ಮರೆವನ್ನು ಕಡಿಮೆ ಮಾಡಿ ಮೆದುಳಿನ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ಸೇವಿಸಿ; ಇಲ್ಲಿದೆ ತಜ್ಞರ ಸಲಹೆ – Kannada News | Brain Health: 7 Foods That May Help Keep Your Mind Sharp and Active

ಮೆದುಳು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಯೋಚಿಸುವುದು, ಹೊಸ ವಿಷಯಗಳನ್ನು ಕಲಿಯುವುದು, ನೆನಪಿಟ್ಟುಕೊಳ್ಳುವುದು, ಗಮನವನ್ನು ಕೇಂದ್ರೀಕರಿಸುವುದು ಸೇರಿದಂತೆ ದೈನಂದಿನ ಜೀವನದ ಹಲವು ಪ್ರಮುಖ ಕಾರ್ಯಗಳು ಮೆದುಳಿನ ಆರೋಗ್ಯದ ಮೇಲೆ ಅವಲಂಬಿತವಾಗಿವೆ. ಹೀಗಾಗಿ ದೇಹದ ಆರೋಗ್ಯದ ಜೊತೆಗೆ ಬ್ರೈನ್ ಹೆಲ್ತ್ (Brain Health) ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ. ನಮ್ಮ ಜೀವನಶೈಲಿ, ನಿದ್ರೆ, ವ್ಯಾಯಾಮ ಮತ್ತು ಮುಖ್ಯವಾಗಿ ಆಹಾರ ಪದ್ಧತಿ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆರೋಗ್ಯಕರ ಆಹಾರವನ್ನು ನಿಯಮಿತವಾಗಿ ಸೇವಿಸುವುದು ಮೆದುಳಿನ ಸಾಮಾನ್ಯ ಕಾರ್ಯನಿರ್ವಹಣೆಗೆ ಸಹಾಯ ಮಾಡಬಹುದು. ಹಾಗಾದರೆ ಮೆದುಳನ್ನು ಆರೋಗ್ಯಕರವಾಗಿ ಮತ್ತು ಚುರುಕಾಗಿ ಇರಿಸಿಕೊಳ್ಳಲು ಯಾವ ಆಹಾರಗಳನ್ನು ಡಯಟ್‌ನಲ್ಲಿ ಸೇರಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಮೆದುಳಿನ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ಡಯಟ್‌ನಲ್ಲಿ ಸೇರಿಸಿ

Healthline ಪ್ರಕಾರ, ಮೆದುಳಿನ ಆರೋಗ್ಯಕ್ಕೆ ಅಗತ್ಯವಾದ ವಿವಿಧ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸಬಹುದು.

ಕೊಬ್ಬಿನ ಅಂಶವಿರುವ ಮೀನು: ಸಾಲ್ಮನ್ ಮತ್ತು ಸಾರ್ಡಿನ್‌ನಂತಹ ಕೊಬ್ಬಿನ ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್‌ಗಳು ಇರುತ್ತವೆ. ಇವು ಮೆದುಳಿನ ಕೋಶಗಳ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳಾಗಿವೆ. ಮೀನು ಸೇವಿಸುವವರು ತಮ್ಮ ಆಹಾರದಲ್ಲಿ ಇಂತಹ ಮೀನುಗಳನ್ನು ಸೂಕ್ತ ಪ್ರಮಾಣದಲ್ಲಿ ಸೇರಿಸಬಹುದು.

ಅಖರೋಟ: ಸಾಮಾನ್ಯವಾಗಿ ಅಖರೋಟದಲ್ಲಿ ಒಮೆಗಾ-3 ಫ್ಯಾಟಿ ಆಸಿಡ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಹೀಗಾಗಿ ಇದನ್ನು ಆರೋಗ್ಯಕರ ಸ್ನ್ಯಾಕ್ ಆಗಿ ಸೇವಿಸಬಹುದು. ಪ್ರತಿದಿನದ ಆಹಾರದಲ್ಲಿ ಬೀಜಗಳು ಮತ್ತು ಕಾಯಿ ವರ್ಗದ ಆಹಾರಗಳನ್ನು ಸಮತೋಲಿತ ಪ್ರಮಾಣದಲ್ಲಿ ಸೇರಿಸುವುದು ಉತ್ತಮ.

ಬೆರ್ರಿಗಳು: ಬ್ಲೂಬೆರ್ರಿ ಮತ್ತು ಸ್ಟ್ರಾಬೆರ್ರಿಯಂತಹ ಬೆರ್ರಿಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಇವು ದೇಹದ ಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡಬಹುದು. ಹಣ್ಣುಗಳ ಭಾಗವಾಗಿ ಬೆರ್ರಿಗಳನ್ನು ಡಯಟ್‌ನಲ್ಲಿ ಸೇರಿಸಬಹುದು.

ಮೊಟ್ಟೆ: ಸಾಮಾನ್ಯವಾಗಿ ಮೊಟ್ಟೆಯಲ್ಲಿ ಕೋಲಿನ್ ಸೇರಿದಂತೆ ಹಲವು ಪೋಷಕಾಂಶಗಳಿವೆ. ಕೋಲಿನ್ ಮೆದುಳಿನ ಸಾಮಾನ್ಯ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದಾಗಿದೆ. ಮೊಟ್ಟೆಯನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸಬಹುದು.

ಹಸಿರು ಸೊಪ್ಪುಗಳು: ಪಾಲಕ್ ಮತ್ತು ಬ್ರೊಕೊಲಿಯಂತಹ ಹಸಿರು ತರಕಾರಿಗಳಲ್ಲಿ ಫೋಲೇಟ್, ವಿಟಮಿನ್ ಕೆ ಸೇರಿದಂತೆ ಹಲವು ಪೋಷಕಾಂಶಗಳು ದೊರೆಯುತ್ತವೆ. ಇಂತಹ ತರಕಾರಿಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸುವುದು ಒಟ್ಟಾರೆ ಆರೋಗ್ಯಕ್ಕೆ ಸಹಾಯಕ.

ಇದನ್ನೂ ಓದಿ: ತಿಂದ ತಕ್ಷಣ ನಿದ್ರೆ ಬರುತ್ತಿದೆಯೇ? ಕಾರ್ಬೋಹೈಡ್ರೇಟ್‌ನಿಂದ ಹಿಡಿದು ನಿದ್ರೆಯ ಕೊರತೆಯವರೆಗೆ ಕಾರಣಗಳೇನು?

ಕುಂಬಳಕಾಯಿ ಬೀಜ: ಈ ಬೀಜಗಳಲ್ಲಿ ವಿವಿಧ ಖನಿಜಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಇರುತ್ತವೆ. ಇವುಗಳನ್ನು ಸಲಾಡ್, ಓಟ್ಸ್ ಅಥವಾ ಆರೋಗ್ಯಕರ ಸ್ನ್ಯಾಕ್‌ನ ಭಾಗವಾಗಿ ಸೇವಿಸಬಹುದು.

