Headlines

ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ: ಯಶ್ ಸಿನಿಮಾದ ತೆರೆಹಿಂದೆ 10 ಸಾವಿರಕ್ಕೂ ಹೆಚ್ಚು ತಂತ್ರಜ್ಞರು – Kannada News | Yash starrer Ramayana is first Indian movie to have 10000 crew members

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಚಿತ್ರವಾಗಿ ‘ರಾಮಾಯಣ’ (Ramayana) ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ನಟ ಯಶ್ (Yash) ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ. ಬೃಹತ್ ಬಜೆಟ್‌ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾವನ್ನು ಭಾರಿ ದೊಡ್ಡ ಮಟ್ಟದಲ್ಲಿ ಸಿದ್ಧಪಡಿಸುತ್ತಿದ್ದಾರೆ. ಅತಿ ಹೆಚ್ಚು ತಂತ್ರಜ್ಞರು ಕೆಲಸ ಮಾಡಿದ ಭಾರತೀಯ ಸಿನಿಮಾ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗುತ್ತಿದೆ….

Read More

ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಸಾಧನಾ ಸಮಾವೇಶದಲ್ಲಿ ಪ್ರಮಾಣಪತ್ರ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ – Kannada News | Tumakuru Creates Guinness Record by Uploading 21,529 Land Titles; CM Siddaramaiah Receives Certificate

ತುಮಕೂರು, ಮೇ 19: ತುಮಕೂರು ಜಿಲ್ಲೆಯು 21,529 ಹಕ್ಕುಪತ್ರಗಳನ್ನು ಯಶಸ್ವಿಯಾಗಿ ಅಪ್‌ಲೋಡ್ ಮಾಡುವ ಮೂಲಕ ಗಿನ್ನಿಸ್​ ವಿಶ್ವ ದಾಖಲೆಯಲ್ಲಿ ನೋಂದಾಯಿತವಾಗಿದೆ. ಈ ಅಸಾಮಾನ್ಯ ಸಾಧನೆಗಾಗಿ ಗಿನ್ನಿಸ್​ ವರ್ಲ್ಡ್​ ರೆಕಾರ್ಡ್ಸ್‌ನ ಪ್ರತಿನಿಧಿಗಳಾದ ಮಿಸ್ಟರ್ ಸ್ವಪ್ನಿಲ್ ಡಂಗರಿಕರ್ ಮತ್ತು ಶ್ರೀಮತಿ ಶೈಲಜಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಮಾಣಪತ್ರವನ್ನು ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಹಸ್ತಾಂತರಿಸಿದರು. ನಂತರ, ಮುಖ್ಯಮಂತ್ರಿಗಳು ಈ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ ಅವರಿಗೆ ಹಸ್ತಾಂತರಿಸಿದರು. ಕಂದಾಯ ಗ್ರಾಮಗಳ ಗುರುತಿಸುವಿಕೆ, ಹಕ್ಕುಪತ್ರಗಳ ಸಿದ್ಧತೆ ಮತ್ತು ಇ-ಸ್ವತ್ತು…

Read More

ಇದು ಮಾನ್ಯತಾ ಟೆಕ್ ಪಾರ್ಕ್ ಅಲ್ಲ, ಮಾನ್ಯತಾ ವಾಟರ್ ಪಾರ್ಕ್! ಮಳೆಯಿಂದ ಹೊಳೆಯಂತಾದ ರಸ್ತೆಯ ವಿಡಿಯೋ ವೈರಲ್ – Kannada News | Manyata Water Park? Netizens Troll Bengaluru’s Premium Tech Hub After Heavy Rains Flood Infrastructure, Viral Video

