ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವತಿಯನ್ನ ಮನೆಗೆ ಕರೆದೊಯ್ದಿದ್ದ ಯುವಕ ಸಿಕ್ಕಿಬಿದ್ದ – Kannada News | Another Love Jihad Case In Hubballi, Muslim youth attacked by right wing activists

ಹುಬ್ಬಳ್ಳಿ (ಮೇ 19): ಛೋಟಾ ಮುಂಬೈ ಎಂದೇ ಖ್ಯಾತಿ ಪಡೆದುಕೊಂಡಿರುವ ಹುಬ್ಬಳ್ಳಿಯಲ್ಲಿ (Hubballi) ಮತ್ತೊಂದು ಲವ್ ಜಿಹಾದ್ ಪ್ರಕರಣ (Love Jihad Case) ಬೆಳಕಿಗೆ ಬಂದಿದೆ. ಸಾಜಿದ್ ಉಣಕಲ್ ಎಂಬ ಯುವಕ ಹಿಂದೂ ಯುವತಿಯ ಬ್ರೈನ್​ವಾಶ್ ಮಾಡಿ ಹುಬ್ಬಳ್ಳಿಯ ಸಾಗರ್ ಕಾಲೋನಿಯಲ್ಲಿರುವ ಮನೆಗೆ ಕರೆದೊಯ್ದ ಮಾದಕವಸ್ತು ನೀಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಬಜರಂಗದಳ, ಹಿಂದೂ ಸಂಘಟನೆ ಕಾರ್ಯಕರ್ತರು ತೆರಳಿ ಯುವಕನಿಗೆ ಥಳಿಸಿ ಯುವತಿಯನ್ನು ಮನೆಗೆ ಕಳುಹಿಸಿದ್ದಾರೆ. ಇನ್ನು ಸಾಜಿದ್ ನನ್ನು ಅಶೋಕ ನಗರ ಠಾಣೆಗೆ ಪೊಲೀಸರ ವಶಕ್ಕೆ ನೀಡಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಆ ಒಂದು ಸಭೆ – Kannada News | Karnataka Power Tussle: Siddaramaiah, DK Shivakumar And Mallikarjun Kharge Holds Meeting In KJ George’s House, here Is Inside Details

ಬೆಂಗಳೂರು, (ಮೇ 19): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ (Karnataka Politics) ಮತ್ತೆ ಪವರ್ ಪಾಲಿಟಿಕ್ಸ್​ ಶುರುವಾಗಿದೆ. ಇಷ್ಟು ದಿನ ರಾಜ್ಯ ರಾಜಕೀಯದಲ್ಲಿ ನಡೀತಿರೋ ಬೆಳವಣಿಗೆ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಪಟ್ಟದ ಮೇಲೆ ಕಣ್ಣಿಟ್ಟು ನಾಯಕರು ತಮ್ಮದೇ ಆದ ತಂತ್ರ, ಪ್ರತಿತಂತ್ರ ಮಾಡ್ತಿದ್ರು. ಆದ್ರೆ ಇದೀಗ ಹೈಕಮಾಂಡ್ ಮಟ್ಟದಲ್ಲಿ ಬೆಳವಣಿಗೆ ಆಗ್ತಿದೆ. ಅದಕ್ಕೆ ಸಾಕ್ಷಿ ಆಗ್ತಿರೋದೇ ನಿನ್ನೆ ಸಚಿವ ಕೆ.ಜೆ.ಜಾರ್ಜ್​ ನಿವಾಸದಲ್ಲಿ ನಡೆದ ಹೈಫ್ರೊಫೈಲ್ ಮೀಟಿಂಗ್. ಹೌದು.. ರಾಜ್ಯದಲ್ಲಿನ ಸಿಎಂ ಕುರ್ಚಿ ಕಿತ್ತಾಟವನ್ನ ಎಲ್ಲೋ ಒಂದ್ಕಡೆ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸ್ತಿದೆ. ನಿನ್ನೆಯಷ್ಟೇ ಕೇರಳ ಸಿಎಂ ವಿ.ಡಿ.ಸತೀಷನ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಘಟಾನುಘಟಿ ನಾಯಕರು ಭಾಗಿ ಆದ್ರು. ಇಡೀ ಹೈಕಮಾಂಡೇ ನಿನ್ನೆ ಕೇರಳದಲ್ಲಿತ್ತು.. ಇದೀಗ ಕೇರಳದಿಂದ ರಾಜ್ಯಕ್ಕೆ ಬರ್ತಿದಂತೆಯೇ ನಿನ್ನೆ (ಮೇ 18) AICCಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೈಫ್ರೊಫೈಲ್ ಮೀಟಿಂಗ್ ಮಾಡಿದ್ದಾರೆ. ಬೆಂಗಳೂರಿನ ಸಚಿವ ಕೆ.ಜೆ.ಜಾರ್ಜ್​ ನಿವಾಸದಲ್ಲಿ ನಾಯಕರು ಅನೌಪಚಾರಿಕ ಮೀಟಿಂಗ್ ಮಾಡಿರೋದಕ್ಕೆ ಫೋಟೋ ಸಾಕ್ಷಿಯೂ ಇದೆ.

ಪಕ್ಷದಲ್ಲಿ ಕೆಲವರು ಆಗ್ರಹ ಮಾಡಿದ್ರು. ಹೈಕಮಾಂಡ್ ಸಮ್ಮುಖದಲ್ಲಿ ಸಿಎಂ, ಡಿಸಿಎಂರನ್ನ ಕರೆದು ಒಂದು ಫೈನಲ್ ಮಾಡಿಬಿಡಿ ಅನ್ನೋ ಆಗ್ರಹವೂ ಇತ್ತು. ನಿನ್ನೆ ನಡೆದ ಸಚಿವ ಕೆ.ಜೆ.ಜಾರ್ಜ್​ ನಿವಾಸದಲ್ಲಿ AICC ಆಧ್ಯಕ್ಷ ಮಲ್ಲಿಕಾರ್ಜುನ ಸಮ್ಮುಖದಲ್ಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮಾತುಕತೆ ಮಾಡಿರೋ ಇನ್​ಸೈಡ್ ಮಾಹಿತಿ ಸಿಕ್ಕಿದೆ. ಜಾರ್ಜ್​ ನಿವಾಸದಲ್ಲಿ ಊಟಕ್ಕೆ ಸೇರಿದ್ದ ನಾಯಕರು ಸಿಎಂ ಕುರ್ಚಿ ವಿಚಾರವೂ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಚಿವ ಜಾರ್ಜ್​ ಯಾಕೆ ಇಲ್ಲಿ ಪ್ರಮುಖ ಆಗ್ತಾರೆ ಅಂದ್ರೆ. ಕಳೆದ ಜನವರಿಯಲ್ಲೇ ದೆಹಲಿಗೆ ಕೆ.ಜೆ.ಜಾರ್ಜ್​ರನ್ನ ರಾಹುಲ್ ಗಾಂಧಿ ಕರೆಸಿ ಮಾತನಾಡಿದ್ರು. ಅಧಿಕಾರ ಹಂಚಿಕೆ ಸೇರಿದಂತೆ ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ರು. ಯಾರು ಪರ ಇದ್ದಾರೆ? ಯಾರು ವಿರೋಧ ಇದ್ದಾರೆ ಎಂದು ಮಾಹಿತಿ ಪಡೆದಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ಫ್ರಿಡ್ಜ್​ನಲ್ಲಿಟ್ಟ ನೀರು ಕುಡಿದರೆ ಏನಾಗುತ್ತದೆ? – Kannada News | Health Tips in Kannada is it Good for Drinking Fridge Water during Summer

ನವದೆಹಲಿ, ಮೇ 19: ಬೇಸಿಗೆ ಬಂದಿದೆ… ಅನೇಕ ಜನರು ಸಾಮಾನ್ಯ ನೀರಿಗಿಂತ ಫ್ರಿಡ್ಜ್‌ನಲ್ಲಿ ಇಟ್ಟ ತಣ್ಣೀರು ಕುಡಿಯಲು ಬಯಸುತ್ತಾರೆ. ಆದರೆ, ಈ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ, ವಿಶೇಷವಾಗಿ ನಿಮ್ಮ ಹೊಟ್ಟೆಗೆ ಎಷ್ಟು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ವೈದ್ಯಕೀಯ ತಜ್ಞರ ಪ್ರಕಾರ, ನಿರಂತರವಾಗಿ ರೆಫ್ರಿಜರೇಟರ್‌ನಲ್ಲಿಟ್ಟ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗಬಹುದು. ಫ್ರಿಡ್ಜ್​ನಲ್ಲಿಟ್ಟ ನೀರಿನಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲಿದೆ.

