‘ಪೆದ್ದಿ’ಯ ಪ್ರೀ ರಿಲೀಸ್ ಇವೆಂಟ್ ಸಿನಿಮಾದಷ್ಟೆ ಅದ್ಧೂರಿ, 150 ಕೋಟಿ ಮೌಲ್ಯದ ಸೆಟಪ್ – Kannada News | Ram Charan’s Peddi Movie event in Bhopal is very huge

ರಾಮ್ ಚರಣ್ (Ram Charan) ನಟಿಸಿ, ‘ಉಪ್ಪೆನ’ ಖ್ಯಾತಿಯ ಬುಚ್ಚಿಬಾಬು ಸಾನಾ ನಿರ್ದೇಶನ ಮಾಡಿರುವ ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ ಪ್ರಚಾರದ ವಿಚಾರದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ನಿನ್ನೆಯಷ್ಟೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ದೇಶದ ಪ್ರಮುಖ ನಗರಗಳಿಗೆ ತೆರಳಿ ಚಿತ್ರತಂಡ ಪ್ರಚಾರ ಮಾಡಲಿದೆ. ಆದರೆ ಭೋಪಾಲ್ ಮತ್ತು ಹೈದರಾಬಾದ್​​ನಲ್ಲಿ ಮಾತ್ರ ಭಾರಿ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಚಿತ್ರತಂಡ ಮಾಡಲಿದೆ. ಅದರಲ್ಲೂ ಭೂಪಾಲ್​​ನಲ್ಲಿ ಮಾಡಲಿರುವ ವಿಶೇಷ ಕಾರ್ಯಕ್ರಮಕ್ಕೆ ಸಿನಿಮಾಕ್ಕೆ ಹಾಕಿರುವಷ್ಟೆ ಬೃಹತ್ ಬಂಡವಾಳವನ್ನು ಚಿತ್ರತಂಡ ಹೂಡಿಕೆ ಮಾಡುತ್ತಿದ್ದು, ಇದು ದಾಖಲೆ ಪುಸ್ತಕ ಸೇರುವುದು ಖಾತ್ರಿ ಎನ್ನಲಾಗುತ್ತಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮೇ 23 ರಂದು ‘ಪೆದ್ದಿ’ ಮ್ಯೂಸಿಕಲ್ ನೈಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಾರತೀಯ ಚಿತ್ರರಂಗದಲ್ಲೇ ಇದು ಅತ್ಯಂತ ದೊಡ್ಡ ಮಟ್ಟದ ಪ್ರಚಾರ ಕಾರ್ಯಕ್ರಮ ಎನಿಸಿಕೊಳ್ಳಲಿದೆ. ಭೋಪಾಲ್‌ನ ಬಿಎಚ್‌ಇಎಲ್ ದಸರಾ ಮೈದಾನದಲ್ಲಿ ಸಂಜೆ 5 ಗಂಟೆಯಿಂದ ಈ ಸಂಗೀತದ ಹಬ್ಬ ಆರಂಭವಾಗಲಿದೆ. ಭಾರಿ ಸಂಖ್ಯೆಯ ಜನ ಕಾರ್ಯಕ್ರಮಕ್ಕೆ ಸೇರುವ ಜೊತೆಗೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಭೋಪಾಲ್‌ನಲ್ಲಿ ನಡೆಯಲಿರುವ ಈ ‘ಪೆದ್ದಿ’ ಸಂಗೀತ ರಸಸಂಜೆಗಾಗಿ ಚಿತ್ರತಂಡ ಭಾರಿ ಸಿದ್ಧತೆ ಮಾಡಿಕೊಂಡಿದೆ. ಬರೋಬ್ಬರಿ 50 ಎಕರೆ ವಿಸ್ತೀರ್ಣದ ಮೈದಾನದಲ್ಲಿ ಅತ್ಯಾಧುನಿಕ ರಂಗಸಜ್ಜಿಕೆ ನಿರ್ಮಿಸಲಾಗುತ್ತಿದ್ದು, ಇಡೀ ಭಾರತೀಯ ಸಿನಿಮಾರಂಗವೇ ಬೆರಗಾಗುವಂತಹ ವಿಶ್ವದರ್ಜೆಯ ಸೌಂಡ್ ಸಿಸ್ಟಮ್ ಬಳಸಲಾಗುತ್ತಿದೆ. ಕೇವಲ ಈ ಕಾರ್ಯಕ್ರಮದ ಸೌಂಡ್ ಮತ್ತು ಸ್ಟೇಜ್ ಇನ್‌ಫ್ರಾಸ್ಟ್ರಕ್ಚರ್‌ಗಾಗಿ ಬಾಡಿಗೆ ಆಧಾರದ ಮೇಲೆ ಸುಮಾರು 150 ಕೋಟಿ ರೂಪಾಯಿ ಮೌಲ್ಯದ ತಾಂತ್ರಿಕ ಉಪಕರಣಗಳನ್ನು, ಸೌಂಡ್ ಸಿಸ್ಟಮ್ ಅನ್ನು ತರಿಸಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ಒಟ್ಟು ಬಜೆಟ್ ಸರಿಸುಮಾರು 4 ರಿಂದ 5 ಕೋಟಿ ರೂಪಾಯಿ ದಾಟಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಪೆದ್ದಿ’ ಸಿನಿಮಾ ಟ್ರೈಲರ್ ನೋಡಿ ರಿಷಬ್ ಶೆಟ್ಟಿ ಹೇಳಿದ್ದು ಹೀಗೆ

‘ಪೆದ್ದಿ’ ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಮ್ಯೂಸಿಕಲ್ ನೈಟ್ ಅನ್ನು ಸಹ ಅವರೇ ನಡೆಸಿಕೊಡುತ್ತಿದ್ದಾರೆ. ರೆಹಮಾನ್ ಮತ್ತು ಅವರ ಜಗತ್ಪ್ರಸಿದ್ಧ ಗಾಯಕರ ತಂಡ ಈ ವೇದಿಕೆಯ ಮೇಲೆ ‘ಪೆದ್ದಿ’ ಸಿನಿಮಾದ ಹಾಡುಗಳ ಜೊತೆಗೆ ಇನ್ನೂ ಹಲವಾರು ಹಾಡುಗಳನ್ನು ಹಾಡಿ ರಂಜಿಸಲಿದೆ. ಹಿಂದಿ, ತೆಲುಗು, ತಮಿಳು ಭಾಷೆಗಳ ಹಾಡುಗಳನ್ನು ರೆಹಮಾನ್ ಅಂದು ಹಾಡಲಿದ್ದಾರೆ. ಇದರ ಜೊತೆಗೆ ಅದ್ಧೂರಿ ವೇದಿಕೆಯ ಮೇಲೆ ‘ಪೆದ್ದಿ’ ಹೊಸ ಹಾಡನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ಸಿನಿಮಾದ ‘ಚಿಕಿರಿ’ ಸೇರಿದಂತೆ ಇನ್ನೂ ಕೆಲ ಹಾಡುಗಳು ಹಿಟ್ ಆಗಿದ್ದು, ಭೂಪಾಲ್​​ನಲ್ಲಿ ಶ್ರುತಿ ಹಾಸನ್ ಜೊತೆಗಿನ ಐಟಂ ಹಾಡನ್ನು ಬಿಡುಗಡೆ ಮಾಡಲಿದೆ ಚಿತ್ರತಂಡ.

