ದಂಗಲ್, ಸುಲ್ತಾನ್ ರೀತಿ ಇದೆಯಾ ‘ಪೆದ್ದಿ’ ಕಥೆ? ಆಮಿರ್, ಸಲ್ಲುಗೆ ರಾಮ್ ಚರಣ್ ಧನ್ಯವಾದ – Kannada News | Ram Charan Peddi movie transformation thanks Salman Amir Khan during Trailer Launch

ಟಾಲಿವುಡ್ ನಟ ರಾಮ್ ಚರಣ್ ಅಭಿನಯದ, ಬಹುನಿರೀಕ್ಷಿತ ‘ಪೆದ್ದಿ’ (Peddi) ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಮುಂಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಈ ಕ್ರೀಡಾ ಆಧಾರಿತ ಸಾಹಸ ಪ್ರಧಾನ ಚಿತ್ರಕ್ಕಾಗಿ ರಾಮ್ ಚರಣ್ (Ram Charan) ಭಾರಿ ದೈಹಿಕ ಬದಲಾವಣೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದ ಕಥೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಲ್ಲದೆ, ಬಾಲಿವುಡ್ ಸೂಪರ್ ಸ್ಟಾರ್‌ ನಟರಾದ ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಮ್ ಚರಣ್ ಅವರಿಗೆ ಚಿತ್ರಕ್ಕಾಗಿ ಮಾಡಿಕೊಂಡ ಟ್ರಾನ್ಸ್​ಫಾರ್ಮೇಷನ್ ಕುರಿತು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸುವ ಮುನ್ನ ಬಾಲಿವುಡ್ ಸ್ಟಾರ್ ನಟರನ್ನು ಸ್ಮರಿಸಿದ ಚರಣ್, ‘ಮೊದಲನೆಯದಾಗಿ ಸಲ್ಮಾನ್ ಸರ್ ಮತ್ತು ಆಮಿರ್ ಸರ್ ಅವರಿಗೆ ಧನ್ಯವಾದಗಳು. ಅವರು ‘ಸುಲ್ತಾನ್’ ಮತ್ತು ‘ದಂಗಲ್’ ಸಿನಿಮಾಗಳ ಮೂಲಕ ಇಂತಹ ಕ್ರೀಡಾ ಆಧಾರಿತ ಚಿತ್ರಗಳಿಗೆ ದೊಡ್ಡ ಹಾದಿ ಮಾಡಿಕೊಟ್ಟಿದ್ದಾರೆ. ಆ ಸಿನಿಮಾಗಳು ನಮಗೆ ಭಾರಿ ಆತ್ಮವಿಶ್ವಾಸವನ್ನು ತುಂಬಿದವು’ ಎಂದಿದ್ದಾರೆ.

‘ಈ ರೀತಿಯ ವಿಭಿನ್ನ ಪ್ರಯೋಗದ ಸಿನಿಮಾಗಳನ್ನು ಆರಂಭಿಸಿದ್ದಕ್ಕಾಗಿ ಅವರಿಬ್ಬರಿಗೂ ಧನ್ಯವಾದಗಳು. ಅಂತಹ ಚಿತ್ರಗಳು ಹಿಂದೆ ಯಶಸ್ವಿಯಾಗಿವೆ. ಹಾಗಾಗಿ ನಾವೂ ಕೂಡ ಅದೇ ಹಾದಿಯನ್ನು ಅನುಸರಿಸಿದ್ದೇವೆ’ ಎಂದು ರಾಮ್ ಚರಣ್ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ‘ಪೆದ್ದಿ’ ಕೂಡ ‘ದಂಗಲ್’ ಮತ್ತು ‘ಸುಲ್ತಾನ್’ ರೀತಿಯ ಕಥೆಯನ್ನು ಹೊಂದಿದೆ ಎಂಬುದು ಗೊತ್ತಾಗಿದೆ.

‘ಪೆದ್ದಿ’ ಚಿತ್ರದ ಟ್ರೇಲರ್:

‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಕೇವಲ ಒಂದೇ ಕ್ರೀಡೆಗೆ ಸೀಮಿತವಾಗಿಲ್ಲ. ಬದಲಿಗೆ ಅವರು ಕ್ರಿಕೆಟ್, ಕುಸ್ತಿ, ಮತ್ತು ಓಟ ಸೇರಿದಂತೆ ಮೂರು ವಿಭಿನ್ನ ಕ್ರೀಡೆಗಳ ಅಖಾಡಕ್ಕಿಳಿದಿದ್ದಾರೆ. ಪ್ರತಿಯೊಂದು ಕ್ರೀಡೆಗೂ ತಕ್ಕಂತೆ ಅವರು ತಮ್ಮ ದೇಹದ ತೂಕ ಮತ್ತು ಲುಕ್ ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಕೂಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇದನ್ನೂ ಓದಿ: ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಇಲ್ಲಿದೆ ಮೇಕಿಂಗ್ ವಿಡಿಯೋ

‘ಚಿತ್ರಕ್ಕಾಗಿ ದೈಹಿಕ ಬದಲಾವಣೆ ಮಾಡಿಕೊಳ್ಳುವುದು ಕಥೆಯದೇ ಒಂದು ಭಾಗವಾಗಿತ್ತು. ನಿರ್ದೇಶಕ ಬುಚ್ಚಿ ಬಾಬು ಸನಾ ನನ್ನ ಮನೆಗೆ ಬಂದು ನೆಲದ ಮೇಲೆ ಕುಳಿತು 2 ಗಂಟೆ 40 ನಿಮಿಷಗಳ ಕಾಲ ಕಥೆ ಓದಿದಾಗ ನನಗೆ ಮರುಮಾತೇ ಇರಲಿಲ್ಲ. ಈ ಸಿನಿಮಾ ಶೂಟಿಂಗ್ ದೈಹಿಕವಾಗಿ ತುಂಬಾ ದಣಿವಿನಿಂದ ಕೂಡಿರಲಿದೆ ಎಂಬುದು ನನಗೆ ಗೊತ್ತಿತ್ತು’ ಎಂದು ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

