‘ಇಂತಹ ಸಿನಿಮಾ ಮಾಡಲು ಧೈರ್ಯ ಬೇಕು’; ‘ಧುರಂಧರ್ 2’ ಹಾಡಿ ಹೊಗಳಿದ ರಾಜಮೌಳಿ

‘ಇಂತಹ ಸಿನಿಮಾ ಮಾಡಲು ಧೈರ್ಯ ಬೇಕು’; ‘ಧುರಂಧರ್ 2’ ಹಾಡಿ ಹೊಗಳಿದ ರಾಜಮೌಳಿ

ಖ್ಯಾತ ನಿರ್ದೇಶಕ ಎಸ್​​ಎಸ್​ ರಾಜಮೌಳಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ದೊಡ್ಡ ನಿರ್ದೇಶಕರಾದರೂ ಯಾವುದೇ ಸಿನಿಮಾ ರಿಲೀಸ್ ಆದರೂ ಆ ಚಿತ್ರವನ್ನು ನೋಡಿ ವಿಮರ್ಶೆ ತಿಳಿಸುತ್ತಾರೆ. ಈಗ ‘ಧುರಂಧರ್ 2’ ಸಿನಿಮಾವನ್ನು ಅವರು ವೀಕ್ಷಿಸಿದ್ದಾರೆ. ಅವರಿಗೆ ಸಿನಿಮಾದಲ್ಲಿ ಹಲವು ವಿಷಯಗಳು ಇಷ್ಟ ಆಗಿವೆ. ಈ ಬಗ್ಗೆ ಅವರು ಟ್ವಿಟರ್ ಅಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್ ನಟನೆ ಅವರಿಗೆ ಇಷ್ಟ ಆಗಿದೆ.

ತೆಲುಗಿನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್ ಸೇರಿದಂತೆ ಅನೇಕರು ರಾಜಮೌಳಿ ಸಿನಿಮಾನ ವೀಕ್ಷಣೆ ಮಾಡಿದ್ದಾರೆ. ಎಲ್ಲರೂ ‘ಧುರಂಧರ್ 2’ ಸಿನಿಮಾ ವೀಕ್ಷಣೆ ಮಾಡಿ ವಿಮರ್ಶೆ ತಿಳಿಸಿದ್ದಾರೆ. ಈಗ ರಾಜಮೌಳಿ ಸರದಿ. ಅವರಿಗೂ ಸಿನಿಮಾ ಇಷ್ಟ ಆಗಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ಚೆನ್ನಾಗಿದೆ ಎಂದು ಅವರು ಹೇಳಿದ್ದಾರೆ.

‘ಧುರಂಧರ್ 2 ಸಿನಿಮಾದ ಬರಹ, ಪಾತ್ರವರ​್ಗ, ತಾಂತ್ರಿಕವಾಗಿ ಸಿನಿಮಾ ತಂದಿದ್ದು, ಸಂಗೀತ, ಡಿಸೈನ್, ನಿರ್ದೇಶನ ಎಲ್ಲವೂ ಅದ್ಭುತ. ಭಾವನಾತ್ಮಕ ಅಂಶಗಳು ಉತ್ತಮವಾಗಿವೆ. ಬರವಣಿಗೆಯು ಟ್ವಿಸ್ಟ್​​ಗಳನ್ನು ಅದ್ಭುತವಾಗಿ ಮೂಡಿಸಿದೆ. 4 ಗಂಟೆಗಳ ಸಿನಿಮಾ ಮಾಡಿ ಅದನ್ನು ಬಿಡುಗಡೆ ಮಾಡಲು ಧೈರ್ಯ ಬೇಕು. ಕೊನೆಯ ಫ್ರೇಮ್‌ನವರೆಗೂ ಜನರನ್ನು ಸಿನಿಮಾ ಹಿಡಿದಿಡುತ್ತದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ

‘ರಣವೀರ್ ಸಿಂಗ್ ಅವರೇ ಎಂತಹ ಅದ್ಭುತ ಪರ್ಫಾರ್ಮೆನ್ಸ್. ಶೆಡ್‌ನಲ್ಲಿ ನಡೆಯುವ ಸನ್ನಿವೇಶ ನಟನೆಯಲ್ಲಿ ಒಂದು ಮಾಸ್ಟರ್‌ಕ್ಲಾಸ್. ನೀವು ಹಮ್ಜಾ ಮತ್ತು ಜಸ್ಕಿರತ್ ಆಗಿ ನಮ್ಮಿಬ್ಬರನ್ನೂ ಮಂತ್ರಮುಗ್ಧಗೊಳಿಸಿದ್ದೀರಿ. ಮಾಧವನ್ ಕೂಡ ಅದ್ಭಯತ. ಅದ್ಭುತ ಯಶಸ್ಸಿಗೆ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ರೇಕ್: ವಾಟ್ಸಾಪ್‌ ಸಂಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮೋದಿ ಸರ್ಕಾರ!

