್ಜಿ ಅವರು 2011ರಲ್ಲಿ ನಿರೂಪಕಿಯಾಗಿ ಎಂಟ್ರಿ ಕೊಟ್ಟಿದ್ದರು. ಸೀಸನ್ 3 ಮತ್ತು 2013ರಲ್ಲಿ ಬೇರೆಯವರು ಶೋ ನಡೆಸಿಕೊಟ್ಟಿದ್ದನ್ನು ಬಿಟ್ಟರೆ, 2014ರಿಂದ 2026ರವರೆಗೆ ಅಂದರೆ ಸುಮಾರು 12 ವರ್ಷಗಳ ಕಾಲ ರಚನಾ ಬ್ಯಾನರ್ಜಿ ಅವರೇ ಸತತವಾಗಿ ಈ ಶೋ ಅನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಶೋನ ಅತಿ ಹೆಚ್ಚು ಎಪಿಸೋಡ್‌ಗಳನ್ನು ಶೂಟ್ ಮಾಡಿದ ಹೆಗ್ಗಳಿಕೆಯೂ ಅವರದ್ದಾಗಿದೆ.

2024ರ ಮಾರ್ಚ್‌ನಲ್ಲಿ ರಚನಾ ಅವರ ಕರೆಯ ಮೇರೆಗೆ ಮಮತಾ ಬ್ಯಾನರ್ಜಿ ಅವರು ಈ ಶೋಗೆ ಅತಿಥಿಯಾಗಿ ಆಗಮಿಸಿದ್ದರು. ಶೋನಲ್ಲಿ ಮಮತಾ ಬ್ಯಾನರ್ಜಿ ಅವರು ರೊಟ್ಟಿ ಲಟ್ಟಿಸುತ್ತಿದ್ದ ವಿಡಿಯೋ ಆಗ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ರಚನಾ ಅವರಿಗೆ ತೃಣಮೂಲ ಕಾಂಗ್ರೆಸ್ ಟಿಕೆಟ್ ಸಿಕ್ಕು, ಅವರು ಸಂಸದರಾಗಿಯೂ ಆಯ್ಕೆಯಾಗಿದ್ದರು.

ಆದರೆ ಇತ್ತೀಚಿನ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಹಿನ್ನಡೆ ಅನುಭವಿಸಿದ ನಂತರ, ಪಕ್ಷದ ಬಂಡಾಯ ಸಂಸದರ ಪಟ್ಟಿಯಲ್ಲಿ ರಚನಾ ಬ್ಯಾನರ್ಜಿ ಅವರ ಹೆಸರು ಕೇಳಿಬರುತ್ತಿದೆ. ಸದ್ಯ ಅವರು ನಗರದಿಂದ ಹೊರಗೆ ರಜಾದಿನಗಳನ್ನು ಕಳೆಯುತ್ತಿದ್ದು, ಇದೇ ಸಮಯದಲ್ಲಿ ಅವರು ಶೋನಿಂದ ಹೊರನಡೆಯುತ್ತಿರುವ ಸುದ್ದಿ ಕಿರಿತೆರೆಯಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ‘ಮಹಾನ್ ಕಿಲಾಡಿ’ ರಿಯಾಲಿಟಿ ಶೋ ಆರಂಭಿಸಿದ ಮಿಂಚು: ಏನಿದರ ವಿಶೇಷ?

ರಚನಾ ಬ್ಯಾನರ್ಜಿ ಅವರ ನಿರ್ಗಮನದ ಸುದ್ದಿಯ ಬಗ್ಗೆ ಅಧಿಕೃತ ಮಾಹಿತಿ ಪಡೆಯಲು ಶೋ ನಿರ್ದೇಶಕ ಅಭಿಜಿತ್ ಸೇನ್ ಅಥವಾ ಸ್ವತಃ ರಚನಾ ಬ್ಯಾನರ್ಜಿ ಅವರನ್ನ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಟಿವಿ9 ಬಾಂಗ್ಲಾ ವರದಿ ಮಾಡಿದೆ. ರಚನಾ ಬದಲಿಗೆ ಖ್ಯಾತ ಹೊಸ ನಟಿಯೊಬ್ಬರಿಗೆ ವಾಹಿನಿಯು ಈ ಶೋ ನಡೆಸಿಕೊಡಲು ಆಫರ್ ನೀಡಿದ್ದು, ಮಾತುಕತೆಗಳು ಬಹುತೇಕ ಅಂತಿಮ ಹಂತ ತಲುಪಿವೆ ಎಂದು ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಡುಗೆಗೆ ಗರಂ ಮಸಾಲವನ್ನು ಯಾವಾಗ, ಎಷ್ಟು ಪ್ರಮಾಣದಲ್ಲಿ ಹಾಕಬೇಕು ಗೊತ್ತಾ? – Kannada News | When and how much garam masala should be added to dishes while cooking?

ಭಾರತೀಯ ಅಡುಗೆಮನೆಯಲ್ಲಿ ಗರಂ ಮಸಾಲಕ್ಕೆ (garam masala) ವಿಶೇಷ ಸ್ಥಾನವಿದೆ. ಗರಂ ಮಸಾಲವು ದಾಲ್ಚಿನ್ನಿ, ಲವಂಗ, ಏಲಕ್ಕಿ, ಮೆಣಸು, ಪಲಾವ್‌ ಎಲೆ, ಸೋಂಪು ಮುಂತಾದ ಮಸಾಲೆಗಳ ಮಿಶ್ರಣವಾಗಿದ್ದು, ಇದು ಸಸ್ಯಹಾರವೇ ಇರಲಿ ಮಾಂಸಹಾರವೇ ಇರಲಿ ಪ್ರತಿಯೊಂದು ಅಡುಗೆಯ ಘಮ, ರುಚಿಯನ್ನು ದ್ವಿಗುಣಗೊಳಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿದೆ. ಆದರೆ ಅಡುಗೆಗೆ ಅದನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇರಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಇದಲ್ಲದಿದ್ದರೆ ಅಡುಗೆಯ ರುಚಿ ಕಳೆದುಹೋಗುವ ಅಥವಾ ಪದಾರ್ಥ ಕಹಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಡುಗೆಯ ರುಚಿಯನ್ನು ದುಪ್ಪಟ್ಟುಗೊಳಿಸಲು ಗರಂ ಮಸಾಲವನ್ನು ಯಾವ ಸಮಯದಲ್ಲಿ ಸೇರಿಸಬೇಕು ಎಂಬುದನ್ನು ತಪ್ಪದೇ ತಿಳಿದುಕೊಳ್ಳಿ.