ತೆಲುಗು ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಭಾರಿ ಬೇಡಿಕೆ ಇದೆ. ಹಾಗಾಗಿ ಇತ್ತೀಚೆಗೆ ತೆಲುಗು ಸಿನಿಮಾಗಳು ಉತ್ತರ ಭಾರತದಲ್ಲಿ ಹಚ್ಚಿನ ಪ್ರಚಾರ ಮಾಡುತ್ತಿವೆ. ‘ಪುಷ್ಪ 2’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಪಾಟ್ನಾನಲ್ಲಿ ನಡೆದಿತ್ತು. ಇತ್ತೀಚೆಗೆ ಬಿಡುಗಡೆ ಆದ ‘ಡಕಾಯತ್’ಸಿನಿಮಾದ ಪ್ರಚಾರ ಉತ್ತರ ಪ್ರದೇಶದ ನಗರವೊಂದರಲ್ಲಿ ನಡೆದಿತ್ತು. ಈಗ ‘ಪೆದ್ದಿ’ ಸಹ ಇದೇ ಮಾದರಿಯನ್ನೇ ಅನುಸರಿಸುತ್ತಿದೆ. ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:11 pm, Tue, 19 May 26

Source link

ಶರ್ಟ್‌ ಕಾಲರ್‌ನಲ್ಲಿ ಅಂಟಿರುವ ಹಠಮಾರಿ ಕಲೆಯನ್ನು ಸುಲಭವಾಗಿ ತೆಗೆದುಹಾಕಲು ಇಲ್ಲಿವೆ ಮನೆಮದ್ದು – Kannada News | Easily remove shirt collar stains with these home remedies

ಬಟ್ಟೆಗಳ ಮೇಲೆ ಅಂಟಿರುವ ಕಲೆಗಳನ್ನು (stains) ತೆಗೆದುಹಾಕುವುದು ಸುಲಭ.  ಆದರೆ ಶರ್ಟ್‌ ಕಾಲರ್‌ ಮೇಲೆ ಅಂಟಿರುವ ಹಠಮಾರಿ ಕಲೆಗಳನ್ನು ತೆಗೆದುಹಾಕುವುದು ಅಷ್ಟು ಸುಲಭವಲ್ಲ. ಕಾಲರ್ ನಿರಂತರವಾಗಿ ಕುತ್ತಿಗೆಯೊಂದಿಗೆ ಸಂಪರ್ಕದಲ್ಲಿರುವುದರಿಂದ ಬೆವರು, ಚರ್ಮದ ಎಣ್ಣೆ, ಧೂಳು ಮತ್ತು ಕೊಳೆ ಶರ್ಟ್‌ ಕಾಲರ್‌ಗೂ ಅಂಟಿಕೊಳ್ಳುತ್ತದೆ.  ಈ ಕಲೆಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಇನ್ನೂ ಕಲೆಯನ್ನು ತೆಗೆಯುವ ಸಲುವಾಗಿ ಕಾಲರ್‌ ಅನ್ನು ತಿಕ್ಕಿ ತಿಕ್ಕಿ ಉಜ್ಜಿದರೆ ಕಾಲರ್‌ ಸವೆದು ಹೋಗುತ್ತದೆ. ಈ ಕಾರಣದಿಂದ ಬಟ್ಟೆಯೂ ಹಳೆಯದರಂತೆ ಕಾಣುತ್ತದೆ. ಹೀಗಿರುವಾಗ ಈ ಕೆಲವು ಮನೆಮದ್ದುಗಳ ಸಹಾಯದಿಂದ ಶರ್ಟ್‌ ಕಾಲರ್‌ನಲ್ಲಿ ಅಂಟಿರುವ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.

ಶರ್ಟ್‌ ಕಾಲರ್‌ನಲ್ಲಿ ಅಂಟಿರುವ ಕಲೆಗಳನ್ನು ತೆಗೆದುಹಾಕಲು ಸಹಕಾರಿ ಈ ಮನೆಮದ್ದು:

ಅಡಿಗೆ ಸೋಡಾ ಮತ್ತು ನಿಂಬೆ: ಕಾಲರ್ ಮೇಲಿನ ಕಲೆಗಳನ್ನು ತೆಗೆದುಹಾಕುವಲ್ಲಿ ಅಡಿಗೆ ಸೋಡಾ ಮತ್ತು ನಿಂಬೆ ದ್ರಾವಣವು ತುಂಬಾ ಪರಿಣಾಮಕಾರಿಯಾಗಿದೆ. ಇದಕ್ಕಾಗಿ 2 ಚಮಚ ಅಡಿಗೆ ಸೋಡಾವನ್ನು ಸ್ವಲ್ಪ ನಿಂಬೆ ರಸದೊಂದಿಗೆ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ.  ಈ ಪೇಸ್ಟ್ ಅನ್ನು ಕಾಲರ್ ನ ಕಲೆ ಇರುವ ಜಾಗಕ್ಕೆ ಹಚ್ಚಿ ಹಳೆಯ ಟೂತ್ ಬ್ರಷ್ ಸಹಾಯದಿಂದ ನಿಧಾನವಾಗಿ ಸ್ಕ್ರಬ್ ಮಾಡಿ. 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಕಾಲರ್‌ನಿಂದ ಹಠಮಾರಿ ಕಲೆಗಳನ್ನು ತೆಗೆದುಹಾಕುತ್ತವೆ.

ಬಿಳಿ ವಿನೆಗರ್ ಮತ್ತು ಡಿಟೆರ್ಜಂಟ್: ಕಾಲರ್‌ನಲ್ಲಿ ಅಂಟಿರುವ ಹಳೆಯ, ಕಪ್ಪು, ಹಳದಿ ಮತ್ತು ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಇನ್ನೊಂದು ಸುಲಭ ಮಾರ್ಗವೆಂದರೆ ಬಿಳಿ ವಿನೆಗರ್ ಮತ್ತು ಡಿಟರ್ಜೆಂಟ್. ಕಾಲರ್‌ಗೆ ಸ್ವಲ್ಪ ಲಿಕ್ವಿಡ್ ಡಿಟೆರ್ಜಂಟ್ ಹಚ್ಚಿ, ನಂತರ ಅದರ ಮೇಲೆ 1-2 ಚಮಚ ಬಿಳಿ ವಿನೆಗರ್ ಸುರಿಯಿರಿ. ಅದನ್ನು 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ಬ್ರಷ್ ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ. ಇದು ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.

ಡಿಶ್‌ವಾಶ್‌ ಲಿಕ್ವಿಡ್‌ ಮತ್ತು ಶಾಂಪೂ: ಒಂದು ಬಟ್ಟಲಿನಲ್ಲಿ ಸ್ವಲ್ಪ ಪ್ರಮಾಣದ ಪಾತ್ರೆ ತೊಳೆಯುವ ದ್ರವವನ್ನು ಸಮಾನ ಪ್ರಮಾಣದ ಶಾಂಪೂ ಜೊತೆ ಬೆರೆಸಿ. ಅದನ್ನು ನೇರವಾಗಿ ಶರ್ಟ್‌ನ ಕಾಲರ್‌ಗೆ ಹಚ್ಚಿ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಬ್ರಷ್‌ನಿಂದ ಸ್ಕ್ರಬ್ ಮಾಡಿ, ತೊಳೆಯಿರಿ. ಇದು ಎಣ್ಣೆಯಂತಹ ಮೊಂಡುತನದ ಕಲೆಗಳನ್ನು ಸಹ ತೆಗೆದುಹಾಕುತ್ತದೆ.

