ಬೆಂಗಳೂರಿನ ಬೊಮ್ಮನಹಳ್ಳಿಯ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಸಿ. ಲೇಔಟ್‌ನ ಸಾಯಿ ರೆಸಿಡೆನ್ಸಿಯಲ್ಲಿ ಯುಗಾದಿ ದಿನದಂದು ಎರಡು ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಾವಳಿ ಮನೆ ಮುಂದಿನ ಸಿಸಿಟವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಕೃತ್ಯದ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಾಗತಿಕ ಯುದ್ಧದ ಆತಂಕದಿಂದ ಹೆಚ್ಚಿದ ಬೇಡಿಕೆಯೇ ಕಳ್ಳತನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಳ್ಳರ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇವತ್ತಿನ ಕಾಲದಲ್ಲಿ ಮೊಬೈಲ್ (mobile) ನಮ್ಮ ಜೀವನದ ಭಾಗವಾಗಿ ಹೋಗಿದೆ. ಕೆಲವರಂತೂ ತಮ್ಮ ದಿನದ ಹೆಚ್ಚಿನ ಸಮಯವನ್ನು ಮೊಬೈಲ್ ನೋಡುವುದರಲ್ಲಿಯೇ ಕಳೆಯುತ್ತಿದ್ದಾರೆ. ಹೆಚ್ಚು ಹೊತ್ತು ಮೊಬೈಲ್ ಬಳಸುವುದು ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಸಹ ಅನೇಕರು ಮೊಬೈಲ್ ಬಿಟ್ಟು ಇರುವುದೇ ಇಲ್ಲ. ಅದರಲ್ಲೂ ಅನೇಕರಿಗೆ ಮಲಗುವ ಮುನ್ನ ಮೊಬೈಲ್ ನೋಡ್ಲೇ ಬೇಕು. ಹೌದು ಹಲವರು ಸೋಷಿಯಲ್ ಮೀಡಿಯಾ ನೋಡುತ್ತಾ ರಾತ್ರಿ 12, 1 ಗಂಟೆಗಳ ಕಾಲ ಎಚ್ಚರವಾಗಿಯೇ ಇರುತ್ತಾರೆ. ಹೀಗೆ ಮಲಗುವ ಸಂದರ್ಭದಲ್ಲಿ ಮೊಬೈಲ್ ನೋಡುವಂತಹ ಅಭ್ಯಾಸ ನಿದ್ರೆಯ ಗುಣಮಟ್ಟ ಮಾತ್ರವಲ್ಲದೆ ಮಾನಸಿಕ, ದೈಹಿಕ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮವನ್ನು ಬೀರುತ್ತವೆ. ಹೀಗಿರುವಾಗ ಸತತ ಒಂದು ತಿಂಗಳುಗಳ ಕಾಲ ಮಲಗುವ ಮುನ್ನ ಮೊಬೈಲ್ ಬಳಸುವುದನ್ನು ನಿಲ್ಲಿಸಿದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.
ಒಂದು ತಿಂಗಳು ಮಲಗುವ ಮುನ್ನ ಮೊಬೈಲ್ ನೋಡದಿದ್ದರೆ ಏನಾಗುತ್ತದೆ ಗೊತ್ತಾ?
ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ: ಮಲಗುವ ಮುನ್ನ ನಿಮ್ಮ ಮೊಬೈಲ್ ಫೋನ್ ನೋಡದಿರುವುದು ನಿಮ್ಮ ಮನಸ್ಸನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಮೊಬೈಲ್ ಪರದೆಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ಉಂಟುಮಾಡುವ ಹಾರ್ಮೋನ್ ಆದ ಮೆಲಟೋನಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಸರಿಯಾಗಿ ನಿದ್ರೆ ಬರುವುದಿಲ್ಲ. ಹೀಗಿರುವಾಗ ಮಲಗುವ ಮುನ್ನ ಮೊಬೈಲ್ ನೋಡದೆ, ಪುಸ್ತಕಗಳನ್ನು ಓದಿ ಮಲಗುವುದರಿಂದ ಮನಸ್ಸಿಗೆ ವಿಶ್ರಾಂತಿಯೂ ದೊರೆಯುತ್ತದೆ ಒಳ್ಳೆಯ ನಿದ್ರೆಯನ್ನೂ ಪಡೆಯಬಹುದು.
ಮಾನಸಿಕ ಶಾಂತಿ ಮತ್ತು ಗಮನವನ್ನು ಸುಧಾರಿಸುತ್ತದೆ: ರಾತ್ರಿ ಮಲಗುವ ಮುನ್ನ ಮೊಬೈಲ್ ಫೋನ್ ನೋಡುವುದನ್ನು ನಿಲ್ಲಿಸುವುದರಿಂದ ಮನಸ್ಸು ಸಕ್ರಿಯವಾಗಿರುತ್ತದೆ. ಮತ್ತು ಮಲಗುವ ಮುನ್ನ ಮನಸ್ಸು ಶಾಂತವಾಗಲು ಸಮಯ ಸಿಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ಗಮನವನ್ನು ಸುಧಾರಿಸುತ್ತದೆ, ಮನಸ್ಸು ನಿರಾಳವಾಗಿ ನೆಮ್ಮದಿಯೂ ದೊರೆಯುತ್ತದೆ.
ಕಣ್ಣಿನ ಆಯಾಸ ಕಡಿಮೆ: ಮೊಬೈಲ್ ಪರದೆಗಳನ್ನು ನಿರಂತರವಾಗಿ ನೋಡುವುದರಿಂದ ಕಣ್ಣುಗಳ ಮೇಲೆ ಒತ್ತಡ ಉಂಟಾಗುತ್ತದೆ. ಹೀಗಿರುವಾಗ ಮಲಗುವ ಮುನ್ನ ಮೊಬೈಲ್ ಪರದೆಗಳನ್ನು ಬಳಸುವುದನ್ನು ನಿಲ್ಲಿಸುವುದರಿಂದ ಕಣ್ಣಿನ ಕಿರಿಕಿರಿ, ಶುಷ್ಕತೆ ಮತ್ತು ಆಯಾಸ ಕಡಿಮೆಯಾಗುತ್ತದೆ. ಈ ಅಭ್ಯಾಸವು ದೀರ್ಘಾವಧಿಯಲ್ಲಿ ಕಣ್ಣುಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ದೈನಂದಿನ ದಿನಚರಿಯಲ್ಲಿ ಸುಧಾರಣೆ: ರಾತ್ರಿಯಲ್ಲಿ ಮೊಬೈಲ್ ಬಳಕೆ ಕಡಿಮೆಯಾದಾಗ, ನಿಯಮಿತವಾಗಿ ಮಲಗುವ ಸಮಯ ಸ್ಥಾಪನೆಯಾಗುತ್ತದೆ. ಇದು ಕ್ರಮೇಣ ದೇಹದ ನಿದ್ರೆಯ ಚಕ್ರವನ್ನು ಸಮತೋಲನಗೊಳಿಸುತ್ತದೆ. ನಿಮ್ಮ ಮನಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಒಟ್ಟಾರೆಯಾಗಿ ಒಂದು ತಿಂಗಳುಗಳ ಕಾಲ ಮಲಗುವ ಮುನ್ನ ಮೊಬೈಲ್ ಫೋನ್‌ಗಳನ್ನು ಬಳಸದಿರುವುದು ಒಂದು ಸಣ್ಣ ಬದಲಾವಣೆಯಂತೆ ಕಾಣಿಸಬಹುದು, ಆದರೆ ಇದು ನಿದ್ರೆ, ಮಾನಸಿಕ ಸ್ಥಿತಿಯ ಮೇಲೆ ಬೀರುವ ಸಕಾರಾತ್ಮಕ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಅಭ್ಯಾಸವನ್ನು ನಿರಂತರವಾಗಿ ಅಳವಡಿಸಿಕೊಂಡರೆ, ದೀರ್ಘಾವಧಿಯಲ್ಲಿ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ನವದೆಹಲಿ, ಮಾರ್ಚ್ 21: ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಸಂಪರ್ಕಿಸುವ ಮತ್ತು ಬಿಹಾರದಲ್ಲಿ ಗಂಗಾ ನದಿಗೆ ನಿರ್ಮಿಸಲಾಗಿರುವ ಪ್ರಮುಖ ಸೇತುವೆಯಾಗಿರುವ ವಿಕ್ರಮಶಿಲಾ ಸೇತುವೆ (Vikramshila Setu) ಕುಸಿತದ ಅಂಚಿನಲ್ಲಿದೆ. ಸೀಮಾಂಚಲ್ ಪ್ರದೇಶಕ್ಕೆ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಮತ್ತು ಬಿಹಾರ ರಾಜ್ಯದಿಂದ ಅಸ್ಸಾಂ ಮತ್ತು ದೇಶದ ಇತರ ಈಶಾನ್ಯ ಪ್ರದೇಶಗಳಿಗೆ ಜಾರ್ಖಂಡ್ ಮೂಲಕ ಸಂಚಾರಕ್ಕೆ ಅನುಕೂಲವಾಗುವ ಈ ಸೇತುವೆ ಬಿಹಾರ (Bihar) ರಾಜ್ಯಕ್ಕೆ ಬಹಳ ಮುಖ್ಯವಾಗಿದೆ.
ಈಗಾಗಲೇ ಭಾರೀ ಸಂಚಾರದಿಂದ ತುಂಬಿರುವ ಈ ಸೇತುವೆಯು ಈಗ ಹಾನಿಗೊಳಗಾಗಿದೆ. ಈ ಸೇತುವೆಯ ಗೋಡೆಗಳಲ್ಲಿ ಒಂದರಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಸೇತುವೆಯ ಕಂಬಗಳನ್ನು ಸವೆತದಿಂದ ರಕ್ಷಿಸಲು ನಿರ್ಮಿಸಲಾದ ಗೋಡೆ ಕುಸಿಯಲು ಪ್ರಾರಂಭಿಸಿದೆ. ಹೀಗಾಗಿ, ಈ ಸೇತುವೆಯ ಕಾಮಗಾರಿಯ ಗುಣಮಟ್ಟದ ಬಗ್ಗೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಸಶಸ್ತ್ರ ಪಡೆಗಳ ಮೂರು ಪ್ರಮುಖ ವಿಭಾಗಗಳಲ್ಲಿ ಒಂದಾದ ಭಾರತೀಯ ನೌಕಾಪಡೆಯು, ಜನವರಿ ಮತ್ತು ಫೆಬ್ರವರಿ 2027ರ ಬ್ಯಾಚ್‌ಗಳಿಗಾಗಿ ‘ಅಗ್ನಿವೀರ್ ಸೀನಿಯರ್ ಸೆಕೆಂಡರಿ ನೇಮಕಾತಿ‘ (SSR) ಹುದ್ದೆಗಳ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿಯು ದೇಶದಾದ್ಯಂತ ಇರುವ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿದೆ. ಆಸಕ್ತರು ಏಪ್ರಿಲ್ 6 ರೊಳಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕೆಂದು ಸೂಚಿಸಲಾಗಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಪರ್ಯಾಯವಾಗಿ, ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ವಿಭಾಗದಲ್ಲಿ ಮೂರು ವರ್ಷಗಳ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ಎರಡು ವರ್ಷಗಳ ವೃತ್ತಿಪರ ಕೋರ್ಸ್ ಪೂರ್ಣಗೊಳಿಸಿದವರೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಯೋಮಿತಿಯ ವಿಷಯಕ್ಕೆ ಬಂದರೆ, ಜನವರಿ 2027ರ ಬ್ಯಾಚ್‌ಗೆ ಅಭ್ಯರ್ಥಿಗಳು ಡಿಸೆಂಬರ್ 2004 ರಿಂದ ಮೇ 2009 ರ ನಡುವೆ ಜನಿಸಿರಬೇಕು ಹಾಗೂ ಫೆಬ್ರವರಿ 2027ರ ಬ್ಯಾಚ್‌ಗೆ ಮೇ 2005 ರಿಂದ ಅಕ್ಟೋಬರ್ 2009 ರ ನಡುವೆ ಜನಿಸಿರಬೇಕು.
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:
ಅಭ್ಯರ್ಥಿಗಳ ಅಂತಿಮ ಆಯ್ಕೆಯು ಕಟ್ಟುನಿಟ್ಟಾದ ಹಂತಗಳನ್ನು ಒಳಗೊಂಡಿರುತ್ತದೆ. ಮೊದಲಿಗೆ, ಮೇ ರಲ್ಲಿ ಭಾರತೀಯ ನೌಕಾಪಡೆಯ ಪ್ರವೇಶ ಪರೀಕ್ಷೆ (INET) ನಡೆಯಲಿದೆ. ಇದು 100 ಅಂಕಗಳ ಲಿಖಿತ ಪರೀಕ್ಷೆಯಾಗಿದ್ದು, ಇಂಗ್ಲಿಷ್, ವಿಜ್ಞಾನ, ಗಣಿತ ಮತ್ತು ಸಾಮಾನ್ಯ ಅರಿವು ಎಂಬ ನಾಲ್ಕು ವಿಭಾಗಗಳಿಂದ ಒಟ್ಟು 50 ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪರೀಕ್ಷೆಯು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿದ್ದು, ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುತ್ತವೆ. ಲಿಖಿತ ಪರೀಕ್ಷೆಯ ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ಒಡಿಶಾದ ಐಎನ್‌ಎಸ್ ಚಿಲ್ಕಾದಲ್ಲಿ (INS Chilka) ಕಠಿಣ ತರಬೇತಿಯನ್ನು ಪಡೆಯಲಿದ್ದಾರೆ. ತರಬೇತಿ ಅವಧಿಯಲ್ಲಿ ಮತ್ತು ಸೇವೆಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ 30,000 ರೂ. ಗಳ ಪ್ಯಾಕೇಜ್ ನೀಡಲಾಗುವುದು, ಇದು ಪ್ರತಿ ವರ್ಷ ನಿಗದಿತ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಒಟ್ಟು ಸಂಬಳದ 30 ಪ್ರತಿಶತವನ್ನು ಅಗ್ನಿವೀರ್ ಕಾರ್ಪ್ಸ್ ನಿಧಿಗೆ ಮೀಸಲಿಡಲಾಗುತ್ತದೆ. ನಾಲ್ಕು ವರ್ಷಗಳ ಯಶಸ್ವಿ ಸೇವೆಯ ನಂತರ, ‘ಸೇವಾ ನಿಧಿ’ ಯೋಜನೆಯಡಿ ಅಭ್ಯರ್ಥಿಗಳು ಅಂದಾಜು 10.04 ಲಕ್ಷ ರೂ. ಗಳ ಒಟ್ಟು ಮೊತ್ತವನ್ನು ಪಡೆಯುತ್ತಾರೆ, ಇದು ಅವರ ಮುಂದಿನ ಜೀವನಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 21: ಇಸ್ರೇಲ್-ಇರಾನ್ ಯುದ್ಧದಿಂದ ಭಾರತದಲ್ಲಿ ಗ್ಯಾಸ್ ಸಮಸ್ಯೆ ದಿನೇ ದಿನೇ ಭುಗಿಲೇಳ್ತಿದೆ. ಹೋಟೆಲ್ ಮಾಲೀಕರು ಗ್ಯಾಸ್ ಸಿಲಿಂಡರ್ (gas cylinder) ಸಿಗದೆ ಪರದಾಡುತ್ತಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದ ಉತ್ತರ ಕರ್ನಾಟಕ ಶೈಲಿಯ ಖಾನಾವಳಿಯಲ್ಲಿ ಸಿಲಿಂಡರ್ ಸಂಕಷ್ಟ ಎದುರಾಗಿದೆ. ಕಲಬುರಗಿಯಿಂದ ಬೆಂಗಳೂರಿಗೆ ಸೌದೆ ತರಿಸಿದ್ದಾರೆ. ಸೌದೆ ಒಲೆ ಮೇಲೆ ಅಡುಗೆ ಮಾಡ್ಬೇಡಿ ಅಂತಾ ಬಿಲ್ಡಿಂಗ್ ಮಾಲೀಕರು ಹೇಳ್ತಿದ್ದಾರಂತೆ.
ಸೌದೆ ಒಲೆ 4-5 ಸಾವಿರ ರೂ ಏರಿಕೆ
ಬೆಂಗಳರಿನ ಆರ್ಆರ್ ನಗರದ ವಿಷ್ಣು ಭವನ್ ಹೋಟೆಲ್ನಲ್ಲೂ ಸೌದೆ ಒಲೆಯಲ್ಲೇ ಅಡುಗೆ ಬೇಯಿಸುತ್ತಿದ್ದಾರೆ. ಗ್ಯಾಸ್ಸ್ಟೌನಲ್ಲಿ ಒಂದೆರಡು ಗಂಟೆಯಲ್ಲಿ ಆಗ್ತಿದ್ದ ಕೆಲಸವೀಗ, ನಾಲ್ಕೈದು ಗಂಟೆ ತೆಗೆದುಕೊಳ್ಳುತ್ತಿದೆ. ಮೊದಲು 2000ಕ್ಕೆ ಸಿಕ್ತಿದ್ದ ಸೌದೆ ಒಲೆ, ಈಗ 4-5 ಸಾವಿರ ರೂ ಏರಿಕೆಯಾಗಿದೆ. ದುಡ್ಡು ಕೊಟ್ಟರೂ ಸೌದೆ ಒಲೆ ಸಿಗದ ಸ್ಥಿತಿ ನಿರ್ಮಾಣ ಆಗಿದೆ.
ವಾಣಿಜ್ಯ ಸಿಲಿಂಡರ್ ಸಿಗದೆ ಬನಶಂಕರಿಯ ರಾಜೇಶ್ವರಿ ಕೆಫೆಗೆ ಸಂಕಷ್ಟ ಎದುರಾಗಿದೆ. ಸೌದೆ ಒಲೆಯಲ್ಲಿ
ಅಡುಗೆ ಮಾಡ್ತಿದ್ದಾರೆ., ಮೆನುವಿನಲ್ಲಿದ್ದ ಬಹುತೇಕ ಐಟಮ್ ಕಡಿಮೆ ಮಾಡಿದ್ದಾರೆ. 50 ವರ್ಷಗಳ ಇತಿಹಾಸವಿರೋ ಕಾರ್ಪೊರೇಷನ್ ಬಳಿಯ ಪೈ ವಿಹಾರ್ಗೂ ಗ್ಯಾಸ್ ಟ್ರಬಲ್ ಆಗಿದೆ. ಸೌದೆ ಒಲೆಯಲ್ಲಿ ಅಡುಗೆ ಮಾಡೋದೂ ಹೋಟೆಲ್ ಸಿಬ್ಬಂದಿಗೆ ಸವಾಲಾಗಿದೆ. ಶೀಘ್ರ ಬಿಕ್ಕಟ್ಟು ಪರಿಹರಿಸುವಂತೆ ಮಾಲಕಿ ಒತ್ತಾಯಿಸಿದ್ದಾರೆ.
30 ವರ್ಷಗಳಿಂದ ಸೇವೆ ನೀಡುತ್ತಿದ್ದ ಎನ್ ಆರ್ ಕಾಲೋನಿ ಉಪಹಾರ ದರ್ಶಿನಿಯಲ್ಲೂ ಸೌದೆ ಒಲೆಯಲ್ಲೇ ಸೀಮಿತ ಆಹಾರ ಪದಾರ್ಥ ಮಾಡ್ತಿದ್ದಾರೆ. ಕೆಲ ಆಹಾರ ಪದಾರ್ಥದ ದರ ಏರಿಕೆಯಾಗಿದ್ದು, ಗ್ರಾಹಕರು ಬೇಸರ ವ್ಯಕ್ತಪಡಿಸ್ತಿದ್ದಾರೆ. ಸಿಲಿಂಡರ್ ಸಿಗದೆ ಮೆನುವಿನಲ್ಲಿದ್ದ ಆಹಾರ ನೀಡಲಾಗದೆ ಪಿಜಿ ಮಾಲೀಕರು ಪರದಾಡ್ತಿದ್ದಾರೆ. ಸಜ್ಜನ್ ರಾವ್ ಸರ್ಕಲ್ನ ಸಿಂಪೋನಿ ಪಿಜಿಯಲ್ಲಿ ಸಮರ್ಪಕ ಆಹಾರ ಸಿಗುತ್ತಿಲ್ಲವೆಂದು ಉದ್ಯೋಗಿಗಳು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಎಲ್‌ಪಿಜಿ ಸಿಲಿಂಡರ್ಗೆ ಮುಗಿಬಿದ್ದ ಗ್ರಾಹಕರು
ಬಳ್ಳಾರಿ ಜಿಲ್ಲೆ ಕುರುಗೋಡಿಗೆ ಗ್ಯಾಸ್ ಬಂದಿದೆ ಅನ್ನೋದು ಗೊತ್ತಾಗ್ತಿದ್ದಂತೆ ಗ್ರಾಹಕರು ಮುಗಿಬಿದ್ದಿದ್ದರು. ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೇ ಕಾದು ಸಿಲಿಂಡರ್ ಪಡೆದುಕೊಂಡರು. ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲೂ ಕ್ಯೂನಲ್ಲಿ ನಿಂತು ಗ್ರಾಹಕರು ಗ್ಯಾಸ್ ಖರೀದಿಸಿದ್ದಾರೆ. ಬೀದರ್‌ನಲ್ಲಿ 11 ದಿನದಿಂದಲೂ ಗ್ಯಾಸ್ ಸಿಗ್ತಿಲ್ಲ. ಗ್ಯಾಸ್ ಏಜೆನ್ಸಿ ಮುಂದೆ ಕ್ಯೂ ನಿಂತುಕೊಂಡ ನೂರಕ್ಕೂ ಹೆಚ್ಚು ಜನರು ಗೋಳಾಡಿದ್ದಾರೆ.
ಗ್ಯಾಸ್ ಅಭಾವ: ವೃದ್ಧಾಶ್ರಮದಲ್ಲಿ ಪರದಾಟ
ಕೊಡಗು ಜಿಲ್ಲೆಯ ಮಡಿಕೇರಿಯ ವೃದ್ಧಾಶ್ರಮದಲ್ಲಿ 25ಕ್ಕೂ ಹೆಚ್ಚು ವೃದ್ಧರಿದ್ದಾರೆ. ಆಹಾರ ಬೇಯಿಸೋದಕ್ಕೆ
ಗ್ಯಾಸ್ ಟ್ರಬಲ್ ಎದುರಾಗಿದೆ. ದಾನಿಗಳು ಗ್ಯಾಸ್ ಸಿಲಿಂಡರ್ ಕೊಟ್ಟು ಸಹಕರಿಸುವಂತೆ ಮನವಿ ಮಾಡಿದ್ದಾರೆ. ರಾಯಚೂರು, ಕೋಲಾರ, ಹಾವೇರಿ ಸೇರಿದಂತೆ ರಾಜ್ಯದ ಹಲವೆಡೆ ಎಲ್ಪಿಜಿಜ ಸಿಲಿಂಡರ್ ಸಮಸ್ಯೆ ತಲೆದೂರಿದೆ. ಕೇಂದ್ರ ಸರ್ಕಾರಕ್ಕೆ ಮತ್ತೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಎಲ್‌ಪಿಜಿ ಕೊರತೆ ನೀಗಿಸುವಂತೆ ಮನವಿ ಮಾಡಿದ್ದಾರೆ.
ಧೂಮಪಾನ (Smoking) ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದು ಧೂಮಪಾನ ಮಾಡುವವರಿಗೂ, ಅವರ ಸುತ್ತಮುತ್ತ ಇರುವವರಿಗೂ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಉಂಟುಮಾಡುತ್ತದೆ. ಆದರೆ ಇತ್ತೀಚಿನ ಒಂದು ಅಧ್ಯಯನವು ಹೊಸ ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಹೌದು, ತಂದೆಯಲ್ಲಿರುವ ಧೂಮಪಾನದ ಅಭ್ಯಾಸವು ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವೈದ್ಯರು ನಡೆಸಿದ ಈ ಅಧ್ಯಯನವನ್ನು “ಜರ್ನಲ್ ಆಫ್ ದ ಎಂಡೋಕ್ರೈನ್ ಸೋಸೈಟಿ”ಯಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ತಿಳಿಸಿರುವ ಮಾಹಿತಿ ಅನುಸಾರ, ತಂದೆ ಧೂಮಪಾನ ಮಾಡುವವರಾಗಿದ್ದರೆ ಅವರ ಮಕ್ಕಳಲ್ಲಿ ಟೈಪ್- 2 ಮಧುಮೇಹ, ಲಿವರ್ ಸಮಸ್ಯೆ ಮತ್ತು ಇತರ ಮೆಟಾಬಾಲಿಕ್ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು.
ತಂದೆಯಿಂದ ಮಕ್ಕಳಿಗೆ ರೋಗಗಳು ಹೇಗೆ ಬರುತ್ತವೆ?
ಅಧ್ಯಯನದಲ್ಲಿ ತಿಳಿಸಿರುವಂತೆ, ಧೂಮಪಾನ ಮಾಡುವ ಪುರುಷರ ಸ್ಪರ್ಮ್‌ನಲ್ಲಿ ಕೆಲವು ಬದಲಾವಣೆಗಳು ಉಂಟಾಗುತ್ತವೆ. ಈ ಬದಲಾವಣೆಗಳು ಹುಟ್ಟುವ ಮಗುವಿನ ದೇಹದಲ್ಲಿ ಶುಗರ್ ಮೆಟಾಬಾಲಿಸಮ್ ಮತ್ತು ಇನ್ಸುಲಿನ್ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಈ ಸಂಶೋಧನೆಯಲ್ಲಿ ಸುಮಾರು 1000 ಧೂಮಪಾನ ಮಾಡುವ ಪುರುಷರ ಮೇಲೆ ಅಧ್ಯಯನ ಮಾಡಲಾಗಿತ್ತು. ಇವರ ಮಕ್ಕಳಲ್ಲಿ ಸುಮಾರು 30% ಮಂದಿಗೆ ಮಧುಮೇಹದ ಲಕ್ಷಣಗಳು ಮತ್ತು ಲಿವರ್ ಸಂಬಂಧಿತ ಸಮಸ್ಯೆಗಳು ಕಂಡುಬಂದವು. ಆದರೆ ವಿಜ್ಞಾನಿಗಳು ಈ ಅಧ್ಯಯನ ಇನ್ನೂ ಸಣ್ಣ ಮಟ್ಟದಲ್ಲಿದ್ದು, ಹೆಚ್ಚಿನ ಪ್ರಮಾಣದ ಸಂಶೋಧನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಧೂಮಪಾನದ ವೇಳೆ ದೇಹಕ್ಕೆ ಸೇರುವ ನಿಕೋಟಿನ್, ದೇಹದ ಮೆಟಾಬಾಲಿಸಮ್ ಸಂಬಂಧಿತ ಪ್ರಮುಖ ಪ್ರಕ್ರಿಯೆಗಳನ್ನು ಹಾನಿಗೊಳಿಸಬಹುದು. ಇದು ಇನ್ಸುಲಿನ್ ಕಾರ್ಯವಿಧಾನವನ್ನು ಬದಲಾಯಿಸಿ, ಟೈಪ್- 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮ ಭವಿಷ್ಯದಲ್ಲಿ ಮಕ್ಕಳಿಗೂ ಬರುವ ಸಾಧ್ಯತೆ ಇದೆ. ಅಧ್ಯಯನವು ಮಕ್ಕಳ ಲಿವರ್ ಕಾರ್ಯಕ್ಷಮತೆಯ ಮೇಲೂ ದುಷ್ಪರಿಣಾಮ ಉಂಟಾಗಬಹುದು ಎಂದು ಸೂಚಿಸಿದೆ. ಈ ರೀತಿಯ ಸಮಸ್ಯೆಯನ್ನು ತಡೆಯಲು ತಂದೆಯಾಗಲು ಬಯಸುವವರು ಧೂಮಪಾನದಿಂದ ದೂರವಿರಬೇಕು. ಇದು ವ್ಯಕ್ತಿಯ ಆರೋಗ್ಯ ಕಾಪಾಡುವುದರ ಜೊತೆಗೆ ಭವಿಷ್ಯದಲ್ಲಿ ಮಕ್ಕಳ ಆರೋಗ್ಯವನ್ನು ಕೂಡ ಸರಿಯಾಗಿರಲು ಸಹಾಯ ಮಾಡುತ್ತದೆ.
ಹದಿಹರೆಯದವರ ನಡುವಿನ ಅರಿವಿನ ಕೊರತೆ ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಗಂಭೀರ ಚರ್ಚೆ ಹುಟ್ಟುಹಾಕುವಂತಹ ಘಟನೆಯೊಂದು ವರದಿಯಾಗಿದೆ. 14 ವರ್ಷದ ಬಾಲಕನೊಬ್ಬನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರ ಪ್ರಕಾರ, 14 ವರ್ಷದ ಬಾಲಕನೊಬ್ಬ ಇಬ್ಬರು ಬಾಲಕಿಯರ ಗರ್ಭಧಾರಣೆಗೆ ಕಾರಣನಾಗಿದ್ದಾನೆ ಎನ್ನಲಾಗಿದೆ. ಈ ಬಾಲಕಿಯರೂ ಸಹ ಅಪ್ರಾಪ್ತ ವಯಸ್ಕರಾಗಿದ್ದು, ಘಟನೆಯು ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ. ಇನ್ನು ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇದು ವಿದೇಶದ ವಿಡಿಯೋ ಎಂದು ಹೇಳಲಾಗಿದೆ.
ಹದಿಹರೆಯದವರಲ್ಲಿ ಲೈಂಗಿಕ ಶಿಕ್ಷಣದ ಕೊರತೆ, ಪೋಷಕರ ಮಾರ್ಗದರ್ಶನದ ವೈಫಲ್ಯ ಮತ್ತು ಹದಿಹರೆಯದ ವಯಸ್ಸಿನಲ್ಲಿ ಉಂಟಾಗುವ ಭಾವನಾತ್ಮಕ ಹಾಗೂ ದೈಹಿಕ ಬದಲಾವಣೆಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದು ಇಂತಹ ಘಟನೆಗಳಿಗೆ ಕಾರಣ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಈ ವಯಸ್ಸಿನಲ್ಲಿ ಗರ್ಭಧರಿಸುವುದು ಬಾಲಕಿಯರ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಕಾನೂನಾತ್ಮಕವಾಗಿ ಇದು ಬಾಲಾಪರಾಧ ಮತ್ತು ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ. ಈ ಘಟನೆಯು ಕುಟುಂಬಗಳು, ಶಾಲೆಗಳು ಮತ್ತು ಸಮಾಜವು ಯುವ ಪೀಳಿಗೆಗೆ ಸಂಬಂಧಗಳು ಮತ್ತು ಪ್ರಜನನ ಆರೋಗ್ಯದ ಬಗ್ಗೆ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಹೇಳಲಾಗಿದೆ.
ಮಂಗಳೂರು, ಮಾರ್ಚ್ 21: ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ (Police inspector Sandesh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಪ್ರಚೋದನೆಗೆ ಒಳಪಟ್ಟು ಇನ್ಸ್‌ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮಹಿಳೆಯರ ಆರೋಪ ಸುಳ್ಳು ಹಾಗೂ ಪ್ರೇರಿತ ಎಂಬುದು ಸಾಬೀತಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಮಂಗಳೂರೂ ನಗರ ಕಮಿಷನರೇಟ್ ವ್ಯಾಪ್ತಿಗೆ ಬರುವ ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಮೇಲೆ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಆರೋಪ ಕೇಳಿಬಂದಿತ್ತು. ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಸಿಎಂ, ಗೃಹ ಸಚಿವರು ಸೇರಿದಂತೆ ಮಹಿಳಾ ಆಯೋಗಕ್ಕೂ ಈ ಬಗ್ಗೆ ದೂರು ನೀಡಿದ್ದರು. ಈ ಬೆನ್ನಲ್ಲೆ ಕೆಲ ಆಡಿಯೋ ಮತ್ತು ವಿಡಿಯೋ ಕೂಡ ವೈರಲ್ ಆಗಿದ್ದವು.
ಮಹಿಳಾ ಆಯೋಗ, ಮಕ್ಕಳ ರಕ್ಷಣಾ ಆಯೋಗ ಸೇರಿದಂತೆ ಸರ್ಕಾರದಿಂದ ತನಿಖೆ ಮಾಡಲು ಪೊಲೀಸ್ ಕಮಿಷನರ್ಗೆ ಸೂಚನೆ ಸಿಕ್ಕಿತ್ತು. ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ರಿಂದ ತನಿಖೆಯನ್ನು ಮಾಡಿಸಲಾಯ್ತು. ಇನ್ಸ್ಪೆಕ್ಟರ್ ಸಂದೇಶ್ರನ್ನ ಅಮಾನತ್ತುಗೊಳಿಸಿ ತನಿಖೆ ಮುಂದುವೆರೆಸಿದ್ದರು. ಈಗ ಪ್ರಾಥಮಿಕ ತನಿಖೆ ವರದಿ ಬಂದಿದ್ದು, ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಮಾಡಿದ್ದ ಆರೋಪಗಳು ಸುಳ್ಳು ಎಂಬುವುದುಸಾಬೀತಾಗಿದೆ ಅಂತಾ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಹಲ್ಲೆ, ಕಿರುಕುಳ ಸುಳ್ಳು
ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಅವರ ಮೇಲೆ ಹಲ್ಲೆ, ಕಿರುಕುಳ ನಡೆದಿದೆ ಎಂಬ ಆರೋಪಗಳು ಸುಳ್ಳು ಮತ್ತು ಪ್ರೇರಿತ ಎಂದು ಸಾಬೀತಾಗಿದೆ. ಆಡಿಯೋ, ವಿಡಿಯೋದಲ್ಲಿರುವ ಮಹಿಳೆಯರು ಅದು ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ದೂರು ನೀಡಲು ಇಷ್ಟವಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಆ ಆಡಿಯೋ, ವಿಡಿಯೋವನ್ನು ವಿನೋದ್ ಪಿಂಟೋ, ಅವಿತಾ ಅವರಿಗೆ ಯಾರು ಕೊಟ್ಟರು?
ಆಡಿಯೋ ತುಂಬಾ ಹಳೆಯದು, ಅದರಲ್ಲಿ ಏನು ಮಾತನಾಡಿದ, ಹೇಗೆ ಮಾತನಾಡಿದ ಅನ್ನೋದು ಸ್ಪಷ್ಟವಾಗಿದೆ. ಆಗಲೇ ಕ್ರಮಕೈಗೊಳ್ಳಬೇಕಾಗಿತ್ತು, ಆದರೆ ಆಗ ತೆಗೆದುಕೊಳ್ಳಲಿಲ್ಲ. ಅದರಿಂದಲೇ ಅದು ಈಗ ಹೊರಬಂದಿದೆ. ಆ ವಿಡಿಯೋ ಕೂಡ ಅಷ್ಟೇ ಲಜ್ಜಾಸ್ಪದವಾಗಿದೆ. ಆ ಆಡಿಯೋ ಮತ್ತು ವಿಡಿಯೋ ಮಟ್ಟಿಗೆ ನೋಡಿದರೆ, ಅಸಭ್ಯ ವರ್ತನೆ ನಡೆದಿದೆ ಎಂಬುದು ಸ್ಪಷ್ಟ. ಮಹಿಳೆಯರು PI ವಿರುದ್ಧ ದೂರು ಕೊಡಲಿಲ್ಲ ಅನ್ನೋದರಿಂದ ಅದು ಸತ್ಯ ಅಲ್ಲ ಅನ್ನೋದಕ್ಕೆ ಆಗುವುದಿಲ್ಲ.
ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ಮಾಡಿಸಿದರೆ ಸತ್ಯ ಹೊರಬರುತ್ತೆ: ಸುಮತಿ ನಾಯಕ್
ಆಡಿಯೋದ ಸಂಭಾಷಣೆ ಆಧಾರದ ಮೇಲೆ ಅಮಾನತು ಮಾಡಿದ್ದಾಗಿ ವರದಿ ಹೇಳಿದೆ. ಆರೋಪ ಮಾಡಿದ ಮಹಿಳೆಯರು ಯಾರದ್ದೋ ಪ್ರೇರಣೆಯಿಂದ ಸುಳ್ಳು ಆರೋಪ ಮಾಡಿದ್ದಾರೆ ಅಂತಾ ವರದಿ ಬಂದಿದೆ. ಆದರೆ ಈ ವರದಿಯನ್ನು ದೂರುದಾರೆ ಸುಮತಿ ನಾಯಕ್ ಅಲ್ಲಗಳೆದಿದ್ದಾರೆ. ಎಸಿಪಿ ಶ್ರೀಕಾಂತ್ ಕೂಡ ಈ ಪ್ರಕರಣದಲ್ಲಿ ಆರೋಪಿ. ಆದರಿಂದ ಅವರನ್ನು ಅಮಾನತಿನಲ್ಲಿ ಇಡಬೇಕಿತ್ತು. ಆದರೆ ಕಮಿಷನರ್ ಸುಧೀರ್ ಕುಮಾರ್ ಅವರ ಬಳಿ ತನಿಖೆ ಮಾಡಿಸಿದ್ದಾರೆ. ಇವರು ಮೂವರದ್ದು ಚೈನ್ ಲಿಂಕ್. ಸಂದೇಶ್ ಮೇಲೆ ಎಫ್ಐಆರ್ ಹಾಕಿ, ಎಸಿಪಿ ಶ್ರೀಕಾಂತ್ರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಮಟ್ಟದ ಅಧಿಕಾರಿಗಳಿಂದ ತನಿಖೆ ಮಾಡಿಸಿದರೆ ಸತ್ಯ ಹೊರಬರುತ್ತೆ ಅಂತಾ ಸುಮತಿ ನಾಯಕ್ ಹೇಳಿದ್ದಾರೆ.
ಐಪಿಎಲ್ 2026 ಇದೇ ಮಾರ್ಚ್ 28 ರಿಂದ ಪ್ರಾರಂಭವಾಗಲಿದೆ. ಈ ಆವೃತ್ತಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಅಭಿಮಾನಿಗಳು ಕೂಡ ಕಾದು ಕುಳಿತಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಈ ಪಂದ್ಯದ ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಐಪಿಎಲ್ನ ಉದ್ಘಾಟನಾ ಪಂದ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವೀರೇಂದ್ರ ಸೆಹ್ವಾಗ್, ಈ ಪಂದ್ಯ ಕೇವಲ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹೋರಾಟವಲ್ಲ. ಬದಲಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಂದು ಪರಿಗಣಿಸಬೇಕು ಎಂದಿದ್ದಾರೆ. ಇದರ ಜೊತೆಗೆ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೆಚ್ಚಿನ ಅಭಿಮಾನಿ ಬಳಗವಿಲ್ಲ ಎಂದಿರುವ ಸೆಹ್ವಾಗ್, ಇದು ಮಾರ್ಚ್ 28 ರಂದು ಕ್ರೀಡಾಂಗಣದಲ್ಲಿ ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ವಾಸ್ತವವಾಗಿ ಸೆಹ್ವಾಗ್ ಈ ರೀತಿಯ ಹೇಳಿಕೆ ನೀಡುವುದಕ್ಕೆ ಕಾರಣವೂ ಇದೆ. ಅದೆನೆಂದರೆ ಕೆಲವೇ ದಿನಗಳ ಹಿಂದೆ ನಡೆದಿದ್ದ “ದಿ 100 ಲೀಗ್” ಹರಾಜಿನಲ್ಲಿ ಕಾವ್ಯಾ ಮಾರನ್ ಒಡೆತನದ ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿ, ಪಾಕಿಸ್ತಾನಿ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂ.ಗೆ ಖರೀದಿಸಿತ್ತು. ಹೀಗಾಗಿ ಕಾವ್ಯಾ ಮಾರನ್ ವಿರುದ್ಧ ಭಾರತೀಯರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಭಾರತದಲ್ಲಿ ಗಳಿಸಿದ ಹಣವನ್ನು ಪಾಕಿಸ್ತಾನಿ ಆಟಗಾರರಿಗಾಗಿ ಖರ್ಚು ಮಾಡಿದ್ದಕ್ಕಾಗಿ ಕಾವ್ಯ ಮಾರನ್ ಅವರನ್ನು ಟೀಕಿಸಲಾಗಿತ್ತು.
ಇದೀಗ ವೀರೇಂದ್ರ ಸೆಹ್ವಾಗ್ ಕೂಡ ಅದೇ ವಿಚಾರವನ್ನು ಮುಂದಿಟ್ಟು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಟೀಕಿಸಿದ್ದಾರೆ ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಇನ್ನು ಕಾವ್ಯ ಮಾರನ್ ಫ್ರಾಂಚೈಸಿ, ಪಾಕ್ ಆಟಗಾರನನ್ನು ಖರೀದಿಸಿದರ ಬಗ್ಗೆ ಮೌನ ಮುರಿದಿದ್ದ ಬಿಸಿಸಿಐ, ವಿದೇಶಿ ಲೀಗ್ಗಳಲ್ಲಿ ಫ್ರಾಂಚೈಸಿಗಳಿಗೆ ತಮಗೆ ಬೇಕಾದ ಆಟಗಾರರನ್ನು ಖರೀದಿಸುವ ಸ್ವಾತಂತ್ರ್ಯವಿದೆ. ಹೀಗಾಗಿ ಇದು ನಮ್ಮ ನಿಯಂತ್ರಣದಲಿಲ್ಲ ಎಂದಿತ್ತು.
ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ಲೀಗ್ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದ ಇನ್ನು ಗುಣಮುಖರಾಗಿಲ್ಲ. ಹೀಗಾಗಿ ಫ್ರಾಂಚೈಸಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ಗೆ ನಾಯಕತ್ವದ ಜವಾಬ್ದಾರಿವಹಿಸಿದೆ. ಇದೇ ಮೊದಲ ಬಾರಿಗೆ ಎಸ್ಆರ್ಹೆಚ್ ತಂಡವನ್ನು ಮುನ್ನಡೆಸುತ್ತಿರುವ ಕಿಶನ್, ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಹೈದರಾಬಾದ್, ಮಾರ್ಚ್ 21: ಯುವ ವೈದ್ಯೆಯೊಬ್ಬರು ತನ್ನ ತಂದೆ-ತಾಯಿ ಮನೆಯಲ್ಲಿ ಬೆಕ್ಕನ್ನು (Pet Cat) ಸಾಕುವಂತಿಲ್ಲ ಎಂದು ಹೇಳಿದರೆಂಬ ಒಂದೇ ಒಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರವಾದ ಮತ್ತು ಆಘಾತಕಾರಿ ಘಟನೆ ನಡೆದಿದೆ. ಸಾಕು ಬೆಕ್ಕನ್ನು ಸಾಕಲು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ನಂತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಬಿಬಿಎಸ್ ಮುಗಿಸಿದ 23 ವರ್ಷದ ಮಹಿಳೆಯೊಬ್ಬರು ಮನೆಯಲ್ಲಿ ಸಾಕು ಬೆಕ್ಕನ್ನು ಸಾಕಲು ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ವಾಲ್ ನಿವಾಸಿಯಾಗಿರುವ ವೈದ್ಯೆ ಶುಕ್ರವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಬಿಬಿಎಸ್ ನಂತರ ಹೆಚ್ಚಿನ ಅಧ್ಯಯನಕ್ಕೆ ತಯಾರಿ ನಡೆಸುತ್ತಿದ್ದ ಆಕೆ ಕಳೆದ 3 ತಿಂಗಳಿನಿಂದ ಸಾಕು ಬೆಕ್ಕನ್ನು ಸಾಕುತ್ತಿದ್ದರು. ಆದರೆ, ಆಕೆಯ ಪೋಷಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅವರು ಸಾಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ಮಾರ್ಚ್ 18ರಂದು, ಮೀರ್‌ಪೇಟ್‌ನಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಸಾಕು ಬೆಕ್ಕಿನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ರೀತಿಯ ಸಣ್ಣಪುಟ್ಟ ಕಾರಣಗಳಿಗೆ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