Headlines

RR vs LSG IPL 2026 Live Score: ರಾಯಲ್ಸ್​ vs ಸೂಪರ್ ಜೈಂಟ್ಸ್

ಇಂಡಿಯನ್ ಪ್ರೀಮಿಯರ್ ಲೀಗ್​ನ 64ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯವು ರಾಜಸ್ಥಾನ್ ರಾಯಲ್ಸ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಆರ್​ಆರ್​ ಪಡೆ ಪ್ಲೇಆಫ್​ಗೇರಬಹುದು. ಒಂದು ವೇಳೆ ಸೋತರೆ ಪ್ಲೇಆಫ್​​ಗೇರುವುದು ಕಷ್ಟಸಾಧ್ಯ. ಹೀಗಾಗಿ ಇಂದಿನ ಪಂದ್ಯವು ರಾಜಸ್ಥಾನ್ ರಾಯಲ್ಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು. ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು…

Read More

Karnataka Weather Forecast: ಬೆಂಗಳೂರಿ ಸೇರಿ ಹಲವೆಡೆ ನಾಳೆಯೂ ಮಳೆ, ಕೆಲ ಜಿಲ್ಲೆಗಳಲ್ಲಿ ವಿಪರೀತ ತಾಪಮಾನದ ಎಚ್ಚರಿಕೆ – Kannada News | Karnataka Weather Forecast: Rain Expected in Bengaluru and Most Districts, Heat Alert for North

ಬೀದರ್​​ನಲ್ಲಿ ಸುರಿದ ಮಳೆImage Credit source: Tv9 Kannada ಬೆಂಗಳೂರು, ಮೇ 19: ರಾಜ್ಯದಲ್ಲಿ ಇನ್ನೂ ಕೆಲವು ದಿನಗಳಕಾಲ ಮಳೆಯಾಗಲಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಣ ಹವೆ ಮುಂದುವರಿಯಲಿದೆ. ಮುಕ್ಕಾಲು ಕರ್ನಾಟಕದಲ್ಲಿ ನಾಳೆ ವರುಣನ (Rain) ಆಗಮನದ ನಿರೀಕ್ಷೆ ಇದ್ದು, ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆಯ ಸಾಧ್ಯತೆ ಇದೆ. ಅದಾಗಿಯೂ ಕೆಲ ಜಿಲ್ಲೆಗಳಲ್ಲಿ ವಿಪರೀತ ತಾಪಮಾನ ಕಂಡುಬರಲಿದ್ದು, ಗರಿಷ್ಠ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್​​ ವರೆಗೂ ಕಂಡುಬರಲಿದೆ. ಇದೇ ರೀತಿಯ ವಾತಾವರಣ ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ…

Read More

‘ಟಾಕ್ಸಿಕ್’ ಸಿನಿಮಾ: ‘ರಾಯ’ನ ಕಿಕ್ ಕೊಡೋ ಸ್ಟೈಲ್ – Kannada News | Toxic movie Yash’s Raya character photos released

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಟಾಕ್ಸಿಕ್’. ಸಿನಿಮಾದ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೆ ಹೋಗಿದೆ. ಆದರೂ ಸಿನಿಮಾದ ಕ್ರೇಜ್ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ‘ಟಾಕ್ಸಿಕ್’ ಸಿನಿಮಾದ ಕ್ಯಾರೆಕ್ಟರ್ ಪೋಸ್ಟರ್ ಹಾಗೂ ಎರಡು ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಕುತೂಹಲ ಮೂಡಿಸಿವೆ. ಇದೀಗ ‘ಟಾಕ್ಸಿಕ್’​​ ತಂಡವು ಸಿನಿಮಾದಲ್ಲಿನ ಯಶ್​​ ಪಾತ್ರವಾದ ‘ರಾಯ’ನ ಆಕರ್ಷಕ ಫೋಟೊಗಳನ್ನು ಹಂಚಿಕೊಂಡಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್ ನಲ್ಲಿ ಯಶ್…

Read More

ಅಮೆರಿಕದ ಡೆಟ್ ಮಾರುಕಟ್ಟೆಯನ್ನು ತೊರೆಯುತ್ತಿರುವ ಹೂಡಿಕೆದಾರರು; ಏನು ಕಾರಣ? – Kannada News | Global Bond Bloodbath: Why Investors are Fleeing Safe Haven Debt Markets