ಅಡುಗೆಗೆ ಗರಂ ಮಸಾಲ ಸೇರಿಸಲು ಸರಿಯಾದ ಸಮಯ ಯಾವುದು?

ಅತ್ಯಂತ ಮುಖ್ಯವಾದ ವಿಷಯವೆಂದರೆ ಗರಂ ಮಸಾಲವನ್ನು ಯಾವಾಗಲೂ ಅಡುಗೆಯ ಕೊನೆಯಲ್ಲಿ ಸೇರಿಸಬೇಕು. ಪದಾರ್ಥ ಬಹುತೇಕ ಬೆಂದ ನಂತರ, ಕೊನೆಯ 2 ರಿಂದ 3 ನಿಮಿಷಗಳಲ್ಲಿ ಗರಂ ಮಸಾಲ ಸೇರಿಸಿ. ಇತರೆ ಮಸಾಲೆಗಳೊಂದಿಗೆ ಬೇಗನೆ ಗರಂ ಮಸಾಲೆ ಸೇರಿಸುವುದರಿಂದ ಖಾದ್ಯದ ಮೂಲ ರುಚಿ ಮತ್ತು ಸುವಾಸನೆ ಹಾಳಾಗುತ್ತದೆ. ಕೊನೆಯಲ್ಲಿ ಸೇರಿಸುವುದರಿಂದ ಅಡುಗೆಯ ಘಮ, ರುಚಿ ದ್ವಿಗುಣಗೊಳ್ಳುತ್ತದೆ.

ಅಡುಗೆಯ ಆರಂಭದಲ್ಲಿ ಗರಂ ಮಸಾಲವನ್ನು ಏಕೆ ಸೇರಿಸಬಾರದು?

ಇತರೆ ಮಸಾಲೆ, ತರಕಾರಿ ಇತ್ಯಾದಿಗಳೊಂದಿಗೆ ಆರಂಭದಲ್ಲಿ ಗರಂ ಮಸಾಲವನ್ನು ಸೇರಿಸಿದರೆ, ಮಸಾಲೆ ಫ್ರೈ ಮಾಡುವ ಸಂದರ್ಭದಲ್ಲಿ ಅದು ಹುರಿಯುತ್ತದೆ,  ಅದರ ಪರಿಮಳ ಕಳೆದುಹೋಗುತ್ತದೆ ಮತ್ತು ಕೆಲವೊಮ್ಮೆ ಇದರಿಂದ ಪದಾರ್ಥ ಕಹಿಯಾಗುತ್ತದೆ. ಆದ್ದರಿಂದ   ಗರಂ ಮಸಾಲವನ್ನು ಯಾವಾಗಲೂ ಅಡುಗೆಯ ಕೊನೆಯಲ್ಲಿಯೇ ಸೇರಿಸಬೇಕು.

ಇದನ್ನೂ ಓದಿ: ಪ್ರತಿದಿನ ಊಟದ ಬಳಿಕ ಒಂದು ಸ್ಪೂನ್‌ ಸೋಂಪು ತಿನ್ನಿ, ಅದ್ಭುತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ಅಡುಗೆಗೆ ಗರಂ ಮಸಾಲೆ ಸೇರಿಸುವ ಸರಿಯಾದ ವಿಧಾನ:

  • ಗರಂ ಮಸಾಲ ಸೇರಿಸಿದ ನಂತರ, ಪದಾರ್ಥವನ್ನು ನಿಧಾನವಾಗಿ ಬೆರೆಸಿ. ಹೆಚ್ಚು ಹೊತ್ತು ಬೇಯಿಸಬೇಡಿ. ಕೇವಲ 1-2 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ಕೊನೆಗೆ, ಒಲೆ ಆಫ್ ಮಾಡಿ ಮತ್ತು ಪಾತ್ರೆಯ ಮುಚ್ಚಳ ಮುಚ್ಚಿಡಿ.
  • ಹೆಚ್ಚು ಗರಂ ಮಸಾಲ ಸೇರಿಸುವುದರಿಂದ ಅಡುಗೆಯ ರುಚಿ ಹಾಳಾಗಬಹುದು, ಆದ್ದರಿಂದ ಪ್ರಮಾಣವನ್ನು ಮಿತಿಗೊಳಿಸಿ.ಯಾವಾಗಲೂ ಸಣ್ಣ ಪ್ರಮಾಣದಲ್ಲಿ ಗರಂ ಮಸಾಲ ಸೇರಿಸಬೇಕು. 1/2 ರಿಂದ 1 ಟೀಸ್ಪೂನ್ ಸಾಕು. ಹೆಚ್ಚು ಗರಂ ಸೇರಿಸುವುದರಿಂದ ಅಡುಗೆ ಕಹಿಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇ ತಿಂಗಳಲ್ಲಿ ರಫ್ತು ಶೇ. 18 ಹೆಚ್ಚಳ; ಆಮದು ಹೊರೆ ಇನ್ನೂ ಏರಿಕೆ; ಟ್ರೇಡ್ ಡೆಫಿಸಿಟ್ ಕೂಡ ಅಧಿಕ – Kannada News | May 2026 Trade: India’s Merchandise & Services Exports Rise, Positive Outlook from RBI

ನವದೆಹಲಿ, ಜೂನ್ 15: ಎಂಜಿನಿಯರಿಂಗ್ ಸರಕುಗಳು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ಸ್ ಸರಕುಗಳ ಭರ್ಜರಿ ಮಾರಾಟದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಭಾರತದ ಸರಕು ರಫ್ತು (Merchandise Exports) ಶೇ. 18 ರಷ್ಟು ಹೆಚ್ಚಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಬಿಡುಗಡೆ ಮಾಡಿರುವ ತಾತ್ಕಾಲಿಕ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷದ ಮೇ ತಿಂಗಳಿನಲ್ಲಿದ್ದ $38.30 ಬಿಲಿಯನ್‌ಗೆ ಹೋಲಿಸಿದರೆ ಈ ಬಾರಿ ರಫ್ತು $45.20 ಬಿಲಿಯನ್‌ಗೆ ತಲುಪಿದೆ.