ಡಾರ್ಕ್ ಚಾಕೊಲೇಟ್: ಹೆಚ್ಚಿನ ಕೋಕೋ ಇರುವ ಡಾರ್ಕ್ ಚಾಕೊಲೇಟ್‌ನಲ್ಲಿ ಫ್ಲೇವನಾಯ್ಡ್‌ಗಳು ಮತ್ತು ಕೆಲವು ಖನಿಜಗಳು ಕಂಡುಬರುತ್ತವೆ. ಆದರೆ ಇದರಲ್ಲಿ ಕ್ಯಾಲೊರಿ ಮತ್ತು ಸಕ್ಕರೆಯ ಪ್ರಮಾಣವೂ ಇರಬಹುದು. ಆದ್ದರಿಂದ ಇದನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಆಹಾರ ಮಾತ್ರವಲ್ಲ, ಈ ಅಭ್ಯಾಸಗಳೂ ಮುಖ್ಯ

ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಕೇವಲ ಆಹಾರದ ಮೇಲೆ ಅವಲಂಬಿಸುವುದು ಸಾಕಾಗುವುದಿಲ್ಲ. ಪ್ರತಿದಿನ ಸರಿಯಾಗಿ ನಿದ್ರೆ ಮಾಡುವುದು ಕೂಡ ಬಹಳ ಮುಖ್ಯ. ನಿದ್ರೆಯ ಸಮಯದಲ್ಲಿ ದೇಹ ಮತ್ತು ಮೆದುಳಿಗೆ ವಿಶ್ರಾಂತಿ ದೊರೆಯುತ್ತದೆ. ಇದರ ಜೊತೆಗೆ ನಿಯಮಿತವಾಗಿ ವಾಕಿಂಗ್, ವ್ಯಾಯಾಮ ಅಥವಾ ಇತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಒತ್ತಡ ಕಡಿಮೆ ಮಾಡಲು ಯೋಗ, ಧ್ಯಾನ ಅಥವಾ ನಿಮಗೆ ಇಷ್ಟವಾದ ಚಟುವಟಿಕೆಗಳನ್ನು ಅಭ್ಯಾಸ ಮಾಡಬಹುದು. ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ. ಮಧ್ಯೆ ಮಧ್ಯೆ ಎದ್ದು ನಡೆಯುವ ಅಭ್ಯಾಸ ಮಾಡಿಕೊಳ್ಳಿ. ಧೂಮಪಾನ ಮತ್ತು ಅತಿಯಾದ ಮದ್ಯಪಾನದಿಂದ ದೂರವಿರುವುದೂ ಮೆದುಳಿನ ಆರೋಗ್ಯಕ್ಕೆ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಸುಗಳಿಂದ ಟ್ರಾಫಿಕ್​​ ಜಾಮ್​​ ಆಗಿದ್ದಕ್ಕೆ ಅವುಗಳ ಮಾಲೀಕನ ಮೇಲೆ FIR!: ಏರ್​ಪೋರ್ಟ್ ಸಂಚಾರ ಠಾಣೆಯಲ್ಲಿ ಪ್ರಕರಣ – Kannada News | Bengaluru: FIR Filed Against Cow Owner After Cattle Cause Traffic Gridlock on Ring Road

ಹಸುಗಳ ಮಾಲೀಕನ ಮೇಲೆ FIR!
Image Credit source: Tv9 Kannada

ಬೆಂಗಳೂರು, ಆಗಸ್ಟ್​​ 11: ಬೆಂಗಳೂರು (Bengaluru) ಎಂದಾಕ್ಷಣ ಮೊದಲಿಗೆ ನೆನಪಾಗೋದೇ ನಗರದಲ್ಲಿನ ಟ್ರಾಫಿಕ್ (Traffic)​​ ಸಮಸ್ಯೆ. ವಾಹನದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ, ಜಿಬಿಎಯಿಂದ ಸಾಕಷ್ಟು ಕ್ರಮಗಳ ಹೊರತಾಗಿಯೂ ಸಂಚಾರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಈ ನಡುವೆ ಸಾರ್ವಜನಿಕರು ಹುಬ್ಬೇರಿಸುವಂತಹ ಘಟನೆಯೊಂದು ಬೆಂಗಳೂರಲ್ಲಿ ನಡೆದಿದೆ. ಹಸುಗಳಿಂದ ಟ್ರಾಫಿಕ್​​ ಜಾಮ್​​ ಉಂಟಾಗಿರುವ ಕಾರಣಕ್ಕೆ ಅವುಗಳ ಮಾಲೀಕನ ವಿರುದ್ಧ ಏರ್​ಪೋರ್ಟ್ ಸಂಚಾರ ಠಾಣೆಯಲ್ಲಿ ಪ್ರಕರಣ (ಎಫ್​​ಐಆರ್​)​ ದಾಖಲಾಗಿದೆ.

ಏನಿದು ಪ್ರಕರಣ?

ಆಗಸ್ಟ್​​ 10ರ ಬೆಳಿಗ್ಗೆ ಕಳಾಮಂದಿರ ಹತ್ತಿರದ ರಿಂಗ್ ರಸ್ತೆಯಲ್ಲಿ ಸುಮರು 9 ರಿಂದ 10 ಹಸುಗಳು ರಸ್ತೆಯಲ್ಲಿ ಓಡಾಡಿಕೊಂಡಿದ್ದವು. ಈ ಕಾರಣದಿಂದ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹೀಗಾಗಿ ಈ ರೀತಿಯ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸದ ಕಾರಣ ಮಾರತ್ತಹಳ್ಳಿಯ ಅಶ್ವಥನಗರ ನಿವಾಸಿಯಾಗಿರುವ ಹಸುಗಳ ಮಾಲೀಕ ಸಂತೋಷ್​​ ಎಂಬವರಿಗೆ ಪೊಲೀಸರು ಶಾಕ್​​ ಕೊಟ್ಟಿದ್ದಾರೆ. ಹಸುಗಳನ್ನು ರಸ್ತೆಯಲ್ಲಿ ಬಿಟ್ಟು ಇತರೆ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಲು ಕಾರಣರಾಗಿದ್ದಾರೆ ಎಂದು ಅವರ ವಿರುದ್ಧ ಎಫ್​​ಐಆರ್​​ ದಾಖಲಿಸಲಾಗಿದೆ.

ಇದನ್ನೂ ಓದಿ: ಕಂಠೀರವ ಸ್ಟುಡಿಯೋ ಅಂಡರ್‌ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿತ: ಇಬ್ಬರು ಕಾರ್ಮಿಕರ ಸಾವು

ದೂರು ನೀಡಿದ್ದ ಪೊಲೀಸ್​​ ಸಿಬ್ಬಂದಿ

ಘಟನೆ ನಡೆದಿರುವ ದಿನ ರಿಂಗ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ HAL ಏರ್ಪೋರ್ಟ್​​ ಸಂಚಾರ ಪೊಲೀಸ್‌ ಠಾಣೆಯ ಸಿಬ್ಬಂದಿ ನಾಗೇಂದ್ರ ಎಂಬವರು ಈ ಸಂಬಂಧ ದೂರು ದಾಖಲಿಸಿದ್ದರು. ಅದರನ್ವಯ ಹಸುಗಳ ಮಾಲೀಕ ಸಂತೋಷ್​​ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023, (U/S 285) ಅಡಿ ಸಂಚಾರಕ್ಕೆ ಅಡಚಣೆ ಉಂಟು ಮಾಡಿದಕ್ಕೆ ಕೇಸ್ ದಾಖಲು ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