ಇದನ್ನೂ ಓದಿ: ಟೊಮೆಟೊದಲ್ಲಿ ಎರಡು ವಸ್ತುಗಳನ್ನು ಬೆರೆಸಿ ಮನೆಯ ಮೂಲೆಗಳಲ್ಲಿಟ್ಟರೆ ಜಿರಳೆಗಳ ಕಾಟವೇ ಇರೋದಿಲ್ಲ

ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ:

ಕಾಲರ್‌ನಲ್ಲಿ ಅಂಟಿರುವ ಕಲೆಯನ್ನು ತೆಗೆಯುವಾಗ ಈ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ, ಇಲ್ಲದಿದ್ದರೆ ಅದು ಬೇಗನೆ ಹರಿದು ಹೋಗಬಹುದು ಅಥವಾ ಹಾಳಾಗಬಹುದು.

  • ಬ್ರಷ್‌ನಿಂದ ಕಾಲರ್ ಅನ್ನು ಎಂದಿಗೂ ತುಂಬಾ ಗಟ್ಟಿಯಾಗಿ ಉಜ್ಜಬೇಡಿ; ಇದರಿಂದ ಬಟ್ಟೆಗೆ ಹಾನಿಯಾಗಬಹುದು.
  • ಬಣ್ಣದ ಶರ್ಟ್‌ಗಳ ಮೇಲೆ ನಿಂಬೆ ಅಥವಾ ಬ್ಲೀಚ್ ಅನ್ನು ಎಚ್ಚರಿಕೆಯಿಂದ ಬಳಸಬೇಕು.
  • ಈ ಮೇಲಿನ ಪರಿಹಾರಗಳನ್ನು ಬಳಸುವ ಮೊದಲು, ಹಳೆಯ ಉಡುಪಿನ ಮೇಲೆ ಪ್ಯಾಚ್ ಟೆಸ್ಟ್‌ ಮಾಡಲು ಮರೆಯದಿರಿ. ಬಟ್ಟೆ ಬಣ್ಣ ಮಸುಕಾದರೆ, ಅದನ್ನು ಬಳಸುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಯಲ್ಲಿರುವ ಇಲಿಗಳಿಂದ ಹಂಟಾವೈರಸ್ ಬರುತ್ತದೆಯೇ? ಈ ಲಕ್ಷಣಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ – Kannada News | Early Hantavirus Symptoms After Rat Exposure: When To Seek Medical Help

ಪ್ರಪಂಚದ ಹಲವೆಡೆ ಹಂಟಾವೈರಸ್ (Hantavirus) ಬಗ್ಗೆ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಭಯವೂ ಹೆಚ್ಚಾಗಿದೆ. ಸಾಮಾನ್ಯವಾಗಿ ಈ ವೈರಸ್ ಸೋಂಕಿತ ಇಲಿಗಳ ಮಲ, ಮೂತ್ರ ಮತ್ತು ಲಾಲಾರಸದ ಮೂಲಕ ಮಾನವರಿಗೆ ಹರಡಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಮನೆಗಳಲ್ಲಿ ಇಲಿಗಳಿರುವುದು ಸಾಮಾನ್ಯವಾದರೂ, ಇದರಿಂದಲೇ ವೈರಸ್ ಹರಡುತ್ತದೆ ಎಂಬುದಲ್ಲ. ಆದರೆ ಸ್ವಚ್ಛತೆಯ ಕೊರತೆ ಮತ್ತು ಇಲಿಗಳ ಹೆಚ್ಚಳ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ವೈದ್ಯಕೀಯವಾಗಿ “ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್” ಎಂದು ಕರೆಯಲಾಗುವ ಈ ಸೋಂಕು ಮುಖ್ಯವಾಗಿ ಸೋಂಕಿತ ಇಲಿಗಳ ಸಂಪರ್ಕದಿಂದ ಹರಡುತ್ತದೆ. ಇಲಿಗಳ ಮಲ ಅಥವಾ ಮೂತ್ರ ಒಣಗಿ ಗಾಳಿಯಲ್ಲಿ ಮಿಶ್ರಣವಾದಾಗ, ಅದನ್ನು ಉಸಿರಾಟದ ಮೂಲಕ ಒಳಗೆಳೆದರೆ ಸೋಂಕಿನ ಅಪಾಯ ಉಂಟಾಗಬಹುದು. ವಿಶೇಷವಾಗಿ ದೀರ್ಘಕಾಲ ಮುಚ್ಚಿಟ್ಟ ಕೊಠಡಿಗಳು, ಗೋದಾಮುಗಳು ಮತ್ತು ಕಸದ ಪ್ರದೇಶಗಳಲ್ಲಿ ಈ ಅಪಾಯ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ.

ಯಾವ ಸೂಚನೆಗಳನ್ನು ನಿರ್ಲಕ್ಷ್ಯ ಮಾಡಬಾರದು?

ಮನೆಯಲ್ಲಿ ವಿಚಿತ್ರ ದುರ್ವಾಸನೆ ಬರುತ್ತಿದ್ದರೆ, ವಸ್ತುಗಳು ಇಲಿಗಳಿಂದ ಕಚ್ಚಲ್ಪಟ್ಟಿರುವ ಗುರುತು ಕಂಡುಬಂದರೆ ಅಥವಾ ಇಲಿಗಳ ಸಂಖ್ಯೆ ಹೆಚ್ಚಾಗಿದ್ದರೆ ಎಚ್ಚರಿಕೆಯಿಂದ ಇರಬೇಕು. ದೀರ್ಘಕಾಲ ಮುಚ್ಚಿಟ್ಟಿದ್ದ ಕೊಠಡಿಗಳನ್ನು ತೆರೆಯುವಾಗ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯ. ಅಂಥ ಸ್ಥಳಗಳಲ್ಲಿ ವೈರಸ್ ಕಣಗಳು ಗಾಳಿಯಲ್ಲಿ ಹರಡುವ ಸಾಧ್ಯತೆ ಇರುತ್ತದೆ. ಕುಟುಂಬದ ಯಾರಿಗಾದರೂ ಏಕಾಏಕಿ ಜ್ವರ, ದೇಹ ನೋವು, ದೌರ್ಬಲ್ಯ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಹಂಟಾವೈರಸ್ ಈಗ ಕಂಡುಬಂದಿದ್ದಲ್ಲ; ಆರೋಗ್ಯ ತಜ್ಞರು ನೀಡಿರುವ ಮಾಹಿತಿಯಲ್ಲಿದೆ ಆತಂಕಕಾರಿ ಅಂಶ

ಭಾರತದಲ್ಲಿ ಹ್ಯಾಂಟಾವೈರಸ್ ಅಪಾಯ ಇದೆಯೇ?