‘ಒಬ್ಬ ವ್ಯಕ್ತಿ ಕ್ರೀಡೆಯ ಮೂಲಕ ತನ್ನ ಅಸ್ತಿತ್ವವನ್ನು ಹುಡುಕಿಕೊಳ್ಳುವ ಕಥೆ ಇದು. ನಾವೆಲ್ಲರೂ ಬದುಕಲು ಒಂದಲ್ಲ ಒಂದು ಗುರುತನ್ನು ಬಯಸುತ್ತೇವೆ. ಇಲ್ಲಿ ಪೆದ್ದಿ ಕೂಡ ತನ್ನದೇ ಆದ ಅಸ್ತಿತ್ವಕ್ಕಾಗಿ ಹೋರಾಡುತ್ತಾನೆ. ಒಂದು ದೊಡ್ಡ ಕಾರಣಕ್ಕಾಗಿ ಆತ ಹೇಗೆ ಕ್ರಾಸ್ ಓವರ್ ಅಥ್ಲೀಟ್ ಆಗಿ ಬದಲಾಗುತ್ತಾನೆ ಎಂಬುದನ್ನು ನಿರ್ದೇಶಕರು ತುಂಬಾ ಸಹಜವಾಗಿ ಹಾಗೂ ಅಷ್ಟೇ ಕಮರ್ಷಿಯಲ್ ಆಗಿ ತೆರೆಮೇಲೆ ತಂದಿದ್ದಾರೆ’ ಎಂದು ರಾಮ್ ಚರಣ್ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರತ್ಯೇಕ ಘಟನೆ: ಎಸಿ ಹಾಕೊಂಡು ಮಗಿದ್ದಲ್ಲೇ ವ್ಯಕ್ತಿ ಸಾವು; ಅಪಘಾತದಲ್ಲಿ ತಾಯಿ-ಮಗಳು ದುರ್ಮರಣ – Kannada News | Separate Incidents: Man Dies While Sleeping in AC Car; Mother and Daughter Killed in Accident

ತುಮಕೂರು, ಮೇ 18: ಭೀಕರ ರಸ್ತೆ ಅಪಘಾತದಲ್ಲಿ (accident) ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ (death) ದಾರುಣ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಬೆಂಗಳೂರು ನಿವಾಸಿಗಳಾದ ಜಯಮಾಲಾ (60) ಮತ್ತು ರಾಜೇಶ್ವರಿ (40) ಎಂದು ಗುರುತಿಸಲಾಗಿದೆ. ಮೂಲತಃ ರಾಯಚೂರು ಜಿಲ್ಲೆಯವರಾದ ಜಯಮಾಲಾ ಅವರು ಹಲವು ವರ್ಷಗಳಿಂದ ಮಗಳು ರಾಜೇಶ್ವರಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ತುಮಕೂರಿನಲ್ಲಿ ಭೀಕರ ಅಪಘಾತಕ್ಕೆ ತಾಯಿ-ಮಗಳು ಸಾವು
  • AC ಹಾಕಿ ಕಾರಿನಲ್ಲಿ ಮಲಗಿದ್ದ ಚಾಲಕ ಸಾವು
  • ಗುಡುಗು ಸಿಡಿಲಿನ ಅಬ್ಬರಕ್ಕೆ ಹೃದಯಾಘಾತ: ಶಿಕ್ಷಕ ಸಾವು

ನಡೆದಿದ್ದೇನು?

ರಾಜೇಶ್ವರಿ ತಮ್ಮ ಮಗ ಪ್ರೀತಮ್‌ನನ್ನು ಶ್ರವಣಬೆಳಗೊಳದ ಶಾಲೆಗೆ ಸೇರಿಸಲು ಕಾರಿನಲ್ಲಿ ತೆರಳುತ್ತಿದ್ದರು. ಜೊತೆಗೆ ತಾಯಿ ಜಯಮಾಲಾ ಕೂಡ ಇದ್ದರು. ಕುಣಿಗಲ್ ತಾಲ್ಲೂಕಿನ ಉರ್ಕೆಹಳ್ಳಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಜಯಮಾಲಾ ಹಾಗೂ ರಾಜೇಶ್ವರಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲಕ ಮಾರುತಿ ಹಾಗೂ ರಾಜೇಶ್ವರಿ ಮಗ ಪ್ರೀತಮ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

AC ಹಾಕಿಕೊಂಡು ಕಾರಿನಲ್ಲಿ ಮಲಗಿದ್ದ ಚಾಲಕ ಸಾವು

ಗ್ಲಾಸ್ ಏರಿಸಿಕೊಂಡು ಎಸಿ ಹಾಕಿಕೊಂಡು ಕಾರಿನಲ್ಲಿ ಮಲಗಿದ್ದ ಚಾಲಕ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಪೀಣ್ಯ ಬಳಿ ನೆಲಗೆದರಹಳ್ಳಿಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಖಾಸಗಿ ಕಂಪನಿಯೊಂದರ ಕಾರು ಚಾಲಕ ರಸ್ತೆ ಪಕ್ಕ ಕಾರು ನಿಲ್ಲಿಸಿ, ಎಲ್ಲಾ ಕಿಟಕಿಗಳನ್ನು ಏರಿಸಿ AC ಹಾಕಿಕೊಂಡು ಮಲಗಿದ್ದರು. ತುಂಬಾ ಹೊತ್ತು ಕಾರು ಅದೇ ಸ್ಥಳದಲ್ಲಿ ನಿಂತಿದ್ದರಿಂದ ಅನುಮಾನಗೊಂಡ ಸಾರ್ವಜನಿಕರು ಕಾರಿನ ಬಳಿ ಹೋಗಿ ಪರಿಶೀಲಿಸಿದ್ದಾರೆ. ಚಾಲಕ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಕಲ್ಲಿನಿಂದ ಕಿಟಕಿ ಗಾಜು ಒಡೆದು ನೋಡಿದಾಗ, ಕಾರಿನೊಳಗೆ ಚಾಲಕ ಮೃತಪಟ್ಟಿರುವುದು ಪತ್ತೆಯಾಗಿದೆ. ತಕ್ಷಣ ಪೀಣ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸಿಡಿಲಿನ ಅಬ್ಬರಕ್ಕೆ ಹೃದಯಾಘಾತವಾಗಿ ಶಿಕ್ಷಕ ಸಾವು