ಆದರೆ, ಇದೇ ಅವಧಿಯಲ್ಲಿ ಆಮದು (Imports) ಕೂಡ ಶೇ. 20.6 ರಷ್ಟು ಏರಿಕೆಯಾಗಿದ್ದು, $60.86 ಬಿಲಿಯನ್‌ನಿಂದ $73.41 ಬಿಲಿಯನ್‌ಗೆ ತಲುಪಿದೆ. ಇದರ ಪರಿಣಾಮವಾಗಿ, ದೇಶದ ವ್ಯಾಪಾರ ಕೊರತೆ (Trade Deficit – ಆಮದು ಮತ್ತು ರಫ್ತಿನ ನಡುವಿನ ವ್ಯತ್ಯಾಸ) ಕಳೆದ ವರ್ಷದ ಮೇ ತಿಂಗಳಿನಲ್ಲಿದ್ದ $22.56 ಬಿಲಿಯನ್‌ನಿಂದ ಈ ಬಾರಿ $28.21 ಬಿಲಿಯನ್‌ಗೆ ಏರಿಕೆಯಾಗಿದೆ.

ಸೇವಾ ವಲಯದ ರಫ್ತು ಮತ್ತು ಒಟ್ಟಾರೆ ವ್ಯಾಪಾರ

ಮೇ ತಿಂಗಳಲ್ಲಿ ಸೇವಾ ವಲಯದ ರಫ್ತು $32.46 ಬಿಲಿಯನ್‌ನಿಂದ $36.76 ಬಿಲಿಯನ್‌ಗೆ ಏರಿದೆ. ಸೇವೆಗಳ ಆಮದು ಕೂಡ $16.70 ಬಿಲಿಯನ್‌ನಿಂದ $19.06 ಬಿಲಿಯನ್‌ಗೆ ಹೆಚ್ಚಾಗಿದೆ.

ಇದನ್ನೂ ಓದಿ: ಸಂಬಳ ₹15,000 ಇದ್ದರೂ ಸಾಲವಿಲ್ಲದೆ ಬದುಕಬಹುದೇ? ಹೌದು ಎನ್ನುತ್ತದೆ ಈ ಸರಳ ಬಜೆಟ್ ಸೂತ್ರ

ಸರಕು ಮತ್ತು ಸೇವೆಗಳೆರಡನ್ನೂ ಒಳಗೊಂಡಂತೆ ಭಾರತದ ಒಟ್ಟು ರಫ್ತು $81.96 ಬಿಲಿಯನ್ ತಲುಪಿದೆ (ಕಳೆದ ವರ್ಷ $70.76 ಬಿಲಿಯನ್ ಇತ್ತು). ಒಟ್ಟು ಆಮದು $92.47 ಬಿಲಿಯನ್‌ಗೆ ಏರಿದೆ (ಕಳೆದ ವರ್ಷ $77.55 ಬಿಲಿಯನ್ ಇತ್ತು). ಸೇವೆಗಳನ್ನೂ ಒಳಗೊಂಡ ಒಟ್ಟಾರೆ ವ್ಯಾಪಾರ ಕೊರತೆಯು $10.51 ಬಿಲಿಯನ್‌ಗೆ ವಿಸ್ತರಿಸಿದೆ.

ಇರಾನ್-ಯುಎಸ್ ಒಪ್ಪಂದದ ಸಕಾರಾತ್ಮಕ ನಿರೀಕ್ಷೆ

ಅಮೆರಿಕ ಮತ್ತು ಇರಾನ್ ನಡುವೆ ಇತ್ತೀಚೆಗೆ ಏರ್ಪಟ್ಟಿರುವ ಶಾಂತಿ ಒಪ್ಪಂದದ ಬೆನ್ನಲ್ಲೇ ಈ ಅಂಕಿ-ಅಂಶಗಳು ಹೊರಬಿದ್ದಿವೆ. ಜಾಗತಿಕ ವ್ಯಾಪಾರ ಮತ್ತು ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿದ್ದ (Strait of Hormuz) ಸಂಘರ್ಷ ತಿಳಿಯಾಗುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಭಾರತದ ರಫ್ತುದಾರರಿಗೆ ಸರಕು ಸಾಗಣೆ ವೆಚ್ಚ (Freight Costs) ಕಡಿಮೆಯಾಗಲಿದೆ ಹಾಗೂ ಪೂರೈಕೆ ಸರಪಳಿ ಸುಗಮವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹಿಂದೆ ಗಲ್ಫ್ ಪ್ರಾಂತ್ಯದ ಉದ್ವಿಗ್ನತೆಯಿಂದಾಗಿ ಭಾರತದ ಸಣ್ಣ ರಫ್ತುದಾರರು (ದೇಶದ ಒಟ್ಟು ರಫ್ತಿನಲ್ಲಿ ಶೇ 48 ರಷ್ಟು ಪಾಲು ಹೊಂದಿರುವವರು) ಭಾರಿ ತೊಂದರೆ ಅನುಭವಿಸಿದ್ದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವಿಶ್ಲೇಷಣೆ