ಸಾಂಕ್ರಾಮಿಕ ರೋಗ ತಜ್ಞ ಡಾ. ಜುಗಲ್ ಕಿಶೋರ್ ಅವರು ಹೇಳುವ ಪ್ರಕಾರ, ಭಾರತದಾದ್ಯಂತ ಮನೆಗಳಲ್ಲಿ ಇಲಿಗಳು ಸಾಮಾನ್ಯವಾಗಿದ್ದರೂ ಹ್ಯಾಂಟಾವೈರಸ್ ಹರಡುವ ಸಾಧ್ಯತೆ ಈಗಾಗಲೇ ಕಂಡುಬಂದಿಲ್ಲ. ದೇಶದಲ್ಲಿ ಈ ವೈರಸ್‌ನ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಲ್ಲದೆ ಪ್ರತಿಯೊಂದು ಇಲಿಯಲ್ಲೂ ಈ ವೈರಸ್ ಇರುವುದಿಲ್ಲ. ಲಕ್ಷಾಂತರ ಇಲಿಗಳಲ್ಲಿ ಕೆಲವೇ ಕೆಲವು ಸೋಂಕಿತವಾಗಿರಬಹುದು. ಆದ್ದರಿಂದ ಅನಾವಶ್ಯಕ ಭಯ ಬೇಡ, ಆದರೆ ಮುನ್ನೆಚ್ಚರಿಕೆ ಅಗತ್ಯ ಎಂದು ಅವರು ಹೇಳಿದ್ದಾರೆ.

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು ಮುಖ್ಯ. ಆಹಾರ ಪದಾರ್ಥಗಳನ್ನು ಮುಚ್ಚಿ ಇಡಿ, ಕಸವನ್ನು ಸಮಯಕ್ಕೆ ತೆರವುಗೊಳಿಸಿ ಹಾಗೂ ಇಲಿಗಳ ಸಂಚಾರ ಕಂಡುಬಂದರೆ ತಕ್ಷಣ ನಿಯಂತ್ರಣ ಕ್ರಮ ಕೈಗೊಳ್ಳಿ. ಮುಚ್ಚಿದ ಕೊಠಡಿಗಳನ್ನು ಸ್ವಚ್ಛಗೊಳಿಸುವಾಗ ಮಾಸ್ಕ್ ಮತ್ತು ಗ್ಲೌಸ್ ಧರಿಸುವುದು ಸುರಕ್ಷಿತ ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಪ್ಪಾ ನನ್ನನ್ನು ಬದುಕಿಸಿ’; ಫೋನ್ ಮಾಡಿದ 20 ನಿಮಿಷದಲ್ಲೇ ಯುವತಿ ಸಾವು – Kannada News | Gwalior woman dies Within Year Of Marriage her family alleges dowry harrasment

ಗ್ವಾಲಿಯರ್, ಮೇ 19: ಹೊಸದಾಗಿ ಮದುವೆಯಾಗಿದ್ದ ಯುವತಿಯೊಬ್ಬರು ತನ್ನನ್ನು ರಕ್ಷಿಸುವಂತೆ ತಂದೆಗೆ ಕರೆ ಮಾಡಿದ 20 ನಿಮಿಷಗಳಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಗ್ವಾಲಿಯರ್​ನಲ್ಲಿ ನಡೆದಿದೆ. ವರದಕ್ಷಿಣೆ (Dowry) ಕಿರುಕುಳದಿಂದಾಗಿ ಈ ಸಾವು ಸಂಭವಿಸಿದೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. 21 ವರ್ಷದ ಯುವತಿ ಮದುವೆಯಾದ ಕೇವಲ 1 ವರ್ಷದೊಳಗೆ ಗ್ವಾಲಿಯರ್‌ನಲ್ಲಿರುವ ತನ್ನ ಗಂಡನ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇತ್ತೀಚೆಗೆ ಹೆಚ್ಚುತ್ತಿರುವ ವರದಕ್ಷಿಣೆ ಕಿರುಕುಳ ಪ್ರಕರಣ ಆತಂಕ ಹೆಚ್ಚಿಸಿದೆ.

ಮೃತ ಯುವತಿಯನ್ನು ಪಾಲಕ್ ರಜಾಕ್ ಎಂದು ಗುರುತಿಸಲಾಗಿದ್ದು, ಆಕೆ ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ತನ್ನ ತಂದೆಗೆ ಅತ್ಯಂತ ಹತಾಶೆಯಿಂದ ಕರೆ ಮಾಡಿ, ತನ್ನನ್ನು ಗಂಡನ ಮನೆಯಿಂದ ಕರೆದುಕೊಂಡು ಹೋಗುವಂತೆ ಬೇಡಿಕೊಂಡಿದ್ದರು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಮೇ 12ರ ಸಂಜೆ ಆಕೆ ಸಾವನ್ನಪ್ಪುವ ಕೇವಲ 20ರಿಂದ 30 ನಿಮಿಷಗಳ ಮೊದಲು ಪಾಲಕ್ ತನ್ನ ತಂದೆಗೆ ಕರೆ ಮಾಡಿದ್ದರು. ಗಂಡನ ಮನೆಯವರು ಬಹಳ ಹಿಂಸೆ ನೀಡುತ್ತಿದ್ದಾರೆ, ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಬದುಕಿಸಿ ಅಪ್ಪಾ ಎಂದು ಆಕೆ ಅಪ್ಪನ ಬಳಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಎಂಜಿನಿಯರ್ ದಾರುಣ ಅಂತ್ಯ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ?

“ಅಪ್ಪಾ, ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ. ಅವರು ಪದೇ ಪದೇ ಕಾರು ಮತ್ತು ಚಿನ್ನದ ಸರಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಇವರು ನನ್ನನ್ನು ಕೊಂದುಬಿಡುತ್ತಾರೆ” ಎಂದು ಆಕೆ ಫೋನ್‌ನಲ್ಲಿ ಅಳುತ್ತಾ ತನ್ನ ತಂದೆಗೆ ಹೇಳಿದ್ದರು ಎನ್ನಲಾಗಿದೆ.

ಆಕೆಯ ಮಾತು ಕೇಳಿ ಹೆದರಿದ್ದ ಪೋಷಕರು ಪಾಲಕ್ ಅವರನ್ನು ಮರಳಿ ಮನೆಗೆ ಕರೆತರಲು ತಮ್ಮ ಮನೆಯಿಂದ ಹೊರಟಿದ್ದರು. ಆದರೆ ಅವರು ಅಲ್ಲಿಗೆ ತಲುಪುವ ಮೊದಲೇ ಪಾಲಕ್ ಪತಿ ಅಮಿತ್ ಅವರಿಂದ ಕರೆ ಬಂದಿದ್ದು, ಪಾಲಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದರು. ದುರದೃಷ್ಟವಶಾತ್, ಆಕೆಯ ಕುಟುಂಬದವರು ಆಸ್ಪತ್ರೆ ತಲುಪುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದರು.