ವಾಷಿಂಗ್ಟನ್, ಮೇ 19: ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಸದ್ಯ ‘ಬಾಂಡ್ ರಕ್ತಪಾತ’ (Bond Bloodbath) ನಡೆಯುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಸಾಂಪ್ರದಾಯಿಕವಾಗಿ ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತಿದ್ದ ಬಾಂಡ್ ಮತ್ತು ಸಾಲ ಮಾರುಕಟ್ಟೆಯಿಂದ (Debt Market) ಜಾಗತಿಕ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ತಮ್ಮ ಹಣವನ್ನು ಹಿಂಪಡೆಯುತ್ತಿದ್ದಾರೆ. ಇದು ಜಾಗತಿಕ ಆರ್ಥಿಕತೆಯಲ್ಲಿ ಹೊಸ ಆತಂಕವನ್ನು ಸೃಷ್ಟಿಸಿದೆ. ಅಮೆರಿಕ ಸರ್ಕಾರದ ಬಾಂಡ್​ಗಳಿಂದ ನಿರ್ಗಮಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬಾಂಡ್ ಇಳುವರಿ (Yields) ಏರಿಕೆ – ಬಾಂಡ್ ಬೆಲೆಗಳ ಕುಸಿತ…

Read More

ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ ನೋಡಿ

ಇಂದು (ಮೇ 19) ದರ್ಶನ್ ಹಾಗೂ ವಿಜಯಲಕ್ಷ್ಮಿ (Vijayalakshmi Darshan) ಅವರ ವಿವಾಹ ವಾರ್ಷಿಕೋತ್ಸವ. ಆ ಪ್ರಯುಕ್ತ ಜೈಲಿನಲ್ಲಿ ಮುಖಾಮುಖಿ ಭೇಟಿಗೆ ಅವಕಾಶ ಮಾಡಿಕೊಡಲಾಗಿದೆ. ಮಗ ವಿನೀಶ್ ಜೊತೆ ಬಂದ ವಿಜಯಲಕ್ಷ್ಮಿ ಅವರು ದರ್ಶನ್ ಭೇಟಿ ಮಾಡಿ ವಾಪಸ್ ತೆರಳಿದ್ದಾರೆ. ಈ ಭೇಟಿಗಾಗಿ ದರ್ಶನ್ ಅವರು ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರು ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಇದ್ದಾರೆ. ಜಾಮೀನು ಪಡೆಯಲು ಅವರು ಇತ್ತೀಚೆಗೆ ಸುಪ್ರೀಂ…

Read More

ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ – Kannada News | Russian President Vladimir Putin to visit India in September for BRICS Summit in Delhi

ನವದೆಹಲಿ, ಮೇ 19: ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12 ಮತ್ತು 13ರಂದು ಪುಟಿನ್ ನವದೆಹಲಿಗೆ ಆಗಮಿಸಲಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಒಂದೇ ವರ್ಷದ ಅವಧಿಯಲ್ಲಿ ಪುಟಿನ್ ಅವರು ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದು ಉಭಯ ದೇಶಗಳ ನಡುವಿನ ಆಳವಾದ ರಾಜತಾಂತ್ರಿಕ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ. ಇದಕ್ಕೂ ಮುನ್ನ ಡಿಸೆಂಬರ್ 2025ರಲ್ಲಿ ನಡೆದ 23ನೇ ಭಾರತ-ರಷ್ಯಾ…

Read More

ಟೀಮ್ ಇಂಡಿಯಾದಿಂದ 9 ಆಟಗಾರರು ಔಟ್..!

ಅಫ್ಘಾನಿಸ್ತಾನ್ ವಿರುದ್ಧದ ಸರಣಿಗಾಗಿ ಭಾರತ ತಂಡವನ್ನು ಘೋಷಿಸಲಾಗಿದೆ. 14 ಸದಸ್ಯರುಗಳ ಈ ತಂಡಗಳ ನಾಯಕನಾಗಿ ಶುಭ್​ಮನ್ ಗಿಲ್ ಕಾಣಿಸಿಕೊಂಡರೆ, ಉಪನಾಯಕರುಗಳಾಗಿ ಕೆಎಲ್ ರಾಹುಲ್ (ಟೆಸ್ಟ್) ಹಾಗೂ ಶ್ರೇಯಸ್ ಅಯ್ಯರ್ (ಏಕದಿನ) ಆಯ್ಕೆಯಾಗಿದ್ದಾರೆ. ಇನ್ನು ಕಳೆದ ಬಾರಿ ತಂಡದಲ್ಲಿದ್ದ ಕೆಲ ಪ್ರಮುಖ ಆಟಗಾರರು ಈ ಬಾರಿ ಸ್ಥಾನ ಪಡೆದಿಲ್ಲ. ಆ ಆಟಗಾರರು ಯಾರೆಂದರೆ… (PC: gettyimages) ಅಕ್ಷರ್ ಪಟೇಲ್: ಭಾರತ ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲಿ ಖಾಯಂ ಸದಸ್ಯನಾಗಿ ಕಾಣಿಸಿಕೊಂಡಿದ್ದ ಅಕ್ಷರ್ ಪಟೇಲ್ ಅವರನ್ನು ಈ ಬಾರಿ ಆಯ್ಕೆ…