ದೆಹಲಿ, ಮಾ.21: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ವಂಚನೆಗಳನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವಾಲಯವು ವಾಟ್ಸಾಪ್ ಸಂಸ್ಥೆಗೆ ಮಹತ್ವದ ನಿರ್ದೇಶನಗಳನ್ನು ನೀಡಿದೆ. ವಂಚನೆಗೆ ಬಳಕೆಯಾಗುವ ಮೊಬೈಲ್ ಡಿವೈಸ್ ಐಡಿಗಳನ್ನು (Device IDs) ಶಾಶ್ವತವಾಗಿ ನಿರ್ಬಂಧಿಸುವಂತೆ ಸೂಚಿಸಲಾಗಿದೆ. ವಂಚನೆ ಎಸಗುವ ವ್ಯಕ್ತಿ ಅಥವಾ ಜಾಲವನ್ನು ಗುರುತಿಸಿದ ತಕ್ಷಣ, ಅವರು ಬಳಸುವ ಮೊಬೈಲ್‌ನ ಡಿವೈಸ್ ಐಡಿಯನ್ನು ಬ್ಲಾಕ್ ಮಾಡಬೇಕು. ಇದರಿಂದ ವಂಚಕರು ಅದೇ ಫೋನ್ ಬಳಸಿ ಮತ್ತೊಂದು ಅಕೌಂಟ್ ತೆರೆಯಲು ಸಾಧ್ಯವಾಗುವುದಿಲ್ಲ.

ಐಟಿ ನಿಯಮಗಳ ಪ್ರಕಾರ, ಡಿಲೀಟ್ ಆದ ಅಕೌಂಟ್‌ಗಳ ಮಾಹಿತಿಯನ್ನು ಕನಿಷ್ಠ 180 ದಿನಗಳ ಕಾಲ ಉಳಿಸಿಕೊಳ್ಳಬೇಕು. ಇದು ತನಿಖಾ ಸಂಸ್ಥೆಗಳಿಗೆ ಪುರಾವೆ ಸಂಗ್ರಹಿಸಲು ನೆರವಾಗಲಿದೆ.ವಾಟ್ಸಾಪ್ ಅಕೌಂಟ್‌ಗಳನ್ನು ಸಕ್ರಿಯ ಮೊಬೈಲ್ ಸಿಮ್‌ಗೆ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಅನಾಮಧೇಯವಾಗಿ ವಾಟ್ಸಾಪ್ ಬಳಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದ್ದು, 4 ರಿಂದ 6 ತಿಂಗಳಲ್ಲಿ ಇದು ಜಾರಿಯಾಗಲಿದೆ.

ಪೊಲೀಸ್ ಅಥವಾ ಸಿಬಿಐ ಲೋಗೋಗಳನ್ನು ಪ್ರೊಫೈಲ್ ಪಿಕ್ಚರ್ ಆಗಿ ಬಳಸಿ ಜನರನ್ನು ಹೆದರಿಸುವ ವಂಚಕರನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (AI) ಬಳಸಲಾಗುವುದು. ಅಂತಹ ಫೇಕ್ ಪ್ರೊಫೈಲ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಲು ವಾಟ್ಸಾಪ್ ಒಪ್ಪಿಕೊಂಡಿದೆ. ಮ್ಯಾಲಿಶಿಯಸ್ ಎಪಿಕೆ (APK) ಫೈಲ್‌ಗಳ ವರ್ಗಾವಣೆಯನ್ನು ಪತ್ತೆಹಚ್ಚಿ ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಬಲಪಡಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ‘ಪರಮ್’ ಗೆ ಪ್ರಧಾನಿ ಮೋದಿ ಫಿದಾ! ಇದು ಭಾರತದ ಅತ್ಯಂತ ಶಕ್ತಿಶಾಲಿ ರೋಬೋಟ್ ನಾಯಿ

2024ರಲ್ಲಿ ಭಾರತದಲ್ಲಿ ಸುಮಾರು 1.23 ಲಕ್ಷ ಡಿಜಿಟಲ್ ಅರೆಸ್ಟ್ ಪ್ರಕರಣಗಳು ವರದಿಯಾಗಿದ್ದು, ಜನರಿಂದ ಸುಮಾರು 1,935 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಒಟ್ಟಾರೆ ಡಿಜಿಟಲ್ ವಂಚನೆಗಳಿಂದ ದೇಶಕ್ಕೆ ಸುಮಾರು 3,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Kendriya Vidyalaya Admission 2026-27: ಕೇಂದ್ರೀಯ ವಿದ್ಯಾಲಯ ಪ್ರವೇಶಾತಿ ಆರಂಭ; ಪೋಷಕರು ಗಮನಿಸಬೇಕಾದ ಪ್ರಮುಖ ಅಂಶ ಇಲ್ಲಿವೆ