SBI Recruitment 2026: SBIನಲ್ಲಿ 1,538 ಜೂನಿಯರ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ; ಪೂರ್ಣ ವಿವರ ಇಲ್ಲಿದೆ! – Kannada News | SBI Junior Associate Recruitment 2026: 1538 Backlog Vacancies for SC, ST, OBC

ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಲು ಬಯಸುತ್ತಿರುವ ಅಭ್ಯರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತೊಂದು ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿದೆ. ದೇಶಾದ್ಯಂತ ವಿವಿಧ ವಲಯಗಳಲ್ಲಿ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳನ್ನು ಭರ್ತಿ ಮಾಡಲು ಎಸ್‌ಬಿಐ ವಿಶೇಷ ನೇಮಕಾತಿ ಅಭಿಯಾನವನ್ನು ಪ್ರಾರಂಭಿಸಿದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಬಾರಿಯ ನೇಮಕಾತಿಯನ್ನು ಹಮ್ಮಿಕೊಳ್ಳಲಾಗಿದೆ.

ಹುದ್ದೆಗಳ ವಿವರ ಮತ್ತು ವರ್ಗವಾರು ಹಂಚಿಕೆ:

ಈ ವಿಶೇಷ ನೇಮಕಾತಿ ಅಭಿಯಾನದ ಮೂಲಕ ಒಟ್ಟು 1,538 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳು ಸಂಪೂರ್ಣವಾಗಿ ಎಸ್‌ಸಿ (SC), ಎಸ್‌ಟಿ (ST) ಮತ್ತು ಒಬಿಸಿ (OBC) ವರ್ಗಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಲಭ್ಯವಿರುತ್ತವೆ. ವರ್ಗವಾರು ಹುದ್ದೆಗಳ ಹಂಚಿಕೆಯನ್ನು ನೋಡುವುದಾದರೆ, ಎಸ್‌ಟಿ (ST) ಅಭ್ಯರ್ಥಿಗಳಿಗೆ 1,219 ಹುದ್ದೆಗಳು, ಎಸ್‌ಸಿ (SC) ಅಭ್ಯರ್ಥಿಗಳಿಗೆ 207 ಹುದ್ದೆಗಳು ಹಾಗೂ ಒಬಿಸಿ (OBC) ಅಭ್ಯರ್ಥಿಗಳಿಗೆ 112 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಇದಲ್ಲದೆ, ಮಧ್ಯಪ್ರದೇಶ ರಾಜ್ಯ ಒಂದರಲ್ಲೇ ಒಟ್ಟು 134 ಹುದ್ದೆಗಳು ಲಭ್ಯವಿವೆ.

ಶೈಕ್ಷಣಿಕ ಅರ್ಹತೆಯ ನಿಯಮಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ (Degree) ಪೂರ್ಣಗೊಳಿಸಿರಬೇಕು. ಪ್ರಸ್ತುತ ತಮ್ಮ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆದರೆ, ಅಧಿಸೂಚನೆಯಲ್ಲಿ ಸೂಚಿಸಲಾದ ಗಡುವಿನೊಳಗೆ ಅವರು ತಮ್ಮ ಶೈಕ್ಷಣಿಕ ಅರ್ಹತೆಯ ಪೂರ್ಣ ಪ್ರಮಾಣಪತ್ರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇದರ ಜೊತೆಗೆ, ಅಭ್ಯರ್ಥಿಗಳು ತಮ್ಮ ರಾಜ್ಯದ ಸಂಬಂಧಿತ ಸ್ಥಳೀಯ ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.

ವಯಸ್ಸಿನ ಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸನ್ನು ಏಪ್ರಿಲ್ 1, 2026 ರ ಅನ್ವಯ ಲೆಕ್ಕಾಚಾರ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 28 ವರ್ಷ ಮೀರಿರಬಾರದು. ಸರ್ಕಾರದ ನಿಯಮಾವಳಿಗಳ ಪ್ರಕಾರ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಇತರ ಮೀಸಲಾತಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ವೇತನ ಶ್ರೇಣಿ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜೂನಿಯರ್ ಅಸೋಸಿಯೇಟ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ದೊರೆಯಲಿದೆ. ಈ ಹುದ್ದೆಗಳಿಗೆ ನಿಯೋಜನೆಗೊಳ್ಳುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ರೂ. 26,730 ರಿಂದ ರೂ. 46,000 ವರೆಗೆ ವೇತನ ಸಿಗಲಿದೆ. ಬ್ಯಾಂಕಿಂಗ್ ವಲಯದಲ್ಲಿ ಸ್ಥಿರ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ:

ಸಾಮಾನ್ಯ, ಇಡಬ್ಲ್ಯೂಎಸ್ (EWS) ಮತ್ತು ಒಬಿಸಿ (OBC) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ರೂ. 750 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ, ಎಸ್‌ಸಿ (SC), ಎಸ್‌ಟಿ (ST) ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಈ ಅಭ್ಯರ್ಥಿಗಳು ಸಂಪೂರ್ಣವಾಗಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆಯ ಹಂತಗಳು:

ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬ್ಯಾಂಕ್ ಹಲವಾರು ಹಂತಗಳ ಪರೀಕ್ಷೆಗಳನ್ನು ನಡೆಸುತ್ತದೆ. ಮೊದಲ ಹಂತವಾಗಿ ಆನ್‌ಲೈನ್ ಪೂರ್ವಭಾವಿ ಪರೀಕ್ಷೆ (Preliminary Exam) ನಡೆಯಲಿದ್ದು, ಇದರಲ್ಲಿ ತೇರ್ಗಡೆಯಾದವರಿಗೆ ಆನ್‌ಲೈನ್ ಮುಖ್ಯ ಪರೀಕ್ಷೆ (Main Exam) ನಡೆಸಲಾಗುತ್ತದೆ. ಅಂತಿಮವಾಗಿ ಅಭ್ಯರ್ಥಿಗಳ ಸ್ಥಳೀಯ ಭಾಷಾ ಜ್ಞಾನವನ್ನು ಪರೀಕ್ಷಿಸಲು ‘ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ’ (LLPT) ನಡೆಸಲಾಗುತ್ತದೆ. ಈ ಎಲ್ಲಾ ಹಂತಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಅಂತಿಮವಾಗಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: ಆಗಸ್ಟ್ 7, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 27, 2026
  • ಪೂರ್ವಭಾವಿ ಪರೀಕ್ಷೆ (Prelims): ಸೆಪ್ಟೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ.
  • ಮುಖ್ಯ ಪರೀಕ್ಷೆ (Mains): ಅಕ್ಟೋಬರ್ ಅಥವಾ ನವೆಂಬರ್​​ನಲ್ಲಿ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ನೇಮಕಾತಿ ಪೋರ್ಟಲ್ ಮೂಲಕವೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೊದಲು ಅಭ್ಯರ್ಥಿಗಳು ಎಸ್‌ಬಿಐ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳುವುದು ಕಡ್ಡಾಯವಾಗಿದೆ. ಪರೀಕ್ಷಾ ದಿನಾಂಕಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳು ನಿಯಮಿತವಾಗಿ ಎಸ್‌ಬಿಐ ಅಧಿಕೃತ ವೆಬ್​ಸೈಟ್‌ ಪರಿಶೀಲಿಸುತ್ತಿರಬೇಕು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಮೈಸೂರು ಭಾಗದ ಅಸಮಾಧಾನಿತ ಶಾಸಕರ ಸಭೆ: ವಿಚಾರ ತಿಳಿದು ಓಡೋಡಿ ಬಂದ ಯತೀಂದ್ರ – Kannada News | Cabinet Expansion Row: dissident In Congress, MLAs Meeting In Mysuru