Read More

ಪ್ರಯಾಣಿಕರು ನಿರಾಳ, ಎಂದಿನಂತೆ ನಾಳೆ ಬಸ್​​ ಸಂಚಾರ; ಇಲ್ಲಿವೆ ಈ ಹೊತ್ತಿನ ಟಾಪ್​​ 5 ಸುದ್ದಿಗಳು – Kannada News | Evening Top News: KSRTC Bus Services Resume, Elephant Marthanda Death and Punjami Singer Murder

ಬೆಂಗಳೂರು, ಮೇ 19: ನಾಳೆ (ಮೇ 20) ಕರೆ ನೀಡಿದ್ದ ಮುಷ್ಕರವನ್ನು ಸಾರಿಗೆ ನೌಕರರು ಹೈಕೋರ್ಟ್​​ ಆದೇಶದ ಬೆನ್ನಲ್ಲೇ ಹಿಂಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ KSRTC ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೆ ಅರಸ್ ಕೋರ್ಟ್ ಆದೇಶಕ್ಕೆ ಗೌರವ ಕೊಟ್ಟು ಮುಷ್ಕರ ಹಿಂದಕ್ಕೆ ಪಡೆಯುತ್ತಿರೋದಾಗಿ ತಿಳಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ವಾದ-ಪ್ರತಿವಾದ ಆಲಿಸಿದ ಕೋರ್ಟ್​​ ಮುಷ್ಕರ ಹಿಂಪಡೆಯುವಂತೆ ತಿಳಿಸಿರುವ ಕಾರಣ ನಿರ್ಧಾರ ಕೈಬಿಟ್ಟಿದ್ದೇವೆ. ಸಿಎಂ ಅಥವಾ ಸಾರಿಗೆ ಸಚಿವರು ಶೀಘ್ರ ಸಮಯ ನಿಗದಿ ಮಾಡಿ…

Read More

Video: ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಕೇರಳ: ಕೊಲ್ಲಂ ಜಿಲ್ಲೆಯ ಚಿತ್ತಾರ ಎಂಬಲ್ಲಿ ಚಲಿಸುತ್ತಿದ್ದ ಬಸ್‌ನ ಮುಂಭಾಗದ ಟೈರ್ ದಿಢೀರನೆ ಕಳಚಿಕೊಂಡ ಪರಿಣಾಮ ನಿಯಂತ್ರಣ ತಪ್ಪಿದ ಬಸ್ ರಸ್ತೆಯ ಬದಿಗೆ ಉರುಳಿ ಭೀಕರ ಅಪಘಾತ ಸಂಭವಿಸಿದೆ. ಮಡತ್ತರದಿಂದ ಅಂಚಲ್ ಕಡೆಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವೇಗದೂತ ಬಸ್ ಚಿತ್ತಾರ ಸಮೀಪದ ತಿರುವಿನಲ್ಲಿ ಚಲಿಸುತ್ತಿದ್ದಾಗ ಈ ತಾಂತ್ರಿಕ ದೋಷ ಸಂಭವಿಸಿದೆ. ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಭಾರಿ ಪ್ರಮಾಣದ ಪ್ರಾಣಾಪಾಯ ತಪ್ಪಿದ್ದು, ಬಸ್ಸಿನಲ್ಲಿದ್ದ ಹಲವಾರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ…

Read More

ದೇಶಕ್ಕೆ ಅಪ್ಪಳಿಸುತ್ತಿದೆ ಆರ್ಥಿಕ ಚಂಡಮಾರುತ; ಕುಸಿಯಲಿದೆ ಅರ್ಥ ವ್ಯವಸ್ಥೆ: ರಾಹುಲ್ ಗಾಂಧಿ ಆತಂಕ – Kannada News | Rahul Gandhi Warns India of “Economic Storm” Amid Fuel Price Hikes, Blames Modi Govt

ನವದೆಹಲಿ, ಮೇ 19: ಐದು ದಿನಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಎರಡನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಭಾರತವು ಹಿಂದೆಂದೂ ಕಾಣದ ದೊಡ್ಡ “ಆರ್ಥಿಕ ಚಂಡಮಾರುತ” (Economic Storm) ಎದುರಿಸುವ ಹಂತದಲ್ಲಿದೆ ಎಂದು ಎಚ್ಚರಿಸಿದ್ದಾರೆ. ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ರಾಯ್‌ಬರೇಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರೂಪಿಸಿರುವ ಆರ್ಥಿಕ ನೀತಿಗಳು…

Read More