ಜೂನ್ 5 ರಂದು ಆರ್‌ಬಿಐ ನೀಡಿದ ಹೇಳಿಕೆಯ ಪ್ರಕಾರ, ಜಾಗತಿಕ ಆರ್ಥಿಕತೆಯಲ್ಲಿನ ಅನಿಶ್ಚಿತತೆ ಮತ್ತು ಇಂಧನ ಬೆಲೆಗಳ ಏರಿಕೆಯು ಭಾರತದ ಚಾಲ್ತಿ ಖಾತೆ ಕೊರತೆಯ (Current Account Deficit) ಮೇಲೆ ಸಣ್ಣ ಮಟ್ಟದ ಅಪಾಯವನ್ನು ಉಂಟುಮಾಡುತ್ತಲೇ ಇರುತ್ತದೆ. ಆದಾಗ್ಯೂ, ಭಾರತದ ಸೇವಾ ವಲಯದ ರಫ್ತು ಹೆಚ್ಚಿರುವುದು ಮತ್ತು ವಿದೇಶಗಳಿಂದ ಭಾರತೀಯರು ದೇಶಕ್ಕೆ ಕಳುಹಿಸುವ ಹಣ (Remittances) ದೇಶದ ಆರ್ಥಿಕತೆಗೆ ದೊಡ್ಡ ಬಲ ತರಲಿದೆ ಎಂದು ಆರ್‌ಬಿಐ ಹೇಳಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಭೀತಿಯ ನಡುವೆಯೂ ಭಾರತದ ಐಟಿ ಮತ್ತು ಸೇವಾ ವಲಯಕ್ಕೆ ಜಾಗತಿಕವಾಗಿ ಉತ್ತಮ ಬೇಡಿಕೆ ಮುಂದುವರಿದಿದೆ.

ಇದನ್ನೂ ಓದಿ: ಹಳೆಯ ಕಾರಿಗೆ ಇ20 ಪೆಟ್ರೋಲ್ ಹಾಕಿಸಿದ್ರೆ ಇನ್ಷೂರೆನ್ಸ್ ಸಿಗಲ್ಲವಾ? ವಿಮಾ ಕಂಪನಿ ಹೇಳಿದ್ದಿದು

2031ರ ಹಣಕಾಸು ವರ್ಷದ ವೇಳೆಗೆ ಭಾರತದ ಒಟ್ಟು ರಫ್ತನ್ನು $2 ಟ್ರಿಲಿಯನ್‌ಗೆ (ಸರಕುಗಳಲ್ಲಿ $1 ಟ್ರಿಲಿಯನ್ ಮತ್ತು ಸೇವೆಗಳಲ್ಲಿ $1 ಟ್ರಿಲಿಯನ್) ದ್ವಿಗುಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದಕ್ಕಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME), ಕೃಷಿ ಉತ್ಪನ್ನಗಳು ಮತ್ತು ‘ಬ್ರಾಂಡ್ ಇಂಡಿಯಾ’ ಪ್ರಚಾರದ ಮೇಲೆ ಹೆಚ್ಚಿನ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಉದ್ಧವ್ ಠಾಕ್ರೆಯವರ ಶಿವಸೇನೆಯಲ್ಲಿ ಬಿರುಕು; ಪ್ರತ್ಯೇಕ ಗುಂಪು ರಚಿಸುತ್ತಾರಾ ಯುಟಿಬಿ ಸಂಸದರು? – Kannada News | Rift in Uddhav Thackerays Shiv Sena Will UBT MPs form a separate group?

ನವದೆಹಲಿ, ಜೂನ್ 15: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ. ಏಕನಾಥ್ ಶಿಂಧೆ (Eknath Shinde) ಅವರ ಶಿವಸೇನಾ ಬಣ ಆಪರೇಷನ್ ಟೈಗರ್ ಅನ್ನು ಜಾರಿಗೊಳಿಸುತ್ತಿದೆ. ಈ ಅಭಿಯಾನದ ಅಡಿಯಲ್ಲಿ ಠಾಕ್ರೆ ಅವರ ಪಕ್ಷದ ಕೆಲವು ಸಂಸದರನ್ನು ವಿಭಜಿಸಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಂಬೈನಲ್ಲಿ ಪಕ್ಷದ ಎಲ್ಲಾ ಸಂಸದರ ತುರ್ತು ಸಭೆಯನ್ನು ಕರೆದಿದ್ದರು. ಇದೇ ಉದ್ಧವ್ ಠಾಕ್ರೆ ಬಣದ ಶಿವಸೇನಾ ಸಂಸದರು ವಿಭಜನೆಯಾಗುವ ಬಲವಾದ ಸಾಧ್ಯತೆ ಕಂಡುಬರುತ್ತಿದೆ. ಕೆಲವು ಸಂಸದರು ಪ್ರತ್ಯೇಕ ಗುಂಪನ್ನು ರಚಿಸಬಹುದು ಎಂದು ಹೇಳಲಾಗುತ್ತಿದೆ.

