ನಾಳೆ ಸಾರಿಗೆ ಬಸ್ ಮಾತ್ರವಲ್ಲ, ಔಷಧಗಳು ಸಿಗೋದೂ ಡೌಟ್! ಕರ್ನಾಟಕದಲ್ಲೂ ಮೆಡಿಕಲ್ ಶಾಪ್ ಬಂದ್ – Kannada News | Nationwide Medical Shop Strike on May 20: Pharmacies in Karnataka to Shut Down Over Online Medicine Sales

ಬೆಂಗಳೂರು, ಮೇ 19: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ನಾಳೆ (ಮೇ 20) ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿರುವ ಬೆನ್ನಲ್ಲೇ, ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಆಘಾತ ಕಾದಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ದೇಶವ್ಯಾಪಿ ಖಾಸಗಿ ಔಷಧ ಮಳಿಗೆಗಳ (Medical Shop Bandh) ಬಂದ್‌ಗೆ ಕರೆ ನೀಡಲಾಗಿದ್ದು, ಕರ್ನಾಟಕದಲ್ಲೂ ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಇದರಿಂದಾಗಿ ನಾಳೆ ಬಸ್ ಸೌಲಭ್ಯ ಮಾತ್ರವಲ್ಲದೆ, ತುರ್ತು ಸಂದರ್ಭಗಳಲ್ಲಿ ಔಷಧಗಳು ಸಿಗುವುದೂ ಸಹ ದುಸ್ತರವಾಗುವ ಲಕ್ಷಣಗಳು ಕಾಣುತ್ತಿವೆ.

ಮುಖ್ಯಾಂಶಗಳು

  • ಇ-ಫಾರ್ಮಸಿ, ಭಾರಿ ರಿಯಾಯಿತಿ ವಿರೋಧಿಸಿ ನಾಳೆ ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್‌.
  • ರಾಜ್ಯದಲ್ಲಿ ಕೆಸಿಡಿಎ ಸಂಘಟನೆ ಬಂದ್‌ಗೆ ನೇರ ಬೆಂಬಲ ಘೋಷಿಸಿದೆ.
  • ಕರ್ನಾಟಕ ಫಾರ್ಮಾ ರಿಟೇಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ (KPRDO) ಸೇರಿದಂತೆ ಹಲವು ಒಕ್ಕೂಟಗಳು ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿವೆ.

ಆನ್‌ಲೈನ್ ಔಷಧ ಮಾರಾಟಕ್ಕೆ ತೀವ್ರ ವಿರೋಧ

ಖಾಸಗಿ ಮೆಡಿಕಲ್ ಶಾಪ್ ಮಾಲೀಕರು ಹಾಗೂ ವಿತರಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ, ಯಾವುದೇ ಸೂಕ್ತ ಲಿಖಿತ ಪ್ರಿಸ್ಕ್ರಿಪ್ಷನ್ ಇಲ್ಲದೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಜಾರೋಷವಾಗಿ ನಿಯಮಬಾಹಿರವಾಗಿ ಔಷಧಗಳನ್ನು ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಹಾಗೂ ಸಣ್ಣ ವ್ಯಾಪಾರಿಗಳ ಬದುಕು ಬೀದಿಗೆ ಬರುತ್ತಿದೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಬುಧವಾರದಿಂದ ಸಿಗಲ್ಲ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್! ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್

ದೊಡ್ಡ ಕಾರ್ಪೊರೇಟ್ ಕಂಪನಿಗಳು ಭಾರಿ ರಿಯಾಯಿತಿ (ಡೀಪ್ ಡಿಸ್ಕೌಂಟ್) ನೀಡಿ ಗ್ರಾಹಕರನ್ನು ಸೆಳೆಯುತ್ತಿರುವುದರಿಂದ ಸಾಂಪ್ರದಾಯಿಕ ಮೆಡಿಕಲ್ ಶಾಪ್‌ಗಳು ನಷ್ಟ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಇಡೀ ದಿನ ಖಾಸಗಿ ಮೆಡಿಕಲ್ ಶಾಪ್‌ಗಳನ್ನು ಮುಚ್ಚಿ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಆಸ್ಪತ್ರೆ ಆವರಣದೊಳಗಿನ ಫಾರ್ಮಸಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದರೂ, ಜನಸಾಮಾನ್ಯರು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಇಂದೇ ಅಗತ್ಯ ಔಷಧಗಳನ್ನು ಖರೀದಿಸಿಟ್ಟುಕೊಳ್ಳುವುದು ಉತ್ತಮ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಟ ಸಲ್ಮಾನ್ ಖಾನ್ ಮನೆಯಲ್ಲಿ ಹಾವು ಪತ್ತೆ: ಸುರಕ್ಷಿತವಾಗಿ ಹಿಡಿದ ಸಿಬ್ಬಂದಿ – Kannada News | Snake rescued at Salman Khan Mumbai home Galaxy Apartment Photo Goes Viral

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಮುಂಬೈನ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ (Galaxy Apartment) ಆವರಣದಲ್ಲಿ ಸೋಮವಾರ (ಮೇ 18) ಹಾವೊಂದು ಪತ್ತೆಯಾಗಿದ್ದು, ಅದನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಅಪಾರ್ಟ್‌ಮೆಂಟ್‌ನ ನೆಲ ಅಂತಸ್ತಿನಲ್ಲಿ ಹಾವು (Snake) ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿಯು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಹಾವು ಹಿಡಿಯುವ ತಜ್ಞರು ಅತ್ಯಂತ ಜಾಣ್ಮೆಯಿಂದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ಸಲ್ಮಾನ್ ಖಾನ್ (Salman Khan) ಅವರಿಗೆ ಹಾವು ಕಚ್ಚಿದ್ದ ಘಟನೆಯನ್ನು ಫ್ಯಾನ್ಸ್ ಈಗ ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ, ರಕ್ಷಕನು ಹಾವಿನ ಬಾಲವನ್ನು ಹಿಡಿದು, ಅದನ್ನು ಹತೋಟಿಗೆ ತಂದು, ತದನಂತರ ಅತ್ಯಂತ ಜಾಗರೂಕತೆಯಿಂದ ತನ್ನ ಕೈಗೆ ಸುತ್ತಿಕೊಂಡು ಬ್ಯಾಗ್‌ನಲ್ಲಿ ತುಂಬಿಸುತ್ತಿರುವುದು ಕಂಡುಬಂದಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು ನೆರವಾಗಿದ್ದಾರೆ. ರಕ್ಷಕನು ಹಾವನ್ನು ಹ್ಯಾಂಡಲ್ ಮಾಡಿದ ವಿಧಾನವನ್ನು ನೋಡಿದರೆ, ಇದು ವಿಷಕಾರಿಯಲ್ಲದ ಹಾವು ಎಂದು ಅಂದಾಜಿಸಲಾಗಿದೆ.

ಮುಂಬೈನ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿ ನಿವಾಸಗಳಲ್ಲಿ ಒಂದಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿರುವುದರಿಂದ, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಾವು ಹಿಡಿಯುವ ಕಾರ್ಯಾಚರಣೆಯನ್ನು ನೋಡಲು ಅಪಾರ್ಟ್‌ಮೆಂಟ್ ಹೊರಗಡೆ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಅಭಿಮಾನಿಗಳು ಜಮಾಯಿಸಿದ್ದರು.

