ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತ USCIRF ವರದಿಗೆ 275 ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳಿಂದ ವಿರೋಧ

ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತ USCIRF ವರದಿಗೆ 275 ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳಿಂದ ವಿರೋಧ

ಬೆಂಗಳೂರು, ಮಾರ್ಚ್ 21: ಭಾರತದ ಬಗ್ಗೆ ಅಮೆರಿಕದ ಸ್ವತಂತ್ರ ಸಂಸ್ಥೆಯಾದ USCIRF (ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್) ನೀಡಿದ ವರದಿಯನ್ನು ಭಾರತದ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು, ಮಿಲಿಟರಿ ಸಿಬ್ಬಂದಿ ಸೇರಿದಂತೆ ಒಟ್ಟು 275 ಜನರು ತೀವ್ರವಾಗಿ ವಿರೋಧಿಸಿದ್ದಾರೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುಸಿತವಾಗಿದೆ ಎಂದು USCIRF ಹೇಳಿತ್ತು. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಒತ್ತಡ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಮರು ಮತ್ತು ಕ್ರೈಸ್ತರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು USCIRF ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಹಾಗೇ, USCIRF ಭಾರತದ ಕೆಲವು ಕಾನೂನುಗಳ ಬಗ್ಗೆಯೂ ಪ್ರಶ್ನೆ ಎತ್ತಿತ್ತು. ಮತಾಂತರ ವಿರೋಧಿ ಕಾನೂನುಗಳು (Anti-conversion laws), ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act/ CAA) ಇವುಗಳು ಕೆಲ ಸಮುದಾಯಗಳಿಗೆ ಅನ್ಯಾಯ ಮಾಡಬಹುದು ಎಂದು ಈ ವರದಿ ಹೇಳಿತ್ತು. ಭಾರತದಲ್ಲಿ ಕೆಲವು ಕಡೆ ಹಿಂಸಾಚಾರ ಮತ್ತು ದ್ವೇಷ ಭಾಷಣದ ಘಟನೆಗಳು ಹೆಚ್ಚಾಗಿವೆ. ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಲಾಗಿತ್ತು.

ಇದೆಲ್ಲದರ ಜೊತೆಗೆ, ಭಾರತದ ಆರ್​ಎಸ್​ಎಸ್ (RSS)​, ರಾ (RAW)ನಂತಹ ಕೆಲವು ಭಾರತೀಯ ಸಂಸ್ಥೆಗಳ ಮೇಲೆ ನಿಷೇಧ ಹೇರಬೇಕೆಂಬ ಶಿಫಾರಸನ್ನೂ USCIRF ವರದಿ ಮಾಡಿತ್ತು. ಈ USCIRF ಅಮೆರಿಕದ ಒಂದು ಸಲಹಾ ಸಂಸ್ಥೆಯಾಗಿದ್ದು, ಅದರ ವರದಿಯನ್ನು ಭಾರತ ತೀವ್ರವಾಗಿ ವಿರೋಧಿಸಿದೆ. USCIRF ಭಾರತದ ಬಗ್ಗೆ ತಪ್ಪುಚಿತ್ರಣ ನೀಡುತ್ತಿದೆ, ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಭಾರತ ಆರೋಪಿಸಿದೆ.

ಇದನ್ನೂ ಓದಿ: ಟ್ರಂಪ್​ಗೆ ಮುಖಭಂಗ; ಅಮೆರಿಕದ ಯುದ್ಧವಿಮಾನಕ್ಕೆ ನೋ ಎಂಟ್ರಿ ಎಂದ ಶ್ರೀಲಂಕಾ

ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಭಾರತದ 275 ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಮತ್ತು ಮಿಲಿಟರಿ ಸಿಬ್ಬಂದಿ USCIRF ವರದಿಯನ್ನು ಖಂಡಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು, ಮಾಜಿ ಅಧಿಕಾರಿಗಳು ಮತ್ತು ಮಿಲಿಟರಿ ಪರಿಣತರು ಸೇರಿದಂತೆ 275 ಭಾರತೀಯರ ಗುಂಪು ಇಂದು ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ನೀಡಿದ ಭಾರತದ ಕುರಿತ “ಆಫ್-ದಿ-ಮಾರ್ಕ್” ವರದಿಯನ್ನು ಟೀಕಿಸಿದೆ.

“ನಾವು ಕೆಳಗೆ ಸಹಿ ಮಾಡಿರುವವರು ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ಸಿದ್ಧಪಡಿಸಿದ ಅತ್ಯಂತ ಗೊಂದಲಮಯ ಮತ್ತು ಸಂಪೂರ್ಣವಾಗಿ ಆಫ್-ದಿ-ಮಾರ್ಕ್ ವರದಿಯನ್ನು ನಿಮ್ಮ ಗಮನಕ್ಕೆ ತರುತ್ತೇವೆ” ಎಂದು ಅವರು ಬಿಡುಗಡೆ ಮಾಡಿದ ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ.