ಉದ್ಧವ್ ಠಾಕ್ರೆ ಅವರ ಪಕ್ಷದ ಕೆಲವು ಸಂಸದರು ಹೊಸ ಗುಂಪನ್ನು ರಚಿಸುವ ಸಾಧ್ಯತೆಯಿದೆ. ನಿನ್ನೆ, ಠಾಕ್ರೆ ಬಣದ ಸಂಸದರ ಸಭೆ ನಡೆಯಿತು. ಈ ಸಭೆಯ ನಂತರ, ನಮ್ಮ ಎಲ್ಲಾ ಸಂಸದರು ನಮ್ಮೊಂದಿಗಿದ್ದಾರೆ, ಠಾಕ್ರೆ ಗುಂಪು ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿಕೊಂಡಿದೆ. ಆಪರೇಷನ್ ಟೈಗರ್ ಇಲ್ಲ. ನಾವು ಆಪರೇಷನ್ ವುಲ್ಫ್ ಅನ್ನು ಪ್ರಾರಂಭಿಸಲಿದ್ದೇವೆ ಎಂದು ಸಂಜಯ್ ರಾವತ್ ಹೇಳಿದ್ದರು. ಆದರೆ ಈಗ ಠಾಕ್ರೆ ಬಣದ ಕೆಲವು ಸಂಸದರು ನೇರವಾಗಿ ಹೊಸ ಗುಂಪನ್ನು ರಚಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಉದ್ಧವ್ ಠಾಕ್ರೆ ಬಣದ ಕೆಲವು ಸಂಸದರು ಲೋಕಸಭಾ ಸ್ಪೀಕರ್‌ಗೆ ಪತ್ರವನ್ನು ಸಲ್ಲಿಸುವ ಸಾಧ್ಯತೆಯಿದೆ. ಉದ್ಧವ್ ಠಾಕ್ರೆ ಅವರ ಕೆಲವು ಸಂಸದರು ಏಕನಾಥ್ ಶಿಂಧೆ ಅವರ ಪಕ್ಷದ ಸಂಸದ ಮತ್ತು ಕೇಂದ್ರ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಆದ್ದರಿಂದ, ಈ ಸಂಸದರು ಶೀಘ್ರದಲ್ಲೇ ಹೊಸ ಗುಂಪನ್ನು ರಚಿಸಬಹುದು ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿನ ಪ್ರಸ್ತುತ ಬೆಳವಣಿಗೆಗಳನ್ನು ಪರಿಗಣಿಸಿ, ಠಾಕ್ರೆ ಪಕ್ಷದ ನಾಯಕ ಮತ್ತು ಸಂಸದ ಸಂಜಯ್ ರಾವತ್ ತಕ್ಷಣ ದೆಹಲಿಗೆ ತೆರಳಿದ್ದಾರೆ.

ಇದನ್ನೂ ಓದಿ: ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ‘ಮಹಾ’ ಸಂಗಮ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ

ಜೂನ್ 14ರಂದು ಉದ್ಧವ್ ಠಾಕ್ರೆ ಆಯೋಜಿಸಿದ್ದ ಸಂಸದರ ಸಭೆಗೆ ಒಟ್ಟು 5 ಸಂಸದರು ಗೈರುಹಾಜರಾಗಿದ್ದರು. ಆದ್ದರಿಂದ, ಶೀಘ್ರದಲ್ಲೇ ಈ ಪಕ್ಷದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಏನಿದು ಘಟನೆ?:

ಮಹಾರಾಷ್ಟ್ರದಲ್ಲಿ ಶಿವಸೇನೆ (ಯುಬಿಟಿ) ಬಣದ 9 ಲೋಕಸಭಾ ಸಂಸದರಲ್ಲಿ 7 ಮಂದಿ ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ ಮತ್ತು ಅವರು ದೆಹಲಿಗೆ ತೆರಳಿ ಏಕನಾಥ್ ಶಿಂಧೆ ಬಣ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂಬ ವರದಿಗಳು ಹರಡಿದ್ದವು. ಇದನ್ನು ‘ಆಪರೇಷನ್ ಟೈಗರ್’ ಎಂದು ಕರೆಯಲಾಗುತ್ತಿದೆ. ಈ ಮೂಲಕ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಪಕ್ಷದೊಳಗೆ ಒಡಕು ಮೂಡಿಸಲು ಪ್ರಯತ್ನ ನಡೆಯುತ್ತಿದೆ ಎಂಬುದು ಆರೋಪ. ಈ ವದಂತಿಗಳನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ತಳ್ಳಿಹಾಕಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂದೆ ನೇತೃತ್ವದ ‘ಮಹಾಯುತಿ’ ಸರ್ಕಾರ ಮುಂದಿನ 5 ವರ್ಷಗಳ ಕಾಲ ಮತ್ತಷ್ಟು ಬಲಗೊಳ್ಳಲಿದೆ ಎಂದು ಠಾಕ್ರೆ ಬಣದ ಹಲವು ಸಂಸದರು ಆತಂಕಗೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರದಿಂದ ಧನಸಹಾಯ ಮತ್ತು ಅನುದಾನ ಪಡೆಯಲು ಕಷ್ಟವಾಗುತ್ತಿರುವುದರಿಂದ, ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅವರು ಆಡಳಿತಾರೂಢ ಮೈತ್ರಿಕೂಟದತ್ತ ಮುಖ ಮಾಡಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.

ಇದನ್ನೂ ಓದಿ: ಮುಂಬೈ ಕಿರೀಟವನ್ನು ಮುಡಿಗೇರಿಸಿಕೊಂಡ ಬಿಜೆಪಿ ನೇತೃತ್ವದ ಮಹಾಯುತಿ; 25 ವರ್ಷಗಳ ಬಳಿಕ ಠಾಕ್ರೆ ಭದ್ರಕೋಟೆ ಪತನ

ಇತ್ತೀಚೆಗೆ ನಡೆದ ದೆಹಲಿ ಪ್ರವಾಸದ ವೇಳೆ ಠಾಕ್ರೆ ಬಣದ ಸುಮಾರು 7 ಸಂಸದರು ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಹಸ್ಯವಾಗಿ ಭೇಟಿಯಾಗಿದ್ದಾರೆ ಎಂಬ ಸುದ್ದಿಗಳು ಮರಾಠಿ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಒಟ್ಟು 9 ಸಂಸದರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಅಂದರೆ 6 ಸಂಸದರು ಒಟ್ಟಿಗೆ ಹೊರಬರಬೇಕಾಗುತ್ತದೆ. ಸದ್ಯ ಅದಕ್ಕೆ ಬೇಕಾದ ಸಂಖ್ಯೆಯನ್ನು ಕ್ರೋಢೀಕರಿಸಿ ಹೊಸ ಗುಂಪು ರಚಿಸಲು ಸಂಸದರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಬಿರುಕಿನ ವದಂತಿಗಳು ದಟ್ಟವಾಗುತ್ತಿದ್ದಂತೆಯೇ ಎಚ್ಚೆತ್ತ ಉದ್ಧವ್ ಠಾಕ್ರೆ ಭಾನುವಾರ ಮುಂಬೈನ ತಮ್ಮ ನಿವಾಸ ‘ಮಾತೋಶ್ರೀ’ಯಲ್ಲಿ ಪಕ್ಷದ ಎಲ್ಲಾ 9 ಲೋಕಸಭಾ ಸಂಸದರ ತುರ್ತು ಸಭೆ ಕರೆದಿದ್ದರು. ಆದರೆ, ಈ ಸಭೆಗೆ ಕೇವಲ 4 ಸಂಸದರು ಮಾತ್ರ ಖುದ್ದಾಗಿ ಹಾಜರಾಗಿದ್ದು, ಉಳಿದ 5 ಸಂಸದರು ಆನ್‌ಲೈನ್ (ವಿಡಿಯೋ ಕಾನ್ಫರೆನ್ಸ್) ಮತ್ತು ಫೋನ್ ಮೂಲಕ ಭಾಗವಹಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರಿನ ಪಬ್​​​​ನಲ್ಲಿ ಭಾರೀ ಅಗ್ನಿ ಅವಘಡ: ಇಬ್ಬರು ಸಜೀವ ದಹನ, 7 ಜನರಿಗೆ ಗಂಭೀರ ಗಾಯ – Kannada News | Several Death And Injured after massive fire breaks out in Pub at Mysuru