ಇದನ್ನೂ ಓದಿ: ವರದಕ್ಷಿಣೆ ಪಡೆದರೂ ತೀರದ ಧನ ದಾಹ, ಸಾಲದಕ್ಕೆ ಅನುಮಾನ: ಪತಿ ಟಾರ್ಚರ್​​ಗೆ ಪತ್ನಿ ಆತ್ಮಹತ್ಯೆ

ಪಾಲಕ್ ಅವರ ಕುತ್ತಿಗೆ, ಕಾಲುಗಳು ಮತ್ತು ದೇಹದ ಇತರ ಭಾಗಗಳಲ್ಲಿ ಗಾಯದ ಗುರುತುಗಳಿದ್ದು, ಇದು ಕೊಲೆಯ ಶಂಕೆಯನ್ನು ಹುಟ್ಟುಹಾಕಿದೆ ಎಂದು ತವರು ಮನೆಯವರು ಆರೋಪಿಸಿದ್ದಾರೆ. ಆಕೆಯ ಪತಿ, ಅತ್ತೆ ಮತ್ತು ಮೈದುನ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಪಾಲಕ್ ಕುಟುಂಬದವರು ಆರೋಪಿಸಿದ್ದಾರೆ. ಮದುವೆಯಾದಾಗಿನಿಂದಲೂ ಆಕೆಗೆ ಸತತವಾಗಿ ಹಿಂಸೆ ನೀಡಲಾಗುತ್ತಿತ್ತು. ಮನೆಯೊಳಗೆ ಯಾರೊಂದಿಗೂ ಮಾತನಾಡದಂತೆ ಕೂಡಿಹಾಕಲಾಗಿತ್ತು, ಆಹಾರವನ್ನೂ ನೀಡುತ್ತಿರಲಿಲ್ಲ ಎಂದು ಆಕೆಯ ಸಂಬಂಧಿಕರು ದೂರಿದ್ದಾರೆ.

ಆಕೆಯ ಸಾವಿನ ನಂತರ, ಆಕ್ರೋಶಗೊಂಡ ಪಾಲಕ್ ಸಂಬಂಧಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಬಹಳ ಹೊತ್ತಾದರೂ ಪಾಲಕ್ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಆಕೆಯ ಕೋಣೆಯ ಬಾಗಿಲನ್ನು ಒಡೆದು ಒಳಗೆ ಹೋಗಿ ನೋಡಿದಾಗ ಆಕೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಬದುಕಲಿಲ್ಲ ಎಂದು ಪಾಲಕ್ ಅವರ ಮಾವ (ಪತಿಯ ತಂದೆ) ಸಮರ್ಥಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಹಿರಿಯ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ನಿಧನ: ಅಂತಿಮ ದರ್ಶನ ಪಡೆದ ಡಿ.ಕೆ. ಶಿವಕುಮಾರ್ – Kannada News | DyCM DK Shivakumar Pays Last Respects to Senior Congress Leader Haji Syed Ziaullah

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ
ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ
ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್
ಆಡೊ ಹವ್ಯಾಸ ಇದೆ.

Read More

Source link

RR vs LSG Playing XI: ಪ್ರಮುಖ ಆಟಗಾರರು ಅಲಭ್ಯ: ಹೀಗಿದೆ ಪ್ಲೇಯಿಂಗ್ 11 – Kannada News | RR vs LSG Playing XI Rajasthan Royals vs Lucknow Super Giants Today IPL 2026 match Confirmed playing 11 details with name in Kannada

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 64ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿವೆ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ಹಂಗಾಮಿ ನಾಯಕ  ಯಶಸ್ವಿ ಜೈಸ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಇನ್ನು ಈ ಪಂದ್ಯದಿಂದ ಆರ್​ಆರ್ ತಂಡದ ಕ್ಯಾಪ್ಟನ್ ರಿಯಾನ್ ಪರಾಗ್ ಹೊರಗುಳಿದಿದ್ದಾರೆ. ಅತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇಯಿಂಗ್ ಇಲೆವೆನ್​​ನಲ್ಲಿ ಮೊಹಮ್ಮದ್ ಶಮಿ ಹಾಗೂ ಐಡೆನ್ ಮಾರ್ಕ್ರಾಮ್ ಕಾಣಿಸಿಕೊಂಡಿಲ್ಲ. ಅದರಂತೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್ (ನಾಯಕ), ಲುವಾನ್-ಡ್ರೆ ಪ್ರಿಟೋರಿಯಸ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಡೊನೊವನ್ ಫೆರೇರಾ, ಶುಭಂ ದುಬೆ, ದಸುನ್ ಶಾನಕ, ಜೋಫ್ರಾ ಆರ್ಚರ್, ಸುಶಾಂತ್ ಮಿಶ್ರಾ, ಸಂದೀಪ್ ಶರ್ಮಾ, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ.

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಆಯುಷ್ ಬದೋನಿ, ಅಬ್ದುಲ್ ಸಮದ್, ಶಹಬಾಝ್ ಅಹ್ಮದ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಆಕಾಶ್ ಮಹಾರಾಜ್ ಸಿಂಗ್, ಪ್ರಿನ್ಸ್ ಯಾದವ್.

ನಿರ್ಣಾಯಕ ಪಂದ್ಯ:

ಈ ಮ್ಯಾಚ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನಿರ್ಣಾಯಕ. ಏಕೆಂದರೆ ಇಂದಿನ ಪಂದ್ಯದಲ್ಲಿ ಗೆದ್ದರೆ ರಾಜಸ್ಥಾನ್ ರಾಯಲ್ಸ್ ತಂಡದ ಪ್ಲೇಆಫ್ ಸುಲಭವಾಗಲಿದೆ. ಏಕೆಂದರೆ ಇಂದಿನ ಮ್ಯಾಚ್​ನಲ್ಲಿ ಆರ್​ಆರ್​ ಪಡೆ ಜಯ ಸಾಧಿಸಿದರೆ ಒಟ್ಟು 14 ಅಂಕಗಳನ್ನು ಹೊಂದಲಿದೆ.

ಅಲ್ಲದೆ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ 16 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಲು ಅವಕಾಶ ದೊರೆಯಲಿದೆ. ಅಂದರೆ ನೇರವಾಗಿ ಪ್ಲೇಆಫ್​ಗೇರಬೇಕಿದ್ದರೆ ರಾಜಸ್ಥಾನ್ ರಾಯಲ್ಸ್ ತಂಡವು ಇಂದಿನ ಪಂದ್ಯದಲ್ಲಿ ಜಯ ಸಾಧಿಸಲೇಬೇಕು. ಹೀಗಾಗಿ ಒಂದಾರ್ಥದಲ್ಲಿ ಈ ಮ್ಯಾಚ್ ಆರ್​ಆರ್​ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.

ಹೆಡ್ ಟು ಹೆಡ್:

ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್​ ಜೈಂಟ್ಸ್ ತಂಡಗಳು ಈವರೆಗೆ 7 ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ. ಈ ವೇಳೆ ಲಕ್ನೋ ಸೂಪರ್ ಜೈಂಟ್ಸ್ ಗೆದ್ದಿರುವುದು ಕೇವಲ 2 ಪಂದ್ಯಗಳಲ್ಲಿ ಮಾತ್ರ. ಇನ್ನುಳಿದ 5 ಮ್ಯಾಚ್​ಗಳಲ್ಲೂ ರಾಜಸ್ಥಾನ್ ರಾಯಲ್ಸ್ ತಂಡ ಜಯಭೇರಿ ಬಾರಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಆರ್​ಆರ್​ ಪಡೆ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ.

ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್​, ಕುಲದೀಪ್ ಸೇನ್.

ಇದನ್ನೂ ಓದಿ: RR vs LSG IPL 2026 Live Score: ರಾಯಲ್ಸ್​ vs ಸೂಪರ್ ಜೈಂಟ್ಸ್

ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬದೋನಿ, ಐಡೆನ್ ಮರ್ಕ್ರಾಮ್, ಮ್ಯಾಥ್ಯೂ ಬ್ರೀಟ್ಝ್ಕ್​, ಹಿಮ್ಮತ್ ಸಿಂಗ್,  ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಶಹಬಾಝ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಮಯಾಂಕ್ ಯಾದವ್, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್, ಆಕಾಶ್ ಸಿಂಗ್, ಮೊಹಮ್ಮದ್ ಶಮಿ, ಅರ್ಜುನ್ ತೆಂಡೂಲ್ಕರ್, ವನಿಂದು ಹಸರಂಗ, ಅನ್ರಿಕ್ ನೋಕಿಯ, ಮುಕುಲ್ ಚೌಧರಿ, ನಮನ್ ತಿವಾರಿ, ಅಕ್ಷತ್ ರಘುವಂಶಿ, ಜೋಶ್ ಇಂಗ್ಲಿಸ್.

Source link

ವಚನಾನಂದಶ್ರೀ ವಿರುದ್ಧದ ಪೋಕ್ಸೋ ಪ್ರಕರಣದ ತನಿಖಾಧಿಕಾರಿ ವರ್ಗಾವಣೆ, ಕಾರಣವೇನು? – Kannada News | Harihara panchamasali swamiji Vachanananda Shri POCSO Case investigation officer PSI Manjula transferred

ದಾವಣಗೆರೆ, (ಮೇ 19): ಹರಿಹರ (Harihara) ಪಂಚಮಸಾಲಿ ಪೀಠದ ವಚನಾನಂದಶ್ರೀ (Vachananand Shri) ವಿರುದ್ಧ ಫೋಕ್ಸೋ ಪ್ರಕರಣದ ತನಿಖೆ ಮುಂದುವರೆದಿದ್ದು, ಈಗಾಗಲೇ ಆರೋಪಿ ಸ್ಥಾನದಲ್ಲಿರುವ ವಚನಾನಂದ ಸ್ವಾಮೀಜಿಯನ್ನು ಎರಡು ಬಾರಿ ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣದ ತನಿಖೆ ಚುರುಕೊಂಡಿರುವ ನಡುವೆ ತನಿಖಾಧಿಕಾರಿ ವರ್ಗಾವಣೆಯಾಗಿದೆ. ಹೌದು… ವಚನಾನಂದಶ್ರೀ ವಿರುದ್ಧದ ಪೋಕ್ಸೋ ಕೇಸ್‌ನ ತನಿಖಾಧಿಕಾರಿಯಾಗಿದ್ದ ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುಳಾ ಅವರನ್ನ ದಿಢೀರ್ ವರ್ಗಾವಣೆ ಮಾಡಿ ದಾವಣಗೆರೆ  (Davanagere) ಎಸ್‌ಪಿ H.T.ಶೇಖರ್ ಆದೇಶ ಹೊರಡಿಸಿದ್ದಾರೆ.

ಮುಖ್ಯಾಂಶ

  • ಪಂಚಮಸಾಲಿ ಪೀಠದ  ವಚನಾನಂದಶ್ರೀ ವಿರುದ್ಧದ ಪೋಕ್ಸೋ ಕೇಸ್‌ನ ತನಿಖಾಧಿಕಾರಿ ವರ್ಗಾವಣೆ
  • ದಾವಣಗೆರೆ ಜಿಲ್ಲೆಯ  ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುಳಾ ದಿಢೀರ್ ವರ್ಗಾವಣೆ ಮಾಡಿ ಎಸ್ಪಿ H.T.ಶೇಖರ್ ಆದೇಶ.
  • ಮಂಜುಳಾ ಜಾಗಕ್ಕೆ ಆಜಾದ್‌ನಗರ ಠಾಣೆ ಪಿಎಸ್‌ಐ ಜಯರತ್ನಮ್ಮ ನೇಮಕ
  • ವಚನಾನಂದಶ್ರೀ ವಿರುದ್ಧದ ಕೇಸ್‌ನ ತನಿಖಾ ಜವಾಬ್ದಾರಿ ಹೊತ್ತ ಜಯರತ್ನಮ್ಮ

ಮಂಜುಳಾ ಜಾಗಕ್ಕೆ ಜಯರತ್ನಮ್ಮ ನೇಮಕ

ಪ್ರಕರಣದ ತನಿಖೆ ಸರಿಯಾಗಿ ಮಾಡುತ್ತಿಲ್ಲ ಎಂದು ಹರಿಹರ (Harihara) ಪಂಚಮಸಾಲಿ ಪೀಠ ಟ್ರಸ್ಟ್​​ನ ಪದಾಧಿಕಾರಿಗಳು ಪೂರ್ವ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಅವರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ತನಿಖಾಧಿಕಾರಿಯನ್ನು ಬದಲಾವಣೆ ಮಾಡುವಂತೆ ಎಸ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರ ಮೇರೆಗೆ ದಾವಣಗೆರೆ ಎಸ್ಪಿ H.T.ಶೇಖರ್ ಅವರು ಪಿಎಸ್‌ಐ ಮಂಜುಳಾ ಅವರನ್ನು ವರ್ಗಾವಣೆ ಮಾಡಿದ್ದು, ಇವರ ಜಾಗಕ್ಕೆ  ದಾವಣಗೆರೆಯ ಆಜಾದ್‌ನಗರ ಠಾಣೆಯ ಪಿಎಸ್‌ಐ ಜಯರತ್ನಮ್ಮ ಅವರನ್ನ ನೇಮಕ ಮಾಡಿ ಆದೇಶ ಹೊಡಿಸಿದ್ದಾರೆ.

ಇದನ್ನೂ ನೋಡಿ: ಪೋಕ್ಸೋ ಕೇಸ್: ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ

ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಪೋಸ್ಕೋ ಪ್ರಕರಣದ ತನಿಖಾಧಿಕಾರಿ ಆಗಿದ್ದ ಎಸ್ ಐ ಮಂಜುಳಾ ಅವರನ್ನ ದಾವಣಗೆರೆ ಅಜಾದ್ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಇವರ ಸ್ಥಾನಕ್ಕೆ ದಾವಣಗೆರೆ ಅಜಾದ್ ನಗರ ಠಾಣೆ ಎಸ್ ಐ ಜಯರತ್ನಮ್ಮ ಅವರನ್ನ ನೇಮಕ ಮಾಡಲಾಗಿದ್ದು, ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಜಯರತ್ನಮ್ಮ ಅವರಿಗೆ ನೀಡಲಾಗಿದೆ.