ಜೀರ್ಣಕ್ರಿಯೆಯ ಮೇಲೆ ತೀವ್ರ ಪರಿಣಾಮ:

ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಒಂದು ನಿರ್ದಿಷ್ಟ ಆಂತರಿಕ ತಾಪಮಾನದ ಅಗತ್ಯವಿದೆ. ನಾವು ಸೇವಿಸುವ ಆಹಾರವನ್ನು ಜೀರ್ಣಿಸಿಕೊಳ್ಳಲು ಹೊಟ್ಟೆಯು ಜೀರ್ಣಕಾರಿ ರಸವನ್ನು ಉತ್ಪಾದಿಸುತ್ತದೆ. ಆದರೆ, ನಾವು ಐಸ್ ನೀರನ್ನು ಕುಡಿದ ತಕ್ಷಣ ಶೀತವು ಜೀರ್ಣಕಾರಿ ರಸಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ, ಇದು ಜೀರ್ಣಾಂಗ ವ್ಯವಸ್ಥೆಗೆ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಇದರ ಪರಿಣಾಮವಾಗಿ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ, ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಎಸಿಡಿಟಿ ಉಂಟಾಗುತ್ತದೆ.

ಇದನ್ನೂ ಓದಿ: Meditation Benefits: ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಏನಾಗುತ್ತದೆ ಗೊತ್ತಾ?

ಮಲಬದ್ಧತೆ ಮತ್ತು ಕೊಬ್ಬಿನ ಶೇಖರಣೆ:

ನಾವು ಸೇವಿಸುವ ಆಹಾರದಲ್ಲಿರುವ ಎಣ್ಣೆ ಮತ್ತು ಕೊಬ್ಬುಗಳು ತಣ್ಣೀರಿನ ಸಂಪರ್ಕಕ್ಕೆ ಬಂದಾಗ ಹೆಪ್ಪುಗಟ್ಟುತ್ತವೆ. ಇದು ಕರುಳಿನ ಒಳಗಿನ ಗೋಡೆಗಳನ್ನು ಗಟ್ಟಿಯಾಗಿಸುತ್ತದೆ, ಮಲವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ಇದು ದೀರ್ಘಕಾಲದ ಮಲಬದ್ಧತೆಗೆ ಕಾರಣವಾಗುತ್ತದೆ. ಇದಲ್ಲದೆ, ತಣ್ಣೀರು ದೇಹದಲ್ಲಿನ ಕೊಬ್ಬನ್ನು ಕರಗಿಸುವುದನ್ನು ತಡೆಯುತ್ತದೆ, ಇದು ತೂಕ ಹೆಚ್ಚಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಹೃದಯದ ಬಡಿತವನ್ನು ನಿಧಾನಗೊಳಿಸುತ್ತದೆ:

ವೇಗಸ್ ನರವು ನಮ್ಮ ಮೆದುಳು ಮತ್ತು ಹೊಟ್ಟೆಯನ್ನು ಸಂಪರ್ಕಿಸುವ ಪ್ರಮುಖ ನರವಾಗಿದೆ. ನಾವು ತುಂಬಾ ತಣ್ಣನೆಯ ನೀರನ್ನು ಕುಡಿಯುವಾಗ, ಈ ನರವು ತೀವ್ರ ಒತ್ತಡಕ್ಕೆ ಒಳಗಾಗುತ್ತದೆ. ಇದು ಹೃದಯ ಬಡಿತದಲ್ಲಿ ಹಠಾತ್ ಇಳಿಕೆಗೆ ಕಾರಣವಾಗಬಹುದು ಎಂದು ಸಂಶೋಧನೆ ತೋರಿಸಿದೆ. ಇದರೊಂದಿಗೆ, ಗಂಟಲು ನೋವು, ಟಾನ್ಸಿಲ್ ಮತ್ತು ಶೀತಗಳಂತಹ ಉಸಿರಾಟದ ತೊಂದರೆಗಳು ಸಹ ಸಂಭವಿಸುತ್ತವೆ.

ಗಂಟಲು ನೋವು:

ಫ್ರಿಡ್ಜ್ ನೀರನ್ನು ನೇರವಾಗಿ ಕುಡಿಯುವುದರಿಂದ ಗಂಟಲಿನಲ್ಲಿ ಕಫ ದಪ್ಪವಾಗುತ್ತದೆ. ಇದು ಉಸಿರಾಟದ ಮಾರ್ಗವನ್ನು ನಿರ್ಬಂಧಿಸಿ ಗಂಟಲು ನೋವು, ಕೆಮ್ಮು ಮತ್ತು ಸೈನಸ್ ಅಥವಾ ಗಂಟಲಿನ ಇನ್ಫೆಕ್ಷನ್‌ಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಜಪಾನಿಯರಂತೆ ಆರೋಗ್ಯಕರವಾಗಿ ಜೀವನ ನಡೆಸಲು ಈ ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ತಲೆನೋವು ಅಥವಾ ಬ್ರೈನ್ ಫ್ರೀಜ್:

ತುಂಬಾ ತಣ್ಣಗಿರುವ ನೀರನ್ನು ಕುಡಿದ ತಕ್ಷಣ ಕೆಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಬ್ರೈನ್ ಫ್ರೀಜ್’ ಎನ್ನಲಾಗುತ್ತದೆ. ಇದು ಮೆದುಳಿನ ಸೂಕ್ಷ್ಮ ನರಗಳನ್ನು ತಂಪಾಗಿಸಿ, ತಲೆಯ ಹಿಂಭಾಗ ಅಥವಾ ಮುಂಭಾಗದಲ್ಲಿ ತೀಕ್ಷ್ಣವಾದ ನೋವನ್ನು ಉಂಟುಮಾಡಬಹುದು.

ಹಲ್ಲಿನ ಸೆನ್ಸಿಟಿವಿಟಿ:

ಹಲ್ಲುಗಳು ದುರ್ಬಲವಾಗಿದ್ದರೆ ಅಥವಾ ಹಲ್ಲಿನ ಎನಾಮೆಲ್ ಸವೆದುಹೋಗಿದ್ದರೆ, ಫ್ರಿಡ್ಜ್ ನೀರು ಕುಡಿದ ತಕ್ಷಣ ಹಲ್ಲುಗಳಲ್ಲಿ ಜುಮ್ಮೆನಿಸುವಿಕೆ ಮತ್ತು ಹಲ್ಲು ನೋವು ಉಂಟಾಗಬಹುದು.

ತಜ್ಞರ ಪ್ರಕಾರ, ನಿಮ್ಮ ಬಾಯಾರಿಕೆಯನ್ನು ನೀಗಿಸಲು ರೆಫ್ರಿಜರೇಟರ್‌ನಲ್ಲಿಟ್ಟ ನೀರಿನ ಬದಲು ಮಣ್ಣಿನ ಪಾತ್ರೆಯಲ್ಲಿ ಇಟ್ಟ ನೀರನ್ನು ಕುಡಿಯುವುದು ಉತ್ತಮ. ಮಣ್ಣಿನ ಪಾತ್ರೆಯ ನೀರು ನಿಮ್ಮನ್ನು ನೈಸರ್ಗಿಕವಾಗಿ ತಂಪಾಗಿಸುವುದಲ್ಲದೆ, ದೇಹಕ್ಕೆ ಅಗತ್ಯವಾದ ಖನಿಜಗಳನ್ನು ಒದಗಿಸುತ್ತದೆ ಮತ್ತು ನಿಮ್ಮನ್ನು ಆರೋಗ್ಯವಾಗಿಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದೇಪದೇ ಓಆರ್‌ಎಸ್ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಈ ವಿಷಯ ತಿಳಿದುಕೊಳ್ಳುವುದನ್ನು ಮರೆಯಬೇಡಿ – Kannada News | ORS Water Daily Benefits And Risks: Who Should Avoid Drinking It Regularly

ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ತೀವ್ರ ಬಿಸಿಲಿರುವ ಹಿನ್ನೆಲೆಯಲ್ಲಿ ಆರೋಗ್ಯ ಕಾಪಾಡುವುದು ದೊಡ್ಡ ಸಾಹಸವಾಗಿದೆ. ಈ ಸಮಯದಲ್ಲಿ ಬಿಸಿಲಿನಿಂದ ದೇಹವನ್ನು ಹೈಡ್ರೇಟ್‌ ಇಡಲು ಜನರು ಓಆರ್‌ಎಸ್ (ORS) ಮೊರೆ ಹೋಗುತ್ತಿದ್ದಾರೆ. ಕೆಲವರು ದಿನಪೂರ್ತಿ ನೀರಿನ ಬಾಟಲಿಯಲ್ಲಿ ಓಆರ್‌ಎಸ್ ಮಿಶ್ರಣವನ್ನು ತುಂಬಿಕೊಂಡು ಕುಡಿಯುವ ಅಭ್ಯಾಸವನ್ನೂ ಮಾಡಿಕೊಂಡಿರುತ್ತಾರೆ. ಆದರೆ ಪ್ರತಿದಿನ ಅದರಲ್ಲಿಯೂ ಪದೇಪದೇ ಓಆರ್‌ಎಸ್ ಕುಡಿಯುವುದು ಎಲ್ಲರಿಗೂ ಸೂಕ್ತವೇ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ದೆಹಲಿ ಸಫ್ದರ್ಜಂಗ್ ಆಸ್ಪತ್ರೆಗೆ ಸೇರಿದ ಹಿರಿಯ ವೈದ್ಯ ಡಾ. ದೀಪಕ್ ಸುಮನ್ ಅವರು ಕೆಲವು ಮಾಹಿತಿ ಹೆಂಚಿಕೊಂಡಿದ್ದು, ಬೇಸಿಗೆಯಲ್ಲಿ ಓಆರ್‌ಎಸ್ ದೇಹದಲ್ಲಿ ಉಂಟಾಗುವ ನೀರಿನ ಕೊರತೆಯನ್ನು ಕಡಿಮೆ ಮಾಡುವುದರ ಜೊತೆಗೆ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಲು ಸಹಾಯಕವಾಗುತ್ತದೆ ಎಂದಿದ್ದಾರೆ. ಹಾಗಾದರೆ ಯಾರು ಓಆರ್‌ಎಸ್ ಕುಡಿಯಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳಿ.

ಡಾ. ದೀಪಕ್ ಸುಮನ್ ಹೇಳುವ ಪ್ರಕಾರ, ಓಆರ್‌ಎಸ್ ನಲ್ಲಿ ಸೋಡಿಯಂ, ಪೊಟ್ಯಾಶಿಯಂ ಮತ್ತು ಗ್ಲೂಕೋಸ್ ಇರುವುದರಿಂದ ಡಿಹೈಡ್ರೇಶನ್‌ ಆದಾಗ ದೇಹ ಶೀಘ್ರ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಯಾವುದೇ ಆಗಲಿ ಮಿತಿಯಲ್ಲಿ ಸೇವಿಸುವುದು ಒಳ್ಳೆಯದು ಎಂದು ಎಚ್ಚರಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಓಆರ್‌ಎಸ್ ಕುಡಿಯುವುದರಿಂದ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಇದರಲ್ಲಿ ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಇರುವುದರಿಂದ ಅತಿಯಾಗಿ ಕುಡಿಯುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಮಕ್ಕಳಲ್ಲಿ ಡಿಹೈಡ್ರೇಶನ್ ಆಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಇದನ್ನು ತಡೆಗಟ್ಟಲು ಇಲ್ಲಿದೆ ಸಲಹೆ

ಯಾರಿಗೆ ಓಆರ್‌ಎಸ್ ಅಗತ್ಯ?

ತೀವ್ರ ಬಿಸಿಲಿನಲ್ಲಿ ಹೆಚ್ಚು ಸಮಯ ಕೆಲಸ ಮಾಡುವವರು, ಫೀಲ್ಡ್ ವರ್ಕ್ ಮಾಡುವವರು, ಮಕ್ಕಳು ಮತ್ತು ವೃದ್ಧರಲ್ಲಿ ಡಿಹೈಡ್ರೇಶನ್ ಕಂಡುಬಂದರೆ ಓಆರ್‌ಎಸ್ ಉಪಯುಕ್ತವಾಗಿದೆ. ಜೊತೆಗೆ ಅತಿಸಾರ ಅಥವಾ ಲೂಸ್ ಮೋಶನ್ ಸಮಸ್ಯೆ ಇದ್ದಾಗ ವೈದ್ಯರ ಸಲಹೆಯಂತೆ ಓಆರ್‌ಎಸ್ ಸೇವಿಸುವುದು ಉತ್ತಮ.

ಎಲ್ಲರೂ ಓಆರ್‌ಎಸ್ ಕುಡಿಯಬೇಕೇ?

ವೈದ್ಯರ ಪ್ರಕಾರ, ಸಾಮಾನ್ಯವಾಗಿ ಸಾಕಷ್ಟು ನೀರು ಕುಡಿಯುತ್ತಿರುವ ಮತ್ತು ಡಿಹೈಡ್ರೇಶನ್ ಇಲ್ಲದ ವ್ಯಕ್ತಿಗಳಿಗೆ ಪದೇಪದೇ ಓಆರ್‌ಎಸ್ ಕುಡಿಯುವ ಅಗತ್ಯವಿಲ್ಲ. ಹೆಚ್ಚು ಓಆರ್‌ಎಸ್ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಬಹುದು. ಇದಲ್ಲದೆ ಉಪ್ಪಿನ ಪ್ರಮಾಣ ಹೆಚ್ಚಿರುವುದರಿಂದ ಹೈ ಬಿಪಿ ರೋಗಿಗಳಿಗೆ ಸಮಸ್ಯೆಯಾಗಬಹುದು. ಅತಿಯಾದ ಸೇವನೆಯಿಂದ ದೇಹದ ಎಲೆಕ್ಟ್ರೋಲೈಟ್ ಸಮತೋಲನ ಹಾಳಾಗಿ ಕಿಡ್ನಿಗೆ ಹಾನಿಯಾಗುವ ಸಾಧ್ಯತೆಯೂ ಇದೆ. ಅದರಲ್ಲಿಯೂ ಕಿಡ್ನಿ ಸಂಬಂಧಿತ ಸಮಸ್ಯೆ ಇರುವವರು, ಹೈ ಬ್ಲಡ್ ಪ್ರೆಶರ್ ಇರುವವರು, ಹೃದಯ ರೋಗಿಗಳು, ಡಯಾಬಿಟೀಸ್ ಇರುವವರು ಇದರಿಂದ ಆದಷ್ಟು ದೂರವಿರುವುದೇ ಒಳ್ಳೆಯದು. ಬೇಸಿಗೆಯಲ್ಲಿ ಸಾಮಾನ್ಯವಾಗಿ ಸಾಕಷ್ಟು ನೀರು, ಮಜ್ಜಿಗೆ, ಎಳನೀರು ಮತ್ತು ತಾಜಾ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರ ಆಯ್ಕೆಯಾಗಿದೆ. ಓಆರ್‌ಎಸ್ ಅನ್ನು ಅಗತ್ಯವಿದ್ದಾಗ ಮಾತ್ರ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಸುರಕ್ಷಿತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ದಾಂಪತ್ಯ ಜೀವನ ಸುಖವಾಗಿರಬೇಕೆಂದರೆ ಗಂಡ-ಹೆಂಡತಿ ಹೀಗಿರಬೇಕೆಂದಿದ್ದಾರೆ ಚಾಣಕ್ಯ – Kannada News | Chanakya Niti: What should a husband and wife be like for a good married life?

ಪ್ರತಿಯೊಬ್ಬರೂ ಸಹ ಸಂತೋಷ ಮತ್ತು ಶಾಂತಿಯುತ ದಾಂಪತ್ಯ ಜೀವನವನ್ನು (married life) ಬಯಸುತ್ತಾರೆ, ಆದರೆ ಇಂದಿನ ಒತ್ತಡದ ಜೀವನದಲ್ಲಿ ಕ್ಷುಲ್ಲಕ ವಿಷಯಗಳಿಗೆ ಗಂಡ ಮತ್ತು ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿವೆ, ಸಂಬಂಧಗಳು ಮುರಿದು ಬೀಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಗಂಡ ಮತ್ತು ಹೆಂಡತಿ ತಮ್ಮ ಸ್ವಭಾವದಲ್ಲಿ, ಗುಣದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸುಂದರ ಜೀವನವನ್ನು ಸಾಗಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಸಂತೋಷದ ದಾಂಪತ್ಯ ಜೀವನದ ಅಡಿಪಾಯವೆಂದು  ಪರಿಗಣಿಸಿದ ಆ ಮೂರು ವಿಷಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ದಾಂಪತ್ಯ ಜೀವನ ಸಂತೋಷದಿಂದಿರಲು ಗಂಡ ಹೆಂಡತಿ ಹೇಗಿರಬೇಕು?

ತಾಳ್ಮೆಯಿಂದ ಇರುವುದು:  ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ವಿವಾದ ಉಲ್ಬಣಗೊಳ್ಳಲು ದೊಡ್ಡ ಕಾರಣವೆಂದರೆ ಎರಡೂ ಪಕ್ಷದವರು  ಏಕಕಾಲದಲ್ಲಿ ಕೋಪಗೊಳ್ಳುವುದು. ಹೀಗೆ ಇಬ್ಬರೂ ಕೋಪದಲ್ಲಿಯೇ ಮಾತನಾಡಿದರೆ ಸಂಬಂಧ ಇನ್ನಷ್ಟು ಹದಗೆಡುತ್ತದೆ. ಹಾಗಾಗಿ ಒಬ್ಬ ಸಂಗಾತಿ ಕೋಪಗೊಂಡಾಗ, ಇನ್ನೊಬ್ಬರು ಮೌನವಾಗಿರಬೇಕು ಮತ್ತು ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು. ಇದರಿಂದ ಜಗಳಗಳು ನಡೆಯುವುದಿಲ್ಲ ಹಾಗೂ ದಾಂಪತ್ಯ ಜೀವನದಲ್ಲಿ ಸದಾ ಕಾಲ ಸಂತೋಷವೇ ತುಂಬಿರುತ್ತದೆ.

ಪರಸ್ಪರ ಗೌರವ:  ಯಾವುದೇ ಬಲವಾದ ಸಂಬಂಧದ ಅಡಿಪಾಯ ಕೇವಲ ಪ್ರೀತಿ ಮಾತ್ರವಲ್ಲ, ಗೌರವದ ಮೇಲೂ ನಿಂತಿರುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ಗಂಡ ಮತ್ತು ಹೆಂಡತಿ ಪರಸ್ಪರ ಗೌರವಿಸಬೇಕು. ನಿಮ್ಮ ಸಂಗಾತಿಯ ಆಲೋಚನೆಗಳು ಮತ್ತು ವ್ಯಕ್ತಿತ್ವವನ್ನು ನೀವು ಗೌರವಿಸಿದಾಗ, ಸಾಮರಸ್ಯವು ಸ್ವಾಭಾವಿಕವಾಗಿ ಬೆಳೆಯುತ್ತದೆ. ಪರಸ್ಪರ ಗೌರವವು ಮೇಲುಗೈ ಸಾಧಿಸುವಲ್ಲಿ ನಕಾರಾತ್ಮಕತೆ ಮತ್ತು ಸಂಘರ್ಷಕ್ಕೆ ಅವಕಾಶವಿಲ್ಲ. ಹೀಗಿದ್ದರೆ ಗಂಡ ಹೆಂಡತಿಯ ಸಂಬಂಧದಲ್ಲಿ ಬಿರುಕು ಸಹ ಮೂಡುವುದಿಲ್ಲ.

ಇದನ್ನೂ ಓದಿ: ನಿಮ್ಮ ವೈಯಕ್ತಿಕ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ

ಪ್ರಾಮಾಣಿಕತೆ ಮತ್ತು ಸಂತೃಪ್ತಿ: ಆಚಾರ್ಯ ಚಾಣಕ್ಯರ ಪ್ರಕಾರ, ಹೋಲಿಕೆಯು ವೈವಾಹಿಕ ಕಲಹಗಳು ಉಂಟಾಗಲು ಕಾರಣವಾಗುತ್ತದೆ. ಹೌದು ಇತರರ ಜೀವನವನ್ನು ನೋಡಿ ಅವರಂತೆಯೇ ನಾವು ಕೂಡ ಇರಬೇಕೆಂದು  ಸಂಗಾತಿಯ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದಾಗ ಇದು ಗಂಡ ಹೆಂಡತಿಯ ನಡುವೆ ಜಗಳಗಳು ನಡೆಯಲು, ಭಿನ್ನಾಭಿಪ್ರಾಯ ಉಂಟಾಗಲು ಕಾರಣವಾಗುತ್ತದೆ. ಅದೇ ಇರುವುದರಲ್ಲಿಯೇ ತೃಪ್ತರಾಗಿರುವ ಮತ್ತು ಪ್ರಗತಿಗಾಗಿ ಒಟ್ಟಿಗೆ ಶ್ರಮಿಸುವ, ಪ್ರಾಮಾಣಿಕರಾಗಿರುವ ದಂಪತಿಗಳು ಯಾವಾಗಲೂ ಸಂತೋಷವಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ದೇಹ ದಣಿದರೂ ನಾವು ಬಿಡಲ್ಲ”- ಧೋನಿ ಬಗ್ಗೆ ರೈನಾ ಮಾತು – Kannada News | Suresh Raina’s Big Update On Dhoni’s IPL 2027 Future

ಈ ಬಾರಿಯ ಐಪಿಎಲ್ ನಲ್ಲಿ ಒಂದೇ ಒಂದು ಪಂದ್ಯವಾಡದ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಸೀಸನ್- 20 ರಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಧೋನಿಯ ಆಪ್ತ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕಡೆಯಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ಸುರೇಶ್ ರೈನಾ,‌ ಮಹೇಂದ್ರ ಸಿಂಗ್ ಧೋನಿ ಮುಂಬರುವ 2027ರ ಐಪಿಎಲ್ ಸೀಸನ್‌ನಲ್ಲಿ ಕಣಕ್ಕಿಳಿಯಬೇಕು ಎಂದು ತಾವು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

“ನೀನು 2026ರ ಐಪಿಎಲ್‌ಗೆ ಮಿಸ್ಡ್ ಕಾಲ್ ಕೊಟ್ಟಿದ್ದೀಯಾ, ಅದು ಲೆಕ್ಕಕ್ಕೆ ಬರುವುದಿಲ್ಲ. ಮುಂದಿನ ವರ್ಷ ನೀನು ಮರಳಿ ಬರಲೇಬೇಕು ಎಂದು ನಾನು ಧೋನಿಗೆ ಹೇಳಿದ್ದೀನಿ” ಎಂದು ರೈನಾ ತಿಳಿಸಿದ್ದಾರೆ.

ನನ್ನ ಈ ಮಾತಿಗೆ ಧೋನಿ, “ನನ್ನ ದೇಹ ಈಗ ಸ್ವಲ್ಪ ದಣಿದಿದೆ” ಎಂದಿದ್ದಾರೆ. ಆದರೆ ನಾನು ಇದನ್ನು ಒಪ್ಪಿಲ್ಲ. “ನಾವು ಯಾವುದನ್ನೂ ನಂಬುವುದಿಲ್ಲ, ನೀನು ಮುಂದಿನ ವರ್ಷ ಆಡಲೇಬೇಕು” ಎಂದು ಧೋನಿಗೆ ಪಟ್ಟು ಹಿಡಿದಿರುವುದಾಗಿ ರೈನಾ ತಿಳಿಸಿದ್ದಾರೆ.

ಧೋನಿ ಸಕಾರಾತ್ಮಕತೆ:

2027 ರ ಐಪಿಎಲ್ ಆಡುವುದು ಧೋನಿ ಅವರ ವೈಯಕ್ತಿಕ ನಿರ್ಧಾರವಾದರೂ, ಅವರು ಈ ಬಗ್ಗೆ ಸಕಾರಾತ್ಮಕವಾಗಿದ್ದಾರೆ ಎಂದು ರೈನಾ ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸಿಎಸ್‌ಕೆ ತಂಡವು ಅತ್ಯುತ್ತಮ ತಂಡವಾಗಿ ಒಂದಾಗುತ್ತಿದ್ದು, ಧೋನಿ ಉಪಸ್ಥಿತಿ ತಂಡಕ್ಕೆ ಆನೆ ಬಲ ನೀಡಲಿದೆ ಎಂಬುದು ರೈನಾ ಅವರ ನಂಬಿಕೆಯಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ 9 ಆಟಗಾರರು ಔಟ್..!

ಒಟ್ಟಾರೆಯಾಗಿ, ಸುರೇಶ್ ರೈನಾ ಅವರ ಈ ಮಾತುಗಳು ಎಂ.ಎಸ್. ಧೋನಿ ಅವರ ಐಪಿಎಲ್ ಭವಿಷ್ಯದ ಕುರಿತಾದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. ವಯಸ್ಸು ಮತ್ತು ದೈಹಿಕ ಸಾಮರ್ಥ್ಯದ ಸವಾಲುಗಳಿದ್ದರೂ, ‘ಥಲಾ’ ಕಣಕ್ಕಿಳಿದರೆ ಸಿಎಸ್‌ಕೆ ತಂಡದ ಬಲ ದುಪ್ಪಟ್ಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ, ಅಂತಿಮವಾಗಿ 2027ರ ಐಪಿಎಲ್‌ನಲ್ಲಿ ಪ್ಯಾಡ್ ಕಟ್ಟಿ ಮೈದಾನಕ್ಕಿಳಿಯುವ ಕುರಿತು ಸ್ವತಃ ಧೋನಿ ಅವರೇ ಅಧಿಕೃತ ನಿರ್ಧಾರ ಪ್ರಕಟಿಸಬೇಕಾಗಿದ್ದು, ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

Source link

ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!

ಗಾಜಿಯಾಬಾದ್, ಮೇ 19: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದ ಹಿಂದೂ ಯುವ ವಾಹಿನಿಯ ಗಾಜಿಯಾಬಾದ್ (Ghaziabad) ಘಟಕದ ಮುಖ್ಯಸ್ಥ ಸುಶೀಲ್ ಪ್ರಜಾಪತಿ ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಎಲ್​ಎಲ್​ಬಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದ ಸುಶೀಲ್​ಗೆ ಅವರ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದರು. ಕಳೆದ ವರ್ಷ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಅವರು ಸುಮಾರು 9 ತಿಂಗಳು ಜೈಲಿನಲ್ಲಿ ಕಳೆದಿದ್ದರು. ಪ್ರಜಾಪತಿಯನ್ನು ಹಲವಾರು ದೊಡ್ಡ ಹೂವಿನ ಹಾರಗಳಿಂದ ಸ್ವಾಗತಿಸಿ, ಬೆಂಬಲಿಗರು ಹೆಗಲ ಮೇಲೆ ಬೀದಿಗಳಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ಮತ್ತು ಟೀಕೆಗೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆ ನಿರ್ಮಿಸದೇ 23 ಕೋಟಿ ರೂ.ಗುಳುಂ:ಕೊಳಚೆ ನಿರ್ಮೂಲನಾ ಮಂಡಳಿ ಮೇಲೆ ಲೋಕಾಯುಕ್ತ ದಾಳಿ – Kannada News | Lokayukta raids On Belagavi Slum Development Board office over money scam

ಬೆಳಗಾವಿ/ಬೆಂಗಳೂರು, (ಮೇ 19): ಕೋಟ್ಯಾಂತರ ರೂಪಾಯಿ ಅನುದಾನ ದುರ್ಬಳಕೆ ಆರೋಪ ಮೇಲೆ ಬೆಳಗಾವಿ (Belagavi) ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ 8 ಕಡೆ ಲೋಕಾಯಕ್ತ (Lokayukta) ದಾಳಿಯಾಗಿದೆ. 600 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿ ಕೊಡದೇ 33 ಕೋಟಿ ರೂ. ಅನುದಾನದಲ್ಲಿ 23 ಕೋಟಿ ರೂ.ಲೂಟಿ ಮಾಡಿದ್ದಾರೆ ಎನ್ನುವ ದೂರು ದಾಖಲಾಗಿದ್ದು, ಈ ದೂರಿನ ಮೇರೆಗೆ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಇಂದು (ಮೇ 19) ಬೆಂಗಳೂರು ನಗರ, ಧಾರವಾಡ, ರಾಮದುರ್ಗ, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗಳಿಗೆ ಸೇರಿದ 8 ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ದಾಳಿ ವೇಳೆ ಕೋಟ್ಯಂತರ ರೂ. ಮೌಲ್ಯದ ಬಿಲ್​​​ಗಳು ಸೇರಿ ಮಹತ್ವದ ದಾಖಲೆಗಳನ್ನ ಜಪ್ತಿ ಮಾಡಿದ್ದಾರೆ.

ಮುಖ್ಯಾಂಶ

  • ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ 8 ಕಡೆ ಲೋಕಾ ದಾಳಿ
  • ಬೆಳಗಾವಿ ಸೇರಿದಂತೆ 8 ಕಡೆ ಲೋಕಾಯುಕ್ತ ಪೊಲೀಸರಿಂದ ದಾಳಿ
  • ಕೋಟ್ಯಂತರ ರೂ. ಮೌಲ್ಯದ ಬಿಲ್​ಗಳು, ಮಹತ್ವದ ದಾಖಲೆ ಜಪ್ತಿ
  • ಬೆಳಗಾವಿ ಲೋಕಾಯುಕ್ತ ಕಚೇರಿಯಲ್ಲಿ ದಾಖಲಾಗಿದ್ದ ವಂಚನೆ ಕೇಸ್
  • ಸರ್ಕಾರದ ಹಣ ದುರುಪಯೋಗ ಕೇಸ್​ನಡಿ ದೂರು ದಾಖಲಾಗಿತ್ತು

ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ ದಡಿ 600 ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡದೇ 33 ಕೋಟಿ ರೂಪಾಯಿ ಅನುದಾನದಲ್ಲಿ 23 ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಕೊಳಚೆ ನಿರ್ಮೂಲನಾ ಅಭಿವೃದ್ಧಿ ಇಲಾಖೆ ನಿವೃತ್ತ ಎಇಇ ಶಂಭುಲಿಂಗಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್ ಲಮಾಣಿ, NTCC ಮ್ಯಾನೇಜರ್ ಎನ್.ಪ್ರಸಾದ್, ವಿಜಯಪುರ ಗುತ್ತಿಗೆದಾರ ಗಿರಮಲಪ್ಪ ಜೋಗೂರ ವಿರುದ್ಧ  ಸರ್ಕಾರದ ಹಣ ದುರುಪಯೋಗ ಕೇಸ್​ನಡಿ ಕೇಸ್ ದಾಖಲಾಗಿದ್ದು, ಈ ದೂರಿನ ಅನ್ವಯ ಬೆಳಗಾವಿ ಲೋಕಾಯುಕ್ತ ಎಸ್ಪಿ ಪ್ರಶನ್ ದೇಸಾಯಿ ನೇತೃತ್ವದಲ್ಲಿ ದಾಳಿ ನಡೆದಿದೆ.

ಇದನ್ನೂ ಓದಿ: ಕೋಟ್ಯಂತರ ವಂಚನೆ ಕೇಸ್​: ಖಾತೆಯಲ್ಲಿ ನೂರಾರು ಕೋಟಿ ಪತ್ತೆಯಾದ್ರೂ ಬ್ಯಾಂಕ್ ಗಪ್‌ಚುಪ್; ಶಿವಾನಂದನೊಂದಿಗೆ ಅಧಿಕಾರಿಗಳು ಶಾಮೀಲು?

ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ 8 ಕಡೆ ಕಚೇರಿ ಮತ್ತು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಪತ್ತೆಯಾದ 23 ಕೋಟಿ ರೂಪಾಯಿ ಅನಧಿಕೃತ ಬಿಲ್ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ.

50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಸ್ಕಾಂ AEE

ಬೆಂಗಳೂರು: ಇನ್ನು ಬೆಂಗಳೂರಿನಲ್ಲಿ ಬೆಸ್ಕಾಂ (BESCOM) ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಾತ್ಕಾಲಿಕವಾಗಿ ಮೀಟರ್​ಗೆ 25 ಕಿಲೋ ವ್ಯಾಟ್ ವಿದ್ಯುತ್ ಪೂರೈಕೆ ಮಾಡಲು ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದ AEE ಮನೋಜ್​ ಕುಮಾರ್​​ ಲಾಕ್​ ಆಗಿದ್ದಾರೆ. ಮನೋಜ್ ಜೊತೆಗೆ ಕಂಠರಾಜು ಎಂಬ ವಿದ್ಯುತ್ ಗುತ್ತಿಗೆದಾರ ಕೂಡ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರಿನ ಜೆಪಿ ನಗರದ ಬೆಸ್ಕಾಂ ಕಚೇರಿಯಲ್ಲಿ AEE ಆಗಿರುವ ಮನೋಜ್ ಕುಮಾರ್​, ತಾತ್ಕಾಲಿಕವಾಗಿ ಮೀಟರ್‌ಗೆ 25 ಕಿಲೋ ವ್ಯಾಟ್ ವಿದ್ಯುತ್ ಪೂರೈಕೆ ಮಾಡಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣವನ್ನು ವಿದ್ಯುತ್ ಗುತ್ತಿಗೆದಾರ ಕಂಠರಾಜುಗೆ ನೀಡಲು AEE ಮನೋಜ್ ಕುಮಾರ್​ ಸೂಚನೆ ನೀಡಿದ್ದರು. ಈ ಬಗ್ಗೆ ದೂರುದಾರ ರಘುರಾಜ್‌ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್​ಪಿ ಶಿವಪ್ರಕಾಶ್​​ ದೇವರಾಜ್​​ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, AEE ಮನೋಜ್ ಕುಮಾರ್ ಮತ್ತು ವಿದ್ಯುತ್ ಗುತ್ತಿಗೆದಾರ ಕಂಠರಾಜು 50 ಸಾವಿರ ಹಣ ಪಡೆಯುವಾಗ‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

NEET ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿ, ಯಾವುದೇ ರಾಜಿ ಬೇಡ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೂಚನೆ – Kannada News | Union Education Minister Dharmendra Pradhan Chairs High Level Meeting on NEET UG Re Exam

ನವದೆಹಲಿ, ಮೇ 19: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ (NEET Paper Leak Case) ಸಿಬಿಐ ತನಿಖೆಯ ಬಳಿಕ ಈಗಾಗಲೇ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕೋಚಿಂಗ್ ಕ್ಲಾಸ್​​ನಲ್ಲಿಯೇ ಪ್ರಶ್ನೆ ಪೇಪರ್​ಗಳನ್ನು ಹಂಚಲಾಗಿತ್ತು ಎಂಬ ವಿಷಯ ಹೊರಬಿದ್ದಿದೆ. ಇದರ ನಡುವೆ ಕೇಂದ್ರ ಸರ್ಕಾರವು ನೀಟ್ ಮರು ಪರೀಕ್ಷೆಯ ಬಗ್ಗೆ ಗಮನಹರಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪರಿಶೀಲನಾ ಸಭೆಯಲ್ಲಿ ಬಿಗಿ ಭದ್ರತೆ, ಸಿಸಿಟಿವಿ ಕಣ್ಗಾವಲು ಮತ್ತು ಪಾರದರ್ಶಕವಾಗಿ ಪರೀಕ್ಷೆಯ ನಿರ್ವಹಣೆಯ ಕುರಿತು ಪ್ರಮುಖ ಸೂಚನೆಗಳನ್ನು ನೀಡಲಾಯಿತು.

ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಆತ್ಮವಿಶ್ವಾಸ ಬೆಳೆಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಿಬಿಐ ತನಿಖೆಯಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ ಬರುತ್ತಿವೆ. ನಾಸಿಕ್ ಕೇಂದ್ರಿತವಾಗಿರುವ ಈ ಜಾಲವನ್ನು ಸಿಬಿಐ ಅಧಿಕಾರಿಗಳು ಬಯಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮರು-ನೀಟ್ ಪರೀಕ್ಷೆಯ ಸಿದ್ಧತೆಗಳತ್ತ ಗಮನಹರಿಸಿದೆ. ಈ ಬಾರಿ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಲು ಕ್ರಮ ಕೈಗೊಂಡಿದೆ. ಮುಂಬರುವ ನೀಟ್ (ಯುಜಿ) ಮರು-ಪರೀಕ್ಷೆಯ ಸಿದ್ಧತೆಗಳನ್ನು ಪರಿಶೀಲಿಸಲು ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು.

ಇದನ್ನೂ ಓದಿ: ವೃತ್ತಿಯಲ್ಲಿ ಬ್ಯೂಟಿಷಿಯನ್, ಗಂಡ ದಂತವೈದ್ಯ; ನೀಟ್ ಹಗರಣದಲ್ಲಿ ಸಿಕ್ಕಿಬಿದ್ದ ಮನಿಷಾ ಬಗ್ಗೆ ನಿಮಗೆಷ್ಟು ಗೊತ್ತು?

ನೀಟ್ ಮರು ಪರೀಕ್ಷೆಯನ್ನು ಸುರಕ್ಷಿತವಾಗಿ, ಯಾವುದೇ ಅಡೆತಡೆಗಳಿಲ್ಲದೆ ಮತ್ತು ಕಟ್ಟುನಿಟ್ಟಾದ ಭದ್ರತಾ ಶಿಷ್ಟಾಚಾರಗಳ ನಡುವೆ ಶಿಸ್ತುಬದ್ಧವಾಗಿ ನಡೆಸಬೇಕು ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಆದೇಶಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ಮತ್ತು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ರಾಜ್ಯಗಳಾದ್ಯಂತ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮನ್ವಯ ಸಭೆಗಳನ್ನು ನಡೆಸಲು ಅವರು ಆದೇಶ ನೀಡಿದ್ದಾರೆ.

ಇದನ್ನೂ ಓದಿ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ NTAನಲ್ಲಿ ಮಹತ್ವದ ಬದಲಾವಣೆ

ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆಯ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಅವರು ಒತ್ತಿ ಹೇಳಿದರು. ಇದಲ್ಲದೆ, ಸಾರಿಗೆ, ಕುಡಿಯುವ ನೀರು ಮತ್ತು ಇತರ ಅಗತ್ಯ ಸೌಲಭ್ಯಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಧರ್ಮೇಂದ್ರ ಪ್ರಧಾನ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭದ್ರತೆ ಮತ್ತು ಸೌಲಭ್ಯಗಳ ಬಗ್ಗೆಯೂ ರಾಜಿ ಮಾಡಿಕೊಳ್ಳದಂತೆ ಅವರು ಸೂಚನೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೀನಾದ ಡಾರ್ಕ್ ಫ್ಯಾಕ್ಟರಿಗಳು… ಮನುಷ್ಯರು, ಬೆಳಕು ಇಲ್ಲದ ಕಾರ್ಖಾನೆಗಳು, ರೋಬೋಗಳದ್ದೇ ಆಟ; ಭವಿಷ್ಯವೇ ಪ್ರತ್ಯಕ್ಷ – Kannada News | China’s dark factories, where no humans work, production happens non stop, here is the future

ಡಾರ್ಕ್ ಫ್ಯಾಕ್ಟರಿImage Credit source: AI/Mediaforge/TV9

ಒಂದು ಕಾರ್ಖಾನೆ. ಲೈಟ್ ಇಲ್ಲ, ಮನುಷ್ಯರ ಸುಳಿವೇ ಇಲ್ಲ ಎಂದರೆ ಅದ್ಯಾವುದೋ ಪಾಳುಬಿದ್ದ ಹಾಂಟೆಡ್ ಪ್ಲೇಸ್ ಎಂದು ನೀವು ಭಾವಿಸಬಹುದು. ಆದರೆ, ಇದರಲ್ಲಿ ಮನುಷ್ಯರ ಬದಲು ರೋಬೋಗಳಿದ್ದರೆ? ಹಾಲಿವುಡ್​ನ ಸ್ಕೈಫೈ ಸಿನಿಮಾಗಳನ್ನು ನೋಡುವವರ ಕಲ್ಪನೆಗಳಿಗೂ ಮೀರಿದಂತಹ ದೃಶ್ಯಗಳನ್ನು ಈ ಕಾರ್ಖಾನೆಯಲ್ಲಿ ಕಾಣಬಹುದು. ಅದುವೇ ಚೀನಾದ ಡಾರ್ಕ್ ಫ್ಯಾಕ್ಟರಿ. ಒಂದಲ್ಲ, ಎರಡಲ್ಲ, ಇಂಥ ಹಲವು ಡಾರ್ಕ್ ಫ್ಯಾಕ್ಟರಿಗಳು ಚೀನಾದಲ್ಲಿವೆ. ಚೀನಾದ ತಂತ್ರಜ್ಞಾನ ಕ್ರಾಂತಿಯ ಅತ್ಯಂತ ರೋಮಾಂಚಕ ಮತ್ತು ಆಘಾತಕಾರಿ ಮುಖವೇ ಈ ‘ಡಾರ್ಕ್ ಫ್ಯಾಕ್ಟರಿಗಳು’ (Dark Factories) ಅಥವಾ ‘ಲೈಟ್ಸ್-ಔಟ್ ಫ್ಯಾಕ್ಟರಿಗಳು’ (Lights-out Factories). ಹೆಸರೇ ಸೂಚಿಸುವಂತೆ, ಈ ಕಾರ್ಖಾನೆಗಳಲ್ಲಿ ಸಂಪೂರ್ಣ ಕತ್ತಲಿರುತ್ತದೆ! ಅಲ್ಲಿ ಕೆಲಸ ಮಾಡಲು ಯಾವುದೇ ಮನುಷ್ಯರಿಲ್ಲದ ಕಾರಣ, ಲೈಟ್‌ಗಳು ಅಥವಾ ಫ್ಯಾನ್‌ಗಳ ಅಗತ್ಯವೇ ಇರುವುದಿಲ್ಲ. ಕೇವಲ ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟ್‌ಗಳು ಮಾತ್ರ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುತ್ತವೆ.

ಏನಿದು ‘ಡಾರ್ಕ್ ಫ್ಯಾಕ್ಟರಿ’?

ಇದು ಸಂಪೂರ್ಣವಾಗಿ ಸ್ವಯಂಚಾಲಿತ (Fully Automated) ಉತ್ಪಾದನಾ ಘಟಕವಾಗಿದೆ. ಇಲ್ಲಿ ಕಚ್ಚಾ ವಸ್ತುಗಳನ್ನು ಒಳಗೆ ಕಳುಹಿಸುವುದರಿಂದ ಹಿಡಿದು, ಸಿದ್ಧವಾದ ವಸ್ತುವನ್ನು ಪ್ಯಾಕ್ ಮಾಡಿ ಹೊರತರುವವರೆಗಿನ ಎಲ್ಲಾ ಪ್ರಕ್ರಿಯೆಗಳನ್ನು ಯಂತ್ರಗಳೇ ಮಾಡುತ್ತವೆ.

ಯಂತ್ರಗಳಿಗೆ ಕಣ್ಣುಗಳ ಅಗತ್ಯವಿಲ್ಲ, ಅವು ಇನ್ಫ್ರಾರೆಡ್ (Infrared) ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಇಡೀ ಕಾರ್ಖಾನೆಯಲ್ಲಿ ಲೈಟ್ ಆಫ್ ಮಾಡಲಾಗಿರುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್​ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ?

ಡಾರ್ಕ್ ಫ್ಯಾಕ್ಟರಿಗಳು ಹೇಗೆ ಕೆಲಸ ಮಾಡುತ್ತವೆ?

ಇಡೀ ಫ್ಯಾಕ್ಟರಿಯನ್ನು ಒಂದು ಕೇಂದ್ರೀಕೃತ AI ಸಾಫ್ಟ್‌ವೇರ್ ನಿಯಂತ್ರಿಸುತ್ತದೆ. ಯಾವ ರೋಬೋಟ್ ಯಾವಾಗ, ಏನು ಕೆಲಸ ಮಾಡಬೇಕು ಎಂಬುದನ್ನು ಈ ಎಐ ನಿರ್ಧರಿಸುತ್ತದೆ. ಇವು ಮನುಷ್ಯರ ಕೈಗಳಿಗಿಂತ ಹತ್ತು ಪಟ್ಟು ವೇಗವಾಗಿ ಮತ್ತು ನಿಖರವಾಗಿ ಬಿಡಿಭಾಗಗಳನ್ನು ಜೋಡಿಸುತ್ತವೆ. ಕಾರ್ಖಾನೆಯ ಒಳಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಮಗ್ರಿಗಳನ್ನು ಸಾಗಿಸಲು ಚಾಲಕರಿಲ್ಲದ ಸಣ್ಣ ರೋಬೋಟ್ ಗಾಡಿಗಳನ್ನು ಬಳಸಲಾಗುತ್ತದೆ.

ಶವೋಮಿ ಸ್ಮಾರ್ಟ್ ಫ್ಯಾಕ್ಟರಿಯಲ್ಲಿ ಸೆಕೆಂಡ್​ಗೆ 1 ಫೋನ್ ತಯಾರಿಕೆ

ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಯಾದ ಶವೋಮಿಯ ಬೀಜಿಂಗ್‌ನಲ್ಲಿರುವ ‘ಚಾಂಗ್‌ಪಿಂಗ್’ ಸ್ಮಾರ್ಟ್ ಫ್ಯಾಕ್ಟರಿಯಲ್ಲಿ ವರ್ಷಕ್ಕೆ 1 ಕೋಟಿ ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಉತ್ಪಾದಿಸಲಾಗುತ್ತದೆ. ಇಲ್ಲಿ ದಿನದ 24 ಗಂಟೆಯೂ ಮನುಷ್ಯರಿಲ್ಲದೆ ಕೆಲಸ ನಡೆಯುತ್ತದೆ. ವರದಿಗಳ ಪ್ರಕಾರ, ಈ ಫ್ಯಾಕ್ಟರಿಯಲ್ಲಿ ಪ್ರತಿ ಸೆಕೆಂಡಿಗೆ ಒಂದು ಸ್ಮಾರ್ಟ್‌ಫೋನ್ ತಯಾರಾಗುತ್ತದೆ.

ಆಪಲ್ ಫೋನ್‌ಗಳನ್ನು ತಯಾರಿಸುವ ಫಾಕ್ಸ್​ಕಾನ್ ಸಂಸ್ಥೆಯು (Foxconn) ಚೀನಾದ ತನ್ನ ಕುನ್ಶಾನ್ ಪ್ಲಾಂಟ್‌ನಲ್ಲಿ ರೋಬೋಟ್‌ಗಳನ್ನು ಅಳವಡಿಸಿದೆ. ಒಂದೇ ಬಾರಿಗೆ ಸುಮಾರು 60,000 ಕಾರ್ಮಿಕರನ್ನು ಕೆಲಸದಿಂದ ಮುಕ್ತಗೊಳಿಸಿದೆ.

ಚೀನಾದ ಪ್ರಸಿದ್ಧ ಇವಿ ಕಾರು ಸಂಸ್ಥೆಗಳಾದ BYD ಮತ್ತು Zeekr ಇಂತಹ ಡಾರ್ಕ್ ಫ್ಯಾಕ್ಟರಿಗಳ ಮೂಲಕ ದಿನಕ್ಕೆ ಸಾವಿರಾರು ಕಾರುಗಳನ್ನು ಸಿದ್ಧಪಡಿಸುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ಚೀನಾ ತನ್ನ ಅತ್ಯಾಧುನಿಕ J-20 ಸ್ಟೆಲ್ತ್ ಯುದ್ಧ ವಿಮಾನಗಳ ಬಿಡಿಭಾಗಗಳನ್ನು ತಯಾರಿಸಲು ಕೂಡ ಇಂತಹ ಎಐ ಚಾಲಿತ ಡಾರ್ಕ್ ಫ್ಯಾಕ್ಟರಿಯನ್ನು ಬಳಸುತ್ತಿದ್ದು, ಇದು ಉತ್ಪಾದನಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಿದೆ.

ಈ ತಂತ್ರಜ್ಞಾನದ ಲಾಭಗಳೇನು?

ಮನುಷ್ಯರಿಗೆ ಕೆಲಸ ಸಾಮರ್ಥ್ಯ ಸೀಮಿತವಾಗಿರುತ್ತದೆ. ಆದರೆ, ರೋಬೋಗಳು ಯಂತ್ರಗಳಾದ್ದರಿಂದ ಆಯಾಸ ಎಂಬುದಿರೋದಿಲ್ಲ. 24×7 ನಿರಂತರ ಕೆಲಸ ಮಾಡುತ್ತಿರುತ್ತವೆ. ರಜೆ, ಶಿಫ್ಟ್ ಇತ್ಯಾದಿ ತಡೆಗಳಿಲ್ಲ. ದಿನಕ್ಕೆ 24 ಗಂಟೆ, ವರ್ಷಕ್ಕೆ 365 ದಿನವೂ ರೋಬೋಗಳಿಗೆ ಕೆಲಸವೋ ಕೆಲಸ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

ಲೈಟ್‌ಗಳು ಮತ್ತು ಎಸಿ (Air Conditioning) ಅಗತ್ಯವಿಲ್ಲದಿರುವುದರಿಂದ ಭಾರಿ ಪ್ರಮಾಣದ ವಿದ್ಯುತ್ ಉಳಿತಾಯವಾಗುತ್ತದೆ. ಮನುಷ್ಯರಿಗೆ ಕೊಡುವ ಸಂಬಳ ಮತ್ತು ಇತರೆ ಸೌಲಭ್ಯಗಳ ಖರ್ಚು ಇರುವುದಿಲ್ಲ.

ಮನುಷ್ಯರು ಮಾಡುವಂತೆ ರೋಬೋಟ್‌ಗಳು ಅಳತೆಯಲ್ಲಿ ಅಥವಾ ಜೋಡಣೆಯಲ್ಲಿ ತಪ್ಪು ಮಾಡುವುದಿಲ್ಲ. ಹಾಗಾಗಿ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ.

ಡಾರ್ಕ್ ಫ್ಯಾಕ್ಟರಿಗಳಿಂದ ಮನುಷ್ಯರಿಗೆ ಆತಂಕ

ಈ ತಂತ್ರಜ್ಞಾನವು ಉತ್ಪಾದನಾ ಕ್ಷೇತ್ರಕ್ಕೆ ವರದಾನವಾಗಿದ್ದರೂ, ಮಾನವ ಸಮಾಜಕ್ಕೆ ದೊಡ್ಡ ಸವಾಲಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಚೀನಾದಲ್ಲಿ ಉತ್ಪಾದನಾ ವಲಯದ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಕೇವಲ ಹತ್ತು ವರ್ಷಗಳಲ್ಲಿ ಕೋಟ್ಯಂತರ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ.

ಜಾಗತಿಕ ಮಾರುಕಟ್ಟೆ ಸಂಶೋಧನಾ ಸಂಸ್ಥೆಗಳ ಪ್ರಕಾರ, ಮುಂಬರುವ ದಿನಗಳಲ್ಲಿ ಜಗತ್ತಿನ ಶೇ. 60 ಕ್ಕೂ ಹೆಚ್ಚು ಪ್ರಮುಖ ಉತ್ಪಾದನಾ ಕಂಪನಿಗಳು ಈ ‘ಡಾರ್ಕ್ ಫ್ಯಾಕ್ಟರಿ’ ಮಾದರಿಯನ್ನು ಅಳವಡಿಸಿಕೊಳ್ಳಲಿವೆ. ತಾಂತ್ರಿಕವಾಗಿ ಇದು ಅದ್ಭುತ ಸಾಧನೆಯಾದರೂ, “ಭವಿಷ್ಯದಲ್ಲಿ ಸಾಮಾನ್ಯ ಜನರಿಗೆ ಉದ್ಯೋಗ ಎಲ್ಲಿಂದ ಸಿಗುತ್ತದೆ?” ಎಂಬ ಯಕ್ಷಪ್ರಶ್ನೆ ಜಗತ್ತಿನ ಎದುರಿಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version