ಮೈಸೂರು, (ಜೂನ್ 15): ಮೈಸೂರಿನ (Mysuru) ದಟ್ಟಗಳ್ಳಿ 4ನೇ ಹಂತದ ಬಳಿಯಿರುವ ಪಬ್ ನಲ್ಲಿ (Pub) ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಈ ಬೆಂಕಿ ದುರಂತದಲ್ಲಿ ಇಬ್ಬರು ಸಜೀವ ದಹನವಾಗಿದ್ದರೆ, ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪಬ್​ನಲ್ಲಿ ಕೆಲಸ ಮಾಡುತ್ತಿದ್ದ ಶಾಹಿಲ್, ಪ್ರಕಾಶ್ ಮೃತ ದುರ್ವೈವಿಗಳು. ಇನ್ನು ಗಾಯಗೊಂಡಿರುವ ಏಳು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Source link

ಕೊಪ್ಪಳದಲ್ಲಿ ಪತ್ತೆಯಾದ ಶಿವಲಿಂಗಕ್ಕೂ ಸಿಎಂ ಡಿಕೆ ಶಿವಕುಮಾರ್​​ಗೂ ಲಿಂಕ್: ಉದ್ಯಮಿ ಕನಸಲ್ಲಿ ಕಂಡಿದ್ದೇನು? – Kannada News | Shivalinga Discovery: Businessman’s Dream and CM DK Shivakumar Connection Explained

ಸಿಎಂ ಡಿಕೆ ಶಿವಕುಮಾರ್​, ಶಿವಲಿಂಗImage Credit source: tv9 kannada

ಕೊಪ್ಪಳ, ಜೂನ್​​ 15: ಜಿಲ್ಲೆಯಲ್ಲಿ ಕುತೂಹಲಕಾರಿ ಮತ್ತು ದೈವಿಕ ಪವಾಡದಂತಹ ಘಟನೆಯೊಂದು ನಡೆದಿದೆ. ಉದ್ಯಮಿಯೊಬ್ಬರ ಜಮೀನಿನಲ್ಲಿ ಶಿವಲಿಂಗ (Shivalinga) ಪತ್ತೆಯಾಗಿದೆ. ವಿಶೇಷ ಅಂದರೆ ಈ ಶಿವಲಿಂಗಕ್ಕೂ ರಾಜ್ಯದ ನೂತನ ಸಿಎಂ ಡಿಕೆ ಶಿವಕುಮಾರ್​​ಗೂ (DK Shivakumar) ಒಂದು ಅಪೂರ್ವ ಸಂಬಂಧ ಬೆಸೆದುಕೊಂಡಿದೆ. ಕನಸಿನಲ್ಲಿ ಕಂಡಂತೆ ಜಮೀನಿನಲ್ಲಿ ಶಿವಲಿಂಗ ಸಿಕ್ಕಿದ್ದು, ಇದೀಗ ಇಡೀ ಜಿಲ್ಲೆಯ ಜನರ ಹಿತದೃಷ್ಟಿ ಹಿನ್ನೆಲೆ ಈ ಅಪರೂಪದ ಲಿಂಗವನ್ನು ಸಿಎಂ ಕೈಗಿಡಲು ಉದ್ಯಮಿ ಸಜ್ಜಾಗಿದ್ದಾರೆ.

ಮುಖ್ಯಾಂಶಗಳು

  • ಕೊಪ್ಪಳದ ಉದ್ಯಮಿ ಜಮೀನಿನಲ್ಲಿ ಶಿವಲಿಂಗ ಪತ್ತೆ
  • ಸಿಎಂ ಡಿಕೆ ಶಿವಕುಮಾರ್​ಗೆ ಕೊಡಲು ಮುಂದಾದ ಉದ್ಯಮಿ
  • ಶಿವಲಿಂಗ ಪತ್ತೆಯಾದ ಸ್ಥಳದಲ್ಲಿ ನಾಗರ ಹಾವು ಪ್ರತ್ಯಕ್ಷ