ಮಳೆಯಿಂದ ಹೊಳೆಯಂತಾದ ಮಾನ್ಯತಾ ಟೆಕ್ ಪಾರ್ಕ್ ರಸ್ತೆImage Credit source: @karnatakaportf ಬೆಂಗಳೂರು, ಮೇ 19: ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿಯಾಗಿರುವ ಬೆಂಗಳೂರಿನ (Bengaluru) ಜಾಗತಿಕ ಐಟಿ ಇಮೇಜ್‌ಗೆ ಸೋಮವಾರ ಸಂಜೆ ಸುರಿದ ಭಾರಿ ಮಳೆ ಮತ್ತೊಮ್ಮೆ ಮಸಿ ಬಳಿದಿದೆ. ದೇಶದ ಅತ್ಯಂತ ದೊಡ್ಡ ಹಾಗೂ ಪ್ರತಿಷ್ಠಿತ ಟೆಕ್ ಪಾರ್ಕ್‌ಗಳಲ್ಲಿ ಒಂದಾದ ಹೆಣ್ಣೂರು ರಸ್ತೆಯ ‘ಮಾನ್ಯತಾ ಟೆಕ್ ಪಾರ್ಕ್’ ಏರಿಯಾವು ಕೇವಲ ಒಂದು ಸಂಜೆಯ ಮಳೆಗೆ ಸಂಪೂರ್ಣ ಜಲಾವೃತಗೊಂಡಿದೆ. ಕಚೇರಿ ಮುಗಿಸಿ ಮನೆಗೆ ಹೊರಟ ಸಾವಿರಾರು…

Read More

Congress Sadhana Samavesha Live: ತುಮಕೂರಿನಲ್ಲಿ ಸರ್ಕಾರದಿಂದ ಸಾಧನಾ ಸಮಾವೇಶ ನೇರಪ್ರಸಾರ – Kannada News | Karnataka Congress Govt’s 3rd Year Sadhana Samavesha Today in Tumakuru

ತುಮಕೂರು, ಮೇ 19: ಇಂದು ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ 3ನೇ ವರ್ಷದ ಭವ್ಯ ಸಾಧನಾ ಸಮಾವೇಶ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಲಿದೆ. ಈ ಮಹಾವೇದಿಕೆಯಲ್ಲಿ ಜಿಲ್ಲೆಯ 1.52 ಲಕ್ಷ ಫಲಾನುಭವಿಗಳಿಗೆ ಇ-ಖಾತಾ, ಹಕ್ಕುಪತ್ರ ಹಾಗೂ ನಿವೇಶನ ಪತ್ರಗಳು ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಗುತ್ತಿದೆ. ಜೊತೆಗೆ, 600 ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರ ಹಾಗೂ 687…

Read More

‘ನನ್ನ ಜಾತಿ ಯಾವುದೆಂದು ಗೊತ್ತೇ’; ಸಚಿವ ಗಡ್ಕರಿಗೆ ನಟ ನಾನಾ ಪಾಟೇಕರ್ ನೇರ ಪ್ರಶ್ನೆ – Kannada News | Nana Patekar Slams Caste Politics: Humanity is Your Only Religion at Jalakranti

ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ (Nana Patekar) ತಮ್ಮ ನೇರ ನಡೆ-ನುಡಿಗೆ ಹೆಸರುವಾಸಿ. ಇತ್ತೀಚೆಗೆ ನಾಗ್ಪುರದ ರೇಷ್ಮಿಬಾಗ್‌ನಲ್ಲಿ ನಡೆದ ‘ಜಲಕ್ರಾಂತಿ’ ಸಮಾವೇಶದಲ್ಲಿ ಅವರು ಸಮಾಜದಲ್ಲಿ ಹೆಚ್ಚುತ್ತಿರುವ ಜಾತಿ ಮತ್ತು ಧರ್ಮದ ರಾಜಕಾರಣದ ವಿರುದ್ಧ ತೀವ್ರವಾಗಿ ಗುಡುಗಿದ್ದಾರೆ. ವೇದಿಕೆಯ ಮೇಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ, ‘ಗಡ್ಕರಿ ಸಾಹೇಬರೇ, ನನ್ನ ಜಾತಿ ಯಾವುದು ಎಂದು ನಿಮಗೆ ಗೊತ್ತೇ?’ ಎಂದು ನೇರವಾಗಿ ಪ್ರಶ್ನಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನಾನಾ ಪಾಟೇಕರ್,…