2026-27ನೇ ಶೈಕ್ಷಣಿಕ ವರ್ಷಕ್ಕೆ ದೇಶಾದ್ಯಂತ ಇರುವ ಕೇಂದ್ರೀಯ ವಿದ್ಯಾಲಯಗಳಲ್ಲಿ (KV) ಒಂದನೇ ತರಗತಿ ಮತ್ತು ನರ್ಸರಿ ಪ್ರವೇಶಕ್ಕಾಗಿ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ಈ ಬಾರಿ ಪೋಷಕರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 20ರ ಬೆಳಿಗ್ಗೆ 10 ಗಂಟೆಯಿಂದ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಏಪ್ರಿಲ್ 2 ರವರೆಗೆ ಕಾಲಾವಕಾಶವಿದ್ದು, ಆಸಕ್ತರು ನಿಗದಿತ ಸಮಯದೊಳಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ.

ವಯೋಮಿತಿ ಮತ್ತು ಆದ್ಯತೆಗಳು:

ಒಂದನೇ ತರಗತಿಗೆ ಸೇರಬಯಸುವ ಮಕ್ಕಳಿಗೆ ವಯೋಮಿತಿಯ ನಿಯಮ ಬಹಳ ಮುಖ್ಯವಾಗಿದೆ. ಮಾರ್ಚ್ 31, 2026 ರ ವೇಳೆಗೆ ಮಗು ಕನಿಷ್ಠ 6 ವರ್ಷ ವಯಸ್ಸನ್ನು ಪೂರೈಸಿರಬೇಕು. ಇನ್ನು ಪ್ರವೇಶಾತಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಸೇನಾ ಸಿಬ್ಬಂದಿಯ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಉಳಿದ ಸೀಟುಗಳನ್ನು ವಿವಿಧ ಕೋಟಾಗಳು ಮತ್ತು ಸರ್ಕಾರದ ಮೀಸಲಾತಿ ನಿಯಮಗಳ ಅಡಿಯಲ್ಲಿ ಭರ್ತಿ ಮಾಡಲಾಗುತ್ತದೆ.

ಆಯ್ಕೆ ಪಟ್ಟಿ ಮತ್ತು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಿದ ನಂತರ ಪೋಷಕರು ಆಯ್ಕೆ ಪಟ್ಟಿಗಾಗಿ ಕಾಯಬೇಕಾಗುತ್ತದೆ. ನರ್ಸರಿ ಅಥವಾ ಕಿಂಡರ್‌ಗಾರ್ಟನ್ ತರಗತಿಗಳ ಮೊದಲ ಆಯ್ಕೆ ಪಟ್ಟಿ ಏಪ್ರಿಲ್ 8 ರಂದು ಪ್ರಕಟವಾದರೆ, ಒಂದನೇ ತರಗತಿಯ ಮೊದಲ ಪಟ್ಟಿ ಏಪ್ರಿಲ್ 9 ರಂದು ಬಿಡುಗಡೆಯಾಗಲಿದೆ. ಒಂದು ವೇಳೆ ಮೊದಲ ಪಟ್ಟಿಯಲ್ಲಿ ಅವಕಾಶ ಸಿಗದಿದ್ದರೆ, ಪೋಷಕರು ಏಪ್ರಿಲ್ 16 ರಂದು ಬಿಡುಗಡೆಯಾಗುವ ಎರಡನೇ ಪಟ್ಟಿ ಮತ್ತು ಏಪ್ರಿಲ್ 21 ರಂದು ಬರುವ ಮೂರನೇ ಪಟ್ಟಿಯನ್ನು ಗಮನಿಸಬಹುದಾಗಿದೆ.

ಇದನ್ನೂ ಓದಿ: ಗೂಗಲ್​ನಿಂದ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ; 10 ಲಕ್ಷ ರೂ. ಸ್ಟೈಫಂಡ್ ಪಡೆಯುವ ಅವಕಾಶ

ಇತರ ತರಗತಿಗಳ ಪ್ರವೇಶ ವಿಧಾನ:

ಕೇವಲ ಒಂದನೇ ತರಗತಿಗೆ ಮಾತ್ರ ಆನ್‌ಲೈನ್ ಅರ್ಜಿಗಳು ಲಭ್ಯವಿರುತ್ತವೆ. 2ನೇ ತರಗತಿಯಿಂದ 9ನೇ ತರಗತಿಯವರೆಗೆ (11ನೇ ತರಗತಿ ಹೊರತುಪಡಿಸಿ) ಪ್ರವೇಶ ಪಡೆಯಲು ಆಯಾ ಶಾಲೆಗಳಲ್ಲಿ ಖಾಲಿ ಇರುವ ಸೀಟುಗಳ ಆಧಾರದ ಮೇಲೆ ಏಪ್ರಿಲ್ 2 ರಿಂದ 8 ರವರೆಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ತರಗತಿಗಳ ಆಯ್ಕೆ ಪಟ್ಟಿ ಏಪ್ರಿಲ್ 13 ರಂದು ಪ್ರಕಟವಾಗಲಿದ್ದು, ಏಪ್ರಿಲ್ 15 ರಿಂದ 20 ರ ನಡುವೆ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ.