ವೈರಲ್ ವಿಡಿಯೋ:

ಈ ಹಿಂದೆ 2021ರಲ್ಲಿ, ಸಲ್ಮಾನ್ ಖಾನ್ ಅವರು ತಮ್ಮ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿದ್ದಾಗ ಹಾವಿನ ಕಡಿತಕ್ಕೆ ಒಳಗಾಗಿದ್ದರು. ಆ ಸಮಯದಲ್ಲಿ ಅವರಿಗೆ ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ಘಟನೆಯ ಬಗ್ಗೆ ಸಲ್ಮಾನ್ ಖಾನ್ ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ನನ್ನ ಫಾರ್ಮ್‌ಹೌಸ್‌ಗೆ ಹಾವೊಂದು ನುಗ್ಗಿತ್ತು, ನಾನು ಅದನ್ನು ಕೋಲಿನ ಸಹಾಯದಿಂದ ಹೊರಗೆ ಹಾಕಲು ಯತ್ನಿಸಿದೆ. ಆದರೆ ಅದು ನಿಧಾನವಾಗಿ ನನ್ನ ಕೈಗೆ ಹತ್ತಿತು. ನಾನು ಅದನ್ನು ಬಿಡುಗಡೆ ಮಾಡಲು ಹಿಡಿದಾಗ, ಅದು ನನಗೆ ಮೂರು ಬಾರಿ ಕಚ್ಚಿತು. ಅದು ಒಂದು ರೀತಿಯ ವಿಷಪೂರಿತ ಹಾವಾಗಿತ್ತು. ನಾನು 6 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಸದ್ಯ ನಾನು ಆರಾಮವಾಗಿದ್ದೇನೆ’ ಎಂದು ತಿಳಿಸಿದ್ದರು.

ಇದನ್ನೂ ಓದಿ: ‘ರಾಜ ಶಿವಾಜಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅಬ್ಬರ: ಜೀವಾ ಮಹಾಲಾ ಪಾತ್ರ ಕಂಡು ಫ್ಯಾನ್ಸ್ ಫಿದಾ

2023ರ ಸೂಪರ್ ಹಿಟ್ ಸಿನಿಮಾ ‘ಟೈಗರ್ 3’ ನಂತರ, ಸಲ್ಮಾನ್ ಖಾನ್ 2025ರಲ್ಲಿ ‘ಸಿಕಂದರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಎ.ಆರ್. ಮುರುಗದಾಸ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸನ್ನು ಸಾಧಿಸಲಿಲ್ಲ. ಈಗ ಸಲ್ಮಾನ್ ಖಾನ್ ಅವರು ನಿರ್ದೇಶಕ ಅಪೂರ್ವ ಲಖಿಯಾ ಅವರೊಂದಿಗೆ ‘ಮಾತೃಭೂಮಿ’ ಚಿತ್ರದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:29 am, Tue, 19 May 26

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಪ್ರಭಾವಿಗಳ ಜೊತೆ ಹೋರಾಟ ಮಾಡಬೇಕಾದೀತು – Kannada News | Horoscope May 19 Tuesday 2026; Dina Rashi Bhavishya Today, Checkout the details here

ಮೇಷ ರಾಶಿ:

ನೀವು ಅಪಾರ ಆತ್ಮವಿಶ್ವಾಸವನ್ನು ಪಡೆದಿದ್ದರೂ ಸರಿಯಾದ ಸಹಕಾರ ಸಿಗದೇ ಕಾರ್ಯವು ಅಪೂರ್ಣವಾಗುವುದು. ಮನೆಯಲ್ಲಿ ನಿಮ್ಮ ಶಕ್ತಿಯು ಸಮಸ್ಯೆಗಳನ್ನು ನಿವಾರಿಸುತ್ತದೆ. ಯಾರ ಮೇಲೋ ಅನುಮಾನಪಡುವುದಕ್ಕಿಂತ ಸರಿಯಾದ ಮಾಹಿತಿಯನ್ನು ಪಡೆದು ಮುಂದಡಿ ಇಡಿ. ಬಂಧುಗಳ ಆರೋಗ್ಯದ ಆರೈಕೆಯನ್ನು ನೀವು ಮಾಡಬೇಕಾದೀತು. ನಿಕಟವರ್ತಿಗಳ ಮಾತನ್ನು ನಗಣ್ಯ ಮಾಡುವಿರಿ. ಅವಾಚ್ಯ ಮಾತುಗಳಿಂದ ನಿಮ್ಮನ್ನು ಯಾರಾದರೂ ನಿಂದಿಸಬಹುದು.‌

ವೃಷಭ ರಾಶಿ:

ಯಾರಿಗೂ ಗೊತ್ತಾಗದಂತೆ ದಾನ ಮಾಡುವಿರಿ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಹಣಕಾಸಿನಲ್ಲಿ ಹೆಚ್ಚು ಎಚ್ಚರಿಕೆ ವಹಿಸಿ. ಸಂಬಂಧಿಕರಿಗೆ ಹಣ ಕೊಡುವುದನ್ನು ತಪ್ಪಿಸಬೇಕು. ವೈವಾಹಿಕ ಜೀವನದಲ್ಲಿ ಇಂದು ವಿಭಿನ್ನ ಅನುಭವ ನಿಮಗೆ ಎದುರಾಗಬಹುದು. ನಿಮ್ಮ ಜೊತೆಗಿರುವವರೇ ನಿಮ್ಮ ವಸ್ತುವನ್ನು ಅಪಹರಿಸುವರು. ಪ್ರೇಮವು ನಿಮಗೆ ಹಾಯೆನಿಸುವುದು. ವೃತ್ತಿಯ ಏಕತಾನತೆಯಿಂದ ಹೊರಬರಲು ಬಯಸುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು.

ಮಿಥುನ ರಾಶಿ :

ಸರಳತೆಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ವ್ಯಕ್ತಿತ್ವದಿಂದ ನೀವು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತೀರಿ. ಕೌಟುಂಬಿಕ ಕಲಹಗಳನ್ನು ಬಗೆಹರಿಸಿಕೊಳ್ಳಲು ಇದು ಸೂಕ್ತ ಸಮಯ. ಹಿರಿಯರ ಆಶೀರ್ವಾದ ಪಡೆದುಕೊಂಡು ಕಾರ್ಯಾರಂಭಿಸುವುದು ಶುಭ. ಮಕ್ಕಳೊಂದಿಗೆ ಸಮಯ ಕಳೆಯುವುದು ಜೀವನದ ನಿಜವಾದ ಮೌಲ್ಯವನ್ನು ನೆನಪಿಸುತ್ತದೆ. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ನಿಮಗೆ ಪರೀಕ್ಷೆಯ ದಿನವಾಗಿರುವುದು.

