Headlines

Ugadi 2026 Predictions: ವರ್ಷ ಭವಿಷ್ಯ; ಖ್ಯಾತ ಜ್ಯೋತಿಷಿಯಿಂದ ಯುಗಾದಿ ಮಹತ್ವ ಮತ್ತು ರಾಶಿಗಳ ಫಲಾಫಲಗಳು

ಪ್ರತಿ ವರ್ಷದಂತೆ ಯುಗಾದಿ ಹಬ್ಬವು ಹೊಸ ಸಂವತ್ಸರವನ್ನು ಪ್ರಾರಂಭಿಸುತ್ತದೆ, ಈ ವರ್ಷ ಅಂದರೆ 2026ರ ಯುಗಾದಿಯು ಪರಾಭವ ನಾಮ ಸಂವತ್ಸರದೊಂದಿಗೆ ಪ್ರಾರಂಭವಾಗಲಿದೆ. ಈ ಸಂವತ್ಸರದ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಶ್ರೀ ಕೆ. ವೆಂಕಟೇಶ್ ಶರ್ಮಾ ಗುರೂಜಿ ಅವರು ವಿವರವಾದ ಭವಿಷ್ಯವನ್ನು ನೀಡಿದ್ದಾರೆ. ಈ ವರ್ಷ ಅಹಂಕಾರದ ಸೋಲು, ಅಧರ್ಮದ ಪತನ ಮತ್ತು ಧರ್ಮದ ವೃದ್ಧಿಗೆ ಸಾಕ್ಷಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ವರ್ಷದ ರಾಜ ಗುರು ಆಗಿದ್ದು, ಸತ್ಕಾರ್ಯಗಳು, ಉತ್ತಮ ನಡತೆ, ಮತ್ತು…

Read More

ಮುರಿಯಿತು 34 ವರ್ಷಗಳ ಸ್ನೇಹ: ಎಆರ್ ರೆಹಮಾನ್ ಕೈಬಿಟ್ಟ ಮಣಿರತ್ನಂ

ಮಣಿರತ್ನಂ ಮತ್ತು ಎಆರ್ ರೆಹಮಾನ್ (AR Rahman) ಜೋಡಿ ಭಾರತದ ಅತ್ಯುತ್ತಮ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಜೋಡಿ. ಈ ಜೋಡಿ ನೀಡಿರುವ ಸಿನಿಮಾ ಮತ್ತು ಹಾಡುಗಳು ಮೂರು ದಶಕಗಳ ಬಳಿಕ ಈಗಲೂ ಟ್ರೆಂಡಿಂಗ್​​ನನಲ್ಲಿವೆ. ಆದರೆ ಈಗ ಬರೋಬ್ಬರಿ 34 ವರ್ಷಗಳ ಬಳಿಕ ಈ ಸ್ನೇಹ ಮುರಿದಂತಿದೆ. 1992ರ ‘ರೋಜಾ’ ಸಿನಿಮಾದಿಂದ ಆರಂಭಿಸಿ ಇತ್ತೀಚೆಗಿನ ‘ಥಗ್ ಲೈಫ್’ ಸಿನಿಮಾದ ವರೆಗೆ ಮಣಿರತ್ನಂ ಅವರ ಎಲ್ಲ ಸಿನಿಮಾಗಳಿಗೆ ಎಆರ್ ರೆಹಮಾನ್ ಸಂಗೀತ ನೀಡಿದ್ದರು. ಆದರೆ ಇದೀಗ ಮಣಿರತ್ನಂ ತಮ್ಮ…

Read More

ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಶಿಕ್ಷಕಿಯ ಸಮಯ ಪ್ರಜ್ಞೆಯಿಂದ ಮಕ್ಕಳು ಬಚಾವ್​​