ಅಂತಿಮ ಹಂತದ ಪ್ರಕ್ರಿಯೆ:

ಹತ್ತನೇ ತರಗತಿಯ ಫಲಿತಾಂಶ ಬಂದ 10 ದಿನಗಳ ನಂತರ 11ನೇ ತರಗತಿಯ ನೋಂದಣಿ ಆರಂಭವಾಗುತ್ತದೆ. ಒಟ್ಟಾರೆ ಪ್ರವೇಶಾತಿ ಪ್ರಕ್ರಿಯೆಯು ಜೂನ್ 30 ಕ್ಕೆ ಮುಕ್ತಾಯಗೊಳ್ಳಲಿದ್ದು, ವಿಶೇಷ ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ ಅಧಿಕಾರದೊಂದಿಗೆ ಜುಲೈ 7 ರವರೆಗೆ ಸೀಟುಗಳನ್ನು ಭರ್ತಿ ಮಾಡಲು ಅವಕಾಶವಿರುತ್ತದೆ. ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರೀಯ ವಿದ್ಯಾಲಯದಲ್ಲಿ ನಿಮ್ಮ ಮಗುವಿನ ಸೀಟು ಖಚಿತಪಡಿಸಿಕೊಳ್ಳಲು ಈ ದಿನಾಂಕಗಳನ್ನು ತಪ್ಪದೇ ನೆನಪಿಟ್ಟುಕೊಳ್ಳಿ.

ಆನ್‌ಲೈನ್​​ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ

ನಟ ರವಿಚಂದ್ರನ್ ಅವರು ಚಿತ್ರರಂಗದಲ್ಲಿ ಅನೇಕ ಸೋಲು ಹಾಗೂ ಗೆಲುವನ್ನು ಕಂಡಿದ್ದಾರೆ. ಅವರು ಸೋಲಿನ ಬಗ್ಗೆ ಮಾತನಾಡಿದ್ದಾರೆ. ‘ಸಿನಿಮಾ ಸೋತಾಗ ಯಾರಿಗೂ ಬೇಸರ ಆಗೋದಿಲ್ಲ. ಸೋಲು ಕಂಡಾಗ ಸುತ್ತಲೂ ಇರುವ ಜನರು ಆಡುವ ಮಾತು ಬೇಸರ ಮೂಡಿಸುತ್ತದೆ. ಆ ರೀತಿ ಆಗಬಾರದು’ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ. ರವಿಚಂದ್ರನ್ ಅವರು ‘ಕ್ರೇಜಿ ಬ್ರಹ್ಮ’ ಹೆಸರಿನ ಸಿನಿಮಾ ಮಾಡಿದ್ದಾರೆ. ಎಐ ನಿರ್ಮಿತ ಸಿನಿಮಾ ಇದಾಗಿದೆ. ಇದರಲ್ಲಿ 30-35 ಹಾಡುಗಳು ಇರಲಿವೆ ಎಂದು ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB vs SRH: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!

ಬೆಂಗಳೂರು, ಮಾರ್ಚ್ 21: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹಬ್ಬಕ್ಕೆ ಬೆಂಗಳೂರಿನ ಐತಿಹಾಸಿಕ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ. ಮಾರ್ಚ್ 28ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯವು ಚಿನ್ನಸ್ವಾಮಿಯಲ್ಲೇ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಹೆಚ್) ನಡುವೆ ಮೊದಲ ಪಂದ್ಯ ನಡೆಯಲಿದೆ.

ಹಿಂದೆ ಆರ್​ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತದ ಘಟನೆಗಳ ನಂತರ, ಫ್ರಾಂಚೈಸಿಯು ಪ್ರೇಕ್ಷಕರ ಸುರಕ್ಷತೆಗಾಗಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕ್ರೀಡಾಂಗಣವು 35,000 ಜನರ ಸಾಮರ್ಥ್ಯ ಹೊಂದಿದ್ದರೂ, 28,000 ಪ್ರೇಕ್ಷಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಟಿಕೆಟ್ ಮಾರಾಟವು ಬಹುತೇಕ ಆನ್ಲೈನ್ ಮೂಲಕ ನಡೆಯಲಿದ್ದು, ಶೀಘ್ರದಲ್ಲೇ ಮಾರಾಟದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ

ಬಾಲಿವುಡ್​ ಸಿನಿಮಾ ‘ಧುರಂಧರ್ 2’ (Dhurandhar 2) ಸೂಪರ್ ಹಿಟ್ ಆಗಿದೆ. ರಣವೀರ್ ಸಿಂಗ್ ನಟನೆಯ ಈ ಚಿತ್ರ ಗಮನ ಸೆಳೆಯುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಣವೀರ್ ವೃತ್ತಿ ಜೀವನದ ಅತ್ಯಂತ ದೊಡ್ಡ ಯಶಸ್ಸು ಇದು. ಆದಾಗ್ಯೂ ಅವರ ಪತ್ನಿ ದೀಪಿಕಾ ಪಡುಕೋಣೆ ಅವರು ಈ ಬಗ್ಗೆ ಯಾವುದೇ ಪೋಸ್ಟ್ ಮಾಡಿಲ್ಲ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಯಿತು. ಈದ್ ಪ್ರಯುಕ್ತ ಈ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಭರ್ಜರಿ ಸಕಸ್ಸ್​ ಕಂಡಿದೆ. ಸಿನಿಮಾ ಎರಡನೇ ದಿನಕ್ಕೆ ಭಾರತದಲ್ಲಿ 269 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ನೋಡಿದವರೆಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಸಿನಿಮಾ ಇಷ್ಟ ಆಗಿದೆ.

ಆದರೆ, ದೀಪಿಕಾ ಪಡುಕೋಣೆ ಮಾತ್ರ ಈ ವಿಷಯದಲ್ಲಿ ಇನ್ನೂ ಮೌನವಾಗಿದ್ದಾರೆ. ಈ ಬಗ್ಗೆ ರಣವೀರ್ ಸಿಂಗ್ ಅವರ ಪತ್ನಿ ದೀಪಿಕಾ ಏಕೆ ಮೌನವಾಗಿದ್ದಾರೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ಈ ಬಗ್ಗೆ ಅವರು ಯಾವುದೇ ಪೋಸ್ಟ್ ಹಾಕಿಲ್ಲ. ಅವರು ಪ್ರೀಮಿಯರ್ ಶೋಗಳಲ್ಲೂ ಕಾಣಿಸಿಕೊಂಡಿಲ್ಲ. ಇದು ಏಕೆ ಎಂಬ ಚರ್ಚೆ ನಡೆಯುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ದೀಪಿಕಾ ಪಡುಕೋಣೆ ಅವರು ಎಡಪಂಥೀಯ ಆಲೋಚನೆಗಳಿಂದ ಪ್ರಭಾವಿತರಾದವರು ಎಂದು ಹೇಳಲಾಗುತ್ತಾ ಇದೆ. ‘ಧುರಂಧರ್ 2’ ಸಿನಿಮಾ ಬಲ ಪಂಥೀಯ ಚಿಂತನೆಗಳನ್ನು ಹೊಂದಿದೆ. ಈ ಕಾರಣದಿಂದ ದೀಪಿಕಾ ಪಡುಕೋಣೆ ಅವರು ಮೌನ ತಾಳಿರಬಹುದು ಎಂಬ ಚರ್ಚೆ ನಡೆದಿದೆ.

ಇದನ್ನೂ ಓದಿ: ಆ ಒಂದು ವಿಷಯದ ಬಗ್ಗೆ ಕಂಪ್ಲೇಂಟ್ ಮಾಡಿದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಅವರು ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಅವರು ಸಿನಿಮಾ ನೋಡೋದು ವಿಳಂಬ ಮಾಡುತ್ತಿರಬಹುದು ಎಂದು ಹೇಳಲಾಗುತ್ತಾ ಇದೆ. ಈ ಕಾರಣದಿಂದ ಅವರು ಈ ಬಗ್ಗೆ ಮೌನ ತಾಳಿರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆರೋಗ್ಯ ಕ್ಷೇತ್ರಕ್ಕೂ ತಟ್ಟಿದ ಯುದ್ಧದ ಬಿಸಿ; ಸಿಲಿಂಡರ್ ಇಲ್ಲದೆ ರೋಗಿಗಳಿಗೂ ಪ್ರಾಬ್ಲಮ್!

ಗದಗ, ಮಾರ್ಚ್​ 21: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ದೇಶದಾದ್ಯಂತ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಅದರ ಬಿಸಿ ಇದೀಗ ಗದಗ (Gadag) ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೂ ತಟ್ಟಿದೆ. ಗದಗದ ಸರ್ಕಾರಿ ಆಯುಷ್ಯ ಆಸ್ಪತ್ರೆಯಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿ ಎದುರಾಗಿದ್ದು, ಚಿಕಿತ್ಸೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ.