ಶ್ರೀಗಳನ್ನ ಎರಡು ಬಾರಿ ವಿಚಾರಣೆ ನಡೆಸಿದ್ದ ಮಂಜುಳಾ

ವಚನಾನಂದ ಸ್ವಾಮೀಜಿ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುಳಾ ಅವರ ವಚನಾನಂದಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಪ್ರಕರಣದ ತನಿಖೆ ಸಲುವಾಗಿ ಸ್ವಾಮೀಜಿಯನ್ನು ಹರಿಹರ ಠಾಣೆಗೆ 2 ಸಲ ಕರೆಸಿಕೊಂಡು ವಿಚಾರಣೆ ನಡೆಸಿದ್ದರು. ಇದೀಗ ಹೊಸ ತನಿಖಾಧಿಕಾರಿ ಬಂದಿದ್ದು, ಯಾವ ರೀತಿ ತನಿಖೆ ನಡೆಯುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:13 pm, Tue, 19 May 26

Source link

Video: 3 ಗಂಟೆಗೂ ಹೆಚ್ಚು ಕಾಲ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ವ್ಯಕ್ತಿ, ಹೇಳಿದ್ದೇನು ನೋಡಿ – Kannada News | Bengaluru: Man stuck in Bengaluru traffic for over 3 hours

ಬೆಂಗಳೂರು, ಮೇ 19: ಟ್ರಾಫಿಕ್ ಟ್ರಾಫಿಕ್ ಟ್ರಾಫಿಕ್ ಹೀಗೆ ಹೇಳುತ್ತಿದ್ದಂತೆ ಕಣ್ಣ ಮುಂದೆ ಬರುವುದೇ ಬೆಂಗಳೂರು (Bengaluru). ಈ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಹೊಸದೇನಲ್ಲ. ಆದರೆ ವ್ಯಕ್ತಿಯೊಬ್ಬರಿಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕಹಿ ಅನುಭವವಾಗಿದೆ. ಸಂಜೆ 5:17 ಕ್ಕೆ ಬೆಳ್ಳಂದೂರಿನಿಂದ ಹೊರಟ್ರು ನಗರದ ಹೊರ ವರ್ತುಲ ರಸ್ತೆಯಲ್ಲಿ ಸಿಲುಕಿಕೊಂಡೆ ಎಂದು ಟ್ರಾಫಿಕ್ ಸಮಸ್ಯೆಯನ್ನು ವಿವರಿಸಿದ್ದಾರೆ. ಈ ಪೋಸ್ಟ್ ಆನ್ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ವರುಣ್ ರಂಗರಾಜನ್ (Varun Rangarajan) ಅವರು ಎಕ್ಸ್ ಪೋಸ್ಟ್‌ನಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಇಂದು ಸಂಜೆ 5:17 ಕ್ಕೆ ಬೆಳ್ಳಂದೂರಿನಿಂದ ಹೊರಟೆ ಮತ್ತು ಇನ್ನೂ ನಗರದ ಹೊರ ವರ್ತುಲ ರಸ್ತೆಯಲ್ಲಿ ಸಿಲುಕಿಕೊಂಡಿದ್ದೇನೆ. ಕಲ್ಯಾಣ್ ನಗರದಿಂದ ಮಾನ್ಯತಾಗೆ ಹೋಗಲು ಸುಮಾರು 1.5 ಗಂಟೆಗಳು ತೆಗೆದುಕೊಂಡಿವೆ. ಒಬ್ಬ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೂ ಕಾಣಿಸುತ್ತಿಲ್ಲ. ಮನೆಗೆ ನಡೆದುಕೊಂಡು ಹೋಗಲು ನನಗೆ ಬಹುತೇಕ ಅದೇ ಸಮಯ ಬೇಕಾಗುತ್ತಿತ್ತು ಎಂದು ಗೂಗಲ್ ನಕ್ಷೆಗಳು ಹೇಳುತ್ತವೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಬೆಂಗಳೂರಿನಲ್ಲಿ 38 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಬೆಂಗಳೂರಿನ ಜನರಿಗೆ ಇದು ಕಾಮನ್ ಎಂದಿದ್ದಾರೆ. ಮತ್ತೊಬ್ಬರು, ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಆಫೀಸ್ ಗೆ ಹೋಗುವಾಗ ನನ್ನದು ಪರಿಸ್ಥಿತಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್? ಹೊರ್ಮುಜ್ ಆಳದಲ್ಲಿರುವ ಅಂತರ್ಜಾಲ ಕೇಬಲ್​ಗೂ ಆಪತ್ತು

ನವದೆಹಲಿ, ಮೇ 19: ಇರಾನ್ ಮತ್ತು ಅಮೆರಿಕಾ ನಡುವಿನ ಯುದ್ಧ ಹಾಗೂ ಸದ್ಯದ ಬಿಕ್ಕಟ್ಟು ಜಗತ್ತಿನ ಇಂಟರ್ನೆಟ್‌ ಕಡಿತಕ್ಕೂ ಕಾರಣವಾಗುವ ಸಾಧ್ಯತೆ ಇದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಜಗತ್ತಿನ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರದಾಳದಲ್ಲಿರುವ ಆಪ್ಟಿಕಲ್ ಫೈಬರ್ ಡೇಟಾ ಕೇಬಲ್‌ಗಳಿಗೆ ಸುಂಕ ವಿಧಿಸಲು ಇರಾನ್ ಚಿಂತನೆ ನಡೆಸುತ್ತಿದೆ. ಈ ಜಲಸಂಧಿಯು ಕೇವಲ ಕಚ್ಚಾ ತೈಲ ಸಾಗಣೆಯ ಮಾರ್ಗ ಮಾತ್ರವಲ್ಲದೆ, ಇಡೀ ಮಧ್ಯ ಪ್ರಾಚ್ಯದ ಡಿಜಿಟಲ್ ಮತ್ತು ಆರ್ಥಿಕ ಜೀವನಾಡಿಯಾಗಿದೆ. ಇಂಟರ್ನೆಟ್ ಕೇಬಲ್‌ಗಳ ಮೇಲೆ ಶುಲ್ಕ ವಿಧಿಸುವುದಾಗಿ ಇರಾನ್‌ನ ಸೇನಾ ವಕ್ತಾರ ಇಬ್ರಾಹಿಂ ಕಳೆದ ವಾರವೇ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ಜಗತ್ತಿನ ಶೇ 95 ಕ್ಕಿಂತ ಹೆಚ್ಚು ಇಂಟರ್ನೆಟ್ ಮತ್ತು ಡೇಟಾ ಸಂಪರ್ಕವು ಸಮುದ್ರದಾಳದಲ್ಲಿರುವ ಈ ಕೇಬಲ್‌ಗಳ ಮೂಲಕವೇ ನಡೆಯುತ್ತದೆ. ಇರಾನ್ ಹೊಸ ನಿಯಮಗಳನ್ನು ರೂಪಿಸುತ್ತಿದ್ದು, ಸಮುದ್ರದಾಳದ ಕೇಬಲ್‌ಗಳನ್ನು ನಿರ್ವಹಿಸಲು ಪರವಾನಿಗೆ ಮತ್ತು ಶುಲ್ಕ ಕಡ್ಡಾಯಗೊಳಿಸುತ್ತಿದೆ. ಅಂತರಾಷ್ಟ್ರೀಯ ನಿರ್ಬಂಧಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಇರಾನ್, ತನ್ನ ಭೌಗೋಳಿಕ ಗಡಿಯ ಲಾಭ ಪಡೆದು ಆದಾಯ ಗಳಿಸುವ ಮತ್ತು ಗಲ್ಫ್ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಉದ್ದೇಶ ಹೊಂದಿದೆ. ಶುಲ್ಕ ಪಾವತಿಸದಿದ್ದರೆ ಕೇಬಲ್‌ಗಳನ್ನು ಕಡಿತಗೊಳಿಸುವ ಬೆದರಿಕೆ ಇದೆ. ಇದು ಜಾಗತಿಕ ಇಂಟರ್ನೆಟ್, ಆನ್‌ಲೈನ್ ಸೇವೆಗಳು ಮತ್ತು ಬ್ಯಾಂಕಿಂಗ್ ವಹಿವಾಟಿಗೆ ಭಾರಿ ಅಡ್ಡಿಪಡಿಸಬಹುದು ಎಂಬ ಆತಂಕ ಎದುರಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್, ಗ್ಯಾಸ್ ಬಗ್ಗೆ ಎದ್ದಿರುವ ಅಂತೆ ಕಂತೆಗಳಿಗೆ ತೆರೆ – Kannada News | Fuel distribution continues without any restrictions across the State Clarified By Karnataka Oil Industry Coordinator