ಕನಸು ಬಿದ್ದ ಮರುದಿನವೇ ಜಮೀನಿನಲ್ಲಿ ಶಿವಲಿಂಗ ಪತ್ತೆ 

ಕೊಪ್ಪಳ ತಾಲೂಕಿನ ಬಸಾಪೂರದ ಬಳಿ ಇರುವ ನಗರದ ಉದ್ಯಮಿ ವಿಪಿನ್ ಕುಮಾರ್ ಅವರಿಗೆ ಸೇರಿದ ಜಮೀನಿನಲ್ಲಿ ಈ ದೈವಿಕ ಶಿವಲಿಂಗ ಸಿಕ್ಕಿದೆ. ಈ ಲಿಂಗ ಪತ್ತೆಯಾಗುವುದಕ್ಕೂ ಮುನ್ನ ವಿಪಿನ್ ಕುಮಾರ್ ಅವರಿಗೆ ವಿಚಿತ್ರ ಕನಸೊಂದು ಬಿದ್ದಿತ್ತಂತೆ. ಆ ಕನಸಿನಲ್ಲಿ, ತಮಗೆ ಸಿಗುವ ಶಿವಲಿಂಗವನ್ನು ಪರಮ ಶಿವಭಕ್ತರಾಗಿರುವ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಬೇಕು ಎಂಬ ಸಂದೇಶ ಸಿಕ್ಕಿತ್ತು ಎನ್ನಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಕನಸು ಬಿದ್ದ ಮರುದಿನವೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜಡಿಯಪ್ಪ ಎಂಬ ರೈತನಿಗೆ ಈ ಪವಿತ್ರ ಶಿವಲಿಂಗ ಪ್ರತ್ಯಕ್ಷವಾಗಿದೆ. ಅಂದಿನಿಂದ ಆ ಶಿವಲಿಂಗವನ್ನು ಉದ್ಯಮಿ ಜೋಪಾನವಾಗಿಟ್ಟುಕೊಂಡಿದ್ದು, ಲಿಂಗವಿರುವ ಜಾಗಕ್ಕೆ ನಾಗರಹಾವೊಂದು ಪದೇಪದೇ ಬರುತ್ತಿರುವುದು ಸ್ಥಳೀಯರಲ್ಲಿ ಮತ್ತಷ್ಟು ವಿಸ್ಮಯ ಮೂಡಿಸಿದೆ.

ಇದನ್ನೂ ಓದಿ: ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ, ಜನಾರ್ದನ ರೆಡ್ಡಿ ನಿರಾಳ

ಕನಸಿನಲ್ಲಿ ಬಂದ ಆದೇಶದಂತೆ ಉದ್ಯಮಿ ವಿಪಿನ್ ಕುಮಾರ್ ಈಗ ಶಿವಲಿಂಗವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಈ ಭಕ್ತಿಯ ಹಿಂದೆ ಕೊಪ್ಪಳ ಜಿಲ್ಲೆಯ ಜನರ ಮತ್ತು ರೈತರ ಹಿತದೃಷ್ಟಿಯೂ ಅಡಗಿದೆ. ಬಸಾಪೂರ ಭಾಗದಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯಾಗದಂತೆ ತಡೆಯಬೇಕು ಎನ್ನುವುದು ಇಡೀ ಜಿಲ್ಲೆಯ ಜನರ ಹಾಗೂ ಸ್ಥಳೀಯರ ಒತ್ತಾಯವಾಗಿದೆ. ಒಂದು ವೇಳೆ ಕಾರ್ಖಾನೆ ವಿಸ್ತರಣೆಯಾದರೆ ಕೊಪ್ಪಳದ ಜನರಿಗೆ ಶುದ್ಧ ಗಾಳಿ ಸಿಗುವುದು ಕಷ್ಟವಾಗುತ್ತದೆ ಮತ್ತು ರೈತರಿಗೂ ಭಾರೀ ತೊಂದರೆಯಾಗುತ್ತದೆ ಎನ್ನುವುದು ಇವರ ಕಳಕಳಿಯಾಗಿದೆ.

ಸಿಎಂ ಡಿಕೆ ಶಿವಕುಮಾರ್​​ ಕೈ ಸೇರಲಿದೆ ಶಿವಲಿಂಗ

ಈಗಾಗಲೇ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯನ್ನು ವಿರೋಧಿಸಿ ಕೊಪ್ಪಳದಲ್ಲಿ ಕಳೆದ 225 ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಪರಿಸರ ಮತ್ತು ರೈತರ ರಕ್ಷಣೆಗಾಗಿ ಶಿವಲಿಂಗವನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ವಿಪಿನ್ ಕುಮಾರ್ ಮುಂದಾಗಿದ್ದಾರೆ. ಜಿಲ್ಲೆಯ ಜನರ ಸಾಮಾಜಿಕ ಕಳಕಳಿಯ ಸಂಕೇತವಾಗಿ ಈ ಶಿವಲಿಂಗವು ಸದ್ಯದಲ್ಲೇ ಡಿ.ಕೆ. ಶಿವಕುಮಾರ್ ಅವರ ಕೈ ಸೇರಲಿದೆ.

ಇದನ್ನೂ ಓದಿ: ಕೊನೆಗೂ ಕೊಪ್ಪಳದಲ್ಲಿ ಎರಡು ಕಾರ್ಖಾನೆಗಳು ಸೀಜ್: ದಶಕಗಳ ಹೋರಾಟಕ್ಕೆ ಜಯ!

ಒಟ್ಟಿನಲ್ಲಿ ಕೊಪ್ಪಳದಲ್ಲಿ ಪತ್ತೆಯಾಗಿರುವ ಈ ಶಿವಲಿಂಗ ಇದೀಗ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಪರಿಸರ ಮಾಲಿನ್ಯ ಮುಕ್ತ ಕೊಪ್ಪಳಕ್ಕಾಗಿ ಉದ್ಯಮಿ ಕೈಗೊಂಡಿರುವ ಈ ದೈವಿಕ ನಿರ್ಧಾರಕ್ಕೆ ಸ್ಥಳೀಯರು ಕೂಡ ಸಾಥ್ ನೀಡಿದ್ದಾರೆ. ಶಿವನ ಭಕ್ತ ಸಿಎಂ ಡಿಕೆ ಶಿವಕುಮಾರ್​ ಈ ಶಿವಲಿಂಗವನ್ನು ಸ್ವೀಕರಿಸಿ, ಕಾರ್ಖಾನೆ ವಿಸ್ತರಣೆಗೆ ಬ್ರೇಕ್ ಹಾಕುತ್ತಾರೆ ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿಧನರಾಗಿ ಆರೇ ವರ್ಷಕ್ಕೆ ಸುಶಾಂತ್ ಸಿಂಗ್ ರಜಪೂತ್ ಯಾರಿಗೂ ನೆನಪಿಲ್ಲ; ಪುಣ್ಯತಿಥಿಗೆ ಬಾಲಿವುಡ್ ಮೌನ – Kannada News | Hindi Cinema Celebrities silent on Sushant Singh Rajput sixth Death Anniversary Fans react

ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ನಿಧನರಾಗಿ ಭರ್ತಿ ಆರು ವರ್ಷಗಳು ಸಂದಿವೆ. ಆದರೆ ಈ ಬಾರಿ ಅವರ ಪುಣ್ಯತಿಥಿಯಂದು (ಜೂನ್ 14) ಬಾಲಿವುಡ್ ಚಿತ್ರರಂಗ ತೋರಿದ ಮೌನವು ಅವರ ಲಕ್ಷಾಂತರ ಅಭಿಮಾನಿಗಳ ಆಕ್ರೋಶ ಮತ್ತು ಬೇಸರಕ್ಕೆ ಕಾರಣವಾಗಿದೆ. ‘ಹಿಂದಿ ಚಿತ್ರರಂಗ (Bollywood) ಸುಶಾಂತ್ ಅವರನ್ನು ಸಂಪೂರ್ಣವಾಗಿ ಮರೆತುಬಿಟ್ಟಿತೇ?’ ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಮೊದಲು ನಟನಿಗೆ ಆಪ್ತವಾಗಿದ್ದವರು ಕೂಡ ಈಗ ಮರೆತುಬಿಟ್ಟಿದ್ದಾರೆ ಎಂಬುದು ವಿಪರ್ಯಾಸ.

ಹಿಂದಿನ ವರ್ಷಗಳಲ್ಲಿ ಕೃತಿ ಸನನ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ಪರಿಣೀತಿ ಚೋಪ್ರಾ, ರಾಜ್‌ಕುಮಾರ್ ರಾವ್, ಅಮಿತ್ ಸಾಧ್, ನಿರ್ದೇಶಕ ಅಭಿಷೇಕ್ ಕಪೂರ್, ದಿಶಾ ಪಟಾನಿ, ರಿಯಾ ಚಕ್ರವರ್ತಿ ಸೇರಿದಂತೆ ಹಲವರು ಸುಶಾಂತ್ ಅವರನ್ನು ನೆನೆದು ಪೋಸ್ಟ್ ಮಾಡುತ್ತಿದ್ದರು. ಆದರೆ ಈ ಬಾರಿ ಇವರಾರೂ ಯಾವುದೇ ಪ್ರತ್ಯೇಕ ಸಂದೇಶಗಳನ್ನು ಹಂಚಿಕೊಂಡಿಲ್ಲ.

ಬಾಲಿವುಡ್‌ನ ಪ್ರಮುಖ ತಾರೆಯರ ಪೈಕಿ ನಟಿ ಭೂಮಿ ಪೆಡ್ನೇಕರ್ ಮಾತ್ರ ಸುಶಾಂತ್ ಅವರನ್ನು ಬಹಿರಂಗವಾಗಿ ಸ್ಮರಿಸಿದ ಏಕೈಕ ನಟಿಯಾಗಿದ್ದಾರೆ. ಸುಶಾಂತ್ ಜೊತೆ ತಾವು ನಟಿಸಿದ್ದ ಸೂಪರ್ ಹಿಟ್ ‘ಸೋಂಚಿಡಿಯಾ’ ಚಿತ್ರದ ನೆನಪುಗಳನ್ನು ಅವರು ಹಂಚಿಕೊಂಡಿದ್ದಾರೆ. ಇನ್ನು ಸುಶಾಂತ್ ಅವರ ಮಾಜಿ ಗೆಳತಿ ಅಂಕಿತಾ ಲೋಖಂಡೆ ಅವರು ನೇರವಾಗಿ ಯಾವುದೇ ಪೋಸ್ಟ್ ಮಾಡದಿದ್ದರೂ, ಅಭಿಮಾನಿಗಳು ಸಿದ್ಧಪಡಿಸಿದ್ದ ಅವರ ಹಳೆಯ ಕಿರುತೆರೆ ಶೋಗಳ ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮರುಹಂಚಿಕೊಂಡಿದ್ದಾರೆ.

ಬಾಲಿವುಡ್ ಮೌನ ವಹಿಸಿದ್ದರೂ, ಸುಶಾಂತ್ ಅವರ ಕುಟುಂಬದವರು ತಮ್ಮ ಸೋದರನ ನೆನಪನ್ನು ಹಸಿರಾಗಿಟ್ಟಿದ್ದಾರೆ. ಸುಶಾಂತ್ ಸಹೋದರಿಯರಾದ ಶ್ವೇತಾ ಸಿಂಗ್ ಕೀರ್ತಿ ಮತ್ತು ಪ್ರಿಯಾಂಕಾ ಸಿಂಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯ ಸಹೋದರನ ಪರಂಪರೆ ಮತ್ತು ನೆನಪುಗಳನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ವರ್ಷಗಳ ಬಳಿಕ ರಿಯಾಗೆ ಸಿಕ್ತು ಹಣದ ಮೇಲೆ ಹಕ್ಕು

2020ರ ಜೂನ್ 14ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರು 34ನೇ ವಯಸ್ಸಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ತೀವ್ರ ಖಿನ್ನತೆ ಹಾಗೂ ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದರು ಎಂದು ಆಗಿನ ವರದಿಗಳು ತಿಳಿಸಿದ್ದವು. ಈ ಸಾವು ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ತದನಂತರ 2020ರ ಜುಲೈನಲ್ಲಿ ಸುಶಾಂತ್ ಕುಟುಂಬದವರು ಪಾಟ್ನಾದಲ್ಲಿ ಪೊಲೀಸರಿಗೆ ದೂರು ನೀಡಿ, ನಟಿ ರಿಯಾ ಚಕ್ರವರ್ತಿ ಸೇರಿದಂತೆ ಐವರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಗಂಭೀರ ಆರೋಪ ಹೊರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version