ತಾತ್ಕಾಲಿಕವಾಗಿ 5ಕೆಜಿ ಸಿಲಿಂಡರ್ ಬಳಕೆ

ಪಂಚಕರ್ಮ ಚಿಕಿತ್ಸೆಗೆ ಗ್ಯಾಸ್ ಸಿಲಿಂಡರ್ ಅತ್ಯಾವಶ್ಯಕವಾಗಿದ್ದು, ಮಸಾಜ್ ಎಣ್ಣೆ ಬಿಸಿ ಮಾಡಲು ಹಾಗೂ ಸ್ಟೀಮ್ ಚಿಕಿತ್ಸೆ ನೀಡಲು ಗ್ಯಾಸ್ ಅವಶ್ಯಕವಾಗಿದೆ. ಆದರೆ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಲಭ್ಯವಿಲ್ಲದ ಕಾರಣ ಆಸ್ಪತ್ರೆ ಆಡಳಿತವು ಇದೀಗ 5 ಕೆಜಿ ಸಿಲಿಂಡರ್‌ಗಳನ್ನು ಬಳಸಿಕೊಂಡು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪುರಾತತ್ವ ತಜ್ಞರು

ಎಲೆಕ್ಟ್ರಾನಿಕ್ ಸಾಧನ ಬಳಸುವಂತೆ ಯೋಜನೆ

ಆಸ್ಪತ್ರೆಗೆ ಪ್ರತಿದಿನ 10 ರಿಂದ 20 ರೋಗಿಗಳು ದಾಖಲಾಗುತ್ತಿದ್ದು, ಪಾರ್ಶ್ವವಾಯು, ಮಂಡಿ ಹಾಗೂ ಬೆನ್ನುನೋವು ಸೇರಿದಂತೆ ಹಲವು ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸಿಲಿಂಡರ್ ಕೊರತೆಯಿಂದ ರೋಗಿಗಳಿಗೆ ನೀಡುವ ಸ್ಟೀಮ್ ಚಿಕಿತ್ಸೆ ಹಾಗೂ ಆಹಾರ ವ್ಯವಸ್ಥೆಯಲ್ಲೂ ತೊಂದರೆ ಉಂಟಾಗಿದೆ. ಸಮಸ್ಯೆ ನಿವಾರಣೆಗೆ ಪರ್ಯಾಯವಾಗಿ ಎಲೆಕ್ಟ್ರಾನಿಕ್ ಒಲೆಗಳು ಹಾಗೂ ಕುಕ್ಕರ್ ಬಳಕೆಗೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಯಾವುದೇ ವ್ಯತ್ಯಯ ಉಂಟಾಗದಂತೆ ಚಿಕಿತ್ಸೆ ಮುಂದುವರಿಸುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆರ್​ಸಿಬಿ ಟೀಮ್​ಮೇಟ್ಸ್​ಗೆ ವಿರಾಟ್ ಬಿಗ್ ವಾರ್ನಿಂಗ್: ಈ ಬಾರಿ ಸುಲಭವಿಲ್ಲ ಎಂದ ಕಿಂಗ್ ಕೊಹ್ಲಿ!

Source link

Vastu Tips: ಮನೆಯೊಳಗೆ ಬಟ್ಟೆ ಒಣಗಿಸುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ!

ಹಿಂದಿನಿಂದಲೂ ವಾಸ್ತು ಶಾಸ್ತ್ರಕ್ಕೆ ಬಹಳ ವಿಶೇಷವಾದ ಮಹತ್ವವಿದೆ. ಮನೆಯ ದಿಕ್ಕು, ವಸ್ತುಗಳ ಜೋಡಣೆ ಮಾತ್ರವಲ್ಲದೆ, ನಾವು ಬಟ್ಟೆ ಒಣಗಿಸುವ ರೀತಿ ನೀತಿಗಳೂ ಕೂಡ ನಮ್ಮ ಅದೃಷ್ಟ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರುತ್ತವೆ ಎನ್ನುತ್ತಾರೆ ತಜ್ಞರು. ಮನೆಯೊಳಗೆ ಬಟ್ಟೆ ಒಣಗಿಸುವುದರಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ವಾಸ್ತು ಶಾಸ್ತ್ರ ಮತ್ತು ನಕಾರಾತ್ಮಕ ಶಕ್ತಿ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಒದ್ದೆಯಾದ ಬಟ್ಟೆಗಳನ್ನು ಒಣಗಿಸುವುದು ಶುಭವಲ್ಲ. ಒದ್ದೆ ಬಟ್ಟೆಗಳು ಮನೆಯಲ್ಲಿ ತೇವಾಂಶವನ್ನು ಹೆಚ್ಚಿಸುತ್ತವೆ. ಈ ತೇವಾಂಶವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative Energy) ಆಕರ್ಷಿಸುತ್ತದೆ. ಮನೆಯ ವಾತಾವರಣವು ಯಾವಾಗಲೂ ಪ್ರಫುಲ್ಲವಾಗಿರಬೇಕು. ಸದಾ ಒದ್ದೆ ಬಟ್ಟೆಗಳ ವಾಸನೆ ಮತ್ತು ತೇವಾಂಶವಿದ್ದರೆ ಅದು ಮನೆಯವರ ಪ್ರಗತಿಗೆ ಅಡ್ಡಿಯಾಗಬಹುದು. ಇದಲ್ಲದೇ ಮನೆಯ ಆರ್ಥಿಕ ಸುಭಿಕ್ಷೆಗೂ ಮತ್ತು ಬಟ್ಟೆ ಒಣಗಿಸುವ ಜಾಗಕ್ಕೂ ನೇರ ಸಂಬಂಧವಿದೆ ಎಂದು ನಂಬಲಾಗಿದೆ.