ಬೆಂಗಳೂರು, (ಮೇ 19): ತೈಲ ಮತ್ತು ಅನಿಲ ವಲಯದ ಮೇಲೆ ಪ್ರಸ್ತುತ ಪರಿಣಾಮ ಬೀರುತ್ತಿರುವ ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ, ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಸಿಪಿಎಲ್ ಮತ್ತು ಎಚ್‌ಪಿಸಿಎಲ್, ಕರ್ನಾಟಕದಾದ್ಯಂತ ಪೆಟ್ರೋಲ್ (MS), ಡೀಸೆಲ್ (HSD) ಮತ್ತು ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ನಿರಂತರ ಪೂರೈಕೆಯನ್ನು ಕಾಯ್ದುಕೊಂಡಿವೆ ಎಂದು ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕರಾದ (IOCL, BPCL & HPCL) ಸಿದ್ಧಾರ್ಥ್ ಅಗರ್ವಾಲ್ ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಯುದ್ಧದ ಪರಿಣಾಮ ಪೆಟ್ರೀಲ್-ಡೀಸೆಲ್ ಹಾಗೂ ಗ್ಯಾಸ್ ಅಭಾವ ವದಂತಿ
  • ಹೆಚ್ಚಿನ ಇಂಧನ ಶೇಖರಿಸಿಕೊಳ್ಳಲು ಬಂಕ್​​ಗಳಲ್ಲಿ ಮುಗಿಬೀಳುತ್ತಿರುವ ಸಾರ್ವಜನಿಕರು
  • ಅಭಾವ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕ
  • ಕರ್ನಾಟಕದಾದ್ಯಂತ ಯಾವುದೇ ನಿರ್ಬಂಧಗಳಿಲ್ಲದೆ ಇಂಧನ ವಿತರಣೆ ಮುಂದುವರಿಕೆ ಎಂದು ಸ್ಪಷ್ಟನೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಟರ್ಮಿನಲ್‌ಗಳು, ಡಿಪೋಗಳು, ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಒಳಗೊಂಡಿರುವ ತನ್ನ ವ್ಯಾಪಕ ಪೂರೈಕೆ ಜಾಲದ ಮೂಲಕ ಇಂಧನದ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತೈಲ ಉದ್ಯಮವು ಸಂಪೂರ್ಣವಾಗಿ ಸಜ್ಜಾಗಿದೆ. ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನ ವಿತರಣಾ ಕಾರ್ಯಾಚರಣೆಗಳು ಸುಗಮವಾಗಿ ಮುಂದುವರಿದಿದ್ದು, ನಿಗದಿತ ಸುರಕ್ಷತೆ ಮತ್ತು ಕಾರ್ಯಾಚರಣೆಯ ಮಾನದಂಡಗಳಿಗೆ ಅನುಗುಣವಾಗಿ ಯಾವುದೇ ನಿರ್ಬಂಧಗಳಿಲ್ಲದೆ ಪೂರೈಕೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಿತಿಮೀರಿ ಇಂಧನ ಖರೀದಿಸದಿರಿ: ಕರ್ನಾಟಕದ ಜನತೆಗೆ ಈ ವಿಶೇಷ ಮನವಿಗೆ ಕಾರಣವೇನು?

ಇದಲ್ಲದೆ, ಪೂರೈಕೆ ಸರಪಳಿಯಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಸಮರ್ಪಕ ದಾಸ್ತಾನು ಲಭ್ಯವಿದೆ. ಗ್ರಾಹಕರ ನೈಜ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲು ದಾಸ್ತಾನು ಮರುಪೂರಣ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ದೇಶೀಯ ಗ್ರಾಹಕರಿಗೆ ಎಲ್‌ಪಿಜಿ ಪೂರೈಕೆಯನ್ನು ಸಹ ಸಹಜ ಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದ್ದು, ಇಡೀ ರಾಜ್ಯಾದ್ಯಂತ ವಿತರಣೆಗಳು ಸುಗಮವಾಗಿ ಪ್ರಗತಿಯಲ್ಲಿವೆ ಎಂದಿದ್ದಾರೆ.

ನಾಗರಿಕರಿಗೆ ನಿರಂತರ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಸಾರ್ವಜನಿಕ ವಲಯದ ತೈಲ ಕಂಪನಿಗಳು ಲಾಜಿಸ್ಟಿಕ್ಸ್, ದಾಸ್ತಾನು ನಿರ್ವಹಣೆ ಮತ್ತು ವಿತರಣಾ ಯೋಜನೆಯಲ್ಲಿ ನಿಕಟ ಸಮನ್ವಯ ಸಾಧಿಸುತ್ತಿವೆ. ಒಟ್ಟಾರೆ ಪೂರೈಕೆ ಪರಿಸ್ಥಿತಿಯು ಸ್ಥಿರವಾಗಿದ್ದು, ನಿರಂತರ ಮೇಲ್ವಿಚಾರಣೆಯಲ್ಲಿದೆ ಎಂದು ತಿಳಿಸಿದ್ದಾರೆ.

ನಾಗರಿಕರು ಅವಶ್ಯತೆ ಇದ್ದಾಗ ಮಾತ್ರ ಇಂಧನ ಖರೀದಿ ಪ್ರವೃತ್ತಿ ಮುಂದುವರಿಸಬೇಕಿದ್ದು, ಅನಗತ್ಯ ಆತಂಕದಿಂದ ಮುಂಚಿತವಾಗಿಯೇ ಅತಿಯಾಗಿ ಖರೀದಿಸುವುದನ್ನು (panic buying) ತಪ್ಪಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಇಂಧನ ಲಭ್ಯತೆಗೆ ಸಂಬಂಧಿಸಿದಂತೆ ಅಧಿಕೃತ ಮತ್ತು ಪರಿಶೀಲಿಸಿದ ಮಾಹಿತಿಗಾಗಿ ಸಾರ್ವಜನಿಕರು ಕೇವಲ ತೈಲ ಕಂಪನಿಗಳು ಬಿಡುಗಡೆ ಮಾಡುವ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಅವಲಂಬಿಸುವಂತೆ ಸಲಹೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version