Read More

ಮನೆ ಬಾಗಿಲಲ್ಲೇ ಮಲಗಿತ್ತು 10 ಅಡಿ ಕಾಳಿಂಗ ಸರ್ಪ! – Kannada News | 10 Foot King Cobra Found Sleeping Outside House Door in Mudigere

ಚಿಕ್ಕಮಗಳೂರು, ಮೇ 19: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆ. ತಲಗೂರು ಗ್ರಾಮದಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ. ಗ್ರಾಮದ ಮಂಜುನಾಥ್ ಆಚಾರ್ ಎಂಬುವವರ ಮನೆ ಬಾಗಿಲಿಗೆ ತಂಪಾದ ನೆರಳು ಹುಡುಕಿಕೊಂಡು ಬಂದ ಈ ಹಾವು, ಹೊಸ್ತಿಲಲ್ಲೇ ತಣ್ಣಗೆ ಮಲಗಿತ್ತು. ಮುಂಜಾನೆ ಇದನ್ನು ಕಂಡ ಮನೆಯವರು ಭಯಭೀತರಾಗಿದ್ದಾರೆ. ಸುಮಾರು 10 ಅಡಿ ಉದ್ದವಿದ್ದ ಈ ಬೃಹತ್ ಕಾಳಿಂಗ ಸರ್ಪವನ್ನು ಕಂಡು ಗ್ರಾಮಸ್ಥರು ತಕ್ಷಣವೇ ಉರಗ ತಜ್ಞ ಸ್ನೇಕ್ ಆರೀಫ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ…

Read More

ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವ; ಹೇಗಿತ್ತು ನೋಡಿ ಮದುವೆ ಆಮಂತ್ರಣ ಪತ್ರ – Kannada News | Darshan Vijayalakshmi 23rd Anniversary: Wedding Invitation Photo goes viral

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಹಾಗೂ ವಿಜಯಲಕ್ಷ್ಮೀ ದಂಪತಿ ಇಂದು (ಮೇ 19) ತಮ್ಮ 23ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಲ್ಲಿ ಪತಿಯ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದರ ನಡುವೆ, ಇವರ ಮದುವೆಯ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳು ಭಾವನಾತ್ಮಕವಾಗಿ ಕಮೆಂಟ್ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಜೈಲು ವಾಸದ…

Read More

ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್​ಗಳು; ಯಾಕಿದು ಪ್ರತಿಭಟನೆ? – Kannada News | Chemists and Druggists nation wide strike on May 20th, to protest against online pharmacies

ನವದೆಹಲಿ, ಮೇ 19: ಆನ್‌ಲೈನ್ ಔಷಧ ಮಾರಾಟ ವೇದಿಕೆಗಳು (e-pharmacies) ಮತ್ತು ಇ-ಕಾಮರ್ಸ್ ಸಂಸ್ಥೆಗಳ ಅನಿಯಂತ್ರಿತ ವ್ಯವಹಾರವನ್ನು ಪ್ರತಿಭಟಿಸಿ, ಮೇ 20ರಂದು ದೇಶಾದ್ಯಂತ ಔಷಧ ವ್ಯಾಪಾರಿಗಳು (Chemists) ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗಿಸ್ಟ್ಸ್ (AIOCD) ಎನ್ನುವ ಸಂಘಟನೆಯ ನೇತೃತ್ವದಲ್ಲಿ ಈ ಬಂದ್ ನಡೆಯುತ್ತಿದ್ದು, ದೇಶದ ಸುಮಾರು 12 ರಿಂದ 15 ಲಕ್ಷ ಔಷಧ ವ್ಯಾಪಾರಿಗಳು ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಈ ಸುದ್ದಿಯ ಮುಖ್ಯಾಂಶಗಳು ಆನ್ಲೈನ್ ಪ್ಲಾಟ್​ಫಾರ್ಮ್​ಗಳಿಂದ…