ಭಾರತದ ವಿದೇಶಿ ಗುಪ್ತಚರ ಸಂಸ್ಥೆ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RA&AW) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮೇಲೆ ನಿರ್ಬಂಧಗಳನ್ನು ಶಿಫಾರಸು ಮಾಡುವ USCIRF ವರದಿಗೆ ಈ ಗುಂಪು ಆಕ್ಷೇಪಿಸಿದೆ. ಈ ತಂಡದಲ್ಲಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮತ್ತು NGT ಅಧ್ಯಕ್ಷ ಅಧ್ಯಕ್ಷ ಆದರ್ಶ್ ಕುಮಾರ್ ಗೋಯೆಲ್, ಕೇರಳದ ಮಾಜಿ DGP ಪಿ. ಚಂದ್ರಶೇಖರನ್ ಮತ್ತು ಮಾಜಿ ರಾಯಭಾರಿಗಳಾದ ಭಾಸ್ವತಿ ಮುಖರ್ಜಿ ಮತ್ತು ಶ್ಯಾಮಲಾ ಬಿ. ಕೌಸಿಕ್ ಕೂಡ ಸೇರಿದ್ದಾರೆ.

 

ತಮ್ಮ ಬಹಿರಂಗ ಪತ್ರದಲ್ಲಿ ಅಧಿಕೃತ ದತ್ತಾಂಶವನ್ನು ಉಲ್ಲೇಖಿಸಿರುವ ಅವರು, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು 1951ರಲ್ಲಿ ಶೇ. 9.8 ರಷ್ಟಿತ್ತು. 2011ರಲ್ಲಿ ಶೇ. 14.2ಕ್ಕೆ ಏರಿತು. ಕ್ರಿಶ್ಚಿಯನ್ ಜನಸಂಖ್ಯೆಯು 1951ರಲ್ಲಿ ಶೇ. 2.3ರಷ್ಟಿತ್ತು. 2011ರಲ್ಲಿ ಶೇ. 2.3 ರಷ್ಟಿತ್ತು. 1951ರಲ್ಲಿ ಶೇ. 1.79ರಷ್ಟಿದ್ದ ಸಿಖ್ ಜನಸಂಖ್ಯೆಯು 2011ರಲ್ಲಿ ಶೇ 1.72ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​ಗೆ ಮತ್ತೊಂದು ಹೊಡೆತ; ಅಮೆರಿಕ- ಇಸ್ರೇಲ್ ದಾಳಿಯಲ್ಲಿ ಐಆರ್‌ಜಿಸಿ ವಕ್ತಾರ ಅಲಿ ನೈನಿ ಹತ್ಯೆ

“ಈ ಡೇಟಾವನ್ನು ಅಧಿಕೃತ ಜನಗಣತಿ ದತ್ತಾಂಶದಿಂದ ತೆಗೆದುಕೊಳ್ಳಲಾಗಿದೆ. ಇದು ಭಾರತದಲ್ಲಿ 6 ದಶಕಗಳಿಗೂ ಹೆಚ್ಚು ಕಾಲ ಸ್ವತಂತ್ರ ಸಾಂವಿಧಾನಿಕ ಆಡಳಿತದಲ್ಲಿ ಪ್ರಮುಖ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಜನಸಂಖ್ಯಾ ವಿಸ್ತರಣೆ ಅಥವಾ ಸ್ಥಿರತೆಯ ವಿಶಾಲ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.

“USCIRFನ ಎಲ್ಲಾ 6 ಆಯುಕ್ತರನ್ನು US ಸರ್ಕಾರವು ನೇಮಿಸುತ್ತದೆ. US ಕಾಂಗ್ರೆಸ್ ಮೂಲಕ ಅಮೇರಿಕನ್ ತೆರಿಗೆದಾರರು ಅವರಿಗೆ ಹಣಕಾಸು ಒದಗಿಸುತ್ತಾರೆ. USCIRFನಲ್ಲಿ ಈ ವರದಿಗೆ ಕೊಡುಗೆ ನೀಡಿದ ಎಲ್ಲರ ಕಟ್ಟುನಿಟ್ಟಿನ ಹಿನ್ನೆಲೆಯನ್ನು ಪರಿಶೀಲನೆ ನಡೆಸುವಂತೆ ನಾವು US ಸರ್ಕಾರವನ್ನು ಒತ್ತಾಯಿಸುತ್ತೇವೆ. ಇದು USCIRF ನಿಂದ ಅತ್ಯಂತ ಪೂರ್ವಾಗ್ರಹ ಪೀಡಿತ ಮತ್ತು ಅಸಮರ್ಥನೀಯ ವರದಿಗಳನ್ನು ತಯಾರಿಸಲು ಬಳಸಲ್ಪಡುತ್ತಿರುವ US ತೆರಿಗೆದಾರರ ಕಣ್ಣು ತೆರೆಸುತ್ತದೆ ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಅಲ್ಲಿನ ಪ್ರಜೆಗಳ ಹಣವನ್ನು ಕೆಲವು ಭಾರತ ವಿರೋಧಿ ಹಿತಾಸಕ್ತಿಗಳು ಭಾರತದ ಜನರೊಂದಿಗೆ ಅವರ ಸದ್ಭಾವನೆಯನ್ನು ಹಾಳುಮಾಡಲು ಗುಪ್ತ ಕಾರ್ಯಸೂಚಿಯನ್ನು ಉತ್ತೇಜಿಸಲು ಬಳಸುತ್ತಿವೆ” ಎಂದು ಮಾಜಿ ಐಎಎಸ್ ಅಧಿಕಾರಿಗಳಾದ ಎಂ. ಮದನ್ ಗೋಪಾಲ್, ಒ.ಪಿ. ಪಾಠಕ್ ಮತ್ತು ಸಿ.ಎಸ್. ತಲ್ವಾರ್ ಮತ್ತು ಇತರರು ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ.