ಮೈಸೂರು, (ಆಗಸ್ಟ್ 11): ರಾಜ್ಯದಲ್ಲಿ ನೂತನವಾಗಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಬಳಿಕ, ಅದರಲ್ಲೂ ಸಚಿವ ಸಂಪುಟ ಪುನಾರಚನೆ (Karnataka Cabinet Expansion) ಆದ ಬಳಿಕ ಕಾಂಗ್ರೆಸ್ (Karnataka Congress) ಒಳಗೆ ಅಸಮಾಧಾನದ ಹೊಗೆ ಬಹಿರಂಗವಾಗಿ ಭುಗಿಲೇಳುತ್ತಿದೆ. ಸಚಿವ ಸಂಪುಟ ವಿಸ್ತರಣೆಯಾಗಿ ವಾರ ಕಳೆದರೂ ಇನ್ನೂ ಭಿನ್ನಮತ ಶಮನವಾಗುವ ಲಕ್ಷಣ ಕಾಣುತ್ತಿಲ್ಲ. ಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಖುದ್ದು ಅಸಮಾಧಾನಿತ ಹಿರಿಯ ಶಾಸಕರ ಮನೆಗೆ ತೆರಳಿ ಮನವೊಲಿಸುವ ಯತ್ನ ನಡೆಸಿದ್ದಾರೆ. ಆದರೂ ಸಹ ಕೆಲ ಹಿರಿಯ ಶಾಸಕರ ಅಸಮಾಧಾನ ತಣ್ಣಗಾಗಿಲ್ಲ. ಇದಕ್ಕೆ ಪೂರಕವೆಂಬಂತೆ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಜಿ ಸಚಿವ, ಹಿರಿಯ ನಾಯಕ ಹೆಚ್.ಸಿ ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ತನ್ವೀರ್ ಸೇಠ್ ಸಭೆ ನಡೆಸಿದ್ದಾರೆ. ಇದು ಸಚಿವ ಯತೀಂದ್ರ ಸಿದ್ದರಾಮಯ್ಯನವರ ಗಮನಕ್ಕೆ ಬರುತ್ತಿದ್ದಂತೆಯೇ ಅವರು ನೇರವಾಗಿ ಅಸಮಾಧಾನಿತ ಶಾಸಕರ ಸಭೆ ಸ್ಥಳಕ್ಕೆ ತೆರಳಿ ಸಮಾಧಾನ ಮಾಡುವ ಕಸರತ್ತು ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಅಬ್ಬಬ್ಬ ಅಂಥ ಸಿನಿಮಾ ನೋಡಿರಲಿಲ್ಲ’ ಕನ್ನಡ ಚಿತ್ರದ ಬಗ್ಗೆ ತೆಲುಗು ನಟ ಮಾತು – Kannada News | Telugu actor Sunil praised KGF 2 movie

ಕನ್ನಡ ಸಿನಿಮಾಗಳ (Kannada Cinema) ಬಗ್ಗೆ ಪರಭಾಷೆ ಚಿತ್ರರಂಗದವರು ಗೇಲಿ ಮಾಡುತ್ತಿದ್ದ ಸಮಯ ಒಂದಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಸಮಯ ಸಾಕಷ್ಟು ಬದಲಾಗಿದೆ. ವಿಶ್ವ ಚಿತ್ರರಂಗ ತಿರುಗಿ ನೋಡುವಂಥಹಾ ಕೆಲ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ನಿರ್ಮಾಣ ಆಗಿವೆ. ಪರಭಾಷೆ ನಟ-ನಟಿಯರು ಕನ್ನಡ ಸಿನಿಮಾಗಳನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ದಶಕಕ್ಕೂ ಹೆಚ್ಚು ಸಮಯದಿಂದ ಹಾಸ್ಯ ನಟನಾಗಿ, ವಿಲನ್ ಆಗಿ ನಟಿಸುತ್ತಿರುವ ನಟ ಸುನಿಲ್ ಇದೀಗ ತಮಗೆ ಅದ್ಭುತ ಎನಿಸಿದ ಕನ್ನಡದ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಸುನಿಲ್ ಈ ಹಿಂದೆ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾನಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ಕನ್ನಡದ ‘ಜೋಡೆತ್ತು’ ಸಿನಿಮಾನಲ್ಲಿ ನಟಿಸಲು ಬಂದಿದ್ದಾರೆ. ಈ ವೇಳೆ ಕನ್ನಡದಲ್ಲಿ ತಾವು ನೋಡಿದ ಸಿನಿಮಾ, ತಮಗೆ ಇಷ್ಟವಾದ ಸಿನಿಮಾಗಳ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ‘ನಾನು ಕನ್ನಡದ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ, ಕಾಶಿನಾಥ್ ಅವರಿಂದ ಹಿಡಿದು ಉಪೇಂದ್ರ ಅವರ ಸಿನಿಮಾಗಳನ್ನು ಸಹ ನೋಡಿದ್ದೇನೆ. ಕನ್ನಡದಿಂದ ತೆಲುಗಿಗೆ ಡಬ್ ಆದ ಸಿನಿಮಾಗಳು, ರೀಮೇಕ್ ಆದ ಸಿನಿಮಾಗಳು, ನೇರವಾಗಿ ಕನ್ನಡದ ಸಿನಿಮಾಗಳನ್ನು ಸಹ ನಾನು ನೋಡಿದ್ದೀನಿ’ ಎಂದು ಸುನಿಲ್ ಹೇಳಿದ್ದಾರೆ.

ತಮಗೆ ಇಷ್ಟವಾದ ಕನ್ನಡದ ಸಿನಿಮಾ ಬಗ್ಗೆ ಮಾತನಾಡುತ್ತಾ, ತಮಗೆ ‘ಕೆಜಿಎಫ್ 2’ ಬಹಳ ಇಷ್ಟವಾಯ್ತು ಎಂದಿದ್ದಾರೆ. ಅದೊಂದು ಅದ್ಭುತ, ಅಂಥಹಾ ಹೀರೋಯಿಸಂ ಉಳ್ಳ ಇನ್ನೊಂದು ಸಿನಿಮಾ ಅನ್ನು ನಾನು ಈ ವರೆಗೆ ನೋಡಿಲ್ಲ. ಅಬ್ಬ, ಸಿನಿಮಾದ ಪ್ರಾರಂಭದಿಂದ ಕೊನೆಯ ವರೆಗೂ ಹೀರೋಯಿಸಂ, ಹೀರೋ ಎಲಿವೇಷನ್ ಒಟ್ಟಾರೆ ಆ ಸಿನಿಮಾ ಅತ್ಯದ್ಭುತ. ಸಿನಿಮಾ ಎಂದರೆ, ಹೀರೋಯಿಸಂ ಎಂದರೆ ಹೀಗಿರಬೇಕು ಎಂದು ತೋರಿಸಿದ ಸಿನಿಮಾ ಅದು’ ಎಂದು ಕೊಂಡಾಡಿದ್ದಾರೆ ನಟ ಸುನಿಲ್.