ಮೈಸೂರು, ಮಾರ್ಚ್​​ 18: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಮೊದಲ ಮಳೆ ಸುರಿದಿದೆ. ಸುಮಾರು 1 ಗಂಟೆಗೂ ಹೆಚ್ಚು ಸಮಯ ವರುಣ ಅಬ್ಬರಿಸಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಮಂದಿಗೆ ತಂಪಿನ ಅನುಭವವಾಗಿದೆ. ಈ ನಡುವೆ ಭಾರೀ ಗಾಳಿ ಮಳೆ ವೇಳೆ ಹುಣಸೂರು ತಾಲೂಕಿನ ದಾಸನಪುರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಮಕ್ಕಳು ತರಗತಿಯಲ್ಲಿದ್ದ ಹೊತ್ತಲ್ಲೇ ಗಾಳಿ ಮಳೆಗೆ ಶಾಲೆಯ ಮೇಲ್ಚಾವಣಿ ಹಾರಿ ಹೋಗಿದ್ದು, ಈ ವೇಳೆ ಸಮಯಪ್ರಜ್ಞೆ ಮೆರೆದ ಶಿಕ್ಷಕಿ ಸುಮಾ ಎಲ್ಲ ವಿದ್ಯಾರ್ಥಿಗಳನ್ನು ಡೆಸ್ಕ್ ಕೆಳಗೆ‌ ಕೂರಿಸಿದ್ದಾರೆ….

Read More

ಮಕ್ಕಳಲ್ಲಿ ಪ್ರೋಟೀನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ? ಯಾವ ರೀತಿಯ ಲಕ್ಷಣ ಕಂಡುಬರುತ್ತವೆ?

ಪ್ರೋಟೀನ್ (Protein) ದೇಹದ ಬೆಳವಣಿಗೆಗೆ ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದೆ. ಇದು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಸಮಾನವಾಗಿ ಮುಖ್ಯವಾಗಿದ್ದು ಇದರ ಕೊರತೆಯಿಂದ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ದೊಡ್ಡವರಂತೆ ಮಕ್ಕಳಲ್ಲಿಯೂ ಈ ಕೊರತೆ ಕಂಡುಬರುತ್ತದೆ. ಆದರೆ ಹಲವಾರು ಸಂದರ್ಭಗಳಲ್ಲಿ ಮಕ್ಕಳಲ್ಲಿ ಪ್ರೋಟೀನ್ ಕೊರತೆಯ ಲಕ್ಷಣಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಏಮ್ಸ್ ದೆಹಲಿಯ ಪೀಡಿಯಾಟ್ರಿಕ್ ವಿಭಾಗದ ಡಾ. ಹಿಮಾಂಶು ಭದಾನಿ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಬೆಳೆಯುತ್ತಿರುವ ಮಕ್ಕಳಿಗೆ ಪ್ರೋಟೀನ್ ಅತ್ಯಂತ ಮುಖ್ಯ….

Read More

‘ಕೆಡಿ’ ಸಿನಿಮಾ ಅಶ್ಲೀಲ ಹಾಡು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ; ಲೋಕಸಭೆಯಲ್ಲಿ ಘೋಷಣೆ

ಸಂಜಯ್ ದತ್ ಮತ್ತು ನೋರಾ ಫತೇಹಿ ನಟಿಸಿದ ‘ಸರ್ಕೆ ಚುನರ್ ತೇರಿ’ (Sarke Chunar Teri Sarke) ಹಾಡಿನ ವಿರುದ್ಧ ದೇಶಾದ್ಯಂತ ವ್ಯಕ್ತವಾದ ತೀವ್ರ ಆಕ್ರೋಶದ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಹಾಡನ್ನು ಅಧಿಕೃತವಾಗಿ ನಿಷೇಧಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ (KD) ಸಿನಿಮಾದ ಈ ಹಾಡಿನಿಂದ ಇಡೀ ಕನ್ನಡ ಚಿತ್ರರಂಗಕ್ಕೆ ಮುಜುಗರ ಆದಂತಾಗಿದೆ….