“ಇತ್ತೀಚಿನ ವರದಿಯನ್ನು ನಾವು ಗಮನಿಸಿದ್ದೇವೆ. ಭಾರತದ ಬಗ್ಗೆ ಮಾಡಲಾದ ಆರೋಪ ಸಂಪೂರ್ಣ ಸುಳ್ಳು. ಹಲವಾರು ವರ್ಷಗಳಿಂದ USCIRF ಭಾರತದ ಕುರಿತು ವಿಕೃತ ಮತ್ತು ಆಯ್ದ ಚಿತ್ರಣವನ್ನು ಪ್ರಸ್ತುತಪಡಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕೂಡ ಹೇಳಿದ್ದರು.

ಭಾರತದ ಬಗ್ಗೆ ಆಯ್ದ ಟೀಕೆಗಳನ್ನು ಮುಂದುವರಿಸುವ ಬದಲು, USCIRF ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲಿನ ವಿಧ್ವಂಸಕ ಕೃತ್ಯಗಳು ಮತ್ತು ದಾಳಿಗಳು, ಭಾರತವನ್ನು ಟಾರ್ಗೆಟ್ ಮಾಡುವುದು ಮತ್ತು ಅಮೆರಿಕದಲ್ಲಿ ಭಾರತೀಯ ವಲಸೆಗಾರರ ​​ಸದಸ್ಯರ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಬೆದರಿಕೆಯ ಬಗ್ಗೆ ಚಿಂತಿಸುವುದು ಒಳ್ಳೆಯದು” ಎಂದು ಜೈಸ್ವಾಲ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾಣಿಜ್ಯ ಬಳಕೆ ಸಿಲಿಂಡರ್​ ಅಭಾವ: ಬೆಂಗಳೂರು ಹೋಟೆಲ್​​ಗಳಿಗೆ 150 ಕೋಟಿ ರೂ ನಷ್ಟ

ಬೆಂಗಳೂರು, ಮಾರ್ಚ್​ 21: ಗಲ್ಫ್ ಯುದ್ಧದಿಂದ ಇರಾನ್ ಹೊರ್ಮುಝ್ ಜಲಸಂಧಿ ಮುಚ್ಚಿದೆ. ಭಾರತಕ್ಕೆ ಅಡುಗೆ ಅನಿಲ, ತೈಲ ಹೊತ್ತು ಬರ್ತಿದ್ದ 22 ಹಡಗುಗಳು ಇರಾನ್ ಹಿಡಿತದಲ್ಲಿವೆ. ಇದರಿಂದ ಕರ್ನಾಟಕ ಸೇರಿದಂತೆ ದೇಶದಾದ್ಯಂತೆ ಗ್ಯಾಸ್​ ಸಿಲಿಂಡರ್ ಕೊರತೆ ತಾಂಡವವಾಡುತ್ತಿದೆ. ವಾಣಿಜ್ಯ ಬಳಕೆ ಸಿಲಿಂಡರ್​ (Commercial Gas) ಅಭಾವದಿಂದ ಬೆಂಗಳೂರಿನ ಹೋಟೆಲ್‌ಗಳಿಗೆ 150 ಕೋಟಿ ರೂ ನಷ್ಟವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​​​ಗಳ ಸಮಸ್ಯೆಯಿಂದ ಎದುರಾಗಿರುವ ಸಂಕಷ್ಟ ಅಷ್ಟಿಷ್ಟಲ್ಲ. ಹೋಟೆಲ್​ ಸೇರಿದಂತೆ ಹಲವು ವಲಯಗಳ ಮೇಲೆ ಇದರ ಬಿಸಿ ತಟ್ಟಿದೆ. ಹೋಟೆಲ್​​ ಮಾಲೀಕರು ಗ್ಯಾಸ್​ ಸಿಲಿಂಡರ್​​ ಸಿಗದೇ ವಿಲ ವಿಲ ಎನ್ನುತ್ತಿದ್ದಾರೆ. ಹೋಟೆಲ್​​ ಮಾಲೀಕರು ಸೌದೆ ಒಲೆ ಮೊರೆ ಹೋಗಿದ್ದಾರೆ. ಜನರು ಕೂಡ ಇದರಿಂದಾಗಿ ಕಂಗಾಲಾಗಿದ್ದಾರೆ.