ಶಾಸ್ತ್ರಗಳ ಪ್ರಕಾರ, ಮಹಾಲಕ್ಷ್ಮಿಯು ಸ್ವಚ್ಛ ಹಾಗೂ ಒಣಗಿದ (ಶುಚಿಯಾದ) ಪರಿಸರದಲ್ಲಿ ನೆಲೆಸುತ್ತಾಳೆ. ಸದಾ ತೇವಾಂಶವಿರುವ ಮತ್ತು ಗಬ್ಬು ವಾಸನೆಯಿರುವ ಜಾಗದಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.ಮನೆಯೊಳಗೆ ಬಟ್ಟೆ ಒಣಗಿಸುವುದರಿಂದ ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇರುತ್ತದೆ ಮತ್ತು ಅನಗತ್ಯ ಖರ್ಚುಗಳು ಹೆಚ್ಚಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಇದು ಕೇವಲ ನಂಬಿಕೆಯಲ್ಲ, ವೈಜ್ಞಾನಿಕವಾಗಿಯೂ ಮನೆಯೊಳಗೆ ಬಟ್ಟೆ ಒಣಗಿಸುವುದು ಅಪಾಯಕಾರಿ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ವೈಜ್ಞಾನಿಕ ಕಾರಣ:

ಒದ್ದೆ ಬಟ್ಟೆಗಳಿಂದ ಗಾಳಿಯಲ್ಲಿ ತೇವಾಂಶ ಹೆಚ್ಚಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ವೇಗವಾಗಿ ಬೆಳೆಯುತ್ತವೆ. ಇದರಿಂದ ಮನೆಯಲ್ಲಿರುವವರಿಗೆ ಆಸ್ತಮಾ, ಅಲರ್ಜಿ ಮತ್ತು ವಿವಿಧ ಉಸಿರಾಟದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಸರಿಯಾಗಿ ಗಾಳಿ-ಬೆಳಕು ಇಲ್ಲದ ಕಡೆ ಬಟ್ಟೆ ಒಣಗಿಸಿದರೆ ಬಟ್ಟೆಗಳು ಕೆಟ್ಟ ವಾಸನೆ ಬೀರುತ್ತವೆ, ಇದು ಮಾನಸಿಕ ನೆಮ್ಮದಿಯನ್ನೂ ಕೆಡಿಸುತ್ತದೆ.

ಬಟ್ಟೆಗಳನ್ನು ಯಾವಾಗಲೂ ಮನೆಯ ಹೊರಗೆ, ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಒಣಗಿಸಿ. ಸೂರ್ಯನ ಕಿರಣಗಳು ಬಟ್ಟೆಯಲ್ಲಿರುವ ಕ್ರಿಮಿಗಳನ್ನು ನಾಶಪಡಿಸುತ್ತವೆ.ಅನಿವಾರ್ಯ ಸಂದರ್ಭದಲ್ಲಿ (ಮಳೆಗಾಲದಲ್ಲಿ) ಮನೆಯೊಳಗೆ ಒಣಗಿಸಬೇಕಾಗಿ ಬಂದರೆ, ಸರಿಯಾದ ಗಾಳಿ ಸಂಚಾರವಿರುವ (Ventilation) ಪ್ರತ್ಯೇಕ ಕೊಠಡಿಯನ್ನು ಬಳಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಇದು ಲವ್ ಜಿಹಾದ್’; ಮೊನಾಲಿಸಾ ನಟನೆಯ ಸಿನಿಮಾ ನಿರ್ದೇಶಕನ ಗಂಭೀರ ಆರೋಪ

ಪ್ರಯಾಗ್ರಾಜ್ ಕುಂಭಮೇಳದಿಂದ ರಾತ್ರೋರಾತ್ರಿ ಖ್ಯಾತಿ ಪಡೆದ ಮೊನಾಲಿಸಾ ಭೋಸ್ಲೆ (Monalisa Bhosle) ಈಗ ತಮ್ಮ ಖಾಸಗಿ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಎಲ್ಲರ ಇಚ್ಛೆಗೆ ವಿರುದ್ಧವಾಗಿ ಮೊನಾಲಿಸಾ, ಪೊಲೀಸ್ ರಕ್ಷಣೆಯಲ್ಲಿ ತನ್ನ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಅವರನ್ನು ವಿವಾಹವಾದರು. ಇದರಿಂದಾಗಿ ಮೊನಾಲಿಸಾ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಒಂದೆಡೆ, ಮೊನಾಲಿಸಾ ಅವರ ಕುಟುಂಬವು ಮದುವೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಮಧ್ಯೆ, ಮೊನಾಲಿಸಾ ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ನಿರ್ದೇಶಕ ಸನೋಜ್ ಮಿಶ್ರಾ ಅವರ ಹೇಳಿಕೆ ಬೆಳಕಿಗೆ ಬಂದಿದ್ದು, ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನಿರ್ದೇಶಕ ಸನೋಜ್ ಮಿಶ್ರಾ ಅವರು ಮೊನಾಲಿಸಾ ಮತ್ತು ಫರ್ಮಾನ್ ಅವರ ವಿವಾಹದ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ ಮತ್ತು ಮೊನಾಲಿಸಾ ಮತ್ತು ಫರ್ಮಾನ್ ಅವರ ವಿವಾಹವನ್ನು ‘ಲವ್ ಜಿಹಾದ್’ ಎಂದು ಹೆಸರಿಸಿದ್ದಾರೆ. ಈ ವಿಷಯವು ಇನ್ನು ಮುಂದೆ ಮದುವೆಗೆ ಸೀಮಿತವಾಗಿಲ್ಲ. ಇದರ ಹಿಂದೆ ದೊಡ್ಡ ಜಾಲದ ಪಿತೂರಿ ಇರಬಹುದು ಎಂದಿದ್ದಾರೆ.

‘ದೆಹಲಿ ಮತ್ತು ಮಧ್ಯಪ್ರದೇಶದಿಂದ ಹುಡುಗಿಯರು ಕಣ್ಮರೆಯಾಗುವ ಸುದ್ದಿಗಳು ಬರುತ್ತಲೇ ಇರುತ್ತವೆ. ಇದನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು. ಸಂಪೂರ್ಣವಾಗಿ ತನಿಖೆ ಮಾಡಿದರೆ, ಕೇರಳ ಸರ್ಕಾರ ಇದರಲ್ಲಿ ಪ್ರಮುಖ ಪಾತ್ರ ವಹಿಸಿರಬೇಕು. ಸನಾತನ ಧರ್ಮವನ್ನು ಕೆಣಕುವಲ್ಲಿ ಕೇರಳ ಸರ್ಕಾರ ಯಾವಾಗಲೂ ಮುಂಚೂಣಿಯಲ್ಲಿದೆ. ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಫರ್ಮಾನ್ ಖಾನ್ ಶಾರ್ಜೀಲ್ ಇಮಾಮ್ ಅವರೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದರು’ ಎಂದಿದ್ದಾರೆ ಸನೋಜ್.

‘ಫರ್ಮಾನ್ ಒಬ್ಬ ನಟನಲ್ಲ. ಅವರ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ’ ಎಂದು ಸನೋಜ್ ಹೇಳಿದ್ದಾರೆ. ಈ ವಿಷಯವನ್ನು ತನಿಖೆ ಮಾಡುವಂತೆ ಸನೋಜ್ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ, ಏಕೆಂದರೆ ಇದು ಭಾರತದ ಪ್ರತಿಯೊಬ್ಬ ಹುಡುಗಿಯ ಸುರಕ್ಷತೆಯ ವಿಷಯವಾಗಿದೆ.’ ಪ್ರಸ್ತುತ, ಸನೋಜ್ ಮಾಡಿದ ಹೇಳಿಕೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಮೊನಾಲಿಸಾ ಭೋಸ್ಲೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗ್ತಾರಾ? ಪತಿ ಫರ್ಮಾನ್ ಖಾನ್ ಸ್ಪಷ್ಟನೆ

ಮೊನಾಲಿಸಾ ಮತ್ತು ಫರ್ಮಾನ್ ಅವರ ವಿವಾಹವು ಈಗಾಗಲೇ ಕುಟುಂಬ ಮತ್ತು ಸಮಾಜದಲ್ಲಿ ವಿವಾದದ ವಿಷಯವಾಗಿದೆ. ಭಾರತವು ಈ ಹಿಂದೆಯೂ ಇಂತಹ ವಿಷಯಗಳಲ್ಲಿ ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version