ಇದನ್ನೂ ಓದಿ:ಕನ್ನಡ, ತೆಲುಗು, ತಮಿಳು ಬಳಿಕ ಮಲಯಾಳಂಗೆ ಹೊರಟ ರುಕ್ಮಿಣಿ, ಸಿನಿಮಾ ಯಾವುದು?

‘ನಾನು ‘ಕೆಜಿಎಫ್’ ಸಿನಿಮಾ ನೋಡಿದ್ದೆ, ನನಗೆ ಅದು ಇಷ್ಟವಾಗಿತ್ತು. ಆದರೆ ‘ಕೆಜಿಎಫ್ 2’ ಮೊದಲ ಭಾಗವನ್ನು ಭಾರಿ ಅಂತರದಿಂದ ಬೀಟ್ ಮಾಡಿತು. ಅಂಥಹಾ ಹೀರೋ ಎಲಿವೇಷನ್ ಸಿನಿಮಾ ಆ ವರೆಗೆ ನಾನು ನೋಡಿರಲೇ ಇಲ್ಲ. ಆ ಅದ್ಧೂರಿತನ, ಆ ಮ್ಯೂಸಿಕ್ ಎಲ್ಲವೂ ಅದ್ಭುತವಾಗಿತ್ತು’ ಎಂದು ಸುನಿಲ್ ಹೇಳಿದ್ದಾರೆ.

ಸುನಿಲ್ ಅವರು ಈಗ ಚಿಕ್ಕಣ್ಣ ನಟನೆಯ ‘ಜೋಡೆತ್ತು’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಸುಧಾಕರ್ ನಿರ್ದೇಶಿಸುತ್ತಿದ್ದು, ಕಟ್ಟಿಗೇನಹಳ್ಳಿ ಸೋಮಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಮೈಸೂರಿನ ಹೊರಭಾಗದಲ್ಲಿ ಸಾವಿರಾರು ಸಹ ಕಲಾವಿದರನ್ನು ಸೇರಿಸಿಕೊಂಡು ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಮುಗಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನನ್ನ ಬೆನ್ನಿಗೆ ಚೂರಿ ಹಾಕಿದ್ರು: ಸಚಿವ ಕೆ.ಎಚ್. ಮುನಿಯಪ್ಪ ವಿರುದ್ಧ ಕಿಡಿಕಾರಿದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ – Kannada News | Ministerial Snub: Bangarapet MLA Narayanaswamy’s Outcry Against Kolar Minister

ಕೋಲಾರ, ಆ.11: ಸಚಿವ ಸ್ಥಾನ ಕೈತಪ್ಪಿದ ವಿಚಾರವಾಗಿ ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಮತ್ತೊಮ್ಮೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಲಾರದಲ್ಲಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ನಾರಾಯಣಸ್ವಾಮಿ, “ಮುನಿಯಪ್ಪ ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ” ಎಂದು ನೇರ ಆರೋಪ ಮಾಡಿದ್ದಾರೆ.

ನಿನ್ನೆ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ತಾನು ಗೈರು ಹಾಜರಾಗಿದ್ದರ ಬಗ್ಗೆ ಸ್ಪಷ್ಟನೆ ನೀಡಿರುವ ನಾರಾಯಣಸ್ವಾಮಿ, “ನಾನು ಸಿಎಂ ಕಾರ್ಯಕ್ರಮದಲ್ಲಿ ಗರಂ ಆಗಿರಲಿಲ್ಲ. ಆದರೆ, ನನ್ನ ಬೆನ್ನಿಗೆ ಚೂರಿ ಹಾಕಿದ ಸಚಿವ ಮುನಿಯಪ್ಪ ಅವರನ್ನು ಮುಖ್ಯಮಂತ್ರಿಗಳು ನಿನ್ನೆ ಅತಿಯಾಗಿ ಹೊಗಳಿದರು. ಜಿಲ್ಲೆಯ ಪ್ರಮುಖ ನಾಯಕ, 7 ಬಾರಿ ಗೆದ್ದಿದ್ದಾರೆ ಎಂದು ಮುನಿಯಪ್ಪನವರನ್ನು ಹೊಗಳಿದ್ದು ನನಗೆ ನೋವು ತಂದಿದೆ,” ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬಲಗೈ ಸಮುದಾಯದ ಮತ ಇಲ್ಲದಿದ್ದರೆ ನೀವು ಗೆಲ್ಲುತ್ತಿದ್ರಾ?

ಸಚಿವ ಮುನಿಯಪ್ಪ ಅವರ ರಾಜಕೀಯ ವರ್ಚಸ್ಸಿನ ಬಗ್ಗೆ ಪ್ರಶ್ನಿಸಿರುವ ನಾರಾಯಣಸ್ವಾಮಿ, “ಬಲಗೈ ಸಮುದಾಯ ಮತ ಹಾಕಿಲ್ಲ ಅಂದ್ರೆ ನೀವು ಎಲ್ಲಿ ಗೆಲ್ಲುತ್ತಿದ್ರಿ ಸ್ವಾಮಿ? 2019ರಲ್ಲಿ ಬಲಗೈ ಸಮುದಾಯದವರು ಸ್ವಲ್ಪ ಮುನಿಸಿಕೊಂಡಿದಕ್ಕೆ ನೀವು ಸೋತಿದ್ದನ್ನು ಮರೆತಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ. ಜಿಲ್ಲೆಯಲ್ಲಿ ಬಲಗೈ ಸಮುದಾಯದ ಮತಗಳನ್ನು ಪಡೆದು, ನಂತರ ಅವರನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಜಿಲ್ಲೆಯಲ್ಲಿ ನಾನು ಮಾತ್ರ ಇರಬೇಕು, ಬೇರೆ ಯಾರೂ ಗೆಲ್ಲಬಾರದು ಎಂಬುದು ಅವರ (ಮುನಿಯಪ್ಪ) ಉದ್ದೇಶ. ಅವರು ಸಂಸದರಾಗಿದ್ದಾಗಲೂ ಇದೇ ಪ್ರಯತ್ನ ಮಾಡಿದ್ದರು. ಅವರು ಎಲ್ಲೆಲ್ಲಿ ಯಾರ್ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದು ಇಡೀ ಜಿಲ್ಲೆಗೆ ಜಗಜ್ಜಾಹೀರಾಗಿದೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನೂತನ ಸಚಿವರ ಖಾತೆ ಕ್ಯಾತೆಗೆ ತೆರೆ ಎಳೆದ ಡಿಕೆ ಶಿವಕುಮಾರ್, ಯಾರಿಗೆ ಯಾವ ಇಲಾಖೆ?

ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಮಾತನಾಡಿರುವ ಶಾಸಕರು, “ನನ್ನ ಅಸಮಾಧಾನದ ಬಗ್ಗೆ ಇನ್ನೂ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಆಗಿಲ್ಲ. ಆ ಚರ್ಚೆ ನಡೆಯುವವರೆಗೂ ನಾನು ಅಂತರ ಕಾಯ್ದುಕೊಳ್ಳುತ್ತೇನೆ. ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹಾಗೂ ಕುಣಿಗಲ್ ಶಾಸಕ ಹೆಚ್.ಡಿ. ರಂಗನಾಥ್ ನನ್ನ ಜೊತೆ ಮಾತನಾಡಿದ್ದಾರೆ. ಸಿಎಂ ಜೊತೆ ಒನ್-ಟು-ಒನ್ ಮಾತನಾಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ನಾವಿನ್ನೂ ಕತ್ತಲಲ್ಲಿದ್ದೇವೆ, ಬೆಳಕು ಬರುವವರೆಗೂ ಕಾಯುತ್ತೇವೆ,” ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಕೋಲಾರ ಕಾಂಗ್ರೆಸ್ ರಾಜಕೀಯದಲ್ಲಿನ ಈ ಆಂತರಿಕ ಕಚ್ಚಾಟ, ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾವು ರೈತರ ಹಿತ ಕಾಪಾಡಬೇಕು, ಕೋರ್ಟ್ ಆದೇಶ ಪಾಲಿಸಬೇಕು: ಕಾವೇರಿ ನದಿ ನೀರಿನ ಬಗ್ಗೆ ಸಿಎಂ ಹೇಳಿದ್ದಿಷ್ಟು – Kannada News | Karnataka’s Legal Battle for Cauvery Water: CM, Minister Respond to TN Release Order

ಬೆಂಗಳೂರು, ಆ.11: ನೆರೆ ರಾಜ್ಯ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ಸ್ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿರುವ ಬೆನ್ನಲ್ಲೇ, ರಾಜ್ಯದ ರೈತರ ಹಿತರಕ್ಷಣೆ ಹಾಗೂ ಮುಂದಿನ ಕಾನೂನಾತ್ಮಕ ಹೋರಾಟದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ರೈತರ ಹಿತ ಕಾಪಾಡುತ್ತೇವೆ, ಕೋರ್ಟ್ ಆದೇಶವನ್ನೂ ಪಾಲಿಸಬೇಕು:

CWRC ಆದೇಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಲಾಶಯಗಳ ಒಳಹರಿವು ಹಾಗೂ ನೀರಿನ ಲಭ್ಯತೆಯನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. “ತಮಿಳುನಾಡಿಗೆ 12,000 ಕ್ಯೂಸೆಕ್ಸ್ ನೀರು ಬಿಡಲು ಆದೇಶ ಬಂದಿದೆ. ನಮ್ಮ ಜಲಾಶಯಗಳ ಒಳಹರಿವು ಎಷ್ಟಿದೆ ಎಂಬುದನ್ನು ಸತತವಾಗಿ ಗಮನಿಸುತ್ತಿದ್ದೇನೆ. ಡ್ಯಾಮ್‌ನಲ್ಲಿರುವ ನೀರಿನ ಲಭ್ಯತೆಯನ್ನು ಇಟ್ಟುಕೊಂಡೇ ತೀರ್ಮಾನ ಮಾಡುತ್ತೇವೆ. ನೀರು ಬಿಡುವ ಆದೇಶದಿಂದ ರೈತರು ಆಕ್ರೋಶಗೊಳ್ಳುವ ಅಗತ್ಯವಿಲ್ಲ. ರೈತರು ತಾಳ್ಮೆಯಿಂದ ಹಾಗೂ ಸೌಹಾರ್ದತೆಯಿಂದ ಇರಿ. ನಮಗೆ ಅಧಿಕಾರ ಕೊಟ್ಟಿದ್ದೇ ನಿಮಗಾಗಿ ಸೇವೆ ಸಲ್ಲಿಸಲು. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಮಾಡುವುದು ನಮಗೆ ಇಷ್ಟವಿಲ್ಲ. ಪ್ರಕೃತಿ ನಮ್ಮನ್ನು ಉಳಿಸುತ್ತದೆ, ನಾವು ನಮ್ಮ ರಾಜ್ಯದ ರೈತರನ್ನು ಬದುಕಿಸುತ್ತೇವೆ.” ಎಂದು ಹೇಳಿದ್ದಾರೆ.

“ನೀರಾವರಿ ವಿಷಯದಲ್ಲಿ ನಾನು ಅತ್ಯಂತ ಪಾರದರ್ಶಕವಾಗಿ ನಡೆದುಕೊಳ್ಳುತ್ತೇನೆ. ಈ ವಿಷಯದಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಕೋರ್ಟ್ ಆದೇಶವನ್ನು ಗೌರವಿಸುವುದರ ಜೊತೆಗೆ ನಮ್ಮ ರೈತರ ಬೆಳೆಗಳನ್ನು ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆ. ನಾಳೆ ಹಿರಿಯ ಮಂತ್ರಿಗಳು, ಪಕ್ಷದ ನಾಯಕರು ಹಾಗೂ ಮರುದಿನ ಸಚಿವ ಸಂಪುಟ (Cabinet) ಸಭೆಯನ್ನು ಕರೆಯಲಾಗಿದ್ದು, ಈ ವಿಷಯವನ್ನು ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಲಾಗುವುದು” ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಮುಂಗಾರು ಮಳೆ ಬರಲು ಸಾಧ್ಯವಿಲ್ಲ: ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರದ ತೀರ್ಮಾನ

CWMA ಮತ್ತು ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಕಾಯುತ್ತಿದ್ದೇವೆ: ರಾಮಲಿಂಗಾರೆಡ್ಡಿ

ಇತ್ತ ಕೋಲಾರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, “CWRC ಮುಂದಿನ 15 ದಿನ ದಿನಕ್ಕೆ 12,000 ಕ್ಯೂಸೆಕ್ ನೀರು ಬಿಡಲು ಹೇಳಿದೆ. ಅಂದರೆ ಬರೋಬ್ಬರಿ 15 ಟಿಎಂಸಿಗೂ ಹೆಚ್ಚು ನೀರು ಬಿಡಬೇಕಾಗುತ್ತದೆ. ನಮ್ಮ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನೀರಾವರಿ ತಜ್ಞರು ಹಾಗೂ ಕಳೆದ 20 ವರ್ಷಗಳಿಂದ ಕಾವೇರಿ ವಿಷಯದಲ್ಲಿ ವಾದ ಮಂಡಿಸುತ್ತಿರುವ ಸುಪ್ರೀಂ ಕೋರ್ಟ್ ವಕೀಲರ ತಂಡ ದೆಹಲಿಯಲ್ಲಿದೆ. ಮೇ, ಜೂನ್, ಜುಲೈ ತಿಂಗಳಲ್ಲಿ ಸುಮಾರು 3.5 ಟಿಎಂಸಿ ನೀರು ಹರಿದುಹೋಗಿದೆ. ಕಬಿನಿ ಜಲಾಶಯ ತುಂಬಿದ್ದರಿಂದ ಅದನ್ನು ಸ್ಟೋರೇಜ್ ಮಾಡಲು ಸಾಧ್ಯವಾಗದೆ 7.5 ಟಿಎಂಸಿಯಷ್ಟು ನೀರು ತಮಿಳುನಾಡಿಗೆ ಹರಿದಿದೆ. ನಮಗೆ ಮುಂಗಾರು ಮಳೆ ಕಡಿಮೆಯಾಗುತ್ತಿದ್ದು, ಆಗಸ್ಟ್ ಮಳೆಯನ್ನು ನಂಬಲು ಸಾಧ್ಯವಿಲ್ಲ. ಆದರೆ ತಮಿಳುನಾಡಿಗೆ ಹಿಂಗಾರು ಮಳೆಯ ಅವಕಾಶವಿದೆ.” ಎಂದು ಹೇಳಿದರು. CWMA ಸಭೆ ಹಾಗೂ ಸುಪ್ರೀಂ ಕೋರ್ಟ್‌ ವಿಚಾರಣೆಯ ತೀರ್ಮಾನಗಳನ್ನು ನೋಡಿಕೊಂಡು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿರಿಯಾದ ಮಾಜಿ ಅಧ್ಯಕ್ಷ, ಪದಚ್ಯುತ ಸರ್ವಾಧಿಕಾರಿ ಬಷಾರ್ ಅಸಾದ್‌ಗೆ ಮರಣದಂಡನೆ ಶಿಕ್ಷೆ – Kannada News | Ousted Syrian President Bashar Al Assad Sentenced To Death For Crimes Against Humanity