ಬೆಂಗಳೂರು ಹೋಟೆಲ್​​ಗಳಿಗೆ 150 ಕೋಟಿ ರೂ ನಷ್ಟ

ಈ ಬಗ್ಗೆ ಹೋಟೆಲ್​ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್​​ ಹೇಳಿಕೆ ನೀಡಿದ್ದು, ಗ್ಯಾಸ್​ ಅಭಾವದಿಂದ ಬೆಂಗಳೂರಲ್ಲಿ ನೂರಾರು ಹೋಟೆಲ್​​ಗಳು ಬಂದ್​ ಆಗಿವೆ. ಇದರಿಂದಾಗಿ ಕಳೆದ ವಾರವೇ ಹೋಟೆಲ್​​ಗಳಿಗೆ 100 ಕೋಟಿ ರೂ ನಷ್ಟವಾಗಿತ್ತು. ಈ ವಾರ 50 ಕೋಟಿ ರೂ ನಷ್ಟವಾಗಿದೆ. ಕಳೆದೆರಡು ವಾರದಲ್ಲಿ 150 ಕೋಟಿ ರೂ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಒಂದು ಕೆಜಿ ಸೌದೆಗೆ 9 ರೂಪಾಯಿ

ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​​​ಗಳ ಅಭಾವದಿಂದಾಗಿ ಬೆಳಗಾವಿಯಲ್ಲಿ ಹೋಟೆಲ್​​ ಮಾಲೀಕರು ಸೌದೆ ಒಲೆ ಮೊರೆ ಹೋಗಿದ್ದಾರೆ. ಬಡಕಲ್ ಗಲ್ಲಿಯ ದುರ್ಗಾದೇವಿ ಖಾನಾವಳಿಯವರು ಸೌದೆ ಬಳಸಿ ಅಡುಗೆ ಮಾಡುತ್ತಿದ್ದಾರೆ. ಆದರೆ ಕೆಜಿ ಕಟ್ಟಿಗೆಗೆ 9 ರೂಪಾಯಿ ನೀಡ್ತಿದ್ದು, ದಿನಕ್ಕೆ 25 ಕೆಜಿ ಕಟ್ಟಿಗೆ ಬಳಕೆ ಆಗುತ್ತಿದೆ. ಅದು ಕೂಡ ನಮಗೆ ಲಾಸ್​​ ಅಂತ ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದಿದ್ದಾರೆ.

ಇದನ್ನೂ ಓದಿ: ಹೋಟೆಲ್, ರೆಸ್ಟೋರೆಂಟ್​​ಗಳಿಗೆ ಗುಡ್​​ ನ್ಯೂಸ್​​ ನೀಡಿದ ಕೇಂದ್ರ: ಸೋಮವಾರದಿಂದ ರಾಜ್ಯಗಳಿಗೆ ಹೆಚ್ಚುವರಿ ಸಿಲಿಂಡರ್ ಪೂರೈಕೆ

ಕಳೆದ ವಾರವೂ ಶಿವಾಲಿಕ್ ಹಾಗೂ ನಂದಾದೇವಿ ಹೆಸರಿನ ಹಡುಗುಗಳು ಭಾರತಕ್ಕೆ ಬಂದಿದ್ವು. ಸುಮಾರು 92 ಸಾವಿರ ಮೆಟ್ರಿಕ್ ಟನ್ LPG ಹೊತ್ತು ತಂದಿದ್ವು. ಇಷ್ಟಾದ್ರೂ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಗ್ಯಾಸ್ ಸಿಲಿಂಡರ್ ಅಭಾವ ಸೃಷ್ಟಿಯಾಗಿದೆ.

ವರದಿ: ನಟರಾಜ್​​ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಟಿ ಭಾವನಾ ರಾಮಣ್ಣ ಪುತ್ರಿಯ ನಾಮಕರಣ, ಮಗಳಿಗೆ ಅಜ್ಜಿಯ ಹೆಸರು: ಚಿತ್ರಗಳ ನೋಡಿ

Source link

ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು ಪಟ್ಟಿ ಇಲ್ಲಿದೆ

Source link

ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡ ಯಾವುದು? ಆರ್​ಸಿಬಿಗೆ ಯಾವ ಸ್ಥಾನ?

Source link

ಹೋಟೆಲ್, ರೆಸ್ಟೋರೆಂಟ್​​ಗಳಿಗೆ ಗುಡ್​​ ನ್ಯೂಸ್​​ ನೀಡಿದ ಕೇಂದ್ರ: ಸೋಮವಾರದಿಂದ ರಾಜ್ಯಗಳಿಗೆ ಹೆಚ್ಚುವರಿ ಸಿಲಿಂಡರ್ ಪೂರೈಕೆ