ಸಿಡಿಲಿನ ಅಬ್ಬರಕ್ಕೆ ಹೃದಯಾಘಾತವಾಗಿ ಶಿಕ್ಷಕ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ‌ ಮಲೆಕುಂಬಳೂರು ಗ್ರಾಮದಲ್ಲಿ ನಡೆದಿದೆ. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜಪ್ಪ(56) ಮೃತ ದುರ್ದೈವಿ. ಮನೆ ಮುಂದೆ ನಿಂತಿದ್ದಾಗ ಸಿಡಿಲಿನ ಶಬ್ದಕ್ಕೆ ಹೃದಯಾಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಬಸ್ ಡಿಕ್ಕಿಯಾಗಿ ಗೂಡ್ಸ್ ಆಟೋ ಚಾಲಕ ಸಾವು

ಖಾಸಗಿ ಬಸ್ ಡಿಕ್ಕಿಯಾಗಿ ಗೂಡ್ಸ್ ಆಟೋ ಚಾಲಕ ಸಾವನ್ನಪ್ಪಿರುವಂತಹ ಘಟನೆ ಕೋಲಾರ ತಾಲೂಕಿನ ಸಿಂಗೇಹಳ್ಳಿ ಗೇಟ್ ಬಳಿ ನಡೆದಿದೆ. ಆಂಧ್ರಪ್ರದೇಶ ಮೂಲದ ರಾಮುಡು ಮೃತ ಆಟೋ ಚಾಲಕ. ಕೋಲಾರದಲ್ಲಿ ಬಿಸ್ಕತ್ ತುಂಬಿಕೊಂಡು ಆಂಧ್ರಕ್ಕೆ ತೆರಳುತ್ತಿದ್ದ ಗೂಡ್ಸ್ ಆಟೋಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ದೃಶ್ಯ ಬಸ್​ನಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆ ಆಗಿದೆ. ಸದ್ಯ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:34 pm, Mon, 18 May 26

Source link

CSK vs SRH: ನಾಯಕನಾಗಿ ಹೆಚ್ಚು ವಿಕೆಟ್; ಪಾಂಡ್ಯ ದಾಖಲೆ ಮುರಿದ ಕಮ್ಮಿನ್ಸ್ – Kannada News | Pat Cummins’ IPL 2026 Heroics: Overtakes Pandya in Captaincy Wickets Record

ಐಪಿಎಲ್ 2026 ರ 63ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​ಕೆ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಮುರಿದ ಕಮ್ಮಿನ್ಸ್, ಸಿಎಸ್​ಕೆ ಆರಂಭಿಕರಾದ ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಮತ್ತು ಕಾರ್ತಿಕ್ ಶರ್ಮಾ ಅವರನ್ನು ಔಟ್ ಮಾಡಿದರು. ಕಾರ್ತಿಕ್ ಅವರನ್ನು ಔಟ್ ಮಾಡುವ ಮೂಲಕ, ಕಮ್ಮಿನ್ಸ್ ಮಹತ್ವದ ಮೈಲಿಗಲ್ಲನ್ನು ಸಾಧಿಸಿದರು.

ಐಪಿಎಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕನಾಗಿ 42 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಅವರು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಹಿಂದಿಕ್ಕಿದ್ದಾರೆ. ಪಾಂಡ್ಯ ನಾಯಕನಾಗಿ 40 ವಿಕೆಟ್‌ಗಳನ್ನು ಹೊಂದಿದ್ದಾರೆ. ಇನ್ನು ಐಪಿಎಲ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ವಿಕೆಟ್ ಉರುಳಿಸಿದವರ ಪಟ್ಟಿಯಲ್ಲಿ ಶೇನ್ ವಾರ್ನ್ ಅಗ್ರಸ್ಥಾನದಲ್ಲಿದ್ದು, ಅವರ ಖಾತೆಯಲ್ಲಿ 57 ವಿಕೆಟ್‌ಗಳಿವೆ.

ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅನಿಲ್ ಕುಂಬ್ಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ 30 ವಿಕೆಟ್ ಪಡೆದಿದ್ದರು. ಹಾಗೆಯೇ ರವಿಚಂದ್ರನ್ ಅಶ್ವಿನ್ ಕೂಡ ನಾಯಕನಾಗಿ 25 ವಿಕೆಟ್ ಪಡೆದಿದ್ದರೆ, ಜಹೀರ್ ಖಾನ್ 20 ವಿಕೆಟ್ ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದ ಸಿಎಂ ಸುವೇಂದು ಅಧಿಕಾರಿ ಪಿಎ ಹತ್ಯೆ; ಕೊನೆಗೂ ಸೆರೆಸಿಕ್ಕ ಪ್ರಮುಖ ಶೂಟರ್ – Kannada News | West Bengal CM Suvendu Adhikari PA Murder Case Main Shooter Finally Captured

ಕೊಲ್ಕತ್ತಾ, ಮೇ 18: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (Chandranath Rath) ಅವರ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಕೊನೆಗೂ ಯಶಸ್ಸು ಸಿಕ್ಕಿದೆ. ಈ ಹೈಪ್ರೊಫೈಲ್ ಸುಪಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮತ್ತು ಬಿಹಾರದ ಗಡಿ ಭಾಗಗಳಲ್ಲಿ ಮೂವರು ಶಾರ್ಪ್‌ಶೂಟರ್‌ಗಳನ್ನು ಪಶ್ಚಿಮ ಬಂಗಾಳದ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಇವರಲ್ಲಿ ಪ್ರಮುಖ ಶೂಟರ್ ರಾಜ್‌ಕುಮಾರ್ ಅಲಿಯಾಸ್ ರಾಜ್ ಸಿಂಗ್ ಕೂಡ ಸೇರಿದ್ದಾರೆ. ಕೊಲೆ ನಡೆದ 12 ದಿನಗಳ ಬಳಿಕ ಕೊನೆಗೂ ಪ್ರಮುಖ ಆರೋಪಿ ಸೆರೆಸಿಕ್ಕಿದ್ದಾನೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ ಮೇ 6ರ ರಾತ್ರಿ ಸಿಎಂ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಚಂದ್ರನಾಥ್ ಕೊಲ್ಕತ್ತಾಗೆ ತೆರಳುತ್ತಿದ್ದಾಗ, ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೋಲತಲಾ ಪ್ರದೇಶದಲ್ಲಿ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಪ್ರಸ್ತುತ ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ದೇಶಸೇವೆಯಿಂದ ರಾಜಕೀಯ ವ್ಯೂಹದತ್ತ, ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸುವೇಂದು ಆಪ್ತ ಚಂದ್ರನಾಥ್ ರಥ್ ಯಾರು?