Read More

‘ಆಖ್ರಿ ಸವಾಲ್’ ವೀಕ್ಷಕರಿಗೆ ಭರ್ಜರಿ ಆಫರ್: ಒಂದು ಟಿಕೆಟ್ ಕೊಂಡರೆ ಮತ್ತೊಂದು ಉಚಿತ – Kannada News | Sanjay Dutt starrer Aakhri Sawal Movie makers announce Buy 1 Get 1 Free Ticket offer

ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಬಾಲಿವುಡ್‌ನ ಬಹುಚರ್ಚಿತ ‘ಆಖ್ರಿ ಸವಾಲ್’ (Aakhri Sawal) ಚಿತ್ರದ ನಿರ್ಮಾಪಕರು ಪ್ರೇಕ್ಷಕರಿಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ಸಿನಿಮಾಪ್ರೇಮಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ಸೆಳೆಯುವ ಉದ್ದೇಶದಿಂದ ಚಿತ್ರದ ನಿರ್ಮಾಪಕ ನಿಖಿಲ್ ನಂದಾ ಅವರು ‘ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಉಚಿತ’ (Buy 1 Get 1 Free) ಎಂಬ ವಿಶೇಷ ಪ್ರಚಾರದ ಆಫರ್ ಪರಿಚಯಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಪ್ರೇಕ್ಷಕರು ಟಿಕೆಟ್ ಬುಕ್ ಮಾಡುವಾಗ AAKHRISAWAL…

Read More

ಕಿರುಕುಳ ಕೊಟ್ಟು ಯುವತಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿ, ಹೆಣಕ್ಕೆ ತಾಳಿ ಕಟ್ಟಿದ ವ್ಯಕ್ತಿ – Kannada News | Jharkhand: Fiance Marries Deceased Bride Amid Ongoing Questions Around Her Death

ಗಿರಿದಿಹ್ , ಮೇ 19: ತನ್ನ ಕಿರುಕುಳಕ್ಕೆ ಬಲಿಯಾಗಿ ಹೆಣವಾಗಿ ಮಲಗಿದ್ದ ಯುವತಿ ಕತ್ತಿಗೆ ವ್ಯಕ್ತಿಯೊಬ್ಬ ತಾಳಿ ಕಟ್ಟಿರುವ ಘಟನೆ ಜಾರ್ಖಂಡ್​ನ ಗಿರಿದಿಹ್​ನಲ್ಲಿ ನಡೆದಿದೆ. ಆಕೆಯನ್ನು ಆತ್ಮಹತ್ಯೆ(Suicide)ಗೆ ತಳ್ಳಿದ ಆರೋಪಿ ಯುವಕನೇ ಪೊಲೀಸರ ಸಮ್ಮುಖದಲ್ಲಿ ಮದುವೆಯಾಗಿರುವ ವಿಲಕ್ಷಣ ಪ್ರಸಂಗ ನಡೆದಿದೆ. ಮೃತರ ಹಣೆಗೆ ಸಿಂಧೂರ ಹಚ್ಚಿ, ಸಾಂಕೇತಿಕವಾಗಿ ವಿವಾಹ ವಿಧಿವಿಧಾನಗಳನ್ನು ಮುಗಿಸಿದ ನಂತರವೇ ಆಕೆಯ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿ ಯುವಕ ಮನೀಶ್ ಮುರ್ಮು ಮತ್ತು ಮೃತ ಯುವತಿಗೆ ಸುಮಾರು ನಾಲ್ಕು ತಿಂಗಳ…

Read More