ದೆಹಲಿ, ಮಾ.21: ಕಳೆದ ಕೆಲವು ದಿನಗಳಿಂದ ಎಲ್‌ಪಿಜಿ (LPG) ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಹತ್ವದ ಸಮಾಧಾನ ನೀಡಿದೆ. ರಾಜ್ಯಗಳಿಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಅನಿಲ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಇದರಿಂದ ಒಟ್ಟು ಹಂಚಿಕೆ ಪ್ರಮಾಣ ಶೇಕಾಡ. ಶೇಕಾಡ 50ರ ಮಟ್ಟಕ್ಕೆ ತಲುಪಲಿದೆ. ಮಾರ್ಚ್ 23, 2026ರಿಂದ (ಸೋಮವಾರ) ಜಾರಿಗೆ ಬರುವಂತೆ ರಾಜ್ಯಗಳಿಗೆ ಹೆಚ್ಚುವರಿ ಶೇ. 20ರಷ್ಟು LPG ಹಂಚಿಕೆ ಮಾಡಲಾಗುವುದು. ಮುಂದಿನ ಆದೇಶದವರೆಗೆ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ.

ಈ ಹೆಚ್ಚುವರಿ ಅನಿಲವನ್ನು ಪ್ರಮುಖವಾಗಿ ರೆಸ್ಟೋರೆಂಟ್, ಧಾಬಾ, ಹೋಟೆಲ್, ಕೈಗಾರಿಕಾ ಕ್ಯಾಂಟೀನ್, ಆಹಾರ ಸಂಸ್ಕರಣೆ ಮತ್ತು ಡೈರಿ ಕ್ಷೇತ್ರಗಳಿಗೆ ಆದ್ಯತೆಯ ಮೇಲೆ ನೀಡಲು ಸೂಚಿಸಲಾಗಿದೆ. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಸಬ್ಸಿಡಿ ಊಟದ ಕೇಂದ್ರಗಳು ಮತ್ತು ಸಮುದಾಯ ಅಡುಗೆ ಮನೆಗಳಿಗೆ (Community Kitchens) ತಡೆರಹಿತ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಗ್ಯಾಸ್ ಟ್ರಬಲ್: ಹೋಟೆಲ್ ಮಾಲೀಕರು ವಿಲ ವಿಲ; ಸೌದೆ ಒಲೆ ದರ ದುಪ್ಪಟ್ಟು

ವಲಸೆ ಕಾರ್ಮಿಕರ ಹಿತದೃಷ್ಟಿಯಿಂದ ಅವರಿಗೆ 5 ಕೆಜಿ ಸಣ್ಣ ಸಿಲಿಂಡರ್ (FTL) ಒದಗಿಸುವ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಹೆಚ್ಚುವರಿ ಅನುದಾನವು ಕೇವಲ ನಿಗದಿಪಡಿಸಿದ ವಲಯಗಳಿಗೆ ತಲುಪುವಂತೆ ನೋಡಿಕೊಳ್ಳಲು ಮತ್ತು ಕಾಳಸಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ರಾಜ್ಯದಲ್ಲಿ ಮತ್ತೆ ಬಸ್ ಟಿಕೆಟ್‌ ದರ ಹೆಚ್ಚಾಗುತ್ತಾ? ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

ಬೆಂಗಳೂರು, ಮಾ.21: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದರೂ ರಾಜ್ಯದಲ್ಲಿ ಬಸ್ ಟಿಕೆಟ್‌ ದರವನ್ನು ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಟಿಕೆಟ್ ದರ ಏರಿಸಲು ಸದ್ಯಕ್ಕೆ ಅಧಿಕಾರವಿಲ್ಲ ಎಂದು ತಿಳಿಸಿರುವ ಸಚಿವರು, ದರ ಹೆಚ್ಚಳದ ನಿರ್ಧಾರವನ್ನು ತಿರಸ್ಕರಿಸಿದ್ದಾರೆ. ಇಂಧನ ಬೆಲೆ ಏರಿಕೆಗೆ ಜಾಗತಿಕ ಯುದ್ಧದ ಪರಿಸ್ಥಿತಿಯೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುದ್ಧ ನಿಂತರೆ ಬೆಲೆಗಳು ತಾನಾಗಿಯೇ ಕಡಿಮೆಯಾಗುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಮಲಿಂಗಾರೆಡ್ಡಿ, ಹಿಂದಿನ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದಾಗಲೂ ಕೇಂದ್ರ ಸರ್ಕಾರ ಜನರಿಗೆ ಯಾವುದೇ ಪ್ರಯೋಜನವನ್ನು ತಲುಪಿಸಲಿಲ್ಲ ಎಂದು ಆರೋಪಿಸಿದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 100-130 ಡಾಲರ್ ಇದ್ದ ಕಚ್ಚಾ ತೈಲಕ್ಕೆ ಸಬ್ಸಿಡಿ ನೀಡಲಾಗಿತ್ತು. ಆದರೆ, ಆ ನಂತರದ 10-12 ವರ್ಷಗಳ ಕಾಲ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದಾಗಲೂ ಕೇಂದ್ರ ಸರ್ಕಾರ ಲಾಭ ಮಾಡಿಕೊಂಡಿತೇ ಹೊರತು ಜನರಿಗೆ ಇದರ ಲಾಭ ಸಿಗಲಿಲ್ಲ ಎಂದು ಹೇಳಿದರು. ರಾಜ್ಯ ಸರ್ಕಾರ ಬಸ್ ದರ ಹೆಚ್ಚಿಸುವುದಿಲ್ಲ, ಕೇಂದ್ರ ಸರ್ಕಾರ ಇಂಧನ ಬೆಲೆ ಹೆಚ್ಚಳ ಮಾಡಬಹುದು ಎಂದು ಅವರು ಪುನರುಚ್ಚರಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಗಾಯಾಳುಗಳ ಕೂಪವಾದ ಕೆಕೆಆರ್; ಲೀಗ್​ನಿಂದ ತಂಡದ ಮೂರನೇ ಬೌಲರ್​ ಔಟ್