ಏನಿದು ಪ್ರಕರಣ?:

ಮೇ 6ರಂದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್‌ನ ದೋಹಾರಿಯಾ ಎಂಬಲ್ಲಿ ಚಂದ್ರನಾಥ್ ರಥ್ ತಮ್ಮ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅತಿ ಹತ್ತಿರದಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಚಂದ್ರನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರ ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆಯ ತನಿಖೆಗೆ ಎಸ್​ಐಟಿ ರಚಿಸಲಾಗಿತ್ತು. ಬಳಿಕ ಸಿಬಿಐಗೆ ತನಿಖೆ ವಹಿಸಲಾಗಿತ್ತು.

ಇದನ್ನೂ ಓದಿ: ಸುವೇಂದು ಅಧಿಕಾರಿ ಪಿಎ ಚಂದ್ರನಾಥ್ ಹತ್ಯೆ ಪ್ರಕರಣ; ಎಸ್​ಐಟಿ ತನಿಖೆಗೆ ಆದೇಶ

ಇದುವರೆಗೂ ಮಯಾಂಕ್ ರಾಜ್ ಮಿಶ್ರಾ, ವಿಕ್ಕಿ ಮೌರ್ಯ, ಮತ್ತು ರಾಜ್‌ಕುಮಾರ್ ಸಿಂಗ್ (ರಾಜ್ ಸಿಂಗ್) ಎಂಬುವವರನ್ನು ಬಂಧಿಸಲಾಗಿದೆ. ಇವರು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಕುಖ್ಯಾತ ಶಾರ್ಪ್‌ಶೂಟರ್‌ಗಳಾಗಿದ್ದಾರೆ. ನ್ಯಾಯಾಲಯವು ಅವರನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದು ಈಗ ರಾಷ್ಟ್ರೀಯ ದಾಖಲೆಯ ಹೊಸ್ತಿಲಲ್ಲಿ ಸಿದ್ದರಾಮಯ್ಯ – Kannada News | One And Only Siddaramaiah completed 8 Years as CM in history of Karnataka, here is His record details

ಬೆಂಗಳೂರು, (ಮೇ 18):  ನಾಯಕತ್ವ ಗೊಂದಲಗಳ ನಡುವೆ ಸಿಎಂ ಸಿದ್ದರಾಮಯ್ಯ (Siddaramaiah) ಕರ್ನಾಟಕ(Karnataka) ಮುಖ್ಯಮಂತ್ರಿಯಾಗಿ 8 ವರ್ಷ ಪೂರ್ಣಗೊಳಿಸಿದ ಏಕೈಕ ವ್ಯಕ್ತಿ ಎನ್ನುವ ದಾಖಲೆ ಬರೆದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೇ 20ಕ್ಕೆ 3 ವರ್ಷ ಪೂರ್ಣಗೊಳ್ಳಲಿದೆ. ಅದಕ್ಕೂ ಮೊದಲೇ ಸಿಎಂ ಸಿದ್ದರಾಮಯ್ಯ ತಮ್ಮ ಹಲವು ದಾಖಲೆಗಳ ಸಾಲಿನಲ್ಲಿ ಮತ್ತೊಂದು ಸಾಧನೆ ಬರೆದಿದ್ದು ಕರ್ನಾಟಕದ ಮುಖ್ಯಮಂತ್ರಿಯಾಗಿ 8 ವರ್ಷ ಪೂರ್ಣಗೊಳಿಸಿದ ಏಕೈಕ ವ್ಯಕ್ತಿ ಎಂಬುದು ಅವರ ಮತ್ತೊಂದು ಗರಿಮೆ. ಇದರ ಜೊತೆಗೆ ಅತಿ ಹೆಚ್ಚು ಬಜೆಟ್ ಮಂಡಿಸಿದ ರಾಷ್ಟ್ರೀಯ ದಾಖಲೆ ಹೊಸ್ತಿಲಲ್ಲಿ ಸಹ ಇದ್ದಾರೆ.

  • ಅರಸು ದಾಖಲೆ ಹಿಂದಿಕ್ಕಿ ಸಿಎಂ ಹುದ್ದೆಯಲ್ಲಿ 8 ವರ್ಷ ಪೂರೈಸಿದ ಸಿದ್ದರಾಮಯ್ಯ
  • ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದ ಹಿರಿಮೆ
  • ಬಜೆಟ್ ಮಂಡಿಸಿದ ರಾಷ್ಟ್ರೀಯ ದಾಖಲೆ ಹೊಸ್ತಿಲಲ್ಲಿ ನಿಂತಿರುವ ಸಿದ್ದರಾಮಯ್ಯ

ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದ ಹಿರಿಮೆ

ಮೈಸೂರು ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸುವ ಮೂಲಕ 1977ರಲ್ಲಿ ಸಾರ್ವಜನಿಕ ಸೇವೆಗೆ ಪಾದಾರ್ಪಣೆ ಮಾಡಿರುವ ಸಿದ್ದರಾಮಯ್ಯ, ತಮ್ಮ ರಾಜಕೀಯ ಬದುಕಿನ 50ನೇ ವರ್ಷಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಕಾಲಿರಿಸಲಿದ್ದಾರೆ. ಇದೇ ವೇಳೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ 8 ವರ್ಷಗಳನ್ನು ಪೂರೈಸಿದ್ದಾರೆ. ಈ ಮೂಲಕ ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ 8 ವರ್ಷ ಮುಖ್ಯಮಂತ್ರಿಯಾಗಿರುವ ಮೊದಲ ವ್ಯಕ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಇದನ್ನೂ ನೋಡಿ: ರಾಜ್ಯ ರಾಜಕಾರಣದಲ್ಲಿ ಹೊಸ ದಾಖಲೆ ಮಾಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅಚ್ಚರಿ ಮಾತು

ದೇವರಾಜ ಅರಸು ದಾಖಲೆ ಹಿಂದಿಕ್ಕಿದ ಸಿದ್ದರಾಮಯ್ಯ

ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿ ಆಗಿದ್ದ ದಾಖಲೆ ಹೊಂದಿದ್ದರು. ಆ ದಾಖಲೆಯನ್ನು ಈಗಾಗಲೇ ಸಿದ್ದರಾಮಯ್ಯ ಹಿಂದಿಕ್ಕಿ ಮುಂದುವರಿದಿದ್ದಾರೆ. ವಿಶೇಷವೆಂದರೆ, ಅರಸು ಮತ್ತು ಸಿದ್ದರಾಮಯ್ಯ ಅವರ ಸಿದ್ಧಾಂತಗಳನ್ನು ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೋಲಿಕೆ ಮಾಡುತ್ತಾರೆ. ಸ್ವತಃ ಸಿದ್ದರಾಮಯ್ಯ ಅವರು ಈ ಹೋಲಿಕೆಯನ್ನು ನಿರಾಕರಿಸಿದ್ದರು. ಆದರೂ ಅಧಿಕಾರದಲ್ಲಿದ್ದಾಗ ರೂಪಿಸಿದ ಯೋಜನೆಗಳು, ನೀತಿ-ನಿರೂಪಣೆಗಳು ಪರಸ್ಪರ ತಾಳೆ ಆಗುತ್ತವೆ. ದೇವರಾಜ ಅರಸು ಅವರ ಸಿದ್ಧಾಂತ ಮತ್ತು ಯೋಜನೆಗಳು ಹಿಂದುಳಿದ ವರ್ಗಗಳ ಪಾಲಿಗೆ ಭಾಗ್ಯದ ಬೆಳಕು ಎಂದು ಬಣ್ಣಿಸಿದರೆ ಸಿದ್ದರಾಮಯ್ಯ ಅವರ ಮಾರ್ಗ ದಲಿತ ಮತ್ತು ಅಲ್ಪಸಂಖ್ಯಾತರನ್ನೂ ಒಳಗೊಂಡು ಅಹಿಂದ ವರ್ಗದ ಪಕ್ಷಪಾತಿ ಎಂದು ಗುರುತಿಸಲಾಗುತ್ತಿದೆ.

ರಾಷ್ಟ್ರೀಯ ದಾಖಲೆಯ ಹೊಸ್ತಿಲಲ್ಲಿ!

ಕೇವಲ ದಾಖಲೆ ಅವಧಿಗೆ ಆಡಳಿತ ಮಾಡಿದ ಹಿರಿಮೆ ಮಾತ್ರವಲ್ಲದೇ ಕರ್ನಾಟಕದಲ್ಲಿ 12 ಬಾರಿ ಮುಂಗಡ ಪತ್ರ ಮಂಡಿಸಿದ ಸಾಧನೆ ಮಾಡಿದ್ದಾರೆ. ಗುಜರಾತ್‌ನ ಹಣಕಾಸು ಸಚಿವರಾಗಿದ್ದ ವಜುಭಾಯಿ ವಾಲಾ ಅವರು ದೇಶದಲ್ಲೇ ಅತಿ ಹೆಚ್ಚು ಅಂದರೆ 18 ಬಾರಿ ಬಜೆಟ್ ಮಂಡಿಸಿದ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ. ಆ ದಾಖಲೆ ಸರಿಗಟ್ಟಲು ಸಿದ್ದರಾಮಯ್ಯ ಅವರಿಗೆ ಇನ್ನೊಂದೇ ಬಜೆಟ್ ಬಾಕಿ ಇದೆ. ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ಚರ್ಚೆಯ ನಡುವೆಯೇ ಸಿದ್ದರಾಮಯ್ಯ ಈ ರಾಷ್ಟ್ರೀಯ ದಾಖಲೆಯನ್ನು ಬರೆಯಲಿದ್ದಾರೆ ಎಂದೇ ಅವರ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ನಿಜಲಿಂಗಪ್ಪ ದಾಖಲೆಯೂ ಇತಿಹಾಸದ ಪುಟಕ್ಕೆ