Read More

IPL 2026: ಅಭಿಷೇಕ್ ಶರ್ಮಾ ಅಲ್ಲ.. SRH ತಂಡಕ್ಕೆ ನೂತನ ನಾಯಕ ನೇಮಕ

2026 ರ ಐಪಿಎಲ್ ಆರಂಭಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಂಡಕ್ಕೆ ಹೊಸ ನಾಯಕನನ್ನು ನೇಮಿಸಿದೆ. ಕಳೆದ ಆವೃತ್ತಿಯಲ್ಲಿ ಈ ತಂಡದ ನಾಯಕತ್ವ ಹೊತ್ತಿದ್ದ ಆಸ್ಟ್ರೇಲಿಯಾದ ಆಟಗಾರ ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಈ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ತಂಡದ ಚುಕ್ಕಾಣಿಯನ್ನು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್​ಗೆ ವಹಿಸಲಾಗಿದೆ. ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಬದಲಾಗುವುದು ಈ ಮೊದಲೇ ಖಚಿತವಾಗಿತ್ತು. ಅದರಂತೆ ತಂಡದ ಯುವ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾಗೆ…

Read More

ಹಬ್ಬಕ್ಕೆ ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ

ಬೆಂಗಳೂರು, ಮಾರ್ಚ್​ 18: ಯುಗಾದಿ ಮತ್ತು ರಂಜಾನ್ ಹಬ್ಬ ಹಿನ್ನೆಲೆ ಇಂದು ಮಧ್ಯಾಹ್ನದಿಂದಲೇ ಜನರು ತಮ್ಮ ಊರಿಗೆ ಹೊರಟ್ಟಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್​ನಲ್ಲಿ ಕಿಕ್ಕಿರಿದು ತುಂಬಿದ್ದಾರೆ. ಬಸ್​ಗಳು ಬರುತ್ತಿದ್ದಂತೆ ಕಿಟಕಿ ಮೂಲಕ ಬ್ಯಾಗ್ ಗಳನ್ನು ಹಾಕಿ ಸೀಟ್​ ಪ್ರಯಾಣಿಕರು ಮುಂದಾಗಿದ್ದಾರೆ. ಇದೇ ವೇಳೆ ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಓರ್ವ ಮಹಿಳೆ ಕೆಳಗೆಬಿದಿದ್ದಾರೆ. ಸರ್ಕಾರಿ ಬಸ್ ಮುಂದೆ ಚಲಿಸುವಾಗ ಮಹಿಳೆ ಆಯತಪ್ಪಿಬಿದಿದ್ದಾರೆ. ಸಹ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಡಿಯೋ ನೋಡಿ. ಮತ್ತಷ್ಟು…

Read More

ಮಾರ್ಗ ಬದಲಿಸಿ ಭಾರತಕ್ಕೆ ಧಾವಿಸಿದ ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್‌ಗಳು

ನವದೆಹಲಿ, ಮಾರ್ಚ್ 18: ಚೀನಾಕ್ಕೆ ಹೋಗುತ್ತಿದ್ದ ರಷ್ಯಾದ ತೈಲ (Oil Tanker) ತುಂಬಿದ ಟ್ಯಾಂಕರ್ ದಕ್ಷಿಣ ಚೀನಾದ ಸಮುದ್ರದಲ್ಲಿ ತನ್ನ ದಿಕ್ಕನ್ನು ಬದಲಾಯಿಸಿದೆ. ಆ ಹಡಗು ಯು-ಟರ್ನ್ ಹೊಡೆದು ಈಗ ಭಾರತಕ್ಕೆ ಆಗಮಿಸುತ್ತಿದೆ. ಅಮೆರಿಕ, ಇಸ್ರೇಲ್-ಇರಾನ್ ಯುದ್ಧದ ಮಧ್ಯೆ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಡಗಿನ ಟ್ರ್ಯಾಕಿಂಗ್ ಡೇಟಾ ಅಫ್ರಾಮ್ಯಾಕ್ಸ್ ಟ್ಯಾಂಕರ್ ಅಕ್ವಾ ಟೈಟಾನ್ ಮಾರ್ಚ್ 21ರಂದು ರಷ್ಯಾದ ಯುರಲ್ಸ್ ಕಚ್ಚಾ ತೈಲದ ಸರಕುಗಳನ್ನು ಹೊತ್ತು ನವಮಂಗಳೂರು ಬಂದರಿಗೆ ಆಗಮಿಸುವ…

Read More

ಹಬ್ಬಕ್ಕೆ ಊರಿಗೆ ಹೊರಟವರಿಗೆ ಭರ್ಜರಿ ಶಾಕ್​​: ಬಸ್​​ಗಳ ಟಿಕೆಟ್​​ ದರ ದುಪ್ಟಟ್ಟು ಏರಿಕೆ

ಬೆಂಗಳೂರು, ಮಾರ್ಚ್​​ 18: ಯುಗಾದಿ ಮತ್ತು ರಂಜಾನ್​​ ಹಬ್ಬಗಳನ್ನು ಮನೆಯವರ ಜೊತೆ ಸೇರಿಕೊಂಡು ಆಚರಿಸಬೇಕು ಎಂಬ ಆಸೆಯಲ್ಲಿ ಬೆಂಗಳೂರಿನಿಂದ ಊರುಗಳತ್ತ ಮುಖ ಮಾಡುತ್ತಿರುವ ಪ್ರಯಾಣಿಕರಿಗೆ ಭರ್ಜರಿ ಶಾಕ್​​ ಎದುರಾಗಿದೆ. ಇದೇ ಸಮಯವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್​​ ಮಾಲಕರು ದುಪ್ಪಟ್ಟು ದರ ವಸೂಲಿಗೆ ಇಳಿದಿದ್ದಾರೆ. ನಾಳೆ ಯುಗಾದಿ ಹಬ್ಬವಾದರೆ, ಶುಕ್ರವಾರ ಹೊಸ ತೊಡಕು ಆಚರಣೆ ಇದೆ. ಶನಿವಾರ ರಂಜಾನ್​​ ಬಂದಿದ್ದು, ಭಾನುವಾರ ಎಂದಿನಂತೆ ವಾರದ ರಜೆ ಇರಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನ ಊರುಗಳತ್ತ ಹೊರಟು ನಿಂತಿದ್ದಾರೆ….

Read More

Video: ಹಗ್ಗ ಎಳೆದ್ರೂ ಕದಲದೇ ನಿಂತಿದ್ದ ಎಮ್ಮೆ ಕರುವಿಗೆ ಸವಾಲು ಹಾಕಿದ ಪುಟಾಣಿ

ಈಗಿನ ಕಾಲದ ಮಕ್ಕಳು (children) ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆನೇ. ಏನೇ ಕೇಳಿದ್ರೂ ಪಟ ಪಟನೇ ಉತ್ತರ ಹೇಳ್ತಾರೆ. ಹೆತ್ತವರನ್ನು ಮಾತಿನಲ್ಲೇ ಕಟ್ಟಿ ಹಾಕ್ತಾರೆ, ಆದರೆ ಈ ಪುಟ್ಟ ಹುಡುಗಿಯೂ (little girl) ಎಮ್ಮೆ ಕರುವಿಗೆ ಓಪನ್ ಚಾಲೆಂಜ್ ಹಾಕಿದ್ದಾಳೆ. ಕುತ್ತಿಗೆಗೆ ಕಟ್ಟಿದ ಹಗ್ಗವನ್ನು ಎಷ್ಟೇ ಎಳೆದರೂ ಎಮ್ಮೆ ಕರುವು ಕದಲದೇ ಹಾಗೆಯೇ ನಿಂತುಕೊಂಡಿದ್ದು, ಇದರಿಂದ ಕೋಪಗೊಂಡ  ಈ ಪುಟ್ಟ ಹುಡುಗಿಯೂ ಸವಾಲು ಹಾಕಿರುವ ವಿಡಿಯೋ ವೈರಲ್‌ ಆಗಿದೆ. ಈ ಪುಟ್ಟ ಬಾಲಕಿಯ ಮಾತು ಕೇಳಿ ನೆಟ್ಟಿಗರು…

Read More