Source link

ಸಿನಿಮಾ ಸ್ಟೈಲ್​​ನಲ್ಲಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್: ರಾಜಾರೋಷವಾಗಿ ರಸ್ತೆ ಮಧ್ಯೆ ಶೋಕಿ

ಬೆಂಗಳೂರು, ಮಾರ್ಚ್​ 21: ಹೈಫೈ ಲೈಫ್​ ಹೊಂದಿರುವ ಕೆಲವರ ಶೋಕಿ ಬೇರೆನೇ ಇರುತ್ತೆ. ಅದರಲ್ಲೂ ಕಾರುಗಳಿರುವ ಕೆಲವರು ಓವರ್​ ಮಾಡುತ್ತಾರೆ. ಕಳೆದ ಎರಡು ತಿಂಗಳ‌ ಹಿಂದೆ ಗ್ರೀನ್ ಕಲರ್ ಲ್ಯಾಂಬೋರ್ಗಿನಿ (Lamborghini) ಜಿಗ್ ಜಾಗ್ ಜರ್ನಿ ಮಾಡಿ ಸುದ್ದಿಯಾಗಿತ್ತು. ಇದೀಗ ವೈಟ್ ಕಲರ್ ಲ್ಯಾಂಬೋರ್ಗಿನಿ ಕಾರವೊಂದು ಸದ್ದು ಮಾಡುತ್ತಿದೆ. ಸರ್ಕಲ್ ನಡುವೆಯೇ ರಾಜಾ ರೋಷವಾಗಿ ಡ್ರಿಫ್ಟಿಂಗ್ ಮಾಡಲಾಗಿದೆ. ಪೊಲೀಸರ ಬಗ್ಗೆ ಗೊತ್ತಿದ್ದೂ, ಸಿನಿಮಾ ಸ್ಟೈಲ್​​ನಲ್ಲಿ ಶೋಕಿ ಮಾಡಲಾಗಿದೆ.

ಸರ್ಕಲ್ ನಡುವೆಯೇ ಡ್ರಿಫ್ಟಿಂಗ್

ಬೆಂಗಳೂರಿನ ಪ್ರಸಿದ್ಧ ಅನಿಲ್ ಕುಂಬ್ಳೆ ಸರ್ಕಲ್​​ನ ಮಧ್ಯೆದಲ್ಲಿ ಹೀಗೆ ರಾಜಾರೋಷವಾಗಿ ಕಾರಿನ ಡ್ರಿಫ್ಟಿಂಗ್​​ ಮಾಡಲಾಗಿದೆ. ಲ್ಯಾಂಬೋರ್ಗಿನಿ ಕಾರು ಚಾಲಕನೊಬ್ಬ ಸಿನಿಮಾ ಸ್ಟೈಲ್​ನಲ್ಲಿ ಡ್ರಿಫ್ಟಿಂಗ್ ಮಾಡಿ ಸುದ್ದಿಯಾಗಿದ್ದಾನೆ. ಇಂದು ಬೆಳಗಿನ ಜಾವ 2 ಅಥವಾ 3ಗಂಟೆ ಸುಮಾರಿಗೆ ಈ ರೀತಿಯಾಗಿ ಕಾರು ಸ್ಟಂಟ್ ಮಾಡಲಾಗಿದೆ. ಸುತ್ತಮುತ್ತ ಸಿಸಿಟಿವಿ, ಪೊಲೀಸ್​ ಕಣ್ಗಾವಲು, ಎಂಜಿ ರೋಡ್ ಆಗಿರುವುದರಿಂದ ರಾತ್ರಿಯಾದರೂ ವಾಹನಗಳು ಸಂಚರಿಸುತ್ತಿರುತ್ತವೆ. ಈ ಮಧ್ಯೆ ಬಳಿ ಬಣ್ಣದ ಲ್ಯಾಂಬೋರ್ಗಿನಿ ಕಾರು ಮಾಲೀಕ ಹೀಗೆ ಸಿನಿಮಾ ಸ್ಟೈಲ್​ನಲ್ಲಿ ಸರ್ಕಲ್ ನಡುವೆಯೇ ಡ್ರಿಫ್ಟಿಂಗ್ ಮಾಡಿದ್ದಾನೆ. ಅಲ್ಲದೆ ಜೋರಾಗಿ ಕೂಗಾಡುತ್ತಾ ಎಂಜಾಯ್ ಮಾಡಿದ್ದಾನೆ.