ಕರ್ನಾಟಕ ರಾಜ್ಯ ಘೋಷಣೆಗೂ ಮೊದಲು ಎಸ್.ನಿಜಲಿಂಗಪ್ಪ ಅವರೂ ಎರಡು ಬಾರಿ ಸುದೀರ್ಘ ಅವಧಿಗೆ ಸಿಎಂ ಆಗಿದ್ದರು. ಮೊದಲನೇ ಬಾರಿಗೆ 1956ರಲ್ಲಿ 1 ವರ್ಷ 197 ದಿನ ಹಾಗೂ ಎರಡನೇ ಬಾರಿಗೆ ೧೯೬೨ರಲ್ಲಿ ೫ ವರ್ಷ ೩೪೩ ದಿನಗಳ ಅವಧಿಗೆ ರಾಜ್ಯವನ್ನಾಳಿದ್ದರು. ತದನಂತರ ದೇವರಾಜ ಅರಸುರವರು ಮೈಸೂರು ರಾಜ್ಯದಲ್ಲಿ 1972ರಲ್ಲಿ 1 ವರ್ಷ 225 ದಿನಗಳಿಗೆ, ನಂತರ ಕರ್ನಾಟಕ ರಾಜ್ಯ ಘೋಷಣೆ ನಂತರ 1973 ರಿಂದ 4 ವರ್ಷ 60 ದಿನಗಳಿಗೆ ಹಾಗೂ ಮೂರನೇ ಬಾರಿಗೆ 1978ರಲ್ಲಿ 1 ವರ್ಷ 318 ದಿನಗಳಿಗೆ ಸಿಎಂ ಆಗಿ ಒಟ್ಟಾರೆ 7 ವರ್ಷ 239 ದಿನಗಳ ಕಾಲ ಸಿಎಂ ಆಗಿದ್ದರು. ಸಿದ್ದರಾಮಯ್ಯ ಅವರು 2013ರಿಂದ 5 ವರ್ಷ 4 ದಿನಗಳ ಕಾಲ ಮತ್ತು 2023ರಿಂದ ಇಂದಿನ ತನಕ 2 ವರ್ಷ 361 ದಿನಗಳವರೆಗೆ 8 ವರ್ಷ ಪೂರೈಸಿದ್ದಾರೆ. ಇದೇ ಮೇ 20ಕ್ಕೆ ಎರಡನೇ ಬಾರಿಗೆ ಸಿಎಂ ಆಗಿ 3 ವರ್ಷ ಪೂರೈಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಪ್ಲೇಆಫ್‌ ಸುತ್ತಿಗೆ ಮೀಸಲು ದಿನವಿಲ್ಲ; ಹೀಗಾಗಿ ಪಂದ್ಯ ರದ್ದಾದರೆ ಫಲಿತಾಂಶ ನಿರ್ಧರಿಸುವುದು ಹೇಗೆ? – Kannada News | IPL 2026 Playoffs: Rain Threat? How Points Table Decides Q1, Eliminator Winners

ಐಪಿಎಲ್ 2026 (IPL 2026) ರ ಗುಂಪು ಹಂತದ ಪಂದ್ಯಗಳು ಮೇ 24 ರಂದು ಕೊನೆಗೊಳ್ಳಲಿವೆ. ಅದಾದ ನಂತರ, ಪ್ಲೇಆಫ್ ಸುತ್ತು ಆರಂಭವಾಗಲಿದೆ. ಈ ಸುತ್ತಿನಲ್ಲಿ 4 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಪ್ಲೇಆಫ್ ಪಂದ್ಯಗಳು ಮೇ 26 ರಿಂದ ಪ್ರಾರಂಭವಾಗಲಿದ್ದು, ಮೇ 31 ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ. ಪ್ಲೇಆಫ್ ಪಂದ್ಯಗಳು ಮೂರು ವಿಭಿನ್ನ ಮೈದಾನಗಳಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯ ಧರ್ಮಶಾಲಾದಲ್ಲಿ, ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ಪಂದ್ಯ ನ್ಯೂ ಚಂಡೀಗಢದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ಮಳೆ ಬಂದರೆ, ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದು ಹಲವರ ಪ್ರಶ್ನೆಯಾಗಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.

ಪ್ಲೇಆಫ್ ಸುತ್ತಿಗೆ ಮೀಸಲು ದಿನವಿಲ್ಲ

ಗುಂಪು ಹಂತದಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾದರೆ, ಪ್ರತಿ ತಂಡಕ್ಕೆ ತಲಾ ಒಂದು ಅಂಕವನ್ನು ನೀಡಲಾಗುತ್ತಿತ್ತು. ಅಂದರೆ ಲೀಗ್ ಹಂತದಲ್ಲಿ ಯಾವುದೇ ಪಂದ್ಯಕ್ಕೆ ಮೀಸಲು ದಿನವಿರಲಿಲ್ಲ. ವಾಸ್ತವವಾಗಿ ಐಸಿಸಿ ಪಂದ್ಯಾವಳಿಗಳಲ್ಲಿ, ನಾಕೌಟ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿ ಮಾಡಲಾಗಿರುತ್ತದೆ. ಆದರೆ ಐಪಿಎಲ್ ಪ್ಲೇಆಫ್‌ಗಳಿಗೆ ನಿಯಮಗಳು ಸ್ವಲ್ಪ ಭಿನ್ನವಾಗಿವೆ. ಮೊದಲ ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್‌ಗೆ ಮೀಸಲು ದಿನವನ್ನು ಇರಿಸಲಾಗಿಲ್ಲ. ಫೈನಲ್ ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ನಿಗದಿ ಪಡಿಸಲಾಗಿದೆ. ಹಾಗಾದರೆ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳ ಸಮಯದಲ್ಲಿ ಮಳೆ ಬಂದರೆ, ವಿಜೇತರನ್ನು ಹೇಗೆ ಘೋಷಿಸಲಾಗುತ್ತದೆ?.

ಪಂದ್ಯ ರದ್ದಾದರೆ ಫಲಿತಾಂಶ ನಿರ್ಧಾರ ಹೇಗೆ?

ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಬಂದರೆ, ಅದೇ ದಿನ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಪಂದ್ಯದ ಆರಂಭ ವಿಳಂಬವಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ಆಡಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕಾಗಿ, 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದರೆ ಹೆಚ್ಚುವರಿ ಸಮಯದ 120 ನಿಮಿಷಗಳಲ್ಲೂ ಪಂದ್ಯ ಮುಗಿಯದಿದ್ದರೆ, ಆಗ ಪಾಯಿಂಟ್‌ ಪಟ್ಟಿ ಪ್ರಮುಖ ಪಾತ್ರವಹಿಸುತ್ತದೆ. ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