ಡಮಾಸ್ಕಸ್, ಆಗಸ್ಟ್ 11: ಸಿರಿಯಾದಲ್ಲಿ ಸುಮಾರು ಅರ್ಧ ಮಿಲಿಯನ್ (5 ಲಕ್ಷ) ಜನರ ಪ್ರಾಣ ಬಲಿ ಪಡೆದ 14 ವರ್ಷಗಳ ಸುದೀರ್ಘ ಸಂಘರ್ಷದ ಅವಧಿಯಲ್ಲಿ ಎಸಗಲಾದ ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಯುದ್ಧ ಅಪರಾಧಗಳಿಗಾಗಿ ಪದಚ್ಯುತ ಅಧ್ಯಕ್ಷ ಬಷಾರ್ ಅಸಾದ್‌ಗೆ (Bashar al-Assad) ಸಿರಿಯಾದ ನ್ಯಾಯಾಲಯವೊಂದು ಇಂದು ಅವರ ಅನುಪಸ್ಥಿತಿಯಲ್ಲೇ ಮರಣದಂಡನೆ ಶಿಕ್ಷೆ ವಿಧಿಸಿದೆ. ಕಟ್ಟುನಿಟ್ಟಿನ ಭದ್ರತೆಯ ನಡುವೆ ಈ ತೀರ್ಪನ್ನು ನೀಡಲಾಯಿತು.

ಇದೇ ಪ್ರಕರಣದಲ್ಲಿ ಅಸಾದ್ ಅವರ ಕಿರಿಯ ಸಹೋದರ ಮಹೇರ್ ಅಸಾದ್‌ಗೂ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. 2011ರ ದಂಗೆಗೆ ಕಾರಣವಾದ ಹಾಗೂ ಸಿರಿಯಾದ ಅಂತರ್​ಯುದ್ಧಕ್ಕೆ ಹಾದಿಮಾಡಿಕೊಟ್ಟ ದಕ್ಷಿಣದ ಪ್ರಾಂತ್ಯ ‘ದಾರಾ’ದಲ್ಲಿ ನಡೆಸಲಾದ ಹಿಂಸಾತ್ಮಕ ದಮನಕಾರಿ ಕೃತ್ಯದ ನೇತೃತ್ವ ವಹಿಸಿದ್ದ ಆರೋಪಕ್ಕಾಗಿ ಅಸಾದ್ ಅವರ ತಾಯಿಯ ಕಡೆಯ ಸಂಬಂಧಿ ಆತಿಫ್ ನಜೀಬ್‌ಗೂ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: ಇಸ್ರೇಲ್ ಕೈಲಾಗದಿದ್ದರೆ ಸಿರಿಯಾ ನಿಭಾಯಿಸಲಿ; ಹೆಜ್ಬುಲ್ಲಾ ನಿಗ್ರಹಕ್ಕೆ ಟ್ರಂಪ್ ಐಡಿಯಾ

ಸರ್ವಾಧಿಕಾರಿ ಮಾಡಿದ್ದೇನು?:

ಸಿರಿಯಾ ಜನತೆಯ ಮೇಲೆ ದಮನಕಾರಿ ನೀತಿ ಅನುಸರಿಸಿದ್ದು, ಸ್ವಂತ ದೇಶದ ನಾಗರಿಕರ ವಿರುದ್ಧವೇ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ, ಸಾಮೂಹಿಕ ಹತ್ಯೆ ಹಾಗೂ ಯುದ್ಧ ಅಪರಾಧಗಳನ್ನು ಎಸಗಿದ ಆರೋಪಗಳು ಅಸಾದ್ ಅವರ ಮೇಲಿದ್ದವು. ಪ್ರಜಾಸತ್ತಾತ್ಮಕ ಹೋರಾಟ ಮತ್ತು ದಂಗೆಯ ಪರಿಣಾಮವಾಗಿ ಅಧಿಕಾರದಿಂದ ಪದಚ್ಯುತಗೊಂಡ ಅಸಾದ್‌ಗೆ ನೂತನ ನ್ಯಾಯಾಂಗ ವ್ಯವಸ್ಥೆಯು ಮರಣದಂಡನೆ ವಿಧಿಸುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿರ್ಧಾರ ತಳೆದಿದೆ. ಸಿರಿಯಾದ ಪಾಲಿಗೆ ಈ ತೀರ್ಪು ಬಹಳ ಮಹತ್ವದ್ದಾಗಿದೆ.

ಸಿರಿಯಾದಲ್ಲಿ ಸಂಭ್ರಮ:

ಅಸಾದ್ ಆಡಳಿತದ ಭೀಕರತೆಗೆ ಬಲಿಯಾದ ಲಕ್ಷಾಂತರ ಕುಟುಂಬಗಳು ಮತ್ತು ಸಿರಿಯಾದ ಸಾರ್ವಜನಿಕರು ಈ ತೀರ್ಪನ್ನು ಸ್ವಾಗತಿಸಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ವಿವಿಧ ಜಾಗತಿಕ ಮಾನವ ಹಕ್ಕುಗಳ ಸಂಸ್ಥೆಗಳು ಸಿರಿಯಾದಲ್ಲಿ ನಡೆದ ಅನ್ಯಾಯಕ್ಕೆ ಈ ತೀರ್ಪು ಶಾಸನಬದ್ಧ ಮುಕ್ತಾಯ ನೀಡಲಿದೆ ಎಂದು ಅಭಿಪ್ರಾಯಪಟ್ಟಿವೆ. ದಶಕಗಳ ಕಾಲ ಸಿರಿಯಾವನ್ನು ಭೀತಿಯ ನೆರಳಿನಲ್ಲಿಟ್ಟಿದ್ದ ಸರ್ವಾಧಿಕಾರಿಗೆ ಇದೀಗ ಮರಣದಂಡನೆ ಶಿಕ್ಷೆಯಾಗಿದೆ.

ಇದನ್ನೂ ಓದಿ: ಸಿರಿಯಾದಲ್ಲಿ ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್ ತಂಗಿದ್ದ ಹೋಟೆಲ್ ಬಳಿ ಬಾಂಬ್ ಸ್ಫೋಟ

ಡಿಸೆಂಬರ್ 2024ರಲ್ಲಿ ದಂಗೆಕೋರ ಪಡೆಗಳು ಡಮಾಸ್ಕಸ್ ಪ್ರವೇಶಿಸಿ, ಅಸಾದ್ ಅವರ ಸುದೀರ್ಘ ಆಡಳಿತವನ್ನು ಅಂತ್ಯಗೊಳಿಸಿದ ನಂತರ ಬಷಾರ್ ಅಸಾದ್ ಮತ್ತು ಅವರ ಸಹೋದರ ಮಹೇರ್ ಸಿರಿಯಾದಿಂದ ಓಡಿಹೋಗಿ ರಷ್ಯಾದಲ್ಲಿ ಆಶ್ರಯ ಪಡೆದಿದ್ದರು. ಹೀಗಾಗಿ ಇಬ್ಬರ ಮೇಲೂ ಅವರ ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಿ ತೀರ್ಪು ನೀಡಲಾಗಿದೆ.

ಮಾರ್ಚ್ 2011ರಲ್ಲಿ ಪ್ರತಿಭಟನೆಗಳು ಭುಗಿಲೆದ್ದ ದಾರಾದಲ್ಲಿ ನಡೆದ ಘಟನೆಗಳು, ಸಿರಿಯಾದ ಆಧುನಿಕ ಇತಿಹಾಸದಲ್ಲಿ ಪ್ರಮುಖ ತಿರುವನ್ನು ನೀಡಿದವು. ಪ್ರತಿಭಟನೆಗಳ ವಿರುದ್ಧ ಸರ್ಕಾರ ಕೈಗೊಂಡ ಹಿಂಸಾತ್ಮಕ ಕ್ರಮವು ದೇಶಾದ್ಯಂತ ಅಶಾಂತಿಯನ್ನು ಹೆಚ್ಚಿಸಿತು. ಇದು ಸುದೀರ್ಘ ಅಂತರ್​ಯುದ್ಧವಾಗಿ ರೂಪಾಂತರಗೊಂಡಿತು. ಈ ಸಂಘರ್ಷದಲ್ಲಿ ಲಕ್ಷಾಂತರ ಜನರನ್ನು ಹತ್ಯೆ ಮಾಡಲಾಯಿತು. ಲಕ್ಷಾಂತರ ಜನರು ದೇಶದ ಒಳಗೆ ಮತ್ತು ಹೊರಗೆ ನಿರಾಶ್ರಿತರಾದರು. ಈ ಹಿನ್ನೆಲೆಯಲ್ಲಿ ಸಿರಿಯಾದಲ್ಲಿ ನಡೆದ ನರಮೇಧಕ್ಕೆ ಈ ಗಲ್ಲು ಶಿಕ್ಷೆಯ ತೀರ್ಪು ನ್ಯಾಯ ದೊರಕಿಸಿಕೊಟ್ಟಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ನೂತನ ಸಚಿವರ ಖಾತೆ ಕ್ಯಾತೆಗೆ ತೆರೆ ಎಳೆದ ಡಿಕೆ ಶಿವಕುಮಾರ್, ಯಾರಿಗೆ ಯಾವ ಇಲಾಖೆ? – Kannada News | Today Release Ministers Portfolio List Says Dk Shivakumar

ಬೆಂಗಳೂರು, (ಆಗಸ್ಟ್ 11): ತೀವ್ರ ಕುತೂಹಲ ಮೂಡಿಸಿರುವ ನೂತನ ಸಚಿವರಿಗೆ ಖಾತೆ ಹಂಚಿಕೆ ಸಂಬಂಧ ಸಿಎಂ ಡಿಕೆ ಶಿವಕುಮಾರ್ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಇಂದು ಸಂಜೆಯೊಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಹೊಸ ಸಚಿವರಿಗೆ ಖಾತ ಹಂಚಿಕೆ ಯಾವಾಗ? ಯಾರಿಗೆ ಯಾವ ಖಾತೆ? ಅದು ಬೇರೆ ಮಳೆಗಾಲದ ಅಧಿವೇಶನ ಶುರುವಾಗುತ್ತೆ ಎನ್ನುವ ಬಗ್ಗೆ ಭಾರೀ ಚರ್ಚೆಗಳು ಆಗುತ್ತಿದ್ದವು. ಇದರ ಬೆನ್ನಲ್ಲೇ ಇದೀಗ ಸ್ವತಃ ಸಿಎಂ ಡಿಕೆ ಶಿವಕುಮಾರ್ ಖಾತೆ ಕ್ಯಾತೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಇಂದು( ಆಗಸ್ಟ್ 11) ಯಾವುದೇ ಸಂದರ್ಭದಲ್ಲಿ ಖಾತೆ ಪಟ್ಟಿ ಬಿಡುಗಡೆಯಾಗಲಿದೆ. ಹೀಗಾಗಿ ಯಾರಿಗೆ ಯಾವ ಖಾತೆ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿಗೆ ಮತ್ತೆ ನೀರು ಬಿಡಲು CWRC ಶಿಫಾರಸು: ಮಂಡ್ಯದಲ್ಲಿ ಭುಗಿಲೆದ್ದ ರೈತರ ಪ್ರತಿಭಟನೆ – Kannada News | Cauvery Water Dispute: Ma Farmers Protest CWRC Order to Release Water to Tamil Nadu

ಮಂಡ್ಯ, ಆಗಸ್ಟ್​​ 11: ತಮಿಳುನಾಡಿಗೆ ಮತ್ತೆ ನೀರು ಬಿಡಲು CWRC ಶಿಫಾರಸು ಹಿನ್ನೆಲೆ ಮಂಡ್ಯದಲ್ಲಿ ರೈತರು ಸಿಡಿದೆದ್ದಿದ್ದು, ಈ ಶಿಫಾರಸು ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಳಿವಳಿಕೆ ಇಲ್ಲದವರು ಮಾಡುವಂತೆ ಆದೇಶ ಮಾಡಿರುವ ಕಾರಣ CWMAನವರು CWRC ಶಿಫಾರಸನ್ನು ಅಮಾನತ್ತಿನಲ್ಲಿಡಬೇಕು. ತಮಿಳುನಾಡಿಗೆ ನೀರು ಬಿಟ್ಟರೇ ರಾಜ್ಯದ ಜನರು ಏನು ಮಾಡಬೇಕು? ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸದೆ, ರಾಜ್ಯದ ರೈತರ ಹಿತವನ್ನು ಸಿಎಂ ಡಿಕೆಶಿಯವರು​ ಕಾಪಾಡಬೇಕು ಎಂದು ಆಗ್ರಹಿಸಿ ರಸ್ತೆಗೆ ಅಡ್ಡಲಾಗಿ ಮಲಗಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರೈತರು ಪ್ರತಿಭಟನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version