ಇದನ್ನೂ ಓದಿ: ಕಾರು ಖರೀದಿಸಿದ್ದು ಯಾರೋ, ನೋಂದಣಿ ಮಾಡಿಸಿದ್ದು ಇನ್ಯಾರದೋ ಹೆಸರಿಗೆ: ಲ್ಯಾಂಬೋರ್ಗಿನಿ ರಹಸ್ಯ ಬಯಲು

ಚಾಲಕನ ಈ ಸಾಹಸವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ಪೊಲೀಸರಿಗೂ ರವಾನಿಸಿದ್ದಾರೆ. ಮಾಹಿತಿ ಬಂದ ಕೂಡಲೇ ಎಫ್​ಐಆರ್ ದಾಖಲಿಸಿಕೊಂಡಿ ಪರಿಶೀಲನೆ ಮಾಡಿದ್ದು, ಸದ್ಯ KA-05 NR 0009 ಕಾರು ನಂಬರ್​​ ಪತ್ತೆಯಾಗಿದೆ. ಆದರೆ ಮಾಲೀಕ ಯಾರು? ರಸ್ತೆಯುದ್ದಕ್ಕೂ ಈ ರೀತಿ ಜಾಲಿ ರೈಡ್ ಮಾಡಲಾಗಿದೆ, ಹೀಗೆ ಹಲವು ಆಯಾಮಗಳಲ್ಲಿ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ತನಿಖೆ ನಡೆಸಿದ್ದಾರೆ. ಚಾಲಕನನ್ನ ಪತ್ತೆ ಮಾಡಿ ಆರ್.ಸಿ ರದ್ದು ಮಾಡಿ ಕಾರು ವಶಪಡೆಯುವುದುಕ್ಕೆ ಖಾಕಿ ಮುಂದಾಗಿದೆ.

ಡಿಸಿಪಿ ಸಾಹಿಲ್ ಬಾಗ್ಲಾ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಪಶ್ಚಿಮ ವಿಭಾಗದ ಸಂಚಾರ ಪ್ರಭಾರ ಡಿಸಿಪಿ ಸಾಹಿಲ್ ಬಾಗ್ಲಾ ಪ್ರತಿಕ್ರಿಯಿಸಿದ್ದು, ಬೆಳಗಿನಜಾವ 2-3 ಗಂಟೆ ಸುಮಾರಿಗೆ ಈ ರೀತಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ಮಾಲೀಕನ ಪತ್ತೆ ಕಾರ್ಯ ನಡೆಸುತ್ತಿದ್ದೇವೆ. ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಯನ್ನು ಪತ್ತೆ ಹಚ್ಚುತ್ತೇವೆ. ಘಟನೆ ಸಂಬಂಧ ಆರ್​ಸಿ ಕೂಡ ಕ್ಯಾನ್ಸಲ್ ಮಾಡಲು ನಿರ್ಧರಿಸಿದ್ದೇವೆ. ಈ ರೀತಿ ರಸ್ತೆಯಲ್ಲಿ ಯಾರೂ ಕೂಡ ಸ್ಟಂಟ್ ಮಾಡಲು ಅವಕಾಶ ಇಲ್ಲ, ಹೀಗೆ ಮಾಡಿದರೆ ಆರ್​ಸಿ ರದ್ದುಗೊಳಿಸಿ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ: ವೈರಲ್ ವಿಡಿಯೋ ಆಧರಿಸಿ ಚಾಲಕನ ವಿರುದ್ಧ ಎಫ್‌ಐಆರ್

ಪೊಲೀಸರು ಕೇಸ್ ಹಾಕಿ ವಾರ್ನ್ ಮಾಡಿದರೂ ಕೆಲವರು ಹಣವಿದೆ ಅಂತಾ ಈ ರೀತಿ ಶೋಕಿ ಮಾಡುವುದು ಮಾತ್ರ ನಿಲ್ಲುತ್ತಿಲ್ಲ. ಆದರೆ ಶೋಕಿಗೆ ಬೇರೆಯವರ ಪ್ರಾಣಕ್ಕೆ ತೊಂದರೆ ಆದರೆ ಯಾರು ಹೊಣೆ?

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇರಾನ್ ಅಧ್ಯಕ್ಷರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ; ನೌರುಜ್​ನಲ್ಲಿ ಮೂಲಸೌಕರ್ಯದ ಮೇಲಿನ ದಾಳಿಗೆ ಖಂಡನೆ

ನವದೆಹಲಿ, ಮಾರ್ಚ್ 21: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್‌ ಅವರೊಂದಿಗೆ ಮಾತನಾಡಿದ್ದಾರೆ. ಇರಾನ್‌ನಾದ್ಯಂತ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಮೋದಿ ಖಂಡಿಸಿದ್ದು, ಇದು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಎಕ್ಸ್​​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್‌ ಅವರೊಂದಿಗೆ ಮಾತನಾಡಿದೆ. ಈದ್ ಮತ್ತು ನೌರುಜ್ ಶುಭಾಶಯಗಳನ್ನು ತಿಳಿಸಿದೆ. ಈ ಹಬ್ಬದ ಋತುವು ಪಶ್ಚಿಮ ಏಷ್ಯಾಕ್ಕೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಬರೆದಿದ್ದಾರೆ.