CSK vs SRH IPL 2026 Live Score: ಸಿಎಸ್​ಕೆ 3ನೇ ವಿಕೆಟ್ ಪತನ

ಉದಾಹರಣೆಗೆ, ತಂಡ ಎ ಮತ್ತು ತಂಡ ಬಿ ಕ್ವಾಲಿಫೈಯರ್ ಪಂದ್ಯವನ್ನು ಆಡುತ್ತಿವೆ. ತಂಡ ಎ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ತಂಡ ಬಿ ಎರಡನೇ ಸ್ಥಾನದಲ್ಲಿದೆ. ಮಳೆಯಿಂದಾಗಿ ಪಂದ್ಯ ನಡೆಯದಿದ್ದರೆ, ಎ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಕ್ಕೂ ಈ ನಿಯಮ ಅನ್ವಯಿಸುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೂರಿಕ್ ಆಸಿಡ್ ಸಮಸ್ಯೆ ಇದ್ಯಾ? ಇದನ್ನು ವೇಗವಾಗಿ ಕಡಿಮೆ ಮಾಡಲು ವೈದ್ಯರು ಸೂಚಿಸಿರುವ ಈ ಆಹಾರ ಕ್ರಮ ಅನುಸರಿಸಿ – Kannada News | Uric Acid Diet Plan: Best Foods To Eat And Avoid For Gout Control

ಇತ್ತೀಚಿನ ದಿನಗಳಲ್ಲಿ ಹೈ ಯೂರಿಕ್ ಆಸಿಡ್ (Uric Acid) ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ನಿಮಗೆ ತಿಳಿದಿರುವಂತೆ, ಯೂರಿಕ್ ಆಸಿಡ್ ಎನ್ನುವುದು ದೇಹದಲ್ಲಿ ಪ್ಯೂರಿನ್ ಎಂಬ ಅಂಶ ಒಡೆಯುವಾಗ ಉತ್ಪತ್ತಿಯಾಗುವ ತ್ಯಾಜ್ಯ ಪದಾರ್ಥವಾಗಿದೆ. ಸಾಮಾನ್ಯವಾಗಿ ಇದು ಮೂತ್ರಪಿಂಡಗಳ ಮೂಲಕ ದೇಹದಿಂದ ಹೊರಹೋಗುತ್ತದೆ. ಆದರೆ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚು ಉತ್ಪತ್ತಿಯಾದರೆ ಅಥವಾ ಕಿಡ್ನಿಗಳು ಅದನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗದಿದ್ದರೆ ಅದರ ಪ್ರಮಾಣ ಹೆಚ್ಚಾಗಬಹುದು. ತಜ್ಞರ ಪ್ರಕಾರ, ಪ್ಯೂರಿನ್ ಅಧಿಕವಾಗಿರುವ ಆಹಾರ, ಕಡಿಮೆ ನೀರು ಕುಡಿಯುವುದು, ಅತಿಯಾದ ತೂಕ, ಮದ್ಯಪಾನ, ಕೆಲವು ಔಷಧಿಗಳ ಬಳಕೆ ಮತ್ತು ಕಿಡ್ನಿ ಸಮಸ್ಯೆಗಳು ಯೂರಿಕ್ ಆಸಿಡ್ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಇದು ದೀರ್ಘಕಾಲ ಹೆಚ್ಚಿದರೆ ಸಂಧಿ ನೋವು, ಊತದಂತಹ ಸಮಸ್ಯೆ ಉಂಟಾಗಬಹುದು. ಕೆಲವರಲ್ಲಿ ಕಿಡ್ನಿಯಲ್ಲಿ ಕಲ್ಲು ಅಥವಾ ಮೂತ್ರಪಿಂಡ ಹಾನಿಯ ಅಪಾಯವೂ ಹೆಚ್ಚಾಗಬಹುದು. ಹಾಗಾದರೆ ಈ ಸಮಸ್ಯೆಯನ್ನು ನಿಯಂತ್ರಿಸಲು ಏನು ಮಾಡಬಹುದು, ಯಾವ ರೀತಿಯ ಆಹಾರ ಸೇವನೆ ಮಾಡುವುದು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಯೂರಿಕ್ ಆಸಿಡ್ ಎಷ್ಟಿದ್ದರೆ ಹೆಚ್ಚಾಗಿದೆ ಎಂದು ಪರಿಗಣಿಸಲಾಗುತ್ತದೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಸಾಮಾನ್ಯವಾಗಿ ಪುರುಷರಲ್ಲಿ 7 mg/dL ಕ್ಕಿಂತ ಹೆಚ್ಚು ಮತ್ತು ಮಹಿಳೆಯರಲ್ಲಿ 6 mg/dL ಕ್ಕಿಂತ ಹೆಚ್ಚು ಯೂರಿಕ್ ಆಸಿಡ್ ಮಟ್ಟ ಕಂಡುಬಂದರೆ ಅದನ್ನು ಹೆಚ್ಚಾಗಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ಲ್ಯಾಬ್ ಹಾಗೂ ವ್ಯಕ್ತಿಯ ಆರೋಗ್ಯ ಸ್ಥಿತಿಯ ಪ್ರಕಾರ ಈ ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು. ಯೂರಿಕ್ ಆಸಿಡ್ ನಿರಂತರವಾಗಿ ಹೆಚ್ಚಿದ್ದರೆ ಕಾಲಿನ ಬೆರಳು, ಮಣಿಕಟ್ಟು ಹಾಗೂ ಮೊಣಕಾಲುಗಳಲ್ಲಿ ತೀವ್ರ ನೋವು ಮತ್ತು ಊತ ಕಾಣಿಸಬಹುದು. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆ ಅಗತ್ಯವಾಗಿದೆ.

ಇದನ್ನೂ ಓದಿ: ಯೂರಿಕ್ ಆಮ್ಲ ಹೆಚ್ಚಾಗದಂತೆ ತಡೆಯಲು ಈ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ

ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಯಾವ ರೀತಿಯ ಆಹಾರ ಸೇವಿಸಬೇಕು?

ಹೆಚ್ಚು ನೀರು ಕುಡಿಯುವುದು ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಬಹಳ ಮುಖ್ಯವಾಗಿದೆ. ತಾಜಾ ಹಣ್ಣು, ಹಸಿರು ತರಕಾರಿ, ಧಾನ್ಯಗಳು, ಕಡಿಮೆ ಕೊಬ್ಬಿನಾಂಶವಿರುವ ಹಾಲು ಮತ್ತು ಮೊಸರು ಸೇವಿಸುವುದು ಉಪಯುಕ್ತವಾಗಿದೆ. ವಿಟಮಿನ್ ಸಿ ಇರುವ ಕಿತ್ತಳೆ, ನೆಲ್ಲಿಕಾಯಿ ಮುಂತಾದ ಹಣ್ಣುಗಳು ಸಹ ಸಹಾಯಕವಾಗಬಹುದು. ಚೆರಿ, ಸೌತೆಕಾಯಿ, ಸೋರೆಕಾಯಿ ಮುಂತಾದ ಹಗುರ ಆಹಾರ ಪದಾರ್ಥಗಳು ಕೂಡ ಉತ್ತಮವೆಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಯಾವ ಅಭ್ಯಾಸಗಳು ಸಹಾಯಕ?