ಕರ್ಕಾಟಕ ರಾಶಿ :

ಯಾರೊಂದಿಗಾದರೂ ವಿವಾದಕ್ಕೆ ಸಿಲುಕುವುದು ನಿಮಗೆ ನೋವುಂಟು ಮಾಡುತ್ತದೆ. ನಿಮ್ಮ ಸಂಕಷ್ಟಕ್ಕೆ ಯಾರನ್ನೂ ದೂಷಿಸಲು ಇಷ್ಟವಾಗದು. ನೀವು ನಿಮ್ಮ ಕೆಲಸವನ್ನು ಮುಂದುವರಿಸಿದರೆ ಒಳ್ಳೆಯದು. ನಿಮ್ಮ ಹಳೆಯ ಬಾಕಿಗಳಿಂದ ಬರಬಹುದಾದ ದಿನ. ಸ್ನೇಹಿತರ ಜೊತೆ ಕಾಲ ಕಳೆಯುವುದು ಸಂತೋಷ ತರುತ್ತದೆ. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಆಪ್ತರ ಬಗ್ಗೆ ನಿಮ್ಮ ಭಾವನೆ ನಕಾರಾತ್ಮಕವಾಗಿ ಇರುವುದು. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ನಡೆವಳಿಕೆ ಇರಲಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು.

ಸಿಂಹ ರಾಶಿ :

ನಿಮ್ಮ ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ನಿಲ್ಲುವ ಸಾಮರ್ಥ್ಯ ಇರುವುದು. ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಫಲ ನೀಡುತ್ತವೆ. ಸ್ನೇಹಿತರಿಂದ ಲಾಭದಾಯಕ ಸಲಹೆ ಸಿಗಬಹುದು. ಭಾವನಾತ್ಮಕ ಸಂಗತಿಗಳಲ್ಲಿ ಎಚ್ಚರದಿಂದಿರಿ. ಪ್ರಭಾವೀ ಜನರು ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಮಕ್ಕಳ ಏಳಿಗೆಯಲ್ಲಿ ನಿಮಗೆ ಸಂತೋಷ ಇರುವುದು. ನಿಂದನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ.

ಕನ್ಯಾ ರಾಶಿ :

ಇಂದಿನ‌ ಬಿಡುವಿನ ಸಮಯದಲ್ಲಿ ನೀವು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ಇಂದು ಸಮಯವನ್ನು ವ್ಯರ್ಥ ಮಾಡಬೇಡಿ. ಸಾಮಾಜಿಕ ಕಳಕಳಿಯನ್ನು ಜೊತೆಗಾರರು ಅರ್ಥಮಾಡಿಕೊಳ್ಳುವರು. ಅಪಪ್ರಚಾರಗಳಿಂದ ದೂರವಿರುವುದು ಒಳಿತು. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವು ಬಲವಾಗುತ್ತದೆ. ಸ್ವಾಭಿಮಾನವನ್ನು ಬಿಟ್ಟು ಇರುವುದು ಅಸಾಧ್ಯ ಎನಿಸಬಹುದು. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಅನಾರೋಗ್ಯವು ನೆಪವಾಗಬಹುದು.

ತುಲಾ ರಾಶಿ :

ಸಮಯದಲ್ಲಿ ಅಹಿತಕರ ಸುದ್ದಿಗಳ ಸೂಚನೆಗಳೂ ಇವೆ. ಪ್ರೇಮ ಜೀವನದಲ್ಲಿ ಭಾವನಾತ್ಮಕ ತೀವ್ರತೆ ಹೆಚ್ಚಾಗಬಹುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಅನಾರೋಗ್ಯಕ್ಕೆ ವಿಶ್ರಾಂತಿಗಿಂತ ಮನಸ್ಸಿನಲ್ಲಿ ಉತ್ಸಾಹ ಹೆಚ್ಚಿರಲಿ. ಹೊಸ ಯೋಜನೆಗಳ ಬಗ್ಗೆ ಆಲೋಚನೆ ಶುರುವಾಗಬಹುದು. ಭೂಮಿಯನ್ನು ಖರೀದಿಸುವ ಸಂದರ್ಭ ಬಂದರೂ ಪೂರ್ತಿ ಹಣವನ್ನು ಸೇರಿಸಲು ಆಗದು. ಯಾರ ಬಳಿಯೂ ಕೆಲಸವಿಲ್ಲ ಎಂದು ಹೇಳಬೇಡಿ. ಯಾರ ತಪ್ಪನ್ನೂ ನೇರವಾಗಿ ಹೇಳದೇ ಅರ್ಥ ಮಾಡಿಸಿ, ತಿದ್ದಿ.

ವೃಶ್ಚಿಕ ರಾಶಿ :

ಇಂದು ಭೇಟಿಯಾಗುವ ವ್ಯಕ್ತಿಗಳು ನಿಮ್ಮೊಳಗೆ ಧನಾತ್ಮಕ ಶಕ್ತಿಯನ್ನು ತುಂಬಿಸುವರು. ಕೆಲವು ವೈಫಲ್ಯಗಳು ನಿಮಗೆ ಪಾಠವಾಗಿ‌ ಕಲಿಯಬೇಕು. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಇತರರಿಗೆ ಸಹಾಯಮಾಡುವ ನಿಮ್ಮ ಗುಣವು ಫಲ ನೀಡುತ್ತದೆ. ಪುಣ್ಯಾತ್ಮರ ದರ್ಶನವಾಗಲಿದೆ. ಪ್ರೀತಿಯ ಸಂಬಂಧಗಳಲ್ಲಿ ಸಿಹಿಯ ಅನುಭವ ಸಾಧ್ಯ. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡುವಿರಿ. ನಿಮ್ಮ ಹೆಚ್ಚಿನವರ ಭೇಟಿಯಾಗುವುದು.

ಧನು ರಾಶಿ :

ನೀವು ಕುಟುಂಬದ ಸಮಸ್ಯೆಗಳನ್ನು ಕುಳಿತು ಮಾತನಾಡಬಹುದು. ಕೆಲವು ದುಃಖದ ಸುದ್ದಿಗಳು ಮನಸ್ಸನ್ನು ಹತಾಶೆಗೊಳಿಸಬಹುದು. ಯಾತ್ರೆಗಳಲ್ಲಿ ನಿಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಮಾನವೀಯತೆಯ ದೃಷ್ಟಿಯಿಂದ ಸಹಕಾರ ಮಾಡುವಿರಿ. ಮನೆಯ ಸ್ವಚ್ಛತೆಯ ಕಡೆ ಗಮನ ಹರಿಸುವುದು ಸಂತೋಷದ ವಿಚಾರ. ಒಂಟಿಯಾಗಿ ಇರಬೇಕು ಎನಿಸಬಹುದು. ಸಹೋದರಿಯರ ನಡುವೆ ಮನಸ್ತಾಪವು ಬರುತ್ತದೆ. ಉದ್ಯಮದಲ್ಲಿ ಕೆಲವು ಮಾರ್ಪಾಡಿನ ಅವಶ್ಯಕತೆ ಇರಲಿದೆ.

ಮಕರ ರಾಶಿ :

ಅಪಾಯಕಾರಿಯಾಗಿರುವ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬೇಡಿ. ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಮನೆಯ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಯಶಸ್ವಿಯಾಗಿದೆ. ಪ್ರೀತಿಯ ವ್ಯಕ್ತಿಯಿಂದ ಅಚ್ಚರಿಯ ಉಡುಗೊರೆ ನಿರೀಕ್ಷಿಸಬಹುದು. ದಿನದ ಹೆಚ್ಚಿನ ಭಾಗವನ್ನು ಮನರಂಜನೆಗೆ ಮೀಸಲಿಡುವಿರಿ. ಅಹಂಕಾರಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು. ವಿದ್ಯಾರ್ಥಿಗಳು ಓದಿನ ಸಮಯವನ್ನು ಬದಲಿಸಿಕೊಳ್ಳುವುದು ಸೂಕ್ತ.

ಕುಂಭ ರಾಶಿ :

ಇಂದು ನೀವು ಮಾತನಾಡುವ ರೀತಿ ಜನರನ್ನು ಆಕರ್ಷಿಸುವುದು. ಸಂಬಂಧದ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವಿರಿ. ನಿಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿರಿ, ಕಳ್ಳತನ ಸಾಧ್ಯತೆ ಇದೆ. ಸಂಬಂಧಗಳ ಪುನ‌ರ್ ಸ್ಥಾಪನೆಯ ಸಮಯ ಇದು. ಪ್ರೇಮ ಸಂಬಂಧಗಳಲ್ಲಿ ನೈಜತೆ ಇಟ್ಟುಕೊಳ್ಳಿ. ಅರೋಗ್ಯದ ಸುಧಾರಣೆಗೆ ವೈದ್ಯರ ಸಲಹೆ ಅವಶ್ಯಕ. ಇಂದು ಆದ ನಿದ್ರಾಭಂಗದಿಂದ‌ ದಿನವು ಸರಿಯಾಗದೇ ಹೋಗಬಹುದು. ಎಲ್ಲರ ಮೇಲೂ ವಿನಾ ಕಾರಣ ಕೋಪ‌ ಮಾಡಿಕೊಳ್ಳುವಿರಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ.

ಮೀನ ರಾಶಿ :

ನಿಮ್ಮನ್ನು ನೀವು ಆಶಾವಾದಿಯನ್ನಾಗಿ ಮಾರ್ಪಾಡು ಮಾಡಿಕೊಳ್ಳುವಿರಿ. ಯಶಸ್ಸಿನ ದಾರಿಯನ್ನು ತೋರಿಸುತ್ತದೆ. ಕುಟುಂಬದ ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ಕಳೆವ ಕ್ಷಣ ಸ್ಮರಣೀಯವಾಗಿರುತ್ತದೆ. ಹಣದ ವ್ಯವಹಾರಗಳಲ್ಲಿ ಸಮತೋಲನ ಇರಲಿ. ಪ್ರೇಮದ ಆಕರ್ಷಣೆಯು ನಿಮ್ಮ ಗುರಿಯಿಂದ ನಿಮ್ಮನ್ನು ದೂರವಿಡಬಹುದು. ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣವಿರಲಿ. ನಿಮ್ಮ ವೃತ್ತಿಯು ನಿಮಗೆ ಗೌರವವನ್ನು ಕೊಡಿಸುವುದು. ಬೇಜವಾಬ್ದಾರಿತನದಿಂದ ನಿಮ್ಮ ಅಧಿಕಾರವನ್ನು ಕಳೆದುಕೊಳ್ಳಬೇಕಾಗುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ಮೇಷ, ಮಹಾನಕ್ಷತ್ರ : ಕೃತ್ತಿಕಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸುಕರ್ಮ, ಕರಣ : ತೈತಿಲ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:33 – 17:09, ಯಮಗಂಡ ಕಾಲ 09:09 – 10:45, ಗುಳಿಕ ಕಾಲ 12:21 – 13:37

-ಲೋಹಿತ ಹೆಬ್ಬಾರ್-8762924271 (what’s app only)

Source link

ಟಾಲಿವುಡ್​​​ನಲ್ಲಿ ಮತ್ತೊಂದು ಸಮಂತಾ ಆಗ್ತಾರಾ ಜಾನ್ವಿ ಕಪೂರ್ ? – Kannada News | Janhvi Kapoor’s Peddi Role: A Career Defining Moment After Ram Charan’s Trailer

ಟಾಲಿವುಡ್ ನಟ ರಾಮ್ ಚರಣ್ (Ram Charan) ನಟನೆಯ, ಬುಚ್ಚಿ ಬಾಬು ನಿರ್ದೇಶನದ ಬಹುನಿರೀಕ್ಷಿತ ‘ಪೆದ್ದಿ’ ಚಿತ್ರದ ಟ್ರೇಲರ್ ರಿಲೀಸ್ ಆಗಿ, ಭಾರಿ ಸದ್ದು ಮಾಡುತ್ತಿದೆ. ಗ್ರಾಮೀಣ ಹಿನ್ನೆಲೆಯಲ್ಲಿ ಸಾಗೋ ಈ ಚಿತ್ರ ಕ್ರೀಡಾ ಕಥೆಯನ್ನು ಹೊಂದಿದೆ. ‘ಪೆದ್ದಿ’ ಟ್ರೈಲರ್ ನೋಡಿದ ಸಿನಿಪ್ರಿಯರು, ಚಿತ್ರದ ನಾಯಕಿ ಜಾನ್ವಿ ಕಪೂರ್ ಅವರ ಪಾತ್ರವನ್ನು ‘ರಂಗಸ್ಥಲಂ’ ಚಿತ್ರದ ಸಮಂತಾ ಪಾತ್ರಕ್ಕೆ ಹೋಲಿಸಿ ಚರ್ಚೆ ಆರಂಭಿಸಿದ್ದಾರೆ.

2018ರಲ್ಲಿ ಬಿಡುಗಡೆಯಾಗಿದ್ದ ‘ರಂಗಸ್ಥಲಂ’ ಚಿತ್ರದಲ್ಲಿ ಸಮಂತಾ ನಟಿಸಿದ್ದ ರಾಮಲಕ್ಷ್ಮಿ ಹೆಸರಿನ ಹಳ್ಳಿ ಹುಡುಗಿಯ ಪಾತ್ರ ಅವರ ವೃತ್ತಿಜೀವನದಲ್ಲೇ ಅತ್ಯಂತ ಜನಪ್ರಿಯ ಹಾಗೂ ಶ್ರೇಷ್ಠ ಪ್ರದರ್ಶನಗಳಲ್ಲಿ ಒಂದಾಗಿತ್ತು. ಆ ಚಿತ್ರ ತಂದುಕೊಟ್ಟ ಭಾರಿ ಯಶಸ್ಸು ಮತ್ತು ಸ್ಟಾರ್‌ಡಮ್ ಸಮಂತಾ ಅವರ ಚಿತ್ರರಂಗದ ಜರ್ನಿಯನ್ನೇ ಬದಲಾಯಿಸಿತ್ತು. ಈಗ ‘ಪೆದ್ದಿ’ ಚಿತ್ರದಲ್ಲೂ ಅಂತಹದ್ದೇ ಥೀಮ್ ಇದೆ.

ಸಿನಿಮಾದಲ್ಲಿ ಹಳ್ಳಿಯ ವಾತಾವರಣ, ಗ್ರಾಮೀಣ ಸೊಗಡಿನ ಸಂಭಾಷಣೆ ಇದೆ. ಇದು ಜಾನ್ವಿ ಕಪೂರ್ ವೃತ್ತಿ ಜೀವನಕ್ಕೆ ಸಹಕಾರಿ ಆಗಬಹುದು. ಅವರು ಕೇವಲ ಗ್ಲಾಮರ್​​ಗೆ ಸೀಮಿತವಾಗದೆ, ನಟನೆಯಲ್ಲೂ ಮಿಂಚಿದರೆ ಮಾತ್ರ ಇದು ಸಾಧ್ಯವಾಗಲಿದೆ.

ಇದನ್ನೂ ಓದಿ:  ‘ಪೆದ್ದಿ’ ಟ್ರೇಲರ್ ಬಿಡುಗಡೆ; ಕ್ರಿಕೆಟ್ ಜೊತೆ ಕುಸ್ತಿ ಅಖಾಡದಲ್ಲೂ ರಾಮ್ ಚರಣ್ ಮಾಸ್ ಅವತಾರ

ಟ್ರೈಲರ್‌ನಲ್ಲಿ ಜಾನ್ವಿ ಕಪೂರ್ ಹಳ್ಳಿ ಹುಡುಗಿಯ ಪಾತ್ರಕ್ಕೆ ಹೊಂದಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿರುವುದು ಎದ್ದು ಕಾಣುತ್ತಿದೆ. ಕೆಲವು ದೃಶ್ಯಗಳಲ್ಲಿ ಅವರ ಸ್ಕ್ರೀನ್ ಪ್ರೆಸೆನ್ಸ್ ಗಮನ ಸೆಳೆದಿದ್ದರೂ, ಸಿನಿಮಾ ನೋಡಿದ ಬಳಿಕವೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಒಂದು ವೇಳೆ ‘ಪೆದ್ದಿ’ ಸಿನಿಮಾ ದೊಡ್ಡ ಹಿಟ್ ಲಿಸ್ಟ್ ಸೇರಿದರೆ, ಅದು ಜಾನ್ವಿ ಅವರ ಸೌತ್ ಇಂಡಿಯನ್ ಸಿನಿ ಕೆರಿಯರ್‌ಗೆ ಬಹುದೊಡ್ಡ ತಿರುವು ನೀಡುವುದರಲ್ಲಿ ಅನುಮಾನವಿಲ್ಲ.
‘ಉಪ್ಪೇನಾ’ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದ, ಎ.ಆರ್. ರೆಹಮಾನ್ ಸಂಗೀತವಿರುವ ಹಾಗೂ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಪೆದ್ದಿ’ ಚಿತ್ರ ಜೂನ್ 4 ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:13 am, Tue, 19 May 26

Source link

ಗೃಹಲಕ್ಷ್ಮೀ ಹಣದಲ್ಲಿ ರೊಟ್ಟಿ ಕೇಂದ್ರ ತೆರೆದ ನಾರಿಯರು!

ಕೊಪ್ಪಳ, ಮೇ 19: ಜಿಲ್ಲೆಯ ಕುಷ್ಟಗಿಯ ತೆಗ್ಗಿಣ ಓಣಿಯ ಮೂವರು ಮಹಿಳೆಯರು ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಒಂದೇ ಕುಟುಂಬದ ಈ ಮೂವರು ಮಹಿಳೆಯರು, ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣವನ್ನು ಸಂಗ್ರಹಿಸಿ, ಅದನ್ನು ತಮ್ಮ ರೊಟ್ಟಿ ಕೇಂದ್ರದ ಸ್ಥಾಪನೆಗೆ ಹೂಡಿಕೆ ಮಾಡಿದ್ದಾರೆ. ಮೋಹಿನಿ ಮತ್ತು ಇನ್ನಿಬ್ಬರು ಸಹೋದರಿಯರು ಸೇರಿ ಗೃಹಲಕ್ಷ್ಮಿ ರೊಟ್ಟಿ ಕೇಂದ್ರವನ್ನು ಆರಂಭಿಸಿದ್ದು, ಇದು ಮಹಿಳೆಯರಿಗೆ ಜೀವನಪೂರ್ತಿ ದುಡಿದು ತಿನ್ನಲು ಒಂದು ದಾರಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ರೊಟ್ಟಿ ಮಿಷನ್, ಹಿಟ್ಟು ಮಿಕ್ಸ್ ಮಾಡುವ ಗ್ರೈಂಡರ್ ಮತ್ತು ಹಿಟ್ಟಿನ ಗಿರಣಿ ಸೇರಿ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇತಿಹಾಸಕ್ಕೆ ಮರುಜೀವ ನೀಡಿದ ಪಾಕ್: ವಿಭಜನೆ ಪೂರ್ವದ ಹಿಂದೂ-ಸಿಖ್ ಹೆಸರುಗಳು ಲಾಹೋರ್ ಬೀದಿಗಳಿಗೆ ವಾಪಸ್, ಇಸ್ಲಾಂಪುರ ಈಗ ಕೃಷ್ಣ ನಗರ – Kannada News | Lahore Revives Several Pre Partition Street Names in Heritage Move

ಲಾಹೋರ್, ಮೇ 19: ಭಾರತ ಮತ್ತು ಪಾಕಿಸ್ತಾನ(Pakistan) ವಿಭಜನೆಯಾಗಿ 79 ವರ್ಷಗಳ ನಂತರ, ಪಾಕಿಸ್ತಾನ ಸರ್ಕಾರವು ಲಾಹೋರ್​ನ ಇತಿಹಾಸವನ್ನು ಪುನಃ ಬರೆಯುವ ಮಹತ್ವದ ಸಾಹಸಕ್ಕೆ ಕೈಹಾಕಿದೆ. ದಶಕಗಳ ಹಿಂದೆ ಇಸ್ಲಾಮೀಕರಣದ ಭಾಗವಾಗಿ ಬದಲಾಗಿದ್ದ ರಸ್ತೆಗಳು, ಚೌಕಗಳು ಮತ್ತು ಐತಿಹಾಸಿಕ ಸ್ಥಳಗಳ ಹೆಸರುಗಳನ್ನು ತೆಗೆದುಹಾಕಿ, ಅವುಗಳ ಮೂಲ ಹಿಂದೂ, ಸಿಖ್ ಮತ್ತು ಬ್ರಿಟಿಷ್ ಯುಗದ ಹೆಸರುಗಳ ಸೈನ್ ಬೋರ್ಡ್​ ಮರುಸ್ಥಾಪಿಸುತ್ತಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಲಾಹೋರ್‌ನ ಪ್ರಮುಖ ಒಂಬತ್ತು ಸ್ಥಳಗಳು ತಮ್ಮ ಮೂಲ ಗುರುತನ್ನು ಮರಳಿ ಪಡೆದಿವೆ.

ಈ ಐತಿಹಾಸಿಕ ಪುನಃಸ್ಥಾಪನೆ ಕಾರ್ಯದ ಹಿಂದೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಪುತ್ರಿ, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರ ದೊಡ್ಡ ಲೆಕ್ಕಾಚಾರವಿದೆ. 2025 ರಲ್ಲಿ ಮರ್ಯಮ್ ನವಾಜ್ ನೇತೃತ್ವದಲ್ಲಿ ಆರಂಭವಾದ ‘ಲಾಹೋರ್ ಅಥಾರಿಟಿ ಫಾರ್ ಹೆರಿಟೇಜ್ ರಿವೈವಲ್’ (LAHR) ಸಂಸ್ಥೆಯು ಸುಮಾರು 50 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳ ಬಜೆಟ್‌ನಲ್ಲಿ ಈ ನಗರ ಸಂರಕ್ಷಣಾ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಯುರೋಪಿಯನ್ ದೇಶಗಳು ತಮ್ಮ ಐತಿಹಾಸಿಕ ಹೆಸರುಗಳನ್ನು ಎಂದಿಗೂ ಬದಲಾಯಿಸುವುದಿಲ್ಲ, ಅವುಗಳನ್ನು ಉಳಿಸಿಕೊಳ್ಳುತ್ತವೆ.

ಲಾಹೋರ್‌ನ ಪ್ರಾಚೀನ ಹೆಸರುಗಳು ನಮ್ಮ ಇತಿಹಾಸದ ಭಾಗವಾಗಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಉನ್ನತ ಮಟ್ಟದ ಸಭೆಯಲ್ಲಿ ನವಾಜ್ ಷರೀಫ್ ಪ್ರತಿಪಾದಿಸಿದ್ದಾರೆ. ಶತಮಾನಗಳಿಂದ ಸ್ಥಳೀಯ ಜನ ಸಾಮಾನ್ಯರ ನೆನಪಿನಲ್ಲಿ ಸದ್ದಿಲ್ಲದೆ ಉಳಿದುಕೊಂಡಿದ್ದ ಹಳೆಯ ಹೆಸರುಗಳು ಈಗ ಅಧಿಕೃತವಾಗಿ ಸೈನ್‌ಬೋರ್ಡ್‌ಗಳ ಮೇಲೆ ರಾರಾಜಿಸುತ್ತಿವೆ.

ಮತ್ತಷ್ಟು ಓದಿ: ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!

ಇಸ್ಲಾಂಪುರ-ಕೃಷ್ಣ ನಗರವಾಗಿ, ಸುನ್ನತ್ ನಗರ-ಸಂತನಗರವಾಗಿ, ಮೌಲಾನಾ ಜಾಫರ್ ಅಲಿ ಖಾನ್ ಚೌಕ-ಲಕ್ಷ್ಮಿ ಚೌಕವಾಗಿ, ಬಾಬರಿ ಮಸೀದಿ ಚೌಕ-ಜೈನ ಮಂದಿರ ಚೌಕವಾಗಿ, ಮುಸ್ತಫಾಬಾದ್-ಧರ್ಮಪುರವಾಗಿ, ಸರ್ ಆಗಾ ಖಾನ್ ಚೌಕ-ಡೇವಿಸ್ ರಸ್ತೆಯಾಗಿ, ಅಲ್ಲಾಮ ಇಕ್ಬಾಲ್ ರಸ್ತೆ-ಜೈಲ್ ರಸ್ತೆಯಾಗಿ, ಫಾತಿಮಾ ಜಿನ್ನಾ ರಸ್ತೆ-ಕ್ವೀನ್ಸ್​ ರಸ್ತೆಯಾಗಿ, ಬಾಗ್-ಎ-ಜಿನ್ನಾ-ಲಾರೆನ್ಸ್ ಗಾರ್ಡನ್ಸ್ ಆಗಿ ಹಳೆಯ ಹೆಸರುಗಳನ್ನು ಪಡೆಯಲಿವೆ.

ಇವುಗಳಲ್ಲಿ ಜೈನ ಮಂದಿರ ಚೌಕ ಇತಿಹಾಸ ರೋಚಕವಾಗಿದೆ. 1990 ರ ದಶಕದಲ್ಲಿ ಭಾರತದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಸೃಷ್ಟಿಯಾಗಿದ್ದ ಧಾರ್ಮಿಕ ಉದ್ವಿಗ್ನತೆಯ ಸಂದರ್ಭದಲ್ಲಿ ಈ ಚೌಕಕ್ಕೆ ‘ಬಾಬರಿ ಮಸೀದಿ ಚೌಕ’ ಎಂದು ಹೆಸರಿಡಲಾಗಿತ್ತು. ಈಗ 79 ವರ್ಷಗಳ ನಂತರ ಅದು ಮತ್ತೆ ಜೈನ ಮಂದಿರ ಚೌಕ ಆಗಿದೆ.

ದಶಕಗಳಿಂದ ತೀವ್ರ ಸೈದ್ಧಾಂತಿಕ ಇಸ್ಲಾಮೀಕರಣಕ್ಕೆ ಒಗ್ಗಿಕೊಂಡಿರುವ ಪಾಕಿಸ್ತಾನದಲ್ಲಿ, ಈ ಹಿಂದೂ-ಸಿಖ್ ಹೆಸರುಗಳ ಪುನಃಸ್ಥಾಪನೆಗೆ ಯಾವುದೇ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗದೇ ಇರುವುದು ಜಾಗತಿಕ ರಾಜತಾಂತ್ರಿಕರನ್ನು ಅಚ್ಚರಿಗೊಳಿಸಿದೆ. ಲಾಹೋರ್‌ನ ಈ ಯಶಸ್ಸಿನ ಬೆನ್ನಲ್ಲೇ, ಯೋಜನೆಯ ಎರಡನೇ ಹಂತದಲ್ಲಿ ಸಿಂಧ್ ಮತ್ತು ಖೈಬರ್ ಪಖ್ತುಂಖ್ವಾದ ಕೆಲವು ಭಾಗಗಳಲ್ಲೂ ಹಳೆಯ ಐತಿಹಾಸಿಕ ಹೆಸರುಗಳನ್ನು ಮರುಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ.

ಭಾರತದ ಅಮೃತಸರದಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಲಾಹೋರ್, ಧರ್ಮದ ಹೆಸರಿನಲ್ಲಿ ಕತ್ತರಿಸಿ ಹೋಗಿದ್ದ ತನ್ನ ವೈವಿಧ್ಯಮಯ ಇತಿಹಾಸದ ಬೇರುಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಾಡಿದ್ದುಣ್ಣೋ ಮಹಾರಾಯ, ಬೆಕ್ಕಿಗೆ ಒದ್ದ ಮಹಿಳೆಗೆ ಏನಾಯ್ತು ನೋಡಿ

ಭದ್ರತೆ ದೃಷ್ಟಿಯಿಂದ ಬಹುತೇಕ ಎಲ್ಲಾ ಅಪಾರ್ಟ್​ಮೆಂಟ್​ಗಳಲ್ಲಿ ಈಗ ಸಿಸಿಟಿವಿ ಇರುವುದು ಸಾಮಾನ್ಯ, ಈ ಕ್ಯಾಮರಾಗಳ ಕಣ್ಣಲ್ಲಿ ಕೆಲವೊಂದು ಹಾಸ್ಯಮಯ ಸನ್ನಿವೇಶಗಳು ಕೂಡ ಸೆರೆಯಾಗುತ್ತವೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಕಟ್ಟಡದ ಮೆಟ್ಟಿಲು ಹತ್ತುವಾಗ ಅಲ್ಲೇ ಮಲಗಿದ್ದ ಬೆಕ್ಕಿಗೆ ಒದೆಯುತ್ತಾರೆ. ಇನ್ನೇನು ಮೆಟ್ಟಿಲು ಹತ್ತಲು ಶುರು ಮಾಡುವಾಗ ಎಡವಿ ಬೀಳುತ್ತಾರೆ. ನಾವು ಬೇರೆಯವರಿಗೆ ಏನು ಮಾಡುತ್ತೀವೋ ವಿಧಿಯೂ ನಮಗೆ ಅದನ್ನೇ ಮಾಡುತ್ತದೆ ಎಂಬುದಕ್ಕೆ ಇದು ಸಾಕ್ಷಿ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರ ವಿವಾಹ ವಿಷಯದಲ್ಲಿ ಮನ್ನಣೆ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 19, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ಶುಭ ದಿನವು ಪರಾಭವನಾ ಸಂವತ್ಸರ, ಉತ್ತರಾಯಣ, ಅಧಿಕ ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ತದಿಗೆ ತಿಥಿ, ಮೃಗಶಿರಾ ನಕ್ಷತ್ರ, ಧೃತಿ ಯೋಗ ಮತ್ತು ತೈತುಲ ಕರಣದಿಂದ ಕೂಡಿದೆ. ರವಿ ಮತ್ತು ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಇದು ಗ್ರಹಗತಿಗಳ ಮೇಲೆ ಪ್ರಮುಖ ಪರಿಣಾಮ ಬೀರಲಿದೆ.

ರಾಹುಕಾಲವು ಮಧ್ಯಾಹ್ನ 3:25 ರಿಂದ ಸಂಜೆ 5:00 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭಕಾಲವು ಬೆಳಗ್ಗೆ 10:40 ರಿಂದ ಮಧ್ಯಾಹ್ನ 12:16 ರವರೆಗೆ ಇರುತ್ತದೆ. ಮಂಗಳವಾರವು ಸುಬ್ರಹ್ಮಣ್ಯನ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ ಎಂದು ಗುರೂಜಿ ತಿಳಿಸಿದ್ದಾರೆ.

 

Source link

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಮೇ 19: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ನಿ ಸಮೇತ ಮಂಗಳವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 3 ವರ್ಷಗಳಾದ ದಿನವೇ ಡಿಸಿಎಂ ದೇವರ ದರ್ಶನ ಪಡೆದರು. ಡಿಕೆಶಿ ಆಪ್ತ, ಕುಣಿಗಲ್ ಶಾಸಕ ರಂಗನಾಥ್ ಕೂಡ ಜತೆಗಿದ್ದರು. ಏತನ್ಮಧ್ಯೆ, ತುಮಕೂರಿನಲ್ಲಿ ಇಂದು ಇಂದು ರಾಜ್ಯ ಸರ್ಕಾರದ ಸಾಧನಾ ಸಮಾವೇಶ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tulasi Puja: ಮನೆಯಲ್ಲಿ ತುಳಸಿ ಪೂಜೆ ಮಾಡಿದ್ರೂ ನೆಮ್ಮದಿ ಇಲ್ವಾ? ಹಾಗಾದ್ರೆ ನೀವು ತಿಳಿಯದೇ ಮಾಡ್ತಿರೋ ಈ ತಪ್ಪುಗಳೇ ಕಾರಣ! – Kannada News | Tulasi Puja Mistakes: Avoid These for Home Peace and Prosperity!

ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಹಾಗೂ ದೈವಿಕ ಸ್ಥಾನವಿದೆ. ಪ್ರತಿ ಮನೆಯ ಅಂಗಳದಲ್ಲಿರುವ ತುಳಸಿಗೆ, ಬೆಳಿಗ್ಗೆ ಮತ್ತು ಸಂಜೆ ದೀಪ ಹಚ್ಚಿ ಪೂಜಿಸುವುದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಶ್ರೇಷ್ಠ ಸಂಪ್ರದಾಯವಾಗಿದೆ. ತುಳಸಿ ಇರುವ ಮನೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ನೆಲೆಸುತ್ತಾಳೆ ಮತ್ತು ಆ ಮನೆ ಯಾವಾಗಲೂ ಸುಖ-ಸಂಪತ್ತಿನಿಂದ ತುಂಬಿರುತ್ತದೆ ಎಂಬುದು ಹಿರಿಯರ ನಂಬಿಕೆ.

ಆದಾಗ್ಯೂ, ಕೆಲವು ಮನೆಗಳಲ್ಲಿ ತುಳಸಿ ಗಿಡವನ್ನು ಎಷ್ಟೇ ಭಕ್ತಿಯಿಂದ ಪೂಜಿಸಿದರೂ, ಎಷ್ಟೇ ಸುಂದರವಾಗಿ ಬೆಳೆಸಿದರೂ ಶಾಂತಿ ಇರುವುದಿಲ್ಲ. ನಿರಂತರ ಜಗಳಗಳು, ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಮತ್ತು ಮನಸ್ಸಿನಲ್ಲಿ ಸದಾ ಏನೋ ಒಂದು ಅಕಾರಣ ಚಿಂತೆ ಕಾಡುತ್ತಿರುತ್ತದೆ. ಇಷ್ಟೆಲ್ಲಾ ಪೂಜೆ ಮಾಡಿದ ನಂತರವೂ ಮನೆಯಲ್ಲಿ ತೃಪ್ತಿ ಸಿಗದಿದ್ದರೆ, ಅದಕ್ಕೆ ನಾವು ತಿಳಿಯದೇ ತುಳಸಿ ಕಟ್ಟೆಯ ಬಳಿ ಮಾಡುವ ಕೆಲವು ಸಣ್ಣ ತಪ್ಪುಗಳೇ ಕಾರಣವಾಗಿರಬಹುದು. ಶುದ್ಧತೆಯ ಜಾಗದಲ್ಲಿ ಅಶುದ್ಧತೆ ಪ್ರವೇಶಿಸಿದರೆ ದೇವರ ಕೃಪೆ ಕಡಿಮೆಯಾಗುತ್ತದೆ ಎಂದು ಧರ್ಮಶಾಸ್ತ್ರಗಳು ಎಚ್ಚರಿಸುತ್ತವೆ. ಹಾಗಾದರೆ, ತುಳಸಿ ಗಿಡದ ಬಳಿ ನಾವು ಯಾವ ತಪ್ಪುಗಳನ್ನು ಮಾಡಬಾರದು? ಇಲ್ಲಿದೆ ಸಂಪೂರ್ಣ ಮಾಹಿತಿ.

ತುಳಸಿ ಕಟ್ಟೆಯ ಸುತ್ತ ಕಸ, ತ್ಯಾಜ್ಯ ಇಡಬೇಡಿ:

ಇತ್ತೀಚಿನ ದಿನಗಳಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಅಥವಾ ನಿರ್ಲಕ್ಷ್ಯದಿಂದಾಗಿ ಅನೇಕರು ತುಳಸಿಯ ಪಕ್ಕದಲ್ಲೇ ತಾತ್ಕಾಲಿಕವಾಗಿ ಕಸದ ತೊಟ್ಟಿಗಳು, ಹಳೆಯ ವಸ್ತುಗಳು ಅಥವಾ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇಡುತ್ತಾರೆ. ಇದು ಅತಿ ದೊಡ್ಡ ತಪ್ಪು. ತುಳಸಿ ಕೇವಲ ಸಸ್ಯವಲ್ಲ, ಆಕೆ ಭಗವಾನ್ ವಿಷ್ಣುವಿನ ಪ್ರೀತಿಯ ಪವಿತ್ರ ರೂಪ. ತುಳಸಿಯ ಸುತ್ತಮುತ್ತ ಚಪ್ಪಲಿಗಳು, ಹಳೆಯ ಬಟ್ಟೆಗಳು ಅಥವಾ ಮುರಿದ ವಸ್ತುಗಳನ್ನು ಇಡುವುದರಿಂದ ಆ ಜಾಗದ ಪಾವಿತ್ರ್ಯತೆ ಕೆಡುತ್ತದೆ ಮತ್ತು ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಗಿಡ ಒಣಗದಂತೆ ನೋಡಿಕೊಳ್ಳಿ:

ತುಳಸಿ ಗಿಡವು ಯಾವಾಗಲೂ ಹಸಿರಾಗಿರುವಂತೆ ನೋಡಿಕೊಳ್ಳುವುದು ಮನೆಯ ಯಜಮಾನನ ಜವಾಬ್ದಾರಿ. ನಮ್ಮ ನಿರ್ಲಕ್ಷ್ಯದಿಂದಾಗಿ ತುಳಸಿ ಗಿಡ ಒಣಗಿ ಹೋದರೆ, ಅದು ಮನೆಯಲ್ಲಿನ ಆಧ್ಯಾತ್ಮಿಕ ಶಕ್ತಿ ಕ್ಷೀಣಿಸುತ್ತಿದೆ ಎಂಬುದರ ಸಂಕೇತವಾಗಿದೆ. ಆದ್ದರಿಂದ ಪ್ರತಿದಿನ ನಿಯಮಿತವಾಗಿ ನೀರು ಹಾಕಿ ಗಿಡವನ್ನು ಹಸನ್ಮುಖಿಯಾಗಿ ಇಡಬೇಕು.

ಸೂರ್ಯಾಸ್ತದ ನಂತರ ಎಲೆ ಕತ್ತರಿಸಬೇಡಿ:

ಸೂರ್ಯ ಮುಳುಗಿದ ನಂತರ ಅಥವಾ ರಾತ್ರಿಯ ಸಮಯದಲ್ಲಿ ತುಳಸಿ ಎಲೆಗಳನ್ನು ಕತ್ತರಿಸುವುದು ಅಥವಾ ಗಿಡವನ್ನು ಮುಟ್ಟುವುದು ಅತ್ಯಂತ ಅಶುದ್ಧ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಆ ಸಮಯದಲ್ಲಿ ದೈವಿಕ ಶಕ್ತಿಗಳು ವಿಶ್ರಾಂತಿ ಪಡೆಯುತ್ತವೆ ಎಂಬ ನಂಬಿಕೆಯಿದೆ.

ತುಳಸಿ ಬಳಿ ಕುಳಿತು ಅಳಬೇಡಿ, ವಾದ ಮಾಡಬೇಡಿ:

ತುಳಸಿ ಗಿಡದ ಬಳಿ ಕುಳಿತು ಅಳಬಾರದು, ದುಃಖಿಸಬಾರದು ಅಥವಾ ಕೋಪದಿಂದ ಇತರರನ್ನು ಶಪಿಸಬಾರದು. ಇತ್ತೀಚಿನ ದಿನಗಳಲ್ಲಿ ಅನೇಕರು ಫೋನ್‌ಗಳಲ್ಲಿ ಜಗಳ ಆಡುತ್ತಾ, ವಾದ ಮಾಡುತ್ತಾ ತುಳಸಿ ಕೋಟೆಯ ಸುತ್ತ ತಿರುಗಾಡುತ್ತಾರೆ. ತುಳಸಿಯು ಸಕಾರಾತ್ಮಕ ಶಕ್ತಿಯನ್ನು (Positive Energy) ಆಕರ್ಷಿಸುವ ಕೇಂದ್ರವಾಗಿದೆ. ನಾವು ಅಲ್ಲಿ ನಕಾರಾತ್ಮಕ ಭಾವನೆಗಳನ್ನು ವ್ಯಕ್ತಪಡಿಸಿದರೆ, ಮನೆಯಲ್ಲಿ ಆತಂಕ ಮತ್ತು ಅಶಾಂತಿ ಮತ್ತಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಪ್ರಾರ್ಥನೆ ಮಾಡುವ ಸರಿಯಾದ ಕ್ರಮ ಯಾವುದು?

ದೇವರೆದುರು ಪ್ರಾರ್ಥಿಸುವಾಗ, “ನನಗೆ ಈ ತೊಂದರೆಗಳನ್ನು ಏಕೆ ನೀಡಿದೆ?” ಎಂದು ಹತಾಶೆಯಿಂದ ಕೇಳಬಾರದು. ಬದಲಾಗಿ, ಪೂರ್ಣ ನಂಬಿಕೆಯಿಂದ “ಎಂತಹ ಕಷ್ಟ ಬಂದರೂ ಎದುರಿಸುವ ಧೈರ್ಯವನ್ನು ದೇವರು ನನಗೆ ನೀಡುತ್ತಾನೆ” ಎಂದು ಧನಾತ್ಮಕವಾಗಿ ಕೇಳಿಕೊಳ್ಳಬೇಕು.

ನೆಮ್ಮದಿಗಾಗಿ ಪ್ರತಿ ಶುಕ್ರವಾರ ಹೀಗೆ ಮಾಡಿ:

  • ಪ್ರತಿ ಶುಕ್ರವಾರ ಸಂಜೆ ತುಳಸಿ ಕಟ್ಟೆಯ ಸುತ್ತಮುತ್ತಲಿನ ಜಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.
  • ಮನೆಯಲ್ಲಿ ಲಕ್ಷ್ಮಿ ಅಷ್ಟೋತ್ತರ ಅಥವಾ ಸ್ತೋತ್ರಗಳನ್ನು ಹಾಕಿ, ತುಳಸಿ ದೇವಿಗೆ ಸಣ್ಣ ತುಪ್ಪದ ದೀಪವನ್ನು ಬೆಳಗಿಸಿ.
  • ದೀಪ ಹಚ್ಚುವ ಸಮಯದಲ್ಲಿ ಮನೆಯಲ್ಲಿರುವ ಸದಸ್ಯರೆಲ್ಲರೂ ಯಾವುದೇ ಜಗಳವಿಲ್ಲದೆ ಶಾಂತಿಯುತವಾಗಿ, ಪ್ರೀತಿಯಿಂದ ಒಟ್ಟಿಗೆ ಮಾತನಾಡಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version