ಇದೇವೇಳೆ ಪ್ರಧಾನಿ ಮೋದಿ ಸಂಚಾರದ ಸ್ವಾತಂತ್ರ್ಯವನ್ನು ರಕ್ಷಿಸುವ ಮಹತ್ವವನ್ನು ಪುನರುಚ್ಚರಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನದ ಮಧ್ಯೆ ಹಡಗು ಮಾರ್ಗಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರು ಕರೆ ನೀಡಿದ್ದಾರೆ. ಇದು ವಿಶ್ವದ ತೈಲ ಮತ್ತು ಗ್ಯಾಸ್ ವ್ಯಾಪಾರದ ಐದನೇ ಒಂದು ಭಾಗವನ್ನು ಹೊಂದಿರುವ ಪ್ರಮುಖ ಕಡಲ ಚಾಕ್‌ಪಾಯಿಂಟ್ ಜಾಗತಿಕವಾಗಿ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಿತು.

ಇದನ್ನೂ ಓದಿ: ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಬ್ರೇಕ್? ಟ್ರಂಪ್ ಆ ಸಂದೇಶದಲ್ಲಿದೆ ಮಹತ್ವದ ಸುಳಿವು!

“ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಹಾಕುವ ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸುವ ಈ ಪ್ರದೇಶದಲ್ಲಿನ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಖಂಡಿಸಲಾಯಿತು. ಸಂಚಾರದ ಸ್ವಾತಂತ್ರ್ಯವನ್ನು ಕಾಪಾಡುವ, ಹಡಗು ಮಾರ್ಗಗಳು ಮುಕ್ತ ಮತ್ತು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಅವರು ಪುನರುಚ್ಚರಿಸಿದರು. ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಇರಾನ್‌ನ ನಿರಂತರ ಬೆಂಬಲವನ್ನು ಶ್ಲಾಘಿಸಿದರು” ಎಂದು ಮೋದಿ ಹೇಳಿದ್ದಾರೆ.

ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಯೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಪ್ರಾರಂಭವಾದ ನಂತರ ಇದು ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷರಿಗೆ ಮಾಡಿದ ಎರಡನೇ ದೂರವಾಣಿ ಕರೆಯಾಗಿದೆ.

ಇದನ್ನೂ ಓದಿ: ನೀವು ಹೇಡಿಗಳು; ಇರಾನ್ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಟ್ರಂಪ್ ಆಕ್ರೋಶ

ಮಾರ್ಚ್ 12ರಂದು ಪ್ರಧಾನಿ ಮೋದಿ ಅವರು ಪೆಜೆಶ್ಕಿಯನ್ ಅವರೊಂದಿಗೆ ಮಾತನಾಡಿದ್ದರು. ಪ್ರಾದೇಶಿಕ ಸಂಘರ್ಷದ ಬಗ್ಗೆ ತಮ್ಮ ಕಳವಳಗಳನ್ನು ತಿಳಿಸಿದ್ದರು. “ಪ್ರದೇಶದಲ್ಲಿನ ಗಂಭೀರ ಪರಿಸ್ಥಿತಿಯನ್ನು ಚರ್ಚಿಸಲು ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯನ್ ಅವರೊಂದಿಗೆ ಮಾತುಕತೆ ನಡೆಸಿದೆ. ಉದ್ವಿಗ್ನತೆಗಳ ಉಲ್ಬಣ, ಜನರ ಜೀವಹಾನಿ ಹಾಗೂ ನಾಗರಿಕ ಮೂಲಸೌಕರ್ಯಕ್ಕೆ ಹಾನಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ” ಎಂದು ಪ್ರಧಾನಿ ಮೋದಿ ಎಕ್ಸ್​ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಹೇಳಿದ್ದರು.

ಯುದ್ಧಪೀಡಿತ ಪ್ರದೇಶದಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯು ಭಾರತದ ಪ್ರಮುಖ ಆದ್ಯತೆಯಾಗಿ ಉಳಿದಿದೆ ಎಂದು ಪ್ರಧಾನಿ ಮೋದಿ ದೃಢಪಡಿಸಿದ್ದರು. ಇದರ ಜೊತೆಗೆ ಸರಕು ಮತ್ತು ಇಂಧನದ ಅಡೆತಡೆಯಿಲ್ಲದ ಸಾಗಣೆಯ ಅಗತ್ಯವೂ ಭಾರತದ ಪ್ರಮುಖ ಆದ್ಯತೆಗಳಾಗಿವೆ. ಶಾಂತಿ ಮತ್ತು ಸ್ಥಿರತೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version