ತೂಕ ನಿಯಂತ್ರಣದಲ್ಲಿ ಇಡುವುದು, ನಿಯಮಿತ ವ್ಯಾಯಾಮ ಮಾಡುವುದು ಹಾಗೂ ದಿನಪೂರ್ತಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ. ಮದ್ಯಪಾನ, ಸಿಹಿ ಪಾನೀಯಗಳು ಮತ್ತು ಪ್ಯೂರಿನ್ ಅಧಿಕವಾಗಿರುವ ಆಹಾರಗಳನ್ನು ಕಡಿಮೆ ಮಾಡಬೇಕು. ವೈದ್ಯರು ನೀಡಿದ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು? – Kannada News | Former Miss Pune Twisha Sharma Death Case Husband Family details

ನಟಿ, ಮಾಡೆಲ್ ಟ್ವಿಶಾ ಶರ್ಮಾ (Twisha Sharma) ಅವರ ನಿಧನದ ಸುದ್ದಿ ಭಾರಿ ಸಂಚಲನ ಮೂಡಿಸಿದೆ. 2012ರಲ್ಲಿ ಮಿಸ್ ಪುಣೆ ಆಗಿದ್ದ ಟ್ವಿಶಾ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಮಾಡೆಲ್ ಆಗಿ ಅವರು ಗುರುತಿಸಿಕೊಂಡಿದ್ದರು. ಕೆಲವೇ ತಿಂಗಳ ಹಿಂದೆ ಹೈಪ್ರೊಫೈಲ್ ಕುಟುಂಬಕ್ಕೆ ಸೊಸೆಯಾಗಿ ಹೋಗಿದ್ದರು. ಆದರೆ ಮದುವೆ ಬಳಿಕ ಅವರ ಜೀವನ ನರಕ ಆಯಿತು. ಗಂಡನ ಜೊತೆ ಜಗಳ ಮಾಡಿಕೊಂಡ ಬಳಿಕ ಅವರ ಸಾವಿನ ಸುದ್ದಿ ಬಂದಿದೆ. ಸಾಯುವುದಕ್ಕೂ ಮುನ್ನ ಪೋಷಕರಿಗೆ ಕರೆ ಮಾಡಿ ತಮ್ಮ ನೋವನ್ನು ಅವರು ತೋಡಿಕೊಂಡಿದ್ದರು. ಟ್ವಿಶಾ ಶರ್ಮಾ ಸಾವಿನ (Twisha Sharma Death) ಸುತ್ತ ಹಲವು ಅನುಮಾನದ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅವರ ಪತಿ ಸಮರ್ಥ್ ಸಿಂಗ್ ಓರ್ವ ಕ್ರಿಮಿನಲ್ ಲಾಯರ್. ಟ್ವಿಶಾ ಸಾವಿನ ನಂತರ ಸಮರ್ಥ್ ತಲೆ ಮರೆಸಿಕೊಂಡಿದ್ದಾರೆ. ಸಮರ್ಥ್ ತಾಯಿ ಗಿರಿಬಾಲಾ ಸಿಂಗ್ ಅವರು ಜಡ್ಜ್ ಆಗಿದ್ದರು. ಇಂಥ ಹೈಪ್ರೋಫೈಲ್ ಕುಟುಂಬಕ್ಕೆ ಸೊಸೆಯಾಗಿ ಹೋದ ಟ್ವಿಶಾ ಶರ್ಮಾ ಮಸಣ ಸೇರುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂಡಿಗೋ ವಿಮಾನದೊಳಗೆ 25 ನಿಮಿಷ ಎಸಿ, ಕರೆಂಟ್ ಇಲ್ಲದೆ ಕತ್ತಲಲ್ಲಿ ಒದ್ದಾಡಿದ ಪ್ರಯಾಣಿಕರು

ನವದೆಹಲಿ, ಮೇ 18: ಇಂಡಿಗೋ ವಿಮಾನದಲ್ಲಿ (IndiGo Flight) ಎಸಿ ಮತ್ತು ಕ್ಯಾಬಿನ್ ಲೈಟ್ ಸುಮಾರು 25 ನಿಮಿಷಗಳ ಕಾಲ ಆಫ್ ಆಗಿದ್ದರಿಂದ ವಿಮಾನದ ಪ್ರಯಾಣಿಕರು ಪರದಾಡುವಂತಾಯಿತು. ಇದರಿಂದ ವಿಮಾನದೊಳಗೆ ಪ್ರಯಾಣಿಕರಲ್ಲಿ ಭಾರಿ ಗದ್ದಲ ಉಂಟಾಯಿತು. ಸುಮಾರು 25 ನಿಮಿಷಗಳ ಕಾಲ ಕ್ಯಾಬಿನ್ ದೀಪಗಳು ಸ್ಥಗಿತಗೊಂಡಿದ್ದರಿಂದ, ವಿಮಾನವು ಸಂಪೂರ್ಣ ಕತ್ತಲೆಯಲ್ಲಿತ್ತು. ವಿಮಾನದೊಳಗಿನ ಬಿಸಿಗೆ ಪ್ರಯಾಣಿಕರಿಗೆ ಉಸಿರುಗಟ್ಟಿಸುವಂತಹ ಪರಿಸ್ಥಿತಿ ಉಂಟಾಯಿತು. ವಿಮಾನದೊಳಗಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಮುರಿಯುವ ಸನಿಹದಲ್ಲಿ ಭುವನೇಶ್ವರ್ ಕುಮಾರ್

Source